ನೃತ್ಯ ಸಂಯೋಜನೆ ಹೇಗಿರಬೇಕು?- ಒಂದಷ್ಟು ಜಿಜ್ಞಾಸೆ
Thursday, December 15th, 2011ಇತ್ತೀಚೆಗಷ್ಟೆ ಭೇಟಿಯಾದ ಹಳೆ ಸ್ನೇಹಿತೆ(ನೃತ್ಯಗಾರ್ತಿ)ಯೊಬ್ಬಳು ಹೀಗೇ ಮಾತಾಡುತ್ತಾ, ನಮ್ಮ ಅಭಿನಯ ಬಂಧಗಳಾದ ಪದ, ಜಾವಳಿಗಳ ಕಡೆಗೆ ಗಮನ ಸೆಳೆದಳು. ಸಾಹಿತ್ಯದ ಒಂದು ಸಾಲಿಗೆ ಎಷ್ಟು ಕೈಗಳು(ಹಸ್ತಾಭಿನಯ) ಎಂದು ನಿಗದಿ ಪಡಿಸುವುದು, ಪ್ರತಿ ಬಾರಿ ಒಂದೇ ಸಾಲು ಹಾಡುವಾಗ, ಅದೇ ಅರ್ಥ ಬರುವಂತೆ ಬೇರೆ ಬೇರೆ ಹಸ್ತಗಳನ್ನು ಜೋಡಿಸುವುದು ಮುಂತಾದ ಕೆಲವರ ಪರಿಪಾಠ. ಹಾಗಾಗಿ ಅವಳು ಕೇಳಿದ್ದು ಇಂದಿನ ಈ ಜನಪ್ರಿಯ ರೂಢಿಯ ಬಗ್ಗೆ; ‘ಪ್ರತಿ ಹಸ್ತ ನೆನಪಿಟ್ಟುಕೊಳ್ಳುವುದರಲ್ಲಿ, ಸಾಹಿತ್ಯದ ಭಾವಾರ್ಥವೇ ಮರೆತು ಹೋಗುತ್ತದಲ್ಲವೇ? ನೋಡುವವರಿಗೂ ಭಾಷೆ ಗೊತ್ತಿಲ್ಲದಿದ್ದರೆ, [...]


