ಅಂಕಣಗಳು

Subscribe


 

ನರ್ತಕಿ ಬಂದಳು

Posted On: Thursday, November 6th, 2008
1 Star2 Stars3 Stars4 Stars5 Stars (1 votes, average: 4.00 out of 5)
Loading...

Author: ಮನೋರಮಾ. ಬಿ.ಎನ್


(ಶ್ರೀಯುತ ಐ. ಮಾ. ಮುತ್ತಣ್ಣ ಅವರ ಮುತ್ತಣ್ಣನ ಕವನಗಳು ಕವನ ಸಂಕಲನದಿಂದಾಯ್ದ ಕವನಲಹರಿ)

ನರ್ತಕಿ ಬಂದಳು ಛಲ್‌ಝಲ್ ನಾದದಿ

ಠಮ ಢಮ ತಾಳಕೆ ಕುಣಿಯುತ್ತ

ಪಾತರಗಿತ್ತಿಯ ಆ ಕುಣಿತ

ಪಾರ್ಥ ಸುಭದ್ರೆಯ ರಾಧಾಕೃಷ್ಣರ-

ನೊಬ್ಬಳೆ ತಾನೆಂದೆಣಿಸುತ್ತ

ರಂಗಸ್ಥಳದಲಿ ತಿರುಗುತ್ತ.

ತುಟಿಯಿಂದುರುಳುವ ಹಾಡಿನ ತನಿರಸ

ಮೌಕ್ತಿಕ ಮಣಿಯಂತುರುಳುವುದು ;

ತಾಳದ ಓಜೆಗೆ ಜಾರುವುದು !

ಕತ್ತಲೆ ನಡುವಣ ಚಂದ್ರನ ಬಿಂಬವೊ

ಕೆದರಿದ ಹೆರಳದು ಇಕ್ಕಡೆಯು

ಸುಂದರ ಮುಖವೊ ಮಿನುಗೆಲೆಯು.

ಕಣ್ಣಾಲಿಗಳನು ಹೊರಳಿಸಿ ಉರುಳಿಸಿ

ದುಂಡನೆ ರುಂಡವನಲುಗಾಡಿ ;

ಕಣ್ಣನು ಮೂಗಿನ ಮೇಲಿರಿಸಿ

ಕುಣುಕುಣು ಮೊಣಕಾಲಾಟದಿ ನೋಟದಿ

ಕೊಂಕಿಸಿ ನಡುವನು ಆ ಮಳ್ಳಿ

ಚಂಚಲ ಮಿಂಚಿನ ಬಾನ್‌ಬಳ್ಳಿ !

ಫಾರಸಿ ಹಿಂದೀ ವಂಗೀಯ ಕಲೆ

ಒಂದಾಯಿತು ಇಂದೀ ಮೇಳ !

ಬೃಂದಾವನದ ಆ ಲೀಲಾ !

ಬಂದಳು ನರ್ತಕಿ ಕೈಗಳ ಬೀಸುತ

ಮೆಟ್ಟುತ ಬೆಟ್ಟಲಿ ಆ ಕುಣಿತ

ಓಹೋ ಓಹೋ ಕನ್ನಡ ಗಾನ

ಕಥಕಳಿಯಾಟದ ಬಯಲಾಟ

ಭರತನ ನಾಟ್ಯದ ಮನನೋಟ

ಲಾಸ್ಯನರ್ತನ ನಟಕೇಸರಿ ಮನ

ಜುಂ ಜುಂ ಛಲ್ ಚಲ್ ಈ ಓಜ

ನರ್ತನ ತೋರಿದ ನಟರಾಜ.

ಹೊರಳುವ ಅಂಗಗಳಾಟವ ನೋಡಿರೊ

ಬೆರಳನು ತೋರುವ ತಿರುಳನ್ನು

ಕೊಂಕಿಸಿ ಕಾಲಿನ ನಿಲುವನ್ನು !

ದುಂಡನೆ ತಲೆಯನಲುಗಿಸಿ ತೋರುವ

Leave a Reply

*

code