ಅಂಕಣಗಳು

Subscribe


 

ವಿದುಷಿ ರೂಪಾ ಶ್ರೀಕೃಷ್ಣ ಉಪಾಧ್ಯ

Posted On: Thursday, November 6th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಯುವ ಭರತನಾಟ್ಯ ಗುರು ಮತ್ತು ಪ್ರಬುದ್ಧ ಕಲಾವಿದೆ. ಸಾಗರದ ವಿದ್ವಾನ್ ಜಿ. ಬಿ. ಜನಾರ್ಧನ್, ಬೆಂಗಳೂರಿನ ವಿದುಷಿ ಬಿ. ಕೆ. ವಸಂತಲಕ್ಷ್ಮೀ ಇವರ ಗರಡಿಯಲ್ಲಿ ಪಳಗಿದ ರೂಪಾ ಉಪಾಧ್ಯ ಭರತನಾಟ್ಯ ವಿದ್ವತ್ ಮತ್ತು ಎಂ.ಎ ರ್‍ಯಾಂಕ್ ವಿಜೇತೆ. ನಾಡಿನಾದ್ಯಂತ ಹಲವಾರು ಕಾರ್‍ಯಕ್ರಮಗಳನ್ನು ನೀಡುತ್ತಾ ಬಂದಿರುವ ರೂಪಾ, ಹಲವು ಸನ್ಮಾನ, ಪ್ರಶಸ್ತಿ ಪುರಸ್ಕ್ರತರು. ಪ್ರಸ್ತುತ ಮಡಿಕೇರಿಯಲ್ಲಿ ನೃತ್ಯ ಮಂಟಪ ಟ್ರಸ್ಟ್ ಏಂಬ ಸಂಸ್ಥೆಯನ್ನು ಹುಟ್ಟುಹಾಕಿ ಉತ್ತಮ ಆಶಯಗಳ ನೆಲೆಗಟ್ಟಿನಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಮಂದಿಗೆ ಕಲಾಕ್ಷೇತ್ರ ಶೈಲಿಯಲ್ಲಿ ಭರತನಾಟ್ಯ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರು ಈ ತಿಂಗಳ ದರ್ಶನ ಭ್ರಮರಿಯ ಅತಿಥಿ…

೧. ಈಗಿನ ಭರತನಾಟ್ಯ ಕಾರ್ಯಕ್ರಮಗಳು ಮಾರ್ಗ ಪದ್ಧತಿಯನ್ನು ದಾಟಿ ಬೇರೆಯದೇ ಧಾಟಿಯಲ್ಲಿ ಮುಂದುವರಿಯುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಈಗಿನ ಬಹುಪಾಲು ಕಾರ್ಯಕ್ರಮಗಳು ನರ್ತಕರ ಸಾಮರ್ಥ್ಯ, ಹಾಗೂ ಸಮಯಾವಕಾಶಗಳನ್ನು ಆವಲಂಬಿಸಿಯೇ ನಡೆಯುವುದರಿಂದ ಮಾರ್ಗ ಪದ್ಧತಿಯಲ್ಲೇ ನಡೆಯಬೇಕು ಎಂದರೆ ಕಷ್ಟ. ಮಾರ್ಗ ಪದ್ಧತಿಯ ನಿಯಮಗಳಿಗೆ ಇಂದು ಯಾರೂ ಬದ್ಧರಾಗಿಲ್ಲ. ಶಾಸ್ತ್ರೋಕ್ತವಾಗಿ, ಶುದ್ಧವಾಗಿ, ಕ್ರಮಪ್ರಕಾರವಾಗಿ ಮಾಡುವುದಕ್ಕೇ ಹಿಂದೇಟು ಹಾಕುತ್ತಾರೆ. ಅದಕ್ಕೆ ಬೇರೆ-ಬೇರೆ ಕಾರಣಗಳಿರುತ್ತವೆ. ಕಾಲಕ್ಕೆ ತಕ್ಕಂತೆ ಬದಲಾಗುವುದು ಇಂದಿನ ಅನಿವಾರ್ಯತೆಗಳಲ್ಲೊಂದು.

೨. ಭರತನಾಟ್ಯದಲ್ಲಿ ಅನುಸರಿಸುವ ನೂತನ ವಿಧಾನ ಅಥವಾ ಬದಲಾವಣೆಗಳು ಹೇಗಿದ್ದರೆ ಚೆನ್ನ?

ನೂತನ ಎಂದ ಕೂಡಲೇ ಹೇಗೇಗೋ ಮಾಡುವುದಲ್ಲ. ಅದಕ್ಕೂ ಚೌಕಟ್ಟು, ಶಾಸ್ತ್ರ ಕ್ರಮ ಬದ್ಧತೆಯ ನೀತಿಯಿದ್ದರೆ ಒಳ್ಳೆಯದು. ಜನರನ್ನು ತಲುಪುವ ನಿಟ್ಟಿನಲ್ಲಿ ನೂತನ ವಿಧಾನಗಳು ಅಗತ್ಯ. ಉದಾ: ಹೊರ ದೇಶಗಳಲ್ಲಿ ಕಾರ್ಯಕ್ರಮ ಕೊಡಬೇಕಾಗಿ ಬಂದಾಗ ಹಿಮ್ಮೇಳದ ಸಂಗೀತ, ನಿರೂಪಣೆ, ಮಂಡನಾ ಕೌಶಲ್ಯ…ಹೀಗೆ, ಸಣ್ಣ ಪ್ರಮಾಣದ ಬದಲಾವಣೆಗಳು ಅವಶ್ಯವಾಗುತ್ತವೆ. ಮುಖ್ಯವಾಗಿ ಸಾಹಿತ್ಯವೇ ಅರ್ಥವಾಗದೇ ಹೋದಲ್ಲಿ ವೀಕ್ಷಕರಿಗೆ ಆಸ್ವಾದನೆಯೂ ತ್ರಾಸದಾಯಕವಾಗುತ್ತದೆ. ಹಾಗಂತ ಪ್ರೇಕ್ಷಕರನ್ನು ತಲುಪುವುದಷ್ಟೇ ನೃತ್ಯ ಪ್ರದರ್ಶನಗಳ ಉದ್ದೇಶವಾಗಿರಬಾರದು. ಹಾಗಾದಲ್ಲಿ ನೃತ್ಯದ ಶಾಸ್ತ್ರೀಯತೆಗೆ ಖಂಡಿತಾ ಭಂಗ ಬರುತ್ತದೆ.

೩. ಭರತನಾಟ್ಯ ಛಿommಡಿಛಿiಚಿಟ ಆಗಿ ಹೋಗುತ್ತಿದೆ ಎಂಬ ಮಾತಿದೆ. ಇದನ್ನು ಒಪ್ಪುತ್ತೀರಾ?

ಖಂಡಿತವಾಗಿಯೂ..ಹಾಗಂತ ಛಿommeಡಿಛಿiಚಿಟ ಆಗುವುದು ಇಂದಿನ ಕಾಲಘಟ್ಟಕ್ಕೆ ಅನಿವಾರ್ಯವೂ ಕೂಡಾ..ಏಕೆಂದರೆ ಇಂದಿನ ಹಲವು ಗುರುಗಳು ಖರ್ಚು ಮಾಡಿ ಪ್ರತಿಷ್ಟಿತರಲ್ಲಿ ಕಲಿತು ಬರುತ್ತಾರೆ.ಹಾಗೆಯೇ ಶಿಷ್ಯರಿಂದಲೂ ಅದನ್ನು ನಿರೀಕ್ಷಿಸುತ್ತಾರೆ. ಜೊತೆಗೆ ಕಾರ್ಯಕ್ರಮದ ಆಯೋಜನೆಗಳ ಸಂದರ್ಭದಲ್ಲಿ ಎಲ್ಲಾ ಖರ್ಚನ್ನು ಗುರುಗಳು ಅಥವಾ ಸಂಸ್ಥೆಯೇ ಭರಿಸಲಾಗುವುದಿಲ್ಲ. ಈಗಿನ ಕಾಲದಲ್ಲಂತೂ ಧರ್ಮಾರ್ಥ ಅನ್ನುವ ಮನೋಭಾವ ನಿರೀಕ್ಷೆ ಮಾಡುವುದೇ ಕಷ್ಟ… ಆದ್ದರಿಂದ ಛಿommಡಿಛಿiಚಿಟ ಆಗುವುದು ಅಪರಾಧವಲ್ಲ. ಆದರೆ ಅದು ಸುಲಿಗೆಯಾಗಬಾರದು. ಅತೀ ಮಾಡುವುದು ಒಳ್ಳೆಯದಲ್ಲ. ಮಿತಿಯಲ್ಲಿದ್ದರೆ ಚೆಂದ.

೪. ಕಲಾವಿದೆ ಎಂದರೆ ನಿಮ್ಮ ದೃಷ್ಟಿಯಲ್ಲಿ ಹೇಗಿರಬೇಕು ?

ನರ್ತಕರ ಗುಣ, ಅವರ ಚಿಠಿಠಿeಚಿಡಿಚಿಟಿಛಿe ನೋಡಿ ಕಲಾವಿದರು ಅಂತ ಅಳೆಯಲಿಕ್ಕಾಗುವುದಿಲ್ಲ. ಕಲಾವಿದರು ಮೃದು ವರ್ತನೆ, ಉತ್ತಮ ನಡೆನುಡಿ, ಸಂವಹನ ಕಲೆಯನ್ನು ರೂಡಿಸಿಕೊಂಡಷ್ಟೂ ಒಳ್ಳೆಯದು. ಆಧ್ಯಾತ್ಮಿಕ-ಪುರಾಣಗಳ ಬಗ್ಗೆ ಆಸಕ್ತಿ, ನೃತ್ಯಗ್ರಂಥಗಳ ತಿಳಿವಳಿಕೆ, ನೃತ್ಯ ಕಾರ್ಯಕ್ರಮ ಕೊಡುವ ಮೊದಲು ಅದರ ಹಿನ್ನೆಲೆ, ಸಂಬಂಧಿತ ವಿಚಾರಗಳಲ್ಲಿ ಅರಿವು..ಇವೆಲ್ಲವೂ ಕಲಾವಿದರನ್ನು ಪ್ರಬುದ್ಧರನ್ನಾಗಿಸುತ್ತದೆ. ಇನ್ನೊಂದು ಮುಖ್ಯ ವಿಚಾರವೆಂದರೆ ಅಹಂ…ಕಲಾವಿದರು ಅಹಂಕಾರ ಬಾಧಿತರಾಗಿರಬಾರದು. ಅದು ಪರಿಣಾಮಕಾರಿಯಾಗಿರಬೇಕೇ ವಿನ: ಕೆಳಮಟ್ಟದ ಸ್ಪರ್ಧೆಗೆ ಇಳಿಯುವುದು, ಇನ್ನೊಬ್ಬರನ್ನು ನೋಯಿಸುವುದು, ತೊಂದರೆ ಮಾಡುವುದು..ಇತ್ಯಾದಿ ಭೂಷಣವಲ್ಲ.

೫. ಗುರುಕುಲ ಪದ್ಧತಿಯ ಅಧ್ಯಯನದ ಲಾಭ-ನಷ್ಟಗಳ ಬಗ್ಗೆ ತಿಳಿಸುತ್ತೀರಾ ?

ಒಂದರ್ಥದಲ್ಲಿ ನೋಡಿದರೆ ಪರಿಪೂರ್ಣ ಕಲಾವಿದೆ ರೂಪುಗೊಳ್ಳುವುದೇ ಗುರುಕುಲ ಪದ್ಧತಿಯ ಅಧ್ಯಯನದಲ್ಲಿ. ಅಲ್ಲಿ ಕಲಿಯುವವರಿಗೂ, ಕಲಿಸುವವರಿಗೂ ತಹತಹಿಕೆ, ಶ್ರದ್ಧೆ, ಏಕಾಗ್ರತೆ, ಕ್ರಮ, ಬದ್ಧತೆ ಎಲ್ಲವೂ ಇರುತ್ತದೆ. ಯಾವುದನ್ನು ಕಲಿಯಬೇಕು ಅಂತ ಹೋಗಿರುತ್ತೇವೆಯೋ ಅದಷ್ಟೇ ಅಲ್ಲದೆ, ಸಾಮಾಜಿಕ ಮತ್ತು ಇತರ ಬೋಧಪ್ರದ ವಿಚಾರಗಳ ಅವಲೋಕನ, ವಿಮರ್ಶನ ನಡೆಯುತ್ತದೆ. ಸಚ್ಚಾರಿತ್ರ್ಯ ರೂಪಿಸುತ್ತದೆ. ಆದರೆ ಇಂದಿನ ದಿನಗಳಲ್ಲಿ ಗುರುಕುಲ ಪದ್ಧತಿ ತೀರಾ ವಿರಳ. ಮತ್ತು ನಿರೀಕ್ಷಿಸುವುದೂ ದುಸ್ತರ..

Leave a Reply

*

code