ನಮ್ಮ ಬಗ್ಗೆ
Thursday, December 29th, 2011
ನೂಪುರ ಭ್ರಮರಿಯ ಸಂಪಾದಕೀಯ ಬಳಗ :
ನೂಪುರ ಭ್ರಮರಿಯ ಪ್ರಧಾನ ಸಂಪಾದಕಿ ಮತ್ತು ನೂಪುರ ಭ್ರಮರಿ ಪ್ರತಿಷ್ಠಾನದ ಅಧ್ಯಕ್ಷೆ ಮನೋರಮಾ ಬಿ. ಎನ್.
ವೃತ್ತಿಯಿಂದ ಅಧ್ಯಾಪಿಕೆಯೂ, ಸಾಧನೆಯಿಂದ ಕಲಾವಿದೆಯೂ, ಸಂಶೋಧಕಿಯೂ ಆದ ಶ್ರೀಮತಿ ಮನೋರಮಾ. ಬಿ. ಎನ್. ಇವರು ನೂಪುರ ಭ್ರಮರಿಯ ಪ್ರಧಾನ ಸಂಪಾದಕಿಯಾಗಿ ಪತ್ರಿಕೆಯ ಹುಟ್ಟು ಹಾಗೂ ಬೆಳವಣಿಗೆಗೆ ಕಾರಣಕರ್ತರು. ಪತ್ರಿಕೋದ್ಯಮ ವಿದ್ಯಾರ್ಥಿನಿ & ಅಧ್ಯಾಪಿಕೆಯಾಗಿ ಹಾಗೂ ಸುಮಾರು 20 ವರ್ಷಗಳ ಭರತನಾಟ್ಯ ಕ್ಷೇತ್ರದ ಅನುಭವವಿರುವ ಇವರು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆಯನ್ನು ಕಂಡುಕೊಂಡರು. [...]


