: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ಅಕ್ಷರ ಭ್ರಮರಿ

ರೂಪಕ, ರಸಪ್ರಕರಣಗಳ ಅವಲೋಕ : ದಶರೂಪಕ
ಸಂಸ್ಕೃತದ ನಾಟ್ಯಶಾಸ್ತ್ರಗ್ರಂಥಗಳಲ್ಲಿ ರೂಪಕ, ರಸಪ್ರಕರಣಗಳ ಬಗ್ಗೆ ವಿಷದವಾಗಿ  ನಿರೂಪಣೆ ನೀಡಿರುವ ಶ್ರೇಷ್ಟವೆನಿಸುವ ಗ್ರಂಥಗಳ ಪೈಕಿ ದಶರೂಪಕವೂ ಒಂದು. ೧೦-೧೧ ಶತಮಾನದಲ್ಲಿ  ಜೀವಿಸಿದ್ದೆನ್ನಲಾದ ಧನಂಜಯನೆಂಬ ಕವಿಯಿಂದ ರಚಿತಗೊಂಡ ಈ ಗ್ರಂಥ ಧನಿಕ ಎಂಬ ಧನಂಜಯನ ಸಹೋದರನೆಂದು  ಕರೆಯಲಾದವನಿಂದ ಬರೆಯಲ್ಪಟ್ಟ ದಶರೂಪಾವಲೋಕವ್ಯಾಖ್ಯೆಯನ್ನು ಹೊಂದಿದೆ.

ಮುಂಜರಾಜ ಎಂಬ ರಾಜನ ಆಸ್ಥಾನದಲ್ಲಿದ್ದ ಧನಂಜಯನು ವೈದಿಕ  ಸಂಪ್ರದಾಯವನ್ನಿಟ್ಟ್ಟುಕೊಂಡಿದ್ದ ವಿಷ್ಣು ಎಂಬವನ ಪುತ್ರನೆಂದು ಹೇಳಿಕೊಂಡಿದ್ದಾನೆ. ಧನಿಕನು ಈ  ರಾಜನನ್ನು ವಾಕ್ಪತಿರಾಜನೆಂದು ಉಲ್ಲೇಖಿಸಿದ್ದಾನೆ. ಈ ರಾಜನು ಮಾಳವ ದೇಶದಲ್ಲಿ ಆಳುತ್ತಿದ್ದ  ಉಪೇಂದ್ರನ ಅನಂತರದಲ್ಲಿ ಬಂದ ಪರಮಾರ ವಂಶದನೆಂದು ಗುರುತಿಸಲಾಗಿದೆ. ಇವನಿಗೆ ಉತ್ಪಲರಾಜ,  ಅಮೋಘವರ್ಷ, ಪೃಥ್ವೀವಲ್ಲಭ, ಶ್ರೀವಲ್ಲಭನೆಂಬ ಹೆಸರುಗಳು ಇದ್ದವೆನ್ನಲಾಗಿದ್ದು ಇತರೇ  ಸಂಗೀತ-ನಾಟ್ಯದ ಗ್ರಂಥಗಳಲ್ಲೂ ಇವನ ಹೆಸರುಗಳುಳ್ಳ ಪದ್ಯಗಳು ಕಂಡುಬಂದಿದೆ. ಇದರಿಂದ ದೊರೆ  ಕವಿಯಾಗಿದ್ದನೆಂಬ ಸೂಚನೆಯೂ ದೊರೆಯುತ್ತದೆ.

ಈ ಗ್ರಂಥವನ್ನು ನಾಲ್ಕು ‘ಪ್ರಕಾಶ’ವಾಗಿ ವಿಂಗಡಿಸಲಾಗಿದೆ. ಪ್ರಾರಂಭದಲ್ಲಿ ಗಣಪತಿ,  ಸರಸ್ವತಿ, ವಿಷ್ಣು ಸ್ತುತಿಗಳಿವೆ. ವಿಷ್ಣುವೇ ಧನಂಜಯನ ಇಷ್ಟದೈವವೆನ್ನುವುದು ನಿರೂಪಿತವಾಗಿದೆ.  ಗ್ರಂಥದ ಪ್ರಥಮ ಪ್ರಕಾಶದಲ್ಲಿ ವಸ್ತುವನ್ನು (ಅರ್ಥಪ್ರಕೃತಿಗಳು, ಅವಸ್ಥೆಗಳು, ಸಂಧಿಗಳು,  ಅರ್ಥೋಪಕ್ಷೇಪಗಳು, ಶ್ರವ್ಯಾಶ್ರವ್ಯಗಳು) ; ದ್ವಿತೀಯ ಪ್ರಕಾಶದಲ್ಲಿ ನಾಯಕಾದಿ ವಿಷಯವನ್ನು  (ನಾಯಕ-ನಾಯಿಕಾಬೇಧಗಳು, ಸ್ತ್ರೀ ಸತ್ತ್ವಜ ಅಲಂಕಾರಗಳು, ವೃತ್ತಿಗಳು, ನಾಟ್ಯಪ್ರವೃತ್ತಿ,  ಸಂಬೋಧನೆಗಳು, ಸರ್ವಪಾತ್ರಗಳ ವಿಶೇಷ ಬೇಧ) ; ಚತುರ್ಥ ಪ್ರಕಾಶದಲ್ಲಿ ರಸವಿಷಯವನ್ನು  (ವಿಭಾವಾನುಭಾವಗಳು, ವ್ಯಭಿಚಾರಿಭಾವಗಳು, ಸ್ಥಾಯಿಭಾವಗಳು, ರಸಪ್ರಕರಣ) ವಿವರಿಸಲಾಗಿದೆ. ಈ ಮೂರು  ಅಂಶಗಳ ಆಧಾರದ ಮೇಲೆ ಕಲ್ಪಿತವಾಗುವ ರೂಪಕದ ಹತ್ತು ಮುಖ್ಯಬೇಧಗಳನ್ನು (ನಾಟಕ, ಆಮುಖ, ವೀಥಿ,  ಇತಿವೃತ್ತ-ಆರಂಭ ಯೋಜನೆ, ಅಂಕಲಕ್ಷಣ, ರಸ, ಅನಿರ್ದೇಶ್ಯಗಳು, ಅಂಕರಚನೆ, ಪ್ರಕರಣ ಲಕ್ಷಣ,  ನಾಟಿಕಾ-ಭಾಣ-ಪ್ರಹಸನ-ಡಿಮ-ವ್ಯಾಯೋಗ, ಸಮವಕಾರ-ವೀಥೀ-ಉತ್ಸೃಷ್ಟಿಕಾಂಕ-ಈಹಾಮೃಗ ಲಕ್ಷಣ,  ಲಾಸ್ಯಾಂಗಗಳು) ತೃತೀಯ ಪ್ರಕಾಶದಲ್ಲಿ ಹೇಳಲಾಗಿದೆ.

ರಸನಿಷ್ಪತ್ತಿಯಲ್ಲಿ ಶಾಂತರಸವನ್ನು ಧನಿಕನು ಖಂಡಿಸುತ್ತಾ ಈರ್ವರೂ ಎಂಟೇ ರಸಗಳು  ಇವೆಯೆಂಬುದನ್ನು ಸ್ಪಷ್ಟೀಕರಿಸುತ್ತಾರೆ. ಇವೆಲ್ಲಾ ಇದ್ದರೂ, ಧನಿಕನ ಕೆಲವೇ ಕೆಲವು ಮಾತುಗಳಲ್ಲಿ  ವ್ಯಾಖ್ಯಾನಸಹಜ ನಿರೂಪಣೆಯನ್ನಿತ್ತು ಸುಲಲಿತ ಮಾಡಿದ ಅವಲೋಕವೇ ಧನಂಜಯನ ದಶರೂಪಕಕ್ಕೆ ಪೂರ್ಣತ್ವ  ಕೊಟ್ಟಿದೆಯೆಂಬುದು ಇಲ್ಲಿನ ಮತ್ತೊಂದು ಮಹತ್ವದ ಸಂಗತಿ. ಶ್ಲೋಕಗಳು ಸಂಸ್ಕೃತ,  ಪ್ರಾಕೃತಭಾಷೆಯಲ್ಲಿದ್ದು ಗ್ರಂಥದ ಬಹುಭಾಗವೂ ಅನುಷ್ಟುಪ್ ಛಂದಸ್ಸಿನಲ್ಲಿದೆ.

ಈ ಗ್ರಂಥವನ್ನು ಮೊದಲಿಗೆ ಸಂಪಾದಿಸಿ ೧೮೬೫ರಲ್ಲಿ ಕಲ್ಕತ್ತಾದ ಬಿಬ್ಲಿಯೋಥಿಕಾ ಇಂಡಿಕಾ  ಎಂಬ ಗ್ರಂಥಮಾಲಿಕೆಯಲ್ಲಿ ಪ್ರಕಟಿಸಿದವರು ಫಿಟ್ಸೆಡ್ ವರ್ಡ್ ಹಾಲ್. ಮೊದಲ ಆಂಗ್ಲಭಾಷಾನುವಾದ  ಪ್ರಕಟಿಸಿದವರು ೧೯೧೨ರಲ್ಲಿ, ಜಾರ್ಜ್ ಸಿ. ಒ. ಹ್ಯೂಸ್. ಇದರೊಂದಿಗೆ ೧೮೭೮, ೧೮೯೭, ೧೯೪೨,  ೧೯೫೫ರಲ್ಲಿ ಕ್ರಮವಾಗಿ ಜೀವಾನಂದ ವಿದ್ಯಾಸಾಗರ, ಕಾಶೀನಾಥ ಪಾಂಡುರಂಗ ಪರಬ್, ರಸಶಾಲಾ  ಆಯುರ್ವೇದಾಶ್ರಮ್, ಚೌಖಾಂಬಾ ವಿದ್ಯಾಭವನದವರು ವಿವಿಧ ಪರಿಷ್ಕೃತ ಆವೃತ್ತಿಗಳನ್ನು ಹೊರತಂದರು. ಈಗ  ಚಾಲ್ತಿಯಲ್ಲಿರುವ ಪ್ರಸ್ತುತ ಅನುವಾದ ‘ನಿರ್ಣಯ ಸಾಗರ’ದವರದ್ದು. ಮೂಲದೊಂದಿಗೆ ಕನ್ನಡ  ಅನುವಾದವಿರುವ ಗ್ರಂಥವನ್ನು ೧೯೫೮ರಲ್ಲಿ ಕೆ.ವಿ ಸುಬ್ಬಣ್ಣ ಅವರ ಸಂಪಾದನೆಯಲ್ಲಿ ಅಕ್ಷರ  ಪ್ರಕಾಶನದವರು ಹೊರತಂದರು.

ರಸಪ್ರಕರಣದಲ್ಲಿನ ಕೆಲವು ಭಾಗಗಳನ್ನು ಬಿಟ್ಟರೆ ದಶರೂಪಕದ ಉಳಿದ ಭಾಗ  ನಾಟ್ಯಶಾಸ್ತ್ರಕ್ಕೆ ಒಂದು ಅಚ್ಚುಕಟ್ಟಾದ ಕೈಪಿಡಿಯೇ ಸರಿ ! ಆಸಕ್ತ ಸಂಶೋಧಕರಿಗೆ,  ಗುರು-ವಿದ್ಯಾರ್ಥಿಗಳಿಗೆ ಅಪಾರ ಸಾಧ್ಯತೆಗಳನ್ನು ತಿಳಿಸುವ ಆಕರ ಗ್ರಂಥ.

ಯುವ ಕಲಾವಿದರ ಆಶಾಕಿರಣವಾದ ಯಕ್ಷಗಾನ ಪುನಶ್ಚೇತನಾ ಶಿಬಿರ
ಜೀವನದಲ್ಲಿ ಕೆಲವೊಂದು ಘಟನೆಗಳು, ಕ್ಷಣಗಳು, ವ್ಯಕ್ತಿಗಳನ್ನು ಮರೆಯಲಾಗುವುದಿಲ್ಲ.  ಕಾರಣ, ಅವು ಅಷ್ಟು ಪರಿಣಾಮಕಾರಿ. ಇದಕ್ಕೊಂದು ಉತ್ತಮ ಉದಾಹರಣೆ ಕರ್ನಾಟಕ ಯಕ್ಷಗಾನ ಅಕಾಡೆಮಿ  ಆಯೋಜಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಸಂಪನ್ನಗೊಂಡ ಯುವ ವೃತ್ತಿಪರ ಯಕ್ಷಗಾನ  ಕಲಾವಿದರ ಪುನಶ್ಚೇತನಾ ಶಿಬಿರ.

ಇತ್ತೀಚೆಗೆ ಪ್ರತಿಯೊಬ್ಬರೂ ಬಯಸುತ್ತಿರುವುದು ಪ್ರಸಿದ್ಧಿಯನ್ನು, ಸಿದ್ಧಿಯನ್ನಲ್ಲ.  ಅದು ನೃತ್ಯ ಮತ್ತು ಯಕ್ಷಗಾನದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಕಳೆದ ಜೂನ್ ೭ರಿಂದ ೧೩  ರವರೆಗೆ ೭ ದಿವಸಗಳ ಕಾಲ ಯುವ ವೃತ್ತಿಪರ ಯಕ್ಷಕಲಾವಿದರಿಗೆ ( ತೆಂಕು+ಬಡಗು) ಪುನಶ್ಚೇತನ  ಶಿಬಿರವನ್ನು ಉಜಿರೆಯ ಸಿದ್ಧವನ ಗುರುಕುಲದ ಪ್ರಶಾಂತ ವಾತಾವಣದಲ್ಲಿ ಏರ್ಪಡಿಸಲಾಗಿತ್ತು. ಉಚಿತ ಊಟ  ವಸತಿಯೊಂದಿಗೆ ಶಿಸ್ತಿನಿಂದಲೇ ಜರುಗಿದ ಈ ಶಿಬಿರವನ್ನು ಉದ್ಘಾಟಿಸಿದ್ದು ರಾಜ್ಯದ ಗೃಹ ಸಚಿವರಾದ  ಡಾ| ವಿ.ಎಸ್. ಆಚಾರ್ಯರು. ಸಮಾರೋಪ ಸಮಾರಂಭದಲ್ಲಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರ  ಅಧ್ಯಕ್ಷತೆಯೊಂದಿಗೆ ಸಮಾಪನ ಕಂಡ ಈ ಶಿಬಿರ ಅತ್ಯಂತ ಪ್ರಶಂಸನೀಯ, ಶ್ಲಾಘನೀಯವೇ ಸರಿ !

ಹೊಸ್ತೋಟ ಮಂಜುನಾಥ ಭಾಗವತರು, ಬಲಿಪ ನಾರಾಯಣ ಭಾಗವತ, ಅಮೃತ ಸೋಮೇಶ್ವರ,  ಎಚ್.ಜಿ.ಶ್ರೀಧರ ಹಂದೆ ಅವರುಗಳೊಂದಿಗೆ ಕಲೆತು ಅವರ ಅನುಭಗಳಿಗೆ ಕಿವಿಯಾಗುವ ಅವಕಾಶ ; ಶತಾವಧಾನಿ  ಡಾ| ಆರ್. ಗಣೇಶ್, ಡಾ| ಪ್ರಭಾಕರ ಜೋಷಿ, ಕುಂಬ್ಳೆ ಸುಂದರ ರಾವ್, ಎಂ.ಎಲ್.ಸಾಮಗ ಹೀಗೆ  ವಿದ್ವಜ್ಜನರಿಂದ ಮೂಡಿಬಂದ ವಾಕ್ ಸರಣಿ ಮತ್ತು ಚಿಂತನದಿಂದಾದ ಮನೋವಿಕಾಸ ; ಕೊರ್ಗಿ ವೆಂಕಟೇಶ  ಉಪಾಧ್ಯಾಯ ಅವರಿಂದ ನಡೆದ ಅರ್ಥಗಾರಿಕೆಯ ಸೂಕ್ಷ್ಮಗಳ ನಿರೂಪಣೆ ; ಸೂರಿಕುಮೇರಿ ಗೋವಿಂದ ಭಟ್,  ಬಳ್ಕೂರು ಕೃಷ್ಣಯಾಜಿ ಅವರ ಬೋಧನೆ ; ಕೋಳ್ಯೂರು ರಾಮಚಂದ್ರರಾಯರು, ಸಬ್ಬಣ್ಣಕೋಡಿ ರಾಮಭಟ್, ಮಂಟಪ  ಪ್ರಭಾಕರ ಉಪಾಧ್ಯಾಯರ ಅಭಿನಯ ಪ್ರಾತ್ಯಕ್ಷಿಕೆಗಳು, ಚಿ.ಸು.ಕೃಷ್ಣ ಶೆಟ್ಟಿ, ದೇವಕಾನ ಕೃಷ್ಣ ಭಟ್  ಅವರಿಂದ ವೇಷಭೂಷಣ, ಪುರುಶೋತ್ತಮ ಅಡ್ವೆ ಅವರಿಂದ ಚಿತ್ರಕಲೆ ಮತ್ತು ಬೆಳಕು ಸಂಯೋಜನೆಯ ವಿಚಾರ  ವಿಮರ್ಶೆ.., ಹೀಗೆ ಹೆಜ್ಜೆಗಾರಿಕೆ, ತಂತ್ರ ಕೌಶಲ, ಸಮಕಾಲೀನ ಪ್ರಜ್ಞೆ, ರಂಗ ತಂತ್ರ, ಅಭಿನಯ,  ಮಾತುಗಾರಿಕೆ, ಬಣ್ಣಗಾರಿಕೆ, ಸೃಜನಶೀಲತೆ, ಯಕ್ಷಸಾಹಿತ್ಯ, ಭಾಗವತಿಕೆ, ಪ್ರಸ್ತುತ ಸ್ಥಿತಿಗತಿ..,  ವಿವಿಧ ವಿಷಯಗಳನ್ನು ಒಂದೇ ಸೂರಿನಡಿ ಅರಿತುಕೊಳ್ಳುವ ಅಪೂರ್ವ ಅವಕಾಶ ನಮ್ಮದಾಗಿತ್ತು.

ಸೋದರ ಕಲೆಗಳಲ್ಲಿ ಕೇರಳದ ಕಲಾಮಂಡಲಂನ ಶಂಕರನಾರಾಯಣನ್ ಬಳಗದ ಕಥಕ್ಕಳಿ  ಪ್ರಾತ್ಯಕ್ಷಿಕೆ, ಶಿವರಾಮ ಕಾರಂತರ ಪುತ್ರಿ ಕ್ಷಮಾ ರಾವ್ ಅವರ್ ಒಡಿಸ್ಸಿ ನೃತ್ಯ  ಪ್ರಾತ್ಯಕ್ಷಿಕೆಗಳು ; ಸಮಕಾಲೀನ ಸಿನಿಮಾ ಕಲೆಯ ಕುರಿತು ಚಿತ್ರನಟ ರಾಮಕೃಷ್ಣ ಅವರಿಂದ ಅನುಭವ ಕಥನ,  ಸುರೇಶ್ ಆನಗಳ್ಳಿ, ಜೀವನ್‌ರಾಂ ಸುಳ್ಯ, ಅವರಿಂದ ರಂಗದಲ್ಲಿ ಏಕಾಗ್ರತೆ, ಅಭಿನಯ, ಸ್ವರ, ಮುಖಭಾವ,  ಬೆಳಕು ಹೇಗಿರಬೇಕು? ಎಂಬುದರ ಬಗ್ಗೆ ಸಕಾಲಿಕ ಸಂದೇಶ, ಯಕ್ಷ ವಿದ್ವಾಂಸರೊಡನೆ ನಮಗೆ ಸಿಕ್ಕಿದ  ಸಂವಾದ, ಸಂವಹನ ಮಾತ್ರವಲ್ಲದೆ ಆರೋಗ್ಯವರ್ಧನೆಗೆ ದಿನನಿತ್ಯವೂ ಮುಂಜಾವಿಗೆ ಡಾ. ನಾಗರಾಜ್ ಅವರಿಂದ  ಯೋಗ ಪ್ರಾಣಾಯಾಮದ ಪಾಠ, ಮತ್ತು ಎಷ್ಟೋ ಯಕ್ಷ ಕಲಾವಿದರನ್ನು ಅನಿವಾರ್ಯ ದೃಷ್ಟಿಯಲ್ಲಿ ಕಾಡಿದ  ಮತ್ತು ಕಾಡುತ್ತಿರುವ ಮದ್ಯಸೇವನೆಯ ಕುರಿತಾಗಿ ಆಪ್ತ ಸಮಾಲೋಚನಕಾರರಾದ ವಿವೇಕ್ ಪಾಯಸ್‌ರಿಂದ  ದುಷ್ಟಚಟಗಳು-ಅವುಗಳ ದುಷ್ಪರಿಣಾಮ ಮತ್ತು ಅನುಸರಿಸಬೇಕಾದ ವ್ಯಕ್ತಿತ್ವ ಕೌಶಲಗಳ ಕುರಿತು  ಉಪನ್ಯಾಸ-ಬೋಧನೆ ಕಾರ್ಯಕ್ರಮವಿದ್ದದ್ದು ಶಿಬಿರದ ಸಮಗ್ರ ದೂರದೃಷ್ಠಿಗೆ ಸಾಕ್ಷಿ.

ಇವೆಲ್ಲವಕ್ಕಿಂತ ಮುಖ್ಯವಾಗಿ ಯಕ್ಷಗಾನ ನಾಟ್ಯದಲ್ಲಿ ಖಚಿತತೆ, ಶಾಸ್ತ್ರೀಯತೆಯನ್ನು  ತೋರಿಸಿಕೊಟ್ಟ ಕರ್ಗಲ್ಲು ವಿಶ್ವೇಶ್ವರ ಭಟ್ಟರು, ಮತ್ತು ಬನ್ನಂಜೆ ಸಂಜೀವ ಸುವರ್ಣರ ನಿರಂತರ ನಿತ್ಯ  ಪಾಠ ಮತ್ತು ನಾಟ್ಯ ವೈವಿಧ್ಯ ನಮ್ಮ ಮನದಲ್ಲಿ ಅಚ್ಚೊತ್ತಿತ್ತು. ರಂಗದಿಂದ ಮರೆಯಾದ ನಾಟ್ಯಗಳು,  ಲಾಗಗಳು, ಪ್ರವೇಶ, ಸಭಾಕಲಸು ಇತ್ಯಾದಿ ರಂಗನಡೆ, ರಂಗತಂತ್ರಗಳನ್ನು ಅಭ್ಯಸಿಸುವುದಕ್ಕೆ  ಅವಕಾಶವಾಯಿತು. ಪ್ರತಿದಿನ ಸಂಜೆ ಸೋದರ ಕಲೆಗಳ ಕಲಾವಿದರ ಅಪೂರ್ವ ಪ್ರದರ್ಶನಗಳ ಸಂಗ್ರಾಹ್ಯ ಸಿ.ಡಿ,  ಡಿ.ವಿ.ಡಿಗಳನ್ನು ವೀಕ್ಷಿಸಿ ಅರಿಯುವ ಭಾಗ್ಯ ; ಜೊತೆಗೆ ಉಜಿರೆ ಕಾಲೇಜಿನ, ಮತ್ತು ಸಿದ್ಧವನದ  ಅತಿಥೇಯ ಸಿಬ್ಬಂದಿಗಳ, ಉಪನ್ಯಾಸಕರ, ವಿದ್ಯಾರ್ಥಿಗಳ ಸೌಹಾರ್ದ ವರ್ತನೆ, ಸಹಕಾರ, ಸೌಲಭ್ಯವನ್ನಂತೂ  ಮರೆಯಲು ಅಸಾಧ್ಯ.

ಯಕ್ಷಗಾನದಲ್ಲಿ ನಾವೇನು ತಪ್ಪುಗಳನ್ನು ಮಾಡುತ್ತಿದ್ದೇವೆ? ವಿಸ್ತಾರ ಎಷ್ಟಿದೆ ಎಂಬ  ಸತ್ಯದ ಅರಿವು ಮೂಡಿದೆ. ಮುಂದೆ ಸೊಗಸಾದ ಯಕ್ಷಗಾನ ಮೂಡಿಬಂದರೆ ಅದಕ್ಕೆ ಕಾರಣ ಅಕಾಡೆಮಿ  ಅಧ್ಯಕ್ಷರು, ಮುರಳಿ ಕಡೆಕಾರ್, ಚಂದ್ರಶೇಖರ ಶೆಟ್ಟಿ ಅವರಂತಹ ಸದಸ್ಯರು, ಪೃಥ್ವಿರಾಜ್ ಕವತ್ತಾರು  ಅವರಂತಹ ಮಾಧ್ಯಮದ ಕಲಾಸಕ್ತರು ಎಂಬುದು ಹೊಗಳಿಕೆಯಲ್ಲ.

ಮುಂದಿನ ದಿನಗಳಲ್ಲಿ ಇಂತಹುದೇ ಮಾದರಿಯ ಶಿಬಿರದ ದಿನಗಳು ವಿಸ್ತೃತವಾಗಿ ಯುವಕರಿಗೆ  ಮಾತ್ರವಲ್ಲ, ವೃತ್ತಿ ಕಲಾವಿದರೆಲ್ಲರಿಗೂ ಲಭ್ಯವಾಗಿ, ಶಾಸ್ತ್ರೀಯವಾಗಿ ಸ್ವಚ್ಛವಾಗಿ  ಪರಂಪರೆಗಳನ್ನು ಬಿಡದೇ ಆಧುನಿಕತೆಯನ್ನೂ ರೂಢಿಸಿ ಯಕ್ಷಗಾನ ಕಲೆಯ ಬೆಳವಣಿಗೆಗೆ , ಕಲಾವಿದರ  ಉಳಿವಿಗೆ ಕಾರಣವಾಗಲಿ ಎಂದು ಬಯಸುತ್ತೇನೆ.

ಆದುದರಿಂದಲೇ ‘ಭೇಷ್ ಕರ್ನಾಟಕ ಯಕ್ಷಗಾನ ಅಕಾಡೆಮಿ’ ಎಂಬುದು ಶಿಬಿರಾರ್ಥಿಗಳ ಒಕ್ಕೊರಲ  ನುಡಿ.

`ಭರತನಾಟ್ಯ’ದ ದಿಗ್ದರ್ಶನ
‘ಒಬ್ಬ ಲೇಖಕ ಅಥವಾ ಸಾಹಿತಿಯ ಕೈ ಮತ್ತೊಬ್ಬರ, ಇನ್ನೊಬ್ಬ ಲೇಖಕ-ಸಾಹಿತಿಯ ಜೇಬಿನಲ್ಲಿರುತ್ತದೆ’- ಸಾಹಿತ್ಯ ಜಗತ್ತಿನ ಸಾರ್ವಕಾಲಿಕ  ವ್ಯಂಗ್ಯ!  ಕನ್ನಡದಲ್ಲಿ ಉಪಲಬ್ದವಿರುವ ಅದೆಷ್ಟೋ ಭರತನಾಟ್ಯ ಸಂಬಂಧಿತ ಪುಸ್ತಕಗಳು ಈ ಮಾತಿಗೆ ಹೊರತಲ್ಲ. ಹಾಗಾಗಿ ಭರತನಾಟ್ಯ ಸಂಬಂಧಿತ ಹಲವು ಪುಸ್ತಕಗಳಲ್ಲಿ ಕಣ್ಣಾಡಿಸಿದರೂ ಸಂಶೋಧನೆಯಿಲ್ಲದ ಒಂದೇ ಬಗೆಯ ವರ್ಣನೆ, ಮಾಹಿತಿ ಸರ್ವೇ ಸಾಮಾನ್ಯ.

ಆದರೆ ೧೯೮೧ ರಲ್ಲಿ ಹೊರಬಂದ ಒಂದು ಕನ್ನಡ ಗ್ರಂಥ ಇಂದಿಗೂ ಇವೆಲ್ಲವುಗಳಿಗಿಂತಲೂ ಭಿನ್ನವೆನಿಸಿ ಸಾಕಷ್ಟು ಓದುಗರಿಗೆ ಚಿಂತನಪ್ರದವಾದ ಮಾಹಿತಿಗಳನ್ನು ನೀಡುತ್ತಾ, ಹಲವು ಪ್ರಬಂಧಗಳಿಗೆ, ಪಠ್ಯಪುಸ್ತಕಗಳಿಗೆ, ಲೇಖನಗಳಿಗೆ ಆಕರವಾಗಿ ದಶಕಗಳಿಂದಲೂ ಮನ್ನಣೆಗೆ ಪಾತ್ರವಾಗಿದೆ. ನೃತ್ಯದ ಕುರಿತಂತೆ ಬರೆದ ಪುಸ್ತಕಗಳ ಪೈಕಿ ಸಂಶೋಧನಾ ರುಚಿಯ ಸಾಂಗತ್ಯ ಹೆಚ್ಚಿರುವುದು ಈ ಪುಸ್ತಕದಲ್ಲೇ ಎಂದರೆ ತಪ್ಪೇನಿಲ್ಲ. ಹಾಗಾಗಿ ಈ ಪುಸ್ತಕವೊಂದು ಸಮೃದ್ಧ ಜೇಬು!

ಅದುವೇ ನೃತ್ಯ ವಿದ್ವಾಂಸ ವಿ. ಎಸ್. ಕೌಶಿಕ್ ಅವರು ಬರೆದ ಭರತನಾಟ್ಯ ದಿಗ್ದರ್ಶನ. ಹೆಸರೇ ತಿಳಿಸುವಂತೆ ಭರತನಾಟ್ಯದ ದಶ ದಿಕ್ಕುಗಳ ದರ್ಶನವೂ ಇಲ್ಲಿ ಲಭ್ಯ. ಬೆಂಗಳೂರಿನ ಸನಾತನ ಕಲಾಕ್ಷೇತ್ರದಿಂದ ಪ್ರಕಾಶಿತಗೊಂಡ ಪುಸ್ತಕವಿದು. ಅನ್ಯ ನಾಟ್ಯಗ್ರಂಥಗಳಲ್ಲಿ ಮೇಲುನೋಟಕ್ಕೆ ಕಾಣಸಿಗದ ಸಾಕಷ್ಟು ತಾಂತ್ರಿಕ ವಿಷಯಗಳು ಇಲ್ಲಿ ದರ್ಶಿತವಾಗುವುದೇ ಈ ಪುಸ್ತಕದ ಹೆಮ್ಮೆ. ಉದಾ : ರಂಗಮಂದಿರ, ನರ್ತನ ಯೋಜನೆ, ಬೆಳಕಿನ ಪ್ರಸರಣ ಮತ್ತು ಒಂದಷ್ಟು ನೃತ್ಯಕಲೆಯ ಕುರಿತಂತೆ ವರ್ತಮಾನದ  ಮತ್ತು ಭವಿಷ್ಯತ್ತಿನ ಹಲವು ಸವಾಲು, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವಿದ್ವತ್‌ಪೂರ್ಣ ಪ್ರಬಂಧಗಳು.

ಭೂಮಿಕೆ, ನರ್ತನದ ಅವಸ್ಥಾತ್ರಯ, ನೃತ್ತ, ನೃತ್ಯ, ನಾಟ್ಯ, ಅಭಿನಯ, ಮುದ್ರೆಗಳು, ಪ್ರಚಲಿತ ನೃತ್ಯ ಪ್ರಕಾರಗಳು, ಭರತನಾಟ್ಯದ ಆನುಪೂರ್ವಿ, ಭರತನಾಟ್ಯದ ಕಾರ್ಯಕ್ರಮ ಯೋಜನೆ, ನಾಟ್ಯ-ಯೋಗ ಸಮನ್ವಯ, ಅಲರಿಪು, ಜತಿಸ್ವರ, ಶಬ್ದ, ವರ್ಣ, ಲಾಸ್ಯಾಭಿನಯ ಸಾಹಿತ್ಯ, ಪಲ್ಲವಿ, ಲಘುನೃತ್ಯಗಳು, ತಿಲ್ಲಾನ, ರಂಗಮಂದಿರದ ವರ್ಣ ಸಂಯೋಜನೆ, ಉಪಸಂಹಾರ ಎಂಬ ೨೦ ಅಧ್ಯಾಯಗಳು ಸಂಶೋಧನಾರೂಪದ ಮಾಹಿತಿ, ಲೇಖನಗಳು ಶ್ಲೋಕ, ಸಂದರ್ಭ, ಆಕರಗಳೊಂದಿಗೆ ಇಲ್ಲಿವೆ.

ನಾಟ್ಯದ ವಿವಿಧ ಅಂಶಗಳನ್ನು ಮತ್ತು ಅದರೊಂದಿಗೆ ವೇದ, ಯೋಗ, ಉಪನಿಷತ್ತು, ವ್ಯಾಕರಣ, ಕೋಶ, ಸೂತ್ರ, ತಂತ್ರ, ಸಂಹಿತೆ, ಶಿಲ್ಪ, ಪುರಾಣ, ಭಾಗವತ, ಭಗವದ್ಗೀತೆ, ಸಹಸ್ರನಾಮ, ಸಂಗೀತ ಕೃತಿ, ಜನಪದ, ಸಾಹಿತ್ಯ, ನಾಟಕ, ಚರಿತ್ರೆಗಳ ಸಂಬಂಧವನ್ನು ಪೂರಕವಾದ ಸುಂದರ ಚಿತ್ರಗಳ ಸಹಿತ ವಿವರವಾಗಿ ಅವಲೋಕಿಸಲಾಗಿದೆ. ಹಾಗಾಗಿ ನೃತ್ಯಾಭ್ಯಾಸಿಗಳಿಗೆ, ಆಸಕ್ತರಿಗೆ ಓದಲು ಮಾರ್ಗ ದರ್ಶಿಸಲೇಬೇಕಾದ ಸುಂದರ ಸಮನ್ವಯ ಪೂರ್ಣ ಗ್ರಂಥ.

ಕಲಾರಂಗದ ಕಥನದ ಕೃತಿ : ಯಕ್ಷೋಪಾಸನೆ
ಯಕ್ಷೋಪಾಸನೆ-  ಸೂರಿಕುಮೇರಿ  ಕೆ. ಗೋವಿಂದ  ಭಟ್ಟರ ಆತ್ಮವೃತ್ತಾಂತ

ನಿರೂಪಣೆ : ಡಾ  ! ಎಂ. ಪ್ರಭಾಕರ  ಶಿಶಿಲ

ಪ್ರಕಾಶನ : ಡಾ  | ಕೀಲಾರು ಗೋಪಾಲಕೃಷ್ಣಯ್ಯ  ಪ್ರತಿಷ್ಠಾನ,  ಸಂಪಾಜೆ

ಮುದ್ರಣ : ಮಂಜುಶ್ರೀ  ಪ್ರಿಂಟರ್ಸ್,  ಉಜಿರೆ

ಬೆಲೆ : ೨೦೦  ರೂಗಳು

ಆತ್ಮವೃತ್ತಾಂತಗಳು  ಯಾವುದೇ ವ್ಯಕ್ತಿಯ  ಸಮಗ್ರ ಸಾಹಿತ್ಯ,  ಶೋಧನೆ, ಕೃಷಿಯನ್ನು  ನಿರೂಪಿಸುವಂತದ್ದು.  ಆದರೆ ಇತ್ತೀಚೆಗೆ  ಕಲಾವಿದರ ಕೃತಿಗಳು,  ಕಥನಗಳು ಅಪರೂಪವಾಗುತ್ತಿರುವ  ವೇಳೆ, ಇತ್ತೀಚೆಗಷ್ಟೇ  ಅನಾವರಣಗೊಂಡ  ಯಕ್ಷೋಪಾಸನೆ  ರಂಗದ, ಕಲಾವಿದನ  ಸಾಧ್ಯತೆಗಳನ್ನು,  ಇತಿಮಿತಿಗಳನ್ನು  ಆದ್ಯಂತವಾಗಿ  ವಿವರಿಸುತ್ತದೆ.  ತೆಂಕುತಿಟ್ಟಿನ  ಮೇರು ಕಲಾವಿದ  ಸೂರಿಕುಮೇರಿ  ಕೆ. ಗೋವಿಂದ  ಭಟ್ಟರ ಆತ್ಮಕಥನ  ಈ ನಿಟ್ಟಿನಲ್ಲಿ  ಒಳ್ಳೆಯ ಪ್ರಯತ್ನ.  ಹಾಗಾಗಿ ಓದುಗರು  ಓದಲೇಬೇಕಾದ ಪುಸ್ತಕಗಳ  ಪೈಕಿ ಯಕ್ಷೋಪಾಸನೆಯೂ  ಒಂದು. ಮಾತ್ರವಲ್ಲ  ; ಕಲಾರಂಗದಲ್ಲಿನ  ಓದಿಗಾಗಿ, ಕಲೆಯೊಂದರ  ಅನುಭವಕ್ಕಾಗಿ  ಇದು ಒಳ್ಳೆಯ  ಕೊಡುಗೆ. ಈ ನಿಟ್ಟಿನಲ್ಲಿ  ಯಕ್ಷಗಾನದ ಒಳನೋಟಗಳನ್ನು  ಕಟ್ಟಿಕೊಡುವುದರೊಂದಿಗೆ,  ಕಲಾವಿದನ ಅಂತರಂಗದ  ಅಭಿವ್ಯಕ್ತಿಗೆ  ಗೌರವವನ್ನಿತ್ತಿದ್ದಾರೆ  ಪ್ರಕಾಶಕರು.   ಡಾ| ಎಂ. ಪ್ರಭಾಕರ  ಜೋಷಿ ಅವರ ಬೆನ್ನುಡಿ,  ಟಿ. ಶ್ಯಾಮ ಭಟ್ಟರ  ಬೆನ್ನುಡಿಯೊಂದಿಗೆ  ಮೇರು ಕಲಾವಿದರೊಬ್ಬರ  ಅಂತರಂಗ, ಕಷ್ಟ-ನಷ್ಟಗಳು,  ಹಿರಿಮೆ-ಗರಿಮೆಗಳನ್ನು  ಸೊಗಸಾಗಿ ನಿರೂಪಿಸಿದ್ದಾರೆ  ಡಾ| ಬಿ. ಪ್ರಭಾಕರ  ಶಿಶಿಲ ಅವರು.  ಜೊತೆಗೆ ಸೊಗಸಾದ  ಛಾಯಾಚಿತ್ರಗಳು.  ಹೃದಯ ಸಂವಾದ,  ಒಂದಷ್ಟು ಪೂರಕ  ಮಾಹಿತಿಗಳು…  ಪುಸ್ತಕ ಪರಿಚಯ  ಇಲ್ಲಿದೆ.. ನೀವೊಮ್ಮೆ  ಓದುವುದಷ್ಟೇ  ಬಾಕಿ ಉಳಿದಿದೆ.

ಒಂದಷ್ಟು ಹೆಸರಿಸಲೇ  ಬೇಕಾದ ಆಯ್ದ  ತುಣುಕುಗಳು ನಿಮ್ಮ  ಓದಿಗೆ..,

ಪಾತ್ರ ಯಾವುದೇ  ಇರಲಿ ತಕರಾರಿಲ್ಲದೇ  ಕಲಾವಿದ ಒಪ್ಪಿಕೊಂಡರೆ  ಬೆಳೆಯುತ್ತಾನೆ  ಮತ್ತು ಪ್ರಯೋಗ  ಯಶಸ್ವಿಯಾಗುತ್ತದೆ.  ನಮ್ಮನ್ನು ನಾವು  ಒಂದೆರಡು ಪಾತ್ರಗಳಿಗೆ  ಮಾತ್ರ ಮಿತಿಗೊಳಿಸಿಕೊಂಡರೆ  ಕಲಾ ಮಾಧ್ಯಮ  ಸೊರಗುತ್ತದೆ.  ಇಡೀ ತಂಡವಾಗಿ  ದುಡಿದರೆ ಎಂತಹ  ಪ್ರಸಂಗವನ್ನಾದರೂ  ಯಶಸ್ವಿಗೊಳಿಸಬಹುದು.  ( ಪುಟ ೧೩೩)

ಕ್ಷಣಿಕ ಜನಪ್ರಿಯತೆಗೆ  ವೇಷಧಾರಿಗಳು  ಮಾರುಹೋದರೆ ಕಲಾವಿದ  ರೂಪುಗೊಳ್ಳಲು  ಸಾಧ್ಯವಿಲ್ಲ.

ಕಲಾ ಪ್ರಕಾರವೊಂದು  ಶಿಥಿಲವಾಗುವುದು  ಕಲಾ ಇತಿಹಾಸದಲ್ಲಿ  ತೀರಾ ಸಮಾನ್ಯವಾದ  ಸಂಗತಿ.

ಪೌರಾಣಿಕ ಪಾತ್ರಗಳ  ಒಳಹೊಕ್ಕು ಚಿಕಿತ್ಸಕ  ದೃಷ್ಟಿಕೋನದಿಂದ  ಪಾತ್ರಾಭಿವ್ಯಕ್ತಿ  ಮಾಡುವವರ ಅಗತ್ಯವಿದೆ.  ( ಪುಟ ೧೩೫)

ರಂಗದ ಕಡೆಗೆ  ಪ್ರತಿಯೊಬ್ಬನೂ  ಲಕ್ಷ್ಯವಿಟ್ಟಿರಬೇಕು.  ಸಭಾಸದರ ಬಗ್ಗೆ  ಯಾವತ್ತೂ ಅಲಕ್ಷ್ಯ  ಸಲ್ಲದು. ರಂಗಸ್ಥಳದಲ್ಲಿ  ಹೇಳುವ ನೈತಿಕ,  ಧಾರ್ಮಿಕ ವಿಚಾರಗಳನ್ನು  ಸಾಧ್ಯವಾದಷ್ಟು  ಜೀವನದಲ್ಲಿಯೂ  ಅಳವಡಿಸಲು ಪ್ರಯತ್ನಿಸಬೇಕು.  (ಪುಟ ೧೪೬ )

ಒಂದು ಕಲೆ ಇನ್ನೊಂದರಿಂದ  ಪ್ರಭಾವಿತವಾಗಿ  ಬೆಳವಣಿಗೆ ಹೋಂದುವುದು  ತೀರಾ ಸಹಜವಾದ  ವಿದ್ಯಮಾನ. ಯಾವುದರ  ಮೂಲ ಯಾವುದು?  ಎಂಬ ಜಿಜ್ಞಾಸೆ  ಬೀಜ-ವೃಕ್ಷ ನ್ಯಾಯದಷ್ಟೇ  ಜಟಿಲವಾದುದು.  ( ಪುಟ ೧೬೩)

ಕಲೆಗೆ ಒಂದು  ಸಾಮಾಜಿಕ ಬದ್ಧತೆಯಿರಬೇಕು.  ಆಗ ಮಾತ್ರ ಕಲೆಗೆ  ಬೆಲೆ ಬರುತ್ತದೆ.  ( ಪುಟ ೧೬೭)

ರಂಗದಲ್ಲಿ ಸಕ್ರಿಯನಾಗಿರುವ  ವೇಷಧಾರಿಗೆ ಅಭಿಮಾನಿಗಳು,  ಆತ್ಮೀಯರು ಸಾಕಷ್ಟು  ಸಂಖ್ಯೆಯಲ್ಲಿರುತ್ತಾರೆ.  ರಂಗದಿಂದ ನಿರ್ಗಮಿಸಿದ  ಬಳಿಕ ಏನು ಎಂಬ  ಪ್ರಶ್ನೆ ಕಾಡುವಂತಾಗಬಾರದು.  ( ಪುಟ ೧೩೬)

ಹಿರಿಯರಲ್ಲಿ  ಕಲಾಸಕ್ತಿಯ ಸಂಸ್ಕಾರವಿದ್ದರೆ  ಕಿರಿಯರಲ್ಲಿ  ಬಾರದಿರಲು ಸಾಧ್ಯವೇ?  ಹೆತ್ತವರು ಎಳವೆಯಲ್ಲೇ  ಮಕ್ಕಳಲ್ಲಿ ಯಕ್ಷಗಾನ,  ಸುಗಮಸಂಗೀತ,  ಭರತನಾಟ್ಯ ಮತ್ತು  ಯೋಗಾಸನಗಳ ಆಸಕ್ತಿ  ಕುದುರಿಸಬೇಕು.  ಎಲ್ಲಾ ಪ್ರಾಥಮಿಕ  ಶಾಲಾ ಶಿಕ್ಷಕರು  ಕಲೆ ಮತ್ತು ಸಾಹಿತ್ಯ  ಆರಾಧಕರೂ , ವಿಮರ್ಶಕರೂ  ಆಗಬೇಕು.

ವಾಸ್ತವವಾಗಿ  ಕಲೆಗೆ ಜಾತಿ-ಧರ್ಮಗಳ  ಹಂಗಿಲ್ಲ.

ನಿಜವಾದ ಧರ್ಮಗುರು  ಕಲಾ ಪ್ರಕಾರಕ್ಕೂ  ಜಾತಿ-ಧರ್ಮಗಳಿಗೂ  ಸಂಬಂಧ ಕಲ್ಪಿಸಲಾರ.  ಕಲಾವಿದರು ಮತ್ತು  ಸಾಹಿತಿಗಳು ಜಾತ್ಯಾತೀತರು.  ಸಾಗರಕ್ಕೇಕೆ  ಷಟ್ಪದಿಯ ಬಂಧ?-  ( ಪುಟ ೧೩೭)

ರಸಾಸ್ವಾದನೆಯಿಲ್ಲದೆ  ಭಕ್ತಿಗೆ ಮಾತ್ರ  ಮಹತ್ವ ಸಿಕ್ಕಾಗ  ಕಲೆ ಸೊರಗುತ್ತದೆ.  ( ಪುಟ ೧೭೦)

ಕಲೆಯೊಂದನ್ನು  ಧಾರ್ಮಿಕ ಕ್ರಿಯೆಯನ್ನಾಗಿಸಿ  ಪರಿವರ್ತಿಸುವ  ಪ್ರದರ್ಶನಗಳಿಂದ  ಕಲೆಗಾಗಲೀ, ಕಲಾವಿದರಿಗಾಗಲೀ  ಚಿಕ್ಕಾಸು ಪ್ರಯೋಜನವಿರಲು  ಸಾಧ್ಯವಿಲ್ಲ.  (ಪುಟ ೧೭೧)

ಕಲಾ ಪ್ರಕಾರಕ್ಕೆ  ಹೇಗೆ ಜಾತಿ-ಧರ್ಮಗಳ  ಹಂಗಿಲ್ಲವೋ ಹಾಗೆ  ಭಾಷೆಯ ಹಂಗೂ  ಇಲ್ಲ. ( ಪುಟ  ೧೩೯)

ಎಲ್ಲಾ ಕಲೆಗಳಲ್ಲೂ  ಪ್ರಾಂತೀಯ ವ್ಯತ್ಯಾಸವಿದ್ದೇ  ಇರುತ್ತದೆ. (ಪುಟ  ೧೪೦)

ಮನುಷ್ಯರಿರುವಷ್ಟೂ  ಬುದ್ಧಿ ಮನಸ್ಸುಗಳೂ  ಇರುತ್ತವೆ. ಆಕೃತಿಬೇಧಗಳೂ  ಇರುತ್ತವೆ.

ಕಲೆ ಕಲೆಗಾಗಿ   ಅಲ್ಲ. ಪ್ರೇಕ್ಷಕರಿಗಾಗಿ  ಅಥವಾ ಶ್ರೋತೃಗಳಿಗಾಗಿ.  ಎಲ್ಲಾ ಕಲಾ ಪ್ರಾಕಾರಗಳಲ್ಲೂ  ಸಂಪ್ರದಾಯಗಳಲ್ಲೂ  ನಮಗೆ ಪ್ರತ್ಯಕ್ಷವಾಗಿ  ಈ ವಿಚಾರಗಳನ್ನು  ಕಾಣಲು ಸಾಧ್ಯ.  (ಪುಟ ೧೪೫)

ಕಲೆ ಮತ್ತು ಸಾಹಿತ್ಯದ  ಉದ್ದೇಶ ಜನರನ್ನು  ಒಂದುಗೂಡಿಸುವುದು.

ಜಾತಿ ಮತ್ತು  ವರ್ಣಗಳನ್ನು  ಸಮರ್ಥಿಸುವವರು  ಕಲಾವಿದರಾಗಲು  ಸಾಧ್ಯವಿಲ್ಲ.

ಹೊಟ್ಟೆಕಿಚ್ಚು,  ನಕಾರಾತ್ಮಕ ಚಿಂತನೆ,  ಕಾಲೆಳೆಯುವ ಪ್ರವೃತ್ತಿಯವರು  ಸಾಧಕರಾಗಲು ಸಾಧ್ಯವಿಲ್ಲ.

ಯಾವುದೇ ಕಲೆ  ಕಲೆಯಾಗಿ ಪ್ರತಿಗಾಮಿಯಾಗಿರಲು  ಸಾಧ್ಯವಿಲ್ಲ.  ಆ ಕಲೆಯ ಮೂಲಕ  ನೀವು ಸಾರುವ  ಮೌಲ್ಯ ಪ್ರತಿಗಾಮಿಯಾಗಿರಲೂಬಹುದು.

ಕಲಾವಿದರು ಪ್ರತಿಗಾಮಿಗಳಾದರೆ  ಕಲೆಯ ದುರ್ಬಳಕೆಯಾಗುತ್ತದೆ.  ಅದು ಕಲಾವಿದರ  ದೋಷವೇ ಹೊರತು  ಕಲೆಯ ದೋಷವಲ್ಲ.  ( ಪುಟ ೧೩೮)

ಯಾವುದೇ ಒಂದು  ಕಲೆಗೆ ಅದರದೇ  ಆದ ಇತಿಮಿತಿಗಳಿವೆ.  ಕಲೆಯೊಂದು ಕ್ರಾಂತಿಯ  ಸಾಧನವಾಗಬೇಕೆಂದು  ಬಯಸುವ ಅಗತ್ಯವಿಲ್ಲವೆಂದು  ನನಗನ್ನಿಸುತ್ತದೆ.  ಪ್ರತಿಗಾಮಿ ಮೌಲ್ಯಗಳ  ಪ್ರತಿಪಾದನೆಗೆ  ದುರ್ಬಳಕೆಯಾಗದಿದ್ದರೆ  ಸಾಕು.

ಕಲೆ ನಿಂತ ನೀರಲ್ಲ.  ನಿರಂತರ ಹರಿಯುತ್ತಿರುವ  ಪ್ರವಾಹ. ಹಳೆಯ  ನೀರು ಹೋಗಿ ಹೊಸ  ನೀರು ಬಾರದೆ  ಇದ್ದರೆ ಅದು  ಪ್ರವಾಹವಾಗದು.

ಮೂಲಭೂತ ಮೌಲ್ಯವನ್ನು  ಉಳಿಸಿಕೊಂಡು,  ಸಮಕಾಲೀನ ಪ್ರಜ್ಞೆಯನ್ನು  ತಿಳಿದು ಕಲಾವಿದ  ನಟಿಸಿದಾಗ ಸುಂದರವಾದ  ರೂಪಕಗಳನ್ನು  ಶ್ರೋತೃಗಳಿಗೆ,  ಪ್ರೇಕ್ಷಕರಿಗೆ  ನೀಡಬಹುದು. ಸಮಕಾಲೀನವಾದ  ನಾನಾ ರೀತಿಯ  ಬಳಕೆಗಳನ್ನು  ನಾವಿಂದು ಪ್ರತ್ಯಕ್ಷವಾಗಿ  ಕಾಣುತ್ತಿರುವಾಗ  ಜೀವನದ ಒಂದು  ಅವಿಭಾಜ್ಯ ಅಂಗವಾದ  ಕಲೆಯಲ್ಲಿ ಬೇಡವೆನ್ನುವುದು  ಸಾಧುವಲ್ಲ. ಆದರೆ  ಎಷ್ಟು ಪರಿವರ್ತನೆಯಾದರೂ  ಮೂಲಭೂತ ಸಿದ್ಧಾಂತಗಳು  ಬದಲಾಗುವುದಿಲ್ಲ.  ನಾನಾ ರೀತಿಯ  ವ್ಯಂಜನಗಳು,  ಪಾಕಗಳು ಸಿದ್ಧವಾಗಿದ್ದರೂ  ಮನುಷ್ಯ ಹೊಟ್ಟೆಯಳತೆ  ಮೀರಿ ಉಣ್ಣಲಾರ.  ನಾನಾ ಬಣ್ಣ,  ಬೆಲೆಯ ಬಟ್ಟೆಗಳ  ರಾಶಿ ಇದ್ದರೂ  ಮೈಯ ಅಳತೆ ಮೀರಿ  ಧರಿಸಲಾರ. ಇದನ್ನರಿತು  ಬದಲಾದರೆ ಚೆನ್ನ.  ( ಪುಟ ೧೪೩)

ಸ್ವಯಂ ಪ್ರಜ್ಞೆಯೇ  ಇಲ್ಲದವನಿಗೆ,  ಸಮಕಾಲೀನ, ಅರ್ವಾಚೀನ,  ಪ್ರಾಚೀನ ಎಂಬ  ಭ್ರಮೆ ಯಾಕೆ?   ಕಲಾವಿದನೂ,  ಪ್ರೇಕ್ಷಕನೂ  ಪರಸ್ಪರ ರಸಾನುಭೂತಿಯನ್ನು  ಹೊಂದಿರಬೇಕಾದರೆ  ; ನಟನ ಸಾಮರ್ಥ್ಯ,  ಬೌದ್ಧಿಕ ಸತ್ವ,  ಮಾನಸಿಕ ಸ್ಪಂದನ,  ಅನುಭವ ಜನ್ಯವಾದ  ವಿಶೇಷ ಸಮಯ ಪ್ರಜ್ಞೆ  ಎಲ್ಲವೂ ಅನಿವಾರ್ಯ.

ಯಾವ ಕಲಾವಿದನಿಗಾದರೂ  ಎಲ್ಲಾ ರೀರ್ತಿಯ  ಪ್ರೇಕ್ಷಕ ವರ್ಗದವರನ್ನು  ತೃಪ್ತಿಪಡಿಸಲು  ಸಾಧ್ಯವಿಲ್ಲ.  ಪುರಾಣಗಳನ್ನೋದಿ  ಶಾಸ್ತ್ರಗಳನ್ನು  ತಿಳಿದು, ಭಾಷಾ  ಪ್ರಭುತ್ವವನ್ನು  ಸಂಪಾದಿಸಿ, ಇದೇ  ಸರಿ ಎಂದು ಹೇಳಬಲ್ಲವರು  ವಿರಳ. ಪ್ರಾಯಶಃ  ಅಂತಹ ವಿದ್ವಾಂಸ  ಬಂದರೆ ಆಟ ನೋಡಿ  ಏನೂ ಹೇಳುವುದಿಲ್ಲ.  ಹೇಳಿದರೆ ಕೇಳಿ  ತಿಳಿಯಬೇಕೆಂಬ  ಮನೋಭಾವ ಕಲಾವಿದರಿಗೂ  ಇರುವುದಿಲ್ಲ.  ಈ ದೃಷ್ಠಿಯಿಂದ  ಸಮಕಾಲೀನ ಪ್ರಜ್ಞೆ  ಅನಿವಾರ್ಯ. ಮೊದಲಿದ್ದಂತೆಯೇ  ಇರಲಿ, ಅಷ್ಟೇ  ಸಾಕು ಎಂಬವರಿಗೆ  ಸಮಕಾಲೀನ ಪ್ರಜ್ಞೆ  ಅನಿವಾರ್ಯವಲ್ಲ.  ಇದಕ್ಕೆ ಕಾರಣರು  ಮೊದಲು ಪ್ರೇಕ್ಷಕರು.  ಆ ಮೇಲೆ ಕಲಾವಿದರು.  ಹೊಣೆಯರಿತ ಪ್ರೇಕ್ಷಕನಿದ್ದರೆ  ಕಲಾವಿದ ಎಚ್ಚರಿಕೆಯಿಂದಿರುತ್ತಾನೆ.  ಕಲಾವಿದನು ಸರಿಯಾಗಿದ್ದರೆ  ನೋಟಕರು ರಸಾಸ್ವಾದನೆಯನ್ನು  ಮಾಡುತ್ತಾರೆ.

ಸಮಕಾಲೀನ ಪ್ರಜ್ಞೆ  ಎಂದರೇನು? ಕಲೆಯ  ಜನಪ್ರಿಯತೆಯನ್ನಳೆಯುವ  ಮಾನದಂಡ ಯಾವುದು?  ಪ್ರೀತಿಗೂ ಪ್ರಿಯತೆಗೂ  ಇರುವ ಅಂತರವನ್ನಳೆಯುವುದೆಂತು?  ಯಶಸ್ವಿಯಾಗಿದೆಯೇ  ಇಲವೇ ತಿಳಿಯುವ  ಬಗೆ ಹೇಗೆ? ಪರಂಪರೆಗೆ  ಧಕ್ಕೆಯಾಗಬೇಕಾದರೆ  ಯಾವುದು ಪರಂಪರೆ?  ಈ ಅನಿಸಿಕೆಗಳು  ಯಾರಿಂದ?

ಸಮಕಾಲೀನ ಪ್ರಜ್ಞೆಯೆನ್ನುವುದಕ್ಕೆ  ಸದ್ಯದ ಸ್ಥಿತಿಯೆಂದಷ್ಟೇ  ಅರ್ಥ ಕಲ್ಪಿಸಿಕೊಳ್ಳುವುದು  ಸೂಕ್ತ. ( ಪುಟ  ೧೪೪)

ಮೂಲ ಚೌಕಟ್ಟನ್ನು  ಉಳಿಸಿಕೊಂಡು  ಬದಲಾವಣೆಗಳನ್ನು  ಸ್ವಾಗತಿಸಬೇಕಾದುದು  ಕಾಲಧರ್ಮ. (೧೬೯)

ಜೀವನದಲ್ಲಿ ಅಪಮಾನದ  ಪ್ರಸಂಗಗಳಿದ್ದರೇನೇ  ಸಾಧನೆಗಳನ್ನು  ಮಾಡಲು ಸಾಧ್ಯವಾಗುವುದು.  ಅಪಮಾನಂ ತಪೋವೃದ್ಧಿಃ  ಸನ್ಮಾನಂತು ತಪಃ  ಕ್ಷಯ. (ಪುಟ  ೧೭೩)

ಬದುಕಿದ್ದೂ ರಂಗದಲ್ಲಿ  ಕಾಣಿಸಿಕೊಳ್ಳಲಾಗದ  ಅದೆಷ್ಟು ಕಲಾವಿದರು  ನಮ್ಮ ನಡುವೆ  ಭೂತಕಾಲವನ್ನು  ನೆನಪಿಸಿಕೊಂಡು,  ಘೋರ ವಾಸ್ತವದ  ಭವಿಷ್ಯವನ್ನು  ಎದುರು ನೋಡುತ್ತಿಲ್ಲ?  ರಂಗದ ಚಕ್ರವರ್ತಿಗಳ  ಜೀವಿತದ ಕೊನೆಯ  ಘಟ್ಟದಲ್ಲಿ ನೋವುಗಳೇ  ಏಕೆ ತುಂಬುತ್ತವೆ?  ಏಕೆ? ಏಕೆ? ಏಕೆ?

ಇಂತಹ ಹಲವು ಚಿಂತನೆಗಳಿಗೆ  ನಮ್ಮನ್ನು ಮುಖಾಮುಖಿಯಾಗಿಸುವ  ಕಲಾವಿದನ ಆರಾಧನೆಯೇ  ಯಕ್ಷೋಪಾಸನೆ.

ರಂಗ ಸಂಪ್ರದಾಯದ ವಿಶ್ವಕೋಶ
- ಮನೂ ‘ಬನ

ಭಾರತದ ರಂಗಸಂಪ್ರದಾಯಗಳೆಲ್ಲದಕ್ಕೂ  ಆಧಾರ ಗ್ರಂಥವೆಂದು  ನಾವು ಪರಿಗಣಿಸುವುದಾದರೆ  ಪ್ರಥಮ ಸ್ಥಾನ  ಭರತಮು ವಿರಚಿತ  ನಾಟ್ಯಶಾಸ್ತ್ರಕ್ಕೆ.  ಜಗತ್ತಿನಲ್ಲಿ  ಮೊತ್ತಮೊದಲ ಬಾರಿಗೆ  ರಂಗ ಮಾಧ್ಯಮವನ್ನು  ಶಾಸ್ತ್ರೀಯವಾಗಿ  ತಿಳಿಸಿದ ಹಲವು  ಕಲಾಪ್ರಕಾರಗಳಕ್ಕೇ  ಇರುವ ವಿಶ್ವಕೋಶವಿದು.  ಇದು ಕೇವಲ ಭರತನಾಟ್ಯಕ್ಕಷ್ಟೇ  ಅಲ್ಲದೆ ಭಾರತದ  ಎಲ್ಲಾ ರಂಗಕಲೆಗಳಿಗೂ  ಆಕರ ಗ್ರಂಥ.

ಕ್ರಿಸ್ತಪೂರ್ವ  ೨ ಮತ್ತು ಕ್ರಿಸ್ತ  ಶಕ ೨ ಶತಮಾನಗಳ  ನಡುವೆ ರಚಿತವಾಯಿತೆನ್ನಲಾದ  ಈ ಗ್ರಂಥದ ರಚನೆ  ರಾಮಾಯಣ-ಮಹಾಭಾರತದ  ಪೂರ್ವದ್ದೋ ಅಥವಾ  ನಂತರದ್ದೋ ಎಂಬುದಕ್ಕೆ  ನಿಗದಿತ ಆಧಾರಗಳೂ  ಕಂಡುಬಂದಿಲ್ಲ.  ಕೆಲವರ ಹೇಳಿಕೆಯಂತೆ  ಈ ಗ್ರಂಥದ ಗದ್ಯದ  ಶೈಲಿ ತೀರಾ ಪ್ರಾಚೀನವಾದುದೇನಲ್ಲ.

ಇದರ ಕರ್ತೃ ಭರತನೆನ್ನೆಲಾಗಿದ್ದರೂ,  ಭರತನೆನ್ನುವ  ವ್ಯಕ್ತಿಗಳು  ಭಾರತದಲ್ಲಿ ಹಲವಾರು  ಜನ ಆಗಿಹೋಗಿದ್ದಾರೆ.  ಅವರ ಪೈಕಿ ಇಂತವನೇ  ಇದನ್ನು ಬರೆದಾತ  ಎಂಬ ಖಚಿತ ಅಭಿಪ್ರಾಯವಿಲ್ಲ.  ಏಕೆಂದರೆ ಹಿಂದೂ  ಪರಂಪರೆಯಲ್ಲಿ  ಭರತಮುನಿ ಎಂಬ  ಹೆಸರಿರುವರು  ಎಲ್ಲಿಯೂ ಕಂಡು  ಬರುವುದಿಲ್ಲ.  ನಮಗೆ ಗೊತ್ತಿರುವ  ದುಷ್ಯಂತನ ಮಗ  ಭರತ ಭಾರತದ ಸೃಷ್ಟಿಕರ್ತನೆನ್ನಲಾಗುತ್ತಿದೆ.  ಆದರೂ ಭರತನೆನ್ನುವವನು  ಮುನಿಯೇ ಆಗಿರಬಹುದೆಂದು  ಅಂದಾಜಿಸಲಾಗಿದ್ದು,  ಈ ಪ್ರತೀತಿ ಪರಂಪರೆಯಿಂದ  ಬಂದಂತದ್ದು.  ಕಾಳಿದಾಸನೂ ತನ್ನ  ವಿಕ್ರಮೋರ್ವಶೀಯ  ನಾಟಕದಲ್ಲಿ ಈತನ  ಹೆಸರನ್ನು ಸೂಚಿಸಿದ್ದಾನೆ.

ನಾಟ್ಯದ ಉಗಮದಿಂದ  ಆರಂಭಿಸಿ ಅದರ  ಉಪಯೋಗ ಮತ್ತು  ರಂಗದ ಹಲವು ಆಯಾಮಗಳನ್ನು  ಸಮಗ್ರವಾಗಿ ವಿವರಿಸುವ  ನಾಟ್ಯಶಾಸ್ತ್ರದಲ್ಲಿ  ೩೬೬ ಅಧ್ಯಾಯಗಳಿವೆ.

ರಂಗದ ಸ್ವರೂಪ,  ನಿರ್ಮಾಣದಿಂದ  ಹಿಡಿದು ಸೂಕ್ಷ್ಮಾತಿಸೂಕ್ಷ್ಮ  ವಿವರಗಳನ್ನು  ಇದರಲ್ಲಿ ಸಿದ್ಧಾಂತೀಕರಿಸಲಾಗಿದೆ.  ಛಂದಸ್ಸು-ಸಂಗೀತ-ಕಾವ್ಯ  ಮೀಮಾಂಸೆ ಮೊದಲಾದ  ಸಂಬಂಧಿತ ಕ್ಷೇತ್ರಗಳ  ಬಗ್ಗೆ ಮಾಹಿತಿ  ನೀಡುವ ನಾಟ್ಯಶಾಸ್ತ್ರ  ಗ್ರಂಥ ಭಾಷೆ  ಸಂಸ್ಕೃತ. ನಿರೂಪಣೆಯು  ಶ್ಲೋಕ, ಗದ್ಯಗಳನ್ನು  ಒಳಗೊಂಡಿದ್ದು,  ಪಾತ್ರ ಸಂಭೋಧನೆ,  ಛಂದಸ್ಸು ಹೋಲಿಕೆಗಳನ್ನು  ಕಾಣಬಹುದು. ಋಷಿ  ಮುನಿವರೇಣ್ಯರು  ಬ್ರಹ್ಮನಲ್ಲಿಗೆ  ತೆರಳಿ ನಾಟ್ಯೋತ್ಪತ್ತಿಗೆ  ನಿವೇದಿಸಿರುವುದು  ನಾಟ್ಯಶಾಸ್ತ್ರದ  ಪ್ರಥಮ ಅಧ್ಯಾಯ.

ಸಂಸ್ಕೃತದಲ್ಲಿರುವ  ಈ ಕೃತಿಯ ಭಾಷಾನುವಾದವನ್ನು  ಭಾರತದ ವಿವಿಧ  ಭಾಷೆಗಳಲ್ಲಿ  ಕಾಣಬಹುದು. ಕನ್ನಡದಲ್ಲಿ  ಸಾಗರದ ಹೆಗ್ಗೋಡು  ಪ್ರಕಾಶನದಿಂದ  ಹೊರತರಲಾಗಿದ್ದು,  ಆದ್ಯ ರಂಗಾಚಾರ್ಯ  ವಿಮರ್ಶಾತ್ಮಕ  ಟಿಪ್ಪಣಿ ಹಾಗೂ  ಅನುಬಂಧಗಳೊಂದಿಗೆ  ಈ ಅನುವಾದವನ್ನು  ಮಾಡಿದ್ದಾರೆ.  ಇಂಗ್ಲೀಷ್ ಅವತರಣಿಕೆಯನ್ನು  ಶ್ರೀರಂಗ, ಡಾ|  ಮನಮೋಹನ್ ಘೋಷ್,  ಬಡೋದೆ ಆವೃತ್ತಿ,  ನಿರ್ಣಯಸಾಗರ  ಆವೃತ್ತಿ ಮೊದಲಾದವರ  ಹೆಸರಿನಲ್ಲಿ  ಕಾಣಬಹುದಾಗಿದೆ.  ಹಿಂದಿಯಲ್ಲಿ  ದಿಲ್ಲಿ ವಿಶ್ವವಿದ್ಯಾನಿಲಯವು  ಬರೀ ೬ ಅಧ್ಯಾಯಗಳುಳ್ಳ  ಅಭಿನವ ಭಾರತೀ  ಎಂಬ ಭಾಷಾನುವಾದವನ್ನು  ಹೊರತಂದಿದ್ದರೆ,  ಮರಾಠಿಯಲ್ಲಿ  ಗೋದಾವರೀ ಕೇತಕರು  ಈ ಕಾರ್ಯ ಮಾಡಿದ್ದಾರೆ.

ನಾಟ್ಯಶಾಸ್ತ್ರಕ್ಕಿಂತಲೂ  ಮುಂಚೆ ಶಿಲಾಲಿನ್,  ಕೃಶಾಶ್ವರ ನಟಸೂತ್ರಗಳನ್ನು  ಕಾಣಬಹುದಾದರೂ  ಇವರೆಲ್ಲರ ಅಭಿಪ್ರಾಯಗಳನ್ನು  ಒಂದೆಡೆ ಸೇರಿಸಿ  ಸಮಗ್ರವಾಗಿ ಕೊಟ್ಟದ್ದು  ನಾಟ್ಯಶಾಸ್ತ್ರವೇ  ಆಗಿದೆ. ಏಕೆಂದರೆ  ವೇದ, ಬ್ರಾಹ್ಮಣ,  ಉಪಷತ್ತುಗಳ ತರುವಾಯ  ಗೋಚರಿಸುವ ಶಾಸ್ತ್ರಗಳಿಗೂ  ಮುಂಚೆ ಸೂತ್ರಗಳ  ಬಳಕೆಯಿತ್ತು  ಎನ್ನುವುದು ಸುಸ್ಪಷ್ಟ.  ಆದರೆ ಎಲ್ಲ ಆಖ್ಯಾನ,  ತತ್ವಜ್ಞಾನಗಳನ್ನು  ಕಲೆಹಾಕಿ ಸಮಗ್ರವಾಗಿ  ಇಂದಿನವರೆವಿಗೂ  ಸೈದ್ಧಾಂತಿಕ  ನೆಲೆಗಟ್ಟಿನ  ಅಡಿಪಾಯ ಹಾಕಲು  ಸಹಕರಿಸಿದುದು  ನಾಟ್ಯಶಾಸ್ತ್ರ  ಎಂಬುದರಲ್ಲಿ  ಅನುಮಾನವಿಲ್ಲ.  ಅಷ್ಟಕ್ಕೂ ಗ್ರಂಥಕ್ಕೆ  ಪ್ರಾಧಾನ್ಯತೆ  ದೊರಕಲಿ ಎಂಬ  ಕಾರಣಕ್ಕೇ ನಾಟ್ಯಶಾಸ್ತ್ರವೆಂಬುದು  ಬ್ರಹ್ಮನ ಮೂಲ  ಗ್ರಂಥದ ಸಂಕುಚಿತ  ಆವೃತ್ತಿ, ಐದನೇಯ  ವೇದ ಎಂದು ಹೇಳಿಕೊಂಡಿರುವ  ಸಾಧ್ಯತೆಯಿದೆ  ಎನ್ನಲಾಗಿದೆ.  ನಾಟ್ಯವು ಪಂಚಮವೇದ,  ಬ್ರಹ್ಮನೇ ಅದರ  ಸೃಷ್ಟಿಕರ್ತ  ಎನ್ನುವುದರ ಹಿಂದಿನ  ಅರ್ಥ ರಂಗಭೂಮಿ  ಮತ್ತು ಅದರಲ್ಲಿನ  ಆಸಕ್ತಿ ಅನಾದಿ  ಎಂಬುದು. ಇಂಥ  ಹಲವು ಸಂಕೇತಗಳನ್ನು  ಮತ್ತು ಅಷ್ಟೇ  ವಿರೋಧಾಭಾಸಗಳನ್ನು  ನಾವು ಕಾಣುತ್ತೇವೆ.   ಅಷ್ಟಕ್ಕೂ ನಾಟ್ಯಶಾಸ್ತ್ರದ  ಕಾಲ, ಕರ್ತೃವಿನ  ಕುರಿತಾದ ವಿಚಾರಗಳು  ಮೊದಲಿನಿಂದಲೇ  ಚರ್ಚಾಸ್ಪದ.  ಹತ್ತು ಶತಮಾನಗಳಿಗೂ  ಮೊದಲೇ ಉದ್ಭಟ,  ಲೋಲ್ಲಟ, ಶಂಕುಕ,  ಕೀರ್ತಿಧರ, ಅಭಿನವಗುಪ್ತ್ತ  ಮುಂತಾದ ಟೀಕಾಕಾರರು  ನಾಟ್ಯಶಾಸ್ತ್ರದ  ಬಗ್ಗೆ ಭಾಷ್ಯಗಳನ್ನು  ಬರೆದಿದ್ದಾರೆ.  ಆದರೂ ‘ಬರೆದವನು  ಮುನಿ, ಮೂಲದಲ್ಲಿ  ವೇದ, ಈಗ ಶಾಸ್ತ್ರ  ಎಂಬ ಭಾವನೆ ಉಳಿದುಕೊಂಡಿದೆ.

ಅಷ್ಟೇ ಅಲ್ಲ,  ನಾಟ್ಯಶಾಸ್ತ್ರವೇ  ನಿಜವಾದ ಶಾಸ್ತ್ರ;  ಅದನ್ನು ಮೀರಿಹೋಗಬಾರದು  ಅನ್ನುವ ನೃತ್ಯಗುರುಗಳ  ತರ್ಕವೂ ಜೊತೆಗಿದೆ.  ಹಾಗೆ ನೋಡಿದರೆ  ಸ್ವತಃ ಭರತಮುನಿಯೇ  ‘ನಾಟ್ಯಶಾಸ್ತ್ರದಲ್ಲಿ  ಹೇಳಿದಂತೆಯೇ  ಮಾಡಬೇಕೆಂದೇನೂ  ಇಲ್ಲ. ವೇಷ-ಭಾಷೆಗಳು  ಪ್ರೇಕ್ಷಕರ ಪ್ರದೇಶದ್ದಾಗಿದ್ದು,  ಜನರ ನಡೆ-ನುಡಿಗಳನ್ನು  ಗಮನಿಸಿ ನಟನೆಯನ್ನು  ಅನುಸರಿಸಬೇಕು.  ಕಾಕ್ಕನುಗುಣವಾಗಿ  ಸರಿಯೆನಿಸಿದ್ದನ್ನು  ಅಳವಡಿಸಿಕೊಳ್ಳಬಹುದು  ಎಂದಿದ್ದಾನೆ.  ಆದರೆ ಇದನ್ನು  ಸರಿಯಾಗಿ ಅನುಸರಿಸಿದವರು  ಅಥವಾ ಹೊಸತೆನಿಸುವ  ರೀತಿಯಲ್ಲಿ ಮಾಡಿ  ಎಡವಿ ಬಿದ್ದ-ಹೀಗೆ  ಎರಡೂ ಸಂದರ್ಭಗಳನ್ನೂ  ಕಾಣುತ್ತೇವೆ.  ಆದರೆ ವಿಷಾದದ  ಸಂಗತಿ ಏನೆಂದರೆ  ನಮ್ಮನ್ನೂ ಒಳಗೊಂಡಂತೆ  ನಾಟ್ಯಶಾಸ್ತ್ರವನ್ನು  ಆದ್ಯಂತವಾಗಿ  ಸಂಪೂರ್ಣವಾಗಿ  ಓದಿದವರು ಬಹಳ  ವಿರಳ. ಅಷ್ಟೇಕೆ,  ಎಷ್ಟೋ ನೃತ್ಯಗುರುಗಳ  ಶಾಲೆಯಲ್ಲಿ ನಾಟ್ಯಶಾಸ್ತ್ರದ  ಒಂದು ಪ್ರತಿಯೂ  ಇಲ್ಲದಿರುವುದಿದೆ.  ನೃತ್ಯ ರಂಗಭೂಮಿ  ಇಂದಿಗೂ ಎಷ್ಟೋ  ಬಾರಿ ಕೆಸರಿನಲ್ಲೇ  ಕಾಲು ತೊಳೆಯುತ್ತಿರುವುದಕ್ಕೆ  ಅಧ್ಯಯನದ ಕೊರತೆ,  ಅನಾಸಕ್ತಿಯೇ  ಮುಖ್ಯ ಕಾರಣ.

ಸಂಗೀತ ನೃತ್ಯ ಲಕ್ಷಣಗಳ ಪಿತಾಮಹ : ಪುಂಡರೀಕ ವಿಠಲ
- ಮನೂ ‘ಬನ’

ಭರತನ ನಾಟ್ಯಶಾಸ್ತ್ರದಿಂದ  ಆರಂಭವಾಗಿ ಇತ್ತೀಚಿನವರೆಗೂ  ಅನೇಕ ಸಂಗೀತ-ನೃತ್ಯ  ಶಾಸ್ತ್ರ ಗ್ರಂಥಗಳು  ಹೊರಬಂದಿವೆ.  ಆದರೆ ಅವುಗಳಲಿ  ಕಣ್ಮರೆಯಾಗಿ  ಹೋದದ್ದೇ ಹೆಚ್ಚು.  ಇದೇ ಸಾಲಿಗೆ  ಸೇರಿಹೋಗುವ ಅಪಾಯ  ಎದುರಿಸುತ್ತಿದ್ದ  ೧೬ನೇಯ ಶತಮಾನದ  ನಾಲ್ಕು ಗ್ರಂಥಗಳ  ಸಮಗ್ರ ಗ್ರಂಥವೇ  ಪುಂಡರೀಕಮಾಲಾ.

ಪುಂಡರೀಕ ವಿಠಲ  : ಕರ್ಣಾಟಕ ಸಂಗೀತ,  ಹಿಂದೂಸ್ಥಾನೀ  ಸಂಗೀತ ಮತ್ತು  ನರ್ತನಶಾಸ್ತ್ರ,  ಅಲಂಕಾರ, ನಾಟಕ,  ಕೋಶ, ಪರ್ಶಿಯನ್  ಸಂಗೀತ,..ಹೀಗೆ  ಅನೇಕ ವಿದ್ಯೆಗಳಲ್ಲಿ  ಅದ್ವಿತೀಯ ಪಾಂಡಿತ್ಯ  ಪಡೆದ ಏಕೈಕ ವಿದ್ವಾಂಸ  ಈತ. ಸದ್ರಾಗ  ಚಂದ್ರೋದದಯ,  ರಾಗಮಂಜರೀ, ರಾಗಮಾಲಾ  ಮತ್ತು ನರ್ತನ  ನಿರ್ಣಯ ಎಂಬುವೇ  ಆ ನಾಲ್ಕು ಮುಖ್ಯ  ಗ್ರಂಥಗಳು.

ಕರ್ಣಾಟಕ  ಮತ್ತು  ಹಿಂದೂಸ್ಥಾನೀ  ಸಂಗೀತ, ನರ್ತನ-ಮುಂತಾದ  ಭಾರತದ ಮುಖ್ಯ  ಶಾಸ್ತ್ರೀಯ ಕಲೆಗಳ  ಆಧುನಿಕ ರೂಪಗಳಿಗೆ  ನಾಂದೀ ವಾಚನವನ್ನು  ಮಾಡಿದ ಆದ್ಯಾಚಾರ್ಯ  ಪುಂಡರೀಕ. ಸಂಗೀತ-ನೃತ್ಯಗಳನ್ನು  ಉತ್ತರಭಾರತದಲ್ಲೂ  ಪ್ರಚಾರ ಮಾಡಿ  ಮಹಾವಿದ್ವಾಂಸನೆನಿಸಿಕೊಂಡ  ಈತನು ಕನ್ನಡಿಗನೆನ್ನಲು  ಬಹಳಷ್ಟು ಹೆಮ್ಮೆ.  ಪುರಂದರದಾಸರ  ಸಮಕಾಲೀನ ಕೂಡ  ! ಹೀಗಾಗಿ ಪುರಂದರದಾಸರನ್ನು  ಕರ್ಣಾಟಕ ಸಂಗೀತ  ಪಿತಾಮಹ ಎಂದರೆ,  ಪುಂಡರೀಕ ವಿಠಲನನ್ನು  ಕರ್ಣಾಟಕ ಸಂಗೀತ-ನೃತ್ಯ  ಲಕ್ಷಣಗಳ ಪಿತಾಮಹನೆನ್ನಲು  ಅಡ್ಡಿಯಿಲ್ಲ  ಎನ್ನುತ್ತಾರೆ  ವಿಮರ್ಶಕರು.

ಪುಂಡರೀಕ ವಿಠಲನು  ಹುಟ್ಟಿದ್ದು  ಕರ್ನಾಟಕದ ಶಿವಗಂಗೆ  ಕ್ಷೇತ್ರದ ಬಳಿಯಿರುವ  ಸಾತನೂರು ಗ್ರಾಮದಲ್ಲಿ.  ಹದಿನಾರನೆಯ ಶತಮಾನದ  ಮಧ್ಯಭಾಗ ಈತನ  ಕಾಲ. ಸಾತನೂರಿನ  ವಿಠಲರಾಯಸ್ವಾಮಿ  ಈತನ ಕುಲದೈವ.  ಜಮದಗ್ನಿ ಗೋತ್ರಕ್ಕೆ  ಸೇರಿದ ಭಾಗವತ  ಶಿರೋಮಣಿ ಎನಿಸಿಕೊಂಡಿದ್ದ  ವಿಠಲಯ್ಯ(ವಿಠಲಾರ್ಯ)  ಮತ್ತು ದೇಮಕ್ಷ(ದೇಮಕ್ಕ,  ದ್ಯಾಮಕ್ಕ) ಈತನ  ತಂದೆ ತಾಯಿಯರು.  ಈತನಿಗೆ ಪಂಡರೀವಿಠ್ಠಲ  ಎಂಬ ಹೆಸರೂ ಇದೆ.

ಒಮ್ಮೆ ಸಂಗೀತದ  ಹಿರಿಮೆಯನ್ನು  ಪ್ರಚಾರ ಮಾಡಲು  ಪುಂಡರೀಕನು ಉತ್ತರಭಾರತದಲ್ಲಿ  ಸಂಚರಿಸುತ್ತಿದ್ದಾಗ  ಅಕ್ಬರನ ಸಾಮಂತ  ರಾಜರುಗಳಾದ ಬುರಹಾನಖಾನ್,  ಮಾಧವಸಿಂಹ ಇವರುಗಳ  ಭೇಟಿಯಾಯಿತು.,  ಈತನ ವಿದ್ವತ್ತನ್ನು  ಮನಗಂಡು ಅವರು  ತಮ್ಮ ಆಸ್ಥಾನದಲ್ಲಿ  ಆಶ್ರಯಕೊಟ್ಟರು  ಮತ್ತು ಈತನು  ಕಲಿತ ವಿದ್ಯೆ-ಪ್ರಯೋಗಗಳನ್ನು  ಸಮನ್ವಯಗೊಳಿಸಿ   ಗ್ರಂಥ ರಚಿಸಿ  ಸಂಗೀತ ಪ್ರಪಂಚಕ್ಕೆ  ಉಪಕರಿಸಬೇಕೆಂದು  ಕೇಳಿಕೊಂಡರು.  ಪರಿಣಾಮವೇ, ಸದ್ರಾಗಚಂದ್ರೋದಯ  ಮತ್ತು ರಾಗಮಂಜರಿ  ಗ್ರಂಥಗಳು. ಇವುಗಳಲ್ಲಿ  ಸದ್ರಾಗಚಂದ್ರೋದಯ  ಕರ್ಣಾಟಕ ಸಂಗೀತದ  ರಾಗಪ್ರಪಂಚವನ್ನು  ಸ್ವರ, ಸ್ವರಮೇಲ,  ಆಲಪ್ತಿಯೆಂಬ  ಮೂರು ಭಾಗಗಳಲಿ  ಹಿಡಿದಿಟ್ಟಿರುವ  ಒಟ್ಟು ೨೭೮ ಶ್ಲೋಕಗಳ  ಗ್ರಂಥ. ರಾಗಮಂಜರೀ  ೧೫೪ ಶ್ಲೋಕಗಳನ್ನು  ಹೊಂದಿರುವ ಹಿಂದೂಸ್ಥಾನೀ  ರಾಗಗಳ ಗ್ರಂಥ.

ನಂತರ ಕಾಲಾಂತರದಲ್ಲಿ  ಅಕ್ಬರನ ಆಸ್ಥಾನದಲ್ಲೂ  ಪ್ರಮುಖ ವಿದ್ವಾಂಸನೆನಿಸಿ  ಅವನ ಅಪೇಕ್ಷೆಯಂತೆ  ರಾಗಮಾಲಾ ಮತ್ತು  ನರ್ತನ ನಿರ್ಣಯ  ಅಥವಾ ನರ್ತಕ  ನಿರ್ಣಯವನ್ನು  ರಚಿಸಿದ. ಇದರಲ್ಲಿ  ನರ್ತನ ನಿರ್ಣಯದ  ಕೆಲವು ಭಾಗಗಳು  ಸಂಗೀತಕ್ಕೆ ಸಂಬಂಧಿಸಿವೆಯಾದರೂ  ಪ್ರಧಾನ ಅಧ್ಯಾಯಗಳು  ನೃತ್ಯಕ್ಕೆ ಸಂಬಂಧಿಸಿದೆ.  ಓಟ್ಟು ೧೮೬೦  ಶ್ಲೋಕಗಳ ಗ್ರಂಥವಿದು.  ೨೧೨ ಶ್ಲೋಕಗಳ  ರಾಗಮಾಲಾ ಹಿಂದೂಸ್ಥಾನೀ  ಸಂಗೀತ ಪ್ರಪಂಚವನ್ನು  ವಿವರಿಸುತ್ತದೆ.  ಮಾತ್ರವಲ್ಲದೆ  ಎಲ್ಲಾ ಕಲೆಗಳಲ್ಲಿ  ಈತನ ಪರಿಶ್ರಮ  ಮನಗಂಡು ಅಕ್ಬರನು  ಅಕಬರೀಯ ಕಾಲಿದಾಸ  ಎಂಬ ಬಿರುದನ್ನು  ಕೊಟ್ಟು ಗೌರವಿಸಿದನೆನ್ನಲಾಗಿದೆ.

ಈ ಎಲ್ಲಾ ಕುಲ-ಗೋತ್ರ  ಪ್ರವರಗಳನ್ನು  ಮಾತ್ರ ಪುಂಡರೀಕನು  ಗ್ರಂಥಗಳಲ್ಲಿ  ಹೇಳಿದ್ದಾನೆಯೇ  ಹೊರತು ಸಂಗೀತ-ನೃತ್ಯ  ಶಾಸ್ತ್ರಗಳನ್ನು  ಎಲ್ಲಿ, ಯಾರಿಂದ  ಕಲಿತನೆಂದು ಸೂಚಿಸಿಲ್ಲ.  ಆದರೆ ಸಾತನೂರಿನ  ಸುತ್ತಮುತ್ತಲಿನ  ಪರಿಸರಗಳಾದ ಕುಣಿಗಲ್,  ಬಿಜಾಪುರ, ಮಾಗಡಿ,  ಮೈಸೂರು ಹಿಂದಿನ  ಕಾಲದಿಂದಲೂ ಸಂಗೀತ-ನೃತ್ಯ  ಪರಿಸರಗಳಾಗಿದ್ದು  ಉಚ್ಛ್ರಾಯ ಸ್ಥಿತಿಯಲ್ಲಿದ್ದುದ್ದರಿಂದ  ಈತನಿಗೆ ಎಲ್ಲಾ  ಶಾಸ್ತ್ರಗಳ ಪರಿಚಯ  ಸುಲಭಸಾಧ್ಯವಾಗಿದ್ದಿರಬಹುದು.

ಪುಂಡರೀಕ ವಿಠಲನು  ರಚಿಸಿದ ಗ್ರಂಥಗಳು  ಒಟ್ಟು ಆರು.  ರಾಗಮಾಲಾವು ನರ್ತನನಿರ್ಣಯದಿಂದ  ಉಲ್ಲೇಖಗೊಂಡಿರುವುದರಿಂದ  ಇದನ್ನು ಪ್ರತ್ಯೇಕ  ಗ್ರಂಥ ಎನ್ನಲಾಗುವುದಿಲ್ಲ  ಎಂಬ ಅಭಿಪ್ರಾಯವಿದೆ.  ಉಳಿದ ಗ್ರಂಥಗಳಲ್ಲಿ  ದೂತಿಕರ್ಮವೆಂಬ  ಗ್ರಂಥ ದೂತಿ,  ನಾಯಕ-ನಾಯಿಕಾ  ಭಾವಗಳನ್ನು ವಿವರಿಸಿದ್ದರೆ,  ಶೀಘ್ರಭೋಧಿನೀ  ನಾಮಮಾಲಾ ಎಂಬುದು  ಕೋಶ ಗ್ರಂಥ.  ವ್ಯಾಕರಣದ ಛಂದೋಗತಿ,  ವೃತ್ತ, ಗಣ,  ಅಲಂಕಾರಗಳನ್ನು  ಬಳಸಿ ಎಲ್ಲಾ  ಗ್ರಂಥಗಳನ್ನು  ರಚಿಸಲಾಗಿದೆ.

ಈತನ ಗ್ರಂಥಗಳಿಂದ  ಪ್ರಭಾವಿತರಾದ  ಶ್ರೀಕಂಠ, ಭಾವಭಟ್ಟ,  ತುಲಜೇಂದ್ರರು  ಮುಂದೆ ತಮ್ಮದೇ  ಆದ ಸಂಗೀತ ಲಾಕ್ಷಣಿಕ  ಗ್ರಂಥಗಳನ್ನು  ಬರೆದರು. ನರ್ತನನಿರ್ಣಯದ  ಹಸ್ತಪ್ರತಿಗಳು  ಕಲ್ಕತ್ತ, ಮೈಸೂರು,  ಬರೋಡಾ, ತಂಜಾವೂರುಗಳಲ್ಲಿದ್ದು  ಇವುಗಳ ಆಧಾರದಿಂದ  ನರ್ತನನಿರ್ಣಯವನ್ನೂ  ಸಂಪಾದಿಸಿ ಪ್ರಕಟಿಸಲಾಯಿತು.,  ಮುಂಬೈಯಲ್ಲಿ  ೨೦ನೇ ಶತಮಾನದ  ೧೯೧೨-೧೩-೧೪ರ  ಕಾಲದಲ್ಲೇ ಸದ್ರಾಗ  ಚಂದ್ರೊದಯ, ರಾಗಮಂಜರೀ,  ರಾಗಮಾಲಾಗಳನ್ನು  ಸಂಪಾದಿಸಿ ಪ್ರಕಟಿಸಲಾಗಿತ್ತು.  ಪುಂಡರೀಕನ ಗ್ರಂಥಗಳ  ಮೂಲಪ್ರತಿ ಸಂಸ್ಕೃತದಲ್ಲಿದ್ದರೂ,  ಈ ಅತ್ಯಮೂಲ್ಯ  ಗ್ರಂಥಗಳನ್ನು  ಸಂಪಾದಿಸಿ, ಕನ್ನಡದಲ್ಲಿ  ವಿಮರ್ಶಾತ್ಮಕ  ಪೀಠಿಕೆ, ಅನುವಾದ,  ವ್ಯಾಖ್ಯಾನ,  ಅನುಬಂಧ ಬರೆದವರು  ಖ್ಯಾತ ನೃತ್ಯ  ವಿದ್ವಾಂಸ ಡಾ|  ರಾ. ಸತ್ಯನಾರಾಯಣ.  ಕರ್ನಾಟಕ ಸಂಗೀತ  ನೃತ್ಯ ಅಕಾಡೆಮಿ  ಮತ್ತು ಕನ್ನಡ  ಮತ್ತು ಸಂಸ್ಕೃತಿ  ನಿರ್ದೇಶನಾಲಯವು  ೧೯೮೬ರಲ್ಲಿ ಈ  ನಾಲ್ಕೂ ಗ್ರಂಥಗಳನ್ನು  ಪುಂಡರೀಕಮಾಲಾ  ಎಂಬುದಾಗಿ ಸಮಗ್ರ  ಗ್ರಂಥದಲ್ಲಿ  ಹಿಡಿದಿಟ್ಟಿದ್ದು,  ಸಂಗೀತ-ನೃತ್ಯಕ್ಕೆ  ಸರ್ವಕಾಲೀನ ಗ್ರಂಥವೆನಿಸಿಕೊಂಡಿದೆ.

ಅಭಿನಯ ದರ್ಶನ : ನಂದಿಯ ದರ್ಪಣ
- ಮನೂ ‘ಬನ’

||ಆಂYಕಂ ಭುವನಂ  ಯಸ್ಯ ವಾಚಿಕಂ  ಸರ್ವ ವಾಙ್ಮಯಂ

ಆಹಾರ್ಯಂ ಚಂದ್ರತಾರಾದಿ  ತಂ ವಂದೇ ಸಾತ್ವಿಕಂ  ಶಿವಂ||

‘ಯಾರಿಗೆ  ಈ ವಿಶ್ವವು ಅಂಗಾಭಿನಯವೋ,  ವಾಕ್ (ಮಾತು)  ರೂಪವಾದುದೆಲ್ಲವೂ  ಯಾರಿಗೆ ವಾಚಿಕಾಭಿನಯವೋ,  ಚಂದ್ರ-ನಕ್ಷತ್ರಾದಿಗಳು  ಯಾರಿಗೆ ಆಹಾರ್ಯಾಭಿನಯವೋ  (ವೇಷಭೂಷಣ) ಅಂಥ  ಸಾತ್ವಿಕರೂಪ  ಶ್ರೀ ಶಿವನಿಗೆ  ನಮಸ್ಕಾರ.

ಭರತನಾಟ್ಯ ಕಲಿಯುವ  ಮತ್ತು ಕಲಿಸುವ  ಪ್ರತಿಯೊಬ್ಬರಿಗೂ  ಈ ಶ್ಲೋಕ ಕಂಠಪಾಠ.  ಅಭ್ಯಾಸದ, ಅಥವಾ  ರಂಗ ಪ್ರದರ್ಶನದ  ಪ್ರಾರಂಭದಲ್ಲಿ  ನಾಟ್ಯದ ಅಧಿದೇವತೆಯಾದ  ನಟರಾಜನನ್ನು  ಸ್ತುತಿಸುವ ಈ  ಶ್ಲೋಕ ಜನ ಸಾಮಾನ್ಯರಲ್ಲೂ  ಜನಜನಿತ. ಆದರೆ  ಎಷ್ಟೊ ಮಂದಿಗೆ  ಈ ಶ್ಲೋಕದ ಮೂಲ  ಎಲ್ಲಿನದು, ಯಾರು  ಇದರ ಕರ್ತೃ ಎಂಬುದು  ತಿಳಿದಿದೆಯೋ  ಇಲ್ಲವೋ! ಏಕೆಂದರೆ  ನೃತ್ಯವೂ ವ್ಯಾಪಾರೀಕರಣಗೊಳ್ಳುವ  ಈ ಸಂದರ್ಭದಲ್ಲಿ,  ಬರಿಯ ವೇದಿಕೆ,  ಪ್ರದರ್ಶನ, ಪರೀಕ್ಷೆಗಳಿಗಷ್ಟೇ  ಸೀಮಿತವಾಗುತ್ತಿರುವ  ಸಂದಿಗ್ಧದಲ್ಲಿ  ಅಧ್ಯಯನದ ಕುರಿತಾಗಿ  ಗಮನ ಹರಿಸುವ  ಮಂದಿ ಬೆರಳೆಣಿಕೆಯಷ್ಟು  ಮಾತ್ರ!

ಹಾಗಾದರೆ ಈ ಶ್ಲೋಕವನ್ನೂ  ಒಳಗೊಂಡಂತೆ ನೃತ್ಯ-ನಾಟ್ಯದ  ಮಹತ್ವ, ಕ್ರಮವನ್ನು  ವಿವರಿಸುವ ಅಂದಾಜು  ೩೧೮ ಶ್ಲೋಕದ  ಕರ್ತೃ ಯಾರು?  ಆ ಗ್ರಂಥ ಯಾವುದು?  ಅದರಲ್ಲಿನ ವಸ್ತು-ವಿಷಯವೇನು?  ತಿಳಿದುಕೊಳ್ಳುವ  ಆಸಕ್ತಿಯಿದೆಯೇ?  ಹಾಗಾದರೆ ನಿಮ್ಮ  ಹೆಚ್ಚಿನ ಓದಿಗೆ  ಈ ಪುಟ್ಟ ಚಿಂತನೆ  ಸಹಕಾರಿಯಾಗಬಲ್ಲುದು  ಎಂಬುದು ನಮ್ಮ  ಆಶಯ.

ನಂದಿಕೇಶ್ವರ..  ಈತ  ಮತ್ತು ಈತನ  ಗ್ರಂಥ ಅಭಿನಯ  ದರ್ಪಣ ಇಂದಿಗೂ  ನೃತ್ಯ ಪದ್ಧತಿಯ  ದರ್ಪಣ, ಆಕರ.  ಇದು ಸಾರ್ವಕಾಲಿಕ  ಸತ್ಯ. ಹಾಗಾದರೆ  ಎಲ್ಲರೂ ನಂಬಿಕೊಂಡಂತೆ  ಈತ ಶಿವನ ಗಣಗಳಲ್ಲೊಬ್ಬನೆನಿಸಿದ  ನಂದಿಯೇ? ಉತ್ತರ  ಮುಂದಿದೆ.

ನಂದಿಕೇಶ್ವರ  ಭರತಾರ್ಣವ ಎಂಬ  ಗ್ರಂಥದ ಕರ್ತೃ  ಕೂಡಾ! ಹಾಗೆ  ನೋಡಿದರೆ ಭರತಾರ್ಣವದ  ಸಂಕ್ಷಿಪ್ತ ರೂಪ  ಅಥವಾ ಪ್ರಬಂಧ-ಸಂಗ್ರಹವೇ  ಅಭಿನಯ ದರ್ಪಣ  ಎನ್ನಲಾಗಿದೆ.  ಆದರೆ ಕೆಲ ವಿಮರ್ಶಕರು  ಈ ಮಾತನ್ನು ಒಪ್ಪುವುದಿಲ್ಲ.  ಈ ಎರಡೂ ಗ್ರಂಥಗಳ  ಕರ್ತೃ ಓರ್ವನೇ  ಎಂಬುದನ್ನು ಬಿಟ್ಟರೆ  ಗ್ರಂಥಗಳಿಗೆ  ಮತ್ತೇನೂ ಸಂಬಂಧವಿಲ್ಲ  ಎನ್ನುವುದು ಇವರ  ಅಭಿಪ್ರಾಯ. ಲಭ್ಯವಿರುವ  ಭರತಾರ್ಣವ ಗ್ರಂಥದಲ್ಲಿ  ೧೫೦೦ ಶ್ಲೋಕಗಳನ್ನು  ಕಾಣಬಹುದು.

ಅಭಿನಯ ದರ್ಪಣ  ಸಂಸ್ಕೃತ ಭಾಷೆಯಲ್ಲಿದೆ.  ವಿದ್ವಾಂಸ ಮನಮೋಹನ್  ಘೋಷ್ ಅವರ  ಪರಿಷ್ಕೃತ  (ಸಂಸ್ಕೃತ-ಇಂಗ್ಲೀಷ್)  ಅನುವಾದ ಸಾಮಾನ್ಯವಾಗಿ  ಮೂಲ ಗ್ರಂಥಕ್ಕಿಂತಲೂ  ಸರಳವಾಗಿ ಓದುವಂತೆ  ಮಾಡುತ್ತದೆ.  ವಿದ್ವಾಂಸರುಗಳಾದ  ನೀಡಾಮಂಗಲಂ ತಿರುವೆಂಕಟಾಚಾರ್ಯರು  ತೆಲುಗು ಅನುವಾದವನ್ನು,  ಮ. ಶ್ರೀಧರಮೂರ್ತಿಯವರು   ಕನ್ನಡದ ಭಾವಾನುವಾದವನ್ನು   ಮಾಡಿದ್ದಾರೆ.  ಆನಂದ ಕೆ. ಕುಮಾರಸ್ವಾಮಿ  ಅವರ ಮಿರರ್ ಆಫ್  ಜೆಸ್ಚ್ಯುರ್ಸ್  ಎಂಬ ಇಂಗ್ಲೀಷ್  ಅನುವಾದ ಹೆಸರುವಾಸಿ.                ನಂದಿಕೇಶ್ವರನ  ಕಾಲ, ದೇಶ, ವ್ಯಕ್ತಿತ್ವದ  ಬಗ್ಗೆ ಯಾವುದೇ  ಖಚಿತ ಅಧಾರಗಳಿಲ್ಲ.  ಆದರೂ ಇದುವರೆಗೆ  ದೊರಕಿದ  ಅಭಿನಯ  ದರ್ಪಣದ ಹಸ್ತಪ್ರತಿಗಳು  ಸಾಮಾನ್ಯವಾಗಿ  ತೆಲುಗಿನಲ್ಲಿಯೇ  ಇರುವುದರಿಂದ  ಬಹುಷಃ ಆತ ದಕ್ಷಿಣ  ಭಾರತದವನಿರಬಹುದೆಂಬ  ಊಹೆ. ಕೆಲವು  ವಿಮರ್ಶಕರ ಪ್ರಕಾರ  ಕ್ರಿ.ಶ. ೫ನೇ  ಶತಮಾನಕ್ಕಿಂತ  ಮೊದಲು ಈ ಗ್ರಂಥ  ರಚಿತವಾಗಿರಲಿಕ್ಕಿಲ್ಲ  ಎಂದು ಬಲವಾದ  ತೀರ್ಮಾನ!           ನಾಟ್ಯಶಾಸ್ತ್ರ  ಮತ್ತು ಅಭಿನಯ  ದರ್ಪಣದ ಎಷ್ಟೋ  ವಿಷಯಗಳಲ್ಲಿ  ಸಾಮ್ಯತೆಯಿರುವುದರಿಂದ  ಭರತ ಮುನಿ ಮತ್ತು  ನಂದಿಕೇಶ್ವರರು  ಸಮಕಾಲೀನರು ಅಥವಾ  ಭರತನಿಗಿಂತ ನಂದಿಕೇಶ್ವರ  ಕಿರಿಯವನಾಗಿರಬಹುದು  ವಿಚಾರಗಳಿವೆ.  ಆದರೂ ಈ ಎರಡೂ  ಬೃಹದ್ಗ್ರಂಥಗಳಿಗೆ  ಯಾವುದೋ ಒಂದು  ಮೂಲ ಗ್ರಂಥವಿರಬಹುದು  ಎಂಬ ಅನುಮಾನವಂತೂ  ಇದ್ದೇ ಇದೆ.  ಅದರ ಪರಿಷ್ಕೃತ  ಮತ್ತು ಉಪಲಬ್ಧವಿರುವ  ರೂಪವೇ ಈ ಎರಡೂ  ಗ್ರಂಥಗಳಿರಬಹುದು!

ಅಷ್ಟಕ್ಕೂ ಭರತ  ಮುನಿಯಂತೆಯೇ  ಒಬ್ಬನಿಗಿಂತ  ಹೆಚ್ಚು ನಂದಿಕೇಶ್ವರರು  ಶಾಸ್ತ್ರ ಸಾಹಿತ್ಯ  ಕ್ಷೇತ್ರದಲ್ಲಿದ್ದಾರೆ  ಎಂಬ ವಾದವಿದ್ದರೂ  ಅದಕ್ಕೆ ಸರಿಯದ  ಪುಷ್ಠಿಗಳಿಲ್ಲ.  ಉದಾ: ಅಭಿನಯ  ಶಾಸ್ತ್ರದ ನಂದಿಕೇಶ್ವರ,  ತಾಳಾಭಿನಯ ಲಕ್ಷಣವೆಂಬ  ಗ್ರಂಥದ ಕರ್ತೃ  ನಂದಿಕೇಶ್ವರ,  ತಂತ್ರ-ಯೋಗ-ಕಾಮಶಾಸ್ತ್ರ-ಮೀಮಾಂಸ  ಶಾಸ್ತ್ರಗಳ ಕರ್ತೃ  ನಂದಿಕೇಶ್ವರ.  ಇವರೆಲ್ಲರೂ ಒಬ್ಬರೇಯೇ?  ಅಥವಾ ಒಂದೇ ಹೆಸರನ್ನು  ಹೊಂದಿದ ಬೇರೆ-ಬೇರೆ  ವ್ಯಕ್ತಿಗಳೇ?ಉತ್ತರ  ಸಿಕ್ಕಿಲ್ಲ.

ಜೊತೆಗೊಂದು ಊಹೆಯೂ  ಸೇರಿಕೊಂಡಿದೆ!  ಶಿವನ ಗಣಗಳಲ್ಲಿ  ಒಬ್ಬನಾದ ನಂದಿಯೇ  ನಂದಿಕೇಶ್ವರ;  ಈತನೇ ಶಿವನಿಂದ  ನಾಟ್ಯ ಕಲಿತು  ಭೂಲೋಕದಲ್ಲಿ  ಪ್ರಚಾರ ಮಾಡಿದನು;  ಈತನು ಈ ಎರಡೂ  ಗ್ರಂಥಗಳಷ್ಟೇ  ಅಲ್ಲದೆ, ನಂದಿಕೇಶ್ವರ  ಸಂಹಿತ ಎಂಬ ಮತ್ತೊಂದು  ಗ್ರಂಥವನ್ನು  ರಚಿಸಿದ್ದು,  ಈಗ ಉಪಲಬ್ಧವಿಲ್ಲದ  ಈ ಸಂಹಿತೆಯ ಒಂದು  ಅಧ್ಯಾಯವೇ ಅಭಿನಯ  ದರ್ಪಣ ಆಗಿರಬಹುದು   ಎಂದು ಕೆಲವರು  ಅಭಿಪ್ರಾಯಪಟ್ಟರೆ,  ತಂಡು ಎಂಬ ಮುನಿಯೇ  ನಂದಿಕೇಶ್ವರ  ಎಂಬುದು ಇನ್ನೂ  ಕೆಲವರ ಅನಿಸಿಕೆ.

ಪ್ರಾಚೀನ ಸಂಪ್ರದಾಯದಂತೆ  ಪ್ರಾರಂಭದಲ್ಲಿ  ದೇವತೆ ಅಥವಾ  ಋಷಿಗಳ ಸಂವಾದವನ್ನು  ನಿರೂಪಿಸುವ ವಾಡಿಕೆಯನ್ನು  ನಾಟ್ಯಶಾಸ್ತ್ರದಂತೆ  ಅಭಿನಯ ದರ್ಪಣದಲ್ಲೂ  ಕಾಣುತ್ತೇವೆ.  ನಾಟ್ಯಶಾಸ್ತ್ರದ  ಪೀಠಿಕೆಯಲ್ಲಿ  ಬ್ರಹ್ಮನು ಸೃಷ್ಟಿಸಿದನೆನ್ನಲಾದ  ನಾಟ್ಯದ ಕುರಿತಾಗಿ  ಋಷಿ-ಮುನಿಗಳ  ಸಂವಾದ, ಪ್ರಶ್ನೋತ್ತರ-  ಪರಿಹಾರಗಳಿದ್ದರೆ  ; ಇಲ್ಲಿ ನಂದಿಕೇಶ್ವರ-ಇಂದ್ರರ  ಸಂವಾದವನ್ನು  ಕಾಣುತ್ತೇವೆ.  ಜೊತೆಗೊಂದಿಷ್ಟು  ವ್ಯತ್ಯಾಸಗಳೂ  ಇವೆ.

ಭರತನ ನಾಟ್ಯಶಾಸ್ತ್ರವು  ಪ್ರಧಾನವಾಗಿ  ನಾಟ್ಯ-ರೂಪಕ  ಪ್ರದರ್ಶನವನ್ನೇ  ಗಮನದಲ್ಲಿಟ್ಟು  ರಚಿಸಲ್ಪಟ್ಟಿದ್ದರೆ,  ಅಭಿನಯ ದರ್ಪಣವು  ನೃತ್ಯ ಶಾಸ್ತ್ರವನ್ನು  ಮಾತ್ರ ವಿವರಿಸುವ  ಗ್ರಂಥವಾಗಿದೆ.  ನಾಟ್ಯಶಾಸ್ತ್ರ  ಮುಖ್ಯವಾಗಿ ಪ್ರಥಮ  ಅಧ್ಯಾಯದಲ್ಲಿಯೇ  ತಾನು ವಿವರಿಸುವ  ನಾಟ್ಯದ ಉಗಮವನ್ನು  ಪ್ರಸ್ತಾಪಿಸಿದರೆ,  ಅಭಿನಯ ದರ್ಪಣವು  ಸಭಾ ಲಕ್ಷಣ,  ರಂಗಮಂಟಪ ಕ್ರಮ,  ಗೆಜ್ಜೆ, ನಟ-ನಟಿಯರ  ಲಕ್ಷಣಗಳು, ನಾಟ್ಯ,  ನೃತ್ತ, ನೃತ್ಯ,  ಅಭಿನಯ ಮುಂತಾದ  ಪಾರಿಭಾಷಿಕ ಶಬ್ದಗಳನ್ನು  ಸಂಕ್ಷಿಪ್ತವಾಗಿ  ವಿವರಿಸುತ್ತದೆ.

ಹಾಗಾಗಿ ಭರತನಾಟ್ಯಕ್ಕೆ  ಅಭಿನಯ ದರ್ಪಣವು  ಮುಖ್ಯ ಆಕರ ಗ್ರಂಥ  ಎನ್ನುವುದು ಸ್ವೀಕರಿತ  ಅಂಶ.  ನಾಟ್ಯಶಾಸ್ತ್ರವು  ಭಾರತದ ಎಲ್ಲಾ  ರಂಗಭೂಮಿ, ಜಾನಪದಕ್ಕೂ  ಸೇರಿದಂತೆ ಎಲ್ಲಾ  ಕಲೆಗಳಿಗೂ ಮೂಲ  ಗ್ರಂಥವಾದರೂ,  ಭರತನಾಟ್ಯಕ್ಕೇ  ಅಭಿನಯ ದರ್ಪಣವನ್ನೇ  ಹೆಚ್ಚಾಗಿ ಅನುಸರಿಸಲಾಗುತ್ತದೆ.  ಉದಾಹರಣೆಗೆ:  ಹಸ್ತ-ಮುದ್ರಾದಿ  ಲಕ್ಷಣಗಳು ಅಭಿನಯ  ದರ್ಪಣದ ಅನುಸಾರವಾಗಿಯೇ  ಬಳಸಲ್ಪಡುತ್ತದೆ.

ಆದರೆ ನೃತ್ಯಾಭಿನಯಗಳಿಗೆ  ಮುಖ್ಯವಾದ ರಸ-ಭಾವಾದಿಗಳ  ಲಕ್ಷಣವನ್ನು  ಈ ಗ್ರಂಥ ಅಷ್ಟಾಗಿ  ವಿವರಿಸಹೋಗುವುದಿಲ್ಲ.  ಆಂಗಿಕಾಭಿನಯವನ್ನು  (ಅಂಗ ಚಲನೆಗಳಿಂದ  ಉಂಟಾಗುವ ಅಭಿನಯ)  ಇದರಲ್ಲಿ ಪ್ರಧಾನ  ವಿಷಯವನ್ನಾಗಿ  ಪರಿಗಣಿಸಲಾಗಿರುವುದು  ಎದ್ದು ಕಾಣುತ್ತದೆ.  ಹಾಗೆಂದ ಮಾತ್ರಕ್ಕೆ  ಈ ಗ್ರಂಥದ ಉಪಯುಕ್ತತೆ  ಕಡಿಮೆಯಾಗಿಲ್ಲ.  ಭರತನಾಟ್ಯದ ಪಠ್ಯ  ಮತ್ತು ಪರೀಕ್ಷಾ  ಕ್ರಮಗಳು ಅಭಿನಯ  ದರ್ಪಣವನ್ನು  ಮುಖ್ಯ ಆಧಾರವಾಗಿಟ್ಟುಕೊಂಡಿವೆ.

ಕಾವ್ಯ ಮತ್ತು ನೃತ್ಯದ ಸಾಂಗತ್ಯ : ಲಾಸ್ಯರಂಜನ
- ಮನೂ ‘ಬನ’

ನೃತ್ಯ ಶಾಸ್ತ್ರಕ್ಕೆ  ಸಂಬಂಧಿಸಿದಂತೆ  ಕನ್ನಡ ಸಾಹಿತ್ಯಗ್ರಂಥಗಳು  ವಿರಳವೇ ಸರಿ.  ಹೀಗಿರುವಾಗ ಛಂದಸ್ಸಿನಲ್ಲಿರುವ  ನೃತ್ಯ ಶಾಸ್ತ್ರ  ಲಕ್ಷಣವನ್ನು  ವಿವರಿಸುವ ಕನ್ನಡ  ಗ್ರಂಥಗಳಲ್ಲಿ  ಪ್ರಥಮ ಗ್ರಂಥ  ಎಂದು ಹೆಸರಿಸಬಹುದಾದಲ್ಲಿ  ಸಿಂಹಭೂಪಾಲನ  ಲಾಸ್ಯರಂಜನ ಎಂದರೆ  ತಪ್ಪಾಗಲಾರದು.

ಇದರ ಕರ್ತೃ ಸಿಂಹಣ.  ಒಟ್ಟು ೮ ಪ್ರಕರಣಗಳನ್ನು,  ೮೬೪ ಪದ್ಯಗಳನ್ನೂ  ಹೊಂದಿದ ಗ್ರಂಥವು,  ಗದ್ಯ ಮತ್ತು  ಪದ್ಯ ಭಾಗಗಳೆರಡನ್ನೂ  ಹೊಂದಿರುವುದರಿಂದ  ಚಂಪೂ ಗ್ರಂಥವೆಂದೇ  ಕರೆಯಬಹುದು.  ಆದರೂ ಪದ್ಯ ಭಾಗವೇ  ಅದಿಕ. ಕಂದಪದ್ಯ,  ವೃತ್ತ ಮತ್ತು  ಛಂದಸ್ಸುಗಳನ್ನೊಳಗೊಂಡ  ಇದರ ಮಧ್ಯೆ ಕೆಲವು  ಸಣ್ಣ ವಚನಗಳನ್ನೂ  ಕಾಣಬಹುದು. ನಾಟ್ಯೋತ್ಪತ್ತಿ,  ಬೆಳವಣಿಗೆ, ತಾಂಡವ-ಲಾಸ್ಯ,  ಅಂಗ-ಪ್ರತ್ಯಂಗ-ಉಪಾಂಗ-ಕರಣ-ಅಂಗಾಹಾರ-ಚಾರಿ-ಕರಣ-ಸ್ಥಾನಕ-ಮಂಡಲ  ಮುಂತಾದ ನೃತ್ಯಲಕ್ಷಣಗಳನ್ನು  ತಿಳಿಸಲಾಗಿದೆ.  ಆದರೆ ನೃತ್ತ  ಲಕ್ಷಣವನ್ನು  ಮಾತ್ರ ಪ್ರತಿಪಾದಿಸುವ  ಇದರಲ್ಲಿ ವಿನಿಯೋಗಗಳ  ಬಗ್ಗೆ ತಿಳಿಸಿಲ್ಲ.

ಗ್ರಂಥ  ಪ್ರಾರಂಭಕ್ಕೆ  ಇಷ್ಟದೇವತಾ ಸ್ತುತಿ  ಅಥವಾ ಕವಿಕಾವ್ಯ  ಸ್ತುತಿಗಳು ಕಂಡುಬಂದಿಲ್ಲ.  ಬದಲಾಗಿ ನೃತ್ಯ  ಲಕ್ಷಣಗಳನ್ನು  ಹೇಳುವ ಪ್ರತಿಜ್ಞಾವಾಕ್ಯವಿದೆ.  ಆದರೂ ಒಂದನೇಯ  ಪ್ರಕರಣದ ೧೯ನೇಯ  ಪದ್ಯದಲ್ಲಿ ನಾಟ್ಯದ  ಅಧಿದೇವತೆಯಾದ  ಈಶ್ವರನನ್ನು  ಸ್ತುತಿಸಿದ್ದಾನೆ.  ಲಾಸ್ಯ ರಂಜನವು  ಕವಿಯ ಸ್ವತಂತ್ರ  ಗ್ರಂಥವೇ ಅಥವಾ  ಇತರ ಆಧಾರ ಗ್ರಂಥಗಳಿಂದ  ರಚಿತವಾದದ್ದೇ  ಎಂಬುದಕ್ಕೆ ಪುಷ್ಟಿ  ನೀಡುವಂತೆಹ ಯಾವುದೇ  ವಿಚಾರ ಎಲ್ಲಿಯೂ  ಕಂಡುಬರುವುದಿಲ್ಲ.  ಆದರೂ ಕೆಲವೆಡೆ  ಕವಿಯು ಭರತಮತದಿಂ  ಪೇಳ್ವೆಂ ಎಂದಿರುವುದರಿಂದ  ಲಾಸ್ಯರಂಜನಕ್ಕೆ  ಭರತನ ನಾಟ್ಯಶಾಸ್ತ್ರ  ಆಕರ ಎಂದು ಹೇಳಬಹುದಾದರೂ  ಪೂರ್ಣವಾಗಿ ಈ  ಗ್ರಂಥ ನಾಟ್ಯಶಾಸ್ತ್ರವನ್ನೂ  ಅವಲಂಬಿಸಿಲ್ಲ.  ಬಹುಷ: ಈ ರೀತಿ  ಉಲ್ಲೇಖಿಸುವುದರಿಂದ  ಗ್ರಂಥಕ್ಕೆ ಪ್ರೌಢಿಮೆ  ಸಿಗಬಹುದು ಎಂಬುದು  ಆತನ  ಉದ್ದೇಶವಾಗಿರಬುದು  ಎಂಬುದು ವಿಮರ್ಶಕರ  ಊಹೆ. ಕೆಲವೊಂದು  ನಾಟ್ಯಾಂಗ ಲಕ್ಷಣಗಳಲ್ಲಿ  ಶಾರ್ಙ್ಗಧರನ  ಸಂಗೀತ ರತ್ನಾಕರವನ್ನು  ಈ ಗ್ರಂಥ ಹೋಲುತ್ತದೆ  ಎಂಬುದು ಗ್ರಂಥ  ಸಂಪಾದಿತರ ಅಭಿಪ್ರಾಯ.

ಕವಿಯೇ  ತಿಳಿಸಿರುವಂತೆ  ಈ ಗ್ರಂಥದ ರಚನೆಗೆ  ಆತನ ಮಡದಿಯ ಇಚ್ಛೆಯೇ  ಸ್ಫೂರ್ತಿ! ಹಾಗಾಗಿ  ಪ್ರಶ್ನೋತ್ತರ  ರೂಪದಲ್ಲಿರುವ  ಈ ಗ್ರಂಥದಲ್ಲಿ  ಪತಿ-ಪತ್ನಿಯರ  ಪರಸ್ಪರ ಸಂಭೋಧನೆಗಳು  ಇದ್ದು, ರೂಪಕ-ಉಪಮೆಗಳು  ಇದಕ್ಕೆ ಅಲಂಕಾರವನ್ನಿತ್ತಿವೆ.  ನಾಟ್ಯರಂಜನೆ  ಸ್ತ್ರೀಯರಿಂದಲೇ  ಅಧಿಕ ಎಂಬುದನ್ನು  ಮನಗಂಡಿದ್ದಾನೇನೋ  ! ಆದ್ದರಿಂದಲೇ  ಇವೆಲ್ಲದಕ್ಕೆ  ಪೂರಕವಾಗಿ ಗ್ರಂಥಕ್ಕೆ  ಲಾಸ್ಯ ರಂಜನ  ಎಂಬ ಹೆಸರನ್ನು  ಇಟ್ಟಿರಬಹುದು.

ಕಾವ್ಯ ಮಧ್ಯದಲ್ಲಿರುವ  ಚಂಡಭುಜ ಸಿಂಹ  ಧರಣೀಮಂಡಲಪತಿ,  ಸಿಂಹಭೂಪತಿ ಮುಂತಾದ  ಸಂಬೋಧನೆಗಳಿಂದ  ಈತ ಕವಿ ಮಾತ್ರವಲ್ಲ,  ರಾಜನೂ ಹೌದು  ಎಂಬುದು ದೃಢಪಡುತ್ತದೆ.  ಪ್ರತೀ ಪ್ರಕರಣದ  ಕೊನೆಯಲ್ಲಿ ವೀರಭದ್ರನೃಪವಾರ್ಧಿಚಂದ್ರ  ಎಂದು ಕವಿಯ ಸಂಬೋಧನೆಯಿರುವುದರಿಂದ  ಈತ ವೀರಭದ್ರನೃಪನ  ವಂಶಜ, ಕನ್ನಡ  ಮತ್ತು ಸಂಸ್ಕೃತ  ಭಾಷೆಗಳೆರಡರಲ್ಲೂ  ಪಂಡಿತನೆಂದೂ  ತಿಳಿಯುತ್ತದೆ.  ಕೆಲವರು ಈತನು  ವೀರಭದ್ರ ವಿಜಯದ  ಕರ್ತೃ ವೀರಭದ್ರ  ರಾಜನ ಮಗನು ಹೌದೋ  ಅಲ್ಲವೋ ಎಂಬ  ಸಂಶಯವನ್ನು ತಾಳಿದರೆ,  ಕೆಲವರು ಈತನು  ಆಂಧ್ರ ಮೂಲದವನಾಗಿರಬಹುದು,  ಆಂಧ್ರದವನಾದರೂ  ಕನ್ನಡದಲ್ಲಿ  ಕೃತಿ ರಚಿಸಿರಬಹುದು  ಎಂಬ ಅನುಮಾನ  ವ್ಯಕ್ತಪಡಿಸಿದ್ದಾರೆ.  ಆದರೆ ಕವಿಯ ಕಾಲವನ್ನು  ಖಚಿತಪಡಿಸುವಂತಹ  ಉಲ್ಲೇಖ ಎಲ್ಲಿಯೂ  ಕಂಡುಬಂದಿಲ್ಲ.  ಆದರೂ ಈ ಗ್ರಂಥರಚನೆಯ  ಉತ್ತರಕಾಲಾವಧಿ  ಕ್ರಿ.ಶ. ೧೫೮೩  ಅಂದರೆ ೧೩ನೇ  ಶತಮಾನದ ಮಧ್ಯಭಾಗದಿಂದ  ಹದಿನಾರನೇಯ ಶತಮಾನದ  ಮಧ್ಯಭಾಗದೊಳಗೆ  ರಚಿತವಾಗಿರಬಹುದೆಂದು  ನಿರ್ಣಯಿಸಲಾಗಿದೆ.  ಗ್ರಂಥಶೈಲಿಯನ್ನು  ಗಮನಿಸಿದರೆ ಇದರ  ಕಾಲ ಸುಮಾರು  ಹದಿನಾರನೇಯ ಶತಮಾನ.

ಈ ಗ್ರಂಥವನ್ನು  ಮೈಸೂರು ಅರಮನೆ  ಸರಸ್ವತೀ ಗ್ರಂಥ  ಭಂಡಾರದಲ್ಲಿರುವ  ೧೬೦೨ನೇ ಕ್ರಮಾಂಕದ  ಓಲೆಯ ಪ್ರತಿಯಿಂದ  ಪಡೆಯಲಾಯಿತು.  ಈ ಓಲೆಯ ಕಟ್ಟಿನಲ್ಲಿ  ಒಟ್ಟು ೧೩೨ ಪತ್ರಗಳಿದ್ದು,  ಮೊದಲಿನ ೬೪ ಪತ್ರಗಳಲ್ಲಿ  ಲಾಸ್ಯ ರಂಜನವೆಂಬ  ಗ್ರಂಥ ಕಂಡುಬಂದಿದೆ.  ಆದರೂ ಮೂಲಪ್ರತಿಯ  ಎಷ್ಟೋ ಪದ್ಯಗಳು  ಲುಪ್ತವಾಗಿವೆ.  ಮೈಸೂರು ವಿಶ್ವ್ವವಿದ್ಯಾನಿಲಯ  ಪ್ರಾಚ್ಯ ವಿದ್ಯಾ  ಸಂಶೋಧನಾಲಯವು  ಇದನ್ನು ಪುಸ್ತಕರೂಪದಲ್ಲಿ  ಮುದ್ರಿಸಿದ್ದು,  ಇಂಗ್ಲೀಷ್ ಭಾಷಾಂತರ  ಕೂಡಾ ಲಭ್ಯವಿದೆ.  ಕನ್ನಡ ಗದ್ಯಾನುವಾದ  ಮತ್ತು ಟಿಪ್ಫಣಿಯನ್ನೂ,  ಪೂರಕ ಛಾಯಾಚಿತ್ರಗಳನ್ನೂ  ಕೊಡಲಾಗಿದೆ.

ನರ್ತನ ಕಲೆಗೆ  ಸಂಬಂಧಿಸಿದಂತೆ  ಸಂಸ್ಕೃತ ಭಾಷೆಯಲ್ಲಿರುವಷ್ಟು  ಗ್ರಂಥಗಳು ಉಳಿದ  ಭಾಷೆಗಳಲ್ಲಿಲ್ಲ.  ಅದರಲ್ಲೂ ನೃತ್ಯಶಾಸ್ತ್ರವನ್ನು  ವಿವರಿಸುವ ಗ್ರಂಥಗಳು  ಕವಿಗಳಿಗಾಗಲೀ,  ಅಥವಾ ಅಂಥಹ ಗ್ರಂಥಗಳ  ಪ್ರಸ್ತಾಪ ಕವಿ  ಚರಿತೆಯಲ್ಲಾಗಲೀ  ವಿರಳ. ಇಂತಹ  ಸಂದರ್ಭದಲ್ಲಿ  ಕನ್ನಡ ಭಾಷೆಯಲ್ಲಿ  ಇಂತಹದ್ದೊಂದು  ಪ್ರಯತ್ನ ನಡೆದಿರುವುದು  ನಿಜಕ್ಕೂ ಹೆಮ್ಮೆ

ಗೀತ-ನೃತ್ಯ-ನಾಟಕಗಳ ಸಾಂಗತ್ಯ : ಗೀತನಾಟಕ
- “ವಿಪ್ರಭಾ”

ಕನ್ನಡ ಸಾಹಿತ್ಯ  ಲೋಕಕ್ಕೆ ಒಳ್ಳೆಯ  ನೆನಪುಗಳನ್ನಿತ್ತ  ಕವಿ-ಸಾಹಿತಿಗಳು  ಏಕಕಾಲಕ್ಕೆ ನೃತ್ಯ  ರಂಗಭೂಮಿಗೂ ಮರೆಯಲಾರದ  ಕೊಡುಗೆಗಳನಿತ್ತಿದ್ದಾರೆ.  ಅಚ್ಚುಕಟ್ಟಾದ  ಲಯವುಳ್ಳ ಸ್ವರ,  ಸಾಹಿತ್ಯಗಳ ರಚನೆಗಳು  ನೃತ್ಯರೂಪಕ-ನಾಟಕಗಳನ್ನು  ಅಭಿನಯಿಸುವ ಕಲಾವಿದರಿಗೆ  ನಿಜಕ್ಕೂ ನಿಧಿಯಿದ್ದಂತೆ!  ಇದರಿಂದ ಸಂಗೀತ  ನೃತ್ಯ ಮತ್ತು  ಹಿನ್ನಲೆ ಕಲಾವಿದರು  ನೃತ್ಯದ ವ್ಯಾಪ್ತಿಯನ್ನು  ಎಷ್ಟರ ಮಟ್ಟಿಗೆ  ವಿಸ್ತರಿಸಬಲ್ಲುರು  ಎಂಬುದನ್ನು ಪರಿಣಾಮಕಾರಿಯಾಗಿ  ಕಂಡುಕೊಳ್ಳಬಹುದು.  ಅಂತಹ ಅವಿಸ್ಮರಣಿಯರಲಿ  ದಿವಂಗತ ಪು.ತಿ.ನ  ಅವರೂ ಒಬ್ಬರು.

ಪು.ತಿ.ನ ಅವರ  ಅಹಲ್ಯೆ, ಗೋಕುಲ  ನಿರ್ಗiನ ಕೃತಿಗಳೆಲ್ಲಾ  ನವೀನ ನೃತ್ಯ  ಆವಿಷ್ಕಾರಕ್ಕೆ  ತೆರೆದುಕೊಂಡವುಗಳು.  ಬಿ. ವಿ. ಕಾರಂತರು  ಗೋಕುಲ ನಿರ್ಗಮನಕ್ಕೆ  ನೀಡಿದ ಸಂಗೀತ  ಸ್ಪರ್ಶ ಫ್ಯೂಷನ್‌ಗೆ  ಉತ್ತಮ ಉದಾಹರಣೆ.  ಗೋಕುಲ ನಿರ್ಗಮನದ  ಸಂಗೀತ ನೃತ್ಯ  ಸಾಧ್ಯತೆಗಳು  ಸೃಜನಶೀಲ ವಾತಾವರಣವನ್ನೇ  ನಿರ್ಮಿಸಿತ್ತು.  ಇಂತಹ ನೃತ್ಯನಾಟಕಗಳ  ಮತ್ತೊಂದು ಸಂಕಲನ  ಹಂಸ ದಮಯಂತಿ  ಮತ್ತು ಇತರ ಗೀತನಾಟಕಗಳು.  ಪು.ತಿ.ನ ಅವರ  ಲೇಖನಿಯಿಂದ ಹರಿದ  ಹರಿಣಾಭಿಸರಣ,  ವಸಂತಚಂದನ, ವರ್ಷ-ಹರ್ಷ,  ಶರದ್ವಿಲಾಸ,  ದೀಪಲಕ್ಷ್ಮಿ,  ರಾಮೋದಯಂ, ಸೀತಾಪರಿಣಯ  ಮುಂತಾದ ಗೀತನಾಟಕಗಳು  ನೃತ್ಯಮಾಧ್ಯಮದ  ಒಂದು ಆಸ್ತಿಯೇ  ಸರಿ!

ಒಂದು ಹಾಡನ್ನು  ಮಾಡುವ ಮೊದಲು  ಸಂಗೀತದ ಮಟ್ಟನ್ನು  ಮನಸ್ಸಿನಲ್ಲಿ  ನಿಶ್ಚಯಿಸಿಕೊಂಡು  ಅನಂತರ ಅದಕ್ಕೆ  ಹೊಂದುವ ಸಾಹಿತ್ಯವನ್ನು  ಕಲ್ಪಿಸುತ್ತೇನೆ.  ಆದ್ದರಿಂದಲೇ  ಕೇವಲ ಸಾಹಿತ್ಯಕೃತಿಯಾಗಿ  ಮಾತ್ರವಲ್ಲ,  ಸಂಗೀತ ಕೃತಿಯಾಗಿಯೂ  ಉಳಿದುಕೊಳ್ಳುತ್ತದೆ.  ಎನ್ನುವುದು ಪು.ತಿ.ನ  ಅವರ ಅನುಭವಜನ್ಯ  ಮಾತು. ಧಾತು  ಮಾತುಗಳ ಪರಸ್ಪರ  ಅವಿನಾಭಾವ ಭವಿಸುವಿಕೆ  ಗೀತಗಳ ಸೃಷ್ಟಿಗೆ  ಒಳ್ಳೆಯ ವೇಗ  ಮತ್ತು ಓಘವನ್ನು  ಕೊಡಬಹುದು ಎನ್ನುವುದನ್ನು  ಇಲ್ಲಿ ಕಾಣಬಹುದು.

ಗೀತಗಳ ರಚನೆಯಲ್ಲಿ  ಇಷ್ಟು ಮಾತ್ರವಲ್ಲ,  ಮತ್ತಷ್ಟು ಹೊಸತಿನ  ಸೃಷ್ಟಿಗೆ ಕಾರಣರಾಗಿದ್ದಾರೆ  ಪು.ತಿ.ನ. ಇವರ  ಸ್ವತಂತ್ರವಾದ  ಕಲ್ಪನಾಪ್ರವಾಹಕ್ಕೆ  ಸಾಕ್ಷಿಯೇ ವಾಸಂತಿ,  ಗಾಂಧಾರಲೋಲ,  ಋಷಭವಿಲಾಸ, ಸಂಜೀವಿನಿ,  ಹರಿಣಿ ಮುಂತಾದ  ಅವರೇ ಕಂಡುಹಿಡಿದ  ನೂತನ ರಾಗಗಳು!  ಋತುವಿಲಾಸದಂತಹ  ಹಿಂದೂಸ್ತಾನೀ  ರಾಗಗಳೂ, ಜೊತೆಗೆ  ಅಪೂರ್ವವೆನಿಸುವ  ರಾಗಗಳು, ಜನಪ್ರಿಯ  ರಾಗಗಳನ್ನೂ ಸೇರಿಸಿದಂತೆ  ಒಟ್ಟು ೭೬ ರಾಗಗಳನ್ನು  ಬಳಸಿದ್ದಾರೆ.  ಗೀತ ನಾಟಕಗಳೆಲ್ಲಾ  ಸ್ವರಸಹಿತ ರಾಗ,  ತಾಳಬದ್ಧವಾಗಿದ್ದು  ಕೇವಲ ಶಾಸ್ತ್ರೀಯ  ಧಾಟಿಯಲ್ಲಷ್ಟೇ  ಅಲ್ಲದೆ, ವೃಂದಗಾನ,  ಲಘುಗೀತ, ಸುಗಮಸಂಗೀತ,  ಜಾನಪದ..ಹೀಗೆ  ಸಂಗೀತದ ಪ್ರತೀ  ಪ್ರಕಾರಕ್ಕೆ  ಪೂರಕವಾಗುವ ಧಾಟಿಗಳ  ಮಿಶ್ರಣವೂ ಇದೆ!  ಹಾಗಾಗಿ ಈ ಗೀತನಟಕಗಳು  ಶಾಸ್ತ್ರೋಚಿತವು  ಹೌದು, ಸೃಜನಶೀಲವೂ  ಹೌದು !

ಹೊಸತು, ಹಳತಿನ  ಸಂಘರ್ಷದ ಸಂಧಿಕಾಲದ  ಮನೋಧರ್ಮವನ್ನು  ಚೆನ್ನಾಗಿ ಅರಿತುಕೊಂಡವರು  ಪು.ತಿ.ನ. ಹಾಗಾಗಿ,  ಸಾಂಪ್ರದಾಯಿಕ  ಸ್ವರಗಳಿಗೆ ಹೊಸ  ಭಾವವನ್ನೂ, ಹಳೆಯ  ಶಬ್ದಗಳಿಗೆ ಹೊಸ  ಅರ್ಥವನ್ನೂ ನೀಡಿದಾರೆ.  ಜೊತೆಗೆ ಹೊಸ  ದಾರಿಯ ನಡಿಗೆಗೆ  ಹಳೆಯ ಸಂಪ್ರದಾಯವನ್ನೂ  ಒಗ್ಗಿಸಿಕೊಂಡಿದ್ದಾರೆ.  ಆದ್ದರಿಂದಲೇ  ರಸಾನುಭವದಲ್ಲಿ  ಅಗ್ಗವಿಲ್ಲ.,ಕುಗ್ಗಿಲ್ಲ!

ಹರಿಣಾಭಿಸರಣಕ್ಕೆ  ಆರ್.ಕೆ. ಶ್ರೀಕಂಠನ್,  ವಸಂತಚಂದನಕ್ಕೆ  ಎ. ವಿ. ಕೃಷ್ಣಮಾಚಾರ್ಯರು  ಮತ್ತು ಅವರ ತಂಡ…ಹೀಗೆ,  ವಿವಿಧ ವಿದ್ವಾಂಸರು  ಇಲ್ಲಿನ ಗೀತನಾಟಕಗಳಿಗೆ  ಸ್ವರ ನಿರ್ದೇಶನವನ್ನೂ  ಮಾಡಿ, ಆಗಿನ  ಕಾಲದಲ್ಲೇ ಆಕಾಶವಾಣಿಯಲ್ಲಿ  ಪ್ರಸ್ತುತಪಡಿಸಿದ್ದಾರೆ.  ಇಂದಿಗೂ ನೀನಾಸಂ,  ರಂಗಾಯಣ ಗೋಕುಲ  ನಿರ್ಗಮನದಂತಹ  ಪ್ರದರ್ಶನದಿಂದ  ಇಂದಿಗೂ ಅದರ  ಭವ್ಯ ಸಾಧ್ಯತೆಗಳನ್ನು  ತೋರಿಸಿಕೊಡುತ್ತಿದ್ದಾರೆ.  ಅಂತೆಯೇ ಹಲವು  ನೃತ್ಯ ನಿರ್ದೇಶಕರು  ಈ ಗೀತನಾಟಕಗಳ  ಕುರಿತಂತೆ ತಮ್ಮ  ಕಲ್ಪನೆಯನ್ನು  ಪ್ರದರ್ಶನಗಳಲ್ಲಿ  ಮತ್ತಷ್ಟು ಸಾಕ್ಷೀಕರಿಸುತ್ತಿದ್ದಾರೆ.

ಗೀತಗಳ ಸೃಷ್ಟಿಯಲ್ಲಿ  ಗಾಂಭೀರ್ಯವಿದೆ,  ಬಿಗಿಯಿದೆ, ಕುಶಲತೆಯಿದೆ,  ಕಲಾಪರಿಪೂರ್ಣತೆಯಿದೆ,  ಯಾವುದೇ ಗೀತರೂಪಕವನ್ನು  ತೆಗೆದುಕೊಂಡರೂ  ಆರಂಭದಿಂದ ಅಂತ್ಯದ  ವರೆಗೂ ಶ್ರೋತೃಗಳ  ಮನಸ್ಸನ್ನು ಸೆರೆಹಿಡಿದು  ನಿಲ್ಲಿಸುತ್ತದೆ.  ಕಾರಣ, ಗೀತಗಳಲ್ಲಿರುವ  ವೈವಿಧ್ಯ. ಯಾವ  ಹಾಡಿನಲ್ಲಿಯೂ  ಅನುಕರಣವಿಲ್ಲ.  ಒಂದೊಂದು ಸ್ವತಂತ್ರ  ಕಲ್ಪನೆಯಿಂದ  ಮೂರ್ತಿವೆತ್ತ  ರಚನೆ. ಹೀಗಂದವರು  ವಿ. ದೊರೆಸ್ವಾಮಿ  ಅಯ್ಯಂಗಾರ್.,  ನೃತ್ಯ ನಾಟಕಗಳ  ಮತ್ತೋರ್ವ ಸಂಗೀತ  ಸಂಯೋಜಕರು !

ಭಾರತೀಯ ಸಾಹಿತ್ಯದ ಅದ್ವಿತೀಯ ಪ್ರೇಮಗೀತೆ- ಗೀತಗೋವಿಂದ (ಅಷ್ಟಪದಿ)
- ಮನೂ ‘ಬನ’

ಪರಮಾತ್ಮನೆಡೆಗೆ  ಮಧುರ ಭಕ್ತಿ  ಮತ್ತು ಶೃಂಗಾರಗಳ  ನಿವೇದನೆ ಜೊತೆಗೆ  ಮಾನವ ಸ್ವಭಾವಗಳ  ನಿರೂಪಣೆಂiiನ್ನು  ಹೊಂದಿರುವ ಅತ್ಯದ್ಭುತ,  ಅಸಾಮಾನ್ಯ ಸಂಸ್ಕೃತ  ಕಾವ್ಯ ರತ್ನವೆಂದರೆ  ಗೀತಗೋವಿಂದ.  ಇದನ್ನು ಪ್ರಥಮ  ಗೀತನಾಟಕ ಅಥವಾ  ಸಂಗೀತರೂಪಕವೆನ್ನಬಹುದು.  ಅನೇಕ ಸಂಗೀತ,  ನೃತ್ಯ, ನಾಟಕಗಳಿಗೂ  ಮಾರ್ಗದರ್ಶಕ  ಸರಸ ಕೃತಿಯಾಗಿರುವ  ಇದು, ನಂದಿಕೇಶ್ವರನ  ಹೇಳಿಕೆಯಂತೆ  ಆಂಗಿಕ, ವಾಚಿಕ,  ಆಹಾರ್ಯ, ಸಾತ್ವಿಕ  – ಹೀಗೆ…,  ಚತುರ್ವಿಧ ಅಭಿನಯಗಳಿಗೆ  ಹೇಳಿ ಮಾಡಿಸಿದ  ವಸ್ತು.

ಕಾವ್ಯಗಳೆಂದರೆ  ಹಾಗೆ ! ವಾಚನದಲ್ಲಿ  ಒಂದು ರೀತೀಯ  ಅನುಭವವನ್ನಿತ್ತರೆ,  ರಾಗ, ತಾಳ, ಭಾವ,  ಲಯಗಳೊಂದಿಗೆ  ನರ್ತಿಸಿದಾಗ  ಮನಸ್ಸಿಗೆ ವಿಶಿಷ್ಟ  ಅನುಭೂತಿಯನ್ನು  ನೀಡುತ್ತದೆ.  ಪಾರಮಾರ್ಥಿಕ  ಗುಣಗಳಿಂದ ಕೂಡಿರುವ  ಇವು, ಒಂದೆಡೆ  ಸಂಕೀರ್ತನೆಯಾಗಿಯೂ,  ಮತ್ತೊಂದೆಡೆ  ಕಲಾವಿದರಿಗೆ  ಗುಣಾತಿಶಯಗಳಿಂದ  ಕೂಡಿದ ಭಾವಪೂರಿತ  ರಸಾನುಭೂತಿಯಾಗಿಯೂ  ಕೂಡಿರುತ್ತದೆ.  ಅಂತವುಗಳ ಪೈಕಿ  ಗೀತಗೋವಿಂದಕ್ಕೆ  ಅದ್ವಿತೀಯ ಸ್ಥಾನ.

ಇದರ ಕರ್ತೃ ಜಯದೇವಕವಿ.  ಒರಿಸ್ಸಾ ದೇಶದ  ಪೂರಿ ಜಗನ್ನಾಥಕ್ಕೆ  ಸಮೀಪವಾದ ಕಿಂದುಬಿಲ್ವ  ಎಂಬ ಗ್ರಾಮದಲ್ಲಿ  ಜನಿಸಿ ೧೨ನೇ  ಶತಮಾನದಲ್ಲಿ  ಅಂದಾಜು ೧೧೧೬-೧೨೦೦  ಇಸವಿಯ ವರೆಗೆ  ಬಾಳಿ ಬದುಕಿದ.  ಬಂಗಾಳದ ಕೆಂದುಲಿ  ಎಂಬ ಗ್ರಾಮವೇ  ಕಿಂದುಬಿಲ್ವವಾಗಿ  ಇದ್ದಿರಬೇಕೆಂಬುದು  ಕೆಲವರ ಅಭಿಪ್ರಾಯ.  ಈತನು ತನ್ನ ಏಳನೇ  ಅಷ್ಟಪದಿಯ ಸಾಹಿತ್ಯದಲ್ಲಿ  ಕಿಂದುಬಿಲ್ವ  ಸಮುದ್ರ ಸಂಭವಂ  ಎಂಬುದಾಗಿ ಕ್ಷೇತ್ರಮುದ್ರೆ  ಅಂದರೆ ತಾನಿದ್ದ,  ಬಾಳಿದ ಸ್ಥಳದ  ಸೂಚಕವನ್ನು ನೀಡಿದ್ದಾನೆ.  ಬ್ರಾಹ್ಮಣಕುಲದ  ಕೌಂಡಿನ್ಯ ಗೋತ್ರದ  ಭೋಜದೇವ, ರಮಾದೇವಿ  ಜಯದೇವನ ತಂದೆತಾಯಿಯರು.

ಈತ ಬಂಗಾಳದ   ಸೋಮವಂಶದ ದೊರೆ  ಲಕ್ಷ್ಮಣಸೇನನ  ಆಸ್ಥಾನಕವಿ ಕೂಡಾ.  ಉಮಾಪತಿಧರ, ಗೋವರ್ಧನ,  ಶರಣದೇವ, ದುಹಿಸೇನ  ಮೊದಲಾದ ಕವಿಗಳು  ಈತನ ಸಮಕಾಲೀನರು.  ಲಕ್ಷ್ಮಣಸೇನನು  ಗೌಡ ಎಂಬಲ್ಲಿನ  ಅರಮನೆಯ ಶಿಲಾಶಾನವೊಂದರಲ್ಲಿ  ತನ್ನ ಅಸ್ಥಾನದ  ಈ ಪಂಚರತ್ನ ಮಹಾಕವಿಗಳ  ಹೆಸರುಗಳನ್ನು  ಕೆತ್ತಿಸಿದ್ದಾನೆ.  ಜಯದೇವನ ಇತರ  ಕೃತಿಗಳು ಕಾರಕವಾದ,  ರತಿ ಮಂಜರೀ,  ತತ್ವಚಿಂತಾಮಣಿ.

ಇವನ ಜನ್ಮ, ಮರಣ,  ಜೀವನದ ಕುರಿತು  ಜಿಜ್ಞಾಸೆಗಳಿವೆ.  ಕೆಲವು ವಿದ್ವಾಂಸರ  ಪ್ರಕಾರ ಕ್ರಿ.ಶ.೧೧೫೩ರ  ದಶಂಬರ ತಿಂಗಳ  ೨೬ನೇ ತಾರೀಕಿನಂದು  ಶ್ರೀಮುಖ ಸಂವತ್ಸರ  ಮಾರ್ಗಶಿರ ಕೃಷ್ಣ  ಏಕಾದಶಿಯಂದು  ಸ್ವರ್ಗಸ್ಥನಾದ.  ಆದರೆ ಬಹುಪಾಲು  ಜನ ಪುಷ್ಯಮಸದ  ಸಪ್ತಮೀ ತಿಥಿಯಂದು  ಜಯದೇವನ ಪುಣ್ಯದಿನವಾಚರಿಸುತ್ತಾರೆ.  ಕೆಲವರು ಶ್ರೀಕೃಷ್ಣಕರ್ಣಾಮೃತದ  ಕರ್ತೃ ಲೀಲಾಶುಕನೇ  ಜಯದೇವನಾಗಿ ಜನ್ಮ  ತಳೆದನೆನ್ನುತ್ತಾರೆ.  ಇನ್ನೂ ಕೆಲವು  ವಿಮರ್ಶಕರು ಶ್ರೀಕೄಷ್ಣಕರ್ಣಾಮೃತದ  ಶ್ಲೋಕಗಳನ್ನು  ಅಷ್ಟಪದಿಗಳಲ್ಲಿ  ಬಳಸಲಾಗಿರುವುದೇ  ಇದಕ್ಕೆ ಕಾರಣ  ಎನ್ನುತ್ತಾರೆ.  ಆದರೂ ಗೀತಗೋವಿಂದದ  ಕುರಿತಾದ ವ್ಯಾಖ್ಯಾನಗಳಾದ  ಶಂಕರಮಿಶ್ರನ  ರಸಮಂಜರೀ, ರಾಣಾಕುಂಭನ  ರಸಿಕಪ್ರಿಯಾ,  ಮತ್ತು ಭಕ್ತಮಾಲಾ,  ಲಕ್ಷ್ಮೀಧರನ  ಶ್ರುತಿರಂಜನಿ,  ಕೃಷ್ಣದತ್ತನ  ಶಶಿಲೇಖಾ, ಜಗಧ್ವ್ವರನ  ಸಾರದೀಪಿಕಾ,  ದೀಪಿಕಾ ಎಂಬ  ಗೋಪಾಲಪಂಡಿತನ  ಟೀಕೆ ಮುಂತಾದ   ಗ್ರಂಥಗಳಿಂದ  ಜಯದೇವನ ಕುರಿತ  ಈ ವಿಷಯಗಳಿಗೆ  ಪುಷ್ಟಿ ದೊರಕಿದೆ.

ಈ ಕಾವ್ಯದ ಕುರಿತಾಗಿ  ಭಗವತ್ ದರ್ಶನವನ್ನು  ಸಾಕ್ಷೀಕರಿಸಿದ  ಅನೇಕ ಪವಾಡಗಳು,  ಉಪಕಥೆಗಳೂ ಇವೆ.  ಕವಿಯು ಇಷ್ಟದೈವನಾದ  ಕೃಷ್ಣನಿಗೆ ಅಷ್ಟಪದಿಗಳನ್ನು  ಅರ್ಪಿಸಿದ್ದು,  ಸರಳಮನಸ್ಕ ಮಾನವನ  ಆತ್ಮ ಹೃದಯಗಳನ್ನು  ಪರಮಾತ್ಮನತ್ತ  ಕೊಂಡೊಯ್ಯುವ  ಪ್ರೌಢ ಕಾವ್ಯ.  ಭಾರತೀಯ ಶಾಸ್ತ್ರೀಯ  ಸಂಗೀತ ಮತ್ತು  ನೃತ್ಯಕಲೆ, ನೃತ್ಯನಾಟಕ,  ರೂಪಕಗಳೆಲ್ಲದರಲ್ಲೂ  ಬಹುಮಟ್ಟಿಗೆ  ಬಳಸುವ, ನಾಯಿಕಾ  ನಾಯಕ ಭಾವಕ್ಕೆ  ಹೇರಳ ಅವಕಾಶವಿರುವ  ಶೃಂಗಾರಪೂರಿತ,  ವೈಭವಯುತ, ಧ್ವನಿಪೂರ್ಣ,  ಶ್ರುತಿಮನೋಹರ,  ವಿದ್ವತ್‌ಪೂರ್ಣ,  ಅಲಂಕಾರಿಕ ನಿವೇದನೆ.  ಒಟ್ಟಿನಲ್ಲಿ  ನಭೂತೋ ನ ಭವಿಷ್ಯತಿ  ಎಂಬಂತದ್ದು.

ಚಿಕ್ಕಂದಿನಲ್ಲಿಯೇ  ಗೆಳೆಯ ಪರಾಶರನೊಂದಿಗೆ  ಮಥುರೆ, ಬೃಂದಾವನಗಳಿಗೆ  ಹೋಗಿ ಅಲ್ಲಿ  ರಾಧಾಕೃಷ್ಣರ  ಮೋಹಕ ವರ್ಣನೆಯನ್ನು  ಕೇಳಿದ ಜಯದೇವನಿಗೆ  ಕೃಷ್ಣಭಕ್ತಿ  ಜಾಗೃತಗೊಂಡಿತು.  ಅದೇ ನೆನವರಿಕೆಯಲ್ಲಿ  ತನ್ನ ವ್ಯಾಸಂಗವನ್ನು  ಬಿಟ್ಟು ಜಯದೇವ  ಊರ ಹೊರಗಿನ ಪರ್ಣಶಾಲೆಯಲ್ಲಿ  ನಿತ್ಯವೂ ಧ್ಯಾನಾಸಕ್ತನಾಗಿ  ವಿರಾಗಿಯಾಗಿ  ಇರತೊಡಗಿದ. ಕ್ರಮೇಣ  ಸಂಸ್ಕೃತದಲ್ಲಿ  ಅತಿಶಯ ಪಾಂಡಿತ್ಯ  ಪಡೆದು ಕವಿಶ್ರೇಷ್ಟ  ವಿದ್ವಾಂಸನೆನಿಸಿದ.  ಈತನು ಗೋವರ್ಧನಾಚಾರ್ಯರ  ಶಿಷ್ಯನೆಂಬುದು  ಪ್ರತೀತಿ.

ಅದೇ ಗ್ರಾಮದ  ದೇವಶರ್ಮ, ವಿಮಲಾಂಬ  ದಂಪತಿಗಳಿಗೆ  ಸಂತಾನವಿಲ್ಲದೆ,  ಕೊನೆಗೆ ತಮ್ಮ  ಮೊದಲ ಮಗುವನ್ನೇ  ಪರಮಾತ್ಮನಿಗೆ  ಕಾಣಿಕೆಯಾಗಿ  ನೀಡುವ ಹರಕೆ  ಹೊತ್ತಿರುತ್ತರೆ.  ಇದರ ಫಲವಾಗಿ  ಪದ್ಮಾವತಿಯೆಂಬ  ಮಗಳು ಜನಿಸಿರುತ್ತಾಳೆ.  ಅವಳು ಪ್ರಾಪ್ತ  ವಯಸ್ಕಳಾದಾಗ  ಹರಕೆಯಂತೆ ಜಗನ್ನಾಥ  ದೇವಾಲಯಕ್ಕೆ  ಆಕೆಯನ್ನು ಕರೆತಂದು  ದೇವರ ಸನ್ನಿಧಿಯಲ್ಲಿ  ಬಿಟ್ಟುಹೋಗುತ್ತಾರೆ.  ಆದರೆ ಅಲ್ಲಿನ  ಅರ್ಚಕರಿಗೆ ಕನಸಿನಲ್ಲಿ  ಪರಮಾತ್ಮನು ಕಾಣಿಸಿಕೊಂಡು  ತನ್ನ ಅಂಶದಿಂದ  ಜನಿಸಿದ ಜಯದೇವನಿಗೆ  ಕನ್ಯೆಯನ್ನು  ಮದುವೆ ಮಾಡಿಕೊಡುವಂತೆ  ತಿಳಿಸುತ್ತಾನೆ.  ಆದರೆ ಜಯದೇವನು  ನಂಬದೆ, ಪರಿಹಾಸ್ಯ  ಮಾಡಿ, ಅಂಗೀಕಾರ  ಮಾಡದೇ ವಿರಾಗಿಯಾಗಿ  ಉಳಿಯುವ ನಿರ್ಧಾರ  ಮಾಡುತ್ತಾನೆ.   ಕೊನೆಗೆ ಜಯದೇವನನ್ನು  ಪದ್ಮಾವತಿಯು  ಪ್ರಾರ್ಥಿಸಿ,  ಒಲಿಸಿಕೊಳ್ಳುತ್ತಾಳೆ.  ಆಕೆಯ ಭಕ್ತಿಪರಾಯಣತೆಗೆ  ಆಕರ್ಷಿತನಾಗಿ  ಅವರೀರ್ವರ ವಿವಾಹ  ಜರುಗುತ್ತದೆ.

ಪತಿಭಕ್ತಳೂ,  ಭಗವದ್ಭಕ್ತಳೂ  ಆದ ಜಯದೇವನ ಪತ್ನಿಯೇ  ಗೀತಗೋವಿಂದಕ್ಕೆ  ಪ್ರೇರಣೆ ನೀಡಿದವಳೆನ್ನಲಾಗಿದೆ.  ಪತಿ ಕವಿಯಾದರೆ,  ಪದ್ಮಾವತಿ ಸಂಗೀತ-ನೃತ್ಯ  ಪ್ರವೀಣೆ! ಅಗಾಧ  ಪ್ರೇಮವುಳ್ಳ  ದಾಂಪತ್ಯ ಇವರದ್ದು.  ಪತಿಯಲ್ಲಿ ಹುದುಗಿದ್ದ  ಶಕ್ತಿಯನ್ನ್ನು  ಅರಳಿಸಿ ಸ್ಫೂರ್ತಿ  ನೀಡಿ, ಆತ ಅಷ್ಟಪದಿಗಳನ್ನು  ಹಾಡಿದಾಗ ಪತ್ನಿ  ಪದ್ಮಾವತಿಯು  ಕವಿತೆಯ ಅರ್ಥಕ್ಕನುಸಾರವಾಗಿ  ಗಾನ-ನರ್ತನದಲ್ಲಿ  ಜೊತೆಯಾಗಿ ಸಂಕೀರ್ತಿಸುತ್ತಾ  ಕೃಷ್ಣನ ಲೀಲಾವಿನೋದಗಳನ್ನು  ನೆನೆಯುತ್ತಾ  ಆನಂದಿಸುತ್ತಿದ್ದರೆನ್ನಲಾಗಿದೆ.  ಅಲ್ಲದೆ ಜಯದೇವನು  ಗೀತಗೋವಿಂದದ  ಆದಿಯಲ್ಲಿ ಪದ್ಮಾವತಿ  ಚರಣ ಚಾರಣ ಚಕ್ರವರ್ತಿ  ಎಂದು ಹೇಳಿಕೊಂಡಿದ್ದಾನೆ.  ಅಂದರೆ ಅಷ್ಟಪದಿಗಳನ್ನು  ಹಾಡುವಾಗ ಆಕೆ  ನರ್ತಿಸುವುದರ  ಮೂಲಕ ಭಗವಂತನ  ಸೇವೆ ಮಾಡುತ್ತಿರುವುದನ್ನು  ಮನೋಜ್ಞವಾಗಿ  ಚಿತ್ರಿಸಿದ್ದಾನೆ.  ಕೊನೆಗೆ ಕಥಕಂದಿ(ಜಯದೇವಪುರ)  ಗ್ರಾಮದಲ್ಲಿ  ಗೀತಗೋವಿಂದವನ್ನು  ಬರೆದು ಪೂರ್ಣಗೊಳಿಸಿದನಂತೆ.  ಇವನ ಅಷ್ಟಪದಿಗಳನ್ನು  ಕೇಳಿ ಪರಮಸಂತುಷ್ಟನಾಗಿ  ಈತನ ವೈಷ್ಣವ  ಧರ್ಮವನ್ನೇ ಚೈತನ್ಯನು  ಬಂಗಾಳಕ್ಕೆ ಒಯ್ದನಂತೆ!

ಅಷ್ಟಪದಿ-ಎರಡೆರಡು  ಸಾಲಿನ ಎಂಟು  ಸಾಹಿತ್ಯವಿರುವ  ಕಾವ್ಯ. ಗೀತಗೋವಿಂದ  ಅಷ್ಟಪದಿಗಳೆಲ್ಲವನ್ನೂ  ಹೊಂದಿರುವ ಸಮಗ್ರ  ಕಾವ್ಯರೂಪ. ಸಂಗೀತ-ನೃತ್ಯಗಳಿಗಾಗಿ  ಕಲಾವಿದರು ಗೀತಗೋವಿಂದದಿಂದ  ಕೆಲವು ಭಾಗಗಳನ್ನಷ್ಟೇ  ಆಯ್ದುಕೊಳ್ಳುತ್ತಾರೆ.  ಜಯದೇವ ಎಂಬುದು  ಅಷ್ಟಪದಿಗಳ ಅಂಕಿತ.  ಇದರಲ್ಲಿ ಒಟ್ಟು  ಎಂಟು ಪಾದಗಳುಳ್ಳ  ೨೪ ಅಷ್ಟಪದಿಗಳು,  ಮಧ್ಯೆ ಹಲವು  ಸಂಯೋಜನಾ ಶ್ಲೋಕಗಳು  ಇವೆ. ಅವುಗಳನ್ನು  ೧೨ ಸರ್ಗಗಳಾಗಿ  ವಿಂಗಡಿಸಿ ಒಂದೊಂದಕ್ಕೂ  ಕೃಷ್ಣನ ಲೀಲಾವಿನೋದಗಳ  ಹೆಸರನ್ನು ಮನೋಜ್ಞವಾಗಿ  ನೀಡಲಾಗಿದೆ.  ಹನ್ನೆರಡು ಸರ್ಗಗಳು  ಭಾಗವತಪುರಾಣದ  ೧೨ ಕಾಂಡಗಳನ್ನು,  ಇಪ್ಪತ್ತನಾಲ್ಕು  ಅಷ್ಟಪದಿಗಳು  ಗಾಯತ್ರೀಮಂತ್ರದ  ೨೪ ಅಕ್ಷರಗಳನ್ನು  ನೆನಪಿಸುತ್ತವೆ.  ಅವುಗಳು, ಅವು  ಒಳಗೊಂಡಿರುವ  ಅಷ್ಟಪದಿಗಳು  ಹಾಗೂ ರಾಗಗಳು  ಹೀಗಿವೆ:

ಸಾಮೋದರ ದಾಮೋದರ   : ೧-೪  – ಮಾಯಮಾಳವಗೌಳ,  ಗುರ್ಜರಿ, ಲಲಿತ,  ರಾಮಕಮರಿ

ಅಕ್ಲೇಶ ಕೇಶವ            :  ೫-೬   – ಗುರ್ಜರಿ,  ಮಾಳವಗೌಳ,

ಮುಗ್ಧ ಮಧುಸೂದನ       : ೭      – ಗುರ್ಜರಿ

ಸ್ನಿಗ್ಧ ಮಧುಸೂಧನ        : ೮-೯   – ಕರ್ಣಾಟ,  ದೇಶಾಖ್ಯ

ಸಾಕಾಂಕ್ಷ ಪುಂಡರೀಕಾಕ್ಷ     : ೧೦-೧೧-  ದೇಶೀವರಾಡಿ,  ಗುರ್ಜರಿ

ಧನ್ಯ ವೈಕುಂಠ  ಕುಂಕುಮ  : ೧೨     – ಗುಣಕರಿ

ನಾಗರ ನಾರಾಯಣ         : ೧೩-೧೬-  ಮಾಳವ, ವಸಂತ,  ಗುರ್ಜರಿ, ದೇಶವರಾಡಿ

ವಿಲಕ್ಷ್ಯ ಲಕ್ಷ್ಮೀಪತಿ        : ೧೭     – ಭೈರವಿ

ಮುಗ್ಧ ಮುಕುಂದ          : ೧೮     – ಗುರ್ಜರಿ

ಚತುರ ಚತುರ್ಭುಜ         : ೧೯     – ದೇಶವರಾಡಿ

ಸಾನಂದ ದಾಮೋದರ       : ೨೦-೨೨-  ವಸಂತ, ವರಾಡಿ

ಸುಪ್ರೀತ ಪೀತಾಂಬರ        : ೨೩-೨೪-  ವಿಭಾಸ ,ರಾಮಕರಿ

ಇದರ  ೧೦ನೇ ಸರ್ಗದ  ೧೯ನೇ ಅಷ್ಟಪದಿಯ  ೭ನೇಯ ಚರಣವನ್ನು  ಕುರಿತು ಬರೆಯುವಾಗ,  ಕೃಷ್ಣ ಪರಮಾತ್ಮನು  ತನ್ನ ತಲೆಯ ಮೇಲೆ  ರಾಧೆಯ ಚರಣಕಮಲವನ್ನಿಟ್ಟು  ತನ್ನ ಕಾಮಭಾಧೆಯನ್ನು  ಹೋಗಲಾಡಿಸು ಎಂದು  ರಾಧೆಯಲ್ಲಿ ಕೇಳುವ  ಪ್ರಸಂಗವು ಕವಿಗೆ  ಹೊಳೆಯುತ್ತದೆ.  ಇದು ಮೂರ್ಖತನ,  ಅಪಚಾರದ ಕೆಲಸವೆಂದು  ತಿಳಿದ ಜಯದೇವ,  ಇಂತಹ ವರ್ಣನೆಗಳೂ  ಪರಮಾತ್ಮನ ಚಾರಿತ್ರ್ಯವನ್ನು  ಅಪವಿತ್ರಗೊಳಿಸೀತು  ಎಂದು ಭಾವಿಸಿ  ಆ ಪಂಕ್ತಿಗಳನ್ನು  ಅಳಿಸಿ ಅಲ್ಲಿಗೇ  ಬಿಟ್ಟು ಪದ್ಮಾವತಿಯಲ್ಲಿ  ನೀಡಿ ಶುಚಿಯಾಗಲು  ಸ್ನಾನಕ್ಕೆ ಹೋದನಂತೆ.  ಆಗ ಶ್ರೀಕೃಷ್ಣನು  ಜಯದೇವನ ವೇಷ  ತಾಳಿ ಬಂದು ಪದ್ಮಾವತಿಯಿಂದ  ಕೇಳಿ ಪಡೆದು  ಅಳಿಸಿದ ಸಾಲುಗಳನ್ನು  ಪುನಃ ಬರೆದು  ಹೋದನಂತೆ ! ಸ್ನಾನವನ್ನು  ಮುಗಿಸಿ ಹಿಂತಿರುಗಿಬಂದ  ಜಯದೇವ ತಾನು  ಬರೆಯಬೇಕೆಂದು  ಇಚ್ಚಿಸಿದ ವಾಕ್ಯಗಳನ್ನು  ಬರೆದವರು ಯಾರು  ಎಂಬುದಾಗಿ ಪದ್ಮಾವತಿಯಲ್ಲಿ  ಪ್ರಶ್ನಿಸಿದ.   ಆಶ್ಚರ್ಯಚಕಿತಳಾದ  ಆಕೆ ಆಗ ಬಂದು  ಬರೆದುಹೋದ ಜಯದೇವನ  ಸಂಗತಿಯನ್ನು  ತಿಳಿಸಲಾಗಿ ಪರಮಾತ್ಮನ  ಲೀಲೆಯನ್ನು ನೆನೆದು  ಪದ್ಮಾವತಿಯ ಪುಣ್ಯವನ್ನು  ಕೊಂಡಾಡಿದನಂತೆ!

ಜೊತೆಗೆ ಲಕ್ಷ್ಮಣಸೇನನ  ಅಸ್ಥಾನದಲ್ಲಿದ್ದಾಗ,  ದೊರೆಯು ಬೇಟೆಗೆ  ಕರೆದುಕೊಂಡು  ಹೋದ ಸಮಯದಲ್ಲಿ  ಅಸೂಯಾಪರಳಾದ  ಆತನ ರಾಣಿಯು  ಪದ್ಮಾವತಿಯಲ್ಲಿ  ಜಯದೇವನು ಮರಣ  ಹೊಂದಿದನೆಂದು  ಸುಳ್ಳು ಹೇಳುತ್ತಾಳೆ.  ಇದರಿಂದ ನೊಂದ  ಪದ್ಮಾವತಿ ಕೆಳಕ್ಕೆ  ಬಿದ್ದು ಸಾವಿಗೀಡಾಗುತ್ತಾಳೆ.  ಹಿಂತಿರುಗಿ ಬಂದ  ಜಯದೇವ ವಿಷಯ  ತಿಳಿದು, ಈರ್ವರನ್ನೂ  ಸಮಾಧಾನಿಸಿ ಆ  ಅಷ್ಟಪದಿಯನ್ನು  ಹಾಡಿ ಆಕೆಯನ್ನು  ಜೀವಂತಳನ್ನಾಗಿಸಿದ  ಎನ್ನಲಾಗಿದೆ.  ಆದ್ದರಿಂದ ಸ್ವಯಂ  ಪರಮಾತ್ಮನೇ ಬಂದು  ಕೃತಿಯನ್ನು ಸ್ವೀಕರಿಸಿದ್ದರಿಂದ  ಆ ಸಾಲುಗಳ ೧೯ನೇ  ಅಷ್ಟಪದಿಯನ್ನು  ದರ್ಶನ ಅಷ್ಟಪದಿಯೆಂದು,  ಸಂಜೀವಿನಿ ಅಷ್ಟಪದಿಯೆಂದು  ಹೇಳುತ್ತಾರೆ.

ಅಷ್ಟಪದಿ ದ್ವಿಧಾತು  ಪ್ರಬಂಧ. ಅಂದರೆ  ಉದ್ಗ್ರಾಹ(ಚರಣ)  ಮತ್ತು ದ್ರುವ(  ಪಲ್ಲವಿ) ಎಂಬ  ಎರಡು ಭಾಗಗಳಿವೆ.  ಈ ರೀತಿಯ ಪ್ರಬಂಧವನ್ನು  ರಚಿಸಿರುವ್ವರಲ್ಲಿ  ಜಯದೇವನು ಮೊದಲಿಗನು.  ಸಾಕಷ್ಟು ಸಲ  ಅಂತ್ಯಪ್ರಾಸವನ್ನು  ಹೊಂದಿರುವ ಇವು  ಅಲಂಕಾರ, ಯಮಕಗಳಿಂದ  ಕೂಡಿವೆ. ಜಯದೇವನು  ಗೀತಗೋವಿಂದವನ್ನು  ಶೃಂಗಾರ ಮಹಾಕಾವ್ಯವೆಂದು  ಕರೆದುಕೊಂಡಿದ್ದಾನೆ.  ಕೆಲವೊಂದೆಡೆ  ಗೇಯಗುಣಗಳುಳ್ಳ  ಪ್ರಬಂಧವೆಂದು  ಕರೆದಿದ್ದಾನೆ.  ಆದರೆ ಮಹಾಕಾವ್ಯಗಳಿಗಿರಬೇಕಾದ  ಲಕ್ಷಣಗಳಿಲ್ಲವೆನ್ನುವುದು  ಕಾವ್ಯ ಮೀಮಾಂಸಿಗರ  ತರ್ಕ. ಅವರ ಪ್ರಕಾರ  ಇದು ಖಂಡಕಾವ್ಯ.  ಅತ್ತಭಾವಗೀತೆಯೂ  ಅ, ಇತ್ತ ನಾಟಕವೂ  ಅಲ್ಲ ಎಂಬಂತಿರುವುದು  ಇದರ ಸ್ವಾರಸ್ಯ.  ಇದೊಂದು ಗೀತ  ಪ್ರಧಾನವಾದ ಪ್ರಬಂಧರೂಪದ  ಭಾವಾತಿರೇಕದ  ವರ್ಣನಾತ್ಮಕ,  ಕಲ್ಪನಾ ಕಥಾಮೃತ.  ಒಟ್ಟಿನಲ್ಲಿ  ಗೀತಗೋವಿಂದ ಪ್ರೇಮ-ಭಕ್ತಿಗೀತೆಗಳ  ರತ್ನ. ಸುಂದರ  ಪ್ರಣಯ ಪ್ರಪಂಚ,  ಮಧುರಭಕ್ತಿಯ  ಅಪೂರ್ವ ಸಂಯೋಗ  ಚಿತ್ರಣ.

ಈ ಗೀತಗೋವಿಂದವನ್ನೇ  ಅನುಕರಿಸಿ ಕೆಲವು  ಕಾವ್ಯ, ಅಷ್ಟಪದಿಗಳು  ಸಿದ್ಧವಾದದ್ದಿದೆ.  ಉದಾ- ಹರಿಶಂಕರನ  ಗೀತರಾಘವ, ರಾಮಭಟ್ಟನ  ಗೀತಗಿರೀಶ, ವಂಶಮಣಿಯ  ಗೀತದಿಗಂಬರ,  ಪುರುಷೋತ್ತಮಮಿಶ್ರನ  ಅಭಿನವ ಗೀತಗೋವಿಂದ,  ಚತುರ್ಭುಜನ ಗೀತಗೋಪಾಲ,  ಸದಾಶಿವ ದೀಕ್ಷಿತನ  ಗೀತಸುಂದರ, ಅನಂತನಾರಾಯಣನ  ಗೀತಶಂಕರ, ತಿರುಮಲನ  ಗೀತಗೌರೀ, ಚಿಕ್ಕದೇವರಾಜ  ಒಡೆಯರ್ ಅವರ  ಗೀತಗೋಪಾಲ, ಕಳಲೆ  ನಂಜರಾಜಾನ ಗೀತಗಂಗಾಧರ,  ವೆಂಕಟಮುಖಿಯ  ತ್ಯಾಗರಾಜಾಷ್ಟಪದಿ,  ಉಪನಿಷದ್ ಬ್ರಹ್ಮೇಂದ್ರರ  ರಾಮಾಷ್ಟಪದಿ,  ಕಂಚಿ ಮಠದ ಚಂದ್ರಶೇಖರೇಂದ್ರ  ಸರಸ್ವತಿಗಳ ಶಿವಗೀತಮಾಲಿಕೆ,  ಧುಂಡಿರಾಜ ಕವಿಯ  ಷಾಹಾವಿಲಾಸಗೀತ..ಹೀಗೆ.

ಆದರೆ, ಗೀತಗೋವಿಂದವು  ಜಯದೇವ ಕವಿಯ  ಅಂತರಾತ್ಮದ ಗೀತೆಯಾಗಿರುವುದರಿಂದಲೋ  ಏನೋ, ಪರಮಾತ್ಮನ  ಕುರಿತಾಗಿ ಪ್ರಣಯಲೀಲೆ,  ಮಿಲನದ ನಿರೂಪಣೆಯಿರುವ  ಮತ್ಯಾವ ಕಾವ್ಯವೂ  ಇಷ್ಟೊಂದು ಸ್ವಾರಸ್ಯವಾಗಿಲ್ಲ.  ಇದರಲ್ಲಿರುವ  ಸಂಗೀತದ ಗುಣ,  ಪರಮಾತ್ಮನ ಧ್ಯಾನ,  ಶೃಂಗಾರ ಸಾರ  ಈ ಮೂರು ಗುಣಗಳು  ಮತ್ತೆಲ್ಲಾ ಕಾವ್ಯಗಳಿಗಿಂತ  ಜನಪ್ರಿಯವಾಗಿಸುವಲ್ಲಿ,  ಹೆಗ್ಗಳಿಕೆ ಪಡೆಯುವಲ್ಲಿ  ಕಾರಣವೆನಿಸಿವೆ.  ಜೊತೆಗೆ ಸಂಬಂಧಿಸಿದ  ಒಂದಷ್ಟು ಪವಾಡಸದೃಶ  ಕಥೆಗಳೂ ಮಹಿಮೆಯನ್ನು  ಹೆಚ್ಚು ಮಾಡಿವೆ.

ಪರಮಾತ್ಮನಲ್ಲಿ  ಭಕ್ತನು ಇಟ್ಟಿರುವ  ಪ್ರೀತಿ-ನಂಬಿಕೆ-ಭಕ್ತಿ,  ಮಧುಮಾಸ, ಯಮುನಾತೀರ,  ಬೃಂದಾವನ, ಶೃಂಗಾರ  ರಸ, ರಸಿಕತೆ  ಇಲ್ಲಿನ ಕಥಾವಸ್ತು.  ಆದರೂ ಇದರಲ್ಲಿ  ಕಥೆ, ಕಥನಗಳೇನೂ  ಇಲ್ಲ. ವಿಶಿಷ್ಟ  ಪ್ರಸಂಗ ವರ್ಣನೆಯಿಲ್ಲ.  ಬ್ರಹ್ಮವೈವರ್ತ  ಪುರಾಣದಲ್ಲಿ  ಬರುವ ಒಂದು ಪ್ರಸಂಗವನ್ನು  ಆಧರಿಸಿ ಇಡೀ  ಕಾವ್ಯ ರಚಿತವಾಗಿರಬಹುದೆಂದು  ಊಹೆ. ಇಲ್ಲಿ  ರಾಧೆ, ಕೃಷ್ಣ,  ಸಖಿಯ ಪಾತ್ರಗಳಿದ್ದು  ಲಾಲಿತ್ಯ, ಸರಳತೆಯುಳ್ಳ  ಮಾನವ ಸಹಜ ಭಾವನಿರೂಪಣೆಯಿದೆ.

ಕಾವ್ಯದ ನಾಯಕ  ಕೃಷ್ಣ. ಅವನ  ಸ್ವಭಾವ ಧೀರ  ಲಲಿತ. ಕಾವ್ಯದ  ಕ್ರಿಯೆ ಕೃಷ್ಣನ  ಶುದ್ಧ ಶೃಂಗಾರ-ಪ್ರಣಯ.  ಆದರೂ ಅಷ್ಟವಿಧ  ನಾಯಿಕೆಯರ, ಚತುರ್ವಿಧ  ನಾಯಕರ ಲಕ್ಷಣಗಳು  ಹೇರಳವಾಗಿ ಕಂಡುಬರುತ್ತವೆ.  ಕೆಲವು ಪದಗಳಲ್ಲಿ  ಅಶ್ಲೀಲವೆನಿಸುವ  ಭಾವಗಳು ಎದುರಾದರೂ,  ಕಾಮಪ್ರಚೋದನೆ  ಈ ಕಾವ್ಯದ ಉದ್ದೇಶ  ಅಲ್ಲ. ಇಲ್ಲಿನದು  ಇಂದ್ರಿಯಗ್ರಾಹ್ಯ,  ಕ್ಷುದ್ರ, ಸ್ವಾರ್ಥಪರ,  ಸುಖಾಪೇಕ್ಷಿ  ಲೈಂಗಿಕವಿಜ್ಞಾನದ  ಕೀಳು ಪ್ರೇಮವಲ್ಲ.  ಸುಖದಾಂಪತ್ಯಸಾಧನೆಯ  ಬಿಟ್ಟಿ ಸಲಹೆಗಳಿಲ್ಲಿಲ್ಲ.   ಕೃಷ್ಣನಿಗಾಗಿ  ರಾಧೆ ಕಾಯುವುದು,  ಆಪ್ತಸಖಿಯು ಕೃಷ್ಣನು  ಗೋಪಿಕೆಯರೊಂದಿಗೆ  ವಿಹರಿಸುತ್ತಿರುವ  ಬಗ್ಗೆ ಹೇಳುವುದು,  ರಾಧೆಯ ಪರಿತಾಪ,  ರಾಧೆಯ ಸಂತೈಕೆಗೆ  ಕೃಷ್ಣನು ಸಖಿಯಲ್ಲಿ  ಬೇಡುವುದು, ಆಕೆಯ  ವಿವಿಧ ಅವಸ್ಥೆಗಳ  ವಿವರಣೆ, ಕೃಷ್ಣನ  ಮೇಲೆ ರಾಧೆಯ  ಆಕ್ರೋಶ, ಪರಸ್ಪರ  ಕ್ಷಮಾಪಣೆ, ವಿಲಾಪ,  ರಾಧಾಕೃಷ್ಣರ  ಸಂಗಮ ಈ ರೀತಿಯಾಗಿ  ಹೃದಯಂಗಮ, ಮನಃಸ್ಪರ್ಶಿ,  ರೋಮಾಂಚನಕಾರಿ  ಸನ್ನಿವೇಶ. ಪರಸ್ಪರ  ಅನುರೂಪವಾದ ಮಹಿಮಾಮಯ  ವ್ಯಕ್ತಿಗಳ ಅವಿನಾಭಾವ  ಸಂಯೋಗ, ಪ್ರೇಮಾರಾಧನೆ.  ಸಂಪೂರ್ಣ ಲಯ  ಹೊಂದುವ ಅಲೌಕಿಕ,  ಅತಿಮಾನುಷ, ಅನಿರ್ದಿಷ್ಟ  ಸೂಕ್ಷ್ಮ ಪ್ರೇಮದ  ಚಿತ್ರಣ.

ಜಯದೇವ ಕವಿಯೇ  ಈ ಗೀತೆಗಳಿಗೆ  ಆ ಕಾಲದ ರಾಗತಾಳಗಳನ್ನು  ಪ್ರಯೋಗಿಸಿದ್ದರೂ,  ಅವ್ಯಾವುವೂ ಚಾಲ್ತಿಯಲ್ಲಿಲ್ಲ.  ನಂತರ ಗೀತಗೋವಿಂದಕ್ಕೆ  ರಾಗತಾಳಗಳ ಗಾನಕ್ರಮ  ವ್ಯವಸ್ಥೆ ಮಾಡಿದವನು  ಮೇವಾಡದ ರಾಜ  ರಾಣಾಕುಂಭ. ಜಯದೇವನಿಗೂ  ಇವನಿಗೂ ೨೦೦  ವರ್ಷಗಳ ಅಂತರ.  ಇವನ ಪದ್ಧತಿ  ಹಿಂದೂಸ್ಥಾನಿ  ಸಂಗೀತಕ್ಕೆ ಒಪ್ಪುವ  ಕ್ರಮವಾದರೆ,  ತಿರುಮಲರಾಜಪಟ್ಟಣದ  ರಾಮುಡು ಭಾಗವತರು  ಕರ್ನಾಟಕ ಸಂಗೀತಕ್ಕೊಪ್ಪೂವ  ಸ್ವರೂಪ ಅಳವಡಿಸಿದರು.  ಈಗ, ಉತ್ತರ ಭಾರತದಲ್ಲಿ  ದೇಶೀಯ ರಾಗದಲ್ಲಿ  ಹಾಡುವ ವಾಡಿಕೆಯಿದ್ದರೆ,  ಕೆಲವು ಕಲಾವಿದರು  ರೂಢಿಯಲ್ಲಿರುವ  ಮತ್ತು ತಮ್ಮ  ಕಲ್ಪನಾಶಕ್ತಿಗನುಗುಣವಾಗಿ  ಹಾಡಿ ಅಭಿನಯಿಸುತ್ತಾರೆ.

ಅಷ್ಟಪದಿಯು ನೃತ್ಯನಾಟಕಕ್ಕೆ  ಹೆಚ್ಚಾಗಿ ಒಪ್ಪುವಂತಹ  ಕಾವ್ಯ. ಆದರೂ  ಇದರಲ್ಲಿನ ಉತ್ಕೃಷ್ಟ  ಮಟ್ಟದ ಛಂದೋರಚನೆಯು  ಸಂಗೀತ ಮತ್ತು  ನೃತ್ಯದ ಎಲ್ಲಾ  ಪ್ರಕಾರಗಳಿಗೆ  ಅಡಕಗೊಳ್ಳುವಂತಿದ್ದು,  ಎಲ್ಲಾ ರೀತಿಯ  ನೃತ್ಯಗಳಲ್ಲೂ  ಇದನ್ನು ಆಕರ್ಷಕವಾಗಿ  ಸಂಯೋಜಿಸಬಹುದು.  ಒಡಿಸ್ಸಿ ನೃತ್ಯ  ಪ್ರಕಾರದಲ್ಲಿ  ಅಷ್ಟಪದಿಯೇ ಪ್ರಮುಖ  ನೃತ್ಯ. ಇಂದಿಗೂ  ಪೂರಿ ಜಗನ್ನಾಥ  ದೇವಾಲಯದಲ್ಲಿ  ಪ್ರತೀದಿನ ಸಂಜೆ  ಗೀತಗೋವಿಂದವನ್ನು  ಶಾಸ್ತ್ರವತ್ತಾಗಿ  ಹಾಡಿ ಮಂಗಳಾರತಿಯೆತ್ತುವ,  ಎರಡು ಅಷ್ಟಪದಿಗಳನ್ನಾದರೂ  ಹಾಡಿ ಅಭಿನಯಿಸುವ  ಪದ್ಧತಿಯಿದೆ.  ವೈಷ್ಣವ ಕ್ಷೇತ್ರಗಳಲ್ಲಿ  ಮಾರ್ಗಶೀರ್ಷ  ಮಾಸದಲ್ಲಿ ನಡೆಯುವ  ರಾಧಾಮಾಧವ ವಿವಾಹ  ಉತ್ಸವಗಳಲ್ಲಿ  ಅಷ್ಟಪದಿಗಳಗೆ  ಮುಖ್ಯ ಸ್ಥಾನವಿದೆ.  ಕಥಕ್ಕಳಿ, ಕೃಷ್ಣನಾಟಕ,  ಸೋಪಾನ ಸಂಗೀತಗಳಿಗೆ  ಇದರ ಪ್ರಭಾವ  ಬಹಳಷ್ಟಿದೆ.  ಮೈಸೂರು ಶೈಲಿಯ  ಭರತನಾಟ್ಯಗಳಲ್ಲಿ  ಅಷ್ಟಪದಿಗಳ ಅಭಿನಯಕ್ಕೆ  ಮೇರು ಪಂಕ್ತಿ.

ಸಂಸ್ಕೃತವನ್ನು  ಅರಿಯದವರಿಗೂ  ಆದರಣಿಯವಾಗಬಲ್ಲ  ಮಾತುಗಳ ಜೋಡಣೆಯ  ಮಾಧುರ್ಯ ಇಲ್ಲಿನದು.  ಭಾಷೆ ಬರದವನೂ  ಭಾವಪರವಶನಾಗಬಲ್ಲ  ಎನ್ನುತ್ತಾರೆ  ತ. ಸು. ಶಾಮರಾಯರು.  ಚಂದ್ರದತ್ತ ಎಂಬವರು  ಭಕ್ತಿಮಾಲಾ ಎಂಬ  ಸಂಸ್ಕೃತ ಗ್ರಂಥದಲ್ಲಿ  ಜಯದೇವನ ಜೀವನ  ಚರಿತ್ರೆಯನ್ನು  ಬರೆದಿದ್ದಾರೆ.  ಕನ್ನಡದಲ್ಲಿ  ಪ್ರೊ| ಎಸ್.ಕೆ.ರಾಮಚಂದ್ರರಾವ್  ಅವರ ಪುಟ್ಟ ಪುಸ್ತಕಗಳನ್ನೂ  ಒಳಗೊಂಡಂತೆ ಹಲವು  ನೃತ್ಯ-ಸಂಗೀತ  ಸಾಹಿತ್ಯ ಸಂಬಂಧಿ  ಪುಸ್ತಕಗಳು ನಮ್ಮೆದುರಿಗಿವೆ.  ಜೊತೆಗೆ ಸಾಕಷ್ಟು  ಅವತರಣಿಕೆಗಳು,  ಅನುವಾದಗಳು ಎಲ್ಲ  ಭಾಷೆಗಳಲ್ಲೂ  ಬಂದಿವೆ. ಬಹುಷಃ  ಇದನ್ನು ಓದದೇ,  ಅಭಿನಯಿಸದೇ ಇರುವ  ಯಾವ ಶಾಸ್ತ್ರೀಯ  ಕಲಾವಿದನೂ ಇರಲು  ಸಾಧ್ಯವಿಲ್ಲವೇನೋ  ! ಆದರೆ ಅಭಿನಯ  ಕರಗತ ಮಾಡಿಕೊಳ್ಳಲು  ಹಲವಾರು ವರ್ಷಗಳ  ಸಾಧನೆ ಅತ್ಯಗತ್ಯ.  ಹಾಗಾಗಿ ಕಲೆಯಲ್ಲಿ  ಪರಿಪಕ್ವತೆಯನ್ನು  ಪಡೆದ ಶುದ್ಧ  ಮನಸ್ಸಿನ ಕಲಾವಿದರು  ಮಾತ್ರ ಅಷ್ಟಪದಿಗಳಿಗೆ  ಜೀವ ತುಂಬಬಲ್ಲರು.