ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನೂಪುರ ಪತ್ರಿಕೆಗೆ ಸಂಬಂಧಿಸಿದ ಪ್ರಕಟಣೆಗಳನ್ನು ಈ ಅಂಕಣದಲ್ಲಿ ಕಾಣಬಹುದು.

‘ ರಾಜ್ಯಮಟ್ಟದ ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ ಪ್ರಶಸ್ತಿ ಶ್ರೀಮತಿ ಪ್ರತಿಭಾ ಸಾಮಗ’ ಇವರಿಗೆ

Tuesday, January 31st, 2012
‘ ರಾಜ್ಯಮಟ್ಟದ ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ ಪ್ರಶಸ್ತಿ   ಶ್ರೀಮತಿ ಪ್ರತಿಭಾ ಸಾಮಗ’ ಇವರಿಗೆ

ನೂಪುರ ಭ್ರಮರಿ’ ದ್ವೈಮಾಸಿಕ ಮತ್ತು ಪ್ರತಿಷ್ಠಾನ(ರಿ.) ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ಮತ್ತು ವಿಮರ್ಶಾ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ’ ಪ್ರಶಸ್ತಿಯನ್ನು ೨೦೧೦ರಲ್ಲಿ ಆರಂಭಿಸಿದ್ದು ತಮಗೆ ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ೨೦೧೧ನೇ ಸಾಲಿನ ಪ್ರಶಸ್ತಿಗೆ ಡಾ. ಶತಾವಧಾನಿ ಗಣೇಶ್ ಅವರ ಅಧ್ಯಕ್ಷತೆಯ ಪ್ರಶಸ್ತಿ ನಿರ್ಣಾಯಕ ಸಮಿತಿಯು ವಿಮರ್ಶೆಗಳ ಮೌಲ್ಯ, ಉದ್ದೇಶ, ಸ್ವರೂಪ, ಗುಣಮಟ್ಟವನ್ನಾಧರಿಸಿ ಮತ್ತು ನೃತ್ಯಕ್ಷೇತ್ರದ ವಿಮರ್ಶೆಗೆ ಈವರೆಗೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಉಡುಪಿಯ ವಿದುಷಿ [...]

Karnataka State level one day Dance Research Workshop/paper presentation

Saturday, December 3rd, 2011

Karnataka State level one day Dance Research Workshop/Seminar
Topic : “Dance research : Process and challenges”
English version- workshop and paper presentation details
ಕಮ್ಮಟದ ಕುರಿತ ವಿವರಣೆಗಳ ಕನ್ನಡ ಪ್ರತಿ

A one day dance research workshop/seminar will be organised by Noopura Bhramari Research Foundation (R.) and Bi-Monthly dance magazine in collaboration with Karnataka Research Association and Karnataka Developmental Board [...]

ಸಂಶೋಧನಾ ಸಂಗ್ರಹ ವೇದಿಕೆ

Tuesday, May 31st, 2011

Noopura Bhramari, a dance magazine, is planning to bring out an information book of dance researchers. Those who have completed/ongoing Ph.D, fellowship, M. Phil or dissertations under different universities related to dance can send their resume along with relevant details to the Editor, Noopura Bhramari, Sannidhya Printers and publishers, Dechoor Road, near Ashwatthakatte, Madikeri, Kodagu [...]

“ನೃತ್ಯ ಮಾರ್ಗ ಮುಕುರ” ಕೃತಿ

Tuesday, May 17th, 2011

ಮನೋರಮಾ ಬಿ. ಎನ್ ಅವರ ನೃತ್ಯಸಂವೇದನೆಯ ‘ಮುದ್ರಾರ್ಣವ’- ಹಸ್ತಮುದ್ರೆಗಳ ಸಂಶೋಧನಾ ಕೃತಿಯ ತರುವಾಯ ‘ಶ್ರೀ ಸಾನಿಧ್ಯ ಪ್ರಕಾಶನ’ದಿಂದ ಅನಾವರಣಗೊಂಡ ಮತ್ತೊಂದು ನೃತ್ಯ ಸಂವೇದನೆಯ ಕೃತಿ ‘ನೃತ್ಯಮಾರ್ಗ ಮುಕುರ’. ಭರತನಾಟ್ಯದ ಮಾರ್ಗಪದ್ಧತಿಯ ಮಜಲುಗಳನ್ನು, ನೃತ್ಯಾಂಗಗಳನ್ನು ದಾಖಲಿಸುವ, ಸಮಗ್ರ ಸಂಕ್ಷಿಪ್ತ ವಿವರವನ್ನೀಯುವ ೧೨೫ ಪುಟಗಳ ಈ ಕೃತಿ, ಆಸಕ್ತ ಸಹೃದಯರ ಪಾಲಿಗೆ ಸಾಕಲ್ಯ ದೃಷ್ಟಿಯ ಅಧ್ಯಯನಸಾಮಗ್ರಿ. ಪುಸ್ತಕದ ಬೆಲೆ: ೧೨೫ರೂ.
ಭರತನಾಟ್ಯ-ಭರತನ ನಾಟ್ಯಶಾಸ್ತ್ರ ಪ್ರಸ್ತುತ ಸಂದರ್ಭದಲ್ಲಿ ಗೊಂದಲವನ್ನು ಸೃಷ್ಟಿಸಿಕೊಂಡ ಪಾರಿಭಾಷಿಕ ಪದಗಳಾಗಿ ಮಾರ್ಪಟ್ಟಿವೆ. ‘ಇಂದಿನ’ ಭರತನಾಟ್ಯ ಎಂಬ ನೃತ್ಯಪದ್ಧತಿಗೂ‘ಅಂದಿನ’ ಭರತನ ನಾಟ್ಯಶಾಸ್ತ್ರಗ್ರಂಥಕ್ಕೂ [...]

ವಿಮರ್ಶೆಯ ಪ್ರತ್ಯೇಕ ಅಂಕಣ-ನೃತ್ಯ/ನಾಟ್ಯ ಸಂಬಂಧೀ ಫೋಟೋ ಆಹ್ವಾನ

Thursday, March 17th, 2011

ವಿಮರ್ಶೆಯ ಕುರಿತಾಗಿ ಪ್ರತ್ಯೇಕ ಅಂಕಣವು ನೂಪುರ ಭ್ರಮರಿಯ ವೆಬ್‌ಸೈಟ್‌ನಲ್ಲಿ ಅನಾವರಣಗೊಂಡಿದ್ದು ೨೦೧೧ನೇ ಸಾಲಿನ ವಿಮರ್ಶೆಗಳನ್ನು( ಯಾವುದೇ ಪತ್ರಿಕೆ-ನಿಯತಕಾಲಿಕ-ವೆಬ್ ಪತ್ರಿಕೆ ಇತ್ಯಾದಿಗಳಲ್ಲಿ ಪ್ರಕಟಿತ ಅಥವಾ ಅಪ್ರಕಟಿತ ವಿಮರ್ಶೆ, ವರದಿ)ಲೇಖಕರು ಕಳಿಸಬಹುದಾಗಿದೆ. ಈ ಮೂಲಕ ವಿಮರ್ಶಾ ಕ್ಷೇತ್ರಕ್ಕೆ ಮತ್ತು ಅದರ ಪ್ರಶಸ್ತಿಗೆ ಹೆಚ್ಚಿನ ಉತ್ತೇಜನ ಮತ್ತು ಪಾರದರ್ಶಕತೆಯು ಒದಗಲಿದ್ದು ಮುಂದಿನ ಸಾಲಿನ ಪ್ರಶಸ್ತಿಯನ್ನು ಆಯ್ಕೆ ಮಾಡುವಲ್ಲಿ ಓದುಗರೂ ನಮ್ಮೊಂದಿಗೆ ಜೊತೆಯಾಗಲಿದ್ದಾರೆ. ಅದಕ್ಕೆ ಈಗಲಿಂದಲೇ ವೇದಿಕೆಯು ರೂಪುಗೊಳ್ಳುತ್ತಿದ್ದು; ಆಸಕ್ತರು ನ್ನು ಸಂಪರ್ಕಿಸಬಹುದು.
ಅಂತೆಯೇ ಆಸಕ್ತರು ಉತ್ತಮ ನೃತ್ಯ/ನಾಟ್ಯ ಸಂಬಂಧೀ ಫೋಟೋಗಳಿದ್ದರೆ ಮುಖಪುಟವಿನ್ಯಾಸಕ್ಕಾಗಿ [...]

ಸಂವತ್ಸರಾಭಿನಂದನ-ಪಂಚಮದ ಪಲುಕಿಗೆ ಶ್ರುತಿಯಾಗಿ… ಮಾರ್ಗಕ್ಕೆ ಮುಕುರವಾಗಿ..

Monday, February 14th, 2011
ಸಂವತ್ಸರಾಭಿನಂದನ-ಪಂಚಮದ ಪಲುಕಿಗೆ ಶ್ರುತಿಯಾಗಿ…  ಮಾರ್ಗಕ್ಕೆ ಮುಕುರವಾಗಿ..

೧೩ ಫೆಬ್ರವರಿ ೨೦೧೧ ರಂದು ‘ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರು.
ನೂಪುರ ಭ್ರಮರಿ ಐದರ ಹೆಜ್ಜೆಗಳಿಗೆ ಅಡಿಯಿಡುವ ಸಂವತ್ಸರಾಭಿನಂದನ ಸಂಭ್ರಮ ನಿಜಕ್ಕೂ ಒಂದು ಆಪ್ತ ಮತ್ತು ಅಷ್ಟೇ ಆಕಸ್ಮಿಕವೂ ಕೂಡಾ. ಹಾಗೆ ನೊಡಿದರೆ ಬೆಂಗಳೂರಿನಂತಹ ಮಹಾ ಸಮುದ್ರದಲ್ಲಿ ಕಾರ್ಯಕ್ರಮ ಸಂಘಟಿಸುವ ಇರಾದೆ, ಧೈರ್ಯ ಮೊದಲು ಅಷ್ಟಾಗಿ ಇರಲಿಲ್ಲ. ಆದರೆ ಮನದೊಳಡಗಿದ್ದ ಸಂಭ್ರಮವನ್ನು ಹಂಚಿಕೊಳ್ಳುವ ಕಂಡೂ ಕಾಣದಂತಿದ್ದ ಅಭೀಪ್ಸೆಗೆ ಇಂಬನ್ನಿತ್ತವರು ದೈವಬಲ, ಹಿರಿಯರ ಆಶೀರ್ವಾದ, ನಿಕಟವರ್ತಿ ಗೆಳೆಯರು. ಜೊತೆಗೆ ನೃತ್ಯ ಸಂವೇದನೆಗಳಿಗೆ [...]

ನೂಪುರ ಭ್ರಮರಿ ಐದನೇ ಸಂವತ್ಸರಾಭಿನಂದನ

Friday, February 4th, 2011
ನೂಪುರ ಭ್ರಮರಿ ಐದನೇ ಸಂವತ್ಸರಾಭಿನಂದನ

ನಮಸ್ತೆ
ಆತ್ಮೀಯರೇ,
ನೂಪುರ ಭ್ರಮರಿ ವಿಶೇಷ ಸಂಚಿಕೆ, ಕಥಾ ಸಂಕಲನ, ನೃತ್ಯಮಾರ್ಗ ಮುಕುರ-ನೃತ್ಯ ಕೃತಿ ಬಿಡುಗಡೆ, ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ.ಭರತನಾಟ್ಯ ಕಾರ್ಯಕ್ರಮ
ಸ್ಥಳ: ನಯನ ಸಭಾಂಗಣ, ಜೆ.ಸಿ.ರಸ್ತೆ, ಕನಡ ಭವನ, ಬೆಂಗಳೂರು
ದಿನಾಂಕ: 13 ಫೆಬ್ರವರಿ, 2011, ಸಂಜೆ ೪ ಗಂಟೆ.
ನೃತ್ಯ ಮಾರ್ಗ ಮುಕುರ’ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆಗಳ ದಾಖಲೆಯುಳ್ಳ ಅಧ್ಯಯನ ಕೃತಿ ಅನಾವರಣ
ನೂಪುರ ಭ್ರಮರಿಯ ಸಂಪಾದಕಿ, ಕಲಾವಿದೆ ಮನೋರಮಾ ಬಿ. ಎನ್ ಅವರ ನೃತ್ಯಸಂವೇದನೆಯ ‘ಮುದ್ರಾರ್ಣವ’-ಹಸ್ತಮುದ್ರೆಗಳ ಸಂಶೋಧನಾ ಕೃತಿಯ ತರುವಾಯ ಶ್ರೀ ಸಾನಿಧ್ಯ ಪ್ರಕಾಶನದಿಂದ [...]

ನೃತ್ಯ ವಿಮರ್ಶಕರಿಗಾಗಿ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆ

Thursday, December 30th, 2010

‘ನೂಪುರ ಭ್ರಮರಿ’ಯು ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಾಲಿನಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆಯನ್ನು ಆಯೋಜಿಸಿದೆ. ಈಗಾಗಲೇ 2010ನೇ ಸಾಲಿನಲ್ಲಿ (ಜನವರಿ-ಡಿಸೆಂಬರ್) ರಾಜ್ಯದ ಕನ್ನಡ/ಇಂಗ್ಲೀಷ್ ಪತ್ರಿಕೆಗಳು/ನಿಯತಕಾಲಿಕೆಗಳಲ್ಲಿ ಪ್ರಕಟವಾದ ನೃತ್ಯ/ನಾಟ್ಯ ಸಂಬಂಧೀ ಪ್ರದರ್ಶನ/ರಂಗಪ್ರವೇಶ/ ಸಮ್ಮೇಳನ/ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳಿಸಬಹುದಾಗಿದೆ. ಓರ್ವ ಲೇಖಕ ತಲಾ 3 ವಿಮರ್ಶೆಗಳನ್ನು ಕಳುಹಿಸಲು ಅವಕಾಶವಿದ್ದು ; ಪ್ರತ್ಯೇಕ ಹಾಳೆಯಲ್ಲಿ ಸ್ವವಿವರ ಮತ್ತು ವಿಮರ್ಶೆಯ ವಿವರಗಳನ್ನು ಬರೆದು ಲಗತ್ತಿಸಬೇಕು.
[...]

ನೀವಿಷ್ಟಪಡುವ ಕಲಾವಿದರ ಪರಿಚಯ

Friday, November 12th, 2010

ನಿಮಗಿಷ್ಟವಾದ ಹಿರಿ-ಕಿರಿಯ ಕಲಾವಿದ ಅಥವಾ ಕಲಾವಿದೆಯ ಸೊಗಸು, ಕೊಡುಗೆ, ಮಾದರಿ, ವಿಶೇಷತೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆಯೇ? ಹಾಗಿದ್ದರೆ ತಡವೇಕೆ. ನೂಪುರ ಭ್ರಮರಿಯ ‘ಲೋಕ ಭ್ರಮರಿ’ ಅಂಕಣಕ್ಕೆ ಬರೆಯಿರಿ; ಅಂಕಣವನ್ನು ಸಮೃದ್ಧಗೊಳಿಸಿ. ನೃತ್ಯ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯ ಹೊಂದಿರುವ / ಹೊಂದಲಿರುವ, ಭರತನಾಟ್ಯ, ಯಕ್ಷಗಾನ, ಒಡಿಸ್ಸಿ, ಕಥಕ್, ಮಣಿಪುರಿ, ಕೂಚಿಪುಡಿ, ಮೋಹಿನಿಯಾಟ್ಟಂ, ಕಥಕಳಿಯಾದಿಯಾಗಿ ಶಾಸ್ತ್ರೀಯ, ಜನಪದ ನರ್ತನ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ನೀವಿಷ್ಟಪಡುವ ಕಲಾವಿದರ ಪರಿಚಯ, ಮಾಹಿತಿ, ನಿಮಗಿಷ್ಟವಾದ ಪಾತ್ರ-ಸನ್ನಿವೇಶ-ಘಟನೆಗಳನ್ನು ಬರೆದು ಕಳಿಸಿ. ತಕ್ಕುದಾದ ಫೋಟೋವಿದ್ದರೆ ಸೂಕ್ತ. ಆದರೊಂದು ವಿನಂತಿ. [...]

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

Wednesday, February 3rd, 2010
‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ನೂಪುರದ ಬಳಗಕ್ಕೆ ಅಂದು ಕಣ್ತುಂಬಿಕೊಳ್ಳುವ ಹಬ್ಬ. ಇನ್ನೇನು ವಾರ್ಷಿಕ ಸಂಭ್ರಮಕ್ಕೆ ಎರಡು ತಿಂಗಳಿರುವಾಗಲೇ, ಮೂರನೇ ವರ್ಷಾಂತ್ಯವಾಗುವುದರೊಳಗೆ ಸಂತಸದ ಸಂದರ್ಭಗಳಿಗೆ ಮುನ್ಸೂಚನೆಯೇನೋ ಎಂಬಂತೆ ವಿದ್ವತ್ಪೂರ್ಣ ಕ್ಷಣಗಳನ್ನು ಬರಮಾಡಿಕೊಂಡ ಸಾಂಗತ್ಯ. ನವೆಂಬರ್ ೨೨. ಸಂಜೆ ೪.೩೦. ವಿಮರ್ಶಕ, ಲೇಖಕ ವಿ.ಬಿ. ಅರ್ತಿಕಜೆ, ಹಾಸ್ಯ ಸಾಹಿತಿ ಕು.ಗೋ, ನಾಟ್ಯಾಚಾರ್ಯರುಗಳಾದ ಕಮಲಾಕ್ಷಾಚಾರ್, ದೀಪಕ್ ಕುಮಾರ್, ಉಜಿರೆ ಕಾಲೇಜಿನ ಕಲಾಸಕ್ತ ಉಪನ್ಯಾಸಕರು, ಕಲಾರಸಿಕ ವಿದ್ಯಾರ್ಥಿಗಳು, ಊರಿನ ಹೆಮ್ಮೆಯ ನಾಗರಿಕರು ಮುಂತಾಗಿ; ಕೆಲವೇ ಕ್ಷಣಗಳ ಅವಧಿಯಲ್ಲಿ ಉಜಿರೆಯ ಶ್ರೀ [...]