ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ ( ಹೆಜ್ಜೆ : 13 )
Monday, August 15th, 2011
೧೭೧೮ರಲ್ಲಿ ತಿರುನಲ್ವೇಲಿಯ ಕುಟ್ರಾಲಂ ಗ್ರಾಮದ ತಿರಿಕ್ಕುಡ ರಾಸಪ್ಪ ಕವಿರಾಯರ್ ತಿರುಕೂಡನಾಥ ದೇವರ ಬಗ್ಗೆ ಬರೆದ ದೇವದಾಸಿಯರಷ್ಟೇ ಮಾಡುತ್ತಿದ್ದ ಏಕವ್ಯಕ್ತಿ ಅಭಿನಯದ ಕುಟ್ರಾಲ ಕೊರವಂಜಿಗೆ ಹೊಸ ಸ್ಪರ್ಶವನ್ನಿತ್ತದ್ದು ಅವರು ತೋರಿದ ಕೈಮರ. ತಮಿಳ್ನಾಡಿನ ೧೮ನೇ ಶತಮಾನದ ಸಂಗೀತ ಪದ್ಧತಿ ಇದಾಗಿದ್ದರೂ ಮೊದಲೆಲ್ಲಾ ಕುಟ್ರಾಲಂನ ದೇವಸ್ಥಾನಗಳಲ್ಲಿ, ಬೃಹದೀಶ್ವರ ದೇವಾಲಯದ ನವರಾತ್ರಿ ಉತ್ಸವದಲ್ಲಿ ಕೊರವಂಜಿಯನ್ನು ಪ್ರದರ್ಶಿಸಲಾಗುತ್ತಿದ್ದರೂ, ದೇವದಾಸಿ ಕಾಯ್ದೆ ಬಂದ ನಂತರ ಕುಂಠಿತವಾಯಿತು. ಪುನಃ ಕೊರವಂಜಿಯನ್ನು ಪುರುಜ್ಜೀವನಗೊಳಿಸಿದ್ದು ರುಕ್ಮಿಣೀ ೧೯೪೪ರಲ್ಲಿ. ‘ಕೊರವಂಜಿಯನ್ನು ಅಷ್ಟಾಗಿ ಯಾರು ಗಮನಿಸದಿದ್ದ ಕಾಲಕ್ಕೆ ; ಗೌರವದಿಂದ ನೋಡುವಂತೆ [...]







