ಅಂಕಣಗಳು

ನೂಪುರ ಪತ್ರಿಕೆ

ಆರನೇ ವರ್ಷೋತ್ಸವದ ವಿಶೇಷ ಸಂಚಿಕೆ : ಮಾಘ ಫಾಲ್ಗುಣ (ಜನವರಿ -ಫೆಬ್ರವರಿ ೨೦೧೨) -ಶಿಶಿರ ಶೃಂಗಾರ

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಕಲಾ ಜಗತ್ತಿನ ಸಾರ್ವಭೌಮರನ್ನು, ಅಸಾಧಾರಣ ಕೊಡುಗೆಗಳನ್ನಿತ್ತ, ಅವಿಸ್ಮರಣಿಯರೆನಿಸಿದ ಮಹಾನ್ ವ್ಯಕ್ತಿತ್ವಗಳನ್ನು, ನೆನಪು ಮಾಡಿಕೊಳ್ಳುವ ಅಂಕಣ. ಆ ಮೂಲಕ ನಮ್ಮ ಹಿಂದಿನ ಹೆಜ್ಜೆಗಳನ್ನು ಮತ್ತೊಮ್ಮೆ, ಮಗದೊಮ್ಮೆ ಹಿಂತಿರುಗಿ ನೋಡಿ ಅವಲೋಕಿಸುವ, ನಮ್ಮನ್ನು ನಾವು ನೋಡಿಕೊಳ್ಳುವ, ಅರಿಯುವ ಪ್ರಯತ್ನ. ಹಾಗಾಗಿಯೇ ಇದು ದರ್ಪಣ.
ಕಲಾ ಜಗತ್ತಿನ ಕಥೆಗಳಿದ್ದರೆ ನಮಗೆ ಬರೆದು ಕಳಿಸಿ. ನೀವು ಕಂಡುಕೊಂಡ ಆಯಾಮಗಳನ್ನು ಕುಳಿತು ಮೆಲುಕು ಹಾಕೋಣ. ನಿಮ್ಮ ಸಾಲುಗಳು ನೂಪುರದ ನೆನಪಿಗೆ ತೋರಣವಾಗಲಿ.
It is a column for biographies of great artists. Here the life histories of the artists will be discussed in detail; so that let us know their specialties, drives to take initiatives, creative attitudes, motives, beliefs and understand our way to walk. Since 5 years we are remembering great legend Rukmini Devi Arundale ; and shortly the story is getting conclusion within this year.
Let us have more stories of real heroes of art field. Write to us.

ಅನಭಿಷಿಕ್ತ ರಾಣಿ : ರುಕ್ಮಿಣೀ ದೇವಿ ( ಹೇಮಂತ ಋತು ಗಾನ ೨೦೦೯)

Tuesday, December 15th, 2009
ಅನಭಿಷಿಕ್ತ ರಾಣಿ : ರುಕ್ಮಿಣೀ ದೇವಿ ( ಹೇಮಂತ ಋತು ಗಾನ ೨೦೦೯)

ಆಲದ ಮರ ಬೆಳೆಯಲು ನಿಧಾನಗತಿ ಅನುಸರಿಸಿದರೂ ತಳವೂರಿ ಅಗಾಧವಾಗಿ ಹರಡುತ್ತದೆ. ಅಂತೆಯೇ ಗುರುಕುಲ ಪದ್ಧತಿಯ ಬೇರುಗಳೂ ಕೂಡಾ ! ಅದಕ್ಕೆ ರೂಪಕವೋ ಎಂಬಂತೆ ಹೆಚ್ಚಿನ ಪಾಠಗಳು ಅಡ್ಯಾರ್‌ನ ದೈತ್ಯ ಆಲದ ಮರಗಳ ನೆರಳಿನಲ್ಲಿಯೆ ನಡೆಯುತ್ತಿದ್ದವು. ರುಕ್ಮಿಣೀದೇವಿ ಸ್ವತಃ ತಾವೇ ನೃತ್ಯ ಪಾಠ ಮಾಡುತ್ತಿದ್ದರು. ಅದೇ ಆವರಣದಲ್ಲಿ ವಿದ್ಯಾರ್ಥಿಗಳ ಪ್ರೌಢ ಶಿಕ್ಷಣಕ್ಕೆ ಅನುಕೂಲವಾಗಲು ಬೆಸೆಂಟ್ ಥಿಯೋಸೋಫಿಕಲ್ ಹೈಸ್ಕೂಲ್ ಕೂಡಾ ಇತ್ತು. ಇದರ ಮುಖ್ಯೋಪಾಧ್ಯಾಯರಾದ ಶಂಕರ ಮೆನನ್ ಹಿಂದೂ ತತ್ವಜ್ಞಾನದ ಪಾಠಗಳನ್ನು ಮಾಡುತ್ತಿದ್ದರು. [...]

ರುಕ್ಮಿಣೀ ಪಟ್ಟಕ್ಕೆ ಒಲಿಯಿತು ‘ದೇವಿ’

Saturday, October 17th, 2009
ರುಕ್ಮಿಣೀ ಪಟ್ಟಕ್ಕೆ ಒಲಿಯಿತು ‘ದೇವಿ’

(ರುಕ್ಮಿಣೀ ನೃತ್ಯ ರಂಗದ ಪಾಲಿಗೆ ಪ್ರವರ್ತಕಿ. ಭರತನಾಟ್ಯದ ಪ್ರವರ್ಧಮಾನಕ್ಕೆ ಮೂಲ ಸ್ರೋತ. ಶೃಂಗಾರ ರಸದ ಅತೀ ಎನಿಸುವ ಅಂಶಗಳನ್ನು ತೆಗೆದು ಹಾಕಿ ಭಕ್ತಿಶೃಂಗಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನಿತ್ತರು. ನೃತ್ಯ ಗ್ರಂಥಗಳಲ್ಲಿ ಉಪಲಬ್ಧವಿರುವ ಹಸ್ತ-ಮುದ್ರೆಗಳ ವಿನ್ಯಾಸಗಳನ್ನು ಕ್ರಮವತ್ತಾಗಿ ಜಾರಿಗೆ ತಂದರು. ಅಡವುಗಳನ್ನು ಪರಿಷ್ಕರಿಸಿ ಚೌಕಟ್ಟು ಹಾಕಿಕೊಟ್ಟರು. ವಯೋಲಿನ್‌ನ್ನು ಬಳಕೆಗೆ ಒಗ್ಗಿಸಿಕೊಂಡರು. ಮುಖ್ಯವಾಗಿ ನರ್ತಕಿಯ ಬಲಬದಿಗೆ ಹಿಮ್ಮೇಳದವರನ್ನು ಕುಳ್ಳಿರಿಸಿ ಸ್ಥಾನ ಕಲ್ಪಿಸಿದರು…)

ಸಾಂಪ್ರದಾಯಿಕ ಕಂದಾಚಾರಗಳು ಮುರಿದುಬೀಳಲಾರಂಭಿಸಿದ್ದವು. ಕ್ರಮೇಣ ತಮ್ಮ ಮಕ್ಕಳನ್ನು ಪೋಷಕರು ಕಲಾಕ್ಷೇತ್ರಕ್ಕೆ ನೃತ್ಯ ಕಲಿಯಲು ಕಳಿಸಲಾರಂಭಿಸಿದರು. ಮೊದಲೆಲ್ಲಾ ಪ್ರತಿಯೊಬ್ಬರ ಮನೆಗೆ ಹೋಗಿ [...]

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣೀ ( ವರ್ಷ ವೈಭವ ಸಂಚಿಕೆ)

Saturday, August 15th, 2009
ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣೀ ( ವರ್ಷ ವೈಭವ ಸಂಚಿಕೆ)

ಈ ವರೆಗೆ…
(ಅವನತಿಯ ಹಾದಿ ಹಿಡಿದಿದ್ದ, ಕೀಳು ಅಭಿರುಚಿಗಳಿಗೆ ತುತ್ತಾಗಿದ್ದ ಸಾದಿರ್ ನೃತ್ಯಪ್ರಕಾರಕ್ಕೆ ತಮ್ಮ ಪ್ರಥಮ ಪ್ರದರ್ಶನದಲ್ಲೇ ಗುಣಮಟ್ಟದ ಸಹೃದಯರನ್ನು ಕರೆತಂದು ಮೂಗು ಮುರಿಯುತ್ತಿದ್ದವರು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿದ್ದು ರುಕ್ಮಿಣಿ ಅರುಂಡೇಲ್ ಅವರ ಪ್ರಥಮ ಯಶಸ್ವೀ ಹೆಜ್ಜೆ ! ಮುಂದೆ ಕೃಷ್ಣ ಅಯ್ಯರ್ ಮತ್ತು ರುಕ್ಮಿಣೀ ಅರುಂಡೇಲ್ ಮುಂತಾದ ಮಹನೀಯರ ಪ್ರಯತ್ನಗಳಿಂದಾಗಿ ದೇವದಾಸಿ ಪದ್ಧತಿಗೆ ಜೋತು ಬಿದ್ದಿದ್ದ ಸಾದಿರ್ ಭರತನಾಟ್ಯವಾಗಿತ್ತು. ಅವರು ಸ್ಥಾಪಿಸಿದ ಕಲಾಕ್ಷೇತ್ರ ಹಲವು ಕ್ರ್ರಾಂತಿಕಾರಿ ಬದಲಾವಣೆಗಳಿಗೆ [...]

ನೃತ್ಯ ರಂಗದ ಅನಭಿಷಿಕ್ತ ರಾಣಿ: ರುಕ್ಮಿಣಿ

Wednesday, April 15th, 2009
ನೃತ್ಯ ರಂಗದ ಅನಭಿಷಿಕ್ತ ರಾಣಿ: ರುಕ್ಮಿಣಿ

…… ಈವರೆಗೆ
ನೃತ್ಯದ ಬಗೆಗಿನ ತುಡಿತ ರುಕ್ಮಿಣಿಯರನ್ನು ಕರೆ ತಂದದ್ದು ಸಾದಿರ್ ನೃತ್ಯಾಭ್ಯಾಸಕ್ಕೆ. ತಂಜಾವೂರ್ ಸಹೋದರರ ಮೊಮ್ಮಗ ಮೀನಾಕ್ಷಿ ಸುಂದರಂ ಪಿಳ್ಳೈ ಅವರ ಮಾರ್ಗದರ್ಶನದಲ್ಲಿ ರುಕ್ಮಿಣಿಯವರ ನೃತ್ಯ ಕಲಿಕೆ ಸಾಗುತ್ತದೆ. ೧೯೩೫, ಡಿಸೆಂಬರ್. ಥಿಯೋಸೋಫಿಕಲ್ ಸೊಸೈಟಿಯ ವಜ್ರ ಮಹೋತ್ಸವ ವರ್ಷ.. ರುಕ್ಮಿಣಿಯವರ ಮೊದಲ ಸಾದಿರ್ ನೃತ್ಯ ಪ್ರದರ್ಶನವದು..! ಒಂದರ್ಥದಲ್ಲಿ ಅವರು ಮೊದಲು ರಂಗಪ್ರವೇಶ ಮಾಡಿದ್ದು..)
ಆಗಿನ ಕಾಲದಲ್ಲಿ ನೃತ್ಯವನ್ನು ನಡೆಸಿಕೊಳ್ಳಲಾಗುತ್ತಿದ್ದ ಕ್ರಮಕ್ಕೆ ಮತ್ತು ನೃತ್ಯ ಪ್ರದರ್ಶಿಸುವ ಪದ್ಧತಿ ನೋಡಿ ಹಲವು ಮಡಿವಂತರು, ಕಲಾಸಕ್ತರು ಸಾದಿರ್ ಎಂದರೆ ಸಾಕು, ಮೂಗು ಮುರಿಯುತ್ತಿದ್ದರು. [...]

ನೃತ್ಯ ರಂಗದ ಅನಭಿಷಿಕ್ತ ರಾಣಿ: ರುಕ್ಮಿಣಿ

Monday, February 16th, 2009
ನೃತ್ಯ ರಂಗದ ಅನಭಿಷಿಕ್ತ ರಾಣಿ: ರುಕ್ಮಿಣಿ

…… ಈವರೆಗೆ

( ಹೆಸರಾಂತ ರಷ್ಯನ್ ಬ್ಯಾಲೆ ಕಲಾವಿದೆ ಅನ್ನಾ ಪಾವಲೋವಾ ಅವರ ಮಾರ್ಗದರ್ಶ ದಲ್ಲಿ ಬ್ಯಾಲೆ ಕಲಿತ ರುಕ್ಮಿಣಿ, ಪಾವಲೋವಾ ಅವರ ಸೂಚನೆಯಿಂದ ಪ್ರೇರಿತರಾಗಿ ಭಾರತಕ್ಕೆ ಬಂದು ನೃತ್ಯ ಪದ್ಧತಿಗಳಿಗೆ ಪುನರುಜ್ಜೀವ ಕೊಡುವ ಕೆಲಸಕ್ಕೆ ಸಿದ್ಧರಾಗುತ್ತಾರೆ. ಆ ಹೊತ್ತಿಗೇ, ೧೯೩೩ ರಂದು ನೃತ್ಯ ಸಂಗಿತ ಅಕಾಡೆಮಿಯ ವಾರ್ಷಿಕೋತ್ಸವದ ನೃತ್ಯ ಪ್ರದರ್ಶನವೊಂದಕ್ಕೆ ಕೃಷ್ಣ ಅಯ್ಯರ್ ಅವರಿಂದ ಆಹ್ವಾನದ ಕರೆ ತಲುಪುತ್ತದೆ.)
ಅದು ನೃತ್ಯ ಸಂಗೀತ ಅಕಾಡೆಮಿಯ ವಾರ್ಷಿಕೋತ್ಸವ.. ಮೀನಾಕ್ಷಿ ಸುಂದರಂ ಪಿಳ್ಳೈ ಅವರ ಶಿಷ್ಯೆಯರಾದ ಜೀವರತ್ನಂ, ರಾಜೇಶ್ವರಿಯವರ ಸಾದಿರ್ ಶೈಲಿಯ [...]

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ

Monday, December 15th, 2008

ಈ ವರೆಗೆ…
(ತಮಿಳುನಾಡಿನ ಮಧುರೈಲಿ ೧೯೦೪ ಫೆಬ್ರವರಿ ೨೯ ರ ಮಧ್ಯಾಹ್ನದಲ್ಲಿ ಜನಿಸಿದ್ದರು ರುಕ್ಮಿಣಿ. ನೀಲಕಂಠ ಶಾಸ್ತ್ರಿ, ಶೇಷಮ್ಮಾಳ್ ದಂಪತಿಗಳ ೮ ಮಕ್ಕಳ ಪೈಕಿ ರುಕ್ಮಿಣೀಗೆ ಕಲೆಗಳಲ್ಲಿ ಆಸಕ್ತಿ ಹೆಚ್ಚು. ಆದರೆ ಸ್ತ್ರೀಯರಿಗೆ ಆಗಿನ ಸಮಾಜ ಕಲಾಸ್ವಾದನೆಗೆ ಅವಕಾಶವೇ ಕೊಡುತ್ತಿರಲಿಲ್ಲ. ಆದರೆ ರುಕ್ಮಿಣೀಯ ತಂದೆ, ಎಂಜಿನಿಯರ್, ಸಂಸ್ಕೃತ ವಿದ್ವಾನ್ ನೀಲಕಂಠ ಶಾಸ್ತ್ರಿ ರಿಟೈರ್ಡ್ [...]

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ

Monday, October 20th, 2008
ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ

ಇದು ಬ್ರಾಹ್ಮಣ ಕುಲದ ಹೆಣ್ಣು ಮಗಳ ನಿರ್ಧಾರ ಮತ್ತು ದಿಟ್ಟ ನಿಲುವಿನ ಕಥೆ. ನೃತ್ಯಕ್ಕಾಗಿ ಸಮಾಜ, ತನ್ನವರನ್ನು ಎದುರುಹಾಕಿಕೊಂಡು ಇಡೀ ನೃತ್ಯ ಕ್ಷೇತ್ರಕ್ಕಿದ್ದ ಕಳಂಕವನ್ನು ತೊಡೆದು ಕಲೆಯನ್ನು ಪುನರುಜ್ಜೀವನಗೊಳಿಸಿದ ಯಶೋಗಾಥೆ.