: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ದರ್ಶನ ಭ್ರಮರಿ

ಕರ್ನಾಟಕ ಕಲಾ ತಿಲಕ ನಾಟ್ಯಮೋಹನ ಉಳ್ಳಾಲ ಮೋಹನ್ ಕುಮಾರ್
ಕರ್ನಾಟಕ ಕಲಾತಿಲಕ ಶ್ರೀಯುತ ಉಳ್ಳಾಲ ಮೋಹನ್ ಕುಮಾರ್ ಅವರ ಹೆಸರನ್ನು ಕೇಳದವರು ಯಾರು? ದಕ್ಷಿಣ ಕರಾವಳಿಯ ಭರತನಾಟ್ಯ ಪರಂಪರೆಯಲ್ಲಿ ಅವರ ಹೆಸರಿಲ್ಲದಿದ್ದರೆ ಅದು ಅಪೂರ್ಣವೆನಿಸುವಷ್ಟರ ಮಟ್ಟಿಗೆ ನೃತ್ಯ ಕ್ಷೇತ್ರದ ನಾಡಿಮಿಡಿತವಾಗಿದ್ದಾರೆ. ಇಂದಿಗೆ ದಕ್ಷಿಣ ಕನ್ನಡದಲ್ಲಷ್ಟೇ ಅಲ್ಲದೆ ಕರ್ನಾಟಕ, ಹೊರರಾಜ್ಯಗಳಲ್ಲಿ ಖ್ಯಾತರಾಗಿರುವ ಸುಮಾರು ೧೦೦ಕ್ಕೂ ಮಿಗಿಲು ನೃತ್ಯ ಶಿಕ್ಷಕರು-ಗುರುಗಳು ಉಳ್ಳಾಲ ಮೋಹನ್ ಕುಮಾರ್ ಅವರ ಗರಡಿಯಲ್ಲಿ ಪಳಗಿ ದೊಡ್ಡವರಾದವರೇ ಹೌದು. ಮಂಗಳೂರಿನ ಉಳ್ಳಾಲದ ಕೋಲ್ಯ ಕೋಟೆಕಾರ್‌ನಲ್ಲಿ ನೆಲೆಸಿರುವ ಶ್ರೀಯುತರು ; ತಮ್ಮ ಸಂಸ್ಥೆ ನಾಟ್ಯನಿಕೇತನದ ಮೂಲಕವಾಗಿ ಅದೆಷ್ಟೋ ನೃತ್ಯಾಸಕ್ತ ಹೃದಯಗಳಲ್ಲಿ ಜಾಗೃತಿಯನ್ನು ಮೂಡಿಸಿದವರು. ಮಂಗಳೂರಿನ ಭರತನಾಟ್ಯ ಸಂಸ್ಕೃತಿಗೊಂದು ರೂಪ ತಂದಿತ್ತವರಲ್ಲಿ ಇವರೂ ಒಬ್ಬರಾಗಿದ್ದು ; ನೃತ್ಯ ಪರಂಪರೆಯಲ್ಲಿ ಮಂಗಳೂರಿಗೆ ಸ್ಥಾನವನ್ನು ದಕ್ಕಿಸಿಕೊಟ್ಟು ಮೇಲ್ಪಂಕ್ತಿ ಹಾಕಿಕೊಟ್ಟವರು.

ಹಲವು ನೃತ್ಯ ರೂಪಕ, ನೃತ್ಯಬಂಧಗಳನ್ನು ಸಂಯೋಜಿಸಿರುವ ಮೋಹನ್ ಕುಮಾರ್ ಅವರದ್ದು ಇಳಿವಯಸ್ಸಿನಲ್ಲೂ ಬಳಲದ, ಚಟುವಟಿಕೆಯುಳ್ಳ ಕ್ರಿಯಾಶೀಲ ವ್ಯಕ್ತಿತ್ವ. ಹಲವು ನೃತ್ಯ ಸಂಸ್ಥೆಗಳ, ಅಕಾಡೆಮಿಗಳ ಮಾರ್ಗದರ್ಶಿಯಾಗಿ, ಪರೀಕ್ಷಾ ಮಂಡಳಿ, ಪಠ್ಯಕ್ರಮ ಮಂಡಳಿಯ ಸದಸ್ಯರಾಗಿ, ಮೌಲ್ಯಮಾಪಕರಾಗಿ, ಪರೀಕ್ಷಕರಾಗಿ, ಸಂಯೋಜಕರಾಗಿ ದುಡಿದಿರುವ ಇವರು ದಕ್ಷಿಣ ಕನ್ನಡದ ನೃತ್ಯಪರಂಪರೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಅವರ ಶಿಷ್ಯರ ಮೂಲಕವಾಗಿ ಆಳವಾದ ಬೇರುಗಳನ್ನು ಹರಡಿಸಿದವರು. ಅವರ ನಾಟ್ಯನಿಕೇತನ ಸುವರ್ಣ ವರ್ಷಗಳ ದಾಖಲೆಯನ್ನು ಮಿರಿ ಮುನ್ನಡೆದಿದ್ದು, ಅವರ ಮಗಳು, ಶಿಷ್ಯೆ ವಿದುಷಿ ರಾಜಶ್ರೀ ತಮ್ಮ ತಂದೆಯ ಪರಂಪರೆಯ ಮುಂದಿನ ನೋಟಗಳಿಗೆ ಕೊಂಡಿಯಾಗಿದ್ದಾರೆ. ೧೯೮೯ರಲ್ಲಿ ಮಂಗಳೂರಿನಲ್ಲಿ ನಡೆದ ಸನ್ಮಾನದಲ್ಲಿ ಅಮೃತ ಸೋಮೇಶ್ವರ ಅವರ ಸಂಪಾದಕತ್ವದಲ್ಲಿ ನಾಟ್ಯಮೋಹನ ಎಂಬ ಅಭಿನಂದನಾ ಕೃತಿ ಹೊರಬಂದಿದೆ. ಹಲವು ಗುರು ಅಭಿವಂದನೆಗಳು, ಹೆಮ್ಮೆಯ ರಂಗಪ್ರವೇಶಗಳು, ಖ್ಯಾತ ಪುರಸ್ಕಾರ-ಸಮ್ಮಾನಗಳು ಅವರ ಮುಡಿಗೇರಿವೆ. ಅವರ ನೋಟ-ನಿಲುವುಗಳಿಗೆ ಸಾಕ್ಷಿಯಾಗಿ ಈ ಸಂ’ದರ್ಶನ’ ನಿಮ್ಮೆದುರಿಗಿದೆ.

ಸಂ'ದರ್ಶನ'

ನೀವು ಕಲಿಯುವ ಕಾಲದ ಮನಸ್ಥಿತಿ ಹೇಗಿತ್ತು?

ಕಲಿಯುವ ಆಕಾಂಕ್ಷೆ ಹೆಚ್ಚು. ಅದರಂತೆಯೇ ಕಷ್ಟವೂ ಕೂಡಾ. ಆಗ ವಿದ್ಯಾಭ್ಯಾಸ ಎಂದರೆ ಉದ್ಯೋಗಕ್ಕಾಗಿ ಮಾತ್ರ ಅಲ್ಲ. ವಿಠಲ ಮಾಸ್ಟ್ರು ನನ್ನ ಮೊದಲ ಗುರು. ನಂತರ ರಾಜರತ್ನಂ ಪಿಳ್ಳೈ ಅವರಲ್ಲಿ ಕಲಿಕೆ. ಆಗ ಅವರು ಕಲಾಮಂಡಲಂನಿಂದ ಹೊರಬಂದು ಲಲಿತ ಕಲಾ ಸದನದಲ್ಲಿ ಕಲಿಸ್ತಾ ಇದ್ದರು. ನಂತರದ ದಿನಗಳಲ್ಲಿ ಅವರ ಆಶೀರ್ವಾದದಿಂದಲೇ ತರಗತಿ ಪ್ರಾರಂಭಿಸಿದೆ.

ಉಳಿದ ಕಲೆಗಳಿಗಿಂತ ಭರತನಾಟ್ಯ ಹೇಗೆ ವಿಭಿನ್ನ ಎಂಬುದು ನಿಮ್ಮ ಅಭಿಪ್ರಾಯ?

ಭರತನಾಟ್ಯವೆಂದರೆ ಸಹಜ ಭಾವ. ನಮ್ಮ ನಿತ್ಯದ ಜೀವನಕ್ಕೆ ಬಹಳಷ್ಟು ಸಮೀಪದ್ದು ಭರತನಾಟ್ಯ. ಇದನ್ನು ಕಲಿತರೆ ಉಳಿದ ಕಲೆಗಳನ್ನು ಕಲಿಯಲು ಸುಲಭ. ಆದರೆ ಭರತನಾಟ್ಯದಲ್ಲಿ ಭರತನಾಟ್ಯವೇ ಇರಬೇಕು. ಅದೇ ಸಹಜ.

‘ಭರತನಾಟ್ಯದಲ್ಲಿ ಭರತನಾಟ್ಯವಿರಬೇಕು’. ಅಂದರೆ?

ಇಂದು ಎಲ್ಲದರಲ್ಲೂ ಅನುಕರಣೆಯಿದೆ. ಉದಾ : ವರ್ಣ, ಪದ, ಜಾವಳಿ, ಕೀರ್ತನೆಗಳಾದಿಯಾಗಿ ಎಲ್ಲದಕ್ಕೂ ತಟ್ಟುಮೆಟ್ಟು ಅಭಿನಯ. ಇದು ಕೂಚಿಪುಡಿಯ ಅನುಕರಣೆ. ಭರತನಾಟ್ಯದ ಸಹಜತೆಗೆ ಧಕ್ಕೆ. ಕೆಲವೊಂದು ನೃತ್ಯನಾಟಕಗಳಿಗೆ ಬದಲಾವಣೆ ಬೇಕು ನಿಜ. ಆದರೆ ಫ್ಯೂಷನ್ ಎನುತ್ತಾ ಏನೇನೋ ಅಬದ್ಧ ಮಾಡಿದರೆ ಅದು ನೃತ್ಯಕ್ಕೆ ಮಾಡುವ ಅನ್ಯಾಯವಲ್ಲದೇ ಬೇರೇನಲ್ಲ !

ಅಷ್ಟೇ ಏಕೆ, ಇಂದಿನ ಬಹಳಷ್ಟು ರಂಗಪ್ರವೇಶಗಳು ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳುತ್ತವೆ. ಶಾಸ್ತ್ರೀಯ ನೃತ್ಯ ರಂಗಪ್ರವೇಶವೆಂದು ಎಲ್ಲವನ್ನೂ ಅರ್ಧಂಬರ್ಧ ಮಾಡುತ್ತಾರೆ. ತಟ್ಟೆಯಿಟ್ಟು ಕುಣಿದು ಭರತನಾಟ್ಯವೆಂದು ತೋರಿಸುತ್ತಾರೆ. ಅದಕ್ಕೆ ಸರಿಯಾಗಿಯೋ ಎಂಬಂತೆ ತಟ್ಟೆ ಇಟ್ಟ ಕೂಡಲೇ ಭಯಂಕರ ಚಪ್ಪಾಳೆ. ಈ ಬಗೆಯ ಅಳವಡಿಕೆ ಸಹಜತೆಗೆ ಕೊಡಲಿಪೆಟ್ಟು. ನಮ್ಮಲ್ಲಿ ಮ್ಯಾಜಿಕ್‌ಗಳನ್ನು ಮಾಡುವವರಿದ್ದಾರೆ. ಆದರೆ ಮ್ಯಾಜಿಕ್ ಅಷ್ಟೇ ನೃತ್ಯವಲ್ಲ. ರಾಗಗಳಿಗೆ ಅನುಸಾರವಾಗಿ ಅಭಿನಯವನ್ನು ತರುವ ಶಕ್ತಿ ಕಲಾವಿದನಲ್ಲಿ ಇರಬೇಕು.

ಹಾಗಾದರೆ ಹಳೆಯ ಕ್ರಮಗಳಲ್ಲಿ ಇಂತಹ ಅನುಕರಣೆಯಿರಲಿಲ್ಲವೇ?

ಹಿಂದಿನದ್ದೆಲ್ಲ ಒಳ್ಳೆಯದು ಅಂತ ಅಲ್ಲ. ಹಾಗಂತ ಈಗಿನದ್ದು ಕೆಟ್ಟದ್ದೂ ಅಲ್ಲ. ದೇವದಾಸಿಗಳು ರಾಜರನ್ನು ಮೆಚ್ಚಿಸಲು ಮಾಡಿದ ರೀತಿಯಲ್ಲಿ ನಾವಿಂದು ಮಾಡಬಾರದು. ಹಿಂದಿನದ್ದೆಲ್ಲಾ ಒಳ್ಳೆಯದು ಎಂದು ಈಗ ಮಾಡಿದರೆ ಕಲ್ಲು ಬೀಳುವಂತಾದೀತು ! ಆಯಾಯ ಕಾಲದಲ್ಲಿ ಎಷ್ಟು ಒಳ್ಳೆಯದಾಗಿದೆಯೋ ಅಷ್ಟೇ ಕೆಟ್ಟದ್ದೂ ಆಗಿದೆ.

ಈ ಹಳತರಿಂದ ಹೊಸತಿನ ಪಲ್ಲಟ ಅಥವಾ ಸ್ಥಿತ್ಯಂತರಕ್ಕೆ ಒಂದು ಒಳ್ಳೆಯ ಉದಾಹರಣೆ ಕೊಡಬಹುದೇ?

ಅರಂಗೇಟ್ರಂ- ಗುರುವಿನ ಬಳಿ ಕಲಿತ ಬಳಿಕ ಸಮಾಜದ ವಿದ್ವಾಂಸರ ಎದುರಲ್ಲಿ ನೃತ್ಯ ಪ್ರದರ್ಶನ ಮಾಡುವುದು ಮೊದಲಿನಿಂದಲೂ ಬೆಳೆದು ಬಂದಿರುವ ಸಂಸ್ಕೃತಿ. ಆದರೆ ಇಂದು ಅದೊಂದು ತಾಕತ್ತು ಎಂಬಂತಾಗಿದೆ. ಸಿಕ್ಕಾಪಟ್ಟೆ ಖರ್ಚು ಮಾಡಿ ಮದುವೆಗಿಂತಲೂ ಭರ್ಜರಿ ಪ್ರವೇಶ ಮಾಡಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಕೆಲವರು ಮದುವೆಯಾದ ನಂತರ ನರ್ತಿಸುವುದನ್ನು ಸಂಪೂರ್ಣ ಬಿಟ್ಟುಬಿಡುತ್ತಾರೆ ! ಕ್ರಮೇಣ ಸುದ್ದಿಯೇ ಇಲ್ಲದಂತೆ ಅಡಗಿಹೋಗುತ್ತಾರೆ.

ಈ ಪಲ್ಲಟಕ್ಕೆ ಯಾವ ಮಾನದಂಡವನ್ನಿಟ್ಟರೆ ಒಳಿತು?

ಮೊದಲು ಗುರುವಿಗೆ ವಿದ್ಯಾರ್ಥಿಯ ಪ್ರತಿಭೆ ಸಮಾಧಾನ ಕೊಡಬೇಕು. ಏನಿಲ್ಲವೆಂದರೂ ಅರಂಗೇಟ್ರಂ ಮಾಡಲು ೧೮ ವರ್ಷ ಆದರೂ ವಿದ್ಯಾರ್ಥಿಗೆ ಆಗಿರಬೇಕು. ಚಿಕ್ಕ ಮಕ್ಕಳಿಗೆ ರಂಗಪ್ರವೇಶ ಮಾಡಿಸುವುದು ನಿಜಕ್ಕೂ ವ್ಯರ್ಥ.

ಇಂತಹ ಪಲ್ಲಟಗಳಷ್ಟೇ ಅಲ್ಲದೆ ಯಥಾವತ್ತು ಎಂದು ಕಂಡುಬಂದ ಸಂಗತಿಗಳೇನಾದರೂ ಇವೆಯೇ ?

ಹುಂ. ಇಂದಿನ ಪರೀಕ್ಷೆಗಳಲ್ಲಿ ವರ್ಣ, ಪದಂಗಳ ತುಂಬಾ ವಿರಹ ಭಾವವೇ ಜಾಸ್ತಿಯಾಗಿದೆ. ಶಬ್ದಂನಲ್ಲಿ ವಿರಹ ಭಾವ ಶುರುವಾಯಿತೆಂದರೆ ವರ್ಣ, ಪದ, ಜಾವಳಿ, ತಿಲ್ಲಾನ ಎಲ್ಲದರಲ್ಲೂ ವಿರಹವೇ ! ಅಂದು ದೇವದಾಸಿಗಳು ಹೆಚ್ಚಾಗಿ ವಿರಹ ಶೃಂಗಾರವನ್ನೇ ಮಾಡ್ತಾ ಇದ್ರು ಎಂದ ಮಾತ್ರಕ್ಕೆ ಈಗಲೂ ಅದನ್ನೇ ಮುಂದುವರೆಸಿದರೆ ಹೇಗೆ? ಉದಾ : ಕೆಲವು ಅಷ್ಟಪದಿಗಳನ್ನು ಕಲಿಸಲಿಕ್ಕಾಗೋದಿಲ್ಲ. ಹಾಗಂತ ಅವುಗಳು ಕೀಳು ಮಟ್ಟದ್ದು ಎಂಬ ಅಭಿಪ್ರಾಯವಲ್ಲ; ಬದಲಾಗಿ ಪಾಠ ಮಾಡುವಾಗ ಅದರ ಸಾಹಿತ್ಯಕ್ಕೆ ಅಭಿನಯ ಸಮಾಜದ ಮತ್ತು ನೋಡುಗರ ದೃಷ್ಟಿಯಿಂದ ಔಚಿತ್ಯಪೂರ್ಣವೆನಿಸದು. ಅಷ್ಟಪದಿ ಪವಿತ್ರವಾದರೂ ಅದಕ್ಕಿಂತಲೂ ಮಿಗಿಲಾಗಿ ನಾಟ್ಯವು ವೇದ ಎಂಬುದು ನಮ್ಮ ಮನಸ್ಸಿನಲ್ಲಿರಬೇಕು.

ಹಾಗಾದರೆ ವಿರಹ ಭಾವದ ಅಭಿನಯ ಕಲಿಕೆ ಯಾವ ನಿಟ್ಟಿನಲ್ಲಿದ್ದರೆ ಒಳ್ಳೆಯದು?

ಲವ್ ಮಾಡುವುದೇ ಬೇರೆ, ಶೃಂಗಾರವೇ ಬೇರೆ. ಎರಡೂ ಒಂದೇ ಎನ್ನುವ ಅಭಿಪ್ರಾಯ ಶಿಕ್ಷಕರಾದಿಯಾಗಿ ಶಿಷ್ಯರಲ್ಲೂ ಇದೆ. ಚಿಕ್ಕ ಮಕ್ಕಳಿಗೆ ವಿರಹ ಭಾವ ಕಲಿಸುವುದು ಸರಿಯಲ್ಲ. ಭಕ್ತಿ ಭಾವ ಬೇಕಾದ್ರೆ ಮಾಡಲಿ. ಅದೇ ವಾತ್ಸಲ್ಯ ಶೃಂಗಾರವೋ, ವಿರಹ ಶೃಂಗಾರವೋ ಮಾಡಿದರೆ ಹೇಗೆ? ಸಣ್ಣ ಹುಡುಗಿ ಅಲೈಪಾಯುದೇ ಮಾಡಿದರೆ ಅವಳಿಗೆ ಅದರ ಶೃಂಗಾರ ಮನೋಧರ್ಮ ಅರ್ಥವಾದೀತೇ? ಹತ್ತು ವರ್ಷದ ಹುಡುಗಿ ‘ಮನ್ಮಥನ ಬಾಣ ಚುಚ್ಚಿತು’ ಎಂದು ಮಾಡಿದರೆ ಗಿಳಿಪಾಠವಲ್ಲದೆ ಮತ್ತೇನು? ತಮಗೆ ಅರ್ಥವಾಗದ್ದನ್ನು ಯಾವತ್ತೂ ಮಾಡಬಾರದು. ಮಾಡಿದರೂ ಅದು ಸಹಜವೆನಿಸುವುದಿಲ್ಲ. ಹಾಗಾಗಿ ಅಂತಹ ಶೃಂಗಾರವನ್ನು ಪ್ರಬುದ್ಧರೆನಿಸಿಕೊಂಡವರು, ಮದುವೆಯಾದವರು ಅವರವರ ಅನುಭವಕ್ಕೆ ಸಮಂಜಸವಾಗಿ ಕಲಿಯುವುದು, ಮಾಡುವುದು ಒಳ್ಳೆಯದು.

ಅಭಿನಯ ಸ್ವರೂಪ ಹೇಗಿದ್ದರೆ ಚೆನ್ನ?

ಅಭಿನಯ ಹೇಳಿಕೊಟ್ಟು ಬರುವಂತದ್ದಲ್ಲ. ನಾಯಕಿ ಭಾವದಲ್ಲೂ ಒಂದರಿಂದ ಒಂದಕ್ಕೆ ಸಂಬಂಧ ಇದೆ. ಗುರುಗಳು ಸಾಮಾನ್ಯವಾಗಿ ಯಾವುದೇ ನೃತ್ಯ ಮಾಡಬೇಕಾದರೂ ನೆಗಾಡುತ್ತ, ಹಸನ್ಮುಖಳಾಗಿ ಮಾಡಬೇಕು ಅಂತ ಹೇಳಿಕೊಟ್ಟಿರುತ್ತಾರೆ. ಹಾಗೆಂದು ‘ಕರಿರಾಜ ಕಷ್ಟದಲ್ಲೂ ಆದಿಮೂಲ’ ಎನ್ನುವ ದುಃಖಭಾವಕ್ಕೂ ನಗಾಡುತ್ತಲೇ ನರ್ತಿಸಿದರೆ ಅದನ್ನು ಅಭಿನಯವೆನ್ನುವುದಾದರೂ ಹೇಗೆ? ರಸಪ್ರತಿಪಾದನೆಯೆನ್ನುವುದು ಸುಮ್ಮನೆ ಅಲ್ಲ ; ವೇದಿಕೆಯಲ್ಲಿರುವಾಗಲೇ ತನ್ನಿಂತಾನೇ ಭಾವ ಸೃಷ್ಟಿ ಮಾಡುವಷ್ಟು ತಾಕತ್ತು ಕಲಾವಿದನಿಗಿರಬೇಕು. ಸಂಗೀತದಲ್ಲಿ ಸ್ವರ ಪ್ರಸ್ಥಾರ ಮಾಡಿದಂತೆ ನೃತ್ಯದಲ್ಲಿ ರಸಭಾವಾಭಿನಯ ಬರಬೇಕು. ಸ್ವಂತವಾಗಿ ಬಂದರೆ ಮಾತ್ರ ಅದು ಪ್ರತಿಭೆ.

ಭರತನಾಟ್ಯದ ಅಭಿವ್ಯಕ್ತಿಗೆ ಯಾರು ಸೂಕ್ತ? ಪುರುಷನೋ? ಮಹಿಳೆಯೋ?

ಲಾಸ್ಯಕ್ಕೆ ಹೆಂಗಸರ ಅಭಿವ್ಯಕ್ತಿಯೇ ಬೇಕು. ಗಂಡಸರಿಗೆ ತಾಂಡವ ಒಪ್ಪುವಷ್ಟು ಲಾಸ್ಯ ಒಪ್ಪುವುದಿಲ್ಲ. ಭರತನಾಟ್ಯದಲ್ಲಿರೋದು ಸ್ತ್ರೀತ್ವ. ಹುಡುಗಿಯರ ಲಾಸ್ಯದ ದೃಷ್ಟಿ ಹುಡುಗರು ಎಷ್ಟೇ ಮಾಡಿದರೂ ಬರುವುದಿಲ್ಲ. ಅದರಲ್ಲೂ ನಾಯಕಿ ಭಾವಗಳನ್ನು ಮಾಡಿದರೆ ಹೇಸಿಗೆಯೆನಿಸುತ್ತದೆ. ಹಾಗಂತ ಹುಡುಗರು ಭರತನಾಟ್ಯ ಕಲಿಯಬಾರದು ಅಂತಲ್ಲ; ಹಾಗಾಗಿ ಕಲಿಯಬೇಕಾದ್ದನ್ನೆಲ್ಲಾ ಕಲಿಯಲೇಬೇಕು. ಅದರಲ್ಲೂ ಗುರುಗಳೆನಿಸಿಕೊಂಡವರಲ್ಲಿ ಬಹುಪಾಲು ಮಂದಿ ಪುರುಷರೇ ಆಗಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಸಬೇಕಾದರೆ ಮಾಡಿ, ಮಾಡಿಸಿ ತೋರಿಸಲಿಕ್ಕಾದರೂ ಎಲ್ಲದ ಜ್ಞಾನ ಇರಬೇಕಲ್ಲವೇ? ಆದರೆ ಪ್ರದರ್ಶನದ ವೇಳೆಗೆ ಹುಡುಗರಿಗೆ ಒಪ್ಪುವುದನ್ನು ಹುಡುಗರೇ ಮಾಡಬೇಕು. ಹುಡುಗಿಯರಿಗೆ ತಕ್ಕುದಾದದ್ದನ್ನು ಹುಡುಗಿಯರೇ ಮಾಡಬೇಕು.

ಆದರೆ ಯಕ್ಷಗಾನ, ಕೂಚಿಪುಡಿ, ಒಡಿಸ್ಸಿಗಳಲ್ಲಿ ಪುರುಷರಿಗೆ ಸ್ತ್ರೀ ಸಹಜ ಅಭಿನಯ, ಲಾಸ್ಯಗಳು ಒಪ್ಪುತ್ತವೆಯಲ್ಲವೇ?

ಪುರುಷರಿಗೆ ಸ್ತ್ರೀ ಸಹಜ ಅಭಿನಯ ನರ್ತನದ ಸಾಮರ್ಥ್ಯ ಇಲ್ಲವೆಂದಲ್ಲ. ಆದರೆ ಅಂಥವರು ಸಾವಿರದಲ್ಲೊಬ್ಬರು. ಉದಾ : ಕೂಚಿಪುಡಿಯ ವೇದಾಂತಂ ಸತ್ಯನಾರಾಯಣ ಶರ್ಮ. ಇನ್ನು ಯಕ್ಷಗಾನವಾದರೋ ದೇಸೀ ಪದ್ಧತಿ. ಏಕವ್ಯಕ್ತಿ ಯಕ್ಷಗಾನದಲ್ಲಿನ ಲಾಸ್ಯವೂ ಸ್ತ್ರೀಯರನ್ನೇ ನಾಚಿಸುವಷ್ಟರ ಮಟ್ಟಿಗೆ ಪ್ರಭಾವಶಾಲಿ. ಅದು ಅವರವರ ಸೃಷ್ಟಿಶೀಲತೆ ಮತ್ತು ಪ್ರತಿಭೆ. ಆದರೆ ಭರತನಾಟ್ಯ ಮಾರ್ಗೀ ಪದ್ಧತಿಯದ್ದು. ಅವರಂತೆಯೇ ನಾವೂ ಇಲ್ಲಿ ಮಾಡಬೇಕು ಅಂದರೆ ಹೇಗೆ?

ಹಾಗಾದರೆ ಭರತನಾಟ್ಯ ನಾಟ್ಯದ ಅಂಶಗಳಿಗಿಂತಲೂ ನೃತ್ಯದ ಅಂಶಗಳನ್ನೇ ಹೆಚ್ಚು ಅಳವಡಿಸಿಕೊಂಡಿದೆ ಎಂಬ ಮಾತು ಒಪ್ಪುತ್ತೀರಾ?

ಪದ್ಮಾ ಸುಬ್ರಹ್ಮಣ್ಯಂ ಈ ಅಂಶವನ್ನೇ ವಾದಿಸುತ್ತಾರೆ. ಅವರ ಮನೋಧರ್ಮ ಪ್ರಬಲವಾದದ್ದು. ಅವರು ಭರತನೃತ್ಯವೆಂದೇ ಭರತನಾಟ್ಯವನ್ನು ಕರೆಯುತ್ತಾರೆ. ಅಂತೆಯೇ ನಡೆದುಕೊಳ್ಳುತ್ತಾರೆ ಕೂಡಾ ! ಹಾಗೆಂದು ಅವರನ್ನೇ ಉಳಿದವರೂ ಅನುಕರಿಸಿದರೆ ಅದು ಅವರವರ ಅಭಿವ್ಯಕ್ತಿಗೆ ಒಪ್ಪೀತೇ ಎಂಬುದು ಯೋಚಿಸಿ ಕಂಡುಕೊಳ್ಳಬೇಕು.

ಭರತನಾಟ್ಯದ ಸ್ಥಾನ, ಮಟ್ಟ ಈಗ ಹೇಗಿದೆಯೆನಿಸುತ್ತದೆ ?

ನೃತ್ಯದ ಮಟ್ಟ ಜಾಸ್ತಿ ಆಗಿದೆ. ಒಳ್ಳೆಯ ಬೆಳವಣಿಗೆಗಳಾಗಿವೆ. ದೇವದಾಸಿಗಳು ಮಾಡುತ್ತಿದ್ದ ರೀತಿಯಲ್ಲಿ ಪರಿಷ್ಕಾರಗಳಾಗಿ ವೈಜಾನಿಕವಾಗಿದೆ. ರೇಖೆಯ ಮೇಲೆ ಅಡವುಗಳ ವಿನ್ಯಾಸಗಳಾಗಿವೆ. ರುಕ್ಮಿಣೀ ದೇವಿ ಅರುಂಡೇಲ್, ಕೃಷ್ಣ ಅಯ್ಯರ್ ಅವರ ಪರಿಶ್ರಮ ನಿಜಕ್ಕೂ ನಾವೆಲ್ಲರೂ ಮರೆಯಬಾರದು.

ಹಾಗಾದರೆ ಯಾವುದೇ ಲೋಪದೋಷಗಳು ಇಲ್ಲವೆನ್ನುತ್ತೀರಾ?

ಭರತ ಮಕ್ಕಳಿಗೆ ಶಾಪ ಕೊಟ್ಟನೆಂಬ ನಂಬಿಕೆಯಿದೆಯಲ್ಲವೇ? ಅದು ಬೇರಾರು ಅಲ್ಲ. ಈಗಿನ ಕಲಾವಿದರಾದ ನಾವೇ! ಇಂದು ಎಲ್ಲರೂ ವಿದುಷಿಗಳೇ ಆಗಿಹೋಗಿದ್ದಾರೆ. ಶಿಕ್ಷಕಿಯರೆನಿಸಿಕೊಂಡವರು ಗುರುಗಳಾಗಿದ್ದಾರೆ. ವೇದಿಕೆಗಳಲ್ಲಿ ಕುಣಿಸಿ ಹಣ ಗಳಿಸಬೇಕು ಎನ್ನುವ ಗುರಿಯೇ ಹೆಚ್ಚು ; ಗೂಡಂಗಡಿ ಇಡುವ ವಿದ್ಯಾರ್ಥಿಗಳೇ ಜಾಸ್ತಿ. ಗುರುಗಳು ಯಾವಾಗ, ಹೇಗೆ ಆಗುತ್ತಾರೆ ಎಂಬ ಪ್ರಜ್ಞೆ ನಮ್ಮಲ್ಲಿಲ್ಲ. ಕಡಿಮೆಯೆಂದ್ರೂ ೧೫ ವರ್ಷ ಗುರುಗಳಾಗಿ ಪರಿಶ್ರಮವಿರಬೇಕು. ಈ ಕ್ಷೇತ್ರದ ಒಳಹೊರಗು ತಿಳಿದವರಿರಬೇಕು. ಹೇಗ್ಹೆಗೋ ಪಾಸು ಮಾಡಿ ಕ್ಲಾಸು ಪ್ರಾರಂಭ ಮಾಡಿದವ್ರು ಇಂದು ಗುರುಗಳಾಗುತ್ತಿದ್ದಾರೆ. ಎಲ್ಲರೂ ಕಲಿಸಲಿಕ್ಕೆ ಪ್ರಾರಂಭಿಸಿದರೆ ಶಿಕ್ಷಣ ಆಗುತ್ತದಾ? ಇಂದು ಕಲೆಗಾಗಿ ಕಲಿಯುವವರು ಯಾರಿದ್ದಾರೆ? ಇದರಿಂದಾಗಿಯೋ ಏನೋ ಇಲ್ಲಿನ ವಿದುಷಿಗಳಿಗೆ ತಮಿಳ್ನಾಡಿನಲ್ಲಿ ಬೆಲೆ ಇಲ್ಲ. ಅಲ್ಲಿ ಈ ತರಹದ ಪ್ರಮೇಯವೂ ಇಲ್ಲ. ಹಾಗಾಗಿಯೇ ಇಂದು ಭರತನಾಟ್ಯ ಎಂದಾಕ್ಷಣ ವಿದ್ವಾಂಸರು ನೋಡುವುದು ತಮಿಳ್ನಾಡನ್ನೇ !

ಅಂದರೆ, ಕರ್ನಾಟಕದಲ್ಲಿನ ಭರತನಾಟ್ಯ ಕಲಿಕೆ ಮತ್ತು ಪರೀಕ್ಷಾ ಕ್ರಮ ಎಡವಿದೆ ಎನ್ನುತ್ತೀರಾ?

ಈಗಂತೂ ನಮ್ಮಲ್ಲಿನ ಪ್ರಾಥಮಿಕ ಅಭ್ಯಾಸವೇ ಚೆನ್ನಾಗಿರೋದಿಲ್ಲ. ಸಾಕಷ್ಟು ಲಾಬಿಯೂ ನಡೀತಿದೆ. ಪರೀಕ್ಷೆಯ ಹೆಸರು ಹೇಳಿಕೊಂಡು ಶಿಕ್ಷಕರು ಹಣ ಕೀಳೋದು ಹೆಚ್ಚಾಗುತ್ತಿದೆ. ವಿದ್ವತ್ತು ಪರೀಕ್ಷೆಗಳಲ್ಲಿ ಎಷ್ಟೋ ಅಪಚಾರಗಳಾಗುವುದೂ ಇದೆ. ಪರೀಕ್ಷೆಗೆ ಸರಿಯಾದ ಪರೀಕ್ಷಕರು ಬರ್ತಾ ಇಲ್ಲ ಅನ್ನೋದು ದೊಡ್ಡ ಕೊರಗು. ಇದಕ್ಕೆ ಪೂರಕವಾಗಿ ಪರೀಕ್ಷೆಯ ಸಂಭಾವನೆಂii ಸಮಸ್ಯೆ ಇಂದು ನಿನ್ನೆಯದಲ್ಲ.

ನೃತ್ಯ ಸಂಗೀತದ ಪ್ರಾಥಮಿಕ ಜ್ಞಾನವಿಲ್ಲದ ಜನರು ಪರೀಕ್ಷಕರಾಗಿರುವುದನ್ನು ಕಂಡಿದ್ದೇನೆ. ಪರೀಕ್ಷಕರು ಬಾರದೇ ಇದ್ದರೆ ಅವರವರ ಊರಿನಲ್ಲಿ ಇರುವ ಶಿಕ್ಷಕರನ್ನು, ಗುರುಗಳನ್ನು ಪರೀಕ್ಷಕರನ್ನಾಗಿಸುವುದಂತೂ ನಿರಂತರ ಬೆಳೆದು ಬಂದಿದೆ. ಅಂತಹ ಸಂದರ್ಭದಲ್ಲಿ ಪರೀಕ್ಷಾರ್ಥಿಗಳು ಅಂತಹ ಪರೀಕ್ಷಕರ ಶಿಷ್ಯರೇ ಆಗಿರುತ್ತಾರೆ.

ಅದರಲ್ಲೂ ಪರೀಕ್ಷಕರದ್ದು ಮೌಲ್ಯಮಾಪನ ಮಾಡುವ ಹೊಣೆಗಾರಿಕೆಯೇ ಹೊರತು ವಿನಾಕಾರಣ ವಿದ್ಯಾರ್ಥಿಗಳನ್ನು ದೂಷಿಸುವುದು, ಹೆಚ್ಚುಗಾರಿಕೆ ತೋರಿಸುವುದು, ಅವರ ಮೇಲೆ ಅಭಿಪ್ರಾಯಗಳನ್ನು ಹೇರುವುದು ಒಳ್ಳೆಯದಲ್ಲ. ಹಲವು ಬಾರಿ ಪರೀಕ್ಷೆಗಳಲ್ಲಿ ದೊಡ್ಡ ದೊಡ್ಡದಾಗಿ ಮಾತಾಡಿ ಬಿಂಕ ತೋರಿಸುವ ಕಲಾವಿದರು ತಾವು ಪ್ರದರ್ಶನ ಕೊಡುವ ಹಣೆಬರಹ ನೋಡಿದರೆ ದೇವರೇ ಕಾಪಾಡಬೇಕೆನ್ನಿಸುತ್ತದೆ.

ಸಂಗೀತದಲ್ಲಿ ಪ್ರಕೃತಿ ಸ್ವರ ಯಾವುದು, ವಿಕೃತಿ ಸ್ವರ ಯಾವುದು ಎಂದೇ ಗೊತ್ತಿಲ್ಲದವರು ಸಂಗೀತ ನೃತ್ಯ ಪರೀಕ್ಷೆಗಳಲ್ಲಿ ನಿರ್ಣಯಕಾರರಾಗಿದ್ದನ್ನು ನೋಡಿದ್ದೇನೆ. ಇಂತವರು ಬಂದ್ರೆ ಯಾವುದು ಮೌಲ್ಯಯುತ ಎಂದು ಅಳೆಯುವುದಾದರೂ ಹೇಗೆ? ಕೆಲವೊಮ್ಮೆ ಅಭ್ಯರ್ಥಿಗೆ ಹೆಚ್ಚಿನ ಅಂಕ ಹಾಕುವ ಒತ್ತಾಯಗಳು ಪರೀಕ್ಷಕರಿಗೆ ಬರುತ್ತವೆ. ೪೦ ಅಂಕವಿದ್ದವರಿಗೆ ಬೇಕಾದರೆ ಎರಡಂಕ ಜಾಸ್ತಿ ಹಾಕಬಹುದೇನೋ; ಆದರೆ ೧೦ ಅಂಕವಿದ್ದವರಿಗೆ ೪೦ ಅಂಕ ಮಾಡಬೇಕೆನ್ನುವುದು ನ್ಯಾಯವೇ? ಇದರಿಂದಾಗಿ ಹಲವು ಬಾರಿ ಉತ್ತಮವಾಗಿ ನರ್ತಿಸುವ ವಿದ್ಯಾಥಿಗಳಿಗೇ ಕಡಿಮೆ ಅಂಕಗಳು ಬರುತ್ತವೆ.

ಪ್ರಾಥಮಿಕ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳನ್ನು ಪಾಸು ಮಾಡಬೇಕು ಎಂಬ ಅಘೋಷಿತ ಪ್ರವೃತ್ತಿ ಬೆಳೆದಿದೆ. ಹಾಗಾದರೆ ಪರೀಕ್ಷೆಗೆ ಯಾಕೆ ಕುಳಿತುಕೊಳ್ಳಬೇಕು ; ಫೇಲ್ ಮಾಡ್ಬಾರ್ದು ಅಂತಾದ್ರ್ರೆ ಯಾರು ಬೇಕಾದ್ರೂ ಹೋಗಿ ಸುಮ್ಮನೆ ನಿಲ್ಬೋದಲ್ವಾ? ಇದರಿಂದ ಮನುಷ್ಯರಿರಲಿ ; ಯಾವುದೇ ಪ್ರಾಣಿಯನ್ನೂ ಪಾಸು ಮಾಡಬಹುದು ಎಂಬ ಭಾವನೆ ಬೆಳೆದಿದೆ. ಇನ್ನಾದರೂ ಕಾಯಕಲ್ಪ ಮಾಡದಿದ್ದರೆ ಭವಿಷ್ಯದಲ್ಲಿ ಉತ್ತಮ ಬದಲಾವಣೆ ನಿರೀಕ್ಷಿಸುವುದೂ ಸಾಧ್ಯವಿಲ್ಲ. ಇತ್ತೀಚೆಗೆ ಪರೀಕ್ಷಾ ಮಂಡಳಿ ಕೆಲವೊಂದು ಕಾನೂನನ್ನು ಮಾಡಿರುವುದು ಒಳ್ಳೆಯ ಬೆಳವಣಿಗೆ.

ಪಠ್ಯಕ್ರಮದಲ್ಲಿ ಏನಾದರೂ ಸುಧಾರಣೆ ಅಗತ್ಯವಿದೆಯೇ?

ಜೂನಿಯರ್, ಸೀನಿಯರ್, ವಿದ್ವತ್ ಪಠ್ಯಗಳಲ್ಲಿ ಒಂದೊಂದಕ್ಕೂ ಸಂಬಂಧವಿಲ್ಲ ಅಂತಾಗಿದೆ. ಜೊತೆಗೆ ಪಠ್ಯ ರಚಿಸುವವರು ತಮ್ಮ ತಮ್ಮ ಸಂಪ್ರದಾಯದ ಪ್ರಕಾರ ಪಠ್ಯ ರೂಪಿಸಿದರೆ ಕಲಿಯುವ ಮಕ್ಕಳು ಕಷ್ಟಪಡುತ್ತಾರೆ. ಉದಾ : ಉಪ ಅಡವುಗಳು ಮುಖ್ಯ ಅಡವುಗಳ ಆಧಾರದಲ್ಲೇ ಇರಬೇಕು. ಆಗಲೇ ಅದಕ್ಕೆ ಚೆಂದ, ಆನಂದ. ಇಲ್ಲದೇ ಹೋದರೆ ರೇಖಾ ವಿನ್ಯಾಸ ಸಾಧಿತವಾಗುವುದಾದರೂ ಹೇಗೆ? ಆದರೆ ತಮ್ಮದೇ ಶೈಲಿ ಊರವರ ಶೈಲಿ ಆಗಬೇಕು ಅನ್ನುವ ಲೋಭವಿದ್ದರೆ ಏನು ಮಾಡೋಣ?

ಹಾಗಿದ್ದಲ್ಲಿ ಶೈಲಿಯ ಪ್ರವೃತ್ತಿ ಹೇಗಿದ್ದರೆ ಒಳ್ಳೆಯದು?

ಆಯಾಯ ಕ್ರಮಗಳಲ್ಲಿ ಆಯಾಯ ಶೈಲಿಗಳನ್ನು ಮುಂದುವರೆಸಿಕೊಂಡು ಹೋಗುವುದು ಎಲ್ಲದಕ್ಕೂ ಉತ್ತಮ. ಅದರಲ್ಲೂ ಮೂಗೂರು, ಮೈಸೂರು ಶೈಲಿಗೆ ಇತ್ತೀಚೆಗೆ ಅಸ್ತಿತ್ತ್ವವೇ ಇಲ್ಲದಂತಾಗಿದೆ. ಯಾವ ಶೈಲಿಯೇ ಆದರೂ ರೇಖಾವಿನ್ಯಾಸ ಸರಿಯಾಗಿರಬೇಕಲ್ವಾ? ಸೊಲ್ಕಟ್ಟ್ ಸಾಹಿತ್ಯಗಳಿಗೆ ಸರಿಯಾಗಿ ಮಾಡುವುದೇ ಮುಖ್ಯ ಅಲ್ವೇ ?

ಪ್ರಶಸ್ತಿ ಪುರಸ್ಕಾರಗಳ ಮಟ್ಟ ಹೇಗಿದೆ?

ಇಂದಿನ ಹಲವು ಪ್ರಶಸ್ತಿಗಳು ಅರ್ಹತೆಗಿಂತಲೂ ಹೆಚ್ಚಾಗಿ ಶಿಫಾರಸ್ಸುಗಳನ್ನೇ ಅವಲಂಬಿಸಿದೆ. ಪ್ರಶಸ್ತಿ, ಅಭಿನಯ ಸರಸ್ವತಿ, ನಾಟ್ಯರಾಣಿ ಶಾಂತಲೆ ಎಂಬ ಅಭಿದಾನಗಳೆಲ್ಲಾ ಚಿಕ್ಕ ವಯಸ್ಸಿಗೆ ಒಲಿಯಬೇಕು ಎಂಬ ಹಠ ಪೋಷಕರದ್ದು. ಆದರೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಪ್ರಶಸ್ತಿ ಪುರಸ್ಕಾರಗಳ ಅಮಲು ಹತ್ತಿಸಿದರೆ ಅದೇ ಅವರ ಆಸಕ್ತಿಯಾಗುತ್ತದೆಯೇ ವಿನಾ ನೃತ್ಯವಾಗುವುದಿಲ್ಲ. ಗುರುಗಳಲ್ಲೂ ಕೂಡಾ ತಮ್ಮಿಂದ ವಿದ್ಯಾರ್ಥಿಗಳು ಒಳ್ಳೆಯ ದಾರಿಯಲ್ಲಿ ಮುನ್ನಡೆದರೆ ಅದುವೇ ಪ್ರಶಸ್ತಿಯೆಂದು ಭಾವಿಸುವವರು ಕಡಿಮೆ.

ಇದಕ್ಕೆಲ್ಲಾ ಮುಖ್ಯ ಯಾರು ಕಾರಣ ಅಂತೀರಿ?

ಈಗ ಜನರಲ್ಲಿ ದುಡ್ಡು ತುಂಬಾ ಆಗಿದೆ. ಸ್ಪರ್ಧೆಯಲ್ಲಿ ಫಸ್ಟ್ ಬರ್ಬೇಕು, ಪೇಪರ್‌ನಲ್ಲಿ ಹಾಕಬೇಕು ಎನ್ನುವ ಮನಸ್ಸು ; ಫಲವಾಗಿ ವಿದ್ಯಾರ್ಥಿಗಳ ಕೈಯಲ್ಲಿ ಒದ್ದಾಡುವ ಗುರುಗಳೂ ಇದ್ದಾರೆ. ಆದರೆ ಮಕ್ಕಳ ಬೆಳವಣಿಗೆ ಅಲ್ಲಿಗೇ ಕುಂಠಿತವಾಗುವುದೆಂಬ ಪರಿಜ್ಞಾನವೂ ಇರುವುದಿಲ್ಲ. ಒಟ್ಟಾರೆ ನೃತ್ಯವೆಂದರೆ ಪೋಷಕರಿಗೂ ಪ್ರತಿಷ್ಠೆಯ ಸಾಧನ. ಪರೀಕ್ಷೆ, ಸ್ಪರ್ಧೆಗಳಲ್ಲಿ ತಮ್ಮ ಮಕ್ಕಳೇ ಮೊದಲಿಗರಾಗಬೇಕು ಎನ್ನುವುದೇನೋ ಒಳ್ಳೆಯದೇ! ಆದರೆ ಅದು ಲೋಭವಾಗಬಾರದು.

ಗುರು-ಶಿಕ್ಷಕರದ್ದು ಏನೂ ತಪ್ಪಿಲ್ಲವೇ?

ದುಡ್ಡು ಕೊಡ್ತಾರೆ ಅಂತ ಪರೀಕ್ಷೆಗೆ ಕಟ್ಟಿಸಿ ಪಾಸು ಮಾಡುವುದು ಗುರುಗಳಿಗೆ ಒಳ್ಳೆಯದಲ್ಲ. ಎಲ್ಲವನ್ನೂ ಸರಿ ಮಾಡ್ಲಿಕ್ಕೆ ಆಗೋದಿಲ್ಲ; ನಿಜ. ಆದರೆ ಗುರುಗಳು ಸ್ವಲ್ಪವಾದರೂ ಮಟ್ಟವನ್ನು ಕಾಯ್ದುಕೊಳ್ಳುವ, ಉಳಿಸುವ ಶಕ್ತಿ ಕಂಡುಕೊಂಡರೆ ಒಳ್ಳೆಯದಾಗಬಹುದು. ಅಷ್ಟು ಮಾತ್ರವಲ್ಲ, ಕೆಲವು ಗುರು(?)ಗಳಿಗೆ ಶಿಷ್ಯರಲ್ಲಿ ತಾರತಮ್ಯ ನೋಡುವ ಪ್ರವೃತ್ತಿ ಇದೆ. ದುಡ್ಡಿರೋವ್ರು ಎಂದು ಹೆಚ್ಚಿನ ಒತ್ತು ಕೊಡೋದು, ಪಾಸು-ಫೇಲ್ ಮಾಡೋದು ಸಾಮಾನ್ಯವೆನಿಸಿದೆ. ಕೆಲವು ಮಕ್ಕಳು ಪ್ರತಿಭಾವಂತರಾಗಿರುತ್ತಾರೆ; ಕೆಲವರು ಪೆದ್ದರಾಗಿರುತ್ತಾರೆ. ಆದರೆ ಗುರುಗಳು ತಾಳ್ಮೆಯಿಂದ ಕಲಿಸಬೇಕು. ಗುರು ಎನ್ನುವುದಕ್ಕೆ ಬಹಳ ಉನ್ನತವಾದ ಸ್ಥಾನವಿದೆ.

‘ಭರತನಾಟ್ಯ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ’ ಎಂಬ ಆರೋಪ ಇದೆಯಲ್ವಾ? ಭಾಷೆಯು ಕಲೆಯ ಸಂವಹನಕ್ಕೆ ತೊಡಕಾಗುತ್ತದೆಯೇ?

‘ಭರತನಾಟ್ಯ ನಮ್ಮಂತವರಿಗೆ ಅರ್ಥವಾಗುವುದಿಲ್ಲ’ ಅನ್ನುತ್ತಾರಲ್ಲಾ ; ಕೇರಳದ ಕಥಕಳಿ ಹೇಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಯಿತು-ಅರ್ಥವಾಯಿತು? ಹಾಗಾದರೆ ಭರತನಾಟ್ಯವನ್ನು ಹಿಂದಿಯಲ್ಲಿ ಮಾಡಿದರೆ ಅರ್ಥವಾಗುತ್ತಾ ? ತ್ಯಾಗರಾಜರ ಕೀರ್ತನೆಯನ್ನು ಕನ್ನಡದಲ್ಲಿ ಮಾಡಿ ಅಂದ್ರೆ ಅದರ ಗುಣಮಟ್ಟಕ್ಕೆ ಏರಲು ಸಾಧ್ಯವೇ ? ಕಥಕಳಿ, ಕೂಚಿಪುಡಿಯನ್ನು ಕನ್ನಡದಲ್ಲಿ ಮಾಡಿ ಅಂದರೆ ಹೇಗೆ ಸಾಧ್ಯ ? ಅರ್ಥವಾಗುವುದಿಲ್ಲ ಅನ್ನೋದೆಲ್ಲಾ ಸುಳ್ಳು. ಜನರಿಗೆ ಅರ್ಥವಾಗುತ್ತದೆ. ಕಲಾವಿದನಿಗೆ ಸರಿಯಾಗಿ ಅಭಿವ್ಯಕ್ತಿಸಲು ಬರೋದಿಲ್ಲ ಅಂದ್ರೆ ಜನರಿಗೆ ಅರ್ಥವಾಗೋದಿಲ್ಲ ಎಂಬ ಆರೋಪ ಹೊರಿಸುತ್ತಾರೆ. ಹಾಗಂತ ಜನರಿಗೆ ಅರ್ಥವಾಗದ್ದು ಮಾಡಬೇಕೆಂದು ಹೇಳುವುದಲ್ಲ.

ಹಾಗೊಂದು ವೇಳೆ ಜನರಿಗೆ ಅರ್ಥ ಮಾಡಿಸಲಿಕ್ಕೆ ಅಂತೇನಾದರೂ ಹೊರಟರೆ ಸಾಹಿತ್ಯಿಕವಾಗಿ ಮಾಡುವುದು ಹೇಗೆ? ಯಕ್ಷಗಾನವನ್ನು ತಮಿಳಲ್ಲಿ ಮಾಡಬಹುದು ; ಆದರೆ ಕನ್ನಡದಷ್ಟು ಶಕ್ತಿಯುತವಾಗಿರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.ಅದಕ್ಕೆ ಅದರದ್ದೇ ಆದ ಸೊಗಡು ಇರುತ್ತದೆ. ಉದಾ : ನಮ್ಮದೇ ಸಂಯೊಜನೆಯಲ್ಲಿ ಮೂಡಿಬಂದ ಏಳುವೆರ್ ದೆಯ್ಯರ್. ಅದು ತುಳುವಿನಲ್ಲಿದೆ. ಕನ್ನಡದಲ್ಲಿ ಸಪ್ತ ಮಾತೃಕೆಯರು ಎಂದೂ ಮಾಡಿದ್ದೇವೆ. ಆದರೆ ತುಳುವಿನಷ್ಟು ಪ್ರಭಾವಶಾಲಿಯಾದುದಲ್ಲ.

ಅದರಲ್ಲೂ ಈಗೀಗ ನಾಯಕಿಭಾವ ಇಲ್ಲದ ಎಷ್ಟೋ ವರ್ಣಗಳು ಇವೆ. ಇಂದಿನ ಕನ್ನಡ ವರ್ಣಗಳಲ್ಲಂತೂ ನಾಯಕಿ ಭಾವವೂ ಸರಿಯಾಗಿರುವುದಿಲ್ಲ. ಅದರಲ್ಲೂ ವರ್ಣಗಳ ಮಟ್ಟ ಗಮನಾರ್ಹವಾಗಿ ಇಳಿದಿದೆ. ಸಂಯೋಜನೆಗಳು ಕೂಡಾ ತಾಳ-ಲಯ-ಪಾಠಾಕ್ಷರಗಳಿಗೆ ಸಮವಾಗಿರುವುದಿಲ್ಲ. ವರ್ಣ ವರ್ಣದ ಹಾಗೇ ಇರಬೇಕು. ಅರ್ಥವಾಗುವುದಿಲ್ಲ ಎನ್ನುತ್ತಾ ಸರಳೀಕರಿಸುವುದು ಯಾಕೆ? ಬೇಕಾದರೆ ಸಣ್ಣದು ಮಾಡಿಕೊಂಡು ಸಮಯಕ್ಕೆ ಅನುಕೂಲವಾಗಿ ಒಂದಷ್ಟು ಹೊಂದಾಣಿಕೆ ಮಾಡಬಹುದು. ಆದರೆ ಏನನ್ನು ಮಾಡುತ್ತೇವೆಯೋ ಅದನ್ನು ಸರಿಯಾಗಿ ಮಾಡಬೇಕು. ಸಂಗೀತ ಕಚೇರಿ ಎಂಬಂತೆ ನಾವು ನೀಡುವ ನೃತ್ಯ ಪ್ರದರ್ಶನ ನಾಟ್ಯ ಕಚೇರಿ ಎನ್ನುವುದು ಅರ್ಥವಾಗಬೇಕು.

ಎಂತಹ ಬೆಳವಣಿಗೆ ನಮ್ಮ ಭರತನಾಟ್ಯ ನಾಟ್ಯಕ್ರಮಕ್ಕೆ ಬೇಕು? ನಿಮ್ಮ ಸಲಹೆಗಳೇನು?

ಸರಿಯಾಗಿ ನಟುವಾಂಗ ಮಾಡುವವರು, ಅದರ ಜ್ಞಾನ ಇರುವವರು ಹೆಚ್ಚಾಗಬೇಕಿದೆ. ಇಲ್ಲದಿದ್ದರೆ ವೈಯಕ್ತಿಕ ನಾಟ್ಯ ಕಚೇರಿ ಯಾವಾಗ ಉಳಿಯುವುದು? ಗುರುಗಳೇ ನಟುವಾಂಗ ಮಾಡಬೇಕು ಅಂತೇನಿಲ್ಲ. ಆದರೆ ಹಾಡುವವರಿಗೆ ನಟುವಾಂಗ ಯಾವತ್ತೂ ಕಿರಿಕಿರಿ ಮಾಡಬಾರದು ಎಂಬುದು ನಟ್ಟುವನ್ನಾರ್‌ಗಳಿಗೆ ಗೊತ್ತಿರಬೇಕಿದೆ.

ನಮ್ಮಲ್ಲಿನ ದೇವಸ್ಥಾನಗಳಲ್ಲಿ ಶಾಸ್ತ್ರೀಯ ಸಂಗೀತ ನೃತ್ಯಗಳಿಗೆ ಅವಕಾಶ ಎಂದು ಕಡ್ಡಾಯ ಮಾಡಿಸಬೇಕು. ಅದನ್ನ ಬಿಟ್ಟು ಆರ್ಕೆಸ್ಟ್ರಾ ಮಾಡಿಸಿದರೆ ಹೇಗೆ? ಈಗೀಗ ಸಂಗೀತ ನೃತ್ಯ ಕಾರಕ್ರಮವೆಂದರೆ ಅಷ್ಟಬಂಧ-ಬ್ರಹ್ಮಕಲಶ, ವಾರ್ಷಿಕೋತ್ಸವಗಳಲ್ಲಿ ಮೊದಲು ಎರಡು ಭಕ್ತಿ ಸಂಗೀತ, ನಂತರ ಫಿಲ್ಮ್ ಹಾಡಿಗೆ ಡ್ಯಾನ್ಸ್ ಮಾಡುವುದು ಎಂದೇ ಆಗಿಹೋಗಿದೆ. ಆರ್ಕೆಸ್ತ್ರಾ ಹಾಕಿ ಡ್ಯಾನ್ಸ್ ಮಾಡುವುದು ಮಾಮೂಲಿಯೆನಿಸಿದೆ.

ಕೇರಳದ ದೇವಸ್ಥಾನಗಳಲ್ಲಿ ಸಂಗೀತ ನಾಟ್ಯಕ್ಕೆ ಫಂಡ್ ಇದೆ. ಆದರೆ ಇಲ್ಲಿನ ಪ್ರತೀ ದೇವಸ್ಥನದಲ್ಲೂ ಮಕ್ಕಳಿಂದ ಉಚಿತ ಕಾರ್ಯಕ್ರಮ ಕೊಡಿಸೋದು ಜಾಸ್ತಿ ಆಗಿದೆ. ಹಾಗಾಗಿ ಕಲಾವಿದರಿಗೆ ಸಂಭಾವನೆಯ ಮಟ್ಟವೂ ಕುಸಿಯುತ್ತಿದೆ. ಹೊರಗಿನ ರಾಜ್ಯದ ಕಲಾವಿದರಿಗೆ ಸಿಗುವ ರಾಜ ಮರ್ಯಾದೆ, ಇಲ್ಲಿನವರಿಗೆ ಇಲ್ಲವೆಂಬಂತಾಗುವುದೇ ಹೀಗೆ ! ಗೌರವವನ್ನಿಟ್ಟುಕೊಳ್ಳಲಿಕ್ಕೆ ಬಾರದೆ ಹೋದರೆ ಮತ್ತೆ ದೂರುವುದರಲ್ಲಿ ಅರ್ಥವಿಲ್ಲ.

ಈ ಹಂತದಲ್ಲಿ ಭರತನಾಟ್ಯಕ್ಕೆ ಸಂಬಂಧಿಸಿದ ಸಂಸ್ಥೆ, ಪರಿಷತ್, ಅಕಾಡೆಮಿಗಳ ಸ್ಥಾಪನೆ ಮತ್ತು ಪಾತ್ರ ಹೇಗಿರಬೇಕು?

ನೃತ್ಯ ಸಂಗೀತಗಳಿಗಾಗಿ ಹೊಸ ಪರಿಷತ್, ಸಂಸ್ಥೆ ಅಂತ ಆಗಾಗ ಮಾಡುತ್ತಲೇ ಇರುತ್ತಾರೆ ; ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರೆ ಅದರ ಹಿಂದಿನ ಕಾರ್ಯ ತತ್ಪರತೆ, ಜವಾಬ್ದಾರಿ, ಸೌಹಾರ್ದ ಸಂಬಂಧಗಳನ್ನು ಮರೆಯುತ್ತಾರೆ. ಹಳೆಯ ದೇವಸ್ಥಾನಕ್ಕೆ ಜೀರ್ಣೋದ್ಧಾರ ಮಾಡದೆ ಹೊಸತು ದೇವಸ್ಥಾನ ಕಟ್ಟಿ ಬ್ರಹ್ಮಕಲಶ ಮಾಡುವುದು ಏತಕ್ಕೆ? ಆದರೆ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಪ್ರತ್ಯೇಕವಾದ ಹಾಗೆ ಸಂಗೀತ ನೃತ್ಯಕ್ಕೂ ಪ್ರತ್ಯೇಕ ಅಕಾಡೆಮಿಯೆನ್ನುವುದು ರೂಪುಗೊಂಡರೆ ಒಳ್ಳೆಯದು ಎನ್ನುವುದು ನನ್ನ ಅನಿಸಿಕೆ.

ಇಂದಿನ ವಿಮರ್ಶೆಗಳ ಸ್ಥಿತಿ ಹೇಗಿದೆ ?

ಈಗೀಗ ವಿಮರ್ಶೆಗಳನ್ನು ಏನೂ ಗೊತ್ತಿಲ್ಲದವರು ಬರೆಯುತ್ತಾರೆ. ಅನುಭವ ಇಲ್ಲದವರೂ ಬರೆಯುತ್ತಾರೆ. ಎ ಯಿಂದ ಝಡ್ ವರೆಗೆ ಎಲ್ಲವೂ ಸರಿ ಎಂದೇ ಆಗಿದೆ. ಸಾಮಾನ್ಯ ಪೇಕ್ಷಕರು ಚೆನ್ನಾಗಿದೆ ಅನ್ನೋದಕ್ಕೂ, ವಿದ್ವಾಂಸರ ಪ್ರಶಂಸೆಗೂ ವ್ಯತ್ಯಾಸವಿದೆಯಲ್ವೇ? ಹಾಗಂತ ಯಾರೂ ಆಲೋಚನೆ ಮಾಡುವುದಿಲ್ಲ.

ಆದರೆ ವಸ್ತುನಿಷ್ಟವೆಂದು ಮಕ್ಕಳಿಗೆ ಕಟು ವಿಮರ್ಶೆ ಮಾಡಿ ನೋಯಿಸಬಾರದು. ವೇದಿಕೆಗಳಲ್ಲಿ ಪ್ರೋತ್ಸಾಹಕವಾಗಿ ಮಾತನಾಡಬೇಕಾಗುತ್ತದೆ; ಬರೆಯುವಾಗ ನೋಡಿ ಅನುಭವಿಸಿ ಬರೆಯಬೇಕು.

ಸೋದರ ಕಲೆಗಳ ಕಲಿಕೆ ಯಾವ ಮಟ್ಟದಲ್ಲಿದ್ದರೆ ಸೂಕ್ತ ?

ಸೋದರ ಕಲೆಗಳನ್ನೂ ಕಲಿಯಬೇಕು. ಆದರೆ ಒಂದು ವಿಷಯವನ್ನು ಸರಿಯಾಗಿ ಕಲಿತ ಮೇಲಷ್ಟೇ ಉಳಿದುದರ ಬಗ್ಗೆ ಗಮನ ಹರಿಸಬೇಕು. ಆಗ ಮಾತ್ರ ಅದನ್ನೂ ಅರಗಿಸಿಕೊಳ್ಳಲಿಕ್ಕಾದೀತು.

ಆಲದ ಮರ ಬೆಳೆಯೋದಕ್ಕೆ ಮುಂಚೆ ತಾಯಿಬೇರನ್ನು ಗಟ್ಟಿ ಮಾಡಿಕೊಳ್ಳುತ್ತದೆ. ಅಂತೆಯೇ ನಮ್ಮ ತಾಯಿಬೇರನ್ನು ನಾವು ಗಟ್ಟಿ ಮಾಡಿಕೊಳ್ಳಬೇಕು.

(ಉದಯವಾಣ ಕೃಪೆ ಕೆಳಗಿನ ಸಾಲುಗಳು)

ಉಳ್ಳಾಲ್ ಮೋಹನ್ ಕುಮಾರ್

ನೃತ್ಯ ಕ್ಷೇತ್ರದಲ್ಲಿ ನೃತ್ಯಗುರು ಎಂದು ಗುರುತಿಸಲ್ಪಡುವ ಉಳ್ಳಾಲ  ಮೋಹನ ಕುಮಾರ್ ಇವರು ಮಂಗಳೂರು ಸೋಮೇಶ್ವರದ ಕೊಲ್ಯದಲ್ಲಿ 4.10.1933ರಲ್ಲಿ ಜನಿಸಿದರು. ವೃತ್ತಿಯಲ್ಲಿ  ಶಿಕ್ಷಕರಾಗಿದ್ದು 40 ವರ್ಷಗಳ ಸೇವೆ ಸಲ್ಲಿಸಿರುವ ಇವರು ಪ್ರವೃತ್ತಿಯಲ್ಲಿ  ಓರ್ವ ನೃತ್ಯಗುರುವಾಗಿ ಪ್ರಸಿದ್ಧರು. ಹಿರಿಯ ನೃತ್ಯಗುರು ಮಾ. ವಿಠಲ್ ಇವರಲ್ಲಿ ನೃತ್ಯ ತರಬೇತಿ ಪಡೆದು ನೃತ್ಯ ಕಲಾಪ್ರವೀಣ ಬಿರುದಾಂಕಿತ ದಿ. ರಾಜನ್ ಅಯ್ಯರ್ ಇವರಲ್ಲಿ ಅಭ್ಯಾಸ ಮುಂದುವರಿಸಿದರು. ಬಳಿಕ ತಮಿಳುನಾಡಿನ ಪ್ರಸಿದ್ಧ ಭರತ ನೃತ್ಯಗುರು ಅಭಿನಯ ಶಿರೋಮಣಿ ದಿ> ರಾಜರತ್ನಂ ಪಿಳ್ಳೆ ಇವರಲ್ಲಿ ಪಂದನಲ್ಲೂರು ಸಂಪ್ರದಾಯದ ಭರತನಾಟ್ಯ ಶೈಲಿಯನ್ನು ಕರಗತ ಮಾಡಿಕೊಂಡರು.

ನೃತ್ಯದಲ್ಲಿ  ಶಾಸ್ತ್ರೀಯತೆಯ ಮಟ್ಟವನ್ನು ಸಡಿಲಗೊಳಿಸುವಲ್ಲಿ ರಾಜಿ ಮಾಡಿಕೊಳ್ಳದ ಇವರು ಅನೇಕ ನೃತ್ಯ ಬಂಧುಗಳಿಗೆ, ಶಾಸ್ತ್ರೀಯ ಕೀರ್ತನೆಗಳಿಗೆ, ನೃತ್ಯ ಸಂಯೋಜಿಸಿರುವರು ಅಲ್ಲದೆ, ಇವರ ನಿರ್ದೇಶನದ ಶ್ರೀ ಪರಶುರಾಮ, ಮನ್ಮಥದಹನ, ಪಳನಿ ಮಹಾತ್ಮ್ಯ, ಶ್ರೀಕೃಷ್ಣ ಪಾರಿಜಾತ, ಮಹಿಷಾಸುರ ಮರ್ದಿನಿ, ಶಿವಗಾಮಿಶಪಥಂ, ಶ್ರೀ ಆದಿಶಂಕರಾಚಾರ್ಯ, ಪುತ್ರಕಾಮೇಷ್ಠಿ ಯಾಗ  ಮೂದಲಾದ ನೃತ್ಯ ರೂಪಕಗಳು ಜನಪ್ರಿಯವಾಗಿವೆ. ಪ್ರಸಿದ್ಧ ವಿದ್ವಾಂಸ ಡಾ> ಅಮೃತ ಸೋಮೇಶ್ವರ ವಿರಚಿತ “ತುಳುವಾಲ  ಬಲಿಯೇಂದ್ರ’, “ಎಳುವೆರ್ ದಯ್ನಾರ್’ ಎಂಬ ತುಳು ಶಾಸ್ತ್ರೀಯ ನೃತ್ಯ ರೂಪಕಗಳು ಸುಮಾರು  250ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಕಂಡಿವೆ.

ಕೇಂದ್ರ ಸರಕಾರದ ವಾರ್ತಾ ಇಲಾಖೆಯ ಡಾಕ್ಯುಮೆಂಟರಿ ಚಲನಚಿತ್ರಕ್ಕೆ ಸಾಮೂಹಿಕ ನೃತ್ಯ ಸಂಯೋಜಿಸಿ ಇಲಾಖೆಯಿಂದ ಪ್ರಶಸ್ತಿ ಪತ್ರ ಪಡೆದಿರುವರು. ಬೆಂಗಳೂರು ದೂರದರ್ಶನದಲ್ಲಿ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನ ನೀಡಲು ಕಲಾವಿದರನ್ನು ಆರಿಸುವ ಅಡಿಶನ್­ನಲ್ಲಿ ಪರೀಕ್ಷಕರಾಗಿ ನಿಯೋಜಿಸಲ್ಪಟ್ಟಿದ್ದಾರೆ. ಕರ್ನಾಟಕ ಸರಕಾರದ ಶಾಸ್ತ್ರೀಯ ನೃತ್ಯ ಪರೀಕ್ಷಾ ಮಂಡಳಿಯಲ್ಲಿ ಪರೀಕ್ಷಕರಾಗಿಯೂ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವರು. ದೂರದರ್ಶನದ ಚಂದನ ವಿಭಾಗದ ಬೆಳಗು ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. ದೂರದರ್ಶನದಲ್ಲಿ ಇವರ ಶಿಷ್ಯರ ನೃತ್ಯ ಪ್ರದರ್ಶನಗಳು ಪ್ರಸಾರವಾಗಿ ಪ್ರಸಿದ್ಧಿ ಪಡೆದಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಭರತನಾಟ್ಯ ಪದವಿ ತರಗತಿಯ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿರುವರು. ಉಡುಪಿ ದ.ಕ. ಜಿಲ್ಲೆಯನ್ನೊಳಗೊಂಡ ಕರಾವಳಿ ನೃತ್ಯ ಪರಿಷತ್ ಇದರ ಸ್ಥಾಪಕಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವರು. ಮಂಗಳೂರು ಆಕಾಶವಾಣಿಯ ಸಲಹಾ ಸಮಿತಿಯ ಸದಸ್ಯರಾಗಿಯೂ ಆರಿಸಲ್ಪಟ್ಟಿದ್ದರು.

ಇವರ ನೃತ್ಯ ಕಲಾ ಬದುಕಿನ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವು 1985ರಲ್ಲಿ ಪುರಸ್ಕಾರವನ್ನು ಮತ್ತು  1922ರಲ್ಲಿ ಕರ್ನಾಟಕ ಕಲಾತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ. ಅನೇಕ ಸಂಘ ಸಂಸ್ಥೆಗಳು ಇವರ ಕಲಾಸೇವೆಯನ್ನು ಗುರುತಿಸಿ ಸಮ್ಮಾನ ಮಾಡಿವೆ. ಕೊಲ್ಯ ಶ್ರೀ ರಮಾನಂದ ಸ್ವಾಮೀಜಿಯವರಿಂದ ನೃತ್ಯ ಸಿದ್ಧಯೋಗಿ, ಹುಟ್ಟೂರಿನ ಸಾರ್ವಜನಿಕ ಸಮ್ಮಾನದಲ್ಲಿ  ನಾಟ್ಯ ಮೋಹನ ಗ್ರಂಥಗಳ ಸಮರ್ಪಣೆ, ಚಿತ್ರದುರ್ಗ ನೃತ್ಯೋತ್ಸವದಲ್ಲಿ ನಾಟ್ಯಕಲಾ ಕೌಸ್ತುಭ, ಮೈಸೂರು ಭಾರತೀಯ ನೃತ್ಯಕಲಾ ಪರಿಷತ್ತಿನಿಂದ  ನೃತ್ಯ ಕಲಾತಿಲಕ, ಉಳ್ಳಾಲ ಲಯನ್ಸ್ ಕ್ಲಬ್ ವತಿಯಿಂದ ನಾಟ್ಯಕಲಾ ಕೇಸರಿ, ಅಖೀಲ ಕರ್ನಾಟಕ ನೃತ್ಯ ಕಲಾವಿದರ ಸಮಾವೇಶದಲ್ಲಿ ನಾಟಕಲಾವಾರಿಧ, ಮುಂಬಯಿ ಬಾನ್ಸೂರಿ ಕಲಾವೇದಿಕೆಯಲ್ಲಿ ನಾಟ್ಯ ಕಲಾಶಿರೋಮಣಿ, ಮಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಸುವರ್ಣ ಮೋಹನ, ಗದಗಿನ ಕಲಾವಿಕಾಸ ಪರಿಷತ್ತಿನಿಂದ ರಾಷ್ಟ್ರೀಯ ಕಲಾವಿಕಾಸ ಪ್ರಶಸ್ತಿ, 2007 ಎಡನೀರು ಶ್ರೀ ಕೇಶವಾನಂದ ಭಾರತೀಗಳವರಿಂದ ಅನುಗ್ರಹ ಪ್ರಶಸ್ತಿ, ಬೆಂಗಳೂರು ಪ್ರತಿಷ್ಠಿತ ಬಿರಾದರಿ ಸಂಸ್ಥೆಯಿಂದ ಬಿರಾದರಿ ಪ್ರಶಸ್ತಿ, ಹಾಸನದಲ್ಲಿ ಮಂಗಳ ಕಲಾ ವೇದಿಕೆಯಲ್ಲಿ ಸಾಧನಾ ಪ್ರಶಸ್ತಿ, ಮಂಗಳೂರು ಸುಮ ಸೌರಭ ಪತ್ರಿಕೆಯ ಸೌರಭ ಪ್ರಶಸ್ತಿ, ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಂದ ರಾಮ ವಿಠಲ ಪ್ರಶಸ್ತಿ ಮೂದಲಾದ ಬಿರುದುಗಳು ಇವರಿಗೆ ಸಂದಿವೆ. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ.  ಸುಪ್ರಸಿದ್ಧ ಅಂತಾರಾಷ್ಟ್ರೀಯ ನರ್ತಕಿ ವಸುಂಧರಾ ದೊರೆಸ್ವಾಮಿಯವರ ಪಾರಂಗೋತ್ಸವದಲ್ಲಿ  “ನೃತ್ಯ ಸುಂದರಂ’ ಬಿರುದು ಸ್ವರ್ಣ ಪದಕದೊಡನೆ ಲಭಿಸಿದೆ.

1956ರಲ್ಲಿ ಸ್ಥಾಪಿಸಲ್ಪಟ್ಟ ಮೋಹನ್ ಕುಮಾರ್ ನಾಟ್ಯ ನಿಕೇತನ ನೃತ್ಯ ಸಂಸ್ಥೆಯು 50 ಸಂವತ್ಸರಗಳ ಸುವರ್ಣ ಮಹೋತ್ಸವವನ್ನು ಮಂಗಳೂರು ಪುರಭವನದಲ್ಲಿ 5 ದಿನಗಳ ನೃತ್ಯೋತ್ಸವದೊಡನೆ ಅದ್ದೂರಿಯಾಗಿ ಆಚರಿಸಿದೆ. ಈ ಸಂದರ್ಭದಲ್ಲಿ ಅನೇಕ ಘನ ವಿದ್ವಾಂಸರನ್ನು  ಸಮ್ಮಾನಿಸಿ ಗೌರವಿಸಲಾಗಿದೆ. ಅದರ ಸವಿನೆನಪಿಗಾಗಿ ಭರತಾರ್ಪಣೆ ಎಂಬ ಸ್ಮರಣ ಸಂಚಿಕೆ ಬಿಡುಗಡೆಯಾಗಿದೆ.

ನಾಟ್ಯ ನಿಕೇತನದಲ್ಲಿ ಗುರುಕುಲ ಪದ್ಧತಿಯ ನೃತ್ಯ ಶಿಕ್ಷಣ ನೀಡಲು ಇವರ  ಸಹಧರ್ಮಿಣಿ ಶ್ರೀಮತಿ ಸಬಿತಾ  ಇವರ ತುಂಬು ಹೃದಯದ ಸಹಕಾರ ಅವಿಸ್ಮರಣೀಯವಾಗಿದೆ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿರುವ ನಾಟ್ಯ ನಿಕೇತನದಲ್ಲಿ ತರಬೇತಿ ಹೊಂದಿದ ಅನೇಕರು ನೃತ್ಯ ಶಿಕ್ಷಕರಾಗಿಯೂ ಪ್ರದರ್ಶನ ಕಲಾವಿದರಾಗಿಯೂ, ನೃತ್ಯ ಪ್ರಸಾರ ಕಾರ್ಯ ಮಾಡುತ್ತಿರುವುದು ಗಮನಾರ್ಹವಾಗಿದೆ. ಕರಾವಳಿ ಜಿಲ್ಲೆಗಳ ಬಹುಪಾಲು ನೃತ್ಯ ಶಿಕ್ಷಕರು ನಾಟ್ಯ ನಿಕೇತನದಲ್ಲಿ ಪಳಗಿದವರೇ ಆಗಿರುವರು. ವಿದೇಶಗಳಿಂದಲೂ ಆಗಾಗ ಕಲಾವಿದರು ಆಗಮಿಸಿ ಈ ಸಂಸ್ಥೆಯಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮೋಹನ್ ಕುಮಾರರ ಈ ನೃತ್ಯ ಪರಂಪರೆಯನ್ನು ತಮ್ಮ  ಶಿಷ್ಯರು ಉಳಿಸಿ ಬೆಳೆಸಿ ಬರಬೇಕೆಂಬ ಹಂಬಲ ಇವರದು.

ನಾಟ್ಯ ನಿಕೇತನದ ರೂವಾರಿಯಾದ ಮೋಹನ್ ಕುಮಾರರು ತನ್ನ ಹೆಚ್ಚಿನ ಜವಾಬ್ದಾರಿಯನ್ನು ಶಾಸ್ತ್ರೀಯ ನೃತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ತನ್ನ ಪುತ್ರಿ ನೃತ್ಯ ವಿದುಷಿ ಶ್ರೀಮತಿ ರಾಜಶ್ರೀಯವರಿಗೆ ಒಪ್ಪಿಸಿ  ಈ ನೃತ್ಯ ಕ್ಷೇತ್ರದಲ್ಲಿ ಸನಾತನ ಸಂಸ್ಕೃತಿಯು ಉಳಿಯುವ ಸಾರ್ಥಕ ಸೇವೆ ಸಲ್ಲುವಂತಾಗಬೇಕೆಂಬ ಆಶಯ ಹೊಂದಿರುವರು.

ಕನ್ನಡತಿಯಾಗಿ ಕರಾವಳಿಯಲ್ಲಿ ನೆಲೆಸಿದ ನೃತ್ಯಸರಸ್ವತಿ : ಶ್ರೀಮತಿ ಜಯಲಕ್ಷ್ಮಿ ಆಳ್ವ
ಜಯಲಕ್ಷ್ಮಿ ಆಳ್ವ

ಸ್ವತಃ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಂದಲೇ ‘ನೃತ್ಯ ಸರಸ್ವತಿ’ ಎಂದು  ಹೊಗಳಿಸಿಕೊಂಡು ಗೌರವಕ್ಕೆ ಪಾತ್ರರಾದವರು ಶ್ರೀಮತಿ ಜಯಲಕ್ಷ್ಮಿ ಆಳ್ವ.. ಅವರಿಗೀಗ ೭೭ರ ಹರೆಯ.  ತವರೂರು ಕುಂಭಕೋಣಂ. ೧೯೩೩ರಲ್ಲಿ ಜನನ. ಭರತನಾಟ್ಯದ ಪಂದನಲ್ಲೂರು ಪದ್ಧತಿಯ ಮೇರು ಗುರುಗಳಾದ  ಕಲಾಕ್ಷೇತ್ರದಲ್ಲಿ ಅರುಂಡೇಲ್ ಅವರೊಂದಿಗೆ ಸೇವೆ ಸಲ್ಲಿಸಿದ ಗುರು ಕೆ.ಎನ್. ದಂಡಾಯುಧ ಪಾಣಿ  ಪಿಳ್ಳೈ ಅವರ ಪಟ್ಟ ಶಿಷ್ಯೆ. ಹಿರಿಯ ನೃತ್ಯದಿಗ್ಗಜರಾದ ಸ್ವರ್ಣಂ ಸರಸ್ವತಿ, ಗೌರಿ ಅಮ್ಮಾಳ್,  ಕರುಣಾಕರ್ ಪಣಿಕ್ಕರ್ ಅವರಲ್ಲಿ ಅಭಿನಯ ಮತ್ತು ಕಥಕಳಿಯನ್ನು ಅಭ್ಯಾಸ ಮಾಡಿದವರು.

ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಂದ 'ಸ್ತ್ರೀರತ್ನ' ಪ್ರಶಸ್ತಿ ಪ್ರದಾನ

ಶಿವರಾಮ ಕಾರಂತರ ಸಂಬಂಧಿ ರಾಮಕೃಷ್ಣ ಆಳ್ವ ಅವರ ಸತಿಯಾಗಿ ಕರ್ನಾಟಕಕ್ಕೆ ಬಂದ ಮೇಲೆ,  ಕನ್ನಡ ಕಲಿತು ಕನ್ನಡತಿಯಾಗಿ ಬೆಳೆದು, ಹಲವು ಕಲಾವಿದರಿಗೆ ದಿಕ್ಸೂಚಿಯಾದರು. ೧೯೫೯ರಲ್ಲಿ  ಮುಂಬೈನಲ್ಲಿ ಇವರು ಪ್ರಾರಂಭಿಸಿದ ಚಿತ್ರಾಂಬಲಂ ನೃತ್ಯ ಕೇಂದ್ರವನ್ನು ಪತಿಯ ಆಶಯದಂತೆ  ಕರ್ನಾಟಕಕ್ಕೆ ೧೯೭೪ರಲ್ಲಿ ವಿಸ್ತರಿಸಿ, ತದನಂತರ ಮಂಗಳೂರಿನಲ್ಲಿ ಶ್ರೀದೇವಿ ನೃತ್ಯ ಕೇಂದ್ರವೆಂಬ  ಹೆಸರಿನಿಂದ ಉದ್ದೀಪನಗೊಳಿಸಿದರು. ೧೯೯೩ರಿಂದ ನೃತ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದು ; ೪೭  ವರ್ಷಗಳನ್ನು ಪೂರೈಸಿದ ಸಂದರ್ಭ, ಇತ್ತೀಚೆಗಷ್ಟೇ ಖ್ಯಾತ ಚಲನಚಿತ್ರ ನಟಿ, ನೃತ್ಯ ಕಲಾವಿದೆ  ವೈಜಯಂತಿ ಮಾಲಾಬಾಲಿ ಅವರಿಗೆ ‘ನಾಟ್ಯಕಲಾ ತಪಸ್ವಿನೀ’ ಬಿರುದು ಪ್ರದಾನ ಮಾಡಿ ಗೌರವಿಸಿದ್ದಾರೆ.

ಸೋನಾಲ್ ಮಾನ್‌ಸಿಂಗ್, ವಹೀದಾ ರೆಹಮಾನ್, ಜಯಾ, ಶ್ರೀಲೇಖಾಮೆಹ್ತಾ, ಅದಿತಿ ಮೆಹ್ತಾ,  ಮಾಯಾ ಕುಲಕರ್ಣಿ, ಪ್ರಭಾವತಿ ಶಾಸ್ತ್ರಿ ಮುಂತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ  ಪ್ರತಿಭಾವಂತ ಕಲಾವಿದರು ಇವರ ಗರಡಿಯಲ್ಲಿ ಪಳಗಿದವರೇ ! ತಮ್ಮ ವಜ್ರಮಹೋತ್ಸವ ಸಮಾರಂಭದಲ್ಲಿ  ಖ್ಯಾತಿವೆತ್ತ ಶಿಷ್ಯೆಯರೊಂದಿಗೆ, ಓರಗೆಯ ಹಿರಿಯ ಕಲಾವಿದರೊಂದಿಗೆ ‘ಪಂಚಕನ್ಯಾ’ ನೃತ್ಯರೂಪಕದಲ್ಲಿ  ಅಭಿನಯಿಸಿ ೭೫ರಲ್ಲೂ ೨೫ರ ಹುರುಪು ತೋರಿದ್ದಾರೆ. ಆಶೀಷ್ ಖೋಕರ್ ಅವರ ಹೆಸರಾಂತ ನೃತ್ಯ ವಾರ್ಷಿಕ  ಪತ್ರಿಕೆ ‘ಅಟೆಂಡೆನ್ಸ್’ನ ೨೦೦೮-೦೯ರ ಸಂಚಿಕೆ ಜಯಲಕ್ಷ್ಮಿ ಆಳ್ವ ಅವರಿಗೆ ಅರ್ಪಣೆಗೊಂಡಿದೆ.

ಚಿತ್ರಾಂಬಲ ಕೊರವಂಜಿ, ಸ್ವಾತಿ ತಿರುನಾಳ ರಾಮಾಯಣ, ಕೃಷ್ಣ ಕೀರ್ತನ, ಕೃಷ್ಣ  ತುಲಾಭಾರ, ವಸಂತಾವಳಿ, ಬಾಲರಾಮಾಯಣ, ನವಗ್ರಹ, ನವಸಂಧಿ, ನೃತ್ಯ ಗೋವಿಂದ, ಕರಾವಳಿಗಾಥಾ, ಪಂಚಕನ್ಯಾ  ಮುಂತಾದುವುಗಳು ಇವರು ಸಂಯೋಜಿಸಿದ ನೃತ್ಯ ಬ್ಯಾಲೆಗಳು. ಕೇವಲ ರಂಗಪ್ರವೇಶಗಳನ್ನು ಮಾಡಿಸಿ  ಸುಮ್ಮನಾಗುವ ಇಂದಿನ ಗುರುಗಳ ಮಧ್ಯೆಯೂ ರಂಗಪ್ರವೇಶದ ಬಗ್ಗೆ ಪ್ರಗತಿಪರ ಧೋರಣೆಗಳನ್ನಿಟ್ಟುಕೊಂಡು  ಡಾ. ಪದ್ಮಾಸುಬ್ರಹ್ಮಣ್ಯಂ, ಎನ್.ಎಸ್. ಜಯಲಕ್ಷ್ಮಿ, ಪಾರ್ವತಿ ಕುಮಾರ್ ಅವರಂತಹ ನೃತ್ಯ ದಿಗ್ಗಜರ  ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಮಾಡಿ ಅರ್ಹತಾ ಪತ್ರಗಳನ್ನು ಕೊಟ್ಟು ಕಡಿಮೆ  ಖರ್ಚಿನಲ್ಲಿ ರಂಗಪ್ರವೇಶ ಮಾಡಿಸುವುದು ವೈಶಿಷ್ಟ್ಯ.

ಈವರೆಗೆ ನಾಟ್ಯರಾಣಿ ಶಾಂತಲಾ (೧೯೯೫), ರಾಮವಿಠ್ಠಲ ಪ್ರಶಸ್ತಿ(೨೦೦೫),  ನೃತ್ಯಕಲಾಶಿರೋಮಣಿ(೨೦೦೪), ಕನ್ನಡಶ್ರೀ(೨೦೦೩), ಕರ್ನಾಟಕಶ್ರೀ(೨೦೦೩), ನಾಟ್ಯಕಲಾರತ್ನ(೨೦೦೧),  ನೃತ್ಯಕಲಾಸಿಂಧು(೨೦೦೦), ಚೆನ್ನೈಯ ಸ್ತ್ರೀರತ್ನ(೧೯೯೮), ಕರ್ನಾಟಕ ನೃತ್ಯಕಲಾ ಪರಿಷತ್  ಪ್ರಶಸ್ತಿ(೧೯೯೬), ಸುರಭಿ(೧೯೯೫), ದಕ್ಷಿಣ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೭),  ಕರ್ನಾಟಕ ಕಲಾ ತಿಲಕ(೧೯೮೬), ನಾಟ್ಯ ಕಲಾಸರಸ್ವತಿ(೧೯೪೯), ರಾಜ್ಯೋತ್ಸವ ಪ್ರಶಸ್ತಿ, ತುಳು ಕೂಟ,  ರೋಟರಿ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾ ಪುರಸ್ಕಾರ- ಸನ್ಮಾನಗಳು ಇವರಿಗೆ ಪಾತ್ರವಾಗಿವೆ.

ಪೀಳಿಗೆಯಿಂದ ಪೀಳಿಗೆಗೆ...ಮಗಳು ಡಾ. ಆರತಿ ಶೆಟ್ಟಿ ಮತ್ತು ಮೊಮ್ಮಗಳು ಸಾತ್ವಿಕಾ ಶೆಟ್ಟಿ

ಜಯಲಕ್ಷ್ಮಿ ಆಳ್ವ ಅವರ ಮಗಳು ಡಾ. ಆರತಿ ಶೆಟ್ಟಿ ಸಂದೇಶ ಲಲಿತಕಲಾ ಕಾಲೇಜಿನ  ಪ್ರಾಂಶುಪಾಲರಾಗಿದ್ದವರು. ಪ್ರಸ್ತುತ ಸರಸ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ. ಹೊರ  ಜಗತ್ತಿನ ವೈಭವೀಕರಣಗಳಿಗೆ ಅಷ್ಟಾಗಿ ತೆರೆದುಕೊಳ್ಳದಿದ್ದರೂ, ನೃತ್ಯವಲಯದಲ್ಲಿ ಸಾಕಷ್ಟು ಮನ್ನಣೆ,  ಹಿರಿಮೆ ಪಡೆದಿರುವ ಸರಳ ವ್ಯಕ್ತಿತ್ವದ ಜಯಲಕ್ಷ್ಮಿ ಆಳ್ವ ಅವರ ಮಾತುಗಳಿಗೆ ವರ್ಷದ ಸಂಚಿಕೆಯ ದರ್ಶನ  ಭ್ರಮರಿಯಲ್ಲಿ ಕಿವಿಯಾಗೋಣವೇ?

ನೀವು ಕಂಡುಕೊಂಡಂತೆ ನಿಮ್ಮ ಕಾಲದಲ್ಲಿದ್ದ ಕಲೆಯ ಕುರಿತ ಮನೋಭಾವಕ್ಕೂ, ಇಂದಿನ  ಸ್ಥಿತಿಗೂ ವ್ಯತ್ಯಾಸ ಏನು?

ಮೊದಲೆಲ್ಲಾ ನೃತ್ಯ ಕಲಿಯುವವರು, ಮಾಡುವವರು ಒಳ್ಳೆ ಕುಟುಂಬದಿಂದ ಬಂದವ್ರು ಎಂದೇನೂ  ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ರುಕ್ಮಿಣೀದೇವಿ ಅವರಂತಹ ಹಲವು ಮಹನೀಯರು ನೃತ್ಯ ಶಿಸ್ತಿನ  ಆಚರಣೆಗೆ ನಡೆಸಿದ ಹೋರಾಟ, ಜಾಗೃತಿಯಿಂದಾಗಿ ಕ್ರಮೇಣ ಒಳ್ಳೆಯ ಮನೆತನದವರು ನೃತ್ಯಕ್ಷೇತ್ರಕ್ಕೆ  ಕಾಲಿಡುವಂತಾಯಿತು. ಆಗ ತುಂಬಾ ಗುರುಗಳು ಇರಲಿಲ್ಲ. ಆದರೆ ಸಾಂಪ್ರದಾಯಿಕವಾಗಿ ಶಿಸ್ತಾಗಿ ಕಲಿಸ್ತಾ  ಇದ್ದರು. ಕಲಿಸುವವರಲ್ಲೂ ಹೆಚ್ಚಿನ ಶ್ರದ್ಧೆಯಿತ್ತು. ಆಗಿನ ಕಾಲದ ನಾಟಕ ಕ್ಷೇತ್ರದಲ್ಲೂ ಕೂಡಾ  ಶಿಸ್ತು ಇತ್ತು. ಆಗಿನ ಕಾಲದಲ್ಲಿ ಕಾರ್ಯಕ್ರಮಗಳಿಗೆ ಟಿಕೇಟ್ ತೆಗೊಂಡು ಕಾರ್ಯಕ್ರಮ ನೋಡ್ತಿದ್ರು.  ಆದ್ರೆ ಇಂದಿಗೆ ಟಿಕೇಟ್ ಇಲ್ದಿದ್ರೂ ನೃತ್ಯ-ಸಂಗೀತ ನೋಡೋವ್ರು ಕಡಿಮೆ ಆಗಿದ್ದಾರೆ.

ಭರತನಾಟ್ಯ ಕ್ಷೇತ್ರಕ್ಕೆ ನಿಮ್ಮ ಪ್ರವೇಶ ಹೇಗೆ?

ನನ್ನ ಅಜ್ಜನಿಗೆ ಯಕ್ಷಗಾನದಂತಹ ಕಲೆಗಳಲ್ಲಿ ಪರಿಶ್ರಮ ಇತ್ತು. ಅಕ್ಕ ಜಾನಕಿ ಕೂಡಾ  ಸಂಗೀತ ಕಲಾವಿದೆ. ಹಾಗಾಗಿ ಸಣ್ಣದರಿಂದಲೇ ಹಾಡ್ತಿದ್ದೆ. ಡ್ಯಾನ್ಸ್ ಕಲೀಬೇಕೂ ಅಂತ ಆಸೆ. ಆದರೆ  ಹೇಳಿಕೊಡುವವರು ಯಾರು, ಮನೇಲಿ ಒಪ್ಪುವರೇ ಅನ್ನುವ ಅಂಜಿಕೆ. ಆದರೆ ನನ್ನ ಪೂರ್ವಜನ್ಮದ ಪುಣ್ಯ.  ಭರತನಾಟ್ಯದ ಕಡೆಗೆ ಮನಸ್ಸು ಒಲಿದು ಗುರು ದಂಡಾಯುಧ ಪಾಣಿ ಪಿಳ್ಳೈ ಅವರಲ್ಲಿ ಕಲಿಯುವ ಯೋಗ  ಕೂಡಿಬಂದದ್ದು. ಅವರ ಸ್ನೇಹಿತರೊಬ್ಬರ ಮನೆಗೆ ಆಗಾಗ ನೃತ್ಯ ಕಲಿಸಲು ಬರುತ್ತಿದ್ದರು. ಒಮ್ಮೆ  ಅಲ್ಲಿಗೆ ನಾನು ಹೋಗಿದ್ದೆ. ಪರಿಚಯವಾಗಿ ಕಲಿಸಲು ಒಪ್ಪಿದರು. ಆ ಸಂದರ್ಭ ಕಲಾಕ್ಷೇತ್ರದಲ್ಲಿ  ಗುರುಗಳಾಗಿದ್ದರು. ಅವರು ಕಲಾಕ್ಷೇತ್ರ ಬಿಟ್ಟು ಬಂದ ಮೇಲೆನಾನು ಅವರ ಮೊದಲ ಶಿಷ್ಯೆ ಎಂಬುದೇ ನನ್ನ  ದೊಡ್ಡ ಹೆಮ್ಮೆ. ೧೯೪೮ರಲ್ಲಿ ನನ್ನ ಅರಂಗೇಟ್ರಂ ಆಗಿ ನೃತ್ಯ ಕ್ಷೇತ್ರಕ್ಕೆ ಕಾಲಿಟ್ಟೆ.

ತಮ್ಮ ತಾರುಣ್ಯದಲ್ಲಿ ಜಯಾ..

ಮೂಲತಃ ತಮಿಳ್ನಾಡಿನವರಾದ ನೀವು ಕರ್ನಾಟಕಕ್ಕೆ ಬಂದು ನೃತ್ಯಶಾಲೆ ಕಟ್ಟಲು ಕಾರಣ?

ಮುಂಬೈಯ್ಯಲ್ಲಿ ೧೫ ವರ್ಷ ಇದ್ವಿ. ಅಲ್ಲಿ ಚಿತ್ರಾಂಬಲಂ ಪ್ರಾರಂಭಿಸಿದೆ. ಆದರೆ ನನ್ನ  ಪತಿಗೆ ಕರ್ನಾಟಕದಲ್ಲಿ ಕಲಾಕ್ಷೇತ್ರದ್ದೇ ಮಾದರಿಯ ಪ್ರಗತಿಪರ ಸಂಸ್ಥೆಯನ್ನು ಕಟ್ಟಬೇಕು ಅಂತ  ಇತ್ತು. ಹಾಗಾಗಿ ಮಂಗಳೂರಿಗೆ ಬಂದೆವು.

ರಂಗಪ್ರವೇಶ ಪದ್ಧತಿಯ ಬಗ್ಗೆ ನಿಮ್ಮ ಅಭಿಪ್ರಾಯ ?

ರಂಗಪ್ರವೇಶ- ಕಲಿತದ್ದನ್ನು ಹಿರಿಯರ ಆಶೀರ್ವಾದ ಪಡೆದು ಮಾಡಿ ತೋರಿಸುವುದೇ ವಿನಾ  ನೆರೆದವರ ಮುಂದೆ ಹೆಚ್ಚುಗಾರಿಕೆ ತೋರಿಸಿಕೊಳ್ಳುವ ಪ್ರದರ್ಶನವಲ್ಲ. ಅದೊಂದು ಬಗೆಯ ಸತ್ತ್ವ  ಪರೀಕ್ಷೆ. ಆದರೆ ಈಗೀಗ ರಂಗಪ್ರವೇಶವೆಂದರೆ ಆಡಂಬರ ಅಲ್ಲದೆ ಬೇರೇನಲ್ಲ. ಇಂದಿನ ಹಲವು ರಂಗಪ್ರವೇಶಗಳ  ಅರ್ಧ ಖರ್ಚು ಆಮಂತ್ರಣ ಪತ್ರಿಕೆ, ಜಾಹೀರಾತು, ಗುರುದಕ್ಷಿಣೆ, ವಿವಿಧ ಬಗೆಯ ಪೋಸ್ ಕೊಟ್ಟ  ಛಾಯಾಚಿತ್ರಗಳನ್ನೊಳಗೊಂಡ ಅವರ ಸಾಧನೆಯ ವಿವರ ಹೊತ್ತಿರುವ ಬಣ್ಣ ಬಣ್ಣದ ಬ್ರೋಷರ್ಸ್‌ಗಳಲ್ಲೇ ಇದೆ !  ಇನ್ನು ಪ್ರದರ್ಶನವೋ ಬಹಳಷ್ಟು ಬಾರಿ ದೇವರಿಗೇ ಪ್ರೀತಿ ಅಂತಾಗುತ್ತದೆ ! ಹೀಗೆ ಖರ್ಚಿನ ಬಾಬ್ತು.

ಹೆಜ್ಜೆಯಿಡುವ ಮೊದಲ ಮೆಟ್ಟಿಲಲ್ಲೇ, ಕಲಾವಿದೆಯಾಗುವ ಮೊದಲೇ ಸಾಧನೆಯ

ವಿವರ-ಚಿತ್ರಗಳನ್ನು ತೋರಿಸುವುದಾದರೆ ರಂಗಪ್ರವೇಶಕ್ಕೆ ಏನಿದೆ ಅರ್ಥ? ಇಂತಹ ತೋರಿಕೆಗಳು ಬೇಕೆ?  ಹಾಗಾದರೆ ಯಾವ ಪುರುಷಾರ್ಥಕ್ಕೆ? ಪ್ರತಿಭಾವಂತ ಬಡ-ಮಧ್ಯಮ ವರ್ಗದ ಮಕ್ಕಳಿಗೆ, ಪೋಷಕರಿಗೆ ತಪ್ಪು  ಮಾಹಿತಿ ಕೊಟ್ಟು ಶಾಸ್ತ್ರೀಯ ನೃತ್ಯವೆಂದರೆ ದುಬಾರಿ ಎಂದು ಮೂಡಿಸಿದರೆ ಒಂದಾನೊಂದು  ಕಾಲದಲ್ಲಿದ್ದಂತೆ ನೃತ್ಯವನ್ನು ನಾವೇ ಕೆಳಮಟ್ಟಕ್ಕೆ ದೂಡಿದಂತೆಯೇ ಆಗುವುದರಲ್ಲಿ ಸಂಶಯವಿಲ್ಲ.

ಆದರೆ ಇಂದಿನ ದುಬಾರಿ ಕಾಲದಲ್ಲಿ, ಅದೂ ದುಬಾರಿ ಅನ್ನಿಸಿಕೊಂಡ ಕಲೆಯ ಪ್ರವೇಶ  ಕಾರ್ಯಕ್ರಮದ ಖರ್ಚುವೆಚ್ಚಗಳನ್ನು ಹೇಗೆ ಸರಿತೂಗಿಸಿಕೊಳ್ಳುವುದು?

ವಿದ್ಯಾಭಾಸದಲ್ಲಿ ಖರ್ಚು ಸಹಜ. ಹಾಗಂತ ಅದಕ್ಕೂ ಒಂದು ಮಿತಿ ಇದೆ. ಉದಾ: ರಂಗಪ್ರವೇಶದ  ಒಟ್ಟಾರೆ ಖರ್ಚು ಒಂದು ಲಕ್ಷ ರೂಪಾಯಿಯೇ ಆಗುತ್ತದೆ ಅಂದಿಟ್ಟುಕೊಳ್ಳೋಣ. ಆಗ ಕಲಿತ ನಾಲ್ಕೈದು  ವಿದ್ಯಾರ್ಥಿಗಳು ತಮ್ಮಲ್ಲೇ ಹಂಚಿಕೊಳ್ಳುವ ಹಾಗೆ ಮಾಡಬೇಕು. ಈಗ ನಮ್ಮಲ್ಲಿ ಇದೇ ನಿಯಮವಿದೆ.  ಒಬ್ಬರದ್ದೇ ಪ್ರದರ್ಶನ ಆದರಲ್ಲವೇ ಮೇಲಾಟಗಳು ಕಾಣಿಸಿಕೊಳ್ಳುವುದು !

ಗುರು ದಿವಂಗತ ದಂಡಾಯುಧಪಾಣಿ ಪಿಳ್ಳೈ

ಹಾಗಾಗಿ ನಾನು ರೂಪಿಸಿಕೊಂಡ ಕ್ರಮದಂತೆ ರಂಗಪ್ರವೇಶಕ್ಕಿಂತ ಮುಂಚೆ ಹಿರಿಯ  ವಿದ್ವತ್ಪೂರ್ಣ ಕಲಾವಿದರ ಸಮ್ಮುಖದಲ್ಲಿ ಪರೀಕ್ಷೆಗಳನ್ನು ನಡೆಸಿ ಅರ್ಹತಾ ಪತ್ರಗಳನ್ನು ಪ್ರದಾನ  ಮಾಡಿ ಖರ್ಚುಗಳನ್ನು ಹಂಚಿಕೊಳ್ಳಲು ಗುರುಗಳಾದ ನಾವೇ ತಿಳಿ ಹೇಳುತ್ತೇವೆ. ಸರಳವಾದ ಕಾಟನ್  ಸೀರೆಗಳನ್ನು ಬಳಸಲು ಹೇಳುತ್ತೇವೆ. ಸರಳವಾದ ಆಮಂತ್ರಣ ಪತ್ರಿಕೆಗಳನ್ನು ಮಾಡಿಸುತ್ತೇವೆ.

ಗುರುದಕ್ಷಿಣೆ ಒಬ್ಬೊಬ್ಬರೇ ಕೊಟ್ಟರೆ ಬೇಧಭಾವ ಬರುತ್ತದೆ ; ಬಡ-ಮಧ್ಯಮ ವರ್ಗದವರಿಗೆ ಕಷ್ಟ  ಆಗುತ್ತದೆಯಾದ್ದರಿಂದ ಎಲ್ಲರೂ ಒಟ್ಟಾಗಿ ಸಮನಾದ ಖರ್ಚಿನಲ್ಲಿ ಕೊಡುವಂತೆ ಮಾಡುತ್ತೇವೆ.

ನೃತ್ಯಪರೀಕ್ಷೆಗಳ ಪದ್ಧತಿಯ ಬಗ್ಗೆ ಸಾಕಷ್ಟು ಅಪಸವ್ಯಗಳು ಕೇಳಿಬರುತ್ತಿವೆ,  ಕಾಣುತ್ತಿವೆ. ಇದರ ಬಗ್ಗೆ ಏನು ಹೇಳುತ್ತೀರಿ?

ನೃತ್ಯ ಪರೀಕ್ಷೆಗಳ ಅಗತ್ಯ ಖಂಡಿತವಾಗಿಯೂ ಇದೆ. ಅರ್ಹತೆಗೇ ಆಧಾರವಲ್ಲವೇ? ಆದರೆ  ಪರೀಕ್ಷೆಯ ಸ್ವರೂಪದಲ್ಲಿ ಸುಧಾರಣೆ ಆಗಲೇಬೇಕು. ನಮ್ಮ ಸಮಯದಲ್ಲಿ ಪರೀಕ್ಷೆ ಎಂಬುದು ಇರಲಿಲ್ಲ. ಬಡ  ಹುಡುಗಿಯರಿಗೆ ಆಗಲೂ ಅಷ್ಟಾಗಿ ಮಿಂಚಲು ಆಗ್ತಿರ್ಲಿಲ್ಲ. ಆಗ ಅದು ಒಂದು ಶಾಪದಂತೆ. ಆದರೆ ಈಗ  ಪರೀಕ್ಷೆಗಳು ಗೊತ್ತು ಗುರಿಯಿಲ್ಲದಂತೆ ನಡೆಯುವುದು ; ಪರೀಕ್ಷೆಯ ಹೆಸರಲ್ಲಿ ಗುರುಗಳೆನಿಸಿಕೊಂಡವರು  ಹಣ ಮಾಡುವುದು ಗಮನಿಸಿದರೆ ಇದೂ ಒಂದು ಶಾಪವೇ ಸರಿ !

ಕಷ್ಟ ಯಾರಿಗಿಲ್ಲ? ಎಲ್ಲರಿಗೂ ಇದೆ ಎಂಬ ಕರುಣೆ ಬೇಕು. ಹಾಗೆ ನೋಡಿದರೆ ಗುರುಗಳಾದ  ನಾವು ಕಲಿಸುವುದರ ಮೂಲಕ ಮತ್ತಷ್ಟು ಕಲಿಯುತ್ತೇವೆ.

ಆಳ್ವ ದಂಪತಿ

ಕೊಡುವ ವಿದ್ಯೆ ಶಾಶ್ವತ ಆಗಿರಬೇಕೇ ವಿನಾ ಆಡಂಬರದ ಖರ್ಚು ಅಲ್ಲ, ವೆಚ್ಚವೂ ಅಲ್ಲ.

ಇಂತಹ ಅವಾಂತರಗಳಿಗೆ ಮುಖ್ಯ ಯಾರು ಕಾರಣ ಅಂತನ್ನಿಸುತ್ತದೆ?

ತಪ್ಪು ಪೋಷಕರದ್ದಲ್ಲ ; ಗುರುಗಳದ್ದು, ನೃತ್ಯ ಶಿಕ್ಷಕರದ್ದು. ಕೆಲವೊಮ್ಮೆ  ತಂದೆತಾಯಿಗಳಿಗೇ ಹಣ ಕೊಡ್ಲಿಕ್ಕೆ ಸಾಧ್ಯವಾಗುವುದಿಲ್ಲ. ಆದರೂ ಗುರುಗಳು ಬಿಡುವುದಿಲ್ಲ  ಎಂಬಂತಾಗಿದೆ. ಕಮರ್ಷಿಯಲ್ ಸರಿ. ಆದರೆ ಅದಕ್ಕೂ ಮಿತಿ ಇದೆಯಲ್ವಾ?

ನೃತ್ಯ ಇರುವುದು ಸ್ಕೂಲ್ ಪ್ರಾರಂಭ ಮಾಡಿ ಫ್ಯಾಕ್ಟರಿ ಮಾಡೋದಕ್ಕಲ್ಲ.. ಈಗಂತೂ  ಗಲ್ಲಿಗಲ್ಲಿಗಳಿಗೇ ಗುರುಗಳು ಸಿಗ್ತಾರೆ, ಬಿಡಿ.

ಹಾಗಾದರೆ ಇಂತಹ ಪಡಿಪಾಟಲುಗಳಲ್ಲಿ ಪೋಷಕರ ಪಾತ್ರ ಏನೂ ಇಲ್ಲವೇ?

ನಾನು ಬಾಂಬೆಯಲ್ಲಿದ್ದಾಗಲೂ, ಕರ್ನಾಟಕಕ್ಕೆ ಬಂದ ನಂತರವೂ ಬಹಳಷ್ಟು ಮಂದಿ ಗುರುಗಳು  ಪೋಷಕರನ್ನು ದೂರುತ್ತಿದ್ದರು ; ‘ಒತ್ತಡ ಹೇರ್ತಾರೆ. ಆ ಹಾಡಿಗೆ ಡ್ಯಾನ್ಸ್ ಕಲಿಸಿ, ಬೇಗ  ರಂಗಪ್ರವೇಶ ಮಾಡಿಸಿ, ಸ್ಟೇಜ್ ಹತ್ತಿಸಿ, ಪರೀಕ್ಷೆಗೆ ಕೂರಿಸಿ ಪಾಸು ಮಾಡಿಸಿ..’ ಅಂತೆಲ್ಲಾ..  ಆಗೆಲ್ಲಾ ನನ್ನದು ಒಂದೇ ಉತ್ತರ. ತಂದೆತಾಯಿಯಾದವರಿಗೆ ತಮ್ಮ ಮಕ್ಕಳು ಬೇಗ ಸ್ಟೇಜ್ ಮೇಲೆ ಬರಬೇಕು.  ಅವರು ನೃತ್ಯ ಮಾಡುವುದನ್ನು ನೋಡ್ಬೇಕು ಅಂತೆಲ್ಲಾ ಆಸೆ ಇರುತ್ತದೆ. ಅದು ಸಹಜ. ಆದರೆ ಅವರಿಗೆ  ನೃತ್ಯದ ತಾಂತ್ರಿಕ, ಶೈಕ್ಷಣಿಕ ಒಳನೋಟಗಳು ಗೊತ್ತಾಗಿರೋಲ್ಲ. ಅದನ್ನು ಅವರಿಗೆ ಅರ್ಥ ಮಾಡಿಸಬೇಕೇ  ವಿನಾ, ಫೀಸು ತಪ್ಪಿ ಹೋಗುತ್ತದೋ ಎಂಬ ಭಯದಲ್ಲಿ ಅವರ ತಾಳಕ್ಕೆ ತಕ್ಕಂತೆ ಕುಣಿಯಬಾರದು.

ಕುಟುಂಬದವರೊಂದಿಗೆ ಜಯಲಕ್ಷ್ಮೀ ಆಳ್ವ

ಉದಾ : ಮಕ್ಕಳು ಕಲೀವಾಗ ಪೋಷಕರು ಬಂದು ಕೂತುಕೊಳ್ಳಬಾರದು. ಯಾಕೆಂದರೆ ಅವರವರ  ಮಕ್ಕಳದ್ದೇ ಅವರಿಗೆ ತಲೇಲಿ ಇರುತ್ತದೆ. ಹಾಗಾಗಿ ಪಾರುಪತ್ಯ ಸುರುವಾಗುತ್ತದೆ. ಹಾಗಂತ ಅದು  ತಪ್ಪಲ್ಲ. ಉದಾಹರಣೆಗೆ ಎಲ್ಲಾ ಮಕ್ಕಳು ಒಂದೇ ತರಹ ಕಲೀಯೋದಿಲ್ಲವಲ್ಲ ! ಅಷ್ಟೇನೂ ಕಲೀಲಿಕ್ಕೆ  ಚುರುಕಿಲ್ಲದ ಹುಡುಗಿ ಮೇಲೆ ಗುರುಗಳು ಹೆಚ್ಚು ಏಕಾಗ್ರತೆ ಇಟ್ಟು ಕಲಿಸಬೇಕಾದರೆ ಪೋಷಕರಿಗೆ ತಮ್ಮ  ಮಕ್ಕಳನ್ನು ಗಮನಿಸ್ತಾ ಇಲ್ಲ ಎಂದೆಲ್ಲಾ ಅನ್ನಿಸುತ್ತದೆ. ಆಗ ತಮ್ಮ ಮಕ್ಕಳಿಗೆ ‘ನೀನು ಚೆಂದ  ಮಾಡ್ಬೇಕು. ಅವಳಿಗೆ ಜಾಸ್ತಿ ಹೇಳಿ ಕೊಡ್ತಾರೆ.’ ಅಂತೆಲ್ಲಾ ಒತ್ತಡ, ಗುರುಗಳ ಬಳಿ ಕಿರಿಕಿರಿ  ಶುರುವಾಗುತ್ತದೆ. ಹಾಗಾಗಿ ಶಿಸ್ತು ಗುರುಗಳಲ್ಲಿದ್ದರೆ ಒಳ್ಳೆಯದು.

ಹಾಗಿದ್ದರೆ ಕಲಿಕೆಯ ಮಾದರಿ ಹೇಗಿದ್ದರೆ ಚೆನ್ನ?

ಮಕ್ಕಳಲ್ಲಿ ಕಲಿಯುವುದರಲ್ಲಿ ಸ್ಪರ್ಧೆ ಬೇಕೇ ವಿನಾ ವೇದಿಕೆ ಹತ್ತುವುದೇ ಉದ್ದೇಶ  ಆಗಬಾರದು. ಕೆಲವೇ ಕೆಲವು ಆದರೆ ಶ್ರದ್ಧೆಯುಳ್ಳ ವಿದ್ಯಾರ್ಥಿಗಳು ಸಿಕ್ಕಿದರೆ ಸಾಕಲ್ಲವೇ ಕಲೆಯ  ಗುಣಾತ್ಮಕ ಪರಿಣಾಮಗಳನ್ನು ಕಂಡುಕೊಳ್ಳಲಿಕ್ಕೆ ? ಬೇಗ ಸ್ಟೇಜ್ ಮೇಲೆ ಹೋಗ್ಬೇಕು ಅನ್ನೋವ್ರಿಗೆ  ಕಲಿಸೋಲ್ಲ, ವಿದ್ಯಾಭ್ಯಾಸವಾಗಿ ತೆಗೊಳ್ಳೋವ್ರಿಗೆ ಮಾತ್ರ ಕಲಿಸೋದು ಅಂತ ಗುರುಗಳೆನಿಸಿಕೊಂಡವರು  ಮೊದಲು ಶಪಥ ಮಾಡಬೇಕು. ೫೦-೬೦ ಜನ ಶಿಷ್ಯರು- ವಾರಕ್ಕೆ ೧ ಅಥವಾ ೨ ಕ್ಲಾಸ್ ಅಂದರೆ ಎಷ್ಟು ಒಳ್ಳೆಯ  ಪ್ರತಿಭಾವಂತರು, ನೃತ್ಯಾಸಕ್ತರು ಬೆಳೀಲಿಕ್ಕೆ ಸಾಧ್ಯ ? ೧೦ ಜನ ಶಿಷ್ಯರು ಇದ್ರೂ ಸಾಕು ; ಸರಿಯಾದ  ಕಲಾವಿದರಾಗಿ ಹೊರಹೊಮ್ಮಲು !

ಮಕ್ಕಳಾದರೆ ೬-೭ ವರ್ಷಕ್ಕಿಂತ ಮೊದಲು ಕಲಿಸೋದಕ್ಕೆ ಮುಂದಾಗಬಾರದು. ಶಾಸ್ತ್ರೀಯ  ನೃತ್ಯವಾದ್ದರಿಂದ ಎಳೆ ಮನಸ್ಸುಗಳು ನೃತ್ಯದ ಒಳಗಿನ ಭಾವವನ್ನು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ  ಪಡುತ್ತವೆ. ಹಾಗಾಗಿ ನೃತ್ಯದೆಡೆಗೆ ತಾಳ್ಮೆ, ಪ್ರೀತಿ ಎರಡೂ ಹುಟ್ಟುವಂತೆ ಮನಸ್ಸುಗಳನ್ನು  ಬೆಳೆಸಬೇಕು. ಉದಾ : ಎಸ್ಸೆಸೆಲ್ಸಿ ಕಲಿಯೋದು ೧ನೇ ಕ್ಲಾಸಿಂದಲೇ ಸಾಧ್ಯವಾ? ಒಂದನೇ ಕ್ಲಾಸಿನಿಂದ  ಹಿಡಿದು ಹತ್ತು ವರ್ಷವಾದರೂ ಬೇಡವೇ? ಕಾಯುವಿಕೆಯೇ ಇಲ್ಲದಿದ್ದರೆ ಕಲಿಯೋದು ಯಾಕೆ?

ಕಲಿಕೆಯಲ್ಲಿ ಶೈಲಿಯ ಪಾತ್ರ ಎಷ್ಟು ?

ಶೈಲಿ ಅಂದರೆ ನಾವು ಕಲಿತಿದ್ದನ್ನು ಯಾವ ತರಹ ಬಳಸಿಕೊಳ್ಳುತ್ತೇವೆಯೋ ಅದು. ಸಂಯೋಜನೆ  ಮಾಡುವುದು ಶೈಲಿಯೇ ಹೊರತು ಕಲಿಯುವಾಗಲೇ ಮಾಡಿಕೊಳ್ಳುವುದಲ್ಲ. ಆದರೆ ಶೈಲಿಯ ಬಗ್ಗೆ ಇರುವಂತಹ  ವಿರೋಧಾಭಾಸಗಳಿಂದಾಗಿ ಕಲಿಯುವವರು ಸಮಸ್ಯೆಗೆ ಒಳಗಾಗುತ್ತಾರೆ. ಎಲ್ಲಾ ಗುರುಗಳು ಒಂದೇ ತರಹ  ಕಲಿಸ್ಬೇಕು. ಹೇಗೆ ಸಂಗೀತಕ್ಕೆ ಸ್ವರಸ್ಥಾನ, ಲಯ ಇದೆಯೋ- ಹಾಗೆ ನಾಟ್ಯಕ್ಕೆ ಅಂಗಶುದ್ಧ, ಲಯ,  ಏಕಕ್ರಮವಾದ ನೃತ್ಯಪದ್ಧತಿ, ಅಡವುಗಳು ಅನ್ನುವುದನ್ನು ರೂಢಿಸಿಕೊಳ್ಳಬೇಕು. ಹಾಗಿದ್ದಾಗ ಎಲ್ಲಿ  ಹೋದರೂ ಶೈಲಿ ಎಂಬುದು ಸಮಸ್ಯೆ ಆಗೋದಿಲ್ಲ. ತಾವು ಕಲಿತ ಕ್ರಮ ಮಾತ್ರ ಸರಿ, ಮತ್ತೊಬ್ಬರದ್ದಲ್ಲ ಎಂಬ  ಮಾತು ಬರುವುದಿಲ್ಲ.

ನೃತ್ಯದಲ್ಲಿ ಹೇಳಲ್ಪಟ್ಟ ನಿಶ್ಚಿತ ಕ್ರಮದ ಮಾರ್ಗಪದ್ಧತಿಯ ಅನುಸರಣೆ  ಕಾಲಾನುಕ್ರಮಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕೇ?

‘ಮಾರ್ಗಪದ್ಧತಿ’ ಎಂದ ಮೇಲೆ ಅದು ಮಾಡುವ ಸಮಯದಲ್ಲಿ ಅದರ ಪ್ರಕಾರವೇ ಮಾಡಬೇಕಲ್ಲವೇ?

ಉದಾ : ಅಲರಿಪುವಿನ ಚಾಕಚಕ್ಯತೆಯನ್ನು ನೋಡಿಯೇ ಕಲಾವಿದೆಯ ಲಯ, ತಾಳ, ಅಂಗಶುದ್ಧ  ಎಲ್ಲವನ್ನೂ ಕಂಡುಹಿಡಿಯಬಹುದು. ಆದರೆ ಅಲರಿಪು ಅಂದ್ರೆನೇ ಬಹಳಷ್ಟು ಜನ ನಿರ್ಲಕ್ಷ್ಯ ಮಾಡುತ್ತಾರೆ.  ಅರಂಗೇಟ್ರಂಗಳಲ್ಲಿ ಅಲರಿಪು ಇಲ್ಲದಂತಾಗಿದೆ. ಒಂದುವೇಳೆ ಮಾಡಿದರೂ ಅದೊಂದು ಕಾಟಾಚಾರದ, ಮಾಡಬೇಕಾದ  ಸಂಕಟಕ್ಕೆ ಮಾಡುವುದು ಎಂದೇ ನೋಡ್ತಾರೆ. ಕೆಲವೊಮ್ಮೆ ಆಕರ್ಷಕ ಮಾಡಬೇಕು ಅನ್ನುತ್ತಾ ಇಲ್ಲದ  ಕಸರತ್ತುಗಳನ್ನು ಮಾಡುತ್ತಾರೆ, ಅನಗತ್ಯವಾಗಿ ಅಡವುಗಳನ್ನು ತುರುಕುತ್ತಾರೆ. ಅಷ್ಟಕ್ಕೂ ಅದು  ‘ಬೋರ್’ ಅನ್ನುವವರು ಭರತನಾಟ್ಯ ನೋಡ್ಲಿಕ್ಕೆ ಯಾಕೆ ಬರ್ಬೇಕು? ಯಾಕೆ ಕಲೀಬೇಕು? ಅದರ ಸಹಜತೆಯಲ್ಲೇ  ಅಲ್ಲವೇ ಇರುವುದು ಆನಂದ !

ಆದರೆ, ವರ್ಣದಂತಹ ಸಮಗ್ರ ನೃತ್ಯಬಂಧಗಳಲ್ಲಿ ನಿರ್ಭಾವುಕವಾಗಿ ಮಾಡುವ ನೃತ್ತ, ಜತಿಗಳ  ಸಂಯೋಜನೆ ರಸಭಂಗವನ್ನುಂಟು ಮಾಡುತ್ತದೆ ಎಂಬ ಮಾತಿಗೆ ಏನನ್ನುತ್ತೀರಿ?

ಹೀಗನ್ನುವುದಕ್ಕೆ ಕಾರಣವಿದೆ ; ಈಗಿನ ಜತಿಗಳ ಸಂಯೋಜನೆ ಹೇಗಿದೆಯೆಂದರೆ ಊಟ ಮಾಡಿ  ಮಲಗಿ ಎದ್ದು ಬರುವಷ್ಟರ ಮಟ್ಟಿಗೆ ! ವರ್ಣದಲ್ಲಿ ಸ್ಥಾಯಿ ಭಾವಕ್ಕೆ ಅನುಕೂಲವಾಗಿ ಜತಿಗಳನ್ನು  ಮಾಡಿದರೆ ರಸಭಂಗವಾಗುವುದಿಲ್ಲ. ಉದ್ದುದ್ದದ ಜತಿಗಳನ್ನು ಹೆಣೆದರೆ ಭಾವಾಭಿನಯದ ವ್ಯಾಪ್ತಿ,  ನಾಯಿಕೆಯ ಮಹತ್ವ ಕಡಿಮೆಯಾಗುತ್ತದೆ. ಕಲಾವಿದೆಯ ಪ್ರತಿಭೆ ಪಕ್ವವಾಗಿದ್ದರೆ ಯಾವುದೂ  ರಸಭಂಗವನ್ನುಂಟುಮಾಡುವುದಿಲ್ಲ. ಹಿಂದಿನ ಹಿರಿಯರು ಚೆನ್ನಾಗಿಯೇ ಮಾಡುತ್ತಿದ್ದರಲ್ಲಾ ! ಜತಿಗಳ  ಸಂಯೋಜನೆ ಇರುವ ಹಾಗೆ ಇದ್ದರೆ ರಸಭಂಗವಾಗುವುದಾದರೂ ಹೇಗೆ?

ಪದ್ಮಾ ಸುಬ್ರಹ್ಮಣ್ಯಂ ಅವರು ಕರಣಗಳನ್ನು ಉಪಯೋಗಿಸಿ ಮಾಡುತ್ತಾರೆ. ಅದು ಅವರ ಶೈಲಿ.  ಎಲ್ಲರೂ ಅವರಂತಾಗುವುದು ಸಾಧ್ಯವೇ? ಅವರ ಶ್ರಮ ಎಲ್ಲರಲ್ಲಿದೆಯೇ?

ಇಂದಿನ ಅಭಿನಯ ಕ್ರಮ ಯಾವ ಮಟ್ಟದಲ್ಲಿದೆಯೆನಿಸುತ್ತದೆ?

ಭರತನಾಟ್ಯದ ಅಭಿನಯವೆಂದರೆ ಏಕಪಾತ್ರಾಭಿನಯ ಅಲ್ಲ. ಆದರೆ ಅಭಿನಯದಲ್ಲಿ ಅದೇ  ಜಾಸ್ತಿಯಾಗಿದೆ. ಬೇರೆ ಬೇರೆ ಪಾತ್ರಗಳನ್ನು ಒಬ್ಬಳೇ ಒಂದೇ ಬಾರಿಗೆ ಮಾಡುತ್ತಾ ಹೋಗುವುದು ಇಂದಿನ  ಭರತನಾಟ್ಯದ ದುರಂತ.

ಜೊತೆಗೆ ಕೆಲವೊಂದು ಎಡವಟ್ಟುಗಳಿವೆ. ಈಗಿನ ಎಲ್ಲ ನೃತ್ಯಗಳಲ್ಲೂ ತಟ್ಟುಮೆಟ್ಟು  ಅಡವನ್ನೇ ಮಾಡ್ತಾ ಇರ್ತಾರೆ. ಯಾಕೆ ಎಂದು ಪ್ರಶ್ನಿಸಿದರೆ ಮಾಡುವವರಿಗೂ, ಮಾಡಿಸುವವರಿಗೂ  ಗೊತ್ತಿಲ್ಲ ! ವರ್ಣಗಳಲ್ಲಿ ಬುಡದಿಂದ ತುದಿವರೆಗೂ ತಟ್ಟುಮೆಟ್ಟೇ ಎಲ್ಲವೂ ಆಗಿದೆ. ಕೊನೆಕೊನೆಗೆ  ಪದಂ, ಅಷ್ಟಪದಿಯ ಅಭಿನಯದಲ್ಲೂ ತಟ್ಟುಮೆಟ್ಟು ಯಾಕೆ ಮಾಡ್ತಾರೋ ಗೊತ್ತಾಗುವುದಿಲ್ಲ !

ನೃತ್ಯದ ಕುರಿತಂತೆ ಸಂಶೋಧನೆಗಳು ಇತ್ತೀಚೆಗೆ ವಿರಳವಾಗುತ್ತಿದೆ ಎಂಬ ಮಾತಿದೆ.  ಇದಕ್ಕೇನು ಹೇಳ್ತೀರಿ?

ಸಂಶೋಧನೆಯ ಆಸಕ್ತಿ ಸಣ್ಣದರಿಂದಲೇ ಆರಂಭಿಸಬೇಕು. ಅಷ್ಟಕ್ಕೂ ನೃತ್ಯದ ಮೇಲೆ ಆಸಕ್ತಿ  ಇದ್ದ ಮಾತ್ರಕ್ಕೆ ಅವರು ಕಲಾವಿದರೇ ಆಗಬೇಕೆಂದೇನೂ ಇಲ್ಲ. ಕೆಲವರಿಗೆ ಕಲಾವಿದರಾಗಿ ಬೆಳೆಯುವ  ಯೋಗವಿರುತ್ತದೆ. ಮತ್ತೂ ಕೆಲವರಿಗೆ ಅದನ್ನು ಕಲಿಸುವ ಕಲೆಯಿರುತ್ತದೆ; ಮತ್ತೊಂದಷ್ಟು ಮಂದಿಗೆ  ಅದನ್ನು ಉತ್ತಮವಾಗಿ ಬರೆವಣಿಗೆಯಲ್ಲಿ ಕಟ್ಟಿಕೊಡುವ ಸಾಮರ್ಥ್ಯವಿರುತ್ತದೆ. ಕೆಲವರಿಗೆ ಅದರೊಳಗೆ  ಹುಡುಕಿ ಹೊಸತನ್ನು, ಮರೆಯಾಗಿದ್ದನ್ನು ತೆಗೆಯುವ ತಾಕತ್ತು ಇರುತ್ತದೆ, ವಿಮರ್ಶೆ ಮಾಡುವ ಶಕ್ತಿ  ಇರುತ್ತದೆ. ಹಾಗಾಗಿ ಯಾವುದರಲ್ಲಿ ಯಾರಿಗೆ ಹೆಚ್ಚು ಶ್ರಮ, ಪ್ರತಿಭೆ ಇದೆಯೋ ಅದನ್ನು ಮಾಡಬೇಕು.  ಕಲೆಗೆ ಎಲ್ಲವೂ ಬೇಕು.

ಈಗಿನ ನೃತ್ಯ ವಿಮರ್ಶೆಗಳ ಧಾಟಿ ಹೇಗಿದೆಯೆನಿಸುತ್ತದೆ?

ಈಗ ಒಳ್ಳೆಯ ವಿಮರ್ಶೆ ಬರೆಯುವವರು ಕಡಿಮೆ ಆಗಿದ್ದಾರೆ. ಮೊದಲು ಕಲೆಯನ್ನು  ಅನುಭವಿಸಬೇಕು. ಅದರ ಒಳ ಹೂರಣ ಗೊತ್ತಿದ್ದರೆ ಮಾತ್ರ ಏನನ್ನೇ ಆದರೂ ಬರೆಯುವುದಕ್ಕೆ ಸಾಧ್ಯ. ಅದರೆ  ಈಗ ಕೇವಲ ಪ್ರಸಿದ್ಧಿಗಾಗಿ ಬರೆಯುವುದು, ಬರೆಸುವುದೇ ಆಗಿಹೋಗಿದೆ. ತಾವು ಮಾಡಿ ತಿಳಿದರಲ್ಲವೇ  ಒಳ್ಳೆಯ ವಿಮರ್ಶೆ ಹೇಗೆ ಅಂತ ಅರಿವಾಗುವುದು?

ಶಾಸ್ತ್ರೀಯ ನೃತ್ಯಗಳ ಕಲಾವಿದರ ದಾರಿ ಎತ್ತ ಸಾಗಬೇಕು?

ನೃತ್ಯವಿರುವುದು ಹಣ ಮಾಡುವುದಕ್ಕೆ ಅಲ್ಲ. ಇಂದಿನ ಕಾಲದಲ್ಲೂ ಗ್ರಾಮೀಣ  ಪ್ರದೇಶಗಳಲ್ಲಿ ಆಯಾಯ ಪ್ರದೇಶದ ಆಡಳಿತ ಭಾಷೆಯನ್ನುಪಯೋಗಿಸಿ ಜನರಿಗೆ ತಿಳಿವಳಿಕೆ ಕೊಡುವ ಕೆಲಸ  ಆಗಬೇಕು. ನೃತ್ಯದ ಪ್ರಯೋಜನ, ವಿಷಯಗಳನ್ನು ತಿಳಿಸಿಕೊಟ್ಟರೆ, ಅರಿವು ಬೆಳೆದರೆ ಅದರ ಪ್ರಯೋಜನ  ಕಲೆಗೇ ಆಗಿದೆ. ಅದೇ ನಾವು ಕಲಿತ ಕಲೆಗೆ ಮಾಡುವ ಉಪಕಾರ.

ಮಂಟಪ ಪ್ರಭಾಕರ ಉಪಾಧ್ಯಾಯ
Mantapa Prabhakara Upadyaya

ಯಕ್ಷಗಾನಕ್ಕೆ ಅನನ್ಯ ಸೇವೆ ಸಲ್ಲಿಸುವುದರೊಂದಿಗೆ, ಹೊಸ ಹುಟ್ಟು, ಹೊಸ ಪ್ರಯೋಗಗಳಿಗೆ ಕಾರಣಕರ್ತರಾದ ಮಂಟಪರು ರಸಿಕರ ಕಣ್ಮಣಿಯಾಗಿ, ಯಕ್ಷಗಾನ ಸ್ತ್ರೀ ವೇಷದ ಆಳ-ಅಗಲ-ವ್ಯಾಪ್ತಿ ವಿಸ್ತಾರವನ್ನು ಮತ್ತಷ್ಟು ಹಿರಿದುಗೊಳಿಸಿದವರು. ರಸಾನುಭೂತಿಗೆ ತಮ್ಮನ್ನು ತಾವು ಹೊಸ ಹೊಸ ರೀತಿಗಳಲ್ಲಿ ದುಡಿಸಿಕೊಳ್ಳುತ್ತಾ, ಸ್ತ್ರೀ ವೇಷದ ವಯಸ್ಸನ್ನೂ ಮೀರಿ ಬೆಳೆಯುತ್ತಲಿದ್ದಾರೆ. ಸ್ವತಃ ಗಂಡಸರೂ ಮಾರು ಹೋಗಿ ಆಕರ್ಷಿತರಾಗುವ ಮಟ್ಟಿಗೆ ಪರಿಣಾಮ ಬೀರುವ ಅವರ ಗಾಢವಾದ ಅಭಿನಯ ಅವರಲ್ಲಡಗಿದ ಕಲೆಗೆ ಸಾಕ್ಷಿ.

ಮೂರನೇ ವರ್ಷದ ಈ ಸಂಭ್ರಮಕ್ಕೆ ನಮ್ಮ ನೂಪುರ ಅವರ ನೂಪುರಗಳ ದನಿಯನ್ನು ದರ್ಶನ-ಸಂದರ್ಶನ ಗಳಲ್ಲಿ ಕಂಡುಕೊಂಡು, ಇದೀಗ ಅವರ ಹೆಜ್ಜೆ-ಗೆಜ್ಜೆಗಳ ಫಲುಕನ್ನು ಕೇಳಿಸುವ ಉತ್ಸಾಹದಲ್ಲಿದೆ. ಇದೋ ಅವರೀಗ ನಮ್ಮ ದರ್ಶನ ಭ್ರಮರಿಯಲ್ಲಿ.

ಏಕವ್ಯಕ್ತಿ ಯಕ್ಷಗಾನದ ಪರಿಕಲ್ಪನೆ ಹುಟ್ಟಿದ್ದಾದರೂ ಹೇಗೆ ?

ಅದೊಂದು ಆಕಸ್ಮಿಕ ಭೇಟಿ ನನ್ನದು ಮತ್ತು ಶತಾವಧಾನಿ ಡಾ | ಆರ್. ಗಣೇಶ್ ಅವರದ್ದು. ಪ್ರಶ್ನೆ ನನ್ನದು. ಉತ್ತರ, ಪರಿಕಲ್ಪನೆ ಅವರದ್ದು.

‘ವಯಸ್ಸಾದ ಮೇಲೆ ಸ್ತ್ರೀ ವೇಷ ಮಾಡುವುದು ಅಷ್ಟೊಂದಾಗಿ ಯಾರಿಗೂ ರುಚಿಸುವುದಿಲ್ಲ. ಮಧ್ಯ ವಯಸ್ಸು ಕಳೆದ ಮೇಲೆ ನೋಡಲೂ ಕಷ್ಟ. ಆ ಮಾತಲ್ಲಿ ನನಗೆ ಅಷ್ಟು ವಿಶ್ವಾಸವಿಲ್ಲದಿದ್ದರೂ, ಸತ್ಯದ ವಿಚಾರವದು. ಆದ್ದರಿಂದ ಐವತ್ತು ವರ್ಷದ ನಂತರವೂ ವೇಷ ಮಾಡಬೇಕು ಅಂದ್ರೆ ಹೇಗೆ’ ಎಂಬ ಪ್ರಶ್ನೆ ನನ್ನದು. ಅಲ್ಲಿಯವರೆವಿಗೂ ಒಂದು ವ್ಯಕ್ತಿಯನ್ನು ಯಕ್ಷಗಾನದಲ್ಲಿ ನಿಲ್ಲಿಸಿಕೊಳ್ಳಲಿಕ್ಕೆ ಆಗುತ್ತದೆ ಎಂಬ ವಿಶ್ವಾಸ ಇರಲಿಲ್ಲ.

‘ತುಡಿತ ಮುಖ್ಯ. ಶಕ್ತಿ ಇದ್ದರೆ ವಯಸ್ಸಾದ್ರೂ ಮಾಡಬಹುದು. ಆದರೆ ಒಂದಷ್ಟು ಮಜಲುಗಳನ್ನು ಏರಬೇಕಾಗುತ್ತದೆ. ಚಿತ್ರ-ನೃತ್ತ-ನೃತ್ಯ- ನಾಟ್ಯ-ಅಭಿನಯ-ಭಾವ-ರಸ. ನೀವು ರಸದ ಮಟ್ಟಕ್ಕೆ ಹೋಗಿ ! ಆಗ ಅಸಾಧ್ಯವಾಗುವುದಿಲ್ಲ. ಆ ಮಟ್ಟಕ್ಕೆ ಏರಿದರೆ ಯಾವ ವಯಸ್ಸಿನಲ್ಲೂ ವೇಷ ಮಾಡಬಹುದು. ರಸಕ್ಕೆ ಏರಿದಾಗ ವ್ಯಕ್ತಿ ಗೌಣವಾಗುತ್ತಾನೆ. ಕಲಾವಿದನಿಗೆ ರಸ ಉತ್ಪನ್ನ ಮಾಡುವ ಶಕ್ತಿ ಇದ್ದರೆ ಆತ ಪಾತ್ರವೇ ಆಗಿಬಿಡುತ್ತಾನೆ. ಅವನೇ ಆ ಪಾತ್ರ ಆದ ಮೇಲೆ ತರ್ಕ ಇಲ್ಲವಲ್ಲ’ ಎಂದಿದ್ದರು!

ಆಗ ಬಂದದ್ದೇ ‘ಭಾಮಿನಿ’ !

ಹೀಗಾಗಿ ಎಪ್ಪತ್ತು ವರ್ಷ ವಯಸ್ಸಾದ ನಂತರವೂ ಭಾಮಿನಿ ಮಾಡಿದರೆ ಅದನ್ನು ರಸದೃಷ್ಟಿಯಿಂದ ಅನುಭವಿಸುವವರಿಗೆ ವಯಸ್ಸು ಕಾಣೋದಿಲ್ಲ. ಎಲ್ಲರನ್ನೂ ಏಕಕಾಲಕ್ಕೇ ಮುಟ್ಟುತ್ತೀವಿ ಅಂತಲ್ಲ. ಆದರೆ ಆ ಮಟ್ಟಕ್ಕೆ ಏರಿದಾಗ ಅದೂ ಸಾಧ್ಯ. ಮೊದಲು ಒಂದಷ್ಟು ಗೊಂದಲಗಳಿತ್ತು. ನಂತರ ಧೈರ್ಯ ಬಂದಿದೆ.

ಭಾಮಿನಿಯ ವೈಶಿಷ್ಟ್ಯ ಏನು ? ಅದು ನಿಮ್ಮನ್ನು ಆವರಿಸಿಕೊಂಡಿದ್ದು ಹೇಗೆ ?

ಭಾಮಿನಿ ಅಷ್ಟನಾಯಕಿಯರ ಚಿತ್ತವೃತ್ತಿ. ಸ್ವಲ್ಪ ಕಷ್ಖವೇ ಹೌದು. ಅದೊಂಥರಾ ಸ್ತ್ರೀ ವೇಷಕ್ಕೆ ವ್ಯಾಕರಣ ಇದ್ದ ಹಾಗೆ ! ಅದನ್ನು ಮಾಡಿದ ನಂತರ ಯಾವುದನ್ನೂ ಮಾಡಬಹುದು ಎಂಬ ವಿಶ್ವಾಸ ಬಂದಿದೆ. ಶೃಂಗಾರ ಮತು ಅದರ ವಿವಿಧ ಅನುಭವಗಳ ಮೇಲೆ ಹೆಣೆದ ಕೃತಿ ಅದು. ಶೃಂಗಾರ ಅಂದರೇನೇ ಪ್ರೇಮ. ಅದು ತೊಂಭತ್ತು ವರ್ಷದ ಮುದುಕ-ಮುದುಕಿಯರಿಗೂ ಇರುತ್ತದೆ. ಭಾವಕ್ಕೆ ವಯಸ್ಸಿನ ಅಂತರವಿಲ್ಲವಲ್ಲ. ಹಾಗಾಗಿ ಭಾಮಿನಿಯಲ್ಲಿ ದೇಹದ ವರ್ಣನೆಯಿಲ್ಲ. ಮನಸ್ಸಿನ ಒಳಗಿನ ಮನೋಧರ್ಮವಿರುತ್ತದೆ. ಹಾಗಾಗಿ ಇವತ್ತಿಗೂ ಭಾಮಿನಿಯೇ ಪ್ರಿಯ. ಉಳಿದೆಲ್ಲ ಪ್ರಸಂಗಗಳೂ ಜಾನಕೀ ಜೀವನ, ಕೃಷ್ಣಾರ್ಪಣ, ಯಕ್ಷದರ್ಪಣ, ಶೂರ್ಪನಖಾ, ಪೂತನಿ ಮುಂತಾದವು ಪಾತ್ರಗಳನ್ನು ಆಧರಿಸಿದ್ದಷ್ಟೇ !

Mantapa Prabhakara Upadyaya

ಏಕವ್ಯಕ್ತಿ ಯಕ್ಷಗಾನದ ಮೇಲೆ ಸಾಕಷ್ಟು ಆರೋಪಗಳಿವೆ. ಭರತನಾಟ್ಯದ ಅಂಶಗಳೇ ಜಾಸ್ತಿ ಎಂಬುದು ಒಂದು ವಾದವಾದರೆ ಯಕ್ಷಗಾನದ ಅಂಶಗಳಿಗೆ ಒಳಪಡುವುದೇ ಇಲ್ಲವೆನ್ನುವುದು ಇನ್ನೊಂದು.. ಇದರ ಬಗ್ಗೆ ಏನು ಹೇಳುತ್ತೀರಿ ?

ಏಕವ್ಯಕ್ತಿ ಯಕ್ಷಗಾನ ಪ್ರಯೋಗಕ್ಕೆ ಪ್ರಭಾವ ಯಾವುದೇ ನೃತ್ಯ ಪ್ರಕಾರಗಳದ್ದಲ್ಲ. ಅದೇನಿದ್ದರೂ ನಾಟ್ಯಶಾಸ್ತ್ರದ್ದೇ. ಒಂದು ಮನೋಭಾವ ಇದೆ; ನಾಟ್ಯಶಾಸ್ತ್ರವಿರುವುದೇ ಭರತನಾಟ್ಯಕ್ಕೆ ಅಂತ ! ಗುರು-ಕಲಾವಿದರನ್ನೂ ಕಾಡುತ್ತಿರುವ ಸೀಮಿತ ಮನೋಧರ್ಮವದು. ಹಾಗೆ ನೋಡಿದರೆ ಇಂದಿನ ಭರತನಾಟ್ಯವು ನಾಟ್ಯದ ಅಂಶಗಳನ್ನು ಬಿಟ್ಟು ದೂರ ಸಾಗುತ್ತಲಿದೆ ಎಂದೇ ಹೇಳಬಹುದು.

ಭರತನಾಟ್ಯ ಪ್ರದರ್ಶನ ಎಂಬುದು ಏಕವ್ಯಕ್ತಿಯೇ ಹೌದು. ಆದರೆ ಪ್ರಸಂಗವನ್ನು ಅಭಿನಯಿಸುವಾಗ ಕಲಾವಿದರು ಬೇರೆ ಬೇರೆ ಪಾತ್ರಗಳನ್ನು ಒಬ್ಬರೇ ಅಭಿನಯಿಸುತ್ತಾರೆ. ಆದರೆ ಏಕವ್ಯಕ್ತಿ ಯಕ್ಷಗಾನದಲ್ಲಿ ಹಾಗಲ್ಲ. ಒಂದೇ ವ್ಯಕ್ತಿ, ಒಂದೇ ಪಾತ್ರ. ಆದರೆ ಪ್ರಸಂಗದಲ್ಲಿ ಬರುವ ಉಳಿದೆಲ್ಲಾ ಪಾತ್ರಗಳನ್ನು ಆ ಪಾತ್ರವೇ ಅನುಭವಿಸುತ್ತದೆ. ಶೂರ್ಪನಖಾ ಪ್ರಸಂಗ ಮಾಡಹೊರಟರೆ ಅಲ್ಲಿ ಬರುವ ಸೀತೆ, ರಾಮ, ಲಕ್ಷ್ಮಣನ ಪಾತ್ರವನ್ನು ಆಕೆ ನೋಡಿ, ಅವರ ಎತ್ತರ, ನಡೆ-ನುಡಿ-ಭಾವ-ಭಂಗಿಗಳನ್ನು ತನ್ನ ಭಾವದಿಂದಲೇ ಪ್ರಕಟಿಸಿ ಅವರ ಇರವನ್ನು ಸ್ಪಷ್ಟವಾಗಿ ಕಾಣಿಸಿಕೊಡುತ್ತಾಳೆ. ಪಾತ್ರಕ್ಕೆ ಇನ್ನೊಂದು ಪಾತ್ರದ ಪ್ರತಿಕ್ರಿಯೆ, ವರ್ಣನೆಯಿಂದಲೇ ಉಳಿದೆಲ್ಲಾ ಪಾತ್ರಗಳು ತನ್ನಿಂತಾನೇ ಸೃಷ್ಟಿಯಾಗುತ್ತವೆ. ಏಕವ್ಯಕ್ತಿ ಯಕ್ಷಗಾನದ ಹಿನ್ನಲೆ ಎಲ್ಲವೂ ಯಕ್ಷಗಾನದ್ದೇ. ಆದರೆ ಏಕವ್ಯಕ್ತಿ ಪ್ರದರ್ಶನ ಅಂತ ಅಷ್ಟೇ ! ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಅದು ಆ ಮನೋಧರ್ಮಕ್ಕೆ ಅಗತ್ಯವೂ ಕೂಡಾ.

ಅಷ್ಟಕ್ಕೂ ಯಾವುದು ಯಕ್ಷಗಾನ, ಯಾವುದು ಯಕ್ಷಗಾನ ಅಲ್ಲ ಅಂತ ಹೇಳ್ತೀರಿ? ಸುಮ್ಮನೆ ಕೂತು, ನಿಂತು ಮಾತಾಡುವುದೇ ಯಕ್ಷಗಾನ ಅಂದರೆ ಹೇಗೆ? ವಾಚಿಕ ಕಡಿಮೆಯಿದೆ ಎಂಬ ಆರೋಪವೇ ? ಮಾತು ಬೇಕು ಅನ್ನುವುದೇ ಭ್ರಮೆ. ಹಿನ್ನಲೆ ಪದವೂ ವಾಚಿಕವೇ ತಾನೇ ? ಎಷ್ಟೋ ಬಾರಿ ವಾಚಿಕಾಭಿನಯವೂ ರಸಭಂಗ ಮಾಡುವುದಿದೆ ಎಂದು ಪ್ರೇಕ್ಷಕರೇ ಒಪ್ಪಿಕೊಂಡು ಕಡಿಮೆ ಮಾಡಲು ಸಲಹೆ ಕೊಟ್ಟದಿದೆ. ಹಾಗಂತ ಮಾತು ಬೇಡ ಅಂತಲ್ಲ.

ಏಕವ್ಯಕ್ತಿ ಯಕ್ಷಗಾನದ ನಿರೂಪಣೆಯಲ್ಲಿ ನೀವು ಕಂಡುಕೊಂಡ ಅಂಶಗಳೇನು ?

ಏಕವ್ಯಕ್ತಿಗೆ ನಾಟ್ಯವೇ ಮುಖ್ಯ. ಯಾಕೆಂದರೆ ನನಗೆ ಪ್ರಧಾನವೆನಿಸುವುದು ನಾಟ್ಯವೇ ಹೊರತು ಶೈಲಿ ಅಲ್ಲ. ‘ಸಂಪ್ರದಾಯದಿಂದ ಹೊರಗುಳಿದ ಪ್ರಕಾರ’ ಎಂದು ಆರೋಪಿಸುವವರ ಪಾಲಿಗೆ ನಾನು ಇಂಥದ್ದೇ ಶೈಲಿ ಅಥವಾ ಸಂಪ್ರದಾಯವನ್ನು ಪಾಲಿಸದೇ ಇದ್ದದ್ದು ದೊಡ್ಡದಾಗಿ ಕಾಣಬಹುದು. ಅಷ್ಟಕ್ಕೂ ಯಥಾವತ್ತಾಗಿ ಮಾಡಲಿಕ್ಕೆ ನಾನೇ ಬೇಕೂಂತ ಏನೂ ಇಲ್ಲವಲ್ಲ. ನನಗಿಂತ ಚೆನ್ನಾಗಿ ಮಾಡುವವರು ಇದ್ದಾರೆ. ನಾಟ್ಯ ಅನ್ನುವುದೇ ಶೈಲಿಗಳಿಗಿಂತ ಮೀರಿದ್ದು. ಪವಿತ್ರವಾದದ್ದು, ಪರಿಪೂರ್ಣವಾದದ್ದು. ಅದರ ಮುಂದೆ ಯಾವುದೇ ಇದ್ದರೂ ಎಲ್ಲವೂ ಅದರಲ್ಲಿದೆ. ಮತ್ತು ಕಾಲದಿಂದ ಕಾಲಕ್ಕೆ ಅದರಲ್ಲೇ ಏನೇನೋ ಆಗುತ್ತಲೇ ಇದೆ.

ಯಕ್ಷಗಾನದ ಸ್ತ್ರೀ ವೇಷದ ಬೆಳವಣಿಗೆಯ ದೃಷ್ಟಿಯಿಂದ ಬೆಳೆದದು ಏಕವ್ಯಕ್ತಿ. ಮೊದಮೊದಲಿಗೆ ಇನ್ನೊಂದು ವೇಷ ಜೊತೆಗಿಲ್ಲ ಎಂಬ ಕೊರಗಿತ್ತು. ಆದರೆ ಈಗಿಲ್ಲ. ಮತ್ತು ಎಲ್ಲರೂ ಒಪ್ಪಿಕೊಳ್ಳಲಿ ಅಂತ ಮಾಡಿದ್ದೂ ಅಲ್ಲ. ಪೂರ್ವಾಗ್ರಹವಿಲ್ಲದಿರುವವರು, ಶುದ್ಧ ರಸಿಕನಾದವನು ಒಪ್ಪುತ್ತಾನೆ. ಪೂರ್ವಾಗ್ರಹ ಎನ್ನಲಿಕ್ಕೂ ಆಗುವುದಿಲ್ಲ. ಅದು ಅವರವರ ಜ್ಞಾನ-ಅಜ್ಞಾನದ ವಿಷಯ. ಅದೂ ತಪ್ಪಲ್ಲ. ಆದರೆ ಕಲೆಯ ದೃಷ್ಟಿಯಿಂದ ನೋಡುವವರಿಗೆ ಏಕವ್ಯಕ್ತಿ ಒಂದು ಕೊರತೆಯೇ ಆಗುವುದಿಲ್ಲ.

ಏಕವ್ಯಕ್ತಿಯಲ್ಲಿ ಪದಾಭಿನಯಕ್ಕಿಂತಲೂ ವಾಕ್ಯಾರ್ಥಾಭಿನಯಕ್ಕೇ ಪ್ರಾಮುಖ್ಯತೆ ಜಾಸ್ತಿ. ವಾಕ್ಯಾರ್ಥಾಭಿನಯ ಹೇಳಿಕೊಟ್ಟು ಬರುವುದಲ್ಲ. ‘ಒಬ್ಬ ಹೋದ’ ಎಂಬುದನ್ನು ಸನ್ನೆ ಮಾಡಿ ಒಂದು ಬಾರಿಗೆ ತೋರಿಸಬಹುದು. ಆದರೆ ಪರಿಣಾಮ ಏನಾಗುತ್ತದೆ ? ಹಾಗಾಗಿ ಆತ ಹೋದ ರೀತಿ, ನಂತರ ಏನಾಯಿತು, ಆದ ಪರಿಣಾಮ, ಅದಕ್ಕಿಂತಲೂ ಮುಂಚಿಗೆ ಇದ್ದ ಸ್ಥಿತಿ ಎಲ್ಲವನ್ನೂ ತೋರಿಸಿದಾಗಲಷ್ಟೇ ಆ ವಾಕ್ಯಕ್ಕೂ ಮಹತ್ವ ಬರುತ್ತದೆ.

ಬಣ್ಣ ಹಚ್ಚಲು ಪ್ರಾರಂಭಿಸಿದ್ದು ೨೬-೨೭ನೇ ವರ್ಷ ಪ್ರಾಯದಲ್ಲಿ. ಉಡುಪಿಯಲ್ಲಿ ಕಲಿತದ್ದು. ಅದಾದ ನಂತರ ೩-೪ ವರ್ಷ ಮೇಳದಲ್ಲಿದ್ದೆ. ಆಗೆಲ್ಲ ನಮಗಿದ್ದ ಮನರಂಜನೆಯ ಮಾಧ್ಯಮ ಯಕ್ಷಗಾನವೊಂದೇ! ಯಕ್ಷಗಾನದ ಪದ ಕೇಳಿಕೊಂಡು ದಿಕ್ಕು ಹಿಡಿದು ಹೋಗಿ ಕೂತು ನೋಡುವ ಜಾಯಮಾನ ಆಗಿನದು. ಒಮ್ಮೊಮ್ಮೆ ದಿಕ್ಕು ತಪ್ಪಿ ಇಡೀ ರಾತ್ರಿ ಒದಾಡಿದ ಸಂದರ್ಭಗಳೂ ಇವೆ. ಹೀಗೆ ಆ ಆಸಕ್ತಿಯೇ ನನ್ನನು ಈ ಕ್ಷೇತ್ರಕ್ಕೆ ಎಳೆದು ತಂದದ್ದು. ಅದು ನಮ್ಮಯ ಮಣ್ಣಿನ ಗುಣವೂ ಕೂಡಾ! ಈಗ ಆ ಬಗೆಯ ಮನೋಭಾವ ಎಲ್ಲಿದೆ?

ಏಕವ್ಯಕ್ತಿ ಯಕ್ಷಗಾನವೆಂಬ ಪ್ರಕಾರಕ್ಕೆ ಆಯುಷ್ಯವಿಲ್ಲ ಎನ್ನುತ್ತಾರಲ್ಲಾ..? ನಿಮ್ಮ ಉತ್ತರ.?

ಏಕವ್ಯಕ್ತಿಗೆ ಆಯುಷ್ಯವಿಲ್ಲ ಎನ್ನುವವರಿಗೆ ಹೇಳುವುದಿದೆ; ಅವರಿಗಾದರೂ ಆಯುಷ್ಯವಿದೆಯೇ ? ನಾವೀಗ ಕಾಣುತ್ತಿರುವ ಯಕ್ಷಗಾನ, ನೃತ್ಯ ೨೫ ವರ್ಷಗಳ ಹಿಂದೆ ಈಗಿರುವಂತೆ ಇರಲಿಲ್ಲ ಎಂದಾದ ಮೇಲೆ ಏಕವ್ಯಕ್ತಿಯೂ ಇರಬೇಕು ಎನ್ನುವುದು ಎಷ್ಟು ಸರಿ?

ಹಿಂದಿನವರು ಮಾತ್ರ ಬುದ್ಧಿವಂತರು, ಮುಂದಿನವರು ಪ್ರಯೋಜನ ಇಲ್ಲ ಅನ್ನೋದೆಲ್ಲಾ ಸುಳ್ಳು. ಹಾಗೆ ಯಾರಾದರೂ ಹೇಳಿದರೆ ಅವರಿಗೆ ವಯಸ್ಸಾಗಿದೆ ಅನ್ನಬಹುದಷ್ಟೇ ! ಪೀಳಿಗೆಯಿಂದ ಪೀಳಿಗೆಗೆ ಎಲ್ಲರೂ ಕಲೀಯುತ್ತಲೇ ಇರ್ತಾರೆ. ಅಷ್ಟಕ್ಕೂ ಇದೇ ಮಾಧ್ಯಮ ಮುಂದುವರೀಬೇಕು ಅಂತ ಏನಿದೆ? ನಿಮಗಿದು ಚೆಂದ ಅಂತ ಕಂಡ ಕಾರಣ ಹಾಗೆ ಹೇಳಬಲ್ಲಿರಿ. ಒಂದಲ್ಲ ಒಂದು ದೃಷ್ಟಿಯಲ್ಲಿ ಕಲೆ ಉಳಿದೇ ಉಳಿಯುತ್ತದೆ. ಶೈಲಿ ಬದಲಾವಣೆ ಆಗಬಹುದು. ಆದರೆ ಮನಸಿನ ರುಚಿ ಹಾಗೇ ಇರುತ್ತದೆ. ಅನುಭವಗಳನ್ನು ತೆಗೆದುಕೊಂಡ ದರ್ಶಕ ಮತ್ತೊಂದು ಅನುಭವಗಳನ್ನು ಕೊಡುತ್ತಾನೆ. ಹಾಗಾಗಿ ಬೆಳೀತಿರುವ ಒಬ್ಬ ಹುಡುಗ ಅಥವಾ ಹುಡುಗಿ ನಾಟ್ಯದ ಪಟ್ಟುಗಳನ್ನು ಶ್ರದ್ಧೆಯಿಂದ ಕಲಿತು ಅನುಭವಿಸಿದರೆ ನನಗಿಂತಲೂ ಚೆನ್ನಾಗಿ ಮಾಡಬಹುದು.

ಲೋಕದ ಸಂಗತಿಯೇ ಹಾಗೆ ! ಮಾಡಲಿಕ್ಕಾಗದೇ ಇರೋದೆಲ್ಲಾ ಇಲ್ಲವೇ ಇಲ್ಲ ಅಂತ ಹೇಳುವುದು. ಅದು ಸುಲಭ ಕೂಡಾ ಆದರೆ ಆ ಆರೋಪ ಆಧಾರವಿಲ್ಲದ ಸಂಗತಿ.

ಕೆಲವರಿಗೆ ತೆಂಕು ತಿಟ್ಟೇ ಪ್ರಿಯವಾದದ್ದು. ಕೆಲವರಿಗೆ ಬಡಗು. ಅದು ಅವರವರ ಮನೋಧರ್ಮ. ಅದು ತಪ್ಪಲ್ಲ. ಹಾಗೆ ನೋಡಿದರೆ ತೆಂಕು ತಿಟ್ಟಿಗೂ, ಬಡಗುತಿಟ್ಟಿಗೂ ಕುಣಿಯಬಲ್ಲೆ. ಈ ವರೆಗೆ ೭೬೦ ಪ್ರದರ್ಶನ ನೀಡಿದ್ದೇವೆ. ಹೊಸ ಕಲ್ಪನೆಗಳು ಬರಬಹುದು.

ನಿಮ್ಮ ಪ್ರಯೋಗಗಳಿಗೆ ಸಂಬಂಧಿಸಿದಂತೆ ನಿಮ್ಮನ್ನು ಬಹುವಾಗಿ ತಟ್ಟಿದ ಅಂಶ ಯಾವುದು?

ನಡುಮನೆ ಪ್ರಯೋಗ ನಂಗಿಷ್ಟ. ಸರಳವಾದ ಕ್ರಮ. ಮನೆಯವರೇ ಇರ್ತಾರೆ. ಒತ್ತಾಯಕ್ಕೆ ಕೂತುಕೊಳ್ಳೋದಿಲ್ಲ. ಹೆಚ್ಚಿನ ವ್ಯವಸ್ಥೆ ಬೇಕಿಲ್ಲ. ಖರ್ಚೂ ಹೆಚ್ಚಿಲ್ಲ. ಸಮಯಕ್ಕೆ ಸರಿಯಾಗಿ ಪ್ರಾರಂಭ ಮಾಡ್ತೀವಿ. ಮೊಬೈಲ್, ಕಾಲಿಂಗ್ ಬೆಲ್ ಎಲ್ಲವನ್ನೂ ಆಫ್ ಮಾಡಿಸ್ತೀವಿ. ಒಮ್ಮೊಮ್ಮೆ ಪಕ್ಕದ ಮನೆಯವರಿಗೂ ಗೊತ್ತಾಗಿರುವುದಿಲ್ಲ. ಅದು ಅಷ್ಟಾಗಿ ಪ್ರಚಾರಕ್ಕೆ ಬರೋಲ್ಲ ಅಂದರೆ ಪೇಪರ್‌ನಲ್ಲಿ ಬರೋದಿಲ್ಲ.

ನಡುಮನೆಯಿಂದ ಎಷ್ಟೋ ಜನರ ಹೃದಯ ಗೆದ್ದು ಬರಲಿಕ್ಕಾಗಿದೆ. ಅವರಿಗೂ ಕಲೆಯ ಬಗೆಗೆ, ಕಲಾವಿದನ ಬಗೆಗೆ ಗೌರವ ಬರುತ್ತದೆ. ಇವರ್ಯಾರೋ ಕೈಗೆಟುಕದವರು ಅಂತ ಅಂದುಕೊಳ್ಳೋದಿಲ್ಲ. ಬದಲಾಗಿ ನಮ್ಮವರೇ, ಹತ್ತಿರದವರು ಅನ್ನುವ ಭಾವ ಅವರಲ್ಲೂ. ಕಲೆಯೊಂದು ಮಾಡಬೇಕಾದ್ದು ಇದೇ ಅಲ್ಲವೇ !

ಒಂದು ನಡುಮನೆ ಪ್ರದರ್ಶನದಲ್ಲಿ ಹೀಗಾಯಿತು ; ‘ಯಶೋದೆ ಕೃಷ್ಣನನ್ನು ಆಡಿಸಿಕೊಂಡು ಬಂದು ಒಂದು ಕೋಣೆಯೊಳಗೆ ಕೂಡಿ ಅಗಳಿ ಹಾಕಿ ಹೋಗುವುದನ್ನು ಅಭಿನಯಿಸಿದೆ. ಕಾರ್ಯಕ್ರಮ ಮುಗಿದು ೪-೫ ದಿನಗಳ ತರುವಾಯ ಬಂದ ಮನೆಯವರು ಅಳುತ್ತಲೇ ಹೇಳಿದ್ದೇನು ಗೊತ್ತೇ? ‘ನೀವು ಬಾಗಿಲು ಹಾಕಿ ಬಂದ ನಂತರ ಆ ಕೋಣೆಯನ್ನು ನಾವು ತೆರೆದೇ ಇಲ್ಲ. ಕೃಷ್ಣ ಓಡಿ ಹೋದಾನು’!

ಅದೊಂಥರಾ ಭ್ರಮೆಯಿದ್ದಿರಬಹುದು. ಆದರೆ ಪ್ರಸಂಗವನ್ನು ಅನುಭವಿಸುವಾಗ ಅವರು ಅವರಾಗಿಯೇ ಇರಲಿಲ್ಲ ಎಮ್ಬುದಂತೂ ಸ್ಪಷ್ಟ. ಆ ಅನುಭವ ಭ್ರಮೆಯಂತೂ ಅಲ್ಲ.

ಈ ಯಶಸ್ಸು ವೇದಿಕೆಗಳಲ್ಲಿ ಸಾಧ್ಯವಾಗುವ ಬಗೆ ?

ದೊಡ್ಡ ವೇದಿಕೆ ಅಂದಾಕ್ಷಣ ಅದ್ಭುತಗಳು ಬೇಕಾಗುತ್ತದೆ. ವ್ಯವಸ್ಥೆ, ಸಮಸ್ಯೆಗಳನ್ನು ಎದುರಿಸಿ ನಿಲುವ ಸಂದರ್ಭಗಳನ್ನು ಸೃಷ್ಟಿ ಮಾಡಬೇಕಾಗುತದೆ. ಮೈಕ್, ಲೈಟ್ ಎಲ್ಲ ಬೇಕು. ಅಷ್ಟಕ್ಕೂ ಮೆಗಾ ಪ್ರೋಗ್ರಾಮ್‌ಗಳ ಮೂಲಕ ಏಕವ್ಯಕ್ತಿ ಪ್ರಯೋಗ ಮಾಡಹೊರಟರೆ ಅದರ ಪರಿಣಾಮ ಅಷ್ಟಾಗಿ ಇರಲಿಕ್ಕಿಲ್ಲ. ನನಗಾದರೂ ಭಾವಾನುಭವ ಆದೀತು; ಅದರೆ ಪ್ರೇಕ್ಷಕರಿಗೆ ಆಗುತ್ತೆ ಅನ್ನುವುದು ಅನುಮಾನ. ಮೆಗಾ ಪ್ರೋಗ್ರಾಮ್‌ಗಳಿಗೆ ಅದರದ್ದೇ ಆದ ಸೌಂದರ್ಯವಿದೆ. ದೊಡ್ಡ ದೊಡ್ಡ ವೇದಿಕೆಗಳಿಗೆ ಅಂತಹ ವೇದಿಕೆ, ವ್ಯವಸ್ಥೆ, ಅಬ್ಬರ ಅಗತ್ಯ. ಆದರೆ ದೊಡ್ಡ ವೇದಿಕೆಗಳಿಗೆ ಏಕವ್ಯಕ್ತಿ ಮಾಡಹೊರಟರೆ?

ಯಕ್ಷಗಾನಕ್ಕೆ ಸ್ಥಿತ್ಯಂತರಗಳನ್ನು ಮಾಡಿಸಿಕೊಳ್ಳುವ ಶಕ್ತಿ ಇದೆ. ಆದರೆ ಅದನ್ನು ಕಲಾವಿದರಾದಿಯಾಗಿ ಒಪ್ಪಿಕೊಳ್ಳಲು ಯಾರೂ ತಯಾರಿಲ್ಲದವರಂತೆ ಅಸಡ್ಡೆ ಮಾಡುತ್ತಾರೆ. ಒಂದು ವೇಳೆ ವಿದ್ಯಾರ್ಥಿಗಳಾದಿಯಾಗಿ ಯುವಕರೆಲ್ಲರೂ ಯಕ್ಷಗಾನ ಕಲಿತರೆ ಜಗತ್ತಿನಲ್ಲೇ ನಂ. ೧ ಕಲೆಯಾಗಿ ಬೆಳೆಯಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಹಾಗಂತ ಹಳೆಯದೇ ಇಟ್ಟುಕೊಂಡು ಕೂತರೂ ಪ್ರಯೋಜನ ಇಲ್ಲ. ಹೊಸತನ್ನು ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು

ಆದರೆ ಪ್ರೇಕ್ಷಕರ ಸಂಖ್ಯೆ ವಿರಳವಾಗಿ ಕಲಾವಿದ ಹುರಿದುಂಬಿತನಾಗದೆ, ಪ್ರೋತ್ಸಾಹ ಸಿಗದೇ ಪೇಲವವೆನಿಸಿಕೊಳ್ಳುತಾನೆ ಎನ್ನುವ ಭಾವನೆಯಿದೆಯಲ್ಲಾ..! ಅದಕ್ಕೇನನ್ನುತ್ತೀರಿ?

ಜನ ಮುಖ್ಯವಲ್ಲ. ನೋಡುವ ಹೃದಯ ಮುಖ್ಯ. ಒಬ್ಬನೇ ಕೂತರೂ ನಾನು ಮಾಡಬಲ್ಲೆ. ಆಸ್ವಾದಿಸಲು ಒಂದು ಹೃದಯ ಇದ್ದರಾಯಿತು. ಧ್ಯಾನ ಮತ್ತಷ್ಟು ಹತ್ತಿರವಾಗುತ್ತದೆ.

ಒಂದು ವೇಳೆ ಯಾವುದೋ ಕಾರ್ಯಕ್ರಮಕ್ಕೆ ಜನ ಬರಲಿಲ್ಲ ಅಂದರೆ, ಆ ಕಾರ್ಯಕ್ರಮ, ಪ್ರದರ್ಶನ ನೋಡೋದಕ್ಕೆ ಜನರಿಗೆ ಒಪ್ಪಿಗೆ ಇಲ್ಲ ಅಂತ ಅರ್ಥ. ಜಾಸ್ತಿ ಜನ ಬರಬೇಕೆನ್ನುವ ಆಲೋಚನೆಯೇ ತಪ್ಪು. ಜನಕ್ಕೋಸ್ಕರ ಮಾಡ್ತೀರಿ ಅಂತಾದರೂ ಜನರು ಅದಕ್ಕೆ ಕಚ್ಚಿಕೊಂಡು ನೋಡುವ ಶಕ್ತಿಯನ್ನು ನೀವು ಕೊಟ್ಟಿರಬೇಕು. ಹಾಗಂತ ಜನ ಬೇಕು ಅಂತ ಒದ್ದಾಡುವ ಸಂಘಟಕ, ಕಲಾವಿದರಿಗೆ ಬಸ್ ಸ್ಟ್ಯಾಂಡ್‌ನಲ್ಲೂ ಹೋಗಿ ಮಾಡಬಹುದಲ್ವಾ? ಸಾಕಷ್ಟು ಜನ ಅಲ್ಲಿಯೂ ಇರುತ್ತಾರೆ. ಒಮ್ಮೊಮ್ಮೆ ಹಿಗಾಗುವುದಿದೆ. ಜನ ಬರಲಿ, ಆಮೇಲೆ ಮಾಡೋಣ ಅಂತ ಹತ್ತು ಆಸಕ್ತ ಮಂದಿಯನ್ನೂ ಕಾಯಿಸುತ್ತಾರೆ. ಕೊನೆಗೆ ಜನ ಬಂದರೂ ಅದನ್ನು ನೋಡುವವರಾಗಿಲ್ಲದಿದ್ದರೆ, ಇತ್ತ ಅಭಿರುಚಿಯ ಪ್ರೇಕ್ಷಕರನ್ನು ಕಳೆದುಕೊಂಡಿರುತ್ತಾರೆ.

ಜನ ಬಾರದೇ ಹೋದರೂ ಪ್ರದರ್ಶನ ನೀಡಲಿಕ್ಕೆ ನಾವು ತಯಾರು ಅಂತಾದಾರೆ ಅದರರ್ಥ ಕಲೆ ನಮ್ಮಲ್ಲಿ ಬೇರೂರಿದೆ ಎಂದರ್ಥ.

ಪ್ರದರ್ಶನದಲ್ಲಿ ಪ್ರೇಕ್ಷಕನ ಗ್ರಹಿಕೆಗಳು ಎಷ್ಟರ ಮಟ್ಟಿಗೆ ನಿರ್ಣಾಯಕ ಪಾತ್ರ ವಹಿಸಬಲ್ಲುವು?

ನಾಟ್ಯ ಮಾಡುವವ ಮುಖ್ಯ ಅಲ್ಲ. ಆಸ್ವಾದಿಸುವವ ಮುಖ್ಯ, ಅವನೇ ದೊಡ್ಡವ ಕೂಡಾ ! ಮಾಡುವವನಿಗೆ ತಾನು ಮಾಡುತ್ತೇನೆ ಎಂಬ ಆನಂದವಾದರೂ ಇರುತ್ತದೆ. ಅದರೆ ನೋಡುವವ ಹಾಗಲ್ಲ. ಒಂದಷ್ಟು ಆನಂದ ತೆಗೆದುಕೊಂದು ಹೋಗಬೇಕೆಂದು ಬಂದಿರುತ್ತಾನೆ. ಆದರೆ ಆತನಿಗೆ ಸಿಗಬೇಕೆಂದೇನಿಲ್ಲವಲ್ಲ. ನೋಡುವವನಿಗೂ ತಾನು ನೋಡ್ತಾ ಇದ್ದೇನೆ ಅನ್ನೋದನ್ನು ಮರೆಸುವಷ್ಟರ ಮಟ್ಟಿಗೆ ಕಲಾವಿದ ಬೆಳೆಯಬೇಕು. ಆಗ ಪ್ರೇಕ್ಷಕನಿಗೂ ತೃಪ್ತಿ ಸಿಗುತ್ತದೆ.

ಏಕವ್ಯಕ್ತಿ ಯಕ್ಷಗಾನ ನನ್ನ ವೃತ್ತಿಯಲ್ಲ. ಜೀವನ ನಿರ್ವಹಣೆಗೆ ನನಗೆ ಬೇರೆಯದೇ ಉದ್ಯಮವಿದೆ. ಒಂದು ವೇಳೆ ಏಕವ್ಯಕ್ತಿಯನ್ನೇ ಆಯ್ದುಕೊಂಡರೆ ವೃತ್ತಿಧರ್ಮಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಾಗುತ್ತದೆ ; ಅದಕ್ಕೆ ತಕ್ಕ ಹಾಗೆ ಎಲ್ಲದರಲ್ಲೂ ಒಂದು ಹೊಂದಾಣಿಕೆ, ಬದ್ಧತೆ, ಕ್ರಮವನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ .

ನಿಮ್ಮ ಪ್ರಯತ್ನ ನಿಮಗೆ ಕೊಟ್ಟ ಅನುಭವ ಎಂಥದ್ದು ?

ಏಕವ್ಯಕ್ತಿ ಯಕ್ಷಗಾನದಿಂದ ತುಂಬಾ ಜನರ ಹೃದಯ ಮೀಟಿದ್ದೇವೆ ಅನ್ನುವ ವಿಶ್ವಾಸ ನಮ್ಮದು. ಕಲೆಯ ಮಾರ್ದವತೆ ಮುಟ್ಟಿಸಿದ್ದೇವೆ ಅನ್ನುವ ತೃಪ್ತಿಯಿದೆ. ನಾವು ಪ್ರದರ್ಶನ ನೀಡುವಾಗ ನರ್ತಿಸುತ್ತಾರೆ ಅನ್ನುವ ಆಸೆಯಿರುವುದು ಒಂದು ಬಗೆಯಾದರೆ, ಪ್ರದರ್ಶನ ಮುಗಿಸಿ ಹೋಗುವಾಗ ಏನೋ ಹೇಳಲಾರದ ಪ್ರಕ್ರಿಯೆಯಿದೆಯಲ್ಲಾ ಅದು ಇನ್ನೊಂದು ಬಗೆಯ ಅನುಭವ ! ಮತ್ತೂ ಕೆಲವರು ಐದು ನಿಮಿಷ ಅತ್ತು ನಮಸ್ಕಾರ ಮಾಡಿ ಹೋಗುತ್ತಾರೆ. ಅದನ್ನು ನೀವು ಏನಂತೀರಿ ? ಅನುಭವ ಹೇಳೋಕಾಗಲ್ಲ. ಅನುಭವವನ್ನು ಅನುಭವಿಸಬೇಕು.

ಕಲಾವಿದ ಯಾವಾಗ ಪ್ರೇಕ್ಷಕನಿಗೆ ಆನಂದ ಕೊಡಲು ಅರ್ಹನೆನಿಸಿಕೊಳ್ಳುತ್ತಾನೆ ? ಕಲಾವಿದನ ಮಟ್ಟವನ್ನು ಕಂಡುಕೊಳ್ಳುವುದು ಹೇಗೆ?

ವಿದ್ಯೆ ಕಲಿಯಲಿಕ್ಕೆ ಮಾಧ್ಯಮ ಬೇಕು. ಪ್ರದರ್ಶನಕ್ಕೆ ಮಾಧ್ಯಮ ಬಿಡಬೇಕು. ಮಾಧ್ಯಮ ಇಟ್ಟುಕೊಂಡೇ ಪ್ರದರ್ಶನ ಮಾಡಲಿಕ್ಕೆ ಇಳಿಬಾರದು. ಮಾಧ್ಯಮ ಬಿಡುವುದು ಅಂದ್ರೆ ಜಾತಿಯನ್ನೇ ಬಿಟ್ಟುಹೋಗುವುದು ಅಂತಲ್ಲ. ಅದಕ್ಕೂ ಅದರದ್ದೇ ಆದ ಸೌಂದರ್ಯವಿದೆ. ಅದರರ್ಥ, ಕಲಾವಿದ ಮಾಧ್ಯಮ ಬಿಡುವಷ್ಟು ಗಟ್ಟಿಯಾಗಿರಬೇಕು. ಅದರರ್ಥ ಮಾಧ್ಯಮವನ್ನು ಬಿಟ್ಟೇ ಬಿಡಬೇಕು ಅಂತಲೂ ಅಲ್ಲ. ಮಾಧ್ಯಮ ಮೀರುವ ಕಲಾವಿದ ಪ್ರತಿಭಾವಂತನಾಗಿರುತ್ತಾನೆ. ಹಾಗಂತ ಮಾಧ್ಯಮ ಬೇಡ ಅಂತಲ್ಲ. ಪ್ರತಿಭೆ ಇದ್ದರೆ ಕಲಾವಿದ ಹೊಸ ಹೊಳಹುಗಳನ್ನು ಕಾಣಿಸಬಲ್ಲ. ವಿದ್ಯೆ ಮತ್ತು ಜ್ಞಾನ ಎರಡೂ ಒಂದೇ ಅಲ್ಲ.

ಆದರೆ ಬಹಳಷ್ಟು ನೃತ್ಯ ಕಲಾವಿದರು ಗಿಣಿಪಾಠ ಒಪ್ಪಿಸಿ, ಒಂದುವೇಳೆ ರಂಗದಲ್ಲಿ ತಪ್ಪಿಹೋಯಿತು ಅಂತಾದರೆ ಮೂಡ್ ಹಾಳು ಮಾಡಿಕೊಂಡು ಕೂರುತ್ತಾರೆ. ಅದಾಗಬಾರದು. ಮಾಧ್ಯಮ ಮೀರುವುದೇ ಉದ್ದೇಶ ಅಲ್ಲ. ಆದರೆ ಮೀರಿ ಹೋದರೆ ಅಡ್ಡಿಯಿಲ್ಲ. ನಾವೇನು ಹೇಳಲಿಕ್ಕೆ ಹೊರಟಿದ್ದೀರಿ ಎನ್ನುವುದನ್ನು ಸರಳವಾಗಿ ಮಾಡಿ ತೋರಿಸುವುದೇ ಮುಖ್ಯ. ಯಾವುದೇ ಸಂಗೀತ, ಶೈಲಿಯಲ್ಲಿ ನುಡಿಸಿದರೂ ‘ರಿದಂ’ ಅಂದರೆ ಒಂದು ಲಯದ ಆಧಾರದಲ್ಲಿ ಅದಕ್ಕೆ ತಕ್ಕಂತೆ ತಮ್ಮ ತಮ್ಮ ನೆಲೆಯಲ್ಲಿ ನರ್ತಿಸಲು ಬರಬೇಕು. ನಾಟ್ಯವೆಂದರೆ ಅದೇ!

ಮಾಧ್ಯಮವನ್ನು ಹಿಡೀಬೇಕು ಮತ್ತು ಬಿಡಬೇಕು. ಆ ಕೆಲಸ ಏಕವ್ಯಕ್ತಿಯಲ್ಲಿ ಆಗಿದೆ.

ಇಂದಿನ ಕಾಲದಲ್ಲಿ ಒಂದು ಕಲೆಯ ಕಲಾವಿದರು ಮತ್ತೊಂದು ಕಲೆಯ ಕಲಾವಿದರನ್ನು ನಡೆಸಿಕೊಳ್ಳುವ ಪ್ರವೃತ್ತಿ ಹೇಗಿದೆ ಅನ್ನಿಸುತ್ತದೆ?

ಆಶ್ಚರ್ಯವಾಗಬಹುದು; ಬಹಳ ಭರತನಾಟ್ಯ ಕಲಾವಿದರು ‘ಯಕ್ಷಗಾನ ನೋಡ್ಬೇಡಿ’ ಅನ್ನುತ್ತಾರೆ. ಶೈಲಿ ಹಾಳಾಗಿ ಹೋಗುತ್ತದೆ ಎಂಬ ಉವಾಚ ಬೇರೆ ! ಹಾಗೆ ಹಾಳಾಗಿ ಹೋಗುವುದಿದ್ದರೆ ಉಳಿಸಿಕೊಂಡು ಮಾಡುವುದೇನು ? ಹಾಗೆ ನೋಡಿದರೆ, ಯಾವ ನೃತ್ಯ ಚೆಂದ ಇಲ್ಲ., ಹೇಳಿ ನೋಡೋಣ..,ನಮ್ಮ ಊರಲ್ಲಿ ಕೊರಗರು ಕುಣಿದ ಹಾಗೆ ಹೇಳಿ ಅಣಕಿಸುವವರಿಗೆ ಕುಣಿಯಲಿಕ್ಕೆ ಬರುತ್ತದಾ ? ಅದನ್ನು ಚೆಂದ ಇಲ್ಲ ಅಂತ ಹೇಳ್ತೀರಾ?

ಏನಿದ್ದರೂ, ಹೇಳುವವರಿಗೆ ಮಾಡುವ ವೈವಿಧ್ಯ ಗೊತ್ತಿಲ್ಲವೆನ್ನಬೇಕಷ್ಟೇ ! ಸೌಂದರ್ಯ ಯಾರೊಬ್ಬರ ಸ್ವತ್ತೂ ಅಲ್ಲ. ಇವೆಲ್ಲವೂ ಶೈಲಿ ಅಂದುಕೊಳ್ಳುವವರ ಹಣೆಬರಹ. ಶೈಲಿ ಅನ್ನೋದಕ್ಕಿಂತ ಹೆಚ್ಚಾಗಿ ವಿಶಾಲವಾಗಿ ಯೊಚಿಸೋದನ್ನು ಕಲಿಯಬಾರದೇ? ಹಾಗೆ ನೋಡಿದರೆ ನೃತ್ಯ ಕ್ಷೇತ್ರವನ್ನು ಹಾಳು ಮಾಡುವುದರಲ್ಲಿ ಶಾಸ್ತ್ರೀಯ ನೃತ್ಯಪಟುಗಳ ಪಾಲೇ ಹೆಚ್ಚು. ಆದ್ದರಿಂದ ಇಂತಹ ಉದಾಹರಣೆಗಳಲ್ಲಿ ಪ್ರತಿಭೆ ಎನ್ನುವುದಿದ್ದರೂ ಅದು ಪ್ರಶ್ನಾರ್ಹವಾಗಿ ತೋರುತ್ತದೆ.

ಕಲಾವಿದನ ಪ್ರತಿಭೆ, ಆದರ್ಶ, ತೀವ್ರತೆ ಮೇಲೆ ಕಲೆ ಆವರಿಸಿಕೊಳ್ಳುತ್ತದೆ. ಹಾಗೆ ನೋಡಿದರೆ ಒಂದೊಂದು ಸಲ ಗುರುಗಳ ಒತ್ತಡ ಇಲ್ಲದಿದರೇನೇ ಶಿಷ್ಯರು ಇನ್ನೂ ಚೆನ್ನಾಗಿ ಮಾಡಬಲ್ಲರು. ಗುರುಗಳ ಕೈಯಿಂದ ಕಲಿತ ಶಿಷ್ಯರು ತಮ್ಮ ಗುರುಗಳ ಬಗೆಗೆ ಹೇಳಿಕೊಳ್ಳುವಂತಾಗಬೇಕೆ ವಿನಃ ಕಲಿಸಿದ ಗುರು ಅಹಂನಿಂದ ಆಡಿಕೊಳ್ಳುವಂತಾಗಬಾರದು

Mantapa Prabhakara Upadhyaya

ನೃತ್ಯ, ನಾಟ್ಯ ಕಲಿಯ ಬಯಸುವ ಎಳೆಯರಿಗೆ ನಿಮ್ಮ ಮಾತೇನು?

ಉತ್ಸಾಹವೇ ಮಕ್ಕಳಿಗೆ ಮುಖ್ಯ. ಅವರೇನಿದ್ದರೂ ಮೊದಲು ಕಲಿಯಬೇಕಷ್ಟೇ ! ಅವರಿಗೆ ತಿಳಿ ಹೇಳುವುದಕ್ಕಿಂತ ಅವರಿಗೆ ಹೇಳಿಕೊಡೋ ಗುರುಗಳಿಗೆ ಮೊದಲು ಹೇಳಬೇಕು. ಕಲೆಯ ಸಾಧ್ಯತೆಯನ್ನು ಮಕ್ಕಳಿಗೆ ಹೇಳಿಕೊಡುವ ಕೆಲಸ ಗುರು, ಪೋಷಕರಿಂದಾಗಬೇಕು. ಆದರೆ ಈಗ ಹಾಗಿಲ್ಲ. ಕ್ಲಾಸ್ ಒಂದಕ್ಕೆ ಇಂತಿಷ್ಟು ರೂಪಾಯಿ ಫೀಸು ಕೊಟ್ಟು, ಒಂದು ಡ್ರೆಸ್ ಹೊಲಿಸಿ ಪ್ರದರ್ಶನ ಕೊಡ್ತೀನಿ ಅನ್ನೊದೇ ಮುಖ್ಯವಾಗುತ್ತಿದೆ.

ವೇದಿಕೆ ಇರುವುದು ರಸಿಕನ ಹೃದಯಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡಲು, ನೋಡುವ ವ್ಯವಸ್ಥೆ ಕಟ್ಟಿಕೊಡಲು! ಆದರೆ ವೇದಿಕೆಯೇರುವುದೇ ಮುಖ್ಯವಾಗುವುದು ದುರಂತ.

ಕಲಾವಿದರ ಮನಸ್ಥಿತಿ ಹೇಗಿದ್ದರೆ ಒಳ್ಳೆಯದು ಎಂಬುದು ನಿಮ್ಮ ಅನಿಸಿಕೆ?

ಕಲೆ ಇರುವುದೇ ತಮ್ಮ ಒಳಗನ್ನು ಕರಗಿಸಿಕೊಂಡು ಹದಗೊಳ್ಳುವುದಕ್ಕೆ. ಆದರೆ ಬಹುಪಾಲು ಜನರಿಗೆ ಪ್ರದರ್ಶನದ ಹುಚ್ಚು. ತಾನು ಕಾಣಿಸಿಕೊಳ್ಳಬೇಕೆಂಬುದೇ ಹೆಚ್ಚು. ತಾನು ಕರಗಿಸಿಕೊಳ್ಳಬೇಕೆಂದಿಲ್ಲ. ಕಲೆ ಇರುವುದು ಅಹಂಕಾರ ಕಳಚಿಕೊಳ್ಳಲು. ಬಹಳಷ್ಟು ಮಂದಿ ಅಹಂಕಾರವನ್ನು ಹೆಚ್ಚಿಸಿಕೊಳ್ಳಲು ಕಲೆಯನ್ನು ಅಂಟಿಸಿಕೊಳ್ಳುವವರೇ ಆಗಿದ್ದಾರೆ. ನಾಲ್ಕು ಜನರ ಕಣ್ಣಿಗೆ ಕಾಣಿಸಿಕೊಳ್ಳುವುದೇ ಮುಖ್ಯವಾಗಿದೆ. ಹ್ಯಾಂಡ್ ಬಿಲ್‌ನಲ್ಲಿ ಹೆಸರು ಬರಲಿ, ಮುಖ್ಯ ಪಾತ್ರ ಅಂತ ಬೋರ್ಡ್ ಹಾಕಲಿ, ಪೇಪರ್‌ನಲ್ಲಿ ಹೆಸರು ದೊಡ್ಡದಾಗಿ ಕಾಣಲಿ ಅಂತೆಲ್ಲ ಮೊದಲು ಇರುತ್ತೆ. ಇರಬೇಕಾದ್ದೂ ಕೂಡಾ ! ಆದರೆ ಮೊದಮೊದಲು ಪುಟ್ಟ ಹೆಜ್ಜೆ ಹಾಕಿಕೊಂಡು ಬಂದರೂ ಕ್ರಮೇಣ ಮಟ್ಟವನ್ನು ಏರಿಸಿಕೊಳ್ಳುತ್ತಾ ಹೋಗಬೇಕು. ಅಹಂಕಾರ ಕಳಚಿಕೊಳ್ಳಲಿಕ್ಕೆ ಕಲೆಯನ್ನು ಇಟ್ಟುಕೊಳ್ಳುವವನು ಮಾತ್ರ ಬೆಳೀತಾನೆ. ಕಲೆ ಎನ್ನುವುದನ್ನು ಅಹಂಕಾರ ಹೆಚ್ಚಿಸಿಕೊಳ್ಳಲಿಕ್ಕೆ ಅಂತ ಯಾರು ಇಟ್ಟುಕೊಳ್ಳುತ್ತಾನೋ ಅಲ್ಲಿ ಕಲೆ ಮತ್ತು ಕಲಾವಿದ ಎರಡೂ ಬೆಳೆಯೋದಿಲ್ಲ.

ವಿದುಷಿ ಬಿ. ಕೆ. ವಸಂತಲಕ್ಷ್ಮಿ
ಸಾದಿರ್ ಪದ್ಧತಿಯ  ನೃತ್ಯಕ್ಕೆ ಭರತನಾಟ್ಯವೆಂಬ  ಶುದ್ಧ ರೂಪವನ್ನು  ಕೊಟ್ಟ ತಮಿಳ್ನಾಡಿನ  ಕಲಾಕ್ಷೇತ್ರದ  ಗುರು ರುಕ್ಮಿಣೀದೇವಿ  ಅರುಂಡೇಲ್ ಮತ್ತು  ಮೈಸೂರು ಶೈಲಿಯ  ಅಗ್ರ ಗುರು ವೆಂಕಟಲಕ್ಷ್ಮಮ್ಮ  ಅವರ ಶಿಷ್ಯರುಗಳಲ್ಲಿ  ಬಿ. ಕೆ. ವಸಂತಲಕ್ಷ್ಮಿ  ಅವರದ್ದು ಮೊದಲ್ಪಂಕ್ತಿಯ  ಹೆಸರು. ಭರತನಾಟ್ಯದ  ಹಿರಿಯ ಗುರು  ಕೇಶವ ನೃತ್ಯಶಾಲಾದ  ದಿವಂಗತ ಎಚ್.  ಆರ್. ಕೇಶವಮೂರ್ತಿ  ಅವರ ಪುತ್ರಿ.  ಬೆಂಗಳೂರು ವಿಶ್ವವಿದ್ಯಾನಿಲಯದ  ಭರತನಾಟ್ಯ ಸ್ನಾತಕೋತ್ತರ  ಕಲಾಪ್ರದರ್ಶನ  ವಿಭಾಗದ ಉಪನ್ಯಾಸಕರಾಗಿ,  ಮಾಧ್ಯಮಿಕ ನೃತ್ಯ  ಪರೀಕ್ಷಾ ಪಠ್ಯಪುಸ್ತಕ  ರಚನಾ ಸಮಿತಿ  ಮತ್ತು ಮೈಸೂರು  ವಿಶ್ವವಿದ್ಯಾಲಯದ  ಕಲಾ ಪ್ರದರ್ಶನ  ವಿಭಾಗದ ಸದಸ್ಯರಾಗಿ  ಸೇವೆ. ಹಲವು  ಪ್ರತಿಷ್ಟಿತ  ಪ್ರಶಸ್ತಿ, ಫೆಲೋಶಿಪ್‌ಗಳೊಂದಿಗೆ‘ಕರ್ನಾಟಕ  ಕಲಾಶ್ರೀಗೌರವ.  ಪ್ರಸ್ತುತಃ ಬೆಂಗಳೂರಿನಲ್ಲಿ  ತಮ್ಮ ವಿಶ್ರುತ  ಸ್ಕೂಲ್ ಆಫ್  ಪರ್‌ಫಾರ್ಮಿಂಗ್  ಆರ್ಟ್ಸ್‌ನ ಮುಖ್ಯಸ್ಥೆಯಾಗಿ  ಹಲವು ಶಿಷ್ಯರಿಗೆ  ಮೆಚ್ಚಿನ, ಶಿಸ್ತಿನ  ಗುರು. ಅವರೀಗ  ನಮ್ಮ ಅತಿಥಿ..

೧. ನೃತ್ಯದ ತೀರಾ  ಶಾಸ್ತ್ರೀಯತೆಯೇ  ಅದನ್ನು ಅರ್ಥ  ಮಾಡಿಕೊಳ್ಳಲು  ಕಷ್ಟವಾಗುತ್ತಿದೆ  ಎನ್ನಲಾಗುತ್ತಿದೆ.  ಇದಕ್ಕೆ ನೀವೇನಂತೀರಿ?

ಶಾಸ್ತ್ರೀಯವಾಗಿರುವುದಕ್ಕೇ  ಅದು ಶಾಸ್ತ್ರೀಯ  ನೃತ್ಯ. ಶಾಸ್ತ್ರೀಯ  ನೃತ್ಯ ಎಲ್ಲರಿಗೂ  ಬೇಗ ಅರ್ಥ ಆಗೋದಿಲ್ಲ  ಅಂದಾಕ್ಷಣ ಅದು  ನೃತ್ಯದ ದೋಷವಲ್ಲ,  ವೀಕ್ಷಕರು ಪೆದ್ದರು  ಎಂದರ್ಥವೂ ಅಲ್ಲ.  ಜನರಿಗೆ ಅರ್ಥವಾಗೋದಿಲ್ಲ,  ಗೊತ್ತಿಲ್ಲ ಎಂಬ  ಭಾವವೇ ತಪ್ಪು.

ಗೊತ್ತಿರುವ ಕಥೆಗಳಿಂದ  ಹೆಣೆದ ನೃತ್ಯವಾದರೆ,  ನೋಡಿ ಬೇಗನೆ  ಅರ್ಥ ಮಾಡಿಕೊಳ್ತಾರೆ.  ಅಂತಹ ಅಭಿಪ್ರಾಯ  ಕಲಿಯದಿದ್ದವರಿಗೆ  ಅರ್ಥ ಆಗೋದು  ಕಡಿಮೆ ಎಂದದ್ದಕ್ಕಿರಬೇಕೇ  ವಿನಃ, ಅರ್ಥ  ಆಗುವ ಸಂಭವಗಳು  ಕಡಿಮೆ ಎಂದಲ್ಲ.  ಕೆಲವೊಮ್ಮೆ ಸೀದಾ  ಪಕ್ಕಾ ಶಾಸ್ತ್ರೀಯವಾಗಿ  ಮಾಡಿದಾಗ ಅರ್ಥ  ಆಗದೇ ಹೋಗುವ  ಸಂದರ್ಭಗಳಿರಬಹುದು.  ಆದರೆ ಆಸಕ್ತಿಯಿಟ್ಟು  ನೋಡಿದರೆ ಅರ್ಥ  ಆಗೇ ಆಗುತ್ತದೆ.  ಅದರಲ್ಲೂ ವೀಕ್ಷಕರ  ಐಕ್ಯೂ ಮೇಲೆ  ಅರ್ಥ ಮಾಡಿಕೊಳ್ಳುವ  ಶಕ್ತಿಯೂ ನಿರ್ಧರಿತವಾಗಿರುತ್ತದೆ.  ಅಷ್ಟಕ್ಕೂ ಕಲಾವಿದೆಯ  ನೈಪುಣ್ಯತೆಯೂ  ಇಲ್ಲಿ ಪ್ರಮುಖ.  ಜೊತೆಗೆ ಗುರುಗಳ  ಪಾಠ ಮಾಡುವ ಶೈಲಿ,  ಸಾಮರ್ಥ್ಯವೂ  ಇಲ್ಲಿ ನಿಗದಿಯಾಗುವ  ಅಂಶ.

೨. ನೃತ್ಯದ ಕುರಿತಾಗಿ  ಸಮಗ್ರ ವಿವರಣೆ  ನೀಡುವುದರಿಂದ  ವೀಕ್ಷಕರಿಗೆ  ಸಮರ್ಥವಾಗಿ ಅರ್ಥ  ಮಾಡಿಸಬಹುದೇ?

ವಿವರಣೆ  ಬೇಕು. ಆದರೆ  ವಿವರಣೆ ಹೇಳಿಕೊಂಡೇ  ನೃತ್ಯವನ್ನು  ಪ್ರಸ್ತುತಪಡಿಸುವಂತಾದರೆ  ಅದು ನರ್ತಕಿಯ  ಅಪರಿಪೂರ್ಣ ಕಲಿಕೆಯನ್ನು  ಎತ್ತಿ ತೋರಿಸುತ್ತದೆ.  ಜನರಿಗೆ ಅರ್ಥ  ಮಾಡಿಸುವುದರಲ್ಲೇ  ಸಮಯವನ್ನು ಮುಡಿಪಿಡುವುದಾದರೆ  ನೃತ್ಯಸ್ವಾದನೆ  ವಿಫಲವಾಗುವುದು  ಖಂಡಿತ. ಆದರೆ  ಈ ವರೆಗೆ ನಿರ್ದಿಷ್ಟ  ನೃತ್ಯ ಕಲೆಯ  ಪರಿಚಯ ಅಷ್ಟಾಗಿ  ಇಲ್ಲದವರಿಗೆ  ಅಥವಾ ನೂತನ ಪ್ರಯೋಗಗಳ  ಸಂದರ್ಭದಲ್ಲಿ  ವಿವರಣೆ ನೀಡುವುದು  ಅಗತ್ಯವಾಗುತ್ತದೆ.  ಉದಾ; ವಿದೇಶಗಳಲ್ಲಿ,  ಪರ‌ಊರುಗಳಲ್ಲಿ.

ಏಕೆಂದರೆ ಪ್ರೇಕ್ಷಕರಿಗೆ  ಸರಿಯಾಗಿ ಸಂವಹನವಾಗದೇ  ಹೋದ ಪಕ್ಷದಲ್ಲಿ  ನಮ್ಮ ಪ್ರಯತ್ನ  ವ್ಯರ್ಥವಾಗುವ  ಸಂದರ್ಭಗಳಿರುತ್ತವೆ.  ಯಕ್ಷಗಾನದಲ್ಲಾದರೆ  ಪದ್ಯದ ಸಾರವನ್ನು  ವಿವರವಾಗಿ ವಿಸ್ತರಿಸಲು  ಭಾಷೆ ಮುಖ್ಯ.  ಹಾಗಂದ ಮಾತ್ರಕ್ಕೆ  ಅಲ್ಲಿ ಅಂತಹ  ವಿವರಣೆ ಕಡಿಮೆ  ಮೌಲ್ಯದ್ದು ಎಂ  ಅರ್ಥವಲ್ಲ. ಯಕ್ಷಗಾನದ  ಬುನಾದಿ, ಸತ್ವ  ಇರುವುದೇ ಅದರ  (ಮಾತು) ವಾಚಿಕಾಭಿನಯದಲ್ಲಿ.  ಆದರೆ ನೃತ್ಯದಲ್ಲಿ  ಹಾಗಲ್ಲ. ಉದಾ:  ಸಂಚಾರೀಭಾವ ೧೫  ನಿಮಿಷಕ್ಕಿಂತ  ಹೆಚ್ಚಾದರೆ ವೀಕ್ಷಕರಲ್ಲಿ  ಅದು ಉದಾಸೀನ  ಉಂಟು ಮಾಡಬಲ್ಲುದು.

೩. ಹಾಗಾದರೆ  ಅಭಿನಯವೆಂದರೆ  ಹೇಗಿರಬೇಕು ಎಂಬುದು  ನಿಮ್ಮ ಅಭಿಪ್ರಾಯ?

ಚೆನ್ನಾಗಿ  ಡ್ರೆಸ್, ಮೇಕಪ್  ಮಾಡಿಕೊಂಡಾಕ್ಷಣ  ಅಭಿನಯ ಆಗೋದಿಲ್ಲ.  ಜೊತೆಗೆ ಬರೀ  ಹಸ್ತಗಳನ್ನು  ಪ್ರದರ್ಶಿಸಿ  ಕುಣಿದರೆ ಮಾತ್ರಕ್ಕೆ  ನೃತ್ಯ ಆಗೋದಿಲ್ಲ.  ಹಸ್ತ, ಪಾದ ಗತಿಗಳ  ಮೂಲಕ ನಾವು ಅಭಿನಯಕ್ಕೆ  ಅಂದ ಕೊಡುತ್ತೇವೆ.  ನೃತ್ಯ ಕಲಿಯುವವರಿಗೆ  ಪ್ರಾರಂಭಕ್ಕೆ  ಅದೊಂದು ಸಾಧನ  ಮಾತ್ರ. ಅದರ  ಮೂಲಕ ಅಭಿನಯದ  ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು.  ವಿಪರ್ಯಾಸವೆಂದರೆ,  ಕೆಲವರು ಎಲ್ಲವನ್ನೂ  ಅಭಿನಯದಲ್ಲೇ  ಮಾಡಿ ಮುಗಿಸ್ತಾರೆ.

ನಾವು ಮಾಡುವ  ಅಭಿನಯವನ್ನು  ಮೊದಲು ನಾವು  ಅನುಭವಿಸಬೇಕು.  ನಾವೇ ನಮ್ಮ ಭಾವನೆಯನ್ನು  ಅರ್ಥ ಮಾಡಿಕೊಳ್ಳದೆ  ಹೋದಲ್ಲಿ ಬೇರೆಯವರು  ಹೇಗೆ ತಾನೇ ಅರ್ಥ  ಮಾಡಿಕೊಂಡಾರು?  ಅಭಿನಯಕ್ಕೆ ಅಂದವನ್ನು  ರೂಢಿ ಮಾಡಿಕೊಳ್ಳಬೇಕು.  ಅದರಲ್ಲೂ ನಿಂತ  ಅಭಿನಯಕ್ಕಿಂತ  ಚಲನೆಯಿಂದ ಕೂಡಿದ  ಅಭಿನಯ ಹೆಚ್ಚು  ಆಕರ್ಷಣೀಯ.

ಆದರೆ ಮಾಡುವ  ಅಭಿನಯದಲ್ಲಿ  ನಿಖರತೆ, ಶಿಸ್ತು,  ಭಾವನೆ, ಅಭಿವ್ಯಕ್ತ  ಮಾಡುವ ಕ್ರಮವೂ  ಅವಶ್ಯ. ಅಷ್ಟಕ್ಕೂ  ಸಾಮಾಜಿಕ-ದೈನಂದಿಕ  ಜೀವನ ಮತ್ತು  ನಾಟ್ಯ ಇವೆರಡೂ  ವಿಭಿನ್ನ. ಸಹಜ  ಅಭಿನಯ ನೋಡುಗರನ್ನು  ಹೆಚ್ಚಾಗಿ ಸೆಳೆಯುತ್ತವೆ.  ಅಭಿನಯದ ಪ್ರಬುದ್ಧತೆ  ಕಲಾವಿದೆಯ ಕಲ್ಪನಾ  ಶಕ್ತಿಯನ್ನು  ಅವಲಂಬಿಸಿರುತ್ತದೆ  ಮತ್ತು ವಿಸ್ತಾರವಾಗುತ್ತದೆ.

೪.ನೃತ್ಯದಲ್ಲಿ  ನವೀನ ಪ್ರಯೋಗಗಳು  ಯಾವ ದಿಸೆಯತ್ತ  ಇದ್ದರೆ ಒಳಿತು?

ಹೊಸತಿನ  ಪ್ರಯೋಗ ಅಭಿನಂದನಾರ್ಹ.  ಆದರೆ ಹೊಸತನ್ನು  ಮಾಡಿದಾಗ ಅದು  ಪರಂಪರೆ, ಮಾರ್ಗ  ಪದ್ಧತಿ ಎಂದೋ,  ಮಾರ್ಗ ಪದ್ಧತಿ  ಮಾಡಿ ಅದು ಹೊಸತು  ಎಂದೋ ಬಿಂಬಿಸಲು  ಹೋಗಬಾರದಷ್ಟೇ.  ಅಷ್ಟಕ್ಕೂ ಪ್ರಾಚೀನ  ವಿದ್ವಾಂಸರು  ಥಿಯರಿ ಮೂಲಕವಾಗಿಯೇ  ಎಲ್ಲವನ್ನೂ ಬಳಕೆ  ಮಾಡಲಿಲ್ಲ. ಆದರೆ  ಬರಬರುತ್ತಾ ಗುರುಗಳು  ತಮ್ಮದೇ ಆದ ರೀತಿಯಲ್ಲಿ  ರೂಢಿ ಮಾಡಿಕೊಂಡು  ಪದ್ಧತಿಗಳ ಹುಟ್ಟಿಗೆ  ಕಾರಣವಾದರು.  ನೃತ್ಯದಲ್ಲಿ  ಗುರು ಮುಖೇನ  ಎಂದಿದ್ದರೂ ಎಲ್ಲವನ್ನೂ  ಗುರುಗಳ ಮೇಲೆಯೇ  ಅವಲಂಬಿಸಬಾರದು.  ಕಲಾವಿದೆ ತನ್ನತನವನ್ನೂ  ಅರಿತುಕೊಳ್ಳಬೇಕು.  ಸೃಜನಶೀಲತೆಯಿಂಬುದು  ಅದನ್ನು ಸಾಧಿಸಿಕೊಳ್ಳುವವರ  ಸಾಧನೆಯನ್ನು  ಅವಲಂಬಿಸಿದೆ.

೫. ಇಂದಿನ ಪ್ರದರ್ಶನ  ಕಲೆಗಳ ಬೆಳವಣಿಗೆಯ  ಬಗ್ಗೆ ನಿಮ್ಮ  ಅಭಿಪ್ರಾಯ?

ಈಗ ಪರೀಕ್ಷೆ,  ರಂಗಪ್ರವೇಶ ಎಲ್ಲವೂ  ವ್ಯಾಪಾರೀಕರಣಕ್ಕೆ  ತುತ್ತಾಗಿದೆ.  ಅದರಲ್ಲೂ ರಂಗಪ್ರವೇಶ  ಖರ್ಚಿಗೆ ದಾರಿ.  ಯಾರೂ ಅದರ ಅರ್ಥವನ್ನು  ತಿಳಿದು ಮಾಡುತ್ತಿಲ್ಲ.  ಡ್ರೆಸ್, ಕಾಸ್ಟ್ಯೂಮ್,  ಮೇಕಪ್, ಬ್ರೋಷರ್ಸ್,  ಆಡಂಬರಕ್ಕೇ ಮೀಸಲಾಗುತ್ತಿದೆ.  ಯಾರ ಶಿಷ್ಯೆ?,  ಎಷ್ಟು ಖರ್ಚು?,  ಊಟ ಹಾಕಿಸಿದ್ರಾ?,  ಆಹ್ವಾನ ಪತ್ರಿಕೆ  ಹೇಗಿತ್ತು ಎಂಬುದರ  ಮೇಲೆಯೇ  ಮೌಲ್ಯ  ನಿರ್ಧರಿತವಾಗಿದೆಯೇ  ವಿನಃ ಕಲಾವಿದೆಯ  ಪ್ರತಿಭೆ ಅಲ್ಲ.  ಹಾಗೆ ನೋಡಿದರೆ  ಸಂಗೀತ ಅಷ್ಟು  ಕೆಳ ಮಟ್ಟಕ್ಕಿಳಿದಿಲ್ಲ.  ಇಂದಿಗೂ ವೈಯ್ಯಕ್ತಿಕ  ಅರ್ಹತೆಯೇ ಕಲಾವಿದೆಯ  ಸಾಮರ್ಥ್ಯವನ್ನು  ನಿರ್ಧರಿಸುತ್ತದೆ.  ಅಷ್ಟರ ಮಟ್ಟಿಗೆ  ಸಂಗೀತ ತನ್ನ  ಪಾವಿತ್ರ್ಯತೆ  ಕಾಪಾಡಿಕೊಂಡಿದೆ.

ವಿದ್ವಾನ್ ಶ್ರೀಧರ್
ಶ್ರೀಧರ್ ಅವರನ್ನು  ಯಾರಿಗೆ ತಾನೇ  ತಿಳಿದಿಲ್ಲ?  ಚಲನಚಿತ್ರ ಕಲಾವಿದರಾಗಿ,  ಹೆಸರಾಂತ ಭರತನಾಟ್ಯ  ಪಟುವಾಗಿ ರಾಜ್ಯ,  ರಾಷ್ಟ್ರ, ಅಂತರಾಷ್ಟ್ರೀಯ  ಮಟ್ಟದಲ್ಲಿ ಜನಜನಿತ.   ಪತ್ನಿ ಅನುರಾಧಾ  ಶ್ರೀಧರ್ ಅವರ  ಜೊತೆಗೂಡಿ ಅವರು  ನಡೆಸಿಕೊಟ್ಟ  ಕಾರ್ಯಕ್ರಮಗಳು,  ನೃತ್ಯ ವೈವಿಧ್ಯಗಳು,  ಉಪನ್ಯಾಸ-ಕಾರ್ಯಗಾರಗಳು  ಸುಮಾರು ೨೦೦೦  ಕ್ಕಿಂತಲೂ ಹೆಚ್ಚು.  ಬೆಂಗಳೂರಿನಲ್ಲಿ  ಖೇಚರ ಅಕಾಡೆಮಿ  ಆಫ್ ಭರತನಾಟ್ಯಂ  ಎಂಬ ಸಂಸ್ಥೆಯನ್ನು  ಹುಟ್ಟುಹಾಕಿ  ನೃತ್ಯಲೋಕದ ಆರಾಧನೆ  ನಡೆಸುತ್ತಿರುವ  ಇವರು, ರಾಮಾಯಣ  ಮಹಾಭಾರತದಂತಹ  ಮಹಾಕಾವ್ಯಗಳ  ಸಾರಸತ್ವವನ್ನು  ತಮ್ಮ ನೃತ್ಯರೂಪಕಗಳಲ್ಲಿ  ಸಮರ್ಥವಾಗಿ ನಿರ್ವಹಿಸಿ  ವಿದೇಶಗಳಲ್ಲಿಯೂ  ಕಂಪನ್ನು ಹರಡಿ  ಪ್ರೇಕ್ಷಕರ ಮನಸ್ಸನ್ನು  ಗೆದ್ದಿದ್ದಾರೆ!  ಶ್ರೀಧರ್-ಅನುರಾಧಾಶ್ರೀಧರ್  ನೃತ್ಯಜೋಡಿ ರಂಗಕ್ಕೆ  ಕಾಲಿಟ್ಟಿತೆಂದರೆ  ಎಲ್ಲರ ಕಣ್ಣುಗಳೂ  ಅರಳುತ್ತವೆ.  ಇವರು ಈ ತಿಂಗಳ  ದರ್ಶನ ಭ್ರಮರಿಯಲ್ಲಿ  ನಿಮ್ಮ ಮುಂದೆ  ಅತಿಥಿಯಾಗಿ….

೧. ಸಾಮಾನ್ಯ  ಪ್ರೇಕ್ಷಕನಿಗೆ  ನೃತ್ಯ ಮಾಧ್ಯಮ  ಯಾವಾಗ ಮತ್ತು  ಹೇಗೆ ಪರಿಣಾಮಕಾರಿಯಾಗಿ  ಸಂವಹನವಾಗಬಲ್ಲುದು?

ನೂರು  ಮಾತಿಗಿಂತ ದೇಹಭಾಷೆ  ಪರಿಣಾಮಕಾರಿ.  ಎಲ್ಲಾ ವಿಷಯಗಳನ್ನು  ಮಾತಿನಿಂದ ಹೇಳಲಿಕ್ಕಾಗುವುದಿಲ್ಲ.   ಆಗ ಸೂಕ್ತವಾದ  ದೇಹಭಾಷೆ ಸಂವಹನಕ್ಕ್ಲೆ  ಹೆಚ್ಚು ಸಹಕರಿಸುತ್ತದೆ.   ಆದರೆ ಸಾಮಾನ್ಯ  ಪ್ರೇಕ್ಷಕನಿಗೆ  ನೃತ್ಯದ ಮೂಲಕ  ಅನುಭವಗಳನ್ನು  ಸಂವಹಿಸಬೇಕೆಂದಾದರೆ  ಆಗ ಆಂಗಿಕ, ಸಾತ್ವಿಕದ  ಬಂಧ ಮುಖ್ಯ.  ಸಾತ್ವಿಕ ಇಲ್ಲದ  ಆಂಗಿಕ ನಿರರ್ಥಕ.  ಅಭಿನಯದ ಮೂಲಕ  ಸಂವಹನ ಮಾಡುವುದಾದರೆ  ಸತ್ವ ಎನ್ನುವುದು  ಪ್ರಮುಖ. ವ್ಯಕ್ತಿಯು  ತನ್ನ ಅಭಿನಯವನ್ನು  ತಾನೇ ಮೊದಲು  ಅನುಭವಿಸಬೇಕು.  ಇಲ್ಲದೇ ಹೋದರೆ  ಪ್ರೇಕ್ಷಕರಿಗೆ  ತಲುಪುವುದಾದರೂ  ಹೇಗೆ? ಆಗ ಆಂಗಿಕ  ಭಾಷೆ ವ್ಯಾಯಾಮದಂತಾಗಿ  ನಿರರ್ಥಕ ಆಗುತ್ತದೆ.  ಪಾತ್ರದ ಅನುಭವ,  ಲಕ್ಷಣಗಳನ್ನು  ಅನುಭವಿಸುತ್ತಾ  ಮಾಡಿದರೆ ಮಾತ್ರ,  ಕಲಾವಿದ  ಪ್ರೇಕ್ಷಕನನ್ನು  ತಲುಪಬಲ್ಲ. ಅದು  ಅಂತರಂಗದಿಂದ  ಅಭಿನಯ ಹುಟ್ಟಿದಾಗಲಷ್ಟೇ  ಸಾಧ್ಯ.

ಉದಾ: ದೇವತೆಗಳನ್ನು  ಅವರುಗಳ ಆಯುಧದ  ಮೂಲಕ ಗುರುತಿಸಿ  ಅವರುಗಳಿಗಾಗಿ  ಹಸ್ತಗಳನ್ನು  ಮಾಡಲಾಗಿದೆ.   ಆದರೆ ಬರಿಯ  ಹಸ್ತಗಳನ್ನಷ್ಟೆ  ಪ್ರರ್ದಶಿಸಿದರೆ  ಅದು ಸರಿಯಾಗಿ  ಸಂವಹನವಾಗಲಾರದು.   ಬದಲಾಗಿ ಪಾತ್ರದ  ಸ್ವಭಾವ, ಹವ್ಯಾಸಗಳು  ಅಭಿನಯದಲ್ಲಿ  ಕೂಡಿಬರಬೇಕು.  ವಸ್ತು ಅಥವಾ  ಆಯುಧ ಹಿಡಿದುಕೊಂಡ  ವ್ಯಕ್ತಿಯನ್ನು  ಗಮನಕ್ಕೆ ತರುವ  ಹಾಗಿರಬೇಕು.  ಈ ಮಾತು ವಾಚಿಕಕ್ಕೂ  ಅನ್ವಯವಾಗುತ್ತದೆ.  ವಾಚಿಕಕ್ಕೂ ಸಾತ್ವಿಕದ  ಸಹಕಾರ ಬೇಕೇಬೇಕು.  ಆಗ ಆ ಮಾಧ್ಯಮಕ್ಕೂ  ಅರ್ಥ ಬರುತ್ತದೆ.

ನೃತ್ಯಗುರುಗಳು  ನೃತ್ಯ ಕಲಿಸುವಾಗ  ಮೊದಲು ಹಸ್ತಭಾಷೆಯನ್ನು  ಹೇಳಿಕೊಟ್ಟು  ಅದರಂತೆಯೇ ವಿನಿಯೋಗಗಳನ್ನು  ನೃತ್ಯದಲ್ಲಿ  ಬಳಕೆ  ಮಾಡಬೇಕೆಂದು  ಹೇಳುತ್ತಾರೆ.   ಕಾರಣ, ವಿದ್ಯಾರ್ಥಿಗಳಿಗೆ  ನಾಯಕ ನಾಯಕಿಯರ  ಅಭಿವ್ಯಕ್ತಿಗೆ  ಬೇಕಾದ ಜೀವನಾನುಭವ  ಇರುವುದಿಲ್ಲ.   ಆ ಅನುಭವ ಇಲ್ಲದೆ  ರಸ-ಭಾವಗಳ ಸೂಕ್ತ  ಅಭಿವ್ಯಕ್ತಿ  ಅಸಾಧ್ಯ.

ವಿರಹ ಮುಂತಾದ  ವಿಷಯಗಳನ್ನು  ಚಿಕ್ಕ ಮಕ್ಕಳು  ಅನುಭವಿಸಿ ಮಾಡಲಾರವು.  ಆzರಿಂದ ಹಸ್ತಭಾಷೆಗಳ  ಮುಖಾಂತರ, ಅಂಗಾಂಗ  ಚಲನೆಯ ಸಹಾಯದಿಂದ,  ಅವರನ್ನು ದೈಹಿಕವಾಗಿ  ನೃತ್ಯಕ್ಕೆ ಸಿದ್ಧಮಾಡಲಾಗುತ್ತದೆ.   ಪ್ರಾಥಮಿಕ ಹಂತದಲ್ಲಿ  ಆಂಗಿಕವೇ ಪ್ರಮುಖ.  ಆದರೆ ಸಾತ್ವಿಕವೇ  ಅಂತಿಮ. ವಾಚಿಕ,  ಆಂಗಿಕ, ವೇಷಭೂಷಣಗಳು  ಸಾತ್ವಿಕಕ್ಕೆ  ಪೂರಕ. ಪಾತ್ರದ  ಒಳಗೆ ಹೊಗುತ್ತಾ,  ಹೋಗುತ್ತಾ ಸಾತ್ವಿಕ  ಅಭಿನಯಕ್ಕೆ ಹೆಚ್ಚು  ಮಹತ್ವ ಕೊಟ್ಟಾಗ  ನೃತ್ಯವನ್ನು  ಕಲಾವಿದ ಪ್ರೇಕ್ಷಕರ  ಬಳಿಗೆ ಕೊಂಡೊಯ್ಯಬಲ್ಲ.   ಅದಿಲ್ಲದೇ ಬರಿಯ  ಹಸ್ತಚಲನೆ, ವೇಷಭೂಷಣಗಳಿಂದಷ್ಟೇ  ಭಾವವನ್ನು ವ್ಯಕ್ತಪಡಿಸಲು  ಹೊರಟರೆ  ಅಪ್ರಬುದ್ಧವೆನಿಸಿಕೊಳ್ಳುತ್ತದೆ.

ಸಾತ್ವಿಕಕ್ಕೆ  ಮಹತ್ವ ಕೊಟ್ಟಂತೆಲ್ಲಾ  ಅಂದರೆ ಮನಸ್ಸಿನ  ಭಾವನೆ, ತಾದಾತ್ಮ್ಯತೆಯನ್ನು  ಒಳಗೊಳ್ಳುತ್ತಾ  ಹೋದಂತೆ ಕ್ರಮೇಣ  ಇತರ ಹಸ್ತ, ಚಲನೆ,  ಭಂಗಿಗಳು  ಗೌಣವಾಗಲೇಬೇಕು.  ಸಾತ್ವಿಕದ ಮೇಲೆ  ಅವಲಂಬನೆ ಹೆಚ್ಚಾದಂತೆ  ಉಳಿದವುಗಳ ಮೇಲಿನ  ಅವಲಂಬನೆ ಕಡಿಮೆ  ಆಗುತ್ತದೆ. ಹಾಗೆಂದು  ಹಸ್ತಕ್ಷೇತ್ರ,  ಪಾದ ಚಲನೆಗಳನ್ನು   ನಿರ್ಲಕ್ಷಿಸಹೊರಟರೆ  ದೇಹದ ಆಂಗಿಕ  ಲಯ ತಪ್ಪುತ್ತದೆ.  ಆಂಗಿಕ ವಿನ್ಯಾಸಗಳನ್ನು  ನಿರ್ಲಕ್ಷಿಸುವುದೂ  ಒಳಿತಲ್ಲ. ಹದವಾದ  ಸಮ್ಮಿಲನ ನೃತ್ಯದಲ್ಲಿ  ಮೂಡಬೇಕು.

೨. ಪರಂಪರೆಯಿಂದ  ಬಂದದ್ದನ್ನು  ತನ್ನ ಅನುಭವಕ್ಕೆ  ಅನುಸಾರವಾಗಿ  ಕಲಾವಿದ ಬದಲಾವಣೆ  ಮಾಡಿಕೊಳ್ಳಬಹುದೇ?  ಮಾಡಿಕೊಳ್ಳಬಹುದು  ಎನ್ನುವುದಾದರೆ  ಎಷ್ಟು ಸರಿ?

…ಬದಲಾವಣೆಗಳು  ತಪ್ಪಲ್ಲ. ನಾಟ್ಯಶಾಸ್ತ್ರ,  ಅಭಿನಯ ದರ್ಪಣಗಳ  ಬಹಳಷ್ಟು ವಿಷಯಗಳಲ್ಲೇ  ಬದಲಾವಣೆಗಳಾಗಿರುವುದನ್ನು  ಕಾಣಬಹುದು.   ಏಕೆಂದರೆ ನೃತ್ಯಾದಿ  ಕಲೆಗಳು ಶ್ರುತಿ  ಪರಂಪರೆಯವು;  ಅಂದರೆ ಗುರುಗಳಿಂದ  ಶಿಷ್ಯರಿಗೆ,  ಅವರಿಂದ ಮತ್ತವರ  ಶಿಷ್ಯರಿಗೆ…ಹೀಗೆ  ಬೋಧಿಸಿಕೊಂಡು  ಬಂದ ಕಲೆಯಾದ್ದರಿಂದ  ಕಾಲಾಂತರದಲ್ಲಿ  ಬದಲಾವಣೆಗಳಾಗಿರುವ  ಸಂಭವಗಳಿವೆ.

ಸ್ಥಳ, ಸ್ಥಿತಿಗಳಿಗನುಗುಣವಾಗಿ  ಕಲೆಯೊಂದರ ವಸ್ತುವಿಶೇಷಗಳನ್ನು  ಅರ್ಥೈಸಿಕೊಳ್ಳುವ  ಶಕ್ತಿಯೂ ಬದಲಾಗುತ್ತಾ  ಸಾಗುತ್ತದೆ.   ಅದರಲ್ಲೂ ಪಾತ್ರಗಳ  ಔಚಿತ್ಯ, ಹಿನ್ನೆಲೆಗನುಗುಣವಾಗಿ  ಸ್ಥಿತ್ಯಂತರಗಳೇರ್ಪಡುತ್ತವೆ.  ಹಾಗಾಗಿ ಬದಲಾಗುವ  ಕಾಲಘಟ್ಟದಲ್ಲಿ  ಬದಲಾವಣೆಗಳೂ  ಅನಿವಾರ್ಯ. ಆದರೆ  ಕಲಾವಿದ ಈ ರೀತಿ   ವಿಸ್ತರಣಾ ಪ್ರಕ್ರಿಯೆಯಲ್ಲಿ  ತೊಡಗಿಸಿಕೊಳ್ಳುವಾಗ  ಚಿಂತನೆ, ಅವಲೋಕನವೂ  ಆಗಬೇಕು.

ಇನ್ನು ಈ ಬದಲಾವಣೆ  ಎಷ್ಟು ಸರಿ ಎನ್ನುವುದಾದರೆ..,  ಕಲೆ ಮತ್ತು ಅದರ  ಪ್ರಗತಿ ಸಮಕಾಲೀನ.  ಹಾಗಾಗಿ ಶಾಸ್ತ್ರವಿರುದ್ಧ  ಎಂಬುದು ಯಾವುದು  ಇಲ್ಲ. ಸಂಸ್ಕೃತಿಯೆಂಬ  ಭಾಷೆಯಲ್ಲೇ ಹಲವು  ಬದಲಾವಣೆಗಳಾಗಿವೆ.  ಈಗ ನಾವು ಆಚರಿಸುತ್ತಿರುವ  ಸಂಪ್ರದಾಯವಾದರೂ,  ಶಾಸ್ತ್ರವಾದರೂ  ನಮ್ಮ ಇತ್ತೀಚೆಗಿನ  ಹಿಂದಿನ ಇತಿಹಾಸ  ಅಷ್ಟೆ! ಹಾಗೆ  ನೋಡುವಾಗ  ಈಗ  ಆಚರಿಸುವ ದಿನನಿತ್ಯದ  ಎಷ್ಟೋ ಸಂಪ್ರದಾಯಗಳು  ೨೦೦೦ ವರ್ಷದ  ಹಿಂದೆ ಬೇರೆಯೇ  ಇದ್ದಿರಬಹುದಲ್ಲಾ!  ಹಾಗಾಗಿ ವಸ್ತುಸ್ಥಿತಿಗೆ  ತಕ್ಕಂತೆ, ಶಾಸ್ತ್ರದ  ಮೂಲ ಆಶಯ-ಅಧ್ಯಯನಕ್ಕೆ  ಧಕ್ಕೆ ಬಾರದ  ರೀತಿಯಲ್ಲಿ,  ಪ್ರೇಕ್ಷಕರಿಗೆ  ಅರ್ಥವಾಗುವಂತೆ  ಬದಲಾವಣೆ ಮಾಡಿಕೊಳ್ಳುವುದರಲ್ಲಿ  ತಪ್ಪೇನಿಲ್ಲ.

ಉದಾ: ಮುಷ್ಟಿ  ಹಸ್ತವನ್ನು ಸ್ಕೂಟರ್,  ಕಾರು ಬಿಡುವಂತೆ  ಉಪಯೋಗಿಸಿಕೊಂಡರೂ  ಅದು ಇಂದಿನ ವಾಹನ  ಎಂಬ ಸೂಚನೆಗೆ  ಸಮರ್ಥನೀಯವೂ,  ಅರ್ಥಗ್ರಾಹ್ಯವೂ  ಆಗಿರುತ್ತದೆ.  ಹಾಗಾಗಿ ಶಾಸ್ತ್ರ  ಬಿಟ್ಟು ಹೋಗುವುದು  ಎಂಬ ಮಾತಿನಲ್ಲಿ  ಹುರುಳಿಲ್ಲ.  ನಾವು ನಮ್ಮ ಮಹಾಭಾರತದ  ಗದಾಯುದ್ಧ ಭಾಗದಲ್ಲಿ  ಕರಾಟೆಯ ಪಟ್ಟುಗಳನ್ನು  ನೃತ್ಯಸಂಬಂಧಿಯಾಗಿ  ಬಳಸಿಕೊಂಡಿದ್ದೇವೆ.  ಅದು ಇನ್ನಷ್ಟು  ಪರಿಣಾಮಕಾರಿ  ನೃತ್ಯ ಚಲನೆ,  ಸಂವಹನ ಕೊಡುತ್ತದೆ.   ಹಾಗಾಗಿ ಸೃಜನಶೀಲತೆ,  ಅಧ್ಯಯನದ ಮುಖಾಂತರ  ಕಲಾವಿದ ಹೊಸ  ಅರ್ಥಗಳನ್ನು  ಕಂಡುಕೊಳ್ಳಬಹುದು.   ಅಷ್ಟಕ್ಕೂ ಹಿನ್ನೆಲೆಯನ್ನು  ಸರಿಯಾಗಿ ನಿರೂಪಿಸಬೇಕು.  ಕಲಾವಿದನ ಸ್ವಾನುಭವ,  ಪರಿಶ್ರಮ, ಸಾಮಾನ್ಯ  ಪ್ರಜ್ಞೆ ಮೇಳೈಸಬೇಕು.  ಅಷ್ಟಕ್ಕೂ ನೃತ್ಯ  ಮೂಕ ಭಾಷೆಯ ತರಹದ್ದೇನೂ  ಅಲ್ಲವಲ್ಲ!…

೩. ಶಾಸ್ತ್ರೀಯ  ನೃತ್ಯಗಳು ದೈವೀಕವಾದುದು,  ಭಗವಂತನಿಂದ ಬಂದುದು  ಎಂಬ ಕಲ್ಪನೆಯ  ಮೂಲೋದ್ದೇಶವೇನು?

ಮೊದಲಿನಿಂದಲೂ  ಜನರಿಗೆ, ದೊಡ್ಡದು  ಎನ್ನುವ ಕಲ್ಪನೆ  ದೇವರಿಂದ ಬಂದದ್ದು  ಎಂದೇ ಇದೆ. ಒಂದು  ವೇಳೆ ಹಾಗನ್ನದಿದ್ದರೆ  ಅದು ಸಾಮಾನ್ಯವಾಗಿಯೇ  ಹೋಗಿಬಿಡಬಹುದೇನೋ  ಎಂಬ ಆತಂಕ. ಇದನ್ನು  ಮನಗಂಡೇ ಪಾರಂಪರಿಕರು  ವಿಶೇಷವಾದುದ್ದನ್ನು  ಶಾಸ್ತ್ರ, ದೈವಿಕತೆಗೆ  ಸಮೀಕರಿಸಿದರು.  ದೈವಿಕ ಎಂದು  ಹೇಳುವುದಕ್ಕೋಸ್ಕರ  ಅಥವಾ ಒಂದು ವಿಶೇಷವಾದುದನ್ನು  ಸಾಮಾನ್ಯವಾದುದಲ್ಲ  ಎನ್ನಲು ಅದಕ್ಕೊಂದು  ಶಾಸ್ತ್ರವನ್ನು  ರಚಿಸಿದರು.

ಹಾಗೆ ನೋಡಿದರೆ  ಸಾಮಾನ್ಯ ಜೀವನದ  ಎಷ್ಟೋ ಅಂಶಗಳು  ಭರತನಾಟ್ಯಕ್ಕೆ  ನಿಕಟವರ್ತಿಯಾಗಿದೆ.  ಅದರ ಸಂದರ್ಭೋಚಿತ,  ಪಾತ್ರೋಚಿತ ಮತ್ತು  ಉತ್ತಮ ನಿಭಾಯಿಸುವಿಕೆಗಾಗಿ  ಶಾಸ್ತ್ರಗಳು  ಸಹಕರಿಸುತ್ತವೆ.  ಯಾವುದೇ ಕಲೆಯಾದರೂ  ಅದು ಜೀವನದ ಸಾಂಕೇತಿಕ  ಪ್ರತಿನಿಧಿ ಮತ್ತು  ಸಾಕ್ಷಾತ್ಕಾರ  ಪ್ರಕ್ರಿಯೆಗೆ  ಪೂರಕ. ಜೀವನವನ್ನು  ನೋಡಿ ಭರತನಾಟ್ಯವಾಗಲೀ,  ಶಾಸ್ತ್ರವಾಗಲೀ  ಬಳಕೆಗೆ ಬಂದಿದೆಯೇ  ಹೊರತು ಶಾಸ್ತ್ರವನ್ನು  ರೂಪಿಸಿ ಜೀವನವನ್ನು  ಕಟ್ಟಿಕೊಂಡದ್ದಲ್ಲ…

ವಿದುಷಿ ರೂಪಾ ಶ್ರೀಕೃಷ್ಣ ಉಪಾಧ್ಯ
ಯುವ ಭರತನಾಟ್ಯ  ಗುರು ಮತ್ತು  ಪ್ರಬುದ್ಧ ಕಲಾವಿದೆ.  ಸಾಗರದ ವಿದ್ವಾನ್   ಜಿ. ಬಿ. ಜನಾರ್ಧನ್,  ಬೆಂಗಳೂರಿನ ವಿದುಷಿ  ಬಿ. ಕೆ. ವಸಂತಲಕ್ಷ್ಮೀ  ಇವರ ಗರಡಿಯಲ್ಲಿ  ಪಳಗಿದ ರೂಪಾ  ಉಪಾಧ್ಯ ಭರತನಾಟ್ಯ   ವಿದ್ವತ್ ಮತ್ತು  ಎಂ.ಎ ರ್‍ಯಾಂಕ್  ವಿಜೇತೆ. ನಾಡಿನಾದ್ಯಂತ  ಹಲವಾರು ಕಾರ್‍ಯಕ್ರಮಗಳನ್ನು  ನೀಡುತ್ತಾ ಬಂದಿರುವ  ರೂಪಾ, ಹಲವು  ಸನ್ಮಾನ, ಪ್ರಶಸ್ತಿ  ಪುರಸ್ಕ್ರತರು.  ಪ್ರಸ್ತುತ ಮಡಿಕೇರಿಯಲ್ಲಿ  ನೃತ್ಯ ಮಂಟಪ  ಟ್ರಸ್ಟ್ ಏಂಬ  ಸಂಸ್ಥೆಯನ್ನು  ಹುಟ್ಟುಹಾಕಿ  ಉತ್ತಮ ಆಶಯಗಳ  ನೆಲೆಗಟ್ಟಿನಲ್ಲಿ  ಸುಮಾರು ೧೦೦ಕ್ಕೂ  ಹೆಚ್ಚು ಮಂದಿಗೆ  ಕಲಾಕ್ಷೇತ್ರ  ಶೈಲಿಯಲ್ಲಿ ಭರತನಾಟ್ಯ  ಮಾರ್ಗದರ್ಶನ  ಮಾಡುತ್ತಿದ್ದಾರೆ.  ಇವರು ಈ ತಿಂಗಳ  ದರ್ಶನ ಭ್ರಮರಿಯ  ಅತಿಥಿ…

೧.    ಈಗಿನ  ಭರತನಾಟ್ಯ ಕಾರ್ಯಕ್ರಮಗಳು  ಮಾರ್ಗ ಪದ್ಧತಿಯನ್ನು  ದಾಟಿ ಬೇರೆಯದೇ  ಧಾಟಿಯಲ್ಲಿ ಮುಂದುವರಿಯುವ  ಬಗ್ಗೆ ನಿಮ್ಮ  ಅಭಿಪ್ರಾಯವೇನು?

ಈಗಿನ ಬಹುಪಾಲು  ಕಾರ್ಯಕ್ರಮಗಳು  ನರ್ತಕರ ಸಾಮರ್ಥ್ಯ,  ಹಾಗೂ ಸಮಯಾವಕಾಶಗಳನ್ನು  ಆವಲಂಬಿಸಿಯೇ  ನಡೆಯುವುದರಿಂದ  ಮಾರ್ಗ ಪದ್ಧತಿಯಲ್ಲೇ  ನಡೆಯಬೇಕು ಎಂದರೆ  ಕಷ್ಟ. ಮಾರ್ಗ  ಪದ್ಧತಿಯ ನಿಯಮಗಳಿಗೆ  ಇಂದು ಯಾರೂ ಬದ್ಧರಾಗಿಲ್ಲ.  ಶಾಸ್ತ್ರೋಕ್ತವಾಗಿ,  ಶುದ್ಧವಾಗಿ,  ಕ್ರಮಪ್ರಕಾರವಾಗಿ  ಮಾಡುವುದಕ್ಕೇ  ಹಿಂದೇಟು ಹಾಕುತ್ತಾರೆ.  ಅದಕ್ಕೆ ಬೇರೆ-ಬೇರೆ  ಕಾರಣಗಳಿರುತ್ತವೆ.  ಕಾಲಕ್ಕೆ ತಕ್ಕಂತೆ  ಬದಲಾಗುವುದು  ಇಂದಿನ ಅನಿವಾರ್ಯತೆಗಳಲ್ಲೊಂದು.

೨.    ಭರತನಾಟ್ಯದಲ್ಲಿ  ಅನುಸರಿಸುವ ನೂತನ  ವಿಧಾನ ಅಥವಾ  ಬದಲಾವಣೆಗಳು  ಹೇಗಿದ್ದರೆ ಚೆನ್ನ?

ನೂತನ ಎಂದ  ಕೂಡಲೇ ಹೇಗೇಗೋ  ಮಾಡುವುದಲ್ಲ.  ಅದಕ್ಕೂ ಚೌಕಟ್ಟು,  ಶಾಸ್ತ್ರ ಕ್ರಮ  ಬದ್ಧತೆಯ ನೀತಿಯಿದ್ದರೆ  ಒಳ್ಳೆಯದು. ಜನರನ್ನು  ತಲುಪುವ ನಿಟ್ಟಿನಲ್ಲಿ  ನೂತನ ವಿಧಾನಗಳು  ಅಗತ್ಯ. ಉದಾ:  ಹೊರ ದೇಶಗಳಲ್ಲಿ  ಕಾರ್ಯಕ್ರಮ ಕೊಡಬೇಕಾಗಿ  ಬಂದಾಗ ಹಿಮ್ಮೇಳದ  ಸಂಗೀತ, ನಿರೂಪಣೆ,  ಮಂಡನಾ ಕೌಶಲ್ಯ…ಹೀಗೆ,  ಸಣ್ಣ ಪ್ರಮಾಣದ  ಬದಲಾವಣೆಗಳು  ಅವಶ್ಯವಾಗುತ್ತವೆ.  ಮುಖ್ಯವಾಗಿ ಸಾಹಿತ್ಯವೇ  ಅರ್ಥವಾಗದೇ ಹೋದಲ್ಲಿ  ವೀಕ್ಷಕರಿಗೆ  ಆಸ್ವಾದನೆಯೂ  ತ್ರಾಸದಾಯಕವಾಗುತ್ತದೆ.  ಹಾಗಂತ ಪ್ರೇಕ್ಷಕರನ್ನು  ತಲುಪುವುದಷ್ಟೇ  ನೃತ್ಯ  ಪ್ರದರ್ಶನಗಳ  ಉದ್ದೇಶವಾಗಿರಬಾರದು.  ಹಾಗಾದಲ್ಲಿ ನೃತ್ಯದ  ಶಾಸ್ತ್ರೀಯತೆಗೆ  ಖಂಡಿತಾ ಭಂಗ  ಬರುತ್ತದೆ.

೩.    ಭರತನಾಟ್ಯ  ಛಿommಡಿಛಿiಚಿಟ  ಆಗಿ ಹೋಗುತ್ತಿದೆ  ಎಂಬ ಮಾತಿದೆ.  ಇದನ್ನು ಒಪ್ಪುತ್ತೀರಾ?

ಖಂಡಿತವಾಗಿಯೂ..ಹಾಗಂತ  ಛಿommeಡಿಛಿiಚಿಟ   ಆಗುವುದು ಇಂದಿನ  ಕಾಲಘಟ್ಟಕ್ಕೆ  ಅನಿವಾರ್ಯವೂ  ಕೂಡಾ..ಏಕೆಂದರೆ  ಇಂದಿನ ಹಲವು  ಗುರುಗಳು ಖರ್ಚು  ಮಾಡಿ ಪ್ರತಿಷ್ಟಿತರಲ್ಲಿ  ಕಲಿತು ಬರುತ್ತಾರೆ.ಹಾಗೆಯೇ  ಶಿಷ್ಯರಿಂದಲೂ  ಅದನ್ನು ನಿರೀಕ್ಷಿಸುತ್ತಾರೆ.  ಜೊತೆಗೆ ಕಾರ್ಯಕ್ರಮದ  ಆಯೋಜನೆಗಳ ಸಂದರ್ಭದಲ್ಲಿ  ಎಲ್ಲಾ ಖರ್ಚನ್ನು  ಗುರುಗಳು ಅಥವಾ  ಸಂಸ್ಥೆಯೇ ಭರಿಸಲಾಗುವುದಿಲ್ಲ.  ಈಗಿನ ಕಾಲದಲ್ಲಂತೂ  ಧರ್ಮಾರ್ಥ ಅನ್ನುವ  ಮನೋಭಾವ ನಿರೀಕ್ಷೆ  ಮಾಡುವುದೇ ಕಷ್ಟ…  ಆದ್ದರಿಂದ ಛಿommಡಿಛಿiಚಿಟ  ಆಗುವುದು ಅಪರಾಧವಲ್ಲ.  ಆದರೆ ಅದು ಸುಲಿಗೆಯಾಗಬಾರದು.  ಅತೀ ಮಾಡುವುದು  ಒಳ್ಳೆಯದಲ್ಲ.  ಮಿತಿಯಲ್ಲಿದ್ದರೆ  ಚೆಂದ.

೪.    ಕಲಾವಿದೆ  ಎಂದರೆ ನಿಮ್ಮ  ದೃಷ್ಟಿಯಲ್ಲಿ  ಹೇಗಿರಬೇಕು ?

ನರ್ತಕರ ಗುಣ,  ಅವರ ಚಿಠಿಠಿeಚಿಡಿಚಿಟಿಛಿe   ನೋಡಿ ಕಲಾವಿದರು  ಅಂತ ಅಳೆಯಲಿಕ್ಕಾಗುವುದಿಲ್ಲ.  ಕಲಾವಿದರು ಮೃದು  ವರ್ತನೆ, ಉತ್ತಮ  ನಡೆನುಡಿ, ಸಂವಹನ  ಕಲೆಯನ್ನು ರೂಡಿಸಿಕೊಂಡಷ್ಟೂ  ಒಳ್ಳೆಯದು. ಆಧ್ಯಾತ್ಮಿಕ-ಪುರಾಣಗಳ  ಬಗ್ಗೆ ಆಸಕ್ತಿ,  ನೃತ್ಯಗ್ರಂಥಗಳ  ತಿಳಿವಳಿಕೆ,  ನೃತ್ಯ ಕಾರ್ಯಕ್ರಮ  ಕೊಡುವ ಮೊದಲು  ಅದರ ಹಿನ್ನೆಲೆ,  ಸಂಬಂಧಿತ ವಿಚಾರಗಳಲ್ಲಿ  ಅರಿವು..ಇವೆಲ್ಲವೂ  ಕಲಾವಿದರನ್ನು  ಪ್ರಬುದ್ಧರನ್ನಾಗಿಸುತ್ತದೆ.  ಇನ್ನೊಂದು ಮುಖ್ಯ  ವಿಚಾರವೆಂದರೆ  ಅಹಂ…ಕಲಾವಿದರು  ಅಹಂಕಾರ ಬಾಧಿತರಾಗಿರಬಾರದು.  ಅದು ಪರಿಣಾಮಕಾರಿಯಾಗಿರಬೇಕೇ  ವಿನ: ಕೆಳಮಟ್ಟದ  ಸ್ಪರ್ಧೆಗೆ ಇಳಿಯುವುದು,  ಇನ್ನೊಬ್ಬರನ್ನು  ನೋಯಿಸುವುದು,  ತೊಂದರೆ ಮಾಡುವುದು..ಇತ್ಯಾದಿ  ಭೂಷಣವಲ್ಲ.

೫.    ಗುರುಕುಲ  ಪದ್ಧತಿಯ ಅಧ್ಯಯನದ  ಲಾಭ-ನಷ್ಟಗಳ  ಬಗ್ಗೆ ತಿಳಿಸುತ್ತೀರಾ  ?

ಒಂದರ್ಥದಲ್ಲಿ  ನೋಡಿದರೆ ಪರಿಪೂರ್ಣ  ಕಲಾವಿದೆ ರೂಪುಗೊಳ್ಳುವುದೇ  ಗುರುಕುಲ ಪದ್ಧತಿಯ  ಅಧ್ಯಯನದಲ್ಲಿ.  ಅಲ್ಲಿ ಕಲಿಯುವವರಿಗೂ,  ಕಲಿಸುವವರಿಗೂ  ತಹತಹಿಕೆ, ಶ್ರದ್ಧೆ,  ಏಕಾಗ್ರತೆ, ಕ್ರಮ,  ಬದ್ಧತೆ ಎಲ್ಲವೂ  ಇರುತ್ತದೆ. ಯಾವುದನ್ನು  ಕಲಿಯಬೇಕು ಅಂತ  ಹೋಗಿರುತ್ತೇವೆಯೋ  ಅದಷ್ಟೇ ಅಲ್ಲದೆ,  ಸಾಮಾಜಿಕ ಮತ್ತು  ಇತರ ಬೋಧಪ್ರದ  ವಿಚಾರಗಳ ಅವಲೋಕನ,  ವಿಮರ್ಶನ ನಡೆಯುತ್ತದೆ.  ಸಚ್ಚಾರಿತ್ರ್ಯ  ರೂಪಿಸುತ್ತದೆ.  ಆದರೆ ಇಂದಿನ  ದಿನಗಳಲ್ಲಿ ಗುರುಕುಲ  ಪದ್ಧತಿ ತೀರಾ  ವಿರಳ. ಮತ್ತು  ನಿರೀಕ್ಷಿಸುವುದೂ  ದುಸ್ತರ..

ನಾಟ್ಯಾಚಾರ್ಯ ಮುರಳೀಧರರಾವ್
ಪಂದನಲ್ಲೂರು  ಭರತನಾಟ್ಯ ಶೈಲಿಯ  ಹಿರಿಯ ಗುರು.  ೧೯೨೪ ರಲ್ಲಿ  ಕಾಸರಗೋಡಿನಲ್ಲಿ  ಜನಿಸಿದ ಇವರು,  ೧೯೫೮ರಲ್ಲಿ ಕಥಕ್ಕಳಿ  ನೃತ್ಯ ಕಲಿತರಾದರೂ  ಕ್ರಮೇಣ ಅವರ  ಆಸಕ್ತಿ ಚಾಚಿಕೊಂಡದ್ದು  ಭರತನಾಟ್ಯದೆಡೆಗೆ.  ಪಂದನಲ್ಲೂರು  ಚೊಕ್ಕಲಿಂಗಮ್,  ಎಂ.ಆರ್. ರಾಜರತ್ನಂ  ಪಿಳ್ಳೈ ಅವರಲ್ಲಿ  ಅಧ್ಯಯನ. ಹಾಗಾಗಿ  ಅವರು ಜ್ಞಾನವೃದ್ಧರೂ  ಹೌದು, ವಯೋವೃದ್ಧರೂ  ಹೌದು. ಕಲೆಯನ್ನೇ  ವರಿಸಿದ ರಾಯರ  ವಿದ್ವತ್ತು,  ನಿರಂತರ ಶ್ರದ್ಧೆಯ  ಫಲವಾಗಿ ರೂಪುಗೊಂಡ  ಗ್ರಂಥ ನೃತ್ಯಲೋಕ.  ಪ್ರಸ್ತುತ ತಮ್ಮ  ಜೀವನದ ಇಳಿಸಂಜೆಯಲ್ಲೂ  ಹಲವು ಶಿಷ್ಯರಿಗೆ  ಮಾರ್ಗದರ್ಶನವನ್ನೀಯುತ್ತಾ  ಮಂಗಳೂರಿನಲ್ಲಿ  ನೆಲೆಸಿರುವ ಇವರು  ದರ್ಶನ ಭ್ರಮರಿಯ  ಅತಿಥಿ…

೧. ಭರತನಾಟ್ಯವನ್ನು  ಪ್ರೇಕ್ಷಕರು  ನೋಡುವ ದೃಷ್ಟಿಯಲ್ಲಿ  ಏನು ಬದಲಾವಣೆ  ಕಂಡಿದ್ದೀರಾ?  ಅಂತಹ ಬದಲಾವಣೆಗಳಿಗೆ  ಕಾರಣಗಳೇನಿರಬಹುದು?

ಈಗಿನ  ದಿನಗಳಲ್ಲಿ ಪ್ರತಿಯೊಬ್ಬರೂ  ಭರತನಾಟ್ಯ ಮಾಡುವವರೇ!  ಇದರಿಂದಾಗಿ ಯಾವುದು  ಶುದ್ಧ ನಾಟ್ಯ   ಮತ್ತು  ಯಾವುದು  ಅಲ್ಲ ಎಂದೇ ತಿಳಿಯದ  ಸ್ಥಿತಿ. ಜೊತೆಗೆ  ಜನರ ಮನಸ್ಥಿತಿಯೂ  ಬದಲಾಗುತ್ತ ಸಾಗಿದೆ.  ಆದರೂ ಪ್ರೇಕ್ಷಕರು  ಪ್ರಬುದ್ಧರು  ಎಂಬುದನ್ನು ಮರೆಯಕೂಡದು.  ಮುಖ್ಯವಾದದ್ದನ್ನಷ್ಟೇ  ಅವರು ತೆಗೆದುಕೊಳ್ಳುತ್ತಾರೆ.  ಆದರೆ ಒಮ್ಮೊಮ್ಮೆ  ಕೇವಲ ಕಲಾವಿದರ  ಸೌಂದರ್ಯ, ಸೌಷ್ಟವಗಳನ್ನು  ನೋಡಿ ಭರತನಾಟ್ಯದ  ಸೌಂದರ್ಯವನ್ನು  ಅಳೆಯುವವರೂ,  ತೀರ್ಪು ಕೊಡುವವರೂ  ಇದ್ದಾರೆ. ಉದಾ:  ಬಹುಪಾಲು ರಂಗಪ್ರವೇಶಗಳ  ಯಶಸ್ಸು ಇವುಗಳ  ಮೇಲೆಯೇ ನಿರ್ಣಯವಾಗುತ್ತಿರುವುದು.  ಹಾಗಾಗಿ ನೃತ್ಯ  ಕೇವಲ ಚಪ್ಪಾಳೆಗಳಿಗೆ  ಸೀಮಿತಗೊಳ್ಳುವುದೂ  ಇದೆ. ಒಳ್ಳೆಯ  ನೃತ್ಯಕ್ಕೂ ಚಪ್ಪಾಳೆ,  ಕೆಟ್ಟದಾಗಿ ಮಾಡಿದರೂ  ಚಪ್ಪಾಳೆ. ಒಟ್ಟಿನಲ್ಲಿ  ಬೆಳವಣಿಗೆಗಳು  ಎತ್ತ ಸಾಗುತ್ತಿದೆ  ಎನ್ನುವುದೇ ನಿರ್ದಿಷ್ಟವಾಗುತ್ತಿಲ್ಲ.

೨.ಇದರ ಹಿಂದೆ  ಇಂದಿನ ಕಲಾವಿದರ  ಪಾತ್ರವೇನಾದರೂ  ಇದೆಯೇ?

ಇಂದಿನ  ಎಷ್ಟೋ ಕಲಾವಿದರಲ್ಲಿ  ನೈಪುಣ್ಯತೆಯಿಲ್ಲ…ಸ್ವಂತಿಕೆ,  ಸೃಜನಶೀಲತೆಗಳಿಲ್ಲ.  ಅವರು ಮಾಡುತ್ತಿರುವುದು  ಕೇವಲ ಅನುಕರಣೆಯನ್ನಷ್ಟೇ!  ಗುರುಗಳು ಹೇಳಿಕೊಟ್ಟದ್ದನ್ನು  ಗಿಣಿಪಾಠ ಒಪ್ಪಿಸುವವರೇ  ಹೆಚ್ಚು. ಇದು  ಒಳ್ಳೆಯ ಲಕ್ಷಣವಲ್ಲ.  ಯಾವುದೇ ಕಲಾವಿದ  ಸ್ವಂತಿಕೆ, ಸೃಜನಶೀಲತೆಯಿಲ್ಲದೆ  ತನ್ನ ಕಲೆಯಲ್ಲಿ  ಶಾಶ್ವತವಾಗಿ  ಮುಂದುವರಿಯಲಾರನು.

ಇಂದಿನವರು ಕೀರ್ತನೆ  ತಂದು ವರ್ಣದ  ತರಹ ಮಾಡಿದರೆ  ಸೃಜನಶೀಲತೆಯೆಂದುಕೊಳ್ಳುತ್ತಾರೆ.  ಇದು ಎಷ್ಟರ ಮಟ್ಟಿಗೆ  ಶಾಸ್ತ್ರಸಮ್ಮತ?

ಜೊತೆಗೆ ಭರತನಾಟ್ಯಕ್ಕೆ  ಇಂದು ಎಲ್ಲರೂ  ಸಾಹಿತ್ಯ ಬರೆಯುವವರೇ!  ಹಿಂದಿನ ವಾಗ್ಗೇಯಕಾರರ  ಅಕ್ಷರಗಳಲ್ಲೇ  ಸಂಗೀತವೂ ಸೇರಿಕೊಳ್ಳುತ್ತಿತ್ತು.  ಅವರಲ್ಲಿ ವಾಕ್+ಗೇಯತೆ  ಶಕ್ತಿ ಇತ್ತು.  ಆದರೆ ಇಂದಿನವರ  ಸಾಹಿತ್ಯಕ್ಕೆ  ಬಲವಂತವಾಗಿ ಸಂಗೀತ  ಅಳವಡಿಸಬೇಕಷ್ಟೇ!  ಹಾಗಾಗಿ ಮನಸ್ಸು  ಪಕ್ವಗೊಳ್ಳಬೇಕಿದೆ.  ಆಗಲೇ ಕಲಾವಿದೆಯಲ್ಲಿ  ಹೊಸತನದ ಅಭಿವ್ಯಕ್ತಿಗೆ  ಒಂದು ಅರ್ಥ ಬರುತ್ತದೆ.

೩. ಭರತನಾಟ್ಯದ  ಪ್ರಾಚೀನತೆಯ,  ಹುಟ್ಟು, ಆಕರದ  ಕುರಿತಾಗಿನ ಜಿಜ್ಞಾಸೆಗಳ  ಬಗ್ಗೆ ನಿಮ್ಮ  ಅಭಿಪ್ರಾಯ?

ಭರತನಾಟ್ಯಕ್ಕೆ  ೩೦೦೦ ವರ್ಷದಷ್ಟು  ಹಿಂದಿನ ಇತಿಹಾಸವಿದೆಯೆನ್ನುವುದು  ಸುಳ್ಳು. ಒಟ್ಟಾರೆ   ಎಲ್ಲಾ ಶಾಸ್ತ್ರೀಯ  ನೃತ್ಯಕ್ಕೆ ಅಷ್ಟು  ಹಿರಿಯದಾದ ಇತಿಹಾಸವಿರಬಹುದಷ್ಟೇ!  ಆದರೆ ಭರತನಾಟ್ಯದ  ವೈಭವವನ್ನು ವೈಭವೀಕರಿಸುತ್ತಾರೆ.  ಭರತನಾಟ್ಯ ಕೇವಲ  ೩೦೦ ವರ್ಷಗಳಷ್ಟೇ  ಹಿಂದಿನದು. ಅದಕ್ಕೆ  ಮೊದಲಿದ್ದ ಹೆಸರು  ದಾಸೀ ಆಟ್ಟಂ  ಎಂದು.. ಈ ನೃತ್ಯಪ್ರಕಾರಕ್ಕಿದ್ದ  ಕಳಂಕ ತೊಡೆಯಲು  ಹಿರಿಯರು ಹೆಸರಿಸಿದ  ಪದ ಭರತನಾಟ್ಯ.

ಭರತನಾಟ್ಯದ ಮೂಲ  ಪ್ರವರ್ತಕನೆನಿಸಿಕೊಂಡ  ಭರತಮುನಿ ಭರತನಾಟ್ಯವೆಂದುಕೊಂಡಿರುವ  ಯಾವುದನ್ನೂ ಬರೆದವನಲ್ಲ.  ಅವನು ಬರೆದದ್ದು  ನಾಟಕ ಪ್ರಧಾನವಾದ  ಸಂಗತಿಗಳನ್ನು.  ಭಾರತದ ಎಲ್ಲಾ  ಬಗೆಯ ನೃತ್ಯಕ್ಕೂ  ಅದೇ ಮೂಲ. ನಂತರ  ಆಯಾಯ ನೃತ್ಯಶೈಲಿಗಳಿಗನುಗುಣವಾಗಿ  ಅದರದ್ದೇ ಆದ  ಪ್ರಧಾನ ಗ್ರಂಥಗಳು  ಬರೆಯಲ್ಪಟ್ಟವು.   ಅದು ಭರತನಾಟ್ಯಕ್ಕಿಂತ  ತೀರಾ ವಿಭಿನ್ನ.  ಆದರೆ ಭರತನಾಟ್ಯ  ಹೆಚ್ಚಾಗಿ ಅವಲಂಬಿಸುವುದು  ಭರತನ ನಾಟ್ಯಶಾಸ್ತ್ರಕ್ಕಿಂತಲೂ  ಹೆಚ್ಚಾಗಿ ನಂದಿಕೇಶ್ವರನ  ಅಭಿನಯ ದರ್ಪಣವನ್ನು.  ಅದೇ ಯಕ್ಷಗಾನವಾದರೆ  ಅದಕ್ಕೆ ನಾಟ್ಯಶಾಸ್ತ್ರ  ಆಕರ.

ಭರತನಾಟ್ಯದ ಹುಟ್ಟೂ  ಕೂಡಾ ಕರ್ನಾಟಕದ್ದಲ್ಲ.  ಅದು ತಮಿಳ್ನಾಡಿನಿಂದ  ಬಂದದ್ದು. ಆದರೆ  ನಮ್ಮದೆಂಬಂತೆ  ಸ್ವೀಕರಿಸಿದ್ದೇವೆ.  ತಮಿಳ್ನಾಡಿನಿಂದ  ಆಮದಾಗಿದೆ ಎನ್ನುವ   ಭರತನಾಟ್ಯಕ್ಕೆ  ಇಂದಿಗೂ ಬಳಸುವ  ಮುಖ್ಯ ಕೃತಿಗಳೇ  ಸಾಕ್ಷಿ ಮತ್ತು  ಅನಾದಿ ಕಾಲದ  ಗುರುಕುಲ ಪದ್ಧತಿ  ಅಲ್ಲಿ ಇಂದಿಗೂ  ಉಳಿದಿದೆ.

೪.ಹಾಗಾದರೆ ಕರ್ನಾಟಕದ  ಮೂಲಕಲೆ ಯಾವುದು  ಎಂಬುದು ನಿಮ್ಮ  ಅನಿಸಿಕೆ?

ದೀರ್ಘವಾಗಿ  ವಿವೇಚಿಸಿದರೆ  ಕರ್ನಾಟಕದ ದೇಸೀ  ಕಲೆ, ಇಲ್ಲಿನ  ಜನಪದ-ಜಾನಪದ-ಶಾಸ್ತ್ರೀಯತೆಯನ್ನು,  ಸಾಹಿತ್ಯ, ನಡೆ-ನಾಟ್ಯ,  ಕೃತಿಯನ್ನು ಮೈಗೂಡಿಸಿಕೊಂಡ  ಕಲೆ ಯಕ್ಷಗಾನ.

ಯಕ್ಷಗಾನದ ಮೂಲ  ಸ್ವರೂಪ ಸ್ವಲ್ಪ  ಮಟ್ಟಿಗಾದರೂ  ಉಳಿದಿದೆ ಮತ್ತು  ಅದರ ಉಳಿಯುವಿಕೆಯ  ದಿಸೆಯಲ್ಲೂ ಪ್ರಯತ್ನಗಳು  ನಡೆಯುತ್ತಲೇ  ಇರುತ್ತವೆ. ಆದರೆ  ಭರತನಾಟ್ಯ ಕಾಲಾಂತರಗಳಲ್ಲಿ  ಸಾಕಷ್ಟು ಬದಲಾವಣೆಗೊಳಪಟ್ಟರೂ  ಕರ್ನಾಟಕದಲ್ಲಿ  ಮೂಲ ಸಂಸ್ಕಾರವನ್ನು  ಕಳೆದುಕೊಳ್ಳುತ್ತಲೇ  ಸಾಗುತ್ತಿದೆ.

ಅಷ್ಟಕ್ಕೂ ಭರತನಾಟ್ಯವನ್ನೂ  ಸೇರಿಸಿದಂತೆ,  ಯಕ್ಷಗಾನದ ಆಡು  ಮಾತಿನ ವ್ಯಾಕರಣವನ್ನೇ  ಬದಲಾಯಿಸಬೇಕಾಗಿದೆ.  ಉದಾ: ಲಾಗ ಹೊಡೆಯುವುದು  ಎನ್ನುವುದು.  ಅದರ ನಿಜವಾದ  ಶಬ್ದಾರ್ಥ ‘ಭ್ರಮರಿ  ಎಂದು. ಅದರ ಅರ್ಥ  ತಿರುಗು. ಆದರೆ  ಅದನ್ನೇ ಲಾಗ  ಎಂದಾಗ ಹಾರು  ಎಂದಾಗುತ್ತದೆ.  ಇದರಿಂದ ಧ್ವನಿ,  ಅರ್ಥ ವ್ಯತ್ಯಾಸವಾಗುತ್ತದೆ.

೫.ಭರತನಾಟ್ಯವನ್ನು   ಕಲಿಯಲು ಹುಡುಗರೂ  ಬಹಳಷ್ಟು ಆಸಕ್ತಿ  ತೋರುತ್ತಿದ್ದಾರೆ.  ಅವರ ಕಲಿಕಾ ಪ್ರಕ್ರಿಯೆ  ಹೇಗಿದ್ದರೆ ಚೆನ್ನ?

ಭರತನಾಟ್ಯವೆಂಬುದು  ಮೂಲತಃ ದಾಸೀ‌ಆಟ್ಟಂ  ಎಂದು ಕರೆಸಿಕೊಳ್ಳುವ  ನೃತ್ಯಶೈಲಿ.  ಆ ದಾಸೀ‌ಆಟ್ಟಂ  ಪ್ರೇಮ, ಸ್ತ್ರೀ  ಸಹಜ ಭಾವನೆಗಳ  ಸಮ್ಮಿಲನದ ಸುಂದರ  ರೂಪ. ಹಾಗಾಗಿ  ಅದನ್ನು ಪರಿಣಾಮಕಾರಿಯಾಗಿ  ವ್ಯಕ್ತಪಡಿಸುವುದು  ಹುಡುಗಿಯರಿಂದಷ್ಟೇ  ಸಾಧ್ಯ.

ಹಾಗೆಂದ  ಮಾತ್ರಕ್ಕೆ ಹುಡುಗರಿಗೆ  ಭರತನಾಟ್ಯ ಶೋಭಿಸುವುದಿಲ್ಲವೆಂದು  ಅರ್ಥವಲ್ಲ. ನೃತ್ಯದಲ್ಲಿ  ತಾಂಡವ ಅಂಶ ಹೇರಳವಾಗಿದ್ದರೆ  ಮಾತ್ರ ಹುಡುಗರಿಗೆ  ಚೆನ್ನ. ಜೊತೆಗೆ  ಭರತನಾಟ್ಯದಲ್ಲಿ  ಕಂಡುಬರುವ ವರ್ಣ,  ಪದ, ಜಾವಳಿ ಮುಂತಾದ  ನೃತ್ಯ ಪ್ರಕಾರಗಳಲ್ಲೂ  ನಾಯಕೀ ಭಾವಕ್ಕೆ,  ಅವಳ ವಿರಹ-ಪ್ರೇಮಕ್ಕೆ  ಹೆಚ್ಚು ಅವಕಾಶಗಳಿರುತ್ತವೆಯೇ  ವಿನಃ ನಾಯಕನು  ನಾಯಕಿಯನ್ನು  ಹುಡುಕಿಕೊಂಡು  ಹೋಗುವಂತಹ ಸಂದರ್ಭಗಳು  ತೀರಾ ವಿರಳ.  ಹಾಗಾಗಿ ಅಂತಹ  ಸಂದರ್ಭಗಳನ್ನು  ಹುಡುಗರು ವೇದಿಕೆಯಲ್ಲಿ  ವ್ಯಕ್ತಪಡಿಸಹೊರಟರೆ  ಆಭಾಸವೆನಿಸಿಕೊಳ್ಳುತ್ತದೆ.

ಶತಾವಧಾನಿ ಡಾ | ಆರ್ ಗಣೇಶ್
ಶತಾವಧಾನಿ ಡಾ  | ಆರ್ ಗಣೇಶ್  ಅವರನ್ನು ಯಾರಿಗೆ  ತಾನೇ ತಿಳಿದಿಲ್ಲ?  ಸಮಕಾಲೀನ ಯುಗದಲ್ಲಿ  ಯಾವುದೇ ವಿಷಯದ  ಕುರಿತಾಗಿ ಪ್ರಬುದ್ಧವಾಗಿ,  ಪ್ರಗತಿಪರ ದೃಷ್ಟಿಯಿಂದ  ಮಾತನಾಡಬಲ್ಲ  ವಾಗ್ಮಿ. ದರ್ಶಿಸಿ-ಸಂದರ್ಶಿಸಿದ  ಹೊತ್ತಿನಲ್ಲಿ  ಅವರ ಮಾತಿನ ಕೆಲವು  ನೆನಪುಗಳು ವಿಶೇಷ  ಸಂಚಿಕೆಯ ಈ ಹೊತ್ತಿಗೆ  ನಿಮಗಾಗಿ ಇಲ್ಲಿವೆ.  ಬದಲಾವಣೆಗಳ ಪ್ರಸ್ತುತತೆ  ಮತ್ತು ಪರಿಣಾಮಕಾರಿ  ಸಂವಹನ ಎಂಬ ಪ್ರಶ್ನೆಗೆ  ಅವರಿತ್ತ ಉತ್ತರ  ರೂಪದ ಸಂವಾದ  ನಿಮ್ಮ ಮುಂದೆ.

…ಆಯಾಯ ಸಂಪ್ರದಾಯಕ್ಕೆ  ತಕ್ಕಂತೆ ಅರ್ಥ  ವ್ಯತ್ಯಾಸವಾಗುತ್ತದೆ.  ಯಾವುದು ಲೋಕಧರ್ಮಿಗೆ  ನಿಕಟವಾಗಿಯೂ,  ಆಕರ್ಷಕವಾಗಿಯೂ  ತೋರುತ್ತದೋ ಅದು  ಬೇಗನೆ ಅರ್ಥವಾಗಬಲ್ಲದು.   ಇನ್ನು ಸಂವಹನದ  ಸೌಲಭ್ಯಕ್ಕೆ  ಅಂತ ಬದಲಾಯಿಸುತ್ತಾ  ಅಥವಾ ಬಹಳಷ್ಟು  ಸರಳಗೊಳಿಸುತ್ತಾ  ಹೋದರೆ ಅದರಿಂದ  ಅಪಾಯಗಳು ಇಲ್ಲದಿಲ್ಲ.  ಹಾಗಾಗಿಯೇ ಅದಕ್ಕೊಂದು  ಆರೋಗ್ಯಕರವಾದ  ಬಂಧ ಇರುತ್ತದೆ.  ಉದಾ: ಹಾಲಿಗೆ  ನೀರು ಎಷ್ಟು  ಹಾಕಬಹುದು ಎಂಬ  ಹದದ ಅರಿವು ಹಾಕುವವರಿಗೆ  ಆಗುತ್ತದೆ.   ಹಾಗೆಯೇ ಯಾವುದು  ನಮ್ಮೊಳಗೆ ಸೊಗಸಿನ  ಕಲೆಯೆಂಬುದಿದೆಯೋ  ಮತ್ತು ನೈಜಕಲೆ  ಎಂಬುದಿದೆಯೋ  ಅದರ ಮಧ್ಯೆ ಇರುವ  ವ್ಯತ್ಯಾಸಕ್ಕೆ  ಒಂದು ಅಳತೆಯೆಂಬುದಿದೆ.  ಅದು ನಮ್ಮೊಳಗೇ  ಇರುತ್ತದೆ ಮತ್ತು  ಗೊತ್ತಾಗಬಲ್ಲುದೂ   ಕೂಡಾ! ಒಬ್ಬ  ಸಂಸ್ಕಾರ ಸಂಪನ್ನ  ಕಲಾವಿದನಿಗೆ  ಅದು ತಿಳಿಯುತ್ತದೆ.   ಆಗ ಬದಲಾವಣೆ  ಮಾಡಿಕೊಳ್ಳಬಹುದು.   ಆದರೆ ಪ್ರಾಚೀನವಾದದ್ದು,  ಪರಂಪರೆ ಶಾಸ್ತ್ರಗಳಿಂದ  ಬಂದಿರುವುದರಿಂದ  ಕಾಯ್ದುಕೊಳ್ಳಬೇಕು  ಎಂದು ಹೊರಟರೆ,  ಬಹಳ ವ್ಯವಸ್ಥಿತ,  ಶ್ರಮದಿಂದ ಅದನ್ನು  ಮಾಡಲು ಹೊರಟರೂ,  ಶಸ್ತ್ರಚಿಕಿತ್ಸೆ  ಯಶಸ್ವಿ, ಆದರೆ  ರೋಗಿ ಮಾತ್ರ  ಸತ್ತ ಎಂದಾಗಬಹುದು.   ಆಗ ಕಲೆಯ ಶವವನ್ನು  ಕಾಣಬೇಕೇ ವಿನಃ  ಕಲಾನುಭವ ಅಲ್ಲ.  ಲೆಕ್ಕಾಚಾರವಾಗಿ  ಮಾಡಲು ಹೊರಟರೆ  ನೃತ್ಯ ಭಾವ-ರಸ  ಕಳೆದುಕೊಂಡು  ಯಾಂತ್ರಿಕವಾಗುತ್ತ  ಸಾಗುತ್ತದೆ.   ಹಾಗಾಗಿ ರಸ-ಭಾವಗಳಿಂದ  ಮಾಡುವಾಗ ಕೆಲವೊಂದು  ವಿವರಣೆಗಳು ಇಲ್ಲದೇ  ಇದ್ದರೂ ಕೂಡಾ,  ಸಂವಹನವಾಗಬಲ್ಲದು.   ಆದ್ದರಿಂದ ಯಾವಾಗಲೂ  ವಿವರಣೆಗಳು ರಸ-ಭಾವಗಳಿಗೆ  ಅಂಗಭೂತ (ಅಥವಾ  ಪೂರಕ) ವಾಗಿರಬೇಕು.

ಆನಂದ  ಎಂದರೆ mಚಿಣeಡಿiಚಿಟism   ಕಡಿಮೆ ಆಗುವುದು.   ಎಲ್ಲವೂ ಎಲ್ಲರಿಗೂ  ಅಲ್ಲ; ಎಲ್ಲರ  ಹಣೆಗೆ ತಿಕ್ಕಬೇಕಾಗಿಯೂ  ಇಲ್ಲ.  ಅರ್ಥವಾಗುವ  ದೃಷ್ಟಿಯಿಂದ  ಪ್ರಮುಖವಾಹಿನಿಗೆ  ತರಬೇಕೆಂದು ಹೊರಟರೆ  ಅದು ಚರಂಡಿ ಪಾಲಾಗುವುದು  ಖಂಡಿತ.  ಆದ್ದರಿಂದಲೇ  ಹೇಳುವುದು. ಸಂವೇದನಾ  ಶೀಲನಾದ ವ್ಯುತ್ಪನ್ನನಿಗೆ  ಯಾವುದೂ ಕೂಡಾ  ಅರ್ಥವಾಗುತ್ತದೆ.  ನಿಜವಾಗಿಯೂ ಸಂಸ್ಕಾರಸಂಪನ್ನ,  ಕಲಾವಂತ ರಸಿಕನಿಗೆ  ಕಲಾವಿದನಿಗೆ  ಒಬ್ಬರು ರಸಭಾವ  ತತ್ಪರತೆಯಿಂದ  ನೃತ್ಯ ಮಾಡುವಾಗ  ಎಲ್ಲವೂ ಕಲಾತ್ಮಕವಾಗಿ,  ಶಾಸ್ತ್ರೀಯವಾಗಿಯೇ  ಕಾಣಲ್ಪಡುತ್ತದೆ.

ಟಿ.  ವಿ. ಬರುವುದಕ್ಕಿಂತ  ಮುಂಚೆ ದೂರದರ್ಶನ  ಎಂಬ ಶಬ್ದ ಇತ್ತೇ?  ಇರಲಿಲ್ಲ.  ನಂತರ  ದೂರ ಮತ್ತು ದರ್ಶನ  ಈ ಎರಡೂ ಶಬ್ದ  ಸೇರಿಸಿ ದೂರದರ್ಶನ  ಎಂದು ಮಾಡಿದರು.   ರೇಡಿಯೋ ಬರುವುದಕ್ಕಿಂತ  ಮುಂಚೆ ಬಾನು  ಮತ್ತು ‘ಉಲಿ  ಎರಡೂ ಬೇರೆ ಶಬ್ದಗಳು.   ಬಾನುಲಿ, ಆಕಾಶವಾಣಿ  ಎಂಬ ಶಬ್ದಗಳು  ಹೊಸತಾಗಿ ರೂಪ  ಪಡೆದವುಗಳಲ್ಲವೇ?  ಹಾಗೆಯೇ ಪ್ರತಿಭಾಶಾಲಿಯಾದವನು  ಶಾಸ್ತ್ರಕ್ಕೆ  ವಿರುದ್ಧವಾಗದಂತೆ  ಶಾಸ್ತ್ರವನ್ನು  ಬೆಳೆಸುತ್ತಾನೆ,  ತಾನೂ ಬೆಳೆಯುತ್ತಾನೆ.  ಹಾಗೆಂದು ಶಾಸ್ತ್ರವನ್ನು  ಮೀರಿ ಹೋಗಬಾರದೆನ್ನುವ  ನಿಯಮ ಮಾಡುವವರು  ಶಾಸ್ತ್ರವು ರಕ್ಷಣೆಗೆ  ಬೇಕು ಎನ್ನುವ  ಕಾಳಜಿ ಇರುವವರು.   ಆದರೆ ಶಾಸ್ತ್ರ  ರಕ್ಷಣೆ ಮಾಡಬೇಕೆಂದುಕೊಂಡು  ಶಾಸ್ತ್ರವನ್ನೇ  ಕೊಳೆಯಿಸುವುದು  ತಪ್ಪಲ್ಲವೇ?   ಹೀಗೆಂದು ಶಾಸ್ತ್ರರಕ್ಷಣೆಯ  ಸಮರ್ಥನೆ ಮಾಡುವವರು  ಹಲವಾರು ಮಂದಿ  ಶಾಸ್ತ್ರದ ಪೂರ್ಣ  ಅರಿವನ್ನು ಪಡೆದುಕೊಳ್ಳದೇ  ಹೋಗುವವರೇ ಆಗಿದ್ದಾರೆ.   ಅವರು ಓದಿರುವ  ಅಂಶಗಳೇ ಕಡಿಮೆ.   ಅದರಲ್ಲೂ ಇಂದು  ಕರ್ನಾಟಕದಲ್ಲಿ  ನಾಟ್ಯಶಾಸ್ತ್ರ,  ಅಭಿನಯದರ್ಪಣ,  ಭರತಾರ್ಣವ ಎಂದು  ಪುಟ-ಪುಟವೂ ಓದಿರುವವರು  ಯಾರೂ ಇಲ್ಲ.   ಹಾಗಿರುವಾಗ  ಇಂತವರು ತಾವು  ಮಾಡಿದ್ದೇ ಶಾಸ್ತ್ರ  ಎಂದು ತೇಪೆ ಹಾಕುವವರೂ  ಆಗುತ್ತಾರೆ.

ಭತ್ತದ  ಬೀಜವೊಂದನ್ನು  ಕೊಟ್ಟು ನೂರು  ವರ್ಷ ಉಳಿಸಿಕೊಳ್ಳಬೇಕು  ಎಂದರೆ ಹೇಗೆ  ಉಳಿಸಿ ಕೊಳ್ಳಬಹುದು?  ಬಿತ್ತಿಯೇ ಬೆಳೆಸಿ  ಉಳಿಸಿಕೊಳ್ಳಬೇಕಲ್ಲವೇ?  ಅಂತೆಯೇ ಶಾಸ್ತ್ರವನ್ನು  ನಮ್ಮ ಅನುಭವದ  ನೆಲದಲ್ಲಿ ಬಿತ್ತಿ,  ಮತ್ತೆ ಅದನ್ನೇ  ಬೆಳೆದು ನಂತರ  ಅದನ್ನು ಇನ್ನೊಂದು  ಅನುಭವದ ನೆಲದಲ್ಲಿ  ಬೆಳೆಯುತ್ತಾ  ಹೋಗಬೇಕು. ಪ್ರಯೋಗಗಳು  ಶಾಸ್ತ್ರವಿರೋಧವಾಗಬಾರದು,  ಆದರೆ ಶಾಸ್ತ್ರವೇ  ಪ್ರಯೋಗವಿರೋಧವಾಗಬಾರದೂ  ಕೂಡಾ. ರಾಜಾಜಿಯವರು  ಹೇಳುವಂತೆ ಅಡಿiಣiಛಿism  shouಟಜ ಟಿoಣ  beಛಿome ಣhe  ಛಿoಟಿಣಡಿಚಿsಛಿeಠಿಣive  oಜಿ ಛಿಡಿeಚಿಣiviಣಥಿ.   ಭರತನೇ ನಾಟ್ಯಶಾಸ್ತ್ರದಲ್ಲಿ  ಹೇಳಿರುವಂತೆ  ತಮ್ಮ ಅನುಭವದಿಂದ  ಮುಂದೆ ಅದನ್ನು  ವಿಸ್ತರಿಸಿಕೊಳ್ಳಿರಿ  ಎಂದು! ಪರಂಪರೆಯಿಂದ  ಮುಂದುವರೆಸಿಕೊಂಡು  ಬಂದದ್ದನ್ನು  ಮತ್ತಷ್ಟು ಬೆಳೆಸಬೇಕು!

ಶಾಸ್ತ್ರದ ವಿವರಣೆ  ಬದಲಾಗುತ್ತಿರುತ್ತದೆ.  ಸತ್ವ, ತತ್ವ  ಒಂದೇ ಆಗಿರುತ್ತದೆ.   ಉದಾ: ಬಾ‌ಎಂದು  ಕರೆಯುವ ಹಸ್ತವನ್ನು  ಹೋಗು ಎಂದು ಮಾಡಿ  ಬಾ ಎನ್ನಲು ಸಾಧ್ಯವೇ?   ಕಿರೀಟ ಎಂದು  ಕಾಲಮೇಲೆ ತೋರಿಸಿದರೆ  ಆಗುತ್ತದೆಯೇ?  ಸಾಧ್ಯವಿಲ್ಲ.   ಹಾಗಾಗಿ ಹಳೆಯ  ಮತ್ತು ಹೊಸತರ  ನಡುವಿನಲ್ಲಿ  ಒಂದು ಸ್ವಾರಸ್ಯಕರವಾದ  ಸ್ಥಾನ ಇರುತ್ತದೆ.  ಹಳತರ ಸ್ಫೂರ್ತಿಯಿಂದಲೇ  ಹೊಸತರ ಜನನ.   ಆದರೆ ಈಗಿನ  ನೂತನ ಪ್ರಯೋಗಗಳೆಲ್ಲದರ  ಉದ್ದೇಶ ಸಾಮಾನ್ಯವಾಗಿ  ಒಂದೇ ಆಗಿರುತ್ತದೆ;  ಹಳತೆಲ್ಲವನ್ನು  ತೊಳೆದು ಒರೆಸಿ,  ಬೆಂಕಿಗಿಕ್ಕಬೇಕು  ಎಂದೇ! ಆದರೆ  ನೆನಪಿನಲ್ಲಿಡಬೇಕಾದದ್ದು,  ಹೊಸ ವಾಕ್ಯಗಳನ್ನು  ರಚಿಸಬಹುದು.  ಆದರೆ ಹೊಸ ಅಕ್ಷರಗಳನ್ನು  ಇಟ್ಟುಕೊಳ್ಳಲು  ಸಾಧ್ಯವಿಲ್ಲ.   ಅಕ್ಷರ-ಪದಗಳು  ಪ್ರಾಚೀನ, ವಾಕ್ಯರಚನೆ  ನವನವೀನ, ವಾಕ್ಯರಚನೆಯ  ಹಿಂದಿನ ವ್ಯಾಕರಣವೂ  ತಕ್ಕ ಮಟ್ಟಿಗೆ  ಪ್ರಾಚೀನವೇ ಸರಿ!

ಮನುಷ್ಯರ ಚರ್ಮದ  ಪದರ ಏಳೇಳು ದಿವಸಗಳಿಗೊಂದಾವರ್ತಿ  ಬದಲಾಗುತ್ತಿರುತ್ತವೆ.   ಹಾಗಂತ ಹೊಸತು  ಶರೀರ ಎಂದು ಹೇಳಲಾಗುವುದಿಲ್ಲ.  ಶರೀರ ಪ್ರಾಚೀನವೇ  ಆಗಿದ್ದು, ಅದರ  ಮೇಲಿರುವ ಚರ್ಮ  ಆಗಾಗ ಬದಲಾಗುತ್ತಿರುವುದರಿಂದ  ಅದರಲ್ಲಿ ನೂತನವನ್ನು  ಕಂಡುಕೊಳ್ಳಬಹುದು.  ಹಾಗಾಗಿ ಇದರಲ್ಲಿ  ಅನಿರ್ವಚನೀಯತೆಯೇ  ಹೆಚ್ಚು. ಮಾಧ್ಯಮದ  ಸೌಂದರ್ಯತೆಯನ್ನು  ಅದರ ಅಸ್ತಿತ್ವದಲ್ಲೇ  ಕಂಡುಕೊಳ್ಳಬೇಕು.   ಆಗ ಸಂವಹನ ಸುಲಭ.

ಬದಲಾವಣೆಗಳ ಬಗ್ಗೆ  ಹೇಳುವುದಾದರೆ,  ನೋಡುವವರ್‍ಯಾರು  ಎನ್ನುವುದರ ಮೇಲೆ  ಎಲ್ಲವೂ ಅವಲಂಬಿಸಿರುತ್ತದೆ.   ನೋಡುವವರು ಆಯಾಯ  ಪ್ರದೇಶದವರಾದರೆ  ತೊಂದರೆಯಿಲ್ಲ.   ಬೇರೆಯವರಾದಾಗ  ಮುಜುಗರವಾಗುತ್ತದೆ.   ಅಷ್ಟಕ್ಕೂ ಶಾಸ್ತ್ರದ  ಸ್ವರೂಪ ಎನ್ನುವುದು  ಅದರ ಪ್ರಸ್ತುತತೆಗೇ  (ಚಿಛಿಛಿeಠಿಣಚಿbiಟiಣಥಿ).  ನಂತರ ಅದರ ಬಣ್ಣ,  ತೂಕ ನಿರ್ಧರಿತವಾಗಿ  ಕರಡು ಪ್ರತಿ  ಉಳಿದುಕೊಳ್ಳುತ್ತದೆ.  ಪ್ರಸ್ತುತತೆ  ಎನ್ನುವುದು ಮಾತ್ರ  ಮುಖ್ಯ.

ಲೋಕಕ್ಕೆ ನಿಕಟವಾಗಿರುವುದು  ಹೆಚ್ಚು ಅರ್ಥವಾಗುತ್ತದೆ.   ಭರತನು ಹೇಳುವಂತೆ  ನಾಟ್ಯಶಾಸ್ತ್ರಕ್ಕೆ  ಮೂರು ಪ್ರಮಾಣಗಳಿವೆ-  ವೇದ ಲೋಕ, ಆಧ್ಯಾತ್ಮ.  ವೇದ ಎಂದರೆ ಜ್ಞಾನದ  ಕೀಲಿಕೈ, ಪರಂಪರೆ.  ಲೋಕ ಎಂದರೆ ನಿತ್ಯ  ಜೀವನದ ಹೊಳಹುಗಳು,  ಆಧ್ಯಾತ್ಮ ಎಂದರೆ  ನಮ್ಮ ಅನುಭವ.   ಹಾಗಾಗಿ ಒಂದು  ದೇಶದಲ್ಲಿರುವ  ಸಾಮಾನ್ಯ ಜನರ  ವರ್ತನೆ ಅಲ್ಲಿನ  ಗುಣವನ್ನು ಅವಲಂಬಿಸಿ  ಅರ್ಥವಾಗುತ್ತದೆ.   ಉದಾ: (ಅಭಿನಯ  ಮಾಡುವಾಗ) ಉತ್ತರ  ಕನ್ನಡದಲ್ಲಿ  ನೆಲ ಸಾರಿಸುವಾಗ  ಅಡಿಕೆ ತಟ್ಟೆಯನ್ನು  ತೆಗೆದುಕೊಂಡು  ನೆಲ ಸಾರಿಸುತ್ತಾರೆ.  ಅದೇ ಬೇರೆ ಕಡೆ  ಅದು ಅರ್ಥವಾಗಲಿಕ್ಕಿಲ್ಲ.  ಬೇರೆ ಕಡೆ ಸಾಮಾನ್ಯವಾಗಿ  ಕೈಯಲ್ಲಿ ಉಜ್ಜುವಂತದ್ದು  ರೂಢಿ.  ಹೀಗೆ  ಲೋಕ ಗ್ರಹಿಸುವ  ಪ್ರಕಾರ ಅದರ  ಅರ್ಥ ನಿರ್ಧರಿತ.  ಶಾಸ್ತ್ರದಲ್ಲಿಯೂ  ವ್ಯತ್ಯಾಸಗಳಿದ್ದು  ಭಾವಗಳು ಅನುಭವದ  ನೆಲೆಯಲ್ಲಿ ವಿಸ್ತರಿಸಿಕೊಳ್ಳುತ್ತವೆ.

ಶಾಸ್ತ್ರೀಯವಾಗಿದೆ  ಎನ್ನುವ ಕಾರಣಕ್ಕೆ  ಅರ್ಥವಾಗುವುದಿಲ್ಲ  ಎನ್ನುವುದು ಸುಳ್ಳು…  ಪದ್ಮಾ ಸುಬ್ರಹ್ಮಣ್ಯಂ  ಒಂದೆಡೆ ಹೇಳುತ್ತಾರೆ…  ‘ಅಪ್ಪ ಹಾಕಿದ  ಆಲದ ಮರ ಎಂದು  ಮಾಡಲು ಹೊರಟರೆ  ಏನೂ ತಿಳಿಯಲಾರದು…  ಓರ್ವ ದಾರಿಹೋಕನನ್ನು  ಕರೆತನ್ನಿ…  ತಾನು ಶಂಕರಾದ್ವೈತವನ್ನೇ  ಅರ್ಥ ಮಾಡಿಸಬಲ್ಲೆ  ಎಂದು!…  ಆದ್ದರಿಂದ  ಸಮರಸವಾಗಿ ಸೇರಿಕೊಳ್ಳುವುದು  ಮುಖ್ಯ ಎಂದರ್ಥ.  ಕಲಿತದ್ದನ್ನಷ್ಟೂ  ಮರೆತು ರಂಗಕ್ಕೆ  ಹೋದರೆ ಮಾತ್ರ  ನಿಜವಾಗಿ ಸಂವಹನದ  ಸಾಧ್ಯತೆ ಸಾಧ್ಯ.   ಹಾಗಂತ ಕಲಿತದ್ದನ್ನು  ಬಿಡಬೇಕೆಂದು  ಅರ್ಥವಲ್ಲ.

ಉದಾ: ಲೋಕವ್ಯವಹಾರದಲ್ಲಿ  ನಾವು ಪಠ್ಯದಲ್ಲಿರುವಂತೆಯೇ  ಮಾತನಾಡುತ್ತೇವೆಯೇ?   ಇಲ್ಲಿ ಪಠ್ಯದ  ಸಂಸ್ಕಾರ ಉಳಿಸಿಕೊಂಡು  ಅದರ ರೂಪವನ್ನು  ಬಿಡುತ್ತೇವೆ…   ಹಾಗೆಯೇ ನೃತ್ಯವೂ  ಕೂಡಾ! ಯಾವುದನ್ನೂ   ಕಚ್ಚಾವಸ್ತುವಾಗಿ  ತೆಗೆದುಕೊಳ್ಳುವುದಿಲ್ಲ.   ಅದನ್ನು ಜೀರ್ಣಿಸಿಕೊಂಡು  ಸೂಕ್ತವಾದ ರೀತಿಯಲ್ಲಿ  ಪ್ರಸರಣಗೊಳ್ಳುವಂತಾಗಬೇಕು.   ಈಗಿನ ಕಲಾವಿದರು  ರಸ-ಭಾವಗಳ ತಾತ್ಪರ್ಯವಿಲ್ಲದೆ  ರಂಗಸ್ಥಳದ ಮೇಲೆ  ಹಸಿ ಹಸಿಯಾಗಿ  ನಿರ್ಜೀವವಾಗಿ  ನೃತ್ಯವನ್ನು  ವಾಂತಿ ಮಾಡಿಕೊಳ್ಳುವುದರಿಂದಲೇ  ಸಂವಹನ ಕಷ್ಟಕರ.   ಜೊತೆಗೆ ಪ್ರೇಕ್ಷಕರೂ  ಕೂಡಾ ಭರತನಾಟ್ಯ  ನೋಡಬೇಕೆಂದು  ಹೋಗುತ್ತಾರೆಯೇ  ವಿನಃ ನಾಟ್ಯ  ನೋಡಬೇಕೆಂದು  ಹೋಗುವುದಿಲ್ಲ.  ಹೀಗಿದ್ದಾಗರ್ಥ  ವಾಗುವುದು ಅಥವಾ  ಸಂವಹನ ಸಾಧಿತವಾಗುವುದಾದರೂ  ಹೇಗೆ?

ಅರ್ಥಮಾಡಿಕೊಳ್ಳುವುದು  ಮುಖ್ಯವೇ ಹೊರತು  ಅದನ್ನು ಹೊತ್ತು  ತರುವ ಭಾಷೆ ಅಷ್ಟು  ಪ್ರಮುಖವಾದುದಲ್ಲ.  ‘ಅರ್ಥಮಾಡಿಕೊಳ್ಳಬೇಕು’  ಎನ್ನುವ ಆಸಕ್ತಿ  ಇದ್ದಾಗ ಪ್ರೇಕ್ಷಕರಿಗೂ  ಅರ್ಥವಾಗುತ್ತದೆ.   ಕಲಾವಿದರು ಶ್ರದ್ಧೆಯಿಂದ  ಅರ್ಥ ಮಾಡಿಸುತ್ತಾರೆ.   “ಸಾಂಪ್ರದಾಯಿಕ  ಗುರುಪರಂಪರೆಗೆ  ಬದ್ಧನಾಗಿ ಮಾಡುತ್ತೇನೆ  ಎಂದು ಹೊರಡುವ  ಕಲಾವಿದರನೇಕರು  ಮಾಡುವುದು ಕಲೆಗೆ  ತರ್ಪಣ ಬಿಡುವ  ಕೆಲಸವನ್ನೇ ಹೊರತು  ಬೇರೇನಲ್ಲ.   ಸತ್ವಶುದ್ಧಿಯಿರುವ  ಕಲಾವಿದನಿಗೆ  ಪರಂಪರೆಯ ಬಗ್ಗೆ  ನಮ್ರತೆಯೂ ಇರುತ್ತದೆ;  ಸ್ವಾನುಭವ ನಿಷ್ಟವಾಗಿ  ಮಾಡಬೇಕೆನ್ನುವುದರ  ಬಗ್ಗೆ ಆತ್ಮವಿಶ್ವಾಸವೂ  ಇರುತ್ತದೆ.

ಹಾಗೆಂದಮಾತ್ರಕ್ಕೆ  ಕಲೆ ಅರ್ಥಮಾಡಿಕೊಳ್ಳುವವರಿಗೆ  ಮಾತ್ರ ಎನ್ನುವುದನ್ನೂ  ಒಪ್ಪಲೇಬೇಕಾಗುತ್ತದೆ.  ಆದರೆ ಸರಳವಾದ  ಕನ್ನಡದಲ್ಲಿ  ಬರೆದ ಮಾತ್ರಕ್ಕೆ  ಮಂಗೋಲಿಯನ್ನನಿಗೂ  ಅರ್ಥವಾಗಬೇಕು  ಎಂದರೆ ಅದು ಮೂರ್ಖತನ.  ಹಾಗೆಯೇ ಒಬ್ಬ  ತಕ್ಕ ಮಟ್ಟಿಗೆ  ವ್ಯುತ್ಪನ್ನನಾದ  ರಸಿಕನಿಗೆ ಕಲೆ  ಅರ್ಥವಾಗುವುದಿಲ್ಲ,  ಆನಂದ ತರುವುದಿಲ್ಲ,   ಎಂದಾದರೆ ಅದು  ಕಲೆಯಾಗಿರುವುದಿಲ್ಲ.  ಆದ್ದರಿಂದ ಶಾಸ್ತ್ರ,  ವೇದ, ಅನುಭವಗಳಲ್ಲೂ  ಪರಿಣತನಾದವನಿಗೆ  ಅರ್ಥ ಮಾಡಿಸಲು  ವಿಫಲವಾಗುತ್ತಾನೆಂದರೆ  ಅದು ಹಸ್ತಗಳ  ಶಾಸ್ತ್ರೀಯತೆಯ  ಬಗೆಗಿನ ದೂರು  ಅಲ್ಲ. ಬದಲಾಗಿ  ಕಲಾವಿದನ ವೈಫಲ್ಯತೆ.  ಇದಕ್ಕೆ ಕಾರಣವೂ  ಇದೆ.  ಬಹುಪಾಲು  ಕಲಾವಿದರು ಸುರಕ್ಷಿತ  ಜಾಗದಲ್ಲಿ ನಿಲ್ಲಲು  ಬಯಸುತ್ತಾರೆ.  ಅಂದರೆ ಪ್ರೇಕ್ಷಕರಿಗೆ  ಅರ್ಥವಾಗದಿದ್ದರೂ  ಪರವಾಗಿಲ್ಲ…!  ಅಶಾಸ್ತ್ರೀಯ  ಎಂದು ಹೇಳಬಾರದು  ಎನ್ನುವ ಆತಂಕ,  ಅಸ್ತಿತ್ವ ಸಮಸ್ಯೆ.

ಪ್ರತಿಭಾಹೀನರಿಗೆ  ಶಾಸ್ತ್ರ ಒಂದು  ರಕ್ಷಣೆ, ಹಾಗೇನೆ  ಪ್ರತಿಭಾಹೀನರಿಗೆ  ಪ್ರಯೋಗವೂ ಒಂದು  ರಕ್ಷಣೆ. ಇದೊಂದು  ವಂಚನೆ ಆದರೆ,  ಇನ್ನೊಂದು ಬಗೆಯ   ವಂಚನೆ ಎಂದರೆ  ಇದನ್ನು ಸಮರ್ಥಿಸಿಕೊಳ್ಳುತ್ತಾ  ನೂತನ ವಿಧಾನಗಳನ್ನು  ಅಳವಡಿಸಿಕೊಳ್ಳುತ್ತಾ   ಜನರಿಗೆ ಅರ್ಥ  ಮಾಡಿಸುವುದು  ಮುಖ್ಯವಾಗಬೇಕು   ಎನ್ನುವ ಸೋಗು  ಹಾಕಿಕೊಳ್ಳುವುದು.  ಕಣ್ಣೀರು ಎಂದರೆ  ಖಾರ, ಸಿಹಿ ಎಂಬ  ವ್ಯತ್ಯಾಸವಿದೆಯೇ?  ದ್ರೌಪದಿಯದ್ದು  ಬೇರೆ, ಸೀತೆಯದ್ದು  ಬೇರೆ ಎನ್ನಲಿಕ್ಕಾಗುತ್ತದೆಯೇ?   ಎಲ್ಲಾ ಕಾಲದಲ್ಲೂ  ನಗು, ಅಳುವಿನ  ಮೂಲ ಅಸ್ತಿತ್ವ  ಒಂದೇ ಅಲ್ಲವೇ…?   ಅಂತೆಯೇ ರಸಭಾವಗಳ  ಸ್ಥಿತಿಗೆ ಬಂದಾಗ  ಹೊಸತು ಎನ್ನುವುದು  ಇಲ್ಲ. ಅದರ ಅಸ್ತಿತ್ವಗಳಲ್ಲಿ  ನೂತನ ವಿಧಾನಗಳು  ಸಾಧ್ಯವಿಲ್ಲ.   ಕಲೆ ಎನ್ನುವುದು  ಅನುಭವ ಆಗಿರುವುದರಿಂದ  ಅನುಭವಕ್ಕೆ ಹಳತಿಲ್ಲ.   ಅದು ವರ್ತಮಾನಕಾಲದಲ್ಲಿಯೇ  ಇರುತ್ತದೆ.   ಕೆಲವೊಂದು ಬದಲಾವಣೆಗಳು  ಬೇಡ ಅಂತಲ್ಲ.   ಆದರೆ ಅದಕ್ಕಾಗಿಯೇ  ವಾಚಿಕ, ಸಾತ್ವಿಕಗಳು  ಇರುವಾಗ ಸರಿಯಾಗಿ  ಮಾಡಿದರೆ, ಸಂವಹನ  ವಾಗಲೇಬೇಕು.  ನಿಜವಾದ ಪ್ರತಿಭಾಶಾಲಿ  ಪ್ರಯೋಗಕ್ಕೂ,  ಶಾಸ್ತ್ರಕ್ಕೂ,  ಒಂದು ಯುಕ್ತವಾದ  ಬೆಲೆ ಕೊಟ್ಟು  ಅನುಭವದಲ್ಲಿ  ನೆಲೆಯೂರುತ್ತಾನೆ.

Dance: Poetry in motion.
-Veronica Stivala

India’s top dancer Vyjayanthi Kashi believes dance is like poetry. “Just as when you’re fluent with your grammar, you make poetry instead of words,” she says. “Dance is something so natural to me that it becomes my poetry, my breath. I’m in love with it.”

Que:  Have you noticed any difference between past and present  Dance tradition?

Ans: ..Yes, Things have changed nowadays: in the past people used to dance all night. Of course, people don’t have the time or the lifestyle to be able to do that. So now even though dances last less, I am still trying to give it my best…

Dance is a way of life. Now life is constantly changing. So dance changes with it. Art should not stagnate, it should relate to every person With dance there must be an equal balance between tradition and contemporary life, without losing its aesthetics..

Que:  Is dance innate to every Indian?

Ans: Dance is the birthright of every human being,” Kashi points out. “However, very few believe in their body’s rhythm. In India, many don’t have confidence in themselves.People feel that the best way to stay in touch with culture is with the arts – this is deeply rooted in nature.In India, music and dance are considered to be the sacred offerings to the Gods.

Que: What’s  Your  main objective ?

Ans:…To bring India to the audience, to make people want to visit my homeland. Through dance I am sharing my heart. This heart belongs to India.

Even  Indian classical music is very spiritual and divine. It has a basic structure within which the musicians play their own “feelings”. ”Music comes from very deep inside, Through music we want to bring across a message of love, peace and harmony.