ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ದೀವಟಿಗೆ ಎಂಬ ನೂತನ ವೇದಿಕೆ…ಇಲ್ಲಿ ನಿಮ್ಮ ಸುತಮುತ್ತ ನಡೆದ ನೃತ್ಯ-ನಾಟ್ಯ-ನಾಟಕ-ಜಾನಪದ ಮುಂತಾದ ಪ್ರದರ್ಶನ ಕಲೆಗಳ ಒಳಿತು, ಕೆಡುಕುಗಳನ್ನು ಹಂಚಿಕೊಳ್ಳಬಹುದು.
ಅಗತ್ಯತೆ-ಪ್ರಸ್ತುತತೆಗಳ ಕುರಿತು ನೀವು ಕಂಡುಕೊಂಡ ವಿಚಾರಗಳನ್ನು ಮುಕ್ತವಾಗಿ ನಿಮಗನಿಸಿದಂತೆ ತೆರೆದಿಡಬಹುದು.
ಈ ಮೂಲಕ ನಿಮ್ಮ ಅಭಿಪ್ರಾಯಗಳು ಕಲಾರಾಧಕ ಮನಸ್ಸುಗಳಿಗೆ ಕೈಮರವಾಗುವ ಸಾಧ್ಯತೆಗಳಿವೆ…ಬನ್ನಿ, ಬೆಳಕು ಹರಡಿ…
ಇದು ದೀಪದ ದಾರಿ…

‘ಅನನ್ಯ’ ‘ನಿರಂತರ’ : ಅದ್ಭುತವೆನಿಸಿದ ‘ಶಾಂತ’ ಭಾವ

Thursday, December 15th, 2011
‘ಅನನ್ಯ’ ‘ನಿರಂತರ’ : ಅದ್ಭುತವೆನಿಸಿದ ‘ಶಾಂತ’ ಭಾವ

೧೧ ನವೆಂಬರ್ ಸ್ಥಳ : ಮಲ್ಲೇಶ್ವರಂ ಸೇವಾಸದನ

ಗುರುಪರಂಪರೆಯ ಮಜಲುಗಳ ನಿರಂತರ ಹರಿವನ್ನು ಸಾದರಪಡಿಸುವಲ್ಲಿ ಅನನ್ಯ ಸಂಸ್ಥೆ ಹಮ್ಮಿಕೊಂಡ ‘ನಿರಂತರ’ ನೃತ್ಯಕಾರ್ಯಕ್ರಮ ರಸಸೋಪಾನದ ದೃಷ್ಟಿಯಲ್ಲಿ ಹೆಚ್ಚು ವಿಕಸಿತಗೊಂಡು ಭರತನಾಟ್ಯ(ನೃತ್ಯ) ಪರಂಪರೆಯ ಭವಿಷ್ಯದ ಸಾಧ್ಯತೆಗಳನ್ನು ಪ್ರಕಟಪಡಿಸಿತು. ಈ ಹಿನ್ನಲೆಯಲ್ಲಿ ‘ನಿರಂತರ’ದ ಕೇಂದ್ರಬಿಂದುವಾದವರು ನಿರುಪಮಾ(ರಾಜೇಂದ್ರ). ಅಂತೆಯೇ ಅವರ ಶಿಷ್ಯೆ ಮೃದುಲಾ ಎರಡನೇ ತಲೆಮಾರಿನ ಹಾಗೂ ಹರಿಣಿ ಮೂರನೇ ತಲೆಮಾರಿನ ಕಲಾವಿದರಾಗಿ ತಮ್ಮ ನೃತ್ಯಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಬ್ರಹ್ಮ, ವಿಷ್ಣು, ಶಿವ, ತಂಡು, ಭರತ..ಹೀಗೆ ನಾಟ್ಯದ ಗುರುಪರಂಪರೆಗೆ ಸರಳ, ಸುಲಲಿತ ಅರ್ಪಣೆಗೈವ [...]

ಸಾಯಿ ನೃತ್ಯೋತ್ಸವ : ಯುವ ಕಲಾವಿದರ ಭರವಸೆಯ ಕಾರ್ಯಕ್ರಮ

Thursday, December 15th, 2011
ಸಾಯಿ ನೃತ್ಯೋತ್ಸವ : ಯುವ ಕಲಾವಿದರ ಭರವಸೆಯ ಕಾರ್ಯಕ್ರಮ

ಡಿಸೆಂಬರ್ ೧ ಸ್ಥಳ : ಮಲ್ಲೇಶ್ವರಂ ಸೇವಾಸದನ

ಬೆಂಗಳೂರಿನ ಹಿರಿಯ ಸಂಘಟಕರೂ, ಕಲಾವಿದರಲ್ಲೊಬ್ಬರಾದ ಸಾಯಿವೆಂಕಟೇಶ್ ಅವರ ಸಾರಥ್ಯದ ಸಾಯಿ ನೃತ್ಯೋತ್ಸವ ಯುವ ನೃತ್ಯಾಕ್ಷಾಂಕ್ಷಿಗಳಿಗೆ ನಿಜಕ್ಕೂ ಒಂದು ಸದಭಿರುಚಿಯ, ಪೋಷಕವಾತಾವರಣ ಕಲ್ಪಿಸಿಕೊಡುವ ನೃತ್ಯ ಕಾರ್ಯಕ್ರಮ. ಕಳೆದೆರಡು ವರ್ಷಗಳ ಹಿಂದೆ ಸಂಘಟನೆಯಾದ ಈ ನೃತ್ಯೋತ್ಸವ ಪ್ರತೀ ತಿಂಗಳಿನ ಒಂದನೆ ತಾರೀಕಿನಂದು ಮಲ್ಲೇಶ್ವರಂನ ಸೇವಾಸದನದಲ್ಲಿ ಆಯೋಜನೆಯಾಗುತ್ತಾ ಬಂದು ಇದುವರೆಗೆ ಸುಮಾರು ೩೦ ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ. ಭಾರತದ ಯುವ ನೃತ್ಯಕಲಾವಿದರಿಗೆ ವೇದಿಕೆಯನ್ನೂ, ಅಂತೆಯೇ ಉತ್ತಮ ಪ್ರೇಕ್ಷಕರನ್ನೂ ಒದಗಿಸಿಕೊಡುತ್ತಿರುವ ಈ ಉತ್ಸವ ಅಂತರ್‌ರಾಜ್ಯ ಮಟ್ಟದಲ್ಲೂ [...]

‘ಅನನ್ಯ’ ನೃತ್ಯ ನೀರಾಜನದ ಕಾಣಿಕೆ

Thursday, December 15th, 2011
‘ಅನನ್ಯ’ ನೃತ್ಯ ನೀರಾಜನದ ಕಾಣಿಕೆ

ನವೆಂಬರ್ ೨೬,೨೭ ಸ್ಥಳ: ಮಲ್ಲೇಶ್ವರಂ ಸೇವಾಸದನ

ಅನನ್ಯ ಕಲಾಸಂಸ್ಥೆ ಬೆಂಗಳೂರಿನ ಕಲಾವಿದರ ಪಾಲಿಗೆ ಅನೇಕ ಸಾಧ್ಯತೆಗಳತ್ತ ಕೈಚಾಚುತ್ತಿರುವ ಸಾಂಸ್ಕೃತಿಕವಾಗಿ ದಾಖಲಾರ್ಹವಾದ ಸಂಸ್ಥೆ. ಡಾ. ಆರ್.ವಿ.ರಾಘವೇಂದ್ರ ಅವರ ಸಮರ್ಥ ನಾಯಕತ್ವ ಮತ್ತು ಆಸಕ್ತಿಯ ಫಲವಾಗಿ ಸಂಗೀತ ಮತ್ತು ನೃತ್ಯಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಅಭಿವ್ಯಕ್ತಿ.
ಅನನ್ಯ ಸಂಸ್ಥೆಯ ವತಿಯಿಂದ ಕಳೆದೆರಡು ವರ್ಷಗಳ ಹಿಂದೆ ವಿದ್ವಾನ್ ಗುರುಮೂರ್ತಿ, ಶ್ರೀವತ್ಸ, ಮಾನಸಿ ಮುಂತಾದ ಕಲಾವಿದರ ಸಹಕಾರದಲ್ಲಿ ಕನ್ನಡ ನೆಲದ ಸೊಗಡಿನ ಕೃತಿಗಳನ್ನು ಭರತನಾಟ್ಯ ನೃತ್ಯಪ್ರದರ್ಶನಕ್ಕೆ ಅನುಕೂಲಕರವಾಗಿ ಎರಡು ಆಡಿಯೋ ಸಿಡಿಗಳನ್ನಾಗಿ [...]

‘ಧಾತು’ ನವರಾತ್ರಿ ಮಹೋತ್ಸವ

Saturday, October 15th, 2011
‘ಧಾತು’ ನವರಾತ್ರಿ ಮಹೋತ್ಸವ

(ಸೆಪ್ಟೆಂಬರ್ ೨೮- ಅಕ್ಟೋಬರ್ ೬) ಸ್ಥಳ : ಬನಶಂಕರಿ, ೨ನೇ ಹಂತ.
‘ಕಲಾವಿದರು ನೃತ್ಯದೊಳಗೊಂದಾಗಿ ಆನಂದದಿಂದ, ರಸಾನುಭವದಿಂದ ಮಿಂದೆದ್ದರೆ ಮಾತ್ರ ಪ್ರೇಕ್ಷಕರಿಗೆ ಆನಂದವನ್ನು ನೀಡಬಲ್ಲರು, ರಸಾನುಭೂತಿಯಲ್ಲಿ ಕರಗಿಸಬಲ್ಲರು’ ಎಂಬುದಕ್ಕೆ ಸಾಕ್ಷಿ ಹೇಳಿದ್ದು ಸೆಪ್ಟೆಂಬರ್ ೨೮ರಂದು ಅನುಪಮಾ ಹೊಸಕೆರೆ ನೇತೃತ್ವದ ‘ಧಾತು’ ಉತ್ಸವದ ಉದ್ಘಾಟನಾರೂಪವಾಗಿ ಮೂಡಿಬಂದ ನಿರುಪಮಾ(ರಾಜೇಂದ್ರ) ಅವರ ಭರತನಾಟ್ಯ(ನೃತ್ಯ). ಒಂದರ್ಥದಲ್ಲಿ ನಿರುಪಮಾರ ಭರತನೃತ್ಯ ಗುರುಗಳ ಸಂಪೂರ್ಣ ಆವಾಹನೆ ಅವರಲ್ಲಾಗಿತ್ತು ಎಂದರೂ ಅತಿಶಯವಲ್ಲ.

ವಲಚಿ ರಾಗಕ್ಕೆ ಹೆಣೆದ ಪುಷ್ಪಾಂಜಲಿಗೆ ತಲಪುಷ್ಪಪುಟ ಕರಣದಿಂದಲೇ ಅಡಿಯಿಟ್ಟ ನಿರುಪಮಾ ದಿಕ್ ಸ್ವಸ್ತಿಕ, ಕಟಿಚ್ಛಿನ್ನ, ಕರಿಹಸ್ತ, ಊರೂದ್ವೃತ್ತ, [...]

ಬೆಂಗಳೂರು ಅಂತರ್ರಾಷ್ಟ್ರೀಯ ಕಲಾ ಉತ್ಸವ

Saturday, October 15th, 2011
ಬೆಂಗಳೂರು ಅಂತರ್ರಾಷ್ಟ್ರೀಯ ಕಲಾ ಉತ್ಸವ

(೧೫ ಸೆಪ್ಟೆಂಬರ್-೨೫ ಸೆಪ್ಟೆಂಬರ್ )

ವೈಭವೋಪೇತ ಆರಂಭ ಮತ್ತು ಅಂತ್ಯ ಕಂಡ ಈ ಉತ್ಸವ ಹಿಂದೂಸ್ಥಾನಿ, ಕರ್ನಾಟಕ ಸಂಗೀತ, ವಾದ್ಯಸಂಗೀತ ಜಾಜ್, ಸಮಕಾಲೀನ, ನಾಟಕ, ಜಾನಪದ ..ಹೀಗೆ ಹತ್ತು ಹಲವು ದಿಕ್ಕುಗಳನ್ನು ಸ್ಪರ್ಶಿಸಿದೆ. ಈ ಹಿನ್ನಲೆಯಲ್ಲಿ ಕಲಾ ಉತ್ಸವದ ಅಂಗವಾಗಿ ಜರುಗಿದ ನೃತ್ಯಪ್ರದರ್ಶನಗಳು ಪಾರಂಪರಿಕ ಮತ್ತು ಸಮಕಾಲೀನ ಸ್ಪರ್ಶವನ್ನು ಜೊತೆಜೊತೆಗೇ ಇತ್ತಿದೆ. ಸೆಪ್ಟೆಂಬರ್ ೨೪ರಂದು ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ಆವರಣದಲ್ಲಿ ಪದ್ಮಿನಿ ರವಿ ಅವರ ಭರತನಾಟ್ಯ, ಅನುಜ್ ಮಿಶ್ರಾ ಅವರ ಕಥಕ್ ಆಯೋಜನೆಗೊಂಡು ಗಮನ ಸೆಳೆದರೆ; [...]

ಸೂರ್ಯ ಫೆಸ್ಟಿವಲ್

Saturday, October 15th, 2011
ಸೂರ್ಯ ಫೆಸ್ಟಿವಲ್

(ಸೆಪ್ಟೆಂಬರ್ ೧೫-ಸೆಪ್ಟೆಂಬರ್ ೨೦ )ಸ್ಥಳ: ಮಲ್ಲೇಶ್ವರಂನ ಸೇವಾಸದನ
ಭಾರತದೆಲ್ಲೆಡೆ ವರ್ಷದ ೩೬೫ ದಿನಗಳಲ್ಲೂ ಸಾಂಸ್ಕೃತಿಕ ರಸಧಾರೆಯನ್ನೇ ಹರಿಸುತ್ತಾ ಜಗತ್ತಿನಲ್ಲಿ ಅತೀ ಹೆಚ್ಚು ಸಮಯದ ಸಾಂಸ್ಕೃತಿಕ ಸಂಜೆಗಳನ್ನೀಯುತ್ತಿರುವ ಕಾರ್ಯಕ್ರಮ ಸರಣಿ ಎಂದು ಗಿನ್ನಿಸ್ ರೆಕಾರ್ಡ್‌ಗೆ ಸೇರ್ಪಡೆಯಾದ ಅತ್ಯಪೂರ್ವ ಶ್ರಮ ‘ಸೂರ್ಯ ಫೆಸ್ಟಿವಲ್’. ಈ ಹಿನ್ನಲೆಯಲ್ಲಿ ಅದರ ಆಯೋಜಕರಿಗೂ, ಸಹಭಾಗಿತ್ವವನ್ನಿತ್ತು ಪ್ರೋತ್ಸಾಹಿಸುತ್ತಿರುವ ಕಲಾರಾಧಾಕರಿಗೂ ಅಭಿನಂದನೆಗಳು ಸಲ್ಲಲೇಬೇಕು. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅನನ್ಯ ಸಂಸ್ಥೆಯ ಆಶ್ರಯದಲ್ಲಿ ೫ ದಿನಗಳ ಸಂಗೀತ-ನೃತ್ಯ ಸರಣಿ ನಡೆಯಿತು. ಕಾರ್ಯಕ್ರಮಕ್ಕೆ ಉತ್ತಮ ಆರಂಭವನ್ನು ಒದಗಿಸಿ ಶಾಸ್ತ್ರ ಮತ್ತು [...]

ಬೆಂಗಳೂರು ಮ್ಯೂಸಿಕ್ ಅಕಾಡೆಮಿಯ ನೃತ್ಯ ಮಹೋತ್ಸವ

Saturday, October 15th, 2011
ಬೆಂಗಳೂರು ಮ್ಯೂಸಿಕ್ ಅಕಾಡೆಮಿಯ ನೃತ್ಯ ಮಹೋತ್ಸವ

(ಸೆಪ್ಟೆಂಬರ್೧- ಸೆಪ್ಟೆಂಬರ್೩) ಸ್ಥಳ : ಚೌಡಯ್ಯ ಸಂಸ್ಮರಣಾ ಭವನ
ಕಳರಿಪಯಟ್ಟು, ಭರತನಾಟ್ಯ, ಕಥಕ್ ಮುಂತಾಗಿ ಹಲವು ನೃತ್ಯಸಾಧ್ಯತೆಗಳನ್ನು ಹದವಾಗಿ ಬೆರೆಸಿ ಸಮಕಾಲೀನವಾಗಿಯೂ ಪುರಾಣ ಮತ್ತು ಶಾಸ್ತ್ರರೂಪ ಉಳಿದುಕೊಳ್ಳುವಂತೆ ಇದ್ದ ನೃತ್ಯ ಸಂಯೋಜನೆಗಳು ಯುವ ಜನತೆಯ ಕೇಂದ್ರಾಕರ್ಷಣೆಯೆನಿಸುತ್ತದೆ. ಅದಕ್ಕೆ ನಿದರ್ಶನವೆಂಬಂತೆ ಇದ್ದದ್ದು ಸೆಪ್ಟೆಂಬರ್ ೨ರಂದು ಪ್ರದರ್ಶಿತಗೊಂಡ ನಿರುಪಮಾ-ರಾಜೇಂದ್ರ ಅವರ‘ಕಥಕಿಟಥೋಂ’ – ಸಮೂಹ ಮತ್ತು ಯುಗಳ ಅಭಿವ್ಯಕ್ತಿ. ಅತ್ಯಾಕರ್ಷಕ ರಂಗಸಜ್ಜಿಕೆ, ಬೆಳಕು ಸಂಯೋಜನೆ, ಸುಂದರ-ವೈವಿಧ್ಯಮಯ ಮತ್ತು ಅಷ್ಟೇ ಅಚ್ಚುಕಟ್ಟು ವಸ್ತ್ರಾಭರಣಗಳು, ಕ್ಷಿಪ್ರ ಚಲನೆ, ಸಂಗೀತದ ಸಣ್ಣ ಸಣ್ಣ ನುಡಿತವನ್ನೂ ಗಮನಾರ್ಹವಾಗಿ ದಾಖಲಿಸುವ [...]

ಫಲಪ್ರದವೆನಿಸಿದ ಡಾ.ಪದ್ಮಾ ಸುಬ್ರಹ್ಮಣ್ಯಂ ನೇತೃತ್ವದ ಶಿಬಿರ

Monday, August 15th, 2011
ಫಲಪ್ರದವೆನಿಸಿದ ಡಾ.ಪದ್ಮಾ ಸುಬ್ರಹ್ಮಣ್ಯಂ ನೇತೃತ್ವದ ಶಿಬಿರ

ಭರತ ಕಲೆಗಳ ಆದ್ಯ ಗುರು ಭರತಮುನಿಗೆ ಭಾರತದಲ್ಲೇ ಮೊತ್ತ ಮೊದಲನೆಯ ಬಾರಿಗೆ ದೇವಾಲಯವನ್ನೂ ಮತ್ತು ಕಲೆಗಳ ಕುರಿತಾದ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶದಲ್ಲಿರುವ ಭರತನೃತ್ಯದ ಅಗ್ರಮಾನ್ಯ ಕಲಾವಿದೆ ಡಾ. ಪದ್ಮಾಸುಬ್ರಹ್ಮಣ್ಯಂ ಅವರು ನಿಧಿ ಸಂಗ್ರಹಣೆಗಾಗಿ ಒಂದುವಾರದ ಭರತನಾಟ್ಯ ಶಿಬಿರವನ್ನು ನಿರುಪಮ ರಾಜೇಂದ್ರ ಅವರ ಅಭಿನವ ಡ್ಯಾನ್ಸ್ ಕಂಪೆನಿಯ ಆವರಣದಲ್ಲಿ ಜುಲೈ ೪ರಿಂದ ೧೦ರ ವರೆಗೆ ಆಯೋಜಿಸಿದ್ದರು. ನೃತ್ಯ ಗುರು ಮತ್ತು ವಿದ್ಯಾರ್ಥಿಗಳ ವಿಭಾಗದಲ್ಲಿ ಜರುಗಿದ ಈ ಕಮ್ಮಟವು ಕರ್ನಾಟಕದ ಕಲಾವಿದರಿಗೆ ನೃತ್ಯಕಲೆಗೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನವನ್ನು ಕೊಟ್ಟದ್ದು [...]

ಅಚ್ಚುಕಟ್ಟಿನ ಲಯ, ರಸಾನುಭೂತಿಯ ಸೂಚನೆ : ಶ್ರೀಮತಿ ಅರ್ಚನಾ ಮತ್ತು ಚೇತನಾ

Monday, August 15th, 2011

ಅನ್ನ ಬೆಂದ ಸೂಚನೆ ಒಂದು ಅಕ್ಕಿ ಕಾಳಿನಲ್ಲೇ ಗೊತ್ತಾದ ಬಗೆಯ ಪಕ್ವತೆ ಅಲ್ಲಿತ್ತು. ನೃತ್ಯ ಸೌಂದರ್ಯಕ್ಕೆ ಬೇಕಾದುದು ರಸಾನುಭೂತಿಯ ಚೈತನ್ಯ ಎಂಬುದನ್ನು ಸ್ಪಷ್ಟಪಡಿಸಿದವರು ಕರ್ನಾಟಕ ನೃತ್ಯಕಲಾ ಪರಿಷತ್‌ನ ‘ಅಂಕುರ ನೃತ್ಯೋತ್ಸವ’ದ ಸಮಾರೋಪದಲ್ಲಿ (ಜುಲೈ ೧೭) ನರ್ತಿಸಿದ ಅವಳಿ ಸಹೋದರಿಯರಾದ ಶ್ರೀಮತಿ ಅರ್ಚನ ಮತ್ತು ಚೇತನಾ. ಸುಸ್ಪಷ್ಟ ಹೆಜ್ಜೆಗಾರಿಕೆಯಲ್ಲಿ ತೋರಿಬಂದ ಲಯನೈಪುಣ್ಯ, ಯುಗಳ ಅಥವಾ ದ್ವಂದ್ವ್ವ ನರ್ತನಕ್ಕೆ ಬೇಕಾದ ಸಾಮ್ಯ, ಹಾರ್ದಿಕ ಅನುಸರಣಾರ್ಹ ಮನೋಧರ್ಮ, ಪರಸ್ಪರ ಸಾಂಗತ್ಯ, ಸಹಜ ಹೊಂದಾಣಿಕೆ, ಮೇಲಾಗಿ ಅಭಿನಯಾದಿ ಕೌಶಲಗಳಲ್ಲಿ ಭಾವ ಸ್ಫುಟತೆ ಮತ್ತು [...]

ಆಹಾರ್ಯ, ಆಂಗಿಕಕ್ಕಷ್ಟೇ ತೃಪ್ತವಾದ ‘ಹೊಯ್ಸಳ ವೈಭವ’

Monday, August 15th, 2011

ಅಂತರಾಷ್ಟ್ರೀಯ ಪ್ರಖ್ಯಾತಿಯ ನೃತ್ಯ ಗುರು ಡಾ.ಮಾಯಾ ರಾವ್ ಅವರ ಮೂಸೆಯಲ್ಲಿ ಅರಳಿದ ‘ಹೊಯ್ಸಳ ವೈಭವ’ ಹಾಗೂ ‘ಅಮೀರ್ ಖುಸ್ರು’ ರೂಪಕಗಳ ರಂಗ ಪ್ರದರ್ಶನವು ಇತ್ತೀಚೆಗೆ ( ಜುಲೈ ೧೯) ಅವರ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೊರಿಯೋಗ್ರಫಿಯ ಬೆಳ್ಳಿಹಬ್ಬದ ಪ್ರಯುಕ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿತ್ತು.
ಆಂಗಿಕ, ಆಹಾರ್ಯ( ವೇಷಭೂಷಣಾದಿ ರಂಗ ಸನ್ನಿವೇಶ)ದ ನೆಲೆಯಲ್ಲಿ ಎರಡೂ ರೂಪಕಗಳು ಭವ್ಯವಾಗಿತ್ತಾದರೂ ಸಾತ್ತ್ವಿಕವನ್ನು ಮುಟ್ಟುವಲ್ಲಿ ಇನ್ನೊಂದಷ್ಟು ಶ್ರಮ ನಿರೀಕ್ಷಿತ. ವಾಚಿಕಾಭಿನಯ ಅಥವಾ ಹಿನ್ನಲೆ ಸಾಹಿತ್ಯದ ಉಪಯೋಗವೂ ತಕ್ಕಮಟ್ಟಿಗೆ ಕಡಿಮೆ ಇದ್ದುದರಿಂದ [...]