: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ದೀವಟಿಗೆ

‘ಶಕುಂತ ಕೂಜನ’- ರಂಗಪ್ರಸ್ತುತಿಯೆಡೆಗೆ ಒಂದು ಮರುನೋಟ
ಈ ಬಾರಿಯ ಒಂದು ತಿಂಗಳ ಭಾರತ ಪ್ರವಾಸದಲ್ಲಿ ಅಪೂರ್ವ ಅನುಭವಗಳು ನನ್ನ ನೆನಪಿನ ಬುಟ್ಟಿಯನ್ನು ಸೇರಿವೆ. ಮೊದಲನೆಯದಾಗಿ ಪ್ರೊ| ಉದ್ಯಾವರ ಮಾಧವ ಆಚಾರ್ಯ ವಿರಚಿತ “ಶಕುಂತ ಕೂಜನ” ರಂಗ ಕೃತಿ ಗುರು ಡಾ| ವಸುಂಧರಾ ದೊರೆಸ್ವಾಮಿಯವರಿಂದ ನೃತ್ಯ ಪ್ರಸ್ತುತಿಯಾದದ್ದನ್ನು ಕಂಡದ್ದು. ಎರಡನೆಯದಾಗಿ ಹಿರಿಯ ದಾರ್ಶನಿಕ ಕವಿ ಪು.ತಿ.ನ. ಅವರ ಕೃತಿ “ಕುಚೇಲ ಕೃಷ್ಣ”ದ ರಂಗಾಂತರಕ್ಕೆ ಪ್ರೊ| ಆಚಾರ್ಯರ ನಿರ್ದೇಶನದಲ್ಲಿ ನೃತ್ಯ ಸಂಯೋಜನೆ ಮಾಡಿದ್ದು.

Vasundhara doraiswamy

ಕಳೆದ ೨೪ ವರ್ಷಗಳಿಂದ ಹಿರಿಯ ನೃತ್ಯ ಗುರು ಡಾ| ವಸುಂಧರಾ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಮೈಸೂರಿನ ವಸುಂಧರಾ ಪ್ರದರ್ಶನ ಕಲೆಗಳ ಕೇಂದ್ರ ಆಯೋಜಿಸುತ್ತಾ ಬಂದಿರುವ ಪಾರಂಗತೋತ್ಸವದಲ್ಲಿ ಈ ಬಾರಿಯ ಪ್ರಯತ್ನ ಪುರಾಣದ ಹಿನ್ನೆಲೆಯಿಂದಲೇ ಆಯ್ದ ಕವಿಯ ಕಲ್ಪನೆಯ ಸ್ಪಶದ ಒಂದು ವಸ್ತು “ಶಕುಂತ ಕೂಜನ”. ಮಾಲಿನೀ ನದಿಯ ತಟದಲ್ಲಿ ಸ್ವರ್ಗದಿಂದಿಳಿದು ಬಂದ ಅಪ್ಸರೆ ಮೇನಕೆ ಮತ್ತು ಇಂದ್ರ ಪದವಿಯನ್ನು ಸಾಧಿಸಲು ಹೊರಟ ಮುನಿ ವಿಶ್ವಾಮಿತ್ರರ ಪ್ರೇಮ ಪ್ರಕರಣದ ಫಲವಾಗಿ ಶಕುಂತಳೆ ಹುಟ್ಟಿದಾಗ ಕೂಗಿದ ಶಕುಂತ ಎಂಬ ಹಕ್ಕಿಯ ಕುಹೂ ಕುಹೂ ಪ್ರತಿಧ್ವನಿಸಿತ್ತು ಅಂದು ಜಗನ್ಮೋಹನ ಅರಮನೆಯ ರಂಗಮಂದಿರದಲ್ಲಿ.

ಪ್ರಸ್ತುತಿಯ ಪೂರ್ವಾರ್ಧ ಪೌರಾಣಿಕ ಕಥೆಯ ಆಧಾರದಲ್ಲೇ ಅಂದರೆ ಮುನಿ ವಿಶ್ವಾಮಿತ್ರರ ತಪೋಭಂಗಕ್ಕಾಗಿ ಧರೆಗಿಳಿದ ಮೇನಕೆಯ ಸ್ವರ್ಗ ಸದೃಶ ನೃತ್ಯ, ತಪೋಭಂಗ ಮತ್ತು ಸ್ಫುರದ್ರೂಪಿಯನ್ನು ಕಂಡ ಮುನಿಯ ಚಂಚಲ ಮನಸ್ಸು, ಈರ್ವರ ಮಿಲನ, ಸಂಸಾರ ಜೀವನದ ಸುಖ, ಶಕುಂತಳೆಯ ಜನನ ಹಾಗೆ ತ್ಯಾಗ ಇವೆಲ್ಲಾ ಕಾವ್ಯಾತ್ಮಕವಾಗಿ ಮೂಡಿಬಂದವು. ಉತ್ತರಾರ್ಧದಲ್ಲಿ ಮಾಲಿನಿ ತೀರಕ್ಕೆ ಮರಳಿ ಬಂದ ತಾಯಿ ಮೇನಕೆಯನ್ನು ಸಂವಾದಕ್ಕೆಳೆಯುವ ಶಕುಂತಳೆಯ ಕಲ್ಪನಾತ್ಮಕ ಲಹರಿ ನೆರೆದ ಸಹೃದಯರನ್ನು ಹೊಸ ಸಂವೇದನೆಗೆ ಒಳಪಡಿಸಿತು.

ಹೆತ್ತ ಹಸುಳೆಯನ್ನೇಕೆ ಅನಾಥಳನ್ನಾಗಿಸಿದೆ ಅಮ್ಮ? ಎಂಬ ಮಗಳ ಪ್ರಶ್ನೆಗೆ ಸ್ವರ್ಗದಲ್ಲಿ ತಾನು ಯಾರಿಗೂ ಹೆಂಡತಿಯಲ್ಲ, ಅಮ್ಮನಲ್ಲ, ಸಹೋದರಿಯಲ್ಲ, ಬರೀ ಅಪ್ಸರೆ. ಭೂಮಿಯಲ್ಲಿನ ಆ ಎಲ್ಲ ರಸಮಯ ಕ್ಷಣಗಳು ನಿನಗೆ ಸಿಗಲಿ ಮಗಳೇ ಎಂಬ ಮಾತೃ ಹೃದಯದ ಆಶಯವನ್ನು ವ್ಯಕ್ತಪಡಿಸುವ ಮೇನಕೆಯ ಉತ್ತರ ಹೃದಯಸ್ಪರ್ಷಿ ಕಾವ್ಯದ ಸಾಲುಗಳಾಗಿದ್ದವು. ಶಕುಂತ ಹಕ್ಕಿಗಳು ಪ್ರಕೃತಿಸಹಜ ವಾತ್ಸಲ್ಯದಿಂದ ನೀಡಿದ ಹಣ್ಣಿನ ರಸವನ್ನುಂಡು, ಕಣ್ವರ ಆಶ್ರಮದಲ್ಲಿ ಬೆಳೆದು ದೊಡ್ಡವಳಾದ ಶಕುಂತಳೆ ಅಮ್ಮನ ಪ್ರೀತಿಯಿಂದ ಎಲ್ಲೆಲ್ಲಿ ವಂಚಿತಳಾದಳೆಂಬುದು ಮತ್ತೆ ವಿಷದಗೊಳ್ಳುತ್ತದೆ. ಅಮ್ಮ ನೀನು ಬೇಕಿತ್ತು ನಾನು ಮೈನೆರೆದಾಗ, ದುಶ್ಯಂತ ಮಹಾರಾಜರನ್ನು ಕಂಡು ನಾಚಿದಾಗ, ಗಾಂಧರ್ವ ವಿವಾಹವಾದಾಗ, ಮಗು ಭರತನನ್ನು ಪಡೆಯುವಾಗಿನ ಪ್ರಸವ ವೇದನೆಯನ್ನೆದುರಿಸಲು, ಮತ್ತೆ ದುಶ್ಯಂತನಿಂದ ಪರಿತ್ಯಕ್ತಳಾದಾಗ ನನ್ನ ಆಸರೆಗೆ ನೀನು ನನ್ನೊಂದಿಗಿರಬೇಕಿತ್ತು ಅಮ್ಮ ಎಂಬ ಮಗಳ ದುಗುಡ ಎಲ್ಲರ ಮನಸ್ಸನ್ನು ತಟ್ಟಿತು. ಕೊನೆಗೂ ಅಜ್ಜಿಯಾಗಿ ಮೊಮ್ಮಗ ಭರತನ ಲಾಲನೆ ಪಾಲನೆಯಲ್ಲಿ ಮುಳುಗಿದ ಮೇನಕೆಯೊಂದಿಗೆ ಶಕುಂತಳೆ ಹೆರುವ ಹೆಣ್ಣಿಗೆ ಉಳಿದದ್ದೇನು? ನಿಸರ್ಗ ನೀಡುವ ಚೇತನವೇ ಅಥವಾ ಇನ್ನೇನು? ಸಾರಸ್ವತ ಲೋಕದ ಮುಂದಿಡುವ ವೈಚಾರಿಕ ಪ್ರಶ್ನೆಯೊಂದಿಗೆ ಕೃತಿ ಮಂಗಳಗೊಳ್ಳುತ್ತದೆ.

ಕನ್ನಡದ ಸುಮಾರು ೫೦ಕ್ಕೂ ಮಿಕ್ಕಿ ವಿಶಿಷ್ಟ ಹಾಗೆಯೇ ಕ್ಲಿಷ್ಟ ಸಾಹಿತ್ಯ ಕೃತಿಗಳಲ್ಲಿನ ರಂಗ ಸಾಧ್ಯತೆಗಳನ್ನು ಅನ್ವೇಷಿಸಿ ಪ್ರಸ್ತುತಪಡಿಸಿದ ಅನುಭವ ಉಡುಪಿಯ ಸಮೂಹದ ನಿರ್ದೇಶಕ ಪ್ರೊ| ಉದ್ಯಾವರ ಮಾಧವ ಆಚಾರ್ಯರದ್ದು. ಈ ಪರಿಪಕ್ವತೆಯ ಫಲವಾಗಿ ಮೂಡಿಬಂದ ಒಟ್ಟು ಏಳು ಸ್ವತಂತ್ರ ಏಕವ್ಯಕ್ತಿ ರಂಗಕೃತಿಗಳನ್ನು ನೃತ್ಯ ಹಾಗೂ ರಂಗ ಭಾಷೆಯಾಗಿಸುವಲ್ಲಿ ಮೈಸೂರಿನ ಡಾ| ವಸುಂಧರಾ, ಬೆಂಗಳೂರಿನ ವೈಜಯಂತಿ ಕಾಶಿ, ಉಡುಪಿಯ ವಸುಮತಿ ಭಟ್ ಸೇರಿದಂತೆ ಹಲವು ತಜ್ಞ ಕಲಾವಿದರಿಗೆ ಸವಾಲನ್ನೆಸೆದಿವೆ.  ಮೂಲ ವಸ್ತುವನ್ನು ಅದರಲ್ಲಿ ಹಾಯ್ದು ಹೋಗುವ ವಿವಿಧ ಪಾತ್ರಗಳ ಮೂಲಕ ಏಕವ್ಯಕ್ತಿಯಾಗಿ ಪ್ರಸ್ತುತಪಡಿಸುವುದೇ ಈ ಸವಾಲು. ಈ ನೆಲೆಯಲ್ಲಿ ಮೂಡಿ ಬಂದ ಕೃತಿಗಳು – ಪಾಂಚಾಲಿ, ಸೌಂದರ್ಯ ಲಹರಿ, ಗಂಗಾ ಲಹರಿ, ಗಾಂಧಾರಿ, ಸ್ತಬ್ಧ, ಅಂಬೆ ಹಾಗೂ ಶಕುಂತ ಕೂಜನ.

ಡಾ| ವಸುಂಧರಾ ಅವರ ಶಾಸ್ತ್ರೀಯ ನೃತ್ಯ ಪ್ರೌಢಿಮೆ, ಯಾವುದೇ ಒಂದು ಶಾಸ್ತ್ರೀಯ ನೃತ್ಯ ಪದ್ಧತಿಯ ಸಂಪೂರ್ಣ ತಾಂತ್ರಿಕತೆಯನ್ನು ಅಳವಡಿಸಲು ಅವಕಾಶವಿದ್ದಂತಹ ಪ್ರೊ| ಆಚಾರ್ಯರ ಪ್ರಭಾವೀ ಸಾಹಿತ್ಯ ಹಾಗೂ ಭರತನಾಟ್ಯ ಕಾರ್ಯಕ್ರಮಗಳಿಗೆ ಭಾವಪೂರ್ಣ ಪೂರಕ ಹಿನ್ನೆಲೆ ಸಂಗೀತ ಒದಗಿಸುವಲ್ಲಿ ನುರಿತ ಮಧುರ ಕಂಠದ ವಿದುಷಿ ಪಿ. ರಮಾ ಅವರ ಹಾಡುಗಾರಿಕೆ ಇವೆಲ್ಲವೂ ಸಮನಾಗಿ ಮೇಳೈಸಿ ಸಂಪೂರ್ಣ ರಸಾನುಭವ ನೀಡುವಲ್ಲಿ ಶಕುಂತ ಕೂಜನ ಸಾಹಿತ್ಯದ ನೃತ್ಯ ಪ್ರಸ್ತುತಿ ಯಶಸ್ವಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಕಣ್ಮನ ಸೆಳೆದ ಕೆಲವು ಭಾಗಗಳನ್ನು ಇಲ್ಲಿ ಉದಾಹರಿಸುವುದಾದರೆ – ಸಗ್ಗದಿಂದಿಳಿದು ಬಂದ ಅಪ್ಸರೆ ಮೇನಕೆಯ ಅಪೂರ್ವ ನೃತ್ಯ ಮಾಲಿಕೆಗೆ ಅಳವಡಿಸಲಾದ ಕ್ಲಿಷ್ಟಕರವಾದ ತತ್ಕಾರಗಳಿದ್ದ ಹೊಸ ಜತಿಗಳಿಗೆ ತಕ್ಕ ಬಿಗಿ ಲಯಗಾರಿಕೆಯ ಕರಣ ಮತ್ತು ಅಡವುಗಳ ಸಂಯೋಜನೆ. ಕಥಾ ವಿಸ್ತರಣೆಯ ವಿವಿಧ ಹಂತಗಳಲ್ಲಿ ಪ್ರಕೃತಿ ಸೌಂದರ್ಯವನ್ನು ವಿವರಿಸುವಲ್ಲಿ ಡಾ| ವಸುಂಧರಾ ಅವರ ಮನಮುಟ್ಟುವ ಅಭಿನಯ ಮತ್ತು ಹೆಜ್ಜೆಗಾರಿಕೆ. ವಿಶ್ವಾಮಿತ್ರ ಮತ್ತು ಮೇನಕೆಯ ಯುಗಳ ನೃತ್ಯಕ್ಕಾಗುವಾಗ ಒಂದೇ ಜತಿಯ ತಾಂಡವ ಭಾವ ಮತ್ತು ಲಾಸ್ಯ ಭಾವದ ಪರ್ಯಾಯ ಪ್ರಸ್ತುತಿ. ವಿವಿಧ ತಾಳಗಳ ಜತಿಗಳ, ಸಂಚಾರಿ ಭಾವಗಳ ಬಳಕೆಯಾಗಲೀ, ಶಾಸ್ತ್ರೀಯ ನೃತ್ಯಬಂಧವಾದ ತಿಲ್ಲಾನದ ಬಳಕೆಯಾಗಲೀ; ಯಾವುದೂ ನಿರ್ದಿಷ್ಟ ಅಳತೆಯನ್ನು ಮೀರದೆ ಕಥಾ ಚೌಕಟ್ಟಿನೊಳಗೆ ಮೆರೆದು ಪ್ರೇಕ್ಷಕನ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ, ಕಾರ್ಯಕ್ರಮದ ಒಟ್ಟಾರೆ ಸಮತೋಲನವನ್ನು ಕಾಪಾಡುವುದರಲ್ಲಿ ಯಶಸ್ವಿಯಾದವು.

Shakunta koojana

ವಿದುಷಿ ಪಿ. ರಮಾ ಅವರ ಇಂಪಿನ ಕಂಠದಿಂದ ಪ್ರತಿಧ್ವನಿಸಿದ ಶಕುಂತದ ಕುಯಿಲು ನಮ್ಮನ್ನೆಲ್ಲ ಮಾಲಿನೀ ನದಿ ತೀರಕ್ಕೆಳೆದೊಯ್ಯುವಲ್ಲಿ ಸಫಲವಾಯಿತು. ತಪೋನಿರತ ವಿಶ್ವಾಮಿತ್ರನನ್ನು ವರ್ಣಿಸುವ ಸಾಲುಗಳಲ್ಲಿ ಮನೋಧರ್ಮದ ಸಂಗೀತ, ವಿಶ್ವಾಮಿತ್ರ ಮೇನಕೆಯ ಸಾಂಸಾರಿಕ ಜೀವನದ ರಸ ನಿಮಿಷಗಳಲ್ಲಿ ಒಂದಾದ ಉಯ್ಯಾಲೆಯಾಟಕ್ಕೆ ಕುರಿಂಜಿ ರಾಗದ ಬಳಕೆ ರಮಿಸುವಂತಿತ್ತು. ಶಕುಂತ ಹಕ್ಕಿಗಳು ಹಣ್ಣಿನ ರಸವನ್ನು ನೀಡಿ ಹಸುಗೂಸನ್ನು ಆರೈಸುವ ಸಾಲುಗಳಲ್ಲಿ ಬೃಂದಾವನಸಾರಂಗ ರಾಗವನ್ನು ಸಂಯೋಜಿಸಿದ ರೀತಿ ರಂಗದ ಮೇಲಿನ ಅಭಿನಯಕ್ಕೆ ಇನ್ನಷ್ಟು ಪುಷ್ಟಿ ನೀಡಿತು. ಹಿನ್ನೆಲೆ ಸಂಗೀತದವರೆಲ್ಲರಿಗೆ ನೀಡಿದ ಏರಿದ ಧ್ವನಿವರ್ಧಕ ಮಟ್ಟ ಕೆಲ ಸಹೃದಯರಿಗೆ ರಸಾಸ್ವಾದನೆಗೆ ಅಡ್ಡಿ ತಂದಿತೆಂಬುದು ಇಡಿಯ ಕಾರ್ಯಕ್ರಮಕ್ಕೆ ದೃಷ್ಟಿ ಬೊಟ್ಟಾಯಿತು.

ತಪೋಭಂಗಕ್ಕಾಗಿ ಧರೆಗಿಳಿದು ಬಂದರೂ, ಸ್ತ್ರೀ ಸಹಜವಾದ ಶೃಂಗಾರದಾಸೆ, ಸಂಸಾರ ನಡೆಸುವಾಸೆ, ಮಕ್ಕಳ ಲಾಲನೆ ಪಾಲನೆಯಾಸೆಗಳನ್ನು ವರ್ಣಿಸುವಲ್ಲಿ, ಇವೆಲ್ಲ ನಡೆದು ಕರ್ತವ್ಯ ಪ್ರಜ್ಞೆಯಿಂದ ಹಸುಗೂಸನ್ನು ತ್ಯಜಿಸುವ ಭಾಗ, ಮಗಳ ಪ್ರಶ್ನೆಗೆ ಅಮ್ಮ ಉತ್ತರ ನೀಡುವ ಭಾಗ, ಮತ್ತೆ ಸಹೃದಯರೆದುರು ಇಡುವ ವೈಚಾರಿಕ ಪ್ರಶ್ನೆಯ ಭಾಗಗಳಲ್ಲೆಲ್ಲ ಪ್ರೊ| ಆಚಾರ್ಯರ ಸಾಹಿತ್ಯ ಸರಳವಾಗಿಯೂ ಅಷ್ಟೇ ಪ್ರಬುದ್ಧವಾಗಿಯೂ ಸಹೃದಯರ ಮನಸ್ಸಿನಲ್ಲಿ ಭಾವನೆಗಳೆಲ್ಲವನ್ನೂ ಏರಿಳಿಸಿದವು.

ವಿದ್ವಾನ್ ಸಂದೇಶ್ ಭಾರ್ಗವ ಅವರ ಬಿರುಸಿನ ನಟ್ಟುವಾಂಗ, ವಿದ್ವಾನ್ ಶಿವಶಂಕರಸ್ವಾಮಿ ಅವರ ಪೂರಕ ಮೃದಂಗ ವಾದನ, ಭಾವ ಸಂವಹನಕ್ಕೆ ಸಹಕಾರಿಯಾಗುವಂತೆ ಸಮಯೋಚಿತ ವಿಶೇಷ ಪರಿಣಾಮಗಳನ್ನು ಕೊಳಲು ಮತ್ತು ರಿದಂ ಪ್ಯಾಡ್‌ನಲ್ಲಿ ನೀಡಿದ ವಿದ್ವಾನ್ ಜಯರಾಮ್ ಕಿಕ್ಕೇರಿ ಹಾಗೂ ವಿದ್ವಾನ್ ಪ್ರಸನ್ನ ಕುಮಾರ್, ವಯೋಲಿನ್‌ನಲ್ಲಿ ಸಹಕರಿಸಿದ ವಿದ್ವಾನ್ ಅಶ್ವತ್ಥನಾರಾಯಣ್ ಇವರೆಲ್ಲರ ಕೊಡುಗೆ ಕಥಾವಸ್ತುವಿನ ಪ್ರಭಾವಿ ಚಿತ್ರಣಕ್ಕೆ ಮತ್ತಷ್ಟು ಸಹಕಾರಿಯಾದವು.

(ಮೂಲತಃ ಉಡುಪಿಯವರಾದ ಲೇಖಕಿ ಪ್ರಸ್ತುತ ಯು‌ಎಸ್‌ಎಯಲ್ಲಿ ತಮ್ಮದೇ ಸಂಸ್ಥೆಯಲ್ಲಿ ನೃತ್ಯ ಗುರು)

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು
ನೂಪುರದ ಬಳಗಕ್ಕೆ ಅಂದು ಕಣ್ತುಂಬಿಕೊಳ್ಳುವ ಹಬ್ಬ. ಇನ್ನೇನು ವಾರ್ಷಿಕ ಸಂಭ್ರಮಕ್ಕೆ  ಎರಡು ತಿಂಗಳಿರುವಾಗಲೇ, ಮೂರನೇ ವರ್ಷಾಂತ್ಯವಾಗುವುದರೊಳಗೆ ಸಂತಸದ ಸಂದರ್ಭಗಳಿಗೆ ಮುನ್ಸೂಚನೆಯೇನೋ  ಎಂಬಂತೆ ವಿದ್ವತ್ಪೂರ್ಣ ಕ್ಷಣಗಳನ್ನು ಬರಮಾಡಿಕೊಂಡ ಸಾಂಗತ್ಯ. ನವೆಂಬರ್ ೨೨. ಸಂಜೆ ೪.೩೦.  ವಿಮರ್ಶಕ, ಲೇಖಕ ವಿ.ಬಿ. ಅರ್ತಿಕಜೆ, ಹಾಸ್ಯ ಸಾಹಿತಿ ಕು.ಗೋ, ನಾಟ್ಯಾಚಾರ್ಯರುಗಳಾದ  ಕಮಲಾಕ್ಷಾಚಾರ್, ದೀಪಕ್ ಕುಮಾರ್, ಉಜಿರೆ ಕಾಲೇಜಿನ ಕಲಾಸಕ್ತ ಉಪನ್ಯಾಸಕರು, ಕಲಾರಸಿಕ  ವಿದ್ಯಾರ್ಥಿಗಳು, ಊರಿನ ಹೆಮ್ಮೆಯ ನಾಗರಿಕರು ಮುಂತಾಗಿ; ಕೆಲವೇ ಕ್ಷಣಗಳ ಅವಧಿಯಲ್ಲಿ ಉಜಿರೆಯ ಶ್ರೀ  ಜನಾರ್ಧನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾಂಗಣ ಸಧಭಿರುಚಿಯ ಪ್ರೇಕ್ಷಕರಿಂದ, ಸಾಹಿತಿಗಳಿಂದ  ತುಂಬಿ ಹೋಗಿತ್ತು. ಶ್ರೀ ರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮೇಳದಿಂದ ನಿರ್ಮಿತವಾದ ಅದ್ಧೂರಿ  ವೇದಿಕೆ. ಅಸೀಮರೆನಿಸಿದವರು ವೇದಿಕೆಯಲ್ಲಿ ಅಲಂಕೃತರಾಗಿದ್ದ ಅರ್ಥಗರ್ಭಿತ ಕ್ಷಣ. ಅದು ‘ನೂಪುರ  ಭ್ರಮರಿ’ಯ ಸಂಪಾದಕಿ, ಪತ್ರಿಕೋದ್ಯಮ ಪ್ರಾಧ್ಯಾಪಕಿ, ಕಲಾವಿದೆ ಕು. ಮನೋರಮಾ ಬಿ.ಎನ್ ರಚಿತ  ಹಸ್ತ-ಮುದ್ರೆಗಳ ಕುರಿತಾದ ಸಂಶೋಧನಾ ಕೃತಿ ‘ಮುದ್ರಾರ್ಣವ’ ಅನಾವರಣದ ದಿನ.

ಅನಾವರಣಕ್ಕೆ ಇನ್ನೇನು ಕೆಲವೇ ಕ್ಷಣ..

ಕೃತಿಯನ್ನು ಅನಾವರಣಗೊಳಿಸಿ ಶುಭ ಹಾರೈಸಿದವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಎಸ್ ಡಿ ಎಂ ಕಾಲೇಜು ಪ್ರಾಚಾರ್ಯ ಡಾ. ಬಿ. ಯಶೋವರ್ಮ. ಅವರಾಡಿದ  ಮಾತುಗಳೆಡೆಗೆ ಒಂದು ನೋಟ ಇಲ್ಲಿದೆ :

‘ಪುಸ್ತಕ ಹೊರತರುವುದು ಎಂದರೆ ಹೆರಿಗೆ ನೋವು ಅನುಭವಿಸಿದಂತೆ. ಆದರೆ ಮಗುವಿನ  ಜನನವಾಗಿ ಮುಖ ನೋಡಿದಾಕ್ಷಣ ಹೇಗೆ ತಾಯಿ ಖುಷಿ ಪಡುತ್ತಾಳೋ ಹಾಗೆಯೇ ಲೇಖಕ. ಹೇಗೆ ಮಗು ಹೊಸ  ಭರವಸೆಯೊಂದನ್ನು ಕೊಡುತ್ತದೆಯೋ ಹಾಗೆಯೇ ಪುಸ್ತಕವೂ ಸಮಾಜದಲ್ಲಿ ಭರವಸೆಯೊಂದನ್ನು ತರಬೇಕು. ಅಂತಹ  ಕೆಲಸ ಮುದ್ರಾರ್ಣವದಲ್ಲಾಗಿದೆ.

ಸಿನಿಮಾ ಮಾಧ್ಯಮದಲ್ಲಿ ಹೂ ಕೊಡುವುದನ್ನು ಅಭಿನಯಿಸಬೇಕಿದ್ದರೆ ನಾಯಕ, ನಾಯಕಿ,  ಸುತ್ತಮುತ್ತಲ ಸೆಟ್ಟಿಂಗ್, ಹೂವು, ನೂರಾರು ಜನರು, ಹಾಡು ಇತ್ಯಾದಿ ಅಗತ್ಯ. ಅದೇ ನಾಟಕದಲ್ಲಿ  ಬೆಳಕು, ರಂಗಸಜ್ಜಿಕೆ, ಹೂವು, ಹುಡುಗ, ಹುಡುಗಿ ಎಲ್ಲರೂ ಬೇಕು. ಅದೇ ಭರತನಾಟ್ಯದಂತಹ  ನೃತ್ಯಮಾಧ್ಯಮದಲ್ಲಾದರೋ ಹೂವೂ ಬೇಡ, ಬೇರಾವುದೇ ಪರಿಕರಗಳೂ ಬೇಡ, ಖರ್ಚೂ ಇಲ್ಲ. ನರ್ತಕಿ ಅಥವಾ  ನರ್ತಕ ಭಾವಾಭಿನಯದಿಂದ ಹೂವಿನ ಮುದ್ರೆಯನ್ನು ಕೈಯ್ಯಲ್ಲಿ ಹಿಡಿದು ಅಭಿನಯಿಸಿ ಕೊಟ್ಟಂತೆ ಮಾಡಿದರೂ  ಸಾಕು; ಕಲಾರಸಿಕನಿಗೆ ಸಂವಹನವಾಗುತ್ತದೆ. ಜೊತೆಗೆ ಸಂತಸವೂ ಕೂಡಾ ! ಹಾಗೆ ನೋಡಿದರೆ ಹೆಚ್ಚು  ವಾಕ್ಯಗಳಲ್ಲಿ ಹೇಳುವುದಕ್ಕಿಂತ ಸಣ್ಣ ಪದಗಳಲ್ಲಿ ಹೆಚ್ಚು ಅರ್ಥವನ್ನು ಗ್ರಹಿಸುವಂತದ್ದು ಕಷ್ಟ.  ಆದರೆ ಅದರಿಂದಾಗುವ ಸಂತಸದ ಅನುಭವ ಹೆಚ್ಚು.

ಡಾ. ಯಶೋವರ್ಮ ಅವರಿಂದ ಹಾರೈಕೆ

ನಾವು ದಿನನಿತ್ಯ ೨೦ ಶೇಕಡಾ ಮಾತಿನ ಮೂಲಕ ಸಂವಹನ ಮಾಡುತ್ತೇವೆ. ಉಳಿದ ಶೇಕಡಾ ೮೦ನ್ನು  ಭಾವ, ಸಂಜ್ಞೆ, ಮುದ್ರೆಗಳೇ ಆಧಿಪತ್ಯ ಸಾಧಿಸುತ್ತವೆ. ಭರತನಾಟ್ಯದಲ್ಲಿ ಅಲ್ಲೊಂದು ಇಲ್ಲೊಂದು  ಶಬ್ದಗಳು, ಮುದ್ರೆಗಳು ಅರ್ಥವಾದರೂ ಅದರಿಂದ ಅವರ್ಣನೀಯ ಆನಂದವಾಗುತ್ತದೆ. ಒಂದುವೇಳೆ ಎಲ್ಲವೂ  ಅರ್ಥವಾಗುವಂತಾದರೆ ಎಷ್ಟು ಸಂತಸ, ಆನಂದವಾಗಬಹುದು? ಸಂಗೀತವನ್ನು ದೃಶ್ಯಮಾಧ್ಯಮದಲ್ಲಿ  ಕಲಿಸುವಂತದ್ದೇ ನೃತ್ಯ. ಅದನ್ನು ಅರಿಯುವಲ್ಲಿ ಅವಕಾಶ ನೀಡಿದೆ ಮುದ್ರಾರ್ಣವ. ಇಂತಹ ಹೆಚ್ಚು  ಹೆಚ್ಚು ಸಾಧನೆಗಳು ಮೂಡಿಬರಲಿ.

ಇವತ್ತಿನ ಯುವಕರಿಗೆ, ಮಕ್ಕಳಿಗೆ ಶಾಸ್ತ್ರೀಯ ಕಲೆಗಳ ಮೇಲೆ ಆಸಕ್ತಿ  ಗತಿಸಿಹೋಗುತ್ತಿದೆ. ಆಸಕ್ತಿ ಹುಟ್ಟಿಸುವ ಅವಕಾಶ ಮತ್ತು ಮಾಹಿತಿಯನ್ನು ಕೊಡುತ್ತಿಲ್ಲವೆಂಬುದು  ಕಾರಣಗಳಲ್ಲೊಂದು. ಅದಕ್ಕೆ ಸಂಬಂಧಿಸಿದ ಚೇತೋಹಾರಿಯಾದ ಪುಸ್ತಕಗಳು ಅವರ ಕೈಗೆಟುಕುವಂತಾಗಿಲ್ಲ. ಈ  ನಿಟ್ಟಿನಲ್ಲಿ ವಿದ್ವಜ್ಜನರಿಗಷ್ಟೇ ಅಲ್ಲ, ಸಾಮಾನ್ಯರಿಗೂ ಓದಿ ತಿಳಿದುಕೊಳ್ಳಲು ಅವಕಾಶವಾಗುವಂತೆ,  ನೃತ್ಯ ಸಂದರ್ಭಗಳಲ್ಲಿ ತನ್ಮಯತೆಯಿಂದ ಅರ್ಥಪೂರ್ಣವಾಗಿ ಭಾಗವಹಿಸಲು, ನೋಡಲು ಅನುಕೂಲವಾಗುವಂತೆ  ಪುಸ್ತಕವನ್ನು ಸಾರಸ್ವತಲೋಕಕ್ಕೆ ಕೊಟ್ಟಿದ್ದಾರೆ.’

ಮುದ್ರಾರ್ಣವಕ್ಕೆ ಸುಂದರ ಬೆನ್ನುಡಿಯನ್ನಿತ್ತ ಬಹುಶ್ರುತ ವಿದ್ವಾಂಸ, ಯಕ್ಷಗಾನ  ಕಲಾವಿದ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ. ಅವರು ಕೃತಿಯನ್ನು ವಿಮರ್ಶಿಸುತ್ತಾ ಮಾತನಾಡಿದ್ದರ  ಒಂದು ಝಲಕ್ ಇಲ್ಲಿದೆ :

ಡಾ. ಪ್ರಭಾಕರ ಜೋಷಿ ಅವರಿಂದ ಪುಸ್ತಕ ಪರಿಚಯ-ವಿಮರ್ಶೆ

‘ಭಾರತದ ಆರ್ಷೇಯ ಪರಂಪರೆಗಳು ಮುದ್ರೆಗಳನ್ನು ಸ್ಪಷ್ಟಪಡಿಸುತ್ತವೆ. ಹೋಮಾದಿ ಪೂಜೆ  ಪ್ರಾರ್ಥನೆಗಳಾದಿಯಾಗಿ ಮುದ್ರೆಗಳ ಬಳಕೆ ಮೊದಲಿನಿಂದಲೂ ಇತ್ತು. ಇಂತಿಂಥ ಮುದ್ರೆಗಳಿಗೆ ಇಂತಿಂಥ  ಫಲಗಳು ಎಂಬ ಧಾರ್ಮಿಕ ಪ್ರಜ್ಞೆ ಮತ್ತು ಅದಕ್ಕೆ ಸಾಕ್ಷಿ ಕೂಡಾ ಇತ್ತು. ಇಂತಹ ಮುದ್ರಾಪ್ರಪಂಚದ  ಕುರಿತಂತೆ, ಅದರ ಹುಟ್ಟು, ಬೆಳವಣಿಗೆ, ವಿವಿಧ ಆಯಾಮ, ಉಪಯೋಗ, ವಿನಿಯೋಗದ ಕುರಿತಂತೆ ವಿಸ್ತಾರವಾದ  ಗ್ರಂಥವಿದು. ಶಬ್ದಕ್ಕೆ ಶಕ್ತಿಯಿದೆ ನಿಜ. ಆದರೆ ಸಂವಹನ ಎಂದಾಗ ಮಾತಿನ ಹೊರತಾಗಿಯೂ ಹೇಗೆಲ್ಲಾ ಇತರ  ಸಾಧ್ಯತೆಗಳಿವೆ ಎಂಬುದನ್ನು ಪುಸ್ತಕ ತಿಳಿಸಿಕೊಡುತ್ತದೆ.

ಮುದ್ರೆಗಳ ಬಗ್ಗೆ ಬಂದಿರುವ ಪುಸ್ತಕಗಳ ಪೈಕಿ ಅಂತರ್‌ಶಿಸ್ತೀಯ ನೆಲೆಯಲ್ಲಿ  ಹೊರಬಂದಿರುವ ಭಾರತದ ಮೊದಲ ಪುಸ್ತಕವಿದು. ಒಂದೇ ನೋಟಕ್ಕೆ ಓದಿ ಮುಗಿಸುವ ಪುಸ್ತಕವಲ್ಲ.  ನೃತ್ಯದಲ್ಲಿನ ಅನೇಕ ಹಿರಿ- ಕಿರಿಯ ಅಧ್ಯಾಪಕರಿಗೆ, ಗುರುಗಳಿಗೆ, ವಿದ್ಯಾರ್ಥಿಗಳಿಗೆ ದಶಕ ದಶಕಗಳ  ಕಾಲಕ್ಕೂ ಮಾರ್ಗದರ್ಶಿಯಾಗಬಲ್ಲಂತದ್ದು. ಯಾವ ಪಿಹೆಚ್‌ಡಿ ಸಂಶೋಧನೆಗಳಿಗೂ ಕಡಿಮೆಯಿಲ್ಲದಂತಿದೆ.

ಭಾರತೀಯ ಕಾವ್ಯ ಮೀಮಾಂಸೆ, ಕಲಾಮೀಮಾಂಸೆಯು ಜಗತ್ತಿಗೆ ಬೇರಾವ ಸಂಸ್ಕೃತಿಯೂ ಅಷ್ಟಾಗಿ  ನೀಡದ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದೆ. ಬೇರೆ ಯಾವುದೇ ದೇಶ-ಸಂಸ್ಕೃತಿಗಳಲ್ಲೂ ಇಲ್ಲದ,  ಅಭಿಪ್ರಾಯ ವ್ಯತ್ಯಾಸಗಳು ಬಾರದ, ವಾದಕ್ಕೆ ಎಡೆಯಿರದ ಸಂಪೂರ್ಣವಾಗಿ ಆದರಿಸಬೇಕಾದ ಬಗೆಯ  ಕಲಾತತ್ವಗಳನ್ನು ಕೊಟ್ಟಿದೆ. ಇಲ್ಲಿ ಕಾವ್ಯ ಎಂದರೆ ಕೇವಲ ಠಿoeಣಡಿಥಿ ಮಾತ್ರ ಅಲ್ಲ. ಗೀತ, ವಾದ್ಯ,  ನೃತ್ಯ, ಪಠ್ಯ, ಸಂಗೀತಗಳನ್ನು ಒಳಗೊಂಡ ನಿತ್ಯ ನಿರಂತರವೆನಿಸುವ ಪರಿಕಲ್ಪನೆ. ಇಲ್ಲಿನ ಮಣ್ಣಿನ  ನೃತ್ಯ, ನಾಟಕ, ಗೀತ, ವಾದ್ಯಗಳ ಪರಿಕಲ್ಪನೆ ಓದಿದಷ್ಟೂ, ಅನುಭವಿಸಿದಷ್ಟೂ ಹೊಸ ಹೊಳಹುಗಳನ್ನು  ಕೊಡುವಂತದ್ದು; ದೂರದೃಷ್ಟಿಯುಳ್ಳವು ; ಸಮಗ್ರವೆನಿಸುವಂತದ್ದು. ಅದರಲ್ಲಿ ‘ರಸೋವೈಸಃ’ ಭಾರತೀಯ  ಸಂಸ್ಕೃತಿಯು ನೀಡಿದ ಆಧ್ಯಾತಿಕವಾಗಿಯೂ, ಕಲಾದೃಷ್ಟಿಯಿಂದಲೂ ಸಂಪೂರ್ಣವೆನಿಸುವ ರಸಪರಿಕಲ್ಪನೆ.  ಅಂತಹ ರಸ ಆಧರಿತ ನೃತ್ಯಕ್ಕೆ ಸಂಬಂಧಿಸಿದ ವಿದ್ವತ್ಪೂರ್ಣ ಸಂಶೋಧನಾ ಅಧ್ಯಯನಗಳಲ್ಲಿ ಮುದ್ರಾರ್ಣವ  ಮೊದಲನೇಯ ದರ್ಜೆಯದು.

ಭಾರತೀಯ ನೃತ್ಯಗಳ ಪೈಕಿ ಭರತನಾಟ್ಯಕ್ಕೆ ಎಲ್ಲದಕ್ಕಿಂತ ಮೇಲ್ದರ್ಜೆಯ, ಅತ್ಯುನ್ನತ  ಸ್ಥಾನವಿದೆ. ಆದರೆ ಇಂದಿನ ಭರತನಾಟ್ಯ ಕಾರ್ಯಕ್ರಮ, ತರಗತಿಗಳು ಕೇವಲ ಪ್ರದರ್ಶನದ ಉದ್ದೇಶವಷ್ಟೇ  ಹೊಂದಿ ಗುಣಾತ್ಮಕವಾದ ಅಧ್ಯಯನಗಳು ಬೆರಳೆಣಿಕೆಯಾಗುತ್ತಿವೆ. ದಿನದಿಂದ ದಿನಕ್ಕೆ ಕಳಪೆಯಾಗುತ್ತಿವೆ.  ನೃತ್ಯ ಸಂಗೀತಗಳು ಹೆಚ್ಚು ತಪಸ್ಸನ್ನು ಬಯಸುವ ಕ್ಷೇತ್ರ. ಆದರೆ ಇಂದು ೮ ದಿನದಲ್ಲಿ ಕಲಿತು, ೧೬  ದಿನದೊಳಗೆ ಸ್ಟೇಜ್ ಹತ್ತಬೇಕು ಎಂದೇ ಆಗಿದೆ. ಇಂತಹ ಸಂದರ್ಭದಲ್ಲಿ ವೃತ್ತಿಪರವಾದ ಯಶಸ್ಸನ್ನು  ಬದಿಗಿರಿಸಿ ಇಂತಹ ಕೆಲಸ ಮಾಡುವುದು ಅಷ್ಟು ಸುಲಭ ಅಲ್ಲ. ಭರತನಾಟ್ಯ ಸ್ವರೂಪದ ಆಂಗಿಕ ವಿಷಯಗಳಲ್ಲಿ  ಬರುವ ಮುದ್ರಾವಿಭಾಗದ ಬಗ್ಗೆ ಗಂಭೀರವಾದ, ಪರಿಣಾಮಕಾರಿಯಾದ ಸಂಶೋಧನೆ ನಿಜಕ್ಕೂ ಶ್ಲಾಘನೀಯ.

ಸಂಶೋಧನೆಗಳು ಸಮಾಜಮುಖಿಯಾಗಿರಬೇಕು ; ಆಯಾಯ ಕ್ಷೇತ್ರಕ್ಕೆ ಪ್ರಯೋಜನ ಕೊಡಬೇಕು ;  ಅದರಲ್ಲಿ ಕೆಲಸ ಮಾಡುವವರಿಗೆ ಪ್ರೇರಣೆ ಕೊಡಬೇಕು ; ಆ ಕ್ಷೇತ್ರಕ್ಕೆ ಪ್ರಯೋಜನ, ಅರಿವು ನೀಡುವ  ಕೆಲಸವಾಗಬೇಕು ; ಕೇವಲ ಗ್ರಂಥಾಲಯಕ್ಕೋ, ಪ್ರಕಾಶಕರಿಗೋ ಸೀಮಿತವಾಗಿ ಉಳಿಯದೆ ಉಪಯುಕ್ತ  ಚರ್ಚೆಗಳನ್ನು, ವಿಚಾರಗಳನ್ನು ವಿಷಯಕ್ಕೆ ಸಂಬಂಧಿಸಿದಂತೆ ಬೆಳೆಸಬೇಕು. ಈ ನಿಟ್ಟಿನಲ್ಲಿ  ಗಮನಿಸಿದರೆ ಮುದ್ರಾರ್ಣವ ಸಾರ್ಥಕತೆ ಪಡೆದಿದೆ. ಈ ಕೃತಿಯಲ್ಲಿ ಬಹುಮುಖ್ಯವಾಗಿ ಸಮಾಜದಲ್ಲಿ  ಮುದ್ರೆಗಳ ಬಳಕೆಯ ಬಗ್ಗೆ, ಪ್ರೇಕ್ಷಕರ ಗ್ರಹಿಕೆ ಹೇಗಿದೆ ಎನ್ನುವುದರ ಬಗ್ಗೆ ಬೆಳಕು  ಚೆಲ್ಲಿದ್ದಾರೆ.

ಇಂದಿನ ಬಹುಪಾಲು ಸಂಶೋಧನೆಗಳ ರೀತಿ-ನೀತಿ, ಸ್ಥಿತಿ-ಗತಿ ಸಮಾಜಕ್ಕೆ  ಆದರ್ಶಪ್ರಾಯವಾಗುವಂತಿಲ್ಲ. ಈಗಲೂ ‘ದೇಶದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಪಾತ್ರ’ ಎಂಬಂತ  ಚರ್ವಿತ ಚರ್ವಣ ವಿಷಯಗಳನ್ನೇ ಇನ್ನೂ ಕೂಡಾ ಸಂಶೋಧನೆ ಮಾಡಿದರೆ ಅದರ ಸಾಮಾಜಿಕ ಬಳಕೆಯ ವ್ಯಾಪ್ತಿ  ಕುಸಿಯುತ್ತದೆ. ಅದರಲ್ಲೂ ಗುಣಮಟ್ಟದ ಸಂಶೋಧನೆಗಳು ನೃತ್ಯಕ್ಕೆ ಸಂಬಂಧಿಸಿದಂತೆ ಭಾರೀ  ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗಮನಿಸಿದಾಗ ಯಕ್ಷಗಾನದಲ್ಲಿ ನಾಟ್ಯಶಾಸ್ತ್ರ ತಿಳಿಸುವ ಚಾರಿ,  ಕರಣ, ಭೇದಗಳೆಲ್ಲವೂ ಇದ್ದರೂ ; ವ್ಯವಸ್ಥಿತವಾಗಿಲ್ಲ. ಆದರೆ ಇಂದಿನವರೆಗೂ ಯಕ್ಷಗಾನದಲ್ಲಿ ಬಂದಿರುವ  ಅಷ್ಟೂ ಸಂಶೋಧನೆಗಳೂ ಗುಣಮಟ್ಟವುಳ್ಳವೇ ಆಗಿದೆ.

ಆಸಕ್ತಿಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರೆ ಹೆಚ್ಚು ಬೆಳವಣಿಗೆಯಿದೆ ಎಂಬುದಕ್ಕೆ  ಮುದ್ರಾರ್ಣವವೇ ಸಾಕ್ಷಿ. ವಿಷಯದ ಆಳ ಮುಟ್ಟುವಲ್ಲಿ ಸಾಕಷ್ಟು ಪರಿಶ್ರಮ ಹೊಂದಿರುವ ಈ ಕೃತಿ ಓದುಗರು  ಅಗತ್ಯ ಪರಾಮರ್ಶಿಸಲೇಬೇಕಾದದ್ದು.’

ಶ್ರೀ ಶಾಮ ಭಟ್ ಅವರಿಂದ ಅಧ್ಯಕ್ಷೀಯ ನುಡಿ

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಮುಖ್ಯ  ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಟಿ. ಶಾಮ ಭಟ್ ಅವರು ಮಾತನಾಡಿ, ನೃತ್ಯ ಕಲಾವಿದರು  ಪುಸ್ತಕವನ್ನು ಅಧ್ಯಯನ ಮಾಡಿ ನಾಟ್ಯ ಮಾಡುವಾಗ ಅನುಸರಿಸಿದರೆ ಚೆನ್ನ. ಇನ್ನು ಮುಂದೆಯೂ ಉತ್ತಮ  ಕೃತಿಗಳು ಹೊರಬರಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಕಾರ್ಯವೂ ಈ ನಿಟ್ಟಿನಲ್ಲಿ  ಶ್ಲಾಘನೀಯ ಎಂದು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಖ್ಯಾತ ಬರಹಗಾರ ಪ. ರಾ. ಶಾಸ್ತ್ರಿ ಅವರಿಗೆ ಕುರಿಯ ವಿಠಲ ಶಾಸ್ತ್ರಿ  ಸಮ್ಮಾನ ಮತ್ತು ನೀರ್ಪಾಜೆ ಭೀಮ ಭಟ್ಟ ಸಂಸ್ಮರಣಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮನೋರಮಾ  ಅವರನ್ನು ಪ್ರತಿಷ್ಠಾನದ ವತಿಯಿಂದ ಡಾ. ಬಿ. ಯಶೋವರ್ಮ ಅವರು ಗೌರವಿಸಿದರು. ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಕ. ಸಾ. ಪ. ಪೂರ್ವಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಿ ಮಾತನಾಡಿದರು.  ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರೂ, ಕುರಿಯ ವಿಠಲಶಾಸ್ತ್ರಿ ಯಕ್ಷಗಾನ  ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಶ್ರೀ ವಿಜಯರಾಘವ ಪಡ್ವೆಟ್ನಾಯ, ಮನೋರಮಾ ಅವರ ಹೆತ್ತವರಾದ ಶ್ರೀ  ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ, ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಪುರೋಹಿತ  ವೇದಮೂರ್ತಿ ಬಿ. ಜಿ. ನಾರಾಯಣ ಭಟ್, ಮತ್ತು ಸಾವಿತ್ರಿ ಭಟ್ ಭಾಗವಹಿಸಿದ್ದರು.

ಕಲಾವಿದ, ಸಂಶೋಧಕ ಶ್ರುತಕೀರ್ತಿರಾಜ್ ಅವರ ನಿರೂಪಣೆಯಲ್ಲಿ ಆರಂಭಗೊಂಡ ಕಾರ್ಯಕ್ರಮದ  ಆಶಯ, ಸ್ವಾಗತವನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಬಿಚ್ಚಿಟ್ಟವರು ಕುರಿಯ ವಿಠಲ ಶಾಸ್ತ್ರಿ  ಯಕ್ಷಗಾನ ಪ್ರತಿಷ್ಠಾನದ ಸಂಚಾಲಕ, ಕಲಾವಿದ, ಹೊಸನಗರ ಮೇಳದ ಮೆನೇಜರ್ ಶ್ರೀ ಉಜಿರೆ ಅಶೋಕ್ ಭಟ್.  ಪುಸ್ತಕ ನಿರೂಪಣೆಯ ಹಿಂದಿನ ಶಕ್ತಿ-ಸ್ಫೂರ್ತಿಗಳನ್ನು, ನೋವು-ನಲಿವನ್ನು, ಧನ್ಯವಾದ-ಕೃತಜ್ಞತೆ  ಅರ್ಪಣೆಯೊಂದಿಗೆ ನೆರವೇರಿಸಿದವರು ಮನೋರಮಾ. ನಂತರ ಅದ್ಧೂರಿಯಿಂದ ಜರುಗಿದ ಯಕ್ಷ ಸಪ್ತಾಹ  ಪ್ರಯುಕ್ತದ ಎರಡು ಯಕ್ಷಗಾನ ಬಯಲಾಟಗಳು ಭಾರೀ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾದದ್ದಲ್ಲದೆ ;  ಪರಂಪರೆ-ಆಧುನಿಕ ಪ್ರಜ್ಞೆಗಳಿಗೆ ಸಾಕ್ಷಿ ಹೇಳಿತ್ತು ! ಭ್ರಮರಿಗೆ ಭವಿತವ್ಯದೆಡೆಗಿನ ಭರವಸೆಗಳನ್ನು  ಭದ್ರಗೊಳಿಸುವ ಅಮಿತ ಪ್ರೋತ್ಸಾಹ, ಆಶೀರ್ವಾದ ದೊರಕಿತ್ತು.

ಲೇಖಕಿ ಮನೋರಮಾ ಅವರಿಂದ ಧನ್ಯವಾದ ಅರ್ಪಣೆ

‘ ಮುದ್ರಾರ್ಣವ ‘- ನಾಟ್ಯಶಾಸ್ತ್ರ, ಅಭಿನಯದರ್ಪಣ, ಹಸ್ತಲಕ್ಷಣದೀಪಿಕಾ,  ಹಸ್ತಮುಕ್ತಾವಳಿ, ಹಠಯೋಗಪ್ರದೀಪಿಕಾ ಮುಂತಾಗಿ ಸುಮಾರು ನೂರಕ್ಕೂ ಮಿಕ್ಕಿದ ಗ್ರಂಥಾವಲೋಕನ,  ಗುಣಾತ್ಮಕ ಪರಿಶೀಲನೆ, ವಿದ್ವಾಂಸರ ಸಂದರ್ಶನ, ನೃತ್ಯ ಪ್ರದರ್ಶನಗಳ ಸಮೀಕ್ಷೆಗಳನ್ನೊಳಗೊಂಡ ;  ಸಂಗೀತ, ನೃತ್ತ-ನೃತ್ಯ-ನಾಟ್ಯ, ಯೋಗ, ತಂತ್ರ-ಮಂತ್ರ, ಧಾರ್ಮಿಕ ಪೂಜಾ ವಿಧಿ,  ವೇದ-ಶಾಸ್ತ್ರ-ಪುರಾಣ, ಸಾಮಾನ್ಯ ಜೀವನಪದ್ಧತಿ, ಮುದ್ರಾ ವಿಜ್ಞಾನ, ಪ್ರತಿಮಾಶಾಸ್ತ್ರ  ಮುಂತಾದವುಗಳಲ್ಲಿ ಉಪಯೋಗಿಸುವ ಸಾವಿರಕ್ಕೂ ಹೆಚ್ಚು ಅಸಂಯುತ, ಸಂಯುತ ಹಸ್ತ-ಮುದ್ರೆಗಳ ಸಂವಹನದ ಬಹು  ಆಯಾಮಿ ಅಧ್ಯಯನವಾಗಿದೆ.

‘ ಮುದ್ರಾರ್ಣವ ‘;- ಈ ಕೃತಿಯನ್ನು ಯಕ್ಷಗಾನದ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ  ಶಾಸ್ತ್ರಿ ಸಂಸ್ಮರಣಾರ್ಥವಾಗಿ ರೂಪುಗೊಂಡ ಯಕ್ಷಗಾನ ಪ್ರತಿಷ್ಠಾನವು ಪ್ರಕಾಶಿಸಿದ್ದು,  ಪ್ರತಿಷ್ಠಾನದ ಸಂಚಾಲಕರಾಗಿ ಹೊಸನಗರ ಶ್ರೀರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮೇಳದ ಸಂಚಾಲಕ,  ಯಕ್ಷಗಾನ ಕಲಾವಿದ ಶ್ರೀ ಉಜಿರೆ ಅಶೋಕ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕದ ಬೆಲೆ ರೂ.  ೨೫೦/- ಆಗಿದ್ದು ; ಪ್ರತಿಗಳಿಗಾಗಿ ದೂರವಾಣಿ ೯೯೬೪೧೪೦೯೨೭, ೯೪೪೯೫೧೦೬೬೬ ಸಂಪರ್ಕಿಸಬಹುದು.

ಭಾಮಿನಿ- ಅಷ್ಟ ನಾಯಕಿಯರ ಚಿತ್ತವೃತ್ತಿಗಳ ಸಮರ್ಥ ಅಭಿವ್ಯಕ್ತಿ
ಯಾವುದೇ ಬಗೆಯ ನೃತ್ಯದಲ್ಲಿ ಭಾವಪ್ರಕಾಶನಕ್ಕೆ ಸಹಕಾರಿಯಾಗಬಲ್ಲ ಅವಸ್ಥೆಗಳೇ ನಾಯಿಕೆ  ನಾಯಕ ಭಾವಗಳು. ಇವೊಂದು ರೀತಿಯಲ್ಲಿ ನಾಟ್ಯಕ್ರಮವನ್ನೂ ಒಳಗೊಂಡಂತೆ ಸಾಮಾನ್ಯ ಜನಜೀವನದಲ್ಲೂ ಕಂಡು  ಬರುವ ಭಾವಾವಸ್ಥೆಗಳು. ಇವುಗಳ ಆಧಾರದಲ್ಲಿ ಮತ್ತಷ್ಟು ಅವಸ್ಥೆಗಳು ಅಂದರೆ ೩೮೪ಕ್ಕಿಂತಲೂ ಹೆಚ್ಚು  ವಿಭಾಗಗಳಿವೆ. ಮಾತ್ರವಲ್ಲ ಪ್ರತೀ ಅವಸ್ಥೆಗಳಿಗೂ ವಿಭಿನ್ನ ರೀತಿಯ ಭಾವೋತ್ಪತ್ತಿಗೆ ಕಾರಣವಾಗುವ  ವಿಭಾವಗಳೂ, ಅದರಿಂದುಟಾಗುವ ಪರಿಣಾಮಗಳೆಂಬ ಅನುಭಾವಗಳೂ ಇವೆ.

ಇಂತಹ ನಾಯಿಕೆಯರಲ್ಲಿ ಎಲ್ಲ ಗ್ರಂಥಗಳಿಂದಲೂ, ಪಂಡಿತರಿಂದಲೂ ಅಂಗೀಕರಿಸಲ್ಪಟ್ಟಂತಹ  ನಾಯಿಕೆಯರು ಒಟ್ಟು ಎಂಟು :

೧. ಪ್ರೋಷಿತ ಪತಿಕಾ : ನಾಯಕನು ದೂರ ದೇಶಕ್ಕೆ ಹೋಗಿರುವಾಗ ಖೇದ ಪಡುತ್ತಾ  ಅನ್ಯಮನಸ್ಕಳಾಗುವವಳು.

೨. ವಾಸಕಸಜ್ಜಿಕಾ : ಪ್ರಿಯಕರನ ಬರುವಿಕೆಗೆ ಆಲಂಕೃತಗೊಂಡು ಸಿದ್ಧವಾಗಿ ಎದುರು  ನೋಡುತ್ತಿರುವಾಕೆ.

೩. ಅಭಿಸಾರಿಕಾ : ಸರ್ವಾಂಗಭೂಷಿತೆಯಾಗಿ ಲಜ್ಜೆಯಿಂದ ನಿರ್ದಿಷ್ಟ ಪ್ರದೇಶಕ್ಕೆ  ತಾನಾಗಿಯೇ ನಾಯಕನನ್ನು ಹುಡುಕಿಕೊಂಡು ಹೋಗುವವಳು.

೪. ವಿರಹೋತ್ಕಂಠಿತಾ : ತಡಮಾಡುವಂತಹ ತನ್ನ ನಾಯಕನಿಗಾಗಿ ವಿರಹ ವೇದನೆಯಲ್ಲಿ  ಬೇಯುವವಳು.

೫. ವಿಪ್ರಲಬ್ಧಾ : ವಾಗ್ದಾನ ನೀಡಿದಂತೆ ಬಾರದ ನಾಯಕನಿಗಾಗಿ ಕ್ರೋಧದಿಂದ ಕೂಡಿ ಮೋಸ  ಹೋದೆನೆಂದು ಪರಿತಪಿಸುವವಳು.

೬. ಖಂಡಿತಾ : ನಾಯಕನ ಕುರಿತಾದ ಶಂಕೆಯಿಂದ ಆಘಾತಗೊಂಡು ಅವನನ್ನು ಹತ್ತಿರ ಸೇರಿಸದೆ  ಖಂಡಿಸಿ, ಜಗಳವಾಡಿ ದೂರೀಕರಿಸುವವಳು.

೭. ಕಲಹಾಂತರಿತಾ : ನಾಯಕನೊಂದಿಗೆ ಜಗಳವಾಡಿ ಹೊರದೂಡಿದ ನಂತರ ಪೂರ್ಣ  ಪಶ್ಚಾತ್ತಾಪದಿಂದ ಅವನಿಗಾಗಿ ಕೊರಗುವವಳು.

೮. ಸ್ವಾಧೀನಪತಿಕಾ : ನಾಯಕನಿಗೆ ಅರ್ಪಿಸಲ್ಪಟ್ಟು, ಅವನು ತನ್ನವನು ಮಾತ್ರನೆಂದು  ತಿಳಿದು ಸಂತೋಷದಿಂದ ಉಲ್ಲಾಸಭರಿತಳಾದವಳು.

ಆದರೆ ಇವೆಲ್ಲವೂ ಒಂದೇ ವೇದಿಕೆಯಲ್ಲಿ, ಒಟ್ಟಿಗೆ, ಒಂದೇ ಸೂತ್ರದಲ್ಲಿ, ಸಮಯ  ಪರಿಮಿತಿಯೊಳಗಡೆ, ಅದೂ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ, ಸಮಗ್ರ ಸುಂದರವಾಗಿ ಬಿಂಬಿಸಿದ ನೃತ್ಯ  ಪ್ರದರ್ಶನಗಳ ಉದಾಹರಣೆ, ಇಲ್ಲವೇನೋ ಎಂಬಷ್ಟರ ಮಟ್ಟಿಗೆ ವಿರಳ. ಬದಲಾಗಿ ಒಂದೇ ಅವಸ್ಥೆಯನ್ನು  ಪ್ರಧಾನವಾಗಿಟ್ಟುಕೊಂಡು ಮಾಡುವ ನೃತ್ಯಗಳೇ ಹೆಚ್ಚು. ಉದಾ : ವರ್ಣ, ಪದಂ, ಜಾವಳಿಗಳಲ್ಲಿ.

ಆದರೆ ಇಂತಹ ಕೊರತೆಯನ್ನು ಹೋಗಲಾಡಿಸಿದ್ದು, ಒಂದೇ ವೇದಿಕೆಯಲ್ಲಿ ಇವೆಲ್ಲವಕ್ಕೂ  ಸಾರ್ಥಕತೆ ಕೊಡುವ ಕೆಲಸವಾದದ್ದು ಏಕವ್ಯಕ್ತಿ ಯಕ್ಷಗಾನದಲ್ಲಿ. ಅದೇ ‘ಭಾಮಿನಿ’. ಭಾಮಿನಿ ಎಂದರೆ  ನಸು ಮುನಿಸಿನ, ಅಸಹನಶೀಲ ವ್ಯಕ್ತಿತ್ವದ ಹೆಣ್ಣು ಎಂಬರ್ಥ. ಆದರೆ ಇಲ್ಲಿನ ಸ್ತ್ರೀತ್ವದಲ್ಲಿ ಗಂಡು  ಹೆಣ್ಣೆಂಬ ಭ್ರಮೆಯಿಲ್ಲದ ವ್ಯಾಪಕಾವಕಾಶವಿದೆ. ಹಾಗಾಗಿಯೇ ಎಲ್ಲರೂ ಭಾಮಿನಿಗಳಾಗುವುದೇ ಇಲ್ಲಿನ  ವಿಲಾಸ ವೈಶಿಷ್ಟ್ಯ. ಒಲವು ಅನುಕೂಲವಾದಾಗ ಶೃಂಗಾರ, ಹಾಸ್ಯ, ಅದ್ಭುತ. ಪ್ರತಿಕೂಲವಾದಾಗ ಕರುಣ,  ವೀರ, ರೌದ್ರ, ಭಯಾನಕ, ಬೀಭತ್ಸ. ಇವೆಲ್ಲದರ ನಡುವಿನ ಶಾಂತಭಾವ; ಹೀಗೆ ಎಲ್ಲ ರಸಗಳನ್ನೂ  ಬಂಧಿಸಿಡಬಲ್ಲಂತಹ ಶೃಂಗಾರಧರ್ಮೋಪನಿಷತ್ !

ಎಂಟು ಬಗೆಯ ನಾಯಿಕೆಯರನ್ನು ಒಬ್ಬಳೇ ನವ ವಿವಾಹಿತೆ ಸಾಮಾನ್ಯ ಗ್ರಾಮೀಣ ಗೃಹಿಣಿಯ  ಮೂಲಕ ಚಿತ್ರಿಸುತ್ತಾ, ಸಂಸಾರಸ್ಥರ ಸಿಹಿ-ಕಹಿಗಳನ್ನು ಹೇಳುತ್ತಾ ಹೋಗುವಂತಹ ಮನೋಸ್ಥಿತಿ ಕೇವಲ  ಕಲಾವಿದ ಮತ್ತು ನಾಯಿಕೆಯ ಪರಿಧಿಯೊಳಗಷ್ಟೇ ಉಳಿಯದೇ ಪ್ರೇಕ್ಷಕರ ಚಿತ್ತವೃತ್ತಿಯನ್ನು ಮುಟ್ಟಿ,  ತಟ್ಟಿ ಹೋಗುವುದು ನಿಜಕ್ಕೂ ಅಚ್ಚರಿಯ ಮತ್ತು ಸಂತೋಷದ ಸಂಗತಿ. ಹಾಗಾಗಿ ಭಾಮಿನಿ ನಮ್ಮ ಆಶೋತ್ತರಗಳ  ಗಾಥೆ, ಬದುಕಿನ ಏಳುಬೀಳುಗಳ ಸಂಗೀತ, ಹಮ್ಮುಬಿಮ್ಮಿನ ಪ್ರತಿಬಿಂಬ.

ಶತಾವಧಾನಿ ಡಾ. ಆರ್. ಗಣೇಶ್ ಅವರ ನಿರ್ದೇಶನ ಮತ್ತು ಮಂಟಪ ಪ್ರಭಾಕರ ಉಪಾಧ್ಯಾಯ ಅವರ  ಯಶಸ್ವೀ ನಾಟ್ಯ ನಿರೂಪಣೆ ಎಂತಹ ಅರಸಿಕರನ್ನೂ ಕಣ್ಣರಳಿಸಿ ನೋಡಿಸುವಂತದ್ದು. ಸುಮಾರು ೨ ಗಂಟೆಗಳ  ಕಾಲ ಪರಿಮಿತಿಯಲ್ಲಿ; ಅದೂ, ಎಲ್ಲಿಯೂ ಅನುಚಿತವಾಗದಂತೆ ಸರಳ ಸುಂದರ ಸಾಹಿತ್ಯ, ಭಾವಾಭಿನಯ,  ಕಾಲಗಳಿಗೆ, ಸನ್ನಿವೇಶಗಳಿಗೆ, ಕೈಶಿಕೀ ಲಾಸ್ಯ ತಕ್ಕಂತೆ ೨೪ ರಾಗಗಳ ಬಳಕೆ, ಭಾವವನ್ನನುಸರಿಸುವ  ಹಿಮ್ಮೇಳದ ಸಾತ್ವಿಕ ನುಡಿಯುವಿಕೆಯನ್ನು ಹೊಂದಿಕೊಂಡಿರುವ ಈ ಯಶಸ್ವೀ ಸಂಯೋಜನೆ ನಿಜಕ್ಕೂ ನೃತ್ಯ  ಸಂಸ್ಕೃತಿಗಿತ್ತ ಕೊಡುಗೆ.

ಮಂಟಪರೇ ಹೇಳುವಂತೆ ಅವರ ಏಕವ್ಯಕ್ತಿ ಪ್ರದರ್ಶನಗಳಲ್ಲಿ ‘ಭಾಮಿನಿ’ಗೇ ಫಸ್ಟ್  ರ್‍ಯಾಂಕ್ ! ಸಾಂಪ್ರದಾಯಿಕವಾದ ಪರಿಕಲ್ಪನೆಯನ್ನು ಜನರಂಜನೀಯವಾಗಿಯೂ ವಿಸ್ತೃತವಾಗಿಯೂ  ದುಡಿಸಿಕೊಂಡದ್ದೇ ಭಾಮಿನಿಯಂತೆ ! ಆ ಮೂಲಕ ಬದುಕಿನ ವಿವಿಧ ಭಾವಗಳನ್ನು ಜನಮಾನಸಕ್ಕೆ ಮುಟ್ಟಿಸುವ  ಕೆಲಸ ನಾಟ್ಯದ ಅಂಶಗಳೊಂದಿಗೆ ನೆರವೇರಿದೆ.

ಮಾತ್ರವಲ್ಲ, ಆಯಾಯ ನಾಯಕಿಯ ಅವಸ್ಥೆಗಳಿಗನುಗುಣವಾಗಿ ಹಿಮ್ಮೇಳ ಸಂಗೀತ ಮತ್ತು ಕೇವಲ  ೩೦ ಸೆಕೆಂಡುಗಳಲ್ಲಿ ವೇಷಭೂಷಣವನ್ನು ಬದಲು ಮಾಡುತ್ತಾ ಸ್ಪಂದಿಸುವ ಮಂಟಪರ ವ್ಯಕ್ತಿತ್ವ  ನೋಡುವವರಿಗೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತದೆ. ವಾಸಕಸಜ್ಜಿಕೆಯ ಉಲ್ಲಾಸಕ್ಕೆ  ಹಸುರು, ಅಭಿಸಾರಿಕೆಯ ಅನುರಾಗ ತೀವ್ರತೆಗೆ ಕೆಂಪು, ವಿರಹೋತ್ಕಂಠಿತೆಯ ವಿಷಾದಕ್ಕೆ ಕಪ್ಪು,  ಖಂಡಿತೆಯ ಸಂಕೀರ್ಣ ಭಾವ ತುಮುಲಗಳಿಗೆ ಕೆಂಪು-ಹಳದಿ ಚೌಕುಳಿ, ಕಲಹಾಂತರಿತೆಯ ಶಾಂತಿ ಪ್ರೀತಿಗೆ  ಬಿಳಿ..ಹೀಗೆ ಆಯಾಯ ನಾಯಿಕೆಯ ಮನೋಧರ್ಮಕ್ಕೆ ತಕ್ಕಂತ ವೇಷಭೂಷಣ. ನೋಡುವವರಲ್ಲಿ ರಸೋತ್ಪತ್ತಿ  ಮಾಡುವ, ಶೃಂಗಾರದ ಪರಮ ತಾತ್ಪರ್ಯವನ್ನು ದರ್ಶಿಸಿಕೊಡುವ ಈ ಪ್ರದರ್ಶನ ನಿಜಕ್ಕೂ ಸವಾಲೇ ಸರಿ. ಇಂತಹ  ದೇಶ-ಕಾಲಗಳ ಹಂಗಿಲ್ಲದ, ಗಂಡು-ಹೆಣ್ಣೆಂಬ ಬೇಧವಿಲ್ಲದ, ಸಂಚಾರಿಗಳ ಸಮೃದ್ಧ ಸಾಧ್ಯತೆಯನ್ನು  ಹಿಡಿದಿಟ್ಟಿರುವ ಅಪೂರ್ವವೆನಿಸುವ ಸಂಯೋಜನೆಗಳ ಪ್ರಮಾಣ ನಾಟ್ಯ ಕ್ಷೇತ್ರದಲ್ಲಿ  ಹೆಚ್ಚಾಗಲಿ.

ಯುವ ಕಲಾವಿದರ ಆಶಾಕಿರಣವಾದ ಯಕ್ಷಗಾನ ಪುನಶ್ಚೇತನಾ ಶಿಬಿರ
ಜೀವನದಲ್ಲಿ ಕೆಲವೊಂದು ಘಟನೆಗಳು, ಕ್ಷಣಗಳು, ವ್ಯಕ್ತಿಗಳನ್ನು ಮರೆಯಲಾಗುವುದಿಲ್ಲ.  ಕಾರಣ, ಅವು ಅಷ್ಟು ಪರಿಣಾಮಕಾರಿ. ಇದಕ್ಕೊಂದು ಉತ್ತಮ ಉದಾಹರಣೆ ಕರ್ನಾಟಕ ಯಕ್ಷಗಾನ ಅಕಾಡೆಮಿ  ಆಯೋಜಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಸಂಪನ್ನಗೊಂಡ ಯುವ ವೃತ್ತಿಪರ ಯಕ್ಷಗಾನ  ಕಲಾವಿದರ ಪುನಶ್ಚೇತನಾ ಶಿಬಿರ.

ಇತ್ತೀಚೆಗೆ ಪ್ರತಿಯೊಬ್ಬರೂ ಬಯಸುತ್ತಿರುವುದು ಪ್ರಸಿದ್ಧಿಯನ್ನು, ಸಿದ್ಧಿಯನ್ನಲ್ಲ.  ಅದು ನೃತ್ಯ ಮತ್ತು ಯಕ್ಷಗಾನದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಕಳೆದ ಜೂನ್ ೭ರಿಂದ ೧೩  ರವರೆಗೆ ೭ ದಿವಸಗಳ ಕಾಲ ಯುವ ವೃತ್ತಿಪರ ಯಕ್ಷಕಲಾವಿದರಿಗೆ ( ತೆಂಕು+ಬಡಗು) ಪುನಶ್ಚೇತನ  ಶಿಬಿರವನ್ನು ಉಜಿರೆಯ ಸಿದ್ಧವನ ಗುರುಕುಲದ ಪ್ರಶಾಂತ ವಾತಾವಣದಲ್ಲಿ ಏರ್ಪಡಿಸಲಾಗಿತ್ತು. ಉಚಿತ ಊಟ  ವಸತಿಯೊಂದಿಗೆ ಶಿಸ್ತಿನಿಂದಲೇ ಜರುಗಿದ ಈ ಶಿಬಿರವನ್ನು ಉದ್ಘಾಟಿಸಿದ್ದು ರಾಜ್ಯದ ಗೃಹ ಸಚಿವರಾದ  ಡಾ| ವಿ.ಎಸ್. ಆಚಾರ್ಯರು. ಸಮಾರೋಪ ಸಮಾರಂಭದಲ್ಲಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರ  ಅಧ್ಯಕ್ಷತೆಯೊಂದಿಗೆ ಸಮಾಪನ ಕಂಡ ಈ ಶಿಬಿರ ಅತ್ಯಂತ ಪ್ರಶಂಸನೀಯ, ಶ್ಲಾಘನೀಯವೇ ಸರಿ !

ಹೊಸ್ತೋಟ ಮಂಜುನಾಥ ಭಾಗವತರು, ಬಲಿಪ ನಾರಾಯಣ ಭಾಗವತ, ಅಮೃತ ಸೋಮೇಶ್ವರ,  ಎಚ್.ಜಿ.ಶ್ರೀಧರ ಹಂದೆ ಅವರುಗಳೊಂದಿಗೆ ಕಲೆತು ಅವರ ಅನುಭಗಳಿಗೆ ಕಿವಿಯಾಗುವ ಅವಕಾಶ ; ಶತಾವಧಾನಿ  ಡಾ| ಆರ್. ಗಣೇಶ್, ಡಾ| ಪ್ರಭಾಕರ ಜೋಷಿ, ಕುಂಬ್ಳೆ ಸುಂದರ ರಾವ್, ಎಂ.ಎಲ್.ಸಾಮಗ ಹೀಗೆ  ವಿದ್ವಜ್ಜನರಿಂದ ಮೂಡಿಬಂದ ವಾಕ್ ಸರಣಿ ಮತ್ತು ಚಿಂತನದಿಂದಾದ ಮನೋವಿಕಾಸ ; ಕೊರ್ಗಿ ವೆಂಕಟೇಶ  ಉಪಾಧ್ಯಾಯ ಅವರಿಂದ ನಡೆದ ಅರ್ಥಗಾರಿಕೆಯ ಸೂಕ್ಷ್ಮಗಳ ನಿರೂಪಣೆ ; ಸೂರಿಕುಮೇರಿ ಗೋವಿಂದ ಭಟ್,  ಬಳ್ಕೂರು ಕೃಷ್ಣಯಾಜಿ ಅವರ ಬೋಧನೆ ; ಕೋಳ್ಯೂರು ರಾಮಚಂದ್ರರಾಯರು, ಸಬ್ಬಣ್ಣಕೋಡಿ ರಾಮಭಟ್, ಮಂಟಪ  ಪ್ರಭಾಕರ ಉಪಾಧ್ಯಾಯರ ಅಭಿನಯ ಪ್ರಾತ್ಯಕ್ಷಿಕೆಗಳು, ಚಿ.ಸು.ಕೃಷ್ಣ ಶೆಟ್ಟಿ, ದೇವಕಾನ ಕೃಷ್ಣ ಭಟ್  ಅವರಿಂದ ವೇಷಭೂಷಣ, ಪುರುಶೋತ್ತಮ ಅಡ್ವೆ ಅವರಿಂದ ಚಿತ್ರಕಲೆ ಮತ್ತು ಬೆಳಕು ಸಂಯೋಜನೆಯ ವಿಚಾರ  ವಿಮರ್ಶೆ.., ಹೀಗೆ ಹೆಜ್ಜೆಗಾರಿಕೆ, ತಂತ್ರ ಕೌಶಲ, ಸಮಕಾಲೀನ ಪ್ರಜ್ಞೆ, ರಂಗ ತಂತ್ರ, ಅಭಿನಯ,  ಮಾತುಗಾರಿಕೆ, ಬಣ್ಣಗಾರಿಕೆ, ಸೃಜನಶೀಲತೆ, ಯಕ್ಷಸಾಹಿತ್ಯ, ಭಾಗವತಿಕೆ, ಪ್ರಸ್ತುತ ಸ್ಥಿತಿಗತಿ..,  ವಿವಿಧ ವಿಷಯಗಳನ್ನು ಒಂದೇ ಸೂರಿನಡಿ ಅರಿತುಕೊಳ್ಳುವ ಅಪೂರ್ವ ಅವಕಾಶ ನಮ್ಮದಾಗಿತ್ತು.

ಸೋದರ ಕಲೆಗಳಲ್ಲಿ ಕೇರಳದ ಕಲಾಮಂಡಲಂನ ಶಂಕರನಾರಾಯಣನ್ ಬಳಗದ ಕಥಕ್ಕಳಿ  ಪ್ರಾತ್ಯಕ್ಷಿಕೆ, ಶಿವರಾಮ ಕಾರಂತರ ಪುತ್ರಿ ಕ್ಷಮಾ ರಾವ್ ಅವರ್ ಒಡಿಸ್ಸಿ ನೃತ್ಯ  ಪ್ರಾತ್ಯಕ್ಷಿಕೆಗಳು ; ಸಮಕಾಲೀನ ಸಿನಿಮಾ ಕಲೆಯ ಕುರಿತು ಚಿತ್ರನಟ ರಾಮಕೃಷ್ಣ ಅವರಿಂದ ಅನುಭವ ಕಥನ,  ಸುರೇಶ್ ಆನಗಳ್ಳಿ, ಜೀವನ್‌ರಾಂ ಸುಳ್ಯ, ಅವರಿಂದ ರಂಗದಲ್ಲಿ ಏಕಾಗ್ರತೆ, ಅಭಿನಯ, ಸ್ವರ, ಮುಖಭಾವ,  ಬೆಳಕು ಹೇಗಿರಬೇಕು? ಎಂಬುದರ ಬಗ್ಗೆ ಸಕಾಲಿಕ ಸಂದೇಶ, ಯಕ್ಷ ವಿದ್ವಾಂಸರೊಡನೆ ನಮಗೆ ಸಿಕ್ಕಿದ  ಸಂವಾದ, ಸಂವಹನ ಮಾತ್ರವಲ್ಲದೆ ಆರೋಗ್ಯವರ್ಧನೆಗೆ ದಿನನಿತ್ಯವೂ ಮುಂಜಾವಿಗೆ ಡಾ. ನಾಗರಾಜ್ ಅವರಿಂದ  ಯೋಗ ಪ್ರಾಣಾಯಾಮದ ಪಾಠ, ಮತ್ತು ಎಷ್ಟೋ ಯಕ್ಷ ಕಲಾವಿದರನ್ನು ಅನಿವಾರ್ಯ ದೃಷ್ಟಿಯಲ್ಲಿ ಕಾಡಿದ  ಮತ್ತು ಕಾಡುತ್ತಿರುವ ಮದ್ಯಸೇವನೆಯ ಕುರಿತಾಗಿ ಆಪ್ತ ಸಮಾಲೋಚನಕಾರರಾದ ವಿವೇಕ್ ಪಾಯಸ್‌ರಿಂದ  ದುಷ್ಟಚಟಗಳು-ಅವುಗಳ ದುಷ್ಪರಿಣಾಮ ಮತ್ತು ಅನುಸರಿಸಬೇಕಾದ ವ್ಯಕ್ತಿತ್ವ ಕೌಶಲಗಳ ಕುರಿತು  ಉಪನ್ಯಾಸ-ಬೋಧನೆ ಕಾರ್ಯಕ್ರಮವಿದ್ದದ್ದು ಶಿಬಿರದ ಸಮಗ್ರ ದೂರದೃಷ್ಠಿಗೆ ಸಾಕ್ಷಿ.

ಇವೆಲ್ಲವಕ್ಕಿಂತ ಮುಖ್ಯವಾಗಿ ಯಕ್ಷಗಾನ ನಾಟ್ಯದಲ್ಲಿ ಖಚಿತತೆ, ಶಾಸ್ತ್ರೀಯತೆಯನ್ನು  ತೋರಿಸಿಕೊಟ್ಟ ಕರ್ಗಲ್ಲು ವಿಶ್ವೇಶ್ವರ ಭಟ್ಟರು, ಮತ್ತು ಬನ್ನಂಜೆ ಸಂಜೀವ ಸುವರ್ಣರ ನಿರಂತರ ನಿತ್ಯ  ಪಾಠ ಮತ್ತು ನಾಟ್ಯ ವೈವಿಧ್ಯ ನಮ್ಮ ಮನದಲ್ಲಿ ಅಚ್ಚೊತ್ತಿತ್ತು. ರಂಗದಿಂದ ಮರೆಯಾದ ನಾಟ್ಯಗಳು,  ಲಾಗಗಳು, ಪ್ರವೇಶ, ಸಭಾಕಲಸು ಇತ್ಯಾದಿ ರಂಗನಡೆ, ರಂಗತಂತ್ರಗಳನ್ನು ಅಭ್ಯಸಿಸುವುದಕ್ಕೆ  ಅವಕಾಶವಾಯಿತು. ಪ್ರತಿದಿನ ಸಂಜೆ ಸೋದರ ಕಲೆಗಳ ಕಲಾವಿದರ ಅಪೂರ್ವ ಪ್ರದರ್ಶನಗಳ ಸಂಗ್ರಾಹ್ಯ ಸಿ.ಡಿ,  ಡಿ.ವಿ.ಡಿಗಳನ್ನು ವೀಕ್ಷಿಸಿ ಅರಿಯುವ ಭಾಗ್ಯ ; ಜೊತೆಗೆ ಉಜಿರೆ ಕಾಲೇಜಿನ, ಮತ್ತು ಸಿದ್ಧವನದ  ಅತಿಥೇಯ ಸಿಬ್ಬಂದಿಗಳ, ಉಪನ್ಯಾಸಕರ, ವಿದ್ಯಾರ್ಥಿಗಳ ಸೌಹಾರ್ದ ವರ್ತನೆ, ಸಹಕಾರ, ಸೌಲಭ್ಯವನ್ನಂತೂ  ಮರೆಯಲು ಅಸಾಧ್ಯ.

ಯಕ್ಷಗಾನದಲ್ಲಿ ನಾವೇನು ತಪ್ಪುಗಳನ್ನು ಮಾಡುತ್ತಿದ್ದೇವೆ? ವಿಸ್ತಾರ ಎಷ್ಟಿದೆ ಎಂಬ  ಸತ್ಯದ ಅರಿವು ಮೂಡಿದೆ. ಮುಂದೆ ಸೊಗಸಾದ ಯಕ್ಷಗಾನ ಮೂಡಿಬಂದರೆ ಅದಕ್ಕೆ ಕಾರಣ ಅಕಾಡೆಮಿ  ಅಧ್ಯಕ್ಷರು, ಮುರಳಿ ಕಡೆಕಾರ್, ಚಂದ್ರಶೇಖರ ಶೆಟ್ಟಿ ಅವರಂತಹ ಸದಸ್ಯರು, ಪೃಥ್ವಿರಾಜ್ ಕವತ್ತಾರು  ಅವರಂತಹ ಮಾಧ್ಯಮದ ಕಲಾಸಕ್ತರು ಎಂಬುದು ಹೊಗಳಿಕೆಯಲ್ಲ.

ಮುಂದಿನ ದಿನಗಳಲ್ಲಿ ಇಂತಹುದೇ ಮಾದರಿಯ ಶಿಬಿರದ ದಿನಗಳು ವಿಸ್ತೃತವಾಗಿ ಯುವಕರಿಗೆ  ಮಾತ್ರವಲ್ಲ, ವೃತ್ತಿ ಕಲಾವಿದರೆಲ್ಲರಿಗೂ ಲಭ್ಯವಾಗಿ, ಶಾಸ್ತ್ರೀಯವಾಗಿ ಸ್ವಚ್ಛವಾಗಿ  ಪರಂಪರೆಗಳನ್ನು ಬಿಡದೇ ಆಧುನಿಕತೆಯನ್ನೂ ರೂಢಿಸಿ ಯಕ್ಷಗಾನ ಕಲೆಯ ಬೆಳವಣಿಗೆಗೆ , ಕಲಾವಿದರ  ಉಳಿವಿಗೆ ಕಾರಣವಾಗಲಿ ಎಂದು ಬಯಸುತ್ತೇನೆ.

ಆದುದರಿಂದಲೇ ‘ಭೇಷ್ ಕರ್ನಾಟಕ ಯಕ್ಷಗಾನ ಅಕಾಡೆಮಿ’ ಎಂಬುದು ಶಿಬಿರಾರ್ಥಿಗಳ ಒಕ್ಕೊರಲ  ನುಡಿ.

ಭರತ -ಭಾವ -ನೃತ್ಯ
ಮಂಗಳೂರಿನ ಭರತನೃತ್ಯ ಸಭಾ ಏರ್ಪಡಿಸುವ ಪ್ರತಿಭಾನ್ವಿತ ಸ್ಥಳೀಯ ಕಲಾವಿದರ ತಿಂಗಳ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅರ್ಥಾ ಪೆರ್ಲ ಅವರ ಭರತನಾಟ್ಯ ನೃತ್ಯ ಪ್ರದರ್ಶನದಲ್ಲಿ ತಮ್ಮ ತಂದೆ ಡಾ. ವಸಂತಕುಮಾರ್ ಪೆರ್ಲ ಅವರ ‘ಬಾ ಮಗುವೆ ಬಾ ಮಗುವೆ ಜೀವಭಾವದ ನಗುವೆ’ ಎಂಬ ಭಾವಗೀತೆಗೆ ವಿಸ್ತೃತ ಅಭಿನಯ ಮಾಡಿದರು. ಹಿರಿಯ ನೃತ್ಯ ಗುರು ಕೆ.ಮುರಳೀಧರರಾಯರ ಸಂಯೋಜನೆಯಲ್ಲಿ ಮೂಡಿಬಂದ ಈ ನೃತ್ಯಭಾಗವು ಸಂಪ್ರದಾಯದ ಚೌಕಟ್ಟಿನಿಂದ ಹೊರಗೆ ಬಂದು ಭಾವಗೀತೆಯನ್ನು ಭಕ್ತಿಗೀತೆಯಂತೆ ಪ್ರದರ್ಶಿಸಿದ್ದು ಸ್ತುತ್ಯರ್ಹ.

ಇಂತಹ ಪ್ರಯೋಗಗಳು ಈಗಾಗಲೇ ಸಾಕಷ್ಟು ಯಶಸ್ವಿಯಾಗಿದ್ದರೂ ಸಾಂಪ್ರದಾಯಿಕ ನೃತ್ಯ ಪ್ರದರ್ಶನದಲ್ಲೂ ಕನ್ನಡದ ಭಾವ‌ಗೀತೆಗಳಿಗೆ ಜೀವ ತುಂಬುವ ಕಾರ್ಯಗಳು ಮತ್ತಷ್ಟು ಎಳೆ-ಯುವ-ಹಿರಿಯ ಕಲಾವಿದರಲ್ಲಿ ಮೂಡಿ ಬರಬೇಕು. ಆಗ ಕನ್ನಡದ ಸಾರಸ್ವತ, ಸಾಂಸ್ಕೃತಿಕ, ನೃತ್ಯ ಲೋಕ ಮತ್ತಷ್ಟು ತುಂಬಿಕೊಂಡು ಆಸ್ವಾದಪೂರ್ಣವಾಗುತ್ತದೆ.

(ಲೇಖಕರು ಸೃಜನಶೀಲ ಚಿಂತಕರು, ಸಂಘಟಕರು, ಆಕಾಶವಾಣಿ ಕಲಾವಿದರು, ಸಂಗೀತ ನೃತ್ಯ ಕಲಾವಿದರು)

ಶಾಸ್ತ್ರೀಯ ನೃತ್ಯಗಳ ಆಂಗಿಕಾಭಿನಯ ಪ್ರಾತ್ಯಕ್ಷಿಕೆ : ಯಕ್ಷ ಅನೌಚಿತ್ಯದ ನಡುವೆ ಬೆಳಗಿದ ಕಥಕ್ಕಳಿ
ಆದಿತ್ಯವಾರ ೨೯-೩-೨೦೦೯ ಕಿನ್ನಿಗೋಳಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಂಗಿಕಾಭಿನಯ ಅವಲೋಕನಕ್ಕೆ ಮೀಸಲಿಟ್ಟಿತ್ತು. ನನಗೆ ಆಮಂತ್ರಣ ಬಂದ ಕೂಡಲೇ ಮೊದಲು ನನ್ನ ಕಣ್ಣೋಡಿದ್ದು ಸಂಪನ್ಮೂಲ ವ್ಯಕ್ತಿ ಅಥವಾ ಸಂಸ್ಥೆ ಮತ್ತು ಪ್ರಾತ್ಯಕ್ಷಿಕೆಗಳ ವಿವರಗಳತ್ತ. ಎಲ್ಲಾ ಅನುದಾನಿತ ಸಂಸ್ಥೆಗಳು ಮಾಡುವಂತೆ ಇಲ್ಲೂ ಮುಖ್ಯ ಕೆಲಸವನ್ನು `ಉಳಿದ ಸಮಯಕ್ಕೆ ಸಂಕೋಚಗೊಳ್ಳುವಂತೆ’ ಭರ್ಜರಿ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಕಾಣುತ್ತಿತ್ತು; ಬೆಳಿಗ್ಗೆ ಒಂಬತ್ತರಿಂದ ಹತ್ತು (ನಿಜದಲ್ಲಿ ನಡೆದಷ್ಟು ಹೊತ್ತು) ಮತ್ತು ಸಂಜೆ ನಾಲ್ಕರಿಂದ ಐದು (ಕೂತವನ ತಾಳ್ಮೆ ಖೈದು). ಎಡೆಯಲ್ಲಿ ಊಟದ ಬಿಡುವಿನೊಡನೆ ಐದು ಪ್ರಾತ್ಯಕ್ಷಿಕೆ ನಡೆಯಬೇಕಿತ್ತು.

ನಾವೇಳು ಜನ ಅಂದರೆ ಡಾ| ಮನೋಹರ ಉಪಾಧ್ಯ (ವೃತ್ತಿಯಲ್ಲಿ ಗೋಡಾಕ್ಟರ್ರಾದರೂ ಆಸಕ್ತಿಯಲ್ಲಿ ಯಕ್ಷಗಾನ ವಿಪರೀತ ಹಚ್ಚಿಕೊಂಡ ಜೀವ), ಪ್ರೊ| ಮೊರಿಜಿರಿ (ಜಪಾನಿನ ಪ್ರದರ್ಶನ ಕಲೆಗಳ ತಜ್ಞ ಮತ್ತು ಭಾರತೀಯ ಅದರಲ್ಲೂ ಮುಖ್ಯವಾಗಿ ತೆಂಕು ತಿಟ್ಟಿನ ಯಕ್ಷಗಾನದ ಮೇಲೆ ಸಂಶೋಧನೆ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಮಾರ್ಗದರ್ಶಕ), ಉಚ್ಚಿಲದ ಸದಾಶಿವ ಮಾಸ್ಟರ್ (ವೃತ್ತಿಯಲ್ಲಿ ಸರಕಾರೀ ಪದವಿಪೂರ್ವ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ತೆಂಕು ತಿಟ್ಟಿನ ಹವ್ಯಾಸಿಗಳ ಬಲು ಖ್ಯಾತ ಕೂಟ ಕಲಾಗಂಗೋತ್ರಿಯ ಬೆನ್ನೆಲುಬು. ಇವರ ಕೂಟ ನಡೆಸಿಕೊಟ್ಟ ಯಕ್ಷ ಪ್ರದರ್ಶನಗಳು, ಗೋಷ್ಠಿಗಳು, ಪ್ರಕಟಿಸಿದ ಪುಸ್ತಕಗಳು ತೆಂಕು ತಿಟ್ಟು ಯಕ್ಷಗಾನಕ್ಕೆ ಅಧ್ಯಯನದ ಶಿಸ್ತನ್ನು ಗಟ್ಟಿಯಾಗಿ ರೂಪಿಸುವ ಪ್ರಯತ್ನಗಳು), ನಾನು, ನನ್ನ ಹೆಂಡತಿ ದೇವಕಿ, ಗೆಳೆಯ ಕೆ.ಎಲ್ ರೆಡ್ಡಿ ಮತ್ತವರ ಹೆಂಡತಿ ಜಾನಕಮ್ಮ ಉದ್ಘಾಟನೆ ತಪ್ಪಿಸಬೇಕೆಂದೇ ನಿಧಾನಕ್ಕೇ ಮಂಗಳೂರು ಬಿಟ್ಟೆವು.

ಆದರೂ ಉದ್ಘಾಟಕ ಜೋಶಿಯವರ ಹೆಚ್ಚಿನ ಮಾತು ನಮಗೆ ದಕ್ಕಿತ್ತೋ ದಕ್ಕಿತ್ತು. ಎಂದಿನಂತೆ ಅಧ್ಯಯನ, ಅನುಭವ ಮತ್ತು ವಾಗ್ಮಿತೆಯ ಬೀಸು ಅಲ್ಲಿತ್ತು. ಅದು ಅಥವಾ ಅಂಥಾದ್ದೊಂದನ್ನು ಮಾತ್ರ ಆಶಯ ಅಥವಾ ಪ್ರಾಸ್ತಾವಿಕ ಭಾಷಣ ಎಂದು ಹೆಸರಿಸಿ ಇಟ್ಟುಕೊಂಡಿದ್ದರೆ ಸಾಕಿತ್ತು. ಔಪಚಾರಿಕ ಅಧ್ಯಕ್ಷ, ಮುಖ್ಯ ಅತಿಥಿ (ಉಳಿದವರು ಅಮುಖ್ಯರೇ?), ಸ್ಥಳೀಯ ಸಂಘಟಕದ್ವಯರು, ಗೋಷ್ಠಿಯ ನಿರ್ದೇಶಕರಾದಿ ವೇದಿಕೆಯ ಮೇಲೆ ಮೆರೆದದ್ದು, ಪ್ರಾರ್ಥನೆ, ಸ್ವಾಗತ, ಪರಿಚಯ, ಗೌರವಾರ್ಪಣೆ, ದೀಪ ಹಚ್ಚುವುದು, ಅಂತಿಮವಾಗಿ ಎಲ್ಲರೂ ಹೇಳಿದ್ದನ್ನೇ ಹೇಳುವ ಅವಕಾಶ ಎಲ್ಲವನ್ನು ಕಿತ್ತು ಹಾಕಬೇಕಿತ್ತು. (ಕಲಾಪಗಳ ಕೊನೆಯಲ್ಲಿದ್ದ ಸಮಾರೋಪ ಸಮಾರಂಭವೂ ಹೀಗೇ ಇದ್ದಿರಬೇಕು. ಸಹಿಸಿಕೊಳ್ಳುವ ದರ್ದು ನಮಗೇನೂ ಇರಲಿಲ್ಲವಾದ್ದರಿಂದ ಹರ್ದು ಬಿದ್ದೋಡಿದೆವು!)

ಸಾರ್ವಜನಿಕ ಹಣ ವಿನಿಯೋಗದ ಆಶಯ, ಕಡತಗಳು ಮತ್ತು ಅನುದಾನಗಳು ಯಾವತ್ತೂ ಘನವಾಗಿಯೇ ಇರುತ್ತವೆ. ಆದರೆ ಹೆಚ್ಚಾಗಿ (ಇಲ್ಲೂ) ಮೆರೆಯುವುದು ನಿರುಪಯುಕ್ತ ಔಪಚಾರಿಕತೆಗಳು. ಎಲ್ಲಾ ಸಮಯವನ್ನು ಉದ್ದೇಶಿತ ಕಲಾಪಕ್ಕೆ ವಿನಿಯೋಗಿಸುವುದನ್ನು ನಾವು ರೂಢಿಸುವುದು ಯಾವಾಗ? ನೇರ ಪ್ರಾತ್ಯಕ್ಷಿಕೆಗಳನ್ನೇ ಅನಾವರಣಗೊಳಿಸುತ್ತೇನೆ.

೧. ಕಥಕ್ಕಳಿ

ಕೇರಳ ಕಲಾಮಂಡಲಂ (ತ್ರಿಶೂರ್) ಇದರ ಕಲಾಧರನ್ ಬಳಗ ಸಮಯ ಮಿತಿಯನ್ನು ನೋಡಿಕೊಂಡು ಬಹಳ ಚೊಕ್ಕವಾಗಿ ಕಥಕ್ಕಳಿಯ ಆಂಗಿಕಾಭಿನಯದ ಪ್ರಾತ್ಯಕ್ಷಿಕೆಯನ್ನು ಕೊಟ್ಟಿತು. ಸಾಂಪ್ರದಾಯಿಕ ಪ್ರದರ್ಶನಗಳಲ್ಲಿ ಪೂರ್ಣ ವಾಚಿಕಾಭಿನಯವನ್ನು ಹಾಡುಗಾರಿಕೆಯಲ್ಲೇ ಅಭಿವ್ಯಕ್ತಿಸಲು ಎರಡು ಭಾಗವತರಿರುತ್ತಾರಂತೆ. ಇಲ್ಲಿ ಪ್ರಾತ್ಯಕ್ಷಿಕೆಯ ಸೀಮಿತ ಆವಶ್ಯಕತೆಗನುಗುಣವಾಗಿ ಒಬ್ಬರೆ ಕೊರತೆಯಾಗದಂತೆ ನಡೆಸಿಕೊಟ್ಟರು.

ಪಕ್ಕ ವಾದ್ಯದಲ್ಲಿ ತಾಳ, ಚಂಡ (ಗಮನಿಸಿ ಚಂಡೆ ಅಲ್ಲ), ಮದ್ದಳೆಯ ಸಹಕಾರ. ಒಬ್ಬನೇ ನಟ ಸರಳ ದಿರುಸಿನಲ್ಲಿ ಪ್ರದರ್ಶನ ಭಾಗದ ಪ್ರಾತ್ಯಕ್ಷಿಕೆ ನಡೆಸಿದ. ಹಸ್ತ ಮುದ್ರೆಗಳು ಕಥಕ್ಕಳಿಯಲ್ಲಿ ಯಾವುದೋ ವಸ್ತು, ಭಾವಗಳನ್ನು ಪ್ರತಿನಿಧಿಸುವ ಶಬ್ದಗಳಿದ್ದಂತೆ. ಹಾಗಾಗಿ ಮೊದಲು ಆ ತುಣುಕುಗಳನ್ನು ಪರಿಚಯಿಸಿದರು. ಮುಂದೆ ನವರಸಗಳನ್ನು ಅಭಿವ್ಯಕ್ತಿಸುವ ಮುಖಭಾವಗಳು. ಕೊನೆಯಲ್ಲಿ ಕೆಲವು ಪ್ರಸಂಗಗಳ ಸಣ್ಣ ಒಂದೆರಡು ಸನ್ನಿವೇಶವನ್ನು ಎತ್ತಿಕೊಂಡು, ಹೊಂದುವ ನೃತ್ತ ನೃತ್ಯಗಳ (ಮುಖಭಾವ, ದೇಹಭಾಷೆ ಸೇರಿದಂತೆ) ಜೋಡಣೆ ಮತ್ತು (ಬಣ್ಣ ತೊಡವುಗಳ ಪಾಕ ಮಾತ್ರ ಇಲ್ಲಿರಲಿಲ್ಲ) ಹಿನ್ನೆಲೆಯಿಂದ ಹೊಮ್ಮುವ ಭಾಗವತನ ಹಾಡುಗಾರಿಕೆಯಲ್ಲಿ ಜನಮನ ಸಂಪನ್ನಗೊಳಿಸಿದರು. ಒಂದೆರಡು ಪ್ರೇಕ್ಷಕರ ವಿಶೇಷ ಬೇಡಿಕೆಯ ತುಣುಕನ್ನೂ ಇವರು ಮರುಕ್ಷಣದಲ್ಲಿ ಕಿಸರು ಕೊಸರು ಇಲ್ಲದೆ ಒದಗಿಸಿದ್ದು ಕಲಾವಿದ ಬಳಗದ ಅಪಾರ ಸಿದ್ಧಿಯನ್ನು ಪ್ರಸಿದ್ಧಿಸಿತು. ಅಂದು ಈ ಪ್ರಾತ್ಯಕ್ಷಿಕೆ ಪ್ರೇಕ್ಷಕ ಚಿತ್ತಭಿತ್ತಿಯಲ್ಲಿ ಒತ್ತಿದ ಮುದ್ರೆ ಇಂದು ಕಥಕ್ಕಳಿಗೆ ಒದಗಿರುವ ವಿಶ್ವಮಾನ್ಯತೆಗೆ ಸಂದ ಕಿನ್ನಿಗೋಳಿಯ ಅನುಮೋದನೆ.

೨. ಭೂತಾರಾಧನೆ

ಎರಡನೇ ಅವಧಿಗೆ ಕಲಾವಿದ ಬರಬೇಕಿತ್ತು; ಆದರೆ ಸಂಘಟಕರು ಕರೆಸಿದ್ದು `ಪಾತ್ರಿಯನ್ನು’. ಆತನಿಗೂ ಸಂಘಟಕರಿಗೂ ಅಂತಿಮ ಕ್ಷಣದವರೆಗೂ ಭೂತಾರಾಧನೆ ಕೇವಲ ಆರಾಧನೆಯೇ ಅಥವಾ ಪ್ರದರ್ಶನ ಕಲೆಯೂ ಹೌದೇ ಎಂಬ ಬಹು ಚರ್ಚಿತ ವಿಷಯ ಹೊಳೆದೇ ಇಲ್ಲವೆಂಬಂತಿದ್ದದ್ದು ಆಶ್ಚರ್ಯ. ಘೋಷಿತ ಪ್ರಬಂಧ ಸ್ಪರ್ಧೆಗೆ ಹೋದ ಅಭ್ಯರ್ಥಿಯೊಬ್ಬ ನಾನು ಇದುವರೆಗೂ ಪ್ರವಾಸ ಹೋಗಿಲ್ಲವಾದ್ದರಿಂದ (`ಪ್ರವಾಸ ಕಥನ’ ಸ್ಪರ್ಧೆಯ ವಿಷಯ) ಏನೂ ಬರೆಯುತ್ತಿಲ್ಲ ಎಂದಂತೆಯೇ ಇದನ್ನು ಮುಗಿಸಬೇಕಾಯ್ತು! ಇದು ಬರಿಯ ಭೂತಪಾತ್ರಿಯ ಕೊರತೆಯಲ್ಲ ಎಂಬುದಕ್ಕೆ ಮುಂದಿನ ಮೂರೂ ಪ್ರಾತ್ಯಕ್ಷಿಕೆಗಳು ಸಾಕ್ಷಿಯಾದ್ದು ವಿಷಾದನೀಯ.

ಒಟ್ಟು ಕಲಾವಿದರ ಮತ್ತು ಅವರು ಪ್ರತಿನಿಧಿಸಿದ ಕಲಾಪ್ರಕಾರಗಳ ಯೋಗ್ಯತೆ ಮತ್ತು ಅನನ್ಯತೆಯ ಬಗ್ಗೆ ನಮಗ್ಯಾರಿಗೂ ಸಂದೇಹಗಳಿಲ್ಲ. ಕಲಾಪದ ಆಶಯವನ್ನು ಸಂಘಟನೆ ಸಾಕಷ್ಟು ಮುಂದಾಗಿ ಕಲಾವಿದರಿಗೆ ಸ್ಪಷ್ಟಗೊಳಿಸಿದ್ದು ಸಾಲದು ಎನ್ನುವುದು ಮುಖ್ಯ ದೋಷ. ಗೃಹಕೃತ್ಯ ಮಾಡದೇ ಏನು ಮಾಡಿದರೂ ನಡೆದೀತು ಎನ್ನುವ ಉಡಾಫೆಯ ಅಂಶಗಳು ಇನ್ನಷ್ಟು ದೊಡ್ಡ ದೋಷ. ಎರಡೂ ದೋಷಗಳನ್ನು ಮೀರಿ ನಿಂತ ಕಥಕ್ಕಳಿಯ ಯಶಸ್ಸಿನ ಪ್ರಭೆ ನಮ್ಮವರಿಗೂ ದಾರಿ ತೋರಲಿ ಎಂದು ಆಶಿಸುವುದಷ್ಟೇ ಉಳಿಯಿತು.

೩. ನೃತ್ಯಪ್ರಕಾರಗಳಲ್ಲಿ ಭರತನಾಟ್ಯ

ವಿದ್ಯಾ ಶಿಮ್ಲಡ್ಕ ಬಳಗ `ಭರತನಾಟ್ಯ’ವನ್ನು ಮುಖ್ಯವಾಗಿರಿಸಿಕೊಂಡು ಪ್ರಬಂಧಮಂಡನೆ ಮತ್ತು ಪ್ರಾತ್ಯಕ್ಷಿಕೆಯನ್ನು ಕೊಡಲು ಸಜ್ಜಾಗಿದ್ದರು. ಸಮಯದ ಮಿತಿ ನೋಡಿಕೊಂಡು ವಿಷಯದ ಪರಿಮಿತಿ ನಿರ್ಧರಿಸಬೇಕಾದವರು ಯಾರು ಎಂಬ ಗೊಂದಲ ಪ್ರದರ್ಶನದ ಕೊನೆಯಲ್ಲಿ ವಿದ್ಯಾ ಅವರ ಮಾತಿನಲ್ಲೇ ಸ್ಪಷ್ಟವಾಯ್ತು. ಭರತ, ನಂದಿಕೇಶ್ವರ, ಪದ್ಮಾಸುಬ್ರಹ್ಮಣ್ಯಂ, ಸುಂದರಿ ಸಂತಾನಂ ಮುಂತಾದವರ ವಾದ- ಪ್ರತಿವಾದಗಳ ಸಂತೆಯಲ್ಲಿ ದಾರಿ ಬಿಡಿಸಿಕೊಳ್ಳುತ್ತಿದ್ದ ವಿದ್ಯಾರನ್ನು ನಿರ್ವಹಣೆಯ ಹೊಣೆ ಹೊತ್ತ ಎಂ.ಎಲ್ ಸಾಮಗರು ಹೇಗೋ ಪ್ರಾತ್ಯಕ್ಷಿಕೆಯ ವೇದಿಕೆಗೆ `ಹಾರಿಸಿ’ ತಂದರು.

ಆದರೂ ಪ್ರಾತ್ಯಕ್ಷಿಕೆಯ ಸ್ವಾರಸ್ಯ ವಿಕಸಿಸುವ ಮೊದಲು ಪ್ರೇಕ್ಷಕವರ್ಗದ ಓರ್ವರಿಂದ (ವೃತ್ತಿ ಮಾತ್ಸರ್ಯ?) ಮತ್ತೆ ಹಳೆಯ ಜಾಡಿಗೆ ನೂಕಲ್ಪಟ್ಟು ಕಲಾಪ ಅಪರಿಪೂರ್ಣವಾಯ್ತು. (ಆ ಪ್ರೇಕ್ಷಕ ಮಹಾಶಯರಿಗೆ ವಿಮರ್ಶಕನ ವಿನಯದ ಬಗ್ಗೆ ಪ್ರತ್ಯೇಕ ಪಾಠ ಅವಶ್ಯ ಆಗಬೇಕು.) ಕೊನೆಯಲ್ಲಿ ಉತ್ತರ ಕೊಡುವ ಗಡಿಬಿಡಿಯಲ್ಲಿ ಪ್ರದರ್ಶನಕ್ಕೆ ಕರೆತಂದ ಗುರುವೇ ಶಿಷ್ಯೆಯರ ಕಲಾಪದ ಬಗ್ಗೆ ಸಂಶಯ ವ್ಯಕ್ತಪಡಿಸುವಂತಾದದ್ದು ಅನಪೇಕ್ಷಿತ ಬೆಳವಣಿಗೆ.

೪. ತೆಂಕು ತಿಟ್ಟು

ಕೆ. ಗೋವಿಂದ ಭಟ್ಟರು ಇಂದು ತೆಂಕುತಿಟ್ಟಿನಲ್ಲಿ ವೃತ್ತಿಪರರಾಗಿರುವವರಲ್ಲಿ ಅದ್ವಿತೀಯ ಮತ್ತು ಹಿರಿಯ ಕಲಾವಿದ. ಆದರೆ ಇತರ ರಂಗಪ್ರಕಾರಗಳೊಡನೆ ತುಲನಾತ್ಮಕವಾಗಿ ಅವಲೋಕನ ನಡೆಯುತ್ತಿದ್ದ ಪ್ರಾತ್ಯಕ್ಷಿಕೆಯ ರಂಗದಲ್ಲಿ ಇವರದು ದೊಡ್ಡ ಸೋಲು. ಧರ್ಮಸ್ಥಳದಲ್ಲಿ ಯಕ್ಷ-ಶಿಕ್ಷಕನಾಗಿಯೂ ದುಡಿದ ಅನುಭವದ ಭಟ್ಟರು ನಾನು ಯಾವುದೇ ಶಾಸ್ತ್ರದ ಉಲ್ಲೇಖ, ವಿವರಣೆಗಳ ಸಹಿತ ಪ್ರಾತ್ಯಕ್ಷಿಕೆ ಕೊಡಲಾರೆ. ಕೆಲವು ಪದ್ಯಗಳಿಗೆ ನನ್ನ ಕುಣಿತ, ಅಭಿನಯದ ಅಳವಡಿಕೆಯನ್ನಷ್ಟೇ ಪ್ರದರ್ಶಿಸುತ್ತೇನೆ. ಬೇಕಾದ್ದನ್ನು ಗ್ರಹಿಸಿಕೊಳ್ಳಿ ಎಂದು ತೊಡಗಿದ್ದು ಅಭಾಸಕರ. ಮುಂದುವರಿದು ಸುಮಾರು ಒಂದು ಗಂಟೆಯ ಅವಧಿಯುದ್ದಕ್ಕೆ ಇಪ್ಪತ್ತು ವರ್ಷದ ಹಿಂದೆಯಾದರೆ ಕುಣಿಯುತ್ತಿದ್ದೆ. ಇಂದು ಬಚ್ಚಿದರೆ ಐದಾರು ಮಿನಿಟು ಸುಮ್ಮನೆ ಕುಳಿತೇನು, ಸಹಿಸಿಕೊಳ್ಳಿ ಎಂದವರೇ ಬಲಿಪ ಭಾಗವತರು ಕೊಡುತ್ತ ಬಂದ ವಿಭಿನ್ನ ಪದ್ಯಗಳಿಗೆ ಅವಿರತ ಕುಣಿಯತೊಡಗಿದರು.

ಗೋವಿಂದ ಭಟ್ಟರ ಪ್ರಾಯಕ್ಕೆ ಅಗತ್ಯವಾದ ವಿಶ್ರಾಂತಿ ಸಿಗುವಂತೆಯೂ ಪ್ರದರ್ಶನದ ಯಾಂತ್ರಿಕತೆಯನ್ನು ನಿವಾರಿಸುವಂತೆಯೂ ಸಾಮಗರು ಮಧ್ಯೆ ಪ್ರವೇಶಿಸಿ, ನೀವು ಪ್ರದರ್ಶಿಸಲಿರುವ ಪ್ರತಿ ತುಣುಕಿನ ಮೊದಲು ಅಲ್ಲಿ ವ್ಯಕ್ತವಾಗುವ ರಸ, ಆಂಗಿಕಗಳ ಬಗ್ಗೆಯಾದರೂ ನಾಲ್ಕು ಮಾತು ಹೇಳಿ, ವಿರಾಮದಲ್ಲಿ ಕುಣಿದರೆ ಒಳ್ಳೆಯದಿತ್ತು ಎಂದರು. ಭಟ್ಟರು ಸರಿಯಾಗಿಯೇ ಬಿಡುವನ್ನೇನೋ ಬಳಸಿಕೊಂಡರು. ಆದರೆ ಭಾವ ನಿಲುವುಗಳ ವಿವರಣೆ ಕೊಡಬೇಕಾದಲ್ಲಿ ಪ್ರಸಂಗ, ಸನ್ನಿವೇಶವನ್ನಷ್ಟೇ ಹೇಳುತ್ತ ಮುಂದುವರಿದರು.

ಮಾಯಾ ಶೂರ್ಪನಖೆಯ ತುಣುಕನ್ನು ಮುಗಿಸಿದಾಗ ಪ್ರೇಕ್ಷಕ ಸಾಲಿನಲ್ಲಿದ್ದ ಕೋಳ್ಯೂರು ರಾಮಚಂದ್ರರಾಯರು ಒಮ್ಮೆಗೆ ಸವಾಲೊಂದನ್ನು ಎಸೆದರು. ಸಮರೇಖೆಯಂತೆ ತೋರುವ ಮಾಯಾ ಅಜಮುಖಿಯಿಂದ ಮಾಯಾ ಶೂರ್ಪನಖೆಯನ್ನು ಹೇಗೆ ಭಿನ್ನವಾಗಿಸುತ್ತೀರಿ? ಸಣ್ಣ ಕೊಸರಾಟ, ಹುಸಿಮುನಿಸಿನ ಬೆನ್ನಲ್ಲಿ ಕೋಳ್ಯೂರರೇ ಉತ್ತರ ಕೊಟ್ಟದ್ದಲ್ಲದೆ ಅಭಿನಯಿಸಿಯೂ ತೋರಿಸಿದ್ದು ಸ್ವಾಗತಾರ್ಹ ಬದಲಾವಣೆ ಆಯ್ತು. (ಒಮ್ಮೆಗೆ ಕೆಲವರಾದರೂ ಕೋಳ್ಯೂರರಿಗೆ `ನನ್ನನ್ಯಾಕೆ ಕರೆಯಲಿಲ್ಲ ಎನ್ನುವ ಹೊಟ್ಟೆಕಿಚ್ಚು’ ಎಂದು ಗ್ರಹಿಸಿರಬಹುದು. ಆದರೆ ಕೊನೆಯಲ್ಲಿ ಬೇಸರ ಎಂತದ್ದು, ಕೋಳ್ಯೂರು ನನಗೆ ಯಕ್ಷನರ್ತನವನ್ನು ಕಲಿಸಿದ ಗುರು ಎಂದದ್ದು ಮೋಡ ಕವಿದ ವಾತಾವರಣದಲ್ಲಿ ಅಪ್ಯಾಯಮಾನವಾದ ತಂಗಾಳಿಯೇ ಆಯ್ತು)

ಹಸಿವೆ ನೀಗಲು ಬಂದ ಶೂರ್ಪನಖೆ ರಾಮದರ್ಶನದಿಂದ ಕಾಮಾತುರಳಾಗುತ್ತಾಳೆ. ಅವಳ ಚರ್ಯೆಗಳಲ್ಲಿ ರಾಮನ ಸಂಸ್ಕಾರಕ್ಕೆ ವಿಪರೀತವಾಗದಿರುವ ಎಚ್ಚರ ಇರಬೇಕು. ಅದೇ ಅಜಮುಖಿಯಾದರೋ ಕಾಮೈಕ ಧ್ಯಾನದಲ್ಲಿ ಒಟ್ಟಾರೆ ಪುರುಷನೊಬ್ಬನ ತೀವ್ರ ಹುಡುಕಾಟದಲ್ಲಿದ್ದಾಗ ಬಂದ ದೂರ್ವಾಸನ ಮೇಲೆ ಅಕ್ಷರಶಃ ಬೀಳುತ್ತಾಳೆ.

ಕೋಳ್ಯೂರು ಅಭಿನಯಕ್ಕೆ ನಿಂತಾಗ ಅಜಮುಖಿಗೆ ನಾರಾಯಣ ಭಾಗವತರು ಬಲಿಪಶೈಲಿಯಲ್ಲೇ ಪದ್ಯ ಸುರುಮಾಡಿದ್ದರು. ಪ್ರಾತ್ಯಕ್ಷಿಕೆ ಮತ್ತು ಸವಾಲಿಗುತ್ತರ ಕೊಡುವ ಎಚ್ಚರಗಳೆರಡನ್ನು ವಹಿಸಿಕೊಂಡ ಕೊಳ್ಯೂರು ಠಪ್ಪ ತಡೆದರು. ಸ್ವತಃ ಹಾಡಿ, ಕೈತಟ್ಟಿ ತಾಳಹಾಕಿ `ನಿಮ್ಮದು ಶೂರ್ಪನಖೆಗಾದೀತು, ನನ್ನ ಅಜಮುಖಿಗೆ ಇದೂ’ ಎಂದು ಭಾಗವತರನ್ನು ತಿದ್ದಿದ್ದು ನಾನು ಉಲ್ಲೇಖಿಸಲೇಬೇಕು. ಆಗ ಸಾಮಗರು ಗೋವಿಂದ ಭಟ್ಟರನ್ನು ಕೆಣಕಿದರು ಹೇಗೆ, ನಿಮ್ಮದು ಭಾಗವತಿಕೆಗೆ ತಕ್ಕ ಕುಣಿತವೋ ಅಥವಾ ನಿಮ್ಮ ರಸಭಾವಾನುಸಾರಿಯಾಗಿ ಭಾಗವತಿಕೆ ಹರಿಯಬೇಕೋ? ಗೋವಿಂದ ಭಟ್ಟರು ನಿಜದಲ್ಲಿ ಎಷ್ಟು ದೊಡ್ಡವರಿದ್ದರೂ ಸಾರ್ವಜನಿಕದ ಪ್ರತಿರೋಧಗಳಿಗೆ ಗೊಣಗಿಯಾರೇ ವಿನಾ ಎಂದೂ ವಿರೋಧಿಸಿದವರಲ್ಲ. ಯಕ್ಷಗಾನದಲ್ಲಿ ಭಾಗವತ ಪ್ರಥಮ ವೇಷಧಾರಿ ಎನ್ನುವ ವಾದವನ್ನು ಪುರಸ್ಕರಿಸುವಂತೆ ನನ್ನದೇನಿದ್ದರೂ ಭಾಗವತಾನುಸಾರಿ ಎಂದು ಮುಗಿಸಿಬಿಟ್ಟರು.

೫. ಬಡಗುತಿಟ್ಟು

ನಾಲ್ಕೂ ಪ್ರಾತ್ಯಕ್ಷಿಕೆಗಳ ನಿರ್ವಹಣೆಯನ್ನು ಪ್ರದರ್ಶನಕ್ಕಾಗಲೀ ಪ್ರೇಕ್ಷಕರಿಗಾಗಲೀ ಹೇರಿಕೆಯಾಗದಂತೆ ನಡೆಸಿದವರು ಎಂ.ಎಲ್ ಸಾಮಗ. ಆದರೆ ಕೆರೆಮನೆ ಶಿವಾನಂದ ಹೆಗಡೆ ಮತ್ತು ಬಳಗದ ಕೆಲಸಕ್ಕೆ ಕೆಜಿ ನಾರಾಯಣರ ನಿರ್ವಹಣೆ ಹೊರೆಯೇ ಆಯ್ತು. ಅದರಲ್ಲೂ ಅವರು ಪ್ರದರ್ಶನದ ಕೊನೆಯಲ್ಲಿ ಭಾರೀ ಮುನ್ನೆಚ್ಚರಿಕೆಯ ಮಾತುಗಳ ಆವರಣ ಕಟ್ಟಿ (ಈಗ ನಾನೊಂದು statement ಮಾಡಲಿಕ್ಕಿದ್ದೇನೆ! ಸಭೆಯಲ್ಲಿರುವ ಗಣ್ಯಾತಿಗಣ್ಯರು ನನ್ನನ್ನು ವಿರೋಧಿಸಬಹುದು, ವೇದಿಕೆ ಬಿಟ್ಟಿಳಿದಾಗ ಜೋಶಿಯವರು ನನ್ನ ಮೇಲೆ ಧಾಳಿ ಮಾಡಬಹುದು. ಆದರೂ…… `ಇಂದು ಯಕ್ಷಗಾನದಲ್ಲಿ ಕಲಾವಿದರಿಲ್ಲ’ ಎಂದು ಹೇಳಿದ್ದು ದೊಡ್ಡ ಠುಸ್ ಪಟಾಕಿ!

ಆಂಗಿಕಾಭಿನಯ ಅವಲೋಕನದ, ಒಂದು ಪ್ರಕಾರದ, ಕೇವಲ ನಿರೂಪಕನ ನೆಲೆಯಲ್ಲಿ ಇದು ಶುದ್ಧ ಅನೌಚಿತ್ಯ. ವೈಯಕ್ತಿಕವಾಗಿ ನಾರಾಯಣರು ಏನು, ಅವರ ಇಡೀ ಕುಟುಂಬವೇ ನಾಟಕ, ಯಕ್ಷಗಾನಗಳಲ್ಲಿ ಶ್ರದ್ಧೆಯಿಂದ ಪೂರ್ಣ ತೊಡಗಿಕೊಂಡವರು ಎನ್ನುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಅಂಥವರು ಒಂದು ಹೇಳಿಕೆ ಮಾಡುವುದೇ ಇದ್ದರೆ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಅವಕಾಶ ಕೋರಿದರೆ ಖಂಡಿತಾ ದಕ್ಕಬೇಕು. ಅವಕಾಶ ಕೊಡಲಿಲ್ಲ ಎಂದಾದರೆ ಪ್ರತಿಭಟನೆ ತೋರಿ ಅಭಿಪ್ರಾಯ ಸ್ವಾತಂತ್ರ್ಯವನ್ನು ಸ್ಥಾಪಿಸಬಹುದಿತ್ತು.

ಶಿವಾನಂದ ಹೆಗಡೆ ಪ್ರತ್ಯೇಕ ನಿರೂಪಣೆಗಿಳಿದರು (ಒಂದು ಪ್ರಾತ್ಯಕ್ಷಿಕೆಗೆ ಎರಡು ನಿರ್ವಹಣೆ?). ಒಂದು ನಿಟ್ಟಿನಲ್ಲಿ ವಿದ್ಯಾ ಶಿಮ್ಲಡ್ಕರ ಹಾಗೇ ವಾದಗಳ ಮಂಡನೆಯಲ್ಲಿ ಕಾಲಕಳೆದರು. ಪ್ರದರ್ಶನಕ್ಕೆ ಇಳಿದಾಗ ಗೋವಿಂದಭಟ್ಟರು ಹಿಡಿದ ಮಾರ್ಗವನ್ನೇ ಅನುಸರಿಸಿ ಒಂದು ಪುಟ್ಟ ಪ್ರಸಂಗವನ್ನೇ (ವಾಚಿಕಾಭಿನಯವೊಂದನ್ನು ಬಿಟ್ಟು ವೇಶಭೂಷಣಸಹಿತ) ಕೊಟ್ಟದ್ದು ನಮಗೆ ನಿರಾಶಾದಾಯಕವೇ ಆಯ್ತು. ಐವತ್ತಕ್ಕೂ ಮಿಕ್ಕು ವರ್ಷಗಳ ಕೆರೆಮನೆ ಮೇಳದ ಶೈಲಿ, ಅಖಂಡ ನಾಲ್ಕನೇ ತಲೆಮಾರಿಗೂ ಹರಿಯುತ್ತಿರುವ ಯಕ್ಷವಾಹಿನಿಯ ಸಾರಾಂಶವನ್ನು ಪ್ರಾತ್ಯಕ್ಷಿಕೆಯಲ್ಲಿ ಅವಲೋಕಿಸಲು ಕಾತರರಾಗಿದ್ದೆವು. ಆದರೆ ಅವರು ಜಿ.ಆರ್.ಪಾಂಡೇಶ್ವರರ ಒಂದು ಪುಟ್ಟ ಪ್ರಸಂಗವನ್ನೇ (ದಿ| ಶಂಭು ಹೆಗಡೆಯವರ ನಿರ್ದೇಶನದ್ದಂತೆ) ಪ್ರಸ್ತುತಪಡಿಸಿದ್ದು ತೀರಾ ಅನಪೇಕ್ಷಿತ. ಎಲ್ಲ ಮುಗಿಯಿತೆನ್ನುವಾಗ ಶಿವಾನಂದ ಹೆಗಡೆಯವರು ವಾಸ್ತವದಲ್ಲಿ ನಾನು ಪ್ರಾತ್ಯಕ್ಷಿಕೆಗಳನ್ನು ಕೊಡಬೇಕು ಎಂದೇ ಗೆಜ್ಜೆ ಕಟ್ಟಿ ಸಜ್ಜಾಗಿದ್ದೆ ಎಂದು ಸಂಘಟಕರನ್ನು ಪರೋಕ್ಷವಾಗಿ ಹೆಚ್ಚುವರಿ ಸಮಯಕ್ಕೆ ಮಣಿಸಿ, ಅಭಿನಯಿಸಿದಾಗ ಎತ್ತನ್ನು ಗಾಡಿಯ ಹಿಂದೆ ಕಟ್ಟಿದ ಹಾಗಾಯ್ತು !

ಅಕಾಡೆಮಿ ಮಧ್ಯಾಹ್ನಕ್ಕೆ ಎಲ್ಲರಿಗೂ ಸರಳ ಆದರೆ ಅಗತ್ಯದ ಊಟದ ವ್ಯವಸ್ಠೆ ಮಾಡಿತ್ತು. ಆದರೆ ಬಡಿಸುವಲ್ಲಿ ಅವ್ಯವಸ್ಥೆ. ಊಟ ದಿನದ ವಿನಿಕೆಯ ಪ್ರತಿಬಿಂಬ – ಉದ್ದೇಶ, ಪಾಕ ಚೆನ್ನಾಗಿಯೇ ಇತ್ತು. ಬಡಿಸಿದ್ದರಲ್ಲೇ ಎಲ್ಲೋ ಐಬು! ಗಾದೆ ಮಾತು: ಮನೆಯ ಸಂಸ್ಕೃತಿಯನ್ನು ಊಟದಲ್ಲಿ ನೋಡು, ಎಷ್ಟು ನಿಜ !

ಚಿತ್ರಗಳು : ಡಾ| ಕೃಷ್ಣ ಮೋಹನ್ ಪ್ರಭು ಮತ್ತು ಡಾ| ಮನೋಹರ ಉಪಾಧ್ಯ

(ಲೇಖಕರು ಚಿಂತನಶೀಲರು, ವಿಮರ್ಶಕರು, ಮಂಗಳೂರಿನ ಹೆಸರಾಂತ ಅತ್ರಿ ಬುಕ್ ಸ್ಟೋರ್‌ನ ಮಾಲೀಕರು. ಇವರ www.athree.wordpress.com ಹೆಸರಾಂತ,ಸಾಹಿತ್ಯಾಸಕ್ತರಿಗೆ ಸಮೃದ್ಧ ಬ್ಲಾಗ್ ಅಂಗಳ.)

ನಟನ ಮತ್ತು ರಂಗಮನೆ
natana

ಚಲನಚಿತ್ರ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಮೈಸೂರಿನ ‘ನಟನ’ ಸಂಸ್ಥೆ ರಂಗಭೂಮಿಗೆ ಸಂಬಂಧಪಟ್ಟಂತೆ ಸದಾ ಕ್ರಿಯಾಶೀಲವಾಗಿ,  ವರ್ಷದುದ್ದಕ್ಕೂ ಜೀವಂತಿಕೆಯಿಂದ ತುಡಿಯುತ್ತಲಿದೆ. ನಾಟಕಗಳಷ್ಟೆ ಅಲ್ಲದೆ ರಂಗಭೂಮಿಯ ವಿವಿಧ ಮಜಲುಗಳನ್ನು ಏರುತ್ತಿರುವ ನಟನ ಮಕ್ಕಳ ರಂಗಭೂಮಿಗೂ ಜೀವ ತುಂಬುತ್ತಾ ಆಗಾಗ ಕಾರ್ಯಾಗಾರ, ಶಿಬಿರ, ಕಮ್ಮಟಗಳನ್ನು, ಸಿನಿಮಾ ರಸಗ್ರಹಣ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಸದಭಿರುಚಿಯ ವಿಚಾರಗಳಿಗೆ ವೇದಿಕೆಯಾಗುತ್ತಿದೆ. ಅವರ ಕುರಿತ ಹೆಚ್ಚಿನ ಮಾಹಿತಿಗೆ www.natana.org ನ್ನು ಸಂಪರ್ಕಿಸಬಹುದು.

Rangamane- Dhana Dangura-Drama

ಅಂತೆಯೇ ದಕ್ಷಿಣಕನ್ನಡದ ಸುಳ್ಯ ತಾಲೂಕಿನ ‘ರಂಗಮನೆ -ಸಾಂಸ್ಕೃತಿಕ ಕಲಾಕೇಂದ್ರ’ವೂ ಕೂಡಾ ! ನೀನಾಸಂ  ಪಧವೀಧರ, ಹೆಸರಾಂತ ರಂಗಕರ್ಮಿ ಜೀವನ್‌ರಾಮ್ ಸುಳ್ಯ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಸುಳ್ಯದ ಕಲಾಸಕ್ತ ಮಕ್ಕಳ ವೃಂದ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ತಂಡಗಳು ಈಗಾಗಲೇ ತಮ್ಮ ಜೈತಯಾತ್ರೆಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ, ಹೊರರಾಜ್ಯಗಳಲ್ಲೂ ಕೈಗೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ಅನೇಕ ನಾಟಕ ಸ್ಪರ್ಧೆಗಳಲ್ಲಿ ಸತತ ಪ್ರಥಮ ಪ್ರಶಸ್ತಿ ಪಡೆಯುತ್ತಿರುವ ಜೀವನ್‌ರಾಮ್ ನಿರ್ದೇಶನದ ಬಳಗ ಯುವ ಮತ್ತು ಮಕ್ಕಳಲ್ಲಡಗಿದ ಪ್ರತಿಭೆ ಮತ್ತು ಸಾಧನೆಯ ಜೊತೆಗೆ, ಸಮರ್ಥ ನಾಯಕತ್ವದ ನಿರ್ದೇಶನಕ್ಕೆ ಕನ್ನಡಿ ಹಿಡಿದಿದೆ. ಮಾತ್ರವಲ್ಲದೆ ರಂಗಭೂಮಿಯ ಕುರಿತಾಗಿ ಹಲವು ನಾಟಕ ಸ್ಪರ್ಧೆ, ಜಾದೂ ಮತ್ತು ಜಾನಪದ ಸಂಸ್ಕೃತಿಗಳ ಕುರಿತಾಗಿ ಕಾರ್ಯಾಗಾರ, ಶಿಬಿರಗಳನ್ನು ಆಯೋಜಿಸುತ್ತಾ ಬಂದಿರುವ ‘ರಂಗಮನೆ’ ಯಕ್ಷಗಾನದ ಹಲವು ಆಶಯಗಳನ್ನು ವ್ಯಾಪಕವಾಗಿ ತನ್ನಲ್ಲಿ ಅಳವಡಿಸಿಕೊಳ್ಳುತ್ತಾ ಯಶಸ್ವೀ ರಂಗಪ್ರಯೋಗಗಳನ್ನು ಜನಮಾನಸಕ್ಕೆ ನೀಡುತ್ತಿದೆ.

ಇವರೆಲ್ಲರ ಆಶಯ, ಪ್ರಯತ್ನ ಮತ್ತಷ್ಟು ಸಾಕಾರಗೊಳ್ಳಲಿ.

ಅಲರಿಪುವಿನ ಹೊಸ ಸಾಧ್ಯತೆ
ಭರತನಾಟ್ಯ ಪ್ರದರ್ಶನಗಳಲ್ಲಿ ಸಾಮಾನ್ಯವಾಗಿ ಪ್ರೇಕ್ಷಕರು ಇಷ್ಟಪಡುವುದು ಅಭಿನಯ, ಭಾವ  ಪೂರಿತ ನೃತ್ಯಭಾಗಗಳನ್ನೇ! ಏಕೆಂದರೆ ಅದನ್ನು ಅರ್ಥ ಮಾಡಿಕೊಳಲು, ಅನುಭವಿಸಲು ಸುಲಭ. ಅದೇ ನೃತ್ತ  ಭಾಗಗಳಾದರೆ ಅದರ ತಾಳ, ಜತಿ, ಬಹಳಷ್ಟು ಸಲ ಕಲಾವಿದರಿಂದಾಗುವ ಲೋಪ, ಪೇಲವ ಅಡವು ಸಂಯೋಜನೆ,  ಅಚ್ಚುಕಟ್ಟುತನ ಇಲ್ಲದಿರು ವಿಕೆ ಸಭಿಕರನ್ನು ಆಕರ್ಷಿಸು ವಲ್ಲಿ ವಿಫಲವಾಗುವುದು ಸತ್ಯ. ಹಾಗಾಗಿ  ನೃತ್ತ ಒಂದು ಸವಾಲು. ಆದರೆ ನೃತ್ತ ಆಕರ್ಷಕ ವಲ್ಲ ಎಂಬ ಭಾವ ಬೆಳೆಯುವಲ್ಲಿ ಕಲಾವಿದರ ಪಾತ್ರವೂ  ದೊಡ್ಡದಿದೆ.

‘ಪ್ರೇಕ್ಷಕರು ಇಷ್ಟಪಡುತ್ತಿಲ್ಲ’ ಎಂಬ ಕಾರಣವೊಡ್ಡಿ ಇತ್ತೀಚೆಗಿನ ರಂಗ ಪ್ರದರ್ಶನ  ಗಳಲ್ಲಿ ಪ್ರಾರಂಭಿಕ ಸಂಯೋಜನೆಗಳಾದ ಅಲರಿಪು, ಜತಿಸ್ವರ ಮುಂತಾದ ನೃತ್ತ ಭಾಗಗಳನ್ನು ಪ್ರದರ್ಶಿಸುವ  ಗೋಜಿಗೇ ಯಾರೂ ಹೋಗುತ್ತಿಲ್ಲ. ಹಾಗಾಗಿ ಬರಬರುತ್ತಾ ಇಂತಹ ನೃತ್ತ ಪ್ರಕಾರಗಳು ಕಲಿಯುವಿಕೆಗೆ ಮತ್ತು  ಪರೀಕ್ಷಾ ದೃಷ್ಠಿಯಿಂದ ಮಾತ್ರ ಗಮನಾರ್ಹವೆನಿಸಿ; ಪ್ರದರ್ಶನ, ರಂಗಪ್ರವೇಶಗಳ ಸಂದರ್ಭದಲ್ಲಿ  ಸಾಕಷ್ಟು ಹಿನ್ನಡೆ ಕಂಡುಕೊಂಡಿದೆ. ಒಟ್ಟಿನಲ್ಲಿ ತಮ್ಮ ಇಷ್ಟಾನಿಷ್ಟಕ್ಕೆ, ಅಸಮರ್ಥತೆಗೆ  ಪ್ರೇಕ್ಷಕರನ್ನು ಗುರಿಮಾಡಿ ಪಲಾಯನ ಮಾಡುತ್ತಿರುವ ಗುರು-ಕಲಾವಿದರ ಸಂಖ್ಯೆ ಬಹಳ ಎನಿಸುತ್ತದೆ.

ಈ ಹಿನ್ನಲೆಯಲ್ಲಿ ಯೋಚಿಸುವಾಗ ಓರ್ವರು ಮಾತ್ರ ಪ್ರದರ್ಶಿಸಬಹುದಾದ ಅಲರಿಪುವನ್ನು  ಸಮೂಹವಾಗಿ ಕಲಾವಿದರು ಪ್ರಸ್ತುತಪಡುವಂತೆ ಮಾಡುವುದು ಒಂದಷ್ಟು ಸ್ವೀಕಾರಾರ್ಹ ಸಂಗತಿ. ಇದು  ಪ್ರೇಕ್ಷಕರು ಕುಳಿತು ಆಸಕ್ತಿಯಿಂದ ನೋಡಲು ಸಹಕಾರಿ ಕೂಡಾ.

ಇತ್ತೀಚೆಗೆ ಮಂಗಳೂರಿನ ಕರಾವಳಿ ಉತ್ಸವದ ಅಂಗವಾಗಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳ  ಪೈಕಿ ಬೆಂಗಳೂರಿನ ರಸಿಕ ಅಕಾಡೆಮಿಯ ಕಿರಣ್ ಸುಬ್ರಹ್ಮಣ್ಯಂ ಮತ್ತು ಸಂಧ್ಯಾ ಕಿರಣ್ ಬಳಗದವರು  ಪ್ರಸ್ತುತಪಡಿಸಿದ ಅಲರಿಪು ಚೇತೋಹಾರಿಯಾಗಿತ್ತು. ಅಲರಿಪುವನ್ನು ಸಮೂಹದಲ್ಲಿ ಪ್ರಸ್ತುತಪಡಿಸುವ  ಟ್ರೆಂಡ್ ಬಹಳ ಹಿಂದಿನಿಂದ ಇದ್ದರೂ, ಹೆಚ್ಚಿನ ಬದಲಾವಣೆಗಳಿಲ್ಲದೆ ಕೇವಲ ಕಲಾವಿದರ ಸ್ಥಾನಗಳನ್ನು  ಅದಲು ಬದಲು ಮಾಡಿ ನರ್ತಿಸುವ ಚಾಲ್ತಿಯಿದೆ.

ಆದರೆ ‘ರಸಿಕ’ ಬಳಗ ಅಲರಿಪುವಿನ ಚತುರಶ್ರ ಜಾತಿಗೆ ಲೋಪವಾಗದಂತೆ ವಿಭಿನ್ನ ನೆಲೆ,  ಗತಿಗಳನ್ನು ಅಳವಡಿಸಿಕೊಂಡು ಲಯಕ್ಕೆ ಲೋಪವಾಗದಂತೆ ನರ್ತಿಸಿದ್ದು ಆಕರ್ಷಣೀಯವೆಸಿತು.  ಕ್ಲಿಷ್ಟಕರವೆನಿಸಿದರೂ ಸವಾಲೆನಿಸುವ ಇಂತಹ ಪ್ರಸ್ತುತಿಗಳು ಪ್ರೇಕ್ಷಕರನ್ನು ನೃತ್ತಭಾಗಕ್ಕೆ  ಹೆಚ್ಚು ಹಿಡಿದಿಟ್ಟು ನೋಡುವಂತೆ ಮಾಡಬಲ್ಲುದು. ಹಳತಿನ ಭಾವಕ್ಕೆ ತೊಂದರೆಯಾಗದೆ ಆಯಾಯ ಕಾಲದ  ಅಗತ್ಯಗಳನ್ನು ಕಂಡುಕೊಂಡು ಹೊಸ ಸ್ಪರ್ಶ ನೀಡುವ ಸಂಗತಿಗಳ ಸಾಂಗತ್ಯ ಹೆಚ್ಚಬೇಕಿದೆ.

ನೃತ್ಯ ರೂಪಕಗಳ ರಂಗ ಸಾಧ್ಯತೆಗಳಿಗೆ ಕನ್ನಡಿ : ‘ಅಂಬೆ’
ಪಾಂಚಾಲೀ, ಉಪನಿಷದುದ್ಯಾನಂ ಎಂಬ ಸಾರ್ಥಕ ರಂಗಪ್ರಯೋಗಗಳ ಹುಟ್ಟಿಗೆ ಕಾರಣರಾದ ಉಡುಪಿಯ ಉದ್ಯಾವರ ಮಾಧವ ಆಚಾರ್ಯ ಅವರ ಮತ್ತೊಂದು ಕಾವ್ಯ ಕನ್ನಿಕೆಗೆ ಜೀವ ಬಂದಿದೆ. ಡಾ| ವಸುಂಧರಾ ದೊರೈಸ್ವಾಮಿಯವರಂತಹ ಕಲಾವಿದೆಯ ಅಭಿವ್ಯಕ್ತಿಯಲ್ಲಿ ಅದು ಮತ್ತಷ್ಟು ಮೂರ್ತ ರೂಪ ತಳೆದಿದೆ. ಅದೇ ‘ಅಂಬೆ’.

ಮಹಾಭಾರತದ ಆದಿಯಲ್ಲಿ ಕಾಣಸಿಗುವ ಕಥೆಯೊಂದನ್ನು ತುಸು ತಾತ್ವಿಕ ನೋಟದಿಂದ ಪ್ರತಿಭಟನೆಯ ಸ್ತ್ರೀ ಧ್ವನಿಯಾಗಿ ರೂಪಿಸಿರುವ ಶ್ರಮ ಶ್ಲಾಘನೀಯ. ವ್ಯಾಸರ ಮಹಾಭಾರತದಲ್ಲಿ ಸಂದರ್ಭದ ಕೈಯೊಳಗಿನ ಪಾಶಕ್ಕೆ ನಲುಗುವ ಹೆಣ್ಣಾಗಿ ಅಂಬೆ ಚಿತ್ರಿತವಾದರೂ, ಸಮಕಾಲೀನ ವ್ಯವಸ್ಥೆಯನ್ನು ಧ್ವನಿಸುವಂತೆ ಮಾಡಲು ಕಥೆಯನ್ನು ರೂಪಿಸಲಾಗಿದ್ದು, ಸ್ತ್ರೀಯ ಅಂತಃಕರಣದಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು, ಸ್ವತಂತ್ರ ಮನೋಭಾವವನ್ನು ಸಮರ್ಥವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಈ ಏಕವ್ಯಕ್ತಿ ರಂಗಪ್ರಯೋಗ.

ಈಗಾಗಲೇ ಹಲವು ಪ್ರಯೋಗಗಳ ಸಾಧ್ಯತೆಗಳನ್ನು ಬಗಲಿಗಿರಿಸಿಕೊಂಡು ಮುನ್ನಡೆಯುತ್ತಿರುವ ಕಲಾಸಕ್ತರ ಅನೌಪಚಾರಿಕ ಸಂಘಟನೆ ‘ಸಮೂಹ’ವು ಇತ್ತೀಚಿಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಅಂಬೆಯ ದ್ವಿತೀಯ ಪ್ರದರ್ಶನವನ್ನು ಆಯೋಜನೆಗೊಳಿಸಿತ್ತು. ಕಲಾವಿದರನ್ನು ಪುರಸ್ಕರಿಸುವ ಮೂಲಕ ಆರಂಭಗೊಂಡ ಕಾರ್ಯಕ್ರಮವು ಕಲಾಸಕ್ತ ಬಂಧುಗಳನ್ನು ಆಕರ್ಷಿಸುವಲ್ಲಿ ಸಫಲವಾದದ್ದು ಸುಳ್ಳಲ್ಲ.

ಗಂಗಾ ತೀರದ ವನವಿಹಾರದಲ್ಲಿರುವಾಗ ಅಂಬೆಗೆ ಸೌಭದೇಶದ ಅರಸ ಸಾಲ್ವ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾನೆ. ಅವನನ್ನೇ ವರಿಸಬೇಕೆಂಬ ಹಂಬಲ ಅವಳದು. ಆದರೆ ಅಂಬೆಯ ತಂದೆ ಕಾಶೀರಾಜ ಭಯ ಭದ್ರ್ರತೆಯ ರಾಜಕೀಯ ಕಾರಣಕ್ಕೆ ಶೌರ್ಯವನ್ನು ಪಣವಾಗಿಸಿ ತನ್ನ ಮೂವರು ಮಕ್ಕಳಾದ ಅಂಬೆ, ಅಂಬಿಕೆ, ಅಂಬಾಲಿಕೆಯರ ಸ್ವಯವರವನ್ನು ನಿರ್ಧರಿಸುತ್ತಾನೆ. ಆದರೆ ಅಂಬೆಗಾದ ಈ ಆಘಾತ ಮತ್ತಷ್ಟು ತೀವ್ರಗೊಳ್ಳುತ್ತದೆ ಹಸ್ತಿನಾವತಿಯ ಭೀಷ್ಮ ಸ್ವಯಂವರಕ್ಕೆ ಆಗಮಿಸಿ ಎಲ್ಲರನ್ನೂ ಗೆದ್ದಾಗ. ಒಲ್ಲದ ಮನಸ್ಸಿನಿಂದ ರಥವೇರಿದ ಅಂಬೆಗೆ ಹೊಂದಾಣಿಕೆಯ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಶೌರ್ಯ ಪಣದಲ್ಲಿ ಗೆದ್ದು ಬಂದ ಭೀಷ್ಮನೇ ತನ್ನನ್ನು ವರಿಸಲಿ ಎಂಬುದು ಅಂಬೆಯ ಬದಲಾದ ನಿರ್ಧಾರ. ಆದರೆ ಭೀಷ್ಮನಿಗೆ ವಿವಾಹ ನಿಷಿದ್ಧ. ತಪ್ಪಿ ತಂದವ ಅವಳ ನಿವೇದನೆಗೆ ಬೆಲೆ ಕೊಡಲಾಗದೇ ಹೋದಾಗ, ಮನಸಾರೆ ಒಪ್ಪಿದ ಸಾಲ್ವನೆಡೆಗೆ ಬಳಿಸಾರುವ ತವಕ. ಆದರೆ ಸಾಲ್ವನಿಂದಲೂ ತಿರಸ್ಕಾರಕ್ಕೊಳಪಟ್ಟು ಅವಮಾನಿತಳಾದ ಅಂಬೆ, ಕೊನೆಗೆ ಪರಶುರಾಮರನ್ನೇ ಅವರ ವಿರುದ್ಧ ಯುದ್ಧಕ್ಕೆ ಅಣಿಗೊಳಿಸುತ್ತಾಳೆ. ನ್ಯಾಯ ಸಿಗಲಾರದಾಗ, ಕಾಡಿನ ಕಿರಾತ ಶಕ್ತಿಗಳನ್ನು ಹುರಿದುಂಬಿಸುತ್ತಾಳೆ. ಕೊನೆಗೆ ಆತ್ಮಾಹುತಿ ಅನಿವಾರ್ಯವಾಗಿ ಛಲದ ಶಪಥ ಹೊತ್ತು ಅಂತ್ಯವಾಗುತ್ತಾಳೆ. ಹೀಗೆ ವಿವಾಹ ರಾಜಕೀಯ ನಡೆಸಿದ ಕಾಶೀದೇಶ, ಪ್ರೇಮ ಮಾಯಾಮೃಗದ ಆಕರ್ಷಣೆ ನೀಡಿ ಕೈಬಿಟ್ಟ ಸೌಭದೇಶ, ವಂಶಾಭಿವೃದ್ಧಿಗಾಗಿ ಕ್ಷೇತ್ರಾಪಹರಣಗೈದ ಹಸ್ತಿನಾವತಿ ಎಂಬ ಮೂರು ಶಕ್ತಿಗಳ ಕೈಗೊಂಬೆಯಾಗಿ ನಲುಗುವ ಅಂಬೆಯ ಸ್ತ್ರೀ ಸಂವೇದನೆಯನ್ನು ಮನೋಜ್ಞವಾಗಿ ದುಡಿಸಿಕೊಂಡಿದ್ದಾರೆ ವಸುಂಧರಾ ಮತ್ತು ಅವರ ಬಳಗ.

ಸಖಿ, ಸಹೋದರಿಯರೊಂದಿ ಗೊಡಗೂಡಿ ಗಂಗಾತೀರದ ವಿಹಾರಕ್ಕೆ ಹೋಗುವ ಚಿತ್ರಣ ಮೊದಲಿನರ್ಧ ಭಾಗವಾಗಿದ್ದು ಪರಿಸರ, ವನ್ಯ ಮೃಗ-ಪಕ್ಷಿಗಳ ಚಿತ್ರಣವನ್ನು ವಸುಂಧರಾ ಅವರ ಅಭಿನಯವು ಚೆನ್ನಾಗಿ ದುಡಿಸಿಕೊಂಡಿದೆ. ಗಂಗಾ ತೀರದ ವಿಹಾರ ಮತ್ತು ಸ್ವಯಂವರದ ಆಯೋಜನೆಯ ನಂತರವಷ್ಟೇ ಸಾಲ್ವನ ಪಾತ್ರವನ್ನು ಕೈಗೆತ್ತಿಕೊಳ್ಳ ಲಾಗಿದ್ದು, ಇದು ಪ್ರಯೋಗವನ್ನು ಎರಡು ಭಾಗಗಳಾಗಿ ಶ್ರೇಣೀಕರಿಸಿದಂತೆನಿಸುತ್ತದೆ. ಹಾಗಾಗಿ ಪ್ರಯೋಗದ ಬಹು ಸಮಯವನ್ನು ಪ್ರಕೃತಿ ವರ್ಣನೆಯ ಭಾಗ ಕಬಳಿಸುತ್ತದೆ ಎಂಬ ಭಾಸ ಉಂಟಾಗುವುದು ಸಹಜ. ಇದರಿಂದ ಪ್ರಕೃತಿ ಚಿತ್ರಣದಲ್ಲಿ ನಿಧಾನಗೊಳ್ಳುವ ಪ್ರಯೋಗ ಕಥಾ ವಿಸ್ತರಣೆಯಲ್ಲಿ ತೀವ್ರಗತಿಯನ್ನು ಕಾಣುತ್ತದೆ. ಹಾಗಾಗಿ ಮೊದಲರ್ಧ ಭಾಗದ ಪರಿಸರ ಮತ್ತು ಸ್ವಯಂವರದ ಭವ್ಯತೆಗೆ ಹೋಲಿಸಿದಾಗ ಅಂಬೆಗೆ ಸಾಲ್ವ, ಸ್ವಯಂವರ ಮತ್ತು ಭೀಷ್ಮನ ಕುರಿತಾದ ಮನೋಧರ್ಮ, ಭೀಷ್ಮನ ಭಾವಾನುಭಾವ-ಅಂತಃಕರಣವನ್ನು ಪರಿಭವಿಸುವಲ್ಲಿ ಕೊಂಚ ಹಿಂದೆ ಬೀಳುತ್ತದೆ.

ಈ ತೀವ್ರ ಗತಿಯ ಮುನ್ನಡೆಯ ಪರಿಣಾಮವೋ ಎಂಬಂತೆ ಪರಶುರಾಮ, ಕಿರಾತ ಶಕ್ತಿಗಳನ್ನು ಯುದ್ಧಕ್ಕೆ ಅಣಿಗೊಳಿಸುವ ಸಂದರ್ಭ ಮತ್ತು ಅದರ ಫಲಶ್ರುತಿಯನ್ನು ಹೇಳುವ ಸಂದರ್ಭದಲ್ಲೂ ಪ್ರಯೋಗ ಒಂದಷ್ಟು ಬಳಲುತ್ತದೆ. ಈ ಎರಡೂ ಪಾತ್ರಪೋಷಣೆಯನ್ನು ಒಂದಷ್ಟು ಗಮನಾರ್ಹವಾಗಿ ರೂ[ಪಿಸಿದಿದ್ದರೆ, ಪಾತ್ರಗಳ ಅಭಿವ್ಯಕ್ತಿ, ನಿರ್ಗಮನ ಮತ್ತಷ್ಟು ಸ್ಪಷ್ಟ ಮತ್ತು ಮಹತ್ವದ್ದಾಗಿರುತ್ತಿತ್ತು. ಪಾತ್ರ ಪೋಷಣೆಯಲ್ಲಿ ಸಾಲ್ವನಷ್ಟೇ ಪ್ರಮುಖವಾಗಿದ್ದರೂ ವಿವಾಹ ಬೇಡವೆನ್ನುವ, ಪರಶುರಾಮರನ್ನು ಸಂಧಾನಕ್ಕೆಳೆಸುವ ಭೀಷ್ಮನ ಪಾತ್ರ ಇದೇ ಸೊರಗಿದ ಅನುಭವವನ್ನು ಕೊಡುತ್ತದೆ. ಅಷ್ಟೇ ಅಲ್ಲದೆ ಅಂತಿಮ ಘಟ್ಟದಲ್ಲೂ ಆತ್ಮಾಹುತಿ ನಿರ್ಧಾರ ತೆಗೆದುಕೊಳ್ಳುವ ಛಲ ಹೊತ್ತ ಅಂಬೆಯ ಪಾತ್ರ ಒಮ್ಮಿಂದೊಮ್ಮೆಗೇ ಬಿರುಸಾಗಿ ಕೊನೆಗೆ ಇಳಿದಂತೆನಿಸಿ ಕೊಂಚ ಬಳಲಿದಂತೆ ಕಂಡು ಬರುತ್ತದೆ. ಅದರಲ್ಲೂ ಪರಶುರಾಮ ಮತ್ತು ಕಿರಾತರನ್ನು ಯುದ್ಧಕ್ಕೆ ಹುರಿದಂಬಿಸುವ ಸಂದರ್ಭದಲ್ಲಿ ಪಥ ಸಂಚಲನದ ಮಾದರಿಯ ಹಿನ್ನಲೆ ಸಂಗೀತ, ಅಂಬೆಗೆ ನ್ಯಾಯ ಸಿಗದೇ ಹೋದಾಗ ಮತ್ತೆ ಭೀಷ್ಮನನ್ನು ಪರಿಪರಿಯಾಗಿ ಬೇಡಿಕೊಳ್ಳುವುದು ಮತ್ತು ಉತ್ತರಾರ್ಧ ಭಾಗದ ಒಂದು ತೀವ್ರಗತಿಯ ಜತಿ ನಿರೂಪಣೆಯಲ್ಲಿ ತಪ್ಪಿದ ತೀರ್ಮಾನ ಸರಣಿ, ಪಾದಘಾತಗಳಲ್ಲಿ ಅಲ್ಲಲ್ಲಿ ಕಂಡುಬಂದ ಸ್ಪಷ್ಟತೆಯ ಅಭಾವ ನೋಡುಗರಲ್ಲಿ ಇರಿಸುಮುರಿಸಿಗೆ ಕಾರಣವಾದದ್ದಿದೆ.

ಆದರೆ ವಸುಂಧರಾ ಅವರ ಅಭಿನಯ ಉತ್ಕೃಷ್ಟ ಮಟ್ಟದಲ್ಲಿದ್ದು ರಂಗ ಪ್ರಯೋಗದ ಕೊರತೆಗಳನ್ನು ಮರೆಮಾಚಿ ಪ್ರೇಕ್ಷಕರನ್ನು ನೋಡುವಂತೆ ಮಾಡುತ್ತದೆ ; ಮಾತ್ರವಲ್ಲ, ಕಾವ್ಯ ರಸಾನುಭೂತಿಗೇ ಹೆಚ್ಚು ಹತ್ತಿರವಾಗುವ ಸಾಧ್ಯತೆಗಳಿರುವ ರಚನೆಯನ್ನು ನೃತ್ಯ ರಸಾನುಭೂತಿ ಪಡೆದುಕೊಳ್ಳುವಂತೆ ಮಾಡಿಕೊಟ್ಟಿರುವುದು ವಸುಂಧರಾ ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.

ರಂಗ ಪ್ರಯೋಗವನ್ನು ಸಹ್ಯ ಮಾಡುವಲ್ಲಿ ಹಾಡುಗಾರಿಕೆಯಷ್ಟೇ ಅಲ್ಲದೆ ಉದ್ಯಾವರ ಮಾಧವ ಆಚಾರ್ಯರ ಸಮಯೋಚಿತ ವಾಚಿಕ ನಿರೂಪಣೆಯು ಅಂಬೆಯ ಭಾವಾಭಿವ್ಯಕ್ತಿಗೆ ಪೂರಕವಾಗಿ ಸ್ಪಂದಿಸಿದೆ. ಆದರೆ ಶೃಂಗಾರ, ಶಾಂತ, ಕರುಣ, ಬೇಸರ, ಅದ್ಭುತ ಮುಂತಾದ ರಸ ಪ್ರತಿಪಾದನೆಯಲ್ಲಿ ನಿರೂಪಣೆಯು ರಸಕ್ಕೆ ತಕ್ಕಂತೆ ಆರ್ಭಟವಿಲ್ಲದೆ ಒಂದಷ್ಟು ಹೊಂದಿಕೊಂಡಿದ್ದರೆ, ಇನ್ನಷ್ಟು ಸಮರ್ಥವಾಗಿ ಪ್ರೇಕ್ಷಕರನ್ನು ರೂಪಕದ ಒಳಗೆ ತೊಡಗಿಸಿಕೊಳ್ಳುವಂತೆ ಮಾಡಬಲ್ಲುದು. ರೂಪಕಕ್ಕೆ ಅಳವಡಿಸಿಕೊಳ್ಳಲಾದ ಜತಿಗಳು ಉತ್ಕೃಷ್ಟ ಮಟ್ಟದಲ್ಲಿದ್ದರೂ ವಸುಂಧರಾ ಅವರ ಮಟ್ಟಕ್ಕೆ ಜತಿಗಳು ಇನ್ನಷ್ಟು ಸವಾಲೆನಿಸುವ ಕೋರ್ವೆ, ಅಡವುಗಳ ಸಂಯೋಜನೆಯನ್ನು ಪಡೆದುಕೊಂಡಿದ್ದರೆ ಆಹ್ಲಾದಕರವಾಗಿರುತ್ತಿತ್ತು.

ವಿದುಷಿ ಪಿ. ರಮಾ, ಬೆಂಗಳೂರು ಅವರ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ಇಡೀ ರಂಗಪ್ರಯೋಗದ ಒಟ್ಟಾರೆ ಯಶಸ್ಸಿಗೆ ಕಾರಣ. ಮೈಸೂರಿನ ಸಂದೇಶ ಭಾರ್ಗವ ಅವರ ಸಮರ್ಥ ನಟುವಾಂಗ ಕಾರ್ಯಕ್ರಮದ ಹೈಲೈಟ್ ! ಇನ್ನುಳಿದಂತೆ ನಾರಾಯಣ್ ಮೈಸೂರು ಅವರ ವಯೋಲಿನ್ ವಾದನ, ಜಯಪ್ರಕಾಶ್ ಕಣ್ಣೂರು ಅವರ ಇನಿದನಿಯ ಕೊಳಲು, ಪಾಠಾಕ್ಷರಗಳಲ್ಲಿ ಅಚ್ಚುಕಟ್ಟುತನ ಹೊಂದಿದ ಪಯ್ಯನೂರು ಸುಶಿಲ್ ಕುಮಾರ್ ಅವರ ಮೃದಂಗ, ಮಂಜುನಾಥ್ ಬೆಂಗಳೂರು ಇವರ ರಿದಂಪ್ಯಾಡ್ ರಂಗ ಪ್ರಸ್ತುತಿಗೆ ಪೂರಕವಾಗಿ ಧ್ವನಿಸಿತ್ತು.

ಯಕ್ಷಗಾನ ಶಿಕ್ಷಣ ಮತ್ತು ಶಿಕ್ಷಣದಲ್ಲಿ ಯಕ್ಷಗಾನ
ನೂತನವಾಗಿ ರಚನೆಗೊಂಡಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿ ಇದೀಗ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಿಸುತ್ತಿದೆ. ಅಕಾಡೆಮಿಯ ವತಿಯಿಂದ ಮೊದಲ ಕಾರ್ಯಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆ.ವಿ.ಜಿ.ಪುರಭವನದಲ್ಲಿ ಶಿಕ್ಷಕರ ಯಕ್ಷಗಾನ ಒಕ್ಕೂಟದ ಸಹಭಾಗಿತ್ವ ದಲ್ಲಿ ಎರಡು ದಿನಗಳ ಯಕ್ಷ ನಡಿಗೆ ಚಾಲನೆ ಮತ್ತು ಯಕ್ಷಶಿಕ್ಷಣ ಕಾರ್ಯಾಗಾರ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಜನವರಿ ೩೧ ಮತ್ತು ಫೆಬ್ರವರಿ ೦೧ರಂದು ಜರುಗಿದ ಅದ್ಧೂರಿ ಕಾರ್ಯಕ್ರಮದ ಮುಖ್ಯವಸ್ತುವೇ ರಾಜ್ಯದ ಆಯ್ದ ಸುಮಾರು ೬೦ ಯಕ್ಷಶಿಕ್ಷಣ ತಜ್ಞರಿಂದ ‘ಶಿಕ್ಷಣದಲ್ಲಿ ಯಕ್ಷಗಾನ ಮತ್ತು ಯಕ್ಷಗಾನ ಶಿಕ್ಷಣ’ ಎಂಬ ಎರಡು ವಿಷಯಗಳಲ್ಲಿ ಚಿಂತನ-ಮಂಥನ.

ಪತ್ರಿಕೆಯ ಪುಟಗಳಿಗೋ, ಫಂಡ್ ಚೆಲ್ಲಾಟಕ್ಕೋ,ವೇದಿಕೆಯ ಭಾಷಣಗಳಿಗೋ-ರಗಳೆ-ಹಿತಾಸಕ್ತಿಗಷ್ಟೇ ಉಳಿದುಹೋಗಬಹುದಾಗಿದ್ದ ಕಾರ್ಯಕ್ರಮವನ್ನು ಬೆಂಗಳೂರಿನಿಂದ ದೂರವಾಗಿ, ಸಿಟಿಯ ಗದ್ದಲದಿಂದ ಹೊರಗುಳಿದು ಯಕ್ಷಗಾನದ ತವರೂರಾದ ಕನ್ನಡ ಜಿಲ್ಲೆಗಳಿಗೆ ಮಹತ್ವ ನೀಡುವಂತೆ ಅಚ್ಚುಕಟ್ಟಾಗಿ ಸಂಘಟನೆ ಮಾಡಿದ್ದು ಪ್ರಶಂಸನೀಯ. ಅದರಲ್ಲೂ ಇಂತಹ ಒಂದು ವಿಷಯಧಾರಿತವಾದ ಕಾರ್ಯಕ್ರಮ ನಡೆಸಿದ್ದು ಬಹು ಪ್ರಸ್ತುತವೆನಿಸಿದ್ದು, ಈಗಾಗಲೇ ಹಲವು ಕಲಾವಿದ-ಪ್ರೇಕ್ಷಕ-ವಿದ್ವಾಂಸರ ಬಾಯಲ್ಲಿ ಚರ್ಚೆಯ ವಿಷಯಕ್ಕೆ ಒಂದು ರೂಪ ಕೊಡುವಲ್ಲಿ ಕೆಲಸ ಮಾಡಿದ್ದೂ ಕೂಡ ಒಳ್ಳೆಯ ವಿಷಯ. ಈ ಪ್ರಯತ್ನದಲ್ಲಿ ಶಿಕ್ಷಕರ ಯಕ್ಷಗಾನ ಒಕ್ಕೂಟದ್ದು ಪ್ರಧಾನ ಪಾತ್ರ. ಅದರಲ್ಲೂ ಕಲಾವಿದ ಪ್ರಕಾಶ್ ಮೂಡಿತ್ತಾಯ ಅವರದ್ದು ಒಳ್ಳೆಯ ಹೋಂ ವರ್ಕ್ ಮಾಡಿಕೊಂಡು ಬಂದ ಸಂಯೋಜನೆ ಮತ್ತು ನಿರೂಪಣೆ.

ಯಕ್ಷಗಾನ ಹೊಸ ಪೀಳಿಗೆಗೆ ಇನ್ನೂ ಆಕರ್ಷಣೀಯವಾಗಲು ಶಿಕ್ಷಣದಂತಹ ಪರಿಣಾಮಕಾರಿ ಮಾಧ್ಯಮದ ಅಗತ್ಯವಿದೆ ಎನ್ನುವ ಕಾರಣಕ್ಕೆ ಅನುಷ್ಠಾನ ಯೋಗ್ಯವಾದ ಯೋಜನೆಗಳ ಕರಡು ಪ್ರತಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಯಿತು. ಹಾಗೆ ನೋಡಿದರೆ, ಮುಂದಿನ ಪೀಳಿಗೆಗೆ ಯಕ್ಷಗಾನದ ಅರಿವನ್ನು ಕೊಡುವಲ್ಲಿ ಉಡುಪಿಯಲ್ಲಿ ಈಗಾಗಲೇ ಯಶಸ್ವಿಯಾಗುತ್ತಿರುವ, ಶಾಲಾ-ಕಾಲೇಜು ಗಳಲ್ಲಿ ಕಡ್ಡಾಯ ಯಕ್ಷಗಾನ ಕಲಿಕೆ ಕಾರ್ಯಕ್ರಮ, ಸರ್ಕಾರದ ವತಿಯಿಂದ ನಡೆಯುತ್ತಿರುವ ಒಳ್ಳೆಯ ಬೆಳವಣಿಗೆ.

ಶಿಕ್ಷಣ ಕ್ರಮದ ವಿನೂತನ ಕಾರ್ಯ ಕ್ರಮಗಳಾದ ಪ್ರತಿಭಾ ಕಾರಂಜಿ, ಚಿಣ್ಣರ ಮೇಳ, ಚೈತ್ರದ ಚಿಗುರು, ಜೀವನ ವಿಜ್ಞಾನ, ಕ್ರಿಯೇಟಿವ್ ಕಾರ್ನರ್, ಚಿಣ್ಣರ ಅಂಗಳ, ಚೈತ್ರದ ಚಿಗುರು, ಚಿಣ್ಣರ ಕರ್ನಾಟಕ ದರ್ಶನ ದಲ್ಲಿ ವ್ಯವಸ್ಥಿತವಾಗಿ ಅಳವಡಿಸಿಕೊಳ್ಳಲು ಬೇಕಾದ ಅಗತ್ಯ ಕಾರ್ಯಕ್ರಮ, ಯೋಜನೆಗಳನ್ನು ನಿರ್ದೇಶಿಸುವುದರ ಕುರಿತಾಗಿ ಚರ್ಚೆಗಳಿದ್ದವು. ಮಗುವಿನ ಕಲಿಕೆ ಮತ್ತು ಸರ್ವಾಂಗೀಣ ಬೆಳವಣಿಗೆಗಾಗಿ ಯಕ್ಷಗಾನವನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳಬಹುದು? ಯಾವಾಗ? ಎಲ್ಲಿ? ಹೇಗೆ? ಎಂಬುದರ ಕುರಿತಾಗಿ ಚಿಂತನೆಗಳು ನಡೆದವು. ಈ ಸಂಬಂಧ ತರಬೇತಿಗಳು, ಯಕ್ಷಗಾನ ತಂಡಗಳು, ಪ್ರದರ್ಶನ ಚಟುವಟಿಕೆ, ತಾಳಮದ್ದಳೆ-ಬಯಲಾಟಗಳನ್ನು ಸಂಯೋಜಿಸುವುದು, ಆಧುನಿಕ ತಂತ್ರಜ್ಞಾನಗಳ ಮೂಲಕ ಯಕ್ಷಗಾನ ಪಠ್ಯಬೋಧನೆ ಮತ್ತು ಅವುಗಳ ಸಮಯ, ವ್ಯವಸ್ಥೆ ಮುಂತಾದವುಗಳ ಕುರಿತಂತೆ ಚರ್ಚೆಗಳು ನಡೆದವು.

ಆಗಮಿಸಿದ ೬೦ ಯಕ್ಷ ಶಿಕ್ಷಣ ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ೫ ತಂಡಗಳನ್ನಾಗಿ ವಿಭಜಿಸಿ ಪ್ರತಿಯೊಂದು ತಂಡವೂ ಕೆಳಕಂಡ ವಿಷಯಗಳ ಕುರಿತಂತೆ ವಿಷಯ ನಿಷ್ಕರ್ಷಿಸಿ, ಪರಸ್ಪರ ಸಂವಾದಗಳ ಮೂಲಕ ಅನುಮಾನಗಳನ್ನು ಬಗೆಹರಿಸಿಕೊಂಡು ಸಮಗ್ರ ಪದ್ಧತಿಯತ್ತ ಮುನ್ನಡೆಯಲು ಕ್ರಮಗಳ ನಕ್ಷೆಯನ್ನು ತಯಾರಿಸಿತ್ತು. ಅದೂ ಕೇವಲ ಎರಡು ದಿನಗಳ ಅತ್ಯಲ್ಪ ಸಮಯದಲ್ಲೇ ಯಕ್ಷಗಾನದ ಸಮಗ್ರ, ಸಂಕ್ಷಿಪ್ತ ನೋಟ ಲಭ್ಯವಾದದ್ದು ಪ್ರಸಂಸನೀಯ.

* ಯಕ್ಷಗಾನದ ಚರಿತ್ರೆ-ಸ್ವರೂಪ

* ಯಕ್ಷಗಾನ ಬೋಧನೆ-ಕಲಿಕೆ

* ಪ್ರಸಂಗ-ವೇಷಭೂಷಣ

* ಮೌಲ್ಯಮಾಪನ

* ಶಿಕ್ಷಣದಲ್ಲಿ ಯಕ್ಷಗಾನ

ಇವೇ ಆ ಐದು ತಂಡಗಳಾಗಿದ್ದು ತೆಂಕುತಿಟ್ಟು, ಬಡಗು ತಿಟ್ಟು, ಬಡಾಬಡಗು, ಪಾರಿಜಾತ, ದೊಡ್ಡಾಟ, ಸಣ್ಣಾಟ, ರಾಧನಾಟ ಮುಂತಾಗಿ ಯಕ್ಷಗಾನದ ವಿವಿಧ ಬಗೆಯ, ಮಜಲುಗಳ ನುರಿತ ವಿದ್ವಾಂಸರು, ಯಕ್ಷ ದಿಗ್ಗಜರು, ಲೇಖಕರು, ವಿವಿಧ ಕ್ಷೇತ್ರಗಳ ತಜ್ಞರು, ಕಲಾವಿದರು, ಪ್ರಾಥಮಿಕ-ಪ್ರೌಢ ಶಿಕ್ಷಕರು ಮುಂತಾಗಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಕಾರ್ಯಾಗಾರವನ್ನು ಅರ್ಥಪೂರ್ಣವಾಗಿಸಿದರು. ಮಾತ್ರವಲ್ಲದೆ, ಯಕ್ಷಗಾನವನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳ, ಭಿನ್ನಾಭಿಪ್ರಾಯಗಳ, ವಿವಾದಗಳ ಸಂಕ್ಷಿಪ್ತ ಅವಲೋಕನ ಮತ್ತು ಸಮಸ್ಯೆಗಳ ಪರಿಹಾರದತ್ತ ಸಮಗ್ರ ನೋಟವೂ ಕಂಡುಬಂದಿತ್ತು. ಇನ್ನೇನಿದ್ದರೂ ಮಂಡನೆಯಾದ, ಮನ್ನಣೆ ಪಡೆದ ವಿಷಯಗಳು ಕಾರ್ಯರೂಪಕ್ಕೆ ಬರುವುದಷ್ಟೇ ಬಾಕಿ !

(ಈ ಕುರಿತಂತೆ ಓದುಗರ ಅಭಿಪ್ರಾಯ, ಚರ್ಚೆಗಳಿಗೆ ಅವಕಾಶವಿದ್ದು  ಮತ್ತಷ್ಟು ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ಕಾಣೋಣ)