ಪ್ರಸ್ತುತ ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನಜೀವನಕ್ಕೆ ತಲುಪುವ ಸಾಧ್ಯತೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಒಂದು ಮಾಧ್ಯಮದ ಅಗತ್ಯತೆ ಎದ್ದು ಕಾಣಿಸುತ್ತದೆ. ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿ ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ನನಗೂ ಕರ್ತವ್ಯವಿದೆ ಎಂದೆನಿಸಿತು.ಪತ್ರಿಕೆಯ ತಂತ್ರಾಂಶ-ಪ್ರತಿಯು ಈ ತಾಣದಲ್ಲಿ ಲಭ್ಯ. ಸಾಹಿತ್ಯಾಸಕ್ತರು ಹಾಗೂ ನೃತ್ಯಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ನಮಸ್ತೆ
ಆತ್ಮೀಯರೇ,
ನೂಪುರ ಭ್ರಮರಿ ವಿಶೇಷ ಸಂಚಿಕೆ, ಕಥಾ ಸಂಕಲನ, ನೃತ್ಯಮಾರ್ಗ ಮುಕುರ-ನೃತ್ಯ ಕೃತಿ ಬಿಡುಗಡೆ, ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ.ಭರತನಾಟ್ಯ ಕಾರ್ಯಕ್ರಮ
ಸ್ಥಳ: ನಯನ ಸಭಾಂಗಣ, ಜೆ.ಸಿ.ರಸ್ತೆ, ಕನಡ ಭವನ, ಬೆಂಗಳೂರು
ದಿನಾಂಕ: 13 ಫೆಬ್ರವರಿ, 2011, ಸಂಜೆ ೪ ಗಂಟೆ.
ನೃತ್ಯ ಮಾರ್ಗ ಮುಕುರ’ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆಗಳ ದಾಖಲೆಯುಳ್ಳ ಅಧ್ಯಯನ ಕೃತಿ ಅನಾವರಣ
ನೂಪುರ ಭ್ರಮರಿಯ ಸಂಪಾದಕಿ, ಕಲಾವಿದೆ ಮನೋರಮಾ ಬಿ. ಎನ್ ಅವರ ನೃತ್ಯಸಂವೇದನೆಯ ‘ಮುದ್ರಾರ್ಣವ’-ಹಸ್ತಮುದ್ರೆಗಳ ಸಂಶೋಧನಾ ಕೃತಿಯ ತರುವಾಯ ಶ್ರೀ ಸಾನಿಧ್ಯ ಪ್ರಕಾಶನದಿಂದ [...]