ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಭರತನಾಟ್ಯದ ಆಂಗಿಕಾಭಿನಯದಲ್ಲಿ ಮುಖ್ಯವಾದದ್ದು ಹಸ್ತಮುದ್ರೆಗಳು. ನಾನಾಭಾವನೆಗಳನ್ನು ಸೂಚಿಸಲು ನಾನಾ ಹಸ್ತಗಳನ್ನು ಬಳಸಲಾಗುತ್ತದೆ. ಉದ್ದಿಷ್ಟಾರ್ಥದ ಅಭಿವ್ಯಂಜನೆಗೆ, ಧ್ಯಾನಾನುಕೂಲತೆಗೆ, ಶರೀರ ಸೌಖ್ಯ ಹತೋಟಿಗೆ ಬಳಸಲಾಗುವ ಹಸ್ತಗಳು ಶಾಸ್ತ್ರರೀತ್ಯಾ ನರ್ತನಪ್ರಕಾರಗಳಲ್ಲಿ ಬಳಸಲ್ಪಡುತ್ತದೆ. ಆದರೆ ಹಲವರಿಗೆ ಆ ಹಸ್ತಗಳ ನಿರ್ದಿಷ್ಟ ಪರಿಚಯ, ಅವು ಮಾಡುವ ಸಂವಹನ ಸಾಧ್ಯತೆಗಳ ಬಗೆಗೆ ಅಷ್ಟಾಗಿ ಅರಿವಿಲ್ಲ. ಈ ನಿಟ್ಟಿನಲ್ಲಿ ನೃತ್ಯಕ್ಷೇತ್ರದಲ್ಲಿ ವಿವರಿಸಲಾದ ಹಸ್ತಮುದ್ರೆಗಳ ಕುರಿತಾಗಿ ಬೆಳಕು ಚೆಲ್ಲುವ ಪ್ರಯತ್ನ ಹಸ್ತ ಮಯೂರಿ ಪ್ರತೀ ಸಂಚಿಕೆಗೊಂದರಂತೆ ಹಸ್ತಮುದ್ರೆಗಳ ಲಕ್ಷಣ, ವಿನಿಯೋಗ ಅವುಗಳ ಬಳಕೆ, ಮತ್ತು ಇತರ ಸಾಧ್ಯತೆಗಳ ಕುರಿತಂತೆ ಕಿರುಪರಿಚಯವನ್ನು ಮಾಡಲಾಗುವುದು. ಹಸ್ತದ ಕುರಿತಾಗಿ ನಿಮ್ಮ ಗಮನಕ್ಕೆ ಬಂದ ಸಂಗತಿಗಳನ್ನು ಇಲ್ಲಿ ಚರ್ಚಿಸಬಹುದು.

ಪ್ರತಿಯೊಂದು ಹಸ್ತಗಳ ಬಳಕೆ, ವಿನಿಯೋಗವಷ್ಟೇ ಅಲ್ಲದೆ, ಅದರ ಮೂಲ ಕಲ್ಪನೆಯ ಬಗೆಗೆ ಮತ್ತು ದೈನಂದಿಕ ಜೀವನದಲ್ಲಿ ಅದರ ಪಾತ್ರವನ್ನು ವಿವೇಚಿಸುವುದು ಹಸ್ತಮಯೂರಿಯ ಉದ್ದೇಶ. ಜೊತೆಗೆ ನೃತ್ಯದ ಆರೋಗ್ಯಮುಖಗಳನ್ನೂ ನೋಡಬೇಕೆಂಬುದು ಭ್ರಮರಿಯ ಹಂಬಲ. ನೃತ್ಯದಲ್ಲಿ ಬಳಸುವ ಹಸ್ತಗಳನ್ನು, ಅದರ ಆರೋಗ್ಯ ಸಂಬಂಧಿ ವಿಚಾರಗಳನ್ನು ಸಂಚಿಕೆಗೊಂದರಂತೆ ಪ್ರಸ್ತುತಪಡಿಸುತ್ತಲಿದ್ದೇವೆ. ನೃತ್ಯವೆಂಬುದು ಮನರಂಜನೆ ಮಾತ್ರವಲ್ಲ, ಅದು ಆರಾಧನೆ; ಅದು ಸಂವಹನ ; ಕಲಿಯುವಾತನಿಗೂ, ಕಲಿಸುವಾತನಿಗೂ, ಕಲಾವಿದನಿಗೂ ಮಾನಸಿಕ ಶಿಕ್ಷಣ ಕೂಡಾ!

(ವಿ.ಸೂ : ಹಸ್ತ ವಿನಿಯೋಗದಲ್ಲಿ ಕಂಡುಬರುವ ಅಂಶಗಳು ನಂದಿಕೇಶ್ವರನ ಅಭಿನಯ ದರ್ಪಣದಿಂದಲೂ, ಇತರೆ ವಿನಿಯೋಗಗಳು ನೃತ್ಯ ಶಾಸ್ತ್ರಕ್ಕೆ ಸಂಬಂಧಿಸಿದ ನಾಟ್ಯಶಾಸ್ತ್ರ, ಸಂಗೀತ ರತ್ನಾಕರ, ನರ್ತನ ನಿರ್ಣಯ, ಲಾಸ್ಯ ರಂಜನ, ಸಾರ ಸಂಗ್ರಹ, ಹಸ್ತ ಮುಕ್ತಾವಳಿ, ಹಸ್ತ ರತ್ನಾವಳಿ,ಭರತಾರ್ಣವ, ಭರತಸಾರ, ಪತಂಜಲಿ ಯೋಗ ಶಾಸ್ತ್ರ ಮುಂತಾದವುಗಳಿಂದ, ಸಂಶೋಧನೆಗಳಿಂದ ಉಲ್ಲೇಖಿತ.)

ಕಪೋತ ಹಸ್ತ

Thursday, December 15th, 2011
ಕಪೋತ ಹಸ್ತ

ಲಕ್ಷಣ: ಎರಡು ಸರ್ಪಶಿರ ಹಸ್ತಗಳನ್ನು ಅಭಿಮುಖವಾಗಿ ಹಿಡಿದು ಸಂಪುಟದಂತೆ ಜೋಡಿಸುವುದು. ಕಪೋತ ಎಂದರೆ ಪಾರಿವಾಳ ಎಂದರ್ಥವಿದ್ದರೂ ಅದು ಪಾರಿವಾಳ ಜಾತಿಯ ಮತ್ತೊಂದು ಪಕ್ಷಿಯನ್ನು ಸೂಚಿಸುತ್ತದೆ. ಇದನ್ನು ಕೂರ್ಮಹಸ್ತವೆಂದೂ ಕರೆಯಲಾಗಿದೆ. ಹಸ್ತ ಮುಕ್ತಾವಳಿಯಲ್ಲೂ ಉಲ್ಲೇಖಿತ. ಸಂಗೀತ ರತ್ನಾಕರದಲ್ಲಿ ಹಸ್ತ ಕೂರ್ಮಕವೆಂಬ ಹೆಸರೂ ಇದೆ. ಅಧಿದೇವತೆ : ಚಿತ್ರಸೇನ.

ಮಣಿಪುರಿನೃತ್ಯಶೈಲಿಯಲ್ಲಿ ಈ ಹಸ್ತಕ್ಕೆ ರಂಭಾಸುಮವೆಂಬ ಹೆಸರಿದೆ. ಒಡಿಸ್ಸಿಯ ಕರಣಪ್ರಕಾರಗಳಲ್ಲಿ ಒಂದಾದ ನಿಭೇದನದಲ್ಲಿ ಮತ್ತು ಭಂಗಿಗಳ ಪೈಕಿ ಚಿರ ಚಲನೆಯಲ್ಲಿ ಈ ಹಸ್ತದ ಬಳಕೆ ಪ್ರಮುಖವಾಗಿದೆ. ಶಾಸ್ತ್ರೀಯ ಮುದ್ರೆಗಳ ಪೈಕಿ ಕುಂಭ ಮುದ್ರೆಯು [...]

ಅಂಜಲಿ ಹಸ್ತ

Saturday, October 15th, 2011

ಅಭಿನಯ ದರ್ಪಣ ಹೇಳುವ ೨೪ ಬಗೆಯ ಸಂಯುತ ಹಸ್ತ- ಎರಡೂ ಅಂಗೈಗಳಿಂದ ಕೈಗೊಳ್ಳುವ ಹಸ್ತಲಕ್ಷಣಗಳ ಪಾಠ ಪ್ರವೇಶಿಕೆ ಪ್ರಾರಂಭ. ಅದರೊಂದಿಗೆ ಹಸ್ತಗಳಿಗೆ ಹೊಂದಿಕೊಂಡಂತೆ ಇತರ ಶಾಸ್ತ್ರಗ್ರಂಥಗಳ ವಿಶ್ಲೇಷಣೆಯೂ ಎಂದಿನಂತೆ ಮುಂದುವೆರೆಯುತ್ತದೆ. ಎಲ್ಲಾ ಹಸ್ತ-ಮುದ್ರೆಗಳ ಕುರಿತ ವಿವರಣೆಗಳು ‘ಮುದ್ರಾರ್ಣವ’ಗ್ರಂಥದಲ್ಲಿ ಲಭ್ಯ.

ಲಕ್ಷಣ: ಎರಡು ಪತಾಕ ಹಸ್ತಗಳನ್ನು ಹೆಬ್ಬೆರಳಿನಿಂದ ಕಿರುಬೆರಳವರೆಗೆ ಎದುರು ಬದುರಿಗೆ ಬರುವಂತೆ ಕೂಡಿಸುವುದು. ಪ್ರತಿಮಾಶಾಸ್ತ್ರದಲ್ಲಿ ವಂದನೀ ಮುದ್ರೆ, ನಮಸ್ಕಾರ ಮುದ್ರೆ ಎಂದು ಕರೆಯಲಾಗಿದೆ. ಆಂಜನೇಯ, ವೈನತೇಯ, ನಂದಿ-ಭೃಂಗಿ ಮುಂತಾದ ಭಕ್ತವಿಗ್ರಹಗಳಲ್ಲಿ, ಪರಿವಾರದೇವತೆಗಳಲ್ಲಿ ಈ ಹಸ್ತವನ್ನು ಬಳಸಲಾಗಿದೆ. ಇದಕ್ಕೆ [...]

ತ್ರಿಶೂಲ ಹಸ್ತ

Monday, August 15th, 2011
ತ್ರಿಶೂಲ ಹಸ್ತ

ಲಕ್ಷಣ: ಹೆಬ್ಬೆರಳು ಮತ್ತು ಕಿರುಬೆರಳನ್ನು ಮಡಿಸಿ ಕೂಡಿಸಿ ಮಧ್ಯದ ಮೂರು ಬೆರಳನ್ನು ನೀಡಿದರೆ ತ್ರಿಶೂಲಹಸ್ತ. ತ್ರಿಶೂಲ ಎಂದರೆ ಈಶ್ವರನ ಆಯುಧ. ಈ ಹಸ್ತವನ್ನು ಬಾಲರಾಮ ಭರತವೆಂಬ ಗ್ರಂಥದಲ್ಲಿ ಪುರೋನ್ನತ ಅಥವಾ ಪುರಾಣೋನ್ನತ ಹಸ್ತ ಎಂದು ಕರೆಯಲಾಗಿದೆ. ನಾಟ್ಯಶಾಸ್ತ್ರವನ್ನೂ ಒಳಗೊಂಡಂತೆ ಬೇರೆ ಯಾವ ಲಕ್ಷಣಗ್ರಂಥಗಳಲ್ಲಿ ಈ ಹೆಸರಿನ ಹಸ್ತವಿಲ್ಲ. ಆದ್ದರಿಂದಲೇ ಏನೋ ಈ ಹಸ್ತಕ್ಕೆ ಜನ್ಮ, ವರ್ಣ, ಋಷಿ ಇತ್ಯಾದಿಗಳ ಪ್ರಸ್ತಾಪ ಕಂಡುಬಂದಿಲ್ಲ.

ಯೋಗದ ಚಿಕಿತ್ಸಾ ಮುದ್ರೆಗಳ ಪೈಕಿ ವರುಣ ಮುದ್ರೆ ಅಥವಾ ಭುಧಿ ಮುದ್ರೆಯು ತ್ರಿಶೂಲ ಹಸ್ತದಂತಿದ್ದು; ಅಂಗೈ [...]

ತಾಮ್ರಚೂಡ ಹಸ್ತ

Wednesday, June 15th, 2011
ತಾಮ್ರಚೂಡ ಹಸ್ತ

ತಾಮ್ರಚೂಡ ಎಂದರೆ ಕೋಳಿ ಎಂದರ್ಥ. ಇದು ಮಿಶ್ರಹಸ್ತ ಪ್ರಕಾರಕ್ಕೆ ಸೇರಿದ್ದು. ಅಭಿನಯದರ್ಪಣದ ಪ್ರಕಾರ ಲಕ್ಷಣ: ಮಧ್ಯ ಮತ್ತು ಹೆಬ್ಬೆರಳ ತುದಿಯನ್ನು ಕೂಡಿಸಿ ತೋರುಬೆರಳನ್ನು ಬಾಗಿಸಬೇಕು. ಉಳಿದ ಉಂಗುರ ಮತ್ತು ಕಿರುಬೆರಳನ್ನು ಅಂಗೈ ತಳದಲ್ಲಿ ಮಡಿಸಿ ಹಿಡಿಯಬೇಕು. ಸಾರಸಂಗ್ರಹದ ಪ್ರಕಾರ ಹೆಬ್ಬೆರಳು ಕಿರುಬೆರಳನ್ನು ಕೂಡಿಸಿ ಉಳಿದ ಮೂರು ಬೆರಳನ್ನು, ನೀಡಿ ಹಿಡಿಯಬೇಕು. ಸಂಗೀತ ರತ್ನಾಕರದಲ್ಲಿ ಈ ಹಸ್ತಕ್ಕೆ ಎರಡೂ ಲಕ್ಷಣಗಳಿವೆ. ಹಸ್ತ ಮುಕ್ತಾವಳಿ ಮತ್ತು ಸಂಗೀತ ರತ್ನಾಕರದಲ್ಲಿ ಮಧ್ಯ ಮತ್ತು ಹೆಬ್ಬೆರಳನ್ನು ಮಾತ್ರ ಸೇರಿಸಿ ತೋರು ಮತ್ತು ಕಿರುಬೆರಳನ್ನು [...]

ಮುಕುಳ ಹಸ್ತ

Thursday, April 14th, 2011
ಮುಕುಳ ಹಸ್ತ

ಲಕ್ಷಣ: ಎಲ್ಲ ಬೆರಳುಗಳ ತುದಿಯನ್ನು ಕೂಡಿಸುವುದು. ಮುಕುಳ ಎಂದರೆ ಮೊಗ್ಗು ಎಂದರ್ಥ. ಹಸ್ತ ಮುಕ್ತಾವಳಿಯಲ್ಲಿ ಇದೇ ಹಸ್ತವನ್ನು ಬಹುಮಟ್ಟಿಗೆ ಹೋಲುವ ಘೋರ್ಣಿಕ ಎಂಬ ಹಸ್ತವಿದೆ. ಅಲ್ಲಿ ವಿವರಿಸಲಾದ ಮುಕುಲವು ಕೂಡಾ ಇದೇ ಲಕ್ಷಣಗಳನ್ನು ಹೊಂದಿದ್ದು ಮೇಲ್ಮುಖಕ್ಕೆ ಚಾಚಬೇಕೆಂದಿದೆ. ಮಾರುತಿಯು ಸೂರ್ಯನನ್ನು ಬಿಂಬಾಫಲವೆಂದು ತಿಳಿದು ಹಿಡಿಯಲೆತ್ನಿಸಿದಾಗ ಉಂಟಾದ ಹಸ್ತ. ಸಂಕೀರ್ಣ ವರ್ಣ, ಕಪಿಲ ಅಂದರೆ ತಿಳಿ ಬೂದು ಬಣ್ಣ, ಋಷಿ : ವಿಷಖಿಲ, ಅಧಿದೇವತೆ : ಚಂದ್ರ.

ಶಾಸ್ತ್ರೀಯ ಮುದ್ರೆಗಳ ಪೈಕಿ ಸತ್ಯ ಮುದ್ರಾ ಎಂಬ ಮುದ್ರೆಯು ಎಲ್ಲ ಬೆರಳುಗಳ [...]

ಸಂದಂಶ ಹಸ್ತ

Monday, February 14th, 2011
ಸಂದಂಶ ಹಸ್ತ

ಲಕ್ಷಣ: ಪದ್ಮಕೋಶಹಸ್ತವನ್ನು ಮತ್ತೆ ಮತ್ತೆ ಸಂಕೋಚಗೊಳಿಸುತ್ತಾ ವಿಕಾಸಗೊಳಿಸುತ್ತಿದ್ದರೆ ಸಂದಂಶಹಸ್ತ. ಸಂದಂಶ ಎಂದರೆ ಇಕ್ಕಳ ಎಂದರ್ಥ. ಹಸ್ತ ಮುಕ್ತಾವಳಿ, ನಾಟ್ಯಶಾಸ್ತ್ರದಲ್ಲಿ ಇಂತಹ ಸಂಕುಚನ, ವಿಕಸನಗಳಿಲ್ಲದೆ ಹಾಗೇ ಹಿಡಿಯಲಾಗುತ್ತದೆ. ಪ್ರತಿಮಾಶಾಸ್ತ್ರದಲ್ಲಿ ಇದನ್ನು ಸಿಂಹಕರ್ಣ, ಚಿನ್ಮುದ್ರ, ವ್ಯಾಖ್ಯಾನಮುದ್ರೆಗಳೆಂದು ಕರೆಯುವ ರೂಢಿಯಿದೆ. ಇದು ಪುರುಷಹಸ್ತ ಪ್ರಕಾರಕ್ಕೆ ಸೇರಿದ್ದು.
ಸರಸ್ವತೀದೇವಿಯು ಅಕ್ಷಮಾಲೆ ಹಿಡಿದಾಗ ಜನಿಸಿದ ಹಸ್ತ. ವಿದ್ಯಾಧರ ವರ್ಣ, ಶ್ವೇತ ಬಣ್ಣ, ಋಷಿ : ವಿಶ್ವಾವಸು, ಅಧಿದೇವತೆ : ವಾಲ್ಮೀಕಿ.
ವಿನಿಯೋಗ : ಹೊಟ್ಟೆ, ಬಲಿ (ದಾನ) ಕೊಡುವುದು, ಹುಣ್ಣು, ಹುಳ, ಮನೋಭಯ, ಪೂಜೆ ಮಾಡುವುದು, ಐದು [...]

ಹಂಸಪಕ್ಷ ಹಸ್ತ

Tuesday, December 14th, 2010
ಹಂಸಪಕ್ಷ ಹಸ್ತ

ಲಕ್ಷಣ: ಮಧ್ಯದ ಮೂರು ಬೆರಳುಗಳನ್ನು ಸಮನಾಗಿ ನೀಡಿ ಕಿರುಬೆರಳನ್ನು ದೂರ ಚಾಚಬೇಕು. ಹೆಬ್ಬೆರಳನ್ನು ಸ್ವಲ್ಪ ಬಗ್ಗಿಸಿ ಹಿಡಿಯಬೇಕು. ಹಂಸಪಕ್ಷ ಎಂದರೆ ಹಂಸದ ರೆಕ್ಕೆ ಎಂದರ್ಥ. ಇದು ಸ್ತ್ರೀ ಹಸ್ತ ಪ್ರಕಾರಕ್ಕೆ ಸೇರಿದ್ದು.
ತಂಡು ಮಹರ್ಷಿ ತಾಂಡವವನ್ನು ಕಲಿಯುವಾಗ ಪ್ರಯೋಗಿಸಿದ ಹಸ್ತವಿದು. ಅಪ್ಸರ ವರ್ಣ, ಶ್ಯಾಮಲ ಬಣ್ಣ, ಋಷಿ : ಭಾರತಿ, ಅಧಿದೇವತೆ : ಪಂಚಸಾಯಕ ( ಮನ್ಮಥ).
ವಿನಿಯೋಗ: ಆರು ಎಂಬ ಸಂಖ್ಯಾ ಸೂಚನೆ, ಸೇತುವೆ ಕಟ್ಟುವುದು, ಉಗುರಿನಿಂದಾದ ಗುರುತು, ಬೊಕ್ಕಸ, ಸಂಪತ್ತು, ಕಾಯ್ದು ಇರುವುದು.
ಇತರೇ ವಿನಿಯೋಗ : ನೀರು [...]

ಹಂಸಾಸ್ಯ ಹಸ್ತ

Friday, October 15th, 2010
ಹಂಸಾಸ್ಯ ಹಸ್ತ

ಲಕ್ಷಣ: ತೋರು ಮತ್ತು ಹೆಬ್ಬೆರಳ ತುದಿ ಸೇರಿಸಿ ಉಳಿದ ಮೂರು ಬೆರಳುಗಳನ್ನು ದೂರದೂರವಾಗಿ ನೀಡಿದಾಗ ಹಂಸಾಸ್ಯ. ಹಂಸಾಸ್ಯ ಎಂದರೆ ಹಂಸದ ಮುಖ ಎಂದರ್ಥ. ನಾಟ್ಯ ಶಾಸ್ತ್ರದಲ್ಲಿ ಹಂಸವಕ್ತ್ರ ಎಂದು ಹೆಸರು. ಹಸ್ತ ಮುಕ್ತಾವಳಿಯಲ್ಲಿ ತೋರು, ಹೆಬ್ಬೆರಳು, ಮಧ್ಯ ಬೆರಳನ್ನು ಸೇರಿಸಿ ಕಟಕಾಮುಖದಂತೆ ಹಿಡಿಯುವುದು ಕ್ರಮ. ಇದೇ ಕ್ರಮ ನಾಟ್ಯಶಾಸ್ತ್ರದಲ್ಲೂ ಇದ್ದು, ಬೆರಳುಗಳು ಒಂದನ್ನೊಂದು ಮುಟ್ಟದಂತೆ ವಿರಳವಾಗಿರಬೇಕು.
ದಕ್ಷಿಣಾಮೂರ್ತಿ ಸ್ವಾಮಿಯು ತತ್ವಪದ್ಧತಿಯನ್ನು ಋಷಿ-ಮುನಿಗಳಿಗೆ ನ್ಯಗ್ರೋಧ ವೃಕ್ಷದಡಿಯಲ್ಲಿ ಕುಳಿತು ಹೇಳಿಕೊಡುವಾಗ ಉಂಟಾದ ಹಸ್ತವಿದು. ಬ್ರಾಹ್ಮಣ ವರ್ಣ, ಶ್ವೇತ ಬಣ್ಣ, ಋಷಿ : [...]

ಭ್ರಮರ ಹಸ್ತ

Sunday, August 15th, 2010
ಭ್ರಮರ ಹಸ್ತ

ಲಕ್ಷಣ: ಮಧ್ಯ ಮತ್ತು ಹೆಬ್ಬೆರಳುಗಳ ತುದಿಯನ್ನು ಕೂಡಿಸಿ ತೋರುಬೆರಳನ್ನು ಒಳಗೆ ಬಾಗಿಸಬೇಕು. ನಂತರ ಉಳಿದ ತೋರು, ಕಿರುಬೆರಳನ್ನು ನೀಡಬೇಕು. ಭ್ರಮರ ಎಂದರೆ ದುಂಬಿ ಎಂದರ್ಥ. ನಾಟ್ಯಶಾಸ್ತ್ರದಲ್ಲಿ ಹೆಬ್ಬೆರಳು ಮಧ್ಯದ ತುದಿಯನ್ನು ಮುಟ್ಟಿ ಕಿರು ಬೆರಳು ವಕ್ರವಾಗಿ, ಮಿಕ್ಕೆರಡು ಬೆರಳುಗಳು ಚಾಚಲ್ಪಡಬೇಕು. ಹಸ್ತ ಮುಕ್ತಾವಳಿಯಲ್ಲಿ ಹೆಬ್ಬೆರಳು ಮತ್ತು ಮಧ್ಯದ ಬೆರಳನ್ನು ಸೇರಿಸಿ ಉಳಿದ ಬೆರಳನ್ನು ನಿಡಿದಾಗಿ ಹಿಡಿಯಬೇಕು. ಇದೇ ಹಸ್ತವನ್ನು ಮತ್ತೊಂದು ಬಾರಿ ಪ್ರತ್ಯೇಕ ಹಸ್ತವಾಗಿ ಪರಿಗಣಿಸಿ ಚಲನ ಮಧುಕರವೆಂದು ಕರೆಯಲಾಗಿದ್ದು, ಅದರಲ್ಲಿ ಹೆಬ್ಬೆರಳು ಮತ್ತು ಮಧ್ಯದ ಬೆರಳನ್ನು [...]

ಚತುರ ಹಸ್ತ

Thursday, June 17th, 2010
ಚತುರ ಹಸ್ತ

ಲಕ್ಷಣ: ತೋರು, ಮಧ್ಯಮ ಮತ್ತು ಉಂಗುರ ಬೆರಳುಗಳನ್ನು ಜೋಡಿಸಿ ಕಿರುಬೆರಳನ್ನು ಹೊರಕ್ಕೆ ಚಾಚಿ ಹೆಬ್ಬೆರಳ ತುದಿಯನ್ನು ಉಂಗುರ ಬೆರಳಿನ ಮೂಲದಲ್ಲಿ ಮುಟ್ಟಿಸಿ ಹಿಡಿಯುವುದು. ಚತುರ ಎಂದರೆ ಚಾತುರ್ಯವುಳ್ಳವನು ಎಂದರ್ಥ. ಚಾತುರ್ಯವನ್ನು ಸೂಚಿಸುವುದರಿಂದ ಅಥವಾ ನಾಲ್ಕು ಬೆರಳುಗಳ ಸಂಯೋಗವಿರುವುದರಿಂದ ಈ ಹೆಸರು ಬಂದಿರಬಹುದು. ಹಸ್ತ ಮುಕ್ತಾವಳಿ, ನಾಟ್ಯಶಾಸ್ತ್ರದ ಲಕ್ಷಣದಲ್ಲಿ ಕೊಂಚ ಭಿನ್ನತೆಯಿದ್ದು ಹೆಬ್ಬೆರಳನ್ನು ಮಧ್ಯಬೆರಳಿನ ಅಡಿಗೆ ಬರುವಂತೆ ಮುಟ್ಟಿಸಲಾಗುವುದು.
ಗರುಡನು ಅಮೃತವನ್ನು ಕದಿಯುವಾಗ ಕಶ್ಯಪನು ದಾರಿ ತೋರಿಸಿದ್ದು ಇದೇ ಹಸ್ತದಿಂದ. ಮಿಶ್ರ [...]