ಖಂಡಿತಾ ನಾಯಿಕೆ
Thursday, December 15th, 2011(ಕಳೆದ ಸಂಚಿಕೆಯಿಂದ ಮುಂದುವರೆದುದು…)
ಕಾಯುತ್ತಾ ಕಂಗೆಟ್ಟ ನಾಯಕಿಯ ಮನಸ್ಸು ಹದಗೆಡುತ್ತಿರುವಾಗ ಬರುವ ನಾಯಕನನ್ನು ಕಂಡು ಆತನು ಅನ್ಯಾಸಕ್ತನೆಂದು ಆರೋಪಿಸಿಯೋ, ಅನುಮಾನಿಸಿಯೋ; ಇಲ್ಲವೇ ಆತನು ಮತ್ತೋರ್ವ ಸ್ತ್ರೀಯೊಡನೆ ಇರುವುದನ್ನು ತಿಳಿದೋ ತೀವ್ರವಾಗಿ ಆಘಾತಗೊಂಡು ಖಂಡಿಸುವ ನಾಯಿಕೆ ಖಂಡಿತೆ. ನಾಯಕನಲ್ಲಿರುವ ನಿರುತ್ಸಾಹ, ಖಿನ್ನತೆ, ನಿದ್ರೆ, ಆಲಸ್ಯ, ಇನ್ನೊಬ್ಬಳೊಡನೆ ಇಲ್ಲವೇ ಸವತಿಯ ಜೊತೆ ಸರಸವಾಗಿ ವರ್ತಿಸಿದ ಕುರುಹುಗಳು, ಅಂಗವಿಕಾರ, ಪರಸ್ತ್ರೀಯನ್ನು ಅತಿಯಾಗಿ ಓಲೈಕೆ ಮಾಡುತ್ತಿರುವುದೋ ಕಂಡು ವಂಚಕನೆಂದು ಕುದಿದು ಮನಸ್ಸು ಕೆಡಿಸಿಕೊಂಡು ಸಂಘರ್ಷಕ್ಕಿಳಿಯುತ್ತಾಳೆ. ತನ್ನ ಸ್ವಭಾವಕ್ಕೆ ಸಹಕರಿಸದಂತಿರುವ ಆತನ ವಿಪರೀತ ಸ್ವಭಾವಕ್ಕೆ ಜಗಳಕ್ಕಿಳಿಯುತ್ತಾಳೆ; [...]



