: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ಲಲಿತ ಲಹರಿ

ಖಂಡಿತಾ ನಾಯಿಕೆ
(ಕಳೆದ ಸಂಚಿಕೆಯಿಂದ ಮುಂದುವರೆದುದು…)

ಕಾಯುತ್ತಾ ಕಂಗೆಟ್ಟ ನಾಯಕಿಯ ಮನಸ್ಸು ಹದಗೆಡುತ್ತಿರುವಾಗ ಬರುವ ನಾಯಕನನ್ನು ಕಂಡು ಆತನು ಅನ್ಯಾಸಕ್ತನೆಂದು ಆರೋಪಿಸಿಯೋ, ಅನುಮಾನಿಸಿಯೋ; ಇಲ್ಲವೇ ಆತನು ಮತ್ತೋರ್ವ ಸ್ತ್ರೀಯೊಡನೆ ಇರುವುದನ್ನು ತಿಳಿದೋ ತೀವ್ರವಾಗಿ ಆಘಾತಗೊಂಡು ಖಂಡಿಸುವ ನಾಯಿಕೆ ಖಂಡಿತೆ. ನಾಯಕನಲ್ಲಿರುವ ನಿರುತ್ಸಾಹ, ಖಿನ್ನತೆ, ನಿದ್ರೆ, ಆಲಸ್ಯ, ಇನ್ನೊಬ್ಬಳೊಡನೆ ಇಲ್ಲವೇ ಸವತಿಯ ಜೊತೆ ಸರಸವಾಗಿ ವರ್ತಿಸಿದ ಕುರುಹುಗಳು, ಅಂಗವಿಕಾರ, ಪರಸ್ತ್ರೀಯನ್ನು ಅತಿಯಾಗಿ ಓಲೈಕೆ ಮಾಡುತ್ತಿರುವುದೋ ಕಂಡು ವಂಚಕನೆಂದು ಕುದಿದು ಮನಸ್ಸು ಕೆಡಿಸಿಕೊಂಡು ಸಂಘರ್ಷಕ್ಕಿಳಿಯುತ್ತಾಳೆ. ತನ್ನ ಸ್ವಭಾವಕ್ಕೆ ಸಹಕರಿಸದಂತಿರುವ ಆತನ ವಿಪರೀತ ಸ್ವಭಾವಕ್ಕೆ ಜಗಳಕ್ಕಿಳಿಯುತ್ತಾಳೆ; ತನ್ನ ಪ್ರೇಮಕ್ಕೆ ಇಂಥ ವಿಶ್ವಾಸಘಾತಕನು ಅರ್ಹನಲ್ಲವೆಂದು ನಿಷ್ಠುರವಾಗಿ ವರ್ತಿಸುತ್ತಾಳೆ; ನೋಟದಿಂದ, ಮಾತಿನಿಂದ ತಿವಿಯುತ್ತಾಳೆ. ಈಕೆ ನಾಯಕನನ್ನು ಹೊರಟುಹೋಗುವಂತೆ ಆದೇಶಿಸುವ ಈಕೆಯ ಸಂಚಾರಿ ಭಾವಗಳು ಅಳು, ಗರ್ವ, ಅಲಕ್ಷ್ಯ, ಆಕ್ಷೇಪಣೆ, ದೂಷಣೆ, ಹೆದರಿಸುವುದು, ಹೊಡೆಯುವುದು, ಗೊಂದಲ, ಮೌನ, ವ್ಯಥೆ, ಅಸಹ್ಯ, ಅಸೂಯೆ, ಧಿಕ್ಕರಿಸುವಿಕೆ, ಅಪ್ರಿಯತೆ, ಕ್ರೋಧ ಇತ್ಯಾದಿ.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು. ಉತ್ತಮ ಖಂಡಿತೆಯಲ್ಲಿ ಲಘುವಾದ ಕೋಪವಿದ್ದರೆ; ಮಧ್ಯಮಳದ್ದು ಕಾಂತನ ತಪ್ಪಿಗೆ ಅನುಸಾರವಾದ ಅಷ್ಟೇ ಗಾಢ ಕೋಪ; ಅಧಮಳದ್ದು ಅತಿಶಯ ಕೋಪ. ಇದರೊಂದಿಗೆ ಇತರೆ ನಾಯಿಕಾಬೇಧಗಳಾದ ಧೀರಾ, ಅಧೀರಾ, ವಕ್ರೋಕ್ತಿಗರ್ವಿತಾಗಳ ಲಕ್ಷಣಗಳಲ್ಲೂ ಈಕೆಯ ಅವಸ್ಥೆಗಳನ್ನು ವಿಭಾಗಿಸಬಹುದು.

ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿದ್ದು; ಸುಮಾರು ೫೦,೨೨೦ರಷ್ಟು ನಾಯಿಕಾಬೇಧಗಳಿವೆ ಎಂದಿದ್ದಾರೆ ಪ್ರಾಜ್ಞರು!! ಒಟ್ಟಿನಲ್ಲಿ ನಾಯಿಕೆಯ ಸಂಸ್ಕಾರ-ವಯಸ್ಸು-ಸಾಮಾಜಿಕಸ್ಥಾನಮಾನ-ಸೌಶೀಲ್ಯದಿಂದ ಆಕೆಯ ವರ್ತನೆ ಮೃದುವೋ, ಕಟುವೋ, ಮಧ್ಯಮವೋ ಎಂಬುದು ನಿರ್ಧಾರವಾಗುತ್ತದೆ.

ಇಲ್ಲಿ ನೀಡಲಾಗಿರುವ ಶತಾವಧಾನಿ ಡಾ. ಗಣೇಶರ ಕಾವ್ಯ ಮತ್ತು ಮಂಟಪರ ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ಧಾರವಾಡ ಆಕಾಶವಾಣಿಯ ಉದ್ಯೋಗಿ, ಕವಿ, ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ. ಶರದ್ ಋತುವಿನಿಂದಾರಂಭಿಸಿ ಗ್ರೀಷ್ಮ ಋತುವಿನವರೆಗೆ ಭೂಮಿಯ ಮೇಲ್ಮೈಯಲ್ಲಾಗುವ ಬದಲಾವಣೆಗಳನ್ನೇ ನಾಯಿಕೆಯ ಅವಸ್ಥೆಗಳನ್ನಾಗಿಸಿ ಚಿತ್ರಿಸುವ ಕಾವ್ಯದಲ್ಲಿ ‘ಮೇದಿನಿ’ ಅಷ್ಟನಾಯಿಕಾ ಭಾವದಲ್ಲಿ ಮೇಘನಿಗಾಗಿ ಕಾಯುತ್ತಾಳೆ. ಭಾವಕ್ಕೆ ಒತ್ತಾಸೆಯಾಗಿ ನಿಲ್ಲುವ ಲಯಲಾಲಿತ್ಯ ಕಾವ್ಯಕ್ಕೆ ಹದ ನೀಡುವ ಪದಮೈತ್ರಿ ಇದರ ವಿಶೇಷ.

ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ನಿಮ್ಮ ಕಲ್ಪನೆ-ಚಿಂತನೆಗಳಿಗೆ ಇದು ಮುಕ್ತ ವೇದಿಕೆಯಾಗಲಿ.

ಭಾಮಿನೀ

- ಶತಾವಧಾನಿ ಡಾ. ಆರ್. ಗಣೇಶ್

ರಾಗ ಅಠಾಣ : ಚಂಪಕಮಾಲಾ ವೃತ್ತ

ವಿರಹವಿದೀರ್ಣೆಯಂ ಸ್ಮರಶರಪ್ರಖರಪ್ರಕಟಪ್ರಹಾರದಿಂ

ನರಳುವ ನಲ್ಲೆಯಂ ರಜನಿಯಂತ್ಯದ ಮುನ್ನಮದೆಂತೊ ಧೂರ್ತತಾ

ವಿರಚನೆಯಿಂದೆ ತುಯ್ದು ತನುವಂ ಮನಮಂ ಮಿಗೆ ಕುಂಚಿಸುತ್ತೆ ಬಂ

ದಿರೆ ಶಮಿಸಲ್ಕೆ ಸಿರ್ರನವನೊಳ್ ಮುನಿದೇಳ್ವಳಡರ್ದು ಖಂಡಿತೆ ||

(ವಿರಹಿಣಿಯಾದ ಪತ್ನಿಯತ್ತ ಅಳುಕುತ್ತ ಬಂದ ಶಂಕಿತನಾದ ನಾಯಕನನ್ನು ಕಂಡು ಅವನಲ್ಲಿ ಸಿಡಿದು ಮುನಿದೇಳುವ ನಾಯಿಕೆಯೇ ಖಂಡಿತೆಯೆನಿಸುತ್ತಾಳೆ.)

ರಾಗ ಬಿಲಹರಿ – ಅಷ್ಟ, ಏಕ, ತ್ರಿಪುಟ ತಾಳಗಳು

ನೆನಪಾಯಿತೇ? ಈಗ ಮನವಾಯಿತೇ?

ಅನುಕೂಲದಾಂಪತ್ಯ ಬೇಕಾಯಿತೇ? ||ಪ||

ಅನುರಾಗವತಿಯರು ಅನುಗಾಲ ನಿಮಗಿರ

ಲೆನಗಾಗಿ ಬರುವಂಥ ಶ್ರಮವೇತಕೆ? ವಿಭ್ರಮವೇತಕೆ? || ಅ.ಪ||

ಹಾದಿ ತಪ್ಪಿದರೇನು? ಹಾವ-ಭಾವಗಳೇನು ?

ಸಾಧು-ಸಜ್ಜನಿಕೆಯು ಸಾಕಿನ್ನು |

ಆ ದಿನಗಳ ರಸಮೋದಗಳೆಲ್ಲವ

ನಾದಿನೀಗಿದಿರಿಂದು ನಗಲೇನು ? ||

ಕನ್ನಡಿ ತರಲೇ? ಕಯ್ಯೊಳೆ ತೋರಲೆ ?

ಇನ್ನೀ ನಿಮ್ಮಯ ಚಾತುರಿಗೆ |

ಮನ್ನಿಸೆ ನಾನು- ಭಿನ್ನಿಸೆ ನೀವು

ಬಿನ್ನಾಣವಿದೇ ಸಿರಿದೊರೆಗೆ ||

ನಿನ್ನ ನಂಬಿದ ನನ್ನನೀ ಪರಿ

ಚಿಮ್ಮಿ ಚೆಲ್ಲಿದ ಚಮತ್ಕೃತಿಯೋ |

ಹಮ್ಮಿನಾಕೆಯು ಬಳಸಿ ಬಿಸುಟೀ

ನೆಮ್ಮಲಾಗದ ಪುರಸ್ಕೃತಿಯೋ ||

ಮೇಘಮೇದಿನಿ

- ದಿವಾಕರ ಹೆಗಡೆ, ಧಾರವಾಡ

ಬಾರದೆಲ್ಲಿಗೆ ಪೋದ ಮಾರ ರೂಪದ ಮೋದ |

ಕಾರಣವೇನೀಗ ಸಾರಸ ಗುಣ ಶೋಧ |

ಯಾರ ಕಣ್ಣಂಚಲಿ ಮಿಂಚು ಹೊಳೆಯಿತೊ ಕಾಣೆ |

ಯಾರ ಮಂಚದಿ ಗುಡುಗು ಅಡಗಿರಬಹುದೋ |

ದೂರದಂಚಲಿ ನಿಂತು ವಂಚನೆಗೈವನೆ |

ನೂರು ಸಂಚಿನ ನೀರ ದೂರಾಗು ನೀಬೇಡ ||

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

…ಭಾರವಾದ ಎದೆಯ ಬಡಿತ. ನಿದ್ರೆಯೇ ನನ್ನ ಪಾಲಿನ ಸಂಜೀವಿನಿ ಎಂದು ನಿದ್ರೆ ಮಾಡಲು ಕಣ್ಣು ಮುಚ್ಚಿದೆ. ಸುತ್ತಲಿನ ಪ್ರಪಂಚ ನನ್ನನ್ನು ಯಾಕೆ ನುಂಗಬಾರದು ಎಂದು ಕಣ್ಣು ಬಿಟ್ಟು ನೋಡಿದೆ. ಊರಿನಿಂದ ಬಹಿಷ್ಕಾರ ಹಾಕಿ ಎಲ್ಲರೂ ಊರ ಹೊರಗೆ ಹಾಕಿದವಳಂತೆ ಅನ್ನಿಸಿತು. ಯಾರೂ ನನ್ನ ಜೊತೆ ಇಲ್ಲವೇ ಎಂಬ ನನ್ನ ಹೃದಯದ ಕೂಗಿಗೆ ಆಗಲೇ ಪರಿಚಿತಧ್ವನಿಯ ಸೇರ್ಪಡೆ. ಅದೇ ಗಾಡಿಯ ಸಪ್ಪಳ. ಇದರ ಲಯವನ್ನು ಗಮನಿಸಿದಾಗ ಅದು ನನ್ನವನದ್ದೇ. ಸಪ್ಪಳದ ಧ್ವನಿ ಏರಿದಂತೆ ನನ್ನ ಹೃದಯದ ಬಡಿತವೂ ಅದಕ್ಕೆ ಸೇರಿಕೊಂಡಿತು. ನಾನೂ ಸಪ್ಪಳದ ದಾರಿ ಹಿಡಿದೆ. ದೂರದಲ್ಲಿ ಮಸುಕಬೆಳಕಿನಲ್ಲಿ ಗಾಡಿ ನೋಡಿದೆ. ಗಾಡಿಗೆ ಕಟ್ಟಿದ ದೀಪ ಆರಿಸಿಲ್ಲವಾಗಿತ್ತು. ಸ್ವಲ್ಪದೂರದಲ್ಲೇ ಗಾಡಿ ನಿಂತಿತ್ತು. ಇನ್ಯಾರೋ ಗಾಡಿಯಲ್ಲಿ ಇರುವಂತೆ ಕಂಡಿತು. ಯಾರೆಂದು ತಿಳಿಯದಿದ್ದರೂ ಹೆಣ್ಣೆಂದು ತಿಳಿಯಿತು. ನಿರಾಸೆ ಆಯ್ತು. ನನ್ನವನ ಗಾಡಿ ಅಲ್ಲ ಎಂದು ತಿರುಗುವಾಗ ನನ್ನವನ ಧ್ವನಿ ಕೇಳಿಸಿತು. ಮತ್ತೆ ತಿರುಗಿ ಆಲಿಸಿದೆ. ದಿಟ್ಟಿಸಿದೆ. ಗರಬಡಿದು ನಿಂತೆ.

ನನ್ನವನು ಗಾಡಿಯಿಂದ ಸಲುಗೆಯಲ್ಲಿ ಆಕೆಯ ಕೈಹಿಡಿದು ಇಳಿಸುತ್ತಿದ್ದ. ಏನೇನೋ ಸಾಂತ್ವನ-ಮುದ್ದು ಮಾತುಗಳಿಂದ ಹರಟೆ ಹೊಡೆಯುತ್ತಿದ್ದ. ನನಗಂತೂ ಆಕೆ ಅಪರಿಚಿತಳು. ಆಕೆಯೋ ನನ್ನ ನಲ್ಲನ ಸಲುಗೆಯನ್ನು ಹಕ್ಕಿನಿಂದ ಪಡೆಯುತ್ತಿದ್ದಳು. ನನಗಾಗಲೇ ಮೈಯ್ಯೆಲ್ಲಾ ಕಾದಿತ್ತು. ಹಲ್ಲುಗಳನ್ನು ಕಡಿದುಕೊಂಡೆ. ಹಲ್ಲು ಪುಡಿಯಾಗದೇ ಇದ್ದದ್ದು ನನ್ನ ಪುಣ್ಯ. ನನ್ನ ನಂಬಿಕೆಯೇ ಸುಳ್ಳಾಯ್ತು. ನಾನೊಬ್ಬಳೇ ರತಿ ಎನ್ನುತ್ತಿದ್ದ ಆತನ ಮಾತು ನನ್ನ ಪಾಲಿಗೆ ಅಸಹ್ಯವಾಗಿ ಚುಚ್ಚಿತು. ಆತನಿಗಾಗಿ ನಾನು ಪಟ್ಟ ಶ್ರಮವೆಲ್ಲಾ ವ್ಯರ್ಥವೆನಿಸಿ ನನ್ನ ಹತಾಶೆಯ ವಿರಹದಿಂದ ಶಕ್ತಿಗುಂದಿದ ನನ್ನಲ್ಲಿ ಕೋಪದ್ವೇಷಗಳು ಸೇರಿ ಶಕ್ತಿವಂತಳಾಗಿ ಸೆಟೆದು ನಿಂತೆ. ನನ್ನ ಸಿಟ್ಟಿನ ಅವತಾರವನ್ನು ಪ್ರದರ್ಶಿಸಬೇಕೆಂದು ಆತನ ಬಳಿಗೆ ಹೊರಟೆ. ಆದರೆ ಇನ್ನೊಂದು ಹೆಣ್ಣಿನ ಬಲ ಇರುವ ಆತನಲ್ಲಿ ನನ್ನ ಕೋಪಕ್ಕೆ ಬೆಲೆ ಇರದು ಎಂಬ ವಿವೇಕದಿಂದ ಹಿಂದೆ ಸರಿದೆ.

ಕೈಕೈ ಹಿಸುಕಿಕೊಂಡೆ. ನನ್ನ ತಲೆಗೆ ಏನೂ ಹೊಳೆಯಲಿಲ್ಲ. ಆತನಿಗಾಗಿ ತಂದ ಹೂಮಾಲೆಯನ್ನು ಹರಿದು ಬಿಸುಟೆ. ನನಗೇ ಸಲ್ಲಬೇಕಾದ ಎಲ್ಲವೂ ನಾಚಿಗೆಗೆಟ್ಟವಳಿಗೆ ಸಿಗುವುದನ್ನು ಕಂಡು ನಾನು ಎಚ್ಚರವಾಗಿರಬೇಕೆಂದು ಜಾಗೃತಳಾದೆ. ನನ್ನ ವಿರೋಧ ಇಲ್ಲಿ ಅನುಕೂಲ ಅಲ್ಲ. ಹೀಗೆ ಮುಂದುವರಿದರೆ ನನ್ನ ಸ್ಥಾನಕ್ಕೂ ಸ್ಥಳಕ್ಕೂ ಸಂಚಕಾರ ಬಂದೀತೆಂದು ನನ್ನ ಮನೆ ಸೇರಲು ಹೊರಟೆ. ನನಗೇ ಸೇರಿದ ಮನೆಗೆ ಇನ್ನಾರೂ ಬರಕೂಡದು ಎಂದು ಬುಸುಗುಡುತ್ತಾ ಬಾಗಿಲು ಜಡಿದೆ. ಬರುತ್ತಲೇ ರಂಗವಲ್ಲಿಯನ್ನು ತುಳಿದೆ. ಓರಣವಾಗಿರುವ ಮನೆಯು ನನ್ನನ್ನು ನೋಡಿ ಅಣಕಿಸುವಂತಾಯ್ತು. ಎಲ್ಲವುಗಳ ಮೇಲೆ ನನ್ನ ರೌದ್ರವತಾರದ ದರ್ಶನ ಆಯ್ತು. ನನ್ನ ಕೋಪ ಮಾತ್ರ ಇಳಿಯಲೇ ಇಲ್ಲ.

ಆಗಲೇ ಬಾಗಿಲು ಬಡಿದ ಸದ್ದಾಯ್ತು. ಅದೂ ಒಳ್ಳೆಯ ಲಯಬದ್ಧ, ನಯವಾದ ಸದ್ದಿನೊಂದಿಗೆ. ನನ್ನ ಕಿವಿಗೆ ಮಾತ್ರ ಕರ್ಕಶವಾಗಿತ್ತು. ಸಹಿಸಲಾರದೆ ಬಾಗಿಲು ತೆರೆದೆ. ಅವನೇ ಪತಿರಾಯ ನಗುಮೊಗದ ವೇಷದಿಂದ ನನ್ನ ಮೇಲೆ ಬೀಳಲು ಮುಂದಾದ. ಅರ್ಧಕ್ಕೆ ಬಾಗಿಲಿನಿಂದ ನೂಕಿ ತಡೆದು ಇಣುಕಿದೆ. ಆ ಮಾನಗೆಟ್ಟವಳೂ ಇಲ್ಲಿಗೆ ಬಂದಳೇ ಎಂದು. ಸದ್ಯ ಆಕೆ ಎಲ್ಲೂ ಕಾಣಿಸಲಿಲ್ಲ. ದುರುಗುಟ್ಟಿ ಅಸಹ್ಯದಿಂದ-ಸಿಟ್ಟಿನಿಂದ- ತಿರಸ್ಕಾರದಿಂದ ಅವನನ್ನು ಕಂಡೆ. ಯಾವ ಬದಲಾವಣೆಯೂ ಇಲ್ಲದೆ ಮಾನಗೆಟ್ಟವನಂತೆ ಕಂಡ. ತಕ್ಷಣ ಬಾಗಿಲನ್ನು ಬಿಟ್ಟು ಒಳಗೆ ಬಂದೆ. ಆಧಾರ ತಪ್ಪಿ ಆತ ನೆಲದ ಮೇಲೆ ಉರುಳಿದ. ಕ್ಷಣವೂ ಹಿಂದೆ ನೋಡದೆ ಒಳಗೆ ಬಂದೆ.

ನನ್ನ ವರ್ತನೆಯಿಂದ ವಿಚಲಿತನಾಗದೆ ಆತ ನಿಧಾನವಾಗಿ ನನ್ನನ್ನು ರಮಿಸಲು ಮುಂದಾದ. ಅವನಲ್ಲಿ ನನ್ನ ಮಾತೇ ಇಲ್ಲ. ಅವನೋ ನನಗಿಂತ ಜಾಣ. ನನ್ನನ್ನು ಎಲ್ಲೆಲ್ಲಿ ಕೆಣಕಬೇಕೋ ಅಲ್ಲಲ್ಲಿಯೇ ಕೆಣಕುತ್ತಿದ್ದ. ತಲೆಕೆಡಿಸಿಕೊಂಡು ಬುಸುಗುಡುತ್ತಿರುವ ನನ್ನ ತಲೆಬಿಸಿ ತಣಿಸಲು ಮಲ್ಲಿಗೆಯ ಮಾಲೆ ಮುಡಿಸಲು ಮುಂದಾದ. ಪೇಟೆಯಿಂದ ತಂದ ತಂಪಾದ ರೇಷ್ಮೆಸೀರೆಯನ್ನು ಬಿಸಿಯಾದ ನನ್ನ ದೇಹಕ್ಕೆ ಹೊದೆಸಿದ. ಮಂಚದಿಂದ ಇಳಿಬಿಟ್ಟ ನನ್ನ ಕಾಲ್ಗಳಿಗೆ ಬೆಳ್ಳಿಯ ಗೆಜ್ಜೆ ತಾನಾಗಿಯೇ ತೊಡಿಸಿದ. ಆಗೆಲ್ಲ ಹೆಣದಂತೆ ನಟಿಸಿದ ನನ್ನನ್ನು ಕೆಣಕಲು ನನ್ನ ಜಡೆಯನ್ನು ಎಳೆದು ತನ್ನ ರಸಿಕತನದ ಆಟಕ್ಕೆ ಮುಂದಾದ. ನಾನೋ ಮಹಾಕಾಳಿಯಾಗಿಯೇ ಇದ್ದೆ. ನನ್ನ ಆಳದ ಕೋಪ ತಿಳಿದ ಆತ ತನ್ನ ಬಾಹುಗಳಿಂದ ನನ್ನನ್ನು ಆಲಿಂಗಿಸಲು ಮುಂದಾದ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನ ಕೈ ಬೆರಳಿನ ಸ್ಪರ್ಶ ನನ್ನನ್ನು ಬಿಗಿದ ವೀಣೆಯ ತಂತಿಯ ಮೇಲೆ ಬೆರಳಾಡಿಸಿದಾಗ ಉಂಟಾಗುವ ಸ್ವರನಾದಗಳಂತೆ ನನ್ನ ಸಿಟ್ಟು ಇಳಿದೂ ಇಳಿಯದೆ ಹಲವು ಪ್ರಶ್ನೆಗಳನ್ನು ಕೇಳಲು ಮುಂದಾಯ್ತು. ಅಂದರೆ ನಾನು ಮಾತನಾಡಲು ಮುಂದಾದೆ. ನನಗೋ ಉತ್ತರಬೇಕಿಲ್ಲವಾಗಿತ್ತು. ಕೋಪದಿಂದಲೇ ಕೇಳಿದ ಪ್ರಶ್ನೆಗಳು ಆತನ ಪ್ರತ್ಯಭಿನಯದಿಂದ ಪ್ರಶ್ನೆಗಳು ಸೋಲುತ್ತಲೇ ಇದ್ದುವು. ಆದರೂ ಸೋಲು ಕಾಣಿಸದೇ ಆತನನ್ನು ಕೆಣಕುತ್ತಲೇ ಇದ್ದೆ ; ಚುಚ್ಚುತ್ತಲೇ ಇದ್ದೆ.

‘ಏನು ರಾಯರೇ, ತಮ್ಮ ಸವಾರಿ ದಾರಿತಪ್ಪಿ ಈ ಕಡೆ ಬಂದಿರಾ? ನನಗಾಗಿ ಬರುವ ಶ್ರಮ ಬೇಕಿತ್ತಾ? ನನಗಿಂತ ಸುಂದರಿಯರು ಮನ್ಮಥನಿಗೆ ಸಿಗಲೇ ಇಲ್ಲವೇ? ಛೆ ! ಛೆ ! ತುಂಬಾ ತೊಂದರೆಪಟ್ಟಿರಿ. ನಿಮಗಾಗಿ ಅದೆಷ್ಟು ಸುಂದರಿಯರು ಕಾದಿರುತ್ತಾರೋ! ಹಾಗಿರುವಾಗ ಬಡವಿಯಾದ ನನ್ನಲ್ಲಿಗೆ ಬಂದು ಉಪಕಾರ ಆಯ್ತು. ಧನ್ಯಳಾದೆ. ತಾವಿನ್ನು ತೆರಳಬಹುದು’ ಹೀಗೆ ಹಲವು ವಿಧಗಳಲ್ಲಿ ಚುಚ್ಚಿದೆ. ಆತ ಮಾತ್ರ ತನ್ನ ಒಂದೇ ತೆರದ ಅಭಿನಯದಲ್ಲೇ ಇದ್ದ. ‘ಅಬ್ಬಾ ! ನಿನ್ನ ಅಭಿನಯ ನೋಡಿದರೆ ಯಾವ ನಟನೂ ನಾಚಬೇಕು. ಸಾಕುಮಾಡು ನಿನ್ನ ನಟನೆ. ಹಿಂದಿನ ನನ್ನ ರಸಮಯದ ಸವಿಯನ್ನೆಲ್ಲಾ ಒಂದೇ ಕ್ಷಣದಲ್ಲಿ ಕಹಿ ಮಾಡಿ ಅನಿಸಿಕೆಯ ರತಿಯಂತೆ ನಾನು ಈ ಜನ್ಮದಲ್ಲಿ ನಾನಾಗಿರಲಾರೆ’ ಎಂದು ಪರೋಕ್ಷವಾಗಿ ಗಾಡಿಯಿಂದ ಇಳಿಸಿದ ಬಿನ್ನಾಣಗಿತ್ತಿಯ ಪ್ರಸ್ತಾಪಮಾಡಿದೆ.

ಸೂಕ್ಷ್ಮಮತಿಯಾದ ಆತ ‘ ಅಯ್ಯೋ ನೀನು ತಪ್ಪು ತಿಳಿದಿದ್ದಿ’ ಎಂದು ಸಮಜಾಯಿಷಿ ನೀಡಲು ಮುಂದಾದ. ತನ್ನ ಶುದ್ಧತೆಯನ್ನು ಸಾಬೀತು ಮಾಡಲು ಮುಂದಾದಾಗ ಕೋಪ ಹೆಚ್ಚಿತು. ಆ ಹೆಣ್ಣು ಮುಡಿದ ಹೂವಿನ ದಳ ಆತನ ತಲೆಯ ಮೆಲೆ ಪ್ರಸಾದ ಇಟ್ಟುಕೊಂಡಂತೆ ಕಂಡಿದ್ದನ್ನು ತೋರಿಸಿದೆ. ಆಕೆಯ ನೀಳಕೇಶದ ತುಂಡೊಂದು ಈತನ ಶಾಲಿನ ಮೇಲೆ ಇರುವುದನ್ನು ತೋರಿಸಿದೆ. ಇನ್ನು ಆಕೆಯ ಮೈಗೆ ಹಚ್ಚಿಕೊಂಡ ಅತ್ತರು ಇವನ ದೇಹದಲ್ಲಿ ಸಾಕ್ಷಿಯಾಗಿ ಪಸರಿಸುತ್ತಿತ್ತು. ಎಲ್ಲವಕ್ಕೂ ಒಂದೊಂದು ಕಾರಣ ಹೇಳಿ ತಟ್ಟಿಹಾರಿಸಿದ. ‘ಕನ್ನಡಿ ತಂದು ತೋರಿಸಲೇ?’ ಎಂದಾಗ ಇನ್ನು ತನ್ನ ಆಟ ಸಾಗದು ಎಂದು ‘ಪುಣ್ಯಾತ್ಗಿತ್ತಿ ಸ್ವಲ್ಪ ನಿಧಾನಿಸು. ಹೊರಗಿನವರು ಕಂಡರೆ ಏನೆಂದಾರು?’ ಎಂದು ನನ್ನನ್ನು ಮರ್ಯಾದೆಯ ಆವರಣದೊಳಗೆ ದೂಡಲು, ಸ್ವರ ಏರಿಸಿ ಗದರಿಸುವುದಕ್ಕೆ ಮುಂದಾದರೂ ತಕ್ಷಣ ಅದರ ಪ್ರಯೋಜನ ಆಗಲಾರದು ಎಂದು ಗ್ರಹಿಸಿ ನನ್ನನ್ನು ರಮಿಸುತ್ತಲೇ ಒಳಗೆ ನೂಕುತ್ತಾ ನನ್ನ ಕಾಲು ಹಿಡಿಯಲು ಮುಂದಾದ. ನಾನು ಬಿಟ್ಟೇನಾ? ಪ್ರತ್ಯಕ್ಷವಾಗಿ ಸಿಕ್ಕಿದ ಕಳ್ಳನ ನಾಟಕವೆಂದು ಬಗೆದು ಎಲ್ಲವನ್ನು ತಿರಸ್ಕರಿಸಿದೆ. ಬೀಗಿದೆ, ಏರಿದೆ.

‘ನನ್ನ ಪಾವಿತ್ರ್ಯದ ಪ್ರೀತಿಯನ್ನು ಮುಂದಿಟ್ಟುಕೊಂಡು ನನ್ನಂಥವಳಿಗೇ ನೀ ಹೀಗೆ ಮಾಡಿದ್ದಿಯಲ್ಲೋ, ನಿನ್ನಂತಹವನನ್ನು ಕ್ಷಮಿಸಲಾರೆ. ಇನ್ನೊಂದು ಹೆಣ್ಣನ್ನು ಬಯಸಿದ ನಿನ್ನನ್ನು ನಾ ಸ್ವೀಕರಿಸಲಾರೆ. ಇನ್ನೊಬ್ಬರು ಮುಡಿದ ಹೂವನ್ನು ಹೇಗೆ ಮುಡಿಯಲಾಗದೋ ಹಾಗೆಯೇ ನೀನು ನನ್ನ ಪಾಲಿಗೆ ದೂರ. ನಿನ್ನಂತಹವನನ್ನು ಪುರಸ್ಕರಿಸಿದರೆ ನನ್ನಂತಹ ಹೆಣ್ಣಿಗೆ ಇದು ನಿರಂತರ ಶಾಪ. ನನ್ನಂತಹವಳಿಂದಲೇ ಗಂಡಿಗೆ ಇದು ತಿಳಿಯಲಿ’ ಎಂದು ಹೇಳಿ ಹಜ್ಜೆ ಹಜ್ಜೆಗೂ ಇನ್ನೇನೋ ಹೇಳಬಯಸುತ್ತಾ ನನ್ನ ಬಳಿ ಬರುವ ಆತನನ್ನು ದೂರತಳ್ಳುತ್ತಾ ಒಮ್ಮೆಲೇ ಬಾಗಿಲಿನಿಂದ ಹೊರಹಾಕಿದೆ. ಗೆದ್ದ ಆವೇಶದಿಂದ ಸೋಲುಂಡ ನಾನು ಸಿಟ್ಟಿನಿಂದ ಬಾಗಿಲನ್ನು ಹಾಕಿ ಅಗಳಿ ಹಾಕಿದೆ.

ಆತನನ್ನು ಹೊರಹಾಕುವಲ್ಲಿ ಗೆದ್ದೆನಾದರೂ ನನ್ನನ್ನು ಗೆಲ್ಲಲಾರದೆ ಕುಸಿದೆ, ಕಂಪಿಸಿದೆ. ನನ್ನ ಸಿಟ್ಟು ಇಳಿಯಲೇ ಇಲ್ಲ. ನನ್ನ ಕಿಡಿದೃಷ್ಟಿ ಮೂಲೆಯಲ್ಲಿದ್ದ ನೀರಿನ ಗಡಿಗೆ ಮೆಲೆ ನೆಟ್ಟಿತು. ಒಂದು ಪಾತ್ರೆಯಿಂದ ಬಾಯಿಗೆ ನೀರನ್ನು ಸುರಿದುಕೊಂಡೆ. ತಂಪಾಗಲಿಲ್ಲ. ಗಡಿಗೆಯ ನೀರನ್ನೇ ತಲೆಯ ಮೇಲೆ ಸುರಿದುಕೊಂಡೆ. ಯಾವುದೇ ಬದಲಾವಣೆ ಆಗದೆ ಸಿಟ್ಟು ಮಾತ್ರ ಹಾಗೆಯೇ ಏರುತ್ತಿತ್ತು. ಸಿಟ್ಟೆಲ್ಲಾ ಗಡಿಗೆಯ ಮೇಲೆ ಹರಿಹಾಯ್ದು ಗಡಿಗೆಯನ್ನು ನೆಲಕ್ಕೆ ಚಚ್ಚಿದೆ. ಗಡಿಗೆ ನುಚ್ಚು ನೂರಾಯ್ತು. ಸಿಟ್ಟು ಇಳಿಯಿತು. ದಾಹ ಇಳಿಯಲಿಲ್ಲ. ನೋಡಲು ನೀರಿನ ದಾಹ ಆದರೂ ಹೃದಯದಲ್ಲಿಯ ಪ್ರೀತಿಯ ದಾಹಕ್ಕೆ ನೀರು ಸಿಗಲೇ ಇಲ್ಲ…

ಅಷ್ಟನಾಯಿಕಾ ಚಿತ್ತವೃತ್ತಿ : ವಿರಹೋತ್ಕಂಠಿತೆ
(ಕಳೆದ ಸಂಚಿಕೆಯಿಂದ ಮುಂದುವರೆದುದು…)

ದೀರ್ಘ ಕಾಯುವಿಕೆಯಿಂದಾಗಿ ಅಥವಾ ಪ್ರಿಯಕರನಿಂದ ಬೇರಾಗಿ ಇಲ್ಲವೇ ಆತನ ಅನೈಚ್ಛಿಕ-ಆಕಸ್ಮಿಕ ಅನಾಗಮನದಿಂದ ವಿರಹವೇದನೆಯಲ್ಲಿ ಇರುವವಳು. ಈಕೆಗೆ ಉತ್ಕಾ, ಉತ್ಕಂಠಿತಾ ಎಂಬ ಹೆಸರುಗಳೂ ಇವೆ. ಮಿತ್ರರ ಮಾತುಗಳು, ವ್ರತದ ದಿನ, ಮನಸ್ತ್ತಾಪ, ಸವತಿಯರ ತಂತ್ರ, ನೆರೆ ಮುಂತಾದ ವಿಕಲ್ಪ, ಕತ್ತಲೆ, ದಾರಿ ತಪ್ಪುವುದು, ಪಾತಿವ್ರತ್ಯದ ಪರೀಕ್ಷೆ, ಮಿತ್ರಾಗಮನ, ಬೇರೆ ಸುಂದರಿಯ ಸಹವಾಸ, ಅನುಮಾನ ಹೀಗೆ ಹತ್ತು ಹಲವು ಕಾರಣಗಳು, ಅವಸ್ಥೆಗಳು ವಿರಹೋತ್ಕಂಠಿತೆಯನ್ನಾಗಿಸುತ್ತವೆ. ಈಕೆ ಸಂತಾಪ, ದೇಹಕ್ಷೀಣ, ನಿಡುಸುಯ್ಲು, ನಿರುತ್ಸಾಹ, ಕಣ್ಣೀರು, ವ್ಯಥೆ, ಚಿಂತೆ, ಬೇಸರ, ನಡುಗುವಿಕೆ, ಚಾಂಚಲ್ಯತೆ, ಮರೆವು, ರೋದನ, ದೂರು ಹೇಳುವುದು, ಅನಾಸಕ್ತಿ, ಭ್ರಾಂತಿ, ಸಂಶಯ, ಮೂರ್ಛೆ, ಮರಣ ಮುಂತಾದ ಸಂಚಾರಿ ಭಾವಗಳನ್ನು ಅನುಭವಿಸುತ್ತಾಳೆ.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು. ಉತ್ತಮ ವಿರಹೋತ್ಕಂಠಿತೆಯು ತನ್ನ ಪ್ರಿಯತಮನ ನಿರ್ಗಮನ ಮಾತ್ರದಿಂದಲೇ ವ್ಯಥೆಗೆ ಬೀಳುತ್ತಾಳೆ. ಮಧ್ಯಮ ಮತ್ತು ಅಧಮ ವಿರಹೋತ್ಕಂಠಿತೆಯರಲ್ಲಿ ವಿರಹ ನಿಧಾನವಾಗಿ ಆವರಿಸಿಕೊಳ್ಳುತ್ತಾ ವಿರಹದ ಸೌಜನ್ಯ ಮೇರೆ ಮೀರುತ್ತದೆ.

ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿವೆ.

ಇಲ್ಲಿ ನೀಡಲಾಗಿರುವ ಶತಾವಧಾನಿ ಡಾ. ಗಣೇಶರ ಕಾವ್ಯ ಮತ್ತು ಮಂಟಪರ ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ಧಾರವಾಡ ಆಕಾಶವಾಣಿಯ ಉದ್ಯೋಗಿ, ಕವಿ, ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ. ಶರದ್ ಋತುವಿನಿಂದಾರಂಭಿಸಿ ಗ್ರೀಷ್ಮ ಋತುವಿನವರೆಗೆ ಭೂಮಿಯ ಮೇಲ್ಮೈಯಲ್ಲಾಗುವ ಬದಲಾವಣೆಗಳನ್ನೇ ನಾಯಿಕೆಯ ಅವಸ್ಥೆಗಳನ್ನಾಗಿಸಿ ಚಿತ್ರಿಸುವ ಕಾವ್ಯದಲ್ಲಿ ‘ಮೇದಿನಿ’ ಅಷ್ಟನಾಯಿಕಾ ಭಾವದಲ್ಲಿ ಮೇಘನಿಗಾಗಿ ಕಾಯುತ್ತಾಳೆ. ಭಾವಕ್ಕೆ ಒತ್ತಾಸೆಯಾಗಿ ನಿಲ್ಲುವ ಲಯಲಾಲಿತ್ಯ ಕಾವ್ಯಕ್ಕೆ ಹದ ನೀಡುವ ಪದಮೈತ್ರಿ ಇದರ ವಿಶೇಷ.

ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ನಿಮ್ಮ ಕಲ್ಪನೆ-ಚಿಂತನೆಗಳಿಗೆ ಇದು ಮುಕ್ತ ವೇದಿಕೆಯಾಗಲಿ.

ಭಾಮಿನೀ

- ಶತಾವಧಾನಿ ಡಾ. ಆರ್. ಗಣೇಶ್

ಷಣ್ಮುಖಪ್ರಿಯ ರಾಗ: ಚಂಪಕಮಾಲೆ

ಇನಿಯನ ಜಾಡು ಕಾಣದಿರೆ ಕಳ್ತಲೆ ತುಂಬಿದ ರಾತ್ರಿಯಂತೆ ಹೃ

ನ್ಮನದೆ ವಿಷಾದವೇಧೆ ಕಹಿಯಾಗಿ ವಿಡಂಬಿಸೆ ಮೀನಕೇತನಂ |

ನನೆಗಳ ಕೋಲ್ಗಳಂ ನೆಡಲದಮ್ಯಬಲಂ ಬಿರುಬಿಂದೆ ಬಂದಿರಲ್

ವನಿತೆ ವಿಯೋಗವಹ್ನಿಗೆಡೆಯಾದಳಿದೋ ವಿರಹೋತ್ಕನಾಯಿಕೆ ||

(ನಟ್ಟಿರುಳು ಸಮೀಪಿಸತೊಡಗಿದರೂ ನಲ್ಲನು ಬರಲಿಲ್ಲ. ತಾಳಲಾಗದ ತಳಮಳವು ತೀರಿಸಲಾಗದ ವಿರಹವಾಗಿ ಪರಿಣಮಿಸಿತು. ಸಮಸ್ತಪ್ರಕೃತಿಯೇ ಮುನಿದ ಮಾರನಸೇನೆಯಂತೆ ದಾಳಿಯಿಡುವಾಗ ವಿಯೋಗವಹ್ನಿಯಲ್ಲಿ ತಪಿಸುವ ನಾಯಿಕೆ ವಿರಹೋತ್ಕಂಠಿತೆಯಾಗುವಳು.)

ಬಾಗೇಶ್ರೀ ರಾಗ- ಝಂಪೆ, ಮಟ್ಟೆ ತಾಳಗಳು

ಮರೆತನೇ ಎನ್ನ ಮೆಯ್ಮರೆತು ಪತಿಯು |

ತೊರೆದನೇನಿನ್ನು ಮತ್ತೇನು ಗತಿಯು ? ||ಪ||

ಕೋಳಿಕೂಗುವ ವೇಳೆ- ಬೀಳುವೋದುದು ಮಾಲೆ

ಕೋಳು ಹೋಯಿತು ಬಾಳು ಗೋಳು ಬಲಿತು |

ತಾಳಲಾಗದ ತಾಪ-ಹೇಳಲಾಗದ ಶಾಪ

ಏಳಲಾಗದು ಮನಕೆ ಧೂಳಿ ಮಸಕೆ ||

ಬಿದ್ದನೆನೋ ಬಲೆಗೆ-ಮೆದ್ದನೆನೋ ಒಳಗೆ

ಕದ್ದನಾರದೊ ಹೃದಯ ಜಿದ್ದು ಬಲಿಯೆ |

ಉದ್ದವಾಯಿತು ವಿರಹ-ಕುದ್ದ ಬೊಮ್ಮನ ಬರಹ

ನಿದ್ದೆ ನೀಗಿಸಿತೆನಗೆ ತಿದ್ದಳಲವೇ?||

ಆವ ಬಿಂಕಗಾತಿ ಮಂಕುಬೂದಿ ಚೆಲ್ಲಿ ಸೆಳದಳೋ

ಆವ ಕೊಂಕುಗಾತಿ ಮದ್ದು- ಮಾಟಮಾಡಿ ಮಲೆತಳೋ |

ಗತವಿಲಾಸಕತೆಗಳೆಲ್ಲ ವಿಸ್ಮೃತಿಗತಿಯಾದುವೇ?

ಹಿತವಿನೋದವಿಧಿಗಳೆಲ್ಲ ಹತಚಿತಿಯಲಿ ಬೆಂದುವೇ?||

ಮೇಘಮೇದಿನಿ

- ದಿವಾಕರ ಹೆಗಡೆ, ಧಾರವಾಡ

ಕುಸುಮ ಬಾಣನ ಹೆದೆಗೆ ಎನ್ನೆದೆ |

ಕಸುವು ನೀಡುವುದೇನು ಸೋಜಿಗ |

ಎಸೆವ ಹೊಸ ಚಿಗುರುಗಳ ಶರದಲಿ ಕೊರೆವ ಹೃದಯವನು ||

ಬಸಿವ ಬೆವರಿಗೆ ಬೆಸೆವ ಹದವಿದೆ |

ಉಸಿರ ತಿದಿಯಲಿ ಅವನ ಹೆಸರಿದೆ |

ಅಸುವ ಹೀರುವನೇಕೆ ದೂರದಿ ನಿಂತು ಆಗಸದಿ ||

ಚಾದಗೆ ನೀಬಾರಾತನ ಕರೆತಾ ಮೋದದ ನಲ್ಲನನು |

ಕಾದಿಹೆನೆಂದಾತಗೆ ನೀನೊರೆವುದು ಕಾದಲಗೆಲ್ಲವನು |

ವಾದಿಸು ಸಂವಾದಿಸು ನೀ ಚೋದಿಸು ಎನಗಾಗಿಯೆ ಒಲಿಸು |

ಬೋಧಿಸು ಸಂಬೋಧಿಸು ಎನ್ನರಸನ ನೀ ನೀ ಧರೆಗಿಳಿಸು||

ಸುಲಭದಲಿ ಬಾರನಲ್ಲ | ಆಗಸದಿ | ಅಲೆದು ತಾನಾಡಬಲ್ಲ ||

ಮಲಯ ಮಾರುತನೊಡನೆ ಸಲುಗೆಯಿಂದಿದ್ದರೂ |

ಸೆಳೆಮಿಂಚು ತೋರಿ ಸಿಡಿಲೊಡೆದು ಗರ್ಜಿಸಬಲ್ಲ ||

ಕಪ್ಪುಮೋಡದ ಮೈಯು ಬಿಳಿ ನೀರ ಒಳಮನವು |

ಅಪ್ಪಿದರೆ ತೋಯಿಸುವ ಒಪ್ಪವಿಡುವ ||

ಇಪ್ಪ ತಾಣವ ನೋಡು ತಪ್ಪದೆಯೆ ನೀ ಪೇಳು

ಒಪ್ಪುವಂದವ ಮಾಡು ಬೇಗ ಹೋಗು ||

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

…ಹಲವು ದಿನಗಳ ಸಾಮೀಪ್ಯದ ಕೊರತೆಯಿಂದಾದ ವಿರಹದಿಂದಲೋ ಏನೋ ನನ್ನ ಆಕರ್ಷಣೆ ಕಡಿಮೆ ಆಗಿ ನನ್ನನ್ನು ಮರೆತುಬಿಟ್ಟನೋ? ನನ್ನನ್ನು ನೋಡುವಲ್ಲಿ ಆತನ ಅವ್ಯವಹಾರಕ್ಕೆ ತೊಡಕಾಗಬಹುದೆಂದು ನನ್ನನ್ನು ತೊರೆಯುವ ಸಂಕಲ್ಪ ಮಾಡಿದನೋ? ನನಗಾಗುವ ಸಂದೇಹಗಳನ್ನೇ ನನ್ನ ಪಾಲಿಗೆ ತಡೆದುಕೊಳ್ಳಲಾಗುತ್ತಿಲ್ಲ. ಇನ್ನು ಸತ್ಯವಾದರೆ ನನ್ನ ಗತಿ? ಯಾವತ್ತೂ ಇಲ್ಲದ ನಿರಾಸೆ ಇದು. ಬೆಳಗಿನ ಜಾವದವರೆಗೂ ನನ್ನ ಸಮಸ್ಯೆಗಳಿಗೆ ಉತ್ತರವಿಲ್ಲದೆ ನಿದ್ರೆಯಿಲ್ಲದ ರಾತ್ರಿ ಭಯಾನಕವಾಗಿತ್ತು. ಇನ್ನು ಬೆಳಗಾದರೆ? ಸಾರ್ವಜನಿಕವಾಗಿ ನೇಣುಶಿಕ್ಷೆಗೆ ಒಳಪಟ್ಟ ನಿರಪರಾಧಿಯಂತೆ ಅಳುವ ಶಕ್ತಿಯನ್ನು ಕಳಕೊಂಡು ಒಬ್ಬಂಟಿಯಾಗಿ ಸಾವಿಗೆ ಎದುರಾಗಿ ಹೃದಯದ ಒಳಗೇ ಅಳುತ್ತಲೇ ಇದ್ದೆ.

‘ಇನ್ನು ಶಿಕ್ಷೆಗೆ ಸಿದ್ಧಳಾಗು’ ಎನ್ನುವಂತೆ ಕೋಳಿಗಳು ಕೂಗಿದವು. ಆತನಿಗಾಗಿ ಕಟ್ಟಿದ ಹೂಮಾಲೆ ಬಾಡಿ ಸುಗಂಧ ಕಳಕೊಂಡು ಯಾರಿಗೂ ಬೇಡವಾದಂತೆ ನನ್ನಂತೆಯೇ ತೂಗಾಡುತ್ತಿತ್ತು. ಬಾನಲ್ಲಿರುವ ನಕ್ಷತ್ರಗಳು ಚಂದ್ರನಿಲ್ಲದ ನಮಗೇನು ಕೆಲಸ ಎಂದು ಮರೆಯಾಗಿ ನನ್ನ ಶೂನ್ಯತೆಯ ದೃಷ್ಟಿಗೆ ಸಹಕರಿಸಿದ್ದವು. ಅಂತೂ ನನ್ನ ಬಾಳು ಮುಗಿದ ಅಧ್ಯಾಯ ಎಂಬಲ್ಲಿಗೆ ಒತ್ತು ನೀಡಿತ್ತು. ಗೋಳನ್ನು ಹೇಳಿಕೊಳ್ಳಲು ನನಗೆ ನಾನೇ ಇಲ್ಲವೆಂಬ ಪ್ರಜ್ಞೆ ಮೂಡಿ ದೆವ್ವದಂತೆ ನಾನಿರುವ ಭ್ರಮೆ ಉಂಟಾಯಿತು. ನನ್ನ ಶಕ್ತಿಯನ್ನೆಲ್ಲಾ ಬಲವಂತದಿಂದ ಒಟ್ಟುಮಾಡಿ ನಾನಾಗಲು ಪ್ರಯತ್ನಿಸಿದೆ. ಕಳೆದ ಯೋಚನೆಗಳೆಲ್ಲಾ ದುಃಸ್ವಪ್ನದಂತೆ ಕಂಡವು. ನನ್ನ ಮನಸ್ಸಿನ ಯೋಚನೆಗಳೆಲ್ಲಾ ಸುಳ್ಳೆಂದು ಭ್ರಮಿಸಿ ಎಚ್ಚರವಾಗಲು ಪ್ರಯತ್ನಿಸಿದೆ.

ನಾನು ಇದುವರೆಗೆ ಇರುವ ಸ್ಥಳದಲ್ಲಿ ನನ್ನವನನ್ನು ಕಟಕಟೆಗೆ ತಂದಿಟ್ಟ ಹಾಗೆ ನಿಲ್ಲಿಸಿಕೊಂಡೆ. ಅವನು ನಗುತ್ತಲೇ ಇದ್ದ. ತಾನೇ ಗೆದ್ದೆನೆಂಬ ಹಮ್ಮಿನಿಂದ ಗೋಣಾಡಿಸುವುದನ್ನು ಕಂಡೆ. ಅವನ ಕಣ್ಣಿನಲ್ಲಿನ ತೃಪ್ತತೆ ಕಂಡೆ. ಇವನು ಯಾವಳೋ ಬೀಸಿದ ಬಲೆಯಲ್ಲಿ ಬಿದ್ದಿರಬಹುದು. ಅಲ್ಲಿ ನಡೆಸಿದ ರಾಸಲೀಲೆಯಾಟದ ಅಮಲು ಇನ್ನೂ ಇಳಿದಿಲ್ಲದಿರುವ ನೋಟ. ಈತನ ನಗುವಿನ ಅಲೆ ನನ್ನ ಪಾಲಿಗೆ ಕೋಪದ ಜ್ವಾಲೆ. ನನ್ನ ವಿರಹದ ಉರಿಯ ಜ್ವಾಲೆ ವಿಚಿತ್ರವಾಗಿ ನರ್ತಿಸಿತು. ಅವನನ್ನು ನನ್ನತ್ತ ಸೆಳೆಯಲು ನನ್ನ ಹಲವು ಪವಿತ್ರಭಾವನೆಗಳಿಗೆ ಬಣ್ಣ ಹಚ್ಚಿ ನರ್ತಿಸಿದೆ. ಬಾಡಿದ ಹೂಮಾಲೆ ಎಸೆದೆ. ನನ್ನ ವಿಚಿತ್ರವಾದ ನರ್ತನ ಬೇಡಿಕೆ-ಪೂಜೆ- ಯವುದನ್ನೂ ಆತ ಗಮನಿಸಲೇ ಇಲ್ಲ. ಅವನ ಯೋಚನೆ, ದೃಷ್ಟಿ ಬೇರೆಯ ಕಡೆ ಇರುವುದು ವೇದ್ಯವಾಯಿತು. ನನ್ನ ಕೂಗಾಟ- ಚೀರಾಟ-ಬೊಬ್ಬೆ ಮುಗಿಲು ಮುಟ್ಟುತ್ತಿತ್ತು. ಇಲ್ಲಿ ನನ್ನ ಸ್ವರ- ಚಿತ್ರ-ಎಲ್ಲವೂ ಕಾಣುತ್ತಿದ್ದವು. ಆದರೆ ಆತನ ಚಿತ್ರ ಮಾತ್ರ ಕಾಣುತ್ತಿತ್ತು. ನಾನೆಷ್ಟು ಆತನ ಬಳಿಹೋದರೂ ಅಷ್ಟೇ ದೂರದಲ್ಲಿ ಆತ ತೆರಳದೆ ದೂರವಾಗಿರುತ್ತಿದ್ದ. ‘ನಾನು ನಿನಗಾಗಿ ಬಂದಿದ್ದೇನೆ’ ಎಂದು ಶಕ್ತಿಮೀರಿ ಕೂಗುತ್ತಾ ಆತನ ಬಳಿ ಓಡಿದೆ. ನನ್ನ ಬಾಯಿತೆರೆಯಿತು. ಕೂಗಿಗೆ ಸ್ವರ ಇಲ್ಲವಾಗಿತ್ತು. ನನ್ನ ಸ್ವರವೇ ನಿಲ್ಲುವಷ್ಟು ಕೂಗಿದರೂ ಆತ ಮಾತ್ರ ಇದ್ದಲ್ಲೇ ದೂರವಾದ. ನನ್ನ ಕೈಗೆ ಎಟುಕಲೇ ಇಲ್ಲ. ‘ಅಯ್ಯೋ ನನ್ನ ಪ್ರಾರಬ್ಧವೇ’ ಎಂದು ಹಣೆಹಣೆ ಚಚ್ಚಿಕೊಂಡೆ. ಚಚ್ಚಿಕೊಂಡದ್ದು ಮಾತ್ರ, ನನಗೆ ತಿಳಿದಾಗ ಎಚ್ಚರ ಆಗಿತ್ತು. ಬೆಳಗಿನ ಜಾವದ ನಿದ್ರೆಯ ಸ್ವಪ್ನ. ಅಬ್ಬಾ ಎನಿಸಿತು. ಆದರೂ ಸತ್ಯವಾದರೆ?

ಆದರೆ ನನಗೀಗ ನಿಜಕ್ಕೂ ಆತನ ಮೇಲೆ ಕೋಪ ಇಲ್ಲ. ಆದರೆ ಕನಸಿನಲ್ಲಿ ಬಿದ್ದ ಆಕೆಯ ಮೇಲೆ ಮಾತ್ರ ಕೋಪ. ಇನ್ನು ಯಾವ ಬಿಂಕಗಾತಿ ಬೂದಿ ಎರಚಿ ಮರಳುಮಾಡಿದಳೋ ಮಂತ್ರಮಾಟ ಮಾಡಿ ತನ್ನ ಅಟ್ಟಹಾಸದಿಂದ ನನ್ನವನನ್ನು ಒಳಹಾಕಿಕೊಂಡಳೋ ತಿಳಿಯದು. ನನ್ನವನ ಸೌಜನ್ಯದ ದುರುಪಯೋಗ ಮಾಡಿಕೊಂಡು, ನನ್ನವನು ಮುಗ್ಧನಾಗಿ ಬಂಧಿತನಾಗಿ ಒದ್ದಾಡುತ್ತಿದ್ದಾನೋ ಏನೋ? ನನ್ನನ್ನು ತೀವ್ರವಾಗಿ ಪ್ರೀತಿಸುವ ಆತ ನನ್ನನ್ನು ಮರೆತು ತಪ್ಪುಮಾಡುವವನೇ ಅಲ್ಲ. ದಾಂಪತ್ಯದಲ್ಲಿಯ ಸರಸದ ಸಿಹಿ ಘಟನೆಗಳ ಆ ನೆನಪೇ ಇಂದು ವಿರಹದಲ್ಲಿ ಈ ರಾತ್ರಿ ಚಿತ್ರಹಿಂಸೆಗೆ ಒಳಪಡಿಸಿತ್ತು. ಅಷ್ಟು ಗಾಢವಾದ ಪ್ರೀತಿಯ ಬೆಲೆ ನನಗಲ್ಲದೆ ಇನ್ನಾರಿಗೂ ತಿಳಿಯದು. ಈ ಪ್ರೀತಿಯೂ ಇಷ್ಟೊಂದು ಸುಡುತ್ತದೆ ಎಂದು ಇದುವರೆಗೂ ನನಗೆ ತಿಳಿದಿಲ್ಲವಾಗಿತ್ತು. ಪ್ರೀತಿಯ ರೆಕ್ಕೆಗಳೆಲ್ಲಾ ನಿನ್ನೆ ರಾತ್ರಿಯ ನನ್ನ ವಿರಹದ ದುಃಸ್ವಪ್ನದ ಬೆಂಕಿಗೆ ಸುಟ್ಟು ಕೇವಲ ನನ್ನ ಭೌತಿಕ ಶರೀರವೊಂದೇ ಉಳಿದು ಒದ್ದಾಡುತ್ತಿರುವ ಹಕ್ಕಿಯಂತೆ ಪಿಳಿಪಿಳಿ ನೋಡುತ್ತಲೇ ಮುದುಡಿ ಕುಳಿತೆ… ಹಾರಲಾರದೆ-ಓಡಲಾರದೆ-ಮುನ್ನಡೆಯಲಾರದೆ. ಅಂತೂ ನನಗಾಗಿರುವ ಅನುಭವ ಸತ್ಯವೇ ಅಥವಾ ಜೀವನದ ಸತ್ಯದ ಅನುಭವ ನನಗೀಗ ಆಯಿತೇ? ಒಂದೂ ತಿಳಿಯದೆ ಹಾಗೆಯೇ ಮರಕ್ಕೆ ಒರಗಿ ಕುಳಿತೆ…

ಅಷ್ಟನಾಯಿಕಾ ಚಿತ್ತವೃತ್ತಿ : ವಿಪ್ರಲಬ್ಧಾ ನಾಯಿಕೆ
(ಕಳೆದ ಸಂಚಿಕೆಯಿಂದ ಮುಂದುವರೆದುದು…)

ದೂರಸ್ಥಳಕ್ಕೆ ಹೋದ ನಾಯಕನಿಗಾಗಿ ಕಾಯುತ್ತಾ ಪ್ರೋಷಿತಪತಿಕೆಯಾದ ನಾಯಿಕೆ, ಆತನು ಬರುವ ಸೂಚನೆ ದೊರೆತ ಕೂಡಲೇ ಸರ್ವಾಲಂಕಾರಭೂಷಿತೆಯಾಗುತ್ತಾ ವಾಸಕಸಜ್ಜೆಯಾಗುವಳು. ಆತನ ಆಗಮನ ತಡವಾದಷ್ಟೂ ನಿರೀಕ್ಷೆ ಉಲ್ಬಣಿಸಿ ಆತನು ಬರುವ ಸಂಕೇತಸ್ಥಳಕ್ಕೆ ತಾನೇ ತೆರಳಿ ಅಭಿಸಾರಿಕೆಯಾಗುವಳು. ಆದರೆ ನಾಯಕನು ನಾಯಕಿಗೆ ನೀಡಿದ ವಾಗ್ಧಾನದಂತೆ ಸಂಕೇತಸ್ಥಳಕ್ಕೆ ಬರದೆ ಕಾಯಿಸುವುದರಿಂದಾಗಿ ಆಕೆಗೆ ತಾನು ವಂಚಿತೆಯೆಂಬಂತಾಗಿ ಕ್ರೋಧಿತಳಾಗುತ್ತಾಳೆ. ಬೇಸರ, ದುಃಖ, ಅವಮಾನ, ರೋಧನೆ, ವ್ಯಥೆ, ನಿಟ್ಟುಸಿರು, ನಿರಾಶೆ, ಬಳಲಿಕೆ, ಕಣ್ಣೀರು, ಆತಂಕ, ವಿನಾಕಾರಣ ಭೀತಿ-ಯೋಚನೆ, ಖಿನ್ನತೆ, ಅಸಮಾಧಾನ ಆಕೆಯನ್ನು ಆವರಿಸುತ್ತದೆ. ಈಕೆಯೇ ವಿಪ್ರಲಬ್ಧೆ. ಒಂದೋ ಈಕೆಯು ನಾಯಕನಿಂದ ವಂಚಿತಳಾದ ಭಾವವನ್ನೂ ಹೊಂದಿರಬಹುದು; ಇಲ್ಲವೇ ಸಖಿಯಿಂದ ಮೋಸಹೋದೆನೆಂದೂ ಖಿನ್ನಳಾಗಬಹುದು.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು. ಉತ್ತಮ ವಿಪ್ರಲಬ್ಧೆನಾಯಕಿಯು ತನ್ನ ಪ್ರಿಯತಮನು ಬೇರೊಬ್ಬ ಯುವತಿಯನ್ನು ಕೂಡಿದ ವಿಷಯ ತಿಳಿಯದೇ ಆತಂಕ ಹೊಂದುತ್ತಾಳೆ. ಮಧ್ಯಮ ಮತ್ತು ಅಧಮ ವಿಪ್ರಲಬ್ಧೆಯರು ತನ್ನ ಪ್ರೇಮಿ ಬೇರೆಯವರ ಸಹವಾಸದಿಂದ ತನ್ನನ್ನು ಮೋಸಗೊಳಿಸಿದನೆಂದು ತಿಳಿಯುತ್ತಾರೆ.

ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿವೆ.

ಇಲ್ಲಿ ನೀಡಲಾಗಿರುವ ಶತಾವಧಾನಿ ಡಾ. ಗಣೇಶರ ಕಾವ್ಯ ಮತ್ತು ಮಂಟಪರ ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ಧಾರವಾಡ ಆಕಾಶವಾಣಿಯ ಉದ್ಯೋಗಿ, ಕವಿ, ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ. ಶರದ್ ಋತುವಿನಿಂದಾರಂಭಿಸಿ ಗ್ರೀಷ್ಮ ಋತುವಿನವರೆಗೆ ಭೂಮಿಯ ಮೇಲ್ಮೈಯಲ್ಲಾಗುವ ಬದಲಾವಣೆಗಳನ್ನೇ ನಾಯಿಕೆಯ ಅವಸ್ಥೆಗಳನ್ನಾಗಿಸಿ ಚಿತ್ರಿಸುವ ಕಾವ್ಯದಲ್ಲಿ ‘ಮೇದಿನಿ’ ಅಷ್ಟನಾಯಿಕಾ ಭಾವದಲ್ಲಿ ಮೇಘನಿಗಾಗಿ ಕಾಯುತ್ತಾಳೆ. ಭಾವಕ್ಕೆ ಒತ್ತಾಸೆಯಾಗಿ ನಿಲ್ಲುವ ಲಯಲಾಲಿತ್ಯ ಕಾವ್ಯಕ್ಕೆ ಹದ ನೀಡುವ ಪದಮೈತ್ರಿ ಇದರ ವಿಶೇಷ.

ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ನಿಮ್ಮ ಕಲ್ಪನೆ-ಚಿಂತನೆಗಳಿಗೆ ಇದು ಮುಕ್ತ ವೇದಿಕೆಯಾಗಲಿ.

ಅಂದಹಾಗೆ ಆಕಾಶವಾಣಿಯ ವಾರ್ಷಿಕ ರಾಷ್ಟ್ರೀಯ ಸ್ಪರ್ಧೆಯಲ್ಲಿ ‘ ಮೇಘ ಮೇದಿನಿ’ ರಾಷ್ಟ್ರೀಯ ಪ್ರಶಂಸೆ ಗಳಿಸಿರುವುದು ನಿಜಕ್ಕೂ ಒಂದು ಹೆಮ್ಮೆಯ ವಿಷಯ. ಈ ಕಾವ್ಯಕ್ಕೆ ರಸಾರ್ದ್ರ ಸಂಗೀತ ಸಂಯೋಜನೆ ಮಾಡಿದವರು ಪ್ರಸಿದ್ಧ ಹಾಡುಗಾರ ಶ್ರೀಪಾದ ಹೆಗಡೆ ಕಂಪ್ಲಿ. ಶ್ರೀಪಾದ ಹೆಗಡೆಯವರೊಂದಿಗೆ ಹಾಡಿಗೆ ದನಿಗೂಡಿಸಿದವರು ರೇಖಾ ಭಟ್ ಕೋಟೆಮನೆ, ರೇಖಾ ದಿನೇಶ ಹೆಗಡೆ ಶಿರಸಿ. ಸ್ಪರ್ಧೆಗಾಗಿ ಮೇಘ ಮೇದಿನಿಯನ್ನು ಹಿಂದಿಗೆ ಅನುವಾದಿಸಿದವರು ಡಾ. ಧರಣೇಂದ್ರ ಕುರಕುರಿ. ಎಲ್ಲರಿಗೂ ಅಭಿನಂದನೆಗಳು.

ಭಾಮಿನೀ

- ಶತಾವಧಾನಿ ಡಾ. ಆರ್. ಗಣೇಶ್

ಆನಂದಭೈರವಿ : ಶಾರ್ದೂಲವಿಕ್ರೀಡಿತ

ಸಂಕೇತಸ್ಥಳದೊಳ್ ನಿಶೀಥಮುಖದೊಳ್ ನಿಷ್ಪಂದದೇಕಾಂತದೊಳ್

ಪಂಕೇಜವ್ರಜದಂತೆ ಕಂದಿರೆ ಮೊಗಂ ರಾಕೇಂದುಸಂದೀಪ್ತಿಯೊಳ್ |

ಸಂಕಲ್ಪಂ ಸಟೆಯಾಗೆ ಕಲ್ಪನೆಗಳುಂ ಕಾಳಾಗೆ ತಾನಾದಳೀ

ಶಂಕಾತಂಕತರಂಗರಿಂಗಣೆ ಮಲಂ ಮೇಣ್ ವಿಪ್ರಲಬ್ಧೆ ಸ್ವಯಂ ||

(ಇನಿಯನಿಗಾಗಿ ಎದುರುನೋಡಿ ನಿರಾಶಳಾದ ನಾಯಿಕೆಯು ಸಂಜೆಯು ಬಲಿತು ಕತ್ತಲಗಿ ಒಂಟಿತನ ವೆಂಟಣಿಸಿದಂತೆಯೇ ಕಳವಳಿಸಿ ವಿಪ್ರಲಬ್ಧೆಯೆನಿಸುತ್ತಾಳೆ.)

ಹಿಂದೋಳ- ಏಕ,ರೂಪಕ ತಾಳಗಳು

ಇಲ್ಲಿಗೆ ಬಾರೆನೆಂದು ಸೊಲ್ಲಿಸಿದವನೆಲ್ಲಿ?

ನಲ್ಲೆಯನೇಂ ತೊರೆದನೇ? ಪ್ರಫುಲ್ಲನು ||ಪ||

ಮನೆಯನೆಂತೋ ಮರೆತು ಬಂದೆ

ಜನರನೆಂತೋ ಜಯಿಸಿ ಬಂದೆ |

ಮನವನೆಂತೋ ಮಥಿಸಿ ಬಂದೊಡ

ಮಿನಿಯನೇಕೆ ಕಾಣಲೊಲ್ಲಂ ? ||

ಮಾತನಿತ್ತು ಮೆರೆಸಿದವನು

ದೂತನಿಂದ ತಿಳಿಸಿದವನು |

ಏತಕಿಂತು ಸುಳಿಯದಾದಂ ?

ಸೋತನೇ ಮತ್ತಾರಿಗೀತಂ ||

ಹೊತ್ತು ಮುಳುಗಿ ಮೀರುತಿಹುದು

ಚಿತ್ತಸೌಖ್ಯವೊ ಜಾರುತಿಹುದು |

ಎತ್ತ ಪೋಪೆನೊ ಹಾ ! ಹತಾಶೆ

ಎತ್ತಲಾಪೆನೊ ಮೊಗವನಿನ್ನು ||

ಮೇಘಮೇದಿನಿ

- ದಿವಾಕರ ಹೆಗಡೆ, ಧಾರವಾಡ

ಇನ್ನು ನಾ ನಿಲಲಾರೆನು | ಬಲ್ಲಿದನಾತ | ಒಲ್ಲೆನೆಂಬನೆ ಎನ್ನನು ||

ಚೆನ್ನ ಕೋಗಿಲೆ ಹಾಡು ಮುನ್ನ ಕೇಳುವುದೀಗ |

ಎನ್ನ ಮನದನ್ನನನಿನ್ನೆಷ್ಟು ಕಾಯಲಿ ||

ಕಂದರ್ಪ ಕಾಲವೀಗ | ವಸಂತನು | ಬಂದಿರ್ಪನೇಕೆ ಬೇಗ ||

ಮುಂದಿರ್ಪ ಮಳೆಗಾಲಕೇಕಿಷ್ಟು ಕಾತರ |

ಇಂದಿರ್ಪ ಸೊಗವ ನಾನೇನೆಂದು ಹೇಳಲಿ ||

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

…ಕ್ಷಣಕ್ಷಣಕ್ಕೂ ನನ್ನವನ ನಿರೀಕ್ಷೆಯಿಂದ ಹತಾಶಳಾಗುತ್ತಾ ನನ್ನ ಮುಖದ ಪ್ರಸನ್ನತೆ-ಕಾತರತೆ ಕಡಿಮೆ ಆಗುತ್ತಿತ್ತು. ಬಂದು ಎಷ್ಟು ಹೊತ್ತಾಯ್ತು. ಇದುವರೆಗೆ ಇಲ್ಲದ ಸಮಯದ ಕಾಳಜಿ ಇದೀಗ ನನ್ನನ್ನು ಕ್ಷಣ ಕ್ಷಣವೂ ದೀರ್ಘವಾಗಿ ಕಾಡಿತು. ಕೊಳದಲ್ಲಿಯ ತಾವರೆಗಳು ಮುದುಡಿದ್ದವು. ಹಕ್ಕಿಗಳೆಲ್ಲ ಕಲರವ ನಿಲ್ಲಿಸಿದ್ದವು. ಎಲ್ಲವೂ ಗೂಡು ಸೇರಿದ್ದವು. ಅನಾಥಳಂತೆ ನಾನು ಗೂಡು ಬಿಟ್ಟಿದ್ದೆ. ಈಗಾಗಲೇ ನನ್ನವನ ಹೃದಯವೆಂಬ ಗೂಡನ್ನು ಸೇರಬೇಕಿತ್ತು. ಪ್ರಕೃತಿಯಲ್ಲಿ ಎಲ್ಲ ಜೀವಿಗಳು ಸಮಯವನ್ನು ಪಾಲಿಸಿದ್ದವು. ನನ್ನವನಿಗೆ ಮಾತ್ರ ಸಮಯಪಾಲನೆ ತಿಳಿದಿಲ್ಲ. ಜೊತೆಗೆ ನನ್ನ ಸಮಯವೂ ಅಸ್ತವ್ಯಸ್ತ. ನನ್ನ ಆತಂಕ ಹೆಚ್ಚುತ್ತಿತ್ತು. ಈ ನೀರವ ನಿರ್ಜನ ಪ್ರದೇಶದಲ್ಲಿ ನನ್ನವನು ಇದ್ದಿದ್ದರೆ ಬೆಳಗಿನತನಕ ಇರಬಹುದಿತ್ತು. ಆದರೆ ಈಗ ಆ ನಂಬಿಕೆಯೇ ನಂಬಿಕೆಯನ್ನು ಕಳೆದುಕೊಂಡಿದೆ. ಹೂಬಾಣಗಳಂತಿದ್ದ ನನ್ನ ಪ್ರೀತಿ ಕೋಪದ ವಿಷವನ್ನು ಸವರಿಕೊಂಡು ನಿಂತಿತ್ತು.

ಅವನಿಗಾಗಿ ನಾನೆಷ್ಟು ರೀತಿಯಲ್ಲಿ ಶೃಂಗರಿಸಿಕೊಂಡಿದ್ದೆ. ಶೃಂಗಾರಕ್ಕೆ ಒಂದು ಶಾಸ್ತ್ರ ಬರೆಯುವಷ್ಟು ಯೋಚಿಸಿದವಳು ನಾನು. ನನ್ನ ಮನಸ್ಸಿನ ಅದೆಷ್ಟು ಭಾವನೆಗಳನ್ನು ಬದಲಿಸಿಕೊಂಡಿದ್ದೆ. ನನ್ನ ತ್ಯಾಗಕ್ಕೆ ಅರ್ಥವೇ ಇಲ್ಲವಾಯ್ತು. ಈತನನ್ನು ಕಾಣಲು ಮನೆಯ ಕೆಲಸಗಳನ್ನು ಅದೆಷ್ಟು ವೇಗದಲ್ಲಿ ಮಾಡಿ ಮುಗಿಸಿದ್ದೆ. ಆತುರದಲ್ಲಿ ಮಾಡದೇ ಬಂದಿದ್ದೆ. ರುಬ್ಬುವಾಗ ಕೈ ಜಜ್ಜಿಕೊಂಡಿದ್ದೆ. ಅಕ್ಕಿ ಕುಟ್ಟುವಾಗ ಕಾಲ ಮೇಲೆ ಒನಕೆ ಬೀಳಿಸಿಕೊಂಡಿದ್ದೆ. ದಾರಿಯಲ್ಲಂತೂ ಎಲ್ಲರಿಗೂ ಉತ್ತರ ಹೇಳಬೆಕಾದರೆ ನನ್ನ ಅರ್ಧ ಜೀವವೇ ಹೋಗಿತ್ತು. ಇದೆಲ್ಲ ಅವನಿಗೆ ತಿಳಿಯುವುದೆಂತು? ಪ್ರೀತಿಸುವುದು ತಪ್ಪೇ? ನನ್ನ ಪಾಲಿಗಂತೂ ತಪ್ಪೆಂದು ಸಾಬೀತಾಯಿತು. ಅವನ ಯಾವ ಪ್ರಣಯಗಳೂ ನನ್ನನ್ನು ತಟ್ಟಲಾರದು. ನನ್ನ ಪ್ರೀತಿಗೆ ಬೆಲೆ ಸಿಗದ ಮೆಲೆ ಆತನ ಪ್ರೀತಿಗೆ ಸ್ಪಂದಿಸಲಾರೆ. ಯಾಕೆ ಸ್ಪಂದಿಸಬೇಕೆಂಬ ತರ್ಕ ನನ್ನದು. ಈ ಸಿಟ್ಟೆಲ್ಲ ಯಾರ ಮೇಲೆ? ಅವನಂತೂ ಇಲ್ಲಿಲ್ಲ. ಕೇವಲ ನನ್ನ ಸಮಾಧಾನಕ್ಕೆ. ಅಸಮಾಧಾನಕ್ಕೆ ಸಿಟ್ಟೇ ಮದ್ದಾಯ್ತು ನನ್ನ ಪಾಲಿಗೆ. ಆತ ಬಂದರೆಷ್ಟು ಬಾರದಿದ್ದರೆಷ್ಟು? ನನಗೋ ಆತ್ಮಗೌರವ ಎದುರಾಯ್ತು. ನಾನು ನಡೆಸಿದ ಹುಚ್ಚಾಟಗಳನ್ನು ನನ್ನ ಆತ್ಮಗೌರವದ ಎದುರು ಅಡ ಇಡಲು ಇಷ್ಟ್ತಪಡಲಿಲ್ಲ. ನಿಧಾನವಾಗಿ ಹಿಂದೆ ಹೆಜ್ಜೆ ಇಡಲಾರಂಭಿಸಿದೆ.

ಮಳೆ ನಿಂತ ಕಾರಣ ಕೆಲ ಜನರು ಓಡಾಟ ಆರಂಭಿಸಿದರು. ಅವರಲ್ಲಿ ಕೆಲವರು ನನ್ನನ್ನು ಆಗ ಪ್ರಶ್ನಿಸಿದವರೂ ಇದ್ದಿದ್ದರು. ಉದ್ಧಟತನದಿಂದ, ‘ಅಹಂ’ನಿಂದ ಉತ್ತರಿಸಿದ ನನಗೆ ಈಗ ಅವರೆಲ್ಲಾ ತುಂಬಾ ಅನುಭವಿಗಳಂತೆ ಕಂಡರು. ಬದುಕಿನ ಸತ್ಯವನ್ನು ಅರಿತು ಅನುಭವಿಸಿದವರಂತೆ ಕಂಡರು. ನಾನು ನನ್ನ ಒಳಗೇ ನಾಚಿಕೊಂಡು ತಲೆ ತಗ್ಗಿಸಿದೆ. ದೇವರೇ ಅವರ್ಯಾರೂ ಪುನಃ ನನ್ನನ್ನು ಕಾಣದಿರಲಿ, ಮಾತನಾಡಿಸದಿರಲಿ ಎಂದು ಹರಕೆ ಹೊತ್ತೆ. ಉತ್ತರಿಸಲು-ಎದುರಿಸುವ ಶಕ್ತಿಯನ್ನೇ ಕಳಕೊಂಡಿದ್ದೆ. ಆದರೂ ಮಸುಕು ಬೆಳಕಿನಲ್ಲಿ ನನ್ನ ಗುರುತು ಸಿಗದಿರಲಿ ಎಂದು ತಲೆತಗ್ಗಿಸಿ ಸೆರಗನ್ನು ಮುಚ್ಚಿ ನಿಧಾನ ನಡಿಗೆಯಿಂದ ಮನೆಯ ಕಡೆ ಹೊರಟೆ. ಅವನನ್ನು ಶಪಿಸುತ್ತಾ ದುಃಖಿಸುತ್ತಾ, ನಾನಿಟ್ಟ ಹಜ್ಜೆಗಳೋ ಒಂದೊಂದು ಹಜ್ಜೆಯೂ ನನ್ನನ್ನು ಚುಚ್ಚುತ್ತಿದ್ದವು. ನೀನು ಇಡುತ್ತಿರುವ ಹಜ್ಜೆಗಳು ತಪ್ಪು ಎಂದು ಅಣಕಿಸುತ್ತಿದ್ದವು. ಆದರೂ ನಾನು ಸರಿಯಾಗಿಯೇ ಇದ್ದೇನೆಂಬ ಭಾವನೆಯಿಂದ ಒತ್ತಿ ಒತ್ತಿ ಹಜ್ಜೆ ಇಟ್ಟಾಗ ಕಲ್ಲುಮಣ್ಣುಗಳು ಮುಳ್ಳುಗಳು ತಾಗಿ ನೋವುಗಳನ್ನೇ ಅನುಭವಿಸುತ್ತಿದ್ದೆ. ನನ್ನನ್ನು ಅಳುವಂತೆ ಅವುಗಳು ಪ್ರಯತ್ನಿಸುತ್ತಿದ್ದವು. ನನ್ನ ಹೃದಯಕ್ಕೆ ಆದ ನೋವಿನ ಎದುರು ಇವೆಲ್ಲಾ ಯಾವ ಲೆಕ್ಕ ಎಂದು ನನ್ನನ್ನು ನಾನೇ ಸಮಾಧಾನಪಡಿಸಿಕೊಳ್ಳುತ್ತಿದ್ದೆ. ಏನು ಮಾಡಿದರೂ ಮನೆಯೇ ಬರುತ್ತಿಲ್ಲ. ಮನೆಯ ಆಕರ್ಷಣೆಯೂ ನನಗಿಲ್ಲ. ಹಾಗಿದ್ದರೆ ಮನೆಕಡೆಗೆ ಯಾಕೆ? ಅದು ಗೊತ್ತಿಲ್ಲ. ಇಲ್ಲ. ನನಗೆ ಏನೂ ಗೊತ್ತಿಲ್ಲ; ಅಥವಾ ಗೊತ್ತಿರುವುದು ಹೆಚ್ಚಾಯ್ತು. ಪ್ರಪಂಚವೇ ನನ್ನನ್ನು ಮೋಸಗೊಳಿಸುತ್ತಿದೆ ಎಂದೆನಿಸಿತು. ನಾನೊಬ್ಬಳು ತಬ್ಬಲಿಯಂತೆ, ಮಗುವಿನಂತೆ, ಅನಾಥಳಂತೆ, ಸೋತವಲಂತೆ-ಇನ್ನೋ ಏನೇನೋ ಅನಿಸಿ ಆಯಾಸಗೊಂಡು, ಏನೂ ಕಾಣದೆ ಕಣ್ಣುಕತ್ತಲಾಗಿ ಕುಳಿತೆ. ಚಡಪಡಿಸುತ್ತಲೇ ಮುಂದೇನು ಎಂದು ಆತಂಕಪಟ್ಟೆ.

ಕಾಂತನ ಮೇಲಿನ ನಿರೀಕ್ಷೆ ಹುಸಿಯಾಯ್ತು. ಸುತ್ತಲೂ ಕತ್ತಲು, ನೀರವತೆ, ನಿಶ್ಶಬ್ದ. ಆದರೆ ನನ್ನ ಹೃದಯದಲ್ಲಿ ಉಲ್ಲೋಲಕಲ್ಲೋಲ-ಭೂಕಂಪ. ಮಳೆಯ ಸಿಡಿಲಿಗಿಂತ ಜೊರಾಗಿ ಹೃದಯದ ಬಡಿತದ ಶಬ್ದ ಕರ್ಕಶವಾಗಿತ್ತು. ಮೆಯ್ಮೇಲೆ ಬಿದ್ದ ಮಳೆಯ ಹನಿಗಳು ಕೊತಕೊತನೆ ಕುದಿದ ಬಿಸಿನೀರಿನ ಹನಿಗಳಂತೆ ಸುಡುತ್ತಿದ್ದವು. ತಂಪಾದ ಗಾಳಿಯೂ ನನಗೆ ಬೆವರು ಸುರಿಯುವಂತೆ ಮಾಡುತ್ತಿತ್ತು. ಹಕ್ಕಿಗಳು ನಾದಪೂರ್ಣ ಚಿಲಿಪಿಲಿಯಿಂದ ನನ್ನನ್ನು ನೋಡಿ ಗೇಲಿಮಾಡುವಂತೆ ಕಂಡಿತು. ಕತ್ತಲು ನನ್ನ ಕಣ್ಣುಗಳನ್ನು ಸೇರಿ ಕುರುಡಿಯಾದೆ. ಕುರುಡಿಯಾದ ನಾನು ಹೊರಗಿನ ಯೋಚನೆಯಿಂದ ಒಳಗೆ ಯೋಚಿಸಲು ಪ್ರಾರಂಭಿಸಿದೆ.

ನನ್ನವನ ಮೇಲಿನ ಪ್ರೀತಿ ಬರಡಾಗಿ ನಿರಾಸೆಯುಂತಾಗಿ ಉದ್ವಿಗ್ನತೆ ನಿಂತು ನನ್ನ ಬಗ್ಗೆಯೇ ಸಂಶಯ ಮೂಡಿತು. ಇದುವರೆಗೆ ನಡೆದಿರುವುದೆಲ್ಲಾ ಸತ್ಯವೇ? ಹಾಗೆಯೇ ನನ್ನವನ ಪ್ರೀತಿಯ ಬಗ್ಗೆ ಸಂಶಯ. ಹಾಗೆಯೇ ಇನ್ಯಾರೋ ನನ್ನವನ ಹಾದಿ ತಪ್ಪಿಸಿರಬಹುದೇ?-ಹೀಗೆ ಎಲ್ಲಾ ರೀತಿಯಿಂದ ಪ್ರಶ್ನಿಸಿದಾಗ ಸಂಶಯಗಳ ಸುಳಿಯಲ್ಲಿ ಕೊಚ್ಚಿಹೋದೆ. ನಾನು ಅನುಭವಿಸಿದ ಅನುಭವಗಳು ಅವು ಸತ್ಯವೆಂದು ಗಂಟೆ ಬಾರಿಸಿದವು. ಆತನ ಮೇಲಿನ ಸಂಶಯವನ್ನು ದೂರಮಾಡಿಕೊಳ್ಳಲು ಆತನನ್ನು ಮನಸ್ಸಿನಲ್ಲೇ ಕಷ್ಟದಲ್ಲಿ ಕುಳ್ಳಿರಿಸಿ ಜಗ್ಗಾಡಿದೆ. ಏನು ಮಾಡಿದರೂ ನನಗಾದ ಕಹಿ ಅನುಭವದ ಸತ್ಯವನ್ನು ಬಿಟ್ಟುಕೊಡಲಾಗಲಿಲ್ಲ..

ಅಷ್ಟನಾಯಿಕಾ ಚಿತ್ತವೃತ್ತಿ : ಅಭಿಸಾರಿಕಾ ನಾಯಿಕೆ
(ಕಳೆದ ಸಂಚಿಕೆಯಿಂದ ಮುಂದುವರೆದುದು…)

ಪ್ರಿಯನ ಸಂದೇಶವನ್ನನುಸರಿಸಿ ಅರಸುತ್ತಾ ಇಲ್ಲವೇ ಪ್ರೇಮ-ಕಾಮಪೀಡಿತಳಾಗಿ ತನ್ನ ಇನಿಯನನ್ನು ತಾನಾಗಿ ಹುಡುಕಿಕೊಂಡು ಹೋಗುವವಳು ಅಥವಾ ತನ್ನ ಪ್ರಿಯನನ್ನು ಸಖಿಯರ ಕಡೆಯಿಂದ ಕರೆಸಿಕೊಳ್ಳುವವಳು ಅಭಿಸಾರಿಕೆ. ಈಕೆಯ ಅಭಿಸರಣದ ಸ್ಥಾನಗಳು : ಸಸ್ಯಸಂಪತ್ತಿನ ಭೂಮಿ, ನಿರ್ಜನ ಪ್ರದೇಶ, ಜೀರ್ಣಾವಸ್ಥೆಯ ದೇವಾಲಯ, ದೂತಿಯ ಮನೆ, ಅರಣ್ಯ, ನದೀ ತಟಾಕ, ಉಪವನ, ಉದ್ಯಾನ, ಸ್ಮಶಾನ, ಸಮುದ್ರತೀರ, ಸೇತುವೆ ಇತ್ಯಾದಿ. ಭಾನುದತ್ತನು ತನ್ನ ಗ್ರಂಥ ರಸಮಂಜರಿಂiiಲ್ಲಿ ಅಭಿಸಾರಿಕೆಯನ್ನು ಮೂರು ವಿಧವಾಗಿ ವಿಂಗಡಿಸಿದ್ದಾನೆ.

೧. ದಿವಸಾಭಿಸಾರಿಕಾ : ಹಾಡುಹಗಲಿನಲ್ಲಿ ನಲ್ಲನೆಡೆಗೆ ಸಾಗುವವಳು.

೨. ಜೋತ್ಸ್ನಾಭಿಸಾರಿಕಾ : ತನ್ನ ಪ್ರಿಯನನ್ನು ಹುಡುಕಿಕೊಂಡು ಚಂದ್ರನ ಬೆಳಕಿನಲ್ಲಿ ಸಾಂಕೇತಿಕ ಸ್ಥಳಕ್ಕೆ ಹೋಗುವವಳು.

೩. ತಮಿಸ್ರಾಭಿಸಾರಿಕಾ ( ಕೃಷ್ಣಾಭಿಸಾರಿಕಾ) : ಕಟ್ಟಿರುಳಿನಲ್ಲಿ ಬೆದರದೆ ತನ್ನ ಪ್ರಿಯನಿಗಾಗಿ ಹೋಗುವವಳು.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು.

ಅಭಿಸಾರಿಕೆಯು ಸರ್ವಾಂಗಭೂಷಿತೆಯಾಗಿ ಲಜ್ಜೆಯಿಂದ ಸಾಗುವವಳಾದರೆ ಆಕೆ ಸ್ವೀಯ. ತನ್ನ ಸಂಗಾತಿ-ಸಂಬಂಧಿಗಳನ್ನೊಳಗೊಂಡು ತನ್ನ ಇರವನ್ನು ತೋರ್ಪಡಿಸುತ್ತಾ ಸಾಗುವವಳಾದರೆ ಪರಕೀಯೆ. ಧೈರ್ಯದಿಂದ, ಮುಸ್ಸಂಜೆ-ಮಧ್ಯರಾತ್ರಿಯ ವೇಳೆಗಳಲ್ಲಿ ವಿಚಿತ್ರ ಹಾಗು ಸುಂದರ ವಸ್ತ್ರಾಭರಣಗಳನ್ನು ತೊಟ್ಟು ಸಂಗಾತಿಗಳೊಡನೆ ಪುರುಷರ ಮನಸ್ಸನ್ನು ಸೂರೆಗೊಳಿಸುತ್ತಾ, ಗೆಜ್ಜೆ-ಕಡಗಗಳನ್ನು ಸದ್ದುಗೊಳಿಸುತ್ತಾ, ಆನಂದದಿಂದ ನಗುತ್ತಾ, ಕಾಮವಿಕಾರದಿಂದ ತೊದಲಾಗಿ ಮಾತನಾಡುತ್ತಾ, ವಿಲಾಸದಿಂದ ಕಣ್ಣುಗಳನ್ನು ವಿಕಸಿಸಿ ಎಡವುತ್ತಾ ಹೋಗುವವಳು ಸಾಮಾನ್ಯೆ. ಉತ್ತಮಳಿಗೆ ಸಮಯಾಸಮಯದ ಪರಿವೆಯೇ ಇರದೆ, ಧೈರ್ಯವೇ ಆಯುಧವಾದರೆ, ಮಧ್ಯಮಳಿಗೆ ಬೇರೊಬ್ಬರ ಸಹಾಯ ಬೇಕು. ಅಧಮಳಿಗೆ ಉತ್ತಮ ವೇಳೆ ಒದಗಬೇಕು.

ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿವೆ.

ಪ್ರಸ್ತುತ ಕಾವ್ಯ ಮತ್ತು ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ.

ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ನಿಮ್ಮ ಕಲ್ಪನೆ-ಚಿಂತನೆಗಳಿಗೆ ಇದು ಮುಕ್ತ ವೇದಿಕೆಯಾಗಲಿ.

ಭಾಮಿನೀ

- ಶತಾವಧಾನಿ ಡಾ. ಆರ್. ಗಣೇಶ್

ಶುದ್ಧಸಾವೇರಿ ರಾಗ : ಶಾರ್ದೂಲ ವಿಕ್ರೀಡಿತ

ನಲ್ಲಂ ತಾಂ ಬರಲಿಲ್ಲಮೇತಕೊ ಅದಂತಿರ್ಕಾನೆ ಪೋಪೆಂ ಸಮು

ತ್ಫುಲ್ಲಂ ಗೊಳ್ವನವಂ ಗಡಂ ಪರಿಕಿಸುತ್ತೆನ್ನಂ ಮಲರ್ದೆಂದು ಮೇ

ಣುಲ್ಲಾಸಂ ಬಿರಿದುಣ್ಮೆ ಧೀರಲಲಿತವ್ಯಾಹಾರದಿಂ ಪೋಗುವಳ್

ಗುಲ್ಲಂ ಸೀಳ್ದಭಿಸಾರಿಕಾಖ್ಯೆ ಮಿಹಿರಂ ಮುನ್ನೀರ್ಗೆ ಸೇರ್ವನ್ನೆಗಂ ||

ಪೂರ್ವಿ ಕಲ್ಯಾಣಿ ರಾಗ : ಮತ್ತೇಭವಿಕ್ರೀಡಿತ

ನರುಗೆಂಪಾಗೆ ದಿಗಂತಮುಂ ವದನಮುಂ ವಿಸ್ಫಾರಿಸಲ್ ಸಾಂಧ್ಯವ

ಲ್ಲರೀಮಲ್ಲೀಸುಮಮುಂ ಹೃದಯಸ್ಥರತಿಯುಂ ಪೆಂಪಯ್ದೆ ಲೀಲಾವನೀ

ಧರೆಯುಂ ಪೇಶಲಕಾಯಮುಂ ರುಚಿರಸಂಕೇತಸ್ಥಲಕ್ಕೇಗೆ ಖೇ

ಚರಿಯುಂ ಚಿತ್ತಮುಮಾಗಳೊಪ್ಪಿದುದಲಾ ರಸ್ಯಾಭಿಸಾರಂ ಕರಂ ||

( ಸಂಜೆಯಾಯಿತು, ತವಕ ಬಲಿಯಿತು. ಇನಿಯನನ್ನೇ ಅರಸಿ ಅದಮ್ಯಕಾಂಕ್ಷೆಯಿಂದ ಅಭಿಸಾರಿಕೆಯಾಗಿ ನಾಯಿಕೆಯು ತೆರಳುವಳು.)

ಮಾಂಡ್ ರಾಗ : ಏಕ, ರೂಪಕ, ಕೋರೆ ತಾಳಗಳು

ಎನಗಿಲ್ಲ ಭಯಕಾರಣ-ವಿಚಾರಣ |

ಮನದಾಣ್ಮನೆಡೆ ಸಾರಲು- ಯಾವಾಗಲೂ || ಪ ||

ಜಗದಾಡಿಕೆಯ ಕೇಳೆನಭಿಜಾತರಿಗೆ ಸೋಲೆ

ನಗಡಿಪ್ಪ ಮಳೆಗಾಳಿಗಳಿಗಂಜೆನು |

ಸೊಗಸಲ್ಲಿ ಸಲ್ಲಲ್ಕೆ ಮಿಗೆ ತರ್ಕ-ಶಂಕೆಯೆ ?

ನಗಲೇಕೆ ? ನಾ ಬಲ್ಲೆನಾ ಸವಿಯನು ||

ಬೆನ್ನಟ್ಟಿ ಸುಮಬಾಣಂ ಬರ್ಪನ್ನಮೆಲ್ಲ ಸಂ

ಪನ್ನೆಯರೇ ಪೆರ್ಮಕೆನ್ನೆಯರೇ |

ಚೆನ್ನಿಗನವನಲ್ಲಿ ಜೊನ್ನಪಾಲ್ಬೆಳಕಲ್ಲಿ

ಮನ್ನಿಸೆ ಮೆಯ್ ಬಿಗಿ ಬಿಡದಿರ್ಪರೇ ?

ಮುಗಿಲೆ ಮಳೆಯಿಂ ಕಳಚಿ ಬೀಳಲಿ

ಜಗವೆ ಸಿಡಿಲಿಂ ಸಿಡಿಯಲಿ |

ಕವಿವ ಕತ್ತಲೆ ಕಣ್ಣ ಕಳೆಯಲಿ

ಬುವಿಯೆ ಬಿಮ್ಮನೆ ಬಿರಿಯಲಿ ||

ಮೇಘಮೇದಿನಿ

- ದಿವಾಕರ ಹೆಗಡೆ, ಧಾರವಾಡ

ಶಿಶಿರೋದಯದಲಿ ಹೊಸಕನಸಿನ ಹದ

ವಸುಮತಿ ತಾನೆಸೆದಳು ಮುದದಿ |

ವಸನಾಪ್ಯಾಯನ ಕುಸುರಿನ ರೇಶಿಮೆ

ರಸೆ ರಾಣಿಯು ತಾ ಸಮ್ಮುದದಿ ||

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

ಇದ್ದಕ್ಕಿದ್ದಂತೆ ಹೊರಗಿನ ಬದಲಾದ ಪ್ರಕೃತಿ ನನ್ನನ್ನು ಸೆಳೆಯಿತು. ಓಡಿ ಬಂದು ಹೊರ ನೋಡಿದೆ. ವ್ಹಾ ! ಬೀಸುತ್ತಿರುವ ತಂಗಾಳಿ; ಮಾದಕತೆಯ ಸುವಾಸನೆಯೊಂದಿಗೆ (ಕಾಲ ವಸಂತಕಾಲ). ಸೂರ್ಯನ ತಾಪ ಕಡಿಮೆಯಾಗಿ ಅಲ್ಲಲ್ಲಿ ಮೋಡಗಳ ದಿಬ್ಬಣ. ಅ‌ಆಷ್ಟೇ ನಾಲ್ಕಾರು ಮಳೆಹನಿಗಳು ಬಿದ್ದು ನೆಲಸುಟ್ಟ ವಾಸನೆ. ಈ ಮಳೆಹನಿಗಳಿಂದ ಭೂಮಿ ಉನಾದಗೊಂದಂತೆ ಅನಿಸಿತು. ಮೋಡಗಳಿಂದ ಉನ್ಮಾದಗೊಂಡ ನವಿಲುಗಳು ಗರಿಬಿಚ್ಚಿ ನರ್ತಿಸುತ್ತಿದ್ದವು. ಪಕ್ಷಿಗಳೆಲ್ಲ ತಮ್ಮ ತಮ್ಮ ಭಾಷೆಗಳಲ್ಲಿ ಹಾಡುತ್ತಿದ್ದವು. ಇವುಗಳಿಗೆಲ್ಲ ಪಾಠ ಹೇಳಿಕೊಡುವಂತೆ ಗುರುವಿನ ಹಾಗೆ ಶ್ರುತಿಯಲ್ಲಿ ಹಾಡುತ್ತಿತ್ತೊಂದು ಕೋಗಿಲೆ. ತುಂಬಿದ ಮರಗಳು ಬೀಸುತ್ತಿರುವ ಗಾಳಿಗೆ ಓಲಾಡುತ್ತಿದ್ದವು. ಇಡೀ ಪ್ರಕೃತಿಯೇ ನಿಗೂಢ ವ್ಯತ್ಯಾಸಕ್ಕೆ ಸ್ಪಂದಿಸುತ್ತಿರುವುದನ್ನು ಕಂಡೆ. ಎಲ್ಲಾ ಶ್ರುತಿವಾದ್ಯಗಳು ಒಮ್ಮೆಲೇ ಮಂಗಳಾರತಿಗೆ ಬಾರಿಸಿದಂತೆ ಭಾವುಕತೆಗೆ ಮಾತ್ರ ಒಳಗಾದೆ. ನನ್ನ ಶ್ರುತಿ ಧ್ವನಿಗೂಡಲೇ ಇಲ್ಲ. ತೆರೆದಬಾಯಿ ತೆರೆದ ಕಣ್ಣು ಹಾಗೇ ಇತ್ತು.

ಅಂಗಳದಲ್ಲಿ ಹೂವು ಮತ್ತು ಬಣ್ಣ ಬಣ್ಣದ ತರಗೆಲೆಗಳ ಪಟಪಟ ಸದ್ದು. ರಭಸದ ಗಾಳಿಗೆ ಇವು ಅರ್ಧವೃತ್ತಾಕಾರದಲ್ಲಿ ಸೈನಿಕರಂತೆ ನಿಂತಾಗ ಗಾಳಿ ನಿಂತಿತು. ಈ ದೃಶ್ಯ ಕಂಡಾಗ ಮನ್ಮಥನ ಹೂಬಾಣದಂತೆ ಕಂಡಿತು. ಇದು ಎಲ್ಲಿಂದ? ಯಾಕೆ? ಅಂಗಳಕ್ಕಿಳಿದು ತಲೆ ಎತ್ತಿ ಕಂಡೆ. ಆಗಸದಲ್ಲಿ ಸಪ್ತವರ್ಣದ ಕಾಮನಬಿಲ್ಲು ಪ್ರಾಯಶಃ ನನ್ನ ಪರಿಸ್ಥಿತಿ ಅರಿತು ಕಾಮನಬಿಲ್ಲನ್ನು, ಈ ಹೂಬಾಣವನ್ನು ನನ್ನೆಡೆಗೆ ಕಳಿಸಿದನೇ? ಈ ಸುಂದರ ಹೊಂದಿಕೆಯಿಂದ ಪರವಶಳಾದೆ. ಪ್ರಕೃತಿಯಲ್ಲೂ ನಾನು ಒಬ್ಬಳಾದೆ. ನೂರಾರು ಭಾವಗಳು ಬೆಂಕಿಯಂತೆ ಸುಡುತ್ತಿದ್ದವು. ಇನ್ನು ಕನಸು ಕಾಣುವುದು ವ್ಯರ್ಥ. ಯೋಚನೆ ಕಲ್ಪನೆಗಳು ಚಿಂತೆ ಆಗುವ ಮೊದಲು ಫಲಪ್ರಾಪ್ತಿ ಆಗಲೇಬೇಕು. ನನ್ನವನು ಬರುವವರೆಗೂ ನಾನು ಕಾಡಿರುವುದಕ್ಕಿಂತ ನಾನೇ ಆತನ ಬಳಿಗೆ ತೆರಳಬೇಕು.

ಪ್ರಕೃತಿಯ ವೇಗಕ್ಕೆ ನಾನೂ ಸ್ಪಂದಿಸಬೇಕೆಂದು ಮನೆಯಿಂದ ಹೊರಟೆ. ನನ ನಿರ್ಧಾರವೇ ನನ್ನ ಚಿಂತೆಗಳನ್ನೆಲ್ಲಾ ದೂರಮಾಡಿತ್ತು. ಹೊಸದಾದ ಉತ್ಸಾಹ ಧೈರ್ಯ ನನ್ನನ್ನು ಆವರಿಸಿತ್ತು. ಮುಸ್ಸಂಜೆಯಾದ್ದರಿಂದ ಜಾಗರೂಕತೆಗೆ, ಪ್ರಖರವಾದ ಬೆಳಕಿಗೆ ಎಣ್ಣೆದೀಪವನ್ನು ಹಿಡಿದು ನಿಂತೆ.ನ್ನ್ನ ಪ್ರಖರತೆಯ ಕಣ್ಣುಗಳ ಮುಂದೆ ದೀಪ ಮಂದವಾಗಿಯೇ ಇತ್ತು. ದೀಪವೂ ಅನಗತ್ಯವಾಗಿತ್ತು. ಏಕೆಂದರೆ ನಾನಿಟ್ಟ ಹೆಜ್ಜೆಗಳು ಸರಿಯಾಗಿಯೇ ಇರುತ್ತಿದ್ದವು. ನನ್ನ ದೃಷ್ಠಿ ಬಲಿಷ್ಠವಾಗಿತ್ತು. ಸ್ವಲ್ಪ ದಾರಿ ನಡೆಯುತ್ತಿರುವಾಗಲೇ ಗಾಳಿಗೆ ದೀಪ ಆರಿತು. ಮನೆಯಿಂದ ಹೊರಡುವಾಗ ಧೈರ್ಯಕ್ಕೆ ಮಾತ್ರ ದೀಪ ಬೇಕಾಗಿತ್ತು. ಅದರೆ ನನ್ನ ಹೃದಯದಲ್ಲಿಯ ಧೈರ್ಯದ ದೀಪಕ್ಕೆ ಕಣ್ಣಿನ ಕಾಂತಿಯ ಎದುರು ಯಾವ ದೀಪ ಎಷ್ಟು ಇರಲಾದೀತು? ಚಿಂತಿಸದೆ ಮುನ್ನಡೆಯುತ್ತಲೇ ಇದ್ದೆ.

ಗೌರವ ಪ್ರದರ್ಶನಕ್ಕೆ ಮುಸುಕು ಬೇರೆ ಕೇಡು. ಅದನು ಸರಿಸಿಕೊಳ್ಳುತ್ತಾ ತ್ವರಿತಲಯದಲ್ಲಿ ನಡೆಯುತ್ತಿದ್ದೆ. ನಿಜ ಹೇಳಬೇಕಿದ್ದರೆ ಬೇರೆಯವರ ದೃಷ್ಟಿಯಲ್ಲಿ ಓಡುವಷ್ಟು ಆತುರದಿಂದ ನಡೆಯುತ್ತಿದ್ದೆ. ಆದರೂ ಮಧ್ಯದಾರಿಯಲಿ ತಡೆದು ತಡೆದು ಬೇರೆಯವರ ದೃಷ್ಟಿಯಲ್ಲಿ ಪ್ರಶ್ನೆಗಳ ಸುರಿಮಳೆ. ನಾನೋ ಘಾಟಿ. ‘ಇಲ್ಲೇ ದೇವಸ್ಥಾನಕ್ಕೆ ಹೋಗಿ ಬರುವವಳಿದ್ದೆ. ಕತ್ತಲಾಗುತ್ತಲ್ಲ ಅದಕ್ಕೆ ಅವಸರ’ ಎಂದೆ. ‘ಇವರಿಗೆಲ್ಲಾ ಯಾಕೆ ನನ್ನ ಉಸಾಬರಿ?’ ಎಂದು ಮನಸಾ ಶಪಿಸಿದೆ. ಒಂದು ರೀತಿಯ ಧೈರ್ಯದಲ್ಲೇ ಹಜ್ಜೆ ಹಾಕುತ್ತಿರುವುದರಿಂದ ಹೆಚ್ಚಿಗೆ ಪ್ರಶ್ನೆಗಳಿಗೆ ಸಾಹಸ ಮಾಡಲಿಲ್ಲ. ಇವರೆಲ್ಲ ನನ್ನ ಪಾಲಿಗೆ ಅಪಶಕುನಗಳ ಪ್ರಾಣಿಗಳು ಎನ್ನಿಸಿತು. ನನ್ನ ನಡಿಗೆಯ ವೇಗ ಹೆಚ್ಚಿಸಿದೆ.

ನನ್ನ ವೇಗಕ್ಕಿಂತ ಮಳೆಯ ವೇಗ ಹೆಚ್ಚಾಗುತ್ತಿತ್ತು. ರಭಸದಿಂದ ಬಡಿದ ಮಳೆಯಿಂದ ಮೈಯ್ಯೆಲ್ಲಾ ಒದ್ದೆ ಆಯ್ತು. ಬೀಳುತ್ತಿರುವ ಮಳೆಯೊಂದಿಗೆ ಆಟವಾಡುತ್ತಲೇ ನಡೆದು ಆನಂದ ಪಡೆಯುತ್ತಿದೆ. ಆತನ ಸಮಾಗಮದ ಆತುರ, ನಿರೀಕ್ಷೆ, ಕನಸುಗಳಿಂದ ನನ್ನ ಮೈಯ್ಮನಗಳು ಕಾದಿದ್ದವು. ಮಳೆಯಿಂದಲೂ ನನ್ನ ದೇಹವೇನೂ ತಣಿದಿಲ್ಲ; ದಣಿದಿಲ್ಲ. ಆಗಾಗ ನನ್ನ ಸಮರ್ಪಣಾ ಭಾವವನ್ನು ಎಣಿಸಿ ಅಹಂಕಾರ ಪಡುತ್ತಿದ್ದೆ. ಪ್ರೀತಿಗಾಗಿ ನನ್ನ ಆತುರದ ದಾರಿಯನ್ನು ಕಂಡ ನನ್ನವನು ಸೋಲುತ್ತಾನೆ ಎಂಬ ನಂಬಿಕೆ ನನ್ನದು. ಪ್ರೀತಿ ಎನ್ನುವುದು ಹಾಗೇಯೇ ಅಲ್ಲವೇ? ಲೌಕಿಕ ಅಡೆತಡೆಗಳಿಂದ ಪ್ರೀತಿ ಇನ್ನಷ್ಟು ಹರಿತವಾಗುತ್ತದೆಯೇ ವಿನಾ ಕಡಿಮೆ ಆಗಲಾರದು. ಇವೆಲ್ಲಾ ನನ್ನ ಸುತ್ತಮುತ್ತಲಿನ ಗೊಡ್ಡುಮಂದಿಗೆ ಹೇಗೆ ಅರ್ಥವಾದೀತು? ನನ್ನ ವೇಗಕ್ಕೆ ತೊಡಕುಂಟು ಮಾಡುವವರನ್ನು ಪಾಪಿಗಳೆಂದ ಬಗೆದ ನನಗೆ ಅವರೆಲ್ಲಾ ಪಾಪದವರೆಂದು ಭಾವಿಸಿ ಉದಾರಿಯಾದೆ. ಗುಡುಗು ಮಿಂಚುಗಳು ನಿಧಾನವಾಗಿ, ನನ್ನ ಎದೆಯ ಗಟ್ಟಿತನಕ್ಕೆ ಗುಡುಗೂ ನಿಂತಿತು. ನನ್ನ ಕಣ್ಣಿನ ಕಾಂತಿಗೆ ಮಿಂಚೂ ನಾಚಿತು. ತೊಟ್ಟಿಕ್ಕುವ ಮಳೆಯ ಹನಿಗಳು ನನ್ನ ನಡೆಗೆ ಲಯವನ್ನು ಒದಗಿಸಿದವು. ಅಂತೂ ಅಬ್ಬರದಿಂದ ಹೊರಟ ನನಗೆ ದಾರಿಯುದ್ದಕ್ಕೂ ಅಬ್ಬರದ ಸ್ವಾಗತಗಳೇ ಇದ್ದವು. ಅಮ್ತೂ ನಾನು ಎಣಿಸಿದ ಸ್ಥಳವನ್ನು ಬಂದು ಮುಟ್ಟಿದೆ.

ನನಗೆ ಮೊದಲೇ ನಲ್ಲ ಬಂದುಬಿಟ್ಟನೋ ಎಂಬ ಆತಂಕದಲ್ಲಿದ್ದ ನನಗೆ ಆ ಸ್ಥಳದಲ್ಲಿ ಆತನಿಲ್ಲದಿರುವುದೂ ಒಂದು ಕ್ಷಣ ಸಮಾಧಾನ ಆಯ್ತು. ಆದರೂ ಆತಂಕದಿಂದ ಎಲ್ಲಾ ದಿಕ್ಕುಗಳಲ್ಲೂ ನೋಡಿದೆ. ಸಾವಧಾನವಾಗಿ ಎತ್ತರ ಬಂಡೆಯನ್ನು ಏರಿಕುಳಿತು ಯೋಚಿಸಿದೆ. ಆತ ಬರೆದ ಪತ್ರದ ಒಕ್ಕಣಿಕೆಯನ್ನು ನೆನಪಿಸಿಕೊಂಡೆ. ದುತನಿಂದ ತಿಳಿಸಿದ ಮಾತುಗಳನ್ನು ನೆನಪಿಸಿಕೊಂಡೆ. ಆತ ಬರುವ ಸ್ಥಳ ಇದೇ ಎಂದು ಖಾತರಿಪಡಿಸಿಕೊಮ್ಡೆ. ನನ್ನ ಸ್ಥಳದ ಆಯ್ಕೆ ಗೊಂದಲವಾಗದಿರಲಿ ಎಂದು ಮುಂದುವರೆದು ನದಿಯ ತೀರದ ಸೇತುವೆಯ ಬಳಿ ಬಂದು ನಿಂತೆ. ಇನ್ನೂ ಮುಂದುವರೆದರೆ ಹಲವು ದಾರಿಗಳು. ಗೊಂದಲ ಆದೀತೆಂದು ಅಲ್ಲೇ ಇದ್ದು ಆತನನ್ನು ಸ್ವಾಗತಿಸಲು ಸಿದ್ಧಳಾದೆ. ಆಗಲೇ ಮೋಡಗಳು ಸರಿದು ಸೂರ್ಯನ ಒಂದು ರೀತಿಯ ಕೆಂಪುಕಿರಣಗಳಿಂದ ಪ್ರತಿಫಲನಗೊಂಡ ಆಕಾಶ ಶುಭ್ರತೆಯೊಂದಿಗೆ ಪ್ರಶಾಂತವಾಗಿತ್ತು. ಕತ್ತಲಿನ ಛಾಯೆ ಇದ್ದರೂ ಮುಖಗಳನ್ನು ಗುರುತಿಸುವಷ್ಟು ಬೆಳಕಾಗಿತ್ತು. ನನ್ನ ಧಾವಂತದ ಆಯಾಸ ತಣಿಯುತ್ತಲೇ ಹೃದಯದ ಧಾವಂತ ಹೆಚ್ಚುತ್ತಿತ್ತು…

ಅಷ್ಟನಾಯಿಕಾ ಚಿತ್ತವೃತ್ತಿ : ವಾಸಕಸಜ್ಜಿಕಾ ನಾಯಿಕೆ
(ಕಳೆದ ಸಂಚಿಕೆಯಿಂದ ಮುಂದುವರೆದುದು…)

ತನ್ನನ್ನು ಮತ್ತು ತನ್ನ ಕೋಣೆಯನ್ನು ಆಸ್ಥೆಯಿಂದ ಸಿಂಗರಿಸಿಕೊಂಡು ಪ್ರಿಯಕರ/ನಾಯಕನ ಬರುವಿಕೆಗಾಗಿ ನಿರೀಕ್ಷೆ ಹೊಂದಿ ಸಿದ್ಧವಾಗಿರುವವಳೇ ವಾಸಕಸಜ್ಜಿಕೆ. ನಾಯಕನೊಂದಿಗೆ ಸಂಗಸುಖದ ಕನಸು ಕಾಣುತ್ತಾ, ಭವಿಷ್ಯವನ್ನು ನೆನೆದು ಸಂತಸ ಹೊಂದುವವಳು; ಆಗಾಗ್ಗೆ ನಾಯಕನ ದಾರಿ ನೋಡುತ್ತಾ ಊಟೋಪಚಾರದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡು ತನ್ನ ನಿರೀಕ್ಷೆಯನ್ನು ಹಲವು ಮಾದರಿಗಳಲ್ಲಿ ವ್ಯಕ್ತಪಡಿಸುತ್ತಾಳೆ. ಸಖಿಯರೊಡನೆ ಆತನ ಬರುವಿಕೆಯ ಕುರಿತಂತೆ ಕೇಳುತ್ತಾ, ಆತನ ಬಗ್ಗೆಯೇ ಪ್ರಿಯ ಮಾತನ್ನಾಡುವವಳಾದ ಈಕೆ ; ಉತ್ಸಾಹಿತಳಾಗಿರುತ್ತಾಳೆ.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು.

ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ.

ಪ್ರಸ್ತುತ ಕಾವ್ಯ ಮತ್ತು ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ.

ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ಅಂದಹಾಗೆ ಮಂಟಪ ಉಪಾಧ್ಯರ ಕಲಾಭಿವ್ಯಕ್ತಿಯನ್ನು ಕಂಡ ಕೂಚಿಪುಡಿಯ ನಡೆದಾಡುವ ದಂತಕತೆ ವೇದಾಂತಂ ಸತ್ಯನಾರಾಯಣ ಶರ್ಮ ಅವರು ಆನಂದತುಂದಿಲರಾಗಿ ಕೂಚಿಪುಡಿ ಗ್ರಾಮದಲ್ಲಿ ೧೦೮ ಚಿನ್ನದ ಹೂಗಳ ಕನಕಾಭಿಷೇಕವನ್ನು ನೆರವೇರಿಸಿದ್ದು ಅಭಿವ್ಯಕ್ತಿಯ ಧನ್ಯತೆಗೆ ಸಾಕ್ಷಿಯಾದ ಸುದ್ದಿ. ಇಂತಹ ಕಲಾಭಿವಕ್ತಿಯ ತವರು ಕರ್ನಾಟಕ ಮತ್ತು ಅಂತಹ ಅತ್ಯಪೂರ್ವ ರಾಜ ವೈಭೋಗದ ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಾ ಬಂದಿರುವ ಸಂಸ್ಕೃತಿ ಮತ್ತಷ್ಟು ಎಲ್ಲೆಡೆ ಬೆಳಗಲಿ.

ಭಾಮಿನೀ

- ಶತಾವಧಾನಿ ಡಾ. ಆರ್. ಗಣೇಶ್

ರಾಗ : ಅಭೇರಿ ; ಭೋಗಷಟ್ಪದಿ

ದಿನದ ಬೇಗೆ ತಗ್ಗುತಿರಲು ಮನದ ಮಥನವಿಳಿಯುತಿರಲು

ಅನುಪಮಶುಭಶಕುನದಿಂದ ಭರವಸೆಗೊಳುತೆ

ಮನೆಯನೆಲ್ಲ ನೇರ್ಪಗೊಳಿಸಿ ತನುವನೆಲ್ಲ ತಣಿಸಿ ಕುಣಿಸಿ

ಇನನು ಬರುವನೆಂದೆಣಿಪಳು ವಾಸಕಸಜ್ಜೆ

(ಶುಭ ಶಕುನಗಳಿಂದ ಅಂದೇ ಆತನು ಬರುವನೆಂದು ಊಹಿಸಿ ಸಂಭ್ರಮದಿಂದ ಮನೆಯನು ಓರಣಗೈದು ಸಿಂಗರಿಸಿಕೊಂಡು ಅಣಿಯಾಗಿ ನಲ್ಲನ ಹಾದಿನೋಡುವಳು.)

ರಾಗ : ಯಮುನಾ ಕಲ್ಯಾಣಿ- ಏಕ ತಾಳ, ತ್ರಿಪುಟತಾಳ, ಅಷ್ಟತಾಳ

ಬರಲಿಹೆ ನೀನೆನುವಾಸೆಯಿಂದಲೆ

ನ್ನುರದೊಳು ನಂದನವಿಂದು ಸಂದಿದೆ

ಎಂತಸಾರ ಮದೀಯಜೀವನ

ಕಾಂತ ! ನೀ ಬರದಿರಲು ಮೋಹನ ಪ

ಸಿಂಗರಕೆಂದಣಿಯಾಗಲು ನಾ ಸ್ಮರ

ಸಂಗರ ! ನೀ ಬಂದವೊಲೆನಗಾದುದು

ಮಂಗಳಾಂಗಿ ಸಖಿ ಸುಳಿದಿರಲೀ ಕಡೆ

ಕಂಗಳ ತೋರಣ ಕದದೆಡೆ ಕೋದುದು

ಸಜ್ಜೆಯ ಸವರಿಸಿ ಸಜಾಗಿಸುತಿರೆ

ಲಜ್ಜೆಯದನು ಸುಳಿಸುತ್ತುವುದು

ಹಜ್ಜೆ ನಿನ್ನದೆಂಬಂತೀ ಪ್ರಕೃತಿಯೇ

ಬಿಜ್ಜೆಯ ತೋರಿದೆ ಕೈತವದಾ

ದಯಿತ! ನೀಣುದಯಮಾಡಿಸೀಗಲೇ

ನಯವಿದ! ನಯವಿದನರಿಯಲಾರೆಯಾ ?

ಜಯವನು ಕರುಣಿಸೆ ಬಿಜಯಮಾಡೆಯಾ ?

ಸ್ಮಯವ ಸಡಲಿಸಿ ಸುಖಿಯಾಗಿಸೆಯಾ?

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

ಪ್ರಕೃತಿಯ ಸಹಜಲಯಕ್ಕೆ ಹೊಂದಿಕೊಳ್ಳಲಾರದೆ, ಕೆಲಸ ಮಾಡಲು ಇಷ್ಟವಿಲ್ಲದೆ ನಿರುತ್ಸಾಹದಿಂದ ಉಯ್ಯಾಲೆಯಲ್ಲಿ ಕುಳಿತೆ. ಕಾಲನ್ನು ನೆಲದಿಂದ ಚಿಮ್ಮಿಸಿ ಹಾಗೆಯೇ ತೂಗಾಡುತ್ತಲೇ ಇದ್ದೆ. ನಿಧಾನವಾಗಿ ಉಯ್ಯಾಲೆಯ ಗತಿಗೆ ನನ್ನ ಮನದ ಉದ್ವೇಗಗಳೆಲ್ಲಾ ಕಡಿಮೆ ಆಗುತ್ತಾ ಹೊಂದಿಕೊಂಡೆ. ಒಮ್ಮೆಲೇ ರಭಸದ ಮಳೆ ನಿಂತು ಹನಿಹನಿಯಾಗಿ ತೊಟ್ಟಿಕ್ಕುವಂತೆ ನನ್ನ ಯೋಚನೆಗಳ ಪ್ರವಾಹ ನಿಂತು ಉಯ್ಯಾಲೆಯ ಚರ್ರ್ ಚರ್ರ್ ಎಂಬ ಶಬ್ದದಲ್ಲಿ ಕೇಂದ್ರವಾಯ್ತು. ಉಯ್ಯಾಲೆಯ ಹಗ್ಗ ಹಿಡಿದು ಕೈಯ ಮೇಲೆ ತಲೆ ಇಟ್ಟು ಒರಗಿ ಶೂನ್ಯದತ್ತ ನೋಡುತ್ತಾ ಅದೆಷ್ಟೂ ಹೊತ್ತು ಇದ್ದೆನೋ ತಿಳಿಯದು. ಇದ್ದಕ್ಕಿದ್ದಂತೆ ಎಡಗಣ್ಣು ಅದುರಿತು. ಎಡಗೈತೋಳು ಅದುರಿತು. ಒಮ್ಮೆಲೇ ಎಚ್ಚರಗೊಂಡೆ. ನನಗಾದ ಅನುಭವದ ಸತ್ಯತೆಗೆ ಕಾದೆ. ಹೌದು; ಪುನಃ ಹಾಗೆಯೇ ಆಯ್ತು. ಯಾಕೆ ಹೀಗೆ? ಮೇಲಿಂದ ಮೇಲೆ ಹೀಗೆ? ಹೋ ! ಅಮ್ಮ ಹೇಳುತ್ತಿರುವ ಮಾತು ನೆನಪಾಯ್ತು. ಹೆಣ್ಣಿ‌ಎಗೆ ಎಡಬದಿಯ ಶಕುನಗಳು ಶುಭದಾಯಕ ಎಂದು. ನನಗ್ಯಾವ ಕರ್ಮದ ಶುಭ ? ನೀರಸಳಾಗಿ ಕುಳಿತೆ.

ಆದರೆ ನಂಬಿಕೆಗಳೆಲ್ಲಾ ಹುಸಿಯಾದಾಗ ನನ್ನ ಪಾಲಿಗೆ ಶಕುನವೂ ಅನಿವಾರ್ಯ ಎಂದೆನಿಸಿತು. ಬೆಳಗಿನಿಂದ ನಿರೀಕ್ಷೆಯಲ್ಲಿರುವ ನನ್ನ ಪತಿಯ ಬರವೇ ಶಕುನದಂತೆ ಕಂಡಿತು. ಹತ್ತಾರು ಬಾರಿ ಯೋಚಿಸಿದೆ. ನಂಬಿಕೆ ಜಾಗೃತವಾಗಿ ಪ್ರೀತಿಯು ಮತ್ತೊಮ್ಮೆ ನನ್ನವನಲ್ಲಿ ನೆಟ್ಟಿತು, ಚಿಗುರಿತು, ಅರಳಿತು, ಮನವು ಮತ್ತೆ ಓಲಾಡಿತು. ಸಂಭ್ರಮದ ಆವೇಶದಿಂದ ಉಯ್ಯಾಲೆಯಿಂದ ಜಿಗಿದೆ. ಕುಣಿದೆ. ಹಾರಿದೆ; ಪ್ರಪಂಚ ನನಗಾಗಿ ಕಾದಿದೆ ಎನಿಸಿತು. ಅತ್ತ ಇತ್ತ ಅರ್ಥವಿಲ್ಲದೆ, ಕಾರಣ ಇಲ್ಲದೆ ನಲಿದೆ. ನನಗೊಬ್ಬಳಿಗೇ ಜೀವ ಇದೆ ಎನಿಸಿತು. ಪ್ರಪಂಚದ ಎಲ್ಲ ಆಗುಹೋಗುಗಳು ಜಡವಾಗಿ ಕಂಡವು. ಎಲ್ಲವೂ ಮಂದಲಯದಲ್ಲಿದ್ದಂತೆ ಕಂಡಿತು.

ಎಲ್ಲಕ್ಕಿಂತ ನನ್ನ ಮನೆಯೇ ಸತ್ತಿದೆ ಎನ್ನಿಸಿತು. ಅಂಗಳದಲ್ಲಿ ತರಗೆಲೆಗಳ ರಾಶಿ. ಅವಸರ ಅವಸರವಾಗಿ ಗುಡಿಸಿದೆ. ಬಿಂದಿಗೆಯ ನೀರಿನಿಂದ ಅಂಗಳವನ್ನು ಸೆಗಣಿಸಾರಿಸಿ ಒಪ್ಪ ಮಾಡಿದೆ. ಯಾವತ್ತೂ ಇಲ್ಲದ ಲವಲವಿಕೆ. ಹತ್ತಾರು ದಿನದ ಎಲ್ಲಾ ಕೆಲಸಗಳನ್ನು ಹತ್ತಾರು ಕ್ಷಣಗಳಲ್ಲೇ ಮಾಡಿ ಮುಗಿಸಿದೆ. ಎಲ್ಲಾ ಕೆಲಸಗಳಲ್ಲೂ ಆತನ ಮಂದಹಾಸ ಪ್ರೇರಣೆ ನೀಡುತ್ತಿತ್ತು. ಆತನನ್ನು ಅದ್ಧೂರಿಯಾಗಿ ಸ್ವಾಗತಿಸಬೇಕೆಂದು ಆತ ಗಾಡಿ ಇಳಿಯುವ ಸ್ಥಳಕ್ಕೆ ಬಂದು ಮನೆಯ ಅಲಂಕಾರ ನೋಡಿದೆ. ಮಲ್ಲಿಗೆಯ ಹೂಗಳು ನನ್ನ ತಲೆಯ ಮೇಲೆ ಉದುರಿದಾಗ ನನಗೆ ಹೀಗನ್ನಿಸಿತು : ನಾವೂ ನಿನಗೆ ಸಹಾಯ ಮಾಡುವೆವು ಎಂದು ತಿಳಿಸಲು ಅರಳಿ ತಮ್ಮ ಸಂತೋಷ ತಿಳಿಸುತ್ತಿದ್ದವು. ಹೂಗಳನ್ನೆಲ್ಲಾ ಕುಯ್ದು ಮಾಲೆ ಮಾಡಿದೆ. ಒತ್ತೊತ್ತಾಗಿ ಮಾಡಿದ ಮಾಲೆಯ ಕಂಪಿನಿಂದ ಇನ್ನಷ್ಟು ಉನ್ಮತ್ತೆಯಾದೆ.

ಇನ್ನೇನು ಆತ ಗಾಡಿ ಇಳಿಯುವ ದೃಶ್ಯವನ್ನು ಎಣಿಸಿಕೊಂಡೇ ಮುಖವನ್ನು ಏರಿಸಲಾರದೆ ತಲೆತಗ್ಗಿಸಿ ಕಾಲನ್ನು ಗೀರುತ್ತಿದ್ದೆ. ಏನೋ ಶೂನ್ಯತೆ ನನ್ನನ್ನು ಎಚ್ಚರಿಸಿತು. ಆತ ಇಳಿಯುವಲ್ಲಿಂದ ರಂಗವಲಿಯ ಚಿತ್ತಾರಗಳನ್ನು ಮೂಡಿಸಿದೆ. ರಂಗವಲ್ಲಿಯನ್ನಿಡುವಾಗ ನನ್ನ ಲೋಕವೇ ಬೇರೆ. ಒಂದೊಂದೇ ಬಿಂದುಗಳನ್ನು ಇಡುವಾಗ ಆತನದ್ದೇ ಯೋಚನೆ. ಎಷ್ಟೆಂದರೆ ಒಂದೇ ಸ್ಥಳದಲ್ಲಿ ಬಿಂದುಗಳ ರಾಶಿ. ರಂಗವಲ್ಲಿಯ ಬಿಂದುಗಳು ನನ್ನ ತಲೆಯಂತೆಯೇ ಅಳತೆ ತಪ್ಪಿ ಬಿದ್ದಿದ್ದುವು. ‘ಯಾರಾದರೂ ನನ್ನನ್ನು ನೋಡಿದರೆ…’ ಎಂದು ಆಚೆ ಈಚೆ ನೋಡಿದೆ. ಸದ್ಯ ಯಾರೂ ಗಮನಿಸಲಿಲ್ಲ. ಜಾಗೃತಳಾಗಿ ರಂಗವಲ್ಲಿಯ ಬಿಂದುಗಳನ್ನು ಸೇರಿಸಲು ಮುಂದಾದೆ. ಒಂದೊಂದು ಬಿಂದುವನ್ನು ಸೇರಿಸುವಾಗಲೂ ಆತನ ಸಮಾಗಮದ ನೆನಪುಗಳಾಗಿ ರಂಗವಲ್ಲಿಯ ಶೋಭೆಗೆ ನನ್ನಿಂದ ಜೀವ ನೀಡಲಾಗುತ್ತಿಲ್ಲವಾಗಿತ್ತು. ಅಂತೂ ಆತ ಎಲ್ಲಿಂದ ನಡೆದು ಬಂದರೂ ನಾನು ಬರೆದ ರಂಗವಲ್ಲಿಯನ್ನು ಮೆಟ್ಟಿಯೇ ಬರುವಂತೆ ಚಿತ್ರಿಸಿದೆ. ಮಾಡಿದ ಮಲ್ಲಿಗೆಯ ಮಾಲೆಯನ್ನು ಅಳತೆಸರಿಪಡಿಸಿಕೊಂಡು ಹಾರವಾಗಿ ಮಾಡಿ ಸಿದ್ಧವಾಗಿಟ್ಟೆ. ಹಾಗೆಯೇ ಹೂಮಲೆಯನ್ನು ಸ್ಪರ್ಶಿಸುವಾಗ ಆತ ಹೇಳಿದ ಮಾತು ನೆನಪಾಯ್ತು. ‘ಮುತ್ತಿನ ಮಾಲೆ’ ! ಮುತ್ತಿನಮಾಲೆಯನ್ನು ತರುವೆ ಎಂದು ಮುತ್ತುಗಳನ್ನೇ ನೀಡಿದ ಆ ಅನುಭವ ! ಛೇ ! ಹೇಳಲಾರೆ ! ಕರಗಿ ನೀರಾದ ನಾನು ಅಲ್ಲಿ ನಿಲ್ಲಲಾರದೆ ಮನೆಯೊಳಗೆ ಓಡಿಬಂದೆ.

ಮನೆಯನ್ನೆಲ್ಲಾ ಓರಣವಾಗಿಟ್ಟೆ. ಎಲ್ಲಾ ಸರಿ, ಶೃಂಗಾರ ದೇಗುಲವಾಗಿರಿಸಿದ ನನ್ನ ಮನೆಯನ್ನೇ ನಾನು ಕಸವಾಗಿ ಕಂಡಿದ್ದೆ. ಅದಕ್ಕೂ ತಡಮಾಡಲಿಲ್ಲ. ಕೆದರಿದ ತಲೆಗೂದಲನ್ನು ಬಾಚಿ ಹೆಣೆದು ಜಡೆಯನ್ನು ಹಾಕಿಕೊಂಡೆ. ಮುಖ ತೊಳೆದು ಶುಭ್ರಳಾದೆ. ಕಣ್ಣಿಗೆ ಕಪ್ಪಿಟ್ಟು ಹಣೆಗೆ ಘಮಘಮಿಸುವ ತಿಲಕವನ್ನಿಟ್ಟುಕೊಮ್ಡೆ. ಕೈಗಳಿಗೆ ಹೆಚ್ಚಾಗಿಯೇ ಬಳೆಗಳನ್ನು ಸುರಿದುಕೊಂಡೆ. ಇದುವರೆಗೆ ಕಿರಿಕಿರಿ ಎನಿಸಿ ತೆಗೆದಿರಿಸಿದ ಕಾಲ್ಗೆಜ್ಜೆಗಳನ್ನು ತೊಟ್ಟು ಜಿಗಿಯುವಂತಾದೆ. ಇನ್ನು ಆಭರಣಗಳೇ ಸ್ವಲ್ಪ ಗೊಂದಲವಾಯ್ತು. ಯಾವುದನ್ನು ಉಪಯೋಗಿಸಬೇಕೆಂಬುದನ್ನೇ ಯೋಚಿಸಲಾರದೆ, ನಿರ್ಧರಿಸಲಾರದೆ ಕೈಗೆ ಸಿಕ್ಕಿದ್ದನ್ನು ಧರಿಸಿದೆ. ಆವಾಗಲೇ ನಾನು ಸುಂದರಿಯೂ ಇದ್ದೇನೆ ಎಂಬ ಖಾತ್ರಿ ಆಗಿತ್ತು.

ಕೈಗಳಿಗೆ ಚಿತ್ತಾರಗಳನ್ನು ಹಾಕಿಕೊಳ್ಳುವಷ್ಟು ಪುರುಸೊತ್ತು, ತಾಳ್ಮೆ ಎರಡೂ ಇಲ್ಲವಾಗಿತ್ತು. ಮಲ್ಲಿಗೆಯ ಮಾಲೆ ತಲೆ ಸೇರಿತು. ಎಲ್ಲವನ್ನೂ ಮುಗಿಸಿದಾಗ ನನ್ನ ಹೊಳಪಿನ ಮುಖವನ್ನೊಮ್ಮೆ ಅವಲೋಕಿಸಿದೆ. ನನ್ನ ಕ್ರಾಂತಿಯ ಪ್ರತಿಫಲನ ಕನ್ನಡಿಯಲ್ಲಿ ಅಷ್ಟಾಗಿ ಕಾಣಿಸಲಿಲ್ಲ. ಯಾಕೆ? ಹೌದು. ನಾಲ್ಕಾರು ದಿನಗಳಿಂದ ಅಲಂಕರಿಸಿಕೊಳ್ಳದೆ ಕನ್ನಡಿ ತನ್ನ ಕರ್ತವ್ಯದಿಂದ ಮರೆಯಾಗಿತ್ತು. ಅಲ್ಲ, ನಾನೇ ಅದಕ್ಕೆ ರಜೆ ನೀಡಿ ಧೂಳುಗಳಿಗೆ ವಿಶ್ರಾಂತಿಯ ನೆಲೆಯಾಗಿಸಿದ್ದೆ. ತತ್‌ಕ್ಷಣ ನನ್ನ ತಪ್ಪಿಗೆ ನಾನೇ ನನ್ನ ಸೆರಗಿನಿಂದ ಒರೆಸಿದೆ. ಸೆರಗೆಲ್ಲಾ ಧೂಳು. ಅಲ್ಲ, ‘ಸೀರೆಯನ್ನೇ ಬದಲಿಸು’ಎಂದು ದರ್ಪಣಸುಂದರಿಗೆ ಜ್ಞಾನೋದಯ ಆಯ್ತು. ಕವಾಟಿನಲ್ಲಿನ ಸೀರೆಯ ಅಟ್ಟಿಗೆಯನ್ನು ಅವಲೋಕಿಸಿದೆ. ‘ಯಾವುದನ್ನು ಧರಿಸಲಿ?’ ಎಂದು ಯೋಚಿಸಿದೆ. ಹೊಸದಾಗಿ ತಂದಿರುವ ರೇಶ್ಮೆ ಸೀರೆ ಸೆಳೆದೆ; ಸುತ್ತಿಕೊಂಡು ನೊಡಿದೆ. ದಪ್ಪವಾಗಿ ಕಂಡೆ; ಅಲ್ಲೇ ಬಿಟ್ಟೆ. ತೆಳ್ಳಗಾದ ಪಾರದರ್ಶಕ ಸೀರೆಯನ್ನು ನಯವಾಗಿ ಧರಿಸಿದೆ. ಧರಿಸುತ್ತಲೇ ಪೀಚಾಗಿ ಕಂಡೆ. ಸೊರಗಿದ ನನ್ನ ಮುಖ ಎದ್ದು ಕಾಣುತ್ತಿತ್ತು. ಯಾವ ಸೀರೆಯೂ ನನ್ನನ್ನು ತೃಪ್ತಿಪಡಿಸಲಿಲ್ಲ. ಇಲ್ಲ, ನನಗಾಗಿ ಸೀರೆಗಿಂತಲೂ ನನ್ನವರಿಗಾಗಿ ಸೀರೆ ಉಡಬೇಕೆಂದು ಯೋಚಿಸಿದೆ.

ಹಾಂ ! ಅಂದು ಮದುವೆಯ ದಿನ ಮದುವಣಗಿತ್ತಿಯಾಗಿ ತಲೆತಗ್ಗಿಸಿ ನಿಂತಾಗ ಓರೆನೋಟದಿಂದ ನನ್ನ ಸೀರೆಯನ್ನು ಮೆಚ್ಚುವಂತೆ ನಟಿಸಿ ಒಳದೃಷ್ಟಿಯಲ್ಲಿ ನನ್ನನ್ನು ಮೆಚ್ಚಿದ್ದರು. ಇಂದೂ ನನ್ನನ್ನು ಮೆಚ್ಚಲು, ಮೆಚ್ಚಿಸಲು ಅದೇ ಧಾರೆಸೀರೆಯನ್ನೇ ಉಡುತ್ತೇನೆ ಎಂದು ತೆಗೆದೆ. ಅದರ ಮೆಲೆ ಕೈಯಾಡಿಸಿದಾಗ ನನ್ನ ಚಿತ್ತದಲ್ಲಿ ಹೊಸ ಹೊಸ ಸಂಭ್ರಮಗಳು. ಹಳೆಯ ಶೃಂಗಾರದ ಬೆಸುಗೆಯೊಂದಿಗೆ ನವವಧುವಿನಂತೆ ಅಲಂಕೃತಳಾಗಿ, ಮೌನಿಯಾಗಿ, ಭಾವನಾಪ್ರಪಂಚದಲ್ಲಿ ಮೋಹಪರವಶಳಾಗಿ, ತ್ರಿಭಂಗಿಯಲ್ಲಿ, ಮುಖದ ಮೇಲೆ ಕಚಗುಳಿ ಇಡುತ್ತಿರುವ ಮುಂಗುರಳನ್ನು ಸವರುತ್ತಾ ನಲಿಯುತ್ತಿದ್ದೆ.

ಉತ್ಸಾಹದಿಂದ ಮಾಡಿಕೊಂಡ ಶೃಂಗಾರಕ್ಕೆ ಎಣೆ ಇಲ್ಲದಾಯ್ತು. ಮುಖದ ಅಲಂಕಾರಕ್ಕಂತೂ ಸ್ಥಳವೇ ಇಲ್ಲದಾಯ್ತು. ಕನ್ನಡಿಯನ್ನು ಒಮ್ಮೆ ನೋಡಿದೆ. ನನ್ನನ್ನು ರಮಿಸುವಾಗಲೆಲ್ಲಾ ನನ್ನ ಪತಿ ನನ್ನನ್ನು ರತಿ ಎನ್ನುತ್ತಿದ್ದ. ಆಗ ನಾನು ನನಗಾದ ಆನಂದವನ್ನು ಪ್ರಕಟಿಸದೆ ಮನದೊಳಗೇ ಅದರ ಆನಂದ ಪಡೆಯುತ್ತಿದ್ದೆ. ನಿಜ ಹೇಳಬೇಕಿದ್ದರೆ ಅಂದು ಅಪೂರ್ಣತೆಯು ನನ್ನನ್ನು ಕಾಡುತ್ತಿತ್ತು. ನನ್ನ ರತಿತನ ನನ್ನಲ್ಲಿ ಪ್ರಕಟವಾಗುವುದರ ಒಳಗೇ ನನ್ನವನು ನನ್ನನ್ನು ತಿನ್ನುತ್ತಿದ್ದ. ಆದರೆ ಇಂದು ಆತ ಹೇಳಿದ ರತಿಯೂ ನನ್ನ ಪಾಲಿಗೆ ಚಿಕ್ಕದು ಎಂದೆನಿಸಿತು. ನನ್ನ ರೂಪ ನನ್ನನ್ನೇ ಮೋಹಿಸುತ್ತಿತ್ತು. ನಿಧಾನವಾಗಿ ಅದರ ಅಂದದ ವೈವಿಧ್ಯಕ್ಕಾಗಿ ಹಲವಾರು ಭಂಗಿಗಳಲ್ಲಿ ನಿಂತೆ. ಕೈಗಳ ವಿನ್ಯಾಸವನ್ನು ಬದಬದಲಿಸಿ ಕಂಡೆ. ಹತ್ತು ಹಲವು ಕ್ರಮಗಳಲ್ಲಿ ನಕ್ಕು ನೋಡಿದೆ. ಕಣ್ಣು ಮಿಟುಕಿಸಿದೆ. ಓರೆ ನೋಟದ ಸೌಂದರ್ಯವನ್ನು ಹೀರತೊಡಗಿದೆ. ಅದೆಷ್ಟು ಹೊತ್ತು ಕನ್ನಡಿಯ ಎದುರು ನಿಂತೆನೋ ತಿಳಿಯದು. ನಾಚಿಕೆ ಬಿಟ್ಟು ಹೇಳಬೇಕೆಂದರೆ ಕನ್ನಡಿಯಲ್ಲಿಯ ರೂಪವನ್ನು ಗಂಡಾಗಿಸಿಕೊಂಡು ನಾನು ಹೆಣ್ಣಾಗುತ್ತಲೇ ಕರಗಿದೆ. ವಾಸ್ತವಕ್ಕೆ ಮರಳಿದಾಗ ಉತ್ಸಾಹದಲ್ಲೂ ಕರಗುತ್ತಲಿದ್ದೆ. ನಲ್ಲನಿಲ್ಲದ ಶೂನ್ಯತೆಯನ್ನು ಅನುಭವಿಸಲಾರದೆ ಹಾಸಿಗೆಯಲ್ಲಿ ಬೋರಲಾಗಿ ಕನ್ನಡಿಯನ್ನೇ ನಿಟ್ಟಿಸುತ್ತಲೇ ಇದ್ದೆ. ಕನ್ನಡಿಯಿಂದ ದೂರ ಸರಿಯುವ ಮನಸ್ಸಿನಿಂದ ನಲ್ಲನ ನೆನಪಿನಲ್ಲಿ ಬಂಧಿತಳಾದೆ.

ಹಾಸಿಗೆಗೆ ಸಿಂಪಡಿಸಿದ ಪನ್ನೀರು, ಅಲಂಕಾರಕ್ಕೆ ಬಳಸಿದ ಪರಿಮಳ ಹೂಗಳು ನನಗೆ ಅಮಲೇರಿಸಿ ಸ್ವಲ್ಪ ಹೊತ್ತು ನಲ್ಲನೊಂದಿಗೆ ಕಳೆದ ಕನಸನ್ನು ಕಂಡೆ. ಆತನಲ್ಲಿ ನನ್ನ ನಿವೇದನೆಗಳನ್ನೆಲ್ಲಾ ತೋಡಿಕೊಂಡೆ. ಹೆಚ್ಚೇಕೆ, ‘ನಿನಗಾಗಿ ಪಟ್ಟ ಅವಸ್ಥೆಗಳನ್ನೆಲ್ಲಾ ಕಂಡು ಈ ಹಾಸಿಗೆ ಆದಿಯಾಗಿ ನಾಚಿದೆ’ ಎಂದೆ. ಇನ್ನೂ ಏನೇನೋ ನಾನು ನನ್ನೊಳಗೇ ಮಾತನಾಡುತ್ತಲೇ ಇದ್ದೆ.

ಇದ್ದಕ್ಕಿದ್ದಂತೆ ಹೊರಗಡೆಯ ಸದ್ದು. ತತ್‌ಕ್ಷಣ ನನ್ನ ಕಣ್ಣು ಮುಚ್ಚಿದ ಎರಡು ಕೈಗಳು; ಊಹೆ ಮಾಡಿದೆ. ಮುಟ್ಟಿದರೆ ಮುನಿ ಎಂಬ ಮುಳ್ಳುಗಿಡದಂತೆ ಮುದುಡಿ ಮಿಸುಕಾಡಿದೆ. ಪ್ರತಿಕ್ರಿಯೆ ಇರಲಿಲ್ಲ. ಕೈ ಮುಟ್ಟಿದೆ. ಗಡುಸಾಗಿಯೇ ಇದೆ. ಆದರೂ ಸ್ಪರ್ಶದ ರೋಮಾಂಚನ ಇಲ್ಲ. ಯಾಕೋ ಅನುಮಾನಿಸಿದೆ. ನಿಧಾನವಾಗಿ ಮೀಸೆಯನ್ನು ತಿಮರಿಬಿಡುವೆ ಎಂದು ಮುಖದ ಮೇಲೆ ಕೈಯಾಡಿಸಿದೆ. ಮೀಸೆ ಇಲ್ಲ. ರಪ್ಪನೆ ದೂರಸರಿದು ನೋಡಿದರೆ ನನ್ನ ಆತ್ಮೀಯ ಗೆಳತಿ. ಪಕ್ಕದಲ್ಲಿಯ ಆಕೆ ನನ್ನ ಸಡಗರದ ಸೂಕ್ಷ್ಮ ಅರಿತು ನನ್ನನ್ನು ರೇಗಿಸಲು ಬಂದವಳು. ನನಗೋ ಕೋಪ-ತಾಪ-ಬೇಸರ-ಕೃತಕನಗು ಎಲ್ಲಾ ಭಾವಗಳು ನನ್ನನ್ನು ತಿನ್ನುತ್ತಿತ್ತು. ಅಂತೂ ಆಕೆಯನ್ನು ಸಾಗಹಾಕಿದೆ. ನನ್ನ ಶೃಂಗಾರದ ಸಿದ್ಧತೆಯಲ್ಲಿ ನನ್ನವನಿಗಾಗಿ ಮುಡಿಪಾಗಿಟ್ಟ ನನ್ನ ಭಾವನೆಯ ತೀವ್ರತೆಗೆ ಭಂಗ ಆಯ್ತು. ಏನೋ ಮೈಲಿಗೆ ಆದವರಂತೆ ಮುಖ ಬಿಳಿಚಿತು. ನನ್ನ ಗೆಳತಿಗೆ ಇದೆಲ್ಲಾ ಹೇಗೆ ಅರ್ಥವಾದೀತು? ಹಂತಹಂತವಾಗಿ ನನ್ನ ತೀವ್ರತೆಯೂ ಕಡಿಮೆ ಆಗಿ ದೇವರ ಮುಡಿ ಸೇರುವ ಹೂವು ಪೂಜಾರಿ ಬರದೆ ಪೂಜೆಯೂ ಇಲ್ಲದೆ ಹಾಗೆಯೇ ಒಣಗಿ ಹೋಗುವಂತೆ ಒಣಗಲಾರಂಭಿಸಿದೆ…

ಮೇಘಮೇದಿನಿ

- ದಿವಾಕರ ಹೆಗಡೆ, ಧಾರವಾಡ

ಹೇಮಂತನ ಶ್ರೀಮಂತಿಕೆ ಕಾಂತೆಯ ಮನ ಕಾಡಿದೆ |

ಕಾಮರೂಪ ಮೇಘಮಾರ ಬರುವಾಸೆಯು ಮೂಡಿದೆ |

ತೆನೆ ವಕ್ಷಕೆ ತೊನೆದಾಡುವ ಮುಂಭಾರದ ಬೆಡಗೆ |

ಗೊನೆಬಾಳೆಯ ನಿಡುಜಘನದ ಹಿಂಭಾರದ ಹೊರಳೆ ||

ಹನಿ ಮಂಜಿನ ಶೀತ ಸೋನೆ ತಂಗಾಳಿಯ ಉಡುಗೆ |

ಕನಸಾಯಿತು ಕಾಯದಿಚ್ಛೆ ಬೆಳುದಿಂಗಳ ತೊಡುಗೆ ||

ಶಿಶಿರೋದಯದಲಿ ಹೊಸಕನಸಿನ ಹದ

ವಸುಮತಿ ತಾನೆಸೆದಳು ಮುದದಿ |

ವಸನಾಪ್ಯಾಯನ ಕುಸುರಿನ ರೇಶಿಮೆ

ರಸೆ ರಾಣಿಯು ತಾ ಸಮ್ಮುದದಿ ||

ಬೆಸೆವಳು ಮಲ್ಲಿಗೆಯನು ಹೊಂದಿಸುವಳು ಜಾಜಿಯ |

ಸಸಿವಳು ಜಡೆಜಡಕನು ನೊಸಲೆಡೆಯಲಿ ಕುಂಕುಮ |

ತೊಡುವಳು ಆಭರಣವ ವೈಯ್ಯಾರದಿ ನಡೆವಳು |

ತಡೆವಳು, ದರ್ಪಣವನು ಹಿಡಿದಲೆವಳು, ನಗುವಳು |

ಸುಡುವಳು ವಿರಹದುರಿಗೆ, ತಾನಿಟ್ಟುಸಿರಿಡುವಳು |

ಬಿಡುವಳು ಅನ್ನವ, ಪಿರಿದಾತನ ನೆನಪಿಸುವಳು |

ಅಷ್ಟನಾಯಿಕಾ ಚಿತ್ತವೃತ್ತಿ ಪ್ರೋಷಿತ ಪತಿಕಾ(ಭರ್ತೃಕಾ)
ಪ್ರೋಷಿತ ಪತಿಕಾ(ಭರ್ತೃಕಾ)

(ಕಳೆದ ಸಂಚಿಕೆಯಿಂದ ಮುಂದುವರೆದುದು…)

ಅಷ್ಟವಿಧ ನಾಯಿಕೆಯರ ಪೈಕಿ ಸ್ಥಿತಿ-ಸಂದರ್ಭಾನುಸಾರ ವರ್ಗೀಕರಿಸಿದರೆ ಮೊದಲನೆಯವಳೇ- ಪ್ರೋಷಿತ ಪತಿಕಾ. ತನ್ನ ಪತಿ ಅಥವಾ ಪ್ರಿಯನು ಕಾರ್ಯಾರ್ಥವಾಗಿ ದೂರದೂರಿಗೆ ಹೋಗಿರುವಾಗ ಅಥವಾ ದೂರದೇಶಕ್ಕೆ ಪ್ರಯಾಣಸನ್ನದ್ಧವಾಗಿರುವಾಗ ಅವನ ವಿಯೋಗಕ್ಕಾಗಿ ವ್ಯಥೆಪಡುವವಳು. ಪ್ರಿಯನ ಹಾದಿ ಕಾಯುತ್ತಾ ಕುಳಿತುಕೊಳ್ಳುವುದು, ಎಂದಿಗೆ ಬರುವನು ಎಂಬ ನಿರೀಕ್ಷೆಯಲ್ಲಿ ದಿನಗಣನೆ, ಶಕುನ ನೋಡುವುದು, ಆತನ ಕಷ್ಟ-ಇಷ್ಟಗಳ ಬಗೆಗೆ ಯೋಚನೆಗಳು, ನಿದ್ರೆ ಇಲ್ಲದಿರುವುದು, ದುಃಸ್ವಪ್ನಗಳು, ಅನಾಸಕ್ತಿ, ನಿಂತ ಕಡೆ ನಿಲ್ಲದಿರುವುದು, ಏನೂ ತೋಚದಂತಾಗಿರುವುದು, ದಿನ ಮುಗಿದು ಕತ್ತಲಾವರಿಸಿದಾಗ ಭಾರವಾದ ಹೆಜ್ಜೆಯಿಂದ ತನ ಕೆಲಸಗಳನ್ನು ಬೇಕೂ ಬೇಡದಂತೆ ಮಾಡುವುದು ಇತ್ಯಾದಿ ಸಂದರ್ಭಗಳು ಈಕೆಯ ಅವಸ್ಥೆಗಳು.

ಈ ನಾಯಿಕೆಯಲ್ಲಿ ದಶಾವಸ್ಥೆಗಳಾದ ಅಭಿಲಾಷೆ, ಚಿಂತನ, ಸ್ಮೃತಿ, ಗುಣಕಥನ, ಉದ್ವೇಗ, ಪ್ರಲಾಪ, ಉನ್ಮಾದ, ಜ್ವರ, ಜಡತೆ, ಮರಣ ಮುಂತಾದವು ಕಂಡುಬರುತ್ತದೆ. ಸಹಜವಾಗಿ ಈಕೆ ಸ್ವೀಯ ಅಂದರೆ ತನ್ನ ಪ್ರಿಯನಿಗಾಗಿ ನಿಷ್ಟಳಾದ ನಾಯಿಕೆ. ಈ ನಾಯಿಕೆಯೊಂದಿಗೆ ವಿವಿಧ ಉಪನಾಯಿಕಾ ಬೇಧಗಳು ಸೇರಿಕೊಂಡರೆ ಅದಕ್ಕೆ ತಕ್ಕ ವರ್ತನೆ, ಗುಣ, ಅವಸ್ಥೆಗಳ ಏರಿಳಿತ ಪ್ರಕಟವಾಗುತ್ತದೆ.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶವನ್ನು ಹೊಂದಿದ್ದರೆ; ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು.

ಪ್ರಸ್ತುತ ಕಾವ್ಯ ಮತ್ತು ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಮಧ್ಯಮ ಗುಣವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ.

ಬನ್ನಿ, ಲಿಂಗಬೇಧಗಳನ್ನು ಮರೆತು ನಾಯಿಕೆಯರೊಳಗೊಂದಾಗಿ ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವನ್ನು ವಿಸ್ತರಿಸಿಕೊಳ್ಳೋಣ.

ಭಾಮಿನೀ

- ಶತಾವಧಾನಿ ಡಾ. ಆರ್. ಗಣೇಶ್

ರಾಗ : ಭೌಳಿ ; ಭಾಮಿನಿ ಪದ್ಯ

ಕುಮುದಿನಿಗೆ ವಿರಹದ ವಿದಾಯ

ಕ್ರಮವ ಕಲ್ಪಿಸಿ ತೆರಳೆ ಚಂದ್ರನು

ಕಮಲಬಾಂಧವನುದಿಸೆ ಮದನಾನಲವೊಲು ನಭದಿ|

ಅಮಮ ! ಪ್ರೋಷಿತಪತಿಕೆಯೀಕೆ

ಕ್ಲಮದೆ ನಿತ್ಯದ ನಿಲಯಕೃತ್ಯಕೆ

ಸಮೆದಳೆಂತೋ ಮನವನೊಲವಿನ ನೆನಪಿರಲಿ ನಾದಿ ||

(ಪ್ರೋಷಿತನಾಯಿಕೆಯು ಮುಂಜಾವಿನ ಮನೆಗೆಲಸಕ್ಕೆ ತೊಡಗುತ್ತಾಳೆ. ಆ ಸಮಯದಲ್ಲೆಲ್ಲ ಅವಳಿಗೆ ಪತಿಯದೇ ನೆನಪು. ಇನ್ನು ದುಡಿಯುವ ಮನವಿಲ್ಲೆಂದು ನಿರ್ಧರಿಸಿ ನಲ್ಲನ ಚಿಂತೆಯಲ್ಲಿಯೇ ಕರಗುತ್ತಾಳೆ.)

ರಾಗ : ಕಾನಡಾ ; ರೂಪಕ, ಏಕ, ಕೋರೆ, ಅಷ್ಟ ತಾಳಗಳು

ಎತ್ತ ಪೋದನೋ ಕಾಂತನೆತ್ತಪೋದನೋ ?

ಚಿತ್ತಜೋಪಮಾನನೆಂದು ಮತ್ತೆ ಬರ್ಪನೋ- ಕಾಂತ ||ಪ||

ತೆರಳುವಂದು ತರಳೆಯಂದು

ಸರಳಹಾಸದಿಂದ ರಮಿಸಿ |

ಮರಳಿಕಾಂಬೆನೆಂದು ಕದಪ

ಬೆರಳಿನಿಂದ ಮೀಟಿದವನು ||

ಬರುವೆ ಬೇಗ, ತರುವೆನಾಗ

ಸಿರಿಯ, ತೊಡವನ್ನೆಂದು ನುಡಿದು |

ಚಿರಮನೋಜ್ಞಭೂಷಣಗಳ

ಸರಸದಿಂದ ಸಲಿಸಿದವನು ||

ಬಿಸಿಲು-ಗಾಳಿ-ಮಳೆಗಳಲ್ಲಿ

ರಸವಿಹೀನಜನಗಳಲ್ಲಿ |

ಕಸುರುಕಾಡು –ಮೇಡಿನಲ್ಲಿ

ಹಸಿದು ಹೊಸೆದು, ನೊಂದು ಬೆಂದು ||

ಮನೆಯ ಮಾತ ಮರೆತುಬಿಟ್ಟು

ವನಿತೆಯೆನ್ನನ್ನಿಲ್ಲಿಗಿಟ್ಟು |

ದಿನವನೆಣಿಸೆನ್ನುತ್ತಲಿಂತು

ಮನವನೆಂತೊ ಬಿಗಿದು ನಿಂತು ||

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

ಸುಂದರವಾದ ಮಂಟಪ. ಮಂಟಪದ ಒಳಗೊಂದು ಉಯ್ಯಾಲೆ. ಬೀಸುತ್ತಿರುವ ತಂಗಾಳಿಯ ಜೊತೆಗೆ ಉಯ್ಯಾಲೆಯ ಶ್ರುತಿ. ಚಂದ್ರನ ತಂಪುಬೆಳಕು. ಆಗಾಗ ಕೇಳಿಸುವ ಗೂಡಿನ ಹಕ್ಕಿಗಳ ಚಿಲಿಪಿಲಿಯ ಹಿಮ್ಮೇಳ. ಉಯ್ಯಾಲೆ ತೂಗಿದಾಗಲೆಲ್ಲಾ ಮೂಗಿಗೆ ಬಡಿಯುವ ಬಿರಿದ ಸುಮಗಳ ಸುಗಂಧ ಪರಿಮಳ. ಇವುಗಳೆಲ್ಲ ಸೇರಿ ಅಮಲೇರಿಸಿದ ರಾತ್ರಿ ಪ್ರಿಯಕರನ ತೊಡೆಯ ಮೇಲೆ ತಲೆಯನ್ನಿಟ್ಟು ಬೆಚ್ಚನೆಯ ಅನುಭವದ ನಿದ್ರೆ. ಅಲ್ಲ ! ನಿದ್ರೆ ಬಂದಂತೆ, ನಟಿಸಿ ಪ್ರಿಯಕರನ ಮೈಬಿಸಿಯನ್ನು ಅನುಭವಿಸುತ್ತಿರುವ ರಸಕ್ಷಣ. ಅದೆಷ್ಟು ಹೊತ್ತು ಮಲಗಿದಳೋ ಈ ಭಾಮಿನಿ ತಿಳಿಯದು. ಇದ್ದಕ್ಕಿದ್ದಂತೆ ಕಾಗೆಯ ಕರ್ಕಶ ಅಪಸ್ವರದ ಸುಪ್ರಭಾತ. ಕಿವಿಮುಚ್ಚಿ ಥಟ್ಟನೆ ಎದ್ದು ಕುಳಿತಳು ಭಾಮಿನಿ. ಕಣ್ಣುಮುಚ್ಚಿ ಒಮ್ಮೆಲೇ ಸ್ತಬ್ಧಳಾದಳು. ಒಮ್ಮೆಲೆ ಕಣ್ಣುತೆರೆದು ನೋಡಿದರೆ ಕಂಡಿರುವುದೆಲ್ಲಾ, ಅನುಭವಿಸಿರುವೆಲ್ಲಾ ಕನಸೇ ಆಗಿತ್ತು. ಏಕಾಕಿನಿಯಾಗಿ ಕೆಲವು ದಿನಗಳನ್ನು ಕಗ್ಗತ್ತಲೆಯಲ್ಲೇ ಮಲಗಿದ ಆಕೆಗೆ ಸ್ವಪ್ನವೂ ಅನಿವಾರ್ಯ ಆಗಿತ್ತು. ಕತ್ತಲಿನ ಏಕಾಂತವನ್ನು ದೂರಮಾಡಿಕೊಳ್ಳಲು ಕನಸು ಸಹಾಯ ಮಾಡಿತ್ತು.

ಬಾಗಿಲು ತೆರೆದು ನೋಡಿದರೆ ಆಗಲೇ ಬೆಳಗಾಗಿತ್ತು. ಸೂರ್ಯನನ್ನು ಕಂಡದ್ದು ತಡವಾದ್ದರಿಂದಲೋ ಅಥವಾ ತಡವಾಗಿ ತಾನು ಸೂರ್ಯನನ್ನು ಕಾಣುತ್ತಿರುವುದರಿಂದಲೋ ಆತನ ತೀಕ್ಷ್ಣ ಕಿರಣಗಳು ಸೌಂದರ್ಯವನ್ನು ಕಳೆದುಕೊಂಡು ಭಾಮಿನಿಯನ್ನು ಬಾಣದಂತೆ ತಿವಿಯುತ್ತಿದ್ದವು. ಈಕೆಯ ಅಸಹನೆಯ ಹೂವು ಬಿರಿದು ಕೋಪಾಲಸ್ಯಗಳ ವಾಸನೆಯು ಜಿಗುಪ್ಸಾದಾಯಕವಾಗಿತ್ತು. ನಿಸ್ತೇಜಮುಖ, ಉದಾಸೀನದ ಹಜ್ಜೆಗಳು; ಲಯವನ್ನು ತಪ್ಪಿಸುತ್ತಿತ್ತು ಅವಳ ದೇಹ. ಒಮ್ಮೆಲೆ ಕುಕ್ಕರಿಸಿ ಕುಳಿತಳು. ಉದ್ದೇಶವಿಲ್ಲದೆ ನೆಲವನ್ನು ಕೈಬೆರಳಿನಿಂದ ಗೀಚುತ್ತಾ ಸುಂದರಸ್ವಪ್ನದ ಯೋಚನೆಗೆ ಇಳಿದಳು. ಕನಸನ್ನು ಅನುಭವಿಸಲಾರದ ಸ್ಥಿತಿಯಲ್ಲಿದ್ದ ಭಾಮಿನಿ ಬಳಲಿದ್ದಳು.

ಅಕ್ಕಪಕ್ಕದ ದೈನಂದಿನ ಚಟುವಟಿಕೆಗಳನ್ನು ಕಂಡು ತಾನೊಂದು ಹೆಣವಾಗುತ್ತಿದ್ದೇನೆಂದು ಭಾವಿಸಿದಳು. ನಾನು ನಿಜಕ್ಕೂ ಶವವಾಗುತ್ತಿದ್ದೇನೆಯೇ?; ಪ್ರಶ್ನಿಸಿದಳು. ಇಲ್ಲ.ಇಲ್ಲ. ನನ್ನವನಿಗಾಗಿ ನಾನು, ನನಗಾಗಿ ನನ್ನವನಿರುವಾಗ ಜಡವಾಗಬಾರದು ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡು ಪ್ರಪಂಚದ ವೇಗಕ್ಕೆ ಹೊಂದಿಕೊಳ್ಳುವ ಪ್ರಯತ್ನಕ್ಕೆ ಮುಂದಾದಳು. ಮನಸ್ಸು ಸಂಕಲ್ಪಿಸಿದರೂ ದೇಹ ಸ್ಪಂದಿಸಲೇ ಇಲ್ಲ. ಯಾಂತ್ರಿಕವಾಗಿ ದೈನಂದಿನ ಕೆಲಸಕ್ಕೆ ಮುಂದಾಗಿ ಕೊಡವನ್ನು ಎತ್ತಿಕೊಂಡಳು. ಇವಳ ಮನಸ್ಸು ಗಂಡನ ಯೋಚನೆಯಲ್ಲಿ ತುಂಬಿ ತುಳುಕಾಡುತ್ತಿದ್ದುದ್ದರಿಂದ ಖಾಲಿಕೊಡವನ್ನು ಎತ್ತುವಾಗ ಅರಿವಿಲ್ಲದೆ ಇವಳ ದೇಹ ಭಾರವಾಗಿ ಮುಗ್ಗರಿಸಿದಳು. ತನ್ನ ಭಾರವನ್ನು ಕೊಡದ ಮೇಲೆ ಇಳಿಸಿ ಅದನ್ನೇ ಆಧಾರವಾಗಿಟ್ಟುಕೊಂಡು ಎದ್ದು ನಿಂತು ಸೊಂಟದ ಮೇಲೆ ಏರಿಸಿಕೊಂಡಳು. ಅಕ್ಕಪಕ್ಕದವರನ್ನೆಲ್ಲಾ ಒಮ್ಮೆ ಇಣುಕಿದಳು. ಯಾರೂ ಇವಳನ್ನು ಗಮನಿಸಲೇ ಇಲ್ಲ. ಗಮನಿಸುತ್ತಿದ್ದರೆ ಈಕೆಗೆ ಒಂದಿಷ್ಟು ಜೀವಬರುತ್ತಿತ್ತೋ ಏನೋ ? ಅಂತೂ ತನ್ನ ಮನೆ ನಿರ್ಜೀವವಾಗಿದೆ ಎಂದು ಭಾವಿಸಿದಳು. ತಾನೀಗ ಜೀವನೀಡಲು ಹೊರಟು ನಿಂತಳು.

ತಾಳ ತಪ್ಪಿದರೂ ಲಯಭರಿತ ಹಜ್ಜೆಯನ್ನು ಇಡುತ್ತಾ ಬಾವಿಕಟ್ಟೆಗೆ ತೆರಳಿದಳು. ಬಾವಿಯಲ್ಲಿಯ ರಾಟೆಗೆ ಸುತ್ತಿದ ಹಗ್ಗದ ಕುಣಿಕೆ(ಉರುಳು) ಇವಳನ್ನು ಅಣಕಿಸುತ್ತಿತ್ತು.

ಭಾರವಾದ ಕೊಡವನ್ನು ಸುಲಭದಲ್ಲಿ ಏರಿಸಬಲ್ಲೆ. ಹಾಗೆಯೇ ಭಾರವಾದ ಜೀವವನ್ನು ಸುಲಭವಾಗಿ ಹಾರಿಸಬಲ್ಲೆ ಎಂದು ಗಾಳಿಗೆ ತುಯ್ದಾಡುತ್ತಾ ನನ್ನನ್ನೇ ಭಯಗೊಳಿಸಿತು, ಆ ರಾಟೆಯ ಉರುಳು. ತಥ್ ! ಎಂದು ಅದನ್ನು ತೂಗಾಡದಂತೆ ಹಿಡಿದು ನನ್ನ ಸ್ವಾಧೀನಕ್ಕೆ ತೆಗೆದುಕೊಂಡು ನನ್ನ ಹುಚ್ಚು ಆಲೋಚನೆಗಳಿಗೆ ಕಡಿವಾಣ ಹಾಕಿ ಬಿಂದಿಗೆಗೆ ಉರುಳು ಸೇರಿಸಿ ಬಿಗಿದೆ. ರಪ್ಪನೆ ಬಿಂದಿಗೆಯನ್ನು ಬಾವಿಗೆ ದೂಡಿದೆ. ಅವ್ಯಕ್ತ ಸಮಾಧಾನ ಆಯ್ತು. ಉದಾಸೀನದಿಂದಲೇ ತುಂಬಿದ ಬಿಂದಿಗೆಯನ್ನು ಸೆಳೆಯುತ್ತಿದ್ದೆ. ಬಿಂದಿಗೆಯು ರಾಟೆಯನ್ನು ಅಪ್ಪಳಿಸಿದಾಗಲೇ ಪುನಃ ವಾಸ್ತವಕ್ಕೆ ಮರಳಿದೆ. ಕುಣಿಕೆ ಬಿಡಿಸಿದೆ. ತುಂಬಾ ಆಯಾಸಗೊಂಡೆ. ಬಿಂದಿಗೆಯ ಮೇಲೆ ಕೈಯನ್ನು ಇಟ್ಟೆ. ಬಿಂದಿಗೆಯ ಮೇಲಿನ ನೀರು ತಂಪೆನಿಸಿತು. ಎರಡು ಬೊಗಸೆ ನೀರನ್ನು ಮುಖದ ಮೇಲೆ ಎರಚಿಕೊಂಡೆ. ಹಾಯೆನಿಸಿತು. ಗಲ್ಲದ ಮೇಲೆ ಕೈಯನ್ನಿಟ್ಟು ಕೈಯನ್ನು ಬಿಂದಿಗೆಯ ಮೇಲೆ ಇರಿಸಿ ಯೋಚಿಸಿದೆ; ನನ್ನ ದೃಷ್ಟಿ, ಯೋಚನೆ ಎಲ್ಲವೂ ನನ್ನ ಮನೆಯಂಗಳದ ತುದಿಯಲ್ಲಿನ ಮಲ್ಲಿಗೆಯ ಲತಾಮಂಟಪದ ಕೆಳಗೆ.

ಹೌದು ! ಅಂದು ನನ್ನ ಪತಿ ಇದೇ ಲತಾಮಂಟಪದ ಮರೆಯಲ್ಲಿ ನನ್ನನ್ನು ರಮಿಸಿದ ಆ ನೆನಪು. ಆ ಕ್ಷಣ ಒಂದು ರಸಕ್ಷಣವೇ ಆಗಿ ನನ್ನನ್ನು ಈ ರೀತಿಯಲ್ಲಿ ಆಟ ಆಡಿಸುತ್ತಿದೆ. ಜೀವನದ ಸತ್ಯವೊಂದನ್ನು ತಿಳಿದೆ. ಪ್ರಣಯದ ಒಂದು ರಸಕ್ಷಣ ಒಂದು ಬದುಕನ್ನೇ ಅಡವಿಡಬಹುದಾದಷ್ಟು ಬೆಲೆಯುಳ್ಳದ್ದು. ಜೊತೆಗೆ ಮತ್ತೊಮ್ಮೆ ಆ ರಸಕ್ಷಣಕ್ಕಾಗಿ ಬಯಸಿದೆ. ಬದುಕಿನ ಕೊನೆಕಾಲದವರೆಗೂ ಅಥವಾ ಅದರ ಸವಿನೆನಪೇ ಬದುಕೆಲ್ಲ ತಾಳ್ಮೆಯಿಂದ ಕಾಲಕಳೆಯುವ ಶಕ್ತಿ ನೀಡುತ್ತದೆ ಎಂದು ತಿಳಿದೆ. ಅಬ್ಬಾ ! ಅಂದು ನನ್ನನ್ನು ರಮಿಸುವಾಗ ನನಗಿಂತಲೂ ಆತನೇ ಹೆಚ್ಚಾಗಿ ನನ್ನ ಬಿಡಲಾರದ ಸಂಕಟ ಪ್ರಕಟಿಸಿದ್ದು. ಆತನನ್ನು ಸಮಾಧಾನಗೊಳಿಸಲಿಕ್ಕಾಗಿ ನನ್ನ ಸಂಕಟ ಅದುಮಿ ಆತನಲ್ಲಿ ನನ್ನ ಕಪಟತನದ ದೊಡ್ಡತನ ಪ್ರಕಟಿಸಿದೆ. ಆದರೆ ಕಣ್ಣಿನ ಭಾವಭಾಷೆಯನ್ನು ಅರಿತ ಆತ ಉದಾತ್ತವಾಗಿ ನನ್ನ ಸಂಕಟಕ್ಕೆ ಸ್ಪಂದಿಸಿದ್ದು ಒಂದೇ, ಎರಡೇ, ಅನೂಹ್ಯವಾದ ಪ್ರೀತಿ. ನಿನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರೆ. ಬಹಳ ಬೇಗ ಬರುತ್ತೇನೆ ಎಂದು ವಿಧವಿಧವಾಗಿ ಪೂಸಿಹೊಡೆದದ್ದು. ‘ನಾನೊಬ್ಬಳೇ ಹೇಗೆ ಮನೆಯಲ್ಲಿರಲಿ?’ ಎಂದು ಅವನನ್ನು ಪ್ರಶ್ನಿಸಿ ‘ನೀನು ಹೋಗಬೇಡಾ’ ಎಂದು ಅಂಗಾಲಾಚಿದೆ. ಇದನ್ನರಿತ ಆತ ನನ್ನ ಧೈರ್ಯಕ್ಕಾಗಿ ನನ್ನನ್ನು ಎರಡು ಕೈಗಳಿಂದ ಅಪ್ಪಿಕೊಂಡು ಲಲ್ಲೆಗರೆಯುತ್ತಾ ನನ್ನ ಕಪೋಲವನ್ನು ಹಿಂಡಿದ. ಆ ರೋಮಾಂಚನ ! ಇನ್ನೂ ಅದರಿಂದ ಹೊರಬರಲಾಗಲಿಲ್ಲ.

ಆತನ ದೂರದ ಪ್ರಯಾಣಕ್ಕೆ ಆತನಿಗೆ ಇಷ್ಟವಾದ, ಪ್ರಿಯವಾದ ತಿಂಡಿಗಳನ್ನು ಬುತ್ತಿಕಟ್ಟಿಕೊಟ್ಟಾಗ ನನ್ನ ಕಣ್ಣುಗಳು ಆತನ ಕಣ್ಣುಗಳಲ್ಲೇ ಲೀನವಾಗಿದ್ದವು. ಅದರಲ್ಲಿ ‘ನೀ ಹೋಗದಿರು’ ಎಂಬ ಬೇಡಿಕೆಯೇ ಇತ್ತು. ಇದನ್ನು ಅರಿತ ಆತ ನಿನ್ನ ಈ ಬುತ್ತಿಗೆ ಪ್ರತಿಯಾಗಿ ಪೇಟೆಯಿಂದ ಮನೋಹರವಾದ ಮುತ್ತಿನ ಮಾಲೆ ತರುತ್ತೇನೆ ಎಂದಿದ್ದ. ಅದಕ್ಕೆಲ್ಲಾ ನಾನು ಕರಗಲೇ ಇಲ್ಲ. ನನಗಂತೂ ಯಾವ ಆಭರಣವೂ ಬೇಕಿಲ್ಲವಾಗಿತ್ತು. ಆತನ ಎಲ್ಲಾ ಸರಸಗಳು ವ್ಯರ್ಥವಾಗಿತ್ತು. ನನ್ನ ತೀಕ್ಷ್ಣವಾದ ಪ್ರೀತಿ ಆತನಿಗೆ ಕಷ್ಟವಾಯ್ತೋ ಏನೋ. ನನ್ನ ಮೌನವನ್ನು ಭೇದಿಸಿ ಬುತ್ತಿಯನ್ನು ತೆಗೆದುಕೊಳ್ಳುವ ನೆವದಲ್ಲಿ ಕಣ್ಣುಮುಚ್ಚಿಕೋ ಎಂದು ಕಣ್ಣುಮುಚ್ಚಿಸಿ ಪಟಪಟನೆ ಮುತ್ತುಗಳನ್ನು ನೀಡಿ ಓಡಿಹೋಗಿ ಗಾಡಿಯಲ್ಲಿ ಕುಳಿತ.

ರಭಸದಿಂದ ನೀಡಿದ ಮುತ್ತಿನ ಸುರಿಮಳೆಗಳಿಂದ ನಾಚಿ ನೀರಾಗಿ ಹೋದೆ. ನಾಚಿಕೆ ಎನ್ನುವುದು ನನಗಾಗದಿದ್ದರೆ ತತ್‌ಕ್ಷಣ ಗಾಡಿಯನ್ನು ನಾನೂ ಏರಿಕೊಳ್ಳುತ್ತಿದ್ದೆ. ಗಂಡು ಜನ್ಮದ ಧೈರ್ಯ ಕಂಡು ಅಸೂಯೆಪಟ್ಟೆ ಆ ಕ್ಷಣ. ಜೊತೆಗೆ ಸುತ್ತ ಯಾರಾದರೂ ನೋಡಿದರೇ ಎಂಬ ಆತಂಕ. ಪುಣ್ಯ, ಮಲ್ಲಿಗೆ ಮಂಟಪದ ಮರೆಯಾದ್ದರಿಂದ ಯಾರಿಗೂ ತಿಳಿಯಲಿಲ್ಲ. ಆದರೂ ಸ್ವಲ್ಪವೂ ನಾಚಿಕೆಯ ಕಲ್ಪನೆ ಇಲ್ಲದ ನನ್ನವನನ್ನು ಶಪಿಸಿದೆ. ಕರಗಿ ನೀರಾಗಿ ಹೋದೆ. ನನ್ನನ್ನು ಎವೆಯಿಕ್ಕದೆ ಮಂದಸ್ಮಿತನಾಗಿ ನೋಡುತ್ತಾ ಹೋಗುತ್ತಿರುವ ನನ್ನ ಪತಿಯನ್ನು ಹಿಂಬಾಲಿಸಲು ಹೆಜ್ಜೆ ಇಡಲು ಮರೆತೆ. ನಿಜಕ್ಕೂ ಆತ ನನಗೆ ಮುತ್ತಿನಹಾರ ನೀಡಿಯೇ ಹೋಗಿದ್ದ.

ನಾಲ್ಕಾರುದಿನಗಳಲ್ಲಿ ಬರುತ್ತೇನೆಂದು ಹೋದ ಆತ ಇನ್ನೂ ಬಂದಿಲ್ಲ. ದಿನಗಳನ್ನೆಲ್ಲಾ ಎಣಿಸುತ್ತಲೇ ಇದ್ದೆ. ಗೋಡೆಯ ಮೇಲಣ ಗುರುತುಗಳೆಲ್ಲಾ ನನ್ನ ಲೆಕ್ಕ ತಪ್ಪಿಸಿದ್ದವು. ಅವಸರದಲ್ಲಿ ದಿನಕ್ಕೆ ಎರಡೆರಡು ಗುರುತು ಮಾಡಿದ್ದೆ. ನಾನು ಕಟ್ಟಿಕೊಟ್ಟ ಬುತ್ತಿಯಂತೂ ಉಳಿದಿಲ್ಲ. ಈಗೇನು ಮಾಡಬಹುದು; ಆತನೆಷ್ಟು ಕಷ್ಟಪಡುತ್ತಿರಬಹುದೆಂದು ಚಿಂತೆ. ಮಳೆಗಾಳಿಗೆ ಸಿಲುಕಿ ಯಾತನೆಪಡುತ್ತಿದ್ದಾನೋ ಎಂಬ ಆತಂಕ. ನನ್ನ ಸ್ಥಿತಿಯೋ ! ಭಯಗೊಂಡ ನಾನೊಬ್ಬಳೇ ಮನೆಯಲ್ಲಿ ಇರುವುದು ಇನ್ನೂ ಯಾಕೆ ಅವನಿಗೆ ತಿಳಿದಿಲ್ಲ ? ಒಂಟಿಯಾಗಿ ನಾನು ಇದ್ದ ಅನುಭವವೇ ಇಲ್ಲ.

ನಾಲ್ಕಾರು ದಿನದಲ್ಲಿ ಬರುತ್ತೇನೆಂದು ಹೇಳಿದ ಆತನ ಮಾತುಗಳನ್ನು ಎಣಿಸಿಕೊಂಡಾಗ ಆತನ ಮೇಲೆ ಹುಸಿಕೋಪ; ಅಸಹನೆ; ಉದ್ವೇಗ. ಆದರೆ ಆತನು ನೀಡಿದ ಮುತ್ತಿನಹಾರವನ್ನು ಎಣಿಸಿದಾಗ ಆತನಿಗೆ ಏನಾದರೂ ತೊಂದರೆ ಆಯ್ತೇ ಎನ್ನುವ ಕಾಳಜಿ. ನನಗಂತೂ ಹೊತ್ತೇ ಹೋಗಲಾರದು. ಊಟ ಬೇಕಿಲ್ಲವಾಗಿತ್ತು. ಮಲಗಿದರೆ ನಿದ್ರೆಯೂ ಇಲ್ಲ. ಆತಂಕದಲ್ಲಿದ್ದ ನನಗೆ ಕನಸೂ ಇಲ್ಲ, ಪುನಃ ಮನೆಯ ಹೊರಗೆ ಮಲ್ಲಿಗೆಯ ಮಂಟಪದ ಕಡೆ ನೋಡಿದೆ. ಸುಮ್ಮಸುಮ್ಮನೆ ನೋಡಿದೆ. ನಿರೀಕ್ಷೆಯೇ ಹೆಚ್ಚಾಗಿ ಹಳೆಯದನ್ನು ನೆನಪಿಸಲಾಗಲಿಲ್ಲ. ಬೇಸರವಾಗಿ ಮನೆಯ ಸುತ್ತ ತಿರುಗಲಾರಂಭಿಸಿದೆ…ನನ್ನ ಹಳೆಯ ನೆನಪುಗಳನ್ನೇ ಮೆಲುಕು ಹಾಕುತ್ತಾ ಹೆಜ್ಜೆ ಹಾಕಿದೆ…

ಮೇಘಮೇದಿನಿ

- ದಿವಾಕರ ಹೆಗಡೆ, ಧಾರವಾಡ

ವಾರ್ಧಕ

ಸಾಗರವ ತುಂಬಿ ತೊನೆದಾಡುವಾ ತೆರೆಗಳನು |

ಓಘದಿಂ ಧುಮ್ಮಿಕ್ಕಿ ಮೊರೆವ ಜಲಪಾತವನು |

ಬಾಗಿ ಹರಗಿರುವ ಗಿಡ ಮರಗಳಂದವ ನೋಡಿ

ಹಸಿರಹಚ್ಚಡವ ಹರಸಿ |

ನಾಗಬನ ದೇವಬನ ಸುಖದ ಶೃಂಗಾರವನ |

ನೇಗಿಲಿನ ಗೆರೆಗೆ ತಾನಾಗಿ ಆಹಾರಬನ |

ಮೇಘದೊಲವಿನಲಿ ಗಜವದನ ನೀ ಕಾದಿರುವೆ

ಬಾಗುವೆನು ಶಿರವನಡಿಗೆ ||

ಇಳೆಯು ತರಳೆ ಮೇಘ ಮರುಳೆ ಇರುಳ ಕಳೆವಳೆಂತೋ |

ಮಿಲನದಲ್ಲಿ ಮೊಳೆತ ಭಾವ ಶರದೃತುವು ಬಂತೋ |

ಹೊಳೆ ಹೊಳೆಯುವ ಹೊಳೆಯ ನೀರು ಎಳೆ ಪ್ರಾಯದ ರನ್ನೆ |

ಚಳಿ ಚಳಿಯಲಿ ಚಿಮ್ಮಿ ನೆಗೆವ ನೀರಾಂಗನೆ ಚೆನ್ನೆ ||

ಕೌಮುದಿ ಪ್ರೇಮದಿ ಕಾಡಿಹುದು | ಶರದಾಲಿಂಗನ ಬೇಡಿಹುದು ||

ಭಾಮಿನಿ ನೆನಪಲಿ ಮಾಗಿದಳು | ಎಲೆಯುದುರಿದ ಮುದ ಮಾಗಿ ಇದು||

ಶ್ಯಾಮಲವಾಗಿದೆ ಆಗಸವು | ಎದೆಯಲಿ ಕಾದಲನುಸಿರಿಹುದು ||

ಕೋಮಲೆ ಪ್ರೋಷಿತೆಯಾಗಿಹಳು | ಸಿರಿಮುಡಿ ಬಿಳಿಹೂ ಮುಡಿದಿಹಳು||

ಅಷ್ಟನಾಯಿಕೆಯರ ಚಿತ್ತವೃತ್ತಿ-ಭಾಗ ೧
ಲಲಿತಲಹರಿಯ ಮೂಲಕ ಮನೋಜ್ಞವಾದ, ಅಪೂರ್ವವೆನಿಸುವ ನೃತ್ಯಸಂಬಂಧೀ ಕನ್ನಡ ಭಾಷಾ ರಚನೆಗಳನ್ನು ಹಲವು ಸಂಚಿಕೆಗಳಿಂದ ಓದಿಕೊಂಡು ಬಂದಿದ್ದೀರಿ. ಈಗ ಅವೆಲ್ಲದಕ್ಕೂ ಕಳಶಪ್ರಾಯವಾಗಿ ನೃತ್ಯ-ನಾಟ್ಯಾದಿ ವರ್ಗಗಳಲ್ಲಿ ಸಾರ್ವಕಾಲೀನವೆನಿಸುವ, ಅಭಿವ್ಯಕ್ತಿಗೆ ಸವಾಲು ಮತ್ತು ಸಾಧನವೆನಿಸುವ ಅಷ್ಟನಾಯಿಕೆಯರ ಚಿತ್ತವೃತ್ತಿಗಳನ್ನು ಬಗೆಬಗೆಯಾಗಿ ಹರಡಿ ಅದರ ಅಂದಚೆಂದಗಳನ್ನು ಕಾಣಿಸುವ ಪ್ರಯತ್ನ ಈ ಸಂಚಿಕೆಯಿಂದ ಪ್ರಾರಂಭಗೊಳ್ಳಲಿದೆ. ಆ ಮೂಲಕವಾಗಿ ನಾಟ್ಯಾಭಿವ್ಯಕ್ತಿಗೆ ಕಲಾವಿದರಿಗೆ ಪ್ರೇರಣೆ ಮತ್ತು ಪೋಷಣೆಯನ್ನು ನೀಡುವುದರೊಂದಿಗೆ ಓದುಗರ ನಡುವೆ ಸಂವಾದ, ಅರಿವಿನ ಹರಿವಿಗೆ ಮತ್ತಷ್ಟು ಅವಕಾಶವಾಗುವುದೆಂಬ ನಂಬುಗೆ ನಮ್ಮದು. ಇದನ್ನು ಸೂಕ್ತವಾಗಿ ಕಂಡುಕೊಂಡಲ್ಲಿ ರಸಿಕವರ್ಗಕ್ಕೆ ರಸದೃಷ್ಟಿ, ಕಲ್ಪನಾವಕಾಶ, ಭಾವಾಭಿನಯ ಸಾಮರ್ಥ್ಯ, ರಸಪ್ರತಿಪಾದನೆಯ ಕ್ಷಿತಿಜ ಮತ್ತಷ್ಟು ವಿಸ್ತಾರವೆಂಬಂತೆ ಕಾಣುವುದರಲ್ಲಿ ಸಂಶಯವಿಲ್ಲ ಎಂಬುದು ವಿದ್ವಜ್ಜನರ ಅನಿಸಿಕೆ.   ವರ್ಷದಾದ್ಯಂತ ಒಂದೊಂದು ಸಂಚಿಕೆಗೂ ಒಬ್ಬೊಬ್ಬ ನಾಯಿಕೆಯ ಸಂಕ್ಷಿಪ್ತ ಪರಿಚಯ, ಅದರ ಕುರಿತ ಕಾವ್ಯ ದೃಷ್ಟಿ, ಅನುಭವ-ಅನುಭಾವ ನೆಲೆಗಟ್ಟನ್ನು ಪರಿಚಯಿಸುವ, ಅಭಿನಯಕ್ಕೆ ಪೂರಕವಾದ ವಿಶ್ಲೇಷಣೆ, ಯಕ್ಷಗಾನ ಮತ್ತು ನೃತ್ಯಸಂಬಂಧೀ ಆಯಾಮಗಳನ್ನು ಈ ಮೂಲಕ ನೀಡಲಾಗುತ್ತದೆ. ಈ ಪ್ರಯತ್ನಕ್ಕೆ ಭ್ರಮರಿಯ ಹಿರಿಯ ಮಾರ್ಗದರ್ಶಿ ಶತಾವಧಾನಿ ಡಾ| ಆರ್. ಗಣೇಶ್, ಏಕವ್ಯಕ್ತಿ ಯಕ್ಷಗಾನದ ಸಾವಿರದ ಸಾಧಕ ಮಂಟಪ ಪ್ರಭಾಕರ ಉಪಾಧ್ಯ ಮತ್ತು ನಮ್ಮ ಬಳಗದ ಹಿರಿಯ ಕವಿ ಧಾರವಾಡದ ದಿವಾಕರ ಹೆಗಡೆಯವರು ಹೃತ್ಪೂರ್ವಕವಾಗಿ ಕೈಜೋಡಿಸಿದ್ದಾರೆ. ಶತಾವಧಾನಿ ಡಾ| ಆರ್. ಗಣೇಶ್ ಅವರ ‘ಭಾಮಿನೀ’ ಕಾವ್ಯ, ಅದಕ್ಕೆ ಮಂಟಪರ ಪ್ರಥಮ ಅಭಿವ್ಯಕ್ತಿಯ ಅನುಭವದ ಹೂರಣ, ಮತ್ತು ದಿವಾಕರ ಹೆಗಡೆಯವರ ನೃತ್ಯಸಂಬಂಧೀ ನೋಟಗಳು ಜೊತೆಯಾಗಲಿವೆ. ಈ ಸಂಚಿಕೆಯು ನಾಯಿಕೆಯರ ನೋಟಕ್ಕೆ ಒಂದು ಮುನ್ನುಡಿ.

(ವಿ.ಸೂ : ಈವರೆಗೆ ಅಷ್ಟನಾಯಿಕೆಯರನ್ನು ಒಂದೇ ಮೂಸೆಯಲ್ಲಿ ಹಿಡಿದಿಡುವ ಪ್ರಯತ್ನ ಇಲ್ಲವೇ ಇಲ್ಲವೆಂಬಷ್ಟು ವಿರಳ. ಆದರೆ ಮಂಟಪರ ‘ಭಾಮಿನೀ’ ಅಷ್ಟನಾಯಿಕೆಯರ ಅಭಿವ್ಯಕ್ತಿ ವಿಷಯದಲ್ಲಿ ಒಂದು ಮೈಲಿಗಲ್ಲು. ಈಗ ‘ಭಾಮಿನೀ’ಯ ಸಿ.ಡಿ.ಗಳು ಯುವ ಚಲನಚಿತ್ರ ನಿರ್ದೇಶಕ ಅಭಯಸಿಂಹ ಅವರ ಸಾಹಸದಲ್ಲಿ ಚೆಂದವಾಗಿ ಮೂಡಿಬಂದಿದ್ದು, ಸಿ.ಡಿ.ಗಳಿಂದ ಬಂದ ಧನ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್‌ನ ಸದಭಿರುಚಿಯ ಕಾರ್ಯಕ್ರಮಗಳಿಗೆ ವಿನಿಯೋಗವಾಗಲಿದೆ. ಆಸಕ್ತರು ಸಂಘಟಕ ಶ್ರೀಯುತ ಮುರಳಿ ಕಡೆಕಾರ್ ಅವರನ್ನು ಸಂಪರ್ಕಿಸಬಹುದು. ಬೆಲೆ : ೧೦೦ ರೂ. ; ಫೋನ್ ನಂ :+೯೧ ೯೪೪೯೦೮೮೭೦೮ )

ಪೀಠಿಕೆ-ಪರಿಚಯ

-ಮನೂ ‘ಬನ’

ನಾಯಕ- ನಾಯಿಕಾ ಭಾವಗಳು ನಾಟ್ಯದ ಸಾತ್ತ್ವಿಕ ಅಭಿನಯಕ್ಕೆ ಪೋಷಕವಾದ ಹಾವಭಾವಗಳು. ಭಾವನೆಗಳ ಪರಸ್ಪರ ವಿನಿಮಯ ಮತ್ತು ಅದರ ಅವಸ್ಥೆಗಳೇ ಇಲ್ಲಿ ಮೂಲವಸ್ತು. ರಸಗಳಲ್ಲೇ ಪ್ರಧಾನವೆನಿಸುವ ಶೃಂಗಾರದ ಅವಸ್ಥೆಗೆ ಪೂರಕವಾಗಿ ರಚಿಸಲ್ಪಟ್ಟವು. ಆದರೂ ಪ್ರತಿಯೊಂದು ನಾಯಿಕೆ-ನಾಯಕರ ರಸಪ್ರತಿಪಾದನೆ ನವರಸಕ್ಕಿಂತಲೂ ಮೀರಿದ್ದು ಎಂಬುದು ಲಾಕ್ಷಣಿಕರ ಅಭಿಪ್ರಾಯ. (ನಾಯಕಿ ಎಂಬ ಪದ ಉಚ್ಛಾರ ತಪ್ಪು)     ಅಮೂರ್ತವನ್ನು ಮೂರ್ತವಾಗಿಸುವಲ್ಲಿ ಮತ್ತ್ತು ಮೂರ್ತ ಕಲ್ಪನೆಯ ಮೂಲಕ ಅಮೂರ್ತವನ್ನು ಕಾಣುವಲ್ಲಿ ನಾಯಿಕೆ-ನಾಯಕ ಭಾವವು ನೃತ್ಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಜೀವಾತ್ಮ ಪರಮಾತ್ಮನ ಸಾಂಗತ್ಯವನ್ನು ಲೌಕಿಕ ಉದಾಹರಣೆಗಳ ಮೂಲಕ ಕಂಡುಕೊಂಡು ಲೌಕಿಕದ ಆನಂದ ಮತ್ತು ಪಾರಮಾರ್ಥಿಕದ ಅನುಭವವನ್ನು ಕಲಾವಿದನು ಸಾಕ್ಷಾತ್ಕಕರಿಸಿಕೊಳ್ಳುವುದರೊಂದಿಗೆ ರಸಿಕರಿಗೂ ದಕ್ಕುವಂತೆ ಮಾಡುವುದು ನಿಜಕ್ಕೂ ನಾಯಿಕಾ-ನಾಯಕ ಭಾವಗಳ ಪರಮ ಗುರಿ. ಕಲಾವಿದರಿಗೆ ಇವು ಒಡ್ಡುವ ಸವಾಲು ಅವರ ಪ್ರತಿಭಾಸಂಪನ್ನತೆಗೆ ಹಿಡಿಯುವ ದರ್ಪಣ. ತತ್ತ್ವಾದರ್ಶವಾದ, ಆಧ್ಯಾತ್ಮಿಕ ಸಾಂಕೇತಿಕತೆಯ, ಸೌಂದರ್ಯದ ಸಮೀಕರಣವುಳ್ಳ ಈ ಭಾವಗಳನ್ನು ನಾಟ್ಯಶಾಸ್ತ್ರದ ಪ್ರಾರಂಭದ ಅಧ್ಯಾಯಗಳಲ್ಲಿಯೇ ಗುರುತಿಸಲಾಗುತ್ತದೆ. ಈ ಭಾವ ಉಪನಿಷತ್ತು, ಪುರಾಣಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಉಲ್ಲೇಖಿತವಾಗಿದೆ. ಜಯದೇವನ ಅಷ್ಟಪದಿ ನಾಯಿಕಾ ಭಾವದ ನಿರೂಪಣೆಯಲ್ಲಿ ಸಂದರ್ಭ ಸಹಿತವಾಗಿ ಲೌಕಿಕ ಮತ್ತು ದೈವಿಕವನ್ನು ಸಂಯೋಗಗೊಳಿಸುವ ಮಹೋನ್ನತ ಕಾವ್ಯ. ಭರತಮುನಿಯು ನಾಟಕವನ್ನು ಸಂಯೋಜಿಸುವಾಗ ೪ ವೃತ್ತಿಗಳಲ್ಲೊಂದಾದ ‘ಕೈಶಿಕೀ’ ವೃತ್ತಿಯನ್ನು ಆಚರಿಸುವ ನೃತ್ಯಗಾತಿಯರ ಕೊರತೆ ಕಂಡುಕೊಂಡು ಬ್ರಹ್ಮನನ್ನು ಪ್ರಾರ್ಥಿಸಿ, ನಾಯಿಕಾ ಪಾತ್ರಗಳನ್ನು ನಿರ್ವಹಿಸುವ ಅಪ್ಸರೆಯರನ್ನು ಸೃಷ್ಟಿಸಿಕೊಂಡನೆಂದು ಪ್ರತೀತಿ. ತದನಂತರ ದೇವಸ್ಥಾನಗಳಿಂದ ಪೋಷಿತವಾಗುತ್ತಿದ್ದ ನೃತ್ಯಕಲೆ; ದೇವರನ್ನು ಸ್ತುತಿಸಿ, ನರ್ತಿಸುವ ದೇವದಾಸಿಯರನ್ನು ಸರ್ವೋಚ್ಛ ನಾಯಿಕೆಯರೆಂದು ಪರಿಗಣಿಸಿತು. ರಾಜಾಶ್ರಯದಲ್ಲಿ ಈ ಕಲ್ಪನೆಯು ರಾಜನಿಗೆ ಸೀಮಿತವಾಗಿ ಕ್ರಮೇಣ ಹಲವು ಸ್ಥಿತ್ಯಂತರಗಳಿಂದ ಕಳಂಕಕ್ಕೊಳಗಾಯಿತು. ಮುಂದೆ ೨೦ನೇ ಶತಮಾನದ ಪ್ರಾರಂಭದ ದಶಕಗಳಲ್ಲಿ ನೃತ್ಯವನ್ನು ಬಹಿಷ್ಕಾರ ಮಾಡುವ ಕ್ರಮಗಳು ತಲೆಯೆತ್ತಿ ನಿಂತಾಗ ನೃತ್ಯದ ಪುನರುಜ್ಜೀವನಕ್ಕೆ ರುಕ್ಮಿಣೀ ದೇವಿ ಅರುಂಡೇಲ್ ಸದಿರ್‌ನಲ್ಲಿ ಬಳಸುತ್ತಿದ್ದ ಶೃಂಗಾರದ ಕಲ್ಪನೆಯನ್ನೇ ಕಿತ್ತೆಸೆದು ನೃತ್ಯದ ನವೀಕರಣಕ್ಕೆಂದು ಭರತನಾಟ್ಯವೆಂದು ಹೆಸರಿಸಿ ಭಕ್ತಿ ಶೃಂಗಾರವೆಂಬ ಹೊಸ ಕಲ್ಪನೆಯನ್ನೇ ಪರಿಚಯಿಸಿದರು. ಬಹುಚಾಲ್ತಿಯಲ್ಲಿರುವ ನಾಟ್ಯಶಾಸ್ತ್ರ ಪ್ರಸ್ತಾಪಿಸುವ ನಾಯಿಕೆಯರು ೮, ನಾಯಕರು ೪. ಅವು ಹೀಗಿವೆ : ನಾಯಕರು : ಧೀರೋದಾತ್ತ, ಧೀರಲಲಿತ, ಧೀರೋದ್ಧಟ, ಧೀರಶಾಂತ. ನಾಯಿಕೆಯರು : ಪ್ರೋಷಿತಪತಿಕಾ, ವಾಸಕಸಜ್ಜಿಕಾ, ಅಭಿಸಾರಿಕಾ, ವಿಪ್ರಲಬ್ಧಾ, ವಿರಹೋತ್ಕಂಠಿತಾ, ಖಂಡಿತಾ, ಕಲಹಾಂತರಿತಾ, ಸ್ವಾಧೀನಪತಿಕಾ. ಇವುಗಳಲ್ಲೂ ಬೇರೆ ಬೇರೆ ವಿಧಧ, ವರ್ಗದ, ಸ್ಥಿತಿಯ, ಗುಣ, ನಡವಳಿಕೆಯ ನಾಯಿಕೆಯರು ಮತ್ತು ನಾಯಕರ ಬೇಧಗಳಿವೆ. ಇಂತಹ ನಾಯಿಕಾ-ನಾಯಕ ಬೇಧಗಳಿಗೆ ಸಹಾಯಕ-ಸಹಾಯಕಿಯರಾಗಿ ಸಖ-ಸಖಿಯರಿದ್ದು ಅವರಲ್ಲೂ ಬಗೆಬಗೆಯ ರಸ, ಭಾವಾನುಭಾವ, ವಿಭಾವಾದಿ ಮನೋಧರ್ಮಗಳಿವೆ. ಜೊತೆಗೆ ಶೃಂಗಾರದ ಬೇರೆ ಬೇರೆ ವಿಧಗಳಲ್ಲಿ ನಾಯಿಕೆಯರ ಹಲವು ಅವಸ್ಥೆಗಳು ಇನ್ನೂ ಅಧಿಕ.     ಉಳಿದಂತೆ ಮೇಲಿನ ನಾಯಿಕೆಯರಿಗೆ ಪೂರಕವಾಗಿ ಉತ್ತಮ, ಮಧ್ಯಮ, ಅಧಮ ಎಂದೋ; ಸ್ವೀಯಾ, ಪರಕೀಯ, ಸಾಮಾನ್ಯೆ ಎಂದೋ; ಮುಗ್ಧಾ, ಮಧ್ಯಾ, ಪ್ರಗಲ್ಬಾ ಎಂಬುದಾಗಿಯೋ; ಜ್ಯೇಷ್ಠಾ, ಕನಿಷ್ಠಾ; ಧೀರ, ಧೀರಾಧೀರ, ಅಧೀರೆ; ಉಧಾ, ಅನುಧಾ; ಕನ್ಯಕೆ, ಪರೋಢೆ ಎಂದೋ ಪ್ರಧಾನ ನಾಯಿಕೆಯರನ್ನೂ ಒಳಗೊಂಡಂತೆ ವಿಭಾಗಿಸುವ ಪ್ರಕ್ರಿಯೆ ಹೆಚ್ಚು ಜನಜನಿತ. ಜೊತೆಗೆ ಪುನರ್ಭೂ (ಉಪವಿಭಾಗ: ಅಕ್ಷತ, ಕ್ಷತ, ಯತಾಯತ, ಯಯವರ), ಸ್ವೈರಿಣಿ, ಗಣಿಕ, ರೂಪಜಿವಾ, ವಿಲಾಸಿನಿ, ಸ್ವಯಂವರ, ವೇಶ್ಯೆ, ಕುಲಜ, ಪನ್ಯಕಾಮಿನಿ, ಕ್ಷತ್ರಿಯ, ದಿವ್ಯ, ಅದಿವ್ಯ, ದಿವ್ಯಾದಿವ್ಯ ಮುಂತಾದ ನಾಯಿಕೆಯರ ಪ್ರಸ್ತಾಪವೂ ಇವೆ. ಇವುಗಳೆಲ್ಲದರೊಳಗೂ ಹಲವು ಉಪವಿಭಾಗಗಳಿದ್ದು ಅವುಗಳ ಪೈಕಿ ಕೆಲವು ಕೆಳಗಿನಂತಿವೆ. ಜ್ಞಾತ ಯೌವನ, ಅಜ್ಞಾತ ಯೌವನ, ನವೋಢ, ವಿಶ್ರಬ್ಧ ನವೋಢ, ಗುಪ್ತ, ವಿದಗ್ಧ, ಲಕ್ಷಿತ, ಕುಲಟ, ಅನುಸಾಯನ, ಮಾನವತಿ, ವಕ್ರೋಕ್ತಿ ಗರ್ವಿತ, ಅನ್ಯ ಸಂಭೋಗ ದುಃಖಿತ, ಪ್ರೇಮ ಗರ್ವಿತ, ಸೌಂದರ್ಯ ಗರ್ವಿತ, ಪ್ರಥಮಾವತೀರ್ಣ, ಪ್ರಥಮಾನತೀರ್ಣ, ರತಿವಾಮ, ಮಾನಮೃದು, ಸಮಾಧಿಕ ಲಜ್ಜಾವತಿ, ವಿಚಿತ್ರ ಸುರತ, ಪ್ರರೂಢ ಸ್ಮರ, ಪ್ರರೂಢ ಯೌವನ, ಈಶತ್ ಪ್ರಗಲ್ಭಾ ವಚನ, ಮಧ್ಯಮ ವೃದ್ದಿತ, ಸ್ಮರಂಧಾ, ಗಾಢ ತಾರುಣ್ಯ, ಸಮಸ್ಥಾರದ ಕೋವಿದ, ಭಾವೋನ್ನತ, ದಾರ್ವ್ರೀಡ, ಅಕ್ರಾಂತ ನಾಯಕ, ರಕ್ತ, ವಿರಕ್ತ, ನವ-ವಯ, ನವ-ಕಾಮ, ರತೌವಾಮ, ಸಖಿವಸಾ, ಸವ್ರೀದರತ ಪ್ರಯತ್ನಾ, ರೋಷಾಕೃತವಾಸ್ಪ-ಮೌನಾ, ಮದನವಿಕಾರ, ಮೃದ್ವಿ, ಅಕ್ಷಮ, ಸಮಾನ ಲಜ್ಜಾಮದನಾ, ಪ್ರೋದ್ಯತ್ತಾರುಣ್ಯಶಾಲಿನೀ, ಕಿಂಚಿತ ಪ್ರಗಲ್ಭೋಕ್ತಿ, ಮೋಹಾಂತ ಸುರಕ್ಷಮಾ, ಪೂರ್ಣ ತಾರುಣ್ಯ, ಮಧಾಂಧ, ಊರೂರಾತೋತ್ಶುತ, ರಸಾಕ್ರಾಂತ ವಲ್ಲಭ, ಭೂರಿಭಾವೋದ್ಯಾಮಾಭಿಜ್ಞ, ಅತಿಪ್ರೌಢೋಕ್ತಿ, ಅತಿ ಪ್ರೌಢ ಜ್ಯೇಷ್ಠ, ಕ್ಲುಪ್ತಾನುರಾಗ, ಕಲ್ಪಿತಾನುರಾಗ ಇತ್ಯಾದಿ. ನಾಯಿಕೆಯ ಸಹಾಯಕಿಯರಾಗಿ ದಾಸಿ, ಸಖಿ, ರಜಕಸ್ತ್ರೀ, ಸಹೋದರಿ, ಭಿಕ್ಷುಕಿ, ಸನ್ಯಾಸಿನಿ, ಚಿತ್ರಗಾರ್ತಿ, ಕುಶಲ ಕಾರ್ಯ ನಿರತೆ, ಮಲತಾಯಿಯ ಮಗಳು, ನೆರೆಮನೆಯವಳು, ತಾಂಬೂಲ ತರುವವಳು, ಗಂಧ ಪೂಸುವವಳು ಎಂದು ಹಲವು ದೂತಿಯರ ವರ್ಣನೆ ಕಂಡುಬಂದಿದೆ. ಆದರೆ ಪ್ರಧಾನ ನಾಯಕರ ಹೊರತಾಗಿ ನಮಗೆ ಕಾಣುವುದು ಪತಿ, ಉಪಪತಿ, ವೈಶಿಕ ಎಂಬ ಗುಣ ಆಧಾರ ನಾಯಕರ ವಿಭಾಗವನ್ನು; ಅನುಕೂಲ, ದಕ್ಷಿಣ, ಶಠ, ದೃಷ್ಟ ಎಂಬ ನಡವಳಿಕೆ ಆಧರಿತ ವರ್ಗವನ್ನು ; ಉತ್ತಮ, ಮಧ್ಯಮ, ಅಧಮ ಎಂಬ ಭೇದಗಳು ಮತ್ತು ನಾಯಕನ ಸಹಾಯಕರಾಗಿ ವಿಟ, ವಿದೂಷಕ, ಚೇಟ ಹಾಗು ವಿರೋಧಿಯೆನಿಸುವ ಪ್ರತಿನಾಯಕ. ಇವೆಲ್ಲಾ ವಿಭಾಗದ ಲಕ್ಷಣ, ಮತ್ತು ಅದರೊಳಗಿನ ಮತ್ತಷ್ಟು ಉಪವಿಭಾಗಗಳನ್ನು, ಭಾವಗಳಿಗೆ ತಕ್ಕುದಾದ ಲಕ್ಷಣಗಳು, ಪಾತ್ರ-ಗುಣ-ದೋಷಗಳು ಹೇಳುತ್ತಾ ಹೋದರೆ ಬೃಹತ್ ಸಂಶೋಧನೆ ಆಗುವಷ್ಟು ವಿಷಯವಿದೆ. ಅದರಲ್ಲೂ ಸ್ತ್ರೀಪಾತ್ರವನ್ನುದ್ದೇಶಿಸುವ ನಾಯಿಕಾ ಗುಣಧರ್ಮಗಳು ನಾಯಕನಿಗಿಂತ ಹೆಚ್ಚು ಆಯ್ಕೆ ಮತ್ತು ವಿವಿಧತೆಯುಳ್ಳವುಗಳು. ಸಹಜವಾಗಿ ಗಮನಿಸಿದರೂ ಪುರುಷ ಭಾವಾಭಿವ್ಯಕ್ತಿಗಿಂತ ಸ್ತ್ರೀ ವೈವಿಧ್ಯಮಯ, ವಿಶಿಷ್ಟವೆನಿಸುವ ಭಾವ-ರಸ ಪ್ರಕಟಣೆಯ ಹೇತು. ಹಾಗಾಗಿ ಭರತನಷ್ಟೇ ಅಲ್ಲದೆ ರುದ್ರಟನ ಕಾವ್ಯಾಲಂಕಾರ, ಶೃಂಗಾರ ತಿಲಕ, ಧನಂಜಯನ ದಶರೂಪಕ, ಭೋಜರಾಜನ ಸರಸ್ವತಿ ಕಂಠಾಭರಣ, ಶೃಂಗಾರ ಪ್ರಕಾಶ, ವಾಗ್ಭಟನ ವಾಗ್ಭಂಟಾಲಂಕಾರ, ಹೇಮಚಂದ್ರನ ಕಾವ್ಯಾನುಶಾಸನ, ಶಾರದಾತನಯನ ಭಾವಪ್ರಕಾಶ, ಸಿಂಹಭೂಪಾಲನ ಲಾಸ್ಯರಂಜನ, ರಸಾರ್ಣವ, ಸುಧಾಕರ, ಪುಂಡರೀಕ ವಿಠಲನ ನರ್ತನನಿರ್ಣಯ, ವಿದ್ಯಾನಾಥನ ಪ್ರತಾಪರುದ್ರ, ಯಶೋಭೂಷಣ, ವಿಶ್ವನಾಥನ ಸಾಹಿತ್ಯದರ್ಪಣ, ಅಚ್ಯುತ ಶರ್ಮನ ಸಾಹಿತ್ಯಸಾರ, ಭಾನುದತ್ತನ ಕೃತಿಗಳು ಹಾಗೂ ಅಗ್ನಿಪುರಾಣ, ಭರತ ರಸಪ್ರಕರಣಂ, ನಾಟ್ಯದರ್ಪಣ ಇತ್ಯಾದಿಯಾಗಿ ಒಬ್ಬೊಬ್ಬ ನಾಟ್ಯಶಾಸ್ತ್ರಜ್ಞನೂ ತನಗೆ ತೋರಿದಂತೆ ವಿಧ ವಿಧವಾಗಿ ನಾಯಿಕೆಯರನ್ನು ವರ್ಣಿಸಿದ್ದಾರೆ. ಹೀಗೆ ಲೆಕ್ಕ ಹಾಕುತ್ತಾ ವಿಧದೊಳಗೊಂದು ವಿಧವೆಂಬಂತೆ ಅರಸುತ್ತಾ ಹೋದರೆ ಐದುಸಾವಿರಕ್ಕಿಂತಲೂ ಅಧಿಕ ನಾಯಿಕೆಯರನ್ನು ಕಾಣಬಹುದು. ಈ ಭಾವಗಳು ನೃತ್ಯ, ನಾಟ್ಯ ಸಂಬಂಧೀ ವಸ್ತುಗಳಾದ ರೂಪಕ, ಶಬ್ದ, ವರ್ಣ, ಪದ, ಜಾವಳಿ, ಕೀರ್ತನೆ, ಅಷ್ಟಪದಿ, ತರಂಗ, ದೇವರನಾಮ, ಚೂರ್ಣಿಕೆ, ಕಲಾಪ, ರಾಸ್ ನೃತ್ಯ, ಯಕ್ಷಗಾನ ಪ್ರಸಂಗ ಹೀಗೆ ಭಾರತೀಯ ನರ್ತನಕಲೆಯುದ್ದಕ್ಕೂ ಹಾಸುಹೊಕ್ಕಾಗಿದೆ. ರಸಿಕರಿಗೆ, ಓದುಗರಿಗೆ ಸರಳವಾಗಿ ಅರ್ಥವಾಗುವ ನಿಟ್ಟಿನಲ್ಲಿ ಮುಂದಿನ ಸಂಚಿಕೆಗಳಲ್ಲಿ ಪ್ರಧಾನ ನಾಯಿಕೆಯರ ಪ್ರಸ್ತಾಪ ಬಂದಾಗ ಆದಷ್ಟೂ ಸಮಗ್ರವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಲಾಗುವುದು.

ಭಾಮಿನೀ -

ಶತಾವಧಾನಿ ಡಾ. ಆರ್. ಗಣೇಶ್

ರಾಗ- ನಾಟ ;

ಕಂದಪದ್ಯ

ಶ್ರೀಮದ್ವಿಶಾಲವಿಶ್ವ ಪ್ರೇಮಾಂಗಣರಣರಂಗದೊಳ್ ಸ್ವಯಂ ನಾಯಕತಾ|

ಸ್ಥೇಮಂ ಜೀವಾತ್ಮಗಣಾ ರಾಮಂ ಚಿನ್ನಾಯಿಕಾಭಿರಾಮಂ ಗೆಲ್ವಂ ||

ರಾಗ : ಕಲ್ಯಾಣಿ ;

ಉತ್ಪಲಮಾಲಾವೃತ್ತ

ಲೋಕದ ಭಾವಜಾಲವಲಯಂಗಳೆ ನಾಯಿಕೆಯರ್ಕಳಳ್ತಿಯಂ ಸ್ವೀಕರಿಸಲ್ಕಲೋಕರಸಪಾಕಮೆ ಗೋಕುಲಪಾಲನಾಯಕಾ|

ಲೋಕನಲೀಲೆಯಾಗೆ ಮಿಗೆ ಸಂದುದು ಬಂದುದು ಯಕ್ಷಗಾನ ಬಿ ಬ್ಬೋಕವಿಧಾನದಿಂದೆ ರುಚಿರಮ್ಯಶುಚಿಸ್ಫರಿತಂ ನಿರೂಪಣಂ ||

ರಾಗ -ಕಾಪಿ ;

ಕಂದಪದ್ಯ

ಶೃಂಗಾರದ ಶಿಖರಾನುಭ ವಂ ಗಡ ದೊರೆಕೊಳ್ವುದಿಲ್ಲಿ ರಸಿಕರ್ಗೊಲವಿಂ|

ಸಂಗೀತಕಮಿದು ರೂಪಕ ಮಂಗೀಕೃತಮಕ್ಕೆ ನಾಯಿಕಾಷ್ಟನಾಕಂ|

ಸೀತೆಯ ಸ್ವಗತ ಅಥವಾ ಮತ್ತೆ ಹುತ್ತಗಟ್ಟಿತೆ ಸೀತೆಯ ಚಿತ್ತ?
ಪರಿಕಲ್ಪನೆ ಸಾಹಿತ್ಯ: ಪ್ರೊ| ಉದ್ಯಾವರ ಮಾಧವ ಆಚಾರ್ಯ

ಸಂಗೀತ, ನೃತ್ಯಸಂಯೋಜನೆ ಮತ್ತು ಪ್ರಸ್ತುತಿ: ಶ್ರೀಮತಿ ಭ್ರಮರಿ ಶಿವಪ್ರಕಾಶ್, ಯು‌ಎಸ್‌ಎ

ವಾಲ್ಮೀಕಿಯ ಆಶ್ರಮದಲ್ಲಿ ಕುಶ-ಲವರ ಜನ್ಮದ ಪೂರ್ವದಲ್ಲಿ ರಾಮನಾಣತಿಯಂತೆ ತಮ್ಮ ಲಕ್ಷಣ ಕರೆತಂದು ತೊರೆದಾಗ ಕವಿ ಮನಸ್ಸಿನ ಮುನಿ ವಾಲ್ಮೀಕಿಯಿಂದ ಆಶ್ರಯ ಪಡೆದ ಗರ್ಣಿಣಿ ಸೀತೆಯ ಮನದ ಲಹರಿಯನ್ನು ಕಲ್ಪನಾತ್ಮಕವಾಗಿ ಚಿತ್ರಿಸಲಾಗಿದೆ. ಇದೊಂದು ಮೆಲುಕು. ಇದೊಂದು ಸ್ವಗತ. ಅಳಲಿನ ಆಕ್ರಂದನ. ಯಾರು ಸರಿಯೋ, ಯಾರದು ತಪ್ಪೋ ಎಂಬ ತೀರ್ಮಾನವಿಲ್ಲ. ಕೇವಲ ಪೌರಾಣಿಕ ಸ್ಥಿತಿಯ ಬಗೆಗೆ ಒಂದು ಸ್ಪಂದನ. ಪುರಾಣ ಶಿಲ್ಪದ ಮೌಲ್ಯಕ್ಕೆ ಧಕ್ಕೆ ತಾರದೆ ಮಾನವೀಯ ನೆಲೆಯಲ್ಲಿ ವಿಶ್ಲೇಷಣೆ ನಡೆದಿದೆ. ಮಣ್ಣು, ಕಾಡು, ಏಕಾಕಿತನ, ಹೆಣ್ತನದ ಅವಸ್ಥಾಂತರಗಳೆಲ್ಲ ಸೀತೆಯ ಬಾಳಿನಲ್ಲಿ ಹಾದುಹೋದುದರ ಒಂದು ಅವಲೋಕನ. ಮನೋಧರ್ಮದ ನೆಲೆಯಲ್ಲಿ ರಾಮಾಯಣದ ಕೆಲವು ಚಿತ್ರಣಗಳನ್ನು ನೃತ್ಯ ಭಾಷೆಯಾಗಿಸುವ ಪ್ರಯತ್ನ.

ಉಡುಪಿಯಲ್ಲಿ ನೆಲೆಸಿರುವ ಕವಿ, ವಿದ್ವಾಂಸ ಶ್ರೀ ಉದ್ಯಾವರ ಮಾಧವ ಆಚಾರ್ಯರ ಲೇಖನಿಯಿಂದ ಹೊರಬಂದ ರೂಪಕವಿದು. ಈಗಾಗಲೇ ವಸುಂಧರಾ ದೊರೈಸ್ವಾಮಿ ಅವರಿಗೆ ಹಲವು ಏಕವ್ಯಕ್ತಿ ರೂಪಕಗಳನ್ನು ನೀಡಿದ ಹೆಮ್ಮೆ ಇವರದ್ದು.

ಮಾಧವ ಆಚಾರ್ಯರ ಪುತ್ರಿ ಯು‌ಎಸ್‌ಎಯಲ್ಲಿ ನೆಲೆಸಿರುವ ಭ್ರಮರಿ ಶಿವಪ್ರಕಾಶ್ ತಂಡದವರಿಂದ ಮೊದಲ ಪ್ರದರ್ಶನ: ಎಪ್ರಿಲ್ ೧೭, ೨೦೧೦ ಅಮೇರಿಕಾ ಸಂಸ್ಥಾನದ ನ್ಯೂ ಜೆರ್ಸಿ ರಾಜ್ಯದ ತ್ರಿವೇಣಿ ಕನ್ನಡ ಸಾಂಸ್ಕೃತಿಕ ವೇದಿಕೆಯ ಯುಗಾದಿ ಆಚರಣೆಯಲ್ಲಿ. ೨ನೇ ಪ್ರದರ್ಶನ ನ್ಯೂಜೆರ್ಸಿಯ ಬ್ರಿಡ್ಜ್‌ವಾಟರ್‌ನಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮ ನಾದನೃತ್ಯ ದಿವಸ ಜುಲೈ ೩೧, ೨೦೧೦ರಂದು. ೩ನೇ ಪ್ರದರ್ಶನ ಆಗಸ್ಟ್ ೨೨, ೨೦೧೦ರಂದು ಪ್ರಾವಿಡೆನ್ಸ್, ರೋಡ್ ಐಲ್ಯಾಂಡಿನ ಪೆರಿಶೇಬಲ್ ಥಿಯೇಟರ್‌ನಲ್ಲಿ ನೃತ್ಯಾಸಕ್ತರ ಸಮಕ್ಷಮ.]

[ಸೀತೆಯ ಪ್ರವೇಶ]

ಮಹಾಕಾವ್ಯದೊಳಗೊಂದು ಮನಸ್ಸಿದೆ. ಆ ಮನಸ್ಸಿನಾಳದಲ್ಲೊಂದಷ್ಟು ಪ್ರಶ್ನೆಗಳು ಮಡುಗಟ್ಟಿವೆ. ಹುತ್ತದಿಂದ ಹೊರಗೆ ಬಂದು ಒಳಗಿನ ಧ್ವನಿಗೆ ಜೀವಕೊಟ್ಟ ಕವಿ ವಾಲ್ಮೀಕಿಯಲ್ಲದೆ ಕಾವ್ಯದ ನಾಯಕಿಗೆ ಇನ್ಯಾರು ಸಾಂತ್ವನ ಹೇಳಿಯಾರು? ಸೀತೆಯ ಸ್ವಗತದೊಳಗೆಲ್ಲ ಆ ಸಾಂತ್ವನವೇ ಹಾಡಾಗಿದೆಯೇ. . . . . (ಹಮ್ಮಿಂಗ್) ಅಣ್ಣ ರಾಮನಾಜ್ಞೆಯಂತೆ ತಮ್ಮ ಲಕ್ಷ್ಮಣ ಭೂಜಾತೆಯನ್ನು ವಲ್ಮೀಕಗಳ ನಡುವೆ ರಥದಿಂದಿಳಿಸಿ ಮರಳಿದಾಗ ಬಸುರಿ ಸೀತೆಗಾಯಿತು ವಾಲ್ಮೀಕಿಯಾಶ್ರಮವೇ ಆಶ್ರಯ. . .

[ರಂಗದ ಒಂದು ಬದಿಯಿಂದ ದೂರದೂರ ಸಾಗುತ್ತಿರುವ ಲಕ್ಷ್ಮಣನನ್ನೇ ಮರೆಯಾಗುವವರೆಗೆ ಕಾಣುತ್ತ ಹಿಮ್ಮುಖವಾಗಿ ಸೀತಾ ಮಾತೆ ರಂಗದ ನಡುವಿಗೆ ಬರುತ್ತಿದ್ದಂತೆ ಮೇಲಿನ ಮಾತುಗಳು ಹಿನ್ನೆಲೆಯಿಂದ ಮೂಡಿಬಂದು, ರಂಗದ ನಡುವೆ ಆಘಾತಗೊಂಡಂತೆ ಪರಿತ್ಯಕ್ತೆ ಸೀತೆ ನಿಂತಾಗ ನಿಧಾನವಾಗಿ ಮೂರು ಸ್ತರಗಳಲ್ಲಿ ’ಕುಹೂ’ ಕುಕಿಲು ಕೇಳಿಬರುತ್ತದೆ.]

ಕುಹೂ . . . . ಕುಹೂ. . . . ಕುಹೂ. . .

[ತುಸು ಮೌನ - ನಂತರ ಶ್ಲೋಕ]

ರಾಗ: ತಿಲ್ಲಂಗ್, ರೂಪಕ ತಾಳ

ಹಾಡು: ಕೂಜಂತಂ ವಾಲ್ಮೀಕಿ ಕೋಕಿಲಂ||

ಹುತ್ತದಿಂದ ಹೊರಗೆ ಬಂದು ಕವಿಯ ಚಿತ್ತ ಪಡೆದವನೆ|

ಕೇಳು ನನ್ನ ಕಥೆಯ| ಹಾ. . .ಡು ನನ್ನ ವ್ಯಥೆಯ|

ಆಲಿಸುತ್ತ ಆ ಹಾಡ| ಕಳೆವೆ ಬಾಳ ಪಥವ ||

[ಸೀತೆ ದಿಣ್ಣೆಯ ಮೇಲೆ ಕುಸಿಯುತ್ತಿದ್ದಂತೆ ಅಲೆ‌ಅಲೆಯಾಗಿ ರಾಮನಾಮದ ನಾದ]

ರಾಮ ರಾಮ . . . ರಾಮ ರಾಮ . . . ರಾಮ ರಾಮ . . . ರಾಮ ರಾಮ . . .

[ಸೀತೆ ರಂಗದ ಸುತ್ತೆಲ್ಲ ಹರಿದಾಡಿ ಆ ನಾದದಲೆಯನ್ನು ಕೇಳುತ್ತ ನೋವು ನಲಿವಿನ ಭಾವ ವ್ಯಕ್ತ ಪಡಿಸುತ್ತಾಳೆ]

ರಾಗ: ಹಂಸಾನಂದಿ

ಹಾಡು: ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ|

ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ . . . ||

ಮಾತು: ಪರಿತ್ಯಕ್ತೆ ಈ ಮಾತೆಗೆ ದಾರ್ಶನಿಕ ಕವಿಯಾಶ್ರಮದ ಕಾನನವೇ ಕನಸು ಕಾಣುವ ತಾಣವಾಗುತ್ತಿದೆಯೇ. . . . [ಸೂಕ್ತ ಅಭಿನಯ]

ರಾಗ: ಹಂಸಾನಂದಿ, ಆದಿತಾಳ

ಹಾಡು: ಆಲಿಸಿದಳು ಸೀತೆ| ಮಾತೆ ||

ಮಾತಿಲ್ಲದೆ ಆಲಿಸಿದಳೆ | ಸೀತೆ||

ವಾಲ್ಮೀಕಿ ಕೋಗಿಲೆ ವನದಾಳದಲ್ಲಿ|

ಉಲಿದ ರಾಮನ ನಾಮವ| ಆಲಿಸಿದಳು ಸೀತೆ | ಮಾತೆ||

ಕವಿ ಮನದ ಮೌನದಲಿ ಚಿತ್ತ ಹುತ್ತದ ಪದರಿನಲಿ|

ಮೂಡಿ ಮಡುಗಟ್ಟಿರುವ ||

ಮಧುಮಧುರ ಮಧುರಾಕ್ಷರವ| ಆಲಿಸಿದಳೆ ಸೀತೆ| ಮಾತೆ||

ಮಾತು: ಆಲಿಸುವುದಲ್ಲದೆ ಇನ್ನೇನುಳಿದಿದೆ ಈ ಮೈಥಿಲಿಯ ಬಾಳಿನಲ್ಲಿ [ ರಾಮ ರಾಮ ಮಂದ್ರವಾಗಿ]ಈ ರಾಮ ನಾಮ ಈಗ ಆಧಾರ ಶ್ರುತಿ ಮಾತ್ರವೇ? ಎದೆಯೊಳಗೆ ಬೆಳಕಾಗಿ ತುಂಬಿದೆ ರಾಮನಾಮದ ಹಾಡು. ಹೊರಗೆಲ್ಲ ಕತ್ತಲಾಗಿ ಕಾಡುತ್ತಿದೆ ಕಾಡು. ಚಿತ್ರಕೂಟ, ದಂಡಕಾರಣ್ಯ, ಅಶೋಕವನ. . . ಮತ್ತೆ ಈಗ ವಲ್ಮೀಕಗಳ ಸುತ್ತಿರುವ ಕಾಡು. [ಒಂದು ಹಿಡಿ ಮಣ್ಣನ್ನೆತ್ತಿ ಆಘ್ರಾಣಿಸಿ. . ]ಹಿಡಿ ಮಣ್ಣಿನಿಂದ ಮೂಡಿಬಂದೆ ನಾನು ಭೂಜಾತೆ. . .ಹಿಡಿ ಹಿಡಿ ಮಣ್ಣು ಹುತ್ತವಾಗಿ ಅದರಾಳದಿಂದ ಮೂಡಿ ಬಂತು ನನ್ನ ಕವಿತೆ. . . ಈಗ ಮತ್ತೆ ಆ ಹುತ್ತದೊಳಗೇ ನಾನಾಗಬೇಕೇ ಭೂಗತೆ? ಎಲ್ಲ ಎಲ್ಲ ನೆನಪುಗಳು. . .

[ಸೀತೆಯ ಬಾಳಿನ ಹಿನ್ನೋಟ]

ರಾಗ: ಹಿಂದೋಳ, ಖಂಡಛಾಪು ತಾಳ

ಹಾಡು: ಮಿಥಿಲೆಯ ಮಣ್ಣು ಮಗುವಾಗಿ ನಗುವಾಗಿ|

ಮುಗುಳಾಗಿ ಮಗಳಾಗಿ ಹಗುರಾಗಿ ಚಿಗುರಾಗಿ |

ರಾಜರ್ಷಿ ಜನಕನ| ಮನೆಯ ಬೆಳಕಾಗಿ| ನಲಿದಾಡಿದೆ. . . . ||

ಯಜ್ಞ ಭೂಮಿಯ ಖನನದಿಂದುದಿಸಿ||

[ಮೌನ]

ಈಗ

[ಬಾಲ್ಯದ ನಲಿದಾಟವನ್ನು ಅಭಿವ್ಯಕ್ತಿಸಿ ಒಮ್ಮೆಲೆ ಸದ್ಯದ ಸ್ಥಿತಿಯ ಸ್ಮರಣೆಯಲ್ಲಿ ಆಘಾತಗೊಂಡವಳಂತೆ]

ಜೀವನ ಯಜ್ಞದಲಿ ಪೂರ್ಣಾಹುತಿಯಾದೆನೆ||

ಮಾತು: ಅಪ್ಪನ ನೇಗಿಲು ನೋವು ನೀಡಲಿಲ್ಲ. ಜಗತ್ತಿಗೇ ಈ ಜಗನ್ಮಾತೆಯನ್ನು ನೀಡಿತು. ಆದರೆ ಶಿವಧನುವ ಮುರಿದ ಕೋದಂಡ ರಾಮನ ಬತ್ತಳಿಕೆಯ ಬಾಣ ತಾಯ್ತನದ ತಾಣಗಳನ್ನೆಲ್ಲ ತತ್ತರಿಸುವಂತೆ ಮಾಡಿತೇ. ಎಲ್ಲವೂ ನೆನಪುಗಳೇ.

ರಾಗ: ಷಣ್ಮುಖಪ್ರಿಯ, ಆದಿ ತಾಳ

ಹಾಡು: ಯಜ್ಞ ರಕ್ಷಣೆಗಾಗಿ ಬಂದವನೆ ಶ್ರೀ ರಾಮ|

ಯಜ್ಞಕಾಹುತಿಯ ನೀಡಿದನೆ |ಜೀವನ |

ಯಜ್ಞಕರ್ಪಿಸಿದನೆ ತಾಟಕಿಯ ರೂಪದಲಿ|

ಹೆಣ್ತನವ ಕೋದಂಡ ರಾಮ|

ಮಾತು: ಅದೇ ರಾಮ ತ್ಯಜಿಸಿದ ಸೀತೆ ನಾನು. ಈ ಏಕಾಂತದಲ್ಲಿ ಆ ತಾಟಕಿಯನ್ನೇಕೆ ನೆನೆಯುತ್ತಿದ್ದೇನೆ? ರಾಕ್ಷಸಿ ಎಂದು ರಾಮ ಭಂಗಿಸಿದ . ರಕ್ಕಸಿಯಾದರೇನು ಹೆಣ್ಣಲ್ಲವೆ ಎಂದು ಸೀತೆಯ ಮನ ಆತಂಕಪಡುತ್ತಿದೆ. ಹೌದು. ಕವಿ ಹೃದಯದ ಮುನಿ ವಾಲ್ಮೀಕಿಯ ಮಹಾ ಕಾವ್ಯದ ಕೊನೆಯ ಪುಟದಲ್ಲೀಗ ಸೀತೆ ಹೆಣ್ಣಲ್ಲ. ಹೆಂಡತಿಯಲ್ಲ. ಪಟ್ಟದರಸಿಯಲ್ಲ. ಒಂದು ಪ್ರಶ್ನೆ ಮಾತ್ರ. ಬಸುರಿಯಾಗಿ ಪರಿತ್ಯಕ್ತಳಾದ ನನ್ನ ಮನ ರಾಮ ಕೊಂದ ತಾಟಕಿಯನ್ನು ಮಾತ್ರ ನೆನೆಯುತ್ತಿದೆಯೇ? ನನ್ನ ಶ್ರೀ ರಾಮನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದೆಯೇ? ಇಲ್ಲ. ಇಲ್ಲ. ಸಲ್ಲ. ಸಲ್ಲ. ಕರುಣಾಳು ರಾಘವನಲಿ ತಪ್ಪಿಲ್ಲ. ಶಿಲೆಯ ಅಂತಃಕರಣಕ್ಕೆ ಸ್ಪಂದಿಸಿದವನಲ್ಲವೇ ನನ್ನ ಭುವನಾಭಿರಾಮ. . . .

ರಾಗ: ವಲಚಿ, ಆದಿ ತಾಳ

ಹಾಡು: ವಿರಸ ದಾಂಪತ್ಯವನು

ಸರಸಗೊಳಿಸಿದ ಸೊಗಸುಗಾರ

ನನ್ನ ಶ್ರೀ ರಾಮ| ಭುವನಾಭಿರಾಮ||

ಕಲ್ಲಾಗಿ ಕರಗಿದಹಲ್ಯೆಯ ಬಳಿಸಾಗಿ|

ಬಿಲ್ಲಾಗಿ ಬಾಗಿ ಸಿಡಿಯದೆ ಸವಿ |

ಸೊಲ್ಲಾಗಿ ಸತಿ ಪತಿಯನೊಂದಾಗಿಸಿದವ|

ನನ್ನ ಶ್ರೀ ರಾಮ| ಭುವನಾಭಿರಾಮ||

ಮಾತು: ಹೌದಲ್ಲ. ಭಗ್ನ ಪ್ರೇಮದ, ದಗ್ಧ ದಾಂಪತ್ಯದ ಅಹಲ್ಯೆಯನುದ್ಧರಿಸಿ ನೇರ ಬಂದುದು ನನ್ನ ಸ್ವಯಂವರ ಮಂಟಪಕ್ಕೆ. ಏಕೆ ಬಂದೆ? ತೊರೆಯಲೆಂದೆ ನನ್ನ ಪಡೆಯಲು ಬಂದೆಯಾ? ನೀನೀಗ ನನ್ನ ಬಳಿಯೊಳಿರಬೇಕಿತ್ತು ರಾಮ. . ತುಂಬಿದ ಉದರದೊಳಗೆ ನಿನ್ನ ಶಿವಶಕ್ತಿ ಅಡಗಿಸಿದ ಜೀವಶಕ್ತಿ ತೊಟ್ಟಿಲಾಡುವುದರ ಸ್ಪರ್ಷ ಸುಖವನ್ನನುಭವಿಸಲು ನೀ ನನ್ನ ಬಳಿಯೊಳಿಲ್ಲ. ನನ್ನ ಪಡೆಯಲೆಂದೇ ಶಿವಧನುವ ಮುರಿದವನೇ ಅಂದಿನ ಕಲ್ಯಾಣೋತ್ಸವ ಮತ್ತೆ ಈ ಕಾಡಿನಲ್ಲಿ ನನ್ನನ್ನು ಕಾಡುತ್ತಿದೆಯಲ್ಲ. . .

ರಾಗ: ರೀತಿಗೌಳ, ಖಂಡಛಾಪು ತಾಳ

ಹಾಡು: ನೀ ಬಂದೆ ಕೋದಂಡ ರಾಮ|

ಅದಕೆಂದೆ ನಾ ಕಾದೆ ಸೀತಾ ರಾಮ|

ಪೃಥ್ವಿ ಪ್ರಮದೆಯ ಪಣದಿ ಸೋತವನ ನೀ|

ಗೆಲಿದೆನ್ನ ಗೆಲ್ಲಲು ಮುರಿದು ಬಿಲ್ಲನು ನೀ|

ಬೆಳಕಾದೆಯಾ . . . |

[ತಾಳರಹಿತ]

ಮಿಥಿಲೆಯರಮನೆಯದರ ಕರಿನೆರಳು|

ಕಾಡುತಿದೆ ಕಾಡಿನಲಿ ರಾಮ||

ಮಾತು: ನಿನ್ನೊಳಗೆ ಬೆಳಕಾದೆ. ಹೊರಗೆ ನೆರಳಾದೆ. ಪಟ್ಟದರಸಿಯಾದವಳು ಪಟ್ಟೆ ಪೀತಾಂಬರ ತೊರೆದು ನಾರುಡುಗೆಯ ನಾರಿಯಾದೆ. ಅತ್ತೆ ಕೈಕೆಯ ಮಾತೃ ಹೃದಯವನ್ನರಿತ ಓ ನನ್ನ ರಾಮ. . ದಶರಥರಾಮ. . ಕೋಸಲೆಯ ಕುರುಡುತನದಲ್ಲಿ ಈ ಕೋಮಲೆಗೆ ದಾರಿ ಕಾಣದೆ ಹೋಯಿತಲ್ಲ. ಸರ್ವ ಲೋಕ ಪ್ರಿಯನೆ ನೆನಪಾಗುತ್ತಿದೆ ಎಲ್ಲ.

ರಾಗ: ಅಮೃತವರ್ಷಿಣಿ, ತಿಶ್ರ ನಡೆ ಆದಿತಾಳ

ಹಾಡು: ಕೆರಳಿ ಕೈಕೆ ವರವ ಕೇಳಿ ಕೋಸಲೆಯ ಕೊರಳ ಕೊಯ್ದು|

ಪಟ್ಟ ಭರತಗೆನಲು ಅರಸ ಮೌನಿಯಾಗೆ|

ಯಾರಿಗಾಗಿ ಮಿಡುಕಿದೆ ಓ ಕೋಸಲೇಂದ್ರ ಗುಣಾಭ್ಧಿಯೇ|

ತಾಯಿಗಾಗಿ ಮಿಡುಕಿದ ನೀ ಅರಿಯದಾದೆ ನನ್ನ ಕನಸ|

ಪಿತೃವಾಕ್ಯ ಪರಿಪಾಲನೆ||

ಮಾತು: ಮಿಥಿಲೆಯಿಂದ ಮದುಮಗಳಾಗಿ ಹೊರಟಾಗ ಎಷ್ಟೊಂದು ಕನಸುಗಳನ್ನು ಹೊತ್ತಿದ್ದೆ.[ಅಲ್ಲಲ್ಲಿ ಅಲಾಪನೆ] ಕೋಸಲೆಯ ಕಣಜವನ್ನು ತುಂಬುವ ಭಾಗ್ಯಲಕ್ಷ್ಮಿ ನಾನೆಂದೆ ಭ್ರಮಿಸಿದ್ದೆ. ಆದರೇನಾಗಿ ಹೋಯಿತು? ನಾಡು ದೂಡಿತು. ಕಾಡು ಕೈಬೀಸಿ ಕರೆಯಿತು. ಅಂದು ಇಂದು ಸೀತೆಯ ಕನಸುಗಳೆಲ್ಲ ಕಾಡಿನ ಕನವರಿಕೆ ಮಾತ್ರವೇ? ಅರಣ್ಯರೋದನ ಮಾತ್ರವೇ? ಅಂದಿನ ಚಿತ್ರಕೂಟವೂ ಅರಣ್ಯದ ಒಂದು ಭಾಗವೆ. ಆದರೂ ನನ್ನ ಹೃದಯ ಗೆದ್ದವ ಅದನ್ನೊಂದು ಮಧುರ ನೆನಪಾಗಿಸಿದ್ದನ್ನು ಹೇಗೆ ಮರೆಯಲಿ? ದೇವಗಂಧರ್ವರಂತೆ ನಾವು ನಲಿದಾಡಿದ ತಾಣವಲ್ಲವೇ ಅದು. ನೆನಪಿದೆಯಾ ರಾಮ ಅಲ್ಲಿ ನೀನು ಉಲಿದದ್ದು?. . .

ರಾಗ: ಕದನಕುತೂಹಲ, ತಿಶ್ರನಡೆ ಆದಿತಾಳ

ಹಾಡು: ನೋಡು ನೋಡು ನಲ್ಲೆ ನೋಡು|

ಜೋಡು ನವಿಲ ನಾಟ್ಯ ನೋಡು||

ಮಾತು: ಆಗ ನಾನು ಹೇಳಿದ್ದೆ. .

ಹಾಡು: ನೋಡು ನೋಡು ನಲ್ಲ ನೋಡು|

ಸಿಂಹ ಜೋಡಿಯ ಆಟ ನೋಡು||

ಮಾತು: ಇಬ್ಬರೂ ಕೈಕೈ ಹಿಡಿದು ಎದೆಯ ಹಾರವೂ ತಡೆಯಾಗದಿರಲೆಂದು ತೆಗೆದಿರಿಸಿ ಮೈಮೈ ತಾಗಿಸಿ ಒಂದೆ ಮನದಿಂದ ಕೂಡಿ ಹಾಡಿದ್ದೆವಲ್ಲ ನಾವು ರಾಮ. . .

ರಾಗ: ಕದನ ಕುತೂಹಲ, ಮಿಶ್ರಛಾಪು ತಾಳ

ಹಾಡು: ಅರಳಿದ ಕೆಂದಾವರೆ|

ತಳಿರು ತೋರಣ ಹಸಿರ ಮಾಲೆ|

ಚಿತ್ರಕೂಟ ಪರ್ಣ ಶಾಲೆ|

ಮುಗಿಲ ತುಂಬ ಪ್ರೇಮದೋಲೆ|

ಮಾತು: ನಾವು ಮಾತ್ರವೇ! ದೇವಮಾನವ ಯಕ್ಷ ಗಂಧರ್ವರೆಲ್ಲ ಒಂದೆ ಕೊರಳಾಗಿ ಹಾಡಿದರಲ್ಲ ರಾಮ . . .ಅದರ ಪ್ರತಿಧ್ವನಿ ಕೇಳಿಸುತ್ತಿದೆಯಾ ಈ ರಾಮತೊರೆದ ಹೆಣ್ಣಿಗೆ ವಾಲ್ಮೀಕಿಯ ಕಾವ್ಯ ತರಂಗಿಣಿಯಲ್ಲಿ. . .

ರಾಗ: ಹಮೀರ್ ಕಲ್ಯಾಣಿ

ಹಾಡು: ಜನಕಸ್ಯ ಕುಲೇಜಾತಾ | ದೇವ ಮಾಯೇವ ನಿರ್ಮಿತಾ|

ಸರ್ವಲಕ್ಷಣ ಸಂಪನ್ನಾ| ನಾರೀಣಾಮುತ್ತಮಾ ವಧೂ:||

ಮಾತು: ಲೋಕ ಹಾಡುತ್ತಿದೆಯೇ ನಾನು ಸರ್ವಲಕ್ಷಣ ಸಂಪನ್ನೆ ಎಂದು – ನಾರೀ ಕುಲದಲ್ಲಿ ಶ್ರೇಷ್ಠಳು ಎಂದು – ಪರಮ ಸುಂದರಿ ಎಂದು. ಆಜಾನುಬಾಹು ರಾಮನನ್ನು ಈ ಮುಗ್ಧೆ ಅರಮನೆ ತೊರೆದು ಹಿಂಬಾಲಿಸಿದಳು. . .

ರಾಗ: ಹಮೀರ್ ಕಲ್ಯಾಣಿ, ತಾಳರಹಿತ

ಹಾಡು: ಸೀತಾಪ್ಯನುಗತಾ ರಾಮಂ | ಶಶಿನಂ ರೋಹಿಣೀ ಯಥಾ. . .

ಮಾತು: ರೋಹಿಣಿಯಂತೆ ಚಂದ್ರನನ್ನು, ರಾಮಚಂದ್ರನನ್ನು ಹಿಂಬಾಲಿಸಿದೆ ನಾನು. . .ನಡುವೆ ಕಾಡಿನಲ್ಲಿ ಕಥೆ ವ್ಯಥೆಯಾಯಿತು. ನಮ್ಮಿಬ್ಬರ ನಡುವೆ ಮೋಡ ಕಾಡಾಯಿತು. ದಂಡಕಾರಣ್ಯ ಎಂಬ ಕಾಡು ನೋವಿನ ಹಾಡಾಯಿತು. . ಶೂರ್ಪನಖಿ ಎಂಬ ಹೆಣ್ಣನ್ನು ನೀನು ವಿರೂಪಗೊಳಿಸಿದ್ದು ನನ್ನ ಬಾಳಿನ ಅಂದವನ್ನು ವಿಕಾರಗೊಳಿಸಿತಲ್ಲ ರಾಮ. ಹೆಣ್ಣಿಗೆ – ಅಗ್ನಿಯಲ್ಲಿ ನೊಂದು ಬೆಂದು ಹೊರಬಂದ ಹೆಣ್ಣು, ನಾನು ಕೇಳುತ್ತಿದ್ದೇನೆ – ಹೆಣ್ಣಿಗೆ ಸೌಂದರ್ಯ ಒಂದು ಶಾಪವೇ?!

ರಾಗ: ಕುಂತಲವರಾಳಿ, ಮಿಶ್ರಛಾಪು ತಾಳ

ಹಾಡು: ಚಂದದಿಂದ ಬಂದ ಶೂರ್ಪಣಖೆ|

ಲಂಕಾಧಿಪನ ತಂಗೆ|

ಕಂಡು ನಿನ್ನ ವರಿಸಲೆಂದು |

ಮುಂದೆ ನಿಂದು ನಕ್ಕು ನಲಿಯೆ|

ಅವಳ ರೂಪ ನನ್ನ ರೂಪ|

ರೂಪ ರೂಪ ರೂಪ ರೂಪ|

ಶಾಪವಾಗಿ ತಾಪವಾಯಿತೆ ಹೆಣ್ಣ ಬಾಳಿಗೆ||

ಮಾತು: ನಿನ್ನನ್ನು ನೋಡಿ ಶೂರ್ಪಣಖೆ ನಕ್ಕಳು. ಅವಳನ್ನು ನೋಡಿ ನಾನು ನಕ್ಕೆ. ಎರಡು ನಗುಗಳ ತಾಕಲಾಟದಲ್ಲಿ ನನ್ನ ನಿನ್ನ ಬಾಳಿನ ನಗುವೇ ಕಳೆದುಹೋಯಿತಲ್ಲ. ಅಂದು ಅವಳನ್ನು ನನಗಾಗಿ ದೂಡಿದೆ. ಇಂದೀಗ ಯಾರಿಗಾಗಿ ನನ್ನನ್ನೀ ಕಾಡಿಗೆ ದೂಡಿದೆ . . .ಸ್ವರ್ಣ ಜಿಂಕೆ ಸ್ವರ್ಣಲಂಕೆಯ ನಡುವೆ ನಾವು ಕಳೆದುಕೊಂಡದ್ದೆಲ್ಲವನ್ನು ಅರಸಲು ಅಡವಿಗೆ ಅಟ್ಟಿದೆಯಾ ಅರಸನೆ. ಎಲ್ಲಿ ಆ ಜಿಂಕೆ? ಏನು ಆ ಜಿಂಕೆ? . . .

ರಾಗ: ವೃಂದಾವನ ಸಾರಂಗ, ತಿಶ್ರನಡೆ ಆದಿತಾಳ

ಹಾಡು: ಜಿಂಕೆ ಬಂತು| ಚಿನ್ನದ ಜಿಂಕೆ ಬಂತು|

ಚಂಚಲ ಮನಸಿಜ ಮಾಯೆಯ ಸುಳಿಯಲಿ|

ಲಂಕೆಯ ದಹಿಸಿದ ಜಿಂಕೆ ಬಂತೇ|

ಚಿನ್ನದ ಜಿಂಕೆ ಬಂತೇ|| (ಮೌನ)

[ತಾಳರಹಿತ]

ಮಡದಿ ಮಂಡೋದರಿ ದಾಸಿ ಸರಮೆಯ ನಡುವೆ

ಒಡಲ ಒಲವ ಬೇಡಿದಂಥ

ಹತ್ತು ಮುಖಗಳಾಡಿದಂಥ ನುಡಿಯ ನಡೆಯ ಧಿಕ್ಕರಿಸಿ

ಮುದ್ರೆಯುಂಗುರ ಪಡೆದ ನನಗೆ

ಜಿಂಕೆ ಸಿಗದೇ ಹೋಯಿತು

ರಾಮಾ. . . ರಾಮಾ. . . ಬಣ್ಣದ ಜಿಂಕೆ ಸಿಗದೇ ಹೋಯಿತು||

ಮಾತು: ಹೆಣ್ಣಿನ ಮನದಾಸೆಯ ಬಂಗಾರದ ಜಿಂಕೆಯನ್ನು ನೀನು ತರಲು ಹೋದಾಗ ಮೈದುನ ಲಕ್ಷ್ಮಣ ರಕ್ಷಣೆ ಒದಗಿಸಿದ್ದ. ಪ್ರತಿಭಟಿಸಿದೆ ನಾನು. ಲಕ್ಷ್ಮಣ ರೇಖೆಯನ್ನು ದಾಟಿದ ನನ್ನನ್ನು ಶಿಕ್ಷಿಸಲೆಂದೆ ಅದೇ ಲಕ್ಷ್ಮಣನೊಡನೆ ನನ್ನನ್ನು ಕಾಡಿನಲ್ಲಿ ತ್ಯಜಿಸಿಬರಲು ಹೇಳಿದೆಯಾ ಓ ನನ್ನ ರಾಮಾ. . . ಸೀತೆಯ ಬಾಳಿನ ಋತುಚಕ್ರ ಹೀಗೆ ಮುಗಿಯಿತೇ? ರಾಮಾ ನಾನು ಹೆಣ್ಣು. ಬಸುರಿನ ಭಾರ ನನಗೆ ಭಾರವಲ್ಲ. ಅದು ಸೊಗದ ಹಂದರ. ಅಲ್ಲಿ ಅಶೋಕವನದಲ್ಲೂ ನನ್ನದು ಏಕವ್ಯಕ್ತಿ ಪ್ರದರ್ಶನ. ಇಲ್ಲೀಗ ವಲ್ಮೀಕದ ನೆರಳಿನಲ್ಲೂ ನಾನು ಏಕಾಕಿ. ಅಲ್ಲ . . . ಅಲ್ಲ. . .

ರಾಗ: ಕಾನಡ, ರೂಪಕ ತಾಳ

ಹಾಡು: ರಾಮನೆಂಬ ಪುರುಷ ಶಕ್ತಿ| ಹರುಷದಿಂದ ನೀಡಿದಂಥ|

ಬಸಿರ ಉಸಿರು ಹಸುರಾಗಿಸಲು| ಮನಸು ತುಂಬಿದೆ| ರಾಮ|

ತಾಯ್ತನದ ಕನಸು ತುಂಬಿದೆ | ರಾಮ||

ಮಾತು: ಸಾರ್ವಭೌಮತ್ವದ ಅಶ್ವಮೇಧವನ್ನು ನೀನು ಸಂಕಲ್ಪಿಸಿದರೆ ರಾಮ, ನೀರೆರೆಯಲು ಇನ್ನು ನಿನ್ನ ಬಳಿಗೆ ನಾ ಬರಲಾರೆ. . . ಚಿನ್ನದ ಜಿಂಕೆ ತರಲು ಸೋತು ಚಿನ್ನದ ಲಂಕೆಯನ್ನು ಗೆದ್ದು ಕೈಹಿಡಿದವಳನ್ನು ಅಗ್ನಿಪರೀಕ್ಷೆಗೊಳಪಡಿಸಿದ ನನ್ನ ರಾಮನಿಗೆ. . .

[ಕ್ಷಣ ಕಾಲ ಮೌನ. ತೀವ್ರ ಆಲಾಪನೆ. ಸೀತೆ ಅಗ್ನಿಯ ನಡುವೆ ಇದ್ದಂತೆ]

ರಾಗ: ಕಾನಡ, ಖಂಡಛಾಪು ತಾಳ

ಹಾಡು: ಸುಟ್ಟಿತೇ ಸೀತೆಯ ಕೆನ್ನಾಲಗೆಯ ಸುಳಿ ಸುಳಿ ಸುಳಿ|

ಸುಟ್ಟಿತೇ ಸಂಶಯದ ಮನದಬೇಗುದಿಯ ಒಳಸುಳಿಯ ಬಾಳ ಬೆಂಕಿ||

ಮಾತು: ನನ್ನ ರಾಮನ ಯಜ್ಞ ಸಂಕಲ್ಪಕ್ಕೆ ದಕ್ಕುವವಳು ಈ ಸೀತೆಯಲ್ಲ. ಈ ಜೀವನ ಸಂಗಾತಿಯಲ್ಲ. ಎದೆಬೆಸುಗೆಯ ಜತೆಗಾತಿಯಲ್ಲ. ರಾಮ ನೀನು ಸುಟ್ಟ ಸೀತೆಯ ತ್ಯಜಿಸಿದ ಸಂಗಾತಿಯ ಒಡಲುರಿಯಿಂದ ಕೆಂಪಾದ ಸ್ವರ್ಣ ಸೀತೆ ಮಾತ್ರ..

[ಕುಹೂ . . .ಕುಹೂ. . .ಧ್ವನಿ ರಿಂಗುಣಿಸಿದಾಗ ಭಾರವಾದ ಹೆಜ್ಜೆಯಲ್ಲಿ ಸೀತೆ ಒಳಸರಿಯುತ್ತಿದ್ದಂತೆ]

ರಾಗ: ಕುರಿಂಜಿ, ಆದಿತಾಳ

ಹಾಡು: ಉತ್ತರ ರಾಮಾಯಣದಲಿ ತುಂಬಿದ|

ಪ್ರಶ್ನೆಗಳನುತ್ತರಿಸಲು|

ವಲ್ಮೀಕದಾಳದಲಿ ನೆಲೆನಿಂತ ಸೀತೆ|

ಮತ್ತೆ ಕೇಳಿದಳೆ ವಾಲ್ಮೀಕಿ ಕೋಕಿಲ ಗಾನ|

ಕುಹೂ. . . ಕುಹೂ. . .

ರಾಗ: ಸೌರಾಸ್ಟ್ರ/ಶ್ರೀ, ಆದಿತಾಳ

ಹೆತ್ತು ಅವಳಿಗಳ ರವಿವಂಶ ಬೆಳಗಿಸಿ|

ಮತ್ತೆ ಹಾಡಿದಳೆ ಶುಭಮಂಗಳವ|

ಹುಟ್ಟು ಮಣ್ಣಿನಲಿ| ಕನಸು ಕಾಡಿನಲಿ|

ಕಳೆದ ಬದುಕಿನಲಿ| ಬಸಿರ ಭಾರದಲಿ|

ಸೀತೆಯಾದಳು ಮಾತೆ| ಮಾತೆಗೆ ಶುಭಮಂಗಳ|

ನಾಟ್ಯ
ನಡಿಗೆಯ ಲಯಕೆ

ಬಳುಕುವ ಜೊತೆಗೆ

ಭಾವ ರಾಗಗಳ ಬರವಣಿಗೆ

ಹಾವ ಭಾವಗಳ ನೋಡಿ

ರಸದೂಟ ಕಣ್ಗಳಿಗೆ

ಎಲ್ಲವನೂ ಮರೆತು

ಆಸ್ವಾದಿಸುವ ಘಳಿಗೆ

ಮನಸು ಶರಣಾಗಿದೆ ಕಲೆಗೆ

ಅದರ ಮೋಹ ಪರಿಗೆ

(ಕವಯತ್ರಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ, ವಿವೇಕಾನಂದ ಕಾಲೇಜು, ಪುತ್ತೂರು.)

ಆಶಯ
ಭಾವದ ಬದುಕಿದು ಭಾವನೆ ತಪ್ಪದು

ಭಕುತಿಯಿರದಿರೆ ಪಾಶ ಸೆಳೆವುದು

ಕಿಂಕಿಣಿ ಘಲಿರೊಂದೂ ಕೇಳದ

ಮಿಡಿತವಿರದ ಯಂತ್ರವಾದೊಡೆ

ಸಿಗುವ ಸುಖವೇನು ನಿರತದಿ?

ಹೆಜ್ಜೆಗೆಜ್ಜೆಯ ಲಾಸ್ಯ ಮೆರೆಯಲಿ

ಎನಿತೊ ಸಂಭ್ರಮ ನಾಟ್ಯವಾಡಲಿ

ಢಮರು ನಾದಕೆ ನರ್ತಿಸಲಿ ಮನ ತಾಂಡವವಾಡಲಿ

ಪ್ರಳಯವಾಗಲಿ, ಕೊಚ್ಚಿಹೋಗಲಿ ಕಿಲ್ಬಿಷದ ಕೊಳೆ

ಮತ್ತೆ ಹುಟ್ಟಲಿ ಕ್ಷೀರಸಾಗರದಲ್ಲಿ ಅಮೃತವು

ಜಗದ ಮುಪ್ಪಿದು ಕವಿತೆ ಹುಟ್ಟಲಿ

ಕಾಲ ಬೆಳೆವನು ಭ್ರಮೆಯ ಕಳೆವನು

ಬದುಕ ಅರಳಿಸೊ ಶಕ್ತಿ ಅಕ್ಷರವೆಂಬ ಕುಸುಮ

ನಿವೇದನೆಯ ಜೊತೆ ಪುಷ್ಪಜಾತ್ರೆಗೆ ಸಿದ್ಧರಾಗೋಣ

ಮನಸು ಮಜ್ಜನ

ಮಾಡಿ ಪುಳಕಿತ

ಭಾಷೆಯಮ್ಮನ

ಒಲವನೂಟದಿ

ಹೊಸತು ಬೆಳಗಿದು

ಹಸಿರೋ ಹಸಿರು.

( ಕವಯತ್ರಿ ಮನಃಶಾಸ್ತ್ರಜ್ಞೆ)