ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಜಾನಪದ ನೃತ್ಯ ಸೊಬಗಿನ ಆದ್ಯಂತ ವಿಚಾರ- ವಿಮರ್ಶೆ, ಅಭಿಪ್ರಾಯಗಳನ್ನು ಕಲಾವಿದೆ, ಬರಹಗಾರ್ತಿ, ಸಂಪಾದಕೀಯ ಬಳಗದ ಗೆಳತಿ ಶ್ರೀ ಲಕ್ಷ್ಮಿ ಎಂ. ಭಟ್ ನಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಅಂಕಣ ಲೋಕಭ್ರಮರಿ. ಪ್ರತಿಯೊಂದು ಸಂಚಿಕೆಂiiಲ್ಲೂ ಯಾವುದೇ ಒಂದು ಜಾನಪದ ಕಲಾ ಪ್ರಕಾರವನ್ನು ಆಧಾರವಾಗಿರಿಸಿ ಅದರ ಕುರಿತಂತೆ ಇತಿಹಾಸ, ವೈಭವ ಮತ್ತು ಪ್ರಸ್ತುತ ನೆಲೆಗಟ್ಟುಗಳನ್ನು ಚರ್ಚಿಸುವ ಲೇಖನಗಳ ಮಾಲಿಕೆ.

ನಾಟ್ಯ ತಪಸ್ವಿ “ ಕಿಟ್ಟೂ ಸರ್”

Thursday, December 15th, 2011
ನಾಟ್ಯ ತಪಸ್ವಿ “ ಕಿಟ್ಟೂ ಸರ್”

“ಕಿಟ್ಟೂ ಸರ್” ಎಂದೇ ತಮ್ಮ ಶಿಷ್ಯವೃಂದದಲ್ಲಿ ಪ್ರಸಿದ್ಧರಾಗಿರುವ ಎಮ್. ಆರ್. ಕೃಷ್ಣಮೂರ್ತಿಯವರು ೧೯-೧೨-೧೯೩೬ ರಂದು ಶ್ರೀ ರಾಜಾರಾವ್ ಹಾಗು ಶ್ರೀಮತಿ ಸೇತುಬಾಯಿಯವರ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ನಾಟ್ಯಕಲೆಯ ಬಗೆ ಅಪಾರ ಆಸಕ್ತಿ ಮೂಡಿದಾಗ, ಭರತನಾಟ್ಯಕ್ಷೇತ್ರದಲ್ಲಿ ಗಟ್ಟಿಯಾಗಿ ತಳವೂರಲು ದೊರಕ್ಕಿದ್ದು ಚೆನೈನ ಶ್ರೀಮತಿ ರುಕ್ಮಿಣಿ ಅರುಂಡೇಲ್ ಅವರ ಮಾರ್ಗದರ್ಶನ. ತಮ್ಮ ಹದಿನಾರು ವರ್ಷದಿಂದ ಗುರುಕುಲ ಪದ್ದತಿಯಲ್ಲಿ ಚೆನೈ ಕಲಾಕ್ಷೇತ್ರದಲ್ಲಿ ಶಿಸ್ತುಬದ್ಧವಾಗಿ ಭರತನಾಟ್ಯ ಅಭ್ಯಾಸ ಮಾಡಿ, ತಮ್ಮ ಮುಂದಿನ ನೃತ್ಯವೃತ್ತಿಗೆ ಭದ್ರ ಬುನಾದಿ ಹಾಕಿಕೊಂಡರು. ಕಲಾಕ್ಷೇತ್ರದಲ್ಲಿ ಭರತನಾಟ್ಯದಲ್ಲಿ ಸ್ನಾತಕೋತ್ತರ [...]

ಮರೆಯಾದ ಮಹಾಚೈತನ್ಯ ಗುರು ಸುಂದರೀ ಸಂತಾನಂ ಸ್ಮರಣೆಯಲ್ಲಿ..ಕರುಣಾ ಮತ್ತು ಶೋಭಾ

Tuesday, February 15th, 2011
ಮರೆಯಾದ ಮಹಾಚೈತನ್ಯ ಗುರು ಸುಂದರೀ ಸಂತಾನಂ ಸ್ಮರಣೆಯಲ್ಲಿ..ಕರುಣಾ ಮತ್ತು ಶೋಭಾ

ತಾವಿಷ್ಟಪಡುವ ಕಲಾವಿದರ ಕುರಿತು ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲಿರುವ ಲೋಕಭ್ರಮರಿಯು ಈ ಸಂಚಿಕೆಯಿಂದ ಅರಳಿಕೊಳ್ಳಲಿದೆ. ಕರ್ನಾಟಕ ಕಂಡ ಅಪೂರ್ವ ಕಲಾವಿದೆ ನಾಟ್ಯತಪಸ್ವಿನಿ ಗುರು ಶ್ರೀಮತಿ ಸುಂದರಿ ಸಂತಾನಂ ಅಸ್ತಂಗತರಾಗಿ ಮುಂದಿನ ಆಗಸ್ಟ್ ೨೪ಕ್ಕೆ ಎರಡು ವರ್ಷವಾಗುತ್ತದೆ. ಅವರು ಜನಿಸಿದ್ದು ಮಹಾಶಿವರಾತ್ರಿಯದಿನ. ಫೆಬ್ರವರಿ ೧೫. ಈ ವಿಶೇಷ ಸಂಚಿಕೆಯ ಸಂದರ್ಭಕ್ಕನುಸಾರವಾಗಿ ಅವರ ಅರುವತ್ತೊಂದನೇ ಹುಟ್ಟುಹಬ್ಬದ ಆಚರಣೆಯೂ ಇರುವುದರಿಂದ ಲೋಕಭ್ರಮರಿಯ ಈ ಅಂಜಲಿ ಔಚಿತ್ಯಪೂರ್ಣ. ಅವರೊಂದಿಗಿನ ನೆನಪುಗಳನ್ನು ಅವರ ನಿಕಟವರ್ತಿ ಡಾ. ಕರುಣಾ ವಿಜಯೇಂದ್ರ , ಶಿಷ್ಯೆ ಡಾ. ಶೋಭಾ ಶಶಿಕುಮಾರ್ [...]

ನೀವಿಷ್ಟಪಡುವ ಕಲಾವಿದರ ಪರಿಚಯ

Friday, November 12th, 2010

ನಿಮಗಿಷ್ಟವಾದ ಹಿರಿ-ಕಿರಿಯ ಕಲಾವಿದ ಅಥವಾ ಕಲಾವಿದೆಯ ಸೊಗಸು, ಕೊಡುಗೆ, ಮಾದರಿ, ವಿಶೇಷತೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆಯೇ? ಹಾಗಿದ್ದರೆ ತಡವೇಕೆ. ನೂಪುರ ಭ್ರಮರಿಯ ‘ಲೋಕ ಭ್ರಮರಿ’ ಅಂಕಣಕ್ಕೆ ಬರೆಯಿರಿ; ಅಂಕಣವನ್ನು ಸಮೃದ್ಧಗೊಳಿಸಿ. ನೃತ್ಯ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯ ಹೊಂದಿರುವ / ಹೊಂದಲಿರುವ, ಭರತನಾಟ್ಯ, ಯಕ್ಷಗಾನ, ಒಡಿಸ್ಸಿ, ಕಥಕ್, ಮಣಿಪುರಿ, ಕೂಚಿಪುಡಿ, ಮೋಹಿನಿಯಾಟ್ಟಂ, ಕಥಕಳಿಯಾದಿಯಾಗಿ ಶಾಸ್ತ್ರೀಯ, ಜನಪದ ನರ್ತನ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ನೀವಿಷ್ಟಪಡುವ ಕಲಾವಿದರ ಪರಿಚಯ, ಮಾಹಿತಿ, ನಿಮಗಿಷ್ಟವಾದ ಪಾತ್ರ-ಸನ್ನಿವೇಶ-ಘಟನೆಗಳನ್ನು ಬರೆದು ಕಳಿಸಿ. ತಕ್ಕುದಾದ ಫೋಟೋವಿದ್ದರೆ ಸೂಕ್ತ. ಆದರೊಂದು ವಿನಂತಿ. [...]

ಯುದ್ಧ ನೃತ್ಯ ಕಲೆ – ಭಾವ್

Thursday, November 6th, 2008

- ಶ್ರೀಲಕ್ಷ್ಮಿ ಎಂ. ಭಟ್

ಭಾವನೆಗಳನ್ನು ಕೇವಲ ಅಂಗ ಚಲನೆಯ ಮೂಲಕ ಮಾತ್ರ ನರ್ತನದಲ್ಲಿ ಅಭಿವ್ಯಕ್ತಿಸಲು ಸಾಧ್ಯವೇ? ಅದರಲ್ಲೂ ಯುದ್ಧ ಕಲೆಯಂತಹ ಮಾಧ್ಯಮದ ಮೂಲಕ?

ಮುಖದ ಅಭಿನಯ ಕಣ್ಣಿನ ಹಾವಭಾವಗಳಿಂದ ಮಾತ್ರವೇ ನೃತ್ಯಕ್ಕೆ ಮೆರುಗು ಎಂಬ ಭಾವನೆಗೆ ಸವಾಲು ಒಡ್ಡಿರುವ ನೃತ್ಯದ ಹೆಸರೇ ಛಾವ್! ಥಳಥಳಿಸುವ ಕಿರೀಟಗಳು, ಬೃಹತ್ ಮುಖವಾಡಗಳು, [...]

ಫುಲೆ, ತನ್ವೀರ್, ಕಾರಂತ ಮತ್ತು ಸಮಕಾಲೀನತೆಯ ಸಾಕ್ಷಿಪ್ರಜ್ಞೆ

Thursday, November 6th, 2008

- ಶ್ರೀಲಕ್ಷ್ಮಿ ಎಂ. ಭಟ್

ಅದು ೧೮೭೩. ಎಲ್ಲೆಲ್ಲೂ ಸ್ವಾತಂತ್ರ ಚಳುವಳಿಯ ತೀವ್ರ ಕಾವು. ಆಂಗ್ಲರ ದುರಾಡಳಿತ, ಮೇಲ್ವರ್ಗಗಳ ದಬ್ಬಾಳಿಕೆ. ಅಜ್ಞಾನ, ಬಡತನಗಳು ಜನರನ್ನು ಹಣಿದು ಹಾಕಿದ್ದ ಸಮಯ. ಆಗ ‘ಸತ್ಯಶೋಧಕ ಸಮಾಜ ಸ್ಥಾಪಿಸಿದ್ದ ಜ್ಯೋತಿ ಬಾ ಪುಲೆ ಅವರಿಗೆ ಈ ಸಮಸ್ಯೆಗಳ ವಿರುದ್ಧ ಹೋರಾಡಲು ದಕ್ಕಿದ ಪ್ರಬಲ ಅಸ್ತ್ರ [...]

ಮರಾಠಿ ಪ್ರೀತಿ ಸಂಸ್ಕೃತಿಯ ಗಣಿ ಲಾವಣಿ

Thursday, November 6th, 2008

- ಶ್ರೀಲಕ್ಷ್ಮಿ ಎಂ. ಭಟ್

ಇದು ಬರಿ ಟಿವಿ, ಸಿನೆಮಾಗಳ ಯುಗ, ಜಾನಪದ ಕಲೆಗಳೆಲ್ಲ ಈಗ ಮೂಲೆ ಸೇರಿಬಿಟ್ಟವು ಅಂತ ಹಳಹಳಿಸುವವರಿಗೆ, ಜಾನಪದ ಏನಿದ್ದರೂ ಅನಕ್ಷರಸ್ಥರಿಗೆ ಅಂತ ಮೂಗಳೆಯುವವರಿಗೆ ಇಲ್ಲೊಂದು ಸವಾಲಿದೆ. ಅದು ಮಹಾರಾಷ್ಟ್ರದಲ್ಲಿ಼. ಲಾವಣಿ ಅನ್ನೋ ಶಬ್ಧ ಕೇಳಿಯೇ ಇಲ್ಲಿನ ಜನ ಪುಳಕಿರಾಗೋದು ನೋಡಿದರೆ ಜಾನಪದ ಕಲೆಗಳಿಗೆ ನೋಡುಗರ ಕೊರತೆಯಿದೆ ಅನ್ನೋ [...]

ಲಾವಣಿ – ಮರುಕಳಿಸೀತೇ ವೈಭವ?

Thursday, November 6th, 2008

- ಶ್ರೀಲಕ್ಷ್ಮಿ ಎಂ. ಭಟ್

ಕಳೆದ ಸಂಚಿಕೆಯ ಲೋಕ ಭ್ರಮರಿಯಲ್ಲಿ ನಾವು ನೋಡಿದ್ದು ಲಾವಣಿ ಲೋಕದ ಬಾಹ್ಯ ಮುಖವನ್ನಷ್ಟೇ..ಲಾಸ್ಯ, ನೃತ್ತ, ವೈಭವ, ಬಿಸುಪುಗಳಲ್ಲಿ ಯಾವ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೂ ಕಡಿಮೆ ಇಲ್ಲದ ಈ ನೃತ್ಯ ತನ್ನ ಪ್ರಣಯಾತ್ಮಕ ಶೈಲಿಯಿಂದಾಗಿ ಅನೇಕ ವಿಮರ್ಶಕರ ಕಟುಟೀಕೆಗೂ ಗುರಿಯಾಗಿದೆ. ಅದರತ್ತ ಇದೀಗ ಒಂದು ನೋಟ…
[...]

ಜಾನಪದ ನೃತ್ಯ-ರಂಗಭೂಮಿಯ ಅನನ್ಯತೆ ಮತ್ತು ಚಲನಶೀಲತೆ : ಒಂದು ಚಿಂತನೆ

Thursday, November 6th, 2008

ಪರಂಪರೆಯನ್ನು ನಿಮ್ಮ ಹಿಂದೆ ಬಿಡಿ. ಅದರ ಪರಿಮಳವನ್ನು ಉಳಿಸಿಹೋಗಿ ಎಂಬ ಮಾತು ಕಲೆಯೊಂದು ಆಯಾಯ ಕಾಲದ ಅಗತ್ಯಗಳನ್ನು ಪೂರೈಸುವ ಕುರಿತು ಸಾದ್ಯಂತವಾಗಿ ವಿವರಿಸುತ್ತದೆ. ಶಾಸ್ತ್ರೀಯ ನರ್ತನ ಕಲೆಗಳು ಈ ಸಂಗತಿಗಳ ನಿರೂಪಣೆಯಲ್ಲಿ ಹಿಂದೇಟು ಹಾಕುವ ಬಗ್ಗೆ ಆಪಾದನೆಗಳಿದ್ದರೂ, ಜಾನಪದೀಯ ಶೈಲಿಗಳು ಮಾತ್ರ ಕಾಲಕಾಲಕ್ಕೂ ಇಂತಹ ಅಗತ್ಯಗಳನ್ನು ಪೂರೈಸುತ್ತಾ ಜನಮನಕ್ಕೆ ಹೆಚ್ಚು [...]

ಜಾನಪದ ಮನಸ್ಸು

Thursday, November 6th, 2008

- ಶ್ರೀಲಕ್ಷ್ಮಿ ಎಂ. ಭಟ್

ಕಲೆ ಮನುಷ್ಯನ ಜೀವಂತಿಕೆಯ ಉತ್ಕೃಷ್ಟ ಸಂಕೇತ. ಜಾನಪದ ಜನಪದದ, ಸಮುದಾಯಗಳ ಜೀವಂತಿಕೆಯ ಶ್ರೇಷ್ಠ ಪ್ರತಿಫಲನ. ಶಾಸ್ತ್ರೀಯ ಪರಂಪರೆಗಳಿಗಿಂತ ಭಿನ್ನವಾಗಿ ಜನಪದ ರಂಗ ಸಮುದಾಯಕ್ಕೆ ಒಂದು ವಿಧದ ಸಮಷ್ಟಿ ಪ್ರಜ್ಞೆ (ಯುನಿವರ್ಸಾಲಿಟಿ) ವ್ಯಾಪಕತೆ ಇದೆ. ಜನಪದ ಕಲೆಗಳಿಗೆ ವರ್ಗ ಧರ್ಮಗಳ ತಾರತಮ್ಯವಿಲ್ಲ.

ಜಾನಪದ [...]