ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಆಯಾ ಸಂಚಿಕೆಯ ವಿಶೇಷಗಳನ್ನೊಳಗೊಂಡಂತೆ ಸಂಪಾದಕರ ಅನುಭವ-ಅಭಿವ್ಯಕ್ತಿಯ ಸಾಲುಗಳಿವೆ ಮಂಜೀರದಲ್ಲಿ!
ಪ್ರತೀ ಸಂಚಿಕೆಯಲ್ಲೂ ಓದಲೇಬೇಕಾದ ಮತ್ತು ಪತ್ರಿಕೆಯ ಬಳಗವು ಓದುಗಬಂಧುಗಳೊಂದಿಗೆ ಹಂಚಿಕೊಳ್ಳಬೇಕಾದ ಭಾವ- ಅನುಭಾವ – ಚಿಂತೆ – ಚಿಂತನೆ – ಕುಟುಕು – ಮೊಟಕು- ಗತ್ತು – ಗಮ್ಮತ್ತುಗಳ ಮುಕ್ತ ಸಂವಾದಗಳು, ನಮ್ಮ-ನಿಮ್ಮೆಲ್ಲರ ಆತ್ಮೀಯ ಸಂಬಂಧಕ್ಕೆ ಸೋಪಾನವಾಗುವ ಹದವೆನಿಸುವ ಸ್ಪರ್ಶ ಮಂಜೀರದ ಆಕರ್ಷಣೆ.

ಮಾರ್ಗಶೀರ ಪುಷ್ಯ ೨೦೧೧( ನವೆಂಬರ್ -ಡಿಸೆಂಬರ್)

Thursday, December 15th, 2011

‘ಇಂದಿನ ದಿನದಲ್ಲಿ ಕಲೆಯ ಕುರಿತ ಸಂಶೋಧನೆಯ ದಿಕ್ಕುಗಳಿಗೆ ಅವಕಾಶಗಳು ಸಿಕ್ಕಿವೆಯೇನೋ ನಿಜ. ಆದರೆ ಅದು ಸಾಗುತ್ತಿರುವ ಹಾದಿ ಗಮನಿಸಿದರೆ ವಾಕರಿಕೆ ಬರುತ್ತದೆ. ಕೆಲವರಿಗೆ ಪಿ‌ಎಚ್‌ಡಿ ಪ್ರಮಾಣ ಪತ್ರ ತೆಗೆದುಕೊಳ್ಳುವವರೆಗೆ ಅದೊಂದು ‘ಅರ್ಹತೆ’ ಗಿಟ್ಟಿಸಿಕೊಳ್ಳುವ ಅನಿವಾರ್ಯ ತಲೆನೋವಾದರೆ; ಇನ್ನೂ ಕೆಲವರಿಗೆ ಹೆಸರಿನ ಮುಂದೆ ಅಂಟಿಸಿಕೊಳ್ಳುವ ಲೇಬಲ್. ಮತ್ತಷ್ಟು ಮಂದಿಗೆ ಅದು ದುಡ್ಡು ಮಾಡಿಕೊಳ್ಳುವ ದಂಧೆ; ಇನ್ನಷ್ಟು ಮಂದಿ ಸಂಶೋಧನೆಯ ಕ್ಷೇತ್ರವನ್ನೇ ತಮ್ಮ ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುತ್ತಾರೆ. ಇನ್ನು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ನೋಡಿದರೆ ಬಹುಪಾಲು ರೀಸರ್ಚ್‌ಗೆ ತಲೆಯೂ ಇಲ್ಲ, [...]

ಅಶ್ವೀಜ-ಕಾರ್ತಿಕ ೨೦೧೧ (ಅಕ್ಟೋಬರ್-ಡಿಸೆಂಬರ್)

Saturday, October 15th, 2011

‘.. ಭರತನಾಟ್ಯ ಕಲಾವಿದರಿಗೆ ವಿರಹದುರಿ ಹೆಚ್ಚಾಗಿದೆಯೆನಿಸುತ್ತದೆ.. ’ ಈ ಮಾತುಗಳನ್ನು ಕೇಳಿದಾಕ್ಷಣ ಬೆಚ್ಚಿಬಿದ್ದಿದ್ದೆ. ಸಾವರಿಸಿಕೊಂಡರೆ ನಿಜವೆನಿಸಿತು. ಬೇಕಾದರೆ ಗಮನಿಸಿ ನೋಡಿ.‘ಇಂದಿನ ವರ್ಣದ ನಾಯಿಕೆ ವಿರಹೋತ್ಕಂಠಿತೆ’ ಎಂಬ ನಿರೂಪಣೆಯ ಜಾಳನ್ನು ಕೇಳಿ, ಅದರ ಜಾಡನ್ನು ಹಿಡಿಯುವ ಹೊತ್ತಿಗೆ ಜಾಡ್ಯ ಹತ್ತಿ ತಲೆ ಚಿಟ್ಟು ಹಿಡಿಯುತ್ತಿರುವುದಂತೂ ಹೌದು. ಇಂದಿನ ಬಹುಪಾಲು ಭರತನಾಟ್ಯ ಕಾರ್ಯಕ್ರಮಗಳಲ್ಲಿ, ರಂಗಪ್ರವೇಶಗಳಲ್ಲಿ, ಪರೀಕ್ಷೆಗಳಲ್ಲಿ ವಿರಹದ ಪ್ರದರ್ಶನ ಯಾವ ಮಟ್ಟಿಗೆ ಮುಟ್ಟಿದೆಯೆಂದರೆ ಬೇರೆ ಯಾವ ವಸ್ತುಗಳನ್ನು ಆರಿಸಿದರೂ ಅದು ಅಪಚಾರ ಎಂಬಲ್ಲಿಯವರೆಗೆ. ಅಷ್ಟೇ ಏಕೆ, ಆಗ ತಾನೇ ಪ್ರಾಯಪ್ರಬುದ್ಧರಾಗುತ್ತಿರುವ, [...]

ಶ್ರಾವಣ-ಭಾದ್ರಪದ ೨೦೧೧ ( ಜುಲೈ -ಆಗಸ್ಟ್)

Monday, August 15th, 2011

‘ಎಂ.ಎಫ್.ಹುಸೇನ್ ಸತ್ತಾಗ ಅವನನ್ನು ಹೊಗಳಿ ತುಚ್ಛ ತುಚ್ಛ ಲೇಖನಗಳು ಕರ್ನಾಟಕದ ಎಲ್ಲಾ ಮುಖ್ಯ ದಿನಪತ್ರಿಕೆಗಳಲ್ಲೂ ಬಂದಿದೆ. ತನಗೆ ಬೇಕಾದಷ್ಟು ತನ್ನ ಪಾಲಿನ ಅಶ್ಲೀಲತೆಯನ್ನು, ನಮ್ಮ ದೇಶದ ಕುರಿತು ಅನೇಕಾನೇಕ ನೀಚತನವನ್ನು ಹುಸೇನರು ತೋರ್ಪಡಿಸಿದುದನ್ನು ಹೇಸಿಗೆಯಿಲ್ಲದೆ ಹೊಗಳಿ ಬರೆದವರೂ ಇದ್ದಾರೆ. ಹಿಂದೆಯೂ ಒಂದೆರಡು ಬಾರಿ ಈ ಕುರಿತು ಓದಿದ್ದು ನೆನಪಿದೆ. ಆಗ ನಾನು ‘ಅಯ್ಯೋ’ ಇದನ್ನು ಓದುಗರು ಹೀಗೆ ಬಿಟ್ಟಿದ್ದಾರಲ್ಲಾ ಎಂದು ಚಿಂತಿಸುತ್ತಿದ್ದೆ. ಅದೇ ವಿಷಯ ಇಂದು ಮಾನವೀಯತೆಯನ್ನೆ ಹುಚ್ಚುಚ್ಚು ಮಾಡಿದೆ. ದಯವಿಟ್ಟು ಇದನ್ನು ಹೀಗೆ ಬಿಡದೆ ಪ್ರತೀಕಾರವೆಂಬ [...]

ಜ್ಯೇಷ್ಟ ಆಷಾಢ ( ಮೇ-ಜೂನ್ ೨೦೧೧)

Wednesday, June 15th, 2011

‘ಯಾಕೆ ಬಾನಿ? ಯಾವುದು ಬಾನಿ? ಅವೆಲ್ಲಾ ಅವರವರ ಸೃಷ್ಠಿ ಅಲ್ಲವೇ? ಅದನ್ಯಾಕೆ ಇನ್ನೊಬ್ಬರ ಮೇಲೆ ಹೇರಬೇಕು? ಯಾಕೆ ತಮ್ಮದನ್ನೇ ಎಲ್ಲರೂ ಕಲಿಯಬೇಕು, ಪ್ರತಿಷ್ಠಾಪಿಸಿಕೊಳ್ಳಬೇಕು ಎಂಬ ಹಠ? ಎಲ್ಲಾ ಗುರುಗಳೂ ಸೇರಿ ಕಲಿಯುವ ವಿದ್ಯಾರ್ಥಿಗಳೆಲ್ಲರಿಗೂ ಅನ್ವಯವಾಗುವ ಹಾಗೆ ಒಂದೇ ಬಗೆಯ ಸಿಲೆಬಸ್ ಅಂತ ಯಾಕೆ ಮಾಡಿಕೊಳ್ಳಬಾರದು? ಎಲ್ಲರಿಗೂ ಅನ್ವಯವಾಗುವ ಹಾಗೆ ಒಂದು ಸಮಗ್ರ ಶಿಕ್ಷಣ ಬೇಕು. ಪಾಪ. ಕಲಿಯುವ ಮಕ್ಕಳಿಗೆ ಗುರುಗಳು ಬದಲಾದಂತೆಲ್ಲಾ ಅವರವರ ಶೈಲಿ ಕಲಿಯಲು ಹೋಗಬೇಕಾದ ಅನಿವಾರ್ಯತೆ. ಹೀಗೆ ಆಗಿ ಮಕ್ಕಳು ಕೊನೆಗೆ ನೃತ್ಯದ ಮೇಲೆ [...]

ಮಾಘ-ಫಾಲ್ಗುಣ ೨೦೧೧

Tuesday, February 15th, 2011

ಐದನೇ ಸಂವತ್ಸರಕ್ಕೆ ಅಡಿಯಿಡುವ ಈ ಹೊತ್ತು ನಿಜಕ್ಕೂ ನಾವು ಮೊದಲೆಂದೂ ಊಹಿಸದ ಸಂಭ್ರಮದ ಕ್ಷಣ. ಸಂತಸದ ಘಳಿಗೆಗಳನ್ನು ಪಡೆಯಬೇಕಿದ್ದರೆ ಒಂದಷ್ಟೂ ಸವಾಲು, ಸಂಕಟ, ಸಂಕಷ್ಟಗಳನ್ನೂ ಅನುಭವಿಸಬೇಕಾದ್ದು ಅನಿವಾರ್ಯ. ಅಷ್ಟಕ್ಕೂ ಸಂತಸ, ಸುಖದ ಧನ್ಯತೆ ಅರಿವಾಗುವುದು ಒಂದಷ್ಟು ತಲ್ಲಣ, ಆತಂಕ, ದುಃಖ, ಬೇಸರದ ಮೆಟ್ಟಿಲುಗಳನ್ನು ಹತ್ತುತ್ತಾ ಬಂದಾಗಲೇ. ಒಂದೇ ಓಟಕ್ಕೆ ಶಿಖರ ತಲುಪುವುದಕ್ಕಿಂತಲೂ ಹಂತಹಂತವಾಗಿ ಏರಿದಾಗಲೇ ಬದುಕಿನ ಓಟಕ್ಕೆ ಮೌಲ್ಯ ಬರುವುದು.
ಹಾಗೆಂದು ಶಿಖರ ತಲುಪಿದಲ್ಲಿಗೆ ಪೂರ್ಣ ವಿರಮಿಸುವುದೆಂದರೆ ಆ ಪಯಣಕ್ಕೆ ಏನಿದೆ ಅರ್ಥ? ಗುರಿ ಸಮಾಪ್ತಿಯಾದರೆ ಜೀವನದೊಡಲೊಳಗಿರುವ ರಸದೃಷ್ಟಿ [...]

ಸಂವತ್ಸರಾಭಿನಂದನ-ಪಂಚಮದ ಪಲುಕಿಗೆ ಶ್ರುತಿಯಾಗಿ… ಮಾರ್ಗಕ್ಕೆ ಮುಕುರವಾಗಿ..

Monday, February 14th, 2011
ಸಂವತ್ಸರಾಭಿನಂದನ-ಪಂಚಮದ ಪಲುಕಿಗೆ ಶ್ರುತಿಯಾಗಿ…  ಮಾರ್ಗಕ್ಕೆ ಮುಕುರವಾಗಿ..

೧೩ ಫೆಬ್ರವರಿ ೨೦೧೧ ರಂದು ‘ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರು.
ನೂಪುರ ಭ್ರಮರಿ ಐದರ ಹೆಜ್ಜೆಗಳಿಗೆ ಅಡಿಯಿಡುವ ಸಂವತ್ಸರಾಭಿನಂದನ ಸಂಭ್ರಮ ನಿಜಕ್ಕೂ ಒಂದು ಆಪ್ತ ಮತ್ತು ಅಷ್ಟೇ ಆಕಸ್ಮಿಕವೂ ಕೂಡಾ. ಹಾಗೆ ನೊಡಿದರೆ ಬೆಂಗಳೂರಿನಂತಹ ಮಹಾ ಸಮುದ್ರದಲ್ಲಿ ಕಾರ್ಯಕ್ರಮ ಸಂಘಟಿಸುವ ಇರಾದೆ, ಧೈರ್ಯ ಮೊದಲು ಅಷ್ಟಾಗಿ ಇರಲಿಲ್ಲ. ಆದರೆ ಮನದೊಳಡಗಿದ್ದ ಸಂಭ್ರಮವನ್ನು ಹಂಚಿಕೊಳ್ಳುವ ಕಂಡೂ ಕಾಣದಂತಿದ್ದ ಅಭೀಪ್ಸೆಗೆ ಇಂಬನ್ನಿತ್ತವರು ದೈವಬಲ, ಹಿರಿಯರ ಆಶೀರ್ವಾದ, ನಿಕಟವರ್ತಿ ಗೆಳೆಯರು. ಜೊತೆಗೆ ನೃತ್ಯ ಸಂವೇದನೆಗಳಿಗೆ [...]

ಮಾರ್ಗಶಿರ ಪುಷ್ಯ-೨೦೧೦

Tuesday, December 14th, 2010

ಇಂದಿನ ಭರತನಾಟ್ಯ ಕಾರ್ಯಕ್ರಮಗಳನ್ನೊಮ್ಮೆ ನೋಡಿ. ಬಹುತೇಕ ನೃತ್ಯಬಂಧಗಳಲ್ಲಿ ಅದರಲ್ಲೂ ವರ್ಣ, ಪದ, ಅಷ್ಟಪದಿಗಳನ್ನು ಪ್ರಧಾನವಾಗಿ ಗಮನಿಸಿದರೆ ನೀವು ಕಾಣುವುದು ಮಧುರ ಭಕ್ತಿಯೆಂಬ ಶೃಂಗಾರವಲ್ಲದ ಶೃಂಗಾರವನ್ನೋ; ಅಥವಾ ವಿರಹೋತ್ಕಂಠಿತೆಯಾಗಿ ನೆಗೆಯುವ ನಾಯಿಕೆಯನ್ನು !
ಹಾಗೆ ನೋಡಿದರೆ ಭರತನಾಟ್ಯದಂತಹ ನೃತ್ಯಪ್ರಕಾರದಲ್ಲಿ ಭಕ್ತಿ ಶೃಂಗಾರ ವ್ಯಾಪಕವಾದದ್ದು ೧೯೩೦ರ ದಶಕದ ನಂತರ. ಸದಿರ್ ನೃತ್ಯ ಪ್ರಕಾರ ಅಳಿವಿನಂಚಿನಲ್ಲಿದ್ದಾಗ, ಸಮಾಜವು ಸದಿರ್ ಮತ್ತು ಶೃಂಗಾರವನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದಾಗ ನೃತ್ಯದ ಮರುಹುಟ್ಟಿಗೆ ರುಕ್ಮಿಣೀದೇವಿ ಪರಿಚಯಿಸಿದ ಮಧುರ ಭಕ್ತಿ ಪ್ರತಿಪಾದನೆ ಸದಿರ್‌ನ ಕೊಂಕು-ಕೊಳಕುಗಳನ್ನು ತೊಳೆದು ಭರತನಾಟ್ಯವಾಗಿ ಮಿಂಚುವಲ್ಲಿ ಒಂದು [...]

ಅಶ್ವೀಜ ಕಾರ್ತಿಕ ೨೦೧೦

Friday, October 15th, 2010

ಭರತನಾಟ್ಯ ನೃತ್ಯ ಕಾರ್ಯಕ್ರಮವದು. ಅರೆ, ಜತಿಸ್ವರದ ಜತಿ-ಕೋರ್ವೆಗಳನ್ನು ಬೇರೊಂದು ರಾಗದ ಅದೇ ತಾಳದ ನೃತ್ಯಬಂಧವೊಂದರಲ್ಲಿ ಕಂಡ ನೆನಪು. ಶಬ್ದಬಂಧವನ್ನು ಗಮನಿಸಿದರೆ ಅದರಲ್ಲೂ ಒಂದೇ ತೆರನಾದ ಭಾವ. ವರ್ಣವನ್ನು ನೋಡುವ ಹೊತ್ತಿಗೆ, ನಿಚ್ಚಳವಾಯಿತು ; ಯಾವುದೋ ಜತಿಸ್ವರ, ಶಬ್ದ, ವರ್ಣಗಳ ಜತಿ-ಕೋರ್ವೆಗಳ ಯಥಾವತ್ತು ನಕಲು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಮತ್ತೊಂದು ರೂಪಕದಲ್ಲಿ ಎರಡು ಜತಿಗಳನ್ನು ಹೆಣೆದು ಮಾಡಿರುವ ಮಿಕ್ಸಡ್ ಅಡುಗೆ ಎನ್ನುವುದು ಮತ್ತಷ್ಟು ಸ್ಪಷ್ಟ ! ಹಾಡು ಹಳೆಯದಾದರೇನು ; ಭಾವ ನವನವೀನ ಎನ್ನೋಣವೇ? ಉಹುಂ..ಒಂದಿಂಚೂ [...]

ಜುಲೈ ಆಗಸ್ತ್ ೨೦೧೦

Sunday, August 15th, 2010

ನಮ್ಮಲ್ಲಿ ನಿರಂತರವಾಗಿ ಜಾಗೃತಗೊಳ್ಳುತ್ತಾ, ನಾವು ಬದುಕುವ ಬದುಕನ್ನು ಮತ್ತೊಮ್ಮೆ ನೋಡಿಕೊಳ್ಳಬೇಕು ಎಂದಾದಾಗ ನಮಗೆ ನೆರವಾಗುವುದೇ ಸಷ್ಟಿಶೀಲ ಮನಸ್ಥಿತಿ. ನಾವು ಕಾಣುತ್ತಿರುವ, ಅನುಭವಿಸುವ, ಆಲೋಚಿಸುವ ಒಂದು ಜಗತ್ತು ಅಥವಾ ವಸ್ತು ನಮ್ಮನ್ನು ಕಾಡುತ್ತದೆ ಎಂದಾದರೆ ಆ ವಸ್ತುವಿನೆಡೆಗೆ ಒಂದು ದೃಷ್ಟಿ, ಆಸಕ್ತಿ, ಸಂಬಂಧ ಬೆಳೆಯುತ್ತಾ ಹೋಗುತ್ತದೆ. ಅದನ್ನು ಹೇಳುವುದೇ ಸೃಷ್ಟಿಶೀಲತೆ ! ಅದು ಕೇವಲ ಹೊಸತೊಂದರ ಜನ್ಮವಷ್ಟೇ ಅಲ್ಲ, ಕಳಚಿಕೊಂಡುಹೋಗುವ ಕೊಂಡಿಯೊಂದರ ಮರುಜನ್ಮವೂ ಆಗಬಹುದು.
ಅಂತಹ ಸೃಷ್ಟಿಶೀಲತೆ ಕಾರ್ಯೋನ್ಮುಖವಾಗಿ ರೂಪುಗೊಂಡರೆ ಕ್ರಾಂತಿಯೆನಿಸುವ ಕಲ್ಪನೆಗಳು, ಕಾಣ್ಕೆಗಳು ಹೊರಬೀಳುತ್ತವೆ. ಉದಾ : [...]

ಜೇಷ್ಠ ಆಷಾಢ ೨೦೧೦

Wednesday, June 16th, 2010

ಸಂಗೀತ ನೃತ್ಯಗಳೆಂದರೆ ಯುದ್ಧವೇ ? ಎಂತೆಂತ ಕಲ್ಲು ಮನಸ್ಸುಗಳನ್ನು ಕರಗಿಸಿದ ಸಂಗೀತ ನೃತ್ಯಸಂಸ್ಕಾರಗಳು ಇಂದಿಗೆ ಅಕ್ಷರಶಃ ಸಮರಾಂಗಣವೇ? ಖಂಡಿತಾ ಹೌದು ಎನ್ನದೆ ಬೇರೆ ನಿರ್ವಾಹವಿಲ್ಲ. ಆಗ ತಾನೇ ಹುಟ್ಟಿದ ಎಳೆಕಂದಮ್ಮಗಳೂ ಈ ಸಮರಾಂಗಣಕ್ಕೆ ಸಜ್ಜಾಗುವ ಕಾಲ ಬಹುಶಃ ದೂರವಿಲ್ಲವೇನೋ ಅನ್ನಿಸುತ್ತಿದೆ. ಕಾರಣ ಕೇಳುತ್ತೀರಾ? ಮಾಧ್ಯಮ.
ಅಂದೊಂದು ಕಾಲದಿಂದಲೂ ದೂರದರ್ಶನ ಪ್ರಸಾರ ಮಾಡುತ್ತಾ ಬಂದಿರುವ ಸದಭಿರುಚಿಯ ಶಾಸ್ತ್ರೀಯ, ಲಘು ಸಂಗೀತ ನೃತ್ಯಗಳು ಇಂದಿಗೂ ಬಹುಷಃ ಅದೊಂದೇ ವಾಹಿನಿಗೆ ಸೀಮಿತವಿರಬೇಕೆನ್ನಿಸುವಷ್ಟರ ಮಟ್ಟಿಗೆ ಸಂಗೀತ- [...]