: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ಮಂಜೀರ

ಜುಲೈ ಆಗಸ್ತ್ ೨೦೧೦
ನಮ್ಮಲ್ಲಿ ನಿರಂತರವಾಗಿ ಜಾಗೃತಗೊಳ್ಳುತ್ತಾ, ನಾವು ಬದುಕುವ ಬದುಕನ್ನು ಮತ್ತೊಮ್ಮೆ ನೋಡಿಕೊಳ್ಳಬೇಕು ಎಂದಾದಾಗ ನಮಗೆ ನೆರವಾಗುವುದೇ ಸಷ್ಟಿಶೀಲ ಮನಸ್ಥಿತಿ. ನಾವು ಕಾಣುತ್ತಿರುವ, ಅನುಭವಿಸುವ, ಆಲೋಚಿಸುವ ಒಂದು ಜಗತ್ತು ಅಥವಾ ವಸ್ತು ನಮ್ಮನ್ನು ಕಾಡುತ್ತದೆ ಎಂದಾದರೆ ಆ ವಸ್ತುವಿನೆಡೆಗೆ ಒಂದು ದೃಷ್ಟಿ, ಆಸಕ್ತಿ, ಸಂಬಂಧ ಬೆಳೆಯುತ್ತಾ ಹೋಗುತ್ತದೆ. ಅದನ್ನು ಹೇಳುವುದೇ ಸೃಷ್ಟಿಶೀಲತೆ ! ಅದು ಕೇವಲ ಹೊಸತೊಂದರ ಜನ್ಮವಷ್ಟೇ ಅಲ್ಲ, ಕಳಚಿಕೊಂಡುಹೋಗುವ ಕೊಂಡಿಯೊಂದರ ಮರುಜನ್ಮವೂ ಆಗಬಹುದು.

ಅಂತಹ ಸೃಷ್ಟಿಶೀಲತೆ ಕಾರ್ಯೋನ್ಮುಖವಾಗಿ ರೂಪುಗೊಂಡರೆ ಕ್ರಾಂತಿಯೆನಿಸುವ ಕಲ್ಪನೆಗಳು, ಕಾಣ್ಕೆಗಳು ಹೊರಬೀಳುತ್ತವೆ. ಉದಾ : ಯಾವುದೋ ಅನ್ಯಾಯವಾಗುತ್ತಿದೆ ಎಂದುಕೊಂಡಾಗ ಆ ಅನ್ಯಾಯದ ಬೆಂಕಿ ನಮ್ಮೊಳಗೇ ಕಾಟ ಕೊಟ್ಟು ಅದರ ಬಗ್ಗೆ ನಾವು ಬೇರೊಂದು ಅಭಿವ್ಯಕ್ತಿಯನ್ನು ತಾಳುತ್ತೀವಿ ಎಂದಾದರೆ ಅದು ಸೃಷ್ಟಿಶೀಲತೆ. ಆ ಅನ್ಯಾಯದ ವಿರುದ್ಧ ಕೆಲಸ ಮಾಡುತ್ತೀವಿ ಅಂತಾದರೆ ಅದು ಕ್ರಿಯಾಶೀಲತೆ, ಸೃಷ್ಟಿಶೀಲ ಮನಸ್ಥಿಯ ಉಗಮಕ್ಕೆ ಇಚ್ಛಾಶಕ್ತಿ, ಜ್ಞಾನಶಕ್ತಿಗಳ ಹರಿವು ಬೇಕು. ಅದೇ ಇಚ್ಛಾಶಕ್ತಿ, ಜ್ಞಾನಶಕ್ತಿ ಕ್ರಿಯಾಶಕ್ತಿಯಲ್ಲಿ ಸರಿಯಾದ ದಾರಿಯಲ್ಲಿ ಪ್ರತಿಫಲಿತವಾದರೆ ಮಾತ್ರ ಶಿಕ್ಷಣ. ಇವುಗಳೆಲ್ಲದರ ಒಟ್ಟು ದರ್ಶನವೇ ಪ್ರತಿಭೆ. ಅದರ ಕಾರ್ಯ ಕಲೆ. ಪ್ರತಿಭೆ ಸೃಷ್ಟಿಗೂ, ಸೃಷ್ಟಿಶೀಲತೆ ಪ್ರತಿಭೆಗೂ ಸಹಕಾರಿಯೂ, ಪೂರಕವೂ ಹೌದು.

ಈ ಪ್ರತಿಭೆಗೆ ವಿಶಿಷ್ಟವಾದ ಒಂದು ದೃಢತೆಯನ್ನೂ, ಪುಷ್ಟಿಯನ್ನೂ ನೀಡುವುದು ಪಾಂಡಿತ್ಯ. ಶತಾವಧಾನಿಗಳು ಹೇಳುವಂತೆ ‘ಶುದ್ಧಪ್ರತಿಭೆಯನ್ನು ಜೋಗದ ಜಲಪಾತವೆನ್ನಬಹುದಾದರೆ ಪಾಂಡಿತ್ಯವು ಈ ಜಲಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸುವ ಯಂತ್ರರಾಶಿವಿಶೇಷ’. ಹೀಗೆ ಯಾವುದೇ ಪರಿಚ್ಛೇದಕ್ಕೆ ಒಳಗಾಗದ ಪ್ರತಿಭೆ ಮತ್ತು ದೇಶ-ಕಾಲ-ವಸ್ತುಗಳಿಂದ ಪರಿಚ್ಛಿನ್ನವಾದ ಪಾಂಡಿತ್ಯ ಒಂದಾಗಿ ಕಲೆತಾಗ ಮಾತ್ರ ಆನಂದಮಯ ಕಲಾಸೃಷ್ಟಿ ಸಾಧ್ಯ.

ಅಂತಹ ಪಾಂಡಿತ್ಯಪೂರ್ಣ ದೃಷ್ಟಿ, ಸೃಷ್ಟಿಶೀಲತೆ ಮತ್ತು ಕ್ರಿಯಾಶೀಲತೆಗಳ ಸಾಂಗತ್ಯದ ನಿಲುವು, ಪ್ರತಿಭೆಯ ಅರಿವು ಇಂದಿನ ನೃತ್ಯಕ್ಷೇತ್ರಕ್ಕೆ ಅಗತ್ಯವಿದೆ. ಅದು ಕೇವಲ ನೃತ್ಯ ಸಂಯೋಜನೆ, ಕಾವ್ಯ ಸಮಯ, ನೃತ್ಯ ಪ್ರದರ್ಶನಗಳಿಗಷ್ಟೇ ಸೀಮಿತವಾಗಬೇಕಿಲ್ಲ ; ಜೊತೆಗೆ ನೃತ್ಯಕ್ಷೇತ್ರದ ಬಗ್ಗೆ ಪರಿಚಯಿಸುವ, ಅನುಭವ-ಆಲೋಚನೆಯನ್ನು ಕಟ್ಟಿಕೊಡುವ, ಸುದೀರ್ಘ-ಸರಳ-ಆಸಕ್ತಿಕರ ಓದಿಗೆ ನೆರವಾಗುವ, ತಲೆಮಾರುಗಳ ತಹತಹಿಕೆ-ಸಂಬಂಧಗಳನ್ನು ವಿವರಿಸುವ, ಪೂರ್ಣ ಸಾದೃಶ್ಯ ವಿವರಗಳನ್ನು ಒದಗಿಸುವ, ಸರ್ಜನಶೀಲ (ಸೃಜನಶೀಲ-ವ್ಯಾಪಕವಾಗಿ ಬಳಸುವ ತಪ್ಪು ಪದ) ನೋಟಗಳನ್ನು- ಕ್ರಿಯಾಶೀಲ ಮನಸ್ಸುಗಳನ್ನು ಹೆಚ್ಚಿಸುವ, ಕಾಡುವ ಸಂವೇದನಾಶೀಲ ಪುಸ್ತಕಗಳು-ಗ್ರಂಥ ನಿರೂಪಣೆಗಳು ಹೊರಬರಬೇಕಾಗಿವೆ. ಆಗ ಮತ್ತಷ್ಟು ಪ್ರತಿಭೆಗಳು ವಿಕಸಿತಗೊಳ್ಳಲು, ಪ್ರಕಾಶಗೊಳ್ಳಲು, ಪ್ರಯೋಗವಾಗಲು, ಪಸರಿಸಲು, ಪೂರ್ಣವೆನಿಸಲು ಸಾಧ್ಯ.

ಕನ್ನಡದಲ್ಲಿ ಪ್ರಕಾಶಿತವಾದ ಬಹಳಷ್ಟು ನೃತ್ಯ ಸಂಬಂಧೀ ಪುಸ್ತಕಗಳು ಕೇವಲ ಪರೀಕ್ಷಾ ಕ್ರಮಕ್ಕಷ್ಟೇ ಮೀಸಲಾಗಿವೆ ಎಂಬಂತಿದೆ. ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳು ನೈಜವೆನಿಸುವ ಸಂಶೋಧನೆಗಳನ್ನು, ಸ್ವಂತಿಕೆಯ ವಿವರಗಳನ್ನು ಒದಗಿಸುತ್ತವೆಯಾದರೂ, ಕಾರಣಂತರಗಳಿಂದ ಲಭ್ಯವಾಗುತ್ತಿಲ್ಲ. ಉಳಿದಂತೆ ಬಹಳಷ್ಟು ಕೃತಿಗಳು ಮತ್ತೊಬ್ಬರ ಜೇಬಿಗೆ ಕೈ ಇಳಿಬಿಟ್ಟಂತ ಚೌರ್ಯವೆನಿಸದ ಚೌರ್ಯಗಳೇ ಆಗಿವೆ.

ಪುಸ್ತಕಗಳ ಕೊರತೆಯಿದ್ದಷ್ಟು ಅರಿವಿನ ಬೆಳಕಿಂಡಿ ದೂರವಾಗುತ್ತಲೇ ಹೋಗುತ್ತದೆ ; ಚೈತನ್ಯದ ದೃಷ್ಟಿ, ಆಳವೆನಿಸುವ ಅಧ್ಯಯನ, ಮರುನೋಟದ ಅವಕಾಶವೂ ಕುಸಿಯುತ್ತದೆ. ವ್ಯಾಪ್ತಿಯ ಅನುಭವವೂ ಕಡಿಮೆಯಾಗುವುದಲ್ಲದೆ ಕ್ಷೇತ್ರವೊಂದರ ಅನುಕೂಲ-ಅನನುಕೂಲ, ಅವಶ್ಯಕತೆ-ಅವಸ್ಥೆ, ಗತಿ-ನೆಲೆ, ಕೊಂಕು-ಕೊಳಕು-ಕಳಂಕ-ತೊಡಕು, ಸಾಧ್ಯತೆ, ಪ್ರತಿಭೆ, ಪರಿಣಾಮಗಳು ಅಷ್ಟಾಗಿ ಲಕ್ಷ್ಯಕ್ಕೆ ಬರುವುದಿಲ್ಲ. ಇದರಿಂದ ಕಲೆಯ ಭೂತಕಾಲದಲ್ಲಿದ್ದ ಶಾಸ್ತ್ರ-ಸಂಪ್ರದಾಯ, ವರ್ತಮಾನಗಳಲ್ಲಿ ಅವುಗಳ ಪ್ರಸ್ತುತತೆ-ವಾಸ್ತವಗಳಷ್ಟೇ ಅಲ್ಲ ; ಭವಿಷ್ಯದ ವಿಮರ್ಶೆಗಳು, ಚಿಂತನೆಗಳ ಗುಣಮಟ್ಟ ಅರಿವಿಗೆ ಬರಲಾರದು.

ಪುಸ್ತಕಗಳು ಭವಿತವ್ಯಕ್ಕೆ ನಾವು ನೀಡುವ ಅತುತ್ತಮ ಕೊಡುಗೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸುವವರ ಮತ್ತು ಅಧ್ಯಯನದ ಫಲಶ್ರುತಿಯನ್ನು ಸರಿಯಾದ ದಿಕ್ಕಿನಲ್ಲಿ ಕಾಣಿಸುವವರ ಶ್ರಮ ಹೆಚ್ಚಿನ ಬದಲಾವಣೆಗಳನ್ನು ತರಲು ಸಾಧ್ಯ. ವೈಯಕ್ತಿಕ ನೆಲೆಯಲ್ಲಿ, ಸಂಸ್ಥೆ-ಸಂಘಟನೆಗಳ ಪ್ರಯತ್ನದೊಂದಿಗೆ ಅಕಾಡೆಮಿಗಳ, ಸರ್ಕಾರ ಪ್ರಾಯೋಜಿತ ಸಂಸ್ಥೆ- ಇಲಾಖೆಗಳ ನೆರವು, ಮುಂದಾಳತ್ವ, ಮಾರ್ಗದರ್ಶನ ಮತ್ತು ಮುನ್ನಡೆ ಅಗತ್ಯ ಬೇಕು. ಇನ್ನಾದರೂ ಇಂತಹ ಪುನಶ್ಚೇತನಗಳಿಲ್ಲವಾದಲ್ಲಿ ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಇರುವ ಕೊಂಡಿಯು ಶಿಥಿಲವಾಗುತ್ತದೆ ; ಅರಿವಿನ ಕ್ಷಿತಿಜ ಬರಿದಾಗುತ್ತದೆ ; ಕೈಮರ ಕಾಣೆಯಾಗುತ್ತದೆ ; ಪ್ರಕ್ಷುಬ್ಧ ಪರಿಸ್ಥಿತಿ ಪುನರಾವರ್ತನೆಗೊಳ್ಳುತ್ತದೆ ; ನಿರ್ವಾತ ತುಂಬಿಕೊಳ್ಳುತ್ತದೆ. ಅರಿವಿನ ದೀವಟಿಗೆಗೆ ಪುಸ್ತಕಗಳ ಪ್ರಕಾಶನ, ಮತ್ತು ಅದರಿಂದ ಪ್ರಯೋಜನ ಪಡೆದುಕೊಳ್ಳಬೇಕಾದ ವಿವೇಕ ನಮ್ಮಲ್ಲಿ ಇದ್ದರೆ ಮಾತ್ರ ಕಲಾದಿಗಂತ ನಿರ್ಮಲವಾಗಿ, ಸಮೃದ್ಧವಾಗಿ ಶೋಭಿಸಬಹುದು. ಆ ದಿಕ್ಕಿಗೆ ನಮ್ಮ ಪ್ರಯತ್ನವಿರಲಿ.

ಪ್ರೀತಿಯಿಂದ

ಸಂಪಾದಕರು

ಜೇಷ್ಠ ಆಷಾಢ ೨೦೧೦
ಸಂಗೀತ ನೃತ್ಯಗಳೆಂದರೆ ಯುದ್ಧವೇ ? ಎಂತೆಂತ ಕಲ್ಲು ಮನಸ್ಸುಗಳನ್ನು ಕರಗಿಸಿದ ಸಂಗೀತ  ನೃತ್ಯಸಂಸ್ಕಾರಗಳು ಇಂದಿಗೆ ಅಕ್ಷರಶಃ ಸಮರಾಂಗಣವೇ? ಖಂಡಿತಾ ಹೌದು ಎನ್ನದೆ ಬೇರೆ ನಿರ್ವಾಹವಿಲ್ಲ.  ಆಗ ತಾನೇ ಹುಟ್ಟಿದ ಎಳೆಕಂದಮ್ಮಗಳೂ ಈ ಸಮರಾಂಗಣಕ್ಕೆ ಸಜ್ಜಾಗುವ ಕಾಲ ಬಹುಶಃ ದೂರವಿಲ್ಲವೇನೋ  ಅನ್ನಿಸುತ್ತಿದೆ. ಕಾರಣ ಕೇಳುತ್ತೀರಾ? ಮಾಧ್ಯಮ.

ಅಂದೊಂದು ಕಾಲದಿಂದಲೂ ದೂರದರ್ಶನ ಪ್ರಸಾರ ಮಾಡುತ್ತಾ ಬಂದಿರುವ ಸದಭಿರುಚಿಯ  ಶಾಸ್ತ್ರೀಯ, ಲಘು ಸಂಗೀತ ನೃತ್ಯಗಳು ಇಂದಿಗೂ ಬಹುಷಃ ಅದೊಂದೇ ವಾಹಿನಿಗೆ  ಸೀಮಿತವಿರಬೇಕೆನ್ನಿಸುವಷ್ಟರ ಮಟ್ಟಿಗೆ ಸಂಗೀತ- ನೃತ್ಯಗಳ ಅಪಭ್ರಂಶಗಳು ‘ರಿಯಾಲಿಟಿ’ ಎನ್ನುವ  ಹೆಸರಲ್ಲಿ ತಯಾರಾಗಿವೆ. ಆ ಮೂಲಕ ಅಕ್ಷರಶಃ ಸಂಸ್ಕೃತಿಯ ‘ಶವಸಂಸ್ಕಾರ’ವನ್ನೇ ಮಾಡುತ್ತಲಿವೆ.  ಸಂಗೀತ-ನರ್ತನ ಕ್ಷೇತ್ರಕ್ಕೆ ಎಂತಹ ಪ್ರೋತ್ಸಾಹ ನೋಡಿ !

ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಅಜ್ಜಂದಿರ ವರೆಗೂ ಹಾಡಿಸುವುದಕ್ಕೆ,  ಕುಣಿಸುವುದಕ್ಕೆ ಶುರು ಮಾಡಿ ವರುಷಗಳೇ ಕಳೆದಿವೆ. ಪರಿಣಾಮ, ಎಷ್ಟು ದಿನದಲ್ಲಿ ನನ್ನ ಮಗ/ಮಗಳು  ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?”ಎಂಬ ಪೋಷಕರ ನಿರೀಕ್ಷೆ ; ಜೊತೆಗೆ ಒಂದು-ಎರಡು ಹಾಡಿಗೆ  ಪ್ರಸಿದ್ಧಿ ಮಾಡಿಸಿ ಪ್ರೈಜ್ ಗಿಟ್ಟಿಸಿಕೊಳ್ಳಬೇಕೆಂಬ ದುರಾಸೆಗೆ ಶಿಕ್ಷಕರೇ ಒತ್ತಾಸೆ ! ಹಾಗಾಗಿಯೇ  ಬೀದಿ ಬೀದಿಗಳಲಿ ತರಗತಿಗಳು ತಲೆಯೆತ್ತಿವೆ ನೋಡಿ !

ಪ್ರಸಿದ್ಧಿ, ಪ್ರತಿಷ್ಠೆಯ ಆಸೆ ಯಾರಿಗಿರುವುದಿಲ್ಲ ಹೇಳಿ? ಹೊಟ್ಟೆ, ಬಟ್ಟೆ, ಮನೆಯ  ನಂತರ ಐಶ್ವರ್ಯದ ಆಸೆಯೊಂದಿಗೆ ಹಿಂಬಾಲಿಸುವುದಿದ್ದರೆ ಅದು ಈ ಪ್ರಸಿದ್ಧಿಯ ಭೂತ ! ಇಂದು  ಗಲ್ಲಿಗಳಲ್ಲಿ ರದ್ದಿ ಆಯ್ವ ಹುಡುಗನಿಂದ ಹಿಡಿದು ಕೋಟ್ಯಾಧಿಪತಿಗಳ ವರೆಗೂ ಹಣಿಕಿ ಹಾಕಿ ನಿಂತಿದೆ.  ಸಿದ್ಧಿಯೇ ಬೇಡ-ಪ್ರಸಿದ್ಧಿ ಮಾತ್ರ ಜೊತೆಗಿರಬೇಕು ಎಂದರೆ ಏನು ತಾನೇ ಮಾಡಲು ಸಾಧ್ಯ ? ! ತೇಜೋವಧೆ  ಮಾಡಿಕೊಂಡರೂ ಸರಿ, ತನ್ನ ಹೆಸರು ಮಾಧ್ಯಮಗಳಲ್ಲಿ ರಾಚಬೇಕು, ಯಶಸ್ಸು ಕಾಣಬೇಕು, ಅದೂ ತಕ್ಕುದಾದ  ಅರ್ಹತೆಗಳನ್ನು ಸಂಪಾದಿಸಿಕೊಳ್ಳುವ ಮೊದಲೇ, ದಿನ ಬೆಳಗಾಗುವುದರೊಳಗೆ ‘ಫೇಮಸ್’ ಕೈಯ್ಯಲ್ಲಿರಬೇಕು.  ಹೊಸ ಅವಕಾಶಗಳನ್ನು ಬಾಚಿಕೊಳ್ಳುವುದರೊಂದಿಗೆ ಸರ್ವೋತ್ತಮನಾಗಿಬಿಡಬೇಕು. ಅಲ್ಪ ಅವಧಿಯಲ್ಲೇ  ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶ, ಅಪಾರ ಹಣ ಸಂಪಾದಿಸಬೇಕು ; ಸಾರ್ವಜನಿಕ ವಲಯದಲ್ಲಿ  ಗುರುತಿಸಿಕೊಳ್ಳಬೇಕು ; ಅವಕಾಶವೂ ದಂಡಿಯಾಗಿ ಮನೆ ಬಾಗಿಲಿಗೆ ಬಂದು ಬೀಳಬೇಕು ! ಫಲ; ಅದನ್ನೇ  ಮಾರ್ಕೆಟ್ಟಾಗಿಸಿಕೊಂಡ ಮಾಧ್ಯಮಗಳು ಹೊಸ ಹೊಸ ಮಾರುಕಟ್ಟೆಗಳನ್ನು ಹುಟ್ಟುಹಾಕುತ್ತವೆ! ಟಿ‌ಆರ್‌ಪಿ  ಹೆಚ್ಚಸಿಕೊಳ್ಳುವತ್ತ ಕಣ್ಣು ನೆಡುತ್ತವೆ !

ಹಾಡೂ, ನೃತ್ಯಗಳಿಗಿಂತಲೂ ಸ್ಪರ್ಧಿಗಳ ವಸ್ತ್ರಾಲಂಕಾರ, ಮನೆಯ ಆರ್ಥಿಕ ಸ್ಥಿತಿ, ಅವರ  ವೈಯಕ್ತಿಕ ಜೀವನ, ಹೆತ್ತವರ ಆತಂಕ, ಹಾರೈಕೆ, ಸ್ಪರ್ಧಿಗಳ ತುಮುಲ, ಸಂಗೀತಕ್ಕೆ-ಬೆಳಕಿನ ಅಬ್ಬರಕ್ಕೆ  ತಕ್ಕಂತೆ ಕುಣಿಯುವುದು, ತೀರ್ಪುಗಾರ-ಸ್ಪರ್ಧಿಗಳ ವಾಗ್ವಿವಾದ, ಪರದೆಯ ಹಿಂದಿನ ಅರಚಾಟ,  ಭಾವೋತ್ಕರ್ಷ, ಆಕಳಿಸಿ ತೂಕಡಿಸುವುದರ ಮೇಲೆ ಇದೆ ಇಂದಿನ ಕ್ಯಾಮೆರಾ ಕಣ್ಣು ! ನೇರವಾಗಿ  ರಿಕಾರ್ಡಿಂಗ್ ಆದಂತೆ ನೇರ ಸಂಕಲನ ಆಗಿರಬೇಕು ಎಂದು ಭಾವಿಸಿದ್ದಲ್ಲಿ ಅದು ತಪ್ಪು. ಕ್ಯಾಮೆರಾಗಳ  ಮುಂದೆ ನಿಂತಾಗ ಅವರ ವ್ಯಕ್ತಿತ್ವವನ್ನೇ ನಿರ್ವಹಿಸುವ ಸೂತ್ರಧಾರನಿರುತ್ತಾನೆ ; ಅಂತೆಯೇ ತಮಗೆ  ಬೇಕಾದಂತೆ ಕತ್ತರಿ ಪ್ರಯೋಗ ಮಾಡುವ ಸಂಪಾದಕನೂ ಇರುತ್ತಾನೆ. ಇದರೊಂದಿಗೆ ತೀರ್ಪುಗಾರರ ಪಕ್ಷಪಾತ  ಧೋರಣೆ ಮತ್ತು ವೈಯಕ್ತಿಕ ಇಷ್ಟಾನಿಷ್ಟಗಳೂ ಸೇರಿದರಂತೂ ಪ್ರತಿಭಾವಂತರು ಮಂಕಾಗುವುದರೊಂದಿಗೆ  ಮರ್ಯಾದೆ ಕಳೆದುಕೊಳ್ಳದೆ ವಿಧಿಯಿಲ್ಲ.

ಆಶಾಭಾವನೆಯೇ ಕೊನೆಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತಿದೆ ಎಂಬುದಕ್ಕೆ  ರಿಯಾಲಿಟಿ ಶೋ ಒಳ್ಳೆಯ ಉದಾಹರಣೆಯಾಗಿ ನಿಂತಿದೆ. ಒಂದು ಸುತ್ತಿನಲ್ಲಿ ಸೋತ ಸ್ಪರ್ಧಿಗಳನ್ನು  ಎಲಿಮಿನೇಷನ್ ರೌಂಡ್ ಮೂಲಕ ಉಚ್ಚಾಟಿಸುವ ಪ್ರಕ್ರಿಯೆ ನಾಟಕೀಯ ಮಾತ್ರವಲ್ಲ ಶೋಷಣೆಯೂ ಹೌದು. ಪೋಷಕರು  ಅಳುವುದು, ತೀರ್ಪುಗಾರರು ಸಂತೈಸುವುದು, ಅಪ್ಪಿ ಮುದ್ದಾಡುವುದು, ಅವರೊಂದಿಗೆ ತಾವೂ ಅಳುವುದು,  ಸೋತಿದ್ದಕ್ಕೆ ಸಹಜವಾಗಿ ಅಳು ಬಂದು ಮತ್ತೆ ಸಮಾಧಾನವಾದರೂ, ಅದನ್ನೆ ತಿರುಗಿಸಿ ಮುರುಗಿಸಿ ಮತ್ತೆ  ಮತ್ತೆ ಅಳಿಸಿ ರಿವೈಂಡ್ ಆಗುವ ವಿಷಾದಗೀತೆ.., ಒಟ್ಟಿನಲ್ಲಿ ಸೋಲಿನ ಭಾವನೆಗಳನ್ನು ವೈಭವೀಕರಿಸಿ,  ನೋಡುಗರನ್ನು ರಂಜಿಸುವುದು, ಗೆಲುವನ್ನು ಅತಿರಂಜಿತವನ್ನಾಗಿಸುವುದು. ಭಾವನೆಗಳನ್ನು ಬಿಕರಿ ಮಾಡುವ  ಮೂಲ ಪಾಠ. ಅನೇಕ ಬಾರಿ ಸ್ಪರ್ಧಿಗಳು ವೇದಿಕೆಯ ಮೇಲೆ ತಲೆ ಸುತ್ತಿ ಬಿದ್ದಿರುವ, ಮಾನಸಿಕವಾಗಿ  ನೊಂದು ಹೋದ, ವೈಕಲ್ಯಕ್ಕೆ ತುತ್ತಾದ ಪ್ರಕರಣಗಳೂ ನಡೆದಿವೆ. ಮಕ್ಕಳ ಬಾಲ್ಯವನ್ನೇ ಬೇಟೆಯಾಡಿ  ಭವಿಷ್ಯವನ್ನೇ ಬಲಿ ತೆಗೆದುಕೊಂಡಿವೆ !

ಇನ್ನೂ ಇದೆ ತಂತ್ರ ! : ಸಿನೆಮಾ, ಧಾರಾವಾಹಿ ಜಗತ್ತಿನ ನಟ/ನಟಿ/ನಿರ್ದೇಶಕ ಮಹಾಶಯರ  ಅತಿಥಿ ಗಣ್ಯರಾಗಿ ಆಗಮನ (ಸಂಗೀತ-ನೃತ್ಯದ ತಲೆಬುಡ, ಮಟ್ಟ ಗೊತ್ತಿಲ್ಲದಿದ್ದರೂ !) ಅಥವಾ ಈಗಾಗಲೇ  ಇಮೇಜ್ ಕಡಿಮೆಯಿರುವ, ಔಟ್‌ಡೇಟೆಡ್ ಸೆಲೆಬ್ರೆಟಿಗಳ ಮುಖದರ್ಶನ ! ಒಟ್ಟಿನಲ್ಲಿ ಚಿತ್ರತಾರೆಯರಿಗೂ,  ಚಿತ್ರಗಳಿಗೂ ಸುಲಭದ ಪ್ರಸಿದ್ಧಿ ಬೇಕು ! ಅದಕ್ಕೆ ಮಾಧ್ಯಮಗಳು ಈ ಬಗೆಯ ಜಾಹೀರಾತು ತಂತ್ರಗಳನ್ನು  ಮಾರಾಟ ಮಾಡಬೇಕು ! ‘ಶ್ರೋತೃಗಳ ವೋಟುಗಳು ಬಹಳ ಮುಖ್ಯ, ಕಾಪಾಡಿ, ಕಾಪಾಡಿ’ ಎನ್ನುತ್ತಾ ಅಂಗಾಲಾಚಿ  ಎಂದು ಸ್ಪರ್ಧಿಗಳು ಭಿಕ್ಷೆ ಬೇಡಬೇಕು ! ಇದರಲ್ಲಿ ಪ್ರತಿಭೆಯ ಪಾತ್ರ ಎಷ್ಟಿದೆ, ದುಡ್ಡು ಮಾಡುವ  ಉಪಾಯ ಎಷ್ಟಿದೆ ಎಂಬುದು ಬುದ್ಧಿಯಿರುವ ಯಾವ ವ್ಯಕ್ತಿಗಾದರೂ ಅರ್ಥವಾಗುತ್ತದೆ !

ಸ್ವಾರ್ಥ ತಪ್ಪಲ್ಲ. ಅಸ್ತಿತ್ವದ ಸಮಸ್ಯೆ ಬಂದಾಗ ಚೂರುಪಾರು ಸ್ವಾರ್ಥ  ಶಿಕ್ಷಾರ್ಹವೇನೂ ಅಲ್ಲ. ಆದರೆ ತಮ್ಮ ಜೊತೆಗೆ ನಂಬಿಕೊಂಡ ಕಲೆಗಳನ್ನು ಮಾರಿಕೊಳ್ಳುವ ಮಟ್ಟಿಗಿನ  ಸ್ವಾರ್ಥವೆಂದರೆ..? ಅದು ದ್ರೋಹವೆನ್ನದೆ ವಿಧಿಯಿಲ್ಲ! ಇಂತಹ ಅರೆಕ್ಷಣದ ಸುಖೋಪಭೋಗಕ್ಕೆ ನಾವು  ತೆರಬೇಕಾದದ್ದು ದಶಕಗಳ ತರುವಾಯವೂ ಸುಧಾರಿಸಿಕೊಳ್ಳಲಾಗದ ಹೊಡೆತವಿರಬಹುದೇ ಮುಂದೆ ! ಕಾಲವೇ  ಉತ್ತರಿಸಬೇಕು.

ಅಂದಹಾಗೆ ಹೊಸ ನಿರೀಕ್ಷೆ, ಹೊಸ ಭಾವ, ಹೊಸ ಪರಿಸರ, ಹೊಸ ಬಗೆಯ ನೋಟ- ನೂಪುರ  ಹೊಂದಿಕೊಳ್ಳುತ್ತಲಿದೆ. ಚಲನೆಯೇ ಜಗದ ವಾಸ್ತವ ನಿಯಮ ಅನ್ನುವುದು ನೂಪುರ ಹುಟ್ಟಿಕೊಂಡಾಗಿನಿಂದ  ಅದರೊಂದಿಗಿನ ನಿರಂತರ ಒಡನಾಟದಲ್ಲಿ, ಹುಡುಕಾಟದಲ್ಲಿ ಕಂಡುಕೊಂಡ ನಿತ್ಯ ಸತ್ಯ. ಒಂದೊಂದು ಬಗೆಯ  ಅನುಭವವವನ್ನು ವರುಷ ವರುಷವೂ ಕಟ್ಟಿಕೊಡುವ ಉತ್ಸಾಹದಲ್ಲಿದೆ ನೂಪುರ. ಈ ಪಯಣದಲ್ಲಿ ಶ್ರದ್ಧೆಯಿಂದ  ಜೊತೆಯಾದ, ಜೊತೆಯಿರುವ, ಜೊತೆಯಾಗಲಿರುವ ಸಮಸ್ತ ಸಹೃದಯ ಬಾಂಧವರಿಗೂ ಹೃತ್ಪೂರ್ವಕ ಅಭಿವಂದನೆಗಳು.

ಪ್ರೀತಿಯಿಂದ

ಸಂಪಾದಕರು

ಚೈತ್ರ-ವೈಶಾಖ -೨೦೧೦
ಹಿರಿಯರೊಬ್ಬರು ಮೊನ್ನೆ ಹೀಗೆಯೇ ಭೇಟಿಯಾದಾಗ ಆವೇಶದಿಂದಲೇ ತಮ್ಮ ಅಳಲನ್ನು ತೋಡಿಕೊಂಡಿದ್ದರು. ‘ಸಂಗೀತ -ನೃತ್ಯ ವಿದುಷಿಯರು, ವಿದ್ವಾನರು ಎಂದೆನಿಸಿಕೊಂಡವರಿಗೆ ಸರಿಯಾಗಿ ರಾಗಹಾಕಿ ಹಾಡಲು ಬರುವುದಿಲ್ಲ. ಸ್ವರ ಪ್ರಸ್ಥಾರ ದೇವರಿಗೇ ಗತಿ. ಅಂಗ-ಭಾವ ಶುದ್ಧಿ ಅಫೋಶನ. ನೃತ್ಯದವರಂತೂ ಗುರುಗಳು ಹೇಳಿಕೊಟ್ಟ ನಾಲ್ಕು ವರ್ಣಗಳಲ್ಲೇ ಇಡೀ ಜೀವಿತವನ್ನೇ ರೂಪಿಸಿಕೊಳ್ಳುತ್ತಾರೆ. ಸೃಷ್ಟಿಶೀಲತೆಯೆಂಬ ಗಂಧಗಾಳಿಯೂ ಇಲ್ಲ. ಪರಸ್ಪರ ಕಲೆ, ಕಲಾವಿದರನ್ನು ಪ್ರೀತಿಯಿಟ್ಟು ಕಾಣುವ ಸಂಸ್ಕಾರವಂತೂ ಮೊದಲೇ ಇಲ್ಲ. ವೃತ್ತಿಪರತೆ ಏನೆಂದೇ ಗೊತ್ತಿಲ್ಲ. ಬೀದಿಗೊಂದರಂತೆ ಅಂಗಡಿ ತೆರೆದು ಸೀನಿಯರ್ ಹಂತದಲ್ಲೇ ಪುಟ್ಟ ಮಕ್ಕಳಿಗೆ ಪಾಠ ಹೇಳಿಕೊಡಲಾರಂಭಿಸಿ ಕಲಿಕಾ ಕ್ರಮವನ್ನೇ ಹಾಳು ಮಾಡುತ್ತಾರೆ. ಜಾತ್ರೆ, ಸ್ಕೂಲ್ ಡೇ, ಉತ್ಸವ ಎಂದೆಲ್ಲಾ ಡ್ಯಾನ್ಸ್ ಮಾಡಿಸಿ ಮಕ್ಕಳನ್ನು ವೇದಿಕೆಗೆ ಹತ್ತಿಸುವ ಗತ್ತುಗಾರಿಕೆ ತೋರಿಸುತ್ತಾರೆ. ರಂಗಪ್ರವೇಶ, ವಾರ್ಷಿಕೋತ್ಸವ ಎಂಬೆಲ್ಲಾ ನೆವದಲ್ಲಿ ಹಣ ಪೀಕುತ್ತಾರೆ. ಆಡಿದ್ದೇ ಆಟ, ಮಾಡಿದ್ದೇ ಕಾನೂನು. ಇವರದ್ದೇನಿದ್ದರೂ ಪರೀಕ್ಷೆಗಳಲ್ಲಿ ಮಾತ್ರ ಪರಾಕ್ರಮ. ಹಾಗೆ ನೋಡಿದರೆ, ಕರ್ನಾಟಕದ ಸಂಗೀತ ನೃತ್ಯ ಪರೀಕ್ಷೆಗಳಿಗೆ ಹೊರರಾಜ್ಯಗಳಲ್ಲಿಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಇಲ್ಲಿ ವಿದ್ವತ್ ಮಾಡಿಕೊಂಡವರು ಅಲ್ಲಿ ಕಲಿಯುತ್ತಿರುವ ಎಳೆಯರಿಗೆ ಸಮ ಎಂದು ನನಗೆ ಎಷ್ಟೋ ಬಾರಿ ಕಂಡದ್ದಿದೆ. ಪರೀಕ್ಷೆ ಮಾಡುವುದು ಎಸ್ಸೆಸ್ಸೆಲ್ಸಿ ಬೋರ್ಡು ಬೇರೆ ! ಆ ಡಿಗ್ರಿಗಳು ಇಂದಿನ ಯಾವ ಡಿಗ್ರಿಗಳಿಗೆ ಸಮ ಎಂಬುದು ಕಾನೂನಿನಾತ್ಮಕವಾಗಿಯೂ ಬಗೆಹರಿಯದ ಪ್ರಶ್ನೆ ! ಜೂನಿಯರ್ ಎಂತೂ ಹೇಗೆ ಮಾಡಿದರೂ ಪಾಸಾಗುವುದು ಇದ್ದೇ ಇದೆ. ಹೀಗಿದ್ದಾಗ ವಿದ್ವತ್, ಸೀನಿಯರ್‌ಗೆಲ್ಲಾ ಬೆಲೆ ಎಲ್ಲಿ? ಹಾಗಾಗಿ ವಿದ್ವತ್ ಪಾಸು ಮಾಡಿಕೊಂಡವರು ಎಂದಾಗ ಅನುಮಾನದಿಂದಲೇ ನೋಡುತ್ತೇನೆ. ಅಂದಹಾಗೆ ನಿಮ್ಮ ಪರೀಕ್ಷಾ ಅರ್ಹತೆ ಏನು ?’

ಕೇಳಿ ಪಿಚ್ಚೆನ್ನಿಸಿತಾದರೂ ಯತಾರ್ಥವನ್ನೇ ಹೇಳಿದ್ದಾರಷ್ಟೇ ! ಇನ್ನಾದರೂ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವುದನ್ನು ನಿಲ್ಲಿಸಬೇಕೆಂದೆನಿಸಿತು. ಅಷ್ಟಕ್ಕೂ ಈ ಆರೋಪ ಇಂದು ನಿನ್ನೆಯದಲ್ಲವಷ್ಟೇ ! ತಪ್ಪೆನಿಸಲಿಲ್ಲ. ಆದರೂ ಅರೆಕ್ಷಣ, ಉತ್ತರ ಹೇಳುವುದಕ್ಕೂ ಮುಜುಗರ. ನಾಲಿಗೆ ತಡವರಿಸಿತು. ಸುಮ್ಮನೆ ನಕ್ಕೆ.

ಇಂತಹ ಒಂದಲ್ಲ, ಪರೀಕ್ಷೆಗಳ ಕುರಿತ ಅಭಿಪ್ರಾಯ ದಶಕಗಳಿಂದಲೂ ಚಾಲ್ತಿಯಲ್ಲಿದೆಯೆಂದರೆ ಒಮ್ಮೆ ಸುಮ್ಮಗೆ ನಮ್ಮನ್ನೇ ನಾವು ಅವಲೋಕನ ಮಾಡಿಕೊಂಡರೂ ಸಾಕು ; ತಪ್ಪು ಒಬ್ಬಿಬ್ಬರದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ದುಂಬಾಲು ಬೀಳುವ ಪೋಷಕರಿಂದ ಹಿಡಿದು, ಹಣ-ಪ್ರತಿಷ್ಠೆಗಾಸೆಗಾಗಿ ಪರೀಕ್ಷೆಗೆ ಕೂರಿಸುವ ಭೂಪ ಗುರು ಶಿಕ್ಷಕವೃಂದದ ವರೆಗೆ ; ಶ್ರದ್ಧೆಯಿದ್ದೋ, ಇಲ್ಲದೆಯೋ, ಒತ್ತಾಯಕ್ಕೋ, ತೆವಲಿಗೋ ಒಟ್ಟಿನಲ್ಲಿ ಕಾಟಾಚಾರಕ್ಕೆ ಎಂಬಂತೆ ಅಭ್ಯಾಸವೂ ಇಲ್ಲದೆ ನೃತ್ಯ ಕಲಿತು ಪರೀಕ್ಷೆಗೆ ಕಟ್ಟುವ ವಿದ್ಯಾರ್ಥಿಗಳಿಂದ ಹಿಡಿದು, ಬೇರೆ ಬೇರೆ ಲೋಭ-ಒತ್ತಾಯ-ಆಮಿಷ-ಉದಾಸೀನಗಳಿಗೆ ಬಲಿಯಾಗುವ ಪರೀಕ್ಷಕರ ವರೆಗೆ ; ಬಹುವೆಡೆಗಳಲ್ಲಿ ಅಸಂಬದ್ಧವಾಗಿ ಶಿಸ್ತು, ಮುನ್ನೆಚ್ಚರಿಕೆ ಇಲ್ಲದೆ ನಡೆಯುವ ಪರೀಕ್ಷಾ ಕ್ರಮದಿಂದ ಹಿಡಿದು ಪರೀಕ್ಷಕರ ನೇಮಕಾತಿ, ಸಂಭಾವನೆ, ಅಂಕಪರಿಶೀಲನೆ, ಪರೀಕ್ಷಾ ಪುಸ್ತಕ ನಿರ್ವಹಣೆ, ತನಿಖೆ ಇತ್ಯಾದಿಗಳಲ್ಲಿ ಉಪೇಕ್ಷೆ ತೋರಿಸುತ್ತಿರುವ ಮಂಡಳಿ, ಸಂಗೀತ-ನೃತ್ಯ ಕಲಿಕೆಯ ಪದವಿ, ಸ್ನಾತಕ ಪದವಿಯೆಂಬ ಹುಳಿದ್ರಾಕ್ಷಿಯ ಅಭಾವ ವ್ಯಾಪಕ ಮಾಡುತ್ತಿರುವ ಸರ್ಕಾರದ ವರೆಗೆ ಹಲವಾರು ಲೋಪಗಳು ನಮ್ಮನ್ನೇ ಮತ್ತೆ ಮತ್ತೆ ನಿಂತು ಅಣಕಿಸುತ್ತವೆ. ಬೇರೇನಕ್ಕಲ್ಲ. ಎಲ್ಲವೂ ಎಲ್ಲರದ್ದೂ ಸ್ವಯಂಕೃತ ಅಪರಾಧವೇ ತಾನೇ ! ನಾವು, ನಮ್ಮಿಂದ, ನಮಗಾಗಿ ತೋಡಿಕೊಳ್ಳುತ್ತಿರುವ ಖೆಡ್ಡಾ !

ಹಾಗಂತ ಈ ಮಾತಿಗೆ ಅಪವಾದಗಳಿಲ್ಲವೆಂದಲ್ಲ. ಪೂರಕವೋ ಎಂಬಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಈ ಸಾಲಿನಿಂದ ಸಂಗೀತ-ನೃತ್ಯ ಪರೀಕ್ಷೆಗಳ ಕುರಿತಂತೆ ಸಮಯೋಚಿತವೆನಿಸುವ ಮಾರ್ಪಾಟು ; ಉದಾ : ನೃತ್ಯ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿಯಾಗಿರುವುದು, ಪರೀಕ್ಷಾ ಕ್ರಮಗಳಲ್ಲಿ ಸಮಯ ಪರಿಪಾಲನೆ, ಪರೀಕ್ಷಕರನ್ನು ಅವರಿರುವ ಸ್ಥಳಗಳನ್ನು ಹೊರತುಪಡಿಸಿ ಹೊರಪ್ರದೇಶಗಳಿಗೆ ನೇಮಕ ಮಾಡುವುದು..ಹೀಗೆ ಒಂದಷ್ಟು ಅಂಶಗಳನ್ನು ಕಡ್ಡಾಯ ಮಾಡಿರುವುದು ಶ್ಲಾಘನೀಯವೇ ಹೌದು.

ಆದರೆ ಇವಿಷ್ಟು ಮಾತ್ರ ಪರೀಕ್ಷೆಗಳಲ್ಲಿ ಸುಧಾರಣೆ ತರಬಲ್ಲದೇ ? ದಿವಾಳಿಯಾಗುತ್ತಿರುವ ಸಂಗೀತ ನೃತ್ಯ ಪರೀಕ್ಷೆಗಳನ್ನು ಪೋಷಿಸಬಲ್ಲುದೇ? ಕಡಿವಾಣ ಹಾಕಿ ಕಟಿಬದ್ಧವನ್ನಾಗಿಸೀತೇ? ಸುಧಾರಣೆಗಳ ನಿಟ್ಟಿನಲ್ಲಿ ಈ ಹೆಜ್ಜೆ ಪ್ರಶಂಸನೀಯವಾದರೂ ಅವುಗಳ ಕಾರ್ಯಕ್ಷಮತೆ, ನಿರ್ವಹಣೆ, ಪರಿಪಾಲನೆ, ಎಲ್ಲರ ಕರ್ತವ್ಯಗಳು ಸವಾಲೂ ಹೌದು ! ಒಂದೆರಡು ದಿನಗಳಲ್ಲಿ ದಶಕಗಳಾದಿಯಾಗಿ ರೂಢಿಗೊಂಡು ಬಂದ ಅಭ್ಯಾಸಗಳನ್ನು, ಮನೋವೃತ್ತಿಗಳನ್ನು ಬದಲಾಯಿಸುವುದು ಅಷ್ಟು ಸುಲಭಸಾಧ್ಯವಲ್ಲ. ವರುಷಗಳ ಕಾಲ ನಿರಂತರ ಶ್ರಮ, ಸಮಯೋಚಿತ ಶಿಸ್ತು, ಅಚಲ ಶ್ರದ್ಧೆ ಎಲ್ಲಾ ಹರಹಿನೆಡೆಯಿಂದಲೂ ಒಗ್ಗೂಡಿದಾಗಲಷ್ಟೇ ನಿಂತ ನೀರಾಗಿರುವ, ಅಬ್ಬೇಪಾರಿಯಂತಾದ ನೃತ್ಯ ಪರೀಕ್ಷೆಗಳಿಗೆ ಮೇಘರಾಜನ ವರ್ಷಧಾರೆಯಾದೀತು. ಹಾಗಾದಾಗಲಷ್ಟೇ ನೆರೆಯ ನಾಡಿನ ಕಲಾ ಪರೀಕ್ಷೆಗಳ ಶ್ರೇಷ್ಠತೆಯಲ್ಲಿ ನಮ್ಮದೂ ‘ಸೈ’ ಎನಿಸಿಕೊಂಡೀತು ; ಬಲಾಬಲ ಸ್ಪರ್ಧೆ ಕೊಟ್ಟೀತು.

ಭಾರತೀಯ ಶಿಕ್ಷಣದ ಸ್ವರೂಪ ವಿಭಿನ್ನಮುಖವಾಗಿ ಹೊರಳುವಾಗ ಜತನದಿಂದ ತನ್ನತನವನ್ನು ಉಳಿಸಿಕೊಂಡದ್ದು ಇವೇ ಸಂಗೀತ ನೃತ್ಯ ಕಲೆಗಳು ; ಸಂಸ್ಕೃತಿಯ ಶ್ರೇಷ್ಠ ವಾರೀಸುದಾರರು, ಸಂವಹನಕಾರರು. ಹಾಗಾಗಿ ವಿಶೇಷ ಆಸ್ಥೆ ನಿರತವಾಗಿ ಇವುಗಳೆಡೆಗೆ ಪ್ರವಹಿಸುತ್ತಿರಲೆಬೇಕು. ಅದು ನಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಮಾಡಿಕೊಳ್ಳಲೇಬೇಕಾದ ಅತ್ಯಗತ್ಯ ಜಲಮರುಪೂರಣ.

ಅಂದಹಾಗೆ, ನೂಪುರ ಭ್ರಮರಿಯ ತೃತೀಯ ವಾರ್ಷಿಕ ಸಂಭ್ರಮದ ವಿಶೇಷ ಸಂಚಿಕೆಯ ಅನಾವರಣ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಸುದಿನ ಸರಳವಾಗಿ ನೆರವೇರುವುದರ ಮೂಲಕ ಮತ್ತ್ತೊಂದು ಮಜಲಿಗೆ ಏರಿದುದರ ಸಂತಸ ಮನೆ ಮಾಡಿದೆ. ನರ್ತನ ಜಗತ್ತಿನ ಪರಿಭ್ರಮಣದ ಕೈಂಕರ್ಯಕ್ಕೆ ದಿನದಿಂದ ದಿನಕ್ಕೆ ಒಗ್ಗೂಡುತ್ತಿರುವವರ ಸಂಖ್ಯೆ ಮನೋಬಲಕ್ಕೆ ಮತ್ತಷ್ಟು ಇಂಬು ನೀಡುತ್ತಿದೆ.

ಬೆಳಕಿಂಡಿ ಇದೆ. ಬೆಳಕಿನೆಡಿಗೆ ಪಯಣ ಸಾಗಬೇಕಿದೆ. ಪಯಣ, ಪರಿಭ್ರಮಣ ನಿರಂತರವಾಗಲಿ.

ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ

ಪ್ರೀತಿಯಿಂದ

ಸಂಪಾದಕರು

ಮಂಜೀರ (ಶಿಶಿರ ಶೃಂಗಾರ ೨೦೧೦)
ಕಾದು, ಕಾತರಿಸಿ, ಕನವರಿಸಿ, ನೊಂದು-ಬೆಂದು ನಡೆದು ಪಡೆದ ಖುಷಿ ಎಂದೆಂದಿಗೂ ಇಮ್ಮಡಿಯಾಗುತ್ತಲೇ ಇರುತ್ತದೆ ಎಂಬ ಮಾತು ಸುಳ್ಳಲ್ಲ. ಇಂದಿಗೆ ವಿಶಾಲ ಬಯಲಿನಲ್ಲಿ, ಎತ್ತರದ ಅವಕಾಶದಲ್ಲಿ, ಅನಂತ ಸಾಗರದ ಅಲೆಗಳ ನಡುವೆ ಜೋರಾಗಿ ‘ಹುರ್ರೇ’ ಎಂದು ಮನಬಿಚ್ಚಿ ಕೂಗಿ ಧ್ವನಿಗೈಯ್ಯಬೇಕೆನ್ನಿಸುತ್ತಿದೆ. ಅವು ಮಾರ್ದನಿಯಾಗಿ ನಿತ್ಯವೂ ಅನುರಣಿಸಬೇಕೆನ್ನಿಸುತ್ತಿದೆ. ಕಾರಣ ; ನೂಪುರ ಭ್ರಮರಿ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಫಾರ್ ಇಂಡಿಯಾದಿಂದ ನೋಂದಾವಣೆಗೊಂಡಿದೆ !   ಇದರಲ್ಲೇನಿದೆ? ಸಾಮಾನ್ಯ. ಕಾಣಿಸುವುದು ಸಹಜ. ಆದರೆ ಕಳೆದ ಮೂರು ವರ್ಷಗಳಲ್ಲಿ ನೂಪುರದ ಗೆಳೆಯರ ಬಳಗ ಅದಕ್ಕಾಗಿ ನಡೆಸಿದ ಹೋರಾಟ, ಪ್ರತೀ ಅಂಚೆಯೂ ‘ಸಾನ್ನಿಧ್ಯ’ಕ್ಕೆ ಬಂದಾಗ ಕುತೂಹಲ-ಆತಂಕದಿಂದ ಕಾದು ನೋಡುತ್ತಿದ್ದ ಕಣ್ಣುಗಳು ; ಖಾಸಗೀ ಪ್ರಸಾರದ ಪತ್ರಿಕೆಯೆಂಬ ಬಂಧಗಳಿಂದ ಹೊಸ ಹೊಸಿಲಿಗೆ ಬಂದು ನಿಂತು ಇಂದಿಗೆ ಸಂತಸದ ಹನಿಗೂಡಿರುವುದನ್ನು ಕಾಣುವಾಗ ಸಾರ್ಥಕವೆನಿಸುತ್ತದೆ. ಹೌದು ; ಚಿಕ್ಕಪುಟ್ಟ ಸಂತಸಗಳೇ ಬದುಕಿನ ಸಮೃದ್ಧತೆಯನ್ನು ಬದುಕಿಸುತ್ತವೆ.

ಇವೆಲ್ಲದಕ್ಕೂ ‘ಮುದ್ರಾರ್ಣವ’ವೇ ಮುನ್ನುಡಿ ಬರೆದಿರಬೇಕೆನ್ನಿಸುತ್ತಿದೆ. ಸಂಶೋಧನೆಯ ಚಿಂತನೆ ಪಡಿ ಮೂಡಿದ ಕ್ಷಣಕ್ಕೆ ಮತ್ತಷ್ಟು ಹುಡುಕುವಿಕೆಯ ಎಳೆಗಳು ಸಂಲಗ್ನಗೊಂಡಿವೆ. ನೂಪುರದ ನಾಂದಿ ಧ್ವನಿಸಿದೆ. ನಂತರ, ಕೃತಿ ಅನಾವರಣಗೊಂಡ ಶುಭಲಗ್ನವೋ ಏನೋ, ಮೂರರ ವರ್ಷವನ್ನು ಸ್ವಾಗತಿಸುವ, ನಾಲ್ಕನೇ ಸಂಪುಟವನ್ನು ತೆರೆಯುತ್ತಿರುವ ಘಳಿಗೆಗೆ ಪ್ರೇರಕವಾಗಿ, ಪೂರಕವಾಗಿ ಕೈಯ್ಯಲ್ಲಿ ನೋಂದಾಯಿತಪತ್ರದ ಸಾನ್ನಿಧ್ಯವಿದೆ. ಜೊತೆಗೆ ಶ್ರೀ ಸಾನ್ನಿಧ್ಯ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಇದೀಗ ಹೊಸ ಹುರುಪಿನಿಂದ ತನ್ನ ನಂತರದ ಸದಭಿರುಚಿಯ ಪುಸ್ತಕದ ಆವೃತ್ತಿಗಳಿಗೆ ಸಜ್ಜಾಗಿ ನಿಂತಿದೆ ! ಒಟ್ಟಿನಲ್ಲಿ ಸಂಭ್ರಮದ ಮೂರನೇ ವರ್ಷದ ಆಚರಣೆಗೆ ಅಡಿಯಿಡುವ ಮುನ್ನ ಹೊರೆಯೆನಿಸದ ಹೊಣೆಗಾರಿಕೆಯ ಪ್ರೀತಿ ಹೆಗಲನ್ನು ತಟ್ಟಿದೆ. ಇನ್ನೊಂದಷ್ಟು ಖುಷಿಯ ಕ್ಷಣಗಳನ್ನು ಮುಂದಿನ ದಿನಗಳಲ್ಲಿ ಬರಮಾಡಿಕೊಳ್ಳುವ ನಿರೀಕ್ಷೆಗಳೂ ಇವೆ !

ಹಾಗೆ ನೋಡಿದರೆ, ಪ್ರಾರಂಭದ ದಿನಗಳಲ್ಲಿ ಮೂದಲಿಕೆಯ ಮಾತುಗಳೇ ಸುತ್ತಲಿನಿಂದ ಪ್ರತಿಧ್ವನಿಸಿತ್ತು. ‘ಲಾಭದ ಲವಲೇಶ ಆಶೆಗೂ ಬಗ್ಗದೆ ಅದ್ ಹೇಗೆ ಪತ್ರಿಕೆ ನಡೆಸುವಿರಿ ? ಸಾಕಷ್ಟು ದೂರಗಾಮಿ ಚಿಂತನೆಗಳಿರಬೇಕು. ಪತ್ರಿಕೆ ನಡೆಸುವುದು ಅಂದರೆ ಬೆಂಕಿಯ ಜೊತೆಗಿನ ಬದುಕು. ಮೂರೇ ದಿನದಲ್ಲಿ ಮುಚ್ಚಿ ಹೋಗುತ್ತದೆ’ ಎಂಬ ಹಾರೈಕೆ(?), ಪ್ರಶ್ನೆಗಳು ಇದಿರು ನಿಂತು ಅಣಕಿಸಿದ್ದವು. ಹಾದಿ ನಿಚ್ಚಳವಾಗತೊಡಗಿದಾಗ ಗಮ್ಯದೆಡೆಗೆ ಗಮನ ಸಹಜವಾಗಲೇಬೇಕಲ್ಲವೇ?   ಅಡಿ ಮುಂದಿಟ್ಟದ್ದನ್ನು ಹಿಂದೆಗೆಯುವ ಪ್ರಶ್ನೆಯೇ ಇರಲಿಲ್ಲ. ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಅದರ ಮಟ್ಟವನ್ನು ವರ್ಷದಿಂದ ವರ್ಷಕ್ಕೆ ಎತ್ತರಕ್ಕೇರಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಆದ್ದರಿಂದ ಪ್ರಶೆಗಳನ್ನೇ ಸವಾಲುಗಳಾಗಿ ಮಾಡಿಕೊಂಡು ಬೆಂಕಿಯೆಂಬ ಉರಿಯ ಕಲ್ಪನೆಯಿದ್ದರೂ ಅದರಿಂದಲೂ ಸ್ವಾದಿಷ್ಟ, ಆರೋಗ್ಯಕರ ಅಡುಗೆಯನ್ನೂ ಸಾಧಿಸಿ ಉಣಿಸಬಹುದಾದರೆ ಯಾಕಾಗಬಾರದು ಎಂದು ಹೊರಟಿದ್ದೇ ; ಈವರೆಗೆ ಸಂಗ್ರಹಿಸುವ ಪದಾರ್ಥಗಳಲ್ಲೇ ಪಾಕವೈವಿಧ್ಯವನ್ನು ಸಮಗ್ರವಾಗಿ ಉಣಬಡಿಸುತ್ತಲಿದ್ದೇವೆ. ಇದು ದಣಿದು ಬಂದವರಿಗೆ ನೆರಳಾಗಿದೆ ; ಬಾಯಾರಿದವರಿಗೆ ನೀರುಣಿಸಿದೆ ; ತಂಬೆಲರಾಗಿ ಗಾಳಿ ಬೀಸಿದೆ ; ಬೆಳೆಯುವ ಸಸಿಗಳಿಗೆ ಪೋಷಣೆಯನ್ನೀಯುತ್ತಿದೆ; ಆರೋಗ್ಯವಾದ ಆಹಾರದ ಮಾದರಿಗಳನ್ನು ನೀಡುತ್ತಲಿದೆ ; ಶಕ್ತಿಯನ್ನು ರೂಢಿಸುತ್ತಲಿದೆ ; ಹಳತಿನ ಆಸರೆಯಲ್ಲಿ ಹೊಸ ದಿಕ್ಕಿನೆಡೆಗೆ ನಡೆವ ಸ್ಫೂರ್ತಿಯನ್ನೀಯುತ್ತಿದೆ ; ಹಂಚಿಕೊಳ್ಳುವ ವೇದಿಕೆಯಾಗಿದೆ ಎಂಬುದು ನಮ್ಮ ನೆಮ್ಮದಿ.

ಪತ್ರಿಕೆಯ ಜೊತೆಗಿನ ಪಯಣ ಅಷ್ಟೊಂದು ಸುಲಭವೇ? ನಿರಂತರ ಬದ್ಧತೆಯನ್ನು ಬೇಡುವ ಮತ್ತು ಸವಾಲು, ಸ್ಪರ್ಧೆಗಳನ್ನು ನೀಡುವ ರಂಗವಿದು. ಹಾಗಾಗಿ ಸಂಬಂಧ, ಚಿಂತನೆಗಳ ಗುಣಾಕರ ಭಾಗಾಕಾರಗಳು ನಿರಂತರ ನಡೆದೇ ಇವೆ. ಇಂದಿನ ಖರ್ಚುವೆಚ್ಚಗಳ ನಡುವಿನಲ್ಲೂ ಕಲಾರಸಿಕ ಓದುಗರ ಸಹಕಾರದಿಂದ ಮುನ್ನಡೆದಿದ್ದೇವೆ. ಗೆಳೆಯರ ಬಳಗದ ಅದ್ಭುತ ಸಹಕಾರದ ನಡುವೆಯೂ ಟೀಕೆಗಳು ತಿವಿದಿವೆ; ಎಚ್ಚರಿಸಿವೆ; ವಿರೋಧಾಭಾಸಗಳು, ಮೇಲಾಟಗಳು ಬೆನ್ನು ಬಿಡದೆ ಹಿಂಬಾಲಿಸಿವೆ ; ಒಳಿತು ಕೆಡುಕುಗಳ ದರ್ಶನ ಆಗಿದೆ ; ಒತ್ತಾಸೆ ಬೇಡಿವೆ.   ಅಷ್ಟೇ ಅಲ್ಲ; ಇದು ಜೀವನಕ್ಕೊಂದು ನಿಶ್ಚಿತ ಶಿಸ್ತನ್ನು ಕೊಟ್ಟಿದೆ. ಆ ಶಿಸ್ತು ನಮ್ಮ ಕಡಲತಡಿಯ ಮುತ್ತಿನಂತಾದರೂ ; ಮತ್ತಷ್ಟು ಮಣಿಗಳನ್ನು ಪೋಣಿಸುವೆಡೆಗೆ ಹೆಜ್ಜೆ ಹೊರಟಿದೆ. ನಮ್ಮೆಲ್ಲಾ ಪ್ರಯತ್ನಗಳಿಗೂ ನೂತನ ಭಾಷ್ಯ ಬರೆದಿದೆ.

ಇದೆಲ್ಲವೂ ಸಾಧ್ಯವಾದದ್ದು ನೂಪುರದಿಂದ. ನಮ್ಮೆಲ್ಲರಿಂದ ಬೆಳೆದು, ಇದೀಗ ನಮ್ಮನ್ನು ಬೆಳೆಸುತ್ತಿರುವ ನೂಪುರವೆಂಬ ಪ್ರೀತಿಗೆ ನಾವು ಋಣಿಗಳೇ ಹೌದು ! ಜೊತೆಗೆ ಬೆಳೆಸಿದ ಓದುಗರಾದ ನಿಮಗೂ ಋಣಿ.  ‘ಯೋಚನೆಗಳಿಗೆ ಕಾಲುಗಳಿದ್ದರೆ ಆದರ್ಶಗಳಿಗೆ ರೆಕ್ಕೆಗಳಿರುತ್ತವೆ.’ ಆದರ್ಶವೂ ಒಂದು ಭ್ರಮೆಯೇನೋ ಎಂಬುದು ಕಾಡುತ್ತಲಿದ್ದರೂ ; ಅದರ ಉತ್ಪನ್ನ ವಿಚಾರಧಾರೆಗಳ ಬೆಂಬಲದ ನಡೆಗೆ ತಿರುವು-ಮುರುವುಗಳು, ಕಲ್ಲುಕೊರಕುಗಳು ಅಗಾಧವೆನಿಸಿದರೂ ; ದೀರ್ಘಕಾಲಕ್ಕೆ ಅವೇ ವಿಚಾರಗಳು ನಿತ್ಯವಿನೂತನವಾಗಿ, ಉತ್ಕೃಷ್ಟವೆನಿಸಿ ಬಾಳುತ್ತವೆ. ಅದಕ್ಕೆ ಉದಾಹರಣೆ, ಕಟ್ಟಿದ ಪುಟ್ಟ ಪುಟ್ಟ ಕನಸುಗಳು ನಡೆಸಿದ ಹೆಜ್ಜೆಗಳು ಅಗಾಧ ಸಾಧ್ಯತೆಗಳ ಮಹಾಪೂರವನ್ನೇ ಇಂದಿಗೆ ತೋರಿಸಿಕೊಡುತ್ತಿರುವುದು. ನೃತ್ಯ ವಲಯದಲ್ಲಿ ಈಗಾಗಲೇ ಮನ್ನಣೆ, ಪ್ರೋತ್ಸಾಹಗಳ ದಿಂಡು ಬೆನ್ನು ತಟ್ಟುತ್ತಿದೆ. ಕೆಲವೆಲ್ಲಾ ಅಚ್ಚರಿಯೆಂಬಂತೆ ಒದಗಿಬಂದಿವೆ. ಹಾಗಾಗಿ ಒದಗಿದ, ಒದಗುವ, ದುಡಿದ, ದುಡಿಯುವ ಕೈಗಳಿಗೆಲ್ಲರಿಗೂ ಅಭಿವಂದನೆಗಳಿವೆ, ಅನಂತ ಅರ್ಪಣೆಗಳಿವೆ.

ಆದರೆ ಗುರಿಯೆಂಬುದು ತಾಣವಲ್ಲ. ಅದು ನಡೆದಷ್ಟೂ ಸವೆಯದ ಹಾದಿ. ಹಾಗಾಗಿ ಕೂಡಿ ಮುನ್ನಡೆಯುವ ಬಲವಿದ್ದರೆ ದಾರಿಯ ಆಯಾಸ, ಏರು ತಗ್ಗುಗಳು ಅಷ್ಟಾಗಿ ನಮ್ಮನ್ನು ಕಾಡದು. ಇನ್ನೂ ಮುಂದಕ್ಕೂ ಹೆಜ್ಜೆಗಳ ಬವಳಿಕೆ ಗೊತ್ತಾಗದಂತೆ ನೀವು ಬೇಕು. ಕಾಳಜಿ, ಅನುಸರಣೆ, ಜೊತೆಗಿರುವ ಹುಮ್ಮಸ್ಸು, ಒಮ್ಮನಸ್ಸು ಬೇಕು. ನೋವು, ಸಂಕಟ ಬಿಗುಮಾನಗಳ ಬಿಮ್ಮಗಿನ ಮುಖ ಹೊತ್ತು ಕೂರದೆ, ಪ್ರೀತಿ-ಕಕ್ಕುಲತೆಗಳನ್ನು ಬರಮಾಡಿಕೊಳ್ಳಬೇಕು. ನಿಮ್ಮ ಸಹಕಾರ, ಆಶೀರ್ವಾದ ಎಂದೆಂದಿಗೂ ನೂಪುರವನ್ನು ಹರಸಬೇಕು. ಈ ಬೆಳವಣಿಗೆಯ ನಿರಂತರ ಅಭೀಪ್ಸೆಗೆ ಜೊತೆಗೆ ಇರುತ್ತೀರಲ್ವಾ?   ನೂಪುರ ನಮ್ಮೆಲ್ಲರದು.. ನೆನಪಿರಲಿ.. ಮೂರನೇ ವಸಂತದಲ್ಲೂ ನೂಪುರದ ದನಿ ಮಾರ್ದನಿಸಲಿ, ನಿನಾದ ಗುನುಗುನಿಸುವಂತಾಗಲಿ. ಗುಣಾತ್ಮಕ ಸುಧಾರಣೆಗಳ ಶಕೆ ಬರೆಯಲಿ..

ಪ್ರತೀ ವರ್ಷದ ಮಹಾಶಿವರಾತ್ರಿಯ ಆಸುಪಾಸಿಗೆ ನೂಪುರದ ವರ್ಷದ ಹಬ್ಬ ನಮ್ಮ ಸಂಪ್ರದಾಯ. ನರ್ತನದ ಅಧಿದೇವನಿಗೆ ಒಂದರ್ಥದಲ್ಲಿ ಅರ್ಪಿಸುವ ಅಂಜಲಿಯಿದು ಎಂದೇ ನಮ್ಮೆಲ್ಲರ ಭಾವನೆ. ನಟರಾಜನ ಅನಂತ ಕೃಪೆ, ಕಾರುಣ್ಯ ಎಲ್ಲರನ್ನೂ, ಎಲ್ಲವನ್ನೂ ಕಾಪಿಡಲಿ.

- ಪ್ರೀತಿಯಿಂದ

ಸಂಪಾದಕರು

ಹೇಮಂತ ಋತುಗಾನ-( ನವೆಂಬರ್ ಡಿಸೆಂಬರ್ ೨೦೦೯)
ಸಂಪಾದಕೀಯ ಬರೆಯಹೊರಟಾಗಲೆಲ್ಲಾ ಕಲೆಯ ವಿಸ್ತಾರದೊಳಗೆ ಆಗಿರುವ ಹುಳುಕುಗಳೇ ಏಕೆ ಕಣ್ಣ  ಮುಂದೆ ಧುತ್ತನೆ ಬಂದು ನಿಲ್ಲುತ್ತವೋ ತಿಳಿಯದು. ಆದರೆ ಈ ಹುಳುಕುಗಳ ಮುಂದೆ ಕೆಲವೇ ಕೆಲವು  ಒಳ್ಳೆಯತನಗಳೂ ಮುಚ್ಚಿ ಹೋಗುವ ಮಟ್ಟಿಗೆ ಸ್ಥಿತಿಯಿದೆ ಎಂದಾದರೆ, ಏನೋ ಎಡವಟ್ಟು ನಡೆಯುತ್ತಿದೆ  ಎಂದು ಅಂದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಕಲೆಯ ಕುರಿತು ಯೋಚನೆ ಮಾಡುವಾಗೆಲ್ಲಾ ನಮ್ಮೊಳಗೆ  ಕಂಡು, ಕೇಳಿದ, ಅನುಭವಿಸಿದ, ಆಗಿಹೋದ, ಆಗುತ್ತಿರುವ ಎಷ್ಟೋ ನಕಲುಗಳು, ಆಡಂಬರಗಳು,  ಸಮಯಸ್ಫೂರ್ತಿಯಿಲ್ಲದ ಪ್ರಯೋಗಗಳು (?) ಅಣಕಿಸುವಾಗಲೆಲ್ಲಾ, ‘ಬರೆದೇ ಬಿಡುವ’ ಎಂಬ  ಉತ್ಕಟಾಕಾಂಕ್ಷೆಯೊಂದು ಪಡಿಮೂಡುತ್ತದೆ. ಕಲೆ, ಕಲಾವಿದ, ಪೋಷಕ, ವಿದ್ಯಾರ್ಥಿ, ಸಭಿಕ, ಮಾಧ್ಯಮ..,  ಹೀಗೆ ಎಲ್ಲದರ ಬಗೆಗೊಂದು ಭವಿಷ್ಯದ ಕುರಿತಾಗಿ ಸಣ್ಣ ಆತಂಕದ ಸುಳಿ ಝಲ್ಲನೆ ಹಾದುಹೋಗುತ್ತದೆ.  ಕೈಯ್ಯಲ್ಲಿ ಹಿಡಿದ ಪೆನ್ನು ಅದಾಗಿಯೇ ಹುಳುಕು-ಕೆಡುಕುಗಳ ಬಗ್ಗೆಯೇ ಬರೆಯತೊಡಗುತ್ತದೆ.

ಕಳೆದೆರಡು ಬಾರಿಯೂ ವಿಭಿನ್ನ ಸ್ತರಗಳಲ್ಲಿ ನಡೆಯುತ್ತಿರುವ ‘ಫ್ಯೂಷನ್’ ಎಂದು  ಕರೆಸಿಕೊಂಡರೂ, ಅದು ಆಗಲಾರದೇ ಹೋಗುತ್ತಿರುವ, ವರ್ತಮಾನ ಮತ್ತು ಭವಿಷ್ಯದ ಆತಂಕಗಳನ್ನು ದುಪ್ಪಟ್ಟು  ಮಾಡುತ್ತಿರುವ ಕುರಿತಾಗಿ ಬರೆದಿದ್ದೆ. ಮೊದಲನೇಯದು ಶಾಸ್ತ್ರೀಯ ನೃತ್ಯ ರಂಗಪ್ರವೇಶ ಎಂಬ ಎಡಬಿಡಂಗಿ  ಸ್ಥಿತಿ; ಮತ್ತೊಂದು ಜಾನಪದದ ಸಹಜತೆಯನ್ನು ಧಿಕ್ಕರಿಸಿ ಶಾಸ್ತ್ರೀಯ ಅಂಶಗಳನ್ನು ಬೆರಕೆಪಾಕ  ಮಾಡುತ್ತಾ ಎಲ್ಲೂ ಸಲ್ಲದ ಸಂಧಿಗ್ಧತೆಯನ್ನು ತರುತ್ತಿರುವ ಸೋಗಲಾಡಿತನ. ಎರಡೂ ತಮ್ಮಲ್ಲಿನ  ಪರಂಪರೆಗಳನ್ನು, ಅದರ ಗಾಢ ಅಸ್ತಿತ್ವವನ್ನು ಧಿಕ್ಕರಿಸಿದ ಸಂಗತಿಗಳೇ. ಇತ್ತೀಚೆಗೆ ಧಾಡಸೀತನ  ಇನ್ನೊಂದು ನೆಲೆಯಲ್ಲಿಯೂ ಅನಾವರಣಗೊಂಡಿದ್ದು ಮತ್ತೊಂದು ದೊಡ್ಡ ವಿಪರ್ಯಾಸ.

ಖ್ಯಾತನಾಮರೆನಿಸಿದ ನೃತ್ಯಪಟು. ನೃತ್ಯದ ವಿವಿಧ ಅಂಗ-ಅಂಶಗಳ ಬಗೆಗೆ  ಅರಿವು-ಪಾಂಡಿತ್ಯವುಳ್ಳವರೆಂಬ ಹೆಗ್ಗಳಿಕೆ. ಆದರೆ ಪ್ರದರ್ಶನದ ವೇಳೆ ಕಂಡದ್ದೇನು? ಭರತನಾಟ್ಯ,  ಕಥಕ್, ಕಥಕಳಿ- ಹೀಗೆ ಒಂದಷ್ಟು ವಿವಿಧ ನೃತ್ಯದ ಆಯಾಮಗಳ ಕಲಸುಮೇಲೋಗರ. ಕಾರಣ; ತಾವು ಕಲಿತ  ಪಾಂಡಿತ್ಯವನ್ನೆಲ್ಲಾ ರಂಗಕ್ಕೆ ತರಬೇಕೆಂಬ ಹಠದಲ್ಲಿ ಕಲಾನುಭವ ಸೊನ್ನೆ ! ನಾಲ್ಕೈದು ದೋಣಿಗಳಿಗೆ  ಕಾಲಿಟ್ಟು ಎಲ್ಲೂ ತಮ್ಮ ನೆಲೆಯನ್ನು ಕಂಡುಕೊಳ್ಳಲಾರದ ಇತ್ತಂಡ ! ಜೊತೆಗೆ ರಂಗದಲ್ಲೇ  ಇರಿಸುಮುರಿಸಿನ ವರ್ತನೆ ; ವೇಷ-ಭೂಷಣಗಳನ್ನು ಸರಿಪಡಿಸುವುದು, ಬೆವರೊರೆಸುವುದು,  ತಾದಾತ್ಮ್ಯತೆಯನ್ನು ಬಲವಂತವಾಗಿ ತರಿಸಿಕೊಳ್ಳುವುದು; ರಸ-ಭಾವದ ಒತ್ತಟ್ಟಿಗಿರಲಿ, ತಾಳ-ಲಯ  ತಪ್ಪುವುದು ಕೂಡಾ ಮಾಮೂಲಿಯೆನ್ನಿಸುವಷ್ಟು ! ವಿಪರ್ಯಾಸವೆಂದರೆ, ನಂತರದ ದಿನದಲ್ಲಿ ಮಾಧ್ಯಮಗಳಲ್ಲಿ  ಅದ್ಭುತವೆನಿಸುವ ವರ್ಣನೆ !

ಕಲಾವಿದ ಕುಸಿಯುವುದು ಇಲ್ಲಿಯೇ? ಮಾತ್ರವಲ್ಲ ವಿಮರ್ಶೆ, ಕಲಾಪ್ರಯತ್ನಗಳು ಸೋಲುವುದೂ  ಇಲ್ಲಿಯೇ ! ವಿಮರ್ಶೆಗಳು ವ್ಯಕ್ತಿಯ ಕಲಾವಂತಿಕೆ, ಪ್ರಜ್ಞೆಯನ್ನು ಹೆಚ್ಚು ಮಾಡಬೇಕೇ ವಿನಾ ಅಣಕ  ಮಾಡುವುದಲ್ಲ. ಆದರೆ ಹೆಸರು, ಸ್ಥಾನ, ಪ್ರದೇಶದ ನಡವಳಿಕೆಗಳು ಉನ್ನತವಾಗಿದೆ ಎಂಬ ಮಾತ್ರಕ್ಕೆ  ಕಳಪೆಯೆನಿಸುವ ಕಾರ್ಯಕ್ರಮವನ್ನೂ ಮರು ಮಾತಿಲ್ಲದೇ ಒಪ್ಪಿಕೊಂಡರೆ ಪ್ರಗತಿಯ ಸೋಪಾನಕ್ಕೆ ಇಟ್ಟ  ಮುಳ್ಳು ; ಮಾತ್ರವಲ್ಲ, ನಮಗೆ ನಾವೇ ಮಾಡಿಕೊಳ್ಳುವ ಅಪಚಾರ. ಹೊಸ ಪ್ರಯೋಗವೆಂದ ಮಾತ್ರಕ್ಕೆ ಅದರ  ಔಚಿತ್ಯ ನೋಡದೇ ಒಪ್ಪಿಕೊಳ್ಳುವುದು, ಹಳತು ಎಂದಾಕ್ಷಣ ಮೂಗು ಮುರಿಯುವುದು, ಇವೆರಡರ ನಡುವೆ  ಪರಂಪರೆ, ಶಾಸ್ತ್ರವೆನ್ನುತ್ತಲೇ ಅದನ್ನು ವ್ಯವಸ್ಥಿತವಾಗಿ ಮಾಡುತ್ತಲೇ ಕಲೆಯನ್ನು  ಹೆಣವನ್ನಾಗಿಸುವುದು.., ಒಟ್ಟಿನಲ್ಲಿ ನೃತ್ಯವೆಂದರೆ ಪ್ರದರ್ಶನದ ಉದ್ದೇಶವೇ ಪ್ರಾಥಮಿಕ ಮತ್ತು  ಅಂತಿಮ ಗುರಿ ! ಇದು ಖ್ಯಾತನಾಮರ ತೆವಲಷ್ಟೇ ಅಲ್ಲ; ಬದಲಾಗಿ ಪುಟ್ಟ ಮಕ್ಕಳಾದಿಯಾಗಿ ಅವರ ಪೋಷಕರು,  ಗುರುಶಿಕ್ಷಕರು ಎಲ್ಲರದ್ದೂ ಒಂದೇ ದೃಷ್ಟಿ ಏನೋ !

ಪ್ರತಿಭಾಹೀನರಿಗೆ ಶಾಸ್ತ್ರ ಒಂದು ರಕ್ಷಣೆ ; ಹಾಗೆಯೇ ಪ್ರತಿಭಾಹೀನರಿಗೆ ಪ್ರಯೋಗವೂ  ಒಂದು ರಕ್ಷಣೆ. ಇದರ ಹೊರತಾಗಿಯೂ ಅಭ್ಯಾಸ ಮಾಡಿಕೊಳ್ಳಲಾಗದ ಉದಾಸೀನ, ರಂಗ ಮತು ಪ್ರೇಕ್ಷಕನೆಡೆಗಿನ  ನಿರ್ಲಕ್ಷ್ಯ, ನೃತ್ಯ ಸಾಧ್ಯತೆಗಳಲ್ಲಿ ತಾವು ಈಗಾಗಲೇ ಕಂಡುಕೊಂಡ ಯಶಸ್ಸು, ಅತಿ ಆತ್ಮ ವಿಶ್ವಾಸ ;  ಇವಿಷ್ಟಿದ್ದರೂ ಸಾಕು, ರಂಗದಲ್ಲಿ ಕಲಾವಿದ ಸೋತನೆಂದೇ ಅರ್ಥ.

ಆದರೂ ಬಹುಪಾಲು ಕಲಾವಿದರು ಸುರಕ್ಷಿತ ಜಾಗದಲ್ಲಿ ನಿಲ್ಲಲು ಬಯಸುತ್ತಾರೆ. ಅವರಿಗೆ  ಎಲ್ಲಿ ತಮ್ಮ ಅಸ್ತಿತ್ವಕ್ಕೇ ಕುತ್ತು ಬರಬಲ್ಲುದೋ ಎಂಬ ಭಯ ! ಆದ್ದರಿಂದ ಶಾಸ್ತ್ರದ ಮೇಲೆ ಗೂಬೆ  ಕೂರಿಸುತ್ತಾರೆ. ನಮ್ಮ ತಪ್ಪಲ್ಲ; ಅದು ಶಾಸ್ತ್ರೀಯತೆಯ ‘ಶ್ರೇಷ್ಟತೆ’ ಎಂದೆಲ್ಲಾ ಸಮಜಾಯಿಷಿ  ಕೊಡುತ್ತಾರೆ. ಇದಕ್ಕೆ ಕುಣಿಯಲಾರದ ನರ್ತಕಿ ನೆಲ ಡೊಂಕು ಎನ್ನದೇ ವಿಧಿಯಿಲ್ಲ.

ಪ್ರತಿಭಾಶಾಲಿಯಾದವನು ಶಾಸ್ತ್ರಕ್ಕೆ ವಿರುದ್ಧವಾಗದಂತೆ ಶಾಸ್ತ್ರವನ್ನು  ಬೆಳೆಸುತ್ತಾನೆ, ತಾನೂ ಬೆಳೆಯುತ್ತಾನೆ. ಪ್ರಯೋಗಗಳು ಶಾಸ್ತ್ರವಿರೋಧವಾಗಬಾರದು ; ಅಂತೆಯೇ ಶಾಸ್ತ್ರ  ಪ್ರಯೋಗವಿರೋಧವಾಗಬಾರದೂ ಕೂಡಾ. ಹಾಗೆಂದು ಕಲಿತದ್ದನ್ನು ಬಿಡಬೇಕೆಂದು ಅರ್ಥವಲ್ಲ. ಆದರೆ ಕಲೆಗೆ  ತರ್ಪಣ ಬಿಡುವ ಕೆಲಸವನ್ರ್ನೆಂದು ಮಾಡಬಾರದು. ಒಚಿದಂತೂ ನಿಜ; ಸತ್ತ್ವಶುದ್ಧಿಯಿರುವ ಕಲಾವಿದನಿಗೆ  ಪರಂಪರೆಯ ಬಗ್ಗೆ ನಮ್ರತೆಯೂ ಇರುತ್ತದೆ; ಸ್ವಾನುಭವನಿಷ್ಠವಾಗಿ ಮಾಡಬೇಕೆನ್ನುವುದರ ಬಗ್ಗೆ  ಆತ್ಮವಿಶ್ವಾಸವೂ ಇರುತ್ತದೆ. ನಮ್ಮ ನಡುವೆ ಅಂತಹುದೊಂದು ಪ್ರಜ್ಞೆ ನಿರಂತರ ಎಚ್ಚರವಿರಲಿ.

ಪ್ರೀತಿಯಿಂದ,

ಸಂಪಾದಕರು

ಶರದ್ ಸಂಭ್ರಮ ( ಸೆಪ್ಟೆಂಬರ್-ಅಕ್ಟೋಬರ್ ೨೦೦೯)
ಹೀಗೆ., ಒಂದು ಅಧ್ಯಯನ ಸಾಮಗ್ರಿಗೆ ಹುಡುಕುವಾಗ ಮೊದಲು ಕಂಡಿದ್ದು ಜನಪದ. ಅದರಲ್ಲೂ ಜಾನಪದ ನೃತ್ಯಗಳು. ಶತಶತಮಾನದಿಂದ ಜನಜೀವನದಲ್ಲಿ ಹಾಸುಕೊಕ್ಕಾಗಿ, ಹಲವು ಪಲ್ಲಟಗಳಿಗೆ ಸಾಕ್ಷಿಯಾಗಿ, ಯಾವುದೇ ಆಗ್ರಹಗಳನ್ನೂ ಕಟ್ಟಿಕೊಳ್ಳದೆ, ನಿತ್ಯವಿನೂತನವಾಗಿ ತನ್ನ ಹೆಜ್ಜೆ-ಗೆಜ್ಜೆಗಳಲ್ಲಿ ಮನಸುಗಳ ಅರಳುವಿಕೆಯನ್ನೂ ಸಾಧಿಸಿಕೊಂಡವುಗಳು ಅವು. ಅಷ್ಟೇ ಅಲ್ಲ, ಇಂದಿನ ಎಲ್ಲಾ ಶಾಸ್ತ್ರೀಯವೆನಿಸುವ ನೃತ್ಯಗಳು ಒಂದಾನೊಂದು ಕಾಲದಲ್ಲಿ ಜನಪದದಿಂದ ಬಂದವುಗಳೇ ಆಗಿವೆ. ಇಂತಹ ಸಮೃದ್ಧಭರಿತ ಸಾಂಗತ್ಯದಲ್ಲಿ ಶಾಸ್ತ್ರೀಯ ನೃತ್ಯಗಳೊಂದಿಗೆ ಪರಸ್ಪರ ಪ್ರಭಾವ-ಅನುಭಾವಗಳ ಬೆಸುಗೆ ಇಂದಿಗೆ ಯಾವ ತೆರನದ್ದು ಎಂದು ಹುಡುಕಿ ಹೊರಟಾಗ ಪ್ರಸಕ್ತ ರೀತಿಗೆ ಸಂವಾದಿಯಾಗಿ ತೆರೆದುಕೊಂಡಿದ್ದೇ ಪ್ರಾದೇಶಿಕ ಮತ್ತು ಜಾನಪದ ನೃತ್ಯಗಳ ಸೃಜನಶೀಲ(?) ನಕಲು !

ಒಂದಾನೊಂದು ಕಾಲಕ್ಕೆ ಕಲಾಪ್ರವರ್ತಕರು ಕೆಲವೊಂದು ನೃತ್ಯಗಳನ್ನು ಶಾಸ್ತ್ರೀಯತೆಯ ಚೌಕಟ್ಟಿಗೆ ಒಳಪಡಿಸಿ ಸ್ಥಾನ ಕೊಟ್ಟ ಮೇಲೆ ನಾನಾ ಕಾರಣಗಳಿಂದ ಅವುಗಳ ಕುರಿತಾಗಿ ಇದ್ದ ನಿಕೃಷ್ಟ ಧೋರಣೆಗೆ ಪೂರ್ಣವಿರಾಮ ಬಿದ್ದದ್ದು ಆಗಲೇ. ಅದರಲ್ಲೂ ನೃತ್ಯ ಸುಧಾರಕರು ಕಲಾಕ್ಷೇತ್ರದ ಅನುಭವಿಗಳು ಈ ಮರ್ಮ ಅರಿತೇ ಜನಪದ ಸಂಸ್ಕೃತಿಯನ್ನು ಒಂದಷ್ಟು ಶಾಸ್ತ್ರೀಯವೆನಿಸುವ ಮಟ್ಟಿಗೆ ಒಗ್ಗಿಸಿಕೊಂಡಿದ್ದರು. ಅದು ಒಂದರ್ಥದಲ್ಲಿ ಪುನರುಜ್ಜೀವನವೂ ಹೌದು. ಜೊತೆಗೆ ಸಮಾನ ಒಲವು, ಸಂಸ್ಕಾರ, ಸಮೃದ್ಧಿ, ಕಲೆಯ ವಿಶಾಲ ಪ್ರಪಂಚದೆಡೆಗೆ ಅಭ್ಯಾಸಿಗಳ ಸಮ್ಯಕ್ ದೃಷ್ಟಿಯನ್ನು ಹರಿಸಲು ಮಾಡಿದ ಪ್ರಯತ್ನವೂ ಹೌದು. ಹಾಗಾಗಿಯೇ ಕೊರವಂಜಿಗಳೆಲ್ಲಾ ಪ್ರದರ್ಶನದ ಒಂದು ಭಾಗವೇ ಆಗಿ, ಶಾಸ್ತ್ರೀಯತೆಯ ಹೂರಣದೊಳಗೆ ಒಪ್ಪ-ಓರಣವಾಗಿ ಸ್ಥಾನ ಕಂಡುಕೊಂಡಿತು. ಕ್ರಮೇಣ ‘ಶಾಸ್ತ್ರೀಯ ಸ್ಪರ್ಶದ ಜನಪದ ಮನೋಭೂಮಿಕೆ’ಯೇ ಆಗಿಹೋಯಿತು. ಇಂದಿಗೂ ಹಲವು ನೃತ್ಯಪ್ರದರ್ಶನಗಳಲ್ಲಿ ಕೊರವಂಜಿಯ ಕರಾಮತ್ತು, ಕೈಚಳಕಗಳಿವೆ.

ಕಾಲ ಸರಿದಂತೆ ಹತ್ತು ಹಲವು ಪ್ರಯೋಗಗಳಿಗೆ, ಕಲಿಕೆಗೆ ಜಾನಪದ ರಂಗ ತನ್ನನ್ನು ಯಾವುದೇ ಬೇಡಿಕೆಗಳಿಲ್ಲದೆ ಸಮರ್ಪಿಸಿಕೊಂಡಿತು. ಒಂದರ್ಥದಲ್ಲಿ ಜಾನಪದದ ಮಹತ್ವ ತಿಳಿಯದ ಶಾಸ್ತ್ರೀಯ ನೃತ್ಯದ ಬಳಕೆದಾರರ ಅಗತ್ಯವೆನಿಸುವ ಸಾಮಗ್ರಿಯೂ ಆಗಿ ! ಕಾಲನ ಮೂಸೆಯಲ್ಲಿ ಎಲ್ಲವೂ ಅಡಗಿ ಹೋಗುವಂತೆ ಭರತನಾಟ್ಯದ ಬಾಹುಗಳಲ್ಲಿ ಉಳಿದ ದೇಸೀ ನೃತ್ಯಗಳ ಸಹಜತೆ ಮರೆಯಾಗಿ ಮಾಯವಾಗುತ್ತಿದೆ ಎಂಬಲ್ಲಿಯವರೆಗೆ ! ‘ನಮ್ಮದು ಶಾಸ್ತ್ರೀಯ, ಗೊತ್ತುಗುರಿ ಇಲ್ಲದ ಜಾನಪದವನ್ನು ಹೇಗೆ ಬಳಸಿಕೊಂಡರೂ ನಡೆಯುತ್ತದೆ’ ಎಂಬ ಉಡಾಫೆಯ ತನಕ !  ಇದರ ಫಲ ; ಖಾಸಗೀಕರಣ, ಉದಾರೀಕರಣ, ಜಾಗತೀಕರಣದಂತೆ ‘ಎಲ್ಲವೂ ಭರತನಾಟ್ಯೀಕರಣ’ !

ಕುಚೋದ್ಯವೆನಿಸೀತು. ಆದರೆ ಇದು ಇಂದಿನ ವಾಸ್ತವ.

ಹೌದು. ಎಲ್ಲಾ ನೃತ್ಯಗಳಲ್ಲೂ ಭರತನಾಟ್ಯದ ಪ್ರಭಾವ ಎದ್ದು ತೋರುತ್ತಿದೆ. ಯಕ್ಷಗಾನಾದಿಯಾಗಿ ಬಳಕೆಯಲ್ಲಿರುವ ಎಲ್ಲಾ ಜನಪದ-ಪ್ರಾದೇಶಿಕ ನೃತ್ಯಗಳನ್ನು ಭರತನಾಟ್ಯವೆಂಬ ಕಬಂಧ ಬಾಹು ಸೆಳೆದು ಅರಿವಿಲ್ಲದಂತೆಯೇ ನುಂಗಿಹಾಕುತ್ತಿದೆ. ಜನಪದ ನೃತ್ಯಗಳ ಚೀತ್ಕಾರ ಎಲ್ಲೋ ಮೂಲೆಯಿಂದೆದ್ದು ಅಲ್ಲೇ ಸುಖಾಸುಮ್ಮನೆ ಅಡಗಿಹೋಗುತ್ತಿದೆ.

ಭರತನಾಟ್ಯದ ಪರವಾಗಿ ವಾದಿಸುವವರಿಗೆ ‘ಅದು ಆ ನೃತ್ಯಪ್ರಕಾರದ ಶಕ್ತಿ ಮತ್ತು ಸೌಂದರ್ಯಾನುಭೂತಿ’. ಆದರೆ ಯಾವುದೇ ಕಲೆ ಇನ್ನೊಂದು ಕಲೆಯನ್ನು ಬಲಿ ತೆಗೆದುಕೊಳ್ಳಲಾರದು ಎಂಬುದೂ ಒಂದು ವಾಸ್ತವ ಸತ್ಯ. ಒಂದೊಮ್ಮೆ ಕಾಲಾಂತರಗಳಲ್ಲಿ ಬಲಿ ತೆಗೆದುಕೊಂಡರೂ ಅದು ಮತ್ತೊಂದು ಕಲೆಯ ಅಸ್ತಿತ್ವದ ಗಟ್ಟಿತನದ ಪ್ರಶ್ನೆಯೂ ಅದರಲ್ಲಡಗಿರುತ್ತದೆ. ಆದರೆ, ಇದನ್ನೂ ಹಾಗೆಂದುಕೊಂಡು ತೆಪ್ಪಗಾದಿರೋ, ಎಚ್ಚರಿಕೆಯ ಕರೆಗಂಟೆ ಮತ್ತೊಮ್ಮೆ ಮೊಳಗದಿರುವಷ್ಟು ಕಾಲಗರ್ಭದೊಳಗೆ ಸೇರಿಹೋಗುತ್ತದೆ. ಅದು ನಿರಂಕುಶ ಪ್ರಭುತ್ವದೆಡೆಗೆ ತಲೆತಗ್ಗಿಸಬೇಕಾದ ಸಲಾಮು. ಒಂದರ್ಥದಲ್ಲಿ ಗುಲಾಮತನವೂ !

ಹಾಗಾದರೆ ಸೌಂದರ್ಯಾನುಭೂತಿ ಇರುವುದು ಹೌದೇ ? ಅಥವಾ ಅದೂ ಕೂಡಾ ಮಾಯಾಪೂತನಿಯೇ?

ಎಲ್ಲವೂ ನಾವಂದುಕೊಂಡಂತಿಲ್ಲ ಎಂದು ಅರಿವಾಗುವುದು ಆಗಲೇ !

ಇಲ್ಲಿ ಸಮಸ್ಯೆಯಿರುವುದು ಜಾನಪದದ್ದಲ್ಲ, ಭರತನಾಟ್ಯವೂ ಅಲ್ಲ. ಅದರ ಅಂತಃಸತ್ವವನ್ನು ಅರಿಯದೆ ಅನುಕರಿಸುವ ಕಲಾವಿದರಲ್ಲಿ, ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಮತ್ತು ವಿಭಿನ್ನ ನೆಲೆಗಟ್ಟಿನಲ್ಲಿ ಅನುಸರಿಸುವ ಮಾಧ್ಯಮಗಳಲ್ಲಿ. ಅವರಿಗೆ ಭರತನಾಟ್ಯವೆಂಬುದು ಪ್ರಚಾರದ ತಂತ್ರ. ಜೊತೆಗೆ ವೀಕ್ಷಕರಿಗೊಂದು ಬಲೆ ಬೀಸುವ ಮಂತ್ರ. ಜೊತೆಗೆ ಜಾನಪದವು ಕಾಲಕಳೆಯುವ ಒಂದು ಪ್ರತಿಷ್ಟೆಯ ವಸ್ತು. ಅದಕ್ಕೊಂದು ಸುಂದರವಾದ ಹೆಸರು ‘ಫ್ಯೂಷನ್’ !

ಕೂಚಿಪುಡಿಯ ಹರಿವಾಣ-ಚೆಂಬಿನ ಸಾಂಪ್ರದಾಯಿಕ ನೃತ್ಯ ಭರತನಾಟ್ಯದಲ್ಲಿ ನೃತ್ತ-ನೃತ್ಯ-ಅಭಿನಯವಿಲ್ಲದ ಕ್ಯಾಂಡಲ್ ದೀಪಗಳ ಸಾಹಸದ ನಡುವೆ ಕಸರತ್ತು, ವ್ಯಾಯಮಗಳ ಚಪ್ಪಾಳೆ ಗಿಟ್ಟಿಸುವ ಮಹೋನ್ನತ(?) ಸಾಂಪ್ರದಾಯಿಕ ಫ್ಯೂಷನ್ ಆಗಿದ್ದು ಹೀಗೆಯೇ ! ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂದರೆ ನಕಲು ಎಂದು ತಿಳಿಯದ ಮಟ್ಟಿಗೆ ! ಈಗಲೂ ಶ್ರೀಸಾಮಾನ್ಯರು ಅಚ್ಚರಿಯಿಂದ ಎಳೆಯರನ್ನು, ಯುವ ನೃತ್ಯಪಟುಗಳನ್ನು ಪ್ರಶ್ನಿಸುವುದನ್ನು ಕೇಳಿದ್ದೇನೆ ; ‘ದೂಪಾರತಿ ಕಲಿತಿಲ್ಲವಾ?’.

ಹಾಗಂತ ಫ್ಯೂಷನ್ ಎಂದಾಕ್ಷಣ ಅಸಡ್ಡೆಯ ಓರೆನೋಟ ಬೇಕಿಲ್ಲ. ಆ ಪ್ರಪಂಚದಲ್ಲಿಯೂ ಅರ್ಥಗರ್ಭಿತ ನಿರೂಪಣೆಗಳಿವೆ, ಅದರದ್ದೇ ಆದ ಸಾಧ್ಯತೆ, ಆನಂದ, ವಿಸ್ತಾರ, ಮಿತಿ, ಒಳಿತು ಮತ್ತು ಅಪಾಯಗಳಿವೆ. ಅದರ ಕುರಿತು ಮತ್ತೊಮ್ಮೆ ಚರ್ಚಿಸಿಯೇನು.

ಇದರ ಜೊತೆಗೆ, ಸಾಂಪ್ರದಾಯಿಕ ಶಾಸ್ತ್ರೀಯ ನೃತ್ಯಪ್ರದರ್ಶನಗಳಲ್ಲೂ ಸಹಜವೆಂಬಂತೆ ಜಾನಪದ ನೃತ್ಯಗಳ ಬಳಕೆ ಸಾಮಾನ್ಯವಾಗಿದೆ. ಆ ಮಟ್ಟಿಗೆ ನಮ್ಮ ಶಾಸ್ತ್ರೀಯ ಕಲಾವಂತರೂ(?) ಒಂದು ಕಾಲಕ್ಕೆ ಜಾನಪದವೆಂದರೆ ಮೂಗುಮುರಿಯುತ್ತಿದ್ದವರು ಈಗ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಕೋಲಾಟ, ಕರಗ, ಬೆಸ್ತರ ನೃತ್ಯ, ಸುಗ್ಗಿ ನೃತ್ಯ, ಹಳ್ಳಿಯ ಕುಣಿತಗಳನ್ನು ಆರಾಮವಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಮಹಾರಾಷ್ಟ್ರ, ಅಸ್ಸಾಂ, ಬಿಹಾರ, ಪಂಜಾಬ್ ಮುಂತಾದ ಸಾಂಪ್ರದಾಯಿಕ ಮತ್ತು ಬುಡಕಟ್ಟು ಜನಾಂಗದ ನೃತ್ಯಗಳು ‘ಕಾಪಿರೈಟ್’ನ್ನು ಯಾವಾಗಲೋ ಬಿಟ್ಟುಕೊಟ್ಟಂತಾಗಿದೆ. ಜೊತೆಗೆ ಅದಕ್ಕೊಂದು ‘ಪ್ರೊಪೆಷನಲ್ ಟಚ್’ ಎಂಬ ಸೀಮೋಲ್ಲಂಘನ ಮಾಡುವ ಗರ್ವ !

ಜಾನಪದ ನೃತ್ಯಗಳಿಗೆ ಇದು ಒಳ್ಳೆಯ ವೇದಿಕೆಯೂ ಹೌದು ಎಂದುಕೊಂಡಿರೋ ಒಮ್ಮೆ ಇಣುಕಿ ; ಮನದಾಳದ ಹುಳುಕುಗಳು ಒಂದೊಂದಾಗಿ ಹೊರಬೀಳುತ್ತವೆ- ‘ಶ್ರೀಸಾಮಾನ್ಯನಿಗೆ ಚೇಂಜ್ ಸಿಗುತ್ತದೆ ! ಭರತನಾಟ್ಯದಲ್ಲಿ ಬೋರು ಹೊಡೆಯುವಾಗ(?) ಫ್ರೆಶ್ ಆಗುತ್ತದೆ. ಒಮ್ಮೊಮ್ಮೆ ಮಕ್ಕಳನ್ನು ವೇದಿಕೆಗೆ ಹತ್ತಿಸಲು ಇದೊಂದು ಕಾರಣ’. ಕಾರಣ ಇಷ್ಟೇ ! ಪ್ರದರ್ಶನದ ನಡುವೆ ಪ್ರೇಕ್ಷಕರು ಕಣ್ಬಿಟ್ಟು ನೋಡುವ ಸಲುವಾಗಿಯೋ, ‘ಢಿಪರೆಂಟ್’ ಅನ್ನಿಸಿಕೊಳ್ಳಲಿಕ್ಕೋ, ಆಕರ್ಷಣೆಗೋ, ವಿನೋದಕ್ಕೋ, ಸಮಯ ಹರಣಕ್ಕೋ ! ; ಅಚ್ಚರಿಯಾದರೂ ಸತ್ಯ.

ತಮ್ಮ ಕೊರತೆಗಳನ್ನು ಮುಚ್ಚಿ ಹಾಕಲು ಬೇರೆಯವರ ಎರವಲು ಪಡೆಯುತ್ತಿದ್ದೇವೆ. ಕುಣಿಯಲು ಬಾರದ ನರ್ತಕಿ ನೆಲ ಡೊಂಕು ಎಂದಿದ್ದು ಮಾತ್ರವಲ್ಲ, ತನ್ನಷ್ಟೇ ಸಂಪದ್ಭರಿತ ಮತ್ತೊಂದು ಕಲೆಯನ್ನು ಅನಾಮತ್ತಾಗಿ ಎತ್ತಿ ತನ್ನ ಮಾತೃ ನೆಲೆಗೂ, ಅನುಕರಿಸಿದ ಕಲೆಗೂ ಯೋಗ್ಯತೆಯೇ ಇಲ್ಲವೆಂದು ಮಾಡುವ ಕುತ್ಸಿತ ಹುನ್ನಾರ !

ಹಾಗಾದರೆ ಇದರಿಂದ ಹಾನಿ ಯಾರಿಗೆ? ನೃತ್ಯಪ್ರದರ್ಶನದಲ್ಲಿ ನಷ್ಟ ಯಾರಿಗೆ? ಮೌಲ್ಯ ಕಡಿಮೆಯಾಗುವುದು ಭರತನಾಟ್ಯದ್ದೋ, ಜಾನಪದ ನೃತ್ಯಗಳದ್ದೋ? ಆಲೋಚಿಸಿ.

ನಂಬುತ್ತೀರಾ! ವಿಷಾದವೋ, ಸಂಭ್ರಮವೋ ಒಟ್ಟಿನಲ್ಲಿ ಇಂತಹ ಪ್ರದರ್ಶನಗಳು ಹೆಚ್ಚಾಗಿ ಜರುಗುತ್ತಿರುವುದು ಕರ್ನಾಟಕದ ಕಲಾವಿದರಲ್ಲೇ !

ಸಾಕಷ್ಟು ಬಾರಿ ನೃತ್ಯ ಶಾಲೆಗಳು, ಅಕಾಡೆಮಿಗಳು, ಕೇಂದ್ರಗಳು ಅಲ್ಲಲ್ಲಿ ಜಾನಪದ ನೃತ್ಯದ ಕುರಿತ ಕಾರ್ಯಾಗಾರಗಳ ಮೂಲಕ ಕಲಾವಂತರಿಗೆ ಶಿಕ್ಷಣ ಕೊಡುವುದನ್ನು ನೋಡುತ್ತೇವೆ. ಆಯಾಯ ವಿಭಾಗದಲ್ಲಿನ ಪರಿಣತರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವುದೂ ಇದೆ. ಅಲ್ಲಿಯವರೆವಿಗೂ ಎಲ್ಲವೂ ಚೆಂದ. ಆದರೆ ಅದರಾಚೆಗೆ ತಮಗನಿಸಿದಂತೆ ಕಲೆಯ ಹರಹುಗಳಲ್ಲಿ ಕೈಯ್ಯಾಡಿಸಿ ‘ಮತ್ತಷ್ಟು ಆಕರ್ಷಕ ಮಾಡುತ್ತೇನೆ’ ಎಂಬ ಕೈಚಳಕವಿದೆಯಲ್ಲಾ, ಅದೇ ರೇಜಿಗೆ ಹುಟ್ಟಿಸುವುದು.

ಇದ್ದದ್ದನ್ನು ಇದ್ದ ಹಾಗೇ ಒಪ್ಪಿಕೊಳ್ಳುವುದರಲ್ಲೇನಿದೆ ತಪ್ಪು? ಅದೇ ಅಲ್ಲವೇ ಕಲೆಯೆಡೆಗಿನ ಪ್ರೀತಿ ಎಂದರೆ ? ತಮಗನಿಸಿದಂತೆ ಬದಲಾವಣೆಗಳನ್ನು ಮಾಡಿಕೊಂಡರೆ ಅಧಿಕಾರವೆನಿಸಿಕೊಂಡೀತೆ ಹೊರತು ಪ್ರೀತಿಯೆಂದಾದೀತೇ? ಶಾಸ್ತ್ರೀಯ ನೃತ್ಯ ಕಲಾವಿದರು ಜಾನಪದ ನೃತ್ಯಗಳಿಗೂ ಶಾಸ್ತ್ರೀಯ ನೃತ್ಯದ ಹೆಜ್ಜೆಗಳು, ಬಾಗುವಿಕೆ-ಬಳುವಿಕೆಗಳನ್ನು ಹೇರಿ ವೈವಿಧ್ಯಮಯತೆ ಪ್ರದರ್ಶಿಸಲು ಹೊರಟರೆ ಜಾನಪದದ ಸಹಜತೆಯನ್ನೇ, ಸಾಂಪ್ರದಾಯಿಕತೆಯನ್ನೇ ಧಿಕ್ಕರಿಸುವುದು ಎಂದರ್ಥವಲ್ಲವೇ? ಎಲ್ಲಿದೆ ಸಹಜತೆಗೆ ಗೌರವ?

ಇತರ ಸಂಸ್ಕೃತಿಯೆಡೆಗೆ ಸೌಹಾರ್ದಯುತ ದೃಷ್ಟಿ, ಅದರ ಅಭ್ಯಾಸ, ಪ್ರದರ್ಶನ ಒಳ್ಳೆಯದೇ. ಆದರೆ ಯಾವ ಮಟ್ಟದಲ್ಲಿ ಮಾಡುತ್ತಿದ್ದೇವೆ, ಕಲೆಯೊಂದಕ್ಕೆ ನ್ಯಾಯ ಒದಗಿಸಲು ಶಕ್ತರೇ ಎಂದು ಯೋಚನೆ ಮಾಡಲು ಎಷ್ಟು ಮಂದಿ ಸಿದ್ಧರಿದ್ದಾರೆ? ಕಲೆಯೊಂದರ ಆಳ-ಅಗಲಗಳನ್ನು ಸ್ವಲ್ಪವಾದರೂ ಅರಿಯದೇ ಮೇಲ್ಕಂಡ ಅಂಶಗಳನ್ನಷ್ಟೇ ಬಾಚಿಕೊಂಡು ಕೊಲ್ಲುವುದು ಯಾವ ಬಗೆಯ ಪುರುಷಾರ್ಥಕ್ಕೆ?

ಮಂಜೀರ ‘ವರ್ಷ ವೈಭವ’- ಸಂಚಿಕೆ 4: ಸಂಪುಟ 3
ಇತ್ತೀಚಿನ ಭರತನಾಟ್ಯ ರಂಗಪ್ರವೇಶಗಳನ್ನೂ ಸೇರಿಸಿದಂತೆ ನೃತ್ಯಗಳ ರಂಗಪ್ರವೇಶದ  ಕಲ್ಪನೆಯೇ ಹೊಲಸೆದ್ದು ಹೋಗಿದೆ. ರಂಗಪ್ರವೇಶಗಳ ಅಸ್ತಿತ್ವದ ಹಿಂದಿನ ಕಾರಣಗಳು ಆಡಂಬರ,  ಪ್ರತಿಷ್ಠೆಯ ಮೂಸೆಯೊಳಗೆ ಕಾಣೆಯಾಗಿದೆ. ಇಂತಹ ಕಣ್ಣುಮುಚ್ಚಾಲೆಯ ನಡುವೆಯೇ ಅದೊಂದು ದಿನ ಎಳೆಯ  ಹುಡುಗಿಯ ರಂಗಪ್ರವೇಶದ ಭರ್ಜರಿ ಆಹ್ವಾನ ನನ್ನ ಕೈಸೇರಿತ್ತು. ನೋಡೋಣವೆಂದು ಹೋದರೆ ಅದು  ‘ಶಾಸ್ತ್ರೀಯ ನೃತ್ಯ ರಂಗಪ್ರವೇಶ’ ! ಭರತನಾಟ್ಯ, ಕಥಕ್, ಮೋಹಿನಿಯಾಟ್ಟಂ, ಕೂಚಿಪುಡಿ, ಒಡಿಸ್ಸಿ,  ಮಣಿಪುರಿ..ಹೀಗೆ ಎಲ್ಲಾ ನೃತ್ಯಸಂಪ್ರದಾಯಗಳ ಒಂದೊಂದು ತುಣುಕುಗಳ ಬಫೆ ! ಗುರುಗಳು ಕಲಿತ ಯಥಾವತ್  ಗಿಣಿಪಾಠದ ಹೊಸಪ್ರಯೋಗ ಶಿಷ್ಯೆಯಿಂದ ! ಸಾಂಪ್ರದಾಯಿಕ ಮಾರ್ಗ ಪದ್ಧತಿಯನ್ನು ಅನುಸರಿಸುವುದು ಬಿಡಿ,  ರಸಾನುಭವದ ಒಂದು ಮೆಟ್ಟಿಲನ್ನೂ ಏರಲಾಗದ ಭಂಡತನ! ಒಂದು ರೀತಿಯಲ್ಲಿ ಎಲ್ಲೂ ಇಲ್ಲದ,  ತಂತ್ರಗಳಿಲ್ಲದೇ ಅತಂತ್ರವಾದ ಎಡಬಿಡಂಗಿತನ ! ಪ್ರಬುದ್ಧತೆಯ ಮಟ್ಟ ನಿರ್ಧಾರ ಮಾಡುವುದರಲ್ಲಿ  ಪ್ರತಿಷ್ಟೆಯ ಮಾನದಂಡವಿರುವುದಾದರೂ ಇಂತಹ ಚೌಕಾಸಿ ಬುದ್ಧಿ ಬೇಕೇ ಎಂದು ಕಂಡದ್ದಂತೂ ಹೌದು ! ಬಹುಷಃ  ಕಥಕ್ಕಳಿಯ ಆಹಾರ್ಯ ( ವೇಷಭೂಷಣ) ಮತ್ತು ಕಲಿಕಾ ಸಂವಿಧಾನವೂ ಸುಲಭವಾಗಿರುತ್ತಿದ್ದರೆ ಅದನ್ನೂ  ಬಿಡುತ್ತಿರಲಿಲ್ಲವೇನೋ !

ಕಲಾಸಿಂಧುವಿನಿಂದ ನಾವು ತೆಗೆದುಕೊಳ್ಳುವುದು ಕೇವಲ ಬಿಂದುಗಳನ್ನಷ್ಟೇ ! ಆಯ್ದ ಆ  ಬಿಂದುವನ್ನು ಸರಿಯಾಗಿ ಪಡೆದುಕೊಳ್ಳುವ ಜಾಣ್ಮೆ, ಉಳಿಸಿಕೊಳ್ಳುವ ತಾಳ್ಮೆ ನಮ್ಮಲಿಲ್ಲ. ದಿನ  ಬೆಳಗಾಗುವ ಮೊದಲು ಎಲ್ಲವನ್ನೂ ಕಲಿತು ಎಲ್ಲದರಲ್ಲೂ ಉತ್ಕೃಷ್ಟರೆಂದು ಹೇಳಿಸಿಕೊಳ್ಳುವ ಚಪಲ.  ಕೊನೆಗೆ ಎಚಿಛಿಞ oಜಿ ಂಟಟ ಎಂದು ಹೇಳಿಸಿಕೊಳ್ಳುವ ಹಟದಲ್ಲಿ ಒಚಿsಣeಡಿ oಜಿ ಓoಟಿe!

ಲಲಿತಕಲೆಗಳನ್ನು ಕಲಿಯಬೇಕಾದದ್ದು ಮಾನವನ ಸಾಂಸ್ಕೃತಿಕ, ಮತ್ತು ಸಂಸ್ಕಾರದ ಸಲುವಾಗಿನ  ಅವಶ್ಯಕತೆಗಳಲ್ಲೊಂದು. ಅದರಲ್ಲೂ ಸೋದರ ಕಲೆಗಳ ಕುರಿತಾದ ಜ್ಞಾನ ಮತ್ತು ಅವುಗಳ ಕಲಿಯುವಿಕೆ  ಅಪೇಕ್ಷಣೀಯ ಅಂಶವೇ ಹೌದು. ಕಲೆಯೊಂದರ ಇತಿಹಾಸ, ಸ್ಥಿತ್ಯಂತರ, ಪ್ರಭಾವ ಮತ್ತು ಸಮಕಾಲೀನ  ಪ್ರಜ್ಞೆಯನ್ನು ಅರಿತುಕೊಳ್ಳಬೇಕೆಂದರೆ ಅದು ಅಗತ್ಯವೂ ಕೂಡಾ.

ಒಂದು ಕಲೆಯ ವಿಸ್ತಾರವನ್ನು ಅಭ್ಯಸಿಸಲು, ಕಲಿಸಲು ಕನಿಷ್ಟಪಕ್ಷ ೧೦ ವರ್ಷಗಳನ್ನಾದರೂ  ತೆಗೆದುಕೊಳ್ಳಬೇಕು ಎಂಬುದನ್ನು ಪೋಷಕರಾದಿಯಾಗಿ ಗುರುಗಳೂ ಮನದಟ್ಟು ಮಾಡಿಕೊಂಡಿಲ್ಲ. ಹೀಗಿರುವಾಗ  ನೃತ್ಯ ತರಗತಿ ಸೇರಿದ ೪-೫ ವರ್ಷಗಳಲ್ಲೇ ಏಳೆಂಟು ನೃತ್ಯಪ್ರಕಾರಗಳಲ್ಲಿ ಪಾಂಡಿತ್ಯರಾಗಬೇಕೆಂದರೆ  ಸುಲಭದ ಮಾತೇ? ಒಂದೋ ಅಂತಹ ಕಲಾವಿದೆ ಅಭಿನವ ಸರಸ್ವತಿಯಾಗಿಯೇ ಜನ್ಮ ತಾಳಿರಬೇಕು. ಇಲ್ಲವೇ  ಬೃಹಸ್ಪತಿಯೇ ಆಗಿರಬೇಕು.

ಒಂದನೇ ಕ್ಲಾಸೋ, ನಾಲ್ಕನೇ ಕ್ಲಾಸೋ ಕಲಿಯುವ ಮಗುವನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ  ಬರೆಸುವುದೆಂದರೆ ಎಷ್ಟು ಹಾಸ್ಯಾಸ್ಪದ ಅಲ್ಲವೇ? ಬೌದ್ಧಿಕ ಸಾಮರ್ಥ್ಯದ ಮಾತಿದ್ದರೆ ಅದು  ಒತ್ತಟ್ಟಿಗಿರಲಿ. ಆದರೆ ಕಲಿಯುವ ಮಕ್ಕಳೆಲ್ಲರೂ ಅದನ್ನೇ ಆಚರಿಸಬೇಕೆಂದರೆ ಅದು ಮೂಢತನವನ್ನಲ್ಲದೆ  ಬೇರೇನೆಂದು ಹೇಳಲು ಸಾಧ್ಯ ? ಕಲೆಗಳ ನಿಟ್ಟಿನಲ್ಲೂ ಮಕ್ಕಳನ್ನು ತಯಾರು ಮಾಡುತ್ತಿರುವುದು ನಾವು  ಹೀಗೆಯೇ ! ಕಲೆಯೊಂದರ ಸಂತೃಪ್ತ ಅನುಭವಗಳಿಗೆ ತೆರೆದುಕೊಳ್ಳುವಷ್ಟೂ ಸಮಯ ಒದಗಿಸದೇ ಹೋಗುವುದು  ಬೆಳವಣಿಗೆಯ ನಿಟ್ಟಿನಲ್ಲಿ ಆಗುವ ದುರಂತ. ಒಟ್ಟಿನಲ್ಲಿ ‘ಇಂತಿಷ್ಟು ವರ್ಷದಲ್ಲಿ ಇಷ್ಟೆಲ್ಲಾ  ಕಲಾಪ್ರಕಾರಗಳನ್ನು ಕಲಿತಿದ್ದಾರೆ’ ಎಂದು ಹೇಳಿಕೊಳ್ಳುವ ತೆವಲಿಗೆ ಬೆಲೆ ತೆರಬೇಕಾಗುವುದು ಕೊನೆಗೆ  ಕಲೆಯೇ ! ಪರಿಣಾಮ ಅಂತ್ಯಕ್ಕೆ ದೊರಕುವುದು ಅದರ ಛಿದ್ರಗೊಂಡು ಹೋದ ಅಸ್ತಿಗಳು ಮಾತ್ರ  !

ಅಷ್ಟಕ್ಕೂ ಕಲೆಯ ನೆಲೆಯನ್ನು ಕಟ್ಟಿಕೊಂಡು ಮಾಡಬೇಕಾಗಿರುವುದೇನು ಎಂಬ ನಿರ್ಧರಿತ  ನಿರ್ಲಕ್ಷ್ಯವೇ ನಮ್ಮ ಕೊಂಡಿಗಳನ್ನು ಕಳಚುವಂತೆ ಮಾಡುತ್ತದೆ. ಕೊನೆಗೆ ಹೊಂಡಕ್ಕೆ ಬಿದ್ದರೂ  ಆಶ್ಚರ್ಯವಿಲ್ಲ. ಒಂದು ಕಲೆಯನ್ನು ಒಂದಿಷ್ಟು ಪ್ರೌಢತೆಯ ಹಂತಕ್ಕೂ ಕಲಿಯದೆ ಎಲ್ಲವನ್ನೂ ಒಮ್ಮೆಲೇ  ಕಲಸಿ ಬಾಯಿಗೆ ತುರುಕಿಕೊಳ್ಳುವ ಧಾವಂತದಲ್ಲ್ಲಿ ನಾವು ಮಾಡುತ್ತಿರುವುದು ಏನು  ತಿನ್ನುತ್ತಿದ್ದೇವೆಂದೇ ತಿಳಿಯದ ಅವಸರ ಊಟ ! ಎಲೆಯಲ್ಲಿ ಬಡಿಸಿದ ಷಡ್ರಸೋಪೇತ ಭೋಜನದ  ಭಕ್ಷ್ಯಗಳನ್ನು ನೋಡುವ, ಸವಿಯುವ ರಸಿಕತೆಯಾಗಲೀ, ಭಾಗ್ಯವಾಗಲೀ ಇಲ್ಲ. ಸುಳಿವು ಕಂಡದ್ದೇ ತಡ  ರಾಕ್ಷಸರಂತೆ ತುಂಬಿಕೊಂಡು ತಿಂದು, ಜೀರ್ಣವಾಗಲೂ ಬಿಡದೆ ಅರೆಬರೆಯಾಗಿ ಕಾರಿಕೊಳ್ಳುವುದೊಂದೇ ಇಂದಿನ  ಪ್ರತಿಭೆ ! ಎಷ್ಟು ದಿನ ಉಳಿದೀತು ಆರೋಗ್ಯ?

ಕಲೆಯನ್ನು ಪ್ರತಿಷ್ಠೆಗಾಗಿ ಬಳಸಿಕೊಳ್ಳುವ ಹುಂಬತನದಲ್ಲಿ ಮತ್ತೊಂದೆಡೆ ನಾವು  ಕೊಲ್ಲುತ್ತಿರುವುದು ಮಕ್ಕಳ ಬಾಲ್ಯವನ್ನು ! ಈ ಕಾರಣಕ್ಕೋ ಏನೋ ಮಹಾನಗರಿಗಳನ್ನೂ ಒಳಗೊಂಡಂತೆ ಪುಟ್ಟ  ಪುಟ್ಟ ಪಟ್ಟಣಗಳಲ್ಲೂ ಮಕ್ಕಳು ಪೋಷಕರಿಂದಲೇ ಹಿಂಸೆಗೊಳಗಾಗುತ್ತಾರೆ. ವಯೋಸಹಜ ಆಸಕ್ತಿಗಳನ್ನು  ಕೊಂದುಕೊಂಡು ಮತ್ತೊಬ್ಬರ ಸಂತೃಪ್ತಿಗೆ, ಒತ್ತಡಕ್ಕೆ ಬದುಕುತ್ತಾರೆ. ಚಿತ್ರಕಲೆ, ಡ್ಯಾನ್ಸ್,  ಸಂಗೀತ, ಜಾನಪದ, ಕರಾಟೆ…, ಹೀಗೆ ತಮ್ಮ ಮಕ್ಕಳು ಕಲಿಯುವ ಪಟ್ಟಿಗಳನ್ನಿಡುವ, ಪೋಷಕರ ಕಣ್ಣಿಗೆ  ಮಕ್ಕಳ ಬಾಲ್ಯ ನಗಣ್ಯವಾಗಿ ಹೋಗುತ್ತಿದೆ. ಬಾಲಪ್ರತಿಭೆಗಳೆಂದು ಕರೆಸಿಕೊಳ್ಳುವ ಕೆಟ್ಟ ಹಸಿವು ಅದು  ! ಪರಿಣಾಮ, ಕಲೆಯ ಮಾರಾಟ ! ಮುಂದೊಮ್ಮೆ ರಸಾನುಭವವೇ ಕಾಣೆ !

ಆದಾಗ್ಯೂ ಇಂದಿನ ಮಕ್ಕಳಲ್ಲಿ, ಯುವಕರಲ್ಲಿ ; ಅಲ್ಲಲ್ಲಿ ವಿವಿಧ ಕಲಾಪ್ರಕಾರಗಳ  ಒಳನೋಟಗಳನ್ನು ಅರಗಿಸಿಕೊಳ್ಳುವ ತುಡಿತವಿದೆ ಎಂಬುದೇ ಒಂದು ಸಮಾಧಾನ.

ಕಾಲ ಯಾರಿಗೂ ನಿಲ್ಲುವುದಿಲ್ಲ. ಅಂತೆಯೇ ಕಲೆಯೂ ನಿಂತ ನೀರಲ್ಲ. ಅವರವರ  ಅಭಿರುಚಿಗಳಿಗನುಸಾರವಾಗಿ ಅವರವರ ಅನುಕೂಲಗಳಲ್ಲಿ, ಕಲೆಯ ಕುರಿತಾದ ಸಮಗ್ರ ದೃಷ್ಠಿಯಿದ್ದಾಗಲಷ್ಟೇ  ಅದರೆಡೆಗಿನ ಪ್ರತಿಯೊಂದು ನೋಟಗಳೂ ಸುಂದರವೆನಿಸೀತು. ಒಳ-ಹೊರಗನ್ನು ಸೂಕ್ಷ್ಮವಾಗಿ ನೋಡಿದಾಗಲೇ  ಪ್ರತಿಯೊಂದು ಕಲೆಯಲ್ಲೂ ಆಹ್ಲಾದ ಕಂಡೀತು. ಇರುವುದನ್ನು ಇದ್ದ ಹಾಗೆ ಸಮಯೋಚಿತ  ಬದಲಾವಣೆಗಳನ್ನನ್ನುಸರಿಸಿ ಒಪ್ಪಿಕೊಂಡರಂತೂ ವಿಶ್ವಸನೀಯ ಮನೋಭಾವ ಬೆಳೆಯಲು ಸಾಧ್ಯ. ಇಲ್ಲದಿದ್ದರೆ  ಕಲೆಯೆಡೆಗೆ ಕೊಂಚ ದೃಷ್ಠಿ ಹರಿಸುವ ಅವಕಾಶವನ್ನೂ ಕಳೆದುಕೊಳ್ಳುತ್ತೇವೆ. ಕಿರೀಟವನ್ನು  ತೊಟ್ಟುಕೊಳ್ಳುವ ಭರದಲ್ಲಿ ಅಡಿಪಾಯiವೇ ಕುಸಿದುಹೋಗಿರುತ್ತದೆ. ನೆಲೆಯನ್ನು ಗಟ್ಟಿ ಮಾಡಿಕೊಳ್ಳುವ  ಹಂತಕ್ಕೆ ನಿಂತ ನೆಲವೇ ಬಾಯ್ಬಿಟ್ಟಿರುತ್ತದೆ.

-ಸಂಪಾದಕರು

manorama@noopurabhramari.com

ಮಂಜೀರ ಸಂಚಿಕೆ 3: ಸಂಪುಟ 3
‘ಯಕ್ಷಗಾನವನ್ನು ನೋಡ್ಬೇಡಿ, ಒಂದು ವೇಳೇ ಕಲಿತರಂತೂ ನಿಮಗೆ ನೃತ್ಯ ಕಲಿಸಲಾಗುವುದಿಲ್ಲ, ಮತ್ತು ನೃತ್ಯಕ್ಕೆ ಅಹ‌ರೆನಿಸಿಕೊಳ್ಳಬೇಕಾದರೆ ಅಷ್ಟು ಸುಲಭವೂ ಆಗುವುದಿಲ್ಲ. ಯಕ್ಷಗಾನವನ್ನು ಕಲಿತರೆ ನೃತ್ಯ ಶೈಲಿ ಹಾಳಾಗುತ್ತದೆ. ಅದರ ಭಾವವೇ ಆಳವಾಗಿ ಬೇರೂರುತ್ತದೆ. ನೃತ್ಯದಲ್ಲಿರುವ ಲಾಸ್ಯದ ಅಂಶ‌ಗಳನ್ನು ಯಕ್ಷಗಾನವೆಂಬ ಗಂಡು ಕಲೆ ನುಂಗಿ ಹಾಕಿಬಿಡುತ್ತದೆ ! ‘ – ಇಂತಹದೊಂದು ಹೇಳಿಕೆ ಕಲಾವಲಯದಲ್ಲಿ ಕೇಳಿಬರುತ್ತಲಿದೆೆ. ಅದರಲ್ಲೂ ಶೈಲಿ, ಸಂಪ್ರದಾಯಗಳಿಗೆ ಬದ್ಧರಾಗಿರುವ ಮಂದಿಗಳಲ್ಲಿ ಇದರ ಪ್ರಮಾಣ ಹೆಚ್ಚು. ಕೊನೆಗೆ ಎಷ್ಟು ತೀವ್ರವೆಂದರೆ ನೃತ್ಯದಲ್ಲಿ ಮಾಡುವ ಯಾವುದೇ ರೀತಿಯ ಭಾವ ಪ್ರದರ್ಶನವೂ ಕೂಡಾ ಯಕ್ಷಗಾನದ ಛಾಯೆಯಾಗಿಯೇ ತೋರುವುದು ! ಹುಚ್ಚೋ, ಬೆಪ್ಪೋ, ಅತಿರೇಕವೋ ನಾನರಿಯೆ !

ಆಘಾತ‌ವೆಂದರೆ ಇಂತಹ ಮನೋಪ್ರವೃತ್ತಿ ಭರತನಾಟ್ಯ ಅಭ್ಯಾಸಿಗಳನ್ನೇ ಇತ್ತೀಚೆಗೆ ಹೆಚ್ಚಾಗಿ ಕಾಡುವುದು! ಇಂತಹ ಬೋಧನೆಗೆ ಅಧಾರಗಳೇನು? ಹೌದೇ? ಹೇಗೆ? ಯಾಕೆ ನೋಡಬಾರದು ಎಂಬ ಪ್ರಶ್ನೆಗಳು ಉದ್ಭವವಾಗುವ ಹೊತ್ತಿನಲ್ಲೇ ಅದನು ಸಮರ್ಥಿಸಿಕೊಳ್ಳುವ ಗುರು-ಕಲಾವಿದರು ಮತ್ತಷ್ಟು ತಮ್ಮ ವಾದಗಳಿಗೇ ಅಂಟಿಕೊಳ್ಳುತ್ತಿರುವುದು ನೃತ್ಯಕ್ಕಿಟ್ಟುಕೊಳ್ಳುತ್ತಿರುವ ಕಪ್ಪುಚುಕ್ಕಿ ಎನ್ನದೇ ಬೇರೆ ವಿಧಿಯಿಲ್ಲ.

ಭರತನಾಟ್ಯವನ್ನು ಕಲಿತವರು ಯಕ್ಷಗಾನವನ್ನು ನೋಡಬಾರದು, ಮಾಡಬಾರದೆಂದರೆ ಹೇಗೆ ? ಅಂತಹ ಕಡ್ಡಾಯದ ಕ್ರಮಗಳಿದ್ದದ್ದೇ ಆದಲ್ಲಿ ಯಾವ ಶಾಸ್ತ್ರ ಗ್ರಂಥಗಳಲ್ಲಿದೆ? ಹಾಗೊಂದು ವೇಳೆ ಇದ್ದರೂ ಅದು ಕಲೆಯೆಂದು ಹೇಗೆ ಕರೆಸಿಕೊಂಡೀತು ? ತುಲನಾತ್ಮಕ ದೃಷ್ಠಿಯಿಲ್ಲದೆ ಕಲಾಪ್ರಕಾರಗಳ ಒಳಹೊರಗನ್ನು ತಿಳಿಯುವ ಸಾಧ್ಯತೆ ಹೇಗೆ?- ಎಂಬಿತ್ಯಾದಿ ಸವಾಲುಗಳನ್ನೆಸೆದರೆ ಬಹುಷಃ ವಾದಿಗಳಲ್ಲಿ ಉತ್ತರವಿರಲಿಕ್ಕಿಲ್ಲ; ವಿತಂಡ ವಾದಗಳ ಹೊರತು ! ‘ನಮಗಿಂತ ಹಿರಿಯರಿಲ್ಲ’ ಎಂಬ ಧೋರಣೆ, ‘ಮತ್ತೊಂದು ಕಲೆ ನಮ್ಮ ಸೌಂದರ್ಯವನ್ನು ಭ್ರಷ್ಟಗೊಳಿಸುತ್ತದೆ’ ಎಂಬ ಕೊಂಕು ಮಾತು, ‘ನಮ್ಮಲ್ಲಿಲ್ಲದ್ದದ್ದು ಅದರಲ್ಲೇನಿದೆ’ ಎಂಬ ಅಸಡ್ಡೆಯೇ ನಮ್ಮ ಸಂಸ್ಕೃತಿಯನ್ನು ಧಿಕ್ಕರಿಸುತ್ತಿದೆ ಎಂದೀಗ ಹೇಳದೆ ವಿಧಿಯಿಲ್ಲ.

ಕಲೆಯೇ ಸೌಂದರ್ಯ. ಅದೀಗ ಮತ್ತೊಂದು ಕಲೆಯನ್ನು ಭ್ರಷ್ಟಗೊಳಿಸುತ್ತದೆ ಎಂದರೆ ಅದು ಕಲೆಯೆಂದು ಕರೆಸಿಕೊಳ್ಳಲು ಅಹ‌ವಾಗಿದ್ದಾದರೂ ಹೇಗೆ? ನಗಬೇಕೋ..? ಅಳಬೇಕೋ..?

ಹಾಗೆ ನೋಡಿದರೆ ಇಂತಹ ಧೋರಣೆ ಇತರ ಸೋದರ ಕಲೆಗಳನ್ನು ಅಷ್ಟಾಗಿ ಆವರಿಸಿಲ್ಲ ! ಬದಲಾಗಿ ಒಟ್ಟಿಗೇ ಹಲವು ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಕಲಿಯುವುದು, ಪದವಿಗಳನ್ನು ಪಡೆಯುವುದು, ಒಂದೇ ರಂಗಮಂಚದಲ್ಲಿ ಶಾಸ್ತ್ರೀಯ ನೃತ್ಯ ರಂಗಪ್ರವೇಶವೆಂಬ ಹೊಸ ಕ್ರಮಕ್ಕೆ ಸಾಕ್ಷಿಯಾಗುವುದು ಇಂದಿನ ಸಾಂಸ್ಕೃತಿಕ ರಂಗದಲ್ಲಿ ಪ್ರತಿಷ್ಠೆಯ, ಪ್ರತಿಭೆಯ ವಿಷಯ. ಏನೇ ಇರಲಿ, ಕಥಕ್ಕಳಿ ಒಮ್ಮೊಮ್ಮೆ ಮಣಿಪುರಿಯನ್ನುಳಿದು ಉಳಿದೆಲ್ಲಾ ನೃತ್ಯಪ್ರಕಾರಗಳೂ ಒಟ್ಟಿಗೇ ‘ತುಣುಕು ವೈಭವ’ಗಳನ್ನು ಕಾಣುತ್ತವೆ.

ಅಷ್ಟಕ್ಕೂ ಭರತನಾಟ್ಯಕ್ಕೆ ಸಮಕಾಲೀನವಾಗಿ ತೆರೆದುಕೊಂಡ ಅದೆಷ್ಟೋ ಪ್ರದರ್ಶಕ ಕಲೆಗಳು ನಮ್ಮ ಭಾರತೀಯ ಸಂಸ್ಕೃತಿಯ ಮೂಲಸ್ರೋತವಾಗಿದೆ. ಆದರೆ ಯಕ್ಷಗಾನದಂತಹ ಶಾಸ್ತ್ರೀಯ ಮಾನದಂಡ ಪಡೆದುಕೊಳ್ಳುತ್ತಿರುವ ಮೇಲ್ಮಟ್ಟದ ಅಭಿವ್ಯಕ್ತಿಯೆಂದು ಕರೆಸಿಕೊಂಡ ವಿದ್ವತ್ ಪೂರ್ಣ ಕಲೆಗೆ ಇಂದಿಗೂ ಅಂಟಿದ ಕಳಂಕ ನಿವಾರಣೆಯಾಗಿಲ್ಲ. ಒಂದು ನಿಟ್ಟಿನಲ್ಲಿ ಅದರಲ್ಲಿನ ಅಭಿವ್ಯಕ್ತಿಗಳ ಸಮಗ್ರತೆಯ ಕೊರತೆಯೂ ಒಂದು ಕಾರಣ.

ಒಂದು ಕಲೆಯಿಂದ ಮತ್ತೊಂದು ಕಲಾಪ್ರಕಾರ ವಿಭಿನ್ನ. ಹೌದು. ಮತ್ತು ಆದರೆ ಒಂದನ್ನು ಅರಿಯುವಲ್ಲಿ ಹೆಜ್ಜೆಯಿಟ್ಟ ಮನಸ್ಸಿಗೆ ಮತ್ತೊಂದನ್ನು ಅರಿಯುವುದು ಕಷ್ಟದ ಕೆಲಸವೇನಲ್ಲ. ಒಂದುರೀತಿಯಲ್ಲಿ ಅಂತಹ ಅರಿಯುವಿಕೆಗಳೇ ಕಲೆಯ ಕುರಿತಾದ ಆಳ ಅಧ್ಯಯನಕ್ಕೆ ನಾಂದಿ ಹಾಡುತ್ತವೆ. ಉತ್ತಮವೆನಿಸಿದ್ದು ಯಾವಾಗಲೂ ಮತ್ತೊಂದು ಒಳ್ಳೆಯದನ್ನೂ ಕಣ್ಬಿಟ್ಟು ನೋಡುತ್ತದೆ. ತನ್ನಲ್ಲಿಲ್ಲದ ಎಷ್ಟೋ ಅಂಶಗಳನ್ನು ಅಳವಡಿಸಿಕೊಳ್ಳುತ್ತದೆ. ಜೀವನಾನುಭವಕ್ಕೆ ಮಾದರಿ ಪ್ರತಿಮೆಗಳನ್ನು ಒದಗಿಸಿಕೊಡುತ್ತಿವೆ. ಇಂತಹ ಕೊಡು-ಕೊಳ್ಳುವಿಕೆಯ ಬಂಧಗಳು ಇರುವುದರಿಂದಲೇ ಇಂದಿಗೂ ಭಾರತದ ಅದೆಷ್ಟೋ ಕಲಾಪ್ರಕಾರಗಳು ಇಂದಿಗೂ ಅರಳಿ ನಿಂತದ್ದು. ಸೋದರ ಕಲೆಗಳನ್ನು ಕಲಿಯುವುದರಿಂದ ಮತ್ತು ಪರಸ್ಪರ ವಿಶಿಷ್ಟ ಅಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಸೃಜನಶೀಲ ಪ್ರಕ್ರಿಯೆ ನಿರಂತರ ಚಾಲನೆಯಲ್ಲಿರುತ್ತದೆ. ಒಳಿತಿನ ಅನುಕರಣೆ, ಅನುಸರಣೆಯೇ ಒಂದು ಅನನ್ಯ ಅನುಭವ.

‘ಆನೋ ಭದ್ರಾಃ ಕೃತವೋ ಯಂತು ವಿಶ‌‌್ವತಃ’

ಕಲೆ ಬೆಳೆದು ಬಂದದ್ದೇ ಲೋಕೋಭಿನ್ನರುಚಿಗಾಗಿ. ವೈವಿಧ್ಯತೆಗಳೇ ಸಾಂಸ್ಕೃತಿಕ ಸಂದರ್ಭದ ಜೀವಾಳ. ವೈವಿಧ್ಯತೆಗಳೇ ಜೀವನದ ಬಂಡವಾಳ. ಮತ್ತು ಆ ವೈವಿಧ್ಯತೆಯೊಳಗೊಂದು ಏಕತೆಯ ದೃಷ್ಠಿಯಿದ್ದರಲ್ಲವೇ ಸಮಷ್ಠಿಯು ಸ್ವರ್ಗ ! ಏಕತಾನತೆಯ ಸ್ವರೂಪ ಚೆಂದವೆನಿಸಿದರೂ ಅದರ ಆಯುಷ್ಯ, ಅನುಭೂತಿ ಕೆಲವೇ ಕ್ಷಣ ಅಥವಾ ದಿನ. ಆದ್ದರಿಂದ ಇಂತಹ ವೈವಿಧ್ಯತೆೆಯನ್ನೇ ನಿರಾಕರಿಸಿದರೆ ಸಾಂಸ್ಕೃತಿಕ ರಂಗಕ್ಕ್ಕೆ ನಮ್ಮನ್ನು ನಿಕಟರನ್ನಾಗಿಸುವುದಾದರೂ ಹೇಗೆ? ಪ್ರಸ್ತುತವಾಗುವುದಾದರೂ ಎಂತು?

ಹಾಗಾದರೆ ಕಲೆಯ ವಿಭಾಗೀಕೀರಣ ಬೇಡವೇ? ಬೇಕು. ನಮ್ಮ ಅರಿವಿನ ಹೊಂದಾಣಿಕೆಗಾಗಿಯಷ್ಟೇ ಇಂತಹ ಪ್ರತ್ಯೇಕಿಸಿಕೊಂಡು ನೋಡುವ ದೃಷ್ಠಿಯಿರಬೇಕೇ ವಿನಃ ಅವುಗಳಲ್ಲೇ ಮೇಲು-ಕೀಳು ಎಂಬಿತ್ಯಾದಿ ಕಲಿಯುವುದಕ್ಕಲ್ಲ. ಹಾಗೆ ನೋಡಿದರೆ, ಮೂಲದಲ್ಲಿ ಎಲ್ಲವೂ ಒಂದೇ ಆಗಿದ್ದ ಪ್ರದರ್ಶಕ ಕಲೆಗಳು ಕಾಲಾಂತರದಲ್ಲಿ ದೇಶ, ಭಾಷೆ, ಸಂಸ್ಕೃತಿಗಳಿಂದ ಪ್ರಭಾವಿಸಲ್ಪಟ್ಟು ವಿವಿಧ ಚೌಕಟ್ಟುಗಳನ್ನು, ರೂಪುರೇಷೆಯನ್ನು ಪಡೆಯಿತು. ವಿಭಿನ್ನ ಕಾಲಘಟ್ಟಗಳಲ್ಲಿ, ವಿವಿಧ ವಸ್ತುಸ್ಥಿತಿಗಳಲ್ಲಿ ಪ್ರತಿಯೊಂದು ಕಲೆಯೂ ಮತ್ತೊಂದರಿಂದ ಪ್ರಭಾವಿಸಲ್ಪಟ್ಟವೇ ಆಗಿದೆ. ಅದು ರಚನೆಂಲ್ಲಾಗಲೀ, ಪುನರುತ್ಥಾನದಲ್ಲಾಗಲೀ, ಬೆಳವಣಿಗೆಯಲ್ಲಾಗಲೀ ಇರಬಹುದು. ಹಾಗಿದ್ದಾಗ ಮೂಲದಲ್ಲಿ ಎಲ್ಲವೂ ಒಂದೇ ಆಗಿದ್ದ ವಿವಿಧ ಶೈಲಿಗಳು, ಪ್ರಕಾರಗಳನ್ನು ಕೇಳ-ಮೇಲ್ಮಟ್ಟ ಎಂಬ ಅಂತರದಲ್ಲಿ ನೊಡುವ ಕ್ರಮ ಹಿತವೇ? ಎಲ್ಲವೂ ನಾಟ್ಯಶಾಸ್ತ್ರದ ಆಧಾರದಲ್ಲೇ ರಚನೆಗೊಂಡಿದೆಯೆಂದಾದ ಮೇಲೆ ಅರಿವಿನ ವಿಸ್ತರಣೆಯಲ್ಲಿ ಈ ಬೇಧ ಏತಕ್ಕೆ?

ಅವರವರ ಅಭಿರುಚಿಗೆ ತಕ್ಕಂತೆ ಅವರವರ ದೃಷ್ಠಿ ; ನಿಜ. ಆದರೆ ಅಂತಹ ವೈಯಕ್ತಿಕ ದೃಷ್ಠಿಕೋನಗಳನ್ನು ಸಾರ್ವತ್ರೀಕರಿಸುವ ಮನಸ್ಸೇ ಸಾಂಸ್ಕೃತಿಕ ರಂಗದ ದೊಡ್ಡ ಅಪಾಯ ! ನಮ್ಮದೆನಿಸಿಕೊಂಡ ಕಲೆಯೆಡೆಗೆ ಪ್ರೀತಿ, ಇತರ ವಿಷಯಗಳಲ್ಲಿ ಗೌರವ ಅಪೇಕ್ಷಣೀಯವಲ್ಲವೇ?

ಈ ನಿಟ್ಟಿನಲ್ಲಿ ನೂಪುರ ಭ್ರಮರಿ ಕೇವಲ ಭರತನಾಟ್ಯಕ್ಕಾಗಿ ಮಾತ್ರ ಮೀಸಲಾದ ಪತ್ರಿಕೆಯಲ್ಲ ಎಂಬುದು ನಮ್ಮ ಪರಿಚಯದಿಂದಲೇ ನಿಮಗೆ ವೇದ್ಯವಾದದ್ದು ನಮ್ಮ ಪುಣ್ಯ

ಯಾವುದೇ ಒಂದು ಕಲೆ ಇನ್ನೊಂದು ಕಲೆಯ ಅಂಶಗಳನ್ನು ನುಂಗಿ ಹಾಕಬಲ್ಲುದು ಅಂತಾದರೆ ಅದು ಆ ಕಲಾಪ್ರಕಾರದ ಸತ್ವಕ್ಕೆ ಸಂಬಂಧಿಸಿದ ಸವಾಲು ಮತ್ತು ಅಸ್ತಿತ್ವದ ಪ್ರಶ್ನೆ. ಅಷ್ಟಕ್ಕೂ ಭರತನಾಟ್ಯದಂತಹ ಕಲೆ ಅಂತಹ ಅನಪೇಕ್ಷಿತ ಬೆಳವಣಿಗೆಯನ್ನು ಬಯಸದೇ ಇದ್ದರೂ ಗುರು-ಕಲಾವಿದರ ಈ ಪೂರ್ವಾಗ್ರಹಗಳು ಪರಸ್ಪರ ಕಲೆಗಳಲ್ಲಿ ಬೆಳೆಯಬಹುದಾದ ಆದರಣೀಯ ಅಂಶಗಳನ್ನು ನುಂಗಿ ಹಾಕುತ್ತದೆ. ಕ್ರಮೇಣ ಇಂತಹ ಆಘಾತಗಳೇ ದಶಕಗಳುದ್ದಕ್ಕೂ ಮುಂದುವರಿದರೆ ಮತ್ತೊಂದು ಕಲೆಯೆಡೆಗೆ ನೊಡುವ ಭವಿಷ್ಯದ ಮನಸ್ಸುಗಳೂ ಕಳಂಕಗೊಳ್ಳುತ್ತವೆ. ಮುಂದೊಮ್ಮೆ ಕಲೆಗೆ ಜನರ ಮನಸ್ಸುಗಳೇ ಕಳಂಕದ ಹಣೆಪಟ್ಟಿ ಅಂಟಿಸಿದರೂ ಆಶ್ಚರ್ಯವಿಲ್ಲ. ಇದು ಕೇವಲ ಕಲೆಗಳಿಗೆ ಮಾತ್ರವಲ್ಲದೆ ಶಿಕ್ಷಣದಲ್ಲೂ ನಾವಿಂದು ಮಾಡುವ ಒಂದೊಂದು ತಪ್ಪು ಮುಂದೊಂದು ದಿನ ಹೂಳಲೂ ಆಗದ ಅನಾಥ ಪ್ರೇತಗಳಾಗಿ ತೆವಳುತ್ತವೆ..ಎಚ್ಚರ !

ಪ್ರೀತಿಯಿಂದ,

ಸಂಪಾದಕರು

ಮಂಜೀರ-ಸಂಚಿಕೆ ೨, ಸಂಪುಟ ೩
ಮೂರನೇ ವರ್ಷದ ಮೆಟ್ಟಿಲು ಏರುವ ಹಂತಕ್ಕೆ ಮುನ್ನುಡಿ ಶುಭಾಶಯಗಳ ಬೆಂಬಲ ದೊರೆತಿದೆ. ಗುರಿ ತಲುಪುವ ಹಂತದ ಪ್ರಯಾಣದ ಸುಖ-ದುಃಖಗಳು ಅನುಭವ ಹಾಗೂ‌ಅರಿವಿನ ಸಮೃದ್ಧ ಪಾಕಕ್ಕೆ ಹದವಾಗಿ ರಸ ತುಂಬುತ್ತಿದೆ. ಜೊತೆಗೆ ವರುಷ ಮುಗಿಯುವದರೊಳಗೆ ಪತ್ರಿಕೆ ರಿಜಿಸ್ಟರ್ಡ್ ಆಗಲಿದೆ ಎಂಬ ವಿಶ್ವಾಸ. ಈ ಹಂತದಲ್ಲೆಲ್ಲಾ ನೂಪುರದಂತೆಯೇ ಲಾಭದ ಉದ್ದೇಶವಿಲ್ಲದೆ ತಾವಾಗಿಯೇ ಬಂದು ಕೈಜೋಡಿಸಿ ದುಡಿಯುತ್ತಿರುವವ ಮಿತ್ರರು ಒಬ್ಬಿಬ್ಬರಲ್ಲ. ಹಾಗಾಗಿಯೇ ದಿನದಿಂದ ದಿನಕ್ಕೆ ನಮ್ಮದು ಹೊಸ ಸದಸ್ಯರನ್ನು ಹೊಂದಿಕೊಳ್ಳುತ್ತಿರುವ ಒಂದು ಕುಟುಂಬ. ನೋವು-ನಲಿವುಗಳ ನಡುವೆಯೂ ಪ್ರತಿಜ್ಞೆಯ ಹಾದಿಯೋ ಎಂಬ ಹಾಗೆ ನಸುನಕ್ಕು ಮುಂದೆ ಸಾಗುವ ಮಂದಿಯ ಬಳಗ. ಬಂಡಿಯಂತಿರುವ ಬದುಕಿನ ಚಲನೆ, ಕೂಡಿ ಬಾಳುವಲ್ಲಿ ಸಿಗುವ ಸುಖದ ಜೇನು ಪರಿಶ್ರಮವನ್ನಷ್ಟೇ ಹಿಂಬಾಲಿಸುತ್ತದೆ ಎಂಬುದು ತಿಳಿಯುವುದು ಹೀಗಿದ್ದಾಗಲೇ ನೋಡಿ !

ಒಂದು ಕಾಲದಲ್ಲಿ ಸಾಮಾನ್ಯ ಜನರ ಅಭಿವ್ಯಕ್ತಿಯ ಸಾಧನವಾಗಿದ್ದದ್ದು ಜನಪದ ಮತ್ತು ಜಾನಪದ ನೃತ್ಯಗಳು. ಕಾಲಕ್ರಮೇಣ ಹಲವು ಬದಲಾವಣೆಗಳಿಗೆ ಒಗ್ಗಿಸಿಕೊಂಡು ಒಂದು ಸಿದ್ಧ ಪರಂಪರೆಯ ರೂಪಕ್ಕೆ ಬಂದವು. ಲೋಕಧರ್ಮಿಯ ವಿಶಾಲತೆಯಿಂದ ನಾಟ್ಯಧರ್ಮಿಯ ಚೌಕಟ್ಟಿಗೆ ಒಳಪಟ್ಟವು.

ಉಗಮವಾದಾಗಿನಿಂದಲೂ ಶತಶತಮಾನಗಳಿಗೂ ನೃತ್ಯವು ಸಾಕ ಷ್ಟು ಚಲನೆಗಳಿಗೆ ಸಾಕ್ಷಿಯಾಗಿದೆ.  ನಿತ್ಯನೈಮಿತ್ತಿಕ ಚಟುವಟಿಕೆಗಳ ಭಾಗವೋ ಎಂಬಂತಿದ್ದ ನೃತ್ಯಗಳು ಕ್ರಮೇಣ ಪೂಜಾ ಮಂದಿರ, ರಾಜರ ಆಶ್ರಯಗಳಲ್ಲಿ ಪ್ರವರ್ಧಮಾನಕ್ಕೆ ಬಂದು ವಿವಿಧ ಪದವಿಗಳನ್ನು, ಜೊತೆಗೆ ಸಾಕಷ್ಟು ಏಳು ಬೀಳುಗಳನ್ನು ಕಂಡಿತ್ತು. ಕ್ರಮೇಣ ಸ್ವಹಿತಾಸಕ್ತಿ, ಕಾಮ-ಮದ-ಮಾತ್ಸರ್ಯಗಳೇ ಆವರಿಸಿಕೊಂಡರೂ ಹಲಕೆಲವು ಮಹಾನುಭಾವರ ಸುಧಾರಣೆಯ ಫಲವಾಗಿ ಆಗಾಗ್ಗೆ ಅಂಟಿದ್ದ ಕಳಂಕವನ್ನು ತೊಡೆದುಕೊಳ್ಳುತ್ತಿತ್ತು.

ಆದರೆ ಈ ಕಾಲಕ್ಕೆ ಇವ್ಯಾವುದರ ಸಂಗತಿಯ ಕಲಿಕೆಯೂ ಬೇಡ..,ಬೇಕಿದ್ದರೂ ಪರೀಕ್ಷೆ ಸಮಯಗಳಿಗೆ ಮಾತ್ರ ! ಅರಿವಿನ ಕಿಚ್ಚು ಹಚ್ಚುವುದೇನಿದ್ದರೂ ಕೆಲ ಸಮಯಕ್ಕೆ ! ಉದ್ಯೊಗಕೇಂದ್ರಿತಗೊಳ್ಳುವ ಶಿಕ್ಷಣ ನೀಡುವ ಫಲಶ್ರುತಿಯೇ ಇದು ! ಇದಕ್ಕೀಗ ಕಲೆಯೂ ಹೊರತಾಗಿಲ್ಲ.

ಉದಾಸೀನತೆಯಾಗಿದ್ದರೆ ಒಂದಷ್ಟು ಹರಕೆ ಸಂದಾಯ ಮಾಡಿಯೋ; ನೃತ್ಯವೆಂಬುದು ಪ್ರದರ್ಶಕ ಕಲೆಯಾದ್ದರಿಂದ ಪ್ರದರ್ಶನಕ್ಕೆ ಪ್ರಥಮ ಅವಕಾಶ ಎಂದೋ ; ಘನಸ್ತಿಕೆಯನ್ನು ತೋರಿಸಿಕೊಳ್ಳುವ ನೆವದಲ್ಲಿ ನಿರ್ಲಕ್ಷ್ಯ ತೋರಿಯೋ.., ಒಟ್ಟಿನಲ್ಲಿ ನಮ್ಮಲ್ಲಡಗಿದ ಕೊರತೆಯನ್ನು ಮರೆಮಾಚಲು ಕಲೆಯ ವಿರುದ್ಧ ಅರಿವಿದ್ದೋ, ಇಲ್ಲದೆಯೋ ಹ್ಮಾಸ್ತ್ರವನ್ನಂತೂ ಬಳಸಿರುತ್ತೇವೆ. ಕಾರಣ, ನಮ್ಮ ದಟ್ಟ ಇತಿಹಾಸದ ಕಲ್ಪನೆಯನ್ನು ತಮ್ಮದಾಗಿಸಿಕೊಳ್ಳುವ ಕನಿಷ್ಠ ಪ್ರಯತ್ನವೂ ನಮ್ಮಿಂದಾಗುತ್ತಿಲ್ಲ. ಹಾಗಾಗಿ ಅಪೂರ್ವ ಸಂಪತ್ತಿನ ಕುರಿತಾದ ಮೌಲಿಕ ಸಂಶೋಧನೆಗಳೂ, ಅಧ್ಯಯನಗಳೂ ಬರಬರುತ್ತಾ ಅಪರೂಪವಾಗುತ್ತಿವೆ. ಸಾಕಷ್ಟು ಪಠ್ಯಗಳು ತಿರುಚಲ್ಪಡುತ್ತಿವೆ.

ಅದರಲ್ಲೂ, ಕ್ರಮಿಸಬೇಕಾದ ಹಾದಿ ಇನ್ನೂ ಬಹುದೂರವಿರುವಾಗಲೇ ಎಲ್ಲವನ್ನೂ ಸಾಧಿಸಿಕೊಂಡವರಂತೆ ಬೀಗುವ ಗುರುಗಳು, ಕಲಾವಿದರು, ವಿದ್ಯಾರ್ಥಿಗಳು ಕ್ರಮೇಣ ಆಧಾರಸ್ತಂಭವಾದ ಜನಪದವನ್ನು ತಮ್ಮ ಫ್ಯೂಷನ್ನಿಗೋ, ಫ್ಯಾಶನ್ನಿಗೋ ವಸ್ತುವನಾಗಿಸಿಕೊಳ್ಳುತ್ತಿದ್ದಾರೆಯೇ ವಿನಃ, ಅದರ ಅಂತಃಕರಣವನ್ನು ಅರಿಯುವ ದಿಸೆಯಲ್ಲಿ ಪ್ರಯತ್ನಗಳಾಗುತ್ತಿರುವುದು ತೀರಾ ಬೆರಳೆಣಿಕೆಯಷ್ಟು ಎಂಬಂತೆ !

ಪರಿಣಾಮ, ! ಕಲೆ ನಲುಗುತ್ತದೆ; ಇತಿಹಾಸದ ಕೊಂಡಿಗಳು ಕಳಚಿಕೊಳ್ಳುತ್ತವೆ, ಕೊನೆಗೊಂದು ದಿನ ಉದ್ದೇಶಪೂರ್ವಕವಾಗಿ ಮರೆಯಾಗಿ ತಿರುಚಿಗೊಳ್ಳುತ್ತವೆ. ಈಗಾಗಲೇ ಜನಪದವನ್ನೂ ಒಳಗೊಂಡಂತೆ ಕಲೆ-ಕಲೆಗಳ ನಡುವೆ ಸಂಧಿಸಲಾಗದ ಕಂದಕವೊಂದು ಬೆಳೆಯುತ್ತಿದೆ. ಒಂದು ಕಾಲಕ್ಕೆ ಗೆಜ್ಜೆ ಕಟ್ಟುವುದೇ ಅಪರಾಧ ! ಅದೇ ಈಗ ನೃತ್ಯವೆಂಬುದು ಮಾರುಕಟ್ಟೆಯಲ್ಲಿ ಬಿಕರಿಗಾಗಿ ಇಟ್ಟಿರುವ ವಸ್ತು ! ಎಂಥ ಗಮನಾರ್ಹ ಬದಲಾವಣೆಯಲ್ಲವೇ ?

ಇವೆಲ್ಲವೂ ನಮ್ಮ ಸ್ವಯಂಕೃತ ಅಪರಾಧಕ್ಕೆ ಸಿಗುವ ಪ್ರತಿಫಲ.

ಕನಿಷ್ಠಪಕ್ಷ ಅದಕ್ಕಾದರೂ ಒಂದಷ್ಟು ಅಪರಾಧೀಪ್ರಜ್ಞೆ ಉಳಿಯಬಹುದೇ?

ಕಲೆಯಿಂದ ಸಾಕಷ್ಟು ಪಡೆಯುತ್ತೇವೆ. ಜೀವನ ಹಸನು ಮಾಡಿಕೊಳ್ಳುತ್ತೇವೆ. ವರ್ತಮಾನ, ಭವಿಷ್ಯವನ್ನೆಲ್ಲಾ ಉದ್ಧಾರ ಮಾಡಿಕೊಂಡು ಪ್ರತಿಷ್ಠಿತರಾಗುತ್ತೇವೆ. ಬದಲಾಗಿ ಕಲೆಗಾಗಿ ನಾವು ಸಲ್ಲಿಸಿದ ಕಾಣಿಕೆಯೇನು ? ಮುಂದಿನ ಪೀಳಿಗೆಗೆ ನಾವು ಕೊಡುವ ಕೊಡುಗೆಯೇನು ?   ಒಟ್ಟಿನಲ್ಲಿ ಪ್ರತಿಷ್ಠೆ, ಸಂಪಾದನೆಗಾಗಿ ನಾವು ಕೊಡುವ ಸಮಾಯಸಮಯ, ಸಂದರ್ಭಾನುಸಾರ ಪ್ರಜ್ಞೆಯಿಲ್ಲದ ಪ್ರಯೋಗಗಳು, ಪ್ರದರ್ಶನಗಳು, ಕಾರ್ಯಕ್ರಮಗಳು ಕಲೆಯ ಮೂಲಸೆಲೆಯನ್ನು ಬತ್ತದಂತೆ ಮಾಡದಿದ್ದರೆ ಸಾಕು !

ಚಲನಶೀಲತೆ ಕಲೆಗಳ ಹುಟ್ಟಾ ಪ್ರವೃತ್ತಿ. ಆದರೆ ಅದರ ಮೂಲ ಪರಿಚಯವಿಲ್ಲದೆ ಮಾಡುವ ಚಲನೆಗಳು ಮಾತ್ರ ಪೂರ್ಣ ನಿಷ್ಕ್ರಿಯರನ್ನಾಗಿಸುತ್ತವೆ.

ಈಗಾಗಲೇ ಭಾರತದ ಇತ್ತೀಚಿನ ಇತಿಹಾಸದುದ್ದಕ್ಕೂ ಇತಿಹಾಸವನ್ನೇ ತಿರುಚಲ್ಪಡುವ ಸಾಕಷ್ಟು ಸಂಗತಿಗಳನ್ನು ಅನುಭವಿಸಿದ್ದೇವೆ. ಈ ಸಂದರ್ಭ ಕಲೆಗಳಲ್ಲೂ ವ್ಯಾಪಕವಾಯಿತೆಂದರೆ ಕೊಡಲಿಯೇಟು ಬೀಳುತ್ತಿರುವ ಅರಿವಿಲ್ಲದ ಈಗಿನ ಪೀಳಿಗೆಯು ಮುಂದೊಂದು ದಿನ ಅಸ್ತಿತ್ವವನ್ನೇ ಮಾರಿ ಕೊಂಡೀತು ! ಕೊನೆಗೆ ಬೇರೊಂಡೆಡೆ ಹುಡುಕಬೇಕಾದರೂ ಅದರ ಅವಕಾಶವೇ  ಇಲ್ಲದಿದ್ದರೇ !!!?

ನಮ್ಮ ಬುಡಕ್ಕೆ ನಾವಿಟ್ಟುಕೊಳ್ಳುತ್ತಿರುವ ಬೆಂಕಿ ಕೊಳ್ಳಿ !

‘ದೇಶ ನಿಮಗೆ ಏನು ನೀಡಿದೆ ಎಂಬುದಕ್ಕಿಂತ ನೀವು ದೇಶಕ್ಕೆ ಏನು ನೀಡಿದ್ದೀರಿ ಎಂಬುದು ಮುಖ್ಯ. ಏಕೆಂದರೆ ನೀವು ಬದುಕುತ್ತಿರುವುದೇ ನಿಮ್ಮ ಮಣ್ಣಿನಿಂದ.’ ಅಂತೆಯೇ ಕಲೆಯೂ ಕೂಡಾ!

ಕೈಯಲ್ಲಿರುವ ಬೆಣ್ಣೆಯನ್ನು ಮಣ್ಣುಪಾಲು ಮಾಡಿ ತುಪ್ಪ ಬೇಕೆಂದರೆ ಬೆಪ್ಪರಾಗಬೇಕಾದೀತು ! ಎಚ್ಚರವಿರಲಿ !

ಪ್ರೀತಿಯಿಂದ,

ಸಂಪಾದಕರು

೨ ವರುಷ ತುಂಬಿದ ಸಂಭ್ರಮ
ಜ಼ೆರಾಕ್ಸ್ ಪ್ರತಿಯಾಗಿ ನಮ್ಮ ಕೈಗಳಲ್ಲಿ ಕಣ್ಣು ತೆರೆದಿತ್ತು ಮೊದಲ ತಿಂಗಳ ನೂಪುರ ಭ್ರಮರಿ. ಅಂದು ಫೆಬ್ರವರಿ ೧೦, ೨೦೦೭. ಅದೇ ತಿಂಗಳ ಶಿವರಾತ್ರಿಯ ಹೊತ್ತಿಗೆ ನರ್ತನ ಜಗತ್ತಿನ ಸಾಧ್ಯತೆಗಳನ್ನು ಬಿಡುಗಣ್ಣುಗಳಿಂದ ನೋಡಿ. ಕ್ರಮೇಣ ಪಿಡಿ‌ಎಫ್ ಪ್ರತಿಯಾಗಿ, ನಂತರ ಮುದ್ರಿತಗೊಳ್ಳುವ ಹೊತ್ತಿಗೆ ಒಂದು ವರ್ಷ ಸಂದಿದ್ದವು.

ಮತ್ತದೇ ಫೆಬ್ರವರಿ, ೧೦ನೇ ದಿನ. ವರುಷ ತುಂಬಿದ ಸಂಭ್ರಮಕ್ಕೆ ಸಾಕ್ಷಿ ಯಾದದ್ದು ೨೦೦೮. ಅಂಬೆಗಾಲಿಕ್ಕಿ ಬಂದ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡುವ ಪ್ರಯತ್ನ- ಮಡಿಕೇರಿಯ ಭಾರತೀಯ ವಿದ್ಯಾ ಭವನದಲ್ಲಿ. ಜೊತೆಗೊಂದು ಓದುಗರ, ಬಳಗದ ಹಾರ್ದಿಕ ಸಮ್ಮಿಲನ. ಕಾರ್ಯಕ್ರಮ ಮುಗಿಯುವ ವೇಳೆಗೆ ವೆಬ್‌ಸೈಟ್ ಎಂಬ ಅಂಗಿ ತೊಟ್ಟ ಕಿಶೋರಿಗೆ ಅಭಿನಂದನೆಗಳ ಮಹಾಪೂರ ಬೆನ್ನುತಟ್ಟಿ ಹರಸಿತ್ತು.

ಸದಭಿರುಚಿಯ ಸಾಧನೆಗೆ ತೊಡಕುಗಳು ಹಲವಾರು. ಆದರೂ ನಂತರದ ಪಯಣಕ್ಕೆ ಹೊಸ ಮಿತ್ರರು, ಹೊಸ ಬಳಗ ಜೊತೆಯಾಗಿ ನಿಂತು ಕೈಜೋಡಿಸಿದ್ದರು. ಆತ್ಮೀಯತೆಯಿಂದ ಬರಮಾಡಿಕೊಂಡವರು ಪರಸ್ಪರ ಕೊಡುಕೊಳ್ಳುವಿಕೆಯ ಅಗತ್ಯ, ಅನಿವಾರ್ಯತೆಗಳಿಗೆ ಸ್ಪಂದಿಸಿದರು. ಮೂದಲಿಕೆ, ಅನಗತ್ಯ ಸಲಹೆಗಳು, ಸ್ವಹಿತಾಸಕ್ತಿಗಳಿಗೆ ಬಳಸಿಕೊಳ್ಳುವ ಹುನ್ನಾರ, ತಪ್ಪು ತಿಳಿವಳಿಕೆ, ಔಪಚಾರಿಕ ಮನ್ನಣೆಗಳ ಪ್ರಪಾತವನ್ನು ದಾಟಿ ಹೋಗುವಲ್ಲಿ ಮನಸು ಮನಸ್ಸಿಗೆ ಸೇತು ಕೂಡಿಸಿದವರು ಕನಸಿನ ವ್ಯಾಪ್ತಿಯನ್ನು ಹಿರಿದುಗೊಳಿಸಿದರು. ಉದಾಸೀನವೋ, ನಿರ್ಲಕ್ಷ್ಯವೋ- ಒಟ್ಟಿನಲ್ಲಿ ಪ್ರತಿಕ್ರಿಯಿಸುವವರ ಕೊರತೆಯ ನಡುವೆಯೂ ಅರಿವಿನ ಕಿಚ್ಚಿಗೆ ಎಣ್ಣೆ ಎರೆಯುತ್ತಲೇ ಬಂದ ಹಲವರು ಬೆಂಗಾವಲಾಗಿ ನಿಂತರು. ಅವರಲ್ಲೆರೂ ಸ್ಮರಣಿಯರು.

ಅನುಭವವು ಸವಿಯಲ್ಲ. ಅದರ ನೆನಪೇ ಸವಿಯು…

ಕೆಲವು ತಪ್ಪುಗಳಿರಬಹುದು, ಒಪ್ಪುಗಳಿರಬಹುದು. ತರ್ಕ-ವಿತರ್ಕ, ವಾದ, ಟೀಕೆ-ಟಿಪ್ಪಣಿಗಳಿರಬಹುದು. ಹೀಗೆ, ಬೆಳವಣಿಗೆಯ ಹಾದಿಗೆ ಬೇಕಾದ ಹೊಸ ದಿಕ್ಕನ್ನು ಹುಡುಕಿಕೊಳ್ಳುವಲ್ಲಿ ಭಿನ್ನತೆಯ ನಡುವೆಯೂ ಭಾವನೆಗಳು ಬೆಸೆದಿತ್ತು. ಕಟ್ಟಿದ ಕನಸುಗಳ ಕದಡುವಿಕೆ ಮತ್ತು ಕಣ್ಣೀರಿನ ಬೆಲೆ ತೆರಬೇಕಾಗಿ ಬಂದಾಗಲೂ, ಸಿದ್ಧಾಂತಗಳಿಗೆ ರಾಜಿ ಮಾಡಿಕೊಳ್ಳದೇ ಇದ್ದ ನೆಮ್ಮದಿ ಸಮಾಧಾನ ನೀಡಿತ್ತು. ಎಷ್ಟೋ ಬಾರಿ ನಾವಾಗೇ ಕಟ್ಟಿಕೊಂಡ ಭ್ರಮೆಗಳು ಕಳಚಿ ಬೀಳುವವರೆಗೂ, ಬಿದ್ದ ಭ್ರಮೆಗಳು ಭರವಸೆಯ ಕುಡಿಗಳಾಗಿ ಚಿಗುರೊಡೆಯುವವರೆಗೂ ಸಾಕಷ್ಟು ಏಳುಬೀಳು, ನೋವು ನಲಿವುಗಳನ್ನು ಕಂಡುಕೊಂಡಳು ನೂಪುರ ಭ್ರಮರಿ.

ಹೌದು, ಈ ೨೦೦೯ರ ಫೆಬ್ರವರಿಗೆ ಎರಡು ವಸಂತ ಕಳೆದು ಮೂರನೇ ಸಂವತ್ಸರಕ್ಕೆ ಕಾಲಿಡುವ ಸಂಭ್ರಮ !

ಕಲೆಯ ಕುರಿತಾಗಿ ಈಗಾಗಲೇ ಹಲವು ಸದಭಿರುಚಿಯ ಗುರಿ, ಉದ್ದೇಶಗಳನ್ನಿಟ್ಟುಕೊಂಡು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಪತ್ರಿಕೆಗಳಿವೆ. ಅವುಗಳ ಸಾಲಿನಲ್ಲಿ ನೂಪುರವನ್ನು ನೋಡುವ ಆಲೋಚನೆಯಿದೆ, ಆದರೆ ಅವುಗಳೆಲ್ಲವನ್ನು ಹಿಂದಿಕ್ಕಿ ಪ್ರಭುತ್ವ ಸಾಧಿಸಬೇಕೆಂಬ ಹಟ ಹೊತ್ತು ಹೊರಟದ್ದಲ್ಲ ನೂಪುರದ ಪಯಣ.

ಇಂದಿನ ಕಾಲಕ್ಕೆ ಆರೋಗ್ಯಕರ ಸ್ಪರ್ಧೆಯ ಹಿಂದೆಯೂ ಒಂದಷ್ಟು ಮೇಲಾಟಗಳು ಸಾಮಾನ್ಯ. ಆದ್ದರಿಂದ ಪ್ರಾರಂಭಗೊಂಡ ಹಂತದಿಂದಲೂ ಭ್ರಮರಿಯ ಈವರೆಗಿನ ಬೆಳವಣಿಗೆಯುದ್ದಕ್ಕೂ ಇದ್ದದ್ದು- ತನ್ನನ್ನು ತಾನು ಮೀರಿ ಬೆಳೆಯಬೇಕೆನ್ನುವ ಹಂಬಲ. ಆ ಹಂಬಲದಲ್ಲೇ ಭವಿಷ್ಯಕ್ಕೆ ಭರವಸೆಯ ಗೋಪುರವನ್ನು ಕಟ್ಟುತ್ತಿದ್ದೇವೆ. ಕಲೆಯ ಕನವರಿಕೆಯಲ್ಲಿ ಕೈಮರವಾಗುವ ಪುಟ್ಟ ಸ್ವಾರ್ಥ.

ಸೃಜನಶೀಲ ಆಯಾಮದಲ್ಲಿ ವಿನ್ಯಾಸ, ಬರೆಹ, ಶೈಲಿ ಎಲ್ಲದರಲ್ಲೂ ಪರಿಣಾಮಕಾರಿಯಾಗಿ ಬೆಳೆಯುತ್ತಾ, ಹೂರಣದೊಂದಿಗೆ ಆವರಣವನ್ನು ಹಿಗ್ಗಿಸಿಕೊಂಡು ಹೋಗುವ ಸಂಕಲ್ಪ ; ವಿಶಾಲ ವೈವಿಧ್ಯಮಯ ನರ್ತನ ಜಗತ್ತನ್ನು ಕಂಡುಕೊಳ್ಳುವ ರೀತಿ ಅಷ್ಟು ಸುಲಭವಲ್ಲವಾದರೂ ಕಲೆಯ ವಿವಿಧ ಆಯಾಮಗಳತ್ತ, ಜೊತೆಗೆ ನಮ್ಮೊಳಗಿನ ಪ್ರಜ್ಞೆಯನ್ನು ಎಚ್ಚರಿಸುತ್ತಾ ಸಾಗುವ ನಿಲುವು. ಏಕಕಾಲಕ್ಕೇ ಗುರುಹಿರಿಯರನ್ನೂ, ಕಲಾವಿದರನ್ನೂ, ಅಭ್ಯಾಸಿಗಳನ್ನೂ, ಎಳೆಯರನ್ನು ಮತ್ತು ಸಮಕಾಲೀನ ಮನಸ್ಸುಗಳನ್ನು ತಲುಪಬೇಕೆಂಬ ನಿತ್ಯ ಒಲವಿನಲ್ಲಿರುವ ಭ್ರಮರಿಗೆ ಆಯಾಯ ಕಾಲದ ಅಗತ್ಯಗಳನ್ನು ಪೂರೈಸುವುದು ಸವಾಲಿನ ವಿಷಯವೇ ಹೌದು.

ಗುರಿಯನ್ನು ಮುಟ್ಟುವ ತೃಪ್ತಿಗಿಂತಲೂ ಅದನ್ನು ತಲುಪುವ ಹಾದಿಯಲ್ಲಿನ ಪಯಣವೇ ರೋಮಾಂಚಕ ಮತ್ತು ಸವಾಲಿನ ಜೀವನಾನುಭವ.

ಈ ದಿಸೆಯಲ್ಲಿ ಕಲೆಯ ಮತ್ತು ಅದರೊಂದಿಗಿನ ಜೀವನಪ್ರೀತಿಯನ್ನು ಪೋಷಿಸುವ ಮತ್ತು ನಿತ್ಯ ನವೀಕರಿಸಿಕೊಳ್ಳುವ ದೃಷ್ಟಿಯಿಂದ ಮುನ್ನಡೆದರಷ್ಟೇ, ನಮ್ಮ ಕಾರ್ಯಗಳು ಜೀವನಮುಖಿಯೆನಿಸಿಕೊಳ್ಳುತ್ತವೆ. ಬದಲಾವಣೆಯ ಕಾಲಘಟ್ಟಕ್ಕೆ ಪೂರಕವಾಗಿ ನಡೆಯಬೇಕೆಂಬ ಉದ್ದೇಶಗಳನ್ನಿಟ್ಟು ನಡೆದರೆ ; ಕಲೆಯು ಕೇವಲ ಸಾಂಪ್ರದಾಯಿಕ, ಸಾಂಸ್ಕೃತಿಕ  ಅಗತ್ಯಗಳನ್ನಷ್ಟೇ ಪೂರೈಸುವುದಕ್ಕೆ ಸೀಮಿತವಾಗದೆ ಸಾಮಾಜಿಕ ಅಗತ್ಯ ಮತ್ತು ಪ್ರಜ್ಞೆಯನ್ನು ಪೂರೈಸಿಕೊಂಡು, ಪ್ರಸ್ತುತವೆನಿಸುತ್ತದೆ. ಪರಂಪರೆಯ ಜೊತೆಗೆ ವಿನೂತನ ನಡೆಯನ್ನು ಮುಕ್ತವಾಗಿ ಒಪ್ಪಿ, ತಿದ್ದಿ ನಡೆಯುವ, ಅದರೊಂದಿಗೆ ಚಲನಶೀಲತೆ ಮತ್ತು ಗುಣಮಟ್ಟದ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರುವವರೆಗೆ ಕಲೆಯ ಕಡೆಗೆ ನೋಡುವ ಪ್ರತೀ ದೃಷ್ಠಿಯೂ ಹೊಸತೆನಿಸುತ್ತದೆ.

ಕಲೆ ಎಲ್ಲರಿಗೂ ಅರ್ಥವಾಗಬಲ್ಲ ವಿಶ್ವಭಾಷೆ. ಆದರೆ ಕಲೆಯ ವ್ಯಾಕರಣ ಒಂದಷ್ಟು ತಾಂತ್ರಿಕ. ಆದ್ದರಿಂದಲೇ ನಿರ್ದಿಷ್ಟ ವರ್ಗಕ್ಕೆ ಸೀಮಿತ ಎಂಬ ಭಾವನೆ ಎಲ್ಲೋ ಗುರು ಕಲಾವಿದ ಪ್ರೇಕ್ಷಕರಾದಿಯಾಗಿ ಆಳದಲ್ಲಿ ಬೇರೂರಿದೆ. ಆದರೂ ಸರಳೀಕರಿಸಿಕೊಳ್ಳ್ಳುವ ಹಸಿವು. ಅದಷ್ಟು ಸುಲಭವಲ್ಲದಿದ್ದರೂ ಆಸಕ್ತ ಕಲಾರಸಿಕರ, ಪ್ರೇಕ್ಷಕರ ಬಳಿಗೊಯ್ದು ಮುಟ್ಟಿಸಬೇಕೆಂಬ ಹಟ. ಅದೇ ಕನಸು ಕಂಗಳ ಜಾತ್ರೆ ಪ್ರತೀಕ್ಷಣಕ್ಕೂ ನನಸಿನ ರಥವೇರಬೇಕೆಂಬ ಅದಮ್ಯ ಆಸೆ. ಇಂತಹ ಆಸೆಯ ಮೂಟೆ ಹೊತ್ತ ಬಳಗ ಪ್ರತೀ ಸಂಚಿಕೆಯ ಪ್ರಸವಕ್ಕೂ ಆಗ ತಾನೇ ಹುಟ್ಟಿದ ಮಗುವಿನ ಅಳುವನ್ನು ಸಮಧಾನಿಸುವ ಹೊಸ ತಾಯಿಯಾಗುತ್ತಿರುವುದು, ಆರೈಕೆ ಬೇಡುವ ಕಂದಮ್ಮನಿಗೆ ಇರುವ ಅನುಕೂಲಗಳ ನಡುವೆಯೇ ಸಾರ್ಥಕ್ಯ ಕಾಣಿಸುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಧನ್ಯತೆಯ ಕ್ಷಣ.

ಕಿರಿಯವಳೆನ್ನುತ್ತಲೇ ತನ್ನ ವ್ಯಾಪ್ತಿ ಸಾಧ್ಯತೆಗಳನ್ನು ಹಿಗ್ಗಿಸಿಕೊಳ್ಳುವ ಹಂತದಲ್ಲಿರುವ ನೂಪುರ ಭ್ರಮರಿಯ ಅಂಗಳ, ಮೂರು ವರ್ಷದ ಸಂಭ್ರಮಕ್ಕೆ ಮತ್ತಷ್ಟು ತುಂಬಿದೆ. ಒಳ್ಳೆಯ ಲೇಖನಗಳು, ಚಿಂತನ-ಮಂಥನಗಳು ಭ್ರಮರಿಯ ಮಡಿಲನ್ನು ಸಮೃದ್ಧವಾಗಿಸಿದೆ. ನಾಟ್ಯ ಜಗತ್ತಿನ ವಿಸ್ಮಯ ಗಳಿಗೆ `ಸಾಥ್’ ಕೊಟ್ಟು ನುಡಿದವರ ಅಂತರಂಗದ ದನಿಯಿದೆ. ಇನ್ನು ಬೇಕಿರುವುದು ನಿಮ್ಮ ಬೆಂಬಲ, ಪ್ರೋತ್ಸಾಹ, ಆಶೀರ್ವಾದ. ಅದಿರುವವರೆಗೂ ತುಡಿತ-ಮಿಡಿತಗಳ ಈ ಪಯಣ ನಿರಂತರ.

ಪ್ರೀತಿಯಿಂದ,

ಸಂಪಾದಕರು