ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನಾಟ್ಯವೆಂದಾಗ ಸಾಮಾನ್ಯ ವೀಕ್ಷಕ ಬಯಸುವುದೇನು? ಎಂಬ ಪ್ರಶ್ನೆಯಿಂದ ಮೊದಲ್ಗೊಂಡು ನೃತ್ಯದ ಹಲವು ಆಯಾಮಗಳತ್ತ ಹೊರಳಿಕೊಳ್ಳುವ ಅಗತ್ಯ ನಮ್ಮದುರಿಗೆ ಸದಾ ಇದೆ. ಇಂತಹ ಸಂವಾದಗಳ ಮೂಲಕ ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುವ ಗುರಿ ನೂಪುರ ಭ್ರಮರಿಯದ್ದು. ಯಾವುದೇ ಲೇಖನದ ಬಗೆಗಾದರೂ ಮುಕ್ತ ಸಂವಾದಕ್ಕೆ ಅವಕಾಶವಿದೆ. ಇಂತಹ ಸಂವಾದಗಳು ಹಲವು ಲೇಖನದ ಮೂಲಕವೂ ತೆರೆದುಕೊಂಡಿದೆ ; ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಇದು ಚಿಂತನೆಗಳ ಚಾವಡಿ. ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು ಈ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ ಕುರಿತೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ರಂಗ ಚಟುವಟಿಕೆಗಗಳ ಬಗೆಗಿನ ಎಲ್ಲಾ ಪ್ರಶ್ನೋತ್ತರ, ಸಂವಾದಗಳಿಗೂ ಇಲ್ಲಿ ಆದ್ಯತೆಯಿದೆ.

ನೃತ್ಯ ಸಂಯೋಜನೆ ಹೇಗಿರಬೇಕು?- ಒಂದಷ್ಟು ಜಿಜ್ಞಾಸೆ

Thursday, December 15th, 2011

ಇತ್ತೀಚೆಗಷ್ಟೆ ಭೇಟಿಯಾದ ಹಳೆ ಸ್ನೇಹಿತೆ(ನೃತ್ಯಗಾರ್ತಿ)ಯೊಬ್ಬಳು ಹೀಗೇ ಮಾತಾಡುತ್ತಾ, ನಮ್ಮ ಅಭಿನಯ ಬಂಧಗಳಾದ ಪದ, ಜಾವಳಿಗಳ ಕಡೆಗೆ ಗಮನ ಸೆಳೆದಳು. ಸಾಹಿತ್ಯದ ಒಂದು ಸಾಲಿಗೆ ಎಷ್ಟು ಕೈಗಳು(ಹಸ್ತಾಭಿನಯ) ಎಂದು ನಿಗದಿ ಪಡಿಸುವುದು, ಪ್ರತಿ ಬಾರಿ ಒಂದೇ ಸಾಲು ಹಾಡುವಾಗ, ಅದೇ ಅರ್ಥ ಬರುವಂತೆ ಬೇರೆ ಬೇರೆ ಹಸ್ತಗಳನ್ನು ಜೋಡಿಸುವುದು ಮುಂತಾದ ಕೆಲವರ ಪರಿಪಾಠ. ಹಾಗಾಗಿ ಅವಳು ಕೇಳಿದ್ದು ಇಂದಿನ ಈ ಜನಪ್ರಿಯ ರೂಢಿಯ ಬಗ್ಗೆ; ‘ಪ್ರತಿ ಹಸ್ತ ನೆನಪಿಟ್ಟುಕೊಳ್ಳುವುದರಲ್ಲಿ, ಸಾಹಿತ್ಯದ ಭಾವಾರ್ಥವೇ ಮರೆತು ಹೋಗುತ್ತದಲ್ಲವೇ? ನೋಡುವವರಿಗೂ ಭಾಷೆ ಗೊತ್ತಿಲ್ಲದಿದ್ದರೆ, [...]

ಮೈಸೂರು ಭರತನಾಟ್ಯ ನೃತ್ಯಶೈಲಿ : ಪ್ರತಿಕ್ರಿಯೆ

Thursday, December 15th, 2011

ವಿದುಷಿ, ಗುರು, ಲೇಖಿಕೆ, ಸಂಶೋಧಕಿ ಶ್ರೀಮತಿ ಲಲಿತಾ ಶ್ರೀನಿವಾಸನ್ ಅವರ ವಿಚಾರಧಾರೆಗಳೂ ಅತ್ಯಂತ ಸ್ಪಷ್ಟ, ನಿಖರ ಮತ್ತು ಸೂಕ್ತವಾಗಿದೆ ಎನ್ನುವುದು ನನ್ನ ಅಭಿಪ್ರಾಯ.
ಕಲೆ ಸೃಷ್ಟಿಶೀಲಕ್ರಿಯೆಯ ಅಭಿವ್ಯಕ್ತಿ. ಅಭಿವ್ಯಕ್ತಿ ಎನ್ನುವುದು ಕಲಾವಿದನ ಸ್ವಾತಂತ್ರ್ಯ. ಕಲಿತದ್ದನ್ನು, ನೋಡಿ ಅರಿತದ್ದನ್ನು ತನ್ನ ಅನುಭವದ ಪಾಕದಲ್ಲಿ ಕೊಡುವುದೇ ಕಲಾವಿದನಲ್ಲಿನ ಅರ್ಹತೆಗೆ ಸಾಕ್ಷಿ. ‘ಕಲಿತದ್ದನ್ನಷ್ಟೇ ಮಾಡುವೆ, ಹಿಂದೆ ಇದ್ದ ಪದ್ಧತಿಗಳಿಗೆ, ಹೊಸತನಕ್ಕೆ ನನ್ನ ಕಣ್ಣುಕಿವಿಗಳು ತೆರೆಯುವುದಿಲ್ಲ’ ಎನ್ನುವವರು ಸಹೃದಯರಾಗಲು ಸಾಧ್ಯವಿಲ್ಲ. ತೆರೆದ ಮನಸ್ಸು ಶ್ರೀಮಂತಿಕೆಯನ್ನು ಕಾಣಲು, ಅನುಭವಿಸಲು ಅಭಿವ್ಯಕ್ತಿಸಲು ಸಾಧ್ಯ. ಇಂತಹ ದೃಷ್ಟಿ, ಪರಿಪಾಠವನ್ನು [...]

ಮೈಸೂರು ಭರತನಾಟ್ಯ ನೃತ್ಯಶೈಲಿ- ಒಂದಷ್ಟು ವಿಚಾರ

Saturday, October 15th, 2011

ಕಳೆದ ಸಂಚಿಕೆಯ ದೀವಟಿಗೆಯ ‘ಭರತಾಗಮ’ ಕಾರ್ಯಕ್ರಮದ ಕುರಿತ ವಿಮರ್ಶೆ ಬರೆವಣಿಗೆಗೆ ಪ್ರತಿಕ್ರಿಯೆಯಿದು. ನರ್ತನ ರಂಗದಲ್ಲಿ ವಿಮರ್ಶೆಗಳನ್ನಾಧರಿಸಿ ಚರ್ಚೆ-ಸಂವಾದ-ಪ್ರತಿಕ್ರಿಯೆಗಳು ರೂಪುಗೊಳ್ಳುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ ಸರಿ. ರಂಗದ ಸರಿ-ತಪ್ಪು, ಅಪೇಕ್ಷಿತ-ಅನಪೇಕ್ಷಿತ ವಿಚಾರಗಳ ಕುರಿತ ಇಂತಹ ಸಂವಾದಗಳಿಗೆ ನೂಪುರ ಭ್ರಮರಿಯ ಈ ವೇದಿಕೆ ಸದಾ ಸಿದ್ಧ ಎಂದು ತಿಳಿಸಲು ಹರ್ಷಿಸುತ್ತೇವೆ ಮತ್ತು ಹಾರ್ದಿಕವಾಗಿ, ಮುಕ್ತದೃಷ್ಟಿಯಿಂದ ಪ್ರತಿಕ್ರಿಯಿಸಿದ ಗುರು ಲಲಿತಾ ಶ್ರೀನಿವಾಸನ್ ಅವರನ್ನೂ ಅಭಿನಂದಿಸುತ್ತೇವೆ. ಈ ಹಿನ್ನಲೆಯಲ್ಲಿ ಒಂದಷ್ಟು ವಿಚಾರಮಂಥನಗಳನ್ನು ಮುಂದಿನ ದಿನಗಳಲ್ಲಿ ಓದುಗರಾದ ನಿಮ್ಮಿಂದ ‘ನೂಪುರ ಭ್ರಮರಿ’ ನಿರೀಕ್ಷಿಸುತ್ತದೆ.
(ವಿ.ಸೂ: ಮಾರ್ಗ, [...]

ನೃತ್ಯ ಮತ್ತು ದಲಿತರು: ಒಂದಷ್ಟು ಸಂದೇಹಗಳು

Monday, August 15th, 2011

ಜ್ಯೇಷ್ಟ-ಆಷಾಢ ಸಂಚಿಕೆಯಲ್ಲಿನ ‘ನೃತ್ಯ ಮತ್ತು ದಲಿತರು: ಒಂದು ವಿಶ್ಲೇಷಣೆ’ ಎಂಬ ಲೇಖನಕ್ಕೆ ಪ್ರತಿಕ್ರಿಯೆ.
ಲೇಖಕಿ, ‘ವ್ರಾತ್ಯರು ಸಂಗೀತ ಮತ್ತು ನೃತ್ಯಗಳನ್ನು ಕೆಟ್ಟ ರೀತಿಯಲ್ಲಿ ಪ್ರಯೋಗಿಸುತ್ತಿದ್ದರು’ ಎಂದಿದ್ದಾರೆ. ಹೀಗಿರುವಾಗ ಅವಹೇಳನದಿಂದ ಯಾವ ಕಲೆ ಉದ್ದಾರವಾಗಿದೆ? ವ್ರಾತ್ಯರು ಇಂದಿನ ದಲಿತರೇ ಆಗಿದ್ದಾರೆ ಎಂದು ಲೇಖಕಿ ಹೇಳಬಯಸುವುದಾದರೆ ವ್ರಾತ್ಯರು ಬಳಸುತ್ತಿದ್ದ ಕಲೆ ಉನ್ನತ ಮಟ್ಟಕ್ಕೆ ಏರುವಲ್ಲಿ ಹೇಗೆ ಸಹಕಾರಿ ಎಂದು ಹೇಳಲು ಸಾಧ್ಯವಿದೆಯೇ? ಮುಂದೆ ಹೇಳಲಾದ ‘ಭರತನ ಮಕ್ಕಳು ಶಾಪಕ್ಕೆ ಗುರಿಯಾಗುವುದು, ಕಳಂಕಿತರಾಗುವುದು ’ ಸಹ ಇದೇ ರೀತಿಯ ಸಂದೇಹಗಳನ್ನು ಹುಟ್ಟುಹಾಕುತ್ತದೆ. ಹಾಗಾದರೆ [...]

ನೃತ್ಯ ಪಠ್ಯ

Monday, August 15th, 2011

ಕಳೆದ ಸಂಚಿಕೆಯ ಮಂಜೀರದಿಂದ ಪ್ರೇರಿತನಾಗಿ ನಾನು ಬರೆದ ಲೇಖನವಿದು. ಪ್ರಾಥಮಿಕ ಶಿಕ್ಷಣ ಮಗುವಿನ ಮಾತೃಭಾಷೆಯಲ್ಲಾಗುವಂತೆ ಕಲೆಯ ಪ್ರಾಥಮಿಕ ಶಿಕ್ಷಣವೂ ಮಾತೃಭಾಷೆಯಲ್ಲಾದರೆ ಆ ಪ್ರದೇಶದ ಹೆಚ್ಚಿನ ಪ್ರೇಕ್ಷಕರೂ ಶಿಕ್ಷಿತರಾಗುತ್ತಾರೆ ಎಂಬುದನ್ನು ನಾನು ಅನುಮೋದಿಸುತ್ತೇನೆ.
ಎಲ್ಲದರೊಳಗೂ, ಪ್ರತಿಯೊಬ್ಬರಲ್ಲೂ ‘ತನ್ನತನ’ ಇರುತ್ತದೆ. ಅದು ಸಹಜ. ಅದನ್ನು ಸಾರ್ವರ್ತಿಕವಾಗಿ ಒಂದಾಗಿ ಹೇಳುವುದು ಅಸಾಧ್ಯವಾದರೂ ‘ನಮ್ಮತನ’ ಎಂದು ಗುಂಪು ಮಾಡಿಕೊಂಡು ಸಾಧನೆಯನ್ನು ಮುಂದುವರೆಸಲಾಗುವುದು. ಉದಾಹರಣೆಗೆ, ಪ್ರತಿಯೊಬ್ಬ ಗುರುಗಳೂ ಭರತನಾಟ್ಯದ ಪರೀಕ್ಷೆಗಳಿಗೆ ಶಿಷ್ಯರನ್ನು ಅಧ್ಯಯನ ಮಾಡಿಸುವಾಗ ಅವರವರ ಭರತನಾಟ್ಯದ ಪರಂಪರೆಗಳಿಗೆ ಅನುಸಾರವಾಗಿ ಬಗ್ಗಿಸಿ ಒಗ್ಗಿಸಲು ಶ್ರಮವಹಿಸುತ್ತಾರೆ. ಅವರು [...]

ಭಕ್ತಿ ಶೃಂಗಾರ v/s ಶೃಂಗಾರ – ಡಾ. ಕೆ. ಶಿವರಾಮ ಕಾರಂತ.

Sunday, August 14th, 2011

ಪ್ರಾಮಾಣಿಕ ಪ್ರೇಮವನ್ನು ನಿತ್ಯ ಜೀವನದಲ್ಲಿ ತೋರಿಸಲಾರದವರು ‘ಆಧ್ಯಾತ್ಮಿಕ ಪ್ರೇಮ’ವನ್ನು ನೃತ್ಯದಲ್ಲಿ ತೋರಿಸುತ್ತಾರೆಯೇ? ಅಂತರಂಗದಲ್ಲಿ ಆಧ್ಯಾತ್ಮವಿದ್ದರೆ ಮಾತ್ರ ಅದು ಕುಣಿತದಲ್ಲೂ ಬಂದೀತು.

…ಕೃಷ್ಣ ರಾಧೆಯರ ಪ್ರೇಮವನ್ನು ಮಧುರಭಾವ ಎಂದು ಕರೆಯುತ್ತಾರೆ. ಈ ಕಲ್ಪನೆಯೆಂಬುದು ಆಧ್ಯಾತ್ಮದಿಂದ ಮೊದಲು ಬಂದಿತೇ? ಆಧ್ಯಾತ್ಮ ಎಂಬುದು ಪ್ರೇಮಕ್ಕೆ ನಮ್ಮ ಜೀವನದಿಂದ ಇದೊಂದು ಉಪಮೆಯಾಗಿ ಹೋಯಿತೇ-ಎಂಬುದು ಕೂಡಾ ಒಂದು ಸಮಸ್ಯೆಯೇ. ಶಿಲ್ಪದಲ್ಲಿ, ನೃತ್ಯದಲ್ಲಿ, ಚಿತ್ರಗಳಲ್ಲಿ ಕೃಷ್ಣ ಮತ್ತು ರಾಧೆಯರ ಸಂಕೇತವನ್ನು ಇರಿಸಿಕೊಂಡು ಆತ್ಮ, ಪರಮಾತ್ಮರ ಪರಸ್ಪರ ಆಕರ್ಷಣೆಯನ್ನು ಚಿತ್ರಿಸುವುದಕ್ಕೆ ನಮ್ಮವರು ಪ್ರಯತ್ನಿಸಿದ್ದಾರೆ. ಶಿಲ್ಪದಲ್ಲಾಗಲೀ, ಕಾವ್ಯದಲ್ಲಾಗಲೀ ಈ [...]

ಮಧುರ ಭಕ್ತಿ ಶೃಂಗಾರ

Thursday, April 14th, 2011

ಕಲೆಯೆನ್ನುವುದು ಒಬ್ಬ ಕಲಾವಿದನ ಅತೀ ಉತ್ಕಟ ಭಾವದ ಅಭಿವ್ಯಕ್ತಿ. ಒಬ್ಬ ಕಲಾವಿದ ಗಂಡು ಹೆಣ್ಣಿನ ಪ್ರೀತಿ-ಮಿಲನದಲ್ಲಿ ಭಾವನೆಗಳ ಉತ್ತುಂಗ ಶಿಖರವನ್ನು ಕಂಡರೆ; ಇನ್ನೊಬ್ಬ ಕಲಾವಿದ ಅದೇ ಮಿಲನದಲ್ಲಿ ದೈವಸಾಕ್ಷಾತ್ಕಾರವನ್ನು, ಭಕ್ತಿಯ ಪರಾಕಾಷ್ಟತೆಯನ್ನು ಕಾಣಬಹುದು. ಕಲೆಯ ಸಾಮ್ರಾಜ್ಯದಲ್ಲಿ ಪ್ರೀತಿ-ಒಲವುಗಳು ಎಲ್ಲಕ್ಕಿಂತ ಉತ್ಕಟವಾದ ಭವನೆಯೆನ್ನುವುದು ಎಲ್ಲರೂ ಒಪ್ಪುವ ಮಾತೇ ಆದರೂ ಆ ಒಲವನ್ನು ಒಬ್ಬೊಬ್ಬರು ಅರ್ಥೈಸುವ ರೀತಿ ಬೇರೆ ಬೇರೆ. ಒಬ್ಬೊಬ್ಬರ ದೃಷ್ಟಿಕೋನವೂ ಬೇರೆ. ರುಕ್ಮಿಣಿದೇವಿಯವರು ಎಲ್ಲಾ ತರಹದ ಪ್ರೀತಿ-ಪ್ರೇಮದಲ್ಲೂ ದೈವಿಕ ಭಾವವನ್ನು ಕಂಡರು. ಅವರು ಕಂಡ ಸತ್ಯದ ಬೆಳಕಿನಲ್ಲಿ [...]

ಚೈತ್ರ ವೈಶಾಖ ೨೦೧೧: ಸಂಪುಟ ೪/೬ ಮತ್ತು ೫/೧ ರ ರಂಗಸ್ಥಳದ ತಿಂಗಳ ಚರ್ಚೆಗೆ ಉತ್ತರ

Thursday, April 14th, 2011

ಯಕ್ಷಗಾನದಲ್ಲಿ ವೀರಪಾತ್ರ ಪ್ರತಿಪಾದಕವಾದ ಏರುಪದ್ಯದ ಭಿನ್ನವಾಗುವ ಹಾಡುವಿಕೆಗೆ ಮೌಲಿಕ ಚಿಂತನೆ ಅಗತ್ಯ. ಬೊಬ್ಬೆ ಅನಗತ್ಯ. ಆದರೆ ಈಗಲೂ ಅದೇ ಹೆಚ್ಚಿಗೆ ಇದೆ. ತೆಂಕಲ್ಲೂ-ಬಡಗಿನಲ್ಲೂ ಏರುಪದ್ಯಗಳಲ್ಲಿ ಬಡಗು ತಿಟ್ಟಿನ ಹಳೆ ವಿಧಾನ ಸುವ್ಯವಸ್ಥಿತವಲ್ಲ. ಆದರೆ ಒಟ್ಟಿನಲ್ಲಿ ಏರುಪದಗಳ ಕುರಿತು ವಿವೇಚನೆ ಮಾಡುವಾಗ ದಿ. ಮಂಡೆಚ್ಚ, ಮಾಂಬಾಡಿ, ಉಪ್ಪೂರು, ನಾವಡ, ನೆಬ್ಬೂರು, ಪದ್ಯಾಣ, ಹೊಳ್ಳ ಭಾಗವತರ ಕೆಲವು ಧ್ವನಿ ಮುದ್ರಣ ಕೇಳಿ ಹೋಲಿಸಿ ನೋಡುವುದು; ಕಲೆಯಲ್ಲಿ ನಮಗೆ ವ್ಯಕ್ತಿಗಳ ಬಗೆಗೆ ಎಷ್ಟೇ ಅಭಿಮಾನವಿದ್ದರೂ ಯಾವುದು ಸರಿಯೆಂಬುದೇ ಮುಖ್ಯ ಹೊರತು ಯಾರು [...]

ಭಕ್ತಿ ಶೃಂಗಾರದ ಬಳಕೆ ಎಷ್ಟು ಔಚಿತ್ಯ?

Monday, February 14th, 2011

ಗಂಡು ಹೆಣ್ಣಿನ ಪ್ರೀತಿ ಬೇರೆ ಯಾವ ಬಗೆಯ ಸಂಬಂಧದ ಪ್ರೀತಿ, ಮಿಲನಕ್ಕಿಂತಲೂ ಉತ್ಕಟ. ಅದರಲ್ಲಿ ಪರಮಾತ್ಮನನ್ನು ಆರೋಪಿಸಿ ನೋಡುವ ಕ್ರಮ ಇತ್ತೀಚೆಗೆ ವ್ಯಾಪಕ. ಆದರೆ ಕೇವಲ ಪರಮಾತ್ಮ ಜೀವಾತ್ಮ ಎಂದಿರುವುದಷ್ಟೇ ಸಾಕಾಗುವುದಿಲ್ಲ, ಅದನ್ನು ಪೂರ್ಣವಾಗಿ ಒಪ್ಪಲಾಗುವುದಿಲ್ಲ್ಲ ಎಂಬುದಿರುವುದಕ್ಕೇ ಅಲ್ಲವೇ, ನಾಯಕ ನಾಯಿಕಾ ಭಾವ ಬಂದದ್ದು? ಶೃಂಗಾರ ಬರೀ ಭಕ್ತಿ ಎಂದಾಗುತ್ತಿದ್ದರೆ ಬರೀ ಸ್ವಾಧೀನ ಪತಿಕೆ ಸಾಕಾಗಿರ್ತಿತ್ತಲ್ವಾ? ಆದರೆ ಅದಷ್ಟೇ ಸಾಕಾಗುವುದಿಲ್ಲ ಎಂದಿದ್ದಕ್ಕೇ ಉಳಿದ ೭ ಬಗೆಯ ಪರಕೀಯ ನಾಯಿಕೆಯರು ಇರುವುದು. ಹಾಗೆ ನೋಡಿದರೆ ಪರಮಾತ್ಮನಿಗೆ ನಾವೆಲ್ಲರೂ ಪರಕೀಯರೆ. [...]

ದಿ. ಕಾಳಿಂಗ ನಾವುಡ

Friday, October 15th, 2010

ನೂಪುರ ಭ್ರಮರಿಯ ೪/೪ರಲ್ಲಿರುವ ದಿ. ಭಾಗವತ ಕಾಳಿಂಗ ನಾವಡರ ಕುರಿತ ಲೇಖನದ ಬಗೆಗೆ ಒಂದು ಚಿಕ್ಕ ಅಭಿಪ್ರಾಯ. ದಿ. ನಾವಡರು ಶ್ರೇಷ್ಟ ಕಲಾವಿದ, ‘ಸ್ಟಾರ್’ ಎರಡೂ ಹೌದು. ಆದರೆ-
1. ‘ಏರುಪದ’ಗಳು ನಾವಡರ ‘strong area’ ಅಲ್ಲ.
೨. ಮುಂಬಯಿಯಲ್ಲಿ ಚಿಟ್ಟಾಣಿ-ನಾವಡರು ಪ್ರವೇಶಿಸಿದ ಕಾಲಕ್ಕೆ ಅದು ಯಕ್ಷಗಾನದ ಗಂಧಗಾಳಿ ಇಲ್ಲದಿದ್ದ ಪ್ರವೇಶ ಆಗಿತ್ತೇ? ಸುಮಾರು ೧೮೨೫ರಿಂದಲೇ ಅಲ್ಲಿ ಯಕ್ಷಗಾನವಿತ್ತು. ೧೯೪೦ರ ಬಳಿಕ ಹಲವು ಮೇಳಗಳು, ತಂಡಗಳು ಅಲ್ಲಿ ಪ್ರದರ್ಶನ ನೀಡಿವೆ. ಇರಾ-ಕರ್ನಾಟಕ [...]