ಅಂಕಣಗಳು

ನೂಪುರ ಪತ್ರಿಕೆ

ಆರನೇ ವರ್ಷೋತ್ಸವದ ವಿಶೇಷ ಸಂಚಿಕೆ : ಮಾಘ ಫಾಲ್ಗುಣ (ಜನವರಿ -ಫೆಬ್ರವರಿ ೨೦೧೨) -ಶಿಶಿರ ಶೃಂಗಾರ

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನಾಟ್ಯವೆಂದಾಗ ಸಾಮಾನ್ಯ ವೀಕ್ಷಕ ಬಯಸುವುದೇನು? ಎಂಬ ಪ್ರಶ್ನೆಯಿಂದ ಮೊದಲ್ಗೊಂಡು ನೃತ್ಯದ ಹಲವು ಆಯಾಮಗಳತ್ತ ಹೊರಳಿಕೊಳ್ಳುವ ಅಗತ್ಯ ನಮ್ಮದುರಿಗೆ ಸದಾ ಇದೆ. ಇಂತಹ ಸಂವಾದಗಳ ಮೂಲಕ ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುವ ಗುರಿ ನೂಪುರ ಭ್ರಮರಿಯದ್ದು. ಯಾವುದೇ ಲೇಖನದ ಬಗೆಗಾದರೂ ಮುಕ್ತ ಸಂವಾದಕ್ಕೆ ಅವಕಾಶವಿದೆ. ಇಂತಹ ಸಂವಾದಗಳು ಹಲವು ಲೇಖನದ ಮೂಲಕವೂ ತೆರೆದುಕೊಂಡಿದೆ ; ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಇದು ಚಿಂತನೆಗಳ ಚಾವಡಿ. ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು ಈ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ ಕುರಿತೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ರಂಗ ಚಟುವಟಿಕೆಗಗಳ ಬಗೆಗಿನ ಎಲ್ಲಾ ಪ್ರಶ್ನೋತ್ತರ, ಸಂವಾದಗಳಿಗೂ ಇಲ್ಲಿ ಆದ್ಯತೆಯಿದೆ.
It is a discussion board to expand our horizon of thinking. Here people from different sector of society and art can participate. Either you can pose a question or opinion otherwise you can also take part as a resource person to explain the issues.

ಸಂಚಿಕೆ ೫, ಸಂಪುಟ ೨

Wednesday, October 15th, 2008

ಮಂಜೀರದಲ್ಲಿ ತಿಳಿಸಿದಂತೆ ಭಾರತಕ್ಕೆ
ಲಲಿತಕಲೆಗಳ ಸಾಂಪ್ರದಾಯಿಕ ಗುರುಪರಂಪರೆ ಯೊಂದಿಗೆ
ಕಾಲಘಟ್ಟದ ಡಿಗ್ರಿ, ಸರ್ಟಿಫಿಕೇಟುಗಳ
ಮಾನ್ಯತೆಯೂ ಬೇಕು ಎಂಬುದು ನನ್ನ ಅಭಿಪ್ರಾಯ.
ಚೂರ್ಣಿಕೆ ಸಂಸ್ಕೃತದಲ್ಲಿ ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ದೇವರ,
ಆಶ್ರಯದಾತರ ಹೊಗಳಿಕೆಯಾಗಿ; ವೈಷ್ಣವಿ ಎನ್. ಅವರು ಹೇಳಿದ ಸಂದರ್ಭಗಳಲ್ಲಿಯೂ
ರೂಢಿಯಲ್ಲಿವೆ. ವಚನಗಳೂ ಪದ್ಯಗಂಧಿ ಗದ್ಯ ಸಾಹಿತ್ಯ.
ರಾಗ, ತಾಳ, ಸಂಗೀತ ಅಳವಡಿಸಿ, ಜೀವನದ ಹಲವು ಅನುಭವ ಗಳನ್ನು
ನೃತ್ಯಗಾರರು ಅಭಿನಯಿಸುತ್ತಾರೆ. ಇದು ವೈಜಯಂತಿ ಕಾಶಿ ಅವರು
ಹೇಳಿದಂತೆ ಕಲಾವಿದರು ಬೆಳೆಸಿಕೊಳ್ಳುವ ಆಯಾಮಗಳು.
ಮುದ್ರೆಗಳ ಲಕ್ಷಣವನ್ನು ಬೇರೆಬೇರೆ ಕಡೆಗಳಿಂದ ಸಂಗ್ರಹಿಸಿ, ವಿಸ್ತರಿಸಿ ಹೆಚ್ಚಿನ
ಓದಿಗೆ-ತಿಳಿವಳಿಕೆಗೆ ದಾರಿಯಾಗುತ್ತದೆ ತಮ್ಮ ಕೊಡುಗೆ.
ಪುಂಡರೀಕ ವಿಠಲನ ಸಂಗೀತ ನೃತ್ಯಗ್ರಂಥಗಳನ್ನು ಸಂಸ್ಕೃತದಿಂದ [...]

ಸಂಚಿಕೆ ೪ , ಸಂಪುಟ ೨

Friday, August 15th, 2008

ಅಂಗಳದ ಮಾತು ತಿಂಗಳ ಚರ್ಚೆ
ಸಂಪಾದಕೀಯದಲ್ಲಿ ಪ್ರಸ್ತುತಪಡಿಸಿದ ನೃತ್ಯಾಭ್ಯಾಸ ಕಲೆಯ ಕಲಿಕಾಭ್ಯರ್ಥಿಗಳ ಹಾಗೂ ಪಾಲಕರ ಮನೋಸ್ಥಿತಿಯ ವಾಸ್ತವಿಕತೆಯ ಬಗ್ಗೆ ವ್ಯಕ್ತಪಡಿಸಿದ ಮುಕ್ತಕಗಳು ಇಂದಿನ ನವಕಲಾವಿದರ ನಿಜರೂಪವೇ ಆಗಿರುವುದು ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಖೇದಕರವೇ ಹೌದು. ಸದಾಚಾರಕ್ಕೆ ನಿಧಾನದಲ್ಲಾದರೂ ಪ್ರಾಧಾನ್ಯತೆ ದೊರೆಯಬಹುದೆಂಬ ಆಶಾವಾದದ ದೃಢ ನಿಶ್ಚಯ ಮನೋಭಾವವೇ [...]

ಸಂಚಿಕೆ ೨, ಸಂಪುಟ ೨

Tuesday, April 15th, 2008

ವಿಶೇಷಾಂಕ ಚೆನ್ನಾಗಿ ಬಂದಿದೆ. ಚರ್ಚೆಗಳು, ವಿಚಾರ, ಲೇಖನಗಳ ಗುಣಮಟ್ಟ ಒಳ್ಳೆಯದಿದೆ. ನಿಮ್ಮ ಸಾಹಸಕ್ಕೆ ಅಭಿನಂದನೆಗಳು ಮತ್ತು ಶುಭಾಕಾಂಕ್ಷೆಗಳು.
ಡಾ| ಆರ್. ಗಣೇಶರ ಚಿಂತನೆಗಳು ಉತ್ತಮವಾಗಿದೆ. ಪರಂಪರೆ ಮತ್ತು ಪ್ರಯೋಗ- ಇವೆರಡೂ ಕೆಲವೊಮ್ಮೆ ಅನುಕೂಲಶಾಸ್ತ್ರಗಳಾಗಿಬಿಡುವುದು ನಿಜ. ನೃತ್ಯಶಿಕ್ಷಕರಿಗೆ (ಹೆಚ್ಚಿನವರಿಗೆ) ನೃತ್ಯದ/ಒಟ್ಟಾರೆ ಕಲೆಗಳ ಕುರಿತ ತಾತ್ವಿಕ ಜ್ಞಾನ ಕಡಿಮೆ. ಹೀಗಿರುವಾಗ ಭರತನಾಟ್ಯ [...]

ಸಂಚಿಕೆ ೧ , ಸಂಪುಟ ೨

Friday, February 15th, 2008

ಕಳೆದ ಸಂಚಿಕೆಯ ನರ್ತನ ಸುರಭಿಯಲ್ಲಿ ಪದಂಗಳ ಬಗೆಗಿನ ವೈಷ್ಣವಿ ಎನ್. ಅವರ ವಿಮರ್ಶಾತ್ಮಕ ಲೇಖನದ ಕುರಿತಾಗಿ ಯಕ್ಷಗಾನ ವೆಬ್‌ಸೈಟ್ ಸಂಪಾದಕ, ಕಲಾವಿದ, ಸಂಶೋಧಕ ಮಂಗಳೂರಿನ ಡಾ| ಎಂ. ಪ್ರಭಾಕರ ಜೋಷಿ ತಮ್ಮ ಅಭಿಪ್ರಾಯವನ್ನು ಮುಂದಿಟ್ಟು ಪದಂಗಳ ಕುರಿತಾದ ನರ್ತನ ಲೋಕದ ವಿಚಾರಗಳನ್ನು ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗಳಿಗೆ ಜೊತೆಗೊಂದು ಅನಿಸಿಕೆಯೂ ಇದೆ. [...]

ಸಂಚಿಕೆ ೫ ಸಂಪುಟ ೧

Wednesday, August 15th, 2007

ಕಳೆದ ಬಾರಿಯ ರಂಗಭ್ರಮರಿಯಲ್ಲಿ ನೃತ್ಯ ಗುರು, ಕಲಾವಿದೆ,
ವಿಮರ್ಶಕಿ ಪದ್ಮಜಾ ಸುರೇಶ್ ಅವರು ಭರತನಾಟ್ಯದಲ್ಲಿ ಪುರುಷ-
ಸ್ತ್ರೀಯರ ನಡುವಿನ ಲಿಂಗ ಅಸಮಾನತೆಯ ದೃಷ್ಟಿಯ ಕುರಿತಾಗಿ
ತಮ್ಮ ಅಭಿಪ್ರಾಯವನ್ನು ಮುಂದಿಟ್ಟು ಚರ್ಚಿಸಿದ್ದರು. ಹಿರಿಯ
ನೃತ್ಯಗುರು ಮುರಳೀಧರರಾಯರು ದರ್ಶನ ಭ್ರಮರಿಯಲ್ಲಿ ಹೇಳಿದ
ಭರತನಾಟ್ಯದಲ್ಲಿ ಪುರುಷರ ಅಭಿನಯ ಎಂಬ ವಿಷಯಕ್ಕೆ ಸೂಕ್ತ
ಸಂವಾದವೂ ಇದಾಗಿತ್ತು.
ಅಂತೆಯೇ ಈ ಬಾರಿ ಯಕ್ಷಗಾನ ತಾಳಮದ್ದಳೆ ಕಲಾವಿದ,
ವಿಮರ್ಶಕ, ಸಂಶೋಧಕ, ಸಂಘಟಕ, ಯಕ್ಷಗಾನ ವೆಬ್‌ಸೈಟ್‌ನ
ಸಂಪಾದಕರಾದ ಡಾ| ಎಂ. ಪ್ರಭಾಕರ ಜೋಷಿ ತಮ್ಮ
ಅಭಿಪ್ರಾಯವನ್ನು ತಿಂಗಳ ಚರ್ಚೆಯಲ್ಲಿ ಅಂಗಳದ ಚಾವಡಿಯಲ್ಲಿ
ತೆರೆದಿಟ್ಟಿದ್ದಾರೆ.

The article discusses gender imaging in a powerful [...]

ಸಂಚಿಕೆ ೪, ಸಂಪುಟ ೧

Wednesday, August 15th, 2007

ನಾಟ್ಯವೆಂದಾಗ ಸಾಮಾನ್ಯ ವೀಕ್ಷಕ ಬಯಸುವುದೇನು? ಶಾಸ್ತ್ರೀಯ
ನೃತ್ಯದ ಬಗೆಗಿನ ಅಸಡ್ಡೆಗೆ ಕಾರಣ ಯಾವುದು ಎಂಬುದನ್ನು ವೀಕ್ಷಕರ
ನೆಲೆಯಲ್ಲಿ ನಿಂತು ಭ್ರಮರಿಯ ಅಂಗಳದಲ್ಲಿ ಮಾತನಾಡಿದ್ದಾರೆ
ಚಿಕ್ಕಮಗಳೂರು ರಾಜಗಿರಿ ಎಸ್ಟೇಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ
ಎಬಿಸಿ ಕಾಫಿ ಕಂಪನಿಯ ಉದ್ಯೋಗಿ ಅಕ್ಷಯರಾಮ ಕೆ.,
ನೃತ್ಯದ ಬಗೆಗಿನ ಎಲ್ಲ ಸಂವಾದಗಳಿಗೂ ಇಲ್ಲಿ ಆದ್ಯತೆಯಿದೆ.
ನಾಟ್ಯವೆಂದೊಡನೆ ಸಾಮಾನ್ಯನ ಕಣ್ಣ ಮುಂದೆ ಬರುವುದು ಭರತನಾಟ್ಯ.
ಮೈ ತುಂಬಾ ಆಭರಣ, ಅಲಂಕಾರ, ಹಿಮ್ಮೇಳ-ಪಕ್ಕವಾದ್ಯ. ಹಾಡಿಗೆ
ತಕ್ಕದಾಗಿ ನೃತ್ಯ, ಆಂಗಿಕ ಚಲನೆ. ಓರ್ವ ಸಾಮಾನ್ಯ ವೀಕ್ಷಕನಿಗೆ ಇದಕ್ಕಿಂತ
ಆಚಿನದ್ದು ಕಲ್ಪನೆಗೂ ಮೀರಿದ ವಿಷಯಗಳು.
ಭರತನಾಟ್ಯದಲ್ಲಿನ ವಿವಿಧ ಅಂಗಗಳು, ಪಾರಿಭಾಷಿಕ ಶಬ್ದಗಳು,
ಭಂಗಿಗಳು ಇವ್ಯಾವುವೂ ಆತನ [...]

ಸಂಚಿಕೆ ೨, ಸಂಫುಟ ೧

Thursday, February 15th, 2007

ಶತಾವಧಾನಿ ಡಾ |ಗಣೇಶ್ ಹೀಗೆ ಹೇಳುತ್ತಾರೆ. . .
ಇಂದಿನ ರಂಗ ಪ್ರವೇಶಗಳು ನೃತ್ಯದ ಬೊಜ್ಜ ಅಂದರೆ ಶ್ರಾದ್ಧ ಮಾಡ್ತಿವೆ.
ವಿದ್ಯಾರ್ಥಿಗಳೆಲ್ಲರೂ ಕಡ್ಡಾಯವಾಗಿ ನಾವು ರಂಗಪ್ರವೇಶಕ್ಕೆ ಇಷ್ಟೆಲ್ಲಾ ದುಬಾರಿ
ಖರ್ಚು ಮಾಡಿ ಮಾಡೋದಿಲ್ಲ ಅಂದ್ರೆ ಯಾತಕ್ಕಾಗೋದಿಲ್ಲ? ವಿದ್ಯಾರ್ಥಿಗಳಿಗೇ
ತಮ್ಮ ರಂಗ ಪ್ರವೇಶ ಮಿನಿಮದುವೆ ಆದ ಹಾಗಿರಬೇಕು ಅಂತಿರುತ್ತೆ ಅಂತಾದ
ಮೇಲೆ, ರಂಗ ಪ್ರವೇಶದ ಬೂಟಾಟಿಕೆಗಳನ್ನು ತಡೆಯೋದು ಹೇಗೆ?
ನಾಟ್ಯಾಚಾರ್ಯ ಕೆ. ಮುರಳೀಧರ ರಾವ್ ಅವರ ಅನಿಸಿಕೆ ಹೀಗಿದೆ…
ಮೊದಲು ರಂಗಪ್ರವೇಶದಲ್ಲಿ ನರ್ತಕಿಯ ನೃತ್ಯ ಅಭಿನಯ ಭಾಗದ ಜಾಣ್ಮೆ
ಮುಖ್ಯವಾಗಿತ್ತು. ಈಗೀಗಂತೂ ರಂಗ ಪ್ರವೇಶಕ್ಕೂ ಮದುವೆಗೂ ವ್ಯತ್ಯಾಸವೇ
ಇಲ್ಲ. ಒಂದೊಂದ್ಸಲ ರಂಗ [...]