: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ನರ್ತನ ಸುರಭಿ

ನೃತ್ಯ : ಅಂದು, ಇಂದು, ಮುಂದು (ಭಾಗ ೯)
ನಮ್ಮ ಮನಸ್ಸಿನಲ್ಲೆದ್ದ ಸಾಮಾಜಿಕ ಬದಲಾವಣೆಗಳು ಕಲೆಯ ಸಾಮ್ರಾಜ್ಯದಲ್ಲಿ ಬದಲಾವಣೆ ಹೊಂದಿದ್ದಾವೆ. ಕಳೆದ ೫೦ ವರ್ಷಗಳಲ್ಲಿ ಭರತನಾಟ್ಯದ ಮೇಲೆ ಬೆಳಕು ಚೆಲ್ಲುವವರು ಇಂದು ಕಾಣೆಯಾಗಿದ್ದಾರೆ. ಹಿಂದಿನ ನಟ್ಟುವನ್ನಾರುಗಳೂ, ಅಂದಿನ ಭರತನಾಟ್ಯದ ಕುಲಾಚಾರರೂ ಇಂದಿಲ್ಲ. ಅವುಗಳ ಜಾಗವನ್ನು ತುಂಬಲು ಇಂದು ಅಲ್ಲಿ ಇಲ್ಲಿ ಕಲಾಕ್ಷೇತ್ರಕ್ಕೆ ಸಮಾನವಾದ ಸಂಸ್ಥೆಗಳು ಹುಟ್ಟಿಕೊಂಡಿವೆ.

ಬದಲಾದ ಈ ಕಾಲದಲ್ಲಿಯೇ ಹೊಸ ಸೋಗಿನಲ್ಲಿ ನಮ್ಮೆದುರು ಅತಿ ಬುದ್ಧಿವಂತರಾದ ಮಂದಿ ಮುಂದೆ ಬಂದಿದ್ದಾರೆ. ಹೊಸಮಾರ್ಗ ದರ್ಶನವೂ ಇದೆ. ಅವರು ತಿಳಿದುಕೊಂಡಿರುವುದು ಅಪಾರ ಹಾಗೂ ಸಮೃದ್ಧ ಎಂಬ ನಂಬಿಕೆ ಬಹಳ ಜನರದ್ದು ! ಇಂತಹ ಹೊಸಬರು ಆಗಾಗ ಬದಲಾಯಿಸುವ ಗುಣ ಭರತನಾಟ್ಯಕ್ಕೆ ಬಂದಿರುವುದನ್ನು ನೋಡಿದ್ದಾರೆ. ಅಲ್ಲಿ ನಡೆಯಬೇಕಾಗಿದ್ದ ವಿವಿಧ ರೀತಿಯ ಅಲೋಚನೆ, ಅದಕ್ಕೆ ಪೂರಕವಾಗಿ ಸಾಂಸ್ಕೃತಿಕ ಹೆಚ್ಚು ಕಡಿಮೆಗಳು ಹಾಗೂ ತಾವು ಕಂಡಂತೆ ಈಗಿನ ಬದಲಾವಣೆಗಳೆಲ್ಲಾ ಒಟ್ಟುಸೇರಿ ಭರತನಾಟ್ಯದ ಒಳಗಿನ ಭಾವನೆಗಳನ್ನು ಮೆಟ್ಟಿ ನಿಲ್ಲುತ್ತದೆ.

ಮಾನುಷ ಪ್ರಕೃತಿಗೆ ಸಂಬಂಧಿಸಿದ ವಸ್ತು ಲೋಕದ ಹಲ ರೀತಿಯ ಕ್ರಮಗಳಿಗೆ ಸಂಬಂಧಿಸಿದುದು. ನಾಟ್ಯಶಾಸ್ತ್ರದಲ್ಲಿ ಇದನ್ನೇ ಹೇಳಿದೆ. ಅದರ ಕುರಿತು ಯೋಚನೆಗಳು ಬರುತ್ತಿರುತ್ತವೆ. ಯೋಗ್ಯ ಶಾಸ್ತ್ರ ಅಥವಾ ಯುದ್ಧೋನ್ಮುಖವಾದ ಹಲವು ಪರಿಚ್ಛೇದಗಳಿವೆ. ಇದರಲ್ಲಿರುವ ಕೆಲವು ವಿಷಯಗಳ ವಿವೇಚನೆಯಿಂದ ನಾಟ್ಯಕ್ಕೆ ಹೊಸ ರೂಪ ಕೊಡುವುದು ಸಾಧ್ಯವಿಲ್ಲವೇ? ಈಗೀಗ ಕೆಲವು ನರ್ತಕರು ತಮ್ಮ ಯೋಚನೆಗಳನ್ನು ನಾಟ್ಯರಂಗದಲ್ಲಿ ತರಲು ಯೋಚಿಸಿದ್ದುಂಟು. ಇತರ ರೀತಿಯ ಕಲೆಗಳು ಬಾಂಧವ್ಯ ಪಡೆದು ಅದಕ್ಕೆ ಸರಿಯಾದ ಸಂಗೀತವನ್ನು ಪ್ರಯೋಗಿಸಿದದ್ದೂ ಇದೆ. ಈ ರೀತಿಯ ಬದಲಾವಣೆಗಳು ಈ ನಾಟ್ಯಕಲೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬಲ್ಲುದು.

ಭರತನಾಟ್ಯದಂತಹ ಕ್ರೋಢಿಕರಿಸಿದ ವಿದ್ಯೆ, ಸೃಷ್ಟ್ಯಾತ್ಮಕ ಕಲಾವಿದರಿಗೆ ಹಲವು ಅಧಿಕಾರವನ್ನು ನೀಡಿದೆ. ತಮ್ಮ ವಿದ್ಯೆಯಲ್ಲಿ ಬೇಕಾದಷ್ಟೂ ಪ್ರಯೋಗ ಪರೀಕ್ಷೆಯನ್ನು, ನವೀನತೆಯ ಕಲ್ಪನೆಯನ್ನೂ ಇತ್ತಿದೆ. ನಮ್ಮ ದೃಷ್ಟಿಗೆ ಅಂತಹ ಸಾಧನಾಕಾರ್ಯ ಕೆಲಬಾರಿ ಉತ್ತಮ ನಾಟ್ಯಾಂಶಗಳನ್ನು ಕೊಟ್ಟಿದುದೂ ಇದೆ. ಕೆಲವರಂತೂ ಕಳೆದುದನ್ನು ಮರೆತಾಗಲಿ ಅಥವಾ ಪ್ರಯೋಗಗಳನ್ನು ದೂರೀಕರಿಸಿದ್ದಾಗಲೀ ಇಲ್ಲ. ಬದಲಾಗಿ ಇರುವ ಸಂಪ್ರದಾಯದಲ್ಲಿ ಹೊಸದನ್ನು ಕಾಣಿಸುವ ಹದದಲ್ಲಿದ್ದಾರೆ.

ನಾವು ಹೊಸಶಕೆಯ ಆರಂಭದಲ್ಲಿದ್ದಂತೆ ತೋರುತ್ತಿದೆ. ಭರತನಾಟ್ಯದಲ್ಲಿ ಇರುವ ಸನ್ನಿವೇಶಗಳಲ್ಲದೆ ಬೇರಿತರ ರೀತಿಯಲ್ಲಿ ಕಲಾವಿದನು ಸಮಾಜಿಕರ ಆಸೆ, ಆಕಾಂಕ್ಷೆಗಳಿಗೆ ಬಲಿಯಾಗುತ್ತಾನೆ. ಎಲ್ಲೆಲ್ಲೂ ನಮ್ಮ ಕಣ್ಣಿಗೆ ವಿರುದ್ಧ ದಿಕ್ಕಿನಲ್ಲಿ ಹರಿವುದು, ಕೆಲವೊಮ್ಮೆ ಅನುಕೂಲಸ್ಥಿತಿಗೂ ಬರುವಂತಹ ಕಾಲವಿದು. ಕೆಲಬಾರಿ ಕಾಣಿಸುವ ಹೀನಪ್ರದರ್ಶನಗಳು, ಅಪರೂಪವಾಗಿ ಪ್ರದರ್ಶಿಸುವ ಉತ್ತಮ ಸಾಹಸಕ್ರಿಯೆಗಳು ಮತ್ತು ಅರ್ಥದ ಪ್ರಶ್ನೆಗಳೂ ಇವೆ.

ಜನರಲ್ಲಿ ಹೊಸಪ್ರಪಂಚವನ್ನು ಕಾಣುವ ಲವಲವಿಕೆ ಇದೆ. ಹೀಗಾಗಿ ಹಿಂದಿನ ಶುದ್ಧತೆಯನ್ನು ಮರೆಯಬೇಕಾಗಿದೆ.

ಭರತನಾಟ್ಯದಲ್ಲಿ ಇರುವ ಮಾರ್ಗ ಪದ್ಧತಿಯನ್ನು ಫಕ್ಕನೆ ಬದಲಾಯಿಸುವುದು ಸಾಧ್ಯವೇ? ಆ ಮಾರ್ಗವನ್ನು ಕಂಡುಹಿಡಿದ ಹಿರಿಯರ ಬುದ್ದಿವಂತಿಕೆಯನ್ನು ಹೊಗಳದೇ ಇರಲು ಸಾಧ್ಯವಿಲ್ಲ. ಈಗ ಅವುಗಳನ್ನು ಬದಲಾಯಿಸುವ ಪ್ರಮೇಯ ಬಂದರೆ ಹಿಂದಿನವರಿಗಿಂತ ನಾವೆಷ್ಟೋ ಮುಂದಿರಬೇಕಲ್ಲವೇ? ಹಾಗಿದ್ದೇವೆಯೇ?

ನಮ್ಮಿದಿರಿಗೆ ಒಂದು ಪ್ರಶ್ನೆ ಬಂದು ನಿಂತಿದೆ- ನಾವು ಏನನ್ನು ಬದಲಾಯಿಸಬೇಕು? ಹಳೆಯ ಕಾಲದ್ದೇ ಅಥವಾ ನಮ್ಮ ಹೊಸ ಬದುಕಿನ ಆಯಾಮವನ್ನೇ? ಆದರೆ ಈ ಹಿಂದೆ ಅಥವಾ ಮುಂದು ಎಂಬುದು ಹೆಚ್ಚು ದೂರದಲ್ಲಿಲ್ಲ. ಅವುಗಳಲ್ಲಿ ಒಂದು ತರದ ಸಾಮರಸ್ಯ ಅಥವಾ ಸಂಬಂಧ ಇರಲೇಬೇಕು. ಈಗ ನಾವು ಮಾಡಿರುವ ಬದಲಾವಣೆ ಹಿಂದಿನದ್ದನ್ನು. ಇಂದು ಮುಂದಿನದು ಎನ್ನುವುದಕ್ಕೆ ನಾವೇನು ಹೊಸದನ್ನು ಮಾಡಿದ್ದೇವೆ? ಭವಿಷ್ಯತ್ತಿಗೆ ನಾವೇನನ್ನು ಮಾಡಿ ತೋರಿಸಿದ್ದೇವೆ? ನಾವೀಗ ಬದಲಾವಣೆ ಮಾಡಿದುದು ಮುಂದಿನವರಿಗೆ ಆ ‘ಮಾರ್ಗ’ಇನ್ನೂ ಸುಲಭವಾಗಲಿ ಎಂದಲ್ಲವೇ?

ಏನಿದ್ದರೂ ಇದೊಂದು ತರದ ಯುದ್ಧ ತಯಾರಿಯೇ ! ಆದರೆ ಇದಕ್ಕೂ ನಮ್ಮ ಎದೆ ಸ್ವಲ್ಪ ಗಟ್ಟಿಯಾಗಿರಬೇಕು.

ವಿಷಯ ಚರ್ಚಾಸ್ಪದ.

(ಮುಗಿಯಿತು.)

ನೃತ್ಯ- ಅಂದು, ಇಂದು, ಮುಂದು ( ಭಾಗ ೮)
ಭರತನಾಟ್ಯವನ್ನು ಕಾಣುವ ಜನಸ್ತೋಮ ಹೆಚ್ಚಿದೆ. ಅದಕ್ಕೆ ತಕ್ಕಂತೆ ಕಲೆ ಇಂದು ಕುಲಗೆಟ್ಟು ನಡೆಯುತ್ತಿದೆ. ನಾಟ್ಯದ ರೂಪು ವಿನ್ಯಾಸಗಳೆಲ್ಲಾ ಜನರಲ್ಲಿ ನಾನಾ ಭಾವನೆಗಳನ್ನು ಕೆರಳಿಸಿದೆ. ಇದಕ್ಕೆ ಕಾರಣರು ಯಾರು? ಹಣವಂತರೇ? ನರ್ತಿಸುವ ಬಾಲಕಿಯರೇ? ದುಡ್ಡಿನ ಮದವೇ? ಗುರುಗಳೆನಿಸಿಕೊಂಡವರ ಲೋಭವೇ? ಹೊಸ ಸೋಗಿನಲ್ಲಿ ನಮ್ಮೆದುರು ಅತಿ ಬುದ್ಧಿವಂತರಾಗಿ ನಿಂತು ಅಪಾರ, ಸಮೃದ್ಧ ಅರಿವು ಪಡೆದುಕೊಂಡಂತಿರುವ ಮಂದಿಯೇ? ಅಥವಾ ವಿಮರ್ಶಿಸುವವರ ಧೈರ್ಯ ಸಾಲದ ಅವಸ್ಥೆಯೇ? ಕಲಿಯಲು ಬಂದ ಒಬ್ಬ ವಿದ್ಯಾರ್ಥಿಗೆ ಪ್ರಥಮವಾಗಿ ಹೇಳಿಕೊಡುವ ವಿದ್ಯೆ ಎಂದರೆ ‘ನಿನ್ನ ಅರಂಗೇಟ್ರಂ ಮಾಡಿಸುವುದು ನನ್ನ ಉದ್ದೇಶ’ ! ನೀರಿನಂತೆ ವೆಚ್ಚ ಮಾಡಲು ಹಣ ಕೈಯ್ಯಲ್ಲಿರುವಾಗ ಪೋಷಕರದ್ದೂ ಅದೇ ಆಶೆ. ಹೇಳಿಕೇಳಿದ ಫೀಸು ಕೊಟ್ಟು ಮಕ್ಕಳನ್ನು ಕಳುಹಿಸಿಕೊಟ್ಟರೆ ‘ಯಾರದೇನು ಗಂಟು ಹೋಯಿತು’ ಎಂಬ ಚಪಲ ಮಾತು ಹೆತ್ತವರದು. ‘ಅಮೂಲ್ಯ ಮಕ್ಕಳನ್ನು ಪಡೆದಿದ್ದೇನೆ’ ಮತ್ತು ತನ್ನ ಅಂತಸ್ತನ್ನು ತೋರಿಸುವ ಛಲ ಅವರಿಗೆ. ಹೀಗಿದ್ದಾಗ ಅವರ ದೃಷ್ಟಿಗೆ ಬೀಳುವ ವ್ಯಕ್ತಿಗಳು ಮತ್ತು ಅಂತಹುದೇ ಸಂದರ್ಭವನ್ನು ಕಾಯುವವರು ನರ್ತಕಶಿಕ್ಷಕರು. ತಯಾರು ಮಾಡುವವನಿಗೆ ಒಂದು ಅನಿರೀಕ್ಷಿತ ದುಡ್ಡಿನ ಹುತ್ತವಾದರೆ ; ತಮ್ಮ ಚಿಕ್ಕಮಕ್ಕಳು ಕುಣಿಯುವಾಗ ಹತ್ತು ಜನ ಯೋಗ್ಯರು (?) ಕುಳಿತು ನೊಡುವುದೇ ಪೋಷಕರ ಹಬ್ಬ. ಕೊನೆಗೆ ಅರಂಗೇಟ್ರಂನ ನರ್ತಕಿ ಕಲಿತದ್ದು ಕೇವಲ ಹುಡುಗಾಟವನ್ನು ಮಾತ್ರ ಎಂಬಂತಾಗುತ್ತದೆ. ಅರಂಗೇಟ್ರಂ ಆದಿಯಾಗಿ ಇಂದಿನ ಕಾರ್ಯಕ್ರಮಗಳು ದೃಶ್ಯದಲ್ಲಿ ನಡೆವ ಕಲಾ ‘ಸಂಪತ್ತು’. ಅದೂ ಅಲ್ಲದೆ ಭರತನಾಟ್ಯದ ಜೊತೆಗೆ ಕಾಣಲು ಅಸಾಧ್ಯವಾದ ಕೂಚಿಪುಡಿ, ಕಥಕ್, ಮೋಹಿಯಾಟ್ಟಂ… ಹೀಗೆ ಇನ್ನೂ ಅನೇಕ ಬೇರೆ ಬೇರೆ ಶೈಲಿಗಳು. (ಅವು ಯಾವುದೆನ್ನಲು ನಮಗೆ ಸಾಧ್ಯವಿಲ್ಲ.) ಇದಕ್ಕೆ ಸಲುವ ಯೋಗ್ಯ(?) ಸಂಗೀತಗಾರರು. ನೃತ್ಯದ ಒಂದೇ ಒಂದು ಬಗೆಯೂ ಅಸಮ್ಮತ, ಅಸಮರ್ಥವಾದರೂ; ಕೊನೆಯಲ್ಲಿ ಅವರೆಲ್ಲರ ಮುಗುಳುನಗೆ ಒಂದೇ ನಮಗೆ ಕಾಣಿಸುವುದು. ಬಹುಷಃ ‘ದುಡ್ಡು ಕೈಗೆ ಬಂತಲ್ಲ’ ಎಂಬ ಭಾವವೇ ಇರಬೇಕು ! ಇನ್ನು ಮುಂದಾದರೂ ‘ಅರಂಗೇಟ್ರಂ’ ಎಂಬ ಶಬ್ದಕ್ಕೆ ಜಾಗರೂಕರಾಗಿರಬೇಕು. ಅಲ್ಲಿ ರಂಗಸ್ಥಳದಲ್ಲಿ ಇದ್ದಾರೆ ದುಡ್ಡು ಬಾಚುವ ಮಹಾಮಹಿಮರು ! ಒಟ್ಟಿನಲ್ಲಿ ಕಲೆಯನ್ನೇ ಮಾರಾಟಕ್ಕಿಡುವ ಸನ್ನಿವೇಶದಲ್ಲಿ ನಿಜವಾಗಿ ಕಲಿಯಲು ಬಂದ ಬಾಲಕಿಯರು ಈ ಮಾರ್ಕೆಟ್ಟಿನಲ್ಲಿ ಏನನ್ನು ತಾನೇ ಕಲಿಯುತ್ತಾರೆ? ಫ್ಯಾಕ್ಟರಿಯಲ್ಲಿ ಹುಟ್ಟಿಕೊಂಡಂತೆ ಗುರುಗಳು (?) ಹುಟ್ಟಿಕೊಳ್ಳುವಾಗ ಅವರಿಗೆ ತಕ್ಕಂತೆ ಕಾರ್ಯಕ್ರಮ ನಡೆಯುವುದು ಅನೂಚಾನ ಪದ್ಧತಿ.  ಇಂತಹ ದೃಶ್ಯಗಳನ್ನು ಹಲವು ಬಾರಿ ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಜೊತೆಗೆ ಈ ಸಮಾರಂಭಗಳನ್ನು ಹಿಂಬಾಲಿಸಿ ಬರುವವರು ನರ್ತಕರೆಂಬ ಹಣೆಪಟ್ಟಿಗೆ ಸೇರಿಸಿಕೊಳ್ಳದೆ ಪಂಡಿತ (?) ರೆನಿಸಿಕೊಳ್ಳುತ್ತಾರೆ. ಅವರ ಹಿಂದಿನಿಂದ ಕಾಣಿಸುವವರು ಸಾಮಾನ್ಯ ಜನರು. ಮುಂದಿರುವುದು ಯಂತ್ರದಂತೆ ಸಾಗುವ ನಾಟ್ಯಾಂಗ ಮತ್ತು ಮನಸ್ಸಿಗೆ ಎಟುಕದ ಭಾವಾವೇಗ. ಕಲೆ ಎಂತಹ ಪ್ರಕಾರದ್ದು ಎಂಬ ಉದ್ದೇಶವಿರದೆ ಅದನ್ನು ಸಿಕ್ಕಾಪಟ್ಟೆ ಹೊಗಳುವ ಮತ್ತು ಹೊಗಳಿಸಿಕೊಳ್ಳುವ ಅತಿರೇಕದ ಅವಿವೇಕ ಬುದ್ಧಿ. ಆದರೆ ಎದುರು ನಿಲ್ಲುವವರು ಯಾರೂ ಇಲ್ಲ. ಬಹುಷಃ ಆತ್ಮರಕ್ಷಣೆಗೋ ಏನೋ !  ಪರಿಣಾಮ ; ಯೋಗ್ಯ ಸಭಾಸದರು ತಾವಾಗಿ ಕಡಿಮೆಯಾಗುತ್ತಾರೆ. ಅಲ್ಲದೆ ಈ ಲೋಪಗಳೇ ಕಲೆಗೆ ಆಪತ್ತನ್ನು ತರುತ್ತದೆ.

ನೃತ್ಯ : ಅಂದು, ಇಂದು, ಮುಂದು (ಭಾಗ ೭)
ಒಂದು ಪ್ರದರ್ಶನ ಕಾಲದ ಸಂದಿಗ್ಧ ಸನ್ನಿವೇಶದಲ್ಲಿ ಏಕವ್ಯಕ್ತಿಯಿಂದ ನಡೆವ ಕ್ರಿಯೆಯಲ್ಲಿ ಜಾಗರೂಕ ಪ್ರಜ್ಞೆ ಮುಖ್ಯವಾಗಿದೆ. ಕಲಾಗಾರನಿಗೂ ಅವನಿದಿರು ಕುಳಿತ ಪ್ರೇಕ್ಷಕನಿಗೂ ಇರುವ ಬಾಂಧವ್ಯದಲ್ಲಿ, ಅವನ ವಿಚಾರದಲ್ಲೇ ಆಗಲಿ ಅಥವ ಕಲೆಯ ವಿಚಾರದಲ್ಲೇ ಆಗಲಿ ಒಂದು ತರದ ಅವಿನಾಭಾವ ಸಂಬಂಧ ಏರ್ಪಡುತ್ತದೆ. ಉದಾ : ಒಬ್ಬ ಕೊಲೆಗಡುಕನು ಕೆಲಬಾರಿ ಜೀವನದ ಸಿಹಿ ಅನುಭವವನ್ನು ಮನಸ್ಸಿಗೆ ತಂದು ತೃಪ್ತಿಪಡುತ್ತಾನೆ. ಕಾರಣ-ಇಂತಹ ಯೋಚನೆಗಳು ಅವನ ಮನಸ್ಸಿಗೆ ಬಂದಾಗ ಸ್ವಲ್ಪ ಮಟ್ಟಿಗೆ ಆತನನ್ನು ನಗುವಿನಲ್ಲಿ ಹೊಸ ರೂಪ ಕೊಟ್ಟಿರಲೂಬಹುದು. ಆದರೆ ಕಲಾವಿದನು ದೂರದಲ್ಲಿದ್ದರೆ ಪರಸ್ಪರ ದೃಷ್ಟಿಗೆ ಆ ತರದ ಕೂಡುವಿಕೆ ಕಳಚಿ ಹೋಗುತ್ತದೆ. ಕಲಾಗಾರನ ಮುಖದ ಮೇಲಿನ ಭಾವನೆಯಾಗಲೀ, ಅವುಗಳ ಬದಲಾವಣೆಯಾಗಲೀ ಕಣ್ಣಿಗೆ ಕಾಣಿಸದಷ್ಟು ದೂರವಿದ್ದರಂತೂ ಇನ್ನೂ ಕಷ್ಟ. ಅದೂ ಸಾಲದೆ ತೆಲುಗು ಅಥವಾ ತಮಿಳು ಭಾಷೆಯ ಸಂಪೂರ್ಣ ಅರಿವು ಪ್ರೇಕ್ಷಕನಿಗೆ ಇರುವುದು ಕಡಿಮೆ.

ನಮ್ಮಲ್ಲಿ ಪದವರ್ಣಗಳು, ಪದಾಭಿನಯಗಳು, ಕೆಲಬಾರಿ ಜಾವಳಿಗಳೂ ಇವೆ. ಜಾವಳಿಗಳಾದರೋ ಕನ್ನಡದಲ್ಲಿ ಕೆಲವಿವೆ. ಉಳಿದುದನ್ನು ಅರ್ಥ ತಿಳಿದು ಅಭಿನಯಿಸುವವರು ಕಡಿಮೆ. ತೆಲುಗು ಅಥವಾ ತಮಿಳು ವರ್ಣಗಳಿಗೆ ತೀರಾ ಸಾಮಾನ್ಯವಾದ ಸನ್ನಿವೇಶಗಳನ್ನು ನೀಡಿ ತೃಪ್ತಿ ಹೊಂದುವವರಿದ್ದಾರೆ. ಕೆಲವೊಮ್ಮೆ ತಾವು ಹಿಂದೆ ಮಾಡಿದ ಅಥವಾ ಇತರರು ಮಾಡಿದ ಅನುಭವ ಅಥವಾ ಪ್ರತಿಕೃತಿಯನ್ನು ಸೇರಿಸಿ ಮುಗಿಸುತ್ತಾರೆ. ಪದವರ್ಣ ಹಾಗೂ ಪದಾಭಿನಯಗಳೂ ನಮ್ಮಲ್ಲಿ ಅತ್ಯಲ್ಪ. ಇಂದಿಗೂ ನಮ್ಮ ನಡುವಿನಲ್ಲಿ ವರ್ಣ ಅಥವಾ ಅಭಿನಯಗಳಿಗೆ ಸಂಗೀತ ಹಾಗೂ ನಾಟ್ಯಸಂಬಂಧಿಯಾದ ಕೃತಿ ರಚಿಸುವವರು ಬಹಳ ಕಡಿಮೆ.

ಸಾಧಾರಣವಾಗಿ ರಂಗಸ್ಥಳದಲ್ಲಿ ನಾಟ್ಯವು ಹೇಳಿ ತಿಳಿಸುವುದು- ಒಂದು ಗಂಡು ಹೆಣ್ಣಿನ ಅಂತರ್ಭಾವವನ್ನು. ಭರತನಾಟ್ಯದ ನಾಯಿಕಾ ಒಂದು ನಿರಾಡಂಬರದ ಲಾಲಿತ್ಯ ಲಾವಣ್ಯದಿಂದ ಕೂಡಿರುವವಳು. ತನ್ನ ಮನದಿಚ್ಚಿಸಿದ ವರನಿಗಾಗಿ ತನ್ನನ್ನೂ ಅಲಂಕಾರಗೊಳಿಸುವವಳು ; ಅವಳ ಮನಸಿನಲ್ಲೆದ್ದ ಭಾವನೆಗಳು ಹಲವಾರು ರೀತಿಗಳಲ್ಲಿದೆ; ಅವನನ್ನು ಕಾಣಲು ಹೋಗುವಳು; ಮನ್ಮಥನ ಬಾಣಗಳಿಂದಾಗುವ ಮನಸ್ಸಿನ ನೋವು, ಸಂಕಟ, ಆತ ಇನ್ನೊಂದು ಸ್ತ್ರೀಯಲ್ಲಿ ಅನುರಕ್ತನಾದಾಗ ಅವಳಿಗಾಗುವ ಕಸಿವಿಸಿ ; ನಾಯಕನು ಪುನಃ ಮನೆಗೆ ಬಂದಾಗ ಖಂಡಿಸಿ ಮಾತನಾಡಿ, ಕೊನೆಗೆ ಅದಕ್ಕಾಗಿ ಕೊರಗಿ, ಅವನನ್ನೂ ಒಲಿಸಿ ತಾನೂ ಒಲಿದು ತೃಪ್ತಿ-ಸಮಾಧಾನಗೊಳ್ಳುವವಳು.

ಆದರೆ ಇಂದು, ನರ್ತಕಿಯರು ತಾಳಾವರ್ತವನ್ನು ಹೊಂದಲಾರದೆ ಕಷ್ಟಪಡುತ್ತಿದ್ದರೂ, ನಾಟ್ಯದ ಇತರ ಭಾವಗಳಲ್ಲಿ ತಾವು ಮೆರೆಯದಿದ್ದರೂ ನಾಲ್ಕು ಜನರು ತಮ್ಮ ನಡೆಯನ್ನು ಕಂಡು ಸಂತೋಷ ಪಡುತ್ತಿದ್ದಾರಲ್ಲ ಎಂಬ ಹುಮ್ಮಸ್ಸು ಸೇರಿದಾಗ ಬರಿಯ ಆಂಗಿಕದ ಜತಿ ನಿರೂಪಣೆಯಲ್ಲೇ ನಮ್ಮ ಕಲೆ ಮುಂದುವರಿಯುತ್ತದೆ. ಈ ರೀತಿ ಭರತನಾಟ್ಯ ಮೆರೆಯಬೇಕೇ? ನೃತ್ಯವೆಂದರೆ ಬರಿಯ ಹಾರುವಿಕೆ ಮತ್ತು ಅಂಗಗಳ ನಡೆಗಳಲ್ಲಿಯೇ ನೃತ್ಯ ಪ್ರದರ್ಶನ ಮುಗಿಯಬೇಕೇ?

ನೋಡುತ್ತೇವೆ-ಹಾಲ್‌ನಲ್ಲೂ ಜನ ತುಂಬಿದ್ದಾರೆ. ನೃತ್ಯ ನೋಡಲು ಬಂದ ಅನೇಕರಿಗೆ ಅಲ್ಲಿ ಕುಳಿತಿರಲೂ ಜಾಗವಿಲ್ಲ. ಆದರೂ ನಿಂತು ನೋಡುತ್ತಾರೆ. ಪ್ರಥಮ ಬಾರಿಗೆ ಬಾಲಕಿ ರಂಗದ ಮೇಲೆ ಬಂದಿದ್ದಾರೆ. ಎರಡು ನಿಮಿಷಗಳಲ್ಲಿ ನಮ್ಮ ಕಣ್ಣು ತೆರೆದಿದೆ. ಆದರೆ ಅಲ್ಲಿ ಕಾಣುತ್ತಿದ್ದದ್ದು ಭರತನಾಟ್ಯದ ಮಹತ್ತರ ಸೋಲನ್ನು. ಕಾರಣ, ಮೊದಲಿನಿಂದ ಕೊನೆಯ ವರೆಗೂ ಆ ಬಾಲಕಿ ಮಾಡಿದ್ದದು ಡೊಂಬರಾಟವನ್ನು ಮಾತ್ರ !

ಸ್ಟೇಜಿನ ಮೇಲೆ ಕುಳಿತಿದ್ದಾರೆ- ದೊಡ್ಡ ವ್ಯಕ್ತಿಗಳು. ಕಾಣಿಸಿದ್ದು ಕೆಟ್ಟದಾದರೂ ಮುಖದಲ್ಲಿ ಮುಗುಳುನಗೆಯಿಂದ, ಬಾಯಿಮಾತಿನಿಂದ ಇಂಥ ಗೌರವಯುತ ಸಭೆಗೆ ತಾವು ಬಂದದ್ದು ನಮ್ಮ ಪುಣ್ಯ ಎಂದು ತಮ್ಮ ಮಾನ ಹಾಗೂ ಪ್ರದರ್ಶನದ ಯೋಗ್ಯತೆಯನ್ನು ಮುಚ್ಚಿಡುತ್ತಾರೆ. ದೊಡ್ಡ ಮನುಷ್ಯರೂ ಹೊಗಳಿ ಹೊಗಳಿ ತೆರೆಮರೆಗೆ ಹೋಗುತ್ತಾರೆ. ಗುರುಗಳ ಮನ್ನಣೆ ಇತ್ಯಾದಿ ನಿರಾತಂಕವಾಗಿ ನಡೆಯುತ್ತದೆ. ಪೋಟೋಗ್ರಾಫರ್ ಕೆಲಬಾರಿ ನಮ್ಮ ದೃಷ್ಟಿಯ ಮುಂದೆ ಕ್ಲಿಕ್ಕಿಸುತ್ತಾರೆ. ನಾವು ಕಾಣುವುದು ಅವರ ನರ್ತನಲೀಲೆಯನ್ನು ಎನ್ನುವಂತೆ ಕೆಲವು ವಿಮರ್ಶೆ ಬರೆದುಕೊಳ್ಳುತ್ತಾರೆ.

ಅಂದಿನ ಕಾಲಕ್ಕೆ ಗುರುಗಳೆನಿಸಿಕೊಂಡರೂ ತಾವು ನರ್ತಿಸದಿದ್ದರೂ ವಿದ್ಯಾರ್ಥಿಗಳಿಗೆ ವಿಷಯವನ್ನು ಬುಡಸಮೇತ ಹೇಳಿಕೊಡುತ್ತಿದ್ದರು. ತಮ್ಮಿದಿರು ಬೇರೆ ವಿದ್ಯಾರ್ಥಿಯನ್ನು ಕರೆಸಿ ಅವರಿಂದ ಮಾಡಿಸಿದರೂ ವಿದ್ಯಾಥಿಯ ರೂಪಕ್ಕೆ, ದೇಹಕ್ಕೆ, ವಯಸ್ಸಿಗೆ ತಕ್ಕಂತೆ ಹೊಂದುವ ಬಗೆಯಿತ್ತು. ಆದರೆ ಇಂದು ತಮ್ಮ ಗುರುಗಳಂತೆ, ಉತ್ತಮ ನಾಟ್ಯಪ್ರಕಾರದ ಬದಲಿಗೆ ಹಾಸ್ಯಾಸ್ಪದ ವ್ಯಕ್ತಿಗಳಾಗಿ ನರ್ತಿಸುವವರು ಕಾಣಿಸುತ್ತಾರೆ. ನಟುವಾನ್ನಾರ್‌ಗಳಿಂದ ಕಲಿತು ಲಾಭ ಪಡೆದವರು ಇಂದು ಇದಿರಿಗೆ ನೆಲದ ಮೇಲೆ ಚಾಪೆ ಹಾಕಿ ಕುಳಿತಿದ್ದಾರೆ. ದುಡ್ಡು ಮುಂದಕ್ಕೆ ಬಾರದೇ ಹೋದೀತು-ಎಂಬ ಭಯದಲ್ಲಿ ಶಿಕ್ಷಕರು ಆದಷ್ಟು ಬೇಗ ಮಕ್ಕಳಿಗೆ ನಾಲ್ಕು ಹೆಜ್ಜೆ ಕಲಿಸಿಕೊಡುತ್ತಾರೆ. ಹೊಸ ಡ್ರೆಸ್ಸು, ಉತ್ತಮ ಗುರುಗಳು-ಕಲಾವಿದರು, ಸಮಾಜದ ಪ್ರತಿಷ್ಟಿತ ವ್ಯಕ್ತಿಗಳ ಸಮ್ಮುಖದಲ್ಲಿ ತಾವು ನರ್ತನವಾಡುವ ಸುಯೋಗವನ್ನು ಬಿಡುವ ಮಕ್ಕಳು ಇದ್ದಾರೆಯೇ? ಏನೆಲ್ಲ ಕಲಿಸಿದರು ಎಂಬ ಪ್ರಶ್ನೆಯಿಲ್ಲ. ಜೊತೆಗೆ ಅವರಲ್ಲೂ ಸೌಂದರ್ಯವೇನೆಂಬ ಅರಿವು ಇರಲಾರದು. ಆದರೆ ಗುರುಗಳು ಹೇಳಿದ ಮೇಲೇನು? ಕಂಡಂತೆ ಮಾಡುವುದು, ಹೇಳಿದಂತೆ ಕುಣಿಯುವುದು-ಇವೆಲ್ಲಾ ಅವರ ಜೀವನವನ್ನು ಬೆಳಗಿಸುವ ಅಂಶಗಳಾಗಿವೆ !

ಸೃಷ್ಟ್ಯಾತ್ಮಕ ವ್ಯಕ್ತಿಗಳಾಗುವ ಮೊದಲೇ ನಮ್ಮ ಶಿಕ್ಷಕರು ಹೊಸ ಬಗೆ ಬೇಕು ಎಂಬ ಉದ್ಗಾರ ತೆಗೆಯುತ್ತಿರುವುದರಿಂದಲೇ ನಮ್ಮ ಜನರಲ್ಲಿ ಒಂದು ಮಾರಾಟದ ಸ್ಥಿತಿ ಕಾಣಿಸುತ್ತಿದೆ ! ಹಾಗಂತ ಅವರು ಹೇಳುವುದು ಅಲ್ಲವೆಂದಲ್ಲ. ಪ್ರತಿಯೊಂದು ಬಾರಿ ತಾವು ನರ್ತಿಸುತ್ತಿದುದ್ದನ್ನೇ ಬದಲಾಯಿಸದಿದ್ದರೆ, ಅದು ಸತ್ತ್ವವನ್ನೇ ಕಳಕೊಂಡಿದೆ ಎಂಬ ಸ್ಥಿತಿ ಇಂದಿನದು.

ಕಲೆಯಲ್ಲಿ ಸ್ವತಂತ್ರಕಲ್ಪನಾ ಶಕ್ತಿ ಬಾರದಿರಲು ಕಾರಣ-ಬಹುಪಾಲು ಕಲಾವಿದರೆನಿಸಿಕೊಂಡವರಿಗೆ ಸಂಗೀತದ ಲಕ್ಷಣಗಳೇ ತಿಳಿಯದಿರುವುದು. ಸಂಗೀತ ಜ್ಞಾನ ಜತೆಗಿದ್ದರೆ ನರ್ತಕಿಯು ತನ್ನ ಅಭಿನಯದ ಕೈಕಾಲು ನಡೆಗಳನ್ನು ಒಂದು ಸುಲಲಿತಸ್ಥಿತಿಗೆ ತರುವುದಲ್ಲದೆ; ಸಾಗರದ ತರಂಗೋಪಾದಿಯ ಸ್ಪರ್ಶ ಸುಖವನ್ನು ನೀಡುತ್ತದೆ. ಸಂಗೀತದ ಜತೆ ಚಲಿಸುವಾಗ ನರ್ತಕಿಯ ಕಾಲು ಅನುರಣಿಸುತ್ತದೆ. ಇಂಥ ವಸ್ತುಗಳು ಸರಿಯಿದ್ದರೆ ನಮ್ಮ ನರ್ತನವನ್ನು ಯಾರೂ ಮರೆಯುವುದಿಲ್ಲ. ಆದರೆ ಇಂದಿಗೂ ಬಹಳಷ್ಟು ಕಲಾವಿದರು (?) ನೃತ್ಯಕ್ಕೆ ಅಗತ್ಯವಿರುವ ಹಾಡುಗಳನ್ನು ಬಾಯಿಪಾಠ ಮಾಡುವುದಲ್ಲದೆ, ಸಂಗೀತದ ಒಳಹೋಗುವ ಸಾಹಸವೇ ಅವರಲ್ಲಿಲ್ಲ ; ಅದಕ್ಕೆ ತಗಲುವ ಕಾಲವೂ ಜೊತೆಗಿಲ್ಲ. ಸಂಗೀತದ ತಾಳಲಯಗಳಲ್ಲಿ ಅಮೂಲ್ಯ ಹೃದಯಸ್ಪರ್ಶಿ ಸ್ವರಗುಣ ಹಾಗೂ ಆಯಾ ರಾಗಕ್ಕೆ ಭಾವವನ್ನು ಒದಗಿಸುವ ಕ್ಲಪ್ತ ಸಾಮರ್ಥ್ಯವೆಲ್ಲವೂ ಇದೆ ಮತ್ತು ಈ ರೀತಿಯ ಮನೋಲ್ಲಾಸವು ನಮ್ಮಲ್ಲಿ ಭಾವನೆಗಳನ್ನು ಹೊಡೆದೆಬ್ಬಿಸುತ್ತದೆ, ಅಭಿನಯಕ್ಕೆ ಸಲುವ ಸೂಕ್ಷ್ಮತೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಹಾಡುಗಳ ತಿಳಿವಳಿಕೆ ಮತ್ತು ಕಾವ್ಯಗಳ ನೆರವು, ಪ್ರತಿಮಾಶಿಲ್ಪ, ಸ್ಥಳ ಪುರಾಣಗಳೆಲ್ಲವೂ ಈ ಕಲೆಗೆ ನೆರವು ನೀಡುತ್ತದೆ ಎಂಬ ಅರಿವು ಮೊದಲೇ ಇಲ್ಲ್ಲ !

ನೃತ್ಯ : ಅಂದು, ಇಂದು, ಮುಂದು – ಭಾಗ 6
ಕಲೆಯು ತನ್ನಲ್ಲಿರುವ ರೂಪಿನಲ್ಲಿ ಹಲವು ಹೆಚ್ಚು ಕಡಿಮೆ ಮಾಡಿರುವುದಕ್ಕೆ ಕಾರಣಗಳಿವೆ. ತನಗೆ ಎದುರಾಗಿರುವ ಸಾಮಾಜಿಕ ಅಂಶ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಂದ ಈ ಸಮಾಜದಲ್ಲಿ ತನ್ನ ಬದಲಾವಣೆ ಆಯಿತೆನ್ನುತ್ತದೆ. ಅದೂ ಸಾಲದೆ ಮಾನವನ ಮನಸ್ಸಿನ ರಸಾನುಭುತಿ ಕೂಡಾ ! ಜೀವನ ಕ್ರಮ ನಿಬಂಧನೆಯೇ ಹೆಚ್ಚು ಕಡಿಮೆಗಳನ್ನು ಕಲಾಭಿವ್ಯಕ್ತಿಯಲ್ಲಿ ಕಾಣಿಸುವುದು ನಿಜ. ಜೀವನದ ಸ್ಥಿತಿಯೂ ಅಂತಹ ಅವಸ್ಥೆಯನ್ನು ನಿರೀಕ್ಷಿಸುತ್ತಿದೆ. ಹರಿಕಥೆ ಮುಂತಾದ ಧಾರ್ಮಿಕ ಚರ್ಚಾ ವಿಷಯಗಳು, ಸಾಹಿತ್ಯ ಕುರಿತಾದ ನಿಯಮಗಳು, ತಮಿಳು, ತೆಲುಗು, ಕನ್ನಡ ಹಾಗೂ ಸಂಸ್ಕೃತದ ಪದವಿಶೇಷಗಳು, ದೇವಲದಲ್ಲಿ ಕಂಡ ಶಿವನ ದೃಶ್ಯ. ನುಡಿಸುವ ನಾದವೈಭವ, ಕೇಳಿಸುವ ಮೃದಂಗಧ್ವನಿ, ಪೂಜಾಸಮಯದಲ್ಲಿ ಕಿವಿಗೆ ಬೀಳುವ ಮಂತ್ರಗಳಲ್ಲದೆ, ಭಕ್ತರ ಆಂತರ್ಯದ ಸ್ಥಿತಿಗಳು-ಇಷ್ಟೆಲ್ಲಾ ಭರತನಾಟ್ಯದಲ್ಲಿ ಕಾಣಿಸುತ್ತಿದ್ದ ದೃಶ್ಯಚಿತ್ರಗಳು.

ಆದರೆ ಪರಂಪರೆಯು ಹೊರಹೊರಡಲು ಸಿದ್ಧವಾಯಿತು, ದೇವದಾಸಿಯರು ತಮ್ಮ ಇರವನ್ನು ಇತರರಿಗೂ ತೋರಿಸಹತ್ತಿದರು ; ನೃತ್ಯ ನಡೆಯುತ್ತಿದ್ದ ದೇವಲದಲ್ಲಿ, ರಾಜರಿರುವ ನಡೆವ ಸಭೆಯಲ್ಲಿ ಉತ್ತಮರೆದುರು ಪ್ರದರ್ಶನ ಮಾಯವಾಯಿತು. ಆ ಸಹೃದಯರ ಗುಂಪಿನಲ್ಲಿ ನರ್ತಿಸುವವರ ಮನಸ್ಥಿತಿಯಿರುವ ರಸಿಕರೆಲ್ಲಾ ಹೊರಟುಹೋಗಿ ಈಗ ಪ್ರಾಪಂಚಿಕ ಸಂಕುಚಿತ ಜನಗಳ ಎದುರಿಗೆ ಕುಣಿಯಬೇಕಾಯಿತು. ನರ್ತಿಸುವವರ ಮನದ ಅವಸ್ಥೆಯನ್ನು ಪರಿಭಾವಿಸಿ ಆನಂದ ಪಡೆಯದ ಜನರಿದಿರು ಗೆಜ್ಜೆ ಕಟ್ಟಬೇಕಾಯಿತು. ನರ್ತಕಿ ಹಾಗೂ ಅದನ್ನು ಗ್ರಹಿಸಿ ನೋಡುವ ಪ್ರಿಯರ ನಡುವಿನ ಸಂಬಂಧ ಕುಲಗೆಟ್ಟಿತು. ರಸಿಕಜನರ ಭಾವನೆಯನ್ನು ಹೊಡೆದೆಬ್ಬಿಸುವ ನರ್ತಕಿ ಈಗ ಸೋತುಹೋದಳು.

ಇಂದಿಗೂ ತನಗಿದಿರಾದ ದುರವಸ್ಥೆಯಿಂದ ಪಾರಾಗಲು ವಿಶ್ವದ ಯಾವುದೋ ಒಂದು ಭಾಗದ ನಿಶ್ಚಲ ಏಕಾಂತ ಸ್ಥಿತಿಯಲ್ಲಿ ಆ ಕಲಾವಸ್ತುವೀಗ ಸಂಗೀತ ನೃತ್ಯಗಳ ಸಹವಾಸವಿರದ, ಇತರ ಕ್ಷೇತ್ರದವರಿಗಾಗಿ ಮುಖ ತೋರಿಸುವುದಾಗಿದೆ. ಅಂದರೆ ತನ್ನ ಪ್ರದೇಶದ ಉತ್ತಮಿಕೆಯನ್ನು ಕಳೆದು ತಾನೀಗ ಮುಖಸೌಂದರ್ಯ ಹಾಗೂ ದೇಹದ ಸಿರಿಯನ್ನು ಮಾತ್ರ ಅನುಭವಿಸುವವರ ಇದಿರಿಗೆ ಕುಣಿವ ವಸ್ತುವಾಗಿದ್ದಾಳೆ.

ಕಲೆಯನ್ನು ಚೆನ್ನಾಗಿ ಕಲಿವ ಲಕ್ಷಣ ಹೊಂದಿದ ಅನೇಕರು ಹಲವು ಗುರುಗಳಿಂದ ಉಪದೇಶ ಪಡೆದುಕೊಂಡಿದ್ದಾರೆ. ಆದರೆ ವೃದ್ಧಾಪ್ಯ ತಾಳಿದ ಗುರುಮಹಾಶಯರು, ಕಲೆಗಾಗಿ ಪೂರ್ಣ ಆರಾಧನೆಯನ್ನು ಮಾಡುವವರ ಕೈಬಿಟ್ಟ ಶಾಸ್ತ್ರೋಕ್ತ ರೀತಿಯ ವಿಚಾರವೇನೂ ತಿಳಿಯದ ನೃತ್ಯಶಿಕ್ಷಕರು ಮತ್ತು ಗುರು ವಿದ್ಯಾರ್ಥಿಗಳ ನಡುವೆ ನಡೆವ ಕದನ ಬಹಳ ಸೂಕ್ಷ್ಮವಾದುದು. ಶಾಲೆ ಹಾಗೂ ಬಾನಿ (ಕ್ರಮ ಮರ್ಯಾದೆ)ಗಳ ನಡುವೆ ಕಂದಕ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಹಲವಾರು ತರದ ಶಾಸ್ತ್ರೀಯ ನರ್ತನಗಳೆಲ್ಲ ಹೇಳಹೆಸರಿಲ್ಲದೆ ಮಾಯವಾಗುವ ಲಕ್ಷಣವೀಗೀಗ ಕಾಣಿಸುತ್ತಿದೆ. ಈಗ ಮೂಡಲ-ಪ್ರಾಚ್ಯ-ಪೌರಾತ್ಯ ಸಂಸ್ಕೃತಿಯ ನೆಲೆಗಟ್ಟೇ ಅವರಿಗೆ ಬೇಕಾದುದಲ್ಲದೆ, ಆ ಕಲೆಯನ್ನು ಕಲಿಯಬೇಕಾದ ಲಕ್ಷಣವೇ ಅವರಲ್ಲಿ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ಶಾಸ್ತ್ರೀಯ ಕಲೆಯ ಅವನತಿಯ ಸೂಚನೆ ಹೆಚ್ಚಾಗುತ್ತಿದೆ !

ಇಂದಿಗೆ ‘ಆಂಗಿಕ’ದಲ್ಲಿ ದೇಹದ ವಿವಿಧ ಅಂಗಭಾಗಗಳ ಚಲನೆಯೇ ಚೋದ್ಯವೆನಿಸುತ್ತದೆ. ಶಾಸ್ತ್ರೀಯ ನೃತ್ಯದಲ್ಲಿ ಇರಲೇಬೇಕಾದ ಮುಖ್ಯ ಚಲನೆಯೇ ಇವರಲ್ಲಿಲ್ಲ. ಎಲ್ಲಕ್ಕೂ ಮೊದಲು ಆ ಕ್ರಮಕ್ಕೆ ಹೊಂದಿರುವ ದೇಹಕ್ಷೇತ್ರಗಳು, ಘನಾಕೃತಿಗಳ ಪ್ರಮಾಣ-ಸಂಬಂಧಗಳ ಶಾಸ್ತ್ರ, ಜ್ಯಾಮಿತಿ ಇವುಗಳೆಲ್ಲವುಗಳ ಪರಿಜ್ಞಾನವಿರಬೇಕು. ಇದನ್ನು ತಿಳಿದ ವ್ಯಕ್ತಿ ಮಾಡುವ ನೃತ್ಯ ಹಲವು ಕಡೆ ಆದರವನ್ನು ಪಡೆಯುತ್ತದೆ. ಆದರೆ ಉಳಿದವರೆಲ್ಲಾ ಆ ಮಟ್ಟಕ್ಕೆ ಏರಿದ ಸಂದರ್ಭ ಬಹಳ ಕಿರಿದು.

ಆಂಗಿಕದಲ್ಲಿ ನೃತ್ತಭಾಗವು ಕೊನೆಯೇ ಇಲ್ಲವೆನ್ನುವಷ್ಟು ರೀತಿಗಳಲ್ಲಿದೆ. ಒಂದು ಜತಿಯ ತೀರ್ಮಾನಗಳು ತಮ್ಮ ನಡೆಯ ಹಲವು ವಿಭಾಗದ ತಾಳಾವರ್ತಗಳನ್ನು ಕೂಡಿಸಿರುವುದುಂಟು. ತಾಳಾವರ್ತಗಳು ಹಿಂದಿಗಿಂತಲೂ ಈಗ ಇನ್ನಷ್ಟು ಚಾಣಾಕ್ಷ ಸ್ಥಿತಿಯಲ್ಲಿದ್ದು, ಹಲವು ತಾಳಗಳಿಗೆ ಅನುಸಾರವಾಗಿ ಹೆಣೆಯಲ್ಪಟ್ಟಿದೆ. ಈ ದಿಶೆಯಲ್ಲಿ ಪದವರ್ಣಗಳಿಗೆ ಬೇರಿತರ ವರ್ಣಗಳನ್ನು ಬೆರೆಸಿ, ಕಲಾ ಮರ್ಯಾದೆಯನ್ನು ಕುಂಠಿತಗೊಳಿಸುವಲ್ಲಿಗೆ ಬಂದಿದ್ದೇವೆ. ಒಂದು ವರ್ಣದ ಅಭಿನಯದಲ್ಲಿ ಸಂಗೀತದ ನೆರವಿನಲ್ಲಿ ನಡೆಯತಕ್ಕ ವಸ್ತುವಿಗೆ ಅಭಿನಯದ ಸಂಚಾರಿ ಭಾವಗಳನ್ನು ಕೊಡತಕ್ಕದ್ದು. ಆದರೆ ಇಂದು ನರ್ತಕಿ ಸಾಹಿತ್ಯದ ಮಾತುಗಳಿಗೇ ಮಾತ್ರವೇ ಅರ್ಥ ತೋರಿಸುತ್ತಾಳೆ ; ಸಂಚಾರಿ ಭಾವಗಳಿಗೆ ಒಂದು ಶುಷ್ಕ ಕಥೆಯನ್ನು ಮಾತ್ರ ಕಾಣಿಸುತ್ತಾಳೆ.

ನಾಯಕಿ ಇಂದು ತಾನೇ ಒಬ್ಬ ನರ್ತಕಿಯಾಗಿದ್ದಾಳೆ. ಅವಳಿಗೆ ಸಹಾಯಕ ವಸ್ತುವಿರದೆ ತನ್ನ ಮಾತಿನ ಅಥವಾ ಯೋಗ್ಯತೆಯನ್ನು ಕಾಣಿಸುವ ಸನ್ನಿವೇಶವಿದೆ. ಅವಳು ಅತಿರೇಕವಾಗಿ ಉಪಯೋಗಿಸುವ ಸಾಹಿತ್ಯವನ್ನೇ ಆಧರಿಸಿದ್ದಾಳೆ. ಹೊಸದಾರಿಗೆ ಹೋದರೆ ಜನರ ಕಠಿಣ ವಿಮರ್ಶೆಗೆ ಗುರಿಯಾಗುವ ಸಂದರ್ಭ ಕಾಣಿಸುತ್ತದೆ.

ಪದವರ್ಣಗಳಿಗೆ ಅಭಿನಯಿಸುವಾಗ ಪಲ್ಲವಿಯಲ್ಲಿ ಯಾವುದೋ ಒಂದು ಸನ್ನಿವೇಶವಿದೆ; ಉದಾ : ಹೆಚ್ಚಿನ ವರ್ಣಗಳಲ್ಲಿ ಪ್ರಾರಂಭವಾಗುವ ವಾಸಕಸಜ್ಜಾ ಅಥವಾ ಮೋಹಿತಳಾದ ನಾಯಕೀ ಲಕ್ಷಣದಿಂದ ಅವಳ ಸ್ವಭಾವ ಕ್ರಮವೇನೆಂದು ಎಲ್ಲರಿಗೂ ತಿಳಿದ ವಿಷಯವೇ . ಆದರೆ ನಾವು ತೆಗೆದುಕೊಳ್ಳುವ ವರ್ಣದ ಸಾಹಿತ್ಯದಲ್ಲಿ ಆ ನಾಯಕಿಗೆ ಬೇರೆ ತರದ ಮಾತಿದ್ದರೂ, ಹೆಚ್ಚಿನವರೆಲ್ಲರೂ ಹಿಂದೆ ತಾವು ಅಭಿನಯಿಸಿದ ಚಿತ್ರಣವನ್ನೇ ಪುನಾ ತೋರಿಸುತ್ತಾರೆ. ಇತರ ನಾಯಕಿಯ ಗುಣ ಬೇರೆಯಾಗಿದ್ದರೂ ನವು ನೋಡುವುದು ಇನ್ನೊಬ್ಬ ನಾಯಕಿಯ ವೃತ್ತಾಂತ. ಇಂತಹ ಅಭಿನಯವೇ ಪದಾಭಿನಯದಲ್ಲಿರುತ್ತದೆ. ಭಾವ ಗೊತ್ತಿರದಿದ್ದರೂ ಪಲ್ಲವಿಯನ್ನು ಮುಗಿಸಿಬಿಟ್ಟೇವೆಂಬ ಕೃತಾರ್ಥತೆ ! ?

ನೃತ್ಯ : ಅಂದು, ಇಂದು, ಮುಂದು
ನಮಗೆ ಆಗಾಗ ಎದುರಾಗುತ್ತಿರುವ ಪ್ರಶ್ನೆ ! -ಈ ನಮ್ಮ ಜಗತ್ತಿನಲ್ಲಿ ಎಂದರೆ ಸುಧಾರಣಾ  ಪಕ್ಷದವರು ಮುಂದಿಟ್ಟ ಹೆಜ್ಜೆಯಲ್ಲಿ (ಅಂದರೆ ತೀವ್ರ ಸುಧಾರಣಾ ತತ್ತ್ವಗಳಿಗೆ ಅನುಸಾರ ಹೊಂದಿದ ಈ  ಜಗತ್ತಿನಲ್ಲಿ) ಭರತನಾಟ್ಯವನ್ನೇ ಬದಿಗಿರಿಸಿ ನಮ್ಮ ಹೊಸ ಬುದ್ಧಿಶಕ್ತಿ ಸೃಜಿಸಿದ ಪ್ರತಿಭಾದೃಷ್ಟಿಯ  ಬೆನ್ನತ್ತಿ ಹೋಗಲೋ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಮನಸ್ಸು ‘ಬೇಡ’ ಅನ್ನುತ್ತದೆ. ತಾನು  ಕಲಿತಿರುವ ಹಲವು ವಿದ್ಯೆಗಳಲ್ಲಿ ಭರತನಾಟ್ಯವನ್ನು ಬಿಟ್ಟು ಬೇರೊಂದರ ಸುಸ್ವರೂಪ ನಮಗೆ  ಕಾಣಿಸಲಿಲ್ಲ. ನಮ್ಮ ಕಣ್ಣಿಗೆ ನಿಜವಾದ ಒಂದು ಪ್ರತಿಮೆ ಭರತನಾಟ್ಯದಲ್ಲಿದೆ. ಇದನ್ನು ರಚಿಸುವಾಗ,  ಪ್ರಯೋಗಿಸುವಾಗ ನಮ್ಮಲ್ಲಿ ಒದಗಿರುವ ಸಂತೋಷ ಬೇರೊಂದು ಕಡೆಯಲ್ಲಿ ದೊರಕದು. ನಾಟ್ಯದ ಬಲ, ಶಕ್ತಿ,  ಸೌಂದರ್ಯದಲ್ಲಿ ಒಂದು ಶ್ರದ್ಧೆಯನ್ನು ಕಾಣುತ್ತೇವೆ. ಇದನ್ನು ಹೊಂದಿದ ಸಂಗೀತದ ಸಾಮರ್ಥ್ಯ, ಶಬ್ದದ  ಒಂದು ಉದ್ವೇಗ, ‘ಪ್ರತಿಮೆ’ಯ ಕಲ್ಪನೆಯಲ್ಲಿ ಮುಳುಗೇಳುತ್ತಿದ್ದೇವೆ.

ಒಂದು ಕಾಲದಲ್ಲಿ ಹಳೆಯ ನೃತ್ಯಗುರುಗಳು ದೊಡ್ಡ ಮನಸ್ಸಿನಿಂದ ಹಾಗೂ ಪೂರ್ಣಾಧಿಕಾರದಿಂದ  ಭರತನಾಟ್ಯದ ಮೇಲ್ದರ್ಜೆಗೆ ಒಂದು ಕೀಲಿಕೈ ಒದಗಿಸಿದ್ದಾರೆ. ಪೂರ್ಣಸುಧಾರಣೆಗಾಗಿ ತನ್ನ ಮನಸ್ಸಿನ  ಒಳಗಿದ್ದ ಕಲೆಗೆ ತನ್ನತನವೆಂಬ ಒಂದು ಗುಟ್ಟನ್ನು ಹೇಳಿಕೊಟ್ಟವರಿದ್ದರು ; ತನ್ನಲ್ಲಿ ಇರಬೇಕಾದ  ಧೈರ್ಯವನ್ನು ಹೆಚ್ಚಿಸಿದರು; ಅದಕ್ಕೆ ಸಲ್ಲಬೇಕಾದ ಸಾಮರ್ಥ್ಯವನ್ನೂ ಒದಗಿಸಿದರು.  ಗುರುಗಳೆನಿಸಿದ್ದವರು ಆ ಕಲೆಯ ಜೀವಧಾತುವನ್ನು ಹಿಡಿದಿದ್ದು, ನಾಟ್ಯಕಲೆಯ ಸಂಗೀತ ಮತ್ತು  ನೃತ್ಯದಲ್ಲಿ ಹುದುಗಿರುವಂತಹ ಆಧಾರಗಳನ್ನು ಕಟ್ಟುನಿಟ್ಟಾಗಿ ಹೇಳಿಕೊಡುತ್ತಿದ್ದರು; ಅದರ ತಳವೆಷ್ಟು  ಆಳದಲ್ಲಿದೆ ಎಂಬುದನ್ನೂ ತಿಳಿಸಿದ್ದರು. ಅಂದು ಸಾದಿರ್ ಎಂದರೆ ಕಲಾರಂಗದ ಮೇಲೆ ಕಾಣಿಸುವ ಕಲೆ ಇಡೀ  ಜಗತ್ತಿನಲ್ಲಿಯೇ ಅತ್ಯಂತ ಪ್ರಪೂರ್ಣ ನೃತ್ಯವಾಗಿತ್ತು. ಸುಮಾರು ಎಂಭತ್ತು ವರ್ಷಗಳ ಹಿಂದೆ ಸಂಗೀತ  ಕಲಾವಿದರು ಕಂಡುಕೊಂಡಿದ್ದದು ಈ ಕಲೆಯ ಪಾರಮ್ಯವನ್ನು.

ಇವೆಲ್ಲವೂ ನಮ್ಮ ಕಲಾರಾಧನೆಯ ಹೆಜ್ಜೆ ಮತ್ತು ಬೆಳವಣಿಗೆಗೆ ಸಹಾಯಕ. ಇಂತಹ  ಬೆಳವಣಿಗೆಯಿಲ್ಲದೆ ಹೋದರೆ ಕಲೆಯ ಬಗ್ಗೆ ಒಂದು ಕ್ಷುದ್ರ ಅಭಿಪ್ರಾಯ ಮೂಡುತ್ತದೆ. ನಮ್ಮ ಕಲೆಗಳು  ಜೀವಂತವಾಗಿರುತ್ತದೆ. ಅದೂ ಅಲ್ಲದೆ ಅವುಗಳೆಲ್ಲ ಸಾಧಾರಣ ಜನತೆಯ ಆತ್ಮದಲ್ಲೇ ಇದೆ. ಅದನ್ನೇ ನಾವು  ವಿಕಾಸವಾದವೆನ್ನುವುದು. ಭಾರತದಲ್ಲಿ ಎಲ್ಲರೂ ದೊಡ್ಡವರೇ ! ಇದು ನಮ್ಮ ನಿಜವಾದ ತತ್ತ್ವ ಜಿಜ್ಞಾಸೆ  (ದರ್ಶನ) ಜೀವನ ಪದ್ಧತಿ ; ಸತ್ಯ ಹಾಗೂ ಸೌಂದರ್ಯಯುತವಾದುದು ; ನಾವೂ ಜೀವಿಸಬೇಕು, ಉಳಿದವರೂ  ಹಾಗೆಯೇ ಜೀವಿಸಬೇಕು- ಎಂಬ ತತ್ತ್ವದಿಂದ, ಜನಗಳಿಗೂ ನಮ್ಮ ನಡುವೆ ಒಂದು ತರಹದ ಸಮಾಲೋಚನಾ ಪದ್ಧತಿಯ  ಜೀವನ ಮುಖ್ಯ.

ಬ್ರಿಟಿಷರ ಕಾಲದಲ್ಲಿ ಜನರಿಗೆ ಅತಿಪ್ರಿಯವಾದ ನಾಟಕಾದಿಕ್ರಿಯೆಗಳಿಂದ ದೇವದಾಸಿಯರ  ನಾಟ್ಯವನ್ನು ಕಡೆಗಣಿಸಿದ್ದರು. ಅದೇ ದೇವದಾಸಿ ಪದ್ಧತಿಯಲ್ಲಿ ಅತಿಮುಖ್ಯವಾದ ಅಭಿನಯಭಾಗವೂ  ಸಂಪೂರ್ಣವಾಗಿತ್ತು. ಆ ಕಲೆ ಮುಂದುವರಿಯದಂತೆ ಅದರ ಒಳತಿರುಳಿನ ಬಗೆಯಲ್ಲಿ ಹಲವು ಮಾರ್ಪಾಟುಗಳನ್ನು  ಕಂಡರು. ಅಂದಿಗೂ ಬಹಳ ಮಂದಿಗೆ ಅವು ಚರ್ಚಾಸ್ಪದ ವಿಷಯವಾಗಿತ್ತು. ‘ತಾವು ಕಂಡುದೇ ಸತ್ಯ’ ಎಂದು  ಬೇಡವಾದ ಅರಿವು ಅವರಿಗಿತ್ತು. ಉನ್ನತ ಮಟ್ಟದಲ್ಲಿದ್ದವರಿಗೆ ಯಾವುದೂ ಚೆನ್ನಾಗಿಲ್ಲವೆಂಬ ಪ್ರಜ್ಞೆ  ಇತ್ತು. ಅವರ ಗಂಟಲಧ್ವನಿಗೆ ಎಲ್ಲರೂ ಸೋಲಬೇಕೆಂದಿತ್ತು ಅವರ ಹಠ. ಅಲ್ಲಿಯೂ ತಮ್ಮಲ್ಲಿಯೇ ಹೆಚ್ಚು  ಕಡಿಮೆ ಇದೆ ಎಂಬುದು ಅವರ ಮನಸ್ಸಿಗೆ ಹೋಗಿಲ್ಲ. ಯಾವ ಗುರುವೂ ಅವರ ನಿಲುವಿಗೆ ಸರಿಯಾದ ವ್ಯಾಯಾಮ  ಕೊಡುತ್ತಿಲ್ಲವಾಗಿತ್ತು. ನಮ್ಮದು ಸರಿ ಉಳಿದದ್ದು ಅಲ್ಲ ಎಂಬ ಯೋಚನೆ ಅವರದು.

ನೃತ್ಯದಲ್ಲಿ ತಾನು ನೋಡಿದ್ದೇ ಸರಿ ಎಂಬ ಯೋಚನೆ ಬೇಡ. ಆ ಕ್ರಮ ಸರಿಯಿಲ್ಲ, ಈ ಕ್ರಮವೂ  ಸರಿಯಿಲ್ಲ ಎಂಬ ಮಾತಿನ ಹರಿವು ನಿಶ್ಚಿತವಲ್ಲ. ಮನಸ್ಸಿನಲ್ಲಿ ಯಾವ ಭಾವ ಯೋಚಿಸುವುದೋ ಅದನ್ನೇ  ನಮ್ಮದಾಗಿಸಬೇಕು. ಇನ್ನೊಂದನ್ನು ಕಂಡು ವೈಷಮ್ಯವನ್ನು ಮೀರಿಸಬೇಕು. ಹಿಂದಿನ ನೃತ್ಯ ಗುರುಗಳು ಅಂತಹ  ಭಾವವನ್ನು ಹೊಂದಿಲ್ಲವಾದ್ದರಿಂದಲೇ ನಮಗೆ ಆ ಕಲೆ ದೊರಕಿದೆ ಅಷ್ಟೇ ! ಭರತನಾಟ್ಯ ಬದಲಾವಣೆಗಳನ್ನು  ಕಂಡಿದೆ. ಬದಲಾವಣೆಯಿದ್ದರೂ ಅದರ ನಡುವೆ ವೈಯಕ್ತಿಕತೆ ಇದೆ ಎಂಬುದನ್ನು ಮರೆಯಬಾರದು.

ಇಂದು ಒಬ್ಬನ ಜೀವಿತಾವಧಿಯು ಎಷ್ಟು ಸೂಕ್ಷ್ಮವೆಂದರೆ ಇಡಿಯ ವಿಶ್ವವೇ ನಮ್ಮಿದಿರು  ತೆರೆದು ನಿಂತಿದೆ. ಅಂತೆಯೇ ಜೀವನದಲ್ಲಿ ಟೆಲಿಕಮ್ಯುನಿಕೇಶನ್ ಹಾಗೂ ಮಾರ್ಕೆಟ್ಟಿನ ಲಾಭನಷ್ಟಗಳೆಲ್ಲ  ಸೇರಿದ ಶಾಪಕೂಪದಲ್ಲಿ ಭಾರತೀಯ ನೃತ್ಯವೂ ದಾರಿ ಕಾಣದೆ ಒಂದೆಡೆ ನಿಂತಿದೆ. ಉತ್ತಮ ಕಲಾವಿದನಲ್ಲಿ  ಇರಬೇಕಾದ ಶಕ್ತಿಯೆಲ್ಲವೂ ನಾಶವಾಗಿ ಕಲೆಯಲ್ಲಿ ಬಿರುಕು ಕಂಡುಬರುತ್ತಿದೆ. ಆದರೂ ಒಂದೆರಡು  ಕಡೆಗಳಲ್ಲಿ ಬೆಳಕಿಗೆ ಬರಲು ಪ್ರಯತ್ನಿಸಿದ್ದಾರೆ ಕೆಲವರು ನರ್ತಕರು. ನಾವೂ ಈ ಸಮಸ್ಯೆಯನ್ನು  ಕಣ್ಮುಚ್ಚಿಕೊಂಡು ಅರ್ಥ ಮಾಡಿಕೊಳ್ಳುವುದರಲ್ಲಿ ಅರ್ಥವೂ ಅನರ್ಥವೂ ಬೆಂಬಿಡದೆ ಬಂದಿದೆ.

ಜೀವನದಲ್ಲಿ ಒಂದು ವಿಧದ ಲಾಭವನ್ನು ಪಡೆವ ರೀತಿಯನ್ನು ಕಾಣಿಸುವಾಗ ಕೆಲವು  ನೃತ್ಯಶಿಕ್ಷಕರು ಪ್ರತ್ಯಕ್ಷರಾಗಿದ್ದಾರೆ. ನೃತ್ಯಗುರುಗಳು ಲಾಭದ ದೃಷ್ಟಿಯಲ್ಲಿ ತಮ್ಮ ಕಲೆಯನ್ನು  ಮಾರಾಟಕ್ಕೆ ಇಟ್ಟಂತೆ ಕಾಣುವ ಸಂದರ್ಭವಿದೆ. ಭರತನಾಟ್ಯವನ್ನು ಅದಲು ಬದಲು ಮಾಡಿರುವುದು ಒಂದು  ‘ಅಪರೂಪ’ವೇ ಹೌದು ! ಇವರ ಬಳಿಯಲ್ಲಿ ಕಲಿಯಲು ಬಂದ ಬಾಲಕರು ಬೇರೆ ಏನನ್ನು ಕಲಿಯಬೇಕು? ಈ ಗುರುಗಳು  ವ್ಯಾಪಾರಸ್ಥರೆನ್ನಬೇಕೆ? ಅವರಿಗೆ ಬೇಕಷ್ಟು ನಿಧಿ ಸುರಿದರೆ ನಮ್ಮ ಮಕ್ಕಳು ಏನನ್ನು ಕಲಿಯಬಹುದು?  ನಮ್ಮಿದಿರು ನಡೆವ ಈ ಜೀವನ ಕ್ರಮವನ್ನು ನಾವೆಂತು ಮಾರ್ಪಡಿಸುವೆವು? ಈಗಿನ ಭರತನಾಟ್ಯದ ಬಗೆಯನ್ನು  ಅದರ ಮೂಲವನ್ನೇ ತಿರುಚಿ ವ್ಯತ್ಯಾಸ ಮಾಡಿದ್ದಾರೆ. ಹಾಗಾದರೆ ಈಗ ಇದನ್ನು ಭರತನಾಟ್ಯವೆಂದು  ಕರೆಯಬಹುದೇ?

ನೃತ್ಯ : ಅಂದು, ಇಂದು, ಮುಂದು ( ಮಾರ್ಚ್ ಏಪ್ರಿಲ್ ೨೦೧೦)
ಭಾರತೀಯ ನೃತ್ಯದ ವಿಚಾರದ ಕುರಿತು ಇನ್ನೂ ಕೆಲವು ಅಭಿಪ್ರಾಯಗಳು ಪಾಶ್ಚಿಮಾತ್ಯರಿಂದ ಬಂದಿದೆ. ಯಾವಾಗಲೂ ಕಲೆಯನ್ನು ಒಂದು ಮತದ ಆದರ್ಶ, ಒಂದು ಆತ್ಮಾರ್ಪಣೆ ಎನ್ನುವ ಭಾವನೆ ಅದರಲ್ಲೊಂದು. ಆದರೆ ಆ ನರ್ತನದಲ್ಲಿ ಕಾಣುವುದು ಒಂದು ಮತದ ಅರ್ಪಣೆಯಲ್ಲ. ಅದು ಮನಸ್ಸಿನ ಒಂದು ಆಂತರಿಕತ್ವ ಅಂದರೆ ಸುಸಂಸ್ಕೃತ ಸೂಕ್ಷ್ಮಮನೋಭಾವ. ಇದರ ಉದ್ದೇಶವೇ ಬೇರೆ. ಇದನ್ನು ಸಮರಸವೆನ್ನಬಹುದು. ಸುಸಂಗತ, ವಿರಸವಿಲ್ಲದ ಅಲ್ಲದೆ ಕಷ್ಟವಿತ್ಯಾದಿ ದುಃಖಿತವಾದ ಮನಸ್ಸಿಗೆ ಅಥವಾ ಆತ್ಮಕ್ಕೆ ಸುಖಭಾವ ಕೊಡುವಿಕೆ. ಅಂತೆಯೇ ಲೋಕದಲ್ಲಿದು ದುಃಖಿತರಾದವರಿಗೆ ಒಂದು ಸುಖನೆಲೆಯನ್ನು ಕೊಡುವ, ಮನಸ್ಸನ್ನು ಮೇಲೆತ್ತುವ ಹಾಗೂ ಹೊಸದಿಕ್ಕನ್ನು ಕಾಣುವ ಒಂದು ರೀತಿಯನ್ನು ತೋರಿಸುತ್ತಿದೆ.

ಭಾರತೀಯ ನರ್ತನಕಲೆಯಲ್ಲಿ ಅಂಗಾಂಗ ನಿಲುವಿನಲ್ಲಿ, ನಿಂತ ಬಗೆಯಲ್ಲಿ ಅದರ ವಿನ್ಯಾಸದಲ್ಲಿ ನಾವು ಒಂದು ವಿಶೇಷತೆಯನ್ನು ಕಾಣುತ್ತೇವೆ. ಹಾಡುವಿಕೆ, ಸಂಗೀತ, ರಂಗಭೂಮಿ, ಚಿತ್ರಗಾರಿಕೆ, ಶಿಲ್ಪ ಮತ್ತಿತರ ಮನಃಶಾಸ್ತ್ರಗಳೆಲ್ಲ ಒಂದು ಸೇರಿ ನರ್ತಕ ಹಾಗೂ ಪ್ರೇಕಕರ ಮನಸ್ಸಿನಲ್ಲಿ ಪಾರಮಾರ್ಥಿಕತೆ (ಧಾರ್ಮಿಕತೆ) ಯನ್ನುಂಟುಮಾಡುತ್ತದೆ. ಸೌಂದರ್ಯವನ್ನು ಗ್ರಹಿಸುವುದು ನೀಚತನದಿಂದಲ್ಲ. ಆಂತರಿಕ ಸೌಂದರ್ಯ ದೃಷ್ಟಿಯೂ ಧಾರ್ಮಿಕತೆಯೇ ಹೌದು.

ಹಾಗೆಂದು ಭರತನಾಟ್ಯದಲ್ಲಿ ಸಂಪ್ರದಾಯ ಬದಲಿಸಿದೆ ಎಂಬ ಮಾತಿಗೂ ಅರ್ಥವಿದೆ. ಸಂಸ್ಕೃತದಲ್ಲಿ ಸಂಪ್ರದಾಯ ಎಂಬುದು ಒಂದು ಪದ್ಧತಿ ಅಥವಾ ಪೂರ್ವಿಕರಿಂದ ಬಂದಿರುವ ವಿಧ. ಹೀಗೆಯೇ ಕೊನೆಯವರೆಗೂ ಇರಲೇಬೇಕೆಂಬುದು ತಪ್ಪು. ಒಂದು ನದಿಯ ಇಕ್ಕೆಲಗಳಲ್ಲಿ ಇರುವ ದಿಣ್ಣೆಯು ನೀರು ಹರಿಯುವುದಕ್ಕೆ ಒಂದು ಖಚಿತ ತಡೆ. ಅದಿಲ್ಲವಾದರೆ ನದಿಯ ನೀರಿನ ಸೆಳೆತ ಜೋರಾಗಿ ನಮ್ಮ ಅಂಕೆಗೆ ಸಿಲುಕಲಾರದು. ಆದರೆ ನೀರಿನ ಸೆಳೆತ ಬದಲಾದಂತೆಲ್ಲಾ ಬದಿಯಲ್ಲಿದ್ದ ದಿಣ್ಣೆಕಟ್ಟುಗಳು ತಮ್ಮ ಆಕೃತಿಯಲ್ಲಿ ಬದಲಾವಣೆ ಹೊಂದುತ್ತದೆ.

ಆದರೆ ನಮ್ಮ ಕಲಾವಿದರು ಒಂದು ಕ್ರಮದಲ್ಲಿ ನೃತ್ಯದ ಬದಲಾವಣೆ ಮಾಡಿದ್ದಲ್ಲಿ ಅದು ಉತ್ತಮವೆನಿಸುವುದು. ಅನೇಕ ವಿಮರ್ಶಕರ ದೃಷ್ಟಿಗೆ ಈ ವಸ್ತು ಕಾಣಿಸಿದ್ದರೂ ಅದು ಪರಂಪರೆಯನ್ನು ಮೀರಿಸಿದ್ದು, ಮೊದಲಿದ್ದ ಆರ್ಭಟ ಶಕ್ತಿ ಅದಕ್ಕಿಲ್ಲವೆಂಬ ಅಭಿಪ್ರಾಯ ಕೊಡುತ್ತಿದ್ದಾರೆ. ಈ ಕಾರಣದಿಂದಲೇ ನಮ್ಮ ಅನೇಕ ಕಲಾಗಾರರು ಮನಸ್ಸಿಗೆ ಬಂದಂತೆ ನರ್ತಿಸುತ್ತಿದ್ದಾರೆ; ಅವರಲ್ಲಿರಬೇಕಾದ ಸಂತಸದ ಮನಃಸ್ಥಿತಿಯಲ್ಲಿ ಸರಿಯಾದ ಮಾರ್ಗದರ್ಶನವಿಲ್ಲ. ಆದರೆ ಕುಣಿವ ಹುಚ್ಚು ಮಾತ್ರ ಅವರಲ್ಲಿದೆ. ಆದರೆ ಅವರಲ್ಲಿರಬೇಕಾದ ಸತ್ತ್ವಗುಣ ಹಾಗೂ ಕ್ರಮನಿಬಂಧನೆಗಳಿಲ್ಲವಾಗಿ ಆ ದೃಶ್ಯ ಸಮಸ್ಥಿತಿವಿಹೀನವಾಗಿರುತ್ತದೆ. ಇದಕ್ಕೆ ಕಾರಣ ನರ್ತನವಲ್ಲ, ಅದನ್ನು ನಡೆಸುವ ಕಲಾವಂತರ ಸೋಲು ಎನ್ನಬಹುದು. ಹಾಗಾಗಿ ಇಲ್ಲಿ ನರ್ತಕರನ್ನು ಹಿಂದಿನ ಕಲಾಗಾರನನ್ನಾಗಿಯೂ ಮತ್ತು ಆಧುನಿಕ (ಈಗಿನ) ಕಾಲದ ನರ್ತಕರನ್ನಾಗಿಯೂ ವಿಭಾಗಿಸಬಹುದು.

ಭಾರತೀಯ ನರ್ತನವಿಚಾರದಲ್ಲಿ ಈಗೀಗ ನರ್ತಕವ್ಯಕ್ತಿಯ ಭಾವನೆಗಳೇ ಮೇಲುಗೈಯಾಗಿ ಯಾವ ಕಲೆ ಉತ್ತಮ ಹಾಗೂ ಆಧುನಿಕ ದೃಷ್ಟಿಯಲ್ಲಿ ಸೌಂದರ್ಯಶಾಲಿ ಎಂಬ ಯೋಚನೆ ಬರುತ್ತಿದೆ. ಇಲ್ಲಿ ಜನರ ಹೃದಯ ಹಾಗೂ ಮನಸ್ಸು ಹಿಡಿದಿರುವ ಅಂಶಗಳಿಗೂ ಆಧುನಿಕ ಸೌಂದರ್ಯ ಭಾವನೆಗೂ ನಡುವೆ ನಾಟ್ಯವು ‘ಉತ್ತಮ’ ಮತ್ತು ‘ಕನಿಷ್ಠ’ ಎಂಬ ವಿಚಾರ ಬಂದಿರುವುದು ನಿಜ. ಕಲೆಯ ಹೆಸರಿನಲ್ಲಿ ಇಂತಹುದು ಚರ್ಚಾಸ್ಪದವಾಗಕೂಡದು. ಪಾಶ್ಚಿಮಾತ್ಯ ಕಲೆಯ ಕುರಿತ ನಿಷ್ಕರ್ಷೆಗಳೆಲ್ಲಾ ಭಾರತೇಯರ ಗಮನಕ್ಕೆ ಬರತಕ್ಕುದಲ್ಲ. ಆದರೆ ಈಗೀಗ ನಮ್ಮಲ್ಲಿಯ ಉತ್ತಮ ನರ್ತಕರೂ ಇಂತಹ ಭಾವನೆಗೆ ಬೆಲೆಗೊಟ್ಟು, ಅವರ ಪೀಳಿಗೆಗೇ ಬಿದ್ದಿರುತ್ತಾರೆ. ತಮ್ಮ ಪ್ರದರ್ಶನಗಳೆಲ್ಲ ತಾವು ತಿಳಿದ ಮಟ್ಟಿಗೆ ಪಾಶ್ಚಾತ್ಯರದ್ದೇ ಆದ ಹೇಳಿಕೆಗೇ ಬೆಲೆಕಟ್ಟುವಂತಾಗಿದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ನಿಷ್ಕರ್ಷೆಗೆ ಒಳಗಾಗಿ, ನಮ್ಮಲ್ಲಿಯ ಉತ್ತಮ ನರ್ತಕರಿಗೂ ಆಧುನಿಕ ಎನ್ನಿಸಿದವರೊಳಗೆ ನ್ಯಾಯವನ್ನು ಒದಗಿಸುವ ಸ್ಥಿತಿಗೆ ಬಂದಿದೆ. ಆದರೆ ಇಲ್ಲಿ ನಾವು ಗಮನಕ್ಕೆ ತರುವ ವಿಷಯ-ಕಲೆಯು ನಮ್ಮ ಹೃದಯಕ್ಕೆ ಮುಟ್ಟುವುದೇ, ಅದು ಪರಿಣಾಮವನ್ನುಂಟುಮಾಡಿದೆಯೇ ಹಾಗು ಪ್ರೇರಣೆಯನ್ನೊದಗಿಸುವ ಸ್ಥಿತಿಯಲ್ಲಿದೆಯೇ ಎಂಬುದು !

ನಾಟ್ಯಶಾಸ್ತ್ರದಲ್ಲಿ ಕಲಾವಿದನಿಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ ನಿಜ, ಆದರೆ ಕಲಾಗಾರನಾಗಿದ್ದವನು ತನ್ನದೇ ಮುಖ್ಯಕಲೆ, ಅದನ್ನು ಹೀಗೆಯೇ ಮಾಡಿ ತೋರಿಸಬೇಕು ಎಂಬ ಹಠವಾದಕ್ಕೆ ಬಲಿಯಾಗಬಾರದು. ಇದು ಉತ್ತಮಾಂಶವಲ್ಲ.

‘ನಿಮ್ಮ ಕಲೆ ಸಂಪೂರ್ಣವಲ್ಲ’ ಎಂಬ ಮಾತಿಗೆ ಅರ್ಥವಿಲ್ಲ. ಭರತನಾಟ್ಯ ಸ್ವಸಂಪೂರ್ಣ. ಸಾಂಸ್ಕೃತಿಕ ಮೌಲ್ಯ ಇದರಲ್ಲಿದ್ದಷ್ಟು ಬೇರಾವ ನರ್ತನದಲ್ಲೂ ಇಲ್ಲ. ನಡೆಗಳು ಸಂಗೀತ ಹಾಗೂ ಸಾಹಿತ್ಯಿಕ ರೂಢಿಯಲ್ಲಿರುತ್ತವೆ. ಇದರಲ್ಲಿಯ ಒಂದು ಭಾಷೆ, ಮಾತು ಅಥವಾ ವ್ಯಾಕರಣ, ನಮ್ಮ ಕೃತಿ ಅಥವಾ ನಾಟ್ಯವಿಧಾನದಲ್ಲಿ ಸಾಕಷ್ಟಿದೆ. ಅದು ತೀರಾ ಹೆಚ್ಚಾಗಿರಕೂಡದು ಎಂಬ ಜಾಗೃತಿಯೂ ಇದೆ. ಆದರೆ ನಮಗೆ ಇತರ ಪದ್ಧತಿಯ ನಾಟ್ಯವನ್ನು ಕಂಡಾಗ ಕ್ಷಣಿಕ ಆನಂದವಿದ್ದರೂ, ಆ ಕ್ರಮ ನಮ್ಮ ಭರತನಾಟ್ಯಕ್ಕೆ ಸಾಧುವಲ್ಲವೆಂದೇ ತೀರ್ಮಾನಿಸುತ್ತೇವೆ.

ನಮ್ಮ ನೃತ್ಯಕಲೆ ನಡೆವುದು ನಮ್ಮದೇ ಹಾದಿಯಲ್ಲಿ. ನಮ್ಮ ಕಲೆಯಲ್ಲಿ ಕ್ರಿಯಾತ್ಮಕತೆ ಶಕ್ತಿಯುತವಾಗಿ ಬೆಳೆದುದು ಮಾತ್ರವಲ್ಲ, ಮುಂದಿನ ಯುಗಕ್ಕೂ ಹೊಸ ಪ್ರೇರಕಶಕ್ತಿಯಾಗಿ ನಿಲ್ಲುತ್ತದೆ. ಇಂಥ ಶಕ್ತಿಯು ತಾನಾಗಿ ಇನ್ನೂ ಬೆಳೆದು ಬಂದು ತಮ್ಮ ದೇಹ ಹಾಗೂ ಮನಸ್ಸಿಗೆ ಒಪ್ಪಿಸಿಕೊಂಡು ನಮ್ಮ ಸಂಸ್ಕಾರಬಲಕ್ಕೆ ಒಪ್ಪಿರುವ ಮಹಾಕಲೆಯಾಗಿ ನಿಂತಿರುತ್ತದೆ.

ನೃತ್ಯ : ಅಂದು, ಇಂದು, ಮುಂದು
ಅಭಿನಯಕ್ಕೆ ಪುರುಷ ಸಹಜವಾಗಿರುವ ಲಾಸ್ಯಪದ್ಧತಿ ಮೇಲಾಗಿದ್ದರೂ, ಪುರುಷರು ತಮ್ಮ  ಅಭಿನಯದಲ್ಲಿ ತಾಂಡವಾಂಶ ಹಾಗೂ ಸಾತ್ವಿಕ ಭಾವಗಳನ್ನು ನಿವೇದಿಸಬಹುದು. ಈ ಸಂದರ್ಭಗಳಲ್ಲಿ ಏಕಾಹಾರ್ಯ  ಮುಖ್ಯವಾದದ್ದು. ನೃತ್ಯನಾಟಕಗಳಲ್ಲಿ ಪುರುಷಪಾತ್ರಾಭಿನಯಕ್ಕೆ ಒತ್ತು ಇರುತ್ತದೆ. ಲಾಸ್ಯದ ಬದಲು  ತಾಂಡವಾಂಶಗಳೇ ಸಾಹಿತ್ಯದಲ್ಲಿರುವಾಗ ಪುರುಷನು ಲಾಸ್ಯವನ್ನೇ ತಾಂಡವವನ್ನಾಗಿ ಪರಿವರ್ತಿಸುವ ಕಾರ್ಯ  ಸುಲಭವಲ್ಲ. ಭಾವಗಳಲ್ಲಿಯೂ ಆತ ನಾಯಕಸಾಮಾನ್ಯ ಗುಣಗಳನ್ನು ತರಬೇಕಾಗಬಹುದು. ಹಾಗಂತ ಬರಿಯ  ಸ್ತ್ರೀಯರಿಗಾಗಿ ಮಾತ್ರವೇ ಭರತನಾಟ್ಯ ಮೀಸಲಾಗಿದ್ದುದಲ್ಲ. ಆದರೆ ಭರತನಾಟ್ಯ ಪುರುಷವೇಷಧಾರಿಗಳಲ್ಲಿ  ತಾವು ಮಾಡಬೇಕಾದ ಅಂಶಗಳಲ್ಲಿ ಶಿವನಿಗೆ ಸಂಬಧಿಸಿದ ನಾಟ್ಯವೈಭವವನ್ನು ಹೆಚ್ಚಾಗಿ ಕಾಣಿಸುತ್ತಾರೆ  ಅಥವಾ ದೇವರನಾಮಗಳಲ್ಲಿ ಬರುವ ಸನ್ನಿವೇಶಗಳ ಮೊರೆಹೋಗಬಹುದು. ಆದರೆ ಭರತನಾಟ್ಯ ‘ಮಾರ್ಗ’  ಪದ್ಧತಿಯಲ್ಲಿ ವ್ಯತ್ಯಾಸ ಮಾಡಬಹುದೇ ಹಾಗೂ ಭರತನಾಟ್ಯದ ಲಾಸ್ಯ ಪದ್ಧತಿಯನ್ನು ಬದಲಾಯಿಸಬಹುದೇ-ಎಂಬ  ಜಿಜ್ಞಾಸೆಯಿದೆ.

ಎಲ್ಲರಿಗೂ ತಿಳಿದಿರುವಂತೆ ಒಂದು ಜೀವನಕ್ರಮ ತನ್ನದೇ ಆದ ಜಗತ್ತಿನಲ್ಲಿ ಬೆಳೆದು  ಬಂದಿರಬೇಕು. ಅದರ ಚೈತನ್ಯವೆಲ್ಲಾ ನಮ್ಮ ಸಂಸ್ಕೃತಿಗೆ ಹಾಗೂ ಚರಿತ್ರೆಗೇ ಸೇರಿದ್ದು. ಆದರೆ ಇಂದು,  ನಾಟ್ಯದ ಬಗ್ಗೆ ಹಲವಾರು ಬದಲಾವಣೆಗಳೂ ಕಣ್ಣಿಗೆ ಕಾಣಿಸುತ್ತಿವೆ. ಸಾಂಸ್ಕೃತಿಕ ಬದಲಾವಣೆ ಬಂದದ್ದು  ಪಾಶ್ಚಿಮಾತ್ಯರಿಂದ. ಇಂದು ಕಣ್ಣಿಗೆ ಕಾಣಿಸುವುದು ಅಥವಾ ಮನಸ್ಸಿಗೆ ತೋಚುವ ವಿಧಾನವೆಲ್ಲಾ ನಮ್ಮ  ಪಶ್ಚಿಮ ದಿಕ್ಕಿನ ಕಡೆಯಿಂದ ಬಂದುದು. ನಮ್ಮ ಈಗಿನ ನೃತ್ಯಶೈಲಿಗಳು ಆ ಪರಕೀಯರಿಂದ ಬಂದ ವಿಧಾನಗಳಿಗೆ  ಅನುಸಾರವಾಗಿ ನಿಂತಿದೆ. ಅದನ್ನು ನಾವು ಸಮಕಾಲೀನವೆನ್ನುತ್ತೇವೆ. ಹಾಗೆ ನೋಡಿದರೆ ಪಾಶ್ಚಿಮಾತ್ಯರು  ನಮ್ಮ ರಂಗಕ್ರಿಯೆಯನ್ನೂ ಮನಸಾರೆ ಮೆಚ್ಚಿದವರೇ ಆಗಿದ್ದರು.

ಇವರಲ್ಲದೆ ಇನ್ನೊಂದು ಗುಂಪು ಇದಿರು ಇದ್ದುದನ್ನೆಲ್ಲಾ ಬೇರೊಂದು ವಿಧವಾಗಿ  ನೋಡುತ್ತಿರುವರು. ಅವರಿಗೆ ನಮ್ಮ ಕಲೆಯನ್ನು ಅರ್ಥೈಸುವಿಕೆ ಕಷ್ಟ ಹಾಗೂ ಆ ಚಲನೆಯ  ಉದ್ದೇಶಕ್ರಮಗಳೆಲ್ಲವೂ ಅಪರಿಚಿತವಾದುದು. ಅವರೇ ತಮ್ಮ ದೇಶಕ್ಕೆ ಅನುಸಾರವಾಗಿ ನೃತ್ಯದ ಚಲನೆಗೆ  ಹೊಸರೂಪ ಕೊಟ್ಟದ್ದು; ಮುಂದಕ್ಕೆ ಅದೇ ಕ್ರಮ ಭಾರತಕ್ಕೂ ಬಂದು ಸೇರಿದೆ. ತಮ್ಮ ಅನಿಸಿಕೆಗೆ ಭಾರತೀಯ  ಕ್ರಮದ ಅಚ್ಚು ಹಾಕಿಸಿ ನಮಗೆ ಅದನ್ನೇ ಉಣಬಡಿಸಿರುವರು. ಪಶ್ಚಿಮಾತ್ಯ ಕಲೆಯು ನಮ್ಮ ಕಲೆಯನ್ನು  ರೂಪಿಸುವುದು ಎಂದಿಗೂ ಸಲ್ಲದು. ನಾವು ಭಾರತೀಯರು. ಅವರ ಕ್ರಮ-ನಿಬಂಧನೆಗಳೆಲ್ಲಾ ಅವರಿಗೇ  ಒಪ್ಪತಕ್ಕದ್ದು. ನಾವು ಕುರುಡರಂತೆ ಅವರ ಕೈ ಹಿಡಿದು ತಿರುಗಬಹುದೇ?

ಇಷ್ಟೆಲ್ಲಾ ಹೇಳಿದರೂ ಅಲ್ಲಿ ಏನೋ ಒಂದು ವಿಧದ ಅಡಚಣೆ ಕಾಣಿಸುತ್ತದೆ. ಈ  ಹೆಚ್ಚು-ಕಡಿಮೆಯನ್ನು ನಾವು ಒಪ್ಪಿಕೊಂಡರೂ, ನಮ್ಮ ಈಗಿನ ಯುವಜನಾಂಗವು ಸಂಸ್ಕೃತಿಯಿಂದ  ಬಹಳದೂರದಲ್ಲಿ ನಿಂತಂತೆ ಭಾಸವಾಗುತ್ತದೆ. ಭರತನಾಟ್ಯಕ್ಕೆ ಅವರ ದೃಷ್ಟಿಯಲ್ಲಿ ಸ್ಥಾನ ಕಡಿಮೆ. ಆ  ನಾಟ್ಯ ಅಪ್ರಸ್ತುತ; ಅದು ಸತ್ತಿರುವ ಕಲೆ; ಪುರಾತನ ಪಳೆಯುಳಿಕೆ; ಅವಶೇಷ ; ನಾವು ಹಿಂದಿನಕಾಲದ  ಪಳೆಯುಳಿಕೆಗೆ ಸೇರಿದವರಲ್ಲ; ಅಲಂಕಾರಭೂಷಣ ಅಥವಾ ಉಪಯೋಗಿಸದ ಹಳೆಯ ವಸ್ತುವಿನಂತೆ ಮಾತ್ರ  ಕಾಣಿಸುತ್ತಿದೆ. ಆದರೂ ಅದರ ವಿಷಯವಾಗಿ ಸ್ವಲ್ಪ ತಿಳಿದುಕೊಂಡಿರಬೇಕೆಂಬ ಮನಸ್ಥಿತಿಯಿದೆ.

ಭಾರತೀಯ ಸಾಂಸ್ಕೃತಿಕ ಕಲೆ ಸಮಕಾಲೀನವಾದದ್ದು. ನೃತ್ಯವು ನಮ್ಮ ವಾಸ್ತವ ಹಾಗೂ  ಹೃದಯಾಂತರಾಳದಲ್ಲಿ ನೆಲೆಸಿರುವ ಒಂದು ಗುಣ. ನಮ್ಮ ನರ್ತನಸೇವೆಯಲ್ಲಿ ಕಾಣಿಸುವ ಉಲ್ಲಾಸಪೂರ್ಣ ಅಥವಾ  ಪ್ರಯತ್ನವೆಲ್ಲಾ ‘ಸಮಕಾಲೀನ’ವಾದದ್ದೇ ಹೌದು. ಇಂತಹ ಔದಾರ್ಯಪೂರ್ಣ ಸಾಂಸ್ಕೃತಿಕ ಕಾರ್ಯಾಚರಣೆಯಲ್ಲಿ  ಎದ್ದು ಕಾಣಿಸುವಂತ ಗುಣವಿದ್ದರೆ ಅದನ್ನೇ ಕಲೆಯೆಂದು ಸ್ವೀಕರಿಸಬಹುದು. ನಮ್ಮ ನೆಲೆಗಟ್ಟಿನಲ್ಲಿ  ಭದ್ರವಾಗಿ ನಿಂತ ಭರತನಾಟ್ಯ ; ಈಗ ತಾನೇ ತನ್ನನ್ನು ಬದಲಾಯಿಸಿಕೊಂಡು ಹೊಸದೆನಿಸಿದ ‘ಸತ್ಯ ಮತ್ತು  ಸೌಂದರ್ಯ’ದೆಡೆಗೆ ಕಾಲು ಹಾಕಬೇಕಾಗಿದೆ.

ನೃತ್ಯ : ಅಂದು, ಇಂದು, ಮುಂದು( ಹೇಮಂತ ಋತು ಗಾನ ೨೦೦೯)
muraleedhara rao

ಕಲೆಗಾಗಿ ಸಂಘ ಸ್ಥಾಪನೆ ! ಹತ್ತು ಜನರ ಒಕ್ಕೂಟ ಅದು. ಕೀರ್ತಿ-ಹಣ ಸುಲಭವಾಗಿ  ದೊರೆಯುತ್ತದೆ. ಅದು ಕಲೆಯ ಒಳಿತಿಗಾಗಿಯೋ ಅಥವಾ ಸ್ವಂತ ಪ್ರಯೋಜನಕ್ಕಾಗಿಯೋ?

ಇಂದು ಪರೀಕ್ಷೆ, ಪಠ್ಯಪುಸ್ತಕಗಳು, ಅದರಲ್ಲಿರಬೇಕಾದ ವಿಷಯಗಳು- ಇವೆಲ್ಲಾ ನಮ್ಮ  ಸ್ವಂತ ಪ್ರಯೋಜನಕ್ಕಾಗಿ ಇವೆ; ಕಲೆಗಾಗಿ ಅಲ್ಲ. ಪಠ್ಯಪುಸ್ತಕದಲ್ಲಿರುವುದನ್ನೇ ಹೇಳಿದರೆ ನೂರಕ್ಕೆ  ನೂರು ಅಂಕ ಗಳಿಸಬಹುದು ! ಇದರಿಂದ ನಮ್ಮ ಮನಸ್ಸಿಗೆ, ದೇಹಕ್ಕೇನು ಲಾಭವಾಯಿತು, ಯಾವ ರೀತಿಯಲ್ಲಿ  ಜನಮನ್ನಣೆ ಗಳಿಸುತ್ತೇವೆ- ಎಂಬ ವಿಚಾರಗಳು ಆ ಸಂಘ ಸಂಸ್ಥೆಗಳಲ್ಲಿಲ್ಲ.

ಭರತನಾಟ್ಯ ಆದಿಯಾಗಿ ನೃತ್ಯ ಕಲೆಗಳನ್ನು ಬರಿಯ ಹೆಸರು ಅಥವಾ ವಿಧಿನಿಯಮವೆಂದು ಹೇಳುವ  ಬದಲಿಗೆ, ಅದನ್ನು ಕೂಲಂಕಷವಾಗಿ ತಿಳಿಯುವುದು ಉತ್ತಮ. ನಾಟ್ಯದ ವಿಚಾರ ತಿಳಿದವರು, ಗುರುಗಳು,  ನಾಟ್ಯ ನಡೆಸುವವರು ಹಾಗೂ ಪ್ರದರ್ಶಿಸುವವರು ಒಟ್ಟಾಗಿ ಸೇರಿ; ಉದ್ದೇಶ ಇತ್ಯಾದಿಗಳನ್ನು ಚರ್ಚಿಸಿ,  ನಾಟ್ಯದ ರೀತಿನೀತಿಗಳನ್ನು ಒಂದು ನಿಯಮದಲ್ಲಿ ತರುವುದು ಮುಖ್ಯ. ಈ ಸಂದರ್ಭ ಮತ್ತು ಯೋಚನೆ ನಾಟ್ಯ  ಪ್ರವರ್ತಕರಿಗೂ, ವಿಮರ್ಶಕರಿಗೂ ಒಂದು ಉತ್ತಮ ನಿದರ್ಶನವಾಗಬಹುದು.

ಭರತನಾಟ್ಯಕಲೆ- ಎಂಬುದು (೧೯೩೦ರಲ್ಲಿ ಚೆನ್ನೈನ ಸಂಗೀತ ಅಕಾಡೆಮಿ ಕಂಡ) ದಾಸೀ ಆಟ್ಟಂ,  ಸಾದಿರ್, ಕೂತ್ತು, ಕರ್ನಾಟಕಂ ಎಂಬ ಹೆಸರು ಪಡೆದಿತ್ತು. ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಉದಿಸಿದ  ಈ ಕಲೆ ಮುಂದೆ ದೇಶದ ಮೂಲೆಮೂಲೆಗೂ ಹಬ್ಬಿ, ಭಾರತದ ಅತ್ಯಮೂಲ್ಯ ಕಲೆಯೆಂಬ ಪ್ರಚಾರ ಹೊಂದಿತು.  ತಂಜಾವೂರು ಚತುಷ್ಪಯರಿಂದ ರೂಪುಗೊಂಡ ಈ ಕಲೆ ಮುಂದಿನ ಕೆಲ ವಿದ್ವಾಂಸರಿಂದ ಉತ್ತಮ ವ್ಯವಸ್ಥಿತ ರೂಪ  ಪಡೆಯಿತು. ಇದರ ನಾಟ್ಯಾಂಶಗಳಿಗೆ ‘ಮಾರ್ಗ’ ಎಂಬ ಹೆಸರಿದೆ. ಇದೇ ಮಾರ್ಗದಲ್ಲಿ ಭಾವಪ್ರೇರಣೆ,  ಭಾವಸ್ಫುರಣೆ ಹಾಗೂ ಭಾವಗರ್ಭಿತವೆಂಬ ಧ್ವನಿಪೂರ್ಣ ವಸ್ತು ಇರಲೇಬೇಕು. ಅದಕ್ಕೆ ಮಾರ್ಗದರ್ಶಕವಾಗಿ  ಅನೇಕ ವಿದ್ವಾಂಸರೆಲ್ಲಾ ಸೇರಿ ಅದಕ್ಕೆ ಹೊಂದುವ ಸಂಗೀತ, ಪದಗಳು, ಕೀರ್ತನೆ, ಶ್ಲೋಕ,  ಸಾಹಿತ್ಯಗಳನ್ನು ರಚಿಸಿ ನಾಟ್ಯಕ್ಕೆ ಅಪರಿಮಿತ ಹಿರಿಮೆ ತಂದುಕೊಟ್ಟಿದ್ದಾರೆ.

ನಾಟ್ಯದಲ್ಲಿ ಸಂಗೀತ ಮುಖ್ಯ. ನಾಟ್ಯದ ನಡೆಯಲ್ಲಿ ಸಂಗೀತದ ವಿವಿಧಾಂಶಗಳನ್ನು  ಕಾಣುತ್ತಿದ್ದೇವೆ. ಹಿಂದಿನ ಶಾಸ್ತ್ರಗಳಲ್ಲಿ ಸಂಗೀತದ ಸಾಮರಸ್ಯ ಮತ್ತು ಕಲಿಯುವಿಕೆ ನಾಟ್ಯದಷ್ಟೇ  ಮೂಲವೆಂದು ಪರಿಗಣಿಸಲಾಗುತ್ತಿತ್ತು. ಅಭಿನಯದಲ್ಲಿ ರಾಗದ ಮೂಲನಡೆಗಳಿಗೆ ಅನುಸಾರವಾಗಿ ಗಮಕಗಳು,  ಶ್ರುತಿಗಳು, ನೆರವಲು-ಸ್ವರಪ್ರಸ್ತಾರ ಕ್ರಮಗಳೂ ಅವಿನಾಸಂಬಂಧವಾಗಿ ಸಾಗುತ್ತದೆ. ಸಾಹಿತ್ಯವು  ಸಮೀಪದಲ್ಲಿ ಚಲಿಸುತ್ತಾ ನೃತ್ಯಭಾವಕ್ಕೆ ಆಧಾರವಾಗಿರುತ್ತದೆ. ಹಾಗಾಗಿ ಸಂಗೀತವು ನರ್ತನದಿಂದ  ಬೇರಾಗಿಲ್ಲ; ಬದಲಾಗಿ ಜತೆಯಲ್ಲೇ ಸಾಗುವ ವಿಶೇಷಸ್ಥಾನ ಹೊಂದಿದೆ. ಇದನ್ನೇ ‘ವಾಚಿಕ’ವೆಂದು  ಕರೆಯುತ್ತಾರೆ.

ನಾಟ್ಯಕಲೆಯಲ್ಲಿ ಇತ್ತೀಚೆಗೆ ಸ್ವತಂತ್ರ ಕಲ್ಪನಾಶಕ್ತಿ ಇಲ್ಲದಿರಲು ಕಾರಣ ;  ನರ್ತಕರಿಗೆ ಸಂಗೀತದ ಲಕ್ಷಣಗಳೇ ತಿಳಿಯದಿರುವುದು. ನೃತ್ಯಕ್ಕೆ ಅಗತ್ಯವಾದ ಹಾಡುಗಳು ಅಥವಾ  ವಸ್ತುಗಳಿಗೆ ಬಾಯಿಪಾಠ ಮಾಡುವುದಲ್ಲದೆ, ಸಂಗೀತದ ಒಳಹೊಗುವ ಸಾಹಸವೇ ಅವರಲ್ಲಿಲ್ಲ. ಸಂಗೀತದ ಜೊತೆಗೆ  ಅದರೊಡನಿರುವ ತಾಳ-ಲಯಗಳು, ಅದರಲ್ಲಿ ಅಡಕವಾಗಿರುವ ಅಮೂಲ್ಯ ಹೃದಯಸ್ಪರ್ಶಿ ಸ್ವರಗುಣ ಹಾಗೂ ಆಯಾ  ರಾಗಕ್ಕೆ ಒದಗುವ ಕ್ಲಪ್ತ ಸಾಮರ್ಥ್ಯವೆಲ್ಲ ನಮ್ಮಲ್ಲಿನ ಸುಪ್ತವಾದ ಭಾವನೆಗಳನ್ನು  ಹೊಡೆದೆಬ್ಬಿಸುತ್ತದೆ; ಹಾಗೂ ಅಭಿನಯಕ್ಕೆ ಸೂಕ್ಷ್ಮತೆಯನ್ನು ನೀಡುತ್ತದೆ. ಇದರಿಂದ ನರ್ತಕಿಯು ತನ್ನ  ಅಭಿನಯ- ನಡೆಗಳನ್ನು ಒಂದು ಸುಲಲಿತ ಸ್ಥಿತಿಗೆ ತರುವುದಲ್ಲದೆ; ನಡುನಡುವೆ ಸಾಗರದ ತರಂಗೋಪಾದಿಯಂತೆ  ಸ್ಪರ್ಶಸುಖವನ್ನು ನೀಡುತ್ತದೆ.

ಹಾಡುಗಳ ತಿಳಿವಳಿಕೆ ಮತ್ತು ಕಾವ್ಯಗಳ ಅಂತಃಸತ್ವ, ಪ್ರತಿಮಾಶಿಲ್ಪ, ಸ್ಥಳಪುರಾಣ,  ಇತಿಹಾಸಗಳೆಲ್ಲ ಈ ಕಲೆಗೆ ನೆರವು ನೀಡುವಂತಹವು. ಭಾವಗಳು ಆವೇಶಭರಿತವಾಗಿದ್ದರೆ ರಸವು  ಅಮೂಲ್ಯತೆಯನ್ನು ಹೊಂದುತ್ತದೆ.

ನರ್ತನ ಸುರಭಿ ಅಂಕಣ : ‘ನೃತ್ಯ- ಅಂದು, ಇಂದು, ಮುಂದು’
ನಾಟ್ಯಾಚಾರ್ಯ ಕೆ. ಮುರಲೀಧರರಾಯರ ‘ನೃತ್ಯಲೋಕ’ ಗ್ರಂಥವನ್ನು ಅರಿಯದ ನೃತ್ಯಾಸಕ್ತರು ಬಹಳ ಕಡಿಮೆ. ಹಾಗೆ ನೋಡಿದರೆ, ಜ್ಞಾನವೃದ್ಧರೂ, ವಯೋವೃದ್ಧರೂ ಆದ ರಾಯರು ನಮ್ಮ ನಡುವಿನ ನಡೆದಾಡುವ ಗ್ರಂಥವೇ ಹೌದು. ಎಂಭತ್ತನಾಲ್ಕನೇಯ ವಯಸ್ಸಿನಲ್ಲೂ ಅವರ ಉತ್ಸಾಹ ಇಪ್ಪತ್ತರ ತರುಣರನ್ನೂ ನಾಚಿಸುವಂತಹುದು. ನಿಸರ್ಗ, ಸಂಗೀತ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರ ಕಲೆ, ನರ್ತನ.., ಹೀಗೆ ಶ್ರೀಯುತರ ಬಹುಮುಖವೆನಿಸುವ ವಿದ್ವತ್ತು, ಅಗಾಧ ಪಾಂಡಿತ್ಯ, ಬೋಧನಾನುಭವ, ಜೀವನದರ್ಶನ.., ಎಂಥಹ ಸಾಧಕರಿಗೂ ಭವಿಷ್ಯ ಸಾಧ್ಯತೆಗಳ ಚಿಂತನಕ್ಕೆ ಒಂದು ಉತ್ತಮ ಆಕರ. ಅವರ ಚಿಂತನ-ಮಂಥನಗಳ ಸೌಹಾರ್ದ ಸಂಧಿಸುವಿಕೆ ನಮ್ಮೆಲ್ಲರ ಜ್ಞಾನ ಪರಿವ್ರಾಜನೆಗೆ ಸೂಕ್ತ ಸಮಯವನ್ನೀಯುತ್ತದೆ. ನಮ್ಮ ಓದಿನೊಂದಿಗೆ, ಈ ಸಿಂಹಾವಲೋಕನ, ಭವಿಷ್ಯದ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ಅವರು ಜೊತೆಗಿರುತ್ತಾರೆ. ಆದ್ದರಿಂದ ಅವರ ಲೇಖನಿಯಿಂದ ಚಿಮ್ಮಿದ ಸಾಲುಗಳ ಅಂಕಣ ಲೇಖನ :

‘ನೃತ್ಯ- ಅಂದು, ಇಂದು, ಮುಂದು’- ಈ ಸಂಚಿಕೆಯಿಂದ ನಿಮಗಾಗಿ !

ಯಾವ ಕಲೆಯೂ ಅಥವಾ ಕಲಾಭಿವ್ಯಕ್ತಿಯೂ ಶೂನ್ಯದಲ್ಲಿ ಹುಟ್ಟುವುದಿಲ್ಲ. ಅಥವಾ ವಿರಳವಾಗಿ ಹುಟ್ಟಿಕೊಂಡರೂ ಜಗತ್ತಿನಲ್ಲಿ ದೀರ್ಘಕಾಲ ಮುಂದುವರಿಯುವುದಿಲ್ಲ ; ಪರಂಪರೆಯನ್ನಂತೂ ಉಂಟುಮಾಡುವುದಿಲ್ಲ. ಉದಾ : ಕ್ರೌಂಚವಧೆಯ ದಾರುಣ ಸನ್ನಿವೇಶ. ಅದು ಒಬ್ಬ ವ್ಯಾಧ ತಪಸ್ವಿಯನ್ನು ಆದಿಕವಿ ವಾಲ್ಮೀಕಿಯನ್ನಾಗಿ ಉತ್ಥಾನಗೊಳಿಸಿತು. ಫಲವಾಗಿ ರಾಮಾಯಣವೆಂಬ ಫಲ. ಅಂತೆಯೇ ಭಾರತೀಯ ಸಂಸ್ಕೃತಿಯ ಅಖಂಡಧಾರೆ ಅಥವಾ ಎಳೆಯಾಗಿ ಮಹಾಭಾರತದಂತಹ ಮಹಾಕಾವ್ಯಗಳೂ, ವೇದ-ಉಪನಿಷತ್ತು, ಧಾರ್ಮಿಕ-ಬೌದ್ಧಿಕ ಕೃತಿಗಳೂ ಪರಂಪರೆಯನ್ನು ಸೃಷ್ಟಿಸಿವೆ.

ಇಂದಿನ ಭೋಗಜೀವನದಲ್ಲಿ ಭಾರತೀಯತೆ ಉಳಿದು, ಬೆಳಗಿ, ನಳನಳಿಸುತ್ತಾ ಇರುವುದು ಈ ಪರಂಪರೆಗಳ ಭವ್ಯತೆಗೆ ಸಾಕ್ಷಿ. ಆರ್ಷೇಯ ಭರತನಾಟ್ಯ ಇದೇ ಪರಂಪರೆಗಳ ಒಂದು ಶಾಖೆ. ಇದರಲ್ಲಿ ವೇದಸಾರವಿದೆ. ಉಪನಿಷತ್ ಬೋಧನೆಯಿದೆ. ರಾಮಾಯಣ-ಮಹಾಭಾರತ-ಭಾಗವತ-ಪುರಾಣಗಳಂತೂ ಇದರ ಜೀವಂತ ದೇಹವೆ ಆಗಿದೆ. ಸಂಗೀತ- ಸಾಹಿತ್ಯ- ನರ್ತನ- ಅಭಿನಯ ಮತ್ತು ಭಾವೋನ್ಮೇಷ ಎಂಬ ಪಂಚ ಸೃಜನಶೀಲ ಸ್ಫೂರ್ತಿಗಳ ಸಂಗಮವಿದು.

‘ಈಗೇನೋ ನಮ್ಮ ದೃಷ್ಟಿಯಲ್ಲಿ ನಾಟ್ಯ-ನೃತ್ಯ ತುಂಬಾ ಸುಧಾರಿಸಿದೆ’ ಎಂಬ ಹೊರನೋಟ ಕಂಡರೂ, ಸಮಾಜದಲ್ಲಿ ಕಲಾವಿದರು ನಾಟ್ಯದ ಉತ್ತಮ ಅಂಶ ಬಿಟ್ಟು ಪ್ರಾಪಂಚಿಕ ಮನೋಭಾವ ಬೆಳೆಸುವುದನ್ನು ನೋಡುತ್ತಿದ್ದೇವೆ. ಅಂತಾರಾಷ್ಟ್ರೀಯ ಮಾದರಿಯಲ್ಲಿ ನಾಟ್ಯದ ಬದಲು ‘ಕುಣಿತ’ ಕಾಣುತ್ತಿದ್ದೇವೆ. ಇಲ್ಲಿ ನಮಗೆ ಬೇಕಾದುದು ‘ಶಾಸ್ತ್ರೀಯ ವಿಮೋಚನೆ’ !

ಕಲೆ ವಿಲಾಸಕ್ಕಾಗಿ ನಡೆಯಬೇಕಾಗಿಲ್ಲ. ಜೀವನದ ವಿಕಾಸವೇ ಅದರ ಗುರಿ ! ಆದರೆ ಸಂಸ್ಕೃತಿ ನಷ್ಟವಾದರೆ ರಾಷ್ಟ್ರವೇ ಅಧಃಪತನಕ್ಕೆ ಜಾರುತ್ತದೆ !

ಆ ಕಾಲ ಹಿಂದಿನದು …..!

ಭಾರತೀಯ ಸಂಸ್ಕೃತಿಯಲ್ಲಿ ನಾಟ್ಯ ಅತ್ಯಂತ ಪ್ರಿಯವಾದ ಕಲೆ ಎನಿಸಿತ್ತು. ಭಾವನಿರೂಪಣೆಯನ್ನು ತೋರಿಸುವ ಉಚ್ಛ ಸಂಪ್ರದಾಯವನ್ನು ಹೊಂದಿತ್ತು. ಆದರೆ ಅದೇ ಆ ಪ್ರವೃತ್ತಿ ಇಂದಿನವರಿಂದ ಅವಹೇಳನಕ್ಕೆ ಗುರಿಯಾಗುವ ಸಂದರ್ಭದಲ್ಲಿ ‘ಅದು ಪ್ರಾಚೀನ’- ಎಂದರೆ, ಬಳಕೆಯಲ್ಲಿ ಮುಂದುವರಿಯದದ್ದು ಎಂದೋ  ಅಥವಾ ‘ಇಂದಿನ ಪ್ರಕೃತ ದೃಷ್ಟಿಯಲ್ಲಿ ಅಪ್ರಸಕ್ತ’ ಎಂದೋ ಅಭಿಪ್ರಾಯ ಕೇಳಿಸುತ್ತಿದೆ. ಹಾಗಾಗಿ ನೃತ್ಯದ ಅಧೋಗತಿಯನ್ನು ಕಂಡವರು ಕೇಳುವ ಪ್ರಶ್ನೆಯಿದು : ‘ ಈ ನಾಟ್ಯಕಲೆಯಲ್ಲಿ ಪ್ರದರ್ಶನವೀಯುವ ಹಾಗೂ ಅದರಲ್ಲಿ ಅಭಿನಯಿಸುವ ಕಲಾಗಾರರಲ್ಲಿ ನಾವು ಹಿಂದೆ ಕಂಡ ಲಕ್ಷಣವಂತರು ಇದ್ದಾರೆಯೋ?’

ಆ ಪ್ರಶ್ನೆಗೆ ಉತ್ತರ ಹೇಳಲು ಹೊರಟರೆ ಕೆಲವು ಉದಾಹರಣೆಗಳನ್ನು ಕೊಡಲೇಬೇಕು. ನಮ್ಮ ಸಮಾಜದಲ್ಲಿ ಕಾಣಿಸುವವರಲ್ಲಿ:-

ಮೊದಲನೇಯದು – ಗುರುಗಳಿಂದ ನೃತ್ಯಕಲೆ ಕಲಿತು ಮುಂದಕ್ಕೆ ತಮ್ಮಲ್ಲಿ ವ್ಯಾಸಂಗಕ್ಕೆ ಬಂದಿರುವವರಿಗೆ ವಿದ್ಯೆ ಹೇಳಿ ಕೊಡುವವರು ; ತಾವು ಕಲಿತದ್ದರಲ್ಲಿ ಕಿಂಚಿತ್ತೂ ಮಾರ್ಪಾಟು ಮಾಡದೆ, ‘ಗುರುಗಳು ಹೇಳಿಕೊಟ್ಟದ್ದೇ ದೊಡ್ಡದು, ಅವರ ಪ್ರಪಂಚವೇ ದೊಡ್ಡದು’ ಎಂಬ ಒಣಭ್ರಾಂತಿ ಹೊಂದಿರುವವರು,

ಸಾಂಪ್ರದಾಯಿಕ ಕ್ರಮದಲ್ಲಿ ಹೊಸಜಗತ್ತನ್ನೇ ತಾವು ಕಂಡು ಅದನ್ನು ಧಾರೆಯೆರೆಯುತ್ತಾ ಇರುವವರೇ ಎರಡನೇಯವರು. ಇವರು ಪ್ರಪಂಚವನ್ನು ಸ್ವಲ್ಪ್ಪ ಕಂಡಿದ್ದಾರೆ ನಿಜ ; ಆದರೆ ಅಲ್ಲಿಯೂ ಒಂದಿಷ್ಟು ಬೇರು ಕಾಣದ ಸ್ಥಿತಿಯಲ್ಲಿದ್ದಾರೆ ; ಯಾವ ರೀತಿಯಲ್ಲಿ ಹೇಳಿದರೆ ಒಳ್ಳೆಯದು ಎಂಬ ಭಾವನೆ ಇರದೆ ಹೆಸರಿಗೆ ಮಾತ್ರ ಗುರುತಿಸಿಕೊಂಡವರು,

ತಮ್ಮ ಪ್ರದರ್ಶನಗಳಲ್ಲಿ ನಾಯಕ- ನಾಯಿಕಾ ಭಾವಗಳ ವಿಚಾರ ಬಿಟ್ಟು, ಭಕ್ತನಾದವನೂ ದೇವನಿಗೆ ಅರ್ಪಿಸುವ ಭಕ್ತಿಯೇ ನಿಜವಾದ ಶೃಂಗಾರವೆಂದು ಹೇಳಿಕೊಡುವವರು ಮೂರನೇ ವರ್ಗದವರು ; ಅಂದರೆ ಶೃಂಗಾರವನ್ನು ಸೇರಿಸುವ ಬದಲು ಭಕ್ತರ ಆರಾಧನೆ ಮಾತ್ರ ಎನ್ನುವವರು,

ನಾಲ್ಕನೆಯವರು ಬುದ್ಧಿವಂತರು. ಅಭಿನಯ ಭಾಗದಲ್ಲಿ ಪಳಗಿ ಅದನ್ನು ಪ್ರದರ್ಶಿಸುವವರು. ಒಂದು ವಿಶೇಷೋದ್ದೇಶಕಾಗಿ ಬಾಹ್ಯ ವಸ್ತುಗಳ ಪ್ರತಿಮೆಗಳನ್ನು ಕಲ್ಪಿಸಿ, ಅದನ್ನು ತಮ್ಮ ವಿದ್ಯೆಯಲ್ಲಿ ಸೇರಿಸುವ ಮನಃಶ್ಯಕ್ತಿಯನ್ನು ಹೊಂದಿದವರು. ಸಂಪ್ರದಾಯದಲ್ಲಿ ಹೊಸ ಆಯಾಮವನ್ನು ಕಂಡುಹಿಡಿವವರು ಇವರು. ಶೃಂಗಾರದಲ್ಲಿ ಹೊಸಹಾದಿ, ಸಾಹಿತ್ಯಾಭಿರುಚಿಯಲ್ಲಿ ದಿನದಿನವೂ ಹೊಸ ಮಾರ್ಪಾಟುಗಳನ್ನು ಕಲ್ಪಿಸಿ ತಾವು ಕಲಿತ ವಿದ್ಯೆಯಲ್ಲಿ ಅದನ್ನು ಕಾಣಿಸುವ ರೀತಿಯಲ್ಲಿ ಹೇಳುತ್ತಿರುವವರು.

ಜೊತೆಗೆ, ಸಂಪ್ರದಾಯದಲ್ಲಿ ಆಂಗಿಕ ವಿಧಿಯನ್ನು ಮಾತ್ರ ಹೇಳಿಕೊಟ್ಟು ಉಳಿದವು ಪ್ರಧಾನವಲ್ಲವೆಂದು ತಿಳಿಸಿ, ಅದರಲ್ಲಿ ಚಪ್ಪಾಳೆ ಗಿಟ್ಟಿಸುವ ಭೂಪರು ಬೇರಿದ್ದಾರೆ.

ಕಂಪ್ಯೂಟರ್‌ಗಳನ್ನು ನಂಬಿ, ಮುಂದಕ್ಕೆ ತಮಗೆ ಗುರುವೇ ಬೇಡವೆನ್ನುವವರ ಸ್ಥಿತಿ ಹೇರಳವಾಗಿ ಇದೆ.

ಏಕವ್ಯಕ್ತಿ ಪ್ರದರ್ಶನಕ್ಕಿಂತ ನಾಟ್ಯವಾಡುವವರ ಗುಂಪನ್ನೇ ನಿರ್ಮಿಸುವವರೂ ಇದ್ದಾರೆ.

ಹೊಸದಾರಿ ತಮ್ಮದು. ರಾಜಕೀಯ ಅಥವಾ ಧಾರ್ಮಿಕ ಸಭೆಯಲ್ಲಿ ಪ್ರದಶನವನ್ನು ಮಾಡಿಸುತ್ತಾ, ಒಟ್ಟಿನಲ್ಲಿ ಹಾಡಿಗೂ, ನಾಟ್ಯಕ್ಕೂ ಉದ್ದೇಶಕ್ಕೂ ತಾಳೆಯಿರದೆ ಸಾಹಿತ್ಯಿಕ ಗೀತೆಗಳಿಗೆ ಪ್ರಚಾರಕ್ಕಾಗಿ ಹೆಜ್ಜೆ ಹಾಕಿಸುವವರು ನಮ್ಮ ನಡುವೆ ಇದ್ದಾರೆ.

‘ತಾವು ನಾಟ್ಯವನ್ನು ಬಲ್ಲವರು’ ಎನ್ನುತ್ತಾ ಶೈಲಿಯ ಕುರಿತು ಮಾತನಾಡುವ ಯಾವ ಹೊಂದಿಕೆಯೂ ಇಲ್ಲದ ಜನರು ನಮ್ಮಲ್ಲಿದ್ದಾರೆ.

ದೂರದಿಂದ ನರ್ತಿಸಬಂದ ಹಲಕೆಲವು ಉತ್ತಮ ಅಥವಾ ಮಧ್ಯಮ ಕಲಾವಿದರ ನರ್ತನ ಶೈಲಿ ಕಂಡು ಅಂತಹುದನ್ನೇ ತಮ್ಮ ರೀತಿಯಲ್ಲಿ ನಕಲು ಮಾಡಿ ಪ್ರದರ್ಶಿಸುವ ಸೋಮಾರಿಗಳು ಇದ್ದಾರೆ.

ಪ್ರದರ್ಶನ ಏರ್ಪಡಿಸುವಾಗ ಕಲೆಯ ನೆವದಲ್ಲಿ ಹಣಸಂಪಾದನೆ, ಕೀರ್ತಿ ಕಾಮನೆಗಳಿಂದ ದಿನದೂಡುವವರೂ ನಮ್ಮ ನಡುವಿನ ಸ್ನೇಹಿತರೇ !

ಪ್ರದರ್ಶನ ಕೊಡಿಸುವಾಗ ಕೈಯ್ಯಲ್ಲಿ ಕೊಳೆತ ಹಣವನ್ನು ನೀರಿನಂತೆ ಖರ್ಚು ಮಾಡುವವರೂ, ತಮ್ಮ ಮಕ್ಕಳ ಪ್ರದರ್ಶನಕ್ಕಾಗಿ ವಿಮರ್ಶೆ ಕೊಡುವವರೂ- ಕೊಡಿಸುವವರೂ, ರಂಗಸ್ಥಳದಿಂದ ‘ ದಯವಿಟ್ಟು ಚಪ್ಪಾಳೆಯಿಕ್ಕಿ’ ಎಂದು ಬೇಡುವವರೂ ಇದ್ದಾರೆ. ಚಪ್ಪಾಳೆ ತಟ್ಟಿದ್ದಾರೆ ನಮ್ಮ ಜನ. ಆದರೆ ‘ಯಾಕೆ ಈ ಚಪ್ಪಾಳೆ’ ಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ.

ಪಾರಿಭಾಷಿಕ ಪದ ಪರಿಚಯ
ನೃತ್ಯ, ನಾಟ್ಯದಲ್ಲಿ ಬಳಕೆಯಾಗುವ ಅದೆಷ್ಟೋ ಶಬ್ದಗಳ ಪರಿಚಯ ವಿದ್ಯಾರ್ಥಿಗಳಿಗೋ, ಪ್ರೇಕ್ಷಕರಿಗೋ ಇಲ್ಲದೆ ನೃತ್ಯ-ನಾಟ್ಯಗಳ ಆಮೂಲಾಗ್ರ ಸಂಗತಿಯನ್ನು, ಸಂದರ್ಭವನ್ನು ತಿಳಿಯುವಲ್ಲಿ ಅಸಮರ್ಥರಾಗುವುದಿದೆ. ನೃತ್ಯ ಪ್ರದರ್ಶನಗಳ ಸಂದರ್ಭದಲ್ಲೋ, ಅಥವಾ ವಿಮರ್ಶೆಯನ್ನು ಓದುವಾಗಲೋ ಇಂತಹ ಸಾಧ್ಯತೆಗಳು ಹೆಚ್ಚು. ಹೀಗಾಗಿ ಜನಸಾಮಾನ್ಯರ ನಾಡಿಮಿಡಿತವಾಗುವ ನೃತ್ಯವು ಕ್ರಮೇಣ ಹುಳಿ ದ್ರಾಕ್ಷಿಯೆನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ದುಡಿಯುತ್ತಿರುವ ನೂಪುರಭ್ರಮರಿಯ ಪ್ರಯತ್ನಕ್ಕೆ ವೈಷ್ಣವಿಯವರು ಮತ್ತೊಮ್ಮೆ ಕೈಜೋಡಿಸಿದ್ದಾರೆ. ಈ ಸಂಚಿಕೆಯಿಂದ ಅವರ ಅಂಕಣ ನರ್ತನ ಸುರಭಿಯಲ್ಲಿ ಭರತನಾಟ್ಯದ ಕೆಲವು ಪಾರಿಭಾಷಿಕ ಶಬ್ದಗಳನ್ನು ಪರಿಚಯ ಮಾಡಿಕೊಳ್ಳೋಣವೇ?

(ಸೂಚಿಯನ್ನು ಕೊಡಲಾಗಿದ್ದು ವಿವರಿಸಲಾಗುವ ಶಬ್ದಗಳು ಗ್ರಂಥಗಳಿಂದ ಉದ್ದರಿಸಲ್ಪಟ್ಟವಾಗಿರುತ್ತವೆ.)

(ಅಭಿನಯ ದರ್ಪಣ : ಅ.ದ ; ನಾಟ್ಯಶಾಸ್ತ್ರ : ನಾ.ಶಾ)

ಅಂಕುರ (ನಾ.ಶಾ) : ಹಸ್ತವಿನ್ಯಾಸಗಳಿಂದ ಅಭಿನಯ ಮಾಡುವಂಥದ್ದು. ಆಂಗಿಕಾಭಿನಯದಲ್ಲಿ ಇದೊಂದು ಕ್ರಮ. ವಾಕ್ಯದ ಒಳಾರ್ಥ ಮತ್ತು ಅದರ ಮನೋಭಾವಗಳನ್ನು ಪ್ರಕಟಗೊಳಿಸುವ  ವಾಕ್ಯಾರ್ಥಾಭಿಯವೆಂಬ ವಿಷಯದಲ್ಲಿ ಇದೂ ಒಂದು ಮಾಧ್ಯಮ.

ಅಂಗ (ನಾ.ಶಾ) : ತಲೆ, ಕೈ, ಸೊಂಟ, ಎದೆ, ಪಕ್ಕೆ, ಕಾಲು ಇವು ಆರು ಅಂಗಗಳು. ಮಾನವನ ದೇಹಭಾಗಳು. ನೃತ್ಯಕಾರ್ಯದಲ್ಲಿ ಪ್ರಧಾನವಾಗಿರುವಂಥದ್ದು. ಇದನ್ನು ಉಪಯೋಗಿಸಿಯೇ ನೃತ್ಯವನ್ನು ಕೈಗೊಳ್ಳಲಾಗುತ್ತದೆ. ಆಂಗಿಕಾಭಿನಯಕ್ಕೆ ಇವೇ ಆಧಾರ.

ಅಂಗಭ್ರಮರಿ (ಅ.ದ) : ಹನ್ನೆರಡು ಅಂಗುಲಗಳ ಅಂತರದಲ್ಲಿ ಪಾದಗಳನ್ನಿಟ್ಟು ದೇಹವನ್ನು ಚಕ್ರಾಕಾರವಾಗಿ ಸುತ್ತುವುದು.

ಅಂಗಶುದ್ಧ (ನಾ.ಶಾ) : ಆಂಗಿಕಾಭಿನಯಕ್ಕೆ ಅಗತ್ಯವಾದ ದೇಹದ ಭಾಗಗಳು ಖಚಿತವಾಗಿ ನಿರೂಪಿಸಲ್ಪಟ್ಟಿದ್ದರೆ ಅಂಗಶುದ್ಧವಿದೆ ಎಂದರ್ಥ.

ಅಂಗಾಹಾರ (ನಾ.ಶಾ) : ದೇಹದ ಅಂಗಾಂಗಗಳನ್ನು  ವಿಶಿಷ್ಟ ಸ್ಥಾನಗಳಲ್ಲಿ ಚಲಿಸುವುದು. ಆರರಿಂದ ಒಂಭತ್ತು ಕರಣಗಳು ಸೇರಿದರೆ ಒಂದು ಅಂಗಾಹಾರವಾಗುತ್ತದೆ. ಮುಖ್ಯವಾಗಿ ೩೨ ಪ್ರಕಾರದ ಅಂಗಾಹಾರಗಳಿವೆ.

ಅಗ್ರಗ (ನಾ.ಶಾ) : ಇದೊಂದು ಪಾದ ಕ್ರಮ. ವೇಗವಾಗಿ ಕಾಲ್ಬೆರಳನ್ನು ಮುಂದಿಟ್ಟು ನಡೆಯುವುದು.

ಅಗ್ರತಲ ಸಂಚರ (ನಾ.ಶಾ) : ಇದೊಂದು ಪಾದ ಕ್ರಮ. ಹಿಮ್ಮಡಿಯನ್ನು ಮೇಲಕ್ಕೆತ್ತಿ ಅಂಗುಷ್ಠವನ್ನು ಸೇರಿಸಿದಂತೆ ಬೆರಳುಗಳನು ಬಗ್ಗಿಸುವುದು. ನೆಲಕ್ಕೆ ಅಪ್ಪಳಿಸಲು, ಗಾಯವಾದಾಗ ನಡೆಯಲು ಎಂಬುದಾಗಿ ಉಪಯೋಗಿಸುವುದು.

ಅಂಚಿತ (ನಾ.ಶಾ) : ಗ್ರೀವಾ ಮತ್ತು ಶಿರೋ ಭೇದ ಅಂದರೆ ಕುತ್ತಿಗೆಯನ್ನು ಮತ್ತು ತಲೆಯನ್ನು ಚಲಿಸುವ ರೀತಿಗಳಲ್ಲಿ ಒಂದು ಬಗೆ. ಗಲ್ಲಿಗೇರಿಸುವ ಅಭಿನಯ, ಮೇಲಕ್ಕೆ ನೋಡಲು, ಜ್ವರ, ಕೂದಲನ್ನು ಸರಿಪಡಿಸುವಾಗ ಇದರ ಬಳಕೆಯಾಗುತ್ತದೆ.

ಅಂಚಿತ (ನಾ.ಶಾ) : ಇದೊಂದು ಪಾದ ಕ್ರಮ. ಹಿಮ್ಮಡಿಯನ್ನು ನೆಲದ ಮೇಲೂರಿ, ಕಾಲಿನ ಮುಂಭಾಗ ಮತ್ತು ಕಾಲ್ಬೆರಳುಗಳನ್ನು ಮೇಲಕ್ಕೆತ್ತುವುದು. ಕಾಲಿನ ಮುಂಭಾಗಕ್ಕೆ ಗಾಯವಾದಾಗ ನಡೆಯುವ ಸಂದರ್ಭದಲ್ಲಿ ಇಂತಹ ಪಾದಸ್ಥಾನ ಬಳಕೆಯಾಗುತ್ತದೆ.

ಅಂಜಲಿ (ನಾ.ಶಾ, ಅ.ದ) : ಸಂಯುತ ಹಸ್ತ ಪ್ರಕಾರದಲ್ಲಿ ಅಂದರೆ ಎರಡೂ ಹಸ್ತಗಳನ್ನು ಉಪಯೋಗಿಸಿ ಮಾಡುವ ಮುದ್ರೆಗಳ ಪೈಕಿ ಮೊದಲನೇಯದು. ಇದರ ಲಕ್ಷಣ ತಲೆಯ ಮೇಲೆ ಹಸ್ತಗಳನ್ನು ಜೋಡಿಸಿ ನಮಸ್ಕರಿಸುವುದು.

(ಮುಂದುವರೆಯುವುದು………. )