ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಪತ್ರಿಕೆಯ ಒಪ್ಪ -ಓರಣ, ಅಂದ-ಚೆಂದ, ವಿನ್ಯಾಸ-ಗುಣಮಟ್ಟ, ಅನಿಸಿಕೆ-ಅಭಿಪ್ರಾಯ…ಹೀಗೆ ಹಲವು ಆಯಾಮಗಳತ್ತ ನಿಮ್ಮ ನೋಟಗಳೇನೇ ಇದ್ದರೂ ಅದಕ್ಕಾಗಿ ಮೀಸಲಿಟ್ಟ ಆಂಕಣವೇ ನಿಮ್ಮ ಬರೆಹ ನಮ್ಮ ಓದು. ಪತ್ರಿಕೆಯೊಂದು ಸಶಕ್ತವಾಗಿ ಮುಂದುವರಿಯಬೇಕಾದರೆ ಓದುಗ ಮಿತ್ರರ ಆಶೀರ್ವಾದ ಬೇಕು. ಪತ್ರಗಳ ಒಂದೊಂದೂ ಪದಗಳು ನಮಗೆ ಶ್ರೀರಕ್ಷೆ. ಇದು ನಮ್ಮ-ನಿಮ್ಮೆಲ್ಲರ ನೂಪುರ ಭ್ರಮರಿ. ಪ್ರತಿಕ್ರಿಯೆಯ ಹೊಣೆ, ಹಕ್ಕು ಎಲ್ಲರಿಗಿದೆ. ಅಲ್ಲವೇ?

ಮಾರ್ಗಶಿರ-ಪುಷ್ಯ 2011

Thursday, December 15th, 2011

ಉಡುಪಿಯ ಹಿರಿಯ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ನೃತ್ಯ ವಿದುಷಿ ರಶ್ಮಿ ಕಲ್ಕೂರ, ಪುತ್ತೂರಿನ ಶ್ರೀಲಕ್ಷ್ಮೀ, ಮಡಿಕೇರಿಯ ಶ್ರೀ ಸೋಮೇಶ್, ಮಂಜೇಶ್ವರದ ಮುಖ್ಯೋಪಾಧ್ಯಾಯ ಸುಂದರ್, ಬೆಂಗಳೂರಿನ ನೃತ್ಯಪ್ರಾಧ್ಯಾಪಕರಾದ ಡಾ. ಗೀತಾ ಬಿ.ವಿ, ಆರ್.ಸುಮನಾ ಮತ್ತು ಉತ್ತರ ಪ್ರದೇಶದಿಂದ ಶ್ರೀನಾಥ್ ಆಚಾರ್ಯ ಈ ಸಾಲಿನ ಚಂದಾ ಸದಸ್ಯರಾಗಿದ್ದಾರೆ.
ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರ ಅಭಿಮಾನಿ ನಾನು. ಅವರನ್ನ ಕಳಕೊಂಡದ್ದಕ್ಕೆ ಸಂಕಟವಿದೆ ಇನ್ನೂ ಹಸಿಯಾಗಿ. ನಮ್ಮ ಶಿರಸಿ ತಾಲ್ಲೂಕಿಗೆ ಬಂದಾಗ ಅವರನ್ನು ನಾನು ನೋಡಿದ ಕೊನೆಯ ತಾಳಮದ್ದಳೆ ಕಾರ್ಯಕ್ರಮ‘ಪಾದುಕಾಪ್ರದಾನ’. ರಾಮನಾಗಿ ಅವರ [...]

ಅಶ್ವೀಜ-ಕಾರ್ತಿಕ ೨೦೧೧

Saturday, October 15th, 2011

ಬೆಂಗಳೂರಿನ ಹಿರಿಯ ಕೊಳಲುವಾದಕ ವೇಣುಗೋಪಾಲ್, ನೃತ್ಯ ಕಲಾವಿದೆಯರಾದ ಅನುರಾಧಾ ಆಚಾರ್, ಶ್ರೀಗೌರಿ, ಲಕ್ಷ್ಮೀ ಶ್ರೀನಿವಾಸನ್, ಮಡಿಕೇರಿಯ ವಿನಯಾ ಕೃಷ್ಣಮೂರ್ತಿ ಈ ಸಾಲಿನ ಚಂದಾ ಸದಸ್ಯರಾಗಿದ್ದಾರೆ.

ತಮ್ಮ ಸಾಹಿತ್ಯಸುಧೆಗೆ ಯಾವ ಅಲಂಕಾರವನ್ನೊಪಿಸಲಿ ಎಂಬುದೇ ನನ್ನ ಪಾಲಿಗೆ ತಿಳಿಯದಾಗಿದೆ. ಆದರೂ ತಮಗೆ ಉತ್ತರಿಸುವುದು ನನ್ನ ಧರ್ಮವೆಂದು ಸಾಹಿತ್ಯಾಭಿಮಾನಿಯಾಗಿ, ಕಲಾಭಿಮಾನಿಯಾಗಿ ಕಿಂಚಿತ್ ಶುಭಾಷಯಗಳನ್ನು ಅರ್ಪಿಸುತ್ತಾ ಬರೆಯುತ್ತಿರುವೆನು. ಶತಾವಧಾನಿ ಡಾ.ಆರ್.ಗಣೇಶ್‌ರವರ ಅಮೂಲ್ಯ ಕೃತಿಗಳು ತಮ್ಮ ‘ನೂಪುರ ಭ್ರಮರಿ’ಗೆ ಚಿನ್ನದ ಒಪ್ಪನ್ನಿತ್ತು ಹೊಳಪಿಸುವಂತೆ ಓದುಗರಿಗೂ, ಕೊಂಡುಕೊಳ್ಳುವವರಿಗೂ ಕೈಚಾಚಿ ಕರೆ ಕರೆದು ಅನವರತ ಸೌಗಂಧಿಕಾ ಪರಿಮಳದಿಂದ [...]

ಶ್ರಾವಣ-ಭಾದ್ರಪದ ೨೦೧೧

Monday, August 15th, 2011

ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ನೃತ್ಯ ಗುರುಗಳಾದ ಮಂಗಳೂರಿನ ವಿದುಷಿ ಸುಖದಾ ಭಾರ್ವೆ, ಬೆಂಗಳೂರಿನ ವಿದುಷಿ ಜ್ಯೋತಿ ಪಟ್ಟಾಭಿರಾಮ್, ವಿದುಷಿ ಪದ್ಮಿನಿ ಶ್ರೀಧರ್, ವಿದುಷಿ ವೀಣಾ ಎಸ್.ಮೊರಬ್, ಉಡುಪಿಯ ವಿದುಷಿ ಪ್ರವಿತಾ ಅಶೋಕ್, ನೃತ್ಯ ಸಂಶೋಧಕಿ ಶಾಲಿನಿ ಎ.ಆರ್, ಮಂಗಳೂರಿನ ಯೋಗಶಿಕ್ಷಕ ತಿರುಮಲೇಶ್ವರ ಪ್ರಸಾದ್ ಭಟ್ ಈ ಸಾಲಿನ ಚಂದಾ ಸದಸ್ಯರಾಗಿದ್ದಾರೆ.

ಋಣವೆಂಬುದನ್ನು ನನ್ನ ಪಾಲಿಗೆ- ಪ್ರೀತಿಯನ್ನು ತಮ್ಮ ಪಾಲಿಗೆ ಇರಿಸಿಕೊಂಡಿರುವಿರಿ. ‘ನೂಪುರ ಭ್ರಮರಿ’ಯ ಕೊನೆಯ ಪುಟದಲ್ಲಿ ಗೆಜ್ಜೆ ಮಾತ್ರವಾದರೂ ಆ ಗೆಜ್ಜೆ ಮನಸ್ಸಿನ ಮಮತೆಯನ್ನು [...]

ಜ್ಯೇಷ್ತ ಆಷಾಢ ೨೦೧೧

Wednesday, June 15th, 2011

ನೂಪುರ ಭ್ರಮರಿಯ ಸಂಪಾದಕಿ ಮನೋರಮಾ ಬಿ.ಎನ್ ಅವರಿಗೆ ‘ಕರ್ನಾಟಕದಲ್ಲಿ ನಟ್ಟುವಾಂಗ ಪರಂಪರೆ : ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ವಿಷಯಕ್ಕಾಗಿ ಕರ್ನಾಟಕ ಸರ್ಕಾರದ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಒಂದು ವರ್ಷದ ಸಂಶೋಧನಾ ಫೆಲೋಶಿಫ್ ದೊರೆತಿದೆಯೆಂದು ತಿಳಿಸಲು ಸಂತೋಷಿಸುತ್ತೇವೆ.
ಯಕ್ಷಗಾನ ವಿದ್ವಾಂಸ ಮೇಲುಕೋಟೆ ಉಮಾಕಾಂತ ಭಟ್, ಬೆಂಗಳೂರಿನ ನೃತ್ಯ ಗುರುಗಳಾದ ರೇವತಿ-ನರಸಿಂಹನ್, ಉದ್ಯಮಿ ಶ್ರೀ ಸುಧಾ ಕಿರಣ್, ಧಾರವಾಢದ ಯೋಗ ಉಪನ್ಯಾಸಕ ಅಜೇಯ ಎ.ಎನ್, ನೂಪುರ ಭ್ರಮರಿಯ ವಿವಿಧ ನೆಲೆಯ ಪ್ರಯತ್ನಗಳಿಗೆ ಶ್ಲಾಘಿಸಿ, ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ [...]

ಚೈತ್ರ ವೈಶಾಖ ೨೦೧೧

Sunday, April 17th, 2011

ಕಳೆದ ಬಾರಿಯ ವಿಶೇಷ ಸಂಚಿಕೆಯನ್ನು ಮನದುಂಬಿ ಶ್ಲಾಘಿಸಿದ ಹಿರಿಯರು, ವಿದ್ವಾಂಸರು ನೂರಾರು ಮಂದಿ. (ಹಾಗಾಗಿ ಅವರೆಲ್ಲರ ಹೆಸರನ್ನು ಹೇಳುತ್ತಾ ಹೊರಟರೆ ಸಾಲು ಪುಟಗಳೇ ಬೇಕಾಗಬಹುದು.) ಯಕ್ಷಗಾನದ ಸ್ತ್ರೀವೇಷ ಪಾತ್ರಧಾರಿಗಳ ದರ್ಶನ ಭ್ರಮರಿಗೆ ಹೆಚ್ಚಿನ ಪ್ರತಿಕ್ರಿಯೆಗಳು ಬಂದಿವೆ. ಅದರಲ್ಲೂ ಮುಖಪುಟ ಮತ್ತು ಪುಟ ವಿನ್ಯಾಸಕ್ಕೆ ಬಹಳ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಮುಖಪುಟಕ್ಕೆ ರೂಪದರ್ಶಿಯಾದವರು ಪದವಿ ವಿದ್ಯಾರ್ಥಿನಿ ಕುಮಾರಿ ತೇಜಸ್ವಿನಿ. ಪುತ್ತೂರಿನ ಮೂಕಾಂಬಿಕ ನೃತ್ಯಶಾಲೆಯ ಸಹೃದಯಿ ನೃತ್ಯ ಕಲಾವಿದ ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ.
ಈ ಸಾಲಿನಿಂದ ತಲಕಾವೇರಿ-ಭಾಗಮಂಡಲ ಮುಜ್ರಾಯಿ [...]

ಶಿಶಿರ ಶೃಂಗಾರ-5/1

Monday, February 14th, 2011

ಹೊಸದಿಗಂತದ ವ್ಯವಸ್ಥಾಪಕ ಸಂಪಾದಕರಾದ ರವಿಶಂಕರ್, ಬೆಂಗಳೂರಿನ ಮೋಹನ್ ಬಿ.ಹೆಗಡೆ, ಚಿತ್ರದುರ್ಗದ ವಿದ್ವಾನ್ ಸಿ.ಆರ್. ಪ್ರಕಾಶ್ ಮುಂತಾದವರು ಈ ಸಾಲಿನ ಸದಸ್ಯರಾಗಿದ್ದಾರೆ.

ಪತ್ರಿಕೆ ಗಂಭೀರವಾಗಿದೆ. ಗಾಂಭೀರ್ಯತೆ ಇಷ್ಟವಾಗಿದೆ. ಮಂಜೀರ ವಿಚಾರಪ್ರಚೋದಕವಾಗಿದೆ. ನಿಮ್ಮ ಪ್ರಯತ್ನಕ್ಕೆ ಹಾರ್ದಿಕ ಶುಭಾಷಯಗಳು.
-ಲಕ್ಷ್ಮೀಶ ತೋಳ್ಪಾಡಿ,
ಶಾಂತಿಗೋಡು, ದಕ್ಷಿಣಕನ್ನಡ.
ಸಂಚಿಕೆ ಆರರ ರಂಗಸ್ಥಳದಲ್ಲಿ ಧೀಂಗಿಣ ಹೊಡೆದ ‘ಹಳೆಯ ಕಲಾವಿದರುಗಳೆಂದರೆ ರೋಚಕ ಕಥೆಗಳ ತಾಣ’ ಎಂಬ ಬರೆಹ ಆಸಕ್ತಿಯಿಂದ ಓದಿಸಿಕೊಂಡು ಹಿಂದೊಮ್ಮ್ಮೆ ಹಿರಿಯರಿಂದ ಹೇಳಿಸಿ ಕೇಳಿಸಿಕೊಂಡ ಸಂದರ್ಭ ಸನ್ನಿವೇಶವನ್ನು ನೆನವರಿಕೆ ಮಾಡಿಸಿಕೊಟ್ಟಿತು. ಈ ಅಂಕಣವನ್ನು ವ್ಯವಸ್ಥಿತವಾಗಿ ಆಕರ್ಷಣೆಯ ಕೆಂದ್ರಬಿಂದುವಾಗಿ ತನ್ನದೇ ಆದ [...]

ಮಾರ್ಗಶಿರ-ಪುಷ್ಯ-೨೦೧೦

Wednesday, December 15th, 2010

ಧರ್ಮಭಾರತಿ ಸಂಪಾದಕ ಸಂಸ್ಕೃತ ವಿದ್ವಾನ್ ಜಗದೀಶ ಶರ್ಮ, ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿ, ಪುತ್ತೂರಿನ ನೃತ್ಯ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ, ಉಡುಪಿಯ ರಾಜಶೇಖರ ಹಂದೆ ಈ ಸಾಲಿನ ಸದಸ್ಯರಾಗಿದ್ದಾರೆ. ಶತಾವಧಾನಿ ಡಾ. ಆರ್. ಗಣೇಶ್ ಮತ್ತು ಮಂಗಳೂರಿನ ಕಲಾಸಹೃದಯಿ ಶ್ರೀನಿವಾಸ ದೇಶಪಾಂಡೆ, ಕಾಸರಗೋಡಿನ ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ವಿದ್ವಾನ್ ಜಗದೀಶ ಶರ್ಮ-ಇವರು ಮಂಜೀರ ಮತ್ತು ಲೇಖನಗಳ ಶೈಲಿಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.
ನೂಪುರದಲ್ಲಿ ಬರುವ ಲೇಖನಗಳು ಮನಮುಟ್ಟುವ ಸರಳ ಶೈಲಿಯಲ್ಲಿವೆ. ಲಲಿತ [...]

ಅಶ್ವೀಜ ಕಾರ್ತಿಕ ೨೦೧೦

Friday, October 15th, 2010

ಶಿರಸಿಯ ಜನಾರ್ಧನ ನರಸಿಂಹ ಭಟ್ಟ ಬೆಣ್ಣೆಗದ್ದೆ, ಬೆಂಗಳೂರಿನ ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿ, ಉಡುಪಿಯ ಡಾ. ಕೆ.ಆರ್ ಗುರುಪ್ರಸಾದ್, ಮೇದಿನಿ ಆಚಾರ್ಯ, ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್, ಶ್ರೀಲಕ್ಷ್ಮಿ ಅಚಾರ್ಯ ಈ ಸಾಲಿನ ಸದಸ್ಯರಾಗಿದ್ದಾರೆ.
ದರ್ಶನ ಭ್ರಮರಿಯ ಉಳ್ಳಾಲ ಮೋಹನ್ ಕುಮಾರ್ ಅವರ ಸಂದರ್ಶನ ಬಹು ಸೊಗಸಾಗಿ ಮೂಡಿಬಂದಿದೆ. ಪುಟವಿನ್ಯಾಸವೂ ಚೆಂದವಾಗಿದೆ. ಅವರ ಶಿಷ್ಯಂದಿರಿಗೆಲ್ಲಾ ಇದು ಬಹಳ ಖುಷಿಯನ್ನು ತಂದಿದೆ. ಭ್ರಮರಿಯ ಬಳಗದಿಂದ ನಿಜಕ್ಕೂ ಉತ್ತಮ ಪ್ರಯತ್ನ.
- ವಿದುಷಿ ಪಾವನಾ ರಾಜೇಂದ್ರ, ಉಡುಪಿ.
- [...]

ಜುಲೈ ಆಗಸ್ಟ್ ೨೦೧೦

Sunday, August 15th, 2010

ಮಂಜೀರ ತುಂಬಾ ಇಷ್ಟವಾಯಿತು. ಚೆನ್ನಾಗಿ ಬರೆದಿದ್ದೀರಿ.
- ಶ್ರೀನಿವಾಸ ದೇಶಪಾಂಡೆ, ಮಂಗಳೂರು.
-ಸಿಬಂತಿ ಪದ್ಮನಾಭ, ಪ್ರಾಧ್ಯಾಪಕರು, ತುಮಕೂರು.
-ಎನ್. ವಿ. ವೈದ್ಯ, ಬೆಂಗಳೂರು.

ಮಂಜೀರದಲ್ಲಿ ನೀವು ರಿಯಾಲಿಟಿ ಶೋಗಳ ಕೆಟ್ಟ ಪರಿಣಾಮದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ರುಕ್ಮಿಣೀ ದೇವಿ ಅರುಂಡೇಲ್ ಬಗ್ಗೆ ಅಷ್ಟೊಂದು ಮಾಹಿತಿ ಮತ್ತು ಅಪರೂಪದ ಫೋಟೋಗಳು ಯಾವುದೇ ಪತ್ರಿಕೆಗಳಲ್ಲೂ ನೋಡಿರಲಿಲ್ಲ. ನಂಗಂತೂ ರುಕ್ಮಿಣೀ ದೇವಿ ಅಂಕಣ ಬಹಳ ಇಷ್ಟ.
-ಸುರೇಶ್ ಬಿ.ವಿ.ಜಾಲಹಳ್ಳಿ, ರಾಯಚೂರು.
ಯಕ್ಷರಂಗದ ಮೇರು ಕಲಾವಿದರೆಂಬ ಪ್ರಸಿದ್ಧಿಗೆ ಭಾಜನರಾದ ಹರಿದಾಸ ಮಲ್ಪೆ ರಾಮದಾಸ ಸಾಮಗರಿಗರ್ಪಿಸಿದ [...]

ಜೇಷ್ಠ ಆಷಾಢ (ಮೇ-ಜೂನ್ ೨೦೧೦)

Sunday, June 13th, 2010

ಬೆಳ್ತಂಗಡಿಯ ಉರುವಾಲಿನ ನಾಗೇಶ್ ಆಗೇರ್, ಶಾರ್ವರಿ, ಉಜಿರೆಯ ರಾಘವೇಂದ್ರ ಬಿ. ರಾವ್, ಸಾಗರದ ಸತ್ಯನಾರಾಯಣ ಈ ಸಾಲಿನ ಸದಸ್ಯರಾಗಿದ್ದಾರೆ.
I enjoyed composing music to Shakunta Koojana- A Dance drama. Prof. Udyavara Madhavacharya is a great Sahithi and  Dr. Vasundhara Doraiswamy  is a great dancer.  The Article has come out beautifully.
-Vidushi P. Ramaa, Vocal Artist, Mysore.