ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಇಂದಿನ ದಿನಗಳಲ್ಲಿ ಪತ್ರಿಕೆಯೊಂದನ್ನು, ಅದೂ ಯಾವುದೇ ಜಾಹೀರಾತಿನ ನೆರವಿಲ್ಲದ, ಭಾರೀ ಆರ್ಥಿಕ ಹಿನ್ನಲೆಯೂ ಇಲ್ಲದ ಪತ್ರಿಕೆಯೊಂದನ್ನು ಮುನ್ನಡೆಸುವುದು ಎಷ್ಟು ಕಷ್ಟ ಅನ್ನುವುದು ನಿಮಗೆ ತಿಳಿದಿದೆ. ಅದರಲ್ಲೂ ಯಾವುದೇ ಲಾಭದ ದೃಷ್ಠಿಯಿಲ್ಲದೆ ಸಮಷ್ಠಿಯ ಒಳಿತಿಗಾಗಿ, ಕಲೆಗೆ ಪುಟ್ಟ ಕಾಣಿಕೆ ನೀಡುವಲ್ಲಿ ಪತ್ರಿಕೆಯೊಂದು ರೂಪುಗೊಳ್ಳುತ್ತಿದೆ ಎಂದಾದಲ್ಲಿ ಅದರ ಹಿಂದಿನ ಸವಾಲುಗಳು ನಿಮಗರಿವಿರಬಹುದು. ರೂಪುಗೊಳ್ಳುತ್ತಿರುವುದರಿಂದ ಆದರೂ ಪುಟ್ಟ ಪುಟ್ಟ ಅಡಿಯಿಡುತ್ತಿರುವ ನೂಪುರ ಭ್ರಮರಿಯು ತನ್ನ ಲೇಖನಗಳ ಹಂಚಿಕೆ, ಮುದ್ರಣ, ವಿತರಣೆಗೆ ಬಹಳಷ್ಟು ಸಲ ಸ್ವಾವಲಂಬಿ ನೀತಿಯನ್ನು ಅಂದರೆ ಸ್ವಂತ ಖರ್ಚು-ಉಳಿತಾಯವನ್ನು ಅವಲಂಬಿಸಿದೆ. ಆದರೂ ಕಲಾಸಕ್ತರು ತಾವೇ ಮುಂದೆ ಬಂದು ತಮ್ಮಿಂದಾದಷ್ಟೂ ಸಹಕಾರ, ಪ್ರೋತ್ಸಾಹವನ್ನೀಯುತ್ತೀದ್ದಾರೆ. ಏಕೆಂದರೆ ನೂಪುರ ಭ್ರಮರಿಯು ನಮ್ಮೆಲ್ಲರ ಪತ್ರಿಕೆ, ಕಣ್ಬಿಡುತ್ತಿರುವ ಪುಟ್ಟ ಕೂಸು. ಇದರ ಬೆಳವಣಿಗೆಯಲ್ಲಿ ಪತ್ರಿಕೆಯ ಬಳಗದವರಷ್ಟೇ ಅಲ್ಲ; ಓದುಗ, ಕಲಾವಿದರ ಪಾತ್ರವೂ ಇದೆಯಲ್ಲವೇ?

ವಿಮರ್ಶೆಯ ಪ್ರತ್ಯೇಕ ಅಂಕಣ-ನೃತ್ಯ/ನಾಟ್ಯ ಸಂಬಂಧೀ ಫೋಟೋ ಆಹ್ವಾನ

Thursday, March 17th, 2011

ವಿಮರ್ಶೆಯ ಕುರಿತಾಗಿ ಪ್ರತ್ಯೇಕ ಅಂಕಣವು ನೂಪುರ ಭ್ರಮರಿಯ ವೆಬ್‌ಸೈಟ್‌ನಲ್ಲಿ ಅನಾವರಣಗೊಂಡಿದ್ದು ೨೦೧೧ನೇ ಸಾಲಿನ ವಿಮರ್ಶೆಗಳನ್ನು( ಯಾವುದೇ ಪತ್ರಿಕೆ-ನಿಯತಕಾಲಿಕ-ವೆಬ್ ಪತ್ರಿಕೆ ಇತ್ಯಾದಿಗಳಲ್ಲಿ ಪ್ರಕಟಿತ ಅಥವಾ ಅಪ್ರಕಟಿತ ವಿಮರ್ಶೆ, ವರದಿ)ಲೇಖಕರು ಕಳಿಸಬಹುದಾಗಿದೆ. ಈ ಮೂಲಕ ವಿಮರ್ಶಾ ಕ್ಷೇತ್ರಕ್ಕೆ ಮತ್ತು ಅದರ ಪ್ರಶಸ್ತಿಗೆ ಹೆಚ್ಚಿನ ಉತ್ತೇಜನ ಮತ್ತು ಪಾರದರ್ಶಕತೆಯು ಒದಗಲಿದ್ದು ಮುಂದಿನ ಸಾಲಿನ ಪ್ರಶಸ್ತಿಯನ್ನು ಆಯ್ಕೆ ಮಾಡುವಲ್ಲಿ ಓದುಗರೂ ನಮ್ಮೊಂದಿಗೆ ಜೊತೆಯಾಗಲಿದ್ದಾರೆ. ಅದಕ್ಕೆ ಈಗಲಿಂದಲೇ ವೇದಿಕೆಯು ರೂಪುಗೊಳ್ಳುತ್ತಿದ್ದು; ಆಸಕ್ತರು ನ್ನು ಸಂಪರ್ಕಿಸಬಹುದು.
ಅಂತೆಯೇ ಆಸಕ್ತರು ಉತ್ತಮ ನೃತ್ಯ/ನಾಟ್ಯ ಸಂಬಂಧೀ ಫೋಟೋಗಳಿದ್ದರೆ ಮುಖಪುಟವಿನ್ಯಾಸಕ್ಕಾಗಿ [...]

ಬಹಳಷ್ಟು ಗಣ್ಯರು ನಮ್ಮೊಂದಿಗೆ..

Monday, February 14th, 2011

ಸಂಚಿಕೆಗೆ ಸಹಕರಿಸಿದವರು

ಧರ್ಮದರ್ಶಿ ಹರಿಕೃಷ್ಣ ಪುನರೂರು, (ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್) ‘ಶುಭವಾಗಲಿ’ ಮುಲ್ಕಿ, ಮಂಗಳೂರು.

· ಸುಧಾಕಿರಣ್ ಅಧಿಕಶ್ರೇಣಿ, ನಿರ್ದೇಶಕರು, ಕಿನಾರಾ ಸಂಸ್ಥೆ, ಬೆಂಗಳೂರು.
· ಕೆರೆಮನೆ ಶಿವರಾಮ ಹೆಗ್ಡೆ, ಯಕ್ಷಗಾನ ಕಲಾವಿದ-ಸಂಘಟಕ, ಗುಣವಂತೆ, ಹೊನ್ನಾವರ.
· ಕೆ. ಸೋಮನಾಥ್ ನಾಯಕ್, ಸಸ್ಯೋದ್ಯಾನ, ಗುರುವಾಯನಕೆರೆ, ದಕ್ಷಿಣ ಕನ್ನಡ.

ಜಯಲಕ್ಷ್ಮೀ ಆಳ್ವ, ಹಿರಿಯ ನೃತ್ಯಗುರುಗಳು, ಮಂಗಳೂರು.
ಡಾ. ಕರುಣಾ ವಿಜಯೇಂದ್ರ, ಕಲಾ-ಇತಿಹಾಸ ಸಂಶೋಧಕರು, ಬೆಂಗಳೂರು.

ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್, ಹಿರಿಯ ನೃತ್ಯಗುರುಗಳು, ಮಂಗಳೂರು.
ಡಾ. ಶೋಭಾ ಶಶಿಕುಮಾರ್, ಮಯೂರಿ ನೃತ್ಯಶಾಲಾ, ಬೆಂಗಳೂರು.

· ಕೊರ್ಗಿ ಶಂಕರನಾರಾಯಣ [...]

ನೃತ್ಯ ವಿಮರ್ಶಕರಿಗಾಗಿ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆ

Thursday, December 30th, 2010

‘ನೂಪುರ ಭ್ರಮರಿ’ಯು ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಾಲಿನಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆಯನ್ನು ಆಯೋಜಿಸಿದೆ. ಈಗಾಗಲೇ 2010ನೇ ಸಾಲಿನಲ್ಲಿ (ಜನವರಿ-ಡಿಸೆಂಬರ್) ರಾಜ್ಯದ ಕನ್ನಡ/ಇಂಗ್ಲೀಷ್ ಪತ್ರಿಕೆಗಳು/ನಿಯತಕಾಲಿಕೆಗಳಲ್ಲಿ ಪ್ರಕಟವಾದ ನೃತ್ಯ/ನಾಟ್ಯ ಸಂಬಂಧೀ ಪ್ರದರ್ಶನ/ರಂಗಪ್ರವೇಶ/ ಸಮ್ಮೇಳನ/ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳಿಸಬಹುದಾಗಿದೆ. ಓರ್ವ ಲೇಖಕ ತಲಾ 3 ವಿಮರ್ಶೆಗಳನ್ನು ಕಳುಹಿಸಲು ಅವಕಾಶವಿದ್ದು ; ಪ್ರತ್ಯೇಕ ಹಾಳೆಯಲ್ಲಿ ಸ್ವವಿವರ ಮತ್ತು ವಿಮರ್ಶೆಯ ವಿವರಗಳನ್ನು ಬರೆದು ಲಗತ್ತಿಸಬೇಕು.
[...]

Grant

Saturday, August 21st, 2010

Published with Financial Assistance from the
Central Institute of Indian Languages
(Ministry of Human Resource Development,
Department of Higher Education, Govt of India)
Manasagangothri, Mysore-570006
Sanctioned vide letter 53-4(5)/2009-10/KAN/LM/GRNT dated June 18, 2010
Under the scheme of ‘Grant in Aid’

ಗುಂಗ್ರು ಗುನುಗುನಿಸಲಿ

Monday, February 15th, 2010

ನೂಪುರದ ಗುಂಗ್ರು ಗುನುಗುನಿಸಲಿ
ಶುಭಾಶಯಗಳೊಂದಿಗೆ …
* ಶ್ರೀಮತಿ ಶ್ರೀ ಈಶ್ವರ ಭಟ್ ಎಳ್ಯಡ್ಕ, ಮಾಡಾವು, ಬೆಳ್ಳಾರೆ.
* ಬೋಳ ಕಮಲಾಕ್ಷ ಕಾಮತ್, ಮತ್ತು ಸುಗುಣಾ ಕಮಲಾಕ್ಷ ಕಾಮತ್,
ಸದ್ಗುರು ಛಾಯ,ಸುಧೀಂದ್ರ ನಗರದ ಹತ್ತಿರ, ದಹಿಸರ, ಮುಂಬೈ
* ಶ್ರೀಲಕ್ಷ್ಮಿ ಮತ್ತು ರಾಜ್ ಕುಮಾರ್,ಸಮಾಜ ಸೇವಕರ ಸಮಿತಿ, ಬೆಂಗಳೂರು.
*ಮಂಟಪ ಪ್ರಭಾಕರ ಉಪಾಧ್ಯಾಯ, ಏಕವ್ಯಕ್ತಿ ಯಕ್ಷಗಾನ ಸಾಮ್ರಾಟರು, ಬೆಂಗಳೂರು.
* ಸ್ವಾತಿ ರಾಮಕೃಷ್ಣ ಭಟ್, ಕುರುಂಬುಡೇಲು ಮನೆ, ಬೆಳ್ಳಾರೆ.
* ಡಾ. ಎಂ.ಜಿ. ಪಾಟ್ಕರ್ ,ಹಿರಿಯ ವೈದ್ಯರು, ‘ಶ್ರೀವಳ್ಳಿ’ ಶುಶ್ರೂಷಾ ಕೆಂದ್ರ, ಮಡಿಕೇರಿ.
*ಸೀತಾರಾಮ ಕುಮಾರ್ ಕಟೀಲು (  [...]

‘ಮುದ್ರಾರ್ಣವ’

Thursday, November 19th, 2009
‘ಮುದ್ರಾರ್ಣವ’

ಆತ್ಮೀಯರೇ,
ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. [...]

ಉಪನ್ಯಾಸ

Saturday, August 15th, 2009

ನೂಪುರ ಭ್ರಮರಿಯ ಬಳಗವು ಭರತನಾಟ್ಯ, ನೃತ್ಯಶೈಲಿಗಳಿಗೆ ಸಂಬಂಧಿಸಿದಂತೆ ಅರಿವಿನ ವಿಸ್ತರಣೆಗಾಗಿ
೧. ಭಾರತೀಯ ಶಾಸ್ತ್ರೀಯ ನೃತ್ಯಗಳು ಮತ್ತು ಜೀವನಾನುಸಂಧಾನ
೨. ಭರತನಾಟ್ಯದ ಆಂಗಿಕಾಭಿನಯ
೩. ನಾಯಿಕಾ-ನಾಯಕಾ ಭಾವ
೪. ಹಸ್ತಮುದ್ರಾ ವಿನ್ಯಾಸಗಳು ಮತ್ತು ಸಂಶೋಧನೆ
೫. ನೃತ್ಯ ಇತಿಹಾಸ ಮತ್ತು ಭರತನಾಟ್ಯದ ಪುನರುತ್ಥಾನ
೬. ನೃತ್ಯ ಗ್ರಂಥಗಳು ಮತ್ತು ಅವುಗಳೆಡೆಗೆ ಸಮಗ್ರ ದೃಷ್ಠಿ
ಮೇಲ್ಕಂಡ ವಿಚಾರಗಳನ್ನೂ ಒಳಗೊಂಡಂತೆ ವಿವಿಧ ವಿಷಯಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದು, ಉಪನ್ಯಾಸ ಕಾರ್ಯಕ್ರಮಗಳಿಗಾಗಿ ಆಸಕ್ತರು ಪತ್ರಿಕೆಯ ಸಂಪಾದಕರನ್ನು ಸಂಪರ್ಕಿಸಬಹುದು. ದೂ : ೯೯೬೪೧೪೦೯೨೭

ನಿಮಗಿದೋ ಆತ್ಮೀಯ ಆಹ್ವಾನ

Friday, November 7th, 2008

ಆತ್ಮೀಯರೇ,
ನೂಪುರ ಭ್ರಮರಿಯು ಕಲೆ- ಸಂಸ್ಕೃತಿಗಳ ಪರಿಚಯಕ್ಕೆ, ಪರಸ್ಪರ ಮಿಲನಕ್ಕೆ, ಅದರಲ್ಲಿನ ನಮ್ಮ ಕರ್ತವ್ಯಕ್ಕೆ ಪೂರಕ ವಾತಾವರಣವನ್ನು ಕಲಿಸಿಕೊಡುವುದರೊಂದಿಗೆ ನಮ್ಮನ್ನು ನಾವು ಅರಿಯುವ ಪ್ರಯತ್ನದಲ್ಲಿ ಹೆಜ್ಜೆಯಿಡುತ್ತಿರುವುದು ನಿಮಗೆಲ್ಲರಿಗೂ ತಿಳಿದ ಅಂಶ. ಈ ನಿಟ್ಟಿನಲ್ಲಿ ಮತ್ತಷ್ಟು ಸದಭಿರುಚಿಯ ಪ್ರಯತ್ನಗಳಿಗೆ ನಿಮ್ಮ ಸಹಕಾರ ಬೇಕು. ಈಗಾಗಲೇ ಮಿತಿ-ಭೇಧಗಳನ್ನು ದಾಟಿ ಮುನುಗ್ಗುತ್ತಿರುವ ಲಾಭದ [...]