ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ
Saturday, October 15th, 2011
ಅವರ ಭೌತಿಕ ಅಸ್ತಿತ್ವ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಅನಾರೋಗ್ಯ ಇಷ್ಟೊಂದು ಬೇಗ ಆಪೋಷನ ತೆಗೆದುಕೊಳ್ಳಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಕಳೆದ ವಾರವಷ್ಟೇ ಪೋನಾಯಿಸಿ ಕ್ಷೇಮ ಸಮಾಚಾರಕ್ಕಾಗಿ ವಿಚಾರಿಸಿದವಳಿಗೆ ಒಂದರ್ಥದಲ್ಲಿ ‘ಶಾಕ್’ ಹೊಡೆದಿತ್ತು. ಇಂದಿಗೂ ಹಿರಿಯ ‘ಕೊರ್ಗಿ’ ಅಸ್ತಂಗತವಾದ ಕೊರಗು ಹಾಗೆಯೇ ಇದೆ.
ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು- ದ್ವಿವೇದಿ, ಕಲಾವಿದ, ಉಭಯ ಭಾಷಾ ಸಿದ್ಧಾಂತಿ, ಯಕ್ಷಗಾನ ಅರ್ಥವಾದಿ, ಪ್ರಸಂಗಕರ್ತ, ಸಾಹಿತಿ, ವಿಮರ್ಶಕ, ಶಿಕ್ಷಕ, ವೇದ ವ್ಯಾಖ್ಯಾನಕಾರ, ಪಂಡಿತ, ವಿದ್ವಾಂಸ.. ಎಂಬುದಕ್ಕಷ್ಟೇ ಅವರು ಸೀಮಿತವಾಗಿರಲಿಲ್ಲ. ಈ ಮೇಲಿನ ಬ್ರಾಂಡ್, ಕ್ಲೀಷೆಗಳಿಂದಾಚೆಗೆ [...]








