: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ನುಡಿ ನಮನ ಅಂಜಲಿ

ಮಲ್ಪೆ ರಾಮದಾಸ ಸಾಮಗ
* ಜನನ : ೨೦-೬-೧೯೨೬

* ತಂದೆ : ಮಲ್ಪೆ ಲಕ್ಷ್ಮೀನಾರಾಯಣ ಸಾಮಗ

* ತಾಯಿ : ಲಕ್ಷ್ಮೀ ಅಮ್ಮ

* ಅಣ್ಣ : ಮಲ್ಪೆ ಶಂಕರನಾರಾಯಣ ಸಾಮಗ

* ವಿದ್ಯಾಭ್ಯಾಸ : ಮಲ್ಪೆ ಎಲಿಮೆಂಟರಿ ಶಾಲೆ, ಕೊಡವೂರು ಹಾಯರ್ ಪ್ರೈಮರಿ ಶಾಲೆ.  ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನ್ ಪಾಸ್. ನಂತರ ಉಡುಪಿ ಸಂಸ್ಕ್ರತ  ಕಾಲೇಜಿನಲ್ಲಿ ವಿದ್ಯಾರ್ಜನೆ.

* ವಿವಾಹ : ೧೯೪೭ರಲ್ಲಿ ನಾಗರತ್ನ ಇವರೊಂದಿಗೆ

* ಐವರು ಮಕ್ಕಳು : ವಾರಿಜಾ, ಪ್ರಸಿದ್ಧ ಯಕ್ಷಗಾನ ಕಲಾವಿದ ವಾಸುದೇವ ಸಾಮಗ, ಅಶೋಕ  (ದಿವಂಗತ), ಮಾಲಿನಿ, ಹಾಸ್ಯಲೇಖಕಿ ಟಿ.ಎಸ್. ಅಂಬುಜಾ

* ನಿಧನ : ೨೭-೪-೨೦೧೦ – ಮಣಿಪಾಲ ಆಸ್ಪತ್ರೆಯಲ್ಲಿ

* ದೇಹಸಂಸ್ಕಾರ : ೨೮-೪-೨೦೧೦, ಬೆಳಿಗ್ಗೆ ೯-೪೫, ಕೊಡವೂರು ಗ್ರಾಮದ ಮೂಡಬೆಟ್ಟು  ಸ್ವಗೃಹ.

ಇಪ್ಪತ್ತನೇ ಶತಮಾನದ ಯಕ್ಷಗಾನ ಲೋಕ ಇಬ್ಬರು ಹಿರಿಯ ಕಲಾವಿದರನ್ನು ಕಂಡಿದೆ. ಅವರು  ದೊಡ್ಡ ಸಾಮಗ ಅಂದರೆ ಮಲ್ಪೆ ಶಂಕರನಾರಾಯಣ ಸಾಮಗ ಮತ್ತೊಬ್ಬರು ಸಣ್ಣ ಸಾಮಗರೆಂದೇ ಖ್ಯಾತರಾದ ಅವರ  ತಮ್ಮ ಮಲ್ಪೆ ರಾಮದಾಸ ಸಾಮಗ. ದೊಡ್ಡ ಸಾಮಗರು ಸ್ವಾತಂತ್ರ್ಯ ಹೋರಾಟಗಾರರಾಗಿ, ಕಲಾವಿದನಾಗಿ  ಅಸಾಧಾರಣ ಕೊಡುಗೆಯನ್ನಿತ್ತು ಯಕ್ಷರಂಗವನ್ನು ಸುಮಾರು ೪ ದಶಕಗಳ ಕಾಲ ಆಳಿ ಹೋದವರು. ಸ್ವತಃ ಶೇಣೀ  ಗೋಪಾಲಕೃಷ್ಣ ಭಟ್ಟರೂ ಕೂಡಾ ಅವರನ್ನು ‘ಗುರು’ ಎಂದೇ ಸಂಬೋಧಿಸುತ್ತಿದ್ದರು. ಅವರ ತಮ್ಮ ಸಣ್ಣ  ಸಾಮಗರೋ ಶೇಣಿ ಅವರೊಂದಿಗಿನ ತಾಳಮದ್ದಲೆಗಳಿಗೆ ಒಳ್ಳೆಯ ಜೊತೆ.

ಸಣ್ಣ ಸಾಮಗರನ್ನು ಹರಿದಾಸ ಮಲ್ಪೆ ರಾಮದಾಸ ಸಾಮಗರೆಂದು ಸಂಬೋಧಿಸುವುದರಲ್ಲಿ ಹೆಚ್ಚು  ಅರ್ಥವಿದೆ. ಹಾಗೇ ನೋಡಿದರೆ, ಸಾಮವೇದದಲ್ಲಿನ ಅಸಾಧಾರಣವಾದ ಜ್ಞಾನವನ್ನು ಕಂಡ ಶೃಂಗೇರಿ  ಜಗದ್ಗುರುಗಳು ೧೯ನೇ ಶತಮಾನದಲ್ಲಿ ಇವರ ಕುಟುಂಬಕ್ಕೆ ಇತ್ತ ಬಿರುದು ‘ಸಾಮಗ ‘. ಅದಕ್ಕೆ ತಕ್ಕಂತೆಯೇ  ನಡೆದುಕೊಂಡವರು ಈರ್ವರು ಸಹೋದರರು.

ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಣ್ಣ ಸಾಮಗರು ಮೊನ್ನೆ  ಮೊನ್ನೆ ಏಪ್ರಿಲ್ ೨೭ ರ ಮಂಗಳವಾರ ಮರೆಯಾಗುವ ಹೊತ್ತಿಗೆ ಅವರಿಗೆ ೮೪ ವರ್ಷ ವಯಸ್ಸಾಗಿತ್ತು. ಎರಡು  ವರುಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ, ಒಂದು ಕಾಲನ್ನು ಕಳೆದುಕೊಂಡ ನಂತರ ಪತ್ನಿ ನಾಗರತ್ನ  ಅವರ ಆಸರೆಯಾಗಿದ್ದರು.

ಯಕ್ಷಗಾನ, ಹರಿಕಥೆ, ತಾಳಮದ್ದಳೆ, ಬಯಲಾಟಗಳಲ್ಲಿ ಸುಮಾರು ಐದಾರು ದಶಕಗಳ ಕಾಲ ಮಿಂಚಿ,  ಅಪ್ರತಿಮ ಮಾತುಗಾರನಾಗಿ, ಅಪೂರ್ವ ವಿದ್ವತ್ತಿನಿಂದ ಮೆರೆದವರು ಸಣ್ಣ ಸಾಮಗರು. ಅವರು ಚಲಿಸುವ  ಜ್ಞಾನಕೋಶ ಎಂದರೆ ತಪ್ಪಾಗಲಾರದು. ತೆಂಕು-ಬಡಗು ತಿಟ್ಟುಗಳ ಕುರಿತ ಅಪೂರ್ವವೆನಿಸುವ ಅರಿವು  ಅವರದ್ದು. ಮಾತ್ರವಲ್ಲ ತುಳು ಯಕ್ಷಗಾನ ಲೋಕವನ್ನು ಸುಮಾರು ೨ ದಶಕಗಳ ಕಾಲ ಆಳಿದವರು. ಅವರ ಕಾಂತು  ಪೂಂಜನ ಪಾತ್ರವಂತೂ ಮರೆಯಲಸಾಧ್ಯ. ಉಡುಪಿಯ ರಾಜಾಂಗಣದಲ್ಲಿ ೨೦೦೮ರಲ್ಲಿ ನಡೆದ ಮೂರನೆ ಅಖಿಲ ಭಾರತ  ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಚ್ಚರಿಯೆಂಬಂತೆ ಯಕ್ಷಗಾನದ ‘ಯಕ್ಷದಂಪತಿಗಳು’ ಎಂದೇ  ಖ್ಯಾತರಾದ ಸಾಮಗರು ಮತ್ತು ಕೋಳ್ಯೂರು ರಾಮಚಂದ್ರ ರಾಯರಿಗೆ ಜೊತೆಯಾಗಿಯೇ ಕೇಂದ್ರ ಸಾಹಿತ್ಯ  ಅಕಾಡೆಮಿಯ ಪುರಸ್ಕಾರ ಒಲಿದಿತ್ತು. ಯಕ್ಷಗಾನದ ಹಿರಿ-ಕಿರಿಯ ಅದೆಷ್ಟೋ ಕಲಾವಿದರಿಗೆ ಸಮಕಾಲೀನರಾಗಿ  ಅವರು ಆದರ್ಶಪ್ರಾಯರೂ ಹೌದು. ಸಂಸ್ಕೃತ, ಕನ್ನಡ, ಸಾಹಿತ್ಯ, ಸಂಗೀತ ಕ್ಷೇತ್ರದ ಆಳ ವಿದ್ವತ್  ಹೊಂದಿದ ಸಾಮಗರು, ತನ್ನ ಪಾತ್ರಗಳ, ವಿಶಿಷ್ಟ ಬಗೆಯ ವಾಗ್ಝರಿಯ ಮೂಲಕ ಯಕ್ಷಗಾನ ಲೋಕಕ್ಕೆ ಕೊಟ್ಟ  ಕೊಡುಗೆ ಅವಿಸ್ಮರಣೀಯ. ಅವರ ಅಗಲುವಿಕೆ ಕಲಾದಿಗಂತದ ಕಪ್ಪುಚುಕ್ಕೆ.

ಮರೆಯಾದ ಮಹಾಬಲ : ಕಳಚಿತು ಕೆರೆಮನೆಯ ಮತ್ತೊಂದು ಕೊಂಡಿ
ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ಅಂಥ ಮನೆತನ ಮತ್ತು ಕಲೆಯ  ಅನರ್ಘ್ಯ ಪರಂಪರೆಯ ಕೊಂಡಿಯಾಗಿದ್ದ ಮಹಾಬಲರ ಜ್ಯೋತಿ ಅಸ್ತಂಗತವಾಗಿದೆ.

ಇಡಗುಂಜಿಯ ದೇವರ ಸನ್ನಿಧಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾಗಲೇ ಶಂಭು  ಹೆಗಡೆ ಇಹಲೋಕದ ಯಾತ್ರೆ ಮುಗಿಸಿದ್ದರು. ಈ ದುಃಖ ಮಾಸುವ ಮುನ್ನವೇ ಅವರಣ್ಣ ಮಹಾಬಲರೂ ಹೊರಟು  ಹೋಗಿರುವುದು ದೊಡ್ಡ ಆಘಾತ. ಕೆಲವು ತಿಂಗಳಿಂದ ವೃದ್ಧಾಪ್ಯ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ  ಮಹಾಬಲ ಹೆಗಡೆ ವಿಟ್ಲ ಸಮೀಪದ ಅಳಿಕೆಯಲ್ಲಿರುವ ಪುತ್ರ, ಪ್ರಾಧ್ಯಾಪಕ ಡಾ. ರಾಮ ಹೆಗಡೆ ಅವರ  ಮನೆಯಲ್ಲಿ ಮಧ್ಯಾಹ್ನ ಊಟ ಮಾಡುತ್ತಿದ್ದಾಗಲೇ ಕೊನೆಯುಸಿರೆಳೆದರು.

ತಂದೆ ತಾಯಿ : ಶ್ರೀರಾಮ ಹೆಗಡೆ – ಮಾದೇವಿ

ಜನನ : ೧೯೨೭ರ ಜೂನ್ ೩೦ರಂದು.

ಮರಣ : ಅಕ್ಟೋಬರ್ ೩೦, ೨೦೦೯ ( ತಮ್ಮ ೮೨ನೇ ವರ್ಷ ವಯಸ್ಸಿನಲ್ಲಿ)

ಶಿಕ್ಷಣ : ಚಿತ್ರಾಪುರದ ಶ್ರೀಪಾದರಾಯರಿಂದ ಹಿಂದೂಸ್ಥಾನಿ ಸಂಗೀತದ ಪ್ರಾರಂಭಿಕ  ಅಭ್ಯಾಸ, ಅನಂತರ ಧಾರಾವಾಡದ ನಾರಾಯಣ ಮುಜುಂದಾರರಿಂದ ಹೆಚ್ಚಿನ ಸಂಗೀತ ಶಿಕ್ಷಣ, ನಾಲ್ಕನೇ ತರಗತಿ  ವರೆಗೆ ವಿದ್ಯಾಭ್ಯಾಸ. ಕನ್ನಡ ಪರೀಕ್ಷೆಗಳಲ್ಲಿ ಉತ್ತೀರ್ಣ.

ಮೇಳ ಅನುಭವ : ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಕಮಲಶಿಲೆ, ಬಚ್ಚಗಾರು.

ಪ್ರಶಸ್ತಿ-ಪುರಸ್ಕಾರ : ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೯೧),  ಚೆನ್ನೈಯ ಶ್ರುತಿ ಸಂಸ್ಥೆ, ಬೆಂಗಳೂರಿನ ಗಾನಕಲಾ ಪರಿಷತ್, ಕರ್ನಾಟಕ ಜನಪದ-ಯಕ್ಷಗಾನ ಅಕಾಡೆಮಿಯ  ಜೀವನ ಸಾಧನೆ ಪ್ರಶಸ್ತಿ (೨೦೦೫) ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಪ್ರಶಸ್ತಿ.

ಸಂಸಾರ : ನಾಲ್ವರು ಮಕ್ಕಳು. ಮೊದಲ ಪುತ್ರಿ ಅನಸೂಯ ಹಾಗೂ ಎರಡನೇ ಮಗ ವಿಷ್ಣು  ನಿಧನರಾಗಿದ್ದಾರೆ. ಪತ್ನಿ ಮಹಾದೇವಿ, ಪುತ್ರ ಪ್ರಾಧ್ಯಾಪಕ ಡಾ. ರಾಮ ಹೆಗಡೆ, ಪುತ್ರಿ ಲಲಿತ.  ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗಡೆ ಮಹಾಬಲರ ಅಳಿಯ.

ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿ. ಅಪ್ಪಟ ತುಂಟ. ಪುಂಡಾಟ. ಆಲೆಮನೆಯ  ಕೊಪ್ಪರಿಗೆಯಲ್ಲಿ ಉಚ್ಚೆ ಹುಯ್ಯುವ ಮಟ್ಟಿಗಿನ ದಾಂಧಲೆ. ಆದರೆ ಚಿಕ್ಕಪ್ಪ ಕೆರೆಮನೆ ಶಿವರಾಮ  ಹೆಗಡೆಯವರಿಗೆ ‘ಮಾಣಿ ಫಟಿಂಗನಾದರೆ ಕಷ್ಟ’ ಎಂದು ಕಂಡದ್ದೇ ; ಮಹಾಬಲರ ೧೪ನೇ ವರ್ಷದಲ್ಲಿ  ಬಂಕಿಕೊಂಡ್ಲ ಎಂಬ ಊರಲ್ಲಿ ‘ವೃಷಸೇನ’ ವೇಷ ಹಾಕಿಸಿದರು. ಹೀಗೆ, ರಂಗಕ್ಕೆ ಪ್ರವೇಶಿಸಿದ ಮಹಾಬಲರು  ನಂತರ ಶರಧಿ ಗಂಭೀರ. ಕೊನೆಗೆ, ೬೦ಕ್ಕೂ ಅಧಿಕ ವರ್ಷ ರಂಗದ ಜೊತೆಗಿನ ಅವಿನಾಭಾವ ಸಂಬಂಧದ ಅನಂತರ ವೇಷ  ಕಳಚಿ ರಂಗದಿಂದ ನಿವೃತ್ತರಾದುದು ೭೫ರ ಹರೆಯದಲ್ಲಿ.

ಮಹಾಬಲ ಹೆಗಡೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಅಂದಿನ ಪ್ರಸಿದ್ಧ  ಕಲಾವಿದರೆಲ್ಲರೊಂದಿಗೂ ಪಾತ್ರ ಹಾಕಿ ಕುಣಿದಿದ್ದರು. ೧೯೮೨ರಲ್ಲಿ ಭಾರತ ಸರ್ಕಾರದ ಸಾಂಸ್ಕೃತಿಕ  ತಂಡದಲ್ಲಿ ಯಕ್ಷಗಾನವನ್ನು ಪ್ರತಿನಿಧಿಸಿ ಯುರೋಪ್ ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದರು. ಹಾಗಂತ  ಮಹಾಬಲರನ್ನ ಯಕ್ಷಗಾನಕ್ಕೇ ಸೀಮಿತಗೊಳಿಸಿದರೆ ಅಪರಾಧವಾದೀತು. ಜೀವನವನ್ನು ಬೆಳಗಬಲ್ಲ ಕಲೆಗಳ  ಹೂರಣದಲ್ಲಿ ಮಿಂದೆದ್ದವರು ಮಹಾಬಲರು. ಸಂಗೀತ, ಸಾಹಿತ್ಯ, ನಾಟಕ, ಭಜನೆ, ಮದ್ದಳೆವಾದನ.., ಹೀಗೆ  ಎಲ್ಲದರಲ್ಲೂ ಅವರು ಮಹಾಬಲರೆ ! ಅವರು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ; ಸಂಜೆ  ವೇಳೆ, ಮನೆಯಲ್ಲಿ ಕುಳಿತು ಎಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆ ಇಟ್ಟುಕೊಂಡು ಹಾಡುವುದನ್ನು  ಬಿಟ್ಟಿರಲಿಲ್ಲ !

ಯಕ್ಷಗಾನದಲ್ಲಿ ಸಂಗೀತವನ್ನು ಪರಂಪರೆಗೆ ಭಂಗ ಬಾರದಂತೆ ಅಳವಡಿಸುವುದರ ಕುರಿತು  ಸಾಕಷ್ಟು ಚಿಂತನೆ ಮಾಡಿದವರವರು. ಶಾಸ್ತ್ರೀಯ ಸಂಗೀತವನ್ನು ಕಲಿತರೂ ಅಲ್ಲಿ ಅವರ ಹುಡುಕಾಟ  ಯಕ್ಷಗಾನಗಳಲ್ಲಿನ ಶಾಸ್ತ್ರೀಯತೆಯನ್ನು ಹುಡುಕುವುದಾಗಿತ್ತು. ಭಾಗವತಿಕೆಯಲ್ಲಿ ರಾಗದ ಖಚಿತತೆ  ಬಯಸುತ್ತಿದ್ದರು. ಶ್ರುತಿಬದ್ಧವಾಗಿ ಹಾಡಿಕೊಂಡೇ ಅಭಿನಯಿಸಿ ಅರ್ಥ ಹೇಳುವುದು ಅವರಿಗೆ  ಸಿದ್ಧಿಸಿತ್ತು. ಅದಕ್ಕಾಗಿಯೇ ಅವರಿಗೆ ಎಂತಹ ಭಾಗವತ ಹಾಡಿದರೂ ಸರಿ ಬರುತ್ತಿರಲಿಲ್ಲ. ಕಡು  ನಿಷ್ಠುರವಾಗಿಯೇ ನಡೆದುಕೊಳ್ಳುತ್ತಿದ್ದರು. ಮೊಟ್ಟ ಮೊದಲು ಬಡಗಿನ ಚೆಂಡೆಗೆ ಶೃತಿಯನ್ನು  ಅಳವಡಿಸಿದ್ದೂ ಮಹಾಬಲರೇ !

ಶಾಸ್ತ್ರೀಯ ಸಂಗೀತ ಒಂದು ಬದ್ಧತೆಯನ್ನು, ಶಿಸ್ತನ್ನು, ಕ್ರಮವನ್ನು, ಆಚಾರವನ್ನು  ಬಯಸುವ ಕಲೆ. ಆದರೆ ಯಕ್ಷಗಾನದ ಸ್ವರೂಪ ಸ್ವಚ್ಛಂದ. ಹಾಗಾಗಿ ತಮ್ಮ ಕಲಾ ಬದುಕಿನಲ್ಲಿ ಯಕ್ಷಗಾನದ  ಶಾಸ್ತ್ರೀಯ ಅಂಶವನ್ನೇ ಹುಡುಕಿ ತಪ್ಪು-ಸರಿಗಳನ್ನು ಎತ್ತಿ ತೋರಿಸುತ್ತಿದ್ದರು. ವಿಶ್ವಾಮಿತ್ರ  ಮೇನಕೆಯಲ್ಲಿ ಅಭಿನಯಿಸುವಾಗ ಗಂಗಾಧರ ಶಾಸ್ತ್ರಿಯವರ “ಎಲ್ಲೆಲ್ಲೂ ಸೊಬಗಿದೆ, ಸುತ್ತೆಲ್ಲ ಸೊಗಸಿದೆ”  ಎನ್ನುವ ಪದ್ಯವನ್ನು ಸುಮಾರು ೧೯೫೫ ರಲ್ಲಿ ಬಳಸಿಕೊಂಡರೂ ; ಅದು ಯಕ್ಷಗಾನಕ್ಕೆ ಹೊಂದುವುದಿಲ್ಲ  ಎಂದು ತಿಳಿದಾಗ ನಿರ್ದಾಕ್ಷಿಣ್ಯವಾಗಿ ಬಿಸಾಡಿದರು. ರಂಗ ಪಯಣದಲ್ಲಿ ಅನೇಕ ಪ್ರಯೋಗವನ್ನು ಮಾಡಿ  ಯಕ್ಷಗಾನಕ್ಕೆ ಪೂರಕವಾದದ್ದನ್ನಷ್ಟೇ ಉಳಿಸಿಕೊಂಡವರು. ಪ್ರಯೋಗವೆಂಬುದು ವಿಕಸನವೇ ಹೊರತು  ಪ್ರತ್ಯೇಕತೆಯಲ್ಲ, ಕಲಾವಿದನ ಅಭಿನಯ ಕೇವಲ ಬಣ್ಣ ಬದಲಿಸುವುದಷ್ಟೇ ಅಲ್ಲ ಎಂದು ನಂಬಿದ್ದರು.  ಹಾಗಾಗಿ ಮಹಾಬಲ ಹೆಗಡೆಯವರ ಪಾತ್ರಗಳು ಶಾಸ್ತ್ರದ ಆಧಾರದಿಂದ ಸೃಜನಶೀಲವಾಗಿ ಹೊಸ ನಾಯಕತ್ವದ  ಆಯಾಮಕ್ಕೆ ಕಾರಣವಾಯಿತು. ಕಲಾವಿದನ ರಂಗ  ಪಯಣದ ಅನುಭವಜನ್ಯ ಪ್ರಯೋಗಗಳೇ ಕಲೆಯ ಮೇಲಿನ ಹಿಡಿತವನ್ನು ಕಟ್ಟಿಕೊಡುತ್ತವೆ. ವರ್ತಮಾನದಿಂದ  ಪೌರಾಣಿಕ ಲೋಕಕ್ಕೆ ಕರೆದೊಯ್ಯುವ, ಯಕ್ಷಲೋಕದ ವರ್ತಮಾನ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಅವರ ವಾಕ್  ಸಾಮರ್ಥ್ಯ, ಕಲಾಭಿಜ್ಞತೆ, ಚಿಕಿತ್ಸಕ ದೃಷ್ಟಿ ಎಲ್ಲವೂ ಅನುಪಮ. ಜೊತೆಗೆ ಪಾತ್ರದ  ವ್ಯಕ್ತಿತ್ವವನ್ನು ಸಮಕಾಲೀನ ಸಂದರ್ಭಕ್ಕೆ ಬೆಸೆಯುತ್ತಾ ; ಪ್ರೇಕ್ಷಕವರ್ಗದಲ್ಲಿ ಜಾಗೃತಿ, ಚಿಂತನೆ  ತರುತ್ತಿದ್ದ ಅವರ ವಾಕ್ಪಟುತ್ವ, ಪಾತ್ರಕ್ಕೆ ತಕ್ಕುದಾದ ಕಂಠ, ಭಾವಾಭಿನಯ, ಸೂಕ್ತವಾದ ನಡೆ-ನುಡಿ  ಮತ್ತು ನೃತ್ಯಾಭಿನಯ, ಲಯಬದ್ಧ ಕುಣಿತ ಅವರದ್ದು. ವಿಶಿಷ್ಟವಾದ ಚೌತಾಳರ ಕುಣಿತ ಮಹಾಬಲರದ್ದೇ.  ನಾಟ್ಯಶಾಸ್ತ್ರದಲ್ಲಿ ಬರುವ ಸಾತ್ವತೀ ಮತ್ತು ಆರಭಟೀ ವೃತ್ತಿಗೆ ಮಾದರಿಯಾಗಬಲ್ಲ ಪಾತ್ರವನ್ನು  ಕಟ್ಟಿಕೊಟ್ಟವರು ಮಹಾಬಲರು. ಹಾಗಾದ್ದರಿಂದಲೋ ಏನೋ, ಇವರ ಗಂಭೀರ, ವೀರ ಭಾವಗಳಂತೆ ಕರುಣಾರಸ  ಅಷ್ಟೊಂದು ಪ್ರಸಿದ್ಧಿಯಲ್ಲ.

ಯಕ್ಷಗಾನದಲ್ಲಿ ವೇಷ ಮಾಡುವುದೆಂದರೆ, ಒಂದಷ್ಟು ಗಟ್ಟಿ ಮಾತಿನಿಂದ, ಚರ್ವಿತ ಚರ್ವಣ  ಸೇರಿಸಿ ಮಾತು ಹೆಣೆದು, ಶಬ್ದಾಲಂಕಾರ ಬಳಸಿ ಪ್ರೇಕ್ಷಕರನ್ನು ಮೋಡಿ ಮಾಡುವುದು ಎಂದೇ ಆಗಿದೆ. ಆದರೆ  ಉಪಮಾ – ರೂಪಕ ಅಲಂಕಾರಗಳಿಂದಾಗಿ ಮಹಾಬಲರದ್ದು ವಿಪುಲವಾದ ಸಾಹಿತ್ಯದ ಅಧ್ಯಯನದಿಂದ ಅರಿವು ಪಡೆದು  ಸಂಸ್ಕಾರಗೊಂಡ ಭಾಷೆ. ನೇರ ತೂಕ ತಪ್ಪದ ಗತ್ತಿನ ಮಾತು. ನಾಟಕ ಕ್ಷೇತ್ರದಲ್ಲಿಯೂ ತಮ್ಮ  ಸ್ತ್ರೀಪಾತ್ರಕ್ಕಾಗಿ, ಪ್ರಸಿದ್ಧಿ ಗಳಿಸಿದ್ದರು. ಹಾಗಾಗಿ ಮಾತಿನ ವ್ಯಂಗ್ಯ ವೈಶಿಷ್ಟ್ಯಕ್ಕೆ  ಒಂದರ್ಥದಲ್ಲಿ ಕಾರಣವೇ ನಾಟಕ ರಂಗದ ಅನುಭವ. ರಂಗಕ್ಕೆ ಒಗ್ಗುವ ಹಾಗೆ ಪ್ರಾದೇಶಿಕ ಪದಗಳ (ಗ್ರಾಮೀಣ/  ಗಾಂವಟಿ ಶಬ್ದ) ಬಳಕೆಯೂ ಮಹಾಬಲ ಹೆಗಡೆ ಶೈಲಿ ವೈಶಿಷ್ಟ್ಯ.

ರಂಗದ ಕುರಿತಾದ ಅಧ್ಯಯನದಿಂದ ವೈಚಾರಿಕ ಸಂಪನ್ನರೆನಿಸಿದವರು ಹೆಗಡೆ. ಇವೆಲ್ಲದಕ್ಕೆ  ಬೇಕಾದ ಪೂರ್ವಾಧ್ಯಯನದಲ್ಲಿ ಅವರಿಗಿದ್ದ ಆಸಕ್ತಿ, ಕಲಾಭಿಮಾನಿಗಳಿಗೆ ಹೇಗೆ ಭಾವ-ರಸ  ಉಣಬಡಿಸಬಹುದೆಂಬ ಕುರಿತಾದ ಅವರ ಚಿರಂತನ ಚಿಂತನೆ ; ಯಕ್ಷಗಾನ ಕಲಾವಿದರು ಹೇಗಿರಬೇಕು ಎಂಬುದಕ್ಕೆ  ಮಾದರಿ.

ಖ್ಯಾತ ವಿದ್ವಾಂಸ ದಿ| ಕು.ಶಿ. ಹರಿದಾಶಭಟ್ಟರು ತಮ್ಮ ಅಂಕಣ ‘ಲೋಕಾಭಿರಾಮ’ದಲ್ಲಿ  ಕಿರುತೆರೆಯಲ್ಲಿ ಪ್ರಸಾರವಾದ, ಆ ಕಾಲದಲ್ಲಿ ಇಡೀ ದೇಶವನ್ನೇ ಬೆರಗುಗೊಳಿಸಿದ ಮಹಾಭಾರತ ಸರಣಿಯ  ಬಗೆಗೆ ಬರೆಯುತ್ತಾ, ಭೀಷ್ಮನ ಪಾತ್ರಧಾರಿಯ ಮುಕೇಶ್ ಖನ್ನಾನ ಕುರಿತು ಹೊಗಳುವಾಗ ಮಹಾಬಲ ಹೆಗಡೆಯವರ  ಭೀಷ್ಮನನ್ನು ಹೊರತುಪಡಿಸಿ ಎಂದು ವಿವರಿಸಿದ್ದರು.

ಮಹಾಬಲರ ಭೀಷ್ಮ ಮಾತ್ರವಲ್ಲ ; ಅವರು ನಿರ್ವಹಿಸಿ ಹೆಸರು ಪಡೆದ ದಶರಥ, ರಾವಣ, ಕಂಸ,  ಕೌರವ, ಅರ್ಜುನ, ಸುಧನ್ವ, ಹಾಸ್ಯಪಾತ್ರ, ಸ್ತ್ರೀಪಾತ್ರಗಳು ..ಹೀಗೆ ಮಹಾಬಲರ ಪಾತ್ರ  ಸಾಕ್ಷಾತ್ಕಾರದಲ್ಲಿ ದೈವೀಸಿದ್ಧಿಯನ್ನು ನಾಟ್ಯಧರ್ಮಿಯಲ್ಲಿ ಮಿಳಿತ ಮಾಡುವುದನ್ನು ಪ್ರೇಕ್ಷಕ  ಅನುಭವಿಸಿದ್ದಾನೆ. ಒಂದರ್ಥದಲ್ಲಿ ಮಹಾಬಲರು ಯಕ್ಷಗಾನದ ಸವ್ಯಸಾಚಿ ಅಂದರೆ ಅತಿಶಯವಲ್ಲ!

“ವಿನಾ ದೈನ್ಯೇನ ಜೀವನಂ” ಬದುಕಿನುದ್ದಕ್ಕೂ ಅಳವಡಿಸಿಕೊಂಡವರು ಮಹಾಬಲ ಹೆಗಡೆ. ಮಹಾ  ಸ್ವಾಭಿಮಾನಿ. ಒಂದು ಬಗೆಯ ‘ಮೂಡಿ’ಯೂ ಕೂಡಾ ! ಹಣದ ವಿಷಯದಲ್ಲಿ ಒಂದು ಕಾಸು ಕಡಿಮೆ  ತೆಗೆದುಕೊಂಡವರಲ್ಲ; ಒಂದು ಕಾಸು ಹೆಚ್ಚು ಕೊಟ್ಟವರಲ್ಲ. ತಮಗೆ ಬರಬೇಕಾದ್ದನ್ನು ಬಿಟ್ಟವರಲ್ಲ;  ಕೊಡಬೇಕಾದ್ದನ್ನು ತಪ್ಪಿಸಿದವರಲ್ಲ. ಯಾರೆದುರೂ ಕೈ ಚಾಚಿದವರಲ್ಲ. ಮಾತು ತಪ್ಪಿದವರಲ್ಲ.  ಯಾವುದನ್ನೇ ಆದರೂ ಶಿಸ್ತುಬದ್ಧವಾಗಿ ಸ್ವೀಕರಿಸುವದು ಮತ್ತು ಅಳವಡಿಸಿಕೊಳ್ಳುವದು ಅವರ ಅಭ್ಯಾಸ.  ‘ನನಗೆ ವ್ಯವಸ್ಥಿತವಾಗಿ ಸುಳ್ಳು ಹೇಳಿ ಕಾರ್ಯ ಸಾಧಿಸಿಕೊಳ್ಳಲು ಬರುವುದಿಲ್ಲ. ಹುಡುಗಾಟಿಕೆಗೆ,  ತಮಾಷೆಗೆ ಸುಳ್ಳು ಹೇಳುವುದುಂಟು; ಉಳಿದಂತೆ ಉದ್ದೇಶಪೂರ್ವಕ ಸುಳ್ಳು ಹೇಳುವ ಅಭ್ಯಾಸ ಇಲ್ಲ’  ಎಂದಿದ್ದರು. ಕಪಟ, ಕೃತ್ರಿಮ ವರ್ತನೆಗಳಿಂದ ಬಹಳ ದೂರ.

ಹೊಗಳಿಕೆಗಳನ್ನು ಬೇಡವೆನ್ನಲಿಲ್ಲ. ಹಾಗಂತ ರಚನಾತ್ಮಕವಾಗಿದ್ದರೆ, ಟೀಕೆಗೂ  ಮೈಯೊಡ್ಡಲು ಹಿಂಜರಿದವರಲ್ಲ. ಆದರೆ ತಮಗೆ ಸಲ್ಲದ ಪ್ರಶಂಸೆ ಬಂದರೆ ಅಷ್ಟೇ ವಿನಯದಿಂದ  ಹಿಂದಿರುಗಿಸುತ್ತಿದ್ದರು. ಜೊತೆಗೆ ತಾನು ಹೇಳಿಕೊಟ್ಟದ್ದನ್ನು ಇನ್ನೊಬ್ಬರು ಪ್ರತಿಪಾದಿಸಿದಾಗ  ಕರುಬುವ ಮಂದಿಯಿರುವ ಕಾಲದಲ್ಲಿ ಮಹಾಬಲರು ‘ತಮ್ಮ ಅನುಭವಗಳು ನಿಜವಾದುವಲ್ಲಾ’ ಎಂದುಕೊಂಡು  ಸಂಭ್ರಮಿಸುತ್ತಿದ್ದರು. ಆದರೆ ತಮ್ಮ ಅರ್ಹತೆ ಗುರುತಿಸದಿದ್ದಾಗ ಅಸಮಾಧಾನ ಹೊಂದಿದ್ದೂ ಇದೆ.  ಇತ್ತೀಚೆಗೆ ಅಕ್ಟೋಬರ್ ೧೫ರಂದು ದೇರಾಜೆ ಸೀತಾರಾಮಯ್ಯ ಪ್ರಶಸ್ತಿಯನ್ನು ಕೊಡಲಾಗಿತ್ತು. ಇದು  ಅವರಿಗೆ ದೊರೆತ ಕೊನೆಯ ಪ್ರಶಸ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ  ಮನೆಯಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಶಂಭು ಹೆಗಡೆ ತೀರಿಕೊಂಡಿದ್ದು ಇಡಗುಂಜಿ ತೇರಿನ ದಿನ ; ರಥ ಸಪ್ತಮಿಯಂದು. ಮಹಾಬಲ  ಹೆಗಡೆ ಏಕಾದಶಿಯಂದು. ಶುಭ ಸಂದರ್ಭಗಳೇ.. ಆದರೆ ಅಶುಭ ವಾರ್ತೆ. ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿ  ಯಕ್ಷಗಾನದಲ್ಲಿನ ಅಮೃತ ಗಳಿಗೆಗಳಲ್ಲೊಂದು. ಈಗ ಕೆರೆಮನೆಯ ಜೋಡಿ ಕಲಾದಿಗಂತದಿಂದ ಮರೆಯಾಗಿದೆ.  ಯಕ್ಷಗಾನದ ವೈಭವಪೂರ್ಣ ಅಧ್ಯಾಯಕ್ಕೊಂದು ತೆರೆ ಬಿದ್ದಿದೆ. ಮರೆಯಾದ ಚೇತನಕ್ಕಿದೋ ಅಕ್ಷರಾಂಜಲಿ..

ಮುಕ್ತಾಯಕ್ಕೆ ಮುನ್ನ ನಿರ್ಗಮಿಸಿದ ನಾಟ್ಯತಪಸ್ವಿನಿ : ಶ್ರೀಮತಿ ಸುಂದರೀ ಸಂತಾನಂ
ಶ್ರೀಮತಿ ಸುಂದರೀ ಸಂತಾನಂ

ಕಲೆ ಕೆಲವರಿಗೆ ಖಯಾಲಿ. ಕೆಲವರಿಗೆ ಗೀಳು. ಕೆಲವರಿಗೆ ಪ್ರತಿಷ್ಠೆ. ಕೆಲವರಿಗೆ ಐಡೆಂಟಿಟಿ. ಕೆಲವರಿಗೆ ಕಾಲಹರಣ. ಕೆಲವರಿಗೆ ಪ್ರದರ್ಶನ. ಕೆಲವರಿಗೆ ತಪಸ್ಸು. ಒಬ್ಬ ವ್ಯಕ್ತಿಯನ್ನು ಆವರಿಸಿಕೊಳ್ಳುವುದಕ್ಕೆ ಕಲೆಗೆ ಎಲ್ಲಾ ಚಹರೆ-ಚಪಲತೆಗಳೂ ಇರುತ್ತವೆ. ಆದರೆ ತನ್ನ ಆಯ್ಕೆ-ಆಶಯ-ಕಲಾಸ್ವರೂಪದ ಅನನ್ಯತೆಯ ಬಗ್ಗೆ ವಿಸ್ಮಯಗಳನ್ನು ಉಳಿಸಿಕೊಂಡು, ಸಾಧ್ಯತೆಯ ಆಳಕ್ಕೆ ಪಾತಾಳಗರಡಿ ಹಾಕಿ ಶೋಧಿಸುತ್ತಲೇ ಸಾಯುವ ಶ್ರದ್ಧಾವಂತರು ತಮ್ಮ ಜೀವಮಾನವಿಡೀ ಕಲಾಸೂಕ್ಷ್ಮದ ಸಿದ್ಧಿಗಾಗಿ ತಪಸ್ಸು ಮಾಡುತ್ತಲೇ ಇರುತ್ತಾರೆ. ಅಂತಹ ತಪೋಜೀವಿಕೆ ಶ್ರೀಮತೀ ಸುಂದರೀ ಸಂತಾನಂ ಅವರದು.

In karanaviniyoga malika- sundari santhanam

ಇತ್ತೀಚೆಗಷ್ಟೇ (೨೪ ಆಗಸ್ಟ್ ೨೦೦೯) ತಮ್ಮ ಜೀವನ-ನೃತ್ಯರಂಗದಲ್ಲಿ ಬೆಳ್ಳಿಗೆಜ್ಜೆ ಬಿಚ್ಚಿಟ್ಟು ಇಹಲೋಕಕ್ಕೆ ವಿದಾಯ ಹೇಳಿ ಕೃತಜ್ಞತೆಯ ಪುಷ್ಪಾಂಜಲಿ ಸಲ್ಲಿಸಿ ನಿರ್ಗಮಿಸಿದ ಭರತನೃತ್ಯ ಕಲಾವಿದೆ ಸುಂದರೀಸಂತಾನಂ ಅವರಿಗೆ ನೃತ್ಯಕಲೆ ವಂಶವಾಹಿಯಾಗಿ ಬಂದ ಬಳುವಳಿ ಅಲ್ಲ. ಚೆನ್ನೈವಾಸಿಗಳಾದ ಅರುಣಾಚಲಂ-ಚೆಲ್ಲಮ್ಮಾಳ್ ಮಗಳಾದ ಸುಂದರಿಗೆ ಹುಟ್ಟಿನಿಂದ ರಕ್ತದೊಟ್ಟಿಗೆ ಹರಿದದ್ದು ವೀಣಾಧುನಿ. ಅದಕ್ಕೆ ತಾಯಿ ಸಂಗೀತಜ್ಞೆಯಾದದ್ದೇ  ಕಾರಣ. ಸಂಗೀತವೂ ನೃತ್ಯವೂ ಒಂದೇ ಕುಟುಂಬದ ಕುಡಿಯಾದ್ದರಿಂದಲೋ ಏನೋ ತನ್ನ ಅಕ್ಕ ಉಮಾಶ್ರೀರಾಮ್ ಹಾಕುತ್ತಿದ್ದ ನೃತ್ಯದ ಹೆಜ್ಜೆ, ಸುಂದರಿಯ ಕಾಲಲ್ಲಿ ಗೆಜ್ಜೆದನಿ ಮೂಡಿಸಿತು. ಪೂರ್ವಪುಣ್ಯ ಎಂಬಂತೆ ಪದ್ಮಾಸುಬ್ರಹ್ಮಣ್ಯಂ ಅವರ ಗುರುತನವೂ ನಾಟ್ಯದ ನೋಂಪಿಗೆ ಗುರುತಾಗಿ ದೊರಕಿತು. ಹನ್ನೆರಡರ ಹರೆಯದಲ್ಲಿ ವೀಣೆಯ ಮೆಟ್ಟಿಲಲ್ಲಿ ಕೈಯೂ ನೃತ್ಯದ ಮೆಟ್ಟಿಲಲ್ಲಿ ಕಾಲೂ ಕುಣಿಯತೊಡಗಿತು. ಕ್ರಮೇಣ ವೀಣೆಯಿಂದ ಜಾರಿದ ಬೆರಳು ಪೂರ್ತಿಯಾಗಿ ನೃತ್ಯದ ಹಸ್ತಕಲಾಪಕ್ಕೆ ಮುಡಿಪಾಯಿತು. ಸಂಗೀತಕ್ಷೇತ್ರಕ್ಕೆ ಇದೊಂದು ಕೊರೆಯಾದರೂ ನಾಟ್ಯಕ್ಷೇತ್ರದ ಶಾಸ್ತ್ರೀಯ ಶೋಧನೆಯ ನವಾಂಕುರಕ್ಕೆ ನಾಂದಿಯಾಯಿತು.

ಅಭಿನವ ಭರತ ಎಂಬ ಸಾರ್ಥಕ ಪ್ರಶಸ್ತಿಗೆ ಭಾಜನರಾದ ಡಾ.ಪದ್ಮಾಸುಬ್ರಹ್ಮಣ್ಯಂ ಮೊದಲಿಂದಲೂ ಭರತನ ನಾಟ್ಯಶಾಸ್ತ್ರದ ತಥ್ಯಾನ್ವೇಷಣೆಯಲ್ಲಿ  ಏಕಲಕ್ಷ್ಯದಿಂದ ನಿಶ್ಚಲನಿಷ್ಠೆಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದವರು. ರೂಢಮೂಲ ಪದ್ಧತಿಗೂ ಭರತನಿಗೂ ಸಮನ್ವಯ ಕಾಣುವುದಿಲ್ಲವೆಂದು ಮನವರಿಕೆಯಾಗುತ್ತಿದ್ದಂತೆ ಸಮಗ್ರನಾಟ್ಯಶಾಸ್ತ್ರದ ಗಂಭೀರ ಅಧ್ಯಯನಕ್ಕೆ ತೊಡಗಿ, ನೃತ್ಯಪ್ರಯೋಗದಲ್ಲಿ ಭರತಮಾರ್ಗವನ್ನು ರೂಪಿಸುವ ಛಲ ತೊಟ್ಟಿದ್ದರು. ಅವರ ಪ್ರಯೋಗಶಿಲ್ಪದ ಮೊನಚು ಚಾಣದ ಒರಟು ಸುತ್ತಿಗೆಯ ನಿರ್ಘಾತಕ್ಕೆ ಮೈಯಾದವರು ಸುಂದರೀಸಂತಾನಂ. ನಾಟ್ಯಶಾಸ್ತ್ರದ ಪದ್ಮಾಭಾಷ್ಯಕ್ಕೆ ಅಕ್ಷರಶಃ ಹಗಲಿರುಳು ಅನ್ನಾಹಾರನಿದ್ರೆ ತೊರೆದು ತಮ್ಮನ್ನು ತೇದುಕೊಂಡರು. ಅದರ ಪರಿಣಾಮವೇ ಭರತನ ನಾಟ್ಯಶಾಸ್ತ್ರದ ಕರಣವಿಭಾಗಕ್ಕೊಂದು ವ್ಯಾಕರಣ ನಿರ್ಮಾಣವಾಗಿ ಪದ್ಮಾ ಅವರಿಂದ ಮಹಾಸಂಪ್ರಬಂಧ (ಪಿ‌ಎಚ್ ಡಿ) ಹೊರಬಂತು.

ಪದ್ಮಾ ಅವರಂತೆ ಶೈಕ್ಷಣಿಕವಾಗಿ ಪ್ರಬುದ್ಧವಾದ ಹಿನ್ನೆಲೆ ಸುಂದರಿಯವರಿಗೆ ಇರಲಿಲ್ಲವಾದರೂ, ಸೂಕ್ಷ್ಮಗ್ರಹಿಕೆ ಜನ್ಮಜಾತವಾಗಿ ಬಂದದ್ದರಿಂದ ಗುರುವಿನ ನಾಟ್ಯಕ್ರಮಣದ ಪ್ರತಿಹಂತವೂ ಸುಂದರಿಗೆ ಶ್ವಾಸಗತವೇ ಆಗಿಬಿಡುತ್ತಿತ್ತು. ಇದರಿಂದಲೇ ಈ ಗುರುಶಿಷ್ಯರ ಜೋಡಿ ಜರ್ಮನಿಯ ಅಂತಾರಾಷ್ಟ್ರಿಯ ನೃತ್ಯೋತ್ಸವದಲ್ಲಿ(೧೯೭೦) ಸಿಂಗಾಪುರದ ಕಲೋತ್ಸವದಲ್ಲಿ (೧೯೮೨) ಗ್ರೀಸ್ ನೃತ್ಯೋತ್ಸವದಲ್ಲಿ (೧೯೮೩) ಭಾರತವನ್ನು ಪ್ರತಿನಿಧೀಕರಿಸಿತು. ಪದ್ಮಾ ಅವರ ಹಲಕೆಲವು ರಂಗರಚನೆಯ ವಿನ್ಯಾಸ ಕೊರಿಯೋಗ್ರಫಿ ಪೂರ್ಣಶಃ ಸುಂದರಿಯ ಸ್ವತಂತ್ರ ನಿರ್ವಹಣೆಗೆ ಒಳಪಡುತ್ತಿತ್ತು. ತಾವೇ ಪೂರ್ತಿಯಾಗಿ ರಂಗರೂಪ ಸಿದ್ಧಪಡಿಸಿ ನಿರ್ದೇಶಿಸಿ ಪ್ರಸ್ತುತಪಡಿಸಿದ ರಾಜರಾಜಚೋಳ ಎಂಬ ನೃತ್ಯನಾಟಕ ಸುಂದರಿಯವರ ನಾಟ್ಯಶಾಸ್ತ್ರಾಭಿಜ್ಞತೆಗೆ ಒಂದು ನಿತಾಂತ ನಿದರ್ಶನ. ಈಚಿನ ಇಪ್ಪತ್ತೈದು ವರ್ಷಗಳಿಂದ ಬೆಂಗಳೂರಲ್ಲೇ ನೆಲೆಸಿ ಕನ್ನಡಿಗರೇ ಆಗಿಹೋಗಿದ್ದ ಸುಂದರಿಯವರಿಗೆ ನೃತ್ಯ ಒಂದು ತಪಸ್ಸು. ಹಣ ಹೆಸರು ಗಳಿಕೆಗಳತ್ತ ಅಗಳಿ ಹಾಕಿ ಮನೋಬುದ್ಧಿದೇಹ ಸಾಮರ್ಥ್ಯವನ್ನು ಗುರೂಪದಿಷ್ಟವಾದ ಮಾರ್ಗದಲ್ಲಿ ನಾಟ್ಯಶಾಸ್ತ್ರದ ಒಳಸುಳಿಗಳ ಸೌಂದರ್ಯದ ಶಿಲ್ಪನಿರ್ಮಾಣದ ಸಂಶೋಧನೆಯಲ್ಲಿ – ತಮ್ಮ ಆರೋಗ್ಯವನ್ನು ನಿರ್ದಯವಾಗಿ ಒತ್ತೆಯಿಟ್ಟು – ತೊಡಗಿಸಿಕೊಂಡಿದ್ದರು.

sundari santhanm

ಕಾಲಪುರುಷ ಕ್ಯಾನ್ಸರಿನ ಮುಂಗಡ ನೋಟೀಸು ಜಾರಿ ಮಾಡಿದ್ದು ತಿಳಿದೂ ದೇಹ ದಿನೇದಿನೇ ಕರಗುತ್ತಿದ್ದರೂ ಭಾಗ್ಯವನ್ನು ಬೈಯದೇ, ದೈವವನ್ನು ದೂಷಿಸದೇ ಪಾಪವೆಂದು ಪರಿತಪಿಸದೇ ಕ್ಯಾನ್ಸರಿನ ಮೃತ್ಯುಮಾಲಿಕೆಯನ್ನು ಧರಿಸಿಯೇ ನಂದದ ಕಲಾನಂದದ ಮಂದಹಾಸದಲ್ಲಿ, ಐತಿಹಾಸಿಕ ಎನಿಸುವ ಘಟನೆಗಾಗಿ ಸುಂದರಿ ಗೆಜ್ಜೆ ಕಟ್ಟಿದರು. ಅದು ಕರಣವಿನಿಯೋಗಮಾಲಿಕಾ ಎಂಬ ಡಾಕ್ಯುಮೆಂಟರಿಗಾಗಿ. ಗುರು ಪದ್ಮಾ ಕಂಡರಸಿದ ಕರಣಗಳ ವಿನಿಯೋಗದ ನೃತ್ಯಸಾಧ್ಯತೆಗಳ ಕುರಿತಾದ ಸ್ವಂತ ಶೋಧ. ಸುಂದರಿಯವರನ್ನು ಕಲಾಲೋಕದಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ ಧ್ರುವಸಿದ್ಧಿ- ಕರಣವಿನಿಯೋಗಮಾಲಿಕಾ. ದೇಶವಿದೇಶಗಳಲ್ಲೂ ಇದರ ಡಿವಿಡಿ ಇವರನ್ನು ಜೀವಂತಗೊಳಿಸಿದೆ.

ಕಲೆಯಲ್ಲಿ ನಿತ್ಯಕುತೂಹಲಿಯಾಗಿದ್ದ ಬಾಲಸಹಜ ಉತ್ಸಾಹ ಹೊಂದಿದ್ದ ಸುಂದರಿ ಯಕ್ಷಗಾನದ ಹೆಜ್ಜೆಗಾರಿಕೆಗೆ ಖುಷಿಪಟ್ಟು, ಪಟ್ಟುಹಿಡಿದು ಕಲಿತು ಕೇದಗೆಮುಂದಲೆ ಕಸೆ ಕಟ್ಟಿ ಮೀಸೆ ತೀಡಿ ನಲನಾಗಿ ನಲಿದದ್ದೂ ಒಂದು ಆದರ್ಶವೇ. ಈ ನೃತ್ಯಗಾತಿಯ ಒಳಗೆ ಒಬ್ಬ ಲೇಖಕಿಯೂ ಹಲಗೆ-ಬಳಪ ಹಿಡಿದು ಕಾಯುತ್ತಿದ್ದವಳು ; ಪದ್ಮಾ ಅವರ ಜೀವನಕಥೆ ಬರೆವ ಮೂಲಕ ಹೊರತೋರಿದ್ದಾಳೆ. ಪದ ಕುಸಿಯೆ ನೆಲವಿಹುದೆಂದು ಪ್ರಬಲವಾಗಿ ನಂಬಿದ್ದ ಸುಂದರಿ ಅಸ್ತಮಾನದ ಮಬ್ಬುಗತ್ತಲಲ್ಲಿ ಬಣ್ಣಹಚ್ಚಿ ಗೆಜ್ಜೆ ಘಲ್ಲಿಸಿದ್ದು, ಅವರ ಜೀವಮಾನದ ಮಹತ್ವಾಕಾಂಕ್ಷೆಯ ಅಸೀಮ ಸಂಶೋಧನೆಯ ದೇಸೀಕರಣಕ್ಕಾಗಿ. ಕರ್ನಾಟಕದ ದೇವಾಲಯದ ಗೋಡೆಗಳ ಜೀರ್ಣಸಾಲಭಂಜಿಕೆಗಳನ್ನು ಕಂಡು ಅಧ್ಯಯನ ಮಾಡಿ ೧೦೮ ದೇಸೀ ಕರಣಗಳನ್ನು ನಿರೂಪಿಸಿದ್ದರು. ಆ ಕುರಿತು ಮಹಾಪ್ರಬಂಧದ ರಚನೆಗೂ ತೊಡಗಿದ್ದರು. ಕ್ಯಾನ್ಸರಿನ ವಿಕಿರಣ ಚಿಕಿತ್ಸೆಯಿಂದ ಎಲುಬು ರಕ್ತ ಮಾಂಸ ನರ ನಾಡಿಗಳೆಲ್ಲ ಯುದ್ಧರಂಗದ ಪ್ರೇತಭೂಮಿಯಾಗಿದ್ದರೂ ಲ್ಯಾಪ್‌ಟಾಪ್ ಎದೆಯ ಮೇಲಿಟ್ಟುಕೊಂಡು ಅದುರುವ ತೋರ್ಬೆರಳಿನಲ್ಲಿ ಅಕ್ಷರ ಅಕ್ಷರವನ್ನು ಜೋಡಿಸಿ ನಿಟ್ಟುಸಿರಲ್ಲಿ ನಗೆ ಹಾಯಿಸುತ್ತಿದ್ದರು. ದೇಸೀಕರಣಕ್ಕೆ ಸಂಬಂಧಿಸಿದಂತೆ ಶಾಸ್ತ್ರಭಾಗ ಪೂರ್ಣಗೊಳಿಸಿದ್ದರೂ ಪ್ರಯೋಗದ ಭಾಗ ಮುಕ್ಕಾಲು ಬಾಕಿಯಾದ ಕುರಿತು ಕಳವಳವಿತ್ತು. ದೇಸೀಕರಣ ಪೂರ್ಣಮಾಡದೆ ತಾನು ಸಾಯುವುದಿಲ್ಲ ಅಂತ ಭೇಟಿ ಅದಾಗಲೆಲ್ಲಾ ಸಾವನ್ನು ಛೇಡಿಸುತ್ತಿದ್ದರು. ಆದರೆ ಮರಣ ಮೃದಂಗದ ನಡೆಯ ಮುಕ್ತಾಯ ನಾಟ್ಯಮೃದಂಗದಷ್ಟು ಮೃದುವೂ ಅಲ್ಲ ಮೋಹಕವೂ ಅಲ್ಲ.

ಮುಂದಿನ ಕಲಾಕ್ಷೇತ್ರದ ಆಸಕ್ತ ವಿದ್ಯಾರ್ಥಿಗಳಿಗೆ ಜನ್ಮಕ್ಕಾಗುವಷ್ಟು ಸಂಶೋಧನ ಸಾಮಗ್ರಿಯನ್ನು ಕೈಮೊಗೆದು ನೀಡಿ ಕಣ್ಣುಮುಚ್ಚಿದ ಸುಂದರೀಸಂತಾನಂ ಅವರಂಥ ನಾಟ್ಯೋಪಾಸಕರು ನಾಟ್ಯತಪಸ್ವಿಗಳು ವಿರಳಾತಿವಿರಳ. ನೆತ್ತರು ಬಸಿದು ಅವರು ಅನ್ವೇಷಿಸುತ್ತಿದ್ದ ನಾಟ್ಯಶಾಸ್ತ್ರೀಯ ಶೋಧನೆಯ ಹೆದ್ದೇರಿನ ಮಿಳಿ ಹಿಡಿದು ಸಾಧ್ಯವಾದಷ್ಟೂ ದೂರ ಸಂಭ್ರಮದಿಂದ ಕ್ರಮಿಸುವಂತೆ ಶಿಷ್ಟಲೋಕ ಕೈಜೋಡಿಸಿದರೆ ಗತಿಸಿದ ಕಲಾವಿದೆಯ ಕನಸಿಗೊಂದು ಕಳೆ ಬರುತ್ತದೆ. ಕಲೆ ಇರುತ್ತದೆ.

(ಲೇಖಕರು ಖ್ಯಾತ ಚಿಂತಕರು, ವಿಮರ್ಶಕರು)

ಚೆಂಡೆ ಮದ್ದಳೆಗಳ ಹಿರಿಯಾಳು : ಚಿಪ್ಪಾರು ಕೃಷ್ಣಯ್ಯ ಬಲ್ಲಾಳ
ಇತ್ತೀಚೆಗೆ ತಾನೇ ಯಕ್ಷರಂಗದ ದಿಗ್ಗಜ ಶಂಭು ಹೆಗಡೆ ರಂಗದಿಂದ ಗೆಜ್ಜೆ ಕಟ್ಟಿಕೊಂಡೇ ವಿದಾಯ ಹೇಳಿದ ಘಟನೆ ಇನ್ನೂ ಮಾಸಿಲ್ಲ. ಅದಾಗಲೇ ಹಿಮ್ಮೇಳದ ಕಲಾವಿದರ ಪೈಕಿ ಅದ್ವಿತೀಯರೆನಿಸಿಕೊಂಡಿದ್ದ ಮತ್ತೊಬ್ಬ ಚೇತನ ಅವರ ಹಾದಿಯನ್ನೇ ಹಿಡಿದಿದ್ದಾರೆ. ಅಂತೂ ವರುಷಾರ್ಧಕ್ಕೆ ರಂಗದ ಜೊತೆ ಅವಿನಾಭವ ಸಂಬಂಧ ಹೊಂದಿದ ಈರ್ವರು ಯಕ್ಷಗಾರುಡಿಗರನ್ನು ಕಳೆದುಕೊಂಡಂತಾಗಿದೆ. ಅವರೇ ಚೆಂಡೆ ಮದ್ದಳೆ ಮಾಂತ್ರಿಕರಾಗಿ, ಯಕ್ಷಗಾನ ಪ್ರತಿಭೆಗಳನ್ನೂ ರೂಪಿಸಿದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು.

ಏಪ್ರಿಲ್ ೨೭, ೨೦೦೯. ಸೋಮವಾರ ಬೆಂಗಳೂರಿನ ಕೋರಮಂಗಲದಲ್ಲಿ ಯಡನೀರು ಮೇಳವು ಯಕ್ಷಗಾನ ಆಟವನ್ನು ಆಯೋಜಿಸಿತ್ತು. ಪ್ರಸಂಗ ಜಾಂಬವತಿ ಕಲ್ಯಾಣ. ಚೌಕಿ ಪೂಜೆಯಾಗುತ್ತಿದ್ದಂತೆ ಹೃದಯಾಘಾತದಿಂದ ಕುಸಿದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು. ಕಲೆಯನ್ನೇ ಬದುಕ ಗುರಿಯಾಗಿಸಿದ ಕಲಾವಿದನಿಗೆ ಇದಕ್ಕಿಂತ ಅರ್ಹ ವಿದಾಯ ಮತ್ತೊಂದಿಲ್ಲ..

ಹಾಗೆ ನೋಡಿದರೆ ಚಿಪ್ಪಾರರಿಗೆ ಬೆಳಗ್ಗೆಯೂ ಒಮ್ಮೆ ಹೃದಯಾಘಾತವಾಗಿತ್ತು. ಆದರೆ, ಅವರನ್ನು ಪರಿಶೀಲಿಸಿದ ವೈದ್ಯರು ಯಾವುದೇ ಅಪಾಯವಿಲ್ಲ ಎಂದಿದ್ದರು. ಆದರೂ ತಮ್ಮ ಅನಾರೋಗ್ಯದಲ್ಲೇ ಕಲಾಕಾಯಕ ಮಾಡಲು ಬಂದರೆಂದರೆ ಇಹಲೋಕ ಯಾತ್ರೆಗೆ ಹೆಜ್ಜೆ ಇಟ್ಟದ್ದು ದೈವ ಪ್ರೇರಣೆಯಿಂದಲೇ ಇರಬೇಕು.

ಧರ್ಮಸ್ಥಳ ಮೇಳದ ಆಟವನ್ನು ನೋಡುತ್ತಾ ಬೆಳೆದವರಿಗೆ ಚೆಂಡೆ ಎಂದರೆ ಮೊದಲು ಕಣ್ಣೆದುರಿಗೆ ಬರುವವರೇ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು. ಇವರು ಪೀಠಿಕೆಗೆ ನಿಂತರೆಂದರೆ ಆ ಉರುಳಿಕೆಗಳನ್ನು ಕೇಳುವುದೇ ಕಿವಿಗಳಿಗೆ ಹಬ್ಬ ! ಚೆಂಡೆ ಮದ್ದಲೆಗಳ ಮೇಲೆ ಅಸಾಧಾರಣ ಪ್ರಭುತ್ವ ಹೊಂದಿದ್ದ ಬಲ್ಲಾಳರು ತೆಂಕು ತಿಟ್ಟಿನ ಎಲ್ಲ ಪ್ರಖ್ಯಾತ ಭಾಗವತರುಗಳಿಗೆ ಸಾಥ್ ನೀಡಿದವರು. ಹೆಸರಾಂತ ಕಲಾವಿದರಿಂದ ತೊಡಗಿ ಇತ್ತೀಚಿನ ಯುವ ಕಲಾವಿದರನ್ನು ಕುಣಿಸಿದ ಇವರ ಕೈ ಕಸುವು; ಕಲೆಯ ಬಗೆಗಿದ್ದ ಅವಿರತ ಶ್ರದ್ಧೆ, ಪ್ರೀತಿಗೆ ಸಾಕ್ಷಿ. ಜೋಡಾಟದಲ್ಲಂತೂ ಇವರದ್ದು ಎತ್ತಿದ ಕೈ.

ಚಿಪ್ಪಾರರ ಚೆಂಡೆ ವಾದನಕ್ಕೆ ಎಂತಹ ಅರಸಿಕನೂ ಶಹಬ್ಭಾಸ್ ಎನ್ನಬೇಕು ! ೮೦ರ ಇಳಿವಯಸ್ಸಿನಲ್ಲೂ ಚಿಪ್ಪಾರರದ್ದು ೨೦ರ ಯುವಕರೂ ನಾಚುವ ಶ್ರಮ. ಅವರು ಚೆಂಡೆ ಹಿಡಿದು ರಂಗಸ್ಥಳಕ್ಕೆ ಪ್ರವೇಶಿಸಿದರೆಂದರೆ ಪ್ರೇಕ್ಷಕರು ತನ್ಮಯ. ೧೯೫೮ರಲ್ಲಿ ರಷ್ಯಾ ಅಧ್ಯಕ್ಷರ ಭಾರತ ಪ್ರವಾಸ ವೇಳೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿಪ್ಪಾರರ ಚೆಂಡೆ ವಾದನ. ರಷ್ಯಾ ಅಧ್ಯಕ್ಷರು ಚೆಂಡೆ ವಾದನ ಕೇಳುವುದರಲ್ಲೇ ಮೈಮರೆತಿದ್ದರು !

ದಾಮೋದರ ಮಂಡೆಚ್ಚರ ಪದ್ಯಗಳಿಗೆ ಮೃದಂಗದ ಪೆಟ್ಟುಗಳನ್ನು ಚೆಂಡೆ ಮದ್ದಳೆಗಳಿಗೆ ಅಳವಡಿಸಿದ ಕೀರ್ತಿ ಇವರದ್ದು. ಅವರದ್ದು ಗಳಸ್ಯ ಕಂಠಸ್ಯ ಸ್ನೇಹ. ಕಡತೋಕ-ಬಲ್ಲಾಳರ ಜೋಡಿಯಂತೂ ಯಕ್ಷರಂಗ ಕಂಡ ಅವಿಸ್ಮರಣೀಯ ಸಾಂಗತ್ಯ. ಇಂದಿನ ದಿನಗಳಲ್ಲಿ ಹಲವು ಕಲಾವಿದರು ತಮ್ಮೊಳಗೆ ಮಾತನಾಡಿಕೊಂಡೋ, ಸನ್ನೆ ಮಾಡಿಕೊಂಡೇ, ನಗುತ್ತಲೋ ಇರುವಾಗ ಚಿಪ್ಪಾರರು ‘ಗಜ ಮುಖದವಗೆ’ಯಿಂದ ತೊಡಗಿ ಕೊನೆಗೆ ಮಂಗಳದವರೆಗೆ ನಿರಂತರವಾಗಿ ಸದಾ ಸ್ಥಿತಪ್ರಜ್ಞರಾಗಿ ಚೆಂಡೆ, ಮದ್ದಲೆ ವಾದನ ಮಾಡಿದ ದಿನಗಳು ಅದೆಷ್ಟೋ ! ಅವರ ವರ್ತನೆಯಂತೆಯೇ ಚೆಂಡೆ-ಮದ್ದಳೆಗಳ ಜೊತೆಗಿನ ನಿಲುವೂ ಕೂಡಾ ಆಹ್ಲಾದಮಯ. ದೂರದರ್ಶನದಲ್ಲಿ ಪ್ರಪ್ರಥಮ ಪ್ರದರ್ಶನ ನೀಡಿದ ಕೀರ್ತಿ ಚಿಪ್ಪಾರರದ್ದು.

on-26-4-2009-last-performance of Chipparu Krishnnaih Ballal

ತಮಗೆ ಮಾತ್ರವಲ್ಲ ತಮ್ಮ ಪುಟ್ಟ-ಪುಟ್ಟ ಊರಿಗೂ ಜಗದಗಲದ ಮಾನ್ಯತೆ, ಸಾಕಷ್ಟು ಹೆಸರು ತಂದುಕೊಡುವ‌ ಕಲಾವಿದರ ಪೈಕಿ ಯಕ್ಷಗಾನ ಕಲಾವಿದರದ್ದು ಅಗ್ರಪಂಕ್ತಿ. ಹಾಗಾಗಿಯೇ ಎಷ್ಟೋ ಬಾರಿ ಅವರ ಹೆಸರಿಗಿಂತ ಊರಿನ ಹೆಸರನ್ನೇ ಕರೆದು ಗುರುತಿಸುತ್ತಾರೆ. ಅಂತೆಯೇ ಕೃಷ್ಣ್ಯಯ್ಯ ಬಲಾಳರೂ ಕೂಡ ! ಚಿಪ್ಪಾರು ಎಂಬ ಊರಿನ ಹೆಸರಿಗೆ ಯಕ್ಷಗಾನ ಸಾರಸ್ವತ-ಸಾಂಸ್ಕೃತಿಕ ಲೋಕದಲ್ಲಿ ಶಾಶ್ವತ ಹೆಸರನ್ನು, ಸ್ಥಾನವನ್ನು ಕೊಟ್ಟು ಹೋಗಿದ್ದಾರೆ.

ಜನನ : ೧೯೨೮ ರ ಎಪ್ರಿಲ್ ೨ ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಚಿಪ್ಪಾರು

ವಿಟ್ಲ ರಾಜಮನೆತನದಲ್ಲಿ ಜನಿಸಿದರೂ ಕಡು ಬಡತನದ ಜೀವನ.

ತಂದೆ : ಮರಿಮಯ್ಯ ಬಲ್ಲಾಳ್, ಮದ್ದಳೆ ವಾದಕರು.

ಶೈಕ್ಷಣಿಕ ವಿದ್ಯಾಭ್ಯಾಸ : ೬ನೇ ತರಗತಿ

ಗುರುಗಳು : ತಾಳ್ತಜೆ ಕೇಶವ ಭಟ್, ಮಾಂಬಾಡಿ ನಾರಾಯಣ ಭಾಗವತರು, ಕುದ್ರಕೋಡ್ಲು ರಾಮಭಟ್, ನಿಡ್ಲೆ ನರಸಿಂಹ ಭಟ್, ವಿದ್ವಾನ್ ಬಾಬು ರೈ, ಕುರಿಯ ವಿಠಲ ಶಾಸ್ತ್ರಿಗಳು

ಆರಂಭಿಕ ಕಲಾ ಸೇವೆ : ಮೂಲ್ಕಿ ಮೇಳ

ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ ೫೦ ವರ್ಷಗಳ ಕಾಲ ಸೇವೆ.

ಕುಟುಂಬ : ಪತ್ನಿ ಮತ್ತು ಮೂವರು ಪುತ್ರರು. ಪುತ್ರ ಮರಿಮಯ್ಯ ಬಲ್ಲಾಳರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾವಿದರು.

ಪ್ರಶಸ್ತಿಗಳು: ಕರ್ನಾಟಕ ಜನಪದ ಪ್ರಶಸ್ತಿ, ಕೇರಳ ಅಕಾಡೆಮಿ ಪ್ರಶಸ್ತಿ, ಶೇಣಿ ಪ್ರಶಸ್ತಿ

ಕೆರೆಮನೆ ಶಂಭು ಹೆಗಡೆ-ನುಡಿ ನಮನ ಅಂಜಲಿ
Keremane Shambu Hegade

ಜನನ  : ಅಕ್ಟೋಬರ್ ೬, ೧೯೩೮

ಮರಣ : ಫೆಬ್ರವರಿ ೩, ೨೦೦೯

ಕೆರೆಮನೆ ಶಿವರಾಮ ಹೆಗಡೆ ಹಾಗು ಮುಕಾಂಬೆ ದಂಪತಿಯ ಪುತ್ರ

ಪತ್ನಿ ಗೌರಿ, ಮಗ ಶಿವಾನಂದ ಹೆಗಡೆ, ಸೊಸೆ ರಾಜೇಶ್ವರಿ, ಮಗಳು ಶಾರದಾ, ಮೊಮ್ಮಕ್ಕಳು ಶ್ರೀಧರ, ಶಶಿಧರ, ಪ್ರಸನ್ನ

ದೇಶ ವಿದೇಶಗಳಲ್ಲಿ ೫೦೦೦ಕ್ಕೂ ಮಿಕ್ಕಿ ಯಕ್ಷ ಪ್ರದರ್ಶನ

ಪುರುಷ, ಸ್ತ್ರೀ ವೇಷ ಸೇರಿ ೧೭೫ ಪಾತ್ರಗಳ ನಿರ್ವಹಣೆ

ಖ್ಯಾತ ನೃತ್ಯ ಕಲಾವಿದೆ ಮಾಯಾರಾವ್ ಅವರಲ್ಲಿ ಕೊರಿಯೋಗ್ರಫಿಯ ತಂತ್ರಗಳ ಕಲಿಕೆ

ಅರ್ಧ ಚಂದ್ರಾಕೃತಿಯ ರಂಗಮಂಚವನ್ನು ಪರಿಚಯಿಸಿ ಅದರ ಮೇಲೆ ಸಧಬಿರುಚಿಯ ಪ್ರಸಂಗಗಳನ್ನು ಪ್ರದರ್ಶನ.

ಗುಣವಂತೆಯಲ್ಲಿ ತಂದೆ ಶಿವರಾಮ ಹೆಗಡೆ ಹೆಸರಿನಲ್ಲಿ ರಂಗಮದಿರ ಮತ್ತು ಯಕ್ಷ ಶಿಕ್ಷಣ ನೀಡುವ ಶ್ರೀಮಯ ಕಲಾಕೇಂದ್ರ ಸ್ಥಾಪನೆ

ಬೆಳ್ಳಂಬೆಳಗ್ಗೆ ಮೊಬೈಲ್ ಮೆಸೇಜ್ ಕಿರುಗುಟ್ಟಿತ್ತು.

Keremane Shambhu Hegade-Last performence in Idagunji

‘ಯಕ್ಷ ರಂಗದ ಅಭಿಜಾತ ಕಲಾವಿದ ಶ್ರೀ ಶಂಭು ಹೆಗಡೆ ಇಡಗುಂಜಿಯ ರಂಗಸ್ಥಳದಲ್ಲಿ ‘ಕುಶ-ಲವ’ದ ರಾಮನ ಪಾತ್ರ ನಿರ್ವಹಿಸುತ್ತಿದಾಗಲೇ ನಿಧನ’

ಒಮ್ಮೆಗೇ ಗರ ಬಡಿದಂತಾಯಿತು. ಪ್ರಖರ ಬೆಳಕೊಂದು ಆರಿಹೋಗಿತ್ತು.

ಎರಡು ದಿನಗಳ ಹಿಂದೆಯಷ್ಟೇ ಸುಳ್ಯದಲ್ಲಿ  ಯಕ್ಷಗಾನ ಅಕಾಡೆಮಿಯ ಪ್ರಥಮ ಪ್ರಯತ್ನವಾದ ಯಕ್ಷ ಶಿಕ್ಷಣ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕ್ಷಣಗಳು ಹಸಿರಾಗಿರುವಾಗಲೇ ಹೀಗೊಂದು ಸುದ್ದಿ!

ಶಾಕ್ ಹೊಡೆದಂತಾಗಿತ್ತು. ಅಂದಿನ ಕಾರ್ಯಕ್ರಮದ ಚಹಾ ವಿರಾಮದ ನಡುವೆ ಅವರು  ಪಕ್ಕದಲ್ಲೇ ಸರಿದು ಹೋದದ್ದು ಮತ್ತೆ ನೆನಪಾಯಿತು.

Keremane Shambhu Hegade

ಇಂದು ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ರಚನೆ ಆಗಿದ್ದರೆ ಅದರ  ಹಿಂದೆ ಶಂಭು ಹೆಗಡೆಯವರ ಸಾತ್ವಿಕ ಹೋರಾಟದ ಪಾಲು ಇದೆ. ಯಕ್ಷಗಾನಕ್ಕೊಂದು ಅಕಾಡೆಮಿ ಬೇಕು, ಅದರ ಸ್ವರೂಪ ಹೇಗಿರಬೇಕು ಎಂಬುದರ ಬಗ್ಗೆ ಎರಡು ದಶಕಗಳ ಹಿಂದೆಯೇ ಸಮರ್ಥವಾಗಿ ಪ್ರತಿಪಾದಿಸಿದ ಧೀಮಂತ ಮೂರ್ತಿ ಅವರು.

ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಿ ಅದರ ವತಿಯಿಂದ ಹಮ್ಮಿಕೊಂಡ ಮೊದಲ ಕಾರ್ಯಕ್ರಮವೇ ಅವರು ಪಾಲ್ಗೊಂಡ ಕೊನೆಯ ಸಭಾ ಕಾರ್ಯಕ್ರಮವಾಗಿರಬೇಕಾದರೆ ಅಕಾಡೆಮಿ ಕುರಿತಾಗಿ ಅವರಿಟ್ಟುಕೊಂಡಿದ್ದ ಕನಸು ಮತ್ತು ಅವರ ಸಾರ್ಥಕ ಬದುಕಿಗೆ ಬೇರೆ ಸಾಕ್ಷಿ ಬೇಕಿಲ್ಲ ! ಏನು ಸಾಧಿಸಬೇಕೆಂದುಕೊಂಡಿದ್ದರೋ ಅವೆಲ್ಲವನ್ನೂ ಸಾಧಿಸಿ ಹೊರಟಿದ್ದಾರೆ. ಧನ್ಯವಾಗಿದೆ ಬದುಕು.

‘ಕಲಾವಿದನಿಗೆ ಬೇಕಾದ್ದು ಏನು. ವೇಷದಲ್ಲೇ ಕೊನೆಯುಸಿರೆಳೆಯುವುದು. ಅದೇ ಭಾಗ್ಯ’- ಅವರಂದಂತೆಯೇ ಭಗವಂತ ಕರುಣಿಸಿದ್ದಾನೆ. ಎಲ್ಲಾ ಅಸಾಮಾನ್ಯ ಕಲಾವಿದರ ಅಪೇಕ್ಷೆಯೇ ಅದು! ಅವರ ಸೇವೆ ಈ ಕ್ಷೇತ್ರಕ್ಕೆ ಇನ್ನಷ್ಟು ಬೇಕಿತ್ತಾದರೂ, ರಂಗಸ್ಥಳದಲ್ಲಿ ಅಭಿನಯಿಸುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಅದೂ ತಮ್ಮ ಇಷ್ಟದೇವರ ಸನ್ನಿಧಿಯಲ್ಲೇ ಮೋಕ್ಷ ಕಾಣಬೇಕಾದರೆ ಅವರಿನ್ನೆಂತಹ ಪುಣ್ಯಶಾಲಿಯಾಗಿರಬೇಕು?

ಯಕ್ಷ ಗಾರುಡಿಗನ ‘ಪರ್ವ’ ಮುಗಿದಿದೆ. ಬಣ್ಣ ಹಚ್ಚಿದಾಗಲೇ ಸಾವು ಅವರನ್ನು ತಟ್ಟಿ ಬದುಕನ್ನು ಸಾರ್ಥಕಗೊಳಿಸಿದೆ.

ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳು ‘ಬ್ರಹ್ಮ ಕಪಾಲ’ದ ಶಿವನಾಗಿಯೇ ಭೌತಿಕ ದೇಹ ತ್ಯಜಿಸಿದ್ದು ಮತ್ತೊಮ್ಮೆ ನೆನಪಾಯಿತು.

ಯಕ್ಷಗಾನ ಕಲಾವಿದರಿಗೆ ಘನತೆ, ಗೌರವ ಸಂಪಾದಿಸಿಕೊಟ್ಟು, ಕೊನೆಯ ಉಸಿರಿನವರೆಗೂ ರಂಗಸ್ಥಳದ ಚಕ್ರವರ್ತಿಯಂತೆ ಮೆರೆದು, ತೊಟ್ಟ ವೇಷದಲ್ಲೇ ಬದುಕಿನ ಪಾತ್ರ ಮುಗಿಸಿ ಸರಿದ ಅಮರವೆನಿಸುವ ಮುಕ್ತಿ ಸಂಧಾನ..!

ಅರ್ಹ ವಿದಾಯ. ಧೀರೋದಾತ್ತ ಮರಣ.

ಒಬ್ಬ ಕಲಾವಿದನಿಗೆ ಇದಕ್ಕಿಂತ ಒಳ್ಳೆಯ ಮೋಕ್ಷ ಸಿಗಲಾರದು!

ಸುಳ್ಯದಲ್ಲಿ  ರಾಜ್ಯ ಯಕ್ಷಗಾನ ಅಕಾಡೆಮಿ ಆಯೋಜಿಸಿದ ಕಾರ್ಯಾಗಾರದ ಸಮಾರೋಪ ಸಮಾರಂಭದ ಪ್ರಯುಕ್ತ ಸಭಿಕರನ್ನು ಉದ್ದೇಶಿಸಿ ಮಾಡಿದ ಅವರ ನುಡಿಗಳೇ ಅವರ ಕೊನೆಯ ಭಾಷಣ..ವಸ್ತುವಿನ ಆಯ್ಕೆ, ವಿಭಜನೆ, ಬೆಳೆಸಬಲ್ಲ ಕ್ರಮ, ಅದರ ಭಾವ, ಅನನ್ಯ ಭಾಷೆ, ಜೊತೆಗೊಂದಿಷ್ಟು ರಂಜನೆ..,ಹೀಗೆ ಅವರ ಭಾಷಣ ಅಭಿಮಾನಾಸ್ಪದ… ಯಾರನ್ನೂ ಮೆಚ್ಚಿಸಲು ಹೋಗದೇ, ಅನವಶ್ಯವಾಗಿ ಚುಚ್ಚದೆ. ಅವರ ದುರ್ಲಭವೆಸುವ ಅವರ ಮಾತಿನ ತುಣುಕುಗಳು.ಇದೋ ಅದರ ಮೆಲುಕು…

Keremane Shabhu Hegade in yakshagana Academy workshop in Sullia

*ಯಾವುದೇ ನೃತ್ಯ ಪದ್ಧತಿ ನಾಟ್ಯಶಾಸ್ತ್ರಕ್ಕೆ ಅಧೀನ ಆಗಿದೆ ಎಂದಾಕ್ಷಣ ಅದನ್ನು ಶಾಸ್ತ್ರೀಯ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಪರಿಕರಗಳು ಶಾಸ್ತ್ರದ ವಿಧಾನಗಳಿಗೆ ಹೊಂದಿಕೆಯಾದರೆ ಮಾತ್ರ ಅದು ಶಾಸ್ತ್ರಸ್ಥವೆನಿ ಸಿಕೊಳ್ಳುತ್ತದೆ.

* ಶಾಸ್ತ್ರದ ಶಾಸ್ತ್ರಸ್ಥ ದೋಷವನ್ನು ಪ್ರಶ್ನಿಸಿದಾಗ ‘ಅದು ಸಂಪ್ರದಾಯ’ ಎನ್ನುವ ಪಲಾಯನವಾದವೇ ಎಲ್ಲಾ ಅನಭಿವೃದ್ಧಿಗೆ ಕಾರಣ.

*  ಯಾವುದೇ ತಿಟ್ಟು ಅಥವಾ ಪರಂಪರೆಗಳು ಸಾಂಧರ್ಭಿಕವಾಗಿ ಕಾಲಸ್ಥ, ದೇಶಸ್ಥವಾಗಿ ರ್ಮಾಣಗೊಂಡಾಗಲೇ ಅದಕ್ಕೆ ಪ್ರಸ್ತುತತೆ ಹೆಚ್ಚುತ್ತದೆ. ಪ್ರತಿಯೊಂದು ಶೈಲಿಯೂ ಇರುವುದು ತಪಲ್ಲ. ಆದರೆ ಅದು ಆಗಾಗ ಬದಲಾವಣೆಗೊಳ್ಳುವಷ್ಟು ಸುಲಭೀಕೃತ ಆಗಬಾರದು.

*ಯಾವುದೇ ರಂಗಭೂಮಿಯ ಸೈದ್ಧಾಂತಿಕ ದೋಷ ಚರ್ಚಿಸುವಾಗ ಆಪ್ತಸಂವಾದವಷ್ಟೇ ದೋಷಗಳನ್ನು ತಿದ್ದಿಕೊಳ್ಳಲು ಸಹಾಯ ಮಾಡುತ್ತದೆ. ವೇದಿಕೆಯಲ್ಲ್ಲಿ ಚರ್ಚಿಸಹೊರಟರೆ ವ್ಯಕ್ತಿಯ ಹಿನ್ನಲೆ, ಸಂದರ್ಭ, ಗುಣದೋಷಗಳೇ ಚರ್ಚೆಯನ್ನು, ಜನರ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತದೆ.

*   ಪಾತ್ರವೊಂದು ರಂಗಭೂಮಿಗೆ ಬಂದಾಗ ಅದಕ್ಕೆ ಸೌಂದರ್ಯ, ಅನುಕೂಲ, ಸಮರ್ಪಕತೆ ಇರಬೇಕು. ಕೇರಳದವರ ಕಥಕ್ಕಳಿಗೆ ಪ್ರಪಂಚದಾದ್ಯಂತ ವೀಕ್ಷಕರಿದ್ದಾರೆ. ಅವರ ಎಲ್ಲಾ ಮನೋಧರ್ಮ, ಸಂಯೋಜನೆಗಳು, ಕೆಲಸ, ಬಣ್ಣಗಾರಿಕೆ ರಜ, ಸತ್ವ, ತಮ ಎಂಬ ಮೂರು ಗುಣಗಳನ್ನಾಧರಿಸಿ ಬೆಳೆದಿದೆ. ಹೀಗೆ, ಉಳಿದ ಶಾಸ್ತ್ರೀಯ ಕಲೆಗಳು ಕೂಡಾ ! ಆದರೆ ಇವುಗಳಿಗೆಲ್ಲಾ ಇರುವಂತೆ ಯಕ್ಷಗಾನಕ್ಕೆ ಸಮಗ್ರ ಪಠ್ಯ ಇಲ್ಲ. ಏಕರೂಪತೆಯಿಲ್ಲ.

* ತರ್ಕಶುದ್ಧಿ ಕಂಡುಬರುವುದಿಲ್ಲ. ಹಾಗಾಗಿ ಮೊದಲಿನಿಂದಲೂ ವ್ಯಕ್ತಿ, ಮನೆಗೆ ಸೀಮಿತವಾಗಿ, ಅವರವರದ್ದೇ ಶೈಲಿಗಳಾಗಿ ಬೆಳೆದುಕೊಂಡು ನಿಂತಿದೆ. ಆದ್ದರಿಂದ ಯಕ್ಷಗಾನವನ್ನು ಯಾವುದೇ ಹೊರನಾಡಿನಲ್ಲಿ ಪ್ರದರ್ಶಿಸಿದರೂ ಬರುವ ವೀಕ್ಷಕರಲ್ಲಿ ಬಹುಪಾಲು ಕನ್ನಡಿಗರೋ, ಕರಾವಳಿಗರೋ ಆಗಿರುತ್ತಾರೆ. ಪರಕೀಯ ಪ್ರದೇಶದಲ್ಲಿ ಜನರನ್ನು ನಾವು ಆಕರ್ಷಿಸಿದ್ದು ಕಡಿಮೆ. ವಸ್ತುವಿನಲ್ಲಿ ಸ್ಪಷ್ಟತೆ, ತತ್ವಬದ್ಧತೆಯಿಲ್ಲದಿರುವುದೇ ಇದಕ್ಕೆ ಕಾರಣ. ಅಂತರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನವನ್ನು ಬೆಳೆಸುವಲ್ಲಿ ಇಂತಹ ಸೀಮಿತ ಮನೋಧರ್ಮದಿಂದ ಏನೂ ಪ್ರಯೋಜಬವಿಲ್ಲ.

*    ಕಲೆ ವ್ಯವಸಾಯಮುಖಿಯಾಗಿರಬೇಕೇ? ತತ್ವಮುಖಿಯಾಗಿರಬೇಕೆ? ಈ ಆಯ್ಕೆಯ ಪ್ರಶ್ನೆಯಲ್ಲಿ ಯಕ್ಷಗಾನವು ಆರಿಸಿಕೊಂಡದ್ದು ಮೊದಲನೆಯದನ್ನು. ಹೀಗೆ ವೃತ್ತಿಮುಖಿಯಾಗಿರುವುದರಿಂದಲೇ ಅದರ ಅದೇಷ್ಟೋ ಕಲಾತ್ಮಕ ದೃಷ್ಠಿಗಳು ನಾಶವಾಗಿವೆ. ಜನಸೇರುವುದು, ಜನಾವಲಂಬನೆ ರಂಗಭೂಮಿಯ ತಾತ್ವಿಕ ಯಶಸ್ಸಿಗೆ ಕಾರಣವಾಗುವುದಿಲ್ಲ. ಜೊತೆಗೆ ಯಕ್ಷಗಾನದ ಅಭಿವೃದ್ಧಿ ಕೇವಲ ಆರಾಧನೆಯಿಂದ ಸಾಧ್ಯವಿಲ್ಲ. ಸಮರ್ಥ ಅಧ್ಯಯನವಿದ್ದರೆ ಮಾತ್ರ ಬೆಳೆಸಲು ಸಾಧ್ಯ. ರಂಗಭೂಮಿಯ ಉನ್ನತಿಗೆ ವಿಶಾಲತೆ, ಉದಾರತೆ ಬೇಕೇ ವಿನಃ ಆರಾಧನೆಯಿಂದ ಆಗುವುದು ಕಷ್ಟ.

Keremane Shambhu Hegade

* ಕಲಾವಿದನ ನೈಸರ್ಗಿಕ ಅಭಿವ್ಯಕ್ತಿಗೆ ಒಪ್ಪುವ ಮತ್ತು ನೃತ್ಯದ ಸೊಗಸು ಹೆಚ್ಚುವಂತಹ ವೇಷ ಒಪ್ಪುವಂತಿದ್ದರೆ ಒಳ್ಳೆಯದು. ಆದರೆ ಪರಂಪರೆ, ಸಂಪ್ರದಾಯವೆಂದು ವೇಷಭೂಷಣಗಳನ್ನು ಹೇರಿಕೊಳ್ಳುವುದು ಸಮಂಜಸವಲ್ಲ. ವೇಷಭೂಷಣವನ್ನು ಮನುಷ್ಯ ತೊಡಬೇಕೇ ವಿನಃ ವೇಷಭೂಷಣ ಮನುಷ್ಯನನ್ನು ತೊಡುವುದಲ್ಲ.

*   ರಾಷ್ಟ್ರೀಯ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಪ್ರತ್ಯೇಕತೆಯನ್ನು ಕಾಣಿಸಿಕೊಳ್ಳಬೇಕು. ಕಲೆಗೆ ಇದು ಮುಖ್ಯ ಮತ್ತು ಅವಶ್ಯಕ.

*    ಕಲಾವಿದರ ಆಶೋತ್ತರ, ಉದ್ದಾರಕ್ಕೇ ಅಕಾಡೆಮಿಗಳು ಇರುವುದು ಎಂಬುದು ತಪ್ಪು ಮನೋಭಾವ. ಅದಿರುವುದು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ. ಸರ್ಕಾರದ ಮಿತಿಯಲ್ಲಿ, ಚೌಕಟ್ಟಿನಲ್ಲಿ ಅಕಾಡೆಮಿಗಳು ಕೆಲಸ ಮಾಡುತ್ತವೆಯೇ ಹೊರತು, ಅದೇ ಎಲ್ಲವನ್ನೂ ಮಾಡಬೇಕು ಅಂದರೆ ಹೇಗೆ? ಅಷ್ಟಕ್ಕೂ ಅಕಾಡೆಮಿಗಳಿಗಿಂತ ಜನರು ಒಪ್ಪಿಕೊಂಡು ಮಾಡಿದ್ದೇ ಹೆಚ್ಚು. ಸರ್ಕಾರ ಒಪ್ಪಿದರೂ, ಇಲ್ಲದಿದ್ದರೂ ಜನರು ಒಪ್ಪಿ ಸ್ವೀಕರಿಸಿದರೆ ಅದಕ್ಕಿಂತ ಒಳ್ಳೆಯ ಮಾನ್ಯತೆ ಮತ್ತಾವುದಿದೆ?

*  ಪರಕೀಯರ ಮುಂದೆ ಕರ್ನಾಟಕದ ಮರ್ಯಾದೆ ಉಳಿಸೋ ರಂಗಪ್ರಕಾರವೆಂಬುದಿದ್ದರೆ ಅದು ಯಕ್ಷಗಾನವೇ ಸರಿ! ಯಕ್ಷಗಾನ ಸ್ವತಂತ್ರ ರಂಗಭೂಮಿಯೆಂಬುದರಲ್ಲಿ ಅನುಮಾನವಿಲ್ಲ. ಜೊತೆಗೆ, ತಾತ್ವಿಕ, ಸಾಮೂಹಿಕ, ಸಾಮಾಜಿಕ ಸವಾಲುಗಳು ಇದೆ. ಈ ವರೆಗೆ ಯಾವುದೇ ಸರ್ಟಿಫಿಕೇಟು ಅಥವಾ ಪರೀಕ್ಷೆ ಇಲ್ಲದೇ ಹೋದದ್ದರಿಂದ ಕಲೆ ಬೆಳೀಲಿಲ್ಲ, ಉಳೀಲಿಲ್ಲ ಅಂದರೆ ತಪ್ಪು. ಕಲಾವಿದರ ವಿವೇಚನೆ, ಸತ್ ಸಂಕಲ್ಪ, ಸಮೂಹದ ಆಲೋಚನೆಯಿಂದ ಕಲೆ ಬೆಳೆದಿದೆ. ಮತ್ತು ಮುಂದೆಯೂ ಬೆಳೆಸಬಹುದು.

ಹಳ್ಳಿಯಲ್ಲಿಯೇ ಹುಟ್ಟಿ, ಹಳ್ಳಿಯಲ್ಲಿಯೇ ಬೆಳೆದು, ಹಳ್ಳಿಗನಾಗಿಯೇ ಬದುಕಿ, ಕೆರೆಮನೆಯೆಂಬ ಪುಟ್ಟ ಹಳ್ಳಿಯನ್ನು ಜಗದ್ವಿಖ್ಯಾತ ಮಾಡಿದ ಯಕ್ಷ ರಂಗ ಕಂಡ ಸರ್ವೋತ್ಕೃಷ್ಟ ಕಲಾವಿದ ಕೆರೆಮನೆ ಶಂಭು ಹೆಗಡೆ. ಕಲೆಯ ಅಭ್ಯುದಯಕ್ಕೆ ದುಡಿದು, ಜಾಗತಿಕವಾಗಿ ಯಕ್ಷಗಾನವನ್ನು ಪರಿಚಯಿಸದ ಯಕ್ಷ ಲೋಕದ ಸವ್ಯಸಾಚಿ.

ಅವರೊಬ್ಬ ನಟ, ಸಂಘಟಕ ಮಾತ್ರವಲ್ಲ ; ಕಲಾವ್ರತಿ, ಕಲಾ ತತ್ವದ ಪರಿಜ್ಞಾನ, ರಂಗ ಸಾಮರ್ಥ್ಯ, ಸೈದ್ಧಾಂತಿಕ, ಬದ್ಧತೆ, ಪ್ರಯೋಗಶೀಲತೆ, ವಿಮರ್ಷಕ ದೃಷ್ಠಿಕೋನಗಳನ್ನು ಹೊಂದಿದ್ದ ಅಪಾರ ಜೀವನ ಪ್ರೀತಿ ಮತ್ತು ಮಮತೆಯ ಸೆಲೆ. ಕಾರ್ಯಶೀಲ ಚಿಂತಕ. ನೃತ್ಯ , ಮಾತು, ಚಲನೆ, ಅಭಿವ್ಯಕ್ತಿ ಎಲ್ಲದರಲ್ಲೂ ಅವರೊಂದು ಪ್ರತಿಮೆ.

ಪರಂಪರೆಯೊಂದಿಗೆ ಹಲವು ಹೊಸ ಸ್ಪರ್ಶಗಳನ್ನಿತ್ತ, ಯಕ್ಷಗಾನದ ಪರಂಪರೆಯ ಚೌಕಟ್ಟಿನಲ್ಲಿ ಹೊಸ ಪ್ರಯೋಗ ಮಾಡಿ ರಂಗದಲ್ಲಿ ಅನೇಕ ಸುಧಾರಣೆ, ಸೀಮೋಲ್ಲಂಘನ ಮಾಡಿದವರು ಶಂಭು ಹೆಗಡೆ. ಕುರಿಯ ವಿಠಲ ಶಾಸ್ತ್ರಿಗಳಂತೆಯೇ ಯಕ್ಷಗಾನಕ್ಕೆ ನಾಟ್ಯದ ಸಮರ್ಥ ಹೊಂದಾಣಿಕೆ ನೀಡಿದವರು. ‘ನೃತ್ಯ ಬೇಡ’ ಅಂದುಕೊಂಡ ಪಾತ್ರಗಳಿಗೂ ಸಮಯೋಚಿತ  ನೃತ್ಯ ಮಾರ್ಗದರ್ಶಿಸಿ ರಂಗ ಸೂಕ್ಷ್ಮಗಳನ್ನು ಅಳವಡಿಸಿದವರು. ತಮ್ಮ ಪರಿಸರ, ಪರಂಪರೆಯಿಂದಷ್ಟೇ ಕಲಿತು ಜೋತು ಬೀಳದೆ, ಅವಲಂಬಿತರಾಗದೆ ಕಲಿತದ್ದನ್ನು ರಂಗವಿಜ್ಞಾನದ ಬೆಳಕಿನಲ್ಲಿ ಸಂಯೋಜನೆ  ಮಾಡಿದವರು ಅವg, ಅರ್ಧ ಚಂದ್ರಾಕೃತಿಯ ರಂಗಮಂಚದ ಕಲ್ಪನೆ ಮತ್ತು ಆಯೋಜನೆ ಯಕ್ಷ ಪ್ರದರ್ಶನಕ್ಕೆ ಇಟ್ಟ ಕಳಶ.

Keremane Shambhu Hegade

ವೃತ್ತಿ ಮೇಳದ ಕಲಾವಿದರಾಗಿ ನಂತರ, ತಂದೆ ೧೯೭೪ ರಲ್ಲಿ ಸ್ಥಾಪಿಸಿದ ಮೇಳವನ್ನು ಪುನಃಸ್ಸಂಘಟನೆ ಮಾಡುವಲ್ಲಿ ಅವರ ಶ್ರಮ ನಿಜಕ್ಕೂ ಇತಿಹಾಸ. ಸ್ಥಾಪಿಸಿದ್ದ ಮೇಳವನ್ನು ಸಂಘಟಿಸಿ ನಿರ್ಮಿಸಿ, ಅಪಾರ ಪ್ರೇಕ್ಷಕವರ್ಗವನ್ನು ಸಂಪಾದಿಸಿಕೊಳ್ಳುತ್ತಾ, ದೇಶ-ಹೊರದೇಶಗಳಲ್ಲೂ ಶುದ್ಧ ಯಕ್ಷಗಾನದ ಪರಿಚಯವನ್ನೀಯುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿಯೇ ಅವರ ಇಡಗುಂಜಿ ಮೇಳ ಯಕ್ಷಗಾನದ ಒಂದು ಚಳುವಳಿ ಇದ್ದಂತೆ.

ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅದೆಷ್ಟೋ ಪ್ರತಿಭಾನ್ವಿತ, ತೆರೆಮರೆಯ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟು ಬೆಳಕಿಗೆ ತಂದಿದ್ದರು. ವಾದ-ಭಿನ್ನಾಭಿಪ್ರಾಯ ಹೊಂದಿದವರೊಂದಿಗೂ ಸ್ನೇಹಪರರಾಗಿ ಇದ್ದವರು. ಯಕ್ಷಗಾನದ ತಿಟ್ಟುಗಳ ನಡುವಿನ ಕಂಡೂ ಕಾಣದ ವಾದ-ಜಗಳಗಳಿಗೆ ತಮ್ಮದೇ ನಿಟ್ಟಿನಲ್ಲಿ ಉತ್ತರವನಿತ್ತು ಸೌಹಾರ್ದ ಬೆಸೆದವರು. ಇವರ ಪ್ರಸಂಗ ಪಾತ್ರ ಮತ್ತು ಇಡಗುಂಜಿ ಮೇಳದ ಇತಿಹಾಸದ ಬಗ್ಗೆ ಸಂಶೋಧನಾ ಪ್ರಬಂಧಗಳೂ ರಚಿತವಾಗಿವೆ.

‘ಕಲಾವಿದನಾದವನಿಗೆ ಎಂಥಹ ಜೀವನ ಇರಬೇಕು’ ಎಂದು ಸಾಧಿಸಿ ತೋರಿಸಿದ , ಕಲೆಯ ಎಲ್ಲಾ ವಿಭಾಗಗಳ ಕುರಿತೂ ಚಿಂತನೆ ನಡೆಸಿದ ಸಮತೋಲನ ನಡೆ-ನುಡಿ-ಅಭಿವ್ಯಕ್ತಿಯ ಸಚ್ಚಾರಿತ್ರ್ಯದ ಜೀವ ಅದು. ಅವರಿಗಿದ್ದ ಚಟವೆಂದರೆ ಅದೊಂದೇ- ‘ಕಲೆ’.

ಅವರು ಕರುಣಾರಸದ ಸಿದ್ಧಿ ಪುರುಷ. ಉತ್ಕೃಷ್ಟ ಮಟ್ಟದ ವಿಸ್ತಾರವಾದ ಹರಹುವುಳ್ಳ ಅವರ ಚಿಂತನೆ ಪಾತ್ರಗಳಲ್ಲಿ ಸ್ಪಷ್ಟವಾಗುತ್ತಿತ್ತು. ಅನುಕರಿಸಲೇಬೇಕೆನ್ನುವ ಪಾತ್ರಗಳು ಅವು. ಆದರೆ ಅದಷ್ಟು ಸುಲಭವಲ್ಲ. ಸುಭದ್ರಾ ಕಲ್ಯಾಣದ ಕೃಷ್ಣ, ಚತುರ ರಾಜಕಾರಣಿ ಸಂಧಾನ ಕೃಷ್ಣ, ರಾಮ ನಿರ್ಯಾಣದ ರಾಮ, ಸತ್ಯ ಹರಿಶ್ಚಂದ್ರ, ಕರ್ಣಪರ್ವದ ಕರ್ಣ, ಗಧಾಪರ್ವದ ಕೌರವ, ಬಾಹುಕ, ಸಾಲ್ವ, ಅರ್ಜುನ, ಕಾರ್ತವೀರ್ಯ, ಕೀಚಕ, ಮಾಗಧ…ಹೀಗೆ ಪ್ರತೀ ಪಾತ್ರಕ್ಕೂ  ತಮ್ಮದೇ ಛಾಪು ಒತ್ತಿ ಎಷ್ಟೋ ಬಾರಿ ವೇಷ ಹಾಕಿ, ಗೆಜ್ಜೆ ಕಟ್ಟಿದವರು ಈ ಬಾರಿ ಮಾತ್ರ ಗೆಜ್ಜೆ ಕಳಚದೇ ಸ್ಥಬ್ದವಾಗಿದ್ದಾರೆ.

ರಥಸಪ್ತಮಿಯಂದು ನಡೆಯುವ ಇಡಗುಂಜಿ ತೇರಿನಲ್ಲಿ ಕೆರೆಮನೆ ಮೇಳದ ಆಟ ಕಳೆದ ೫ ದಶಕದಿಂದ ಅವಿಚ್ಚಿನ್ನವಾಗಿ ನಡೆದು ಬರುತ್ತಿದೆ. ಈ ಸಂದರ್ಭದಲ್ಲಿ ಶಂಭು ಹೆಗಡೆಯವರು ತಪ್ಪದೇ ಪಾತ್ರ ವಹಿಸುತ್ತಾರೆ. ಹಾಗೆ ನೋಡಿದರೆ, ಶಂಭು ಹೆಗಡೆ ಅವರ ಯಕ್ಷ ಬದುಕಿನ ರಂಗಪ್ರವೇಶವಾದದ್ದು ಇಡಗುಂಜಿಯಲ್ಲೇ! ಮೊದಲು ಯಕ್ಷ ಹೆಜ್ಜೆ ಇಟ್ಟು ಬಂದಲ್ಲೇ ಕೊನೆಯ ಹೆಜ್ಜೆ ಹಾಕಿದ್ದಾರೆ.

ಅವರು ಸಾವನ್ನು ಬರಮಾಡಿಕೊಂಡ ರೀತಿಗೆ ಯಕ್ಷಲೋಕವೇ ಅಚ್ಚರಿಪಟ್ಟಿದೆ.

ಅಂದು ರಥಸಪ್ತಮಿ, ದಿನ ಕಳೆದರೆ ಭೀಷ್ಮಾಷ್ಟಮಿ. ಶುಭ ಮುಹೂರ್ತದಲ್ಲಿ ಇಡಗುಂಜಿಯ ಉತ್ಸವ ಬೇರೆ ! ಕಾಕತಾಳೀಯವೋ ಅಥವಾ ಸಾವಿನ ಮುನ್ಸೂಚನೆ ಇತ್ತೋ, ಗೊತ್ತಿಲ್ಲ; ಆದರೆ ಅಂದಿನ ‘ಕುಶ-ಲವ’ ಪ್ರಸಂಗವನ್ನು ದಾಖಲೆಗಾಗಿ ವೀಡಿಯೋ ರೆಕಾರ್ಡಿಂಗ್ ಮಾಡಲು ಹೇಳಿದ್ದರು. ಈ ಕುರಿತು ಭಾಗವತ ನೆಲ್ಲೂರು ನಾರಾಯಣ ಭಾಗವತ ಅವರಲ್ಲಿ ‘ತಮಗೆ ವಯಸ್ಸಾಗಿದೆ, ಇನ್ನೆಷ್ಟು ದಿನ ಕುಣಿತವೋ’ ಎಂದು ಹೇಳಿಕೊಂಡಿದ್ದರೂ ಕೂಡಾ ! ದಾಖಲೆ ಉಳಿಯಿತು. ಹೆಗಡೆ ಅವರಿಂದಿಲ್ಲ.

Keremane Shambhu Hegade

ಪ್ರಸಂಗದಲ್ಲಿ ಕುಶ-ಲವರೊಂದಿಗಿನ ಪದ್ಯದ ಅರ್ಥಗಾರಿಕೆಗೂ ಅವರ ಮಾತು ಸೂಚ್ಯವಾಗಿತ್ತು. ‘ನಾನು ಬರುವಾಗಲೂ ವೀರನೇ, ಹೋಗುವಾಗಲೂ ವೀರನೇ’ ಎಂದು ಮಾರುತ್ತರ ಕೊಟ್ಟಿದ್ದಾರೆ. ಕೊನೆಗೆ ‘ಏಳಿ ಪೋಗುವ ನಾವು ಮುನಿಪರಿದ್ದೆಡೆಗೆ’ ಎಂದು ಹೇಳುತ್ತಲೇ ಭಾಗವತರಿಗೆ ಬೇಗ ಮುಗಿಸಲು ಸೂಚನೆ ಕೊಟ್ಟು ‘ನಾನು ಬರ್ತೆ’ ಎನ್ನುತ್ತಲೇ ರಂಗದಿಂದ ಚೌಕಿಗೆ ಸರಿದಿದ್ದಾರೆ. ಎಷ್ಟೇ ಆಯಾಸವಿದ್ದರೂ ರಂಗಕ್ಕೆ ಬಂದಾಗ ತಮ್ಮನ್ನೇ ಮರೆತು ನಾಟ್ಯ, ಅರ್ಥಗಾರಿಕೆ, ರಂಗ ಚಲನೆಯಲ್ಲಿ ಮಗ್ನವಾಗಿ ಹೋಗುತ್ತಿದ್ದ ಶಂಭು ಹೆಗಡೆ ತಮ್ಮ ವಿದಾಯವನ್ನು ಸೂಚಿಸುತ್ತಲೇ ನೇಪಥ್ಯಕ್ಕೆ ಸರಿದಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ‘ರಾಮ ನಿರ್ಯಾಣ’ ಪ್ರಸಂಗದಲ್ಲಿ ಕಾಲಪುರುಷನಾಗಿ ಅಭಿನಯಿಸಿದ್ದ ಕುಂಬ್ಳೆ ಸುಂದರ ರಾವ್ ಅವರು ‘ನಿನ್ನ ಕೆಲಸ ಆಯಿತು, ವೇಷ ಕಳಚುವ ಸಮಯ ಬಂದಿದೆ, ನಿನ್ನ ಅವತಾರದ ಉದ್ದೇಶ ಈಡೇರಿದೆ, ಇನ್ನೂ ಯಾಕೆ ಇಲ್ಲಿದ್ದೀ? ಮರಳಿ ಬಾ’ ಎಂದು ಹೇಳಿಕೆ ಕೊಡಿಸಿದ್ದರು. ಅಂದು ಶಂಭು ಹೆಗಡೆ ಅವರದ್ದು ರಾಮನ ಪಾತ್ರ ! ಕಾಲಪುರುಷನ ಪಾತ್ರವಾಡಿದ ಮಾತಿನ ಧ್ವನಿಯನ್ನು ಅಷ್ಟು ಚೆನ್ನಾಗಿ ಅರ್ಥೈಸಿಕೊಂಡು ಕಾಲನ ಕರೆಗೆ ಓಗೊಟ್ಟರೇ?

ಸೀತಾ ವಿಯೋಗ(ಕುಶ-ಲವ ಪ್ರಸಂಗ) ದ ‘ರಾಮ’ನಲ್ಲಿ ಅವರಿಗೆ ಒಲವು ಹೆಚ್ಚು. ಕೊನೆಗೆ ಅದೇ ರಾಮನ ಪಾತ್ರದಲ್ಲೇ ವಿಯೋಗ ! ‘ರಾಮಾವತಾರ’ ಅಲ್ಲಿಗೆ ಮುಗಿದಿದೆ ! ಶೂನ್ಯ ಸೃಷ್ಠಿ.

‘ಓ’ ಎಂದಿದ್ದಾರೆ ಕಾಲ ಪುರುಷನ ಮಾತಿಗೆ. ‘ಏಳಿ ಪೋಗುವ ನಾವ’ ಎನ್ನುತ್ತಲೇ ರಂಗದಿಂದ ನಿರ್ಗಮಿಸಿದ್ದಾರೆ.

ಬಣ್ಣ ಹಚ್ಚಿಕೊಂಡೇ ಬಣ್ಣದ ಬದುಕಿಗೆ ವಿದಾಯ !

ಪರಂಧಾಮಕ್ಕೆ ಸಾಗುವ ಹಾದಿಗೆ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿಕೊಂಡದ್ದು ಕೂಡಾ ಹಾಗೆಯೇ ಇತ್ತು ! ಅವರು ಹಚ್ಚಿದ ಸೂರ್ಯವಂಶದ ತಿಲಕ ಹಣೆಯಲಿತ್ತು !

Keremane Shambhu Hegade