ಒಳನೋಟ ಮೇ-ಜೂನ್ 2009
Wednesday, June 3rd, 2009ನೂಪುರ ಭ್ರಮರಿ ಬಳಗದ ಹಿತೈಷಿ ಶ್ರೀ ರಾಮಚಂದ್ರಾಪುರ ಮೇಳದ ಹಾಸ್ಯ ಪಾತ್ರ ಕಲಾವಿದ, ಸೀತಾರಾಮ್ ಕುಮಾರ್ ಕಟೀಲ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ಆಯಭಟ ಪ್ರಶಸ್ತಿ ದೊರಕಿದೆ. ಪತ್ರಿಕೆಯ ಬಳಗ ಮತ್ತು ಓದುಗರ ವತಿಯಿಂದ ಅವರಿಗೆ ಹಾರ್ದಿಕ ಅಭಿನಂದನೆಗಳು.
ಏಪ್ರಿಲ್ ೧೩-೧೬: ಮಂಗಳೂರಿನ ಪುರಭವನದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮತ್ತು ನಿಟ್ಟೆ ಎಜುಕೇಶನ್ ಇನ್ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ೪ ದಿನಗಳ ಕಾಲ ಸಂಸ್ಕೃತಿ ಸಿಂಚನ ಉತ್ಸವ ನಡೆಯಿತು. ಈ ಸಂದರ್ಭ ಹಲವು ಪ್ರತಿಷ್ಠಿತ ಕಲಾವಿದರಿಂದ ಸಂಗೀತ, ಜುಗಲ್‌ಬಂದಿ, ಭರತನಾಟ್ಯ, ತೈಯ್ಯಂ, [...]


