: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ಪರಿಭ್ರಮಣ

ಪತ್ರಿಕೆಯ ಬಳಗ
ಪತ್ರಿಕೆಯ ಬಳಗದವರಾಗಿ ಜಿಲ್ಲಾ ಕೇಂದ್ರಗಳಲ್ಲಿ ಮೇಲ್ವಿಚಾರಣೆಯನ್ನು ನಿರ್ವಹಿಸುವವರ ಹೆಸರುಗಳು ಕೆಳಗಿನಂತಿವೆ. ಆಸಕ್ತ ಓದುಗ, ಕಲಾವಿದರು ಕೆಳಕಂಡವರನ್ನು ಸಂಪರ್ಕಿಸಿ ಪತ್ರಿಕೆಯ ಚಂದಾದಾರರಾಗಬಹುದು, ಮುದ್ರಣ ನಿಧಿಗೆ ಸಹಕರಿಸಬಹುದು, ಪತ್ರಿಕೆ ಮತ್ತು ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಳ್ಳಬಹುದು. ಹೆಸರು ನೋಂದಾಯಿಸಿ ಬಳಗದವರಾಗಬಹುದು.

ವಿಷ್ಣುಪ್ರಸಾದ್ ನಿಡ್ಡಾಜೆ, ದ.ಕ. (ಮೊಬೈಲ್ : ೯೯೬೪೦ ೨೮೪೧೫)

ಪಂಕಜ್ ಸವಣೂರು, ಪುತ್ತೂರು (ಸಿ.ಡಿ. ಮತ್ತು ಪುಸ್ತಕ ವಿತರಕರು) (ಮೊಬೈಲ್ : ೯೪೮೦೪ ೮೧೪೩೮)

ಪರಶುರಾಮ ಕಾಮತ್, ಕುಂದಾಪುರ. (ಮೊಬೈಲ್ : ೯೮೪೪೬ ೧೪೭೫೨)

ಎನ್.ವಿ.ವೈದ್ಯ, ಶಿರಸಿ (ಮೊಬೈಲ್ : ೯೪೪೯೯ ೮೭೨೫೦)

ಸಂಜಯ್ ಭಟ್ ಬೆಣ್ಣೆ, ಉತ್ತರಕನ್ನಡ (ಮೊಬೈಲ್ : ೯೪೪೮೯ ೧೮೫೦೫)

ಸಿ. ಎಸ್. ರಾಮಚಂದ್ರ ಹೆಗಡೆ,  ಬೆಂಗಳೂರು. (ಮೊಬೈಲ್ : ೯೯೬೬೩ ೭೨೫೦೩)

ಸುನೀಲ್ ಕುಲಕರ್ಣಿ, ಮಂಗಳೂರು (ಮೊಬೈಲ್ : ೯೮೮೦೫ ೪೩೭೮೩)

ಪ್ರೊ. ವೆಂಕಟೇಶ ಪೈ, ಮುಂಬೈ (ಮೊಬೈಲ್ :೦೯೮೬೯೯ ೨೧೩೯೭)

ರಾಧಿಕಾ ವಿಟ್ಲ, ಚೆನ್ನೈ (ಮೊಬೈಲ್ :೯೪೪೪೭ ೦೫೮೪೨)

ರಾಜಗೋಪಾಲ್, ಮಡಿಕೇರಿ (ಮೊಬೈಲ್ :೯೯೬೪೭ ೯೧೩೨೮)

ನಮ್ಮ ಬಳಗದ ಮತ್ತಷ್ಟು ಮಂದಿ…

ವಿನಾಯಕ ಭಟ್ಟ ಮುರೂರು, ಪತ್ರಕರ್ತರು, ಅಂಕಣಕಾರರು, ವಿಜಯಕರ್ನಾಟಕ ದೈನಿಕ, ದೆಹಲಿ.

ಮಂಟಪ ಪ್ರಭಾಕರ ಉಪಾಧ್ಯಾಯ, ಏಕವ್ಯಕ್ತಿ ಯಕ್ಷಗಾನ ಸಾಮ್ರಾಟರು, ಬೆಂಗಳೂರು.

ಚಂದ್ರಶೇಖರ ಶೆಟ್ಟಿ, ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯರು

ಮತ್ತು ಭರತನೃತ್ಯ ಸಭಾ ಹಾಗೂ ಸನಾತನ ನಾಟ್ಯಾಲಯದ ಅಧ್ಯಕ್ಷರು

ವಿದುಷಿ ಶಾರದಾಮಣಿ ಶೇಖರ್, ನೃತ್ಯ ನಿರ್ದೇಶಕಿ, ಸನಾತನ ನಾಟ್ಯಾಲಯ, ಮಂಗಳುರು.

ಶ್ರೀನಿವಾಸ ದೇಶಪಾಂಡೆ, ಹಿರಿಯ ಪ್ರಬಂಧಕರು, ಕರ್ನಾಟಕ ಬ್ಯಾಂಕ್,ಮಂಗಳೂರು.

ವಿದುಷಿ ಪಾವನಾ ರಾಜೇಂದ್ರ, ನಿರ್ದೇಶಕರು, ಶಾರದಾ ನೃತ್ಯಾಲಯ, ಉಡುಪಿ.

ನರೇಶ್ ಶೆಣೈ, ಮಂಗಳೂರು.

ರಾಕೇಶ್ ಕುಮಾರ್ ಕಮ್ಮಜೆ, ಯುವ ಪತ್ರಕರ್ತ, ಮೈಸೂರು.

ವಿದುಷಿ ವೀಣಾ ಎಂ. ಸಾಮಗ, ನಿರ್ದೇಶಕರು, ಶ್ರೀ ರಾಧಾಕೃಷ್ಣ ನೃತ್ಯ ನಿಕೇತನ, ಉಡುಪಿ

ಅನುಶ್ರೀ ಬಂದಾಡಿ, ಬಿ‌ಎಸ್ಸಿ ವಿದ್ಯಾರ್ಥಿನಿ, ಮಂಗಳೂರು

ಸಂಪತ್ ಕುಮಾರ್, ವ್ಯವಸ್ಥಾಪಕರು,  ತಲಕಾವೇರಿ-ಭಾಗಮಂಡಲ ದೇವಸ್ಥಾನಗಳ ಆಡಳಿತ ಮಂಡಳಿ, ಕೊಡಗು

ಕು. ಗೋಪಾಲ ಭಟ್ಟ (ಕು.ಗೋ), ಹಾಸ್ಯ ಸಾಹಿತಿಗಳು, ಪುಸ್ತಕ ಪ್ರೇಮಿ, ‘ಸುಹಾಸಂ’, ಉಡುಪಿ.

ಪರಿಭ್ರಮಣ-ಉಡುಪಿ
ನೂಪುರ ಭ್ರಮರಿಯು ಮೂರನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುವ  ಈ ಹೊತ್ತಿಗೆ, ಕರಾವಳಿಯ ಸಾಂಸ್ಕೃತಿಕ ರಾಜಧಾನಿಯೆಂದು ಹೆಸರು ಪಡೆದುಕೊಳ್ಳುತ್ತಿರುವ ಉಡುಪಿಯ ನೃತ್ಯ ಶಿಕ್ಷಣ ತರಬೇತಿ ಸಂಸ್ಥೆಗಳ ಮತ್ತು ಕಲಾವಿದರ ಪರಿಚಯ- ಪರಿಭ್ರಮಣವನ್ನು ಮಾಡಿಕೊಳ್ಳೋಣವೇ?

ಶ್ರೀ ರಾಧಾಕೃಷ್ಣ ನೃತ್ಯ ನಿಕೇತನ :  ಈ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಆಸಕ್ತ ವಿದ್ಯಾರ್ಥಿಗಳಿಗೆ ಭರತನಾಟ್ಯ, ಕೂಚು ಪುಡಿ ಹಾಗೂ ಆಂಧ್ರ ಶೈಲಿಯ ನೃತ್ಯದ ತರಬೇತಿಯನ್ನು ನೀಡುತ್ತಿದ್ದು, ಭಾರತದಾದ್ಯಂತ ಮಾತ್ರವಲ್ಲದೆ ಹೊರದೇಶಗಳಲ್ಲೂ ನೃತ್ಯ ಕಾರ್ಯಕ್ರಮವನ್ನಿತ್ತಿದೆ.  ಈ ಸಂಸ್ಥೆಯನ್ನು ನಾಟ್ಯಕಲಾ ಪ್ರಪೂರ್ಣ, ನೃತ್ಯಕಲಾಸಿಂಧು, ನೃತ್ಯಕಲಾ ಭೂಷಣ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮುಂತಾದ ಪ್ರಶಸ್ತಿ-ಬಿರುದುಗಳಿಂದ ಪುರಸ್ಕೃತರಾದ ನಾಟ್ಯಾಚಾರ್ಯ ದಿ.ರಾಧಾಕೃಷ್ಣ ತಂತ್ರಿಯವರು ಸ್ಥಾಪಿಸಿದ್ದು, ಅವರ ತರುವಾಯ ಪುತ್ರಿ ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ ಮುನ್ನಡೆಸುತ್ತಿದ್ದಾರೆ.

ಇಲ್ಲಿನ ವಿದ್ಯಾರ್ಥಿಗಳೆಲ್ಲರೂ ಭರತನಾಟ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಶೇಕಡಾ ನೂರು ಫಲಿತಾಂಶದೊಂದಿಗೆ ಉತ್ತಮ ಅಂಕ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದು, ಕೂಚುಪುಡಿ ಪರೀಕ್ಷೆಗಳಲ್ಲಿ ಹಾಜರಾದ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಸಂಸ್ಥೆಯ ಕೀರ್ತಿ ಪತಾಕೆ ಎತ್ತಿ ಹಿಡಿದಿದ್ದಾರೆ. ಇವರು ರೂಪಿಸಿದ ದಶಾವತಾರ, ಕೃಷ್ಣ ದರ್ಶನ, ನವಗ್ರಹ ಸ್ತುತಿ, ವಿಶ್ವರೂಪ ದರ್ಶನ, ಅರ್ಧನಾರೀಶ್ವರ, ವಂದೇ ಮಾತರಂ, ಸೂರ್ಯ ನಮಸ್ಕಾರ ಇತ್ಯಾದಿ ನೃತ್ಯ ರೂಪಕಗಳು ಪ್ರಖ್ಯಾತಿಗೊಂಡಿವೆ. ಪ್ರತಿ ವರ್ಷ ಚಿಣ್ಣರ ನೃತ್ಯೋತ್ಸವ, ಯುವ ನೃತ್ಯೋತ್ಸವ, ನೃತ್ಯಾರ್ಪಣ ಮೊದಲಾದ ಕಾರ್ಯಕ್ರಮಗಳು ಜನ-ಮನಗೆದ್ದಿದೆ. ಅಲ್ಲದೆ, ಉಡುಪಿಯಲ್ಲಿ ಕಳೆದ ಆರು ವರ್ಷಗಳಿಂದ ಭರತಮುನಿ ಜಯಂತ್ಯುತ್ಸವವನ್ನು ವೈಭವದಿಂದ ಆಚರಿಸುತ್ತಾ ನೃತ್ಯ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ.

ಹೆಜ್ಜೆ-ಗೆಜ್ಜೆ, ಮಣಿಪಾಲ: ಈ ಸಂಸ್ಥೆಯು ಕಳೆದ ೧೬ ವರ್ಷಗಳಿಂದ ಎಳೆಯರಲ್ಲಿರುವ ಕಲಾ ಪ್ರತಿಭೆಯನ್ನು ಉಳಿಸಿ, ಬೆಳೆಸುವ ಸಲುವಾಗಿ ವಿದುಷಿ ಯಶಾ ರಾಮಕೃಷ್ಣರವರ ನಿರ್ದೇಶನದಲ್ಲಿ ಶ್ರಮಿಸುತ್ತಿರುವ ಕಲಾ ಸಂಸ್ಥೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದು, ಉನ್ನತ ಮಟ್ಟದ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ಪ್ರತಿಷ್ಠಿತ ವೇದಿಕೆಗಳಲ್ಲಿ ನಡೆಸಿಕೊಟ್ಟಿರುವ ಹೆಜ್ಜೆ-ಗೆಜ್ಜೆಯು ಉಡುಪಿಯ ಶ್ರಿ ಪಲಿಮಾರು ಮಠದ ಪರ್ಯಾಯಾವಧಿಯಲ್ಲಿ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಭರತ ಪ್ರಶಸ್ತಿಯನ್ನು ಪಡೆದಿರುತ್ತದೆ. ಸಂಸ್ಥೆಯ ವಿದ್ಯಾರ್ಥಿಗಳು ಈಗಾಗಲೇ ಭರತನಾಟ್ಯದಲ್ಲಿ ರಾಜ್ಯ ಮಟ್ಟದ ಹಲವಾರು ಬಹುಮಾನಗಳನ್ನು, ಶಿಷ್ಯ ವೇತನವನ್ನು ಪಡೆದುದಲ್ಲದೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ೯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಸಂಸ್ಥೆಯು ಉಡುಪಿಯ ರಾಜಾಂಗಣದಲ್ಲಿ ಈಗಾಗಲೇ ‘ನೃತ್ಯವಾಹಿನಿ’ ಹಾಗೂ ‘ನಾಟ್ಯಾರಾಧನ’ ಶಾಸ್ತ್ರೀಯ ನೃತ್ಯ ಸರಣಿ ಕಾರ್ಯಕ್ರಮಗಳನ್ನು ನೆರವೇರಿಸಿ, ಉದಯೋನ್ಮುಖ ಕಲಾವಿದರನ್ನು ಪರಿಚಯಿಸಿರುತ್ತದೆ.  ಉಡುಪಿಯಲ್ಲಿ ದಿ.ಪದ್ಮಿನಿ ರಾವ್‌ರವರ ನೇತೃತ್ವದಲ್ಲಿ ನೃತ್ಯ ಅಭಿನಯದ ಮೇಲೆ ಒಂದು ದಿನದ ಕಾರ್ಯಾಗಾರವನ್ನು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತಲ್ಲದೆ ಹಿರಿಯ/ಕಿರಿಯ ನೃತ್ಯ ಶಿಕ್ಷಕರಿಗೆ, ಹಿನ್ನೆಲೆ ಗಾಯಕರಿಗೆ, ವರ್ಣಾಲಂಕಾರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.   ವಿದುಷಿ ಯಶಾ ರಾಮಕೃಷ್ಣರವರ ಪುತ್ರಿ ಹಾಗೂ ಸಂಸ್ಥೆಯ ವಿದ್ಯಾರ್ಥಿನಿ ಕು. ದೀಕ್ಷಾಳಿಗೆ ಮೈಸೂರಿನ ನೃತ್ಯ ಕಲಾ ಪರಿಷತ್‌ನಿಂದ ನೃತ್ಯ ಕಲಾ ಸಿಂಧು ಪ್ರಶಸ್ತಿ, ಈ-ಟಿವಿಯ `ಎದೆ ತುಂಬಿ ಹಾಡುವೆನು’ ಪ್ರಶಸ್ತಿ ಲಭಿಸಿರುತ್ತದೆ.

ನೃತ್ಯ ನಿಕೇತನ, ಕೊಡವೂರು: ಉಡುಪಿ ತಾಲೂಕಿನ ಗ್ರಾಮೀಣ ಪ್ರದೇಶವಾದ ಕೊಡವೂರಿನಲ್ಲಿರುವ ನೃತ್ಯ ನಿಕೇತನವು ಕಳೆದ ೧೬ ವರ್ಷಗಳಿಂದ ಅನೇಕ ನೃತ್ಯ ಕಲಾವಿದರನ್ನು ರೂಪಿಸಿದ ಕೀರ್ತಿ ಪಡೆದಿದ್ದು, ಇದರ ಅನೇಕ ಶಾಖೆಗಳು ಉಡುಪಿಯ ವಿವಿಧೆಡೆಗಳಲ್ಲಿ ಸಾಂಪ್ರದಾಯಿಕ ಭರತನಾಟ್ಯವನ್ನು ಕಲಿಸುತ್ತಿದ್ದು, ನೃತ್ಯ ಕಲಿಯಬಯಸುವ ಆಸಕ್ತ ಮಕ್ಕಳಿಗೆ ವರದಾನವಾಗಿದೆ. ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್, ವಿದ್ವಾನ್ ಸುಧೀರ್ ರಾವ್ ಕೊಡವೂರು, ವಿದುಷಿ ಶ್ರೀಮತಿ ಮಾನಸಿ ಸುಧೀರ್ ಇವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಪಂಚವಟಿ, ಭಸ್ಮಾಸುರ ಮೋಹಿನಿ, ಭಕ್ತ ಪ್ರಹ್ಲಾದ, ಶ್ರೀಕೃಷ್ಣಂ ವಂದೇ ಜಗದ್ಗುರುಂ, ಹರಿಹರ ಮಹಾತ್ಮೆ, ಭೂ ಕೈಲಾಸ ಮುಂತಾದ ನೃತ್ಯ ರೂಪಕಗಳನ್ನು ದೇಶದ ಉದ್ದಗಲಕ್ಕೂ ನೀಡಿ ರಸಿಕರ ಮೆಚ್ಚುಗೆ ಗಳಿಸಿದ್ದಾರೆ.

ಈ ಸಂಸ್ಥೆಯು ನೃತ್ಯೋತ್ಸವ ಹಾಗೂ ಶ್ರೀ ಪೇಜಾವರ ಮಠದ ಪರ್ಯಾಯ ಕಾಲದಲ್ಲಿ ೨ ವರ್ಷಗಳ ಕಾಲ ‘ನೃತ್ಯ ಸೌರಭ’ ಶಾಸ್ತ್ರೀಯ ನೃತ್ಯ ಸರಣಿ ಹಾಗೂ  ಶ್ರೀ ಅದಮಾರು ಮಠದ ಪರ್ಯಾಯ ಕಾಲದಲ್ಲಿ ೨ ವರ್ಷಗಳ ಕಾಲ ನೃತ್ಯ ಕೌಸ್ತುಭ ಶಾಸ್ತ್ರೀಯ ನೃತ್ಯ ಸರಣಿ ಯನ್ನು ಆಯೋಜಿಸಿದ್ದು, ಸುಮಾರು ಮುನ್ನೂರಕ್ಕೂ ಮಿಕ್ಕಿದ ಕಲಾವಿದರನ್ನು ಪರಿಚಯಿಸಿದೆ.  ಉಡುಪಿಯಲ್ಲಿ ‘ವಿಶ್ವರೂಪ’ ಎನ್ನುವ ರಾಷ್ಟ್ರೀಯ ನೃತ್ಯೋತ್ಸವ ಮತ್ತು ಅಖಿಲ ಕರ್ನಾಟಕ ನೃತ್ಯ ಕಲಾವಿದರ ಸಮ್ಮೇಳನ ವನ್ನು ಸಂಯೋಜಿಸಿದ ಕೀರ್ತಿಯು ಈ ಸಂಸ್ಥೆಗೆ ಸಲ್ಲುತ್ತದೆ.  ಅಮೆರಿಕದ ಮತ್ತು ಫ್ರಾನ್ಸ್‌ನ ರಂಗ ಕಲಾವಿದರಿಗೆ ಭರತ ನಾಟ್ಯದ ಪ್ರಾಥಮಿಕ ಶಿಕ್ಷಣವನ್ನು ನೀಡಿದ ಕೀರ್ತಿಯೂ ಈ ಸಂಸ್ಥೆಗೆ ಸಲ್ಲುತ್ತದೆ.

ಶಾರದಾ ನೃತ್ಯಾಲಯ: ಉಡುಪಿ ನಗರ ಸಮೀಪದ ಮಾರ್ಪಳ್ಳಿ ಗ್ರಾಮ ಪರಿಸರದಲ್ಲಿ ಕ್ರಿಯಾಶೀಲವಾಗಿರುವ ಈ ನೃತ್ಯ ಸಂಸ್ಥೆ ಹತ್ತು ವರ್ಷಗಳಿಂದ ನೃತ್ಯಾಸಕ್ತರಿಗೆ ನೃತ್ಯ ಶಿಕ್ಷಣವನ್ನು ನೀಡುತ್ತಿದೆ. ಈ ಸಂಸ್ಥೆಯ ನೃತ್ಯ ನಿರ್ದೇಶಕಿ ಶ್ರೀಮತಿ ಪಾವನಾ ರಾಜೇಂದ್ರ ಇವರು ನೃತ್ಯ ಗುರು ದಿ.ಶ್ರೀ ರಾಧಾಕೃಷ್ಣ ತಂತ್ರಿ ಮತ್ತು ಕರ್ನಾಟಕ ಕಲಾ ತಿಲಕ ಡಾ. ವಸುಂಧರಾ ದೊರೆಸ್ವಾಮಿಯವರಲ್ಲಿ ನೃತ್ಯಶಿಕ್ಷಣವನ್ನೂ, ವಿದ್ವಾನ್ ಪಿ.ಮಧೂರು ಬಾಲಸುಬ್ರಮಣ್ಯಂ ಇವರಲ್ಲಿ ಸಂಗೀತ ಶಿಕ್ಷಣವನ್ನೂ ಪಡೆದಿರುತ್ತಾರೆ.

ಕಲಾನಿಧಿ : ಉಡುಪಿಯ ಕುಂಜಿಬೆಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾಸಂಸ್ಥೆ.  ಕಳೆದ ಹತ್ತು ವರ್ಷಗಳಿಂದ ನೃತ್ಯ ಕಲಾವಿದೆ ವಿದುಷಿ ಪ್ರವೀಣಾ ಮೋಹನ್ ಹಾಗೂ ವಿದುಷಿ ಪ್ರತಿಮಾ ಕಿರಣ್ ಸಹೋದರಿಯರು ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.  ಇಲ್ಲಿ ಸುಮಾರು ೪೦ರಿಂದ ೪೫ ಮಂದಿ ವಿದ್ಯಾರ್ಥಿಗಳು ನೃತ್ಯಾಭ್ಯಾಸ ಮಾಡುತ್ತಿದ್ದಾರೆ.  ಸ್ವತ: ಚಿತ್ರಕಲಾವಿದೆಯೂ ಆಗಿರುವ ವಿದುಷಿ ಪ್ರವೀಣಾ ಮೋಹನ್ ತಮ್ಮ ಪತಿ ಛಾಯಾಚಿತ್ರ ಪತ್ರಿಕೋದ್ಯಮಿ ಆಸ್ಟ್ರೋ ಮೋಹನ್ ಜೊತೆಯಲ್ಲಿ ಅನೇಕ ಚಿತ್ರಕಲಾ ಪ್ರದರ್ಶನ ನೀಡಿದ್ದಾರೆ.

ಶ್ರೀದೇವಿ ನಾಟ್ಯಾಂಜಲಿ, ಬ್ರಹ್ಮಾವರ: ಈ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿಯನ್ನು ನೀಡುತ್ತಿದೆ. ಈ ಸಂಸ್ಥೆಯನ್ನು ೧೯೯೮ರಲ್ಲಿ ಕಲಾವಿದೆ ವಿದುಷಿ ಶ್ರೀಮತಿ ಶ್ರದ್ಧಾರವರು ಸ್ಥಾಪಿಸಿದ್ದು, ಪ್ರಸ್ತುತ ಅವರ ತಂಗಿ ವಿದುಷಿ ಶ್ರೀಮತಿ ಶ್ರೀದೇವಿ ರಾಘವೇಂದ್ರ ಅವರ ನಿರ್ದೇಶನದಲ್ಲಿ ಮುನ್ನಡೆಯುತ್ತಿದ್ದು, ಸುಮಾರು ೭೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯಾಭ್ಯಾಸ ಮಾಡುತ್ತಿದ್ದಾರೆ.

ಶ್ರೀದೇವಿ ರಾಘವೇಂದ್ರ ಅವರು ತನ್ನ ೫ನೇ ವರ್ಷದಲ್ಲಿ ಸುರತ್ಕಲ್‌ನ ಶ್ರೀ ಚಂದ್ರಶೇಖರ ನಾವಡರಲ್ಲಿ ಭರತನಾಟ್ಯದ ಪ್ರಾಥಮಿಕ ಪಾಠವನ್ನು ಕಲಿತು, ಮುಂದೆ ಉಡುಪಿಯ ಭರತನಾಟ್ಯ ಕಲಾವಿಮರ್ಶಕರಾದ ಶ್ರೀ ನಾರಾಯಣ ಭಟ್ಟರ ಮತ್ತು ಕುಂದಾಪುರದ ಶ್ರೀನಿವಾಸ ಆಚಾರ್ಯರ ಮಾರ್ಗದರ್ಶನದಲ್ಲಿ ಮುನ್ನಡೆದರು.

ಮುಂದೆ ಮೈಸೂರಿನಲ್ಲಿ ಕರ್ನಾಟಕ ಕಲಾತಿಲಕ ಮೈಸೂರಿನ ಡಾ.ವಸುಂಧರಾ ದೊರೈಸ್ವಾಮಿಯವರಲ್ಲಿ ಪಂದನೂರು ಶೈಲಿಯ ನಾಟ್ಯಾಭ್ಯಾಸವನ್ನು ಮಾಡಿ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಮೈಸೂರು ವಿಭಾಗಕ್ಕೆ ಪ್ರಥಮ ಸ್ಥಾನದೊಂದಿಗೆ ತೇರ್ಗಡೆ ಹೊಂದಿದರು. ಪ್ರಸ್ತುತ ಶ್ರೀದೇವಿ ಅವರು ವಿವಾಹಾನಂತರ ಪತಿ ಶ್ರೀ ರಾಘವೇಂದ್ರ ತುಂಗರೊಡನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದು, ಅವರ ಶಿಷ್ಯೆಯರು ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಇವರಷ್ಟೇ ಅಲ್ಲದೆ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನ ಬಳಿಯ ನೃತ್ಯನಿಕೇತನದ ವಿದುಷಿ ಮಂಗಳಾ, ಅಮ್ಮುಂಜೆಯ ಭ್ರಮರೀ ನಾಟ್ಯಾಲಯದ ವಿದ್ವಾನ್ ಭವಾನಿ ಶಂಕರ, ಉಡುಪಿಯ ಸ್ವಾತಿ ಭಟ್ ಮುಂತಾದವರು ನೃತ್ಯ ದಾಸೋಹದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

(ಲೇಖಕರು ಕಲಾಸಕ್ತರು, ಬರಹಗಾರರು)

ಭಾರತೀಯ ನೃತ್ಯಕಲಾ ಪರಿಷತ್ :
ಭಾರತೀಯ ನೃತ್ಯಕಲಾ  ಪರಿಷತ್ : ದಿವಂಗತ  ಅಂಬಳೆ ಸುಬ್ಬರಾವ್  ಅವರಿಂದ ಸ್ಥಾಪಿತವಾದ  ನೃತ್ಯ-ಲಲಿತಕಲೆಗಳ  ತರಬೇತಿ ಸಂಸ್ಥೆ.  ಕೊಡಗಿನಲ್ಲಿ  ನೃತ್ಯದ ಕುರಿತಾಗಿ  ಆಸಕ್ತಿ ಮತ್ತು  ಶಿಕ್ಷಣ ಡಲು  ಪ್ರಾರಂಭಿಸಿದ  ಮೊದಲ ಸಮಗ್ರ  ಶಾಲೆ ಎಂದರೆ  ತಪ್ಪೇನಿಲ್ಲ.  ಕೊಡಗಿನಲ್ಲಿ  ನೃತ್ಯ ರಂಗಕ್ಕೆ  ಅವಿಸ್ಮರಣೀಯ  ಸೇವೆ ಸಲ್ಲಿಸಿದ  ಸುಬ್ಬರಾವ್ ಮತ್ತು  ಅವರ ಕುಟುಂಬ;  ನೃತ್ಯ ಮಾತ್ರವಲ್ಲದೆ  ಸಂಗೀತ, ಕೂಚುಪುಡಿ,  ಮೃದಂಗ, ಪಿಟೀಲು  ಮುಂತಾದ ಕ್ಷೇತ್ರದಲ್ಲಿ  ಹಲವು ಕಲಾವಿದರನ್ನು  ಕೊಡುಗೆಯಾಗಿ  ಕೊಟ್ಟಿದೆ. ಕೂಚಿಪುಡಿ  ಶೈಲಿಯ, ಭರತನಾಟ್ಯ  ಮತ್ತು ಯೋಗದ  ಪಟ್ಟುಗಳ ದೂಪಾರತಿ  ನೃತ್ಯ ರಂಗಕ್ಕೆ  ಇವರ ಕಾಣಿಕೆ  ಎಂದರೆ ತಪ್ಪೇನಿಲ್ಲ.

ದ್ವಾರಂ ವೆಂಕಟಸ್ವಾಮಿ  ನಾಯ್ಡು, ವರದಾರಾಜ  ಅಯ್ಯಂಗಾರ್,  ನಂಜನಗೂಡು ನಾಗರತ್ನಮ್ಮ  ಇವರ ಬಳಿಯಲ್ಲಿ  ಅಭ್ಯಸಿಸಿದ ಗುರು  ವಿದ್ವಾನ್ ಅಂಬಳೆ  ಸುಬ್ಬರಾಯರು  ಸಾಂಸ್ಕೃತಿಕವಾಗಿ  ಕೊಡಗನ್ನು ಬೆಳೆಸಿದವರು.  ನೃತ್ಯ ವಿದ್ವಾಂಸ  ವಿ. ಎಸ್. ಕೌಶಿಕ್  ಅವರ ಗೆಳೆಯರೂ,  ಸಮಕಾಲೀನರೂ ಆದ  ಸುಬ್ಬರಾಯರು,  ಕೊಡಗಿನಲ್ಲಿ  ಸಾಂಸ್ಕೃತಿಕ  ರಂಗದ ಅವಶ್ಯಕತೆ  ಮನಗಂಡರು.  ೧೯೭೨  ರ ಶಿವರಾತ್ರಿಯಂದು  ನೃತ್ಯಕಲಾ ಪರಿಷತ್ತನ್ನೂ  ಒಳಗೊಂಡಂತೆ ಕುಟುಂಬವನ್ನೇ  ಕಲಾಸೇವೆಗಾಗಿ  ಮುಡಿಪಿಟ್ಟರು.

ಇವರ ಪುತ್ರಿ  ಕುಮಾರಿ ಅಂಬಳೆ  ರಾಜೇಶ್ವರಿ ಅವರು  ಶಂಕರನಾರಾಯಣ್,  ಕೇರಳ ಕಲಾಮಂಡಲಂನ  ಚಿನ್ನಮ್ಮ, ಮೋಹನ್  ಭಾರ್ಗವ್, ವಿ.  ಎಸ್. ಕೌಶಿಕ್,  ಮಚಲೀಪಟ್ಟಣಂನ  ಭಾಗವತೀ ಕೃಷ್ಣಕುಮಾರ್  ಮುಂತಾದವರ ಗರಡಿಯಲ್ಲಿ  ಸಂಗೀತ, ಭರತನಾಟ್ಯ,  ಕೂಚುಪುಡಿಯನ್ನು  ಕರಗತ ಮಾಡಿಕೊಂಡು  ನೃತ್ಯ ಜಗತ್ತಿನ  ಸೇವೆಯನ್ನು ಮುಂದುವರೆಸಿದರೆ,  ಸುಬ್ಬರಾಯರ ಪುತ್ರ  ಸತ್ಯಪ್ರಸಾದ್  ಮೃದಂಗ ವಿದ್ವಾನ್  ಆಗಿ  ಪ್ರಸಿದ್ಧರು.  ಸತ್ಯಪ್ರಸಾದರ  ಪುತ್ರರಾದ ಹೇರಂಬ  -ಹೇಮಂತರೂ ಕೊಳಲು  ಕ್ಷೇತ್ರದಲ್ಲಿ‌ಈಗಾಗಲೇ  ಬಾಲ ಪ್ರತಿಭೆಗಳಾಗಿ  ಮಿಂಚುತ್ತಿದ್ದು,  ಪರಂಪರೆಯನ್ನು  ಮುಂದುವರೆಸುತ್ತಿದ್ದಾರೆ.

ಈ ಮೂರುವರೆ ದಶಕಗಳಲ್ಲಿ  ಸುಮಾರು ೧೮,೦೦೦  ವಿದ್ಯಾರ್ಥಿಗಳು  ಸಂಸ್ಥೆಯಿಂದ  ಶಿಕ್ಷಣ ಪಡೆದಿದ್ದು  ದೇಶ-ವಿದೇಶಾದ್ಯಂತ  ಯಶಸ್ಸು ದಾಖಲಿಸಿದ್ದಾರೆ.  ಭಾರತವನ್ನೂ ಒಳಗೊಂಡಂತೆ  ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್,  ದಕ್ಷಿಣ ಆಫ್ರಿಕಾ,  ಯು.ಎಸ್.ಎ ಇತ್ಯಾದಿ  ದೇಶಗಳಲ್ಲಿ ಪರಿಷತ್  ಒಟ್ಟು ೬೦೦ ಶಾಖೆಗಳನ್ನು  ಹೊಂದಿದೆ. ಪ್ರಸಕ್ತ  ಅಂಬಳೆ ರಾಜೇಶ್ವರಿಯವರು  ಹಾಸನದ ಶಾಖೆಯಲ್ಲಿ  ಶಿಕ್ಷಣ ನೀಡುತ್ತಿದ್ದರೆ,  ಪರಿಷತ್ತಿನ ಶಾಖೆ  ಮಡಿಕೇರಿ ಮತ್ತು  ಕೊಡಗಿನ ಒಳನಾಡುಗಳಲ್ಲಿ  ಮುಂದುವರೆದಿದೆ.  ಇವರ ಶಿಷ್ಯೆ  ಜಯಶ್ರೀ ಸುಮಾರು  ೮ ವರ್ಷಗಳ ಕಾಲ  ಮಡಿಕೇರಿಯಲ್ಲಿ  ತಮ್ಮದೇ ಆದ ನೃತ್ಯ  ತರಗತಿಯನ್ನು  ವೇದಾಂತಸಂಘದಲ್ಲಿ  ಮಾಡುತ್ತಾ ಬಂದಿರುತ್ತಾರೆ.

ನಾಟ್ಯನಿಕೇತನ  : ಪಂದನಲ್ಲೂರು  ಶೈಲಿಯ ಉಳ್ಳಾಲ  ಮೋಹನ್ ಕುಮಾರ್,  ರಾಜೇಶ್ವರಿ,  ಮುರಳೀಧರರಾವ್  ಅವರ ಶಿಷ್ಯೆ  ಶ್ರೀಮತಿ ವಿದುಷಿ  ವೀಣಾ ಕಾರಂತ್  ಅವರು ಈ ಸಂಸ್ಥೆಯ  ಸ್ಥಾಪಕ ನೃತ್ಯಗುರುಗಳು.  ೧೩ ವರ್ಷಗಳ ಕಾಲ  ಮಡಿಕೇರಿಯಲ್ಲಿ  ಸೇವೆ ಸಲ್ಲಿಸಿ,  ನಂತರ ಮಂಗಳೂರಿನಲ್ಲಿ  ನೆಲೆಸಿ ಚಂದ್ರದೀಪ  ನೃತ್ಯ ತರಬೇತಿ  ಶಾಲೆಯನ್ನು ಸ್ಥಾಪಿಸಿದ  ತರುವಾಯ, ಸುಮಾರು  ೬ ವರ್ಷಗಳಿಂದ  ಶ್ರೀಮತಿ ವಿನಯಾ  ಕೃಷ್ಣಮೂರ್ತಿ  ಅವರ ಮಾರ್ಗದರ್ಶನದಲ್ಲಿ  ಶ್ರೀ ಲಕ್ಷ್ಮೀ  ನರಸಿಂಹ ಕಲ್ಯಾಣ  ಮಂಟಪದಲ್ಲಿ ನಾಟ್ಯನಿಕೇತನ  ಮುನ್ನಡೆಯುತ್ತಿದೆ.

ವಿನಯಾ ಕೃಷ್ಣಮೂರ್ತಿ  ಮಂಗಳೂರಿನ ವಿದುಷಿ  ಕಮಲಾ ಭಟ್, ಮಂಡ್ಯದ  ವಿದುಷಿ ಚೇತನಾ  ರಾಧಾಕೃಷ್ಣ ಅವರ  ಗರಡಿಯಲ್ಲಿ ಪಳಗಿದವರು.  ಸುಮಾರು ೨೦ ವರ್ಷಗಳಿಂದ  ಸುಮಾರು ಸಾವಿರಕ್ಕೂ  ಮಿಕ್ಕಿ ವಿದ್ಯಾರ್ಥಿಗಳನ್ನು  ಪೋಷಿಸುತ್ತಾ,  ಮುನ್ನಡೆಸುತ್ತಾ  ಬಂದಿರುವ ಈ ಸಂಸ್ಥೆಯ  ವಿದ್ಯಾರ್ಥಿಗಳು  ಹಲವು ಸಾಧನೆಗಳಿಗೆ  ಮುನ್ನುಡಿ ಬರೆದಿದ್ದಾರೆ.

ಸೌರಭ ನೃತ್ಯ  ಕಲಾ ಪರಿಷತ್  : ಶ್ರೀಮತಿ ವಿದುಷಿ  ಶ್ರೀವಿದ್ಯಾ  ಮುರಳೀಧರ್(ರಾಮನ್)  ಅವರ ಕನಸಿನ ಕೂಸಾಗಿ  ಮೈ ತಳೆದದ್ದೇ  ಸೌರಭ. ಸುಮಾರು  ೧೫ ವರ್ಷಗಳ ಹಿಂದೆ  ವಿದುಷಿ ಅಂಬಳೆ  ರಾಜೇಶ್ವರಿ ಅವರಿಂದ  ಪ್ರಾಥಮಿಕ ವಿದ್ಯಾಭ್ಯಾಸ  ಪಡೆದು ಪಂದನಲ್ಲೂರು  ಶೈಲಿಯ ಖ್ಯಾತ  ನೃತ್ಯ ಗುರುಗಳಾದ  ಮುರಳೀಧರರಾವ್  ಅವರಲ್ಲಿ ವಿದ್ಯಾಭ್ಯಾಸ  ಕೈಗೊಂಡ ಶ್ರೀವಿದ್ಯಾ,  ನಾಡ-ಹೊರನಾಡ  ಸ್ಪರ್ಧೆ, ದೂರದರ್ಶನ  ಪ್ರದರ್ಶನಗಳಲ್ಲಿ  ಪ್ರಶಸ್ತಿ, ಸನ್ಮಾನ  ಪುರಸ್ಕೃತರು.  ಮುರಳೀಧರರಾಯರ  ಗ್ರಂಥ ’ನೃತ್ಯಲೋಕ’  ದ ನೃತ್ಯ ಕಲಾವಿದೆಯ  ಭಂಗಿಗಳ ಛಾಯಾಚಿತ್ರ  ಇವರ ಪ್ರತಿಭೆಗೆ  ಸಾಕ್ಷಿ ಎಂಬಂತಿದೆ.  		ಇಂಗ್ಲೀಷ್  ಸ್ನಾತಕೋತ್ತರ  ಪದವಿ ಪೂರೈಸಿ,  ಹಂಪಿ ವಿಶ್ವವಿದ್ಯಾನಿಲಯದಿಂದ  ಭರತನಾಟ್ಯ  ನಾಯಕ-ನಾಯಿಕಾ  ಭಾವಗಳ ಕುರಿತಾಗಿನ  ಪ್ರಬಂಧಕ್ಕೆ  ಪಿ‌ಎಚ್‌ಡಿ ಪದವಿ  ಪಡೆದಿದ್ದಾರೆ.  ಇವರ ಕಿರಿಯ ಸಹೋದರಿ  ಶ್ರೀಮತಿ ವಿದುಷಿ  ಶ್ರೀಧನ್ಯಾ ರಾಮನ್  ಇವರೂ ಅಕ್ಕನೊಂದಿಗೆ  ಒಡಗೂಡಿದ ಉತ್ತಮ  ಕಲಾವಿದೆ. ದಶಕಗಳ  ಹಿಂದೆ ಪುಟಾಣಿನಗರದ  ಬಳಿ ಪ್ರಾರಂಭವಾದ  ಈ ನೃತ್ಯ ಸಂಸ್ಥೆಯಲ್ಲಿ  ಸಾವಿರಕ್ಕೂ ಮಿಕ್ಕಿ  ವಿದ್ಯಾರ್ಥಿಗಳು  ತರಬೇತಿ ಪಡೆದು  ನಾಡಿನಾದ್ಯಂತ  ಮಿಂಚಿದ್ದಾರೆ.

ನೃತ್ಯ ನಿನಾದ  : ವಿದುಷಿ ನಿರ್ಮಲಾ  ಬೋಪಣ್ಣ ಅವರ  ನಿರ್ದೇಶನದಲ್ಲಿ  ಪೊನ್ನಂಪೇಟೆಯಲ್ಲಿ  ದಶಕಗಳ ಹಿಂದೆ  ಬೆಳೆದು ಬಂದ  ಸಂಸ್ಥೆ, ಸಾವಿರಕ್ಕೂ  ಹೆಚ್ಚು ವಿದ್ಯಾರ್ಥಿಗಳಿಗೆ  ಸಂಗೀತ-ನೃತ್ಯ-ತಾಳವಾದ್ಯಗಳಲ್ಲಿ  ತರಬೇತಿ ನೀಡುತ್ತಾ,  ರಾಜ್ಯಮಟ್ಟದ  ಸ್ಪರ್ಧೆಗಳಿಗೆ  ಆತಿಥೇಯವಾಗುತ್ತಾ  ಬಂದಿದೆ. ಮೈಸೂರು  ವಿಶ್ವವಿದ್ಯಾನಿಲಯದಿಂದ  ಸಂಗೀತ ಸ್ನಾತಕೋತ್ತರ  ಪದವಿಯನ್ನು ಉನ್ನತ  ದರ್ಜೆಯಲ್ಲಿ  ಪೂರೈಸಿದ ಆಕಾಶವಾಣಿ-ದೂರದರ್ಶನ  ಕಲಾವಿದೆ ಇವರು.  ಇವರ ವಿದ್ಯಾರ್ಥಿಗಳು  ನಾಡಿನಾದ್ಯಂತ  ಮೆಚ್ಚುಗೆ ಗಳಿಸಿದ್ದಾರೆ.

ನೃತ್ಯ ಮಂಟಪ  ಟ್ರಸ್ಟ್ : ಕಳೆದ  ೩ ವರ್ಷಗಳಿಂದೀಚೆಗೆ  ಶ್ರೀಮತಿ ವಿದುಷಿ  ರೂಪಾ ಶ್ರೀಕೃಷ್ಣ  ಉಪಾಧ್ಯ ಅವರ  ನೇತೃತ್ವದಲ್ಲಿ  ಮಡಿಕೇರಿಯ ಕಾವೇರಿ  ಬಡಾವಣೆಯಲ್ಲಿ  ಮುನ್ನಡೆಯುತ್ತಿರುವ  ಟ್ರಸ್ಟ್, ಕಲಾಕ್ಷೇತ್ರ  ಪದ್ಧತಿಯಲ್ಲಿ  ಹಲವು ವಿದ್ಯಾರ್ಥಿಗಳಿಗೆ  ಮಾರ್ಗದರ್ಶನವೀಯುತ್ತಾ  ಬಂದಿದೆ. ಪ್ರಾರಂಭವಾದ  ಅಲ್ಪ ಕಾಲದಲ್ಲಿಯೇ  ಈ ಸಂಸ್ಥೆಯ ವಿದ್ಯಾರ್ಥಿಗಳು  ನಾಡಿನಾದ್ಯಂತ  ಮಿಂಚಿ ಉತ್ತಮ  ಯಶಸ್ಸು ಗಳಿಸಿದ್ದಾರೆ.

ಶಿವಮೊಗ್ಗದ  ನಾಟ್ಯಗುರು ವಿದ್ವಾನ್  ಜನಾರ್ಧನ, ಬೆಂಗಳೂರಿನ  ವಿಶ್ರುತ ಪರ್  ಫಾರ್ಮಿಂಗ್ ಆರ್ಟ್ಸ್  ನ ವಿದುಷಿ ಬಿ.  ಕೆ. ವಸಂತಲಕ್ಷ್ಮಿ  ಅವರ ಮಾರ್ಗದರ್ಶನದಲ್ಲಿ  ಪಳಗಿ, ಬೆಂಗಳೂರು  ವಿಶ್ವವಿದ್ಯಾನಿಲಯದಿಂದ  ಭರತನಾಟ್ಯ ಸ್ನಾತಕೋತ್ತರ  ಪದವಿಯನ್ನು ಉನ್ನತ  ದರ್ಜೆಯಲ್ಲಿ  ಪಡೆದವರು. ಮೂಲತಃ  ಶಿವಮೊಗ್ಗದವರಾದ  ರೂಪಾ ಉಪಾಧ್ಯ,  ಗುರುವಾಗಿ ಮತ್ತು  ಕಲಾವಿದೆಯಾಗಿ  ದೂರದರ್ಶನ, ಹೊರನಾಡ  ಕನ್ನಡಿಗರಿಂದಲೂ  ಮೆಚ್ಚುಗೆಗೆ  ಪಾತ್ರರಾಗಿ ಹಲವು  ಸನ್ಮಾನ ಪುರಸ್ಕೃತರು.

ಭಾರತೀಯ ವಿದ್ಯಾಭವನ  : ಭಾರತೀಯ ಲಲಿತಕಲೆಗಳ  ಬಗ್ಗೆ ಶಿಕ್ಷಣ  ಮತ್ತು ಅಧ್ಯಯನದ  ಮನೋಭಾವ ಬೆಳೆಸುವ  ದೇಶಾದ್ಯಂತ ಹಬ್ಬಿದ  ಭಾರತೀಯ ವಿದ್ಯಾಭವನದ  ಕೊಡಗು ಶಾಖೆಯು  ಹಲವು ಕಾರ್ಯಾಗಾರ,  ಉಪನ್ಯಾಸಗಳನ್ನು  ನಡೆಸುತ್ತಾ ಬಂದಿದೆ.  ಸ್ಪಿಕ್ ಮೆಕೆಯ  ಹಲವು ಕಾರ್ಯಕ್ರಮಗಳಿಗೆ  ಶ್ರೀ ಓಂಕಾರೇಶ್ವರ  ದೇವಸ್ಥಾನದ ಬಳಿಯ  ವಿದ್ಯಾಭವನ ತನ್ನ  ಆವರಣವನ್ನು ಆಸರೆಯಾಗಿ  ನೀಡಿದೆ. ಪ್ರಾರಂಭಿಕ  ಗುರುಗಳಾಗಿ ಮಂಡ್ಯದ  ಗುರು ಚೇತನಾ  ರಾಧಾಕೃಷ್ಣ ವಿದ್ಯಾರ್ಥಿಗಳಿಗೆ  ತರಬೇತಿಯನ್ನಿತ್ತರೆ,  ಪ್ರಸಕ್ತ ವಾಣಿ  ಅವರು ಗುರುವಾಗಿ  ಮುಂದುವರಿಯುತ್ತಿದ್ದಾರೆ.

ಇವರಷ್ಟೇ ಅಲ್ಲದೆ  ಮಾದಾಪುರದ ಶ್ರೀ  ಶಂಕರಯ್ಯ ಮಾಸ್ಟರ್,  ವಿರಾಜಪೇಟೆಯ  ಶ್ರೀನಿವಾಸ್  ಅವರದ್ದು ಕೊಡಗಿನ  ನೃತ್ಯ ಗುರುಗಳ  ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ  ಕೇಳಿ ಬರುವ ಹೆಸರು.  ಜೊತೆಗೆ ಬಾಲಕೃಷ್ಣ,  ಭಾರತೀ ರಮೇಶ್,  ಪಕ್ಕದ ಜಿಲ್ಲೆಗಳಿಂದ  ಬಂದು ನೃತ್ಯ  ಕಲಿಸುವ ಹಲವು  ಗುರುಗಳು ಜಿಲ್ಲೆಯ  ಕಲೆಯ ಸೊಬಗನ್ನು  ಹೆಚ್ಚಿಸುತ್ತಿದ್ದಾರೆ.