: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ರಂಗ ಭ್ರಮರಿ

ಮಹಾತ್ಮಾಗಾಂಧಿ ಮತ್ತು ನೃತ್ಯಕಲೆ
ಆಗಿನ್ನೂ ನೃತ್ಯವು ತನ್ನ ಕತ್ತಲೆಯ ಯುಗದಿಂದ ಬಿಡುಗಡೆ ಪಡೆದುಕೊಳ್ಳುವ ಹಾದಿಯಲ್ಲಿತ್ತು. ನೃತ್ಯಕ್ಕೆ ಮುಕ್ತಸ್ವಾತಂತ್ರ್ಯ ಒದಗುತ್ತಲಿತ್ತಷ್ಟೇ ! ಮಹಾತ್ಮಾಗಂಧೀಜಿ ೧೯೩೫ರಲ್ಲಿ ತಮ್ಮ ವಾರ್ಧಾ ಆಶ್ರಮದಲ್ಲಿದ್ದಾಗ ಒಬ್ಬ ಅಸ್ಸಾಮಿನ ನೃತ್ಯಾಚಾರ್ಯರು ಆಗಮಿಸಿ ಅಲ್ಲಿನ ವಿದ್ಯಾರ್ಥಿನಿಲಯದ ಆವರಣದಲ್ಲಿ ನೃತ್ಯವನ್ನು ಪ್ರದರ್ಶಿಸಿದರು. ಗಾಂಧಿಯೂ ಸೇರಿದಂತೆ ಆಶ್ರಮದಲ್ಲಿದ್ದವರೆಲ್ಲರೂ ಆ ನೃತ್ಯವನ್ನು ವೀಕ್ಷಿಸಿದರು. ಅಂದು ಗಾಂಧಿಯವರ ಮೌನದಿನವಾದ್ದರಿಂದ( ಸೋಮವಾರ) ನೃತ್ಯ ಕಾರ್ಯಕ್ರಮದ ತರುವಾಯ ಏನೂ ಮಾತನಾಡಲಿಲ್ಲ. ಮರುದಿನ ಒಬ್ಬ ಆಶ್ರಮವಾಸಿಯು ಸಂಜೆ ಪ್ರಾರ್ಥನೆಯಾದ ನಂತರ ಮಹಾತ್ಮರ ಬಳಿ ಹೋಗಿ ‘ನಿನ್ನೆ ಆಶ್ರಮದಲ್ಲಿ ನೃತ್ಯ ಪ್ರದರ್ಶನ ನಡೆಯಿತಲ್ಲ, ಅದು ಸರಿಯೇ? ನಿಮ್ಮ ಅಭಿಪ್ರಾಯವೇನು’ ಎಂದು ಕೇಳಿದ. ಮಹಾತ್ಮರು ಅದಕ್ಕೆ ಉತ್ತರವಾಗಿ ಹೀಗೆ ನುಡಿದರು.

‘ನಿನ್ನ ತಿಳಿವಳಿಕೆಯಲ್ಲಿ ನಿನ್ನೆ ನಡೆದ ನೃತ್ಯವು ಆಶ್ರಮಕ್ಕೆ ತಕ್ಕುದಲ್ಲ. ಇತ್ತೀಚೆಗೆ ಜನರ ಮನಸ್ಸಿನಲ್ಲಿ ನೃತ್ಯಕಲೆಯ ವಿಷಯದಲ್ಲಿ ಒಂದು ದುರ್ಭಾವನೆಯು ಉಂಟಾಗಿದೆ. ನರ್ತನ, ಗಾನ ಇವು ಕೀಳ್ತರಗತಿಯ ಜನರ ಚರ್ಯೆಯೆಂದೂ, ಸಭ್ಯರಾದವರು ಇದರಲ್ಲಿ ಭಾಗವಹಿಸುವುದು ಅಗೌರವವೆಂದೂ ತಿಳಿದಿದ್ದೇವೆ. ಇದಕ್ಕೆ ಕಾರಣವೇನೆಂದರೆ ನಮ್ಮ ದೇಶದಲ್ಲಿ ಹಲವು ವರ್ಷಗಳಿಂದ ನೃತ್ಯ, ಗಾನ, ಅಭಿನಯಗಳು ದುರಾಚಾರದ ಜೊತೆಯಲ್ಲಿ ಬೆರೆತುಹೋಗಿದೆ. ಇದರಿಂದಲೇ ಅನೇಕಜನರು ಅದರ ಮಾತೆತ್ತುತ್ತಲೇ ಗಾಬರಿಗೊಳ್ಳುತ್ತಾರೆ. ಆದರೆ ವಸ್ತುತಃ ವಿಚಾರ ಮಾಡಿದರೆ ಈ ಗಾಬರಿಗೆ ಕಾರಣವಿಲ್ಲ.

ಸಂಗೀತವು ಮಾನವ ಜೀವನದ ಸುಂದರ ಹಾಗೂ ಮಹತ್ತ್ವಪೂರ್ಣವಾದ ವಸ್ತು. ನಮ್ಮ ವಿದ್ವಾಂಸರು ಸಂಗೀತ, ಸಾಹಿತ್ಯ ಕಲಾವಿಹೀನನಾದ ಮನುಷ್ಯನು ಬಾಲವಿಲ್ಲದ ಒಂದು ಪಶು ಮಾತ್ರ’ ಎಂದು ಹೇಳಿದ್ದಾರೆ. ನೃತ್ಯವು ಸಂಗೀತದ ಬಹು ಮುಖ್ಯವಾದ ಅಂಗ. ನೃತ್ಯಕಲೆಯು ಒಂದು ಸ್ವರ್ಗೀಯ ಕಲೆ. ಸಂಗೀತದಲ್ಲಿ ಹೇಗೆ ಕಾಲವು ಮುಖ್ಯವೋ ಹಾಗೆಯೇ, ಏಕೆ ಇನ್ನೂ ಹೆಚ್ಚಾಗಿ ನೃತ್ಯಕಲೆಯಲ್ಲಿಯೂ ಕಾಲಕ್ಕೆ ಪ್ರಮುಖತೆಯುಂಟು. ನಮ್ಮ ಜೀವನದಲ್ಲಂತೂ ತಾಳವ್ಯವಸ್ಥೆಯ ಮಹತ್ತ್ವವು ಅಷ್ಟಿಷ್ಟಲ್ಲ. ಪ್ರಗತಿಶೀಲವಾದ ಜೀವನಕ್ಕೆ ತಾಳಬದ್ಧವಾದ ಕ್ರಿಯೆಗಳು ಅತ್ಯಾವಶ್ಯಕ. ನೃತ್ಯಕಲೆಯ ಮುಕದಿಂದ ಮನುಷ್ಯನು ಈ ಗುಣವನ್ನು ಗ್ರಹಿಸಬೇಕಾಗಿದೆ.

ಎರಡನೆಯದೆಂದರೆ ನೃತ್ಯಕಲೆಯು ಶರೀರ ವಿಕಾಸಕ್ಕೆ, ಅಂಗಗಳ ಸುಸಂಘಟನೆಗೆ ತುಂಬಾ ಅಗತ್ಯ. ನೃತ್ಯಕಲೆಯನ್ನು ಕಲಿಯುವ ಸ್ತ್ರೀ ಅಥವಾ ಪುರುಷನ ಶರೀರದಲ್ಲಿ ಒಂದು ಬಗೆಯ ದಾರ್ಢ್ಯ, ಸ್ಫೂರ್ತಿ, ಸ್ವಾಧೀನ ಅಧಿಕವಾಗಿರುತ್ತದೆ. ಸ್ತ್ರೀಯರಿಗೆ ಇದು ವಿಶೇಷ ಲಾಭವನ್ನುಂಟುಮಾಡುವುದು. ಆದರೆ ಈ ದಿನ ನಮ್ಮ ದೇಶದಲ್ಲಿ ಹಾಗೂ ಸಮಾಜದಲ್ಲಿ ಜನರು ನೃತ್ಯಕಲೆಯನ್ನು ಉಪೇಕ್ಷಿಸುವರು. ಇಂಥವರು ಮನೆಯಲ್ಲಿ ತಮ್ಮ ಮಕ್ಕಳಿಗೆ ನರ್ತನ, ಗಾನ, ಅಭಿನಯಗಳನ್ನು ಕಲಿಸಲು ಹೆದರುತ್ತಾರೆ. ಮಕ್ಕಳೆಲ್ಲಿ ದುರಾಚಾರದಲ್ಲಿ ಅಡಿಯಿಡುವರೋ ಎಂದು ಅವರಿಗೆ ಭಯವಿರುತ್ತದೆ. ಆದರೆ ನನ್ನ ತಿಳಿವಿನಲ್ಲಿ ಈ ಬಗೆಯ ಭಯಕ್ಕೆ ಕಾರಣವಿಲ್ಲ. ಮಾನವಜೀವನದ ಪೂರ್ಣವಿಕಾಸಕ್ಕೆ ಸಂಗೀತ ಮತ್ತು ಅದರ ಮುಖ್ಯಾಂಗವಾದ ನೃತ್ಯಕಲೆಯ ಜ್ಞಾನವು ಅತ್ಯಾವಶ್ಯಕ.

ಜಪಾನ್, ಜರ್ಮನಿ ಮುಂತಾದ ದೇಶಗಳಲ್ಲಿ ನೃತ್ಯಕಲೆಯು ತುಂಬಾ ಅಭಿವೃದ್ಧಿಗೆ ಬಂದಿದೆ. ಅಲ್ಲಿಯ ಸ್ತ್ರೀಪುರುಷರು ಅದರ ಮೂಲಕ ಆನಂದವನ್ನೂ, ಆತ್ಮವಿಕಾಸವನ್ನೂ ಹೊಂದುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿಯೂ ಹೀಗೆಯೇ ಆಗುವುದಿಲ್ಲವೆಂಬ ಮಾತು ನಿಶ್ಚಯ. ಹಲವೆಡೆಗಳಲ್ಲಿ ಜನರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನೃತ್ಯವನ್ನು ವಿಷಯವಾಸನೆ, ಭೌತಿಕಸುಖಗಳಿಗೆ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ.ಆದರೆ ನಮಗೆ ಅವರ ಸಂಬಂಧ ಬೇಡ’ಎಂದರು.

ಇಷ್ಟರಲ್ಲೇ ಆತನು ಮತ್ತೆ ಒಂದು ಪ್ರಶ್ನೆಯನ್ನು ಕೇಳಿದ- ‘ಬಾಪೂಜಿಯವರೇ, ತಾವು ಹಿಂದೆ ಹೊರದೇಶದ ಸಮ್ಚಾರಸಮಯದಲ್ಲಿ ನಾಟಕಾದಿಗಳನ್ನು ನೊಡುವುದನ್ನು ನಿಷೇಧಿಸಿದ್ದಿರಿ; ಅಲ್ಲದೆ ನಾಟಕ ನೊಡಿದ್ದರಿಂದ ತಮಗೆ ಬೇಸರ ಉಂಟಾಯಿತು. ಅದಕ್ಕೆ ಕಾರಣವೇನು? ನಾಟಕದಲ್ಲೂ ಒಳ್ಳೆಯ ನೃತ್ಯ, ಗಾನ, ಅಭಿನಯಗಳು ಇರುವುದಿಲ್ಲವೇ? ಅದನ್ನು ನೋಡುವುದರಿಂದ ತಪ್ಪೇನು?’

ಆಗ ಮಹಾತ್ಮರು – ‘ನಾನು ಶೋಕಿಗಾಗಿ ಆಡುವ ನಾಟಕಗಳಿಗೆ ವಿರೋಧಿ.ನನಗೆ ಶೋಕಿಗಾಗಿ ಆಡುವವರನ್ನು ಕಂದರೆ ಸೇರದು. ಅದಕ್ಕೆ ಕಾರಣವೇನೆಂದರೆ ಅವರ ನಾಟಕಗಲಲ್ಲಿ ಕಲೆಯು ಕಲಾವಶೇಷವಾಗಿ ಹೋಗಿರುವುದು. ಮೇಲಿನ ರಂಗು, ಥಳುಕು-ಬೆಡಗು ಇವೇ ಹೆಚ್ಚಿದ್ದು ಇದಕ್ಕೆ ಪ್ರಾಧಾನ್ಯ ಕೊಡುವರು. ಆದ್ದರಿಂದ ನಾವು ಅಂಥ ನಾಟಕಗಳನ್ನು ಬಿಡಬೇಕು. ಆ ನಾಟಕಗಳನ್ನು ನೋಡುವುದರಿಂದಲೇ ನಮ್ಮ ವಿಕಾರ, ವಿಷಯವಾಸನೆ ಇವು ಉತ್ತೇಜಿತವಾಗುವವು. ಮನಸ್ಸು ನಮ್ಮನ್ನು ಮಹಾಪತನಕ್ಕೆ ಒಯ್ಯುವುದು. ಆಶ್ರಮದಲ್ಲಿ ನಾವು ಇಂಥ ವರ್ತನೆಗಳಿಗೆ ವಿರುದ್ಧವಾದ ಇಂದ್ರಿಯ ನಿಗ್ರಹ, ಸಾತ್ತ್ವಿಕತೆ ಮುಂತಾದವುಗಳನ್ನು ಹೊಂದಲು ಯತ್ನಿಸುತ್ತಿದ್ದೇವೆ. ಹೀಗಿರುವಾಗ ಅಂತಹ ‘’ಬಜಾರಿ ನಾಟಕಗಳು’’ ಖಂಡಿತ ನಮಗೆ ತ್ಯಾಜ್ಯವಾದವು. ಯಾವ ನಾಟಕದ ಧ್ಯೇಯವು ನಿಜವಾದ ಕಲೆಯನ್ನು ತೋರಿಸುವುದೋ, ವಸ್ತವಿಕವಾದ ಆನಂದವನ್ನುಂಟುಮಾಡುವುದೋ, ಸಾತ್ತ್ವಿಕವಾದ ಮನೋರಂಜನೆಯನ್ನುಂಟುಮಾಡುವುದೋ ಅಂತಹ ನಾಟಕಗಳು ನಮಗೆ ಯೋಗ್ಯವಾದವು. ನಾವು ಆ ನಾಟಕಗಳಿಗೆ ಸ್ವಾಗತಕೊಟ್ಟು ಬರಮಾಡಿಕೊಳ್ಳುತ್ತೇವೆ.

ಕಲ್ಕತ್ತೆಯಲ್ಲಿ ಕಾಂಗ್ರೆಸ್ ಮಹಾಸಭೆಯು (೧೯೨೮)ನಡೆದ ಸಮಯದಲ್ಲಿ ಕವಿವರ್ಯ ರವೀಂದ್ರನಾಥ ಠಾಗೋರರ “ಪೋಸ್ಟ್ ಆಫೀಸ್” (ಢಾಕ್ ಘರ್) ನೃತ್ಯರೂಪಕ ನಾಟಕವನ್ನು ಪ್ರದರ್ಶಿಸಿದರು. ಆ ನಾಟಕದಲ್ಲಿ ಸ್ವತಃ ಠಾಗೋರರೇ ರಂಗಭೂಮಿಯ ಮೆಲೆ ಬಂದು ತಮ್ಮ ಅಸಾಧಾರಣವಾಗಿ ಅಭಿ‌ಅನಯಿಸಿದಾಗ ದರ್ಶಕರಲ್ಲಿ ಶಾಂತಿಯು ನೆಲೆಸಿತ್ತು. ಪ್ರತಿಯೊಬ್ಬರೂ ಮಂತ್ರಮುಗ್ಧರಾಗಿ ಆ ಅಲೌಕಿಕ ಭಾವದ ರಸಾಸ್ವಾದನೆಯನ್ನು ಮಾಡುತ್ತಿದ್ದರು. ನಾನೂ ಬೆಪ್ಪಾಗಿ ಅವರ ಆ ಅದ್ಭುತ ಕಲಾನೈಪುಣ್ಯವನ್ನು ನೋಡುತ್ತಿದ್ದೆ. ಇಂಥ ನೃತ್ಯ ಅಭಿನಯಗಳೇನು ತ್ಯಾಜ್ಯವೇ? ಇಲ್ಲ, ಎಂದಿಗೂ ಇಲ್ಲ. ಕವಿವರ್ಯರ ನೃತ್ಯವನ್ನು ನೋಡಿ ಯಾರ ಮನಸ್ಸು ತಾನೇ ರೂಪಾಂತರವಾಗದು? ಯಾರ ಮನದಲ್ಲಿಯೂ ವಿಷಯವಾಸನೆಯು ಜಾಗೃತವಾಗದು.

ಭಕ್ತ ಶಿರೋಮಣಿ ಮೀರಾಬಾಯಿಯು ತನ್ನ ದೇವರಲ್ಲಿ ತಲ್ಲೀನಳಾಗಿ ಭಕ್ತಿಯಿಂದ ನರ್ತಿಸುತ್ತಿದ್ದಾಗ ಅಲ್ಲಿ ವಿಷಯವಾಸನೆಯು ಯಾರಿಗೂ ಕಾಣದು. ಅದನ್ನು ನೋಡಿ ಯಾರ ಮನಸ್ಸು ತಾನೇ ಪೂತ(ಸ್ವಚ್ಛ)ವಾಗದಿರದು? ಆಕೆಯ ಆ ಭಕ್ತ ನರ್ತನದಲ್ಲಿ ಮೇಲ್ತರಗತಿಯ ಸಾತ್ತ್ವಿಕತೆ, ತಲ್ಲೀನತೆಗಳಿದ್ದವು. ಕಲೆಯಂತೂ ತಾನೇ ತಾನಾಗಿ ಎದ್ದು ಕಾಣುತ್ತಿತ್ತು. ಇಂತಹ ಉತ್ತಮ ಕಾಲಾದ್ಯೋತಕವಾದ ನರ್ತನವು ತ್ಯಾಜ್ಯವೂ, ಉಪೇಕ್ಷಣೀಯವೂ ಎಂತಾದೀತು? ನಾವು ಕಲೆಯ ಸ್ವರೂಪವನ್ನೂ, ಉತ್ತಮ ನಾಟ್ಯಗೀತಗಳನ್ನೂ ಅರಿತು ಮೀರಾಬಾಯಿಯಂತೆ ಭಕ್ತಿಯಲ್ಲಿ ತಲ್ಲೀನರಾಗಿ ಕುಣಿಯೋಣ ಬನ್ನಿ, ಎಲ್ಲರನ್ನೂ ಸೇರಿಸುತ್ತಾ ನಿಂತು ಕಾಲಬದ್ಧವಾಗಿ, ಲಯಬದ್ಧವಾಗಿ ಕುಣಿಯೋಣ’ ಎಂದರು.

( ಲೇಖಕರು ಹಿರಿಯ ಚಿಂತಕರೂ, ಬೆಂಗಳೂರು ನಿವಾಸಿ.)

( ಆಧಾರ : ‘ರಂಗಭೂಮಿ ಮಾಸಪತ್ರಿಕೆ. ಜನವರಿ ೧೯೩೬. ಪುಟ ೬೫-೬೭,

ಸಂಪಾದಕರು : ಎಂ.ಎಸ್.ಸುಬ್ರಹ್ಮಣ್ಯ ಶಾಸ್ತ್ರಿಗಳು)

ನೃತ್ಯ ನಾಟಕಗಳಾಗಿ ಕನ್ನಡ ಕಾವ್ಯ : ಒಂದು ಅವಲೋಕನ
ನೃತ್ಯವನ್ನು ಪ್ರಧಾನವಾಗಿರಿಸಿಕೊಂಡು ಸಂಗೀತ, ನಾಟಕ, ಪರಿಕರಗಳೊಂದಿಗೆ ಒಂದು ಕತೆಯನ್ನು ರಂಗದಮೇಲೆ ಪ್ರಯೋಗಿಸುವ ಕಲಾಪ್ರಕಾರವನ್ನು ನೃತ್ಯನಾಟಕವೆಂದು ಕರೆಯಬಹುದು. ಸಂಗೀತವೇ ಪ್ರಧಾನವಾದಾಗ ಅದನ್ನು ಗೀತನಾಟಕ ಅಥವಾ ಗೇಯನಾಟಕವೆಂದು ಕರೆಯುತ್ತಾರೆ. ಪಾಶ್ಚಿಮಾತ್ಯರು ಈ ಗೀತನಾಟಕಗಳನ್ನು ಒಪೇರಾಗಳೆಂದು ಕರೆಯುತ್ತಾರೆ. ಭಾರತದಲ್ಲಿ ಗೀತನಾಟಕಗಳು ಹಾಗೂ ನೃತ್ಯ ನಾಟಕಗಳಲ್ಲಿನ ವ್ಯತ್ಯಾಸ ‘ತೀರ ಅಲ್ಪವಾಗಿದ್ದು ಒಂದು ಕಲಾರೂಪ ಇನ್ನೊಂದು ಕಲಾರೂಪಕ್ಕೆ ಸುಲಭವಾಗಿ ಹೊರಳಬಹುದಾಗಿದೆ’*(೧). ಭಾರತದಲ್ಲಿ ಗೀತನಾಟಕ ಮತ್ತು ಗೇಯನಾಟಕಗಳು ಒಂದೇ ನಾಣ್ಯದ ಎರಡುಮುಖದಂತೆ ಪ್ರಯೋಗಿಸಲ್ಪಡುತ್ತಿದೆ. ‘ಗೇಯನಾಟಕದ ಮೂಲ ಜನಪದ’*(೨)ಆಗಿದ್ದು ಇದರ ಪ್ರಾಚೀನತೆಯನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ.

ಸುಮಾರು ಕ್ರಿ.ಪೂ. ಎರಡನೇ ಶತಮಾನದಿಂದ ಕ್ರಿ.ಶ. ಆರನೇ ಶತಮಾನದ ಕಾಲಾವಧಿಯಲ್ಲಿ ರಚಿತವಾದ ಭರತನ ನಾಟ್ಯಶಾಸ್ತ್ರದಲ್ಲಿನ ನಾಟ್ಯಸಂಪ್ರದಾಯವು ಗೀತ, ವಾದ್ಯ, ನೃತ್ಯ ಹಾಗೂ ನಾಟಕದ ಅಂಶಗಳನ್ನೊಳಗೊಂಡ ರಂಗಪ್ರಯೋಗವಾಗಿದೆ. ಇದನ್ನು ನೃತ್ಯನಾಟಕವೆಂದೇ ಪರಿಗಣಿಸಬಹುದಾಗಿದ್ದು, ತನ್ಮೂಲಕ ಐತಿಹಾಸಿಕವಾಗಿ ಭಾರತದಲ್ಲಿನ ನೃತ್ಯನಾಟಕದ ಪ್ರಾಚೀನತೆಯನ್ನು ನಿರ್ಧರಿಸ ಬಹುದಾಗಿದೆ. ನಾಟ್ಯಶಾಸ್ತ್ರದ ರಚನೆಯ ಕಾಲಘಟ್ಟಕ್ಕೂ ಮೊದಲೇ ಈ ಕಲಾಪ್ರಕಾರವು ಸಾಕಷ್ಟು ಪ್ರೌಢಿಮೆ ಪಡೆದಿರುವುನ್ನು ಖಚಿತವಾಗಿ ಊಹಿಸಬಹುದಾಗಿದೆ.

‘೧೨ನೇ ಶತಮಾನದಲ್ಲಿ ಜಯದೇವ ಕವಿಯಿಂದ ರಚನೆಗೊಂಡ “ಗೀತಗೋವಿಂದ” ಐತಿಹಾಸಿಕವಾಗಿ ಭಾರತದ ಮೊಟ್ಟಮೊದಲ ಗೀತನಾಟಕವೆಂದು ಗುರುತಿಸಲ್ಪಟ್ಟಿದೆ.*(೩)

‘೧೭ನೇ ಶತಮಾನದ ತೀರ್ಥನಾರಾಯಣರಿಂದ ರಚಿತವಾದ “ಕೃಷ್ಣಲೀಲಾತರಂಗಿಣಿ”, ಸ್ವಾತಿತಿರುನಾಳ್ ಮಹಾರಾಜರಿಂದ ರಚಿತವಾದ ಕುಚೇಲೊಪಾಖ್ಯಾನ, ಅಜಮಿಳೋಪಾಖ್ಯಾನ, ೧೮ನೇ ಶತಮಾನದ ಶ್ರೀ ತ್ಯಾಗರಾಜರ ಪ್ರಹ್ಲಾದ ಭಕ್ತಿವಿಜಯಂ, ನೌಕಾಚರಿತ್ರಂ, ಸುಮಾರು ಅದೇಕಾಲಕ್ಕೆ ಸೇರಿದ ಗೋಪಾಲ ಕೃಷ್ಣ ಭಾರತಿಯಾರ್‌ರವರ ನಂದನಾರ್ ಚರಿತ್ರಂ, ಅರುಣಾಚಲ ಕವಿಯ ರಾಮನಾಟಕಂ’*(೪) ಸೇರಿದಂತೆ ದೇಶದಾದ್ಯಂತ ಗೀತನಾಟಕಗಳ ರಚನೆಗಳು ಹಾಗೂ ಪ್ರಯೋಗಗಳು ನಡೆದುಬಂದಿವೆ.

*ಕನ್ನಡ ಗೀತನಾಟಕಗಳ ಅಧ್ಯಯನ. *೧,ಒಂದನೇ ಅಧ್ಯಾಯ, *೩ ಪುಟ-೬೭. *೪ ಪುಟ-೩೮

*ನೃತ್ಯಕಲೆ. *ಪುಟ-೪೨೫

ಕಥಕಳಿ, ಮಣಿಪುರಿ, ಕೂಚಿಪುಡಿ, ಭಾಗವತಮೇಳ, ಕೊರವಂಜಿ ಸೇರಿದಂತೆ ಅನಾದಿಕಾಲದಿಂದಲೂ ನಮ್ಮದೇಶದಲ್ಲಿ ನೃತ್ಯ ನಾಟಕಗಳು ಪ್ರಮುಖ ಪ್ರದರ್ಶನ ಕಲೆಯಾಗಿ ಬೆಳೆದು ಬಂದಿದೆ. ಕರ್ನಾಟಕದ ‘ಯಕ್ಷಗಾನವನ್ನು ಗೀತನಾಟಕವೆಂದು ಖ್ಯಾತವಿದ್ವಾಂಸರಾದ ಕು.ಶಿ.ಹರಿದಾಸಭಟ್ಟರು’*(೫). ಅಭಿಪ್ರಾಯಪಟ್ಟಿದ್ದಾರೆ.

ಕ್ರಿ.ಶ.೧೬೭೩-೧೭೦೪ರ ಅವಧಿಯಲ್ಲಿ ಮೈಸೂರಿನ ‘ಚಿಕ್ಕದೇವರಾಜ ಒಡೆಯರಿಂದ ರಚಿತವಾದ “ಗೀತಗೋಪಾಲ” ಕನ್ನಡದ ಮೊತ್ತಮೊದಲನೆಯ ಗೀತನಾಟಕ’*(೬)ವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ಆಧುನಿಕ ಕನ್ನಡ ಕಾವ್ಯ : ಪ್ರಾಚೀನ ಕನ್ನಡ ಕಾವ್ಯವು ಸುಮಾರು ಒಂದು ಸಾವಿರ ವರುಷಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ೧೮೫೦ ರಿಂದ ಸುಮಾರು ಒಂದು ಶತಮಾನಗಳ ಕಲಾವಧಿಯಲ್ಲಿ ರಮ್ಯ ಸಂಪ್ರದಾಯ ಹಾಗೂ ವಾಸ್ತವವಾದಗಳು ರೂಪುಗೊಂಡವು. ಅದಕ್ಕೂ ಮೊದಲು ರೂಢಿಯಲ್ಲಿದ್ದ ಹಳೆಯ ಸಂಪ್ರದಾಯಗಳ ಬಂಧನವನ್ನು ಕಳಚಿ ಹೊಸಕಾವ್ಯ ಯುಗವೊಂದು ಉದಯಿಸುವ ಮೂಲಕ ಆಧುನಿಕ ಕನ್ನಡ ಕಾವ್ಯವೆಂದು ಗುರುತಿಸಲ್ಪಟ್ಟಿತು. ಆಧುನಿಕ ಕನ್ನಡಕಾವ್ಯ ಸ್ವರೂಪವು ರೂಪುಗೊಳ್ಳುವಲ್ಲಿ ಮುಖ್ಯವಾಗಿ ಎರಡು ಪ್ರಮುಖ ಅಂಶಗಳು ಕಾರಣವೆನ್ನಲಾಗಿದೆ.

೧.ಇಂಗ್ಲೀಷ್ ವಿದ್ಯಾಭ್ಯಾಸದ ಮೂಲಕ ಉಂಟಾದ ಪಾಶ್ಚಿಮಾತ್ಯ ಪ್ರಭಾವ.

೨.ಸ್ವಾತಂತ್ರ್ಯ ಹೋರಾಟದ ಮೂಲಕ ಉಂಟಾದ ರಾಷ್ರೀಯತೆಯ ಪ್ರಜ್ಞೆ.

ಇದರೊಂದಿಗೆ ಹೊರಜಗತ್ತಿನ ವಿಜ್ಞಾನ-ಯಂತ್ರನಾಗರೀಕತೆಯ ಆಕರ್ಷಣೆ, ಇಂಥಹ ಸ್ಥಿತಿಯಲ್ಲಿ ೧೯ನೇ ಶತಮಾನದ ಬ್ರಿಟೀಷ್ ರಮ್ಯ ಸಂಪ್ರದಾಯ ಸೂಕ್ತ ಮನೋಭೂಮಿಕೆಯನ್ನು ನಿರ್ಮಿಸುವ ಸಾಧನವಾಗಿ ಒದಗಿಬಂದಿತು.

ಬಿ.ಎಂ.ಶ್ರೀಯವರ ಇಂಗ್ಲೀಷ್ ಗೀತೆಗಳು ಆಧುನಿಕ ಕನ್ನಡ ಕಾವ್ಯದ ಪ್ರಮುಖ ಚಾರಿತ್ರಿಕ ಘಟ್ಟಗಳಲ್ಲೊಂದು. ೧೯೨೧ರಲ್ಲಿ ಪ್ರಕಟವಾದ ೬೩ ಕವನಗಳನ್ನೊಳಗೊಂಡ ಈ ಕವನಸಂಗ್ರಹದೊಂದಿಗೆ “ಕನ್ನಡದ ನವೋದಯ” ವಾಯಿತು. ಈ ಸಂಗ್ರಹದಲ್ಲಿ ಶೆಲ್ಲಿ, ವರ್ಡ್ಸವರ್ತ್, ಷೇಕ್ಸ್‌ಪಿಯರ್ ಮೊದಲಾದ ಪಾಶ್ಚಿಮಾತ್ಯ ಶ್ರೇಷ್ಠಕವಿಗಳ ಕವನಗಳನ್ನು ಆಯ್ದುಕೊಂಡು ಬಿ.ಎಂ.ಶ್ರೀಯವರು ಅನುವಾದಿಸಿದ್ದಾರೆ. (ಇದನ್ನು ಅನುಸೃಷ್ಠಿ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.)*(೭) ನಂತರ ಇವರೊಂದಿಗೆ ಎಮ್. ಗೋವಿಂದ ಪೈ, ಪಂಜೆ ಮಂಗೇಶರಾಯರು, ಡಿ.ವಿ.ಜಿ., ಪು.ತಿ.ನ., ಮಾಸ್ತಿ, ಕುವೆಂಪು, ಬೇಂದ್ರೆ, ಕೆ. ಎಸ್. ನರಸಿಂಹ ಸ್ವಾಮಿ ಮೊದಲಾದವರು ಈ ನವೋದಯದ ಪ್ರಮುಖ ಕವಿಗಳೆಂದು ಗುರುತಿಸಲ್ಪಟ್ಟಿದ್ದಾರೆ.

*ಕನ್ನಡ ಗೀತನಾಟಕಗಳ ಅಧ್ಯಯನ. *೫ ಒಂದನೇ ಅಧ್ಯಾಯ *೬ ಮೂರನೇ ಅಧ್ಯಾಯ

*ಕನ್ನಡ ಸಾಹಿತ್ಯಚರಿತ್ರೆ *೭.ಪುಟ-೩೧೯

ನವ್ಯ ಕಾವ್ಯ : ನವೋದಯದಂತೆ ನವ್ಯಕಾವ್ಯವೂ ಇಂಗ್ಲೀಷ್‌ನ “ಮಾಡರ್ನ್‌ಪೊಯಟ್ರಿ”ಗೆ ಸಂವಾದಿಯಾಗಿ ಇಂಗ್ಲೀಷ್ ಕಾವ್ಯದ ಪ್ರೇರಣೆಯಿಂದಲೇ ಜನಿಸಿದ ಇನ್ನೊಂದು ಪ್ರಕಾರ. ಎರಡನೇ ಮಹಾಯುದ್ದದ ನಂತರ ಮುಂದೆ ಯುದ್ಧ ಗಳಾಗದಂತೆ ಮಾನವ ಸಂಬಂಧಗಳು ಕಲುಷಿತವಾಗದಂತೆ ಕಾಪಾಡುವ ವಿಚಾರಗಳು ಮುಖ್ಯವಾದ ಹಿನ್ನೆಲೆಯಲ್ಲಿ ರೂಪುಗೊಂಡಿತು. ‘ನವ್ಯಕಾವ್ಯವನ್ನು ಬಿತ್ತಿ ಬೆಳೆದವರು ವಿ.ಕೃ.ಗೋಕಾಕ್ ಹಾಗೂ ಎಮ್. ಗೋಪಾಲಕೃಷ್ಣ ಅಡಿಗರು.’*(೮) ನವ್ಯ ಕಾವ್ಯದ ಇತರ ಪ್ರಮುಖರೆಂದರೆ ಗಂಗಾಧರ ಚಿತ್ತಾಲ, ಶಂಕರ ಮೋಕಾಶಿ ಸು.ರಂ.ಎಕ್ಕುಂಡಿ ಮೊದಲಾದವರು.

ಬಂಡಾಯ ಕಾವ್ಯ : ಲೇಖನಿಯನ್ನು ಖಡ್ಗ ವನ್ನಾಗಿಸುವ ಪ್ರಣಾಲಿಕೆಯನ್ನು ಮುಂದಿಟ್ಟುಕೊಂಡು ದಲಿತ ಕವಿ ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’, ‘ಸಾವಿರಾರು ನದಿಗಳು’ ಕವನ ಸಂಕಲನದೊಂದಿಗೆ ತನ್ನ ವಿಶೇಷತೆಯನ್ನು ಪ್ರಕಟಿಸಿತು. ಬುದ್ಧಣ್ಣ ಹಿಂಗಮೀರೆ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ, ಕೆ.ಬಿ.ಸಿದ್ಧಯ್ಯ, ಕಾಳೇಗೌಡ ನಾಗವಾರ, ರಂಜಾನ್ ದರ್ಗಾ, ಕೆ.ಎಂ. ಮುನಿಕೃಷ್ಣಪ್ಪ ಈ ಮೊದಲಾದವರು ಬಂಡಾಯ ಕಾವ್ಯದ ಇತರ ಪ್ರಮುಖರು. ಪ್ರಾಚೀನ ಕನ್ನಡ ಕಾವ್ಯದಿಂದ ಇಂದಿನವರೆಗೂ ವಿವಿಧ ಕಾವ್ಯಪ್ರಕಾರಗಳ ಅನೇಕ ಜೀವಂತ ವಾಹಿನಿಗಳು ನಿರಂತರವಾಗಿ ಪ್ರವಹಿಸುತ್ತಿವೆ.*(೯)

ಆಧುನಿಕ ನೃತ್ಯನಾಟಕ : ಪದ್ಮಶ್ರೀ ಉದಯಶಂಕರ್ (೧೯೦೦-೧೯೭೭) ರವರವರನ್ನು ಆಧುನಿಕ ನೃತ್ಯನಾಟದ ಪ್ರವರ್ಧಕರೆಂದು ಹೇಳಬಹುದು. ಚಿತ್ರಕಲಾಭ್ಯಾಸಕ್ಕಾಗಿ ಇಂಗ್ಲೇಂಡಿಗೆ ತೆರಳಿ “ಕಾಲೇಜ್ ಆಫ್ ಫೈನ್ ಆರ್ಟ್ಸ”ನಲ್ಲಿ ಅಧ್ಯಯನವನ್ನು ಮಾಡುವಾಗ ಅಧ್ಯಾಪಕ ವಿಲಿಯಂ ರೂಥೆನ್ನ್‌ಸ್ಟೈನ್‌ರವರ ಸಲಹೆಯಂತೆ ಪಾಶ್ಚಿಮಾತ್ಯ ಕಲಾಪ್ರಕಾರಕ್ಕೆ ಮಾರುಹೋಗದೆ ಭಾರತೀಯ ಪ್ರಾಚೀನ ಪರಂಪರೆಯ ಅಧ್ಯಯನವನ್ನು ಮಾಡಿದರಲ್ಲದೆ ರಷ್ಯಾದ ನೃತ್ಯತಾರೆ ಅನ್ನಾಪಾವಲೋವರವರ ಭೇಟಿಯಿಂದಾಗಿ ನೃತ್ಯಕಲೋಪಾಸಕರಾದರು. ನಂತರ ಭಾರತದ ಹಲವು ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳನ್ನು ಅಧ್ಯಯನ ಮಾಡಿ, ಸುಸಜ್ಜಿತವಾದ ಉತ್ತಮ ಕಲಾತಂಡದೊಂದಿಗೆ ಹಲವಾರು ನೃತ್ಯ ನಾಟಕಗಳನ್ನು ಸಂಯೋಜಿಸಿ, ಹಲವಾರು ಹೊಸ ಸಂಶೋಧನೆಯನ್ನು, ನೃತ್ಯನಾಟಕದಲ್ಲಿ ಹಲವಾರು ಹೊಸ ಪ್ರಯೋಗಗಳನ್ನು ಮಾಡಿ, ಹಿಮಾಲಯದ ತಪ್ಪಲಿನಲ್ಲಿ “ಆಲ್ಮೊರ” ಎಂಬಲ್ಲಿ ಅತ್ಯಾಧುನಿಕವಾದ ಒಂದು ಕಲಾತರಬೇತಿ ಸಂಸ್ಥೆಯನ್ನು ಸ್ಥಾಪಿಸಿ.*(೧೦) ದೇಶದ ನೃತ್ಯನಾಟಕದ ಇತಿಹಾಸದಲ್ಲಿ ಒಂದು ಕ್ರಾಂತಿಯನ್ನೇ ಮಾಡಿದರು. ಸುಮಾರು ಒಂದು ಶತಮಾನದ ಹಿಂದೆಯೇ ಭಾರತದ ನೃತ್ಯನಾಟಕಗಳಿಗೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟು ವಿದೇಶಗಳಲ್ಲಿಯೂ ಭಾರತದ ನೃತ್ಯನಾಟಕದ ಸೊಬಗನ್ನು ಜನಪ್ರಿಯಗೊಳಿಸಿದರಲ್ಲದೆ ವಿಶ್ವಮಾನ್ಯತೆಯನ್ನು ಗಳಿಸಿಕೊಟ್ಟರು. ಆದರೂ ಇಂದಿನ ಆಧುನಿಕ ಯುಗದ ದೇಶದಲ್ಲಿ ನೃತ್ಯನಾಟಕದ ಮಟ್ಟ ತೀರ ಕುಸಿಯುತ್ತಿರುವುದು ಶೋಚನೀಯ.

*ಕನ್ನಡ ಸಾಹಿತ್ಯಚರಿತ್ರೆ *೮. ಪುಟ-೩೨೭ *೯. ಪುಟ-೩೩೪

*ಪ್ರದರ್ಶನ ಕಲೆಗಳು *೧೦. ಪುಟ_೯

ಉದಯಶಂಕರ್‌ರವರ ನಂತರ ಅವರ ಶಿಷ್ಯರಾದ ಸಚಿನ್‌ಶಂಕರ್, ಶಾಂತಿಬರ್ಧನ್, ಪ್ರಭಾತ್ ಗಂಗೂಲಿಯವರು ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಗುರುಗೋಪಿನಾಥ್, ರುಕ್ಮಿಣಿದೇವಿ ಅರುಂಡೇಲ್, ಮೃಣಾಲಿನಿ ಸಾರಾಬಾಯಿ ಮೊದಲಾದವರು ನೃತ್ಯನಾಟಕ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಪ್ರಯೋಗಗಳನ್ನು ಮಾಡಿದ್ದಾರೆ.

ಕರ್ನಾಟಕದಲ್ಲಿ ನೃತ್ಯನಾಟಕಗಳು : ಯಕ್ಷಗಾನವನ್ನು ಹೊರತುಪಡಿಸಿ ನೋಡಿದರೆ ನೃತ್ಯನಾಟಕ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆ ತೀರ ಅಲ್ಪಪ್ರಮಾಣವೆನ್ನಬಹುದು. ಪ್ರಭಾತ್ ಕಲಾವಿದರು, ಅರುಣ್ ಕಲಾವಿದರು, ಡಾ||ಮಾಯಾರಾವ್‌ರವರ ಕಥಕ್ ಮತ್ತು ಕೋರಿಯೋಗ್ರಫಿ ಸಂಸ್ಥೆಯು ಸ್ವಲ್ಪಮಟ್ಟಿಗೆ ನುರಿತ ಕಲಾವಿದರನ್ನು ಕಲೆಹಾಕಿ ಒಂದು ಕಲಾತಂಡದ ಮೂಲಕ ಹಲವಾರು ಯಶಸ್ವಿಪ್ರಯೋಗಗಳನ್ನು ಮಾಡಿದ್ದಾರೆ.

ದಿ||ಎಚ್.ಆರ್. ಕೇಶವಮೂರ್ತಿಯವರು ಹಳೆಗನ್ನಡ ಕಾವ್ಯ ಮತ್ತು ಆಧುನಿಕ ಕನ್ನಡ ಕಾವ್ಯಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚಿನ ನೃತ್ಯನಾಟಕವನ್ನು ಪ್ರಯೋಗಿಸಿರುವುದು ಒಂದು ದಾಖಲೆ‌ ಎಂದೇ ಹೇಳಬಹುದಾಗಿದೆ. ದಿ|| ಪದ್ಮಿನಿರಾವ್, ಬಿ.ಕೆ.ಶ್ಯಾಂಪ್ರಕಾಶ್, ಲಲಿತಾಶ್ರೀನಿವಾಸನ್, ರಾಧಾಶ್ರೀಧರ್, ವೈಜಯಂತಿಕಾಶಿ, ಪದ್ಮಿನಿರಾಮಚಂದ್ರನ್, ಬಿ.ಕೆ.ವಸಂತಲಕ್ಷ್ಮಿ, ಕಲಾಮಂಡಲಂ ಉಷಾದಾತಾರ್, ಡಾ||ತುಳಸಿರಾಮಚಂದ್ರ ಡಾ||ಶೀಲಾಶ್ರೀಧರ್, ಡಾ||ವಸುಂಧರಾ ದೋರೆಸ್ವಾಮಿ ಮೊದಲಾದವರು ಸೇರಿದಂತೆ ಇನ್ನೂ ಹಲವಾರು ಕಲಾವಿದರು ತಮ್ಮ ವಿದ್ಯಾರ್ಥಿಗಳಿಂದಲೂ ಹಾಗೂ ಇತರೆ ಕಲಾತಂಡಗಳಿಂದಲೂ “ಆಧುನಿಕ ಕನ್ನಡಕಾವ್ಯವನ್ನು” ಬಳಸಿಕೊಂಡು ನೃತ್ಯನಾಟಕವನ್ನು ಪ್ರದರ್ಶಿಸಿರುವ ಸಾಕಷ್ಟು ಉದಾಹರಣೆಹಳಿವೆ.

ಈ ಎಲ್ಲಾ ನೃತ್ಯಗುರುಗಳು ತಮ್ಮ ನೃತ್ಯಶಾಲಾ ವಿದ್ಯಾರ್ಥಿಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ಹಲವು ನೃತ್ಯನಾಟಕಗಳು ತಮ್ಮ ನೃತ್ಯ ಶಾಲಾ ವಾರ್ಷಿಕೋತ್ಸವಕ್ಕೇ ಸೀಮಿತವಾಗಿ, ಬಹಳಷ್ಟು ಪ್ರಯೋಗಗಳು ಪ್ರಥವು ಪ್ರದರ್ಶನವೇ ಕೊನೆಯ ಪ್ರದರ್ಶನವಾದ ಉದಾಹರಣೆಗಳಿವೆ.

ಬೆರಳೆಣಿಕೆಯಷ್ಟು ಮಾತ್ರ ಆಧುನಿಕ ಕನ್ನಡ ಕಾವ್ಯವನ್ನು ಬಳಸಿಕೊಂಡಿದ್ದಾರೆ. ಉದಾ:-ಕುರ್ತುಕೋಟಿಯವರ “ಸ್ವಪ್ನದರ್ಶಿ”,

ಪು.ತಿ.ನ : ಗೋಕುಲ ನಿರ್ಗಮನ, ಶ್ರೀರಾಮ ಪಟ್ಟಾಭಿಷೇಕ, ಶ್ರೀಕೃಷ್ಣ ಕುಚೇಲ,

ಶಿವರಾಮಕಾರಂತ: ಮುಕ್ತದ್ವಾರ, ಬುದ್ಧೋದಯ, ಲವಕುಶ, ಕೀಚಕ ಸೈರಂದ್ರಿ, ಸೋಮಿಯ ಸೌಭಾಗ್ಯ, ಯಾರೋ ಅಂದರು,

ಕುವೆಂಪು: ಶ್ರೀರಾಮಾಯಣದರ್ಶನ, ಚಿತ್ರಾಂಗದ, ಕರಿಸಿದ್ಧ, ನನ್ನಗೋಪಾಲ, ಬೊಮ್ಮನಹಳ್ಳಿಯ ಕಿಂದರಜೋಗಿ,

ಸಾ.ಶಿ.ಮರುಳಯ್ಯ : ಅಂಬೆ, ಬನವಾಸಿ, ಬಾದಾಮಿ, ಸ್ನೋವೈಟ್, ಚೆನ್ನಿ ಚೆನ್ನಿ ಚೆನ್ನಲೆ, ಶಿವ ಛತ್ರಪತಿ, ಉಲ್ಲಾಳದ ರಾಣಿ,

ಮಾಸ್ತಿಯವರ ಗೌಡರಮಲ್ಲಿ,

ಎ.ಎನ್.ಸುಬ್ಬರಾವ್ ರವರ “ಶಾಂತಿಸಂದೇಶ”, ಈ ಎಲ್ಲಾ ಕಾವ್ಯವನ್ನು ನೃತ್ಯ ನಾಟಕವಾಗಿ ಪ್ರಯೋಗಿಸಲ್ಪಟ್ಟಿರುವ ಒಂದು ಚಿಕ್ಕನಿದರ್ಶನ.

ಇನ್ನೂ ಯತೇಚ್ಛವಾಗಿ ಬಳಸಬಹುದಾದ ಸಾಕಷ್ಟು ವೈವಿಧಮಯವಾದ, ಅಮೂಲ್ಯ ಸಾಹಿತ್ಯವನ್ನು ಹೊಂದಿರುವ ಆಧುನಿಕ ಕನ್ನಡ ಕಾವ್ಯಗಳಲ್ಲಿ ಗೀತನಾಟಕಗಳು, ನೃತ್ಯರೂಪಕಗಳು, ಕಥನಕವನಗಳು ಲಭ್ಯವಿದ್ದು ಆ ಸಾಹಿತ್ಯದ ಬಗೆಗೆ ನೃತ್ಯಗುರುಗಳಿಗೆ ಮತ್ತು ಕಲಾವಿದರಿಗೆ ಸಾಷ್ಟು ಅರಿವನ್ನು ಮೂಡಿಸುವ ಪ್ರಯತ್ನಗಳು ನಡೆಯಬೇಕಾಗಿದೆ.

ಅನುಭವಿ ಕಲಾವಿದರ ಕೊರತೆಯಿಂದಾಗಿ (ಕೆಲವೊಮ್ಮೆ ನುರಿತ ಅನುಭವಿ ಕಲಾವಿದರನ್ನು ಅತಿಥಿಕಲಾವಿದರನ್ನಾಗಿ ಕೆಲವು ಮುಖ್ಯಪಾತ್ರಗಳಿಗೆ ಬಳಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.) ಬಹಳಷ್ಟು ಕಲಾವಿದರು ಯಾವುದಾದರೂ ಒಂದು ಶಾಸ್ತ್ರೀಯ ನೃತ್ಯದ ಮಾರ್ಗಪದ್ದತಿಯಲ್ಲಿ ಪರಿಣತರಾಗಿದ್ದರೂ, ನೃತ್ಯನಾಟಕದಲ್ಲಿ ಅಭಿನಯಿಸುವಾಗ ಪಾತ್ರಪೋಷಣೆಗೆ ಬೇಕಾದ ತರಬೇತಿಯ ಕೊರತೆ ಎದ್ದುಕಾಣುತ್ತಿದೆ. ಡಾ||ಮಾಯಾರಾವ್‌ರವರ ಕಥಕ್ ಮತ್ತು ಕೋರಿಯೋಗ್ರಫಿ ಸಂಸ್ಥೆಯನ್ನು ಹೊರತುಪಡಿಸಿದರೆ ನೃತ್ಯ ನಾಟಕಗಳಿಗಾಗಿ ತರಬೇತಿ ನೀಡುವ ಸಂಸ್ಥೆಗಳ ಕೊರತೆಯಿದೆ; ಪರಿಣತ ಕಲಾವಿದರ ಕೊರತೆಯಿದೆ. ಸುಸಜ್ಜಿತವಾದ ಕಲಾತಂಡಗಳ ಅಗತ್ಯವಿದೆ, ಸೃಜನಶೀಲ ನೃತ್ಯನಾಟಕ ನಿರ್ದೇಶಕರು ಮತ್ತು ನೃತ್ಯನಾಟಕಗಳಿಗೆ ಸೃಜನಶೀಲ ನೃತ್ಯಸಂಯೋಜಕರ ಅಗತ್ಯವಿದೆ.

ಒಂದೊಂದು ನೃತ್ಯನಾಟಕಗಳಿಗೂ ಅಗತ್ಯವಾಗಿ ಬೇಕಾದ ಹಿನ್ನೆಲೆಸಂಗೀತ, ಹಾಡುಗಾರಿಕೆ, ವಿವಿಧ ಸಂಗೀತವಾಧ್ಯಗಳು, ವೇಷಭೂಷಣಗಳು, ಬೆಳಕಿನ ಸಂಯೋಜನೆ, ರಂಗವಿನ್ಯಾಸ (ಸ್ಟುಡಿಯೋ ರೆಕಾರ್ಡಿಂಗ್ ಸಂಗೀತದ ಬಳಸಿಕೊಂಡರೂ) ತಗಲುವ ಆರ್ಥಿಕ ಸಮಸ್ಯೆ, ಮರುಪ್ರದರ್ಶನ ಅವಕಾಶ ದೊರೆಯುವ ಭರವಸೆಗಳು ಇಲ್ಲದೆ ಕರ್ನಾಟಕದಲ್ಲಿ ನೃತ್ಯನಾಟಕಗಳು ಹೆಚ್ಚಿನ ಪ್ರಗತಿಯನ್ನು ಸಾಧಿಸಿಲ್ಲವೆಂದೇ ಹೇಳಬಹುದು.

ಬಹಳಷ್ಟು ಕಲಾವಿದರು ಹವ್ಯಾಸಕ್ಕಾಗಿ ಶಾಸ್ತ್ರೀಯ ನೃತ್ಯವನ್ನು ಕಲಿಯುತ್ತಿದ್ದರೆ, ಇನ್ನು ಹಲವರು ಏಕವ್ಯಕ್ತಿ ಪ್ರದರ್ಶನದ ದೃಷ್ಟಿಯಲ್ಲಿ ಕಲಿಯುತ್ತಾರೆ. ಅದರಲ್ಲಿ ಕೆಲವರು ನೃತ್ಯ ತರಗತಿಯನ್ನು ತೆರೆದು ಸ್ವಯಂ ಉದ್ಯೋವನ್ನಾಗಿಸಿಕೊಳ್ಳುತ್ತಾರೆ. ಸರ್ಕಾರ ನಡೆಸುವ ಉತ್ಸವಗಳಲ್ಲಿ, ಸಾಕಷ್ಟು ಮುಂಚಿತವಾಗಿ ಕಾರ್ಯಕ್ರಮದ ದಿನಾಂಕಗಳು ನಿರ್ಧರಿಸಲ್ಪಡದೆ  ಇರುವುದರಿಂದ ಅತ್ಯಗತ್ಯವಾದ ಪೂರ್ವಸಿದ್ಧತೆಯ ಕೊರತೆಯಿಂದಾಗಿ ಪ್ರದರ್ಶನದ ಗುಣಮಟ್ಟಗಳು ಕುಸಿಯುತ್ತಿವೆ.ಕೆಲವೊಂದು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಪರೂಪಕ್ಕೆ ಅವಕಾಶಗಳು ದೊರೆತರೂ ಒಟ್ಟಿನಲ್ಲಿ ನೃತ್ಯನಾಟಕದ ಆರ್ಥಿಕ ಹೊರೆಯನ್ನು ನಿಭಾಯಿಸುವುದು ಬಹಳ ಕಷ್ಟಕರವಾಗಿದೆ.

ಪ್ರತಿ ವರುಷವೂ ರಾಜ್ಯಾದಾದ್ಯಂತ ಸಾಕಷ್ಟು ಸಂಗೀತ, ನ್ಯತ್ಯ, ನಾಟಕ, ಸ್ಪರ್ಧೆಗಳನ್ನು ಹಲವಾರು ಸಂಘ ಸಂಸ್ಥೆಗಳು ಏರ್ಪಡಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಅಂತೆಯೇ ನೃತ್ಯನಾಟಕಗಳಿಗೂ ಪ್ರೋತ್ಸಾಹದ ಅಗತ್ಯವಿದೆ. ತನ್ಮೂಲಕ ಹೊಸ ಹೊಸ ಪ್ರಯೋಗಗಳಿಗೆ ವೇದಿಕೆಯನ್ನು ಒದಗಿಸಿದಂತಾಗುತ್ತದೆ.

“ಪಾಶ್ಚಿಮಾತ್ಯ ಒಪೇರಾಗಳಿಗೆ ಇರುವ ನೂರಾರು ವರುಷಗಳ ಇತಿಹಾಸದಲ್ಲಿ ಅವುಗಳಿಗೆ ದೊರೆತ ಪುರಸ್ಕಾರ, ಪ್ರಯೋಗಾವಕಾಶ; ತನ್ಮೂಲಕ ಅದೊಂದು ರಾಷ್ಟ್ರಮಟ್ಟದ ಕಲೆಯಾಗಿ ಪರಿಪೂರ್ಣ ವಿಕಾಸ ಹೊಂದಿರುವುದನ್ನು ಕಾಣಬಹುದು. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ಕಲೆಯನ್ನು ಉಳಿಸಿ ಉದ್ದರಿಸಿ, ಮತ್ತಷ್ಟು ವಿಜೃಂಭಿಸುವಂತೆ ಮಾಡಲು ನಡೆಯುತ್ತಿರುವ ಪ್ರಯತ್ನಗಳು ಸಂಶೋಧನೆ, ಹೊಸಕೃತಿಗಳ ಸೃಷ್ಠಿಗೆ ನೀಡುತ್ತಿರುವ ಪ್ರೋತ್ಸಾಹಗಳನ್ನು ಗಮನಿಸಿದರೆ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ನೃತ್ಯನಾಟಕದ ಪ್ರಗತಿ ತುಂಬಾ ನಿರಾಶಾದಾಯಕವಾಗಿದೆ. ”*(೧೧)

ನಮ್ಮ ದೇಶದಲ್ಲಿ ವಿಶ್ವಮನ್ನಣೆಯನ್ನು ಗಳಿಸಿರುವ ಏಳು ಶಾಸ್ರೀಯ ನೃತ್ಯ ಪ್ರಕಾರಗಳಿವೆ, ನೂರಾರು ಜಾನಪದ ನೃತ್ಯಗಳಿವೆ. ವೈವಿಧ್ಯಮಯವಾದ ಶ್ರೀಮಂತ ಸಂಗೀತವಿದೆ. ಹಲವು ಬಗೆಯ ಅತ್ಯಾಕರ್ಶಕ ಆಹಾರ್ಯವಿದೆ. ಸಾವಿರಾರು ಬಗೆಯ ಕಥೆಗಳಿವೆ. (ವಿಶ್ವದಲ್ಲಿ ಭಾರತವನ್ನು ಕಥೆಗಳ ತವರೂರು ಎಂದೇಕರೆಯುತ್ತಾರೆ.) ವಿಶ್ವದ ಬೇರಾವ ರಾಷ್ಟ್ರಕ್ಕೂ ಇರದ ಈ ಕಲಾಶ್ರೀಮಂತಿಕೆಯನ್ನು ನೃತ್ಯನಾಟಕಗಳಿಗೆ ಸಮರ್ಪಕವಾಗಿ ಬಳಸಿ ಪ್ರದರ್ಶಿಸಿದಲ್ಲಿ ಇದು ವಿಶ್ವದಾದ್ಯಂತ ಮನ್ನಣೆಯನ್ನು ಗಳಿಸುವುದರಲ್ಲಿ ಸಂಶಯವಿಲ್ಲ.

ಆಧುನಿಕ ಕನ್ನಡದ ಕಾವ್ಯದ ವಿಷಯಸರಳತೆಯಿಂದಾಗಿ ಶ್ರೀಸಾಮಾನ್ಯನನ್ನು ಸುಲಭವಾಗಿ ತಲುಪುವುದರಿಂದ ಇದರ ಹೆಚ್ಚು ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಗೀತ ನೃತ್ಯ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ನೃತ್ಯ ಕಲಾ ಪರಿಷತ್ತು, ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘ-ಸಂಸ್ಥೆಗಳು ಹೆಚ್ಚಿನ ಆಸಕ್ತಿಯನ್ನು ತಳೆಯುವುದು ಮುಖ್ಯ. ತನ್ಮೂಲಕ ಕನ್ನಡದ ನೃತ್ಯ ನಾಟಕಗಳು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ವಿಜೃಂಬಿಸುವಂತಾಗಬೇಕು.

*ಕನ್ನಡ ಗೀತನಾಟಕಗಳ ಆಧ್ಯಯನ :*೧೧. ೬ನೇ ಅಧ್ಯಾಯ

ಗ್ರಂಥ ಋಣ

· ನೃತ್ಯಕಲೆ :ಪ್ರೊ||ಯು.ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ. ಪ್ರಸಾರಾಂಗ ಬೆಂಗಳೂರುವಿಶ್ವವಿದ್ಯಾಲಯ ೧೯೮೦

· ಕನ್ನಡ ಗೀತನಾಟಕಗಳ ಆಧ್ಯಯನ : ಡಾ. ವಿಜಯಲಕ್ಷ್ಮಿ ಸುಬ್ಬರಾವ್, ಪಿ‌ಎಚ್,ಡಿ ಮಹಾಪ್ರಬಂಧ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು. ೧೯೯೫

· ಆಧುನಿಕ ಕನ್ನಡ ನಾಟಕ: ಡಾ.ಕೆ.ಮರುಳಸಿದ್ಧಪ್ಪ, ಅಂಕಿತ ಪುಸ್ತಕ ಬೆಂಗಳೂರು. ೨೦೦೨

· ಸಾಹಿತ್ಯ ಮತ್ತು ನೃತ್ಯ : ಡಾ.ಚೂಡಾಮಣಿ ನಂದಗೋಪಾಲ್. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು. ೧೯೯೩

· ಆಯ್ದ ಕಥನ ಕವನಗಳು: ಎಚ್.ಎಸ್ ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ. ೧೯೮೭

· ಕನ್ನಡ ಸಾಹಿತ್ಯ ಚರಿತ್ರೆ:ಡಾ. ತ.ಸು.ಶ್ಯಾಮರಾಯರು, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲ ಮೈಸೂರು ೨೦೦೧

· ಆಧುನಿಕ ಕನ್ನಡ ಕಾವ್ಯ  ಸಮಾಜ : ಸಂಸ್ಕೃತಿ) ಡಾ.ಲೋಕೇಶ ಅಗಸರಗಟ್ಟಿ. ಅಲೋಕ ಪ್ರಕಾಶನ ಚಿತ್ರದುರ್ಗ ೨೦೦೩

· ವೃತ್ತಿ ರಂಗ ದರ್ಶನ : ಸಂಪಾದಕರು ಡಾ.ಎಚ್.ಕೆ.ರಂಗನಾಥ್. ಕನ್ನಡ ಸಾಹಿತ್ಯ ಪರಿಷತ್ತ್. ೧೯೯೩

· ಕರ್ನಾಟಕ ಸಂಗೀತ ವಾಹಿನಿ : ಡಾ. ರಾ.ಸತ್ಯನಾರಾಯಣ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ೨೦೦೧

· ಪ್ರದರ್ಶನ ಕಲೆಗಳು : ಡಾ. ಕೆ.ಶ್ರೀಕಂಠಯ್ಯ, ಅಳಿಲು ಸೇವಾಸಂಸ್ಥೆ. ೨೦೦೩

· ಆಧುನಿಕ ಕನ್ನಡ ಕಾವ್ಯ:ಚನ್ನವೀರ ಕಣವಿ, ಡಾ.ರಾಘವೇಂದ್ರರಾವ್.ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ. ೧೯೭೬

( ಲೇಖಕರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೃತ್ಯ ವಿಭಾಗದ ಉಪನ್ಯಾಸಕರು ಮತ್ತು ‘ಭರತನಾಟ್ಯಕ್ಕೆ ಪೂರಕವಾಗುವ ಆಧುನಿಕ ಕನ್ನಡ ಕಾವ್ಯ : ಒಂದು ಅಧ್ಯಯನ ’ ಎಂಬ ವಿಷಯದಲ್ಲಿ ಪಿ‌ಎಚ್‌ಡಿ ಅಧ್ಯಯನ ನಿರತರು.)

ನೃತ್ಯ ಮತ್ತು ದಲಿತರು : ಒಂದು ವಿಶ್ಲೇಷಣೆ
ನೃತ್ಯಕಲೆಯ ಶ್ರೀಮಂತಿಕೆ ಶೂನ್ಯದಿಂದ ಹುಟ್ಟುವುದಿಲ್ಲ ಅದಕ್ಕೆ ಯಾವುದಾದರೊಂದು ಹಿನ್ನೆಲೆಯಿರಬೇಕು. ನೃತ್ಯಕಲೆಗೆ ದಲಿತ ಕಲಾವಿದರ ಕೊಡುಗೆ ಪ್ರತ್ಯಕ್ಷವಾಗಿ ಬಹಳ ಕಡಿಮೆ ಎಂದೆನಿಸಿದರೂ ಪರೋಕ್ಷವಾಗಿ ನೃತ್ಯಕಲೆಯಲ್ಲಿ ದಲಿತರ ಪೂರ್ವ ಚರಿತ್ರೆ ಅತ್ಯಂತ ಘನವಾದುದು. ಆದರೆ ಮರೆಗೆ ಸಂದುಹೋಗಿದೆ. ಈ ಜನಾಂಗ ಒಂದು ಕಾಲದಲ್ಲಿ ನೃತ್ಯಕ್ಕೆ ತಮ್ಮ ಜೀವನವನ್ನು ಅರ್ಪಿಸಿಕೊಂಡಿದ್ದು ಕಾಲಕ್ರಮೇಣದ ಬೆಳವಣಿಗೆಯಲ್ಲಿ ನೃತ್ಯ ಕಲೆಯ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿರುವುದಕ್ಕೆ ಕಾರಣವೇನು? ಅಲ್ಲದೇ ಎಷ್ಟರ ಮಟ್ಟಿಗೆ ನೃತ್ಯಕಲೆ ದಲಿತರಿಗೆ ಲಭಿಸಿದೆ, ಇದಕ್ಕೊಂದು ಹಿನ್ನೆಲೆಯಿದೆಯೇ?

ವೇದಗಳ ಕಾಲದಲ್ಲಿ ನಾಟ್ಯಕಲೆಯ ಪ್ರಸ್ತಾವನೆ ನಮಗೆ ಪ್ರಥಮ ಬಾರಿ ಋಗ್ವೇದದಲ್ಲಿ ಕಂಡು ಬರುತ್ತದೆ. ಋಗ್ವೇದದ ಉಲ್ಲೇಖಗಳೇ ನೃತ್ಯಕಲೆಯ ಅತಿ ಪ್ರಾಚೀನವಾದ ಸಾಕ್ಷಿಗಳು. ನಂತರ ಅಥರ್ವ ವೇದದಲ್ಲಿ ವೈದಿಕ ಧರ್ಮ ವಿರೋಧಿಗಳಾದ ವ್ರಾತ್ಯ ಜನರ ಬಗ್ಗೆ ಉಲ್ಲೇಖಿಸಲಾಗಿದೆ. ಈ ವ್ರಾತ್ಯ ಜನರ ಆಚರಣೆಗಳಲ್ಲಿ ಮತೀಯ ದರ್ಶನ ಮತ್ತು ವಾಮಾಚಾರವು ಮುಖ್ಯವಾದುದು. ಅಲ್ಲದೇ ವಾದ್ಯ ಸಂಗೀತದ ಜೊತೆ ನೃತ್ಯ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬರುತ್ತದೆ. ಸಂಗೀತ ನರ್ತನಗಳು ಅನಾಚಾರವನ್ನು ಪ್ರಚೋದಿಸುವ ಕಲೆಗಳೆಂದು ಅವಹೇಳನಕ್ಕೆ ಗುರಿಯದುದೂ ಹಾಗೂ ಅದರ ಮಗ್ಗುಲಲ್ಲಿ ಅಧ್ಯಯನಕ್ಕೆ ಯೋಗ್ಯವಾದ ವಿದ್ಯೆಗಳೆಂದು ಪ್ರಸಿದ್ಧವಾದುದು ಒಂದೇ ಕಾಲದಲ್ಲಿ. ಹೀಗೆ ಯಜ್ಞವಿರೋಧಿಗಳಾದ ವ್ರಾತ್ಯ ಜನರು ನಾಟ್ಯ ಸಂಗೀತವನ್ನು ಕೆಟ್ಟ ರೀತಿಯಲ್ಲಿ ಪ್ರಯೋಗಿಸುತ್ತಿದ್ದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಇರಲಿಲ್ಲ. ಆದ್ದರಿಂದ ವ್ರಾತ್ಯ ಜನರನ್ನು ಊರಿನಿಂದ ಹೊರಗಿಡಲಾಯಿತು. ಮನುಷ್ಯನ ಗುಣಕರ್ಮಗಳಿಂದ ವಿಭಾಗ ಮಾಡಿ ನಾಲ್ಕು ವರ್ಣಗಳು ಸೃಷ್ಟಿಯಾದವು ಎಂಬ ಭಗವದ್ಗೀತೆಯ ಸಂದೇಶದಂತೆ ಒಂದು ಕಾಲದಲ್ಲಿ ಆರ್ಯರಾಗಿದ್ದ ವ್ರಾತ್ಯರು ಅನಾರ್ಯರಾದರು.

ಅಥರ್ವ ವೇದದ ಕಾಲದಲ್ಲಿ ನರ್ತನವು ದುರ್ದೆಶೆಗಿಳಿದುದರಿಂದ ಬಹುಶಃ ಇಂದ್ರಾದಿ ದೇವತೆಗಳು ಕ್ರಮಬದ್ಧವಾದ ಮಾರ್ಗೀ ಶೈಲಿಯ ನಾಟ್ಯವು ಎಲ್ಲರಿಗೂ ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ಬ್ರಹ್ಮನಲ್ಲಿ ಮೊರೆಹೋಗಿರಬೇಕು. ಇಲ್ಲಿಯೂ ಒಂದು ಮುಖ್ಯವಾದ ವಿಚಾರವೇನೆಂದರೆ ವೇದಗಳು ಶೂದ್ರ ಜಾತಿಗಳಿಗೆ ನಿಷಿದ್ಧವಾದುದರಿಂದ ಎಲ್ಲಾ ವರ್ಗದವರಿಗೂ ಲಭ್ಯವಾಗಬಹುದಾದ ಒಂದು ಐಯ್ದನೇಯ ವೇದವನ್ನು ರಚಿಸು ಎಂಬುದಾಗಿ ಉಲ್ಲೇಖಿಸಲಾಗಿದೆ. ಆದ್ಯರಂಗಾಚಾರ‍್ಯಾರ ನಾಟ್ಯಶಾಸ್ತ್ರ ಗ್ರಂಥದ ಅಧ್ಯಾಯ – ೩೬ ರಲ್ಲಿ ‘ನಾಟ್ಯ ಭೂಲೋಕಕ್ಕೆ ಬಂದದ್ದು’ ಎಂಬುದರ ಬಗ್ಗೆ ಭರತಮುನಿಯು ಹೇಳುವಂತೆ ‘ನನ್ನ ಮಕ್ಕಳು ಪ್ರಹಸನಗಳಿಂದ ಜನರನ್ನು ಮೂದಲಿಸತೊಡಗಿದರು. ಅಸಭ್ಯ ಶೈಲಿಯ (ನಾಟ್ಯ) ಕೃತಿಯೊಂದರಲ್ಲಿ ಋಷಿಗಳ ಅಪಹಾಸ್ಯ ಮಾಡಿ ಜನ ಸಮೂಹದೆದುರು ಆಡಿದರು. ಅದು ಕೇಳಲು ಅಸಹ್ಯವಾಗಿತ್ತು. ಅದರಲ್ಲಿ ದುರಾಚಾರ, ಗ್ರಾಮ್ಯ, ನಡತೆಗಳ ಅಪ್ರಸ್ತುತವಾದ, ನಿಷ್ಠುರವಾದ ಚಿತ್ರಣವಿದ್ದಿತು’. ಹೀಗೆ ಇದನ್ನು ಕೇಳಿದ ಋಷಿಗಳು ಬ್ರಾಹ್ಮಣರ ಸಮಾಜದಲ್ಲಿ ಹುಟ್ಟಿ ಬೆಳೆದು ಬಂದ ‘ನೀವು ಹೋಮ ಹವನಗಳನ್ನು ಮಾಡದೆ ನಿರ್ವ್ರತರಾಗಿ ಶೂದ್ರರ ಆಚಾರಕ್ಕೆ ಇಳಿಯುವಿರಿ’ ಎಂದು ಶಪಿಸಿದರು. ಹೀಗೆ ಚಿಂತೆಗೀಡಾದ ಭರತಮುನಿಯು ತನ್ನ ಮಕ್ಕಳಿಗೆ ‘ಚಿಂತೆಗೀಡಾಗಬೇಡಿ, ದೈವವು ನಮಗಾಗಿ ಹೀಗೆ ವಿಧಿಸಿತ್ತು, ಅದು ನಡೆದು ಹೋಯಿತು’ ಎಂಬುದಾಗಿ ಹೇಳಿದುದನ್ನು ಉಲ್ಲೇಖಿಸಲಾಗಿದೆ. ಅಲ್ಲದೇ “ಬೃಹದ್ದೇಶಿ” ಯಲ್ಲಿ ‘ಭರತ’ ಶಬ್ದಕ್ಕೆ ‘ಶಬರ’ ನೆಂಬ ಅರ್ಥವಿರುವುದನ್ನು ತಿಳಿಸಲಾಗಿದೆ (ರಾ.ಸತ್ಯನಾರಾಯಣ). ಕನ್ನಡ ನಿಘಂಟುವಿನಲ್ಲಿ ‘ಶಬರ’ ಎಂದರೆ ‘ಬೇಡರು’ ಎಂಬುದಾಗಿ ಅರ್ಥೈಸಲಾಗಿದೆ.

ಈಗಿನ ದಲಿತರೇ ಈ ನೆಲದ ಆದಿಮವಾದ ಮೂಲ ನಿವಾಸಿಗಳು ಹಾಗೂ ನರ್ತನವೇ ಒಂದು ಇವರ ಭಾಗ ಎಂಬ ಸತ್ಯವನ್ನು ಪ್ರತಿಪಾದಿಸುವಂತಹ ಚರ್ಚೆಯನ್ನು ಮಾಡುತ್ತಾ ಹೋದಲ್ಲಿ ದಲಿತರಲ್ಲಿ ನೃತ್ಯದ ಹಿನ್ನಲೆಗೆ ಭಿನ್ನ ಭಿನ್ನ ಆಯಾಮಗಳು ಸೃಷ್ಟಿಯಾಗುತ್ತವೆ. ದಲಿತರಲ್ಲಿ ಸಂಗೀತ ನರ್ತನಗಳು ಯಾಕೆ ಹೆಚ್ಚಿವೆ ಎಂಬುದನ್ನು ಸಮರ್ಥಿಸಿಕೊಳ್ಳಲು ಕೂಡ ಜನಪದ ಕ್ಷೇತ್ರದಲ್ಲಿ ವೇದಗಳ ಕಾಲದಲ್ಲೇ ಆದಂತಹ ಸನ್ನಿವೇಶವು ಇಲ್ಲಿಯೂ ಸಿಗುತ್ತದೆ ಎಂದರೇ ತಪ್ಪಾಗಲಾರದು. ದ್ರಾವಿಡರಿಗೆ ನರ್ತನವೇ ಮುಖ್ಯ ಕ್ರೀಡೆಯಾಗಿತ್ತು. ಒಮ್ಮೆ ಒಂದು ಎತ್ತಿನ ಗಾಡಿಯಲ್ಲಿ ಹಾಡು ಕುಣಿತಗಳನ್ನು ತುಂಬಿಕೊಂಡು ಎಲ್ಲ ವರ್ಗದವರಿಗೂ ಹಂಚಬೇಕೆಂದು ದೇವರುಗಳು ಹೊರಡುತ್ತಾರೆ. ಎತ್ತಿನಗಾಡಿ ದಲಿತರ ಕೇರಿಗೆ ಬಂದ ತಕ್ಷಣ ಅಚ್ಚುಮುರಿದು ನೆಲಕ್ಕುರುಳುತ್ತದೆ. ಆಗ ದಲಿತರು ಹಾಡು ಕುಣಿತಗಳನ್ನು ತಮಗೆ ಬೇಕಾದಷ್ಟು ಬಾಚಿಕೊಂಡರು. ಅದಕ್ಕಾಗಿಯೇ ದಲಿತರಲ್ಲಿ ಕಲಾ ಶ್ರೀಮಂತಿಕೆ ಹೆಚ್ಚು ಎಂಬುದು ಗ್ರಾಮೀಣ ಪ್ರದೇಶದ ನಂಬಿಕೆ. ಹೀಗೆ ಸುಮಾರು ೨ನೇ ಶತಮಾನದಿಂದ ೧೮ನೇ ಶತಮಾನದವರೆಗೂ ಕೂಡ ದಲಿತ ಕಲಾವಿದರು ನೃತ್ಯದಲ್ಲಿ ಭಾಗಿಯಾಗಿರುವುದು, ಆಧಾರಸಹಿತವಾಗಿ ಗ್ರಂಥಗಳಲ್ಲಿ ಲಭ್ಯವಾಗಿದ್ದು ಆದಿಮ ಹಂತದಲ್ಲಿ ನೃತ್ಯಕಲೆಯ ಸೊತ್ತನ್ನು ಎಲ್ಲರಂತೇ ತಾವು ಪಡೆದುಕೊಂಡಿದ್ದರೂ ಈ ಒಂದು ವರ್ಣ ವ್ಯವಸ್ಥೆಯಲ್ಲಿ ದಲಿತ ಕಲಾವಿದರ ಸಂಖ್ಯೆ ಶಿಷ್ಟ ನೃತ್ಯ ಸಂಪ್ರದಾಯಕ್ಕೆ ಕಡಿಮೆಯಾಗಿರುತ್ತದೆ. ದಲಿತರಲ್ಲಿ ಪ್ರತಿಭೆ ಶ್ರೀಮಂತವಾಗಿರುವುದರಿಂದ ಹೊರಜಗತ್ತಿಗೆ ಅದರ ಬೆಳಕನ್ನು ವಿಸ್ತರಿಸುವ ಪ್ರಯತ್ನವನ್ನು ಮಾಡಬೇಕಾಗಿದೆ.

( ಲೇಖಕರು ಬೆಂಗಳೂರಿನಲ್ಲಿ ನೃತ್ಯ ಶಿಕ್ಷಕಿ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭರತನಾಟ್ಯಕ್ಕೆ ದಲಿತರ ಕೊಡುಗೆ ಎಂಬ ವಿಷಯದಲ್ಲಿ ಪಿ‌ಎಚ್‌ಡಿ ಅಧ್ಯಯನ ನಿರತೆ.)

ಯಕ್ಷಗಾನ ರಂಗಭಾಷೆ
ರಂಗಭಾಷೆಯೆಂದರೆ ರಂಗಕ್ಕೆ ಕಲಾವಿದರ ಪ್ರವೇಶ, ರಂಗಕ್ರಮಗಳು, ರಂಗ ಚಲನೆ, ರಂಗದಲ್ಲಿ ಪಾತ್ರಗಳ ಮುಖಾ-ಮುಖೀ ನಿಲುವುಗಳು, ರಂಗ ಸಮತೋಲನ, ರಂಗಸ್ಥಳದ ಪೂರ್ಣ ಉಪಯೋಗ ಮುಂತಾಗಿ ನಾಟ್ಯಾಭಿನಯದ ಮೂಲಕ ಪ್ರೇಕ್ಷಕನಿಗೆ ಕಥಾನುಭವವನ್ನು ನೀಡುವ ರಂಗ ತಂತ್ರವಾಗಿದೆ. ರಂಗಭಾಷೆಯು ಪ್ರತಿಯೊಂದು ನಾಟ್ಯ ಪ್ರಕಾರಕ್ಕೂ ಅದರದ್ದೇ ಆದ ಐಡೆಂಟಿಟಿಯನ್ನು ನೀಡುತ್ತದೆ. ಈ ಭಾಷೆ ಗೊತ್ತಿರುವವರೇ ಒಳ್ಳೆಯ ಪ್ರೇಕ್ಷಕರಾಗಬಲ್ಲರು. ಸಾಮಾನ್ಯವಾಗಿ ರಂಗಭಾಷೆಯ ಪರಿಚಯವಿರುವವರೇ ಪ್ರದರ್ಶನಗಳಿಗೆ ಬರುತ್ತಾರೆ ಹಾಗೂ ಕಲಾಸ್ವಾದನೆಯನ್ನು ಮಾಡುತ್ತಾರೆ.

ಕಲಾಪ್ರಕಾರಗಳ ವಿಭಿನ್ನತೆಯ ಪರಿಚಯವಾಗುವುದೇ ಅದರ ರಂಗಭಾಷೆಯಲ್ಲಿ. ಭರತನಾಟ್ಯ, ಕೂಚಿಪುಡಿ, ಕಥಕ್, ಕಥಕ್ಕಳಿ, ಯಕ್ಷಗಾನ ಇವುಗಳ ಮಧ್ಯೆ ಸಾಮ್ಯತೆಯ ಅಂಶಗಳನ್ನು ಹೆಕ್ಕಿ ತೆಗೆಯಬಹುದಾದರೂ ಮೇಲ್ನೋಟಕ್ಕೇನೇ ಅವುಗಳ ನಡುವೆ ವ್ಯತ್ಯಾಸವಿರುವುದು ರಂಗಭಾಷೆಯ ಪ್ರಭೇದದಿಂದಾಗಿಯೇ. ಇದು ಕೇವಲ ಆಹಾರ್ಯಭೇಧದಿಂದಾಗಿ ಗೊತ್ತಾಗುವುದಲ್ಲ. ಆಯಾ ಕಲೆಗಳ ರಂಗಭಾಷಾ ಭೇದದಿಂದಾಗಿಯೇ ಗೊತ್ತಾಗುವಂತಹದು.

ಉದಾಹರಣೆಗೆ ಯಕ್ಷಗಾನದ ತೆಂಕುತಿಟ್ಟು ಮತ್ತು ಬಡಗುತಿಟ್ಟು ಇವುಗಳ ನಡುವೆ ರಂಗಭಾಷಾ ಪ್ರಭೇದವಿರುವುದರಿಂದಲೇ ನಾವು ಅವುಗಳನ್ನು ನೋಡುವಾಗಲೇ ನಮ್ಮ ದೃಷ್ಟಿಯನ್ನು ಹೊಂದಿಸಿಕೊಂಡಿರುತ್ತೇವೆ. ರಂಗಸ್ಥಳದಿಂದ ಸರಿಯಾದ ಭಾಷೆಯಲ್ಲೇ ಕಥಾನಕ ಪ್ರದರ್ಶನವಾದರೆ ಮಾತ್ರ ’ಆಟ ಚೆನ್ನಾಗಿತ್ತು’ ಎಂದು ಹೇಳಲು ಸಾಧ್ಯ. ಇಲ್ಲಿ ನಾಟ್ಯ, ವೇಷಭೂಷಣ, ಅಭಿನಯ, ಅರ್ಥಗಾರಿಕೆಗಳಷ್ಟೇ ಅಲ್ಲ, ರಂಗಸ್ಥಳದ ಸಮತೋಲನ ಹಾಗೂ ಪೂರ್ಣ ಉಪಯೋಗ ಹೇಗೆ ಮಾಡಿದ್ದಾರೆ ಎಂಬುದೂ ಮುಖ್ಯ.

ರಂಗಸ್ಥಳದಲ್ಲಿ ರಥದ ಮೇಲೆ ಕುಳಿತು, ಕೆಳಗಿಳಿದು ನಿಂತು, ಕುಣಿದು, ಓಡಾಡಿ, ಇನ್ನೊಬ್ಬರಿಗೆ ಸ್ಪಂದಿಸಿ, ಯುದ್ಧಕ್ರಮಗಳನ್ನು ನಿರ್ವಹಿಸಿ ಮಾಡುವ ಎಲ್ಲ ಕೆಲಸಗಳ ಸಂದರ್ಭದಲ್ಲಿಯೂ ಇದು ಪ್ರೇಕ್ಶಕರನ್ನು ತಲುಪುವ ಭಾಷೆಯಲ್ಲಿದೆಯೇ ಎಂಬ ಎಚ್ಚರ ಕಲಾವಿದನಿಗೆ ಇರಬೇಕು. ಹಾಗಾಗಿ ಒಬ್ಬನೇ ಪಾತ್ರಧಾರಿ ಇದ್ದಾಗ ನಿಲ್ಲಬೇಕಾದ ಸ್ಥಳ, ಇಬ್ಬರಿದ್ದಾಗ ಪರಸ್ಪರ ಸ್ಪಂದಿಸುತ್ತ ನಿಲ್ಲುವ ಕ್ರಮ, ಅನೇಕ ಪಾತ್ರಧಾರಿಗಳಿದ್ದಾಗ ಆವರಿಸಬೇಕಾದ ರಂಗದ ವರ್ತುಲ, ಅದರ ಮಧ್ಯ ಭಾಗ, ಎದುರು ಮೂಲೆಗಳು, ಹಿಂದಿನ ಮೂಲೆಗಳು ಮುಂತಾದುವುಗಳನ್ನು ಸಮರ್ಪಕವಾಗಿ ಅರಿತು ಬಳಸಿಕೊಳ್ಳುವುದೇ ರಂಗಭಾಷೆ. ಹೀಗಾಗಿ ಯಕ್ಷಗಾನದ ಪರಂಪರೆಯಲ್ಲಿ ರಂಗಭಾಷೆಯನ್ನು ಹೇಗೆ ನಿರೂಪಿಸಿದ್ದಾರೆಂಬುದನ್ನು ಹಿರಿಯರಿಂದ ತಿಳಿದು ದಾಖಲಿಸಿಕೊಳ್ಳುವುದು ಉಪಯುಕ್ತ ಕಾರ್ಯವೆನಿಸುತ್ತದೆ.

ಉದಾ : ತೆಂಕುತಿಟ್ಟಿನ ಧಿತ್ತದ ಕ್ರಮವು ಬಹಳ ವ್ಯವಸ್ಥಿತವಾಗಿದೆ. ವೇಷಧಾರಿಗಳಿಬ್ಬರೂ ಸರಿಯಾದ ನಾಟ್ಯಾಭ್ಯಾಸಿಗಳಾಗಿದ್ದರೆ ಇದು ಒಂದು ಸುಂದರವಾದ ಮುಖಾ-ಮುಖೀ ನೃತ್ಯ. ಇದು ರಂಗಸ್ಥಳದ ಮಧ್ಯದಲ್ಲೇ ನಡೆಯಬೇಕಾದುದು. ಆದರೆ ಇಂದಿನ ಯಕ್ಷಗಾನದ ಆಟಗಳಲ್ಲಿ ಇದು ಒಟ್ಟಾರೆಯಾಗಿ ಮುಗಿದು ಹೋಗುತ್ತದೆ. ಹಾಗೆಯೇ ಎದುರಾಳಿಗಳು ನಿಲ್ಲಬೇಕಾದ ಕ್ರಮ, ವೀರೋಚಿತವಾಗಿ ನೃತ್ಯಾಭಿನಯದಲ್ಲೇ ಪರಸ್ಪರ ಸ್ಪಂದಿಸುವ ಮತ್ತು ಕೆಣಕುವ ಕ್ರಮಗಳನ್ನು ಮಾಡಿದರೆ ರಂಗಭಾಷೆಯ ಮೂಲಕವೇ ಪ್ರದರ್ಶನವನ್ನು ಪ್ರೇಕ್ಷಕನಿಗೆ ತಲುಪಿಸಿದಂತಾಗುತ್ತದೆ.

ಕಥಕ್, ಕೂಚಿಪುಡಿ, ಭರತನಾಟ್ಯ ಮುಂತಾದುವುಗಳಲ್ಲಿ ಹಿಮ್ಮೇಳದವರು ಒಂದು ಬದಿಯಲ್ಲಿ ಕುಳಿತಿರುತ್ತಾರೆ. ಆದರೆ ಯಕ್ಷಗಾನದಲ್ಲಿ ಹಿಮ್ಮೇಳದವರು ಪ್ರೇಕ್ಷಕರಿಗೆದುರಾಗಿ ಕುಳಿತಿದ್ದು ರಂಗದ ಒಂದು ಪ್ರಧಾನ ಭಾಗವಾಗಿ ಬಿಡುವುದರಿಂದ ಈ ರಂಗಭಾಷೆಯ ಸಂಕೀರ್ಣತೆ ಹೆಚ್ಚಾಗುತ್ತದೆ. ಅವರ ಅಂಗಿ ಮುಂಡಾಸುಗಳು ಕೂಡಾ ಮುಖ್ಯವಾಗುತ್ತವೆ. ಅದರ ಜೊತೆಗೆ ಪ್ರದರ್ಶನ ಕ್ರಿಯೆಯಲ್ಲಿ ಅವರ ಪೂರ್ಣ ತೊಡಗಿಸಿಕೊಳ್ಳುವಿಕೆ (Iಟಿvoಟvemeಟಿಣ) ಮುಖ್ಯವಾಗುತ್ತದೆ. ಅವರ ಇತರ ಯಾವುದೇ ವರ್ತನೆಗಳು ಪ್ರೇಕ್ಷಕನಿಗೆ ನೇರವಾಗಿ ತಲುಪುವುದರಿಂದ ಅವು ರಂಗಭಾಷೆಗೆ ತೊಡಕನ್ನುಂಟು ಮಾಡುತ್ತವೆ.

ಹೀಗಾಗಿ ಮುಮ್ಮೇಳ ಹಾಗೂ ಹಿಮ್ಮೇಳ ಒಟ್ಟಾಗಿ ಪ್ರಸಂಗವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ದುಡಿಯಬೇಕಾಗುತ್ತದೆ. ಇದರಲ್ಲಿ ಹೆಚ್ಚಿನ ಶ್ರದ್ಧೆ ತೋರುವುದರಿಂದಲೇ ಬಡಗುತಿಟ್ಟಿನ ಆಟಗಳು ಕಲಾಸ್ವಾದಕರಿಗೆ ಇಷ್ಟವಾಗುತ್ತವೆ. ಅನೇಕ ಯಕ್ಷಗಾನ ಕಲಾಸಕ್ತರು ಬೆಂಗಳೂರಿನಲ್ಲಾಗಲೀ, ಊರಿನಲ್ಲಾಗಲೀ ಕೇಳುವ ಪ್ರಶ್ನೆಯೆಂದರೆ ಬಡಗುತಿಟ್ಟಿಗೆ ಜನಸೇರುವಂತೆ ತೆಂಕುತಿಟ್ಟಿಗೆ ಯಾಕೆ ಸೇರುವುದಿಲ್ಲ? ಈ ಪ್ರಶ್ನೆಯ ಪ್ರಸ್ತುತತೆಯನ್ನೇ ತೆಂಕಿನವರು ಆಕ್ಷೇಪಿಸಬಹುದು. ಆದರೆ ಪ್ರಶ್ನೆ ಇರುವುದಂತೂ ಸತ್ಯ.

ನನ್ನ ಉತ್ತರವೇನೆಂದರೆ ತೆಂಕಿನಲ್ಲಿ ರಂಗಭಾಷೆಯ ಕೊರತೆಯದ್ದೇ ಸಮಸ್ಯೆ. ಪ್ರದರ್ಶನದ ಯಶಸ್ಸಿಗೆ ಹಿಮ್ಮೇಳ-ಮುಮ್ಮೇಳದವರ ಪೂರ್ಣ ತೊಡಗಿಸಿಕೊಳ್ಳುವಿಕೆ ಹಾಗೂ ರಂಗ ಭಾಷೆಯೂ ಮುಖ್ಯ. ಹಿಂದಿನಿಂದ ಇದ್ದ ಕ್ರಮಗಳನ್ನು ಅಲ್ಪ-ಸ್ವಲ್ಪ ಬಿಡುವುದರಲ್ಲಿ ನಿರ್ದೇಶಕರ ತಗಾದೆ ಇಲ್ಲದಿರುವುದೂ ಇದಕ್ಕೆ ಕಾರಣ. ಹಾಗಾಗಿ ಕಲಾವಿದರು ಭಾಗವತರ ನಿರ್ದೇಶನದಲ್ಲಿ ದುಡಿಯಲು ಸಿದ್ಧರಾಗಿ ಭಾಗವತರು ರಂಗಭಾಷೆಯ ಮರ್ಮಗಳನ್ನರಿತು ನಿರ್ದೇಶನ ನೀಡಿದರೆ ಆಗ ಯಕ್ಷಗಾನ ಪ್ರದರ್ಶನ ಮನಮುಟ್ಟುವುದರಲ್ಲಿ ಸಂದೇಹವಿಲ್ಲ. ಈ ದೃಷ್ಟಿಯಿಂದ ರಂಗಭಾಷೆಯ ಅಧ್ಯಯನ ಕಾರ್ಯಾಗಾರಗಳನ್ನು ನಡೆಸುವ ಅಗತ್ಯವಿದೆ.

(ಲೇಖಕರು ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರು, ಮತ್ತು ಸಮಾಜಶಾಸ್ತ್ರದ ಹಿರಿಯ ಉಪನ್ಯಾಸಕರು)

ವಿದೇಶಗಳಲ್ಲಿ ಭರತನಾಟ್ಯ
ಇಂದಿಗೆ ಹಲವು ದೇಶಗಳಲ್ಲಿ ಸಂಸ್ಥೆ- ಸಮಾರಂಭ- ಆಚರಣೆಗಳಲ್ಲಿ ಭರತನಾಟ್ಯದ ಘಲಿರು ಸದಾ ಕೇಳುತ್ತಲಿದೆ. ಹಿರಿಯ ನಾಟ್ಯಗುರುಗಳಿಂದ ಮತ್ತು ಅವರ ವಲಸೆ ಹೋದ ಶಿಷ್ಯವರ್ಗದಿಂದ ವಿದೇಶಗಳಲ್ಲಿ ಭರತನಾಟ್ಯದ ಪ್ರಸಾರ ಅನೂಚಾನವಾಗಿ ನಡೆದು ಬಂದಿದೆ. ಭಾರತದ ಅದೆಷ್ಟೋ ಸುಪ್ರಸಿದ್ಧ ಕಲಾವಿದರ ಪ್ರದರ್ಶನಗಳು, ಕಾರ್ಯಾಗಾರಗಳು, ಉಪನ್ಯಾಸಗಳು, ತರಗತಿಗಳು, ವಿಸ್ತರಣಾ ಶಾಲೆಗಳು ಮತ್ತಷ್ಟು ರಸಿಕರನ್ನು, ವಿದ್ಯಾರ್ಥಿಗಳನ್ನು ಹೆಚ್ಚಿಸುತ್ತಲಿದೆ. ವಲಸೆ ಹೋದ ಹಲವು ಭಾರತೀಯರು ಭರತನಾಟ್ಯದ ಕಂಪನ್ನು ಪಸರಿಸಿದ್ದಾರೆ. ಇದರೊಂದಿಗೆ ಅದೆಷ್ಟೋ ಕಲಾವಿದರು ಭಾರತೀಯ ಸಂಸ್ಕೃತಿ, ಭರತನಾಟ್ಯದೆಡೆಗೆ ಆಸಕ್ತಿ ಮೂಡಿಸಿಕೊಂಡ ಅಲ್ಲಲ್ಲಿನ ಜನಾಂಗದವರನ್ನು ವಿವಾಹವಾಗಿ ನೃತ್ಯಕ್ಕೆ ಹೊಸ ತಲೆಮಾರನ್ನು ಕಾಣಿಕೆಯಿತ್ತಿದ್ದಾರೆ.

ಭರತನಾಟ್ಯ, ಭಾರತೀಯ ಸಂಸ್ಕೃತಿಯೆಡೆಗೆ ಪ್ರೇರಿತರಾದ ಅದೆಷ್ಟೋ ವಿದೇಶಿಯರು ತಮ್ಮ ನಡೆ ನುಡಿ, ನಾಮಧೇಯವನ್ನು ಭಾರತೀಯ ಸಂಸ್ಕೃತಿ-ಸಂದರ್ಭಕ್ಕನುಗುಣವಾಗಿ ಬದಲಾಯಿಸಿಕೊಳ್ಳುತ್ತಾ ಬಂದಿರುವುದು ನಮ್ಮ ಹಿರಿಮೆ ಮತ್ತು ವೈಶಿಷ್ಟ್ಯತೆಗೆ ಸಾಕ್ಷಿ. ಉದಾ : ಫ್ರಾನ್ಸ್‌ನ ಕಾಟಿಯಾ ನಾಟ್ಯಾಚಾರ್ಯ ಮುರಳೀಧರ್‌ರಾಯರ ಶಿಷ್ಯೆಯಾಗಿ ಮನೋಛ್ಛಾಯಾವೆಂದು ಹೆಸರು ಬದಲಿಸಿದ್ದು, ಅಥೆನ್ಸ್‌ನ ಲಿಡಾ ಸೈಟಾನಿಡಿಸ್ ಶಾಂತಲಾ ಆದದ್ದು, ಕೆನಡಾದ ಸಂಶೋಧಕಿ ಅನ್ನೇ ಮಾರಿ ಗ್ಯಾಸ್ಟನ್ ಅಂಜಲಿಯೆನಿಸಿದ್ದು,   ಜಪಾನ್‌ನ ಮಾಚಿಕೋ (ಲಕ್ಷ್ಮೀ),  ಸ್ವಿಟ್ಜರ್ ಲ್ಯಾಂಡಿನ ಬಾರ್ಬರಾ ದೇಜುಂಗ್ ( ಭೈರವಿ).., ಹೀಗೆ ಹಲವು ಉದಾಹರಣೆಗಳು.

ಹಾಗಾದರೆ ಬನ್ನಿ, ವಿಶ್ವದಲ್ಲಿ ಆರ್ಥಿಕ ಅನುಕೂಲದ ದೃಷ್ಟಿಯಿಂದ ಮುಂಚೂಣಿಯಲ್ಲಿರುವ ಎರಡು ರಾಷ್ಟ್ರಗಳ ನೃತ್ಯಸಂಸ್ಕೃತಿಯ ಕುರಿತು ಮಾತನಾಡೋಣ, ಈ ಕುರಿತಂತೆ ಈರ್ವರು ಕಲಾವಿದೆಯರು ಅಲ್ಲಿನ ಭರತನಾಟ್ಯದ ಸಂಸ್ಕೃತಿಯ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದು; ಅದರ ಒಂದು ಇಣುಕುನೋಟ ನಿಮ್ಮ ರಂಗಭ್ರಮರಿಯಲ್ಲಿ..

ಯು‌ಎಸ್‌ಎಯಲ್ಲಿ ಕಲಾವಿದೆಯಾಗಿ ಗುರುವಾಗಿಯೂ ಪ್ರಸಿದ್ಧಿ ಹೊಂದಿರುವ ಮೂಲತಃ ಉಡುಪಿಯವರಾದ ಶ್ರೀಮತಿ ಭ್ರಮರಿ ಶಿವಪ್ರಕಾಶ್…

ಭರತನಾಟ್ಯದ ಕಂಪು ವ್ಯಾಪಕವಾಗಿ ಹಬ್ಬಿರುವ ದೇಶಗಳ ಪೈಕಿ ಯು‌ಎಸ್‌ಎ ಪ್ರಥಮಸ್ಥಾನದಲ್ಲಿದೆಯೆಂದೇ ಹೇಳಬಹುದು. ಬಾಲಸರಸ್ವತಿ, ರುಕ್ಮಿಣೀ ದೇವಿ ಅರುಂಡೇಲ್, ಇಂದ್ರಾಣಿ ರಹಮಾನ್, ಪದ್ಮಿನಿ, ರಾಗಿಣಿ, ಲಲಿತಾ, ಕಮಲಾ ನಾರಾಯಣ್ ಮುಂತಾದವರು ಭರತನಾಟ್ಯದ ಕಂಪನು ಪಸರಿಸಿದವರಲ್ಲಿ ಅಗ್ರಗಣ್ಯರು. ಇವರ ನಂತರದ ದಶಕಗಳಲ್ಲಿ ವಿಜಿ ಪ್ರಕಾಶ್, ರೇವತಿ ಸತ್ಯು, ರಮ್ಯಾ ರಾಮ್ ನಾರಾಯಣ್, ಬಾಲದೇವಿ ಚಂದ್ರಶೇಖರ್, ವಿಜಿ ರಾವ್, ಡಾ. ಶ್ರೀಧರ್, ದಿವ್ಯಾ ನಾಯರ್, ಸೋನಾಲಿ ಸ್ಕಂದನ್, ನಳಿನೀ ರಾವ್, ಸುಧಾ ರಘುರಾಂ, ಆಶಾ ಗೋಪಾಲ್, ಮಾಲತೀ ಅಯ್ಯಂಗಾರ್, ಶ್ರೀದೇವೀ ಅಜಯ್ ಮುಂತಾದವರು ಮಿಂಚಿದ್ದಾರೆ. ಮೂರನೇ ತಲೆಮಾರಿನ ಕಲಾವಿದರ ಪೈಕಿ ಮಾಲತೀ ಪ್ರಕಾಶ್, ಲಕ್ಷ್ಮೀ ಅಯ್ಯಂಗಾರ್, ಜಾನ್ ಆರ್. ಪ್ರೀಮನ್, ಅಂಜನಾ ರಂಜನ್ ಪ್ರಮುಖರು. ಆದರೂ ಗುಣಾತ್ಮಕ ಸಂಖ್ಯಾತ್ಮಕವಾಗಿ ಅವಲೋಖಿಸಿದಾಗ ಈ ಪಟ್ಟಿ ಅಪೂರ್ಣವೇ ಸರಿ. ಇಂದಿಗೆ ಹಲವು ನೃತ್ಯ ಶಾಲೆಗಳು, ಗುರುಗಳು, ಏಕವ್ಯಕ್ತಿ ಕಲಾವಿದರು ಯು‌ಎಸ್‌ಎಯ ೩೦ ವಿವಿಧ ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ.

ಭಾರತದಲ್ಲಿರುವಷ್ಟೇ ಯು‌ಎಸ್‌ನಲ್ಲಿಯೂ ಸಾಕಷ್ಟು ಭರತನಾಟ್ಯ ಶಾಲೆಗಳು, ತರಗತಿಗಳೂ ಇವೆ. ಅದರಲ್ಲೂ ಭಾರತೀಯರೇ ಹೆಚ್ಚಿರುವ ಪ್ರದೇಶಗಳಲ್ಲಿ ಈ ಹಂಚಿಕೆ ಹೆಚ್ಚು. ಅಲ್ಲಿನ ಮೂಲನಿವಾಸಿಗಳಂತೆಯೇ ಭಾರತೀಯರೂ ನೋಂದಾಯಿತ ಶಾಲೆ, ತರಗತಿಗಳನ್ನು ನಡೆಸುತ್ತಿದ್ದು ದೇಶಾದ್ಯಂತ ನೃತ್ಯ ಪ್ರವಾಸಗಳನ್ನು, ಕಾರ್ಯಕ್ರಮಗಳನ್ನು ಕೈಗೊಳ್ಳುವವರಿದ್ದಾರೆ. ಇವುಗಳ ಪೈಕಿ ಶೇ.೬೦ರಷ್ಟು ಗುಣಾತ್ಮಕವಾಗಿಯೇ ಎಲ್ಲವೂ ಇವೆ. ವರ್ಷದಲ್ಲಿ ಕನಿಷ್ಟ ಪಕ್ಷ ಐವತ್ತಾದರೂ ರಂಗಪ್ರವೇಶಗಳು ಜರುಗುತ್ತವೆ. ಪ್ರತಿಯೊಂದು ರಂಗಪ್ರವೇಶಗಳೂ ಭಾರತದಲ್ಲಿ ಹೇಗೆ ಜರುಗುತ್ತವೋ ಹಾಗೆಯೇ ಏರ್ಪಾಡುಗೊಂಡಿರುತ್ತವೆ. ನಮ್ಮ ಅನಾದಿ ಕಾಲದ ಶ್ರುತಿ, ಸ್ಮೃತಿ ವಿದ್ಯಾಭಾಸದ ಕ್ರಮದಿಂದಾಗಿ ಭಾರತದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಇಲ್ಲಿನ ಶಾಸ್ತ್ರೀಯ ಸಂಸ್ಕೃತಿಗಳನ್ನು ಅರಗಿಸಿಕೊಳ್ಳುವುದು ಸುಲಭ ಮತ್ತು ಪರಿಣಾಮಕಾರಿ. ಇದರಿಂದಾಗಿಯೋ ಏನೋ ಎಂಬಂತೆ ಭಾರತದ ಹಲವು ರಂಗಪ್ರವೇಶಗಳು ಮಕ್ಕಳು ಕಾಲೇಜಿಗೆ ಬರುವುದಕ್ಕಿಂತಲೂ ಮುಂಚೆ ಜರುಗಿ ಅಂತ್ಯ ಕಾಣುತ್ತವೆ. ಕೆಲವು ಮಂದಿ ಮಾತ್ರ ರಂಗಪ್ರವೇಶದ ನಂತರ ನೃತ್ಯ ಶಿಕ್ಷಣವನ್ನು ಮುಂದುವರೆಸುತ್ತಾರೆ. ಇದಕ್ಕೆ ಅಮೆರಿಕಾ ಹೊರತೇನೂ ಅಲ್ಲ.

ಹಲವು ಬಾರಿ ಸಮಾಜ-ಸಮುದಾಯದ ಒಳಿತಿಗಾಗಿ ವಂತಿಗೆ ಸಂಗ್ರಹಿಸಿ ಉಚಿತ ಕಾರ್ಯಕ್ರಮಗಳನ್ನೇ ನಡೆಸಲಾಗುತ್ತದೆ. ಸರ್ಕಾರವೂ ಉತ್ತಮ ಕಾರ್ಯಕ್ರಮಗಳಿಗೆ ಅನುದಾನ, ಸಹಾಯ ನೀಡುತ್ತದೆ. ಅಮೆರಿಕಾದ ದೇವಸ್ಥಾನಗಳು, ಸ್ಥಳೀಯ ಭಾರತೀಯ ಸಂಘಟನೆಗಳು, ಒಕ್ಕೂಟಗಳು ( ಕನ್ನಡ ಸಂಘ, ತಮಿಳು ಸಂಘ, ತೆಲುಗು ಸಂಘ, ಮಲಯಾಳಂ ಸಂಘ) ಭಾರತೀಯ ಶಾಸ್ತ್ರೀಯ ಕಲೆಗಳಿಗೆ ಉತ್ತಮ ಪ್ರೋತ್ಸಾಹ ಮತ್ತು ಅವಕಾಶ ಕಲ್ಪಿಸುತ್ತಿವೆ. ಅದರಲ್ಲೂ ಪುರಂದರದಾಸರ-ತ್ಯಾಗರಾಜರ ಆರಾಧನೆಗಳು ಕಳೆದ ೨೫ ವರುಷಗಳಿಂದಲೂ ರಾಷ್ಟ್ರೀಯವಾಗಿಯೂ, ಸ್ಥಳೀಯ ಸಮುದಾಯಗಳ ನೆಲೆಯಲ್ಲಿಯೂ ಆಚರಿಸಿಕೊಂಡು ಬರಲಾಗುತ್ತಿದೆ. ಕೆಲವು ಬೃಹತ್ ಕಾರ್ಯಕ್ರಮಗಳಿಗೆ ಭಾರತದ ದಾನಿಗಳ ಪ್ರಾಯೋಜಕತ್ವವೂ ಇರುತ್ತದೆ. ಹೀಗೆ ಅಮೆರಿಕಾದ ರಂಗಭೂಮಿ, ಮತ್ತು ಬಹು ಸಾಂಸ್ಕೃತಿಕ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿದೆ ; ಮತ್ತು ಬದಲಾದ ದೇಶ-ಕಾಲ- ಸಂದರ್ಭಗಳಿಗೆ ಅನುಗುಣವಾಗಿ ಸೂಕ್ತವಾದ ಸಂವಹನ ಸಾಧಿಸಲು ವಿಷಯ-ವಸ್ತುಗಳಲ್ಲಿ ತಕ್ಕಮಟ್ಟಿನ ಮಾರ್ಪಾಡು ಸಹಜವೆನಿಸಿದೆ.

ಭಾರತೀಯ ಕಲೆಗಳ ಕುರಿತ ಸಣ್ಣ ಮಟ್ಟಿಗಿನ ಅರಿವು ಇರುವ ಪೋಷಕರೂ ಕೂಡಾ ತಮ್ಮ ಮಕ್ಕಳನ್ನು ಎಳೆವಯಸ್ಸಿನಲ್ಲಿಯೇ ಕಲೆಗಳ ಕಲಿಕೆಗೆ ಅವಕಾಶ ಕಲ್ಪಿಸುತ್ತಾರೆ. ಭಾರತದಲ್ಲಿನ ಐದು ವಯಸ್ಸಿನ ಮಗುವಿಗೆ ಕಲಿಸುವ ರೀತಿಗೂ, ಯು‌ಎಸ್‌ಎಯ ಅದೇ ವಯಸ್ಸಿನ ಮಗುವಿಗೂ ಕಲಿಸುವ ರೀತಿ, ಪ್ರಕ್ರಿಯೆ ವಿಭಿನ್ನವಾಗಿರುತ್ತದೆ. ಅಮೆರಿಕಾದಲ್ಲಿ ಹುಟ್ಟಿದ ಭಾರತೀಯ ಮಕ್ಕಳು ಸಮಾಜದಲ್ಲಿ ನೋಡುವ ಪಾಶ್ಚಾತ್ಯ ಸಂಸ್ಕೃತಿ ಮತ್ತು ಮನೆಯೊಳಗಿನ ಭಾರತೀಯ ನೆಲೆಗಟ್ಟಿನ ಸಂಸ್ಕೃತಿಗೂ ಕಾಣುವ ವ್ಯತ್ಯಾಸವೇ ಇದಕ್ಕೆ ಕಾರಣ. ಹಾಗಾಗಿ ಅಲ್ಲಿನ ವಿದ್ಯಾಭ್ಯಾಸ ಪದ್ಧತಿಯೂ ವಿಭಿನ್ನ.

ಅಲ್ಲಿನ ಜನರು ಪ್ರಾರಂಭಿಕ ಶಿಕ್ಷಣದಲ್ಲೇ ಪ್ರತಿಯೊಂದೂ ವಿಷಯ ಪಾಠಗಳನ್ನು ಸೃಷ್ಟಿಶೀಲವಾದ ರೀತಿಯಲ್ಲಿ ಅಳವಡಿಸಿ ಸಣ್ಣ ವಯಸ್ಸಿನಿಂದಲೇ ಕ್ರಮಬದ್ಧವಾಗಿ ಕಲಿಸುತ್ತಾರೆ. ಅಂಕ ಅಥವಾ ಫಲಿತಾಂಶ ಕೇಂದ್ರಿತ ವ್ಯವಸ್ಥೆ ಅಲ್ಲಿನದ್ದಲ್ಲ ; ಬದಲಾಗಿ ಥಿಯರಿಗಿಂತಲೂ ಹೆಚ್ಚು ಪ್ರಾಯೋಗಿಕ ಶಿಕ್ಷಣಕ್ಕೇ ಒತ್ತು ನೀಡಲಾಗುತ್ತದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ೩ನೇ ತರಗತಿಯಿಂದಲೇ ಮಕ್ಕಳು ಕಡ್ಡಾಯವಾಗಿ ಒಂದೋ ಹಾಡುಗಾರಿಕೆ ಅಥವಾ ವಾದ್ಯಸಂಗೀತ ಕಲಿಯಬೇಕು. ಇದರಿಂದಾಗಿ ಅವರು ಕಾಲೇಜು ತಲುಪುವ ವಯಸ್ಸಿಗೆ ಯಾವುದೇ ಕ್ಷೇತ್ರದ ಕುರಿತಾದರೂ ಅವರ ಭವಿಷ್ಯದ ಕುರಿತಂತೆ ಸ್ಪಷ್ಟ ಅರಿವು ಅವರಿಗಿರುತ್ತದೆ.

ಹಾಗಾಗಿ ಪಠ್ಯಕ್ರಮಗಳು ಮತ್ತು ವಿಧಾನ, ಕಲೆಯ ತಂತ್ರಗಳು ಅವರಿಗೆ ತಿಳಿವು ಮೂಡಿಸುವಂತೆ ಇರಬೇಕಾಗುತ್ತದೆ. ನಮ್ಮ ಕಲೆಗಳನ್ನು ಕಲಿಯುವವರಿಗೆ ಹಿಂದೂ ಪುರಾಣ, ಪೌರಾಣಿಕ ಕಥೆಗಳನ್ನೂ ಜೊತೆಯಲ್ಲಿ ಹೇಳಬೇಕಾಗುತ್ತದೆ. ಇದರೊಂದಿಗೆ ಸಂಸ್ಕೃತಿ ಕುರಿತಾದ ತರಗತಿಗಳು, ಭಾಷಾ ತರಗತಿಗಳು ಲಭ್ಯವಿದ್ದು ; ನಮ್ಮ ವಸ್ತು- ನಿರೂಪಣೆ-ಧರ್ಮಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವೆನಿಸುತ್ತವೆ.

ಹಾಗೆಂದು ನೇತ್ಯಾತ್ಮಕ ಪರಿಣಾಮಗಳಿಲ್ಲವೆಂದಲ್ಲ. ಅಲ್ಲಿನ ಸೃಷ್ಟಿಶೀಲ ಮನಸ್ಥಿತಿ ಮತ್ತು ಶೋಧಕ ಗುಣದಿಂದಾಗಿ ಕೆಲವೊಮ್ಮೆ ವಿಪರೀತವಾಗುವುದೂ ಇದೆ. ಎಷ್ಟೆಂದರೆ ಸರಿಯಾಗಿ ಕಲಿಯುವ ಮುಂಚೆಯೇ ಹೊಸ ಅಡವು, ಹೆಜ್ಜೆಗಳನ್ನು ಕಂಡು ಹಿಡಿದು ಅದು ತಮ್ಮ ‘ಸೃಷ್ಟಿ’ ಎಂದು ಹೇಳುವ ಮಟ್ಟಿಗೆ ! ಅಷ್ಟೇ ಅಲ್ಲದೆ ಅಲ್ಲಿನ ಸಾರಿಗೆ ವ್ಯವಸ್ಥೆಯ ತುಂಬಾ ಕಾರುಗಳೇ ತುಂಬಿಕೊಂಡಿದ್ದು; ಹವಾಮಾನ ವೈಪರೀತ್ಯಗಳಿಂದಾಗಿ ಮನೆ-ಆಫೀಸು-ಶಾಲೆ ಇತ್ಯಾದಿಯಾಗಿ ಎಲ್ಲೆಲ್ಲೂ ‘ಕಂಡೀಷನ್ಡ್’ ಹವೆಯೇ ಇರುವುದರಿಂದ ದೈಹಿಕ ಶ್ರಮದ ಕೆಲಸಗಳ ಸಾಧ್ಯತೆಗಳು ತೀರಾ ಕಡಿಮೆ.  ನಡೆದು ಶಾಲೆಗೆ ಬರುವುದೋ ಅಥವಾ ಬಸ್ಸುಗಳಲ್ಲಿ ಬರುವುದೋ ಇಲ್ಲವೇ ಇಲ್ಲವೆಂಬಷ್ಟು ವಿರಳ. ಇದರಿಂದಾಗಿ ನೃತ್ಯದ ಸಂದರ್ಭಗಳಲ್ಲಿ ಬೆವರು ತರಿಸುವಂತೆ ಶ್ರಮವಹಿಸಿ ಕುಣಿಯುವುದೆಂದರೆ ಇಲ್ಲಿನವರಿಗೆ ಸ್ವಲ್ಪ ಅಸಾಧ್ಯವೇ ಆಗಿದೆ !

ಕಳೆದ ೩೨ ವರ್ಷಗಳಿಂದ ಇಂಗ್ಲೆಂಡ್ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನೃತ್ಯಾಸಕ್ತರಿಗೆ ಗುರುವಾಗಿ ಮುಂಚೂಣಿಯಲ್ಲಿರುವ ೧೯೯೦ರಲ್ಲಿ ಚಿತ್ರಲೇಖಾ ಡ್ಯಾನ್ಸ್ ಕಂಪೆನಿಯ ನಿರ್ದೇಶಕಿಯಾದ ಮೂಲತಃ ಕಾಸರಗೋಡಿನ ಚಿತ್ರಲೇಖಾ ಬೋಳಾರ್..

ಬ್ರಿಟನ್‌ನಲ್ಲಿ ಗುರುಶಿಷ್ಯ ಪರಂಪರೆ ಭಾರತದಂತೆ ಇಲ್ಲ. ಅಲ್ಲಿನ ವಾತಾವರಣವೇ ವಿಭಿನ್ನ. ಅಲ್ಲಿನ ಮಕ್ಕಳಿಗೆ ಹಿರಿ-ಕಿರಿಯ ಭಾವ, ನಮಸ್ಕಾರ ಮಾಡುವುದು, ಆಶೀರ್ವಾದ ಮುಂತಾದ ಕ್ರಮಗಳು ಗೊತ್ತಿಲ್ಲ. ಗುರುಗಳನ್ನು ತಮ್ಮ ಸಹಪಾಠಿಗಳಂತೆಯೇ ಏಕವಚನದಲ್ಲಿ ಹೆಸರು ಹಿಡಿದು ಸಂಬೋಧಿಸುವುದಿದೆ. ಹಾಗಂತ ಎಲ್ಲಾ ವಿಷಯವನ್ನು ಹೇಳಿಕೊಟ್ಟು ಮಾಡಿಸಲಿಕ್ಕಾಗದು. ಅದು ಮನಸ್ಸಿನಿಂದ ಮೂಡಬೇಕಾದಂತದ್ದು.

ಈಗೀಗ ನಮ್ಮ ದೇಶದ ಪ್ರವಾಸ, ಕಾರ್ಯಕ್ರಮ, ಸಂಸ್ಕೃತಿಯನ್ನು ನೋಡಿ ಮತ್ತು ಹಿರಿಯ ವಿದ್ಯಾರ್ಥಿಗಳ ಪ್ರಭಾವದಿಂದಾಗಿ ನಿರೀಕ್ಷಿತ ಬದಲಾವಣೆಗಳಾಗಿವೆ. ಅದರಲ್ಲೂ ಇತ್ತೀಚೆಗೆ ಭರತನಾಟ್ಯದಲ್ಲಿ ಆಂಗಿಕ ಅಭಿನಯಕ್ಕೆ ಸಂಬಂಧಿಸಿದಂತೆ ಹಲವು ಅವಕಾಶಗಳನ್ನು, ವಸ್ತು ವಿಷಯಗಳನ್ನು ಬಳಸಿಕೊಂಡು ಪ್ರಯೋಗ ಮಾಡುವ ಅವಕಾಶ ಹೆಚ್ಚಾಗಿದೆ. ಭಾರತದ ಅದೆಷ್ಟೋ ಕಲಾವಿದರು ನಮ್ಮೊಂದಿಗೆ ನೃತ್ಯ ಸಂಬಂಧೀ ಕಾರ್ಯಗಳಿಗೆ ಜೊತೆಯಾಗಿದ್ದಾರೆ.

ಅಲ್ಲಿ ರಂಜನೆಗಿಂತಲೂ ಹೆಚ್ಚಾಗಿ ನೃತ್ಯವನ್ನು ಶೈಕ್ಷಣಿಕವಾಗಿ ನೋಡಲಾಗುತ್ತದೆ. ನೃತ್ಯದ ಶೈಕ್ಷಣಿಕ ಸಂವಹನ ಮೌಲ್ಯಗಳ ಬಗ್ಗೆ ಇಲ್ಲಿಗಿಂತಲೂ ಅಲ್ಲಿ ಹೆಚ್ಚಿನ ಆಸಕ್ತಿ ಇದೆ. ನಮ್ಮಲ್ಲಿ ಓದಿಗೆ ಇರುವಂತದ್ದಕ್ಕೆಲ್ಲಾ ಅಲ್ಲಿ ಪ್ರಾಯೋಗಿಕವಾಗಿ ಕಾಣಲು, ವಿಷದವಾಗಿ ನೋಡಲು ಇಷ್ಟಪಡುತ್ತಾರೆ ಮತ್ತು ಬಳಸುತ್ತಾರೆ ಕೂಡಾ ! ಅಲ್ಲಿ ಸಂಗೀತ-ನೃತ್ಯ ಶಿಕ್ಷಕರಿಗೂ ಕಲಿಕೆಯನ್ನು ಅಪ್‌ಡೇಟ್ ಮಾಡುತ್ತಲಿರಬೇಕಾದ ಕೋರ್ಸ್‌ಗಳಿರುತ್ತವೆ.

ಅಲ್ಲಿನ ಮಕ್ಕಳಿಗೆ ಯಾವುದೇ ಪುರಾಣದ ಮುಖ್ಯ ವಸ್ತುವನ್ನು ಮಾತ್ರ ವಿವರಿಸಬೇಕು. ಹೆಚ್ಚು ಉಪಕಥೆಗಳನ್ನೋ ಅಥವಾ ಕಥಾ ವಿಸ್ತರಣೆಯನ್ನೋ ಮಾಡಿದರೆ ಅವರಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಹಾಗಾಗಿ ಬಹುಪ್ರಚಲಿತವಿರುವ ನಂಬಿಕೆ, ಕಥೆಗಳನ್ನು ನೃತ್ಯಕ್ಕೆ ಬಳಸಿಕೊಳ್ಳುವುದು ಹೆಚ್ಚು. ಇಂಗ್ಲೆಂಡ್ ಮುಂತಾದ ಕಡೆಗಳಲ್ಲಿ ಸಾಹಿತ್ಯಕ್ಕೆ ಅಷ್ಟು ಮಹತ್ತ್ವ ಕೊಡಲಾಗುವುದಿಲ್ಲ. ಕಾರಣ ಭಾಷೆಯ ತೊಡಕು. ಹಾಗಾಗಿ ಸಾಹಿತ್ಯ ಬಳಸಿದ್ದೇ ಆದರೆ ಪ್ರತೀ ಶಬ್ದವನ್ನು ಅರ್ಥ ಮಾಡಿಸಲು ಪುನಃ ನಿರೂಪಣೆಯ ಮೂಲಕ ಹೆಣಗಬೇಕು. ಇದರಿಂದ ಕಲಾವಿದರು ವಾದ್ಯ ಸಂಗೀತಕ್ಕೆ ನೃತ್ಯದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.

ಅಂತೆಯೇ ನೃತ್ಯದ ಎಲ್ಲಾ ಬಗೆಯ ಅಡವು ಕಲಿಯುವ ಮಟ್ಟಿಗೆ ತಾಳ್ಮೆಯೂ ಅಲ್ಲಿನ ಮಕ್ಕಳಿಗೆ ಇರುವುದಿಲ್ಲ. ಹಾಗಾಗಿ ನನ್ನ ಕಲಿಕಾ ಕ್ರಮದಲ್ಲಿ ಕೆಲವೊಂದು ಹೆಜ್ಜೆಗಳು, ಅಡವುಗಳು, ಭಾವನೆಗಳು, ಹಸ್ತಗಳನ್ನು ಮಾತ್ರ ಪ್ರಾಥಮಿಕವಾಗಿ ಹೇಳಿಕೊಡುತ್ತೇನೆ. ನೃತ್ಯದ ವಿಷಯಗಳು ಸರಳವಾಗಿ, ಸುಲಭವಾಗಿರುವಂತೆ ನೋಡಿಕೊಳ್ಳುವುದು ತುಂಬಾ ಅಗತ್ಯ. ಇದರಿಂದ ಪ್ರೇಕ್ಷಕರನ್ನು ಸೆಳೆಯುವುದೂ ಸುಲಭ ಸಾಧ್ಯ

ಮುರಳೀ ರವಳೀ…
ಹವ್ಯಕ ಭಾಷೆ ಯಾರಿಗೆ ತಾನೇ ಗೊತ್ತಿಲ್ಲ. ಅದು ಕೇವಲ ಸೀಮಿತ ವರ್ಗದ  ಭಾಷೆಯಾಗಿ, ಕನ್ನಡದ ಉಪಭಾಷೆಯಾಗಿ ಮಾತ್ರ ಉಳಿಯದೆ ; ತನ್ನ ಭಾಷೆಯೊಳಗೂ ಹತ್ತು ಹಲವು ಸ್ತರದ  ವೈವಿಧ್ಯತೆಗಳನ್ನು ಚಾಚಿಗೊಂಡ ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ  ಭಾಷೆ. ಬಹುಷಃ ಪ್ರತಿಯೋರ್ವ ಯಕ್ಷಗಾನ ಕಲಾವಿದನಿಗೂ ಈ ಭಾಷೆ ಮೊದಲಿನಿಂದಲೂ ಬಹಳ ಆಪ್ತ.  ‘ಒಪ್ಪಣ್ಣ’ನೆಂಬ (www.oppanna.com) ಕಾವ್ಯನಾಮದಲ್ಲಿ ಬರೆಯುವ ;  ವಿಶಿಷ್ಟ ಬರೆವಣಿಗೆಯ ಶೈಲಿಯುಳ್ಳ ಮಹೇಶ್ ಎಳ್ಯಡ್ಕ ಅವರ ಹವ್ಯಕ ಭಾಷಾ ಸೊಗಡಿನ ; ಸಂಗೀತದ ಕುರಿತಾದ  ಲೇಖನ ಈ ಬಾರಿ ನಿಮ್ಮ ಓದಿಗೆ. ಸಾಮಾನ್ಯ ವ್ಯಕ್ತಿಯೊಬ್ಬನು ತನ್ನ ವ್ಯಾಪ್ತಿ-ನೆಲೆಯಲ್ಲಿಯೂ  ಸಂಗೀತ-ನೃತ್ಯವನ್ನು ಯಾವ್ಯಾವ ಆಯಾಮಗಳಲ್ಲಿ ನೋಡಬಹುದೆಂಬುದಕ್ಕೆ ಒಂದು ಪುಟ್ಟ ನಿದರ್ಶನವಿದು.  ಅಂದಹಾಗೆ ಓದುಗರ ವೈವಿಧ್ಯ ಓದುವಿಕೆಗೆ ಬೇಕಾಗಿ ಮಾಡುತ್ತಿರುವ ನೂಪುರ ಭ್ರಮರಿಯ ವಿಶಿಷ್ಟ  ಪ್ರಯೋಗಗಳಲ್ಲಿ ಇದೂ ಒಂದು. ಮುಂದಿನ ದಿನಗಳಲ್ಲಿ ತುಳು, ಕನ್ನಡದ ಉಪಭಾಷೆಗಳಾದಿಯಾಗಿ ನೀವು  ಇಂತಹುದೇ ಬರೆವಣಿಗೆಗಳಲ್ಲಿ ತೊಡಗಿಸಿಕೊಂಡು ಆಸ್ವಾದನೆಯ, ಬರೆಹಗಳ ಶೈಲಿಯ ಮಜಲುಗಳ ವ್ಯಾಪ್ತಿಯನ್ನು  ವಿಸ್ತರಿಸಬಹುದು.

ನೂಪುರ ಸದಭಿರುಚಿಯ ಪ್ರಯತ್ನಗಳಿಗೆ ಮುಕ್ತವಾಗಿದೆ.

ಮನುಷ್ಯ ಆಗಿ ಹುಟ್ಟಿದ ಮೇಗೆ ಸಂಗೀತ- ಸಾಹಿತ್ಯಲ್ಲಿ ಇಷ್ಟ ಇಪ್ಪಲೇ ಬೇಕಡ.  ಹಾಂಗೊಂದು ಮಾತು ಇದ್ದು. ಒಪ್ಪಣ್ಣಂಗುದೇ ನಿಂಗಳ ಹಾಂಗೇ ಸಂಗೀತಲ್ಲಿ ತುಂಬಾ ಆಸಕ್ತಿ, ಮದಲಿಂದಲೇ.  ಕೆಸೆಟ್ಟು ಹಾಕಿ ಕೇಳುಲೆ ಸುರು ಮಾಡಿರೆ ಊರು ಅಡಿ ಮೊಗಚ್ಚಿರೂ ಗೊಂತಾಗ. ಜೋನು ಹಿಗ್ಗಿನ್ಸು ಹಾಡಿದ  ‘ಎಂದರೋ…’, ಚೆಂಬೈ ಅಜ್ಜ ಹಾಡಿದ ‘ವಾತಾಪಿ…’, ಯೇಸುದಾಸಿನ ‘ಸಾರಸಮುಖಿ’, ಯಮ್ಮೆಲ್ವಿ ಅಜ್ಜಿ  ಹಾಡಿದ ‘ನನುಪಾಲಿಂಪ’ ಎಲ್ಲ ಕೆಸೆಟ್ಟುಗಳಲ್ಲಿ ಮಡಿಕ್ಕೊಂಡು ಇಕ್ಕು, ಯಕ್ಷಗಾನದ ಕೆಸೆಟ್ಟುಗಳ  ಒಟ್ಟೊಟ್ಟಿಂಗೆ! ಅಷ್ಟಪ್ಪಗ ಸಂಗೀತ ಹೇಳಿತ್ತು ಕಂಡ್ರೆ ಪದಂಗಳ ರಾಗವೂ, ತಾಳವೂ ಅರ್ತ ಅಕ್ಕು  ಅಷ್ಟೆ. ಭಾಷೆಯೂ, ಭಾವವೂ ಅರ್ತ ಆಗಿಯೊಂಡು ಇತ್ತಿಲ್ಲೆ. ಸಾಮಾನ್ಯವಾಗಿ ಕೇಳಿಗೊಂಡು ಇದ್ದದು  ದಕ್ಷಿಣಾದಿಯೇ ಇದಾ! ಸದ್ಯ ಉತ್ತರಾದಿಯುದೇ ಕೇಳುಲೆ ಸುರು ಮಾಡಿದ್ದಲಿ ಒಪ್ಪಣ್ಣ. ಅದರಲ್ಲಿ ‘ಭಾವ’  ಜಾಸ್ತಿ ಅಡ ಅಲ್ದಾ..!

ಓ ಮೊನ್ನೆ ಒಂದರಿ ಸಂಗೀತ ಕೇಳೆಕ್ಕು ಹೇಳಿ ಅನಿಸಿ ಅಪ್ಪಗ ಕೆಸೆಟ್ಟು ಪೆಟ್ಟಿಗೆ  ತೆಗದು ಕೂದುಗೊಂಡೆ. ಮೋಹನ ರಾಗ- ಡಾ. ಎಮ್. ಬಾಲಮುರಳಿ -ಹರಿಪ್ರಸಾದ್ ಚೌರಾಸಿಯಾ ಹೇಳಿ ಒಂದು  ಕೆಸೆಟ್ಟು ಕಂಡತ್ತು. ದ್ವಂದ್ವ ಅಡ, ಬಡಗಲಾಗಿ ಅದರ ‘ಜುಗಲ್ (ಯುಗಳ=೨) ಬಂದಿ’ ಹೇಳುದಡ. ಅದರ ಮೇಗೆ  ಇಬ್ರ ಪಟಂಗ. ಸಣ್ಣ ಮಕ್ಕೊ ಮಣ್ಣಿ ತಿಂಬಗ ಮಾಡಿದ ಹಾಂಗೆ ಮಾಡಿ, ಮುಗ್ದ ಕಣ್ಣಿಲಿ ಒಂದು ನೆಗೆ ಮಾಡಿ  ಇಪ್ಪ ಪೋಸಿಲಿ, ಲಾಲುಗಂದ ಬೊಟ್ಟು ಹಾಕಿದ – ಬಾಲಮುರಳಿಯ ಪಟ. ಅವನ ಬಲತ್ತಿಂಗೆ ಒಂದು ಉದ್ದದ ಕೊಳಲು  ಹಿಡ್ಕೊಂಡು – ದಕ್ಷಿಣಾದಿಯ ಕೊಳಲಿನ ಹಾಂಗೆ ಬರೇ ಸಣ್ಣದಲ್ಲ- ರಜ ಉದ್ದ, ರಜ್ಜ ತೋರ – ಕಾಂಬಲುದೇ,  ಸ್ವರವುದೇ! – ಬಾನ್ಸುರಿ (ಬಾನ್ಸು = ಬೆದುರು) ಹೇಳುದಡ ಅದಕ್ಕೆ – ಅದರ ಹಿಡ್ಕೊಂಡು ಬೆರಳಿಲಿ –  ಮಾಟ ಮಾಡಿದ ಹಾಂಗೆ – ಎಂತದೋ ಸಂಜ್ಙೆ ಕೊಟ್ಟುಗೊಂಡು – ಈ ಕೆಸೆಟ್ಟಿನ ಕೇಳು ಹೇಳಿಗೊಂಡು  ಇತ್ತಿದ್ದಲಿ ಚೌರಾಸಿಯಲಿ.

ರಜ ಆಸಕ್ತಿ ಹುಟ್ಟುಸಿತ್ತು.

ಬಾಲಮುರಳಿ ಹೇಳಿರೆ ದಕ್ಷಿಣಾದಿ ಸಂಗೀತದ ಬಲಿಪ್ಪ. ಒಳ್ಳೆ ಸ್ವರವುದೇ ಇದಾ! ಮಂದ್ರ  ಷಡ್ಜಂದ ತಾರಕ ನಿಷಾದವರೆಗೆ ಆರಾಮಲ್ಲಿ ಏರುಸುತ್ತಲಿ. ಆಶು ಕವಿ ಅಡ. ಸ್ವತಃ ಕೀರ್ತನೆಗಳ ಬರದು  ಹಾಡ್ತನಡ. ಅತ್ಲಾಗಿ ಚೌರಾಸಿಯ ಹೇಳಿರುದೇ ಚಿಲ್ಲರೆ ಜೆನ ಏನಲ್ಲ. ಕೊಳಲಿನ ಮಾತಾಡುಸುತ್ತನಡ. ಅಂತೂ,  ಬಾಲಮುರಳಿ-ಚೌರಾಸಿಯ ಒಂದು ವಿಶೇಷ ಬೆರಕ್ಕೆ ಹೇಳಿ ಅನಿಸಿತ್ತು ಒಪ್ಪಣ್ಣಂಗೆ.

ಇವಿಬ್ರುದೇ ಹುಟ್ಟಿದ್ದು, ಸಂಗೀತ ಕಲ್ತದು, ಪ್ರಸಿದ್ಧಿಗೆ ಬಂದದು – ಎಲ್ಲವುದೇ ಬೇರೆ  ಬೇರೆ ಊರಿಲಿ. ಇಬ್ರಿಂಗೂ ಗುರುಮುಖೇನ ಪಾಟ ಆದರೂ, ಆದ ಕ್ರಮವೇ ಬೇರೆ ಬೇರೆ. ಕಲ್ತ ಸಂಗೀತಂಗೊ ಬೇರೆ  ಬೇರೆ. ಉಂಬ ಊಟ ಬೇರೆ, ಹಾಡಿ ಬೆಳದ ವಾತಾವರಣ ಬೇರೆ ಬೇರೆ. ಪಕ್ಕನೆ ಅವರ ಇಬ್ರನ್ನೂ ಒಂದೇ ಕಚೇರಿಗೆ  ಕೂರುಸಿ ಅವಿಲು ಮಾಡಿರೆ ಹೇಂಗಕ್ಕಪ್ಪಾ!? ಒಂದರಿ ಕೇಳುಲೇ ಬೇಕು ಹೇಳಿ ಅನಿಸಿ ಹೋತು.

ಷಡ್ಜ-ಋಷಭ-ಗಾಂಧಾರ-ಪಂಚಮ-ದೈವತ – ಇವಿಷ್ಟು ಮೋಹನ ರಾಗದ ಅಸ್ಥಿಪಂಜರ. ಸ-ರಿ-ಗ-ಪ-ದ-ಸ  ಹೇಳ್ತ ಐದು ಸ್ವರವ ಕುಣಿಸಿ ಅಪ್ಪಗ ಸಿಕ್ಕುತ್ತದು ಮೋಹನ ರಾಗ. ಮತ್ತೆ ಕಲಾವಿದನ ಚಾಕಚಕ್ಯತೆ,  ಶೈಲಿ, ತಾಕತ್ತಿನ ಮೇಗೆ ಸ್ವರ ವಿಸ್ತಾರ ಮಾಡ್ತಲಿ. ಒಬ್ಬೊಬ್ಬಂದು ಒಂದೊಂದು ಶೈಲಿ. ಹುಟ್ಟು-  ಬಾಲ್ಯ- ಕೌಮಾರ್ಯ-ಗೃಹಸ್ಥ-ವಾನಪ್ರಸ್ಥ – ಇವಿಷ್ಟು ಮನುಷ್ಯ ಜನ್ಮದ ಅವಿಭಾಜ್ಯ ಅಂಶಂಗೊ.  ಒಬ್ಬೊಬ್ಬನ ಚಾಕಚಕ್ಯತೆಲಿ ಒಂದೊಂದು ಎತ್ತರಕ್ಕೆ ಏರುತ್ತವು. ಅವರವರ ಶಕ್ತಿಗೆ, ಅವರವರ ಭಾವಕ್ಕೆ  ಅನುಕೂಲ ಆದ ಹಾಂಗೆ.

ಷಡ್ಜ:

‘ಯೋವೇದಾದೌಸ್ವರಃ’ ಹೇಳಿ ಗಣೇಶಮಾವ ಓಂಕಾರವ ಹೇಳಿತ್ತಿದ್ದವು, ಮೊನ್ನೆ ಒಂದರಿ  ಮಾತಾಡುವಗ. ವೇದಾರಂಭಲ್ಲಿಪ್ಪ ಓಂಕಾರ ಸುರು ಅಪ್ಪದೇ ಷಡ್ಜಂದ ಅಡ. ಸಂಗೀತ ಆರಂಬ ಅಪ್ಪದುದೇ  ಷಡ್ಜಂದಲೇ. ಯೇವ ಸಂಗೀತಗಾರನೂ, ಎಷ್ಟು ದೊಡ್ಡ ಕಚೇರಿ ಆದರೂ ಸುರು ಮಾಡುದು ಸ-ಪ-ಸಂದ. ಅಡಿಪಾಯ  ಗಟ್ಟಿ ಇದ್ದು ಹೇಳಿ ಆದರೆ ಮಾಂತ್ರ ಪೆಂಟಗನ್ನೂ ನಿಂಗು, ತೇಜಮಹಾಲಯವೂ ನಿಂಗು. ಮುಂದಿನ  ಮುಕ್ಕಾಲುಗಂಟೆಯ ಭರ್ತಿ ಸಂಗೀತದ ಸಮೃದ್ಧ ಹಂತಿ ಊಟಕ್ಕೆ ಗಂಭೀರ ಆರಂಭ ಕೊಟ್ಟಲಿ, ಬಾಲಮುರಳಿ.  ವಾಹ್! ಎಂತಾ ಆರಂಭ, ಮಂದ್ರ ಗಾಂಭೀರ್ಯ!

ಮನುಷ್ಯನ ಜೀವನ ಆರಂಭ ಅಪ್ಪದು ಅಮ್ಮನ ಹೊಟ್ಟೆಂದ. ಬಾಬೆ ಹುಟ್ಟುವಗಳೇ ಅಂತಾ ಒಂದು  ಸಂಭ್ರಮ, ಮನೆ-ಮನ ಇಡೀಕ. ಮುಂದೆಂತ ಹೇಳ್ತ ನಿರೀಕ್ಷೆ – ಉತ್ಸಾಹ.

ಋಷಭ:

ಅನುಕರಣೆ ತಪ್ಪು, ಆದರೆ ಅನುಸರಣೆ ಬೇಕೇ ಬೇಕು. ಸುರುವಾಣದ್ದರ ನೋಡಿ ಅದೇ ನಮುನೆ ನೊಣ  ಪ್ರತಿ ತೆಗವದರ ಅನುಕರಣ ಹೇಳುದು, ಸಾರವ ಮಾಂತ್ರ ತೆಕ್ಕೊಂಡು ಮುಂದುವರಿವದಕ್ಕೆ ಅನುಸರಣ ಹೇಳುದು –  ಹೇಳಿ ತಾಳಮದ್ದಳೆಗೆ ಅರ್ತ ಹೇಳ್ತ ಜೆನಂಗೊ ಹೇಳಿದ್ದು ಕೇಳಿತ್ತಿದ್ದೆ ಓ ಮೊನ್ನೆ. ‘ಎರಡನೇ’ದು  ಹೇಳಿರೆ ಸುರುವಾಣದ್ದರ ಅನುಸರಣೆ ಆಗಿರೆಕ್ಕು. ಒಂದರ್ಥಲ್ಲಿ ಪ್ರಥಮತೆಂದಲೂ ದ್ವಿತೀಯತೆ ಮುಖ್ಯ.  ನೂರು ಮೀಟರು ಓಡುವಗ ಎರಡ್ನೇಯವಲಿ ತುಂಬ ಹಿಂದೆ ಇದ್ದರೆ ಸುರುವಾಣವಂಗೆ ಗೆದ್ದ ಸಾರ್ತಕತೆಯೇ  ಇರ್ತಿಲ್ಲೆ, ಒಂದೇ ಅಂಗುಲ ವೆತ್ಯಾಸ ಆದರೆ ಆ ಕುಶಿ ಮತ್ತಲ್ಲ!

ಷಡ್ಜದಷ್ಟೇ ರಸವತ್ತಾದ ರಿಷಭ ನಮ್ಮ ಜೀವನಲ್ಲಿ ಸಿಕ್ಕುತ್ತಾ ಹೋಯೆಕ್ಕು. ಹುಟ್ಟಿದ  ಬಾಬೆಯ ಬೆಳವಣಿಗೆಗೆ ಪರಿಸರ ಹೇಂಗಿರ್ತು ಹೇಳುದು ಹುಟ್ಟಿದ್ದರಿಂದಲೂ ಹೆಚ್ಚು ಮುಖ್ಯ,  ಆಸಕ್ತಿದಾಯಕ. ಋಷಭದ ಮುಂದುವರಿಕೆ ಬೆಳವಣಿಗೆಯ ಹಂತ.

ಗಾಂಧಾರ:

ಷಡ್ಜದ ಆರಂಬ, ಋಷಭದ ಮುಂದುವರಿಕೆ ಸಿಕ್ಕಿದ ಮತ್ತೆ ಆ ಪರಿಸರಲ್ಲಿ ತಲ್ಲೀನತೆ ಬೇಕು,  ಅಲ್ಲದೋ? ಚೆಂದದ ಪರಿಸರಲ್ಲಿ ಬೆಳೆತ್ತಾ ಇಪ್ಪ ಮಗುವಿನ ತಲ್ಲೀನತೆ ಯೇವದರಲ್ಲಿ ಇದ್ದು? ನೆಡು  ಪ್ರಾಯಲ್ಲಿ ಅದರ ಆಸಕ್ತಿಯ ವಿಷಯಂಗೊ ಹೇಂಗೆ ಇದ್ದು, ಮನೆತನವ ಮುಂದುವರುಶುಲೆ ಸಮರ್ತ ಆಗಿ  ಬೆಳೆತ್ತಾ ಇದ್ದೋ? ಈ ವಿಚಾರವ ಅತ್ಯಂತ ಗಮನಲ್ಲಿ ಮಡಗೆಕ್ಕಾವುತ್ತು ಅಪ್ಪಮ್ಮ. ಯಕ್ಷ ಕಿನ್ನರ  ಗಾಂಧರ್ವರ ಪ್ರಿಯ ಸ್ವರ ಆದ ಗಾಂಧಾರಲ್ಲಿ ಅದೇ ತಲ್ಲೀನತೆ ಮುಂದುವರಿತ್ತಾ ಹೋವುತ್ತು… ಜೀವನದ  ಹಾಂಗೇ…

ಜೀವನ ಕಟ್ಟುಲೆ ಬೇಕಾದ ನಿಯತ್ತು ಬೆಳವದು ಮಧ್ಯ ವಯಸ್ಸಿಲೇ ಅಡ. ಮಾಷ್ಟ್ರುಮಾವಲಿ  ಅನುಭವ ಬರದಿತ್ತಿದ್ದವು. ಗಾಂಧಾರದ ತಲ್ಲೀನತೆಲಿ ಕೋಣೆ ಇಡೀ ಒಂದಾತು. ಪದ ಪಷ್ಟ್ಳಾಸಿದ್ದು.

ಪಂಚಮ:

ಗಾಂಧಾರಲ್ಲಿ ಜೀವನ ಕಟ್ಟಿ ಆದ ಮತ್ತೆ ಪುರುಷ-ಕ್ಷೇತ್ರದ ಪರಿಚಯ, ಸಂಪರ್ಕ.

ಬಾಲಮುರಳಿಯ ಆರಂಭಕ್ಕೆ ಸಾಥ್ ಕೊಡುವಂತಹ ಕೊಳಲು, ಹಿಂದಂದ. ಅಷ್ಟೊತ್ತು ಪುರುಷ ಸ್ವರದ  ತಲ್ಲೀನತೆಲಿ ಇದ್ದ ಕೆಮಿಗೊಕ್ಕೆ ಒಂದರಿಯೇ ಕೊಳಲಿನ ಇಂಪು. ಅದುದೇ ಪಂಚಮಲ್ಲಿ. ಕೋಗಿಲೆಯ ಪಿಟ್ಟೆ  ಮೈಗೆ ಬಿದ್ದ ಮತ್ತೆ ಮೇಗೆ ನೋಡುವಗ ಒಂದು ಸ್ವರ ಬತ್ತಲ್ದ, ಅದೇ ಸ್ವರ – ಪಂಚಮ. ಮಧ್ಯಮಂದ ಒಂದು  ಮೇಗೆಯೇ. ಆದರೆ ಮೋಹನ ರಾಗಕ್ಕೆ ಇದುವೇ ಮಧ್ಯಮ.

ಮಧ್ಯವಯಸ್ಸು ಬಪ್ಪ ಮೊದಲೇ ಸಮಾಜಲ್ಲಿ ಒಂದು ಅಲೆ ಉತ್ಪತ್ತಿ ಮಾಡಿ ಮಡಗುತ್ತಲಿ,  ಮನುಷ್ಯ. ಕೊಳಲಿನ ಸಾಥಿನ ಒಟ್ಟೊಟ್ಟಿಂಗೆ ಹೆಜ್ಜೆ ಹಾಕುತ್ತಲಿ. ಹಲವಾರು ಹೊಸ ಹೊಸ ಪ್ರಯೋಗಂಗಳ  ಮಾಡ್ತ. ಪ್ರಯತ್ನ ಮಾಡ್ತ, ಮುಂದೆ ಹೋವುತ್ತಲಿ, ಹಿಂದೆ ಬತ್ತಲಿ.ಮೇಲೆ-ಕೆಳ, ಏರು-ತಗ್ಗು ಎಲ್ಲ  ಅನುಬವಿಸುತ್ತಲಿ. ಹಿಮ್ಮೇಳದ ಸಹವಾದನ ಕುಟುಂಬದ ಸದಸ್ಯರ ಅನ್ಯೋನ್ಯತೆಯ ಸಂಕೇತ. ಅದರಷ್ಟಕೇ ಓಡುತ್ತ  ಶೃತಿ ನಿತ್ಯಜೀವನದ ಶಾಂತತೆಯ ಸಂಕೇತ. ಅದ್ಭುತ ಕವಿ ಸಮಯ. ಇನ್ನುದೇ ಕೇಳಿಗೊಂಡೇ ಇಪ್ಪಲಿ ಹೇಳಿ  ಕಾಣ್ತು. . .

ಮುರಳೀರವಳೀ ಹಾ….ಯ್..!

ಹರಿ-ಪ್ರಸಾದ-ಬಾಲ-ಮುರಳೀ-ರವಳೀ- ಹಾ….ಯ್..!

[ಅರ್ತ: ಮುರಳೀರವಳೀ(ಎರಡು ಮುರಳಿ ಇದ್ದು!) ಹೇಳಿರೆ, ಬಾಲ "ಮುರಳಿ" ಕೃಷ್ಣನ ಹತ್ತರೆ  ಒಂದು ಮುರಳೀ, ಹರಿಪ್ರಸಾದ ಚೌರಾಸಿಯನ ಹತ್ರೆ ಇನ್ನೊಂದು ಮುರಳಿ (ಕೊಳಲು) - ಹಾಂಗೆ ಒಟ್ಟು  ಎರಡೆರಡು ಮುರಳಿ ಇದ್ದು]

ಆ ಇಡೀ ಕೇಸೆಟ್ಟಿಲಿ ಬಪ್ಪದು ಪದ ಅಷ್ಟೇ! ತುಂಬಾ ಅರ್ತ ಗರ್ಭಿತ. ಎರಡೇ ಗೆರೆಯ  ಹುಂಡುಪದ್ಯದ ಸಾಲು..

ಬಾಕಿ ಉಳುದ್ದೆಲ್ಲ ರಾಗ-ತಾನ ಅಷ್ಟೇ.

ಪುರುಷನ ಹತ್ತರೆ ಒಂದು ಅಂಶ, ಸ್ತ್ರೀಯ ಹತ್ತರೆ ಒಂದು ಅಂಶ – ಎರಡೂ ಸೇರಿರೇ ಸಂಸಾರ  ತಾನೇ! ಒಂದು ಇಲ್ಲದ್ರೂ ಅದು ಚಕ್ರ ಇಲ್ಲದ್ದ ರಥ.

ಪಂಚಮದ ಸಮ್ಮಿಳನಲ್ಲಿ ಆ ಸಂಸಾರ ಮುಂದುವರಿಯೆಕ್ಕು ಹೇಳುವ ಆಶಯ ಎಲ್ಲಾ  ಸಂಸಾರಸ್ಥರದ್ದು.

ದೈವತ:

ನೆಡು ಪ್ರಾಯ ಕಳುದ ಮತ್ತೆ ಬೇರೆಂತ ಬೇಕು- ದೇವತಾರಾಧನೆ ಬಿಟ್ಟು?

ಪಂಚಮಲ್ಲಿ ಸಿಕ್ಕಿದ ಅನುಭವಂಗಳ ಮೆಲುಕು ಹಾಯ್ಕೊಂಡು, ಮೊದಲು ಮಾಡಿದ ಸಾಧನೆಯ  ನೆಂಪುಮಾಡಿಗೊಂಡು… ಹತ್ತರೆ ಕೂದ ಹೆಂಡತ್ತಿ ಆ ವಿಷಯಂಗಳ ಇನ್ನೂ ಸ್ಪಷ್ಟ ಮಾಡಿ ನೆಂಪಿನ ಜಾಸ್ತಿ  ಮಾಡುತ್ತು. ಮುಂದಾಣ ಜೇವಮಾನವ ಯಥಾಯೋಗ್ಯ ಪುಣ್ಯಕಾರ್ಯಲ್ಲಿ ಕಳವದು ಎಲ್ಲಾ ಹಿರಿಯ  ಆಶಯ.

ಬಾಲಮುರಳಿ ಅವನೇ ಹುಟ್ಟು ಹಾಕಿ ಬೆಳೆಶಿ, ಸಾಂಕಿದ ಸ್ವರವಿಸ್ತಾರದ ಸೊಂಪಿನ  ಅನುಭವಿಸಿಗೊಂಡು ಇದ್ದ. ಸ್ವರದ ಏರಿಳಿತ ಸರೀ ಗೊಂತಾವುತ್ತು, ಕೇಳುವ ಕೆಮಿಗೆ. ಕೊಳಲಿನ ಇಂಪು ಅದರ  ನಾದವ ಇನ್ನುದೇ ಜಾಸ್ತಿ ಮಾಡಿತ್ತು. ಒಟ್ಟಾರೆ ಅನುಭವವೇ ಅನುಭವ.

ಷಡ್ಜ:

ಮತ್ತೆ ಬಾಲ್ಯ.

ತುಂಬ ಪ್ರಾಯ ಆದ ಮನುಷ್ಯನ ನಡವಳಿಕೆಗೊ ಬಾಲ್ಯಾವಸ್ಥೆಯ ನೆಂಪು ತತ್ತಡ. ದೀರ್ಘಕಾಲ  ಒಟ್ಟಿಂಗಿಪ್ಪ ಹೆಂಡತ್ತಿಗೂ ಅದೇ ಅನುಭವ. ಪರಸ್ಪರ ಭಾವನೆಗೊ ಮಾಂತ್ರ, ಬಲ ಇಲ್ಲೆ. ಅನುಭವ ಮಾಂತ್ರ,  ಅನುಸ್ವರ ಇಲ್ಲೆ. ಹುಟ್ಟಿಂದ ದೈವತದವರೆಗೆ ತಲ್ಲೀನತೆಲಿ ಜೊತೆಜೊತೆಲಿ ನೆಡದು ಬಂದ ಪಂಚಮದ ಕಾಲವ  ನೆನಪಿಸುದೇ ಅಲ್ಲಿಪ್ಪ ಯಥಾ ಶಕ್ತಿ ಕಾರ್ಯ. ಸಣ್ಣಗಿಪ್ಪಗಾಣ ಹಾಂಗೇ ಭಾವನೆಗೊ. ಸ್ಥಿಮಿತಿ, ಮಿತಿ –  ಎರಡೂ ಇಲ್ಲೆ. ಅದರಷ್ಟಕ್ಕೇ ಹರಿಯಬಿಡೆಕ್ಕಾವುತ್ತು. ಮುದಿಮರುಳು ಹೇಳ್ತವು. ಆದರೆ ಹಿನ್ನೆಲೆ /  ಹಿಮ್ಮೇಳದವಕ್ಕೆ ಸರೀ ಗುರ್ತ ಇದ್ದು. ನಮ್ಮ ಪ್ರತಿ ಚಲನೆಯನ್ನುದೇ ಅವು ಪ್ರಸಾದ ಹೇಳಿ  ಸ್ವೀಕರಿಸುತ್ತವು. ಬಾಲ್ಯಲ್ಲಿ ಹುಚ್ಚು ಆಲೋಚನೆಗೊ ಇತ್ತು, ಸಂಪತ್ತು ಶೇಖರಣೆ ಇತ್ತಿಲ್ಲೆ.  ವೃದ್ಧಾಪ್ಯಲ್ಲಿ ಸಂಪತ್ತು ಧಾರಾಳ ಇದ್ದು, ಹರಿಯಬಿಡುವ ಹುಚ್ಚು ಇಲ್ಲೆ.

ಬಾಲಮುರಳಿ, ಚೌರಾಸಿಯ, – ಇಬ್ರುದೇ ಇನ್ನು ಮುಗುಶುವ ಏರ್ಪಾಡಿಂಗೆ ಬಂದವು.  ರಾಗ-ತಾನ-ಪಲ್ಲವಿಯ ಮೂರು ಹಂತಂಗಳಲ್ಲಿ ಬೇಕಾದಷ್ಟು ಅನುಭವ ಹಂಚಿಗೊಂಡು, ಕುಶಿ ಕೊಟ್ಟು, ಕುಶಿ  ತೆಕ್ಕೊಂಡು, ಕೇಳುಗರಿಂಗೆ ಹಬ್ಬದೂಟ ಬಳುಸಿದವು. ಅಂಬಗಂಬಗ ಅಲ್ಲಿ ಕೇಳ್ತವು ಚಪ್ಪಾಳೆ ತಟ್ಟಿದ್ದೇ  ಅದಕ್ಕೆ ಸಾಕ್ಷಿ.

ಈಗ, ಉತ್ತರಾದಿ ಹೇಳಿರೆ ಮೂರು ಮಾರು ದೂರ ಹೋಯ್ಕೋಂಡು ಇದ್ದ ಒಪ್ಪಣ್ಣಂಗೆ ರಜಾ ಗುರ್ತ  ಅಪ್ಪಲೆ ಸುರು ಆತು. ಬಾಲಮುರಳಿ ಚೌರಾಸಿಯನ ಗುರ್ತ ಮಾಡುಸಿದ. ಇವನಿಂದಾಗಿ ಅವನ, ಅವನಿಂದಾಗಿ  ಮತ್ತೊಬ್ಬನ, ಮತ್ತೊಬ್ಬನಿಂದಾಗಿ ಇನ್ನೊಬ್ಬನ – ಹೀಂಗೇ ಗುರ್ತ ಬೆಳದು ಬೆಳದು ಮುಂದುವರಿವದಲ್ದೋ,  ಮಾನವ ಸಮಾಜ?

ಬರೇ ಒಂದು ಕಚೇರಿಯ ಅರ್ತಮಾಡುವಗ ಒಂದು ಮಾನವ ಸಮಾಜದ ಅರ್ತ ಆವುತ್ತು. ಅಂಬಗ  ಸಂಗೀತಲ್ಲಿ ಎಂತಾ ಶಕ್ತಿ ಇದ್ದು?

ಮೋಹನ ರಾಗದ ಭಾವ ಉತ್ಸಾಹಪೂರ್ಣ ಶಾಂತಿ ಅಡ. ‘ಅಪ್ಪನ್ನೇ!’ ಹೇಳಿ ಆತೆನಗೆ. ಕೇಳ್ತಾ  ಇಪ್ಪಗ ಹಳೆ ಕೆಲವು ಮನಶ್ಶಾಂತಿ ತಪ್ಪ ಘಟನೆಗೊ ಎಲ್ಲ ನೆಂಪಾತು. ಪ್ರಾಯ ಅಲ್ಲಿಗೇ ನಿಂದು,  ಕೆಳಾಂತಾಗಿ ಹೋದ ಹಾಂಗೆ ಅನಿಸಿತ್ತು. ಸುಮ್ಮನೆ ಅಲ್ಲ ಗಂಗಜ್ಜಿ (ಗಂಗೂಬಾಯಿ ಹಾನಗಲ್) ತೊಂಬತ್ತೈದು  ವರ್ಷ ಬದ್ಕಿದ್ದು.

ಪ್ರಪಂಚಲ್ಲಿ ಯೇವದೇ ಜಗಳ ಇಲ್ಲದ್ದ ವಾತಾವರಣ ಅನಿಸಿ ಕುಶೀ ಆತು! ಯೇವ ಜಗಳವೂ ಇಲ್ಲೆ.  ಜಾಗೆ ತಕರಾರು, ನೀರಿನ ಜಗಳ, ಹೋಕ್ವರ್ಕು ಬಿಟ್ಟದು, ಇಂತಾ ಎಲ್ಲಾ ಚಿರಿಪಿರಿ ಬಿಟ್ಟ ಶಾಂತತೆ  (ಶಾಂತತ್ತೆ ಅಲ್ಲ!) ಇಪ್ಪ ವಾತಾವರಣ ಅನಿಸಿ ಹೋತು. ರಾಜ್ಯ – ರಾಜ್ಯದ ನಡುವೆ, ದೇಶ-ದೇಶದ ನಡುವೆ,  ಜೆನ-ಜೆನದ ನಡುವೆ ಇರ್ತ ಎಲ್ಲ ಜಗಳ ನಂದಿ ಹೋದ ವಾತಾವರಣ ಅನಿಸಿ ಹೋತು. ಎಲ್ಲ ಉಗ್ರವಾದ ಶಮನ ಆದ  ಸುಖ-ನೆಮ್ಮದಿ ಅನಿಸಿ ಹೋತು.

ಉಗ್ರವಾದಿ ಲಾಡೆನ್ನಿಂಗೆ ಇದರ ಕೇಳುಸಿರೆ ಬೆಡಿ ಕರೆಲಿ ಮಡಗಿ ವೀಣೆ ಹಿಡ್ಕೊಂಗೋ ಹೇಳಿ  ಒಂದು ಕನುಪ್ಯೂಸು ಬಂದದು, ಒಪ್ಪಣ್ಣಂಗೆ. ಎಂತ ಹೇಳ್ತಿ?

ಶಾಸ್ತ್ರೀಯ ನೃತ್ಯದ ಮಹತ್ವ ಮರೆಯಾಗುತಿಹುದೇ?
..ವರ್ಷ ಇನ್ನೂ ಹತ್ತು ತುಂಬಿಲ್ಲ. ಬಾಲ್ಯದ ಆ ಹೊಳಪೇ ಇಲ್ಲದ ಕಂಗಳಲ್ಲಿ, ಹಿರಿಯರೆಲ್ಲ  ‘ನೈಜ expression’ ಬರಬೇಕು ಅಂತ ಒತ್ತಾಯಿಸುತ್ತಾರೆ. ಬಾಗಿ, ಬಳುಕಿ, ಪಲ್ಟಿಹೊಡೆದು  ಕುಣಿಯಬೇಕು. ‘ಅದ್ಭುತ’ ಸಿನಿಮಾ ತಾರೆಯಂತೆ ತುಂಡು ಬಟ್ಟೆ ಹಾಕಿ ಆ ಪುಟಾಣಿ  ಹೆಜ್ಜೆಹಾಕುತ್ತಿದ್ದರೆ, ಹಲ್ಲುಗಿಂಜುತ್ತಾ ಚಪ್ಪಾಳೆ ತಟ್ಟುತ್ತಾ ‘ಪ್ರೋತ್ಸಾಹಿಸು’ವ ಹೆತ್ತವರು.  ಸರಿಯಾಗಿ ಮಾತನಾಡಲೂ ಬರದಿದ್ದ ಮಗು, ಹಾಡಿನ ಸಾಲುಗಳಿಗೆ ಸ್ಪಷ್ಟವಾಗಿ ‘lip movement’  ಕೊಡಬೇಕು. ಇದನ್ನೆಲ್ಲ ತೂಗಿ, ಸುರಿದು, ಅಳೆಯುವುದಕ್ಕೆ ಮತ್ತೊಂದೆರಡು ‘ಜಡ್ಜ್ ಗಳು’. – ಇದಿಷ್ಟು  ಇಂದಿನ ರಿಯಾಲಿಟಿ ಷೋಗಳಲ್ಲಿ ಒಂದಾದ ಡಾನ್ಸ್ ಸ್ಪರ್ಧೆಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಇಂಥವು  ಮುಖ್ಯವಾಗಿ ಮಕ್ಕಳನ್ನೇ ಸ್ಪರ್ಧಿಗಳನ್ನಾಗಿ ಮಾಡಿಕೊಳ್ಳುತ್ತವೆ. ಅದೆಂಥಾ ‘ರಿಯಾಲಿಟಿ’ಯ ಹಪಹಪಿಯೋ  ದೇವರೇ ಬಲ್ಲ. ಆಟದ ಬಯಲಲ್ಲಿ ಸ್ವಚ್ಛಂದವಾಗಿ ಆಟವಾಡುತ್ತಾ ಇರಬೇಕಾದ ಮಕ್ಕಳು, ಬಿಡುವಿನ  ವೇಳಯಲ್ಲೆಲ್ಲ ಡಾನ್ಸ್ ಪ್ರಾಕ್ಟೀಸ್ ಮಾಡಬೇಕು. ಇನ್ನು ಆ ಹಾಡುಗಳೋ, ಶುದ್ಧ ಸಾಹಿತ್ಯವಿಲ್ಲದ,  ಕಿವಿಗಡಚಿಕ್ಕುವ ಸಂಗೀತವಿರುವ, so called ‘ಸೂಪರ್ ಹಿಟ್’ಗಳು.

ಛೆ, ಶಾಸ್ತ್ರೀಯ ನೃತ್ಯದ ಮಧುರ ಕಂಪು ಇಂದಿನವರ ಕಣ್ಮನ ತಣಿಸುತ್ತಿಲ್ಲವೇ? ಇಂಥ  ಸ್ಪರ್ಧೆಗಳಲ್ಲಿ ‘ಶಾಸ್ತ್ರೀಯ ಸುತ್ತು’ ಬಂದಾಗ ಮಾತ್ರ, ಒಂದು ನೃತ್ಯವನ್ನು ಕಲಿಸಿಕೊಡುವಂತೆ  ಗುರುಗಳ ಬಳಿ ದುಂಬಾಲು ಬೀಳುವವರ ಸಂಖ್ಯೆ ಯಾಕೆ ಹೆಚ್ಚಾಗ್ತಾ ಇದೆ? ನಾವು ಯಾವ ಕಡೆಗೆ ಹೋಗ್ತಾ  ಇದ್ದೇವೆ? ಶಾಸ್ತ್ರೀಯ ಸಂಗೀತ, ನೃತ್ಯ ಎಂದರೆ ಅದು ಬರೇ ಬೋರ್. . . ಅಂತ ಮೂಗುಮುರೀತಾರೆ ಈಗಿನ  ಮಕ್ಕಳು!

ಇಂಥ ಪರಿಸ್ಥಿತಿಗೆ ಹಿರಿಯರೇ ಹೊಣೆ ತಾನೇ? ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು  ಧಾರೆಯೆರೆಯಬೇಕಾದ ಗುರುತರ ಜವಾಬ್ದಾರಿ ಹಿರಿಯರದ್ದು. ಈ ನಿಟ್ಟಿನತ್ತ ಎಷ್ಟು ಜನ ಹೆಜ್ಜೆ  ಹಾಕಿದ್ದಾರೆ? ಮಾಧ್ಯಮಗಳ ಬಣ್ಣ ಬಣ್ಣದ ಆಮಿಷದ ಪಾಶ ನಮ್ಮನ್ನೆಲ್ಲ ಬಲಿತೆಗೆದುಕೊಳ್ತಾ ಇದೆ.  ಅದಕ್ಕೊಂದು ಕಡಿವಾಣ ಹಾಕಲೇಬೇಕು. ‘ಕಾಲಾಯ ತಸ್ಮೈ ನಮಃ’ ಎಂದು ಕೈಕಟ್ಟಿ ಕುಳಿತರೆ ಒಂದು ಸುಂದರ  ಭವಿಷ್ಯ ನಮ್ಮ ಕೈತಪ್ಪಿ ಹೋದೀತು. ಅತ್ತ ಕಡೆ ಸ್ವಲ್ಪ ಗಮನ ಹರಿಸೋಣ.

( ಲೇಖಕರು ಮಂಗಳೂರಿನಲ್ಲಿ ಪದವಿ ವಿದ್ಯಾರ್ಥಿನಿ, ಹವ್ಯಾಸಿ ಪತ್ರಕರ್ತೆ)

‘ಥಾಟ್’: ಒಂದು ಪರಿಚಯ
ಗಾಯನದ ಅಧೀನ ವಾದನ. ವಾದನದ ಅಧೀನ ನರ್ತನವಾಗಿದೆ. ಆದ್ದರಿಂದ ಈ ಕಲೆಗಳಲ್ಲಿ ಗಾಯನಕ್ಕೇ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ.

ಗಾಯನಕ್ಕೆ ಸಪ್ತ ಸ್ವರಗಳೇ ಆಧಾರ. ಸ,ರಿ,ಗ,ಮ,ಪ,ದ,ನಿ. ಅವುಗಳಲ್ಲಿ ರೆ,ಗ,ಮ,ದ,ನಿ ಸ್ವರಗಳು ಸ್ಥಾನ ಪಲ್ಲಟಗೊಳ್ಳುವದರಿಂದ ಈ ಸ್ವರಗಳನ್ನು ವಿಕೃತ ಸ್ವರಗಳೆನ್ನುವರು. ಸ ಮತ್ತು ಪ ಅಂದರೆ ಷಡ್ಜ, ಪಂಚಮಗಳು ಅಚಲ ಸ್ವರಗಳು. ಅವು ಪ್ರಕೃತಿ ಸ್ವರಗಳು.

ಹಿಂದೂಸ್ತಾನೀ ಸಂಗೀತ ಪದ್ಧತಿಯಲ್ಲಿ ಸ್ವರಗಳಾದ ರೆ,ಗ,ದ,ನಿ ತನ್ನ ಸ್ಥಾನದಿಂದ ಕೊಂಚ ಕೆಳಗಿಳಿದಾಗ ‘ಕೋಮಲ’ ಸ್ವರಗಳೆನಿಸಿಕೊಳ್ಳುತ್ತವೆ. (ಕರ್ನಾಟಕ ಸಂಗೀತದ ಸ್ವರ ‘ರಿ’ ಇದ್ದದ್ದು ಹಿಂದೂಸ್ಥಾನಿಯಲ್ಲಿ ‘ರೆ’ ಎಂದು ಕರೆಯಲ್ಪಡುತ್ತದೆ.) ‘ಮ’ ತನ್ನ ಸ್ಥಾನದಿಂದ ಸ್ವಲ್ಪ ಮೇಲೇರಿ ತೀವ್ರ ‘ಮ’ ಎನಿಸಿಕೊಳ್ಳುತ್ತದೆ. ಸಂಗೀತದಲ್ಲಿ ನಾದದಿಂದ ಶ್ರುತಿ, ಶ್ರುತಿಯಿಂದ ಸ್ವರ, ಸ್ವರದಿಂದ ಸಪ್ತಕದ ಉತ್ಪತ್ತಿಯಾಗುತ್ತದೆ.ಸಪ್ತಕದ ಶುದ್ಧ , ಕೋಮಲ, ತೀವ್ರ ಸ್ವರಗಳು ಸೇರಿ ೧೨ ಸ್ವರಗಳಾಗುತ್ತವೆ.

ಥಾಟ್;

ಸಪ್ತ ಸ್ವರಗಳು ವಿವಿಧ ಕ್ರಮಗಳಲ್ಲಿ ಒಂದಾದಾಗ ಆ ಒಂದೊಂದು ಸಮುದಾಯದಿಂದ ರಾಗಗಳು ಜನಿಸುತ್ತವೆ. ಇಂತಹ ಸಮುದಾಯದ ಸ್ವರ ಸಮೂಹವನ್ನು  ‘ಥಾಟ್’ಎನ್ನುವರು. ಇದಕ್ಕೆ ‘ಮೇಳ’ ಎಂಬ ಹೆಸರೂ ಇದೆ. ಇವೆಲ್ಲವೂ ಆಧಾರವೆನಿಸುವ ಜನಕ ರಾಗಗಳು. ಯಾವ ಥಾಟ್‌ನಿಂದ ಅಥವಾ ಸ್ವರ ಸಮುದಾಯದಿಂದ ರಾಗದ ಉತ್ಪತ್ತಿಯಾಗುವುದೋ ಆ ರಾಗವನ್ನು ಥಾಟ್ ರಾಗ ಅಥವಾ ಜನ್ಯರಾಗ ಎನ್ನುವರು.

ಥಾಟ್ ನಿಯಮ;

೧)ಥಾಟ್ ಯಾವಾಗಲೂ ಸಂಪೂರ್ಣವಾಗಿರುತ್ತದೆ. ಒಂದು ವೇಳೆ ಏಳೂ ಸ್ವರಗಳೂ ಇಲ್ಲದಿದ್ದರೆ, ಅದು ಏಳು ಸ್ವರಗಳ ರಾಗವನ್ನು ಉತ್ಪನ್ನ ಮಾಡಲಾರದು. ಹಾಗಾಗಿ ಥಾಟ್‌ನಲ್ಲಿ ಏಳೂ ಸ್ವರಗಳೂ ಇರಬೇಕು.

೨)ಸಪ್ತಕದ ಏಳೂ ಸ್ವರಗಳೂ ಕ್ರಮಾನುಸಾರವಾಗಿಯೇ ಇರಬೇಕು.

೩)ಥಾಟ್ ಆಗಲು ಆರೋಹವಿದ್ದರೆ ಸಾಕು. ಅವರೋಹದ ಅವಶ್ಯಕತೆ ಇರದು.

೪)ಥಾಟ್‌ನಲ್ಲಿ ರಂಜಕತೆಯ ಅಗತ್ಯ ಇಲ್ಲ. ಅದು ರಾಗದಲ್ಲಿರುತ್ತದೆ .ಏಕೆಂದರೆ ರಾಗವು ಹಾಡಲ್ಪಡುತ್ತದೆ. ಥಾಟ್ ಹಾಡಲ್ಪಡುವದಿಲ್ಲ.

೧೦ ಥಾಟ್‌ಗಳು ;

ಹಿಂದೂಸ್ಥಾನೀ ಸಂಗೀತ ಪದ್ಧತಿಯಲ್ಲಿ ೧೦ ಥಾಟ್‌ಗಳಿವೆ. ಪಂ.ವಿಷ್ಣು ನಾರಾಯಣ ಭಾತ್‌ಖಂಡೆ ಅವರಿಂದ ಹಿಂದೂಸ್ತಾನೀ ರಾಗಗಳು ಬಂಧಿಸಲ್ಪಟ್ಟಿವೆ. ಅವು ಹೀಗಿವೆ, ಯಮನ್, ಬಿಲಾವತ್, ಖಮಾಜ್, ಆಸಾವರಿ, ಭೈರವಿ, ತೋಡಿ, ಭೈರವ, ಪೂರ್ವಿ, ಮಾರವಾ, ಕಾಫಿ.

ಥಾಟ್ ನ ಸ್ವರೂಪ:

ಥಾಟ್

೧. ಯಮನ್    ೨. ಬಿಲಾವತ್    ೩. ಖಮಾಜ್

೪. ಆಸಾವರಿ    ೫. ಭೈರವಿ    ೬. ತೋಡಿ

೭. ಭೈರವ    ೮. ಪೂರ್ವಿ    ೯. ಮಾರವಾ

೧೦. ಕಾಫಿ

೧೫ನೇ ಶತಮಾನದ ಅಂತ್ಯದಲ್ಲಿ ‘ರಾಗ ತರಂಗಿಣಿ’ ಬರೆದ ‘ಲೋಚನ ಕವಿ’ಯು ರಾಗಗಳ ವರ್ಗೀಕರಣದ ಪರಂಪರಾಗತ ಶೈಲಿಯಾದ ಗ್ರಾಮ ಮೂರ್ಛನೆಗಳ ಪರಿಷ್ಕರಣೆ ಮಾಡಿ, ‘ಮೇಳ’ ಅಥವಾ ‘ಥಾಟ್’ ಎಂಬ ಕಲ್ಪನೆಯನ್ನು ಮುಂದಿಟ್ಟನು. ಲೋಚನ ಕವಿಯ ಲೇಖನದ ಅನುಸಾರ ಆ ಸಮಯದಲ್ಲಿ ೧೬೦೦ ರಾಗಗಳಿದ್ದವು. .೧೭ನೇ ಶತಮಾನದಲ್ಲೇ ಥಾಟ್‌ನ ಅಂತರ್ಗತ ರಾಗಗಳ ವರ್ಗೀಕರಣ ಪ್ರಚಾರವಾಗಿಬಿಟ್ಟಿತ್ತು ಎಂಬ ಉಲ್ಲೇಖವು, ಆ ಸಮಯದ ಪ್ರಸಿದ್ಧ ಗ್ರಂಥಗಳಾಗಿದ್ದ ‘ಸಂಗೀತ ಪಾರಿಜಾತ’ ಹಾಗೂ ‘ರಾಗ ವಿಬೋಧ’ಗಳಲ್ಲಿ ಸಿಗುತ್ತದೆ.

೧೭ನೇ ಶತಮಾನದ ಅಂತ್ಯದ ವರೆಗೆ ಥಾಟ್‌ನ ಸಂಖ್ಯೆಗೆ ಸಂಬಂಧಪಟ್ಟಂತೆ ಬಹಳ ಮತ ಬೇಧಗಳಿದ್ದವು. ‘ಶ್ರೀನಿವಾಸ’ನು ಮೇಳದ ಲಕ್ಷಣ ವಿವರಣೆ ಮಾಡುತ್ತಿರುವಾಗ ‘ರಾಗದ ಉತ್ಪತ್ತಿಯು ಥಾಟ್‌ನಿಂದಾಗುತ್ತದೆ. ಥಾಟ್‌ನಲ್ಲಿ ೩ ರೂಪಗಳಾಗಿರಬಹುದು. ಅವು ಔಢವ, ಷಾಢವ, ಸಂಪೂರ್ಣ’ ಎಂದನು. ಆದರೆ ಈಗ ಸಂಪೂರ್ಣ ಅಂದರೆ ಸಪ್ತ ಸ್ವರಗಳೂ ಇದ್ದರೆ ಮಾತ್ರ ಥಾಟ್ ಎಂದು ನಿರ್ಧರಿಸಲಾಗಿದೆ.

ವಿವಿಧ ಗ್ರಂಥಗಳ ಪ್ರಕಾರ, ರಾಗ ವಿಬೋಧದ ಲೇಖಕ ೨೩ ಥಾಟ್ ಎಂದೂ, ಸ್ವರ ಮೇಳ ಕಲಾನಿಧಿಯ ಲೇಖಕ ೨೦ ಥಾಟ್ ಎಂದೂ , ಚತುರ್ದಂಡಿ ಪ್ರಕಾಶಿಕಾದಲ್ಲಿ ಲೇಖಕ ೧೯ ಥಾಟ್ ಎಂದೂ ಹೇಳಿರುವನು. ನಂತರ ೧೯ ನೆಯ ಶತಮಾನದಲ್ಲಿ ಸ್ವ.ಪಂ.ವಿಷ್ಣು ನಾರಾಯಣ ಭಾತ್ ಖಂಡೆಯವರು  ಆಳವಾದ ಅಧ್ಯಯನ ನಡೆಸಿ ೧೦ ಥಾಟ್ ಗಳನ್ನು ನೀಡಿದರು. ಸಂಗೀತ ಜಗತ್ತಿಗೆ ಇದು ಬಹಳ ಅನುಕೂಲವಾಯಿತು.

ಇದನ್ನು ಹೊರತುಪಡಿಸಿದರೆ ಇಂದಿಗೂ ಥಾಟ್‌ಗೆ ಸಂಬಂಧಿಸಿದಂತೆ ವಾದ ವಿವಾದಗಳು ನಡೆಯುತ್ತಲೇ ಇವೆ. ಕಾರಣವೆಂದರೆ, ಬಹಳಷ್ಟು ರಾಗಗಳು ಈ ೧೦ ಥಾಟ್‌ಗಳ ಅಂತರ್ಗತ ಇಡಲಾಗದಂಥವೂ ಇವೆ. ಆದ್ದರಿಂದ ಥಾಟ್‌ಗಳ ಸಂಖ್ಯೆ ಹೆಚ್ಚಿಸುವ ಅವಶ್ಯಕತೆ ಉಂಟಾಗಿದೆ. ಇದರ ಪ್ರಯತ್ನ ನಡೆದಿದೆ. ಸರ್ವಮಾನ್ಯ ಪರಿಹಾರದ ಅನ್ವೇಷಣೆಯಾಗಬೇಕಿದೆ.

(ಲೇಖಕಿ : ಆಕಾಶವಾಣಿಯ ‘ಬಿ ಹೈ’ ಕಲಾವಿದೆ, ಬಿ. ಎ. ಅಂತಿಮ ವರ್ಷದ ವಿದ್ಯಾರ್ಥಿನಿ)

ಹೀಗೊಂದು ಸ್ವಗತ… ಹೆಜ್ಜೆಯ ಅನುರಣಿಸುವ ಗೆಜ್ಜೆ ನಾ…
ನೂಪುರ ಭ್ರಮರಿಯ ನಲ್ಮೆಯ ಓದುಗರಿಗೆಲ್ಲಾ ಆತ್ಮೀಯ ನಮಸ್ಕಾರ.

ನಾನ್ಯಾರೆಂದು ತಿಳೀತಾ?

ನನ್ನ ಹೆಸರು ಕೇಳಿದಾಕ್ಷಣ ಆ ನನ್ನ ಚಿತ್ರ ನಿಮ್ಮ ಕಣ್ಣಮುಂದೆ ಬರುವುದು ನಿಶ್ಚಿತ. ನಾಟ್ಯದ ಒಂದು ಪ್ರಮುಖ ಅಂಗವೇ ಆಗಿರುವ ಈ ನಿಮ್ಮ ‘ಗೆಜ್ಜೆ’ಯ ಪ್ರತ್ಯೇಕ ಪರಿಚಯ ಬೇಕಿಲ್ಲ ತಾನೇ? ಆದರೂ ನನ್ನ ಬಗೆಗೊಂದಿಷ್ಟು ಅಂತರಾಳದ ಮಾತುಗಳು…

ನಿಜಕ್ಕೂ ಹೆಮ್ಮೆಯೆನಿಸುತ್ತದೆ ನೃತ್ಯಗಾರರು ಲಯಬದ್ಧವಾಗಿ ಹೆಜ್ಜೆ ಹಾಕುತಿರೆ ನಾನು ಅದಕ್ಕೆ ಧ್ವನಿಯಾಗುವೆ. ನಾನಿದ್ದರೇ ತಾನೇ ನೃತ್ಯವದು ಸೊಗ ‘ಸಾಗುವುದು”..? ನೃತ್ಯದ ಆ ಸಾರ್ಥಕತೆಗೆ ಕಾರಣವಾದಾಗ ನಾನು ಧನ್ಯ!

ಭರತನಾಟ್ಯದ ರಂಗಪ್ರವೇಶವಾಗುವ ಮೊದಲಿಗೇ ನನ್ನ ಹೆಸರಿದೆ. ”ಗೆಜ್ಜೆಪೂಜೆ”- ಆಲಿಸುವಾಗಲೇ ಅದೇನೋ ಖುಷಿ ನೀಡುವ ಮಾತು. ಈಗ ಮಾತ್ರ ಯಾವ್ಯಾವುದೋ ದ್ವಂದ್ವಾರ್ಥದ ಕಾರಣದಿಂದ ಆ ಹೆಸರು ಅಷ್ಟಾಗಿ ಬಳಕೆಯಲ್ಲಿಲ್ಲದಿರುವುದು ವಿಷಾದನೀಯ. ಅದಿರಲಿ, ಈ ಗೆಜ್ಜೆಪೂಜೆಯಾಗದೇ ಯಾರೂ ರಂಗದ ಮೇಲೆ ಗೆಜ್ಜೆ ಕಟ್ಟಿ ನರ್ತಿಸುವಂತಿಲ್ಲ. ಆ ಸಮಾರಂಭವದು ಅದೆಷ್ಟು ವೈಭವೋಪೇತವೆನ್ನುತ್ತೀರಿ! ನೃತ್ಯ ಕಲಿತು ಮೊದಲ ಬಾರಿಗೆ ಅದನ್ನು ಪ್ರದರ್ಶಿಸುವ ಆ ನೃತ್ಯಗಾರರ ಅದಮ್ಯ ಉತ್ಸಾಹದಲ್ಲಿ ನಾನೂ ಲೀನವಾಗುತ್ತೇನೆ.

ನನ್ನನ್ನು ಕಾಲಿಗೆ ಕಟ್ಟಿಕೊಂಡಾಗ ಅವರಲ್ಲಿ ಅದೊಂದು ಅಪೂರ್ವ ಚೈತನ್ಯ ಸಮ್ಮಿಳಿತವಾಗುತ್ತದೆ. ನನ್ನ ನಾದವೇ ಹೆಜ್ಜೆಯ ನಂತರದ ಹೆಜ್ಜೆಗೆ ಸ್ಫೂರ್ತಿ ನೀಡುತ್ತದೆ. ಸುಮಧುರ ಹಿನ್ನಲೆ ಸಂಗೀತಕ್ಕೆ ಮತ್ತಷ್ಟು ಕಾಂತಿ ನನ್ನಿಂದ ದೊರೆಯುತ್ತದೆಯೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ನೃತ್ಯಗಾರರು ಸರಿಯಾಗಿ ತಾಳಬದ್ಧವಾಗಿ ಹೆಜ್ಜೆ ಹಾಕಿದರೇನೇ ಅದು ಸೊಗಸು. ಆದರೆ, ಒಂದು ವೇಳೆ ತಪ್ಪು-ತಪ್ಪಾಗಿ ಹೆಜ್ಜೆ ಹಾಕಿದರೋ ತಕ್ಷಣ ನನಗೆ ತಿಳಿಯುತ್ತದಾದರೂ ಏನೂ ಮಾಡುವಂತಿಲ್ಲ. ಆಗ ನೃತ್ಯದ ಸೊಗಸೆಲ್ಲಾ ಮಾಯ!

ನನ್ನ ಇತಿಹಾಸ ನೃತ್ಯದಷ್ಟೇ ಹಳೆಯದು. ಅಂದಿನಿಂದ ಇಂದಿನವರೆವಿಗೂ ನೃತ್ಯದೊಂದಿಗೆ ಸದಾ ನಾನಿದ್ದೇನೆ. ಕೇವಲ ಭರತನಾಟ್ಯ ಮಾತ್ರವಲ್ಲ, ಕಥಕ್, ಕೂಚಿಪುಡಿ, ಯಕ್ಷಗಾನ, ಜಾನಪದ- ಹೀಗೆ ತರಹೇವಾರಿ ಕಲಾಪ್ರಕಾರಗಳಲ್ಲಿ ನಾನು ಇರಲೇಬೇಕು. ನನ್ನ ವ್ಯಾಪ್ತಿಯದು ಬಹು ವಿಶಾಲ.

ಇನ್ನು, ನನ್ನ ಹೆಸರನ್ನಿರಿಸಿ ನಡೆಯುತ್ತಿರುವ, ಮುನ್ನುಗ್ಗುತ್ತಿರುವ ಈ ಚೆಂದದ  ಪತ್ರಿಕೆಯ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ! ನಾಟ್ಯ-ನೃತ್ಯಗಳಿಗಾಗಿಯೇ ಮೀಸಲಿರಿಸಿ ಅದರ ಕೀರ್ತಿಯನ್ನು ಮತ್ತಷ್ಟು ಪಸರಿಸುತ್ತಿರುವ ‘ನೂಪುರ ಭ್ರಮರಿ’ಗೆ ಈ ಮೂಲಕ ನನ್ನ ಮನದಾಳದ ನಮನ.

(ಲೇಖಕರು ದ್ವಿತೀಯ ಬಿ‌ಎಸ್ಸಿ ವಿದ್ಯಾರ್ಥಿನಿ, ಆಕಾಶವಾಣಿ ಉದ್ಘೋಷಕರು)

ಪರಂಪರೆ ಮತ್ತು ಕಲಾತ್ಮಕ ಮೌಲ್ಯಗಳ ಸಂಕಲನ : ಶ್ರೀರಾಮಸೇತು
- ‘ಮನೂ’ ಬನ

ಪೌರಾಣಿಕ ಪ್ರಸಂಗಗಳಿಗೆ  ಜೀವ ಕೊಡುವುದರೊಂದಿಗೆ  ಸಮಕಾಲೀನ ನಿಲುವುಗಳಿಗೆ  ಒತ್ತುಕೊಡುತ್ತಾ  ಪ್ರಯೋಗಗಳಿಗೆ  ಹರಿಕಾರನಾಗುತ್ತಾ,  ಜಾನಪದ ಮತ್ತು  ಶಾಸ್ತ್ರೀಯ ನೃತ್ಯ  ಪರಂಪರೆಯನ್ನು  ಏಕಕಾಲಕ್ಕೇ ನಮ್ಮೆದುರು  ತಂದಿರಿಸುವ ನಮ್ಮ  ನಾಡಿನದ್ದೇ ಆದ  ಕಲೆ ಎಂಬುದಿದ್ದರೆ  ಅದು ಯಕ್ಷಗಾನವೇ  ಸೈ !

ಕಲಾಭಿವ್ಯಕ್ತಿಗಾಗಿ  ಕೆಲವು ಯಕ್ಷಗಾನ  ಕೂಟಗಳು, ಮೇಳಗಳು  ಹಲವು ತೆರೆಮರೆಗೆ  ಸರಿದ, ಅಷ್ಟಾಗಿ  ರಂಗಕ್ಕೇರದ ಪ್ರಸಂಗಗಳಿಗೆ  ಜೀವ ತುಂಬಿ ಕಲಾತ್ಮಕವಾಗಿ  ಮಾತ್ರವಲ್ಲದೆ,  ಯಕ್ಷಗಾನೀಯವಾಗಿಯೂ  ತೆರೆದುಕೊಳ್ಳುವಂತೆ  ಮಾಡಿದೆ. ಈ ಸಾಲಿಗೆ  ಉದಾಹರಣೆಯಾಗಿ  ಕಂಡಿದ್ದು ಶ್ರೀರಾಮಚಂದ್ರಾಪುರ  ಮಠದ ಯಕ್ಷಗಾನ  ಮೇಳದ ಈ ಬಾರಿಯ  ತಿರುಗಾಟದ ಮುಖ್ಯ  ಪ್ರಸಂಗ ಶ್ರೀರಾಮಸೇತು.  ಕಳೆದ ಬಾರಿಯ  ತಿರುಗಾಟದ ಮುಖ್ಯ  ಪ್ರಸಂಗಗಳೆನಿಸಿದ  ಪುಣ್ಯಕೋಟಿ,  ಕನ್ಯಾಂತರಂಗದ  ಸಾಲಿಗೆ ಸೇರುವ;  ಸೃಜನಶೀಲ ಸ್ಪರ್ಶ,  ನಿರೂಪಣೆಯಿಂದ  ರಂಗಕ್ಕೆ ಹೊಸ  ಮೆರುಗು, ಆಯಾಮ,  ಜೀವಂತಿಕೆಯನ್ನು  ತಂದಿಡುವ ಪ್ರಸಂಗವಿದು.

ವಾಲ್ಮೀಕಿ ರಾಮಾಯಣದ  ಕಥಾ ಹಂದರಕ್ಕಿಂತ  ಸಾಕಷ್ಟು ತನ್ನ  ನಡೆಯಲ್ಲಿ ಬದಲಾವಣೆ  ಮಾಡಿಕೊಂಡಿದ್ದರೂ  ಶ್ರೀರಾಮಸೇತು  ಪರಂಪರೆಯನ್ನು  ಪ್ರತಿನಿಧಿಸುವಲ್ಲಿ  ಸೋತಿಲ್ಲವೆನಿಸಿದ್ದು  ಹೌದು. ಸಾಮಾನ್ಯವಾಗಿ  ಯಾವುದೇ ಕಥೆಯನ್ನಾದರೂ  ರಂಗಕ್ಕೆ ಅಳವಡಿಸುವಲ್ಲಿ  ಪೌರಾಣಿಕ ಹಿನ್ನಲೆಗೇ  ಪ್ರಾತಿನಿಧ್ಯ  ಹೆಚ್ಚು. ಆದರೂ  ಪೂರಕವಾಗಿ ನಾಟಕಧರ್ಮಕ್ಕೂ  ಪ್ರಾಮುಖ್ಯತೆ  ಕೊಡಬೇಕಾಗುತ್ತದೆ.  ಇದರಿಂದ ಕಲಾಪ್ರಕಾರವು  ಪರಂಪರೆಯನ್ನು  ಸಮರ್ಥ ಅಭಿವ್ಯಕ್ತಿಸುವುದರೊಂದಿಗೆ,  ಸಕಾಲಿಕ ಎಂದೆನಿಸಿಕೊಳ್ಳುತ್ತದೆ.  ಅಷ್ಟಕ್ಕೂ ಯಕ್ಷಗಾನ  ಪ್ರಸಂಗಗಳಿಗೆ  ತೊರವೆ ರಾಮಾಯನದ  ಆಧಾರ, ಪ್ರಭಾವ  ಸಾಕಷ್ಟಿದೆ ಎನ್ನುವುದು  ಸರ್ವ ವಿದಿತ.  ಜೊತೆಗೆ ಬದಲಾಗುತ್ತಿರುವ  ಕಾಲಘಟ್ಟಕ್ಕೆ  ಸ್ಪಂದಿಸಲು,  ವಿಷಯಗಳ ನಿರೂಪಣೆಯಲ್ಲಿ  ಸಾಂದರ್ಭಿಕವಾಗಿ  ಸಣ್ಣಪುಟ್ಟ ವ್ಯತ್ಯಾಸಗಳು  ವಿಹಿತ. ಹಾಗಾಗಿ  ಕಥೆಯ ಆಶಯ ಕಲಾತ್ಮಕ  ಮಾತ್ರವಲ್ಲ ಯಕ್ಷಗಾನೀಯವೂ  ಕೂಡಾ!

ಪ್ರಸಂಗದ ಹೆಸರು  ಪ್ರಸ್ತುತ ದಿನಗಳಲ್ಲಿ  ಕಾವೇರುತ್ತಿರುವ  ಶ್ರೀರಾಮಸೇತು  ಪ್ರಕರಣಕ್ಕೆ  ಪೂರಕವೋ ಎಂಬಂತೆ  ಮೂಡಿಬಂದರೆ ಅದು  ಪ್ರಸಂಗದ ತಪ್ಪಲ್ಲ.  ಹೆಸರು ಕೇಳಿದ  ಮಾತ್ರಕ್ಕೆ ಮೇಲ್ನೋಟಕ್ಕೆ  ಎದ್ದಿರುವ ರಾಜಕೀಯ  ವಿವಾದಗಳಿಗೆ  ತಮ್ಮ ನಿಲುವನ್ನು  ಪ್ರತಿಷ್ಟಾಪಿಸಲು  ಯಕ್ಷಗಾನ ಪ್ರಕಾರಕ್ಕೆ  ಅಂಟಿಕೊಂಡಿದ್ದಾರೆಯೋ  ಎಂಬ ಅನುಮಾನ  ವ್ಯಕ್ತವಾದರೂ,  ಪ್ರಸಂಗವನ್ನು  ವೀಕ್ಷಿಸಿದ ಮೇಲೆ  ಈ ಗ್ರಹಿಕೆ ಸುಳ್ಳೆನಿಸುತ್ತದೆ.

ಪಾರ್ತಿಸುಬ್ಬರ  ಯಕ್ಷಗಾನೀಯ ನಿಲುವಿಗೆ  ಬದ್ಧವಾಗಿ, ಪುತ್ತಿಗೆ  ರಾಮಕೃಷ್ಣ ಜೋಯಿಸರ  ಶ್ರೀರಾಮ ಪಟ್ಟಾಭಿಷೇಕವನ್ನು  ಮುಖ್ಯ ಆಕರವಾಗಿಸಿಕೊಂಡಿದೆ  ಶ್ರೀರಾಮಸೇತು.  ಪ್ರಸಂಗ ಪ್ರಾಂಭಗೊಳ್ಳುವುದು  ಸೇತುನಿರ್ಮಾಣದ  ಕಥೆಯಿಂದ. ಅಲ್ಲಿಂದ  ಮುಂದುವರೆಯುವ  ಕಥಾಭಾಗ ವರುಣ  ಪ್ರಾರ್ಥನೆ-  ಮಕರ ನಿಗ್ರಹ-  ಅಂಗದ ಸಾಹಸ-ಶನಿ  ಗರ್ವಭಂಗ-ಅಳಿಲುಸೇವೆ-ರಾವಣನ  ಆಸ್ಥಾನ-ಸೇತುವಿಗೆ  ಶುಕ ಸಾರಣರ ಭೇಟಿ  ಮತ್ತು ವರ್ಣನೆ-ಛತ್ರಭಂಗ-ಇಂದ್ರಜಿತುವಿನ  ನಾಗಾಸ್ತ್ರ ಪ್ರಕರಣ-ರಾವಣವಧೆ-ಸೀತೆ  ಅಗ್ನಿಪರೀಕ್ಷೆ-ರಾವಣ  ಪ್ರೇತಮೋಕ್ಷ-ಸೇತುಖಂಡನ-ರಾಮೇಶ್ವರ  ಕ್ಷೇತ್ರ ನಿರ್ಮಾಣದಲ್ಲಿ  ವಿಸ್ತರಿಸಿಕೊಂಡು  ಬಂದು ಮಂಗಳವಾಗುತ್ತದೆ.  ಇವೆಲ್ಲದರ ನಡುವೆ  ಶಿವ ಪಾರ್ವತಿಯರ  ಸಂವಾದ, ಅಂಗದನಿಗೆ  ಬುದ್ಧಿವಾದ,  ಅಂತ್ಯದಲ್ಲಿ  ಹನುಮಂತನು ಪ್ರೇತಮೋಕ್ಷಕ್ಕಾಗಿ  ಕೈಲಾಸಕ್ಕೆ ಶಿವಲಿಂಗವನ್ನು  ತರಲು ಹೋಗುವಲ್ಲಿಗೆ  ಹರಿಹರರ ನಡುವಿನ  ಐಕ್ಯತೆ, ಅವರ್ಣನೀಯ  ಸಂಬಂಧವನ್ನು  ಪ್ರಕಟಗೊಳಿಸುತ್ತದೆ.  ಅಳಿಲೊಂದು ಸೇತುನಿರ್ಮಾಣದಲ್ಲಿ  ಪಾಲ್ಗೊಳ್ಳುವ  ಮತ್ತು ಹನುಮದೀಶ್ವರ  ಲಿಂಗಸ್ಥಾಪನೆಯು  ಭಕ್ತ ಮತ್ತು  ಭಗವಂತನ ಅವಿನಾಭಾವ  ಸಂಬಂಧವನ್ನು  ಸ್ಪಷ್ಟವಾಗಿ  ಮತ್ತು ಅಷ್ಟೇ  ಪರಿಣಾಮಕಾರಿಯಾಗಿ  ಅಭಿವ್ಯಕ್ತಿಸುತ್ತದೆ.  ಜಾನಪದೀಯ ನೆಲೆಯ  ಅಳಿಲು ಸೇವೆಯ  ಪಾತ್ರಕ್ಕೆ ಪೌರಾಣಿಕ  ಸ್ಪರ್ಶ ನೀಡಿ,  ವಿನೂತನವೆನಿಸುವ  ಪ್ರೇತಮೋಕ್ಷ  ಕಥಾಹಂದರವನ್ನ್ನು  ಸಮಯೋಚಿತವಾಗಿ  ಅಳವಡಿಸಿಕೊಂಡು  ಕಲಾತ್ಮಕ ಸ್ಪರ್ಶವನ್ನಿತ್ತಿರುವುದುಪ್ರಸಂಗದ  ಹೈಲೈಟ್ !

ಸಾಮಾನ್ಯವಾಗಿ  ರಾಮಾಯಣಾಧಾರಿತ  ಯಕ್ಷಗಾನ ಪ್ರಸಂಗಗಳ  ಪೈಕಿ ವಾಲಿ ಮೋಕ್ಷ,  ರಾವಣ ಸಂಹಾರ,  ಇಂದ್ರಜಿತು ವಧೆ,  ಅಹಿರಾವಣ-ಮೈರಾವಣ  ವಧೆ ಮುಂತಾದವುಗಳು  ಮುಖ್ಯ ಪಟ್ಟಿಯಲ್ಲಿದ್ದು,  ರಾಮಸೇತು ನಿರ್ಮಾಣ,  ಅಗ್ನಿಪರೀಕ್ಷೆ,  ಮಕರನಿಗ್ರಹ,  ಅಳಿಲುಸೇವೆಯಂತಹ  ಕಥಾಸಂಯೋಜನೆ  ಅಷ್ಟಾಗಿ ರಂಗಕ್ಕೆ  ಏರಿದ ಉದಾಹರಣೆಗಳಿಲ್ಲ.  ಪ್ರಸಂಗದ ಶುಕ  ಸಾರಣ ಮತ್ತು  ಶಿವನ ಪಾತ್ರದ  ಆಂಗಿಕಾಭಿನಯ(ನೃತ್ಯ,  ಹಾವಭಾವ)ದಲ್ಲಿ  ಬಡಗುತಿಟ್ಟಿನ  ಸ್ಪರ್ಶವಿದೆಯೇನೋ  ಎಂದು ನೋಡುಗರಿಗೆ  ಅನಿಸುವುದು ಸಹಜ.  ಆದರೂ ತೆಂಕುತಿಟ್ಟಿನಲ್ಲೂ  ಅಂತಹ ನೃತ್ಯವಿಸ್ತಾರಗಳಿರುವುದು  ವೇದ್ಯ. ನರ್ತನ  ಪ್ರಕಾರಗಳಲ್ಲಿ  ಶೃಂಗಾರ ಆದ್ಯತೆಯ  ಮತ್ತು ಜನಾಕರ್ಷಣೀಯ  ಭಾವ ಎನ್ನುವುದನ್ನು  ಗಮನದಲ್ಲಿರಿಸಿ  ನೋಡಿದರೆ, ಈ  ನವರಸಭರಿತ ಪ್ರಸಂಗ  ನಿರೂಪಣೆಯಲ್ಲಿ  ಶೃಂಗಾರದ ಕೊರತೆ  ಸಹಜವಾಗಿಯೇ ಎದ್ದು  ಕಾಣುತ್ತದೆ.  ಇನ್ನುಳಿದಂತೆ  ಸಿದ್ಧಕಟ್ಟೆ  ವಿಶ್ವನಾಥಶೆಟ್ಟಿಯವರ  ಸೃಜನಶೀಲ ಪದ್ಯಗಳು,  ಕಥಾಸಂಯೋಜನೆ,  ಪ್ರಸಂಗದ ವಿಸ್ತರಣಾ  ಪ್ರಕ್ರಿಯೆ,  ಸಮಯ ಪಾಲನೆ,  ವಾಚಿಕಾಭಿನಯ,  ಆಹಾರ್ಯಾಭಿನಯ,  ಮೇಳದ ವ್ಯವಸ್ಥಾಪಕರ,  ಹಿಮ್ಮೇಳ ಮತ್ತು  ಮುಮ್ಮೇಳದ ಕಲಾವಿದರ  ಅಚ್ಚುಕಟ್ಟುತನ  ಮತ್ತು ರಂಗನಿರ್ವಹಣೆ-ಎಲ್ಲವೂ  ಪ್ರಬುದ್ಧವಾಗಿದ್ದು,  ಪರಂಪರೆ  ಮತ್ತು  ಹೊಸತಿನ ಅಂದವನ್ನು  ಪ್ರತಿನಿಧಿಸುತ್ತದೆ.

ಪ್ರಸ್ತುತ ದಿನಗಳಲ್ಲಿ  ಯಕ್ಷಗಾನ ಕಲಾ  ಉದ್ಯಮವು ಇಡೀ  ರಾತ್ರಿಯ ಪ್ರಸಂಗಗಳಿಂದ  ಕಳಚಿಕೊಳ್ಳುತ್ತಾ,  ವರ್ತಮಾನಕ್ಕೆ  ತಕ್ಕಂತೆ ಕಾಲಮಿತಿಯ  ಬದ್ಧತೆಗೆ, ನಿರ್ದಿಷ್ಟ  ಚೌಕಟ್ಟಿಗೆ ಒಳಪಡುತ್ತಿದೆ.  ಇಂತಹ ಸ್ಥಿತ್ಯಂತರದಲ್ಲಿ  ಪ್ರೇಕ್ಷಕ ಸಹೃದಯರ  ರಸಿಕತನವನ್ನು  ಹೆಚ್ಚು ಮಾಡುವಲ್ಲಿ  ಶ್ರೀರಾಮಸೇತುವಿನಂತಹ  ಪ್ರಸಂಗದ ನಿರ್ವಹಣೆ,  ನಿರೂಪಣೆ ಹೊಸ  ಸಾಧ್ಯತೆಗಳನ್ನು  ಸಾಧಿಸುವುದು  ಒಳ್ಳೆಯ ಸಂಗತಿ.