ಅಂಕಣಗಳು

ನೂಪುರ ಪತ್ರಿಕೆ

ಆರನೇ ವರ್ಷೋತ್ಸವದ ವಿಶೇಷ ಸಂಚಿಕೆ : ಮಾಘ ಫಾಲ್ಗುಣ (ಜನವರಿ -ಫೆಬ್ರವರಿ ೨೦೧೨) -ಶಿಶಿರ ಶೃಂಗಾರ

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನರ್ತನ ಜಗತ್ತಿನ ಆಗುಹೋಗುಗಳು, ಒಳನೋಟಗಳು, ಪಂಥಾಹ್ವಾನಗಳು, ಅವಶ್ಯಕತೆಯ ಚರ್ಚೆಗಳು ತೆರೆದುಕೊಳ್ಳುವ ರಂಗವೇ ರಂಗ ಭ್ರಮರಿಯದ್ದು. ಈ ಮೂಲಕವಾಗಿ ಸಮಕಾಲೀನ, ಸಾಂದರ್ಭಿಕ ವಿಶೇಷ-ವಿಚಾರಗಳನ್ನು ಹಂಚಿಕೊಳ್ಳಬೇಕು ಎನ್ನುವ ಆಶಯ ನಮ್ಮದು. ರಂಗದ ಇಣುಕುನೋಟವನ್ನು ನೀಡುವ ಈ ಅಂಗಳಕ್ಕೆ ಎಲ್ಲರಿಗೂ ಸ್ವಾಗತವಿದೆ..
It is platform for articles/research write-ups/views of Teachers, Public, Dancers, Gurus, Students etc etc. The developments, challenges, need, debate.. what not.. You can express your opinions with proper citations, references and field work.

ಹೀಗೊಂದು ಸ್ವಗತ… ಹೆಜ್ಜೆಯ ಅನುರಣಿಸುವ ಗೆಜ್ಜೆ ನಾ…

Sunday, February 15th, 2009

ನೂಪುರ ಭ್ರಮರಿಯ ನಲ್ಮೆಯ ಓದುಗರಿಗೆಲ್ಲಾ ಆತ್ಮೀಯ ನಮಸ್ಕಾರ.
ನಾನ್ಯಾರೆಂದು ತಿಳೀತಾ?
ನನ್ನ ಹೆಸರು ಕೇಳಿದಾಕ್ಷಣ ಆ ನನ್ನ ಚಿತ್ರ ನಿಮ್ಮ ಕಣ್ಣಮುಂದೆ ಬರುವುದು ನಿಶ್ಚಿತ. ನಾಟ್ಯದ ಒಂದು ಪ್ರಮುಖ ಅಂಗವೇ ಆಗಿರುವ ಈ ನಿಮ್ಮ ‘ಗೆಜ್ಜೆ’ಯ ಪ್ರತ್ಯೇಕ ಪರಿಚಯ ಬೇಕಿಲ್ಲ ತಾನೇ? ಆದರೂ ನನ್ನ ಬಗೆಗೊಂದಿಷ್ಟು ಅಂತರಾಳದ ಮಾತುಗಳು…
ನಿಜಕ್ಕೂ ಹೆಮ್ಮೆಯೆನಿಸುತ್ತದೆ ನೃತ್ಯಗಾರರು ಲಯಬದ್ಧವಾಗಿ ಹೆಜ್ಜೆ ಹಾಕುತಿರೆ ನಾನು ಅದಕ್ಕೆ ಧ್ವನಿಯಾಗುವೆ. ನಾನಿದ್ದರೇ ತಾನೇ ನೃತ್ಯವದು ಸೊಗ ‘ಸಾಗುವುದು”..? ನೃತ್ಯದ ಆ ಸಾರ್ಥಕತೆಗೆ ಕಾರಣವಾದಾಗ ನಾನು ಧನ್ಯ!
ಭರತನಾಟ್ಯದ ರಂಗಪ್ರವೇಶವಾಗುವ ಮೊದಲಿಗೇ ನನ್ನ [...]

ಪರಂಪರೆ ಮತ್ತು ಕಲಾತ್ಮಕ ಮೌಲ್ಯಗಳ ಸಂಕಲನ : ಶ್ರೀರಾಮಸೇತು

Thursday, November 6th, 2008

- ‘ಮನೂ’ ಬನ

ಪೌರಾಣಿಕ ಪ್ರಸಂಗಗಳಿಗೆ ಜೀವ ಕೊಡುವುದರೊಂದಿಗೆ ಸಮಕಾಲೀನ ನಿಲುವುಗಳಿಗೆ ಒತ್ತುಕೊಡುತ್ತಾ ಪ್ರಯೋಗಗಳಿಗೆ ಹರಿಕಾರನಾಗುತ್ತಾ, ಜಾನಪದ ಮತ್ತು ಶಾಸ್ತ್ರೀಯ ನೃತ್ಯ ಪರಂಪರೆಯನ್ನು ಏಕಕಾಲಕ್ಕೇ ನಮ್ಮೆದುರು ತಂದಿರಿಸುವ ನಮ್ಮ ನಾಡಿನದ್ದೇ ಆದ ಕಲೆ ಎಂಬುದಿದ್ದರೆ ಅದು ಯಕ್ಷಗಾನವೇ ಸೈ !

ಕಲಾಭಿವ್ಯಕ್ತಿಗಾಗಿ ಕೆಲವು ಯಕ್ಷಗಾನ ಕೂಟಗಳು, ಮೇಳಗಳು ಹಲವು ತೆರೆಮರೆಗೆ [...]

ಭರತನಾಟ್ಯದಲ್ಲಿ ಪುರುಷ – ಸ್ತ್ರೀಯರ ಅಸಮತೆ: ಒಂದು ವಿಮರ್ಶೆ

Thursday, November 6th, 2008

- ಪದ್ಮಜಾ ಸುರೇಶ್

ಪ್ರಥಮ ಸಂಚಿಕೆಯಲ್ಲಿ ಚರ್ಚಿಸಲಾದ ರಂಗ ಪ್ರವೇಶಲೇಖನದ ಕುರಿತಾಗಿ ಎರಡನೇ ಸಂಚಿಕೆಯ ಅಂಗಳದ ಮಾತು, ತಿಂಗಳ ಚರ್ಚೆ ಅಂಕಣದಲ್ಲಿ ಶತಾವಧಾನಿ ಡಾ| ಗಣೇಶ್, ನಾಟ್ಯಾಚಾರ್ಯ ಮುರಳೀಧರ ರಾವ್, ಕಲಾ ವಿಮರ್ಶಕ ಬಿ‌ಎಸ್‌ಎಸ್ ರಾವ್ ಅವರ ಅಭಿಪ್ರಾಯಗಳನ್ನು ಪ್ರಕಟಿಸಲಾಗಿತ್ತು.

ಇಂತಹ ಸಂವಾದಗಳು ಹಲವು ಲೇಖನದ ಮೂಲಕವೂ ತೆರೆದುಕೊಂಡಿದೆ. ಸಂವಾದಗಳ [...]

ನೃತ್ಯಪರೀಕ್ಷೆಗಳ ಅಧ್ವಾನ – ಒಂದು ನೋಟ

Thursday, November 6th, 2008

- ‘ಮನೂ’ ಬನ

ನೃತ್ಯ ವಿದ್ಯಾರ್ಥಿನಿಯರು :

‘ದಶವಿಧ ಅಡವು…?ಹಾಗಂದ್ರೆ..? ಪರೀಕ್ಷೆಗೆ ೧೫ ದಿವ್ಸ ಉಳಿದಿದೆ.. ಅಷ್ಟರಲ್ಲಿ ಇವನ್ನೆಲ್ಲಾ ಕಲಿಯೋಕಾಗುತ್ತಾ..? ಏನೋ ಒಂದಷ್ಟು ಅಡವು ಮಾಡಿದ್ದಾರೆ. ಹೆಸರೂ ಒಂದಷ್ಟು ಗೊತ್ತಿದೆ. ಆದ್ರೆ ದಶವಿಧ ಅಡವೂ…..ಏನೋಪ್ಪ…ಟೀಚರ್ ಪಾಸ್ ಮಾಡಿಸ್ತೀನಿ ಅಂತ ಹೇಳಿದ್ದಾರೆ. ಈಗ ನೀವು ಹೇಳೋದು ನೋಡಿದ್ರೆ ನಂಗೆ ಹೆದ್ರಿಕೆ ಆಗುತ್ತೆ…ಅಂದ ಹಾಗೆ ದುಡ್ಡು [...]

Natya’s co-relation with the esoteric discipline of Tantra

Thursday, November 6th, 2008

- Padmaja venkatesh

Essentially ,Tantra is that belief and practice which is based on the Vedantic principle that the universe we experience is the material ,conspicuous and tangible manifestation of the divine energy itself .It is believed that Lord Shiva’s philosophy is promulgated in the world through the many Tantras which exist in the [...]

ಮಕ್ಕಳಿಗೂ ಮಾನ್ಯತೆ ಇರಲಿ

Thursday, November 6th, 2008

-ನಿಡುವಜೆ ರಾಮ ಭಟ್, ಉಡುಪಿ

ಅನೇಕ ಸಂಘ-ಸಂಸ್ಥೆಗಳು ಇಂದು ರಿಯಾಲಿಟಿ ಷೋ ಹೆಸರಿನಲ್ಲಿ ಯಾವುದೋ ನೃತ್ಯ ಪ್ರದರ್ಶನಗಳಿಗೆ ಅವಕಾಶ ನೀಡುವುದನ್ನು ನೋಡುತ್ತೇವೆ. ಜೊತೆಗೆ ಇಂತಹ ಷೋಗಳತ್ತ ಯುವ ಜನತೆ ಆಕರ್ಷಿತರಾಗುವುದನ್ನೂ ಕಾಣುತ್ತೇವೆ. ಉತ್ತರಭಾರತದಲ್ಲಿ ಇಂತಹ ರಿಯಾಲಿಟಿ ಷೋದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಹೊರಟ ಶಿಂಜಿನಿಯ ನೃತ್ಯವನ್ನು [...]

ಬದಲಾಗಿದೆ ಮನಸ್ಸು

Thursday, November 6th, 2008

- ‘ಮನೂ’ ಬನ

ವ್ಯಾಪಾರೀಕರಣದಲ್ಲಿ ನಲುಗುತ್ತಿರುವ ನೃತ್ಯ ತರಬೇತಿ, ದುಬಾರಿ ಖರ್ಚು-ವೆಚ್ಚ, ನಾಯಿಕೊಡೆಗಳಂತೆ ತಲೆ ಇತ್ತುತ್ತಿರುವ ನೃತ್ಯ ಸಂಸ್ಥೆಗಳು, ಎಲ್ಲೆಂದರಲ್ಲಿ ಭರತನಾಟ್ಯ ಎಂದು ಹಣೆಪಟ್ಟಿ ಕಟ್ಟಿಕೊಂಡು ಪ್ರದರ್ಶಿಸುವ ನೃತ್ಯಗಳು… ಹೀಗೆ ಒಂದಲ್ಲ, ಎರಡಲ್ಲ… ಹಲವಾರು ಅಧ್ವಾನಗಳ ಹಿಂದೆ ಯಾರ ಕೈವಾಡವಿದೆ? ಸಂಸ್ಥೆಗಳದ್ದೇ? ಗುರುಗಳದ್ದೇ? ಅಥವಾ ಇಂದಿನ ಶಿಕ್ಷಣ [...]

ಅರಂಗೇಟ್ರಂ – ಒಂದು ನೋಟ

Thursday, November 6th, 2008

- ‘ಮನೂ’ ಬನ

ತಮಿಳಿನಲ್ಲಿ ಅರಂಗೇಟ್ರಂ ಎಂದು ಕರೆಸಿಕೊಳ್ಳುವ ರಂಗಪ್ರದರ್ಶನವನ್ನು ಕನ್ನಡದಲ್ಲಿ ರಂಗಪ್ರವೇಶವೆಂದು ಕರೆಯಲಾಗಿದೆ. ಭರತನಾಟ್ಯದ ಅಭ್ಯಾಸದಲ್ಲಿ ಮುಖ್ಯವಾಗಿ ಮೂರು ಹಂತಗಳಿರುತ್ತವೆ. ಮೊದಲನೆಯದು ಸಾಧಕಪೂಜೆ ಅಂದರೆ ನೃತ್ಯ ಅಭ್ಯಾಸಕ್ಕೆ ತೊಡಗುವ ಕಾರ್ಯಕ್ರಮ. ಎರಡನೆಯದು ವದ್ದಿಗೆ ಪೂಜೆ ಅಂದರೆ ಪೂಜೆಯ ಬಳಿಕವೇ ಗೆಜ್ಜೆಕೆಟ್ಟಿಕೊಂಡು ಅಭ್ಯಾಸ ಮಾಡುವುದು. ಕೊನೆಯದು ಗೆಜ್ಜೆ [...]

ನೃತ್ಯದಲ್ಲಿ ಕಲ್ಪನೆ ಮತ್ತು ವಾಸ್ತವವಾದ

Monday, October 20th, 2008

-ಮನೂ ’ಬನ’
ಪ್ರೇರಣೆ : ’ಮಂಥನ’ ಕಾರ್ಯಕ್ರಮ

ಕಲ್ಪನೆ ಮತ್ತು ವಾಸ್ತವವಾದ ಎಂಬೀ ಎರಡು ಶಬ್ದಗಳಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅದರದ್ದೇ ಆದ ವ್ಯಾಖ್ಯೆಗಳಿವೆ. ಯಾವುದು ಇದೆಯೋ, ಯಾವುದು ಇತ್ತು ಎನ್ನಲಾಗಿತ್ತೋ, ಯಾವುದು ಇರಬಹುದೋ, ಯಾವುದು ಇರಬೇಕು ಅಂತ ಅಂದುಕೊಳ್ಳುತ್ತೇವೆಯೋ..; ಹೀಗೆ ಇದ್ದ ಹಾಗೆ, ಇರುವ ಹಾಗೆ, ಇದೆ ಎಂದು ಹೇಳುವ [...]