ಆ ಬಾಲಕನ ಉತ್ತರಕ್ಕೆ ಚಿಟ್ಟಾಣಿ ತಬ್ಬಿಬ್ಬಾಗಿದ್ದರು!
Thursday, December 15th, 2011ಪ್ರಾಯಃ ಯಕ್ಷಗಾನದ ಅಭಿಮಾನಿಗಳಿಗೆ ಯಕ್ಷಗಾನ ಕೊಡುವಷ್ಟು ಮನರಂಜನೆಯನ್ನು ಇನ್ನಾವ ಮಾಧ್ಯಮವೂ ಕೊಡಲಾರದೇನೋ. ಈಗೀಗ ಸಂಜೆ ಆರರಿಂದ ಒಂಭತ್ತರ ವರೆಗಿನ ಯಕ್ಷಗಾನಗಳು ಹೆಚ್ಚೆಚ್ಚು ಚಾಲ್ತಿಗೆ ಬರುತ್ತಿರುವುದು ಹೌದಾದರೂ ರಾತ್ರಿಯಿಡೀ ಆಡುವ ಯಕ್ಷಗಾನಗಳು ನಶಿಸಿ ಹೋಗುವಂತೇನೂ ಕಾಣುತ್ತಿಲ್ಲ. ಹಾಗಾಗಿಯೇ ಈಗಲೂ ಇಡೀ ರಾತ್ರಿ ನಡೆಯುವ ಯಕ್ಷಗಾನಗಳು ಭರ್ಜರಿ ಪ್ರದರ್ಶನಗಳನ್ನೇ ಕಾಣುತ್ತಿವೆ. ಇಡೀ ರಾತ್ರಿ ನಿದ್ದೆ ಬಿಟ್ಟು ಒಬ್ಬಾತ ವ್ಯಕ್ತಿ ಯಕ್ಷಗಾನ ವೀಕ್ಷಿಸುತ್ತಾನೆಂದರೆ ಅದು ಅವನಿಗೆ ಅದೆಷ್ಟು ಮನರಂಜನೆ ನೀಡಲಿಕ್ಕಿಲ್ಲ ಯೋಚಿಸಿ. ಅದರಲ್ಲೂ ನೀವು ಕೆಲವು ಮಕ್ಕಳನ್ನು ನೋಡಬೇಕು. ತೀರಾ ಮಧ್ಯರಾತ್ರಿಯ [...]







