: Noopura bhramari | ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ | Bharatanatyam Magazine :: » ರಂಗಸ್ಥಳ

ನಾವಡರ ಕಂಠಸಿರಿ ಮುಂಬಯಿಯಲ್ಲೂ ಮೋಡಿ ಮಾಡಿತ್ತು!
ಕ್ರಿಕೆಟ್ ಬಗೆಗೆ ಆಸಕ್ತಿಯಿದ್ದವರ ಮುಂದೆ ನೀವೊಮ್ಮೆ ತೆಂಡೂಲ್ಕರ್ ಹೆಸರೆತ್ತಿ ನೋಡಿ. ಮತ್ತೆ ಅನಾಮತ್ತು ಒಂದು-ಒಂದೂವರೆ ಗಂಟೆ ಅವರೇ ಮಾತನಾಡುತ್ತಾರೆ! ಮೊನ್ನೆ ಮುರಳಿಗೆ ಎಂಟುನೂರು ವಿಕೆಟ್ ಸಿಕ್ತಂತೆ ಅನ್ನಿ, ನಿಮ್ಮ ಕಥೆ ಗೋವಿಂದ! ಅವ ಹೇಗೆ ವಿಕೆಟ್ ಪಡೆದ, ಅವನ ತಾಕತ್ತೇನು?, ಅವನಿಗೆ ಇದೆಲ್ಲಾ ಹೇಗೆ ಸಾಧ್ಯವಾಯಿತು?, ಅವನ ಎಂಟುನೂರನ್ನು ತಪ್ಪಿಸಲು ಭಾರತಕ್ಕೆ ಸಾಧ್ಯವಿತ್ತೇ?… ಹೀಗೆ ಅವರ ವಿಷಯ ಮುಗಿಯುವುದೇ ಇಲ್ಲ. ಬೆಳ್ಳಂಬೆಳಗ್ಗೇ ಎದ್ದು ಉದಯ ಮೂವೀಸ್ ಹಾಕಿ ಕೂರುವವರ ಮಂದೆ ರಾಜ್ ಕುಮಾರ್ ಅನ್ನಿ. ಹುಟ್ಟಿನಿಂದ ಸಾವಿನವರೆಗಿನ ಅಷ್ಟೂ ಸಂಗತಿಗಳು ನಿಮ್ಮ ಮುಂದೆ ಹಾಜರ್. ಮಾತ್ರವಲ್ಲ, ವೀರಪ್ಪನ್ ಹೊತ್ತೊಯ್ದ ವಿಚಾರ ಹೇಳುವಾಗ ದುಃಖ ಬೇರೆ!! ಒಟ್ಟಿನಲ್ಲಿ ಈ ತೆಂಡೂಲ್ಕರ್, ಅಮಿತಾಬ್ ಬಚ್ಚನ್, ಭೀಮಸೇನ ಜೋಷಿ, ಲತಾ ಮಂಗೇಶ್ಕರ್… ಇವರೆಲ್ಲಾ ಇರುವುದೇ ಹೀಗೆ, ಎಲ್ಲರಿಗೂ ಹುಚ್ಚು ಹಿಡಿಸುವ ಹಾಗೆ. ಅದರಲ್ಲೂ ಕೆಲವರಂತೂ ಈ ‘ಸ್ಟಾರ್’ಗಳನ್ನೇ ಹಗಲಿರುಳು ಧೇನಿಸುತ್ತಿರುತ್ತಾರೆ.

ಇವುಗಳನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ‘ಯಕ್ಷಗಾನದ ಹುಚ್ಚ’ರ ಪಾಲಿಗೆ ದಿ|ಗುಂಡ್ಮಿ ಕಾಳಿಂಗ ನಾವಡ ಅಂದರೆ ಸಾಕು ಮತ್ತೇನೂ ಬೇಕಿಲ್ಲ. ಇಡೀ ದಿವಸ ಅವರ ಬಗೆಗೇ ಹೇಳುತ್ತಾರೆ. ಮೊಗೆದಷ್ಟೂ ಮುಗಿಯದ ಸಂಗತಿಗಳು. ಅಂದರೆ, ಕರ್ನಾಟಕದ ಯಕ್ಷಲೋಕಕ್ಕೆ ಬಂದರೆ ನಾವಡರೊಬ್ಬ ಅತ್ಯಪೂರ್ವ ಸ್ಟಾರ್, ತೆಂಡೂಲ್ಕರ್‌ನಂತೆ!! ಬರೀ ಮೂವತ್ತೆರಡು ವಯಸ್ಸಿನಲ್ಲಿ ನಾವಡರು ಏರಿದ ಎತ್ತರ ಒಂದು ಸಾರ್ವಕಾಲಿಕ ದಾಖಲೆಯೇ ಸರಿ.

ಅದ್ಹೇಗೆ ನಾವಡರಿಗೆ ಆ ಕಂಠ ಪ್ರಾಪ್ತವಾಯಿತೋ ಗೊತ್ತಿಲ್ಲ. ಹಿಂದೆಂದೂ ಯಕ್ಷಕಲಾಭಿಮಾನಿಗಳು ಕಂಡು ಕೇಳರಿಯದ ಧ್ವನಿ ಅವರನ್ನು ಇಡೀ ಯಕ್ಷಲೋಕದಲ್ಲೇ ಅಪೂರ್ವರನ್ನಾಗಿಸಿತು. ಕರ್ಣಕಠೋರವಾಗಿರುವ ಏರು ಪದ್ಯಕ್ಕೂ ಒಂದು ಇಂಪನ್ನು ಕೊಟ್ಟವರವರು. ನಾವಡರ ಯಾವುದೇ ಭಾಗವತಿಕೆಯನ್ನು ಕೇಳಿ ನೋಡಿ, ಯಾವತ್ತೂ ಅವರು ಬೋರ್ ಆಗುವುದಿಲ್ಲ. ಕಾರಣ ಅವರ ಕಂಠ!

ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಗೆಗೆ ನಿಮಗೆ ಗೊತ್ತಿದೆ. ಅಂಥ ಚಿಟ್ಟಾಣಿಗೆ ಕಾಳಿಂಗ ನಾವಡರು ಅತ್ಯುತ್ತಮ ಜೋಡಿಯಾಗಿದ್ದರು. ‘ನಾವಡ ಹಾಗೂ ಚಿಟ್ಟಾಣಿ ಜೊತೆಗಿದ್ದರೆ ಆ ಸೊಬಗೇ ಬೇರೆ. ಇವರಿಗೆ ಅವರು ಸ್ಪೂರ್ತಿ, ಅವರಿಗೆ ಇವರು. ಅದರಲ್ಲೂ ನಾವಡರು ನೀಲಗಗನದೊಳು ಮೇಘಗಳ…, ಎಲ್ಲೆಲ್ಲು ಸೊಬಗಿದೆ..ಎಲ್ಲೆಲ್ಲೂ ಸೊಗಸಿದೆ… ಹಾಡು ಹಾಡಬೇಕು, ಚಿಟ್ಟಾಣಿ ಕುಣಿಯಬೇಕು. ಅದಕ್ಕಿಂತ ದೊಡ್ಡ ಮನರಂಜನೆಯೇನಿದೆ ಸ್ವಾಮಿ ಬದುಕಿನಲ್ಲಿ?’ ಅನ್ನುತ್ತಾರೆ ಯಕ್ಷಾಭಿಮಾನಿಗಳು.

ತಮಾಷೆಯ ಸಂಗತಿಯೆಂದರೆ ಈ ನಾವಡ ಹಾಗೂ ಚಿಟ್ಟಾಣಿ ನಮ್ಮವರನ್ನು ಮಾತ್ರ ಮೋಡಿ ಮಾಡಿದ್ದಲ್ಲ. ಆ ಕಾಲದಲ್ಲೇ ಮುಂಬಯಿಗೆ ಹೋಗಿ, ವರ್ಷವೊಂದರಲ್ಲಿ ಭಸ್ಮಾಸುರ ಮೋಹಿನಿ ಪ್ರಸಂಗವೊಂದನ್ನೇ ನಲವತ್ತಕ್ಕೂ ಹೆಚ್ಚು ಬಾರಿ ಆಡಿದ್ದರೆಂದರೆ ಅಲ್ಲಿನ ಜನ ಅದೆಷ್ಟು ಮರುಳಾಗಿದ್ದಿರಬಹುದು ನೀವೇ ಯೋಚಿಸಿ. ಯಕ್ಷಗಾನದ ಗಂಧಗಾಳಿಯಿಲ್ಲದಿದ್ದ ಮುಂಬಯಿಯಲ್ಲೂ ಯಕ್ಷಗಾನಕ್ಕೊಂದು ಸ್ಪಷ್ಟ ನೆಲೆ ಕಲ್ಪಿಸಿದ ಕೀರ್ತಿ ನಾವಡ ಹಾಗೂ ಚಿಟ್ಟಾಣಿಯದ್ದು. ‘ಇವತ್ತಿಗೂ ರಂಗಕ್ಕೆ ಬಂದಾಗ ನಾವಡರ ನೆನಪು ನನ್ನನ್ನು ಗಾಢವಾಗಿ ಕಾಡುತ್ತದೆ’ ಅನ್ನುವ ಚಿಟ್ಟಾಣಿ ಮಾತಿನಲ್ಲಿ ನಾವಡರ ನೆನಪು ಮಡುಗಟ್ಟುತ್ತದೆ. ಬರಿದೆ ಕೇಳುವ ನಮ್ಮನ್ನೇ ನಾವಡರು ಈ ಪರಿ ತಟ್ಟುತ್ತಿರುವಾಗ ಅವರದೇ ಹಾಡಿಗೆ ಕುಣಿದ ಕಲಾವಿದರಿಗೆ ಅವರ ಸಾವನ್ನು ಸಹಿಸುವುದು ಹೇಗೆ ತಾನೇ ಸಾಧ್ಯವಾದೀತು ಹೇಳಿ.

ಏನೇ ಹೇಳಿ, ನಾವಡರು ತಮ್ಮ ಎಳೆಯ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋಗಿ ತುಂಬಾ ಅನ್ಯಾಯ ಮಾಡಿದರು. ಅವರು ಈಗಲೂ ಇದ್ದಿದ್ದರೆ ಯುವ ಪೀಳಿಗೆಯ ಅದೆಷ್ಟೋ ಮಂದಿ ಆ ಕಂಠಸಿರಿಯನ್ನು ಪ್ರತ್ಯಕ್ಷವಾಗಿ ಕಂಡು-ಕೇಳಿ ಧನ್ಯರಾಗುತ್ತಿದ್ದರು. ಛೆ, ನಾವೆಲ್ಲಾ ಅಷ್ಟು ಪುಣ್ಯ ಮಾಡಿಲ್ಲ ಬಿಡಿ…

ಮತ್ತೆ ಮತ್ತೆ ಕಾಡುವ ನಾವಡರು
ನಿಜ ಹೇಳಬೇಕೆಂದರೆ ಕಳೆದೆರಡು ಬಾರಿ ಈ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದ ವಿಠಲ  ಶಾಸ್ತ್ರಿಯವರ ರೋಚಕ ಕಥೆಗಳ ಬಗೆಗೆ ಇನ್ನೂ ಹೇಳುವುದಿತ್ತು. ಕಳೆದ ಬಾರಿಯ ಲೇಖನ ಮುಗಿಸುವ  ಹೊತ್ತಿಗೆ ಪುನಃ ವಿಠಲ ಶಾಸ್ತ್ರಿಗಳ ಬಗೆಗೇ ಬರೆಯುವುದೆಂದು ತೀರ್ಮಾನಿಸಿಯೂ ಆಗಿತ್ತು. ಹಾಗಾಗಿ  ಅದೇ ಗುಂಗಿನಲ್ಲಿದ್ದ ನನ್ನನ್ನು ಎಚ್ಚರಿಸಿದ್ದು ಮೊನ್ನೆ ಕಳೆದುಹೋದ ದಿನಾಂಕ ಮೇ ೨೭. ಬರೋಬ್ಬರಿ  ಇಪ್ಪತ್ತು ವರ್ಷಗಳ ಹಿಂದೆ ಅದೇ ದಿನ ನಡೆದುಹೋದ ದುರಂತವೊಂದು ಯಕ್ಷಲೋಕಕ್ಕೆ ಮರ್ಮಾಘಾತವನ್ನೇ  ನೀಡಿತ್ತೆಂದು ಹೇಳಿದರೆ ಖಂಡಿತಾ ಅತಿಶಯೋಕ್ತಿಯಲ್ಲ. ಹೌದು, ಯಕ್ಷಲೋಕ ಕಂಡ ಅತ್ಯಪೂರ್ವ ಕಂಠಸಿರಿಯ  ಭಾಗವತ ಗುಂಡ್ಮಿ ಕಾಳಿಂಗ ನಾವಡರು ಗತಿಸಿಹೋದದ್ದು ೧೯೯೦ರ ಮೇ ೨೭ರಂದು!

ಕಾಳಿಂಗ ನಾವಡರು ಗತಿಸಿ ಇಪ್ಪತ್ತು ಸಂವತ್ಸರಗಳು ಸರಿದುಹೋಗಿದ್ದರೂ ಅವರ  ಪರಿಚಯವಿಲ್ಲದವರು ಇಂದಿಗೂ ಇಲ್ಲ! ಪ್ರಾಯಶಃ ವ್ಯಕ್ತಿಯೊಬ್ಬ ಸತ್ತೂ ಬದುಕುವುದೆಂದರೆ ಇದೇ ಇರಬೇಕು.  ನಾವಡರು ಇಂದಿಗೂ ಮನೆಮನೆಗಳ ಟೇಪ್‌ರೆಕಾರ್ಡರ್‌ಗಳಲ್ಲಿ, ಸಿ.ಡಿ., ಡಿ.ವಿ.ಡಿ. ಗಳಲ್ಲಿ  ಜೀವಂತವಾಗಿದ್ದಾರೆ. ಕ್ಯಾಸೆಟ್‌ನಲ್ಲೇ ಅವರ ಧ್ವನಿ ಕೇಳುತ್ತಾ ಕೇಳುತ್ತಾ ಮೈ ಮರೆಯುವವರು, ಅವರ  ಸಾವಿಗಾಗಿ ಮರುಗುವವರು ಅನೇಕ ಮಂದಿ ಈಗಲೂ ಇದ್ದಾರೆ. ಕಾಳಿಂಗ ನಾವಡರೆಂಬ ವ್ಯಕ್ತಿ ತನ್ನ ಜೀವಿತದ  ಕೇವಲ ಮೂವತ್ತೆರಡು ವರ್ಷಗಳಲ್ಲಿ ಸಂಪಾದಿಸಿದ ಅಭಿಮಾನಿ ವೃಂದ, ಒಬ್ಬ ಉತ್ತಮ ವೇಷಧಾರಿ ಎಪ್ಪತ್ತು –  ಎಂಭತ್ತು ವರ್ಷಗಳ ತನ್ನಿಡೀ ಜೀವನದಲ್ಲಿ ಗಳಿಸಬಹುದಾದ ಅಭಿಮಾನಿಗಳಿಗಿಂತಲೂ ತುಸು ಹೆಚ್ಚೇ  ಅನ್ನಬಹುದೇನೋ!

ತಮಾಷೆಯೆಂದರೆ ನಾವಡರು ಸ್ವರ್ಗಸ್ಥರಾದ ಅನಂತರದಲ್ಲಿ ಯಕ್ಷಗಾನ ಬಗೆಗೆ  ತಿಳಿದುಕೊಂಡವರೂ ಅವರ ಅಭಿಮಾನಿಗಳಾಗಿದ್ದಾರೆ ! ಸತ್ತ ನಂತರವೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ  ಭಲೇ ಅಪರೂಪದ, ಮಹಾನ್ ವ್ಯಕ್ತಿ ಅವರು ! ಇಂದಿಗೂ ಅವರ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇರುವುದು  ಅಚ್ಚರಿ ಹಾಗೂ ಸೋಜಿಗದ ಸಂಗತಿ. ನಾವಡರು ನಮ್ಮನ್ನಗಲಿ ಹೋಗುವ ಸಂದರ್ಭದಲ್ಲಿ ಇಂದಿನಂತೆ ಸಿ.ಡಿ.,  ಡಿವಿಡಿ ಗಳು ಅಭಿವೃದ್ಧಿ ಹೊಂದಿರಲಿಲ್ಲ. ಹಾಗಾಗಿ ಇಂದು ನಮಗೆ ದೊರಕುತ್ತಿರುವ ನಾವಡರ ಬಹಳಷ್ಟು  ಸಿಡಿಗಳು ಕ್ಯಾಸೆಟ್‌ನಿಂದ ಮರು ಎರಕ ಹೊಯ್ದವುಗಳು. ಆದಾಗ್ಯೂ ಅವುಗಳಿಗೆಲ್ಲಾ ಅಧಿಕ ಬೇಡಿಕೆಯಿದೆ.  ಹೀಗಿರುವಾಗ ಒಂದೊಮ್ಮೆ ಆವಾಗಲೇ ಈ ಪರಿ ಸಿ.ಡಿ, ಡಿ.ವಿ.ಡಿ.ಗಳಿರುತ್ತಿದ್ದರೆ ಅಥವಾ ನಾವಡರು  ಇಂದಿರುತ್ತಿದ್ದರೆ ಅವರ ಅವೆಷ್ಟು ಸಿ.ಡಿ.ಗಳು ನಮ್ಮೆಲ್ಲರ ಮನೆಗಳಲ್ಲಿರುತ್ತಿದ್ದವೋ?

ಕೇವಲ ತನ್ನ ಹದಿಮೂರನೇ ವಯಸ್ಸಿನಲ್ಲೇ (ನಾವೆಲ್ಲಾ ಯಕ್ಷಗಾನದ ಬಗ್ಗೆ ಆ ವಯಸ್ಸಿನಲ್ಲಿ  ಸರಿಯಾಗಿ ತಿಳಿದುಕೊಂಡಿದ್ದಿರಲಿಕ್ಕಿಲ್ಲ!) ನಾವಡರು ಭಾಗವತರಾಗಿ ಮೇಳ ಸೇರಿದ್ದರು. ಬರೀ  ಹತ್ತೊಂಬತ್ತರ ಹರಯಕ್ಕೆ ಆ ಕಾಲದ ಖ್ಯಾತ ಸಾಲಿಗ್ರಾಮ ಮೇಳದಲ್ಲಿ ಮುಖ್ಯ ಭಾಗವತರಾಗಿಬಿಟ್ಟಿದ್ದರು !  ಅಷ್ಟು ಸಣ್ಣ ವಯಸ್ಸಿನಲ್ಲಿ ಮುಖ್ಯ ಭಾಗವತರಾದ ಅವರ ದಾಖಲೆ ಇನ್ನೂ ಹಾಗೇ ಉಳಿದಿದೆ ಅನಿಸುತ್ತದೆ.  ಪ್ರಾಯಶಃ ಅದನ್ನು ಅಳಿಸುವುದೂ ಕಷ್ಟವೇ.

ಸಾಮಾನ್ಯವಾಗಿ ಭಾಗವತರು ಎಷ್ಟೇ ಚೆನ್ನಾಗಿದ್ದರೂ ವೇಷಧಾರಿಗಳಿಗಿಂತ ಹೆಚ್ಚಿನ ಮನ್ನಣೆ  ಪಡೆಯುವುದು ಕಷ್ಟವೇ. ಉತ್ತಮವಾಗಿ ಭಾಗವತಿಕೆ ಮಾಡಿದ ಆ ಕ್ಷಣದಲ್ಲಿ ಒಮ್ಮೆ ಚಪ್ಪಾಳೆ  ಗಿಟ್ಟಿಸಬಹುದಾದರೂ ಜನಮನದಲ್ಲಿ ದೀರ್ಘಕಾಲ ಕಾಡುವುದು ವೇಷಧಾರಿಯೇ. ಹಾಗಾಗಿ ಹಿಂದೆಲ್ಲಾ ಕೆಲವರು  ತಮ್ಮ ನೆಚ್ಚಿನ ಕಲಾವಿದ ರಂಗಪ್ರವೇಶ ಮಾಡುವ ಹೊತ್ತಿಗೇ ಯಕ್ಷಗಾನಕ್ಕೆ ಹೋಗುತ್ತಿದ್ದುದುಂಟು.  ಉದಾಹರಣೆಗೆ ದೇವಿ ಮಹಾತ್ಮೆಯಲ್ಲಿ ರಕ್ತಬೀಜ ಮಾಡುವಾತ ನೆಚ್ಚಿನ ಕಲಾವಿದನಾಗಿದ್ದರೆ ಕೆಲವರು  ರಕ್ತಬೀಜ ಬರುವ ವೇಳೆಗೇ, ಅಂದರೆ ಸುಮಾರು ಬೆಳಗಿನ ಜಾವ ಮೂರಕ್ಕೆ ಯಕ್ಷಗಾನ ನಡೆಯುವಲ್ಲಿಗೆ  ಆಗಮಿಸುತ್ತಿದ್ದುದುಂಟು. ಅಂದರೆ ಆ ವೇಷಧಾರಿಗೋಸ್ಕರ ಯಕ್ಷಗಾನಕ್ಕೆ ಬರುವುದು. ಇದು ಕಲಾವಿದರಿಗೆ  ಸಲ್ಲುವ ನಿಜವಾದ ಗೌರವವೂ ಹೌದು.

ವಿಶೇಷವೆಂದರೆ ಆಗಿನ ದಿನಗಳಲ್ಲಿ ವೇಷಧಾರಿಗಾಗಿ ಅಲ್ಲ, ಕಾಳಿಂಗ ನಾವಡರಿಗಾಗಿ  ಬರುವವರಿದ್ದರು! ಅಂದರೆ ಅವರು ಭಾಗವತಿಕೆಗೆ ಕುಳಿತುಕೊಳ್ಳುವ ಸಮಯಕ್ಕೆ ಸರಿಯಾಗಿ ಅಂದರೆ ಸುಮಾರು  ಮಧ್ಯರಾತ್ರಿ ಎರಡರ ವೇಳೆಗೆ ಜನ ಜಮಾಯಿಸುತ್ತಿದ್ದರು! ನಾವಡರು ಸೃಷ್ಟಿಸಿದ ಮಾಯೆಯೇ ಅಂಥಾದ್ದು.

ಖಂಡಿತಾ, ಕಾಳಿಂಗ ನಾವಡರು ಗತಿಸಿಹೋದದ್ದು ನಮ್ಮೆಲ್ಲರ ದುರದೃಷ್ಟ. ಅವರಿದ್ದಿದ್ದರೆ  ಈಗ ಸುಮಾರು ಐವತ್ತೆರಡು ವಯಸ್ಸಾಗಿರುತ್ತಿತ್ತು. ಹಾಗೆಯೇ ಯಕ್ಷಗಾನ ಇನ್ನೂ  ಎತ್ತರಕ್ಕೇರಿರುತ್ತಿತ್ತು.

ಶಾಸ್ತ್ರಿಗಳು ಎಷ್ಟು ಶ್ರೇಷ್ಟ ಕಲಾವಿದರೋ ಅಷ್ಟೇ ಕೋಪಿಷ್ಟ!
ಊಹೂಂ, ಆಗುತ್ತಿಲ್ಲ ; ಕಳೆದ ಬಾರಿ ಯಾವ ಕ್ಷಣದಲ್ಲಿ  ಕರಾವಳಿಯ ಗಂಡುಕಲೆ ಯಕ್ಷಗಾನದ ಹೆಮ್ಮೆಯ ಗಂಡುಮಗ ವಿಠಲ ಶಾಸ್ತ್ರಿಯವರ ಬಗೆಗೆ ಬರೆದೆನೋ ಅಲ್ಲಿಂದ ಶಾಸ್ತ್ರಿಗಳದೇ ಕನವರಿಕೆ. ಒಮ್ಮೆಯೂ ವಿಠಲಶಾಸ್ತ್ರಿಗಳನ್ನಾಗಲೀ, ಅವರ ರಂಗಸ್ಥಳದ ವೈಭವವನ್ನಾಗಲೀ ನೋಡದಿದ್ದರೂ ಶಾಸ್ತ್ರಿಗಳು ಹೀಗೆ ಇದ್ದಿರಬಹುದಾ? ಹಾಗೆ ಕುಣಿದಿರಬಹುದಾ? ಅನ್ನುವ ಯೋಚನೆಗಳು ಅವ್ಯಾಹತವಾಗಿ ಮೂಡಿಕೊಳ್ಳುತ್ತಿವೆ. ಮನಸಿನ ರಂಗಸ್ಥಳದ ತುಂಬೆಲ್ಲಾ ಶಾಸ್ತ್ರಿಗಳದೇ ಅಬ್ಬರ! ಅವರದೇ ಅರ್ಥಗಾರಿಕೆ. ಬರಿ ಅವರದೊಂದು ಮಾಸಿದ ಭಾವಚಿತ್ರವನ್ನು ಎದುರಿಗಿಟ್ಟುಕೊಂಡು ಕಲ್ಪನೆಯ ಬಣ್ಣ ತುಂಬಿ ಗತಕಾಲದ ಆ ಅದ್ವಿತೀಯ ರಂಗ ಸಾಕ್ಷಾತ್ಕಾರವನ್ನೇ ಎಣಿಸುತ್ತಾ ಕೂರುವುದು!

ಶಾಸ್ತ್ರಿಗಳ ಅಭಿನಯಗಳ ಬಗೆಗೆ, ರಂಗದಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದ ಪರಿಗೆ, ಆ ರಾತ್ರಿಗಳ ಕಥೆಗಳನ್ನು ಹೇಳುವ ಯಕ್ಷಕಲಾಭಿಮಾನಿಗಳೇ ಸಾಕ್ಷಿ. ಶಾಸ್ತ್ರಿಗಳ ಬಗೆಗೆ ಅವೆಷ್ಟು ರೋಚಕ ಕಥೆಗಳಿವೆಯೆಂದರೆ ಅಂತಹ ಕಥೆಗಳು ಸೇರಿ ಸೇರಿ ಶಾಸ್ತ್ರಿಗಳು ಯಕ್ಷಲೋಕದ ದಂತಕಥೆಯೇ ಆಗಿಬಿಡುತ್ತಾರೆ. ಜೊತೆಗೆ ಇಂಥಾ ಕಲಾವಿದರನ್ನೆಲ್ಲಾ ನೋಡದ ನತದೃಷ್ಟರು ನಾವು ಅನ್ನುವ ವೇದನೆಯೂ, ನಮ್ಮ ಹಿರಿಯರಿಗೆ ಈ ಪ್ರಚಂಡ ಕಲಾವಿದರುಗಳನ್ನು ನೋಡುವ ಸೌಭಾಗ್ಯ ಇತ್ತಲ್ಲಾ ಅನ್ನುವ ಸಾತ್ವಿಕ ಅಸೂಯೆಯೂ ಹುಟ್ಟಿಕೊಳ್ಳುತ್ತದೆ!

ಅಂದಹಾಗೆ  ನಿಮಗೆ ಶಾಸ್ತ್ರಿಗಳ ಬಗೆಗೆ ಇನ್ನೂ ಒಂಚೂರು  ಹೇಳಬೇಕು. ಶಾಸ್ತ್ರಿಗಳು ಎಷ್ಟು ಶ್ರೇಷ್ಟ ಕಲಾವಿದರೋ ಅಷ್ಟೇ ಕೋಪಿಷ್ಟ! ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅದಕ್ಕೆ ಕಾರಣನಾದವನಿಗೆ ಬಾಸುಂಡೆಯೇ!

ಅದು ಶಾಸ್ತ್ರಿಗಳು ರಂಗ ವೈಭವದ ಉತ್ತುಂಗದಲ್ಲಿದ್ದ ಕಾಲ. ಅವರಿಗೆ ಎಲ್ಲವೂ ಪಕ್ಕಾ ಇರಬೇಕು. ಅಂಥಾ ಶಾಸ್ತ್ರಿಗಳಿಗೆ ಚೆಂಡೆ ಬಾರಿಸುವುದೆಂದರೆ ಸಾಹಸದ ಕಾರ್ಯವೇ. ಯಾಕೆಂದರೆ ಶಾಸ್ತ್ರಿಗಳು ಒಂದೊಂದು ಹೆಜ್ಜೆ ಇಡುವಾಗಲೂ ಅದಕ್ಕೆ ಸರಿಯಾಗಿ ಚೆಂಡೆ ಸದ್ದು ಕೇಳಿಸಬೇಕು. ಸ್ವಲ್ಪ ಹೆಚ್ಚುಕಮ್ಮಿಯಾದರೆ ಮತ್ತೆ ಆಪತ್ತು! ಈ ಹಿನ್ನೆಲೆಯಲ್ಲಿ ನೆಡ್ಲೆ ನರಸಿಂಹ ಭಟ್ಟರು ಮಾತ್ರ ಶಾಸ್ತ್ರಿಗಳಿಗೆ ಚೆಂಡೆ ಬಾರಿಸಿ ಸೈ ಎನಿಸಿಕೊಳ್ಳುತ್ತಿದ್ದರು. ಆದ್ದರಿಂದ ಯಾವಾಗಲೂ ಶಾಸ್ತ್ರಿಗಳ ವೇಷಕ್ಕೆ ನೆಡ್ಲೆಯವರದೇ ಚೆಂಡೆ ಇರುತ್ತಿತ್ತು. ದಕ್ಷಾಧ್ವರ ಪ್ರಸಂಗದ ಶಿವ ಪಾರ್ವತಿ ತಾಂಡವ ನೃತ್ಯದ ವೇಳೆಯಂತೂ ನರಸಿಂಹ ಭಟ್ಟರ ಚೆಂಡೆ ಹಾಗೂ ಶಾಸ್ತ್ರಿಗಳ ಹೆಜ್ಜೆ ಎರಡೂ ಅದ್ಭುತ ಸಂಯೋಜನೆಗೊಳಪಡುತ್ತಿದ್ದವು.

ಒಮ್ಮೆ  ಏನಾಯಿತೆಂದರೆ ; ತಾಂಡವ ನರ್ತನದ ವೇಳೆ ನರಸಿಂಹ ಭಟ್ಟರ ಬದಲಿಗೆ ದಿವಾಣ ಭೀಮ ಭಟ್ ಚೆಂಡೆಗೆ ನಿಂತುಬಿಟ್ಟರು. ಸರಿ, ನರ್ತನ ಶುರುವಾಯಿತು. ನರ್ತಿಸುತ್ತಿದ್ದ ವೇಳೆ ಗ್ರಹಚಾರವಶಾತ್ ಒಮ್ಮೆ ಶಾಸ್ತ್ರಿಗಳು ಹೆಜ್ಜೆ ಇಡುವ ಮೊದಲೇ ಚೆಂಡೆಪೆಟ್ಟು ಬಿದ್ದಾಯಿತು! ಶಾಸ್ತ್ರಿಗಳ ಶಿವನಿಗೆ ನಿಜವಾಗಿಯೂ ಆ ಕ್ಷಣ ಮೂರನೇ ಕಣ್ಣು ಇದ್ದಿದ್ದರೆ ಅಲ್ಲಿ ಇದ್ದವರೆಲ್ಲರೂ ಭಸ್ಮವಾಗಿಬಿಡುತ್ತಿದ್ದರೇನೋ ! ಅಂತಹ ಸಿಟ್ಟಿನಿಂದ ತಿರುಗಿ ನೋಡಿದ್ದೇ ತಡ, ಅಲ್ಲೆಲ್ಲೋ ಇದ್ದ ನರಸಿಂಹ ಭಟ್ ಓಡಿ ಬಂದು ಚೆಂಡೆಗೆ ನಿಂತರು ! ಮತ್ತೆ ಪುನಃ ಸಸೂತ್ರವಾಗಿ ಸಾಗತೊಡಗಿತು.

ಇನ್ನು, ಶಾಸ್ತ್ರಿಗಳಿಗೆ ಈಶ್ವರನಷ್ಟೇ ಪ್ರಸಿದ್ಧಿಯನ್ನು ತಂದುಕೊಟ್ಟ ಇನ್ನೊಂದು ಪಾತ್ರವೆಂದರೆ ಅದು ಭಸ್ಮಾಸುರ ಮೋಹಿನಿಯ ಭಸ್ಮಾಸುರ. ಶಿವನಿಂದ ಅನಲ ಹಸ್ತವನ್ನು ಪಡಕೊಂಡು ಅನಿಲ ವೇಗದಲ್ಲಿ ಸಾಗಿ ಕಂಡ ಕಂಡವರ ಶಿರದ ಮೇಲೆ ತನ್ನ ಕರವಿಡುತ್ತಾ ಸಾಗುತ್ತಿರುವಾಗ ಮೋಹಿನಿ ಕಾಣಿಸುತ್ತಾಳೆ ನೋಡಿ. ಆಗಿನ ಶಾಸ್ತ್ರಿಗಳ ಅಭಿನಯವನ್ನು ಸತ್ತರೂ ಮರೆಯುವಂತಿಲ್ಲ ಅನ್ನುತ್ತಾರೆ ಆ ದೃಶ್ಯವನ್ನು ಕಂಡವರು. ಒಮ್ಮೆ ಭಸ್ಮಾಸುರ ತನ್ನ ಕೈಯನ್ನು ತನ್ನ ತಲೆಯ ಮೇಲೆಯೇ ಇಟ್ಟುಕೊಂಡು ಸತ್ತಾಯಿತೋ ಅಷ್ಟು ಹೊತ್ತು ಆ ಪರಿ ಕುಣಿಯುತ್ತಿದ್ದಾಗಲೂ ಕಾಣಿಸಿಕೊಳ್ಳದ ಸುಸ್ತು ಶಾಸ್ತ್ರಿಗಳಿಗೆ ಕಾಣಿಸಿಕೊಳ್ಳುತ್ತಿತ್ತು. ಆಮೇಲೆ ಅವರು ಚೌಕಿಗೆ ಹಿಂತಿರುಗುತ್ತಿರಲಿಲ್ಲ. ಬದಲಿಗೆ ರಂಗಸ್ಥಳದಿಂದ ಹಿಂದೆ ಹಿಂದೆ ಸರಿಯುತ್ತಾ ಚೌಕಿಗಿಳಿಯುವ ಮೆಟ್ಟಿಲ ಬಳಿ ಬಂದು ದೊಪ್ಪನೆ ಬಿದ್ದುಬಿಡುತ್ತಿದ್ದರು. ಆಗ ಅಲ್ಲಿ ಅವರನ್ನು ಹಿಡಿದುಕೊಳ್ಳಲು ನಾಲ್ಕೈದು ಜನ ಸಿದ್ಧರಾಗಿ ನಿಂತಿರುತ್ತಿದ್ದರು! ಆಮೇಲೆ ಶಾಸ್ತ್ರಿಗಳನ್ನು ಹೊತ್ತುಕೊಂಡು ಹೋಗಿ ವೇಷವನ್ನು ಕಳಚಿ ಮಲಗಿಸುವವರೆಗಿನ ಜವಾಬ್ದಾರಿ ಆ ನಾಲ್ಕೈದು ಜನರದ್ದು !

ಹುಂ, ಶಾಸ್ತ್ರಿಗಳ ಕಥೆ ಹೇಳಿದಷ್ಟೂ ಮುಗಿಯುವುದಿಲ್ಲ !

ರಷ್ಯಾ ಅಧ್ಯಕ್ಷನ ಮುಂದೆ ಕುಣಿದವರು ನಮ್ಮ ವಿಠಲ ಶಾಸ್ತ್ರಿಗಳು!
‘ಕುರಿಯ ವಿಠಲ ಶಾಸ್ತ್ರಿ’ – ತೆಂಕುತಿಟ್ಟಿನ ಯಕ್ಷಲೋಕದ ಗತ‌ಇತಿಹಾಸ ಗೊತ್ತಿರುವ  ಅಷ್ಟೂ ಮಂದಿಗೆ ಈ ಹೆಸರು ಕೇಳಿದಾಗ ರೋಮಾಂಚನವಾಗದಿರದು. ಸಹಸ್ರ ಸಹಸ್ರ ಯಕ್ಷಕಲಾಭಿಮಾನಿಗಳ ಪಾಲಿಗೆ  ಅದ್ಭುತ, ಅನನ್ಯ, ಅಬ್ಬರದ ಅಮೋಘ ರಸರಾತ್ರಿಗಳನ್ನು ಉಣಿಸಿದ ಮಹಾನ್ ಕಲಾವಿದ ಅವರು. ವೈಭವೋಪೇತವಾದ  ನಡುರಾತ್ರಿಗಳಿಗೆ ಕಾರಣೀಭೂತನಾದ ದೈತ್ಯ ಪ್ರತಿಭೆ! ‘ವೇಷ ಅಂದರೆ ಇದು’ ಅಂತ ಮಹಾಮಹಾ  ಯಕ್ಷವಿಮರ್ಶಕರಿಂದ ಹೇಳಿಸಿಕೊಂಡ ವಿಶಿಷ್ಟ ವ್ಯಕ್ತಿ. ಇವರು ಹುಟ್ಟಿದ್ದೇ ಯಕ್ಷಗಾನಕ್ಕಾಗಿ  ಅನ್ನುವಂತೆ ರಂಗಸ್ಥಳದಲ್ಲಿ ಮಿಂಚಿದವರು. ಈ ತಲೆಮಾರಿನ ಮಂದಿಗೆ ತಮ್ಮನ್ನು ನೋಡುವ, ಅನುಭವಿಸುವ  ಅವಕಾಶ ನೀಡದೆ ದಶಕಗಳ ಹಿಂದೆಯೇ ಮರೆಯಾದವರು!

ಶಾಸ್ತ್ರಿಗಳನ್ನು ರಂಗಸ್ಥಳದಲ್ಲಿ ನೋಡಿದವರಲ್ಲಿ ಶಾಸ್ತ್ರಿಗಳ ಬಗೆಗೆ ಕೇಳಬೇಕು.  ಎಲ್ಲಿಂದ ಶುರುಮಾಡುವುದು ಅಂತಲೇ ಶುರುವಿಟ್ಟುಕೊಳ್ಳುತ್ತಾರೆ. ಯಾಕೆಂದರೆ ಶಾಸ್ತ್ರಿಗಳದು  ವರ್ಣಿಸಲಾಗದ, ಕೇವಲ ಅನುಭವಕ್ಕೆ ಮಾತ್ರ ನಿಲುಕುವ ಕಲೆ. ಹೋಲಿಸೋಣವೆಂದರೆ ಇನ್ನೊಬ್ಬರಿಲ್ಲ!  ವ್ಯಕ್ತಿಯಾಗಿ ಕುಳ್ಳರಾದರೂ ಕಲಾವಿದರಾಗಿ ಬಹಳ ಎತ್ತರಕ್ಕೇರಿದವರು!

ವಿಠಲ ಶಾಸ್ತ್ರಿಗಳಿಗೆ ಭಾರೀ ಹೆಸರು ತಂದುಕೊಟ್ಟ ಪಾತ್ರಗಳೆಂದರೆ ದಕ್ಷಯಜ್ಞದ ಈಶ್ವರ,  ಭಸ್ಮಾಸುರ ಮೋಹಿನಿಯ ಭಸ್ಮಾಸುರ, ಅಭಿಮನ್ಯು ಕಾಳಗದ ದ್ರೋಣ ಇತ್ಯಾದಿ. ದಕ್ಷನ ಆಸ್ಥಾನದಲ್ಲಿ ತನ್ನ  ಮಡದಿ ದಾಕ್ಷಾಯಿಣಿ ಮಡಿದಳೆಂಬ ಸುದ್ದಿಕೇಳಿ ಶಾಸ್ತ್ರಿಗಳು ರುದ್ರಭೀಕರನಾದಾಗ ಪ್ರೇಕ್ಷಕರ  ಸಾಲಿನಲ್ಲಿ ಮುಂದೆ ಕುಳಿತ ಮಕ್ಕಳು ಹೆದರಿ ಅಳುತ್ತಿದ್ದರೆಂದರೆ ಅದೆಂಥ ಅಭಿನಯವಿರಬೇಕು! ಈಗ ನಾವು  ಬಹಳ ಹೊಗಳುವ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಶಾಸ್ತ್ರಿಗಳ ಈಶ್ವರನಿಗೆ ಇನ್ನೊಂದಿಲ್ಲ.  ‘ಕೆಂಡವೆ ಆಗಲಿ ಲೋಕ’ ಅನ್ನುವ ಹಾಡಿಗೆ ಅವರು ಕುಣಿಯುತ್ತಿದ್ದರೆ ನಿಜಕ್ಕೂ ಅದು ಕೆಂಡವೇ! ಅಂತ  ಹೇಳಬೇಕಾದರೆ ಅದೆಂಥ ಮುಖಭಾವವಿರಬೇಡ!

ನಿಮಗೆ ಬಣ್ಣದ ಮಹಾಲಿಂಗ ಎಂದೇ ಖ್ಯಾತರಾದ ಕಲಾವಿದ ಮಹಾಲಿಂಗ ಅವರ ಬಗೆಗೆ  ಗೊತ್ತಿರಬಹುದು. ಆರಡಿ ಎತ್ತರದ ಕಟ್ಟುಮಸ್ತಾದ ಆಳು ಅವರು. ಅಲ್ಲಿ ಈಶ್ವರ ಸಿಟ್ಟಿನಿಂದ ದಕ್ಷನ  ವಧೆಗಾಗಿ ವೀರಭದ್ರನನ್ನು ಸೃಷ್ಟಿಸುತ್ತಾನಲ್ಲ, ಹಾಗೆ ಶಾಸ್ತ್ರಿಗಳ ಈಶ್ವರ ಸೃಷ್ಟಿಸುವ  ವೀರಭದ್ರನಾಗಿ ಕಾಣಿಸಿಕೊಳ್ಳುತ್ತಿದ್ದ ವ್ಯಕ್ತಿ ಇದೇ ಮಹಾಲಿಂಗ. ಹಾಗೆ ಸೃಷ್ಟಿಸಿದ ತಕ್ಷಣ  ‘ಬಾರೆನ್ನ ಮಗನೆ ನೀ ಬಾರೆನ್ನ ಮರಿಯಾನೆ’ ಅಂತ ಒಂದು ಹಾಡಿದೆ. ಆ ಹಾಡಿಗೆ ಕುಳ್ಳ ಶಾಸ್ತ್ರಿಗಳು  ಅಷ್ಟೆತ್ತರದ ಮಹಾಲಿಂಗ ಅವರನ್ನು ಸೊಂಟದಲ್ಲಿ ಕೂರಿಸಿಕೊಂಡು ರಂಗಸ್ಥಳಕ್ಕೆ ಸುತ್ತು  ಬರುತ್ತಿದ್ದರಂತೆ!! ಒಮ್ಮೆ ರಂಗಸ್ಥಳಕ್ಕೆ ಬಂದರೆ ಭಾರ, ನೋವು, ಯಾತನೆ, ವೇದನೆಗಳಾವುವೂ  ಶಾಸ್ತ್ರಿಗಳ ಬಳಿ ಸುಳಿಯುತ್ತಿರಲಿಲ್ಲವಂತೆ.

ಹಾಗೆಯೇ ವಿಶ್ವಾಮಿತ್ರ ಮೇನಕೆ ಪ್ರಸಂಗದಲ್ಲಿ ಅವರದು ವಿಶ್ವಾಮಿತ್ರ. ಮನ್ಮಥ ಐದು  ಪುಷ್ಪಸರಗಳನ್ನೆಸೆಯುವ ದೃಶ್ಯದಲ್ಲಿ ಧ್ಯಾನಸ್ಥನಾಗಿರುವ ವಿಶ್ವಾಮಿತ್ರ (ವಿಠಲ ಶಾಸ್ತ್ರಿಗಳು) ಆ  ವಿಶಿಷ್ಟ ಯಾತನೆಯನ್ನು ಅನುಭವಿಸುವ ಅವಸ್ಥೆಯನ್ನು ಶಾಸ್ತ್ರಿಗಳು ಭಲೇ ಸೊಗಸಾಗಿ  ಸಂವಹನಗೊಳಿಸುತ್ತಿದ್ದರು. ಮನ್ಮಥ ಮೊದಲ ಬಾಣ ಎಸೆದಾಗ ಕುಳಿತಿದ್ದಲ್ಲೇ ತನ್ನ ಎಡಸ್ತನವೊಂದನ್ನು  ಮಾತ್ರ ಒಮ್ಮೆ ಅಲುಗಾಡಿಸುತ್ತಿದ್ದರು. ಎರಡನೆಯ ಬಾಣ ಬಿಟ್ಟಾಗ ಕೇವಲ ಬಲಸ್ತನವನ್ನಷ್ಟೇ  ಕುಲುಕಿಸುತ್ತಿದ್ದರು. ಮೂರನೆಯದಕ್ಕೆ ಎಡಹುಬ್ಬು ಮಾತ್ರ ತುಸು ಚಲಿಸುತ್ತಿತ್ತು. ನಾಲ್ಕನೆಯದಕ್ಕೆ  ಬಲಹುಬ್ಬು! ಐದನೆಯದು ಪ್ರಯೋಗವಾಯಿತೋ ಶಾಸ್ತ್ರಿಗಳು ಕಣ್ಣು ತೆರೆಯುತ್ತಾರೆ ಮತ್ತು ಎದುರು ಕುಳಿತ  ಮಕ್ಕಳು ಹಿಂದೆ ಓಡುತ್ತಾರೆ!! ಹೀಗಂತ ಆ ವೈಭವವನ್ನು ಕಣ್ಣಿನಲ್ಲಿ ಕಟ್ಟಿಕೊಂಡ ಭಾಗ್ಯಶಾಲಿಗಳು  ವಿವರಿಸುತ್ತಾರೆ.

ಹಾಂ, ಶಾಸ್ತ್ರಿಗಳು ಕಡಿಮೆ ಆಸಾಮಿಗಳೇನಲ್ಲ. ಅರವತ್ತರ ದಶಕದಲ್ಲಿ ರಷ್ಯಾ ಅಧ್ಯಕ್ಷ  ಕೃಶ್ಚೇವ್ ಭಾರತಕ್ಕೆ ಬಂದಾಗ, ಆತ ಮತ್ತು ಅಂದಿನ ಪ್ರಧಾನಿ ನೆಹರೂ ಅಲ್ಲದೆ ಇತರ ರಾಜಕಾರಣಿಗಳ  ಸಮ್ಮುಖದಲ್ಲಿ, ಸಂಸತ್ತಿನಲ್ಲಿ ತಮ್ಮ ತಂಡದೊಂದಿಗೆ ಕುಣಿದು ಸೈ ಸೈ ಎನಿಸಿಕೊಂಡವರು! ತನ್ಮೂಲಕ  ತೆಂಕುತಿಟ್ಟಿನ ರಂಗವೈಭವವನ್ನು ರಾಜಧಾನಿಯಲ್ಲೂ ಸಾಕ್ಷಾತ್ಕರಿಸಿದವರು. ತೆಂಕುತಿಟ್ಟೇನು, ಇಡೀ  ಯಕ್ಷಲೋಕಕ್ಕೇ ತಿಲಕಪ್ರಾಯರಾದವರು.

ಈಗ ಹೇಳಿ ವಿಠಲ ಶಾಸ್ತ್ರಿಗಳು ಅಂದ್ರೆ ಸುಮ್ನೇನಾ?

ಎಚ್ಚರ ತಪ್ಪಿದರೆ ರಾವಣನೂ ಹಾಸ್ಯಗಾರನಾಗುತ್ತಾನೆ!
ಯಕ್ಷಗಾನ ಕರಾವಳಿಯ ಜನರ ಮುಖ್ಯ ಮನರಂಜನೆಗಳಲ್ಲೊಂದು. ಈಗೀಗ ಬಹುಮಾಧ್ಯಮಗಳ ಎಡೆಬಿಡದ  ದಾಳಿಗಳಿಂದ ಯಕ್ಷಗಾನ ಸೊರಗುತ್ತಿರುವಂತೆ ಕಂಡರೂ ಅದರ ರುಚಿ ಇನ್ನೂ ಬತ್ತಿಹೋಗಿಲ್ಲ. ಈಗಲೂ  ಯಕ್ಷಗಾನ ಈ ಹಿಂದಿನಷ್ಟೇ ಚಾಲ್ತಿಯಲ್ಲಿದೆ. ಆದರೆ ಒಂದೇ ಒಂದು ಬೇಸರವೆಂದರೆ ಈಗ ಹಿಂದಿನಂತೆ  ತಂಡೋಪಾದಿಯಲ್ಲಿ ಹೊಸ ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಿಲ್ಲ ಅನ್ನುವುದು.

ಒಂದೆರಡು ದಶಕಗಳ ಹಿಂದಕ್ಕೆ ಪ್ರಯಾಣಿಸಿ ಸುತ್ತ ಒಮ್ಮೆ ಕಣ್ಣು ಹಾಯಿಸಿದರೆ ಕರಾವಳಿಯ  ಮನೆ ಮನೆಗಳಲ್ಲೂ ನೂತನ ಯಕ್ಷಗಾನ ಕಲಾವಿದನೊಬ್ಬನನ್ನು ಕಾಣಬಹುದಿತ್ತು. ಪೂರ್ಣ ಪ್ರಮಾಣದಲ್ಲಿ  ಅಲ್ಲದೇ ಹೋದರೂ ಹವ್ಯಾಸಿಯಾಗಿ ರಂಗಕ್ಕೆ ಬರುವವರು ಅನೇಕರಿದ್ದರು. ಆದರೆ ಈಗ ಹಾಗಿಲ್ಲ. ಪ್ರತೀ ಮನೆ  ಬಿಡಿ, ಹತ್ತು ಮನೆಗೊಂದರಂತೆಯೂ ಕಲಾವಿದ ಕಾಣಿಸುತ್ತಿಲ್ಲ. ಇದೇ ತುಸು ವೇದನೆ ತರಿಸುವ ಸಂಗತಿ.

ಹಾಂ, ಹವ್ಯಾಸಿ ಕಲಾವಿದರು ಅನ್ನುವಾಗ ನೆನಪಾಯಿತು ನೋಡಿ. ಮೊದಲೆಲ್ಲಾ ಈ ಹವ್ಯಾಸಿ  ಕಲಾವಿದರು ಆಗಾಗ ಅಲ್ಲಿಲ್ಲಿ ಸೇರಿ ತಾಳಮದ್ದಳೆ, ಯಕ್ಷಗಾನಗಳನ್ನು ಸ್ವಂತ ಆಸಕ್ತಿಯಿಂದ  ನಡೆಸುತ್ತಿದ್ದರು. ಒಂದೆಡೆ ಮೇಳಗಳ ಅಬ್ಬರವಾದರೆ ಇನ್ನೊಂದೆಡೆ ಈ ಹವ್ಯಾಸಿಗಳ ಪ್ರವೇಶ. ಈ  ಹವ್ಯಾಸಿಗಳಿಗೆ ಯಕ್ಷಗಾನವೇ ಉದ್ಯೋಗ ಅಲ್ಲದೇ ಇದ್ದುದರಿಂದ ಕೆಲವೊಮ್ಮೆ ರಂಗದ ಮೇಲೆ ಬಂದಾಗ  ಪಾತ್ರಗಳ ಹೆಸರು, ರಾಜ್ಯದ ಹೆಸರು ತಪ್ಪಾಗುವುದು ಸಹಜ. ಅಂಥಾದ್ದೊಂದು ಉದಾಹರಣೆ ಇಲ್ಲಿದೆ.

ದಕ್ಷಿಣ ಕನ್ನಡದ ಮಿತ್ತನಡ್ಕ ಎಂಬಲ್ಲಿ ಒಬ್ಬರು ಹವ್ಯಾಸಿ ಕಲಾವಿದರಿದ್ದರು. ಆಗೀಗ  ರಂಗಸ್ಥಳದಲ್ಲಿ ಕಾಣಿಸಿಕೊಳ್ಳುವ ಉಮೇದಿ ಅವರಲ್ಲಿತ್ತು. ಅದರಲ್ಲೂ ಹೆಚ್ಚಾಗಿ ತಾಳಮದ್ದಳೆಗಳಲ್ಲಿ  ಅರ್ಥಧಾರಿಯಾಗಿ ಅವರು ಭಾಗವಹಿಸುತ್ತಿದ್ದರು. ಒಮ್ಮೆ ಮಿತ್ತನಡ್ಕದಲ್ಲೇ ತಾಳಮದ್ದಳೆ  ಏರ್ಪಾಡಾಗಿತ್ತು. ಲಂಕಾದಹನ ಪ್ರಸಂಗ. ಇವರು ರಾವಣ.

ಸರಿ, ತಾಳಮದ್ದಳೆ ಶುರುವಾಯಿತು. ರಾವಣನ ಪ್ರವೇಶವೂ ಆಯಿತು. ಭಾಗವತಿಕೆ ಮುಗಿದು  ಇನ್ನು ರಾವಣ ಪೀಠಿಕೆ ಶುರು ಮಾಡಬೇಕು. ಇವರು ಆರಂಭಿಸಿದರು. ಬಲ್ಲಿರೇನಯ್ಯ? ಹಸ್ತಿನಾವತಿಗೆ  ಯಾರೆಂದುಕೊಂಡಿರಿ?

ಆಗ ಚೆಂಡೆ ಬಾರಿಸಲು ನಿಂತಿದ್ದವರು ಈ ಮೊದಲೊಮ್ಮೆ ಇದೇ ‘ರಂಗಸ್ಥಳ’ದಲ್ಲಿ ಮಿಂಚಿ ಹೋದ  ನೆಡ್ಲೆ ನರಸಿಂಹ ಭಟ್ಟರು. ಅವರು ಕೂಡಲೇ ರಾವಣನಿಗೆ ಚೆಂಡೆಯ ಕೋಲಿನಿಂದ ಹಿಂದಿನಿಂತ ಕುಟ್ಟಿ  ‘ಹಸ್ತಿನಾವತಿ ಅಲ್ಲ, ಲಂಕೆ, ಲಂಕೆ’ ಅಂತ ಎಚ್ಚರಿಸಿದರು.

ಅಂಥಾ ಪ್ರಚಂಡ ರಾವಣನಿಗೆ ತನ್ನ ರಾಜ್ಯದ ಹೆಸರೇ ಗೊತ್ತಿಲ್ಲವೆಂದರೆ ಅದೆಂಥಾ ನಾಚಿಕೆ?  ಒಂದೊಮ್ಮೆ ಅವರು ಇನ್ಯಾವುದೋ ರಾಜ್ಯದ ಹೆಸರು ಹೇಳಿದ್ದರೂ ಸಹಿಸಿಕೊಳ್ಳಬಹುದಿತ್ತು. ಆದರೆ  ಹಸ್ತಿನಾವತಿ ಅಂದರೆ ಹೇಗೆ? ಯಾಕೆಂದರೆ ಹಸ್ತಿನಾವತಿ ಬರುವುದು ಮಹಾಭಾರತದಲ್ಲಿ, ಈಗಿನ್ನೂ ರಾಮಾಯಣ  ನಡೆಯುತ್ತಿದೆಯಷ್ಟೇ! ಛೆ, ಛೆ ಅಬದ್ಧ ಅಬದ್ಧ!!

ರಾವಣನ ಪಾತ್ರಧಾರಿಗೆ ತಾನೆಸಗಿದ ತಪ್ಪಿನ ಅರಿವಾಯಿತು. ಕೂಡಲೇ ತಿದ್ದಿಕೊಳ್ಳಬೇಕೆಂಬ  ಭರದಲ್ಲಿ ‘ಅಂದಹಾಗೆ ತಪ್ಪಿತು ತಪ್ಪಿತು, ನಮ್ಮದ್ದು ಹಸ್ತಿನಾವತಿಯಲ್ಲ, ಲಂಕೆ ಆಯ್ತಾ?’  ಎಂದೇಬಿಟ್ಟರು! ಈ ಮೊದಲು ‘ಹಸ್ತಿನಾವತಿಗೆ ಯಾರೆಂದುಕೊಂಡಿರಿ?’ ಅಂದಿದ್ದಾಗ ಹೆಚ್ಚಿನವರಿಗೆ ಅದು  ಗೊತ್ತಾಗಿರಲಿಲ್ಲ. ಗೊತ್ತಾದ ಕೆಲವರು ಮಾತ್ರ ಮುಸಿ ಮುಸಿ ನಕ್ಕಿದ್ದರು. ಈಗ ಹಾಗಲ್ಲ, ಎಲ್ಲರಿಗೂ  ಗೊತ್ತಾಯಿತು. ಸೇರಿದ ಅಷ್ಟೂ ಮಂದಿ ಬಿದ್ದು ಬಿದ್ದು ನಕ್ಕರು. ಆ ಗಳಿಗೆಯಲ್ಲಿ ರಾವಣನಂಥ ದಶಕಂಠನೇ  ಸಭಿಕರ ಮುಂದೆ ಹಾಸ್ಯಗಾರನಾಗಿಬಿಟ್ಟಿದ್ದ. ಹಾಗಾಗಿ ರಂಗದ ಮೇಲೆ ಬರುವಾಗ ಬಹಳ ಜಾಗ್ರತೆಯಿರಬೇಕು.

ಹಾಗಂತ ಎಲ್ಲಾ ಹವ್ಯಾಸಿಗಳೂ ಹೀಗೆ ಅಂತಲ್ಲ. ಬಹಳಷ್ಟು ಹವ್ಯಾಸಿಗಳು ಮೇಳದ  ಕಲಾವಿದರಿಗಿಂತಲೂ ಹೆಚ್ಚಿನ ಪ್ರಬುದ್ಧತೆಯನ್ನು ಹೊಂದಿದವರಿದ್ದರು ಮತ್ತು ಇದ್ದಾರೆ. ಆದರೂ  ಅಲ್ಲೊಮ್ಮೆ ಇಲ್ಲೊಮ್ಮೆ ಹೀಗೂ ಆಗುತ್ತದೆ!

ಚಿಟ್ಟಾಣಿ ಅಭಿನಯ ನೋಡಿ ಅದ್ಭುತ ಎಂದಿದ್ದರು ಡಾ.ರಾಜ್ !
ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಗಾಧವಾದದ್ದನ್ನು ಸಾಧಿಸಿದವನು ತನ್ನ ಬಾಲ್ಯದಲ್ಲೇ ಆ ಕುರಿತಾದ ಕುರುಹುಗಳನ್ನು  ನೀಡಿರುತ್ತಾನೆ. ಬೇರೆ ಮಕ್ಕಳಿಗೆ ಕ್ರಿಕೆಟ್  ಎಂದರೇನೆಂದೇ ಅರ್ಥವಾಗದ ತೀರಾ ಎಳೆ ವಯಸ್ಸಿನಲ್ಲಿ  ಸಚಿನ್ ತೆಂಡೂಲ್ಕರ್ ಬ್ಯಾಟ್ ಹಿಡಿದು ನಿಂತಿರುವ ಫೋಟೋವನ್ನು ನೀವು ಪತ್ರಿಕೆಗಳಲ್ಲಿ ನೋಡಿರಬಹುದು. ಪ್ರಾಯಶಃ ಭವಿಷ್ಯದ ಇತಿಹಾಸಕ್ಕೆ ಅದು ಮುನ್ನುಡಿಯಿರಬೇಕು! ಕಳೆದ ಬಾರಿ ಇದೇ ‘ರಂಗಸ್ಥಳ’ದಲ್ಲಿ ಕಾಣಿಸಿಕೊಂಡ ಚಿಟ್ಟಾಣಿ ರಾಮಚಂದ್ರ ಹೆಗಡೆಯೂ ಹಾಗೆಯೇ, ತಾನು ಒಂದನೇ ತರಗತಿಗೆ ಹೋಗುತ್ತಿದ್ದಾಗಲೇ ಯಕ್ಷಗಾನದ ಕುರಿತಾಗಿ ಕುತೂಹಲ ಇಟ್ಟುಕೊಂಡವರು! ಮಾತ್ರವಲ್ಲ, ಮನೆಯಲ್ಲಿ ಶಾಲೆಗೆಂದು ಕಳುಹಿಸಿದರೆ ಗುಡ್ಡದಲ್ಲಿ ಯಕ್ಷಗಾನ ಕುಣಿಯುತ್ತಾ ಕಾಲ ಕಳೆಯುತ್ತಿದ್ದವರು!!

ಹಾಗೆ ಮೊದಮೊದಲು ಗುಡ್ಡದಲ್ಲೇ ಯಕ್ಷಾಭ್ಯಾಸ ಮಾಡಿದ ಚಿಟ್ಟಾಣಿ ಮತ್ತೆ ಬೆಳೆದದ್ದೇ ಹೊರತು ಇಳಿದದ್ದಿಲ್ಲ. ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ ಕುಮಾರ್ ಚಿಟ್ಟಾಣಿಯವರ ಕೆಲವು ಪಾತ್ರಗಳನ್ನು ನೋಡಿ  ಚಿಟ್ಟಾಣಿ ಒಬ್ಬ ಅದ್ಭುತ ಕಲಾವಿದ. ನಾನು ಇವರ ವೇಷಗಳನ್ನು ಮೊದಲೇ ನೋಡಿದ್ದಿದ್ದರೆ ನನ್ನ ‘ಬಬ್ರುವಾಹನ’ ಸಿನಿಮಾದ ಅರ್ಜುನ ಹಾಗೂ ಬಬ್ರುವಾಹನ ಪಾತ್ರಗಳನ್ನು ಇನ್ನೂ ಚೆನ್ನಾಗಿ ಅಭಿನಯಿಸುತ್ತಿದ್ದೆ ಎಂದು ಉಸುರಿದ್ದು ಚಿಟ್ಟಾಣಿಯವರ ಕಲಾ ಸಾಮರ್ಥ್ಯಕ್ಕೆ ಸಿಕ್ಕ ಮಹತ್ತರವಾದ ಪ್ರಮಾಣಪತ್ರ!

ಯಕ್ಷಗಾನದ  ಗಂಧಗಾಳಿಯಿಲ್ಲದ ಮುಂಬಯಿಯಂಥ ಪ್ರದೇಶದಲ್ಲೂ ಗೆಜ್ಜೆಕಟ್ಟಿ ಜನಮನ ಸೆಳೆದವರು ಚಿಟ್ಟಾಣಿ. ಯಕ್ಷರಂಗದ ಅಪೂರ್ವ ಜೋಡಿಯಾಗಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಭಾಗವತ ದಿ.ಗುಂಡ್ಮಿ ಕಾಳಿಂಗ ನಾವಡರ ತಂಡ ಮುಂಬಯಿಯಲ್ಲಿ ‘ಭಸ್ಮಾಸುರ ಮೋಹಿನಿ’ ಪ್ರಸಂಗವನ್ನು ಸುಮಾರು ನಲವತ್ತಕ್ಕೂ ಅಧಿಕ ಭಾರಿ ಆಡಿತೋರಿಸಿತ್ತೆಂದರೆ ಈರ್ವರ ಚಮತ್ಕಾರ ಎಂಥದ್ದಿರಬೇಡ?

ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಗೆಗೆ ಹೇಳುವಾಗ  ಅವರ ವಿನಯದ ಬಗೆಗೆ ಹೇಳದಿದ್ದರೆ ಅದು ಅಪರಾಧವೇ. ತಾನೊಬ್ಬ ಮಹಾನ್ ಕಲಾವಿದನಾಗಿದ್ದರೂ ಆ ಹಮ್ಮಿಲ್ಲದೆ ತನಗಿಂತ ಎಷ್ಟೋ ಕಿರಿಯರೊಂದಿಗೂ  ಸಹಜವಾಗಿ ಬೆರೆಯುವುದು ಅವರ ದೊಡ್ಡತನ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಅದು ಅವರ ತಾಳ್ಮೆ. ತನ್ನನ್ನು ಯಾರೇ ಟೀಕಿಸಲಿ ಅವರು ಸಿಟ್ಟಿಗೇಳುವುದಿಲ್ಲ, ತಿರುಗಿ ಬಯ್ಯುವುದಿಲ್ಲ. ಬದಲಾಗಿ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ. ಇದು ಚಿಟ್ಟಾಣಿಯಂಥ ಮಾಗಿದ ಕಲಾವಿದನಿಗಷ್ಟೇ ಸಾಧ್ಯ.

ಇಂಥ ಚಿಟ್ಟಾಣಿಗೆ ಈಗ ಎಪ್ಪತ್ತಾರು ವರ್ಷ ವಯಸ್ಸು. ಆದರೆ ಉತ್ಸಾಹ ಕುಂದಿಲ್ಲ. ದೇಹ ಸಹಕರಿಸದಿದ್ದರೂ  ಮನಸ್ಸು ಕೇಳುತ್ತಿಲ್ಲ. ಆದ್ದರಿಂದಲೇ ಈಗಲೂ ಅವರು ಬಣ್ಣ ಹಚ್ಚಿ ಗೆಜ್ಜೆ ಕಟ್ಟುತ್ತಿದ್ದಾರೆ. ‘ಸಾಕಪ್ಪ ಇನ್ಯಾಕೆ?’ ಎಂದು ರಂಗದಿಂದ ವಿರಮಿಸಿದ್ದಿದ್ದರೆ ಈಗಿನ ತಲೆಮಾರಿನ ಅನೇಕರು ಚಿಟ್ಟಾಣಿಯವರ ಹಾವಭಾವ, ಮಾತು-ಮೌನಗಳನ್ನು ಬರೀ ಸಿ.ಡಿ.ಯಲ್ಲಷ್ಟೇ ನೋಡಬಹುದಿತ್ತು. ಅಷ್ಟರಮಟ್ಟಿಗೆ ನಾವು ಪುಣ್ಯಮಾಡಿದ್ದೇವೆ.

ಅಪ್ಪನಿಗೆ ಈಗಲೂ ಹಿಂದಿನ ಉತ್ಸಾಹವೇ ಇದೆ. ಆದರೆ ನಾನೇ ಈಗ ಅವರನ್ನು ಪ್ರಸಂಗದ ಅರ್ಧದಷ್ಟು ಹೊತ್ತು ಮಾತ್ರ ಕುಣಿಯುವಂತೆ ನೋಡಿಕೊಳ್ಳುತ್ತಿದ್ದೇನೆ. ಆದ್ದರಿಂದಲೇ ಈಗ ‘ಭಸ್ಮಾಸುರ ಮೋಹಿನಿ’ ಯಲ್ಲಿ ಎರಡನೇ ಭಸ್ಮಾಸುರನಾಗಿ, ‘ಗದಾಯುದ್ಧ’ದ ಎರಡನೇ ಕೌರವನಾಗಿ, ‘ಕಾರ್ತವೀರ್ಯಾರ್ಜುನ’ದ ಮೊದಲನೇ ಕಾರ್ತವೀರ್ಯನಾಗಿ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಬಹುತೇಕ ಎಲ್ಲಾ ಪ್ರಸಂಗಗಳಲ್ಲೂ ಅವರು ಅರ್ಧ ಭಾಗವಷ್ಟೇ ರಂಗದಲ್ಲಿರುತ್ತಾರೆ. ಇದರಿಂದಾಗಿ ಅವರಿಗೆ ಹೆಚ್ಚು ಸುಸ್ತಾಗುವುದಿಲ್ಲ. ಹಾಗಾಗಿ ಇನ್ನೂ ಅನೇಕ ವರ್ಷಗಳ ಕಾಲ ಅವರು ವೇಷ ಹಾಕಬಹುದು ಎಂಬುದು ನನ್ನ ಆಶಯ ಎನ್ನುತ್ತಾರೆ ಮಗ ಸುಬ್ರಹ್ಮಣ್ಯ ಚಿಟ್ಟಾಣಿ.

ಭಸ್ಮಾಸುರನಿಗೊಂದು ರೂಪ ಕೊಟ್ಟವರೇ ಚಿಟ್ಟಾಣಿ!
ರಂಗದಲ್ಲಿ ಇದ್ದಷ್ಟು ಹೊತ್ತೂ ಪ್ರೇಕ್ಷಕರ ಎರಡೂ ಕಣ್ಣುಗಳನ್ನು  ಸೆಳೆಯುವವನೊಬ್ಬನಿದ್ದರೆ ಅದು ಚಿಟ್ಟಾಣಿ ರಾಮಚಂದ್ರ ಹೆಗಡೆ ಮಾತ್ರ ಅಂತ ಹೇಳಿದವರು  ರಾಷ್ಟ್ರಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಕೆರೆಮನೆ ಶಿವರಾಮ ಹೆಗಡೆ. ಅದು ನಿಜ ಅನ್ನುವುದು  ಚಿಟ್ಟಾಣಿಯವರ ಯಕ್ಷಗಾನವನ್ನು ನೋಡಿದ ಯಾರಿಗೇ ಆದರೂ ಅನಿಸಿಬಿಡುತ್ತದೆ. ಚಿಟ್ಟಾಣಿಯವರ ವಯಸ್ಸು  ಎಪ್ಪತ್ತಾರಕ್ಕೆ ಬಂದು ನಿಂತಿದ್ದರೂ ರಂಗದ ಮೇಲೆ ಇನ್ನೂ ಇಪ್ಪತ್ತಾರೇ!

ಪ್ರಾಯಶಃ ಈ ಕುರಿಯ ವಿಠಲ ಶಾಸ್ತ್ರಿ, ಶೇಣಿ, ಕಾಳಿಂಗ ನಾವಡ, ಚಿಟ್ಟಾಣಿ,…  ಇಂತಹವರೆಲ್ಲಾ ಶತಮಾನಕ್ಕೊಬ್ಬರು ಸಿಗುತ್ತಾರೆ. ಅವರಿದ್ದಾಗ ನಾವು ನೋಡಿ-ಕೇಳಿ ಅನುಭವಿಸಿದರೆ ಸರಿ,  ಮತ್ತವರು ಸಿಗುವುದಿಲ್ಲ! ಈ ಹಿನ್ನಲೆಯಲ್ಲಿ ಚಿಟ್ಟಾಣಿ ಇನ್ನೂ ರಂಗದಿಂದ ವಿರಮಿಸದಿರುವುದು ನಮ್ಮ  ಪುಣ್ಯ! ಅವರೇ ಹೇಳುವ ಪ್ರಕಾರ ಅವರಿನ್ನೂ ಐದಾರು ವರ್ಷ ಕುಣಿದಾರು!!

ನಿಮಗೆ ಗೊತ್ತಿರಬಹುದು, ಚಿಟ್ಟಾಣಿಯವರ ಗದಾಯುದ್ಧದ ಕೌರವ, ಭಸ್ಮಾಸುರ ಮೋಹಿನಿಯ  ಭಸ್ಮಾಸುರ, ಚಂದ್ರಹಾಸ ಚರಿತ್ರೆಯ ದುಷ್ಟಬುದ್ಧಿ, ಕೀಚಕ ವಧೆಯ ಕೀಚಕ, ಕಾಳಿದಾಸದ ಕಲಾಧರ,  ಕಾರ್ತವೀರ್ಯಾರ್ಜುನ, ಶೃಂಗಾರ ರಾವಣ… ಇಂಥಾ ಹಲವಾರು ಪಾತ್ರಗಳು ಪ್ರೇಕ್ಷಕನನ್ನು  ಮೈಮರೆಸುತ್ತವೆ. ಅದರಲ್ಲೂ ಭಸ್ಮಾಸುರನಿಗೊಂದು ರೂಪ ಕೊಟ್ಟು ಈ ಪಾತ್ರ ಹೀಗಿರಬೇಕು ಎಂದು  ತೋರಿಸಿಕೊಟ್ಟವರೇ ಚಿಟ್ಟಾಣಿ! ಕೆರೆಮನೆ ಶಂಭು ಹೆಗಡೆ ಚಂದ್ರಹಾಸ ಚರಿತ್ರೆಯ ಮದನನಿಗೆ ಹೇಗೆ ಹೊಸ  ರೂಪ ತಂದು, ತೋರಿಸಿದರೋ ಹಾಗೆ ಭಸ್ಮಾಸುರನಿಗೆ ಚಿಟ್ಟಾಣಿ.

ಚಿಟ್ಟಾಣಿಯವರ ನಾಟ್ಯ, ಹಾವಭಾವ, ನಯನ ಸಂವಹನ ಇವುಗಳೆಲ್ಲಾ ನಿಜಕ್ಕೂ ಅದ್ಭುತ.  ‘ನೀಲಗಗನದೊಳು ಮೇಘಗಳ…’, ‘ಎಲ್ಲೆಲ್ಲು ಸೊಬಗಿದೆ, ಎಲ್ಲೆಲ್ಲು ಸೊಗಸಿದೆ…’, ‘ಕಂಡನು  ಭಸ್ಮಾಸುರನು ಮೋಹಿನಿಯನ್ನು…’, ‘ಭಾವಕಿ ಸೌಂದರ್ಯ ನೋಡೇ…’ ‘ನಿನ್ನಯ ಬಲುಹೇನು…’, ‘ನೋಡಿರಿ  ಧರ್ಮಜ…’ ಇಂತಹ ಅದೆಷ್ಟೋ ಹಾಡುಗಳ ಕುಣಿತ ಅನೇಕರ ಕರವಾಣಿಗಳಲ್ಲಿ ವೀಡಿಯೋಗಳಾಗಿ  ಹರಿದಾಡುತ್ತಿವೆ!

ಚಿಟ್ಟಾಣಿ ರಂಗಕ್ಕೆ ಬಂದರೆ ಸಾಕು ; ಮತ್ತೆ ಕೊನೆವರೆಗೂ ಪ್ರೇಕ್ಷಕನ ಕಣ್ಣುಗಳು ಅವರ  ಮೇಲೆಯೇ. ವಿಶೇಷವೆಂದರೆ ತನ್ನ ಎದುರು ಪಾತ್ರಧಾರಿ ಕುಣಿಯುವಾಗಲೂ ಬದಿಯಲ್ಲಿ ನಿಂತ ಚಿಟ್ಟಾಣಿ ತನ್ನ  ಕಣ್ಣುಗಳ ಚಲನೆಗಳಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಆನೆ ಇದ್ದರೂ ಮರ್ಯಾದೆ ಸತ್ತರೂ  ಮರ್ಯಾದೆ ಅನ್ನುವಂತೆ ಚಿಟ್ಟಾಣಿ ಕುಣಿಯುತ್ತಿದ್ದರೂ ಪ್ರೇಕ್ಷಕ ಮರುಳು, ರಂಗದ ಬದಿಯಲ್ಲಿ  ನಿಂತಿದ್ದರೂ ಪ್ರೇಕ್ಷಕ ಮರುಳು! ಹೀಗೆ ಸುಮ್ಮನೆ ನಿಂತಿದ್ದಾಗಲೂ ಕಲಾಭಿಮಾನಿಗಳನ್ನು ತನ್ನೆಡೆಗೆ  ಸೆಳೆಯುವ ಚಿಟ್ಟಾಣಿ ಇಂದಿಗೂ ಯಕ್ಷರಂಗದ ಅನಭಿಷಿಕ್ತ ದೊರೆಯೇ ಹೌದು.

ಇಂಥಾ ಚಿಟ್ಟಾಣಿ ಕುಡಿತದ ಚಟಕ್ಕೆ ದಾಸರಾಗಿದ್ದರು! ಕುಡಿಯದೆ ರಂಗಕ್ಕೆ  ಬರುತ್ತಿರಲಿಲ್ಲ. ಕೊನೆಕೊನೆಗೆ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿತ್ತೆಂದರೆ ಕುಡಿಯದೆ ವೇಷ  ಮಾಡಲಾಗದು, ಕುಡಿದರೆ ನಡೆಯಲಾಗದು ಅನ್ನುವವರೆಗೂ! ಒಮ್ಮೆ ಶಿಂಗ್ಯಾ ಬಾಳ್ಯಾ ಪ್ರಸಂಗ  ಏರ್ಪಾಡಾಗಿತ್ತು. ಚಿಟ್ಟಾಣಿ ಶಿಂಗ್ಯನ ಪಾತ್ರ ಮಾಡಬೇಕಿತ್ತು. ಆದರೆ ಅವರು ಪೂರ್ತಿ ಟೈಟಾಗಿ  ಮನೆಯಲ್ಲಿದ್ದರು! ವೇಷ ಮಾಡುವುದಿರಲಿ, ಎದ್ದು ನಿಲ್ಲಲೂ ಆಗದ ಪರಿಸ್ಥಿತಿ. ಆದರೆ ಚಿಟ್ಟಾಣಿ  ಬರುತ್ತಾರೆಂದು ಜನ ನೆರೆದಿದ್ದರು. ಕೊನೆಗೆ ಸಂಘಟಕರು ಕಾರನ್ನು ತಂದು ಚಿಟ್ಟಾಣಿಯವರನ್ನು  ಎತ್ತಿಹಾಕಿಕೊಂಡು ಹೋದರು. ಆದರೂ ಅವರಿಗೆ ವೇಷ ಮಾಡಲಾಗಲಿಲ್ಲ. ರಂಗಕ್ಕೆ ಬಂದು ಒಂದೆರಡು ಮಾತಾಡಿ  ಜನರನ್ನು ಸಮಾಧಾನಪಡಿಸಿದರು. ಅವರ ‘ವೇಷ’ವನ್ನೂ, ಅವಸ್ಥೆಯನ್ನೂ ಕಂಡ ಅಭಿಮಾನಿಗಳು ಸುಮ್ಮನಾದರು!

ಈಗ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಚಿಟ್ಟಾಣಿ ತನ್ನ ಗತಕಾಲದ ಕುಡಿತದ  ಬಗೆಗೆ ಹೇಳುವುದು ಹೀಗೆ. ನನ್ನೊಳಗಿನ ಕಲಾವಿದನ ಜೊತೆಗೆ ಒಬ್ಬ ಕುಡುಕನೂ ಬೆಳೆದಿದ್ದ. ಹೆಂಡಕ್ಕೆ  ಒಂದು ಅಭಿಮಾನೀ ದೇವತೆಯಿದ್ದರೆ ಅವಳಿಗೆ ನನ್ನ ದೇಹವೇ ಅರಮನೆಯಾಗಿತ್ತು. ಹೆಂಡವನ್ನು ಬಿಟ್ಟರೆ  ನನ್ನ ಹತ್ತಿರ ವೇಷವೇ ಸಾಧ್ಯವಿಲ್ಲ ಎಂಬ ಮನೋವ್ಯಾಧಿ ನನ್ನನ್ನು ಅಂಟಿಕೊಂಡಿತ್ತು

ಹಾಗಂತ ಒಮ್ಮೆ ವೇಷ ಕಟ್ಟಿ ರಂಗಕ್ಕಿಳಿದರೆ ಚಿಟ್ಟಾಣಿ ಪಾದರಸವೇ. ಒಮ್ಮೆ  ಮುಂಬಯಿಯಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನ ಏರ್ಪಾಡಾಗಿತ್ತು. ಭಸ್ಮಾಸುರ ಮಾಡಬೇಕಿದ್ದ  ಚಿಟ್ಟಾಣಿಗೆ ಕಾಲಿನಲ್ಲಿ ಕುರುವಾಗಿ ಅತ್ತಿತ್ತ ನಡೆಯಲಾಗದ ಸ್ಥಿತಿ. ಹಾಗಂತ ಯಕ್ಷಗಾನ ರದ್ದು  ಮಾಡುವಂತಿರಲಿಲ್ಲ. ರದ್ದು ಮಾಡದಿದ್ದರೆ ಚಿಟ್ಟಾಣಿ ಕುಣಿಯದೆ ಇರುವಂತಿರಲಿಲ್ಲ! ಚಿಟ್ಟಾಣಿ ಹಿಂದು  ಮುಂದು ನೋಡದೆ ವೇಷ ಕಟ್ಟಿದರು. ಕುರುಹರಿದು ರಕ್ತ ದರದರನೆ ಸುರಿಯುತ್ತಿದ್ದರೂ ಭಸ್ಮಾಸುರನ ಅಬ್ಬರ  ನಿಲ್ಲಲಿಲ್ಲ. ಯಕ್ಷಗಾನ ಮುಗಿದ ತಕ್ಷಣ ಚಿಟ್ಟಾಣಿಯವರನ್ನು ಆಸ್ಪತ್ರೆಗೆ ಸೇರಿಸಲಾಯಿತು!

ಕುಡಿಯದೆ ಬದುಕಬಲ್ಲೆ ಆದರೆ ಕುಣಿಯದೆ ಬದುಕಲಾರೆ ಅನ್ನುವ ಚಿಟ್ಟಾಣಿಯವರು ಯಕ್ಷರಂಗದ  ಬಹುದೊಡ್ಡ ಆಸ್ತಿ. ಆದರೆ ಇಂಥಾ ಕಲಾವಿದನಿಗೆ ಇನ್ನೂ ಕೇಂದ್ರ ಯಕ್ಷಗಾನ ಅಕಾಡೆಮಿ ಪ್ರಶಸ್ತಿ  ಬರದಿರುವುದು ಮಾತ್ರ ದುರದೃಷ್ಟಕರ!

ಅಂದಹಾಗೆ ಚಿಟ್ಟಾಣಿ ಇಪ್ಪತ್ತೈದರ ವಯಸ್ಕರಾಗಿದ್ದಾಗ ಹುಡುಗಿಯೊಬ್ಬಳನ್ನು(ಈಗ  ಹುಡುಗಿಯಲ್ಲ!!) ಲವ್ ಮಾಡಿದ್ದರು. ಆ ಕಥೆ ಭಾರೀ ಛಲೋ ಇದೆ. ಚಿಟ್ಟಾಣಿ ಆಕೆಯನ್ನೇ ಮದುವೆಯಾದರಾ?  ಇಲ್ಲವಾ?…

ಹಾಂ, ಗಡಿಬಿಡಿ ಮಾಡಬೇಡಿ. ಅದನ್ನು ಮುಂದಿನ ಸಂಚಿಕೆಯಲ್ಲಿ ಹೇಳುತ್ತೇನೆ.

ಶೇಣಿಯೆಂದರೆ ವಾಲಿಯ ಹಾಗೆ!
ಯಕ್ಷರಂಗದಲ್ಲಿ ಒಂದು ಸಂಚಲನ ಮೂಡಿಸುವ ಹೆಸರೆಂದರೆ ಅದು ಶೇಣಿ ಗೋಪಾಲಕೃಷ್ಣ ಭಟ್. ಶೇಣಿಯವರು ರಂಗದಲ್ಲಿದ್ದ ಕಾಲವನ್ನು ‘ಶೇಣಿ ಯುಗ’ವೆಂದೇ ಕರೆಯುವುದಿದೆ. ಆಗೆಲ್ಲಾ ಜನ ತಾಳಮದ್ದಳೆಗಳಿಗೆ ಹೋಗುತ್ತಿದ್ದುದೇ ಶೇಣಿಯವರ ಅರ್ಥವೈಭವಕ್ಕಾಗಿ. ಅಷ್ಟರಮಟ್ಟಿಗೆ ಶೇಣಿ ಯಕ್ಷರಂಗವನ್ನು ಆವರಿಸಿದ್ದರು. ಕಲಾಸಕ್ತರು ಅವರ ಅರ್ಥ ಕೇಳುವುದಕ್ಕಿಂತ ಹೆಚ್ಚಾಗಿ ಅನುಭವಿಸುತ್ತಿದ್ದರೆಂದರೆ ತಪ್ಪಲ್ಲ.

ಶೇಣಿಯವರ ವಿಶೇಷವೆಂದರೆ ಅವರ ಅರ್ಥಗಳಲ್ಲಿ ಒಂದು ಹೊಸ ನೋಟ ಜನರಿಗೆ ಸಿಗುತ್ತಿತ್ತು. ಒಂದು ಪಾತ್ರಕ್ಕೆ ಅದರಲ್ಲೂ ಮುಖ್ಯವಾಗಿ ಖಳಪಾತ್ರಕ್ಕೆ ಹೀಗೂ ಒಂದು ಆಯಾಮ ಕಲ್ಪಿಸಬಹುದು ಅಥವಾ ಈ ರೀತಿಯೂ ಆ ಪಾತ್ರವನ್ನು ಚಿತ್ರಿಸಬಹುದು ಅಂತ ಹೊಸ ರೀತಿಯಲ್ಲಿ ಆ ಪಾತ್ರವನ್ನು ರಂಗ ಸಾಕ್ಷಾತ್ಕಾರಗೊಳಿಸುತ್ತಿದ್ದರು ಶೇಣಿ. ಅವರಲ್ಲಿ ಅಗಾಧವಾದ ಓದು, ಅನುಭವಗಳೆರಡೂ ಇದ್ದವು. ಅವರು ಯಾವುದೇ ಪಾತ್ರಕ್ಕೆ ಕೂರಲಿ ಅಥವ ಕುಣಿಯಲಿ ಆ ಪಾತ್ರದ ಸಂಪೂರ್ಣ ಕಥೆ ಅವರಿಗೆ ಗೊತ್ತಿರುತ್ತಿತ್ತು. ವಿಶೇಷವೆಂದರೆ ಎದುರು ಪಾತ್ರದ ಸಂಪೂರ್ಣ ವಿಷಯವೂ ಅವರಿಗೆ ಗೊತ್ತಿರುತ್ತಿತ್ತು! ಆದ್ದರಿಂದಲೇ ಶೇಣಿ ಗತಿಸಿದಾಗ ‘ಯಕ್ಷರಂಗ ಬರಡಾಯಿತು’ ಎಂಬ ಉದ್ಘಾರ ಕೇಳಿಬಂದದ್ದು.

ಆ ದಿನಗಳಲ್ಲಿ ಶೇಣಿಯವರನ್ನು ಅರ್ಥಗಾರಿಕೆಯಲ್ಲಿ ಮಣಿಸುವುದು ಆಗದೇ ಇದ್ದ ಮಾತು. ಈಗಾಗಲೇ ಹೇಳಿದಂತೆ ತನ್ನ ಹಾಗೂ ಎದುರು ಪಾತ್ರಗಳೆರಡರ ವಿಚಾರಗಳೂ ಅವರಿಗೆ ಸಂಪೂರ್ಣವಾಗಿ ತಿಳಿದಿರುತ್ತಿದ್ದುದರಿಂದ ಯಾವುದಾದರೂ ಒಂದು ಎಳೆಯ ಮೂಲಕ ಅವರು ಎದುರಾಳಿಯನ್ನು ಕಟ್ಟಿ ಹಾಕುತ್ತಿದ್ದರು. ಆದ್ದರಿಂದಲೇ ಅವರ ಮುಂದೆ ಅರ್ಥಕ್ಕೆ ಕೂರಲು ಅನೇಕ ಮಂದಿ ಹಿಂದೆ ಸರಿಯುತ್ತಿದ್ದುದುಂಟು. ಶೇಣಿಯೆಂದರೆ ವಾಲಿಯ ಹಾಗೆ. ಅವರ ಎದುರು ಕೂತ ತಕ್ಷಣ ಎದುರು ಅರ್ಥಧಾರಿ ತನ್ನ ಅರ್ಧ ಬಲ ಕಳೆದುಕೊಳ್ಳುತ್ತಾನೆ ಅಂತ ಕೆಲವು ಯಕ್ಷಪ್ರೇಮಿಗಳು ತಮಾಷೆಯಾಗಿ ಹೇಳುವುದಿದೆ. ಅದು ವಾಸ್ತವವೂ ಆಗಿತ್ತು.

ಅವರ ಇನ್ನೊಂದು ವಿಶೇಷತೆಯೆಂದರೆ ಖಳ ಪಾತ್ರವನ್ನೂ ಉತ್ತಮ ರೀತಿಯಲ್ಲಿ ಚಿತ್ರಿಸುತ್ತಿದ್ದುದು. ಶೇಣಿಯವರು ರಾವಣನಾಗಿ ಅರ್ಥ ಹೇಳುತ್ತಿದ್ದರೆ ಜನ ‘ಹೌದು, ರಾವಣ ಅಂಥದ್ದೇನು ತಪ್ಪು ಮಾಡಿದ್ದಾನೆ?’ ಅಂತ ಮಾತಾಡಿಕೊಳ್ಳುತ್ತಿದ್ದರು. ಕೌರವ ಮಾಡಿದರೆ ‘ಅವ ಪಾಂಡವರಿಗೆ ರಾಜ್ಯ ಕೊಡದ್ದರಲ್ಲಿ ತಪ್ಪೇನೂ ಇಲ್ಲ ಬಿಡಿ’ ಅಂತನ್ನುತ್ತಿದ್ದರು. ಇದೇ ಶೇಣಿ ರಾಮ ಮಾಡಿದರೆ ರಾವಣ ಅತ್ಯಂತ ಕೆಟ್ಟವ ಅನ್ನುವ ರೀತಿಯಲ್ಲಿ ಹೇಳಿ ಸಾಧಿಸುತ್ತಿದ್ದರು, ಭೀಮನಾಗಿ ಅರ್ಥ ಶುರುವಿಟ್ಟುಕೊಂಡರೆ ದುರ್ಯೋಧನನಷ್ಟು ಕೆಟ್ಟವನೇ ಈ ಜಗತ್ತಿನಲ್ಲಿಲ್ಲ ಅನ್ನುವ ಹಾಗೆ ಮಾಡಿಬಿಡುತ್ತಿದ್ದರು. ಇದು ಶೇಣಿಯವರ ತಾಕತ್ತೇ ಸರಿ. ಈ ಒಂದು ವಿಶಿಷ್ಟ ಕಲೆಯೇ ಅವರ ಹೆಚ್ಚುಗಾರಿಕೆಯಾಗಿತ್ತು.

ಅವರ ಕೃಷ್ಣಸಂಧಾನದ ಕೌರವನ ಅರ್ಥ ಕೇಳಬೇಕು. ಅವರ ವಾದ ಸರಣಿ ಹೇಗಿರುತ್ತಿತ್ತೆಂದರೆ…

ಕೃಷ್ಣಾ ನೀನು ಭಗವಂತ ತಾನೇ?, ಅಣುರೇಣುತೃಣಕಾಷ್ಟಗಳಲ್ಲಿ ನೀನಿದ್ದಿ ಅಲ್ಲವೇ?, ನೀನು ಮನಸು ಮಾಡದೆ ಹುಲ್ಲುಕಡ್ಡಿಯೂ ಅಲುಗಾಡದಷ್ಟೇ? ಇದೆಲ್ಲಾ ಹೌದು ಅಂತಾದರೆ, ನೀನು ಭಗವಂತನೇ ಎಂಬುದು ನಿಜವಾದರೆ ಸಮರಕ್ಕೆ ಸಿದ್ಧವಾಗಿ ಕೂತ ನನ್ನ ಮನಸ್ಸನ್ನು ಸಂಗ್ರಾಮದಿಂದ ಸಂಧಾನದೆಡೆಗೆ ತಿರುಗಿಸು ನೋಡೋಣ? ಶೇಣಿ ಕೌರವ ಈ ರೀತಿ ಹೂಂಕರಿಸುತ್ತಿದ್ದರೆ ಬಡ ಭಗವಂತ ನೀರಾಗುತ್ತಿದ್ದ!

ಗದಾಯುದ್ಧದ ದುರ್ಯೋಧನ ಅವರ ಇಷ್ಟದ ಪಾತ್ರಗಳಲ್ಲೊಂದಾಗಿತ್ತು. ಅಲ್ಲಿಯ ಗಮ್ಮತ್ತು ಕೇಳಬೇಕು. ನೀರಿನಲ್ಲಿ ಮುಳುಗಿರುವ ಕೌರವನನ್ನುದ್ದೇಶಿಸಿ ಭೀಮ ಎಲಾ ಕುರುಕುಲ ಕುನ್ನಿಯೇ…. ಬಾ ಮೇಲೆ ಬಾ, ತಾಕತ್ತಿದ್ದರೆ ಈಗ ದ್ರೌಪದಿಯ ಸೀರೆಗೆ ಕೈ ಹಾಕು…. ಎಂದೆಲ್ಲಾ ಅಬ್ಬರಿಸುತ್ತಾನೆ. ಮೇಲೆ ಬಂದ ನಂತರ ಶೇಣಿ ಹೇಳುವುದು ಭಲೇ ಸೊಗಸು. ಅವರೆನ್ನುತ್ತಾರೆ ದ್ರೌಪದಿಯ ಸೀರೆಗೆ ಕೈ ಹಾಕುವುದಕ್ಕೆ ಅವಳೇನು ಇಲ್ಲಿ ಉಟ್ಟುಕೊಂಡು ಬಂದಿದ್ದಾಳಾ? ಅವಳ ಸೀರೆಗೆ ಈವತ್ತೂ ಕೈಯಿಟ್ಟೇನು, ಯಾವತ್ತೂ ಕೈಯಿಟ್ಟೇನು, ಆವತ್ತು ಇವರಿಂದ ಏನೂ ಮಾಡುವುದಕ್ಕಾಗಿಲ್ಲವಲ್ಲ, ಅಬದ್ಧಂ ಪಟಿತ್ವ ಕುಚೋದ್ಯಂ ಕರೋತಿ

ಹೀಗೆ ತಾನು ಯಾವುದೇ ಪಾತ್ರಕ್ಕೆ ಕೂರಲಿ ಅಲ್ಲೊಂದು ವೈಭವವನ್ನು ಸಾರುತ್ತಿದ್ದ ಶೇಣಿಯವರು ತೆಂಕು, ಬಡಗೆಂಬ ತಿಟ್ಟು ಲೆಕ್ಕಾಚಾರಗಳೆರಡನ್ನೂ ಮೀರಿ ನಿಂತ ಕಲಾವಿದ, ಪ್ರತಿಭಾ ರಾಶಿ. ನಿಜಕ್ಕೂ ಶೇಣಿಯವರ ಅನುಪಸ್ಥಿತಿ ಈಗ ಢಾಳಾಗಿ ಕಾಣಿಸುತ್ತಿದೆ. ಶೇಣಿಯವರನ್ನು ಒಂದಷ್ಟು ಬಾರಿ ಮಾತ್ರ ಕೇಳಿದ ಈಗಿನ ತಲೆಮಾರಿನವರಿಗಂತೂ ಶೇಣಿಯವರನ್ನು ಹೆಚ್ಚಾಗಿ ಕೇಳಿಸಿಕೊಳ್ಳುವ ಭಾಗ್ಯವಿಲ್ಲದಾಯಿತಲ್ಲಾ ಎಂಬ ಕೊರಗು ಕಾಡುತ್ತಲೇ ಇರುತ್ತದೆ.

ಹಾಂ, ಶೇಣಿ ಗೋಪಾಲಕೃಷ್ಣ ಭಟ್ಟರ ಕುರಿತು ಇನ್ನೂ ಸಾಕಷ್ಟು ವಿಷಯಗಳಿವೆ. ಅದಕ್ಕಿಂತ ಹೆಚ್ಚಾಗಿ ಸ್ವಾರಸ್ಯದ ಸಂಗತಿಗಳಿವೆ. ಅವುಗಳನ್ನೆಲ್ಲಾ ಮುಂದೊಮ್ಮೆ ಹೇಳಿಯೇನು ಬಿಡಿ.

ಕೆಂಡ ತಂದಿಟ್ಟರೂ ‘ಕೆಂಡ’ವಾಗದ ನರಸಿಂಹ ಭಟ್
ಇಂದಿನ ತಲೆಮಾರಿನ ಯಕ್ಷಗಾನ ಆಸಕ್ತರಿಗೆ ನೆಡ್ಲೆ ನರಸಿಂಹ ಭಟ್ ಅನ್ನುವ ಅದ್ಭುತ ಚೆಂಡೆವಾದಕನ ಬಗ್ಗೆ ಹೆಚ್ಚಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಮನೆಯಲ್ಲಿ ಅಪ್ಪನೋ ಅಜ್ಜನೋ ಯಕ್ಷಗಾನದ ಬಗ್ಗೆ ಹೇಳುತ್ತಿದ್ದರೆ ನೆಡ್ಲೆ ನರಸಿಂಹ ಭಟ್ ಅವರ ಹೆಸರು ಖಂಡಿತವಾಗಿಯೂ ಮಧ್ಯದಲ್ಲಿ ಬಂದು ಹಾದು ಹೋಗದಿರಲಿಕ್ಕಿಲ್ಲ. ಯಾಕೆಂದರೆ ಅವರ ಹೊರತಾಗಿ ಚೆಂಡೆ ಮದ್ದಳೆಗಳ ಕುರಿತಾಗಿ ಮಾತಾಡುವುದು ಕಷ್ಟ! ಅಷ್ಟರ ಮಟ್ಟಿಗೆ ನರಸಿಂಹ ಭಟ್ ಮತ್ತು ಚೆಂಡೆ ಮದ್ದಳೆಗಳು ಅನ್ಯೋನ್ಯ.

ನರಸಿಂಹ ಭಟ್ ಎಷ್ಟು ಸಜ್ಜನರಾಗಿದ್ದರೆಂದರೆ ಅವರು ಯಾರನ್ನೂ ನೋಯಿಸಲು ಇಷ್ಟಪಡುತ್ತಿರಲಿಲ್ಲ. ತಾನು ಮಹಾನ್ ಸಾಧಕನಾಗಿದ್ದರೂ ಆ ಹಮ್ಮಿರಲಿಲ್ಲ. ಯಾರಾದರೂ ಹೊಸದಾಗಿ ಚೆಂಡೆ ಬಾರಿಸಿ ನಂತರ ನರಸಿಂಹ ಭಟ್ಟರಲ್ಲಿ ನನ್ನ ಚೆಂಡೆ ಹೇಗಾಗಿದೆ ಎಂದು ಕೇಳಿದರೆ ನರಸಿಂಹ ಭಟ್ ಮೊದಲಿಗೆ ಹೇಳುತ್ತಿದ್ದ ಮಾತು ‘ ಓ ಬಹಳ ಚೆನ್ನಾಗಿತ್ತು’ ಅಂತ. ಮತ್ತೆ ನಿಧಾನವಾಗಿ ‘ಎಲ್ಲವೂ ಚೆನ್ನಾಗೇ ಆಗಿದೆ… ಓ ಅಲ್ಲಿ ಕರ್ಣನ ಪ್ರವೇಶ ಆಗುತ್ತದಲ್ಲ ಆಗ ಇನ್ನೂ ಸ್ವಲ್ಪ ಚೆಂಡೆ ಜೋರಾಗಬೇಕು….. ಉಳಿದಂತೇನೂ ಇಲ್ಲ, ಮತ್ತೆ.. ಹಾಗೆಯೇ ಸ್ವಲ್ಪ ಉರುಳಿಕೆ ಇನ್ನೂ ನಾಜೂಕಾದರೆ ಚೆಂಡೆ ಮತ್ತಷ್ಟು ಸೊಗಸಾದೀತು.. ಇನ್ನೇನಿಲ್ಲಪ್ಪ ಚೆನ್ನಾಗೇ ಆಗಿದೆ ಬಿಡು…. ಕೆಲವೊಂದು ಕಡೆ ಸ್ವಲ್ಪ ಹದವರಿತು ಬಾರಿಸಿದರೆ ಎಲ್ಲವೂ ಸರಿಯಾಗಿಬಿಡುತ್ತದೆ…’ ಹೀಗೆ ಚೆನ್ನಾಗಿದೆ ಅನ್ನುತ್ತಲೇ, ಬಲು ನಾಜೂಕಾಗಿ ಕೇಳಿದವನಿಗೆ ನೋವಾಗದಂತೆ ತಪ್ಪುಗಳನ್ನು ತಿಳಿಹೇಳುತ್ತಿದ್ದವರು ನರಸಿಂಹ ಭಟ್.

ಒಮ್ಮೆ ಏನಾಯಿತೆಂದರೆ, ಯಕ್ಷಗಾನದ ಮಧ್ಯೆ ನರಸಿಂಹ ಭಟ್ ಟೀ ಕುಡಿದು ಬರೋಣ ಎಂದು ಅಲ್ಲೇ ಟೆಂಟ್ ಹತ್ತಿರ ಮಾಡಿದ್ದ ತಾತ್ಕಾಲಿಕ ಹೊಟೇಲಿಗೆ ಹೋದರು. ಅಲ್ಲಿ ತನಗೆ ಟೀ ತಂದಿತ್ತ ಹುಡುಗನಲ್ಲಿ ಬಿಸಿ ಬಿಸಿ ಏನಿದೆಯಪ್ಪಾ ಅಂತ ತಿನ್ನುವುದಕ್ಕೆ ಕೇಳಿದರು. ಹುಡುಗ ಭಟ್ಟರನ್ನು ತಮಾಷೆ ಮಾಡೋಣ ಅಂತ ಅಲ್ಲಿದ್ದವರ ಮುಂದೆ ದೊಡ್ಡದಾಗಿ ‘ಬಿಸಿ ಬಿಸಿ ಕೆಂಡ ಇದೆ’ ಅಂದ. ನೆರೆದಿದ್ದವರು ನಕ್ಕರು. ಆದರೆ ವಿಚಲಿತರಾಗದ ನರಸಿಂಹ ಭಟ್ ನಸುನಗುತ್ತಾ ‘ಸರಿ ಅದನ್ನೇ ತಾರಪ್ಪಾ..’ ಅನ್ನಬೇಕೇ? ಹುಡುಗನಿಗೆ ಅವಮಾನವಾದಂತಾಯಿತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ, ಭಟ್ಟರ ಮುಂದೆ ಸೋಲಬಾರದೆಂದು ನೇರ ಒಳಗೆ ಹೋಗಿ ತಟ್ಟೆಯೊಂದರಲ್ಲಿ ಕೆಂಡವನ್ನಿಕ್ಕಿ ಭಟ್ಟರ ಮುಂದೆ ತಂದಿಟ್ಟ. ಸದಾ ತಾಳ್ಮೆಯಿಂದಿರುವ ಭಟ್ ಈಗ ಆ ಹುಡುಗನಿಗೆ ಖಂಡಿತಾ ಬೈತಾರೆ ಅಂತ ನೆರೆದಿದ್ದವರೆಲ್ಲಾ  ಅಂದುಕೊಂಡರೆ, ಭಟ್ಟರು ನಸುನಗುತ್ತಲೇ ಇದ್ದರು!

ಉಳಿದಿದ್ದ ತುಸು ಟೀಯನ್ನು ಕುಡಿದು ಮುಗಿಸಿದ ಭಟ್, ಮೆಲ್ಲ ಕಿಸೆಯಿಂದ ಬೀಡಿಯೊಂದನ್ನು ತೆಗೆದು ತುಟಿಯಲ್ಲಿರಿಸಿ ಆ ಹುಡುಗ ತಂದಿಟ್ಟ ಕೆಂಡದಲ್ಲಿ ಉರಿಸಿ ಧಮ್ ಬಿಡುತ್ತಾ ಟೀಯ ಹಣ ಕೊಟ್ಟು ‘ಇನ್ನು ಕೆಂಡ ಒಳಗೆ ತೆಗೆದುಕೊಂಡು ಹೋಗಪ್ಪಾ’ ಎಂದು ಸೌಮ್ಯವಾಗಿಯೇ ಹೇಳಿ ನಿಧಾನವಾಗಿ ಹೊರನಡೆದರು.

ಹುಡುಗ ದಿಗ್ಭ್ರಮೆಯಿಂದ ನೋಡುತ್ತಲೇ ಇದ್ದ….!!!