ಮತ್ತೆ ಮತ್ತೆ ಕಾಡುವ ನಾವಡರು
Thursday, June 17th, 2010
ನಿಜ ಹೇಳಬೇಕೆಂದರೆ ಕಳೆದೆರಡು ಬಾರಿ ಈ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದ ವಿಠಲ ಶಾಸ್ತ್ರಿಯವರ ರೋಚಕ ಕಥೆಗಳ ಬಗೆಗೆ ಇನ್ನೂ ಹೇಳುವುದಿತ್ತು. ಕಳೆದ ಬಾರಿಯ ಲೇಖನ ಮುಗಿಸುವ ಹೊತ್ತಿಗೆ ಪುನಃ ವಿಠಲ ಶಾಸ್ತ್ರಿಗಳ ಬಗೆಗೇ ಬರೆಯುವುದೆಂದು ತೀರ್ಮಾನಿಸಿಯೂ ಆಗಿತ್ತು. ಹಾಗಾಗಿ ಅದೇ ಗುಂಗಿನಲ್ಲಿದ್ದ ನನ್ನನ್ನು ಎಚ್ಚರಿಸಿದ್ದು ಮೊನ್ನೆ ಕಳೆದುಹೋದ ದಿನಾಂಕ ಮೇ ೨೭. ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಅದೇ ದಿನ ನಡೆದುಹೋದ ದುರಂತವೊಂದು ಯಕ್ಷಲೋಕಕ್ಕೆ ಮರ್ಮಾಘಾತವನ್ನೇ ನೀಡಿತ್ತೆಂದು ಹೇಳಿದರೆ ಖಂಡಿತಾ ಅತಿಶಯೋಕ್ತಿಯಲ್ಲ. [...]





