ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಸಮಾರಂಭ/ನೃತ್ಯ-ನಾಟ್ಯ ಪ್ರದರ್ಶನ/ಉತ್ಸವ/ವಿಚಾರಸಂಕಿರಣ/ರಂಗಪ್ರವೇಶ… ಇತ್ಯಾದಿಯಾಗಿ ನೃತ್ಯ ಮತ್ತು ನಾಟ್ಯ ಕ್ಷೇತ್ರದ ವಿಚಾರಗಳನ್ನು, ಬರೆಹಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಇಲ್ವಿ ಸಂಗ್ರಹವಾದ ಬರೆಹಗಳನ್ನು ವಾರ್ಷಿಕ ವಿಮರ್ಶಾ ಪ್ರಶಸ್ತಿಗೆ ಪರಿಗಣಿಸಲಾಗುವುದು. ವಿಮರ್ಶಾಕ್ಷೇತ್ರದ ಮುನ್ನಡೆಗಾಗಿ, ಸದಭಿರುಚಿಯ ಬೆಳವಣಿಗೆಗಾಗಿ ಇದೊಂದು ಪುಟ್ಟ ಪ್ರಯತ್ನ..ಜೊತೆಗಿರಿ ನಮ್ಮೊಂದಿಗೆ…

‘ ರಾಜ್ಯಮಟ್ಟದ ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ ಪ್ರಶಸ್ತಿ ಶ್ರೀಮತಿ ಪ್ರತಿಭಾ ಸಾಮಗ’ ಇವರಿಗೆ

Tuesday, January 31st, 2012
‘ ರಾಜ್ಯಮಟ್ಟದ ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ ಪ್ರಶಸ್ತಿ   ಶ್ರೀಮತಿ ಪ್ರತಿಭಾ ಸಾಮಗ’ ಇವರಿಗೆ

ನೂಪುರ ಭ್ರಮರಿ’ ದ್ವೈಮಾಸಿಕ ಮತ್ತು ಪ್ರತಿಷ್ಠಾನ(ರಿ.) ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ಮತ್ತು ವಿಮರ್ಶಾ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ’ ಪ್ರಶಸ್ತಿಯನ್ನು ೨೦೧೦ರಲ್ಲಿ ಆರಂಭಿಸಿದ್ದು ತಮಗೆ ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ೨೦೧೧ನೇ ಸಾಲಿನ ಪ್ರಶಸ್ತಿಗೆ ಡಾ. ಶತಾವಧಾನಿ ಗಣೇಶ್ ಅವರ ಅಧ್ಯಕ್ಷತೆಯ ಪ್ರಶಸ್ತಿ ನಿರ್ಣಾಯಕ ಸಮಿತಿಯು ವಿಮರ್ಶೆಗಳ ಮೌಲ್ಯ, ಉದ್ದೇಶ, ಸ್ವರೂಪ, ಗುಣಮಟ್ಟವನ್ನಾಧರಿಸಿ ಮತ್ತು ನೃತ್ಯಕ್ಷೇತ್ರದ ವಿಮರ್ಶೆಗೆ ಈವರೆಗೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಉಡುಪಿಯ ವಿದುಷಿ [...]

‘ಅನನ್ಯ’ ‘ನಿರಂತರ’ : ಅದ್ಭುತವೆನಿಸಿದ ‘ಶಾಂತ’ ಭಾವ

Thursday, December 15th, 2011
‘ಅನನ್ಯ’ ‘ನಿರಂತರ’ : ಅದ್ಭುತವೆನಿಸಿದ ‘ಶಾಂತ’ ಭಾವ

೧೧ ನವೆಂಬರ್ ಸ್ಥಳ : ಮಲ್ಲೇಶ್ವರಂ ಸೇವಾಸದನ

ಗುರುಪರಂಪರೆಯ ಮಜಲುಗಳ ನಿರಂತರ ಹರಿವನ್ನು ಸಾದರಪಡಿಸುವಲ್ಲಿ ಅನನ್ಯ ಸಂಸ್ಥೆ ಹಮ್ಮಿಕೊಂಡ ‘ನಿರಂತರ’ ನೃತ್ಯಕಾರ್ಯಕ್ರಮ ರಸಸೋಪಾನದ ದೃಷ್ಟಿಯಲ್ಲಿ ಹೆಚ್ಚು ವಿಕಸಿತಗೊಂಡು ಭರತನಾಟ್ಯ(ನೃತ್ಯ) ಪರಂಪರೆಯ ಭವಿಷ್ಯದ ಸಾಧ್ಯತೆಗಳನ್ನು ಪ್ರಕಟಪಡಿಸಿತು. ಈ ಹಿನ್ನಲೆಯಲ್ಲಿ ‘ನಿರಂತರ’ದ ಕೇಂದ್ರಬಿಂದುವಾದವರು ನಿರುಪಮಾ(ರಾಜೇಂದ್ರ). ಅಂತೆಯೇ ಅವರ ಶಿಷ್ಯೆ ಮೃದುಲಾ ಎರಡನೇ ತಲೆಮಾರಿನ ಹಾಗೂ ಹರಿಣಿ ಮೂರನೇ ತಲೆಮಾರಿನ ಕಲಾವಿದರಾಗಿ ತಮ್ಮ ನೃತ್ಯಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಬ್ರಹ್ಮ, ವಿಷ್ಣು, ಶಿವ, ತಂಡು, ಭರತ..ಹೀಗೆ ನಾಟ್ಯದ ಗುರುಪರಂಪರೆಗೆ ಸರಳ, ಸುಲಲಿತ ಅರ್ಪಣೆಗೈವ [...]

ಸಾಯಿ ನೃತ್ಯೋತ್ಸವ : ಯುವ ಕಲಾವಿದರ ಭರವಸೆಯ ಕಾರ್ಯಕ್ರಮ

Thursday, December 15th, 2011
ಸಾಯಿ ನೃತ್ಯೋತ್ಸವ : ಯುವ ಕಲಾವಿದರ ಭರವಸೆಯ ಕಾರ್ಯಕ್ರಮ

ಡಿಸೆಂಬರ್ ೧ ಸ್ಥಳ : ಮಲ್ಲೇಶ್ವರಂ ಸೇವಾಸದನ

ಬೆಂಗಳೂರಿನ ಹಿರಿಯ ಸಂಘಟಕರೂ, ಕಲಾವಿದರಲ್ಲೊಬ್ಬರಾದ ಸಾಯಿವೆಂಕಟೇಶ್ ಅವರ ಸಾರಥ್ಯದ ಸಾಯಿ ನೃತ್ಯೋತ್ಸವ ಯುವ ನೃತ್ಯಾಕ್ಷಾಂಕ್ಷಿಗಳಿಗೆ ನಿಜಕ್ಕೂ ಒಂದು ಸದಭಿರುಚಿಯ, ಪೋಷಕವಾತಾವರಣ ಕಲ್ಪಿಸಿಕೊಡುವ ನೃತ್ಯ ಕಾರ್ಯಕ್ರಮ. ಕಳೆದೆರಡು ವರ್ಷಗಳ ಹಿಂದೆ ಸಂಘಟನೆಯಾದ ಈ ನೃತ್ಯೋತ್ಸವ ಪ್ರತೀ ತಿಂಗಳಿನ ಒಂದನೆ ತಾರೀಕಿನಂದು ಮಲ್ಲೇಶ್ವರಂನ ಸೇವಾಸದನದಲ್ಲಿ ಆಯೋಜನೆಯಾಗುತ್ತಾ ಬಂದು ಇದುವರೆಗೆ ಸುಮಾರು ೩೦ ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ. ಭಾರತದ ಯುವ ನೃತ್ಯಕಲಾವಿದರಿಗೆ ವೇದಿಕೆಯನ್ನೂ, ಅಂತೆಯೇ ಉತ್ತಮ ಪ್ರೇಕ್ಷಕರನ್ನೂ ಒದಗಿಸಿಕೊಡುತ್ತಿರುವ ಈ ಉತ್ಸವ ಅಂತರ್‌ರಾಜ್ಯ ಮಟ್ಟದಲ್ಲೂ [...]

‘ಅನನ್ಯ’ ನೃತ್ಯ ನೀರಾಜನದ ಕಾಣಿಕೆ

Thursday, December 15th, 2011
‘ಅನನ್ಯ’ ನೃತ್ಯ ನೀರಾಜನದ ಕಾಣಿಕೆ

ನವೆಂಬರ್ ೨೬,೨೭ ಸ್ಥಳ: ಮಲ್ಲೇಶ್ವರಂ ಸೇವಾಸದನ

ಅನನ್ಯ ಕಲಾಸಂಸ್ಥೆ ಬೆಂಗಳೂರಿನ ಕಲಾವಿದರ ಪಾಲಿಗೆ ಅನೇಕ ಸಾಧ್ಯತೆಗಳತ್ತ ಕೈಚಾಚುತ್ತಿರುವ ಸಾಂಸ್ಕೃತಿಕವಾಗಿ ದಾಖಲಾರ್ಹವಾದ ಸಂಸ್ಥೆ. ಡಾ. ಆರ್.ವಿ.ರಾಘವೇಂದ್ರ ಅವರ ಸಮರ್ಥ ನಾಯಕತ್ವ ಮತ್ತು ಆಸಕ್ತಿಯ ಫಲವಾಗಿ ಸಂಗೀತ ಮತ್ತು ನೃತ್ಯಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಅಭಿವ್ಯಕ್ತಿ.
ಅನನ್ಯ ಸಂಸ್ಥೆಯ ವತಿಯಿಂದ ಕಳೆದೆರಡು ವರ್ಷಗಳ ಹಿಂದೆ ವಿದ್ವಾನ್ ಗುರುಮೂರ್ತಿ, ಶ್ರೀವತ್ಸ, ಮಾನಸಿ ಮುಂತಾದ ಕಲಾವಿದರ ಸಹಕಾರದಲ್ಲಿ ಕನ್ನಡ ನೆಲದ ಸೊಗಡಿನ ಕೃತಿಗಳನ್ನು ಭರತನಾಟ್ಯ ನೃತ್ಯಪ್ರದರ್ಶನಕ್ಕೆ ಅನುಕೂಲಕರವಾಗಿ ಎರಡು ಆಡಿಯೋ ಸಿಡಿಗಳನ್ನಾಗಿ [...]

ಕಲಾನಾದಂ ಉತ್ಸವ : ಮಿಶ್ರ ಅಭಿವ್ಯಕ್ತಿ

Wednesday, December 14th, 2011
ಕಲಾನಾದಂ ಉತ್ಸವ : ಮಿಶ್ರ ಅಭಿವ್ಯಕ್ತಿ

ನವೆಂಬರ್ ೧೨ರಿಂದ ೧೯ ಎಡಿ‌ಎ ರಂಗಮಂದಿರ

ನಂದಿನಿ ಮೆಹ್ತಾ ಮತ್ತು ಮುರಳೀ ಮೋಹನ್‌ರ ಸಮರ್ಥ ಆಯೋಜನೆಯಲ್ಲಿ ಒಂದು ವಾರದ ಕಾಲ ಮೂಡಿಬಂದ ಕಲಾನಾದಂ ಉತ್ಸವವು ಭರತನಾಟ್ಯ, ಒಡಿಸ್ಸಿ, ಕೂಚಿಪುಡಿ, ಕಥಕ್, ಮೋಹಿನಿಯಾಟ್ಟಂನಾದಿಯಾಗಿ ಹಲವು ಹಿರಿ-ಕಿರಿಯ ನರ್ತಕರ ನಡೆಗಳಿಗೆ ಸಾಕ್ಷಿಯಾಯಿತು.
ಸಮಾರೋಪದ ದಿನದಂದು ಚೆನ್ನೈನ ನೃತ್ಯ ದಂಪತಿಗಳಾದ ವಿಜನಾ ಮತ್ತು ರಂಜಿತ್ ಬಾಬು ಹಿರಿಯ ಗುರು ಸಿ.ವಿ.ಚಂದ್ರಶೇಖರ್ ಅವರ ಸಮರ್ಥ ನಟುವಾಂಗದಲ್ಲಿ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಗಣೇಶ ಸ್ತುತಿ, ಸೊಲ್ಕಟ್ಟು, ಅಲಾರಿಪು, ನಾಟಕುರಂಜಿ ವರ್ಣ, ಭಜನ್ ಮತ್ತು ತಿಲ್ಲಾನವನ್ನು ಪ್ರಸ್ತುತಪಡಿಸಿದ ನೃತ್ಯದಂಪತಿಗಳ [...]

ಕಾರ್ತಿಕ ಉತ್ಸವ : ನೃತ್ತದ ‘ವಿಜಯ’

Wednesday, December 14th, 2011
ಕಾರ್ತಿಕ ಉತ್ಸವ : ನೃತ್ತದ ‘ವಿಜಯ’

೧೨ ನವೆಂಬರ್ ಸ್ಥಳ : ಮಲ್ಲೇಶ್ವರಂ ಸೇವಾಸದನ

ಅಮೃತವರ್ಷಿಣಿ ಅಕಾಡೆಮಿ ಆಯೋಜಿಸಿದ ಕಾರ್ತಿಕ ಉತ್ಸವದ ಅಂಗವಾಗಿ ಮೊದಲದಿನದಂದು ರುಕ್ಮಿಣಿ ವಿಜಯಕುಮಾರ್ ಅವರಿಂದ ಭರತನಾಟ್ಯವನ್ನು ಏರ್ಪಡಿಸಲಾಗಿತ್ತು. ಆರಂಭಿಕವಾಗಿ ಗಣಪತಿ, ಸರಸ್ವತಿಯರನ್ನು ಸ್ತುತಿಸುವ ಸ್ವರಗುಚ್ಛಕ್ಕೆ ನರ್ತಿಸಿದ ರುಕ್ಮಿಣಿ ಸೂರ್ಯಾಂಜಲಿ ನೃತ್ಯದ ಮೂಲಕ ಸೂರ್ಯನನ್ನು ಶ್ಲೋಕದ ಮೂಲಕವಾಗಿ ಸ್ತುತಿಸಲು ಪ್ರಯತ್ನಿಸಿದರು. ನೃತ್ತದ ಭಾರಕ್ಕೆ ಅಂಗಶುದ್ಧಿ, ಮುಖ ಪ್ರಸನ್ನತೆ ಇಂಬನ್ನಿತ್ತಿತಾದರೂ ಶ್ಲೋಕ ಮಾತ್ರಕ್ಕೆ ಸೂರ್ಯನ ವರ್ಣನೆ ತೃಪ್ತವಾಗಬೇಕಾಯಿತು. ನಂತರ ಮೂಡಿಬಂದ ಕೃಷ್ಣನ ಕುರಿತ ಅಭಿನಯಪದದಲ್ಲಿ ಬಗೆಬಗೆಯ ನೃತ್ತವು ಬಿರುಸಿನ ಪ್ರಕ್ರಿಯೆಯನ್ನು ಮತ್ತಷ್ಟು ಪ್ರಬಲಗೊಳಿಸುತ್ತಲೇ ಕೊಂಚ [...]

‘ಧಾತು’ ನವರಾತ್ರಿ ಮಹೋತ್ಸವ

Saturday, October 15th, 2011
‘ಧಾತು’ ನವರಾತ್ರಿ ಮಹೋತ್ಸವ

(ಸೆಪ್ಟೆಂಬರ್ ೨೮- ಅಕ್ಟೋಬರ್ ೬) ಸ್ಥಳ : ಬನಶಂಕರಿ, ೨ನೇ ಹಂತ.
‘ಕಲಾವಿದರು ನೃತ್ಯದೊಳಗೊಂದಾಗಿ ಆನಂದದಿಂದ, ರಸಾನುಭವದಿಂದ ಮಿಂದೆದ್ದರೆ ಮಾತ್ರ ಪ್ರೇಕ್ಷಕರಿಗೆ ಆನಂದವನ್ನು ನೀಡಬಲ್ಲರು, ರಸಾನುಭೂತಿಯಲ್ಲಿ ಕರಗಿಸಬಲ್ಲರು’ ಎಂಬುದಕ್ಕೆ ಸಾಕ್ಷಿ ಹೇಳಿದ್ದು ಸೆಪ್ಟೆಂಬರ್ ೨೮ರಂದು ಅನುಪಮಾ ಹೊಸಕೆರೆ ನೇತೃತ್ವದ ‘ಧಾತು’ ಉತ್ಸವದ ಉದ್ಘಾಟನಾರೂಪವಾಗಿ ಮೂಡಿಬಂದ ನಿರುಪಮಾ(ರಾಜೇಂದ್ರ) ಅವರ ಭರತನಾಟ್ಯ(ನೃತ್ಯ). ಒಂದರ್ಥದಲ್ಲಿ ನಿರುಪಮಾರ ಭರತನೃತ್ಯ ಗುರುಗಳ ಸಂಪೂರ್ಣ ಆವಾಹನೆ ಅವರಲ್ಲಾಗಿತ್ತು ಎಂದರೂ ಅತಿಶಯವಲ್ಲ.

ವಲಚಿ ರಾಗಕ್ಕೆ ಹೆಣೆದ ಪುಷ್ಪಾಂಜಲಿಗೆ ತಲಪುಷ್ಪಪುಟ ಕರಣದಿಂದಲೇ ಅಡಿಯಿಟ್ಟ ನಿರುಪಮಾ ದಿಕ್ ಸ್ವಸ್ತಿಕ, ಕಟಿಚ್ಛಿನ್ನ, ಕರಿಹಸ್ತ, ಊರೂದ್ವೃತ್ತ, [...]

ಬೆಂಗಳೂರು ಅಂತರ್ರಾಷ್ಟ್ರೀಯ ಕಲಾ ಉತ್ಸವ

Saturday, October 15th, 2011
ಬೆಂಗಳೂರು ಅಂತರ್ರಾಷ್ಟ್ರೀಯ ಕಲಾ ಉತ್ಸವ

(೧೫ ಸೆಪ್ಟೆಂಬರ್-೨೫ ಸೆಪ್ಟೆಂಬರ್ )

ವೈಭವೋಪೇತ ಆರಂಭ ಮತ್ತು ಅಂತ್ಯ ಕಂಡ ಈ ಉತ್ಸವ ಹಿಂದೂಸ್ಥಾನಿ, ಕರ್ನಾಟಕ ಸಂಗೀತ, ವಾದ್ಯಸಂಗೀತ ಜಾಜ್, ಸಮಕಾಲೀನ, ನಾಟಕ, ಜಾನಪದ ..ಹೀಗೆ ಹತ್ತು ಹಲವು ದಿಕ್ಕುಗಳನ್ನು ಸ್ಪರ್ಶಿಸಿದೆ. ಈ ಹಿನ್ನಲೆಯಲ್ಲಿ ಕಲಾ ಉತ್ಸವದ ಅಂಗವಾಗಿ ಜರುಗಿದ ನೃತ್ಯಪ್ರದರ್ಶನಗಳು ಪಾರಂಪರಿಕ ಮತ್ತು ಸಮಕಾಲೀನ ಸ್ಪರ್ಶವನ್ನು ಜೊತೆಜೊತೆಗೇ ಇತ್ತಿದೆ. ಸೆಪ್ಟೆಂಬರ್ ೨೪ರಂದು ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ಆವರಣದಲ್ಲಿ ಪದ್ಮಿನಿ ರವಿ ಅವರ ಭರತನಾಟ್ಯ, ಅನುಜ್ ಮಿಶ್ರಾ ಅವರ ಕಥಕ್ ಆಯೋಜನೆಗೊಂಡು ಗಮನ ಸೆಳೆದರೆ; [...]

ಸೂರ್ಯ ಫೆಸ್ಟಿವಲ್

Saturday, October 15th, 2011
ಸೂರ್ಯ ಫೆಸ್ಟಿವಲ್

(ಸೆಪ್ಟೆಂಬರ್ ೧೫-ಸೆಪ್ಟೆಂಬರ್ ೨೦ )ಸ್ಥಳ: ಮಲ್ಲೇಶ್ವರಂನ ಸೇವಾಸದನ
ಭಾರತದೆಲ್ಲೆಡೆ ವರ್ಷದ ೩೬೫ ದಿನಗಳಲ್ಲೂ ಸಾಂಸ್ಕೃತಿಕ ರಸಧಾರೆಯನ್ನೇ ಹರಿಸುತ್ತಾ ಜಗತ್ತಿನಲ್ಲಿ ಅತೀ ಹೆಚ್ಚು ಸಮಯದ ಸಾಂಸ್ಕೃತಿಕ ಸಂಜೆಗಳನ್ನೀಯುತ್ತಿರುವ ಕಾರ್ಯಕ್ರಮ ಸರಣಿ ಎಂದು ಗಿನ್ನಿಸ್ ರೆಕಾರ್ಡ್‌ಗೆ ಸೇರ್ಪಡೆಯಾದ ಅತ್ಯಪೂರ್ವ ಶ್ರಮ ‘ಸೂರ್ಯ ಫೆಸ್ಟಿವಲ್’. ಈ ಹಿನ್ನಲೆಯಲ್ಲಿ ಅದರ ಆಯೋಜಕರಿಗೂ, ಸಹಭಾಗಿತ್ವವನ್ನಿತ್ತು ಪ್ರೋತ್ಸಾಹಿಸುತ್ತಿರುವ ಕಲಾರಾಧಾಕರಿಗೂ ಅಭಿನಂದನೆಗಳು ಸಲ್ಲಲೇಬೇಕು. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅನನ್ಯ ಸಂಸ್ಥೆಯ ಆಶ್ರಯದಲ್ಲಿ ೫ ದಿನಗಳ ಸಂಗೀತ-ನೃತ್ಯ ಸರಣಿ ನಡೆಯಿತು. ಕಾರ್ಯಕ್ರಮಕ್ಕೆ ಉತ್ತಮ ಆರಂಭವನ್ನು ಒದಗಿಸಿ ಶಾಸ್ತ್ರ ಮತ್ತು [...]

ಬೆಂಗಳೂರು ಮ್ಯೂಸಿಕ್ ಅಕಾಡೆಮಿಯ ನೃತ್ಯ ಮಹೋತ್ಸವ

Saturday, October 15th, 2011
ಬೆಂಗಳೂರು ಮ್ಯೂಸಿಕ್ ಅಕಾಡೆಮಿಯ ನೃತ್ಯ ಮಹೋತ್ಸವ

(ಸೆಪ್ಟೆಂಬರ್೧- ಸೆಪ್ಟೆಂಬರ್೩) ಸ್ಥಳ : ಚೌಡಯ್ಯ ಸಂಸ್ಮರಣಾ ಭವನ
ಕಳರಿಪಯಟ್ಟು, ಭರತನಾಟ್ಯ, ಕಥಕ್ ಮುಂತಾಗಿ ಹಲವು ನೃತ್ಯಸಾಧ್ಯತೆಗಳನ್ನು ಹದವಾಗಿ ಬೆರೆಸಿ ಸಮಕಾಲೀನವಾಗಿಯೂ ಪುರಾಣ ಮತ್ತು ಶಾಸ್ತ್ರರೂಪ ಉಳಿದುಕೊಳ್ಳುವಂತೆ ಇದ್ದ ನೃತ್ಯ ಸಂಯೋಜನೆಗಳು ಯುವ ಜನತೆಯ ಕೇಂದ್ರಾಕರ್ಷಣೆಯೆನಿಸುತ್ತದೆ. ಅದಕ್ಕೆ ನಿದರ್ಶನವೆಂಬಂತೆ ಇದ್ದದ್ದು ಸೆಪ್ಟೆಂಬರ್ ೨ರಂದು ಪ್ರದರ್ಶಿತಗೊಂಡ ನಿರುಪಮಾ-ರಾಜೇಂದ್ರ ಅವರ‘ಕಥಕಿಟಥೋಂ’ – ಸಮೂಹ ಮತ್ತು ಯುಗಳ ಅಭಿವ್ಯಕ್ತಿ. ಅತ್ಯಾಕರ್ಷಕ ರಂಗಸಜ್ಜಿಕೆ, ಬೆಳಕು ಸಂಯೋಜನೆ, ಸುಂದರ-ವೈವಿಧ್ಯಮಯ ಮತ್ತು ಅಷ್ಟೇ ಅಚ್ಚುಕಟ್ಟು ವಸ್ತ್ರಾಭರಣಗಳು, ಕ್ಷಿಪ್ರ ಚಲನೆ, ಸಂಗೀತದ ಸಣ್ಣ ಸಣ್ಣ ನುಡಿತವನ್ನೂ ಗಮನಾರ್ಹವಾಗಿ ದಾಖಲಿಸುವ [...]