ಅಂಕಣಗಳು

ನೂಪುರ ಪತ್ರಿಕೆ

ಆರನೇ ವರ್ಷೋತ್ಸವದ ವಿಶೇಷ ಸಂಚಿಕೆ : ಮಾಘ ಫಾಲ್ಗುಣ (ಜನವರಿ -ಫೆಬ್ರವರಿ ೨೦೧೨) -ಶಿಶಿರ ಶೃಂಗಾರ

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಸಮಾರಂಭ/ನೃತ್ಯ-ನಾಟ್ಯ ಪ್ರದರ್ಶನ/ಉತ್ಸವ/ವಿಚಾರಸಂಕಿರಣ/ರಂಗಪ್ರವೇಶ… ಇತ್ಯಾದಿಯಾಗಿ ನೃತ್ಯ ಮತ್ತು ನಾಟ್ಯ ಕ್ಷೇತ್ರದ ವಿಚಾರಗಳನ್ನು, ಬರೆಹಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಇಲ್ವಿ ಸಂಗ್ರಹವಾದ ಬರೆಹಗಳನ್ನು ವಾರ್ಷಿಕ ವಿಮರ್ಶಾ ಪ್ರಶಸ್ತಿಗೆ ಪರಿಗಣಿಸಲಾಗುವುದು. ವಿಮರ್ಶಾಕ್ಷೇತ್ರದ ಮುನ್ನಡೆಗಾಗಿ, ಸದಭಿರುಚಿಯ ಬೆಳವಣಿಗೆಗಾಗಿ ಇದೊಂದು ಪುಟ್ಟ ಪ್ರಯತ್ನ..ಜೊತೆಗಿರಿ ನಮ್ಮೊಂದಿಗೆ…
It is a platform for Value based, objective criticism and reviews of programmes like Arangetram/Annual Day/recitals/Seminars/workshops related to performing arts. the criticism/reviews of this section will be taken for assessing the ‘Best Dance critic of the year’ Award of Noopurabhramari Foundation. Come, write and get a unique recognition.

ಬೆಂಗಳೂರು ಅಂತರ್ರಾಷ್ಟ್ರೀಯ ಕಲಾ ಉತ್ಸವ

Saturday, October 15th, 2011
ಬೆಂಗಳೂರು ಅಂತರ್ರಾಷ್ಟ್ರೀಯ ಕಲಾ ಉತ್ಸವ

(೧೫ ಸೆಪ್ಟೆಂಬರ್-೨೫ ಸೆಪ್ಟೆಂಬರ್ )

ವೈಭವೋಪೇತ ಆರಂಭ ಮತ್ತು ಅಂತ್ಯ ಕಂಡ ಈ ಉತ್ಸವ ಹಿಂದೂಸ್ಥಾನಿ, ಕರ್ನಾಟಕ ಸಂಗೀತ, ವಾದ್ಯಸಂಗೀತ ಜಾಜ್, ಸಮಕಾಲೀನ, ನಾಟಕ, ಜಾನಪದ ..ಹೀಗೆ ಹತ್ತು ಹಲವು ದಿಕ್ಕುಗಳನ್ನು ಸ್ಪರ್ಶಿಸಿದೆ. ಈ ಹಿನ್ನಲೆಯಲ್ಲಿ ಕಲಾ ಉತ್ಸವದ ಅಂಗವಾಗಿ ಜರುಗಿದ ನೃತ್ಯಪ್ರದರ್ಶನಗಳು ಪಾರಂಪರಿಕ ಮತ್ತು ಸಮಕಾಲೀನ ಸ್ಪರ್ಶವನ್ನು ಜೊತೆಜೊತೆಗೇ ಇತ್ತಿದೆ. ಸೆಪ್ಟೆಂಬರ್ ೨೪ರಂದು ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ಆವರಣದಲ್ಲಿ ಪದ್ಮಿನಿ ರವಿ ಅವರ ಭರತನಾಟ್ಯ, ಅನುಜ್ ಮಿಶ್ರಾ ಅವರ ಕಥಕ್ ಆಯೋಜನೆಗೊಂಡು ಗಮನ ಸೆಳೆದರೆ; [...]

ಸೂರ್ಯ ಫೆಸ್ಟಿವಲ್

Saturday, October 15th, 2011
ಸೂರ್ಯ ಫೆಸ್ಟಿವಲ್

(ಸೆಪ್ಟೆಂಬರ್ ೧೫-ಸೆಪ್ಟೆಂಬರ್ ೨೦ )ಸ್ಥಳ: ಮಲ್ಲೇಶ್ವರಂನ ಸೇವಾಸದನ
ಭಾರತದೆಲ್ಲೆಡೆ ವರ್ಷದ ೩೬೫ ದಿನಗಳಲ್ಲೂ ಸಾಂಸ್ಕೃತಿಕ ರಸಧಾರೆಯನ್ನೇ ಹರಿಸುತ್ತಾ ಜಗತ್ತಿನಲ್ಲಿ ಅತೀ ಹೆಚ್ಚು ಸಮಯದ ಸಾಂಸ್ಕೃತಿಕ ಸಂಜೆಗಳನ್ನೀಯುತ್ತಿರುವ ಕಾರ್ಯಕ್ರಮ ಸರಣಿ ಎಂದು ಗಿನ್ನಿಸ್ ರೆಕಾರ್ಡ್‌ಗೆ ಸೇರ್ಪಡೆಯಾದ ಅತ್ಯಪೂರ್ವ ಶ್ರಮ ‘ಸೂರ್ಯ ಫೆಸ್ಟಿವಲ್’. ಈ ಹಿನ್ನಲೆಯಲ್ಲಿ ಅದರ ಆಯೋಜಕರಿಗೂ, ಸಹಭಾಗಿತ್ವವನ್ನಿತ್ತು ಪ್ರೋತ್ಸಾಹಿಸುತ್ತಿರುವ ಕಲಾರಾಧಾಕರಿಗೂ ಅಭಿನಂದನೆಗಳು ಸಲ್ಲಲೇಬೇಕು. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅನನ್ಯ ಸಂಸ್ಥೆಯ ಆಶ್ರಯದಲ್ಲಿ ೫ ದಿನಗಳ ಸಂಗೀತ-ನೃತ್ಯ ಸರಣಿ ನಡೆಯಿತು. ಕಾರ್ಯಕ್ರಮಕ್ಕೆ ಉತ್ತಮ ಆರಂಭವನ್ನು ಒದಗಿಸಿ ಶಾಸ್ತ್ರ ಮತ್ತು [...]

ಬೆಂಗಳೂರು ಮ್ಯೂಸಿಕ್ ಅಕಾಡೆಮಿಯ ನೃತ್ಯ ಮಹೋತ್ಸವ

Saturday, October 15th, 2011
ಬೆಂಗಳೂರು ಮ್ಯೂಸಿಕ್ ಅಕಾಡೆಮಿಯ ನೃತ್ಯ ಮಹೋತ್ಸವ

(ಸೆಪ್ಟೆಂಬರ್೧- ಸೆಪ್ಟೆಂಬರ್೩) ಸ್ಥಳ : ಚೌಡಯ್ಯ ಸಂಸ್ಮರಣಾ ಭವನ
ಕಳರಿಪಯಟ್ಟು, ಭರತನಾಟ್ಯ, ಕಥಕ್ ಮುಂತಾಗಿ ಹಲವು ನೃತ್ಯಸಾಧ್ಯತೆಗಳನ್ನು ಹದವಾಗಿ ಬೆರೆಸಿ ಸಮಕಾಲೀನವಾಗಿಯೂ ಪುರಾಣ ಮತ್ತು ಶಾಸ್ತ್ರರೂಪ ಉಳಿದುಕೊಳ್ಳುವಂತೆ ಇದ್ದ ನೃತ್ಯ ಸಂಯೋಜನೆಗಳು ಯುವ ಜನತೆಯ ಕೇಂದ್ರಾಕರ್ಷಣೆಯೆನಿಸುತ್ತದೆ. ಅದಕ್ಕೆ ನಿದರ್ಶನವೆಂಬಂತೆ ಇದ್ದದ್ದು ಸೆಪ್ಟೆಂಬರ್ ೨ರಂದು ಪ್ರದರ್ಶಿತಗೊಂಡ ನಿರುಪಮಾ-ರಾಜೇಂದ್ರ ಅವರ‘ಕಥಕಿಟಥೋಂ’ – ಸಮೂಹ ಮತ್ತು ಯುಗಳ ಅಭಿವ್ಯಕ್ತಿ. ಅತ್ಯಾಕರ್ಷಕ ರಂಗಸಜ್ಜಿಕೆ, ಬೆಳಕು ಸಂಯೋಜನೆ, ಸುಂದರ-ವೈವಿಧ್ಯಮಯ ಮತ್ತು ಅಷ್ಟೇ ಅಚ್ಚುಕಟ್ಟು ವಸ್ತ್ರಾಭರಣಗಳು, ಕ್ಷಿಪ್ರ ಚಲನೆ, ಸಂಗೀತದ ಸಣ್ಣ ಸಣ್ಣ ನುಡಿತವನ್ನೂ ಗಮನಾರ್ಹವಾಗಿ ದಾಖಲಿಸುವ [...]

ನಿರೀಕ್ಷಿತ ನಡೆಗಳ ಮಾನಸಾಳ ಭರತನೃತ್ಯ ರಂಗಪ್ರವೇಶ

Monday, August 15th, 2011
ನಿರೀಕ್ಷಿತ ನಡೆಗಳ ಮಾನಸಾಳ ಭರತನೃತ್ಯ ರಂಗಪ್ರವೇಶ

ಶ್ರದ್ಧಾ ಕುಮಾರ್ ಅವರ ಶಿಷ್ಯೆ ಮಾನಸಾ ರವಿಕುಮಾರ್ ಅವರ ಭರತನೃತ್ಯ ರಂಗಪ್ರವೇಶ ಜುಲೈ ೬ ರಂದು ಕೋರಮಂಗಲದ ಸತ್ಯಸಾಯಿ ಸಂಸ್ಕೃತ ಸದನದಲ್ಲಿ ಜರುಗಿತು.
ಕಳೆದ ೧೦ ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವ ಮಾನಸಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಸ್ತುತ ಮಲ್ಯ ಅದಿತಿ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿ.
ರಂಗಪ್ರವೇಶದಲ್ಲಿ ನೃತ್ಯಬಂಧಗಳ ಆಯ್ಕೆ ಸಮಂಜಸವಾಗಿದ್ದು; ರಾಗಾಸ್ವಾದನೆಯಿಂದ ಚೇತೋಹಾರಿಯಾಗಿದ್ದಿತು. ರಾಗಮಾಲಿಕೆಗೆ ಹೆಣೆದ ಪೂರ್ವರಂಗ ಹಾಗೂ ನಾಟ ರಾಗದ ಪುಷ್ಪಾಂಜಲಿಗೆ ರಂಗಕ್ಕೆ ಅಡಿಯಿಟ್ಟ ಮಾನಸಾ, ದ್ವಾರಕೀ [...]

ಫಲಪ್ರದವೆನಿಸಿದ ಡಾ.ಪದ್ಮಾ ಸುಬ್ರಹ್ಮಣ್ಯಂ ನೇತೃತ್ವದ ಶಿಬಿರ

Monday, August 15th, 2011
ಫಲಪ್ರದವೆನಿಸಿದ ಡಾ.ಪದ್ಮಾ ಸುಬ್ರಹ್ಮಣ್ಯಂ ನೇತೃತ್ವದ ಶಿಬಿರ

ಭರತ ಕಲೆಗಳ ಆದ್ಯ ಗುರು ಭರತಮುನಿಗೆ ಭಾರತದಲ್ಲೇ ಮೊತ್ತ ಮೊದಲನೆಯ ಬಾರಿಗೆ ದೇವಾಲಯವನ್ನೂ ಮತ್ತು ಕಲೆಗಳ ಕುರಿತಾದ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶದಲ್ಲಿರುವ ಭರತನೃತ್ಯದ ಅಗ್ರಮಾನ್ಯ ಕಲಾವಿದೆ ಡಾ. ಪದ್ಮಾಸುಬ್ರಹ್ಮಣ್ಯಂ ಅವರು ನಿಧಿ ಸಂಗ್ರಹಣೆಗಾಗಿ ಒಂದುವಾರದ ಭರತನಾಟ್ಯ ಶಿಬಿರವನ್ನು ನಿರುಪಮ ರಾಜೇಂದ್ರ ಅವರ ಅಭಿನವ ಡ್ಯಾನ್ಸ್ ಕಂಪೆನಿಯ ಆವರಣದಲ್ಲಿ ಜುಲೈ ೪ರಿಂದ ೧೦ರ ವರೆಗೆ ಆಯೋಜಿಸಿದ್ದರು. ನೃತ್ಯ ಗುರು ಮತ್ತು ವಿದ್ಯಾರ್ಥಿಗಳ ವಿಭಾಗದಲ್ಲಿ ಜರುಗಿದ ಈ ಕಮ್ಮಟವು ಕರ್ನಾಟಕದ ಕಲಾವಿದರಿಗೆ ನೃತ್ಯಕಲೆಗೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನವನ್ನು ಕೊಟ್ಟದ್ದು [...]

ಅಚ್ಚುಕಟ್ಟಿನ ಲಯ, ರಸಾನುಭೂತಿಯ ಸೂಚನೆ : ಶ್ರೀಮತಿ ಅರ್ಚನಾ ಮತ್ತು ಚೇತನಾ

Monday, August 15th, 2011

ಅನ್ನ ಬೆಂದ ಸೂಚನೆ ಒಂದು ಅಕ್ಕಿ ಕಾಳಿನಲ್ಲೇ ಗೊತ್ತಾದ ಬಗೆಯ ಪಕ್ವತೆ ಅಲ್ಲಿತ್ತು. ನೃತ್ಯ ಸೌಂದರ್ಯಕ್ಕೆ ಬೇಕಾದುದು ರಸಾನುಭೂತಿಯ ಚೈತನ್ಯ ಎಂಬುದನ್ನು ಸ್ಪಷ್ಟಪಡಿಸಿದವರು ಕರ್ನಾಟಕ ನೃತ್ಯಕಲಾ ಪರಿಷತ್‌ನ ‘ಅಂಕುರ ನೃತ್ಯೋತ್ಸವ’ದ ಸಮಾರೋಪದಲ್ಲಿ (ಜುಲೈ ೧೭) ನರ್ತಿಸಿದ ಅವಳಿ ಸಹೋದರಿಯರಾದ ಶ್ರೀಮತಿ ಅರ್ಚನ ಮತ್ತು ಚೇತನಾ. ಸುಸ್ಪಷ್ಟ ಹೆಜ್ಜೆಗಾರಿಕೆಯಲ್ಲಿ ತೋರಿಬಂದ ಲಯನೈಪುಣ್ಯ, ಯುಗಳ ಅಥವಾ ದ್ವಂದ್ವ್ವ ನರ್ತನಕ್ಕೆ ಬೇಕಾದ ಸಾಮ್ಯ, ಹಾರ್ದಿಕ ಅನುಸರಣಾರ್ಹ ಮನೋಧರ್ಮ, ಪರಸ್ಪರ ಸಾಂಗತ್ಯ, ಸಹಜ ಹೊಂದಾಣಿಕೆ, ಮೇಲಾಗಿ ಅಭಿನಯಾದಿ ಕೌಶಲಗಳಲ್ಲಿ ಭಾವ ಸ್ಫುಟತೆ ಮತ್ತು [...]

ಆಹಾರ್ಯ, ಆಂಗಿಕಕ್ಕಷ್ಟೇ ತೃಪ್ತವಾದ ‘ಹೊಯ್ಸಳ ವೈಭವ’

Monday, August 15th, 2011

ಅಂತರಾಷ್ಟ್ರೀಯ ಪ್ರಖ್ಯಾತಿಯ ನೃತ್ಯ ಗುರು ಡಾ.ಮಾಯಾ ರಾವ್ ಅವರ ಮೂಸೆಯಲ್ಲಿ ಅರಳಿದ ‘ಹೊಯ್ಸಳ ವೈಭವ’ ಹಾಗೂ ‘ಅಮೀರ್ ಖುಸ್ರು’ ರೂಪಕಗಳ ರಂಗ ಪ್ರದರ್ಶನವು ಇತ್ತೀಚೆಗೆ ( ಜುಲೈ ೧೯) ಅವರ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೊರಿಯೋಗ್ರಫಿಯ ಬೆಳ್ಳಿಹಬ್ಬದ ಪ್ರಯುಕ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿತ್ತು.
ಆಂಗಿಕ, ಆಹಾರ್ಯ( ವೇಷಭೂಷಣಾದಿ ರಂಗ ಸನ್ನಿವೇಶ)ದ ನೆಲೆಯಲ್ಲಿ ಎರಡೂ ರೂಪಕಗಳು ಭವ್ಯವಾಗಿತ್ತಾದರೂ ಸಾತ್ತ್ವಿಕವನ್ನು ಮುಟ್ಟುವಲ್ಲಿ ಇನ್ನೊಂದಷ್ಟು ಶ್ರಮ ನಿರೀಕ್ಷಿತ. ವಾಚಿಕಾಭಿನಯ ಅಥವಾ ಹಿನ್ನಲೆ ಸಾಹಿತ್ಯದ ಉಪಯೋಗವೂ ತಕ್ಕಮಟ್ಟಿಗೆ ಕಡಿಮೆ ಇದ್ದುದರಿಂದ [...]

ಕರ್ನಾಟಕ ನೃತ್ಯ ವೈಭವದ ಪ್ರಸ್ತುತಿಗೆ ಸಾಕಾರ ಯತ್ನ : ಭರತಾಗಮ

Monday, August 15th, 2011

ಕರ್ನಾಟಕದ ಶ್ರೀಮಂತ ಭರತನಾಟ್ಯ ನೃತ್ಯಪರಂಪರೆಗೆ ಸಾಕ್ಷಿಯಾದುದು ಭರತಾಗಮ ಪ್ರತಿಷ್ಠಾನದಿಂದ ಜುಲೈ ೨೩ ಮತ್ತು ೨೪ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಆಯೋಜಿತವಾದ ಕರ್ನಾಟಕ ನೃತ್ಯಪರಂಪರೆಗಳ ಕುರಿತ ವಿಚಾರಸಂಕಿರಣ ಮತ್ತು ನೃತ್ಯಾಭಿವ್ಯಕ್ತಿ. ಕೇಂದ್ರ ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರಾಯೋಜಿತವಾದ ಈ ಕಾರ್ಯಕ್ರಮ ಒಂದರ್ಥದಲ್ಲಿ ದಾಖಲೀಕರಣಕ್ಕೆ ಅನುಕೂಲಕರವಾಗಿ ಮತ್ತು ಕರ್ನಾಟಕ ನೃತ್ಯಪರಂಪರೆಗೆ ಸೂಕ್ತ ಮನ್ನಣೆ ದೊರಕುವ ನಿಟ್ಟಿನ ಪ್ರಯತ್ನವಾಗಿರುವುದು ಶ್ಲಾಘನೀಯ. ಈ ಹಿನ್ನಲೆಯಲ್ಲಿ ಹಿರಿಯ ಕಲಾ ಸಂಶೋಧಕ ಡಾ. ಸುನಿಲ್ ಕೊಠಾರಿ ಅವರ ಉಪಸ್ಥಿತಿ ಹೊಸ ಭಾಷ್ಯ ಬರೆಯಬಲ್ಲುದೆಂಬ ಭರವಸೆಯಿದೆ.
ಈ ಸಂದರ್ಭದಲ್ಲಿ [...]

ಇದೋ..ಪ್ರೀತಿಪೂರ್ವಕ ಆಹ್ವಾನ

Sunday, February 13th, 2011

ಬನ್ನಿ..ವಿಮರ್ಶೆಗಳ ಮೌಲ್ಯವನ್ನು ನಿಮ್ಮ ಬರೆವಣಿಗೆಯ ಮೂಲಕ ಹೆಚ್ಚಿಸಿ…