ಅಂಕಣಗಳು

Subscribe


 

ಪ್ರೊ. ಜಯಾ ಅವರಿಗೆ ಮರಣಾನಂತರದ ಪ್ರಶಸ್ತಿ ಸಿಗಬೇಕು

Posted On: Friday, June 14th, 2013
1 Star2 Stars3 Stars4 Stars5 Stars (No Ratings Yet)
Loading...

Author: ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು.

ನೃತ್ಯದ ಸಾಮೀಪ್ಯದಲ್ಲಿಯೇ ವಿದಾಯ ಸಲ್ಲಿಸಿದ ಅಪರೂಪದ ಕಲಾವಿದೆಯೇ ಇವರೆಂದು ಸಾದರಪಡಿಸಿದ ವಾರ್ಷಿಕ ವಿಶೇಷ ಸಂಚಿಕೆಯ ಶ್ರದ್ಧಾಂಜಲಿ ಲೇಖನ ನೃತ್ಯಲೋಕದಿಂದ ಮರೆಯಾದ ಮಾಣಿಕ್ಯ ಪ್ರೊ. ಜಯಾ ನಿಜವಾಗಿಯೂ ಉನ್ನತಪ್ರಶಸ್ತಿಗೆ ಭಾಜಕರಾಗಬೇಕಾಗಿದ್ದವರು. ಬಾಲಕಿಯಾಗಿದ್ದಾಗಲೇ ಸಾಧಕಿಯೂ ಲೇಖಕಿಯೂ ಆಗಿ ಮೆರೆದ ಈ ಹೆಣ್ಮಗಳು ಕೊನೆಯುಸಿರಿನವರೆಗೂ ಕುಮಾರಿಯಾಗಿಯೇ ಉಳಿದರು. ಪ್ರೊಫೆಸರ್ ಅನ್ನಿಸಿಕೊಂಡರು; ನೃತ್ಯಜಗತ್ತಿಗೆ ಗ್ರಂಥಗಳನ್ನು ಬರೆದು ಪಠ್ಯಪುಸ್ತಕವಾಗಿಸಿದರು. ಇಷ್ಟೇ ಆಗಿದ್ದರೆ ಈ ಬರೆಹದ ಕುರಿತಾಗಿಯೇ ಇಷ್ಟು ಹೇಳಬೇಕಾಗಿರಲಿಲ್ಲ. ಆದರೆ ಇಷ್ಟೆಲ್ಲಾ ಸಂಪನ್ನೆಯಾಗಿದ್ದರೂ ಜನಮನ ಮನ್ನಣೆ ಪಡೆದಿದ್ದರೂ ಒಂದೇ ಒಂದು ಪ್ರಶಸ್ತಿಯಾಗಲೀ ಇನ್ನಿತರ ಗೌರವಗಳಾಗಲೀ ಜಯಾ ಅವರಿಗೆ ಬರಲೇ ಇಲ್ಲ. ಸರಕಾರ ಯಾವುದೇ ರೀತಿಯಿಂದ ಗೌರವಿಸಲಿಲ್ಲ ಎನ್ನುವ ಕಟುಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಆದರೆ ಇನ್ನು ಮುಂದಕ್ಕಾದರೂ ಇದನ್ನು ಸರಿಪಡಿಸಬೇಕೆಂಬ ಇರಾದೆ ಇರುವುದೇ ಹೌದಾದಲ್ಲಿ ಮರಣಾನಂತರದ ಪ್ರಶಸ್ತಿ ಎಂಬ ವಿಭಾಗದಲ್ಲಿ ಗುರುತಿಸಿಕೊಡುವಂತೆ ಮಾಡಬೇಕು.

 

Leave a Reply

*

code