ಅಂಕಣಗಳು

Subscribe


 

ಮಂಜೀರ ತುಂಬಾ ಇಷ್ಟ

Posted On: Sunday, August 15th, 2010
1 Star2 Stars3 Stars4 Stars5 Stars (No Ratings Yet)
Loading...

Author: -ವಿದ್ವಾನ್ ಜನಾರ್ಧನ್,ಕೀರಿಕ್ಕಾಡು ವನಮಾಲ ಕೇಶವ ಭಟ್ಟ, ಮತ್ತಿತರರು

ಮಂಜೀರ ತುಂಬಾ ಇಷ್ಟವಾಯಿತು. ಚೆನ್ನಾಗಿ ಬರೆದಿದ್ದೀರಿ.

– ಶ್ರೀನಿವಾಸ ದೇಶಪಾಂಡೆ, ಮಂಗಳೂರು.

-ಸಿಬಂತಿ ಪದ್ಮನಾಭ, ಪ್ರಾಧ್ಯಾಪಕರು, ತುಮಕೂರು.

-ಎನ್. ವಿ. ವೈದ್ಯ, ಬೆಂಗಳೂರು.

ಮಂಜೀರದಲ್ಲಿ ನೀವು ರಿಯಾಲಿಟಿ ಶೋಗಳ ಕೆಟ್ಟ ಪರಿಣಾಮದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ರುಕ್ಮಿಣೀ ದೇವಿ ಅರುಂಡೇಲ್ ಬಗ್ಗೆ ಅಷ್ಟೊಂದು ಮಾಹಿತಿ ಮತ್ತು ಅಪರೂಪದ ಫೋಟೋಗಳು ಯಾವುದೇ ಪತ್ರಿಕೆಗಳಲ್ಲೂ ನೋಡಿರಲಿಲ್ಲ. ನಂಗಂತೂ ರುಕ್ಮಿಣೀ ದೇವಿ ಅಂಕಣ ಬಹಳ ಇಷ್ಟ.

-ಸುರೇಶ್ ಬಿ.ವಿ.ಜಾಲಹಳ್ಳಿ, ರಾಯಚೂರು.

ಯಕ್ಷರಂಗದ ಮೇರು ಕಲಾವಿದರೆಂಬ ಪ್ರಸಿದ್ಧಿಗೆ ಭಾಜನರಾದ ಹರಿದಾಸ ಮಲ್ಪೆ ರಾಮದಾಸ ಸಾಮಗರಿಗರ್ಪಿಸಿದ ಭಾಷ್ಪಾಂಜಲಿ ನುಡಿ ನಮನ, ಯಕ್ಷಗಾನ ಪ್ರೇಮಿಗಳ ನೆನಪಿನ ಭಂಡಾರದಲ್ಲಿ ಸ್ಥಿರವಾಗಿ ಉಳಿದು ಆಗಾಗ ನೆನವರಿಕೆಯ ಕನವರಿಕೆಯಲ್ಲಿ ನಾದ ಮಾಧುರ್ಯ ನೀಡುತ್ತಿರುವ ೨೦ ವರ್ಷಗಳ ಹಿಂದೆಯೇ ಅಸ್ತಂಗತರಾದ ಗುಂಡ್ಮಿ ಕಾಳಿಂಗ ನಾವುಡ ಭಾಗವತರ ಜೀವನಚಿತ್ರಣದ ಇಂದಿನ ಪುಟದರ್ಶನ, ಹಾಗೆಯೇ ಸ್ಥಿರಶೀರ್ಷಿಕೆಗಳಾದ ಮಂಜೀರ, ನರ್ತನ ಸುರಭಿ, ಲಲಿತ ಲಹರಿ, ಹಸ್ತಮಯೂರಿ, ದರ್ಪಣ, ಒಳನೋಟವೇ ಮುಂತಾದ ವಿನ್ಯಾಸಗಳ ಭಾವನಾಲಹರಿಗಳನ್ನೊಳಗೊಂಡ ನೂಪುರ ಭ್ರಮರಿಯ ಜೇಷ್ಠ-ಆಷಾಢ ಸಂಚಿಕೆ ಆಹ್ಲಾದಕರವಾಗಿಯೇ ಮೂಡಿಬಂದಿದೆ. ಅಭಿನಂದನೆಗಳೊಂದಿಗೆ ಹಾರ್ದ್ಸಿಕ ಶುಭಾಷಯಗಳು.

-ಕೀರಿಕ್ಕಾಡು ವನಮಾಲ ಕೇಶವ ಭಟ್ಟ, ಬನಾರಿ, ಕಾಸರಗೋಡು.

ಭ್ರಮರಿ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಪತ್ರಿಕೆಯು ನೃತ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಲಾವಿದರೆಲ್ಲರಿಗೂ ಸಂಗ್ರಹಯೋಗ್ಯವಾಗಿದೆ. ತಮ್ಮ ಶ್ರಮಕ್ಕೆ ಧನ್ಯವಾದಗಳು.

-ವಿದ್ವಾನ್ ಜನಾರ್ಧನ್, ‘ನಾಟ್ಯತರಂಗ’, ಸಾಗರ.

Leave a Reply

*

code