ಅಂಕಣಗಳು

ನೂಪುರ ಪತ್ರಿಕೆ

ನಾಲ್ಕನೇ ಸಂಪುಟದ ಚತುರ್ಥ ಸಂಚಿಕೆ -ವರ್ಷ ವೈಭವ{ ಶ್ರಾವಣ- ಭಾದ್ರಪದ ( ಜುಲೈ ಆಗಸ್ಟ್ ೨೦೧೦) ಸಂಚಿಕೆ}

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

‘ವರ್ಷ ವೈಭವ’-(ಜುಲೈ-ಆಗಸ್ಟ್ ೨೦೦೯)

  • ಸಂಪಾದಕಿ ; 15 August, 2009
  • ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಪಾತಾಳ ವೆಂಕಟ್ರಮಣ ಭಟ್, ಮಂಗಳೂರಿನ ಕನ್ನಡ ಉಪನ್ಯಾಸಕ, ಸಾಹಿತಿ ಮಹಾಲಿಂಗ ಭಟ್, ಆಳ್ವಾಸ್ ಕಾಲೇಜು ಉಪನ್ಯಾಸಕರಾದ ಹರೀಶ್ ಟಿ.ಜಿ., ಮತ್ತು ಸೌಮ್ಯ ಆಚಾರ್, ಮೂಡಬಿದಿರೆಯ ನೃತ್ಯ ಪದವಿ ವಿದ್ಯಾರ್ಥಿನಿ ಮಾಳವಿಕಾ, ಗೋವಾದ ವಸಂತ ಪ್ರಕಾಶ್, ಸುಳ್ಯದ ಯಕ್ಷಗಾನ ಚಿಂತಕರಾದ ಪ್ರಕಾಶ್ ಮೂಡಿತ್ತಾಯ, ಶಶಿಧರ ಕೊಕುಳಿ, ವೆಂಕಟ್ರಮಣ ಭಟ್, ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವಿದುಷಿ ಸಹನಾ ಭಟ್, ಪುತ್ತೂರಿನ ಶಿವರಾಜ ಭಟ್, ಮೂಕಾಂಬಿಕಾ ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ತೇಜಸ್ವಿನೀ, ತೇಜಸ್ ಎಂ.ಪಿ, ರೋಹಿಣಿ, ಸರಸ್ವತೀ ವಾದ್ಯ ಕೇಂದ್ರದ ಮೇಘಾ ಆರ್.ದೇವಾಡಿಗ, ಬಂಟ್ವಾಳದ ದಾಕ್ಷಾಯಿಣಿ, ಚಿಕ್ಕಮಗಳೂರಿನ ನಯನಾ ಬಿ.ವೈ ಈ ಸಾಲಿನ ಸದಸ್ಯರಾಗಿದ್ದಾರೆ.

    ತುಂಬಾ ಮಾಹಿತಿಪ್ರದವಾದ ಜರ್ನಲ್. ಚೆನ್ನೈಯಲ್ಲಿ ಇಂತಹ ನಿಯತಕಾಲಿಕೆಗಳು ಸಾಕಷ್ಟು ದೊರೆಯುತ್ತವೆ. ಆದರೆ ತವರುನಾಡು ಕರ್ನಾಟಕದಲ್ಲಿ ಸಂಗೀತ-ನೃತ್ಯಕ್ಕೆ ಸಂಬಂಧಿಸಿದಂತೆ ಕಲಾವಿದರನ್ನು ಉತ್ತೇಜಿಸುವ ಪತ್ರಿಕೆಗಳು ತೀರಾ ವಿರಳ. ಈ ನಿಟ್ಟಿನಲ್ಲಿ ನೂಪುರ ಭ್ರಮರಿ ನಿಜಕ್ಕೂ ಕಲಾವಿದರ ಬೆನ್ನೆಲುಬು.

    -ವಾಣಿಶ್ರೀ ರವಿಶಂಕರ್, ಚೆನ್ನೈ.


    ಸ್ತ್ರೀಯರು ಯಕ್ಷಗಾನ ಹಿಮ್ಮೇಳದಲ್ಲಿ ಅಭಿವೃದ್ಧಿ, ಯಶಸ್ಸು ಕಾಣುತ್ತಿರುವ ಕುರಿತು ಕಳೆದೆರಡು ಸಂಚಿಕೆಗಳಲ್ಲಿ ಓದಿ ತುಂಬಾ ಖುಷಿಯಾಯಿತು. ಬದಲಾಗುವ ತಾಂತ್ರಿಕತೆಯ ಕಾಲಘಟ್ಟದಲ್ಲಿ ಯಕ್ಷಗಾನದ ಉಳಿಯುವಿಕೆಗೆ ತಮ್ಮ ಈ ಸೇವೆ ನಿರಂತರವಾಗಿ ಅರ್ಪಣೆಯಾಗಲಿ.

    -ವಸಂತ ಪ್ರಕಾಶ್, ಪಣಜಿ, ಗೋವಾ.

    ನೂಪುರ ಭ್ರಮರಿಯ ಕಳೆದ ಸಂಚಿಕೆ ವಿಷಯ-ವೈವಿಧ್ಯತೆಗಳಿಂದ ಕೂಡಿ ಮನ ಹರುಷಗೊಳಿಸಿತು. ಇದೇ ರೀತಿಯ ಚಿಂತನಶೀಲ ಬರಹಗಳಿಂದ ಭ್ರಮರಿಯು ಮನೆ-ಮನೆಗಳಲ್ಲಿ, ಜನಮನಗಳಲ್ಲಿ ವಿರಾಜಿಸುವಂತಾಗಲಿ.

    -ಕೀರಿಕ್ಕಾಡು ವನಮಾಲಾ ಕೇಶವ ಭಟ್, ಕಾಸರಗೋಡು.


    ಬರಹಗಾರನಾಗಿರುವ ನನ್ನ ಸಾಂಸ್ಕೃತಿಕ ಜ್ಞಾನ ಮತ್ತು ದೃಷ್ಟಿಕೋನದ ಬೆಳವಣಿಗೆಗೆ ಭ್ರಮರಿಯಿಂದಾಗಿ ತುಂಬಾ ಸಹಕಾರಿಯಾಗುತ್ತಿದೆ. ಭ್ರಮರಿಯ ಓದಿನಿಂದ ವಿಸ್ತರಿಸುತ್ತಿರುವ ನನ್ನ ಭಾರತೀಯ ಕಲೆಗಳ ಬಗೆಗಿನ ವಿಚಾರ ನನ್ನನ್ನು ಶಿರಸಿಯ ಶಾಸ್ತ್ರೀಯ ಮತ್ತು ಜನಪದ ನೃತ್ಯ ಸ್ಪರ್ಧೆಗಳಲ್ಲಿ ನಿರ್ಣಾಯಕನಾಗಿ ಜವಾಬ್ದಾರಿ ನಿರ್ವಹಿಸಲು ಸಹಾಯಕವಾಯಿತು. ತಿಳುವಳಿಕೆ ಹೆಚ್ಚಿಸಿದ ಭ್ರಮರಿಗೂ, ಭ್ರಮರಿಯ ಬಳಗಕ್ಕೂ ಚಿರರುಣಿ.

    -ಸಂಜಯ್ ಭಟ್ ಬೆಣ್ಣೆ, ಶಿರಸಿ.

    Rate this Article:

    1 Star2 Stars3 Stars4 Stars5 Stars (No Ratings Yet)
    Loading ... Loading ...

    Leave a Reply