ಅಂಕಣಗಳು

Subscribe


 

ಕನ್ನಡ ಪತ್ರಿಕೋದ್ಯಮದಲ್ಲಿ ಒಳ್ಳೆಯ ಪ್ರಯತ್ನ- ನೂಪುರ ಭ್ರಮರಿ

Posted On: Friday, November 7th, 2008
1 Star2 Stars3 Stars4 Stars5 Stars (No Ratings Yet)
Loading...

Author: Multiple Authors

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆ, ಮಂಗಳೂರು ಚಂದ್ರದೀಪ ನೃತ್ಯಕಲಾಶಾಲೆಯ ಪ್ರಾಂಶುಪಾಲೆ ವಿದುಷಿ ವೀಣಾ ಕಾರಂತ್, ಮಂಗಳೂರು ಕನ್ನಡ ಅಧ್ಯಯನ ವಿಭಾಗದ ಪ್ರವಾಚಕಿ ಡಾ| ಸಬೀಹಾ ಭೂಮಿಗೌಡ, ಉಡುಪಿಯ ವಿಮರ್ಶಕ ವಿದ್ವಾಂಸರಾದ ಉದ್ಯಾವರ ಮಾಧವ ಆಚಾರ್ಯ, ಮತ್ತಿತರರು ಹರಸಿದ್ದಾರೆ, ಹಾರೈಸಿದ್ದಾರೆ, ಅಭಿನಂದಿಸಿದ್ದಾರೆ…

ಅವರಲ್ಲದೇ…

ಬೆಡಗಿನ ಕೊಡಗಿನ ಮಡಿಕೇರಿಯಿಂದ ಬಿಡುಗಡೆಯಾಗುತ್ತಿರುವ ನೂಪುರ ಭ್ರಮರಿಯನ್ನು ಓದಿ ಮೆಚ್ಚುಗೆಯಾಯಿತು. ಈ ನಿಟ್ಟಿನಲ್ಲಿ ಗಟ್ಟಿ ಮನಸ್ಸಿನ ತಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಜನಸಾಮಾನ್ಯರ ಬೆಂಬಲವೂ ಒಟ್ಟುಗೂಡಿ ನೂಪುರದ ಮಧುರ ಧ್ವನಿ ಮನೆಮನೆಗೆ ತಲುಪುವಂತಾಗಲಿ ಎಂದು ಹಾರೈಸುತ್ತೇನೆ. ಅಭಿನಂದನೆಗಳು.ಬೆಡಗಿನ ಕೊಡಗಿನ ಮಡಿಕೇರಿಯಿಂದ ಬಿಡುಗಡೆಯಾಗುತ್ತಿರುವ ನೂಪುರ ಭ್ರಮರಿಯನ್ನು ಓದಿ ಮೆಚ್ಚುಗೆಯಾಯಿತು. ಈ ನಿಟ್ಟಿನಲ್ಲಿ ಗಟ್ಟಿ ಮನಸ್ಸಿನ ತಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಜನಸಾಮಾನ್ಯರ ಬೆಂಬಲವೂ ಒಟ್ಟುಗೂಡಿ ನೂಪುರದ ಮಧುರ ಧ್ವನಿ ಮನೆಮನೆಗೆ ತಲುಪುವಂತಾಗಲಿ ಎಂದು ಹಾರೈಸುತ್ತೇನೆ. ಅಭಿನಂದನೆಗಳು.

ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ,

ಕಾಸರಗೋಡು.

ಸಂಚಿಕೆ – ೧೦
ಚಿಕ್ಕದಾದರೂ ಚೊಕ್ಕವಾಗಿ ಸ್ಪಷ್ಟವಾಗಿದೆ ಈ ಶುದ್ಧ ಕಲಾತ್ಮಕ ಪತ್ರಿಕೆ. ಇಂಥದ್ದೇ ಪತ್ರಿಕೆ ಹಾಸಣಗಿ ಗಣಪತಿ ಭಟ್ಟರ ಹಿಂದೂಸ್ಥಾನೀ ಸಂಗೀತಕ್ಕೆ ಮೀಸಲಾದ ನಾದಗ್ರಾಮ ಕೆಲವೇ ಸಂಚಿಕೆಗಳಲ್ಲಿ ಮಂಗಳ ಹಾಡಿತ್ತು. ಯಕ್ಷಗಾನ ಪತ್ರಿಕೆ ಮೂರ್ನಾಲ್ಕು ಸಲ ಮೇಲೆದ್ದರೂ ದೀರ್ಘಕಾಲ ಉಳಿಯಲಿಲ್ಲ. ಅದರಂತೆ ಉಳಿದ ಅನೇಕ ಪತ್ರಿಕೆಗಳೂ ಕೂಡಾ. ಇವೆಲ್ಲವನ್ನೂ ನಿಮ್ಮನ್ನೂ ಅಧೀರರನ್ನಾಗಿ ಮಾಡಲು ಬರೆಯುತ್ತಿಲ್ಲ. ಈ ಮಾರ್ಗದಲ್ಲಿ ದಿಟ್ಟತನ ನಿಮ್ಮನ್ನು ಮುಂದುವರೆಸಲಿ. ಪತ್ರಿಕೆ ದೀರ್ಘಕಾಲ ಬಾಳಲಿ, ಬೆಳೆಯಲಿ.

ಮೋಹನ .ಗ. ಹೆಗಡೆ.,

ಸಾಗರ.

ಸಂಚಿಕೆ – ೧೦
ನೂಪುರ ಭ್ರಮರಿ ನನ್ನ ನಿರೀಕ್ಷೆಗಿಂತಲೂ ಮೀರಿ ಅತ್ಯಂತ ಸುದೃಢವಾಗಿ ಬರುತ್ತಿದೆ. ಖಂಡಿತಕ್ಕೂ ಸಾಧನೆಯೇ ಸರಿ! ತುಂಬು ಹೃದಯದ ಅಭಿನಂದನೆಗಳು. ಖಂಡಿತಕ್ಕೂ ನೃತ್ಯ-ಸಂಗೀತದ ಕುರಿತಾದ ಈ ಪತ್ರಿಕೆಯು ಕಲಾಸಕ್ತರಿಗೆ, ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿ. ಪತ್ರಿಕೆಯ ಬೆಳವಣಿಗೆ ಇನ್ನೂ ಆಗಬೇಕಿದೆ. ಅದಾಗ್ಯೂ ನಿಮ್ಮ ಪ್ರಯತ್ನ ಅತ್ಯಂತ ಸ್ತುತ್ಯಾರ್ಹ. ನಿರಂತರವಾಗಿ ಈ ಕಾರ್ಯದಲ್ಲಿ ಯಶಸ್ಸು ನಿಮ್ಮೆಡೆಗೆ ಹರಿದುಬರುತ್ತಿರಲಿ. ಬೆಳೆಯಬೇಕು-ಬೆಳಗಬೇಕು-ನೂಪುರದ ಧ್ವನಿ ಎಲ್ಲೆಡೆ ಝಲ್ಲೆನ್ನಬೇಕು. ವಿಷ್ಣುಪ್ರಸಾದ್ ಎನ್., ಮಂಗಳೂರು. ಸಂಚಿಕೆ – ೧೦
ನೂಪುರದ ಕಳೆದ ಸಂಚಿಕೆಯ ಮುಖಪುಟ ಸುಂದರವಾಗಿ ಮೂಡಿ ಮುದ ನೀಡಿತ್ತು. ಸಂಪಾದಕೀಯದ ಶೈಲಿ ಹಿಡಿಸಿತು. ಪತ್ರಿಕೆ ಚೆನ್ನಾಗಿ ಮೂಡಿ ಬರುತ್ತಿದೆ.

ರವಿಶಂಕರ ಶಾಸ್ತ್ರಿ,

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್, ಬೆಂಗಳೂರು.

ಸಂಚಿಕೆ – ೧೦
ನಿಮ್ಮ ಕನಸಿನ ಕೂಸಾದ ನೂಪುರ ಭ್ರಮರಿಯ ಯಶಸ್ಸನ್ನು ಕಂಡು ಸಂತಸವಾಗುತ್ತಿದೆ. ಫಲಪ್ರದವಾಗಿರುವ ಈ ಯಾತ್ರೆ ಫಲದಾಯಕವಾಗಿ ಮುಂದುವರಿಯಲಿ. ನಿಮ್ಮ ದೃಢ ಶ್ರಮಕ್ಕೆ ಯಶಸ್ಸು ಎಂದೆಂದಿಗೂ ಸಿಗಲಿ.

ರಾಜೇಶ್ ಪದ್ಮಾರ್,

ನಮಸ್ತೇ ಇಂಡಿಯಾ, ಬೆಂಗಳೂರು.

ಸಂಚಿಕೆ – ೧೦
ಜೊತೆಗೆ,…ಖ್ಯಾತ ಅಂಕಣಕಾರ ಶ್ರೀವತ್ಸ ಜೋಷಿ, ಶಿವಮೊಗ್ಗದ ನಾಟ್ಯ ಗುರು ಜನಾರ್ಧನ, ಮೈಸೂರಿನ ಕಲಾವಿದರುಗಳಾದ ಬದರಿ ದಿವ್ಯಭೂಷಣ್ ಮತ್ತು ಅಂಜನಾ ಭೂಷಣ್, ದೃಷ್ಠಿ ಪತ್ರಿಕೆಯ ಸಂಪಾದಕಿ, ಕಲಾವಿದೆ ಅನುರಾಧಾ ವಿಕ್ರಾಂತ್, ಪುತ್ತೂರಿನ ಪಶುಪತಿ ಶರ್ಮ ಶುಭ ಹಾರೈಸಿದ್ದಾರೆ. ಸಂಚಿಕೆ – ೧೦
ನೂಪುರ ಭ್ರಮರಿಯ ಸಂಚಿಕೆಗಳು ನನಗೆ ತುಂಬಾ ಇಷ್ಟ. ಕೆಲವು ಸಂಚಿಕೆಗಳು ನಿಯಮಿತವಾಗಿ ದೊರೆತಿಲ್ಲ. ಐ ಮಿಸ್ ಇಟ್ ! ಕಳುಹಿಸಿಕೊಡುವಿರಾ ?

ಆರ್.ವಾಸುದೇವ್,

ಗುರುಗುಹ ನಾಟ್ಯಗಾನ ನಿಲಯಂ. ಬೆಂಗಳೂರು.

ಸಂಚಿಕೆ – ೯

(ಖಂಡಿತಾ. ಯಾವ ಸಂಚಿಕೆಗಳು ಕೈ ತಪ್ಪಿ ಹೋಗಿವೆ ಎಂದು ತಿಳಿಸಿ. ಕಳಿಸಿಕೊಡುವ ವ್ಯವಸ್ಥೆ ಮಾಡುತ್ತೇವೆ. ಪ್ರತೀ ಸಂಚಿಕೆಗೂ ಓದುಗರು ಪ್ರತ್ಯುತ್ತರಿಸಿದಲ್ಲಿ ಸಂಚಿಕೆಗಳು ತಲುಪುತ್ತವೆಯೋ, ಇಲ್ಲವೋ ಎಂಬುದು ನಮಗೆ ಖಾತ್ರಿಯಾಗುತ್ತದೆ. ತಲುಪಿಸುವಲ್ಲಿ ಅನುಕೂಲವಾಗುತ್ತದೆ. ನಿಮ್ಮ ಸದಸ್ಯತ್ವವನ್ನು ಖಾತ್ರಿ ಮಾಡಿಕೊಳ್ಳಿ.

ನೂಪುರ ಬಳಗ)

ಅಭಿನಂದನೆಗಳು. ಬದುಕಿಗಿಷ್ಟು ಬಣ್ಣ ತುಂಬುವ ಇಂತಹಾ ಪ್ರಯತ್ನ ಮಾಡಹೊರಟಿರುವ ನಿಮ್ಮೆಲ್ಲರ ಈ ಸೃಜನಶೀಲತೆಗೆ ಶುಭಾಕಾಂಕ್ಷೆಗಳು. ಮಡಿಕೇರಿಯ ಸುಂದರ ಪ್ರಕೃತಿಯ ಹಿನ್ನಲೆಯಲ್ಲಿ ಪುಸ್ತಕದ ಗೀಳಿನ, ಚೆಂದದ ನಾಟ್ಯದ ಒಲವಿನ ಭಾಷ್ಯ ಬರೆಯಹೊರಟಿರುವ ನಿಮ್ಮ ಈ ದಿನಗಳಿಗೆ ಒಡಲಾಳದ ಹಾರೈಕೆ ನನ್ನಿಂದ…

ಸಂಪಾದಕೀಯ ಸುಂದರವಾಗಿದೆ, ಆಪ್ತವಾಗಿದೆ ಮುಖ್ಯವಾಗಿ ಸಂಭ್ರಮದ ಸುಂದರ ಘಳಿಗೆಗಳನ್ನು ಅಕ್ಷರರೂಪಕ್ಕಿಳಿಸುವಲ್ಲಿ ಗೆದ್ದಿದೆ. ಮಿಸ್ ಮಾಡ್ಕೊಂಡೆ ಅನ್ನೋ ಸಂಜೆ…!!!!!

ಕಣವಿಯವರ ಕವನ ಈ ಬಾರಿಯ ಹೈಲೈಟ್ ಅನ್ನಿಸ್ತು. ಋತುರಾಜ ಆಗಮನಕ್ಕೆ ಭ್ರಮರಿ ಬಳಗದಿಂದ ಒಳ್ಳೆಯ ಆಲಿಂಗನ.

ಚೆಂದಾಗಿ ಬರೆಯಿರಿ. ಶಿಸ್ತಾಗಿ ದುಡಿಯಿರಿ. ಅಂದವಾಗಿ ನಗುನಗುತ್ತಾ ಇರಿ. ಒಲವಿರಲಿ.

ಕಪಿಲಾ ಶ್ರೀಧರ್, ಬರಹಗಾರರು, ಬೆಂಗಳೂರು. ಸಂಚಿಕೆ – ೯
ಇಂತಹ ಒಳ್ಳೆಯ ಪತ್ರಿಕೆಗೆ ಧನ್ಯವಾದ ಸಲ್ಲಲೇಬೇಕು. ಕಲೆಯ ಕುರಿತಾದ ನಿಮ್ಮ ಆಸಕ್ತಿ ಅಭಿನಂದನೀಯ. ಭವಿಷ್ಯದಲ್ಲೂ ಈ ಆಸಕ್ತಿ ಬೆಳೆಯಲಿ ಮತ್ತು ಮತ್ತಷ್ಟು ಜನರನ್ನು ಬೆಳೆಸಲಿ. ನಾವೆಲ್ಲರೂ ಜೊತೆಗಿದ್ದೇವೆ.

ಸಾಯಿ ವೆಂಕಟೇಶ್, ಉಪಾಧ್ಯಕ್ಷರು,

ಕರ್ನಾಟಕ ನೃತ್ಯ ಕಲಾಪರಿಷತ್

(ಕಾರ್ಯದರ್ಶಿ,

ವರ್ಲ್ಡ್ ಡ್ಯಾನ್ಸ್ ಅಲೆಯನ್ಸ್-

ಕರ್ನಾಟಕ ಛಾಪ್ಟರ್) ಬೆಂಗಳೂರು.

ಸಂಚಿಕೆ – ೯
ನಿಮ್ಮ ಪ್ರಯತ್ನ ಪ್ರಶಂಸನೀಯ. ನೂಪುರ ಭ್ರಮರಿಯ ಗುಂಜಾರವ ಪಸರಿಸಲಿ ನಿರಂತರ.

ಶ್ರೀಕಾಂತ್ ಹೆಗಡೆ,

ಸಂಪಾದಕರು, ಹವ್ಯಕ ಮಾಸಿಕ, ಬೆಂಗಳೂರು.

ಸಂಚಿಕೆ – ೯
ನೂಪುರ ಭ್ರಮರಿ ತುಂಬಾ ಚೆನ್ನಾಗಿದೆ. … ಮಡಿಕೇರಿಯಂತಹ ಪುಟ್ಟ ನಗರದಲ್ಲಿದ್ದರೂ, ಹಿರಿಯ ಪ್ರಯತ್ನ ಮಾಡುತ್ತಿರುವ ನಿಮಗೆ ಅಭಿನಂದನೆಗಳು. ವೆಬ್ ಸೈಟ್ ಚೆನ್ನಾಗಿ ಬಂದಿದೆ. ಸಿಂಪ್ಲಿ ಗುಡ್. ಗುಡ್‌ಲಕ್.

ಪೂರ್ಣಾ ಸುರೇಶ್,

ಅಕಾಡೆಮಿ ಆಫ್ ಇಂಡಿಯನ್ ಪರ್‌ಫಾರ್ಮಿಂಗ್ ಆರ್ಟ್ಸ್, ಬೆಂಗಳೂರು.

-ನಯನಾ, ಬೆಂಗಳೂರು.

– ದೀಪಾ ಶಿವಮೊಗ್ಗ, ಮೈಸೂರು.

-ಸ್ಟೀವನ್ ರೇಗೋ, ವರದಿಗಾರರು, ಮಂಗಳೂರು.

ಸಂಚಿಕೆ – ೯
ವೆಬ್‌ಸೈಟ್ ಸುಂದರವಾಗಿ ಮೂಡಿಬಂದಿದೆ. ಆದರೆ ಓದುವಾಗ ಕೆಲವೊಂದು ಪುಟಗಳಲ್ಲಿ ಸಮಸ್ಯೆಗಳು ಕಂಡುಬರುತ್ತವೆ. ಏನೇ ಇರಲಿ, ನಿಜಕ್ಕೂ ಪ್ರಶಂಸನೀಯ ಪ್ರಯತ್ನ. ಹೆಮ್ಮೆಯೆನಿಸುತ್ತದೆ. ಇಂತಹ ಕಾರ್ಯ ಕಷ್ಟಕರ, ಸವಾಲಿನ ವಿಷಯ ಎಂಬುದು ನನಗೆ ಗೊತ್ತಿದೆ. ಕೀಪ್ ಇಟ್ ಅಪ್. ಶುಭಾಕಾಂಕ್ಷೆಗಳು.

-ಮುರಳಿ ಎನ್.,

ಎಕ್ಸಿಕ್ಯೂಟಿವ್, ಆಕ್ಸಿಸ್ ಬ್ಯಾಂಕ್,

ರಾಯಚೂರು.

ಸಂಚಿಕೆ – ೯
ಉತ್ತಮ ಪತ್ರಿಕೆ. ಒಳ್ಳೆಯ ಮಾಹಿತಿಗಳನ್ನು ಹೊಂದಿದೆ.

-ಗಾಯತ್ರೀ ರಾಘವೇಂದ್ರ,

ಬೆಟ್ಟಕೊಪ್ಪ.

ಸಂಚಿಕೆ – ೯
ಪತ್ರಿಕೆ ತುಂಬಾ ಇಷ್ಟ ಆಗಿದೆ. ಮುಂದಿನ ದಿನಗಳಲ್ಲಿ ಹೊಸ ಆಯಾಮ ಪಡೆಯುವುದು ಖಂಡಿತ. ಹೃದಯಪೂರ್ವಕ ವಂದನೆಗಳು. -ಶಶಿಧರ್, ದಾವಣಗೆರೆ ಸಂಚಿಕೆ – ೯
ಪತ್ರಿಕೆಯ ವಿಷಯ ವೈವಿಧ್ಯತೆಗಳು ಸಾಮಾನ್ಯ ಓದುಗನಿಗೆ ಕಷ್ಟವೆನಿಸುವುದಿದೆ ಮತ್ತು ಇದನ್ನು ಸುಖಾಸುಮ್ಮನೆ ಸಾಮಾನ್ಯ ಭಾವದಲ್ಲೂ ಓದಲು ಸಾಧ್ಯವಿಲ್ಲ. ಓದಲು ಯೋಗ್ಯವಾದ, ಅರ್ಹವಾದ ಪತ್ರಿಕೆ. – ಕಿಗ್ಗಾಲು ಗಿರೀಶ್, ಕೊಡಗು. ಸಂಚಿಕೆ – ೯
ಅಭಿನಂದನೆಗಳು. ನಿಜಕ್ಕೂ ಇದು ಒಳ್ಳೆಯ ಸಂಗತಿ, ಒಳ್ಳೆಯ ಕೆಲಸ, ಒಳ್ಳೆಯ ಯೋಚನೆ. ಯಶಸ್ಸು ಸಿಗಲಿ. ಆಲ್ ದ ಬೆಸ್ಟ್. -ಶ್ರೀಲೇಖಾ ಹೆಗ್ಡೆ, ಬೆಂಗಳೂರು. ಸಂಚಿಕೆ – ೯
ವೆಬ್ ಸೈಟ್ ಸುಂದರವಾಗಿ ಮೂಡಿಬಂದಿದೆ. ಪ್ರಶಂಸನೀಯ. ಒಳ್ಳೆಯ ಪ್ರಯತ್ನ. ತುಂಬಾ ಇಷ್ಟವಾಯಿತು. ಪ್ರಥಮ ಸಂಚಿಕೆಯ ಅರಂಗೇಟ್ರಂ ಬರಹವಂತೂ ಎಂದೆಂದಿಗೂ ಪ್ರಸ್ತುತ. ಶುಭವಾಗಲಿ. -ಅಕ್ಷತಾ ಸಂತೋಷ್, ಮಂಗಳೂರು. ಸಂಚಿಕೆ – ೯

ಜನರು ಬರೀ ಜನಪ್ರಿಯ ಮಾದರಿಗಳ ಬೆನ್ನು ಮಾತ್ರ ಹತ್ತಿ ಹೋಗುತ್ತಾರೆ- ಎಂಬ ಮಾತು ಬರೀ ಸುಳ್ಳು. ಏನಂತೀರಿ?

ಭ್ರಮರಿಯ ವಾರ್ಷಿಕ ಸಂಭ್ರಮಕ್ಕೆ ಶುಭ ಹಾರೈಕೆಗಳು.

-ಹರೀಶ್ ಟಿ.ಜಿ.,

ಕನ್ನಡ ಉಪನ್ಯಾಸಕರು,

ಮೂಡಬಿದಿರೆ.

ಸಂಚಿಕೆ – ೮
ನೂಪುರ ಭ್ರಮರಿಯಂತಹ ವೈಶಿಷ್ಟ್ಯಪೂರ್ಣ ಸಂಚಿಕೆಯನ್ನು ಹೊರತಂದಿರುವುದೇ ದೊಡ್ಡ ಸಾಹಸ. ಅದಕ್ಕಾಗಿ ಸಂಪೂರ್ಣ ತೊಡಗಿಸಿಕೊಂಡಂತಹ ನಿಮ್ಮಂತವರಿಂದ ಮಾತ್ರ ಈ ಕೆಲಸ ಸಾಧ್ಯ. ಅದಕ್ಕಾಗಿ ವಾರ್ಷಿಕ ಸಂಭ್ರಮದ ಶುಭಾವಸರದಲ್ಲಿ ಅಭಿನಂದಿಸುತ್ತೇನೆ. ವರ್ಷ ತುಂಬಿದ ಶುಭ ಸಂದರ್ಭದಲ್ಲಿ ವಿಶೇಷ ಸಂಚಿಕೆಯನ್ನು ಹೊರ ತಂದಿರುವುದರೊಂದಿಗೆ ಪತ್ರಿಕೆಯ ವೆಬ್ ಸೈಟ್ ಒದಗಿಸಿರುವುದು ಸಂದರ್ಭೋಚಿತ. ನಿಮ್ಮ ಮಹತ್ಸಾಧನೆಗೆ ಭಗವಂತನು ಹಾಗೂ ಸಹೃದಯರು ಎಲ್ಲಾ ರಿತಿಯ ನೆರವು ನೀಡಲೆಂದು ಹಾರೈಸುತ್ತೇನೆ.

-ಪ್ರೊ| ಎಸ್. ಪ್ರಭಾಕರ್, ಉಪಾಧ್ಯಕ್ಷರು,

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ

ಎಜುಕೇಶನಲ್ ಸೊಸೈಟಿ,

ಉಜಿರೆ.

ಸಂಚಿಕೆ – ೮
ಮಡಿಕೇರಿಯಂತಹ ಗುಡ್ಡಗಾಡು ಪ್ರದೇಶದಲ್ಲಿದ್ದು ತಾವು ನಡೆಸುವ ಕಲಾಸೇವೆ, ಸಾಹಸ ನಿಜವಾಗಿಯೂ ಸ್ತುತ್ಯಾರ್ಹ. ವಾರ್ಷಿಕ ಸಂಭ್ರಮಕ್ಕೆ ಶುಭವನ್ನಷ್ಟೇ ಅಲ್ಲದೆ, ಇನ್ನೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತೇವೆ.

ಬಿ. ದೀಪಕ್ ಕುಮಾರ್,

ನೃತ್ಯ ನಿರ್ದೇಶಕರು,

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು.

ಸಂಚಿಕೆ – ೮
ಮಡಿಕೇರಿಯಲ್ಲಿ ಒಂದು ಸಾಂಸ್ಕೃತಿಕ ಪತ್ರಿಕೆಯನ್ನು ಆರಂಭಿಸಿ ಸ್ಥಳೀಯ ಇತಿಹಾಸದಲ್ಲೂ ಹೊಸ ಬೆಳವಣಿಗೆಯನ್ನು ದಾಖಲಿಸುವ ನಿಮ್ಮ ಪ್ರಯತ್ನವು ನಿಜಕ್ಕೂ ಅಭಿನಂದನೀಯ. ಕಲಿತ ವಿದ್ಯೆಯನ್ನು ಬದುಕಿಗಾಗಿ ಉಪಯೋಗಿಸುವವರು ಕೆಲವರಾದರೆ, ಅದನ್ನು ಸೃಜನಾತ್ಮಕವಾಗಿ ವಿಸ್ತರಿಸುವವರು ಕೆಲವೇ ಕೆಲವರು. ಅಂತಹ ನಿಮ್ಮ ಅಪೂರ್ವ ಸಾಧನೆಗೆ ಪೂರ್ಣ ಯಶಸ್ಸು ಸಿಗಲೆಂದು ಹಾರೈಸುತ್ತೇನೆ.

-ಡಾ| ಚಂದ್ರಶೇಖರ ದಾಮ್ಲೆ,

ಅಧ್ಯಕ್ಷರು, ಸ್ನೇಹ ಶಿಕ್ಷಣ ಸಂಸ್ಥೆ,

ಸುಳ್ಯ.

ಸಂಚಿಕೆ – ೮
ನಿಮ್ಮ ಕಾರ್ಯ ನಿಷ್ಟೆಗೆ ಮತ್ತು ಉತ್ಸಾಹಕ್ಕೆ ಅಭಿನಂದನೆಗಳು. ನಿಜಕ್ಕೂ ನಿಮ್ಮ ಪ್ರಯತ್ನ ಕಂಡರೆ ತುಂಬಾ ಖುಷಿಯಾಗುತ್ತದೆ.

-ಶ್ರೀಶ ಕಾರಂತ,

ಬೆಂಗಳೂರು.

ಸಂಚಿಕೆ – ೮
ಅಭಿನಂದಿಸಲೇಬೇಕಾದದ್ದು! ಭ್ರಮರಿಯ ಮೂಲಕ ಪ್ರಯತ್ನದಲ್ಲಿ ಯಶಸ್ಸು ಕಾಣುತ್ತಿರುವ ನಿಮ್ಮ ಬಳಗವನ್ನು ಕಂಡು ತುಂಬಾ ಸಂತೋಷವಾಗುತ್ತಿದೆ. ಮತ್ತಷ್ಟು ಹೊಸತನ್ನು ನಿಯತಕಾಲಿಕೆಗಳ ಪ್ರಪಂಚದಲ್ಲಿ ತನ್ನಿ. ವೆಬ್‌ಸೈಟ್ ನಿಜಕ್ಕೂ ಅದ್ಭುತ ಪ್ರಯತ್ನ. ಸಿಂಪ್ಲೀ ಗ್ರೇಟ್ !

-ಅನಘಶ್ರೀ,

ಯು‌ಎಸ್‌ಎ.

ಸಂಚಿಕೆ – ೮
ನಿಮ್ಮ ಒಳ್ಳೆಯ ದೃಷಿಕೋನವನ್ನು ವೆಬ್‌ಸೈಟ್‌ನ ನಿರೂಪಣೆಯಲ್ಲೇ ಗಮನಿಸಬಹುದು. ಚೆನ್ನಾಗಿ ಮೂಡಿಬಂದಿದೆ. ನಿಮ್ಮಿಂದ ಉತ್ತಮ ಕೆಲಸ ನಡೆಯುತ್ತಿದೆ. ಬಹಳಷ್ಟು ಮಂದಿಯನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಗುಡ್ ಲಕ್.

-ವೀಣಾ ಡಿಸೋಜಾ,

ಸಾರ್ವಜನಿಕ ಸಂಪರ್ಕಾಧಿಕಾರಿ, ಬೆಂಗಳೂರು.

ಸಂಚಿಕೆ – ೭
ಇಷ್ಟೊಂದು ಕಡಿಮೆ ಅವಧಿಯಲ್ಲೇ ತನ್ನಿಂದಾದಷ್ಟೂ ಪ್ರಬುದ್ಧತೆಯನ್ನೂ, ಪೂರ್ಣತೆಯನ್ನೂ ಸಾಧಿಸಿರುವುದು ಮತ್ತು ಸಹೃದಯರನ್ನು ಸೆಳೆಯುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಆದರೂ ಮತ್ತಷ್ಟು ಪ್ರಚಾರವನ್ನು ಪತ್ರಿಕೆಗೆ ಕೊಟ್ಟಲ್ಲಿ ಬದುಕಿನ ಬಹು ಸ್ಥರದ ಜನರನ್ನು ತಲುಪಲು ಸಾಧ್ಯ.

-ಕಿಗ್ಗಾಲು ಗಿರೀಶ್,

ಬರಹಗಾರರು, ಕೊಡಗು

ಸಂಚಿಕೆ – ೬
ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸ್ ಅಪ್. ವೆಬ್‌ಸೈಟ್‌ನ್ನು ಯೂನಿಕೋಡ್ ವರ್ಶನ್‌ನಲ್ಲಿ ಬದಲಾಯಿಸಿದರೆ ಒಳಿತು. ಆಗ ವೆಬ್‌ಸೈಟ್‌ನ ವೀಕ್ಷಣೆಯಲ್ಲಿ ಅದಕ್ಕೆ ಸಂಬಂಧಿಸಿದ ಅಕ್ಷರಗಳ ಸಾಪ್ಟ್‌ವೇರ್‌ಗಳನ್ನು ಇನ್ಸ್‌ಟಾಲ್ ಮಾಡಿಕೊಳ್ಳುವುದೂ ತಪ್ಪುತ್ತದೆ.

-ಅವಿನಾಶ್,

ಚೆನ್ನೈ

ಸಂಚಿಕೆ – ೫
ಅಭಿನಂದನೆಗಳು. ಕನ್ನಡ ಪತ್ರಿಕೋದ್ಯಮದಲ್ಲಿ ಒಳ್ಳೆಯ ಪ್ರಯತ್ನವೆಂಬುದು ನಮ್ಮ ಅನಿಸಿಕೆ. ನೃತ್ಯಕ್ಕೆ ಸಂಬಂಧಿಸಿದಂತೆ ನಮ್ಮನ್ನು ತಲುಪುತ್ತಿರುವ ಪತ್ರಿಕೆಗಳನ್ನು ಕಂಡಿರುವುದೇ ಕಡಿಮೆ. ನಿಮ್ಮ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ‘ಗೆಜ್ಜೆಗಳ ಲೋಕದಲ್ಲೊಂದು ಸುತ್ತುವಿಕೆಗೆ ಯಾವತ್ತಿಗೂ ಯಶಸ್ಸು ಸಿಗಲಿ.

-ವೀಣಾ ಶ್ರೀಪಾದ್ ಮತ್ತು ಕಾವ್ಯಶ್ರೀ,

ಬೆಂಗಳೂರು.

ಸಂಚಿಕೆ – ೪
ಅತ್ಯುತ್ತಮ ಪ್ರಯತ್ನ. ಹೆಚ್ಚು ಜನರಿಗೆ ಇದರ ಪ್ರಯೋಜನವಾಗುತ್ತದೆ. ಆದ್ದರಿಂದ ಹೆಚ್ಚಿನ ಪ್ರಸಾರ ಆಗಲಿ.

-ಗುರುರಾವ್ ಕುಲಕರ್ಣಿ,

ಬೆಂಗಳೂರು.

ಸಂಚಿಕೆ – ೩

…ಹಿರಿಯ ಕವಿಯೊಬ್ಬರು ಹೇಳಿದ ಮಾತು ನೆನಪಾಯಿತು. ಬೆಟ್ಟ ಇರುವುದು ಎಲ್ಲರೂ ಹತ್ತಲಿ ಎಂದಲ್ಲ. ಕೆವರಾದರೂ ಹತ್ತಲಿ ಎಂದು… ಅದೇ ರೀತಿ ನೂಪುರ ಭ್ರಮರಿ ಎಂಬ ದ್ವೈಮಾಸಿಕ ಸಂಚಿಕೆ ಕೂಡಾ! ಬೆಟ್ಟವನ್ನು ದೂರದಿಂದಲೇ ನೋಡಿ ಸಂತೋಷಿಸುವವರು ಕೆಲವರು. ಏಕೆಂದರೆ ಅವರಿಗೆ ಹತ್ತಲು ತಾಳ್ಮೆ ಮತ್ತು ಶಕ್ತಿಯ ಕೊರತೆ. ಇನ್ನು ಕೆಲವರಿಗೆ ಬೆಟ್ಟವೇ ತಮ್ಮ ಬಳಿ ಬರಲಿ ಎಂಬ ಉದಾಸೀನ. ಮತ್ತೆ ಕೆಲವರಿಗೆ ತಮ್ಮ ಸೌಂದರ್ಯದ ಎದುರು ಬೆಟ್ಟ ಯಾವ ಮಹಾ ಎಂಬ ತಾತ್ಸಾರ. ಕೆಲವರಷ್ಟೇ ಪ್ರಂiiತ್ನಪೂರ್ವಕವಾಗಿ ಕಾಯಾ-ವಾಚಾ-ಮನಸಾ ಬೆಟ್ಟದ ಸೌಂದರ್ಯವನ್ನು ಸವಿಯುತ್ತಾ, ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಮನೋಭಾವ ಹೊಂದಿರುತ್ತಾರೆ. ಅದರಲ್ಲಿ ನೀವೂ ಕೂಡಾ ಒಬ್ಬರು ಎಂಬುದು ಖುಷಿ ಕೊಟ್ಟ ವಿಚಾರ. ಇದು ಕೇವಲ ಹೊಗಳಿಕೆಗಾಗಿ ಬರೆದ ಮಾತಲ್ಲ.

ಕಲೆ ಎಲ್ಲರಿಗೂ ಕೈಗೆಟುಕುವ ವಸ್ತುವಲ್ಲ. ಕೈಗೆಟುಕಿದವರೆಲ್ಲರಿಗೂ ಅದು ಒಲಿದು ಬರುವುದೂ ಅಪರೂಪ. ಅದರಲ್ಲೂ ಅದರ ಹೃದ್ಯ ಆನಂದವನ್ನು ಹಂಚಿಕೊಂಡು ಅನುಭವಿಸಲು ಸಹೃದಯರ ಕೊರತೆ ! ಹೀಗಿರುವಲ್ಲಿ ನೂಪುರ ಭ್ರಮರಿ ಕಲಾ ರಸಿಕರೆಡೆಗೆ ನಾಟ್ಯ ಮಯೂರಿಯಾಗಿ ತನ್ನ ಗರಿಗಳೆಡೆಯಿಂದ ಲವಲವಿಕೆ ಸೂಸುತ್ತಿರುವುದು ಮನಸ್ಸಿಗೆ ಮುದ ಕೊಡುತ್ತಿದೆ. ನಿಮ್ಮ ಶ್ರಮ ಸಾರ್ಥಕವಾಗಲಿ.

ಒಂದಿಷ್ಟು ಸಲಹೆ :

೧. ನೃತ್ಯ ಮತ್ತು ಸಂಗೀತ ಒಂದಿಲ್ಲದೆ ಇನ್ನೊಂದಿಲ್ಲ. ಹಾಗಾಗಿ ಭ್ರಮರಿಯಲ್ಲಿ ಈ ಎರಡಕ್ಕೂ ಸಮಾನ ಒತ್ತು ಕೊಡುವುದು ಉಚಿತ.

೨. ಲೇಖನಗಳು ಈಗಷ್ಟೇ ಕ್ಷೇತ್ರಕ್ಕೆ ಕಾಲಿರಿಸುವವರಿಗೆ ಪೂರಕ ಮಾಹಿತಿ ಒದಗಿಸುವಂತಾಗಲಿ. ಪಂಡಿತ ಪಾಮರ ಇಬ್ಬರಿಗೂ ವೇದಿಕೆಯಾಗಲಿ.

೩. ಸಂಗೀತ , ನೃತ್ಯ ಸಂಬಂಧಿ ಪುಸ್ತಕಗಳಿಂದಾಯ್ದ ಲೇಖನಗಳನ್ನು ಸಮಯೋಚಿತವಾಗಿ ಸಂಚಿಕೆಯಲ್ಲಿ ಬಳಸಿಕೊಳ್ಳಬಹುದು.

ನಾಗೇಶ್ ಕಾಲೂರು,

ಕಾಲೂರು, ಕೊಡಗು.

ಸಂಚಿಕೆ – ೨

1 Response to ಕನ್ನಡ ಪತ್ರಿಕೋದ್ಯಮದಲ್ಲಿ ಒಳ್ಳೆಯ ಪ್ರಯತ್ನ- ನೂಪುರ ಭ್ರಮರಿ

  1. vishwanath sunkasal

    noopura bhramari ondu maahitipoorna sangraahya patrike. i liked it

Leave a Reply

*

code