ಅಂಕಣಗಳು

Subscribe


 

ಉತ್ಸಂಗ ಹಸ್ತ

Posted On: Saturday, September 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಮೃಗಶೀರ್ಷ ಹಸ್ತಗಳನ್ನು ಸ್ವಸ್ತಿಕಾಕಾರ ಮಾಡಿ ಬಲಗೈಯನ್ನು ಎಡಭುಜದ ಬಳಿಯೂ, ಎಡಗೈಯನ್ನು ಬಲಭುಜದ ಬಳಿಯೂ ಇರಿಸುವುದು. ಅರಾಳ ಮತ್ತು ಸರ್ಪಶೀರ್ಷ ಹಸ್ತಗಳನ್ನು ಕೊಂಚ ವ್ಯತ್ಯಾಸದೊಂದಿಗೆ ಇರಿಸುವ ಕ್ರಮ ನಾಟ್ಯಶಾಸ್ತ್ರ, ಹಸ್ತಮುಕ್ತಾವಳಿಯಲ್ಲಿದೆ. ಈ ಹಸ್ತದ ಅಧಿದೇವತೆ : ಗೌತಮ.

utsanga hasta of Natyashasta

ವಿನಿಯೋಗ : ಆಲಿಂಗನ ಮಾಡುವುದು, ನಾಚಿಕೆ, ಅಂಗಾದಿಗಳನ್ನು ತೋರಿಸುವುದು, ಬಾಲಕರಿಗೆ ಶಿಕ್ಷಣ, ತೋಳ್ಬಂದಿ ಮತ್ತಿತರ ಅಲಂಕಾರಗಳು.

ಇತರೇ ವಿನಿಯೋಗ : ಮಳೆಯಿಂದ ನಡುಗುವುದು, ಕುಸ್ತಿಯಲ್ಲಿ ಶತ್ರುವನ್ನು ಬಿಗಿಯಾಗಿ ಹಿಡಿಯುವುದು, ತುಚ್ಛವಾದ ನಾಟ್ಯ, ದುಃಖವಿಚಾರ, ಹೆಚ್ಚು ಪ್ರಯತ್ನದಿಂದ ಸಾಧ್ಯವಾಗುವ ಕೆಲಸ, ಶೈತ್ಯ, ಅಲಂಕಾರ ಬೇಡ’’ ಎನ್ನುವುದು, ಜಪ, ಸಮಾಧಿ, ಯೋಗಾಭ್ಯಾಸ, ಮುಟ್ಟುವುದು, ಅದುಮುವುದು, ಬಂಧನ, ಸಿಟ್ಟು-ಅಸಹನೆ-ಈರ್ಷ್ಯೆಗಳಲ್ಲಿ ಕೈಹಿಸುಕುವುದು, ಪಲ್ಲಂಗ-ಹೊದಿಕೆ ಮುಂತಾದ ಹತ್ತಿವಸ್ತ್ರಗಳು, ಆಭರಣ, ಮಂಚಕ್ಕೆ ಹಾಕುವ ಬಟ್ಟೆಯೊಂದರ ಮೇಲ್‌ಹೊದಿಕೆ, ಕತ್ತಲೆ, ಹಾಲು ಒಸರುವುದು, ಒತ್ತುವುದು, ಕ್ಷಮಿಸಲು ನಿರಾಕರಿಸುವುದು, ಸ್ಪರ್ಶ, ತೆಗೆದುಕೊಳ್ಳುವುದು, ಅತಿಯಾದ ಮತ್ಸರ, ರಥ, ಹುಲ್ಲು, ದಿನ-ಪಾಕ್ಷಿಕ-ತಿಂಗಳು-ವರ್ಷ, ಹರುಷ, ಸಮಯವನ್ನು ಅಳೆಯುವುದು, ಮಡಚುವ ವಸ್ತು, ಶತ್ರುಗಳನ್ನು ಅದುಮುವುದು, ಮಲ್ಲಯುದ್ಧದಲ್ಲಿ ಸವಾಲೆಸೆಯುವುದು, ಒಪ್ಪಂದ, ಸಾಧು ಭಾವ, ಸ್ತನಗಳನ್ನು ಮುಚ್ಚಿಕೊಳ್ಳುವುದು, ಸ್ವಾತಂತ್ರ್ಯ, ಕದನ, ಚಳಿಗಾಲ.

ನಿತ್ಯಜೀವದಲ್ಲಿ ಅಪ್ಪಿಕೊಳ್ಳುವುದು, ಚಳಿಯಿಂದ ನಡುಗುವುದು, ಭಯ ಇತ್ಯಾದಿಗಳ ಸಂವಹನಕ್ಕೆ ಬಳಸುತ್ತಾರೆ.

Leave a Reply

*

code