Author: Editor
ಡಾ. ಮನೋರಮಾ ಬಿ.ಎನ್ ಅವರ ‘ನಂದಿಕೇಶ್ವರ’ ಸಂಶೋಧನ ಕೃತಿ
Pages : 140 ; Price – 100
ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಜರುಗಿದ ಗೋಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಅನಾವರಣ. ಹೊಸನಗರ ರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಮತ್ತು ಉತ್ತರಪ್ರದೇಶದ ಲಿಖಿಂಪುರ ಕಬೀರ ಪಂಥದ ಶ್ರೀ ಸದ್ಗುರು ಸೇವಾಶ್ರಮದ ಶ್ರೀಸಂತ ಅಸಂಗ ಸಾಹೇಬ್ಜೀ ಅವರು ಕೃತಿಯನ್ನು ಅನಾವರಣಗೊಳಿಸಿದರು.
ಕೃತಿ ಅನಾವರಣ ಸಂದರ್ಭದಲ್ಲಿ ಮಾತನಾಡಿದ ಶ್ರೀಶ್ರೀ ರಾಘವೇಶ್ವರ ಸ್ವಾಮೀಜಿಗಳು ನಂದಿಯ ಕುರಿತಾದ ಸಮಗ್ರ ಮಾಹಿತಿಯನ್ನು ಒಳಗೊಂಡ ವಿಶ್ವಕೋಶದಂತಿದೆ ಎಂದು ಅಭಿಪ್ರಾಯಿಸಿದರು.
ಭಾರತದಲ್ಲಿನ ನಂದಿಕೇಶ್ವರ ಸಂಪ್ರದಾಯ, ನಂದಿಯ ಸಂಬಂಧವಾದ ವೇದ-ಪುರಾಣ-ಆಗಮ-ತಂತ್ರ-ಮಂತ್ರ-ವ್ರತವಿಧಾನ-ದಾನಕ್ರಮ-ಜನಜೀವನ-ನೃತ್ಯಶಾಸ್ತ್ರ- ಕಲಾಮೀಮಾಂಸೆಗಳನ್ನು ಚರ್ಚಿಸುವ ಕೃತಿ ಇದಾಗಿದ್ದು; ನಂದಿಕೇಶ್ವರನ ಸಂಬಂಧ ಬಂದಿರುವ ಪ್ರಪ್ರಥಮ ಕನ್ನಡ ಕೃತಿಯೆಂಬ ಮನ್ನಣೆ ಪಡೆದಿದೆ. ಇದು ಅಭಿನಯದರ್ಪಣ ಮತ್ತು ಭರತಾರ್ಣವವೆಂಬ ನೃತ್ಯಲಕ್ಷಣಗ್ರಂಥಗಳ ಗುಣ ಕಥನ ವ್ಯಾಖ್ಯಾನವನ್ನೂ ಹೊಂದಿದ್ದು ನೃತ್ಯಾಭ್ಯಾಸಿಗಳಿಗೆ ಉಪಯುಕ್ತವಾಗಿದೆ.