ಭರತಾಂತರಂಗ ಸಂಚಿಕೆ 37: ಚಿತ್ರಕಲೆಯಲ್ಲಿ ಆವಿಷ್ಕಾರ | ವಿಲಾಸ್ ನಾಯಕ್ – ಭಾಗ 1 | ಸಂದರ್ಶನ | Vilas Nayak Interview

Posted On: Sunday, June 7th, 2026
1 Star2 Stars3 Stars4 Stars5 Stars (No Ratings Yet)
Loading...

Author: Editor

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ

ಭರತಾಂತರಂಗ ಭಾಗ 2

ಸಂಚಿಕೆ 37 : ಚಿತ್ರಕಲೆಯಲ್ಲಿ ಆವಿಷ್ಕಾರ. – ಜಗತ್ಪ್ರಸಿದ್ಧ ಚಿತ್ರಕಲಾಕಾರ, speed painter, reverse painting ನುರಿತ ಕಲಾವಿದ ವಿಲಾಸ್ ನಾಯಕ್ – ಅವರೊಂದಿಗಿನ ಎರಡು ಹಂತದ ಸಂದರ್ಶನದ ಮೊದಲ ಭಾಗ. ಈ ಸಂಚಿಕೆಯಲ್ಲಿ ಚಿತ್ರಕಲೆಗೆ ಸಾರ್ವಕಾಲಿಕ ಪ್ರೇರಣೆ ಯಾವುದು, ಸ್ವಂತ ಶೈಲಿಯನ್ನು ಹೊಂದುವ ಬಗೆ ಹೇಗೆ? ಸಂಪ್ರದಾಯ ಹಾಗೂ ಸ್ವಂತಿಕೆಯ ಅನುಪಾತ ಎಷ್ಟು? ಬಣ್ಣಗಳ ಪಾಲುದಾರಿಕೆ ಎಷ್ಟು? ಅಬ್ಸ್ಟ್ರಾಕ್ಟ್ ಚಿತ್ರಗಳ ಸಮಸ್ಯೆ ಎಲ್ಲಿದೆ? ಅವುಗಳಲ್ಲಿರಬೇಕಾದ ಅಪೇಕ್ಷಿತ ವಿನ್ಯಾಸ ಯಾವುದು? ಚಿತ್ರಕಲೆಗೆ ಬೇಕಾದ ಆವಶ್ಯಕ ಪ್ರಮಾಣಗಳು ಯಾವುವು? ಅದರ ಆಯುಷ್ಯ ಹಾಗೂ ಸ್ಥಿರಕಲೆಯಾದ ಚಿತ್ರಕ್ಕೆ ಚಲನಶೀಲತೆ ಎಷ್ಟು? ಚಿತ್ರಕಲೆಯನ್ನು ನೋಡುವುದಕ್ಕೆ ಕ್ರಮ ಇದೆಯೇ? ಚಿತ್ರಸೌಂದರ್ಯ ಎಂದರೇನು? ಚಿತ್ರಕಲೆಯು ಅರ್ಥ ನೀಡುವುದಕ್ಕೆಂದೇ ಇದೆಯೇ? ಅದರ ಉದ್ದೇಶ ಏನು? – ವಿಲಾಸ್ ನಾಯಕ್ ಅವರ ಅನುಭವದ ಉದಾಹರಣೆಯ ಸಹಿತ ಎಲ್ಲ ವರ್ಗದ ಕಲಾವಿದರಿಗೆ, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಪ್ರಬುದ್ಧ ಸಂವಾದವಿದೆ.

 

ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ

ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)

Noopura Bhramari- Centre for Indian Knowledge systems presenting New series programme

Bharatantaranga Part 2

Episode 37 : Chitrakala – Discovery (Art of Painting – Exploration). Part One of a Two-Part Interview with Vilas Nayak, a world-renowned painter, speed painter, and expert in reverse painting. In this episode, Vilas Nayak discusses: What is the timeless source of inspiration for painting? How does one develop a personal artistic style? What should be the proportion between tradition and individuality? What role do colours play? Where does the problem with abstract paintings lie? What is the desirable structure that they should possess? What are the essential principles and proportions required for painting? What is the lifespan of a painting, and how much dynamism can exist within painting as a static art form? Is there a method to viewing a painting? What is pictorial beauty? Is painting meant only to convey meaning? What is its purpose? Through examples drawn from his own experience, Vilas Nayak offers an insightful and thought-provoking conversation that can be valuable to artists, art enthusiasts and students of all backgrounds.

Concept, Series Director and Editor

Dr Manorama B N, Principal Investigator, Noopura Bhramari(R.)

 

ನಿರ್ಮಾಣ ನಿರ್ವಾಹಕರು/ Production Managers

ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre

 

ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition

ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai

 

ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer

ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru

 

ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing

ಕ್ರಾಸ್‌ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka

 

ನಿರ್ಮಾಣ/ Produced by

ನೂಪುರ ಭ್ರಮರಿ (ರಿ.)/ Noopura Bhramari (R.)

ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ

This series is brought to you, as part of IKS Division project of Ministry of Education, Govt of India

 

 

Leave a Reply

*

code