About us- Board of Trust

ಇಂದಿಗೆ ಕರ್ನಾಟಕದ ಏಕೈಕ ನೃತ್ಯಪತ್ರಿಕೆಯಾಗಿ, ಐ‌ಎಸ್‌ಎಸ್‌ಎನ್ ಸಂಖ್ಯೆಯನ್ನು ಪಡೆದು ಕ್ರಮವತ್ತಾಗಿ ಪ್ರಕಟಗೊಳ್ಳುತ್ತಿರುವ ಭಾರತದ ಏಕೈಕ ಸಂಶೋಧನ ನಿಯತಕಾಲಿಕೆಯಾಗಿ, ಪ್ರದರ್ಶಕ ಕಲೆಗಳ ಗುಣಮಟ್ಟದ ಬರೆವಣಿಗೆ- ಸಂಶೋಧನೆ ಮತ್ತು ಪುಸ್ತಕಗಳ ಪ್ರಕಾಶನವಾಗಿ ಗುರುತಿಸಲ್ಪಟ್ಟಿರುವುದು ನೂಪುರ ಭ್ರಮರಿಯೊಂದೇ ಎಂಬುದು ನಮ್ಮಯ ಹೆಮ್ಮೆ.

ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ಮಡಿಕೇರಿಯಲ್ಲಿ ಶಿವರಾತ್ರಿಯಂದು. ಶಕ್ತಿ ದೈನಿಕದ ಸಹ ಸಂಪಾದಕ ಶ್ರೀಯುತ ಬಿ. ಜಿ. ಅನಂತಶಯನ, ಆಯುರ್ವೇದ ವೈದ್ಯ, ಸಾಹಿತಿ ನಡಿಬೈಲು ಉದಯಶಂಕರ ಅವರು ಪತ್ರಿಕೆಯನ್ನು ಮೊದಲು ತೆರೆದಿಟ್ಟವರು. ಒಂದು ಶುಭ ಸಂದರ್ಭದಲ್ಲಿ ಶುಭಾಂಸನೆ ಪಡೆದುಕೊಂಡ ನೂಪುರ ಭ್ರಮರಿಯ ಯಾತ್ರೆ ನಿರಂತರವಾಗಿ ನಡೆಯಬೇಕೆಂಬುದು ನಮ್ಮೆಲ್ಲರ ಕನಸು.
ವಾರ್ಷಿಕ ಸಂಭ್ರಮ ನೆರವೇರಿದ್ದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ. ಯಕ್ಷಗಾನ ಕಲಾವಿದ ಸರ್ಪಂಗಳ ಈಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಸಾಹಿತಿ, ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ವೆಬ್‌ಸೈಟಿಗೆ ಚಾಲನೆಯನ್ನಿತ್ತರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಭಾಸ್ಕರ ಹೆಗಡೆ ವಾರ್ಷಿಕ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿದರೆ, ಲೇಖಕಿ ಮನೊರಮಾ ಬಿ.ಎನ್ ಅವರು ಬರೆದ ಇತಿಹಾಸ ಪುಸ್ತಕ ಶ್ರೀ ಓಂಕಾರೇಶ್ವರ ದೇವಾಲಯದ ಇತಿಹಾಸದ ಪರಿಷ್ಕೃತ ಎರಡನೇ ಆವೃತ್ತಿಯನ್ನು ಭಾರತೀಯ ವಿದ್ಯಾಭವನದ ಮಡಿಕೇರಿ ಶಾಖೆಯ ಉಪಾಧ್ಯಕ್ಷ ಕೆ. ಎಸ್. ದೇವಯ್ಯ ಅನಾವರಣಗೊಳಿಸಿದರು.
ದ್ವಿತೀಯ ವಾರ್ಷಿಕ ಸಂಭ್ರಮಕ್ಕೆ ಸಾಕ್ಷಿಯಾದವರು ಮಂಗಳೂರಿನ ಸಹೃದಯರು. ಭರತ ನೃತ್ಯ ಸಭಾ ಮತ್ತು ಸನಾತನ ನಾಟ್ಯಾಲಯ ಇವರ ಸಹಭಾಗಿತ್ವದಲ್ಲಿ ನಡೆದ ಮಂತಪ ಪ್ರಭಾಕರ ಉಪಾಧ್ಯಾಯ ಅವರ ಏಕವ್ಯಕ್ತಿ ಯಕ್ಷಗಾನ ಸರಣಿಯ ಕಾರ್ಯಕ್ರಮ ಉದ್ಘಾಟನೆಯನ್ನು ನೂಪುರ ಭ್ರಮರಿಯ ವರ್ಣಮಯ ವಾರ್ಷಿಕ ವಿಶೆಷ ಸಂಚಿಕೆಯು ಖ್ಯಾತ ಯಕ್ಷಗಾನ ವಿಮರ್ಶಕ, ಕಲಾವಿದ ಡಾ. ಪ್ರಭಾಕರ ಜೋಷಿ ಅವರು ಅನಾವರಣಗೊಳಿಸಿ ಶುಭ ಹಾರೈಸಿದರೆ, ವೇದಿಕೆಯಲ್ಲಿ ಆಸೀನರಾಗಿದ್ದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ್ ರಾವ್, ಹಿರಿಯ ಭರತನಾಟ್ಯ ಗುರು ಮುರಳೀಧರ ರಾವ್, ಭರತನೃತ್ಯ ಸಭಾ ಮತ್ತು ಸನಾತನ ನಾಟ್ಯಾಲಯದ ಅಧ್ಯಕ್ಷ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಗುರು ಶಾರದಾಮಣಿ ಶೇಖರ್ ಪತ್ರಿಕೆಯನ್ನು ಹೃನ್ಮನಪೂರ್ವಕವಾಗಿ ಹಾರೈಸಿ, ಶ್ಲಾಘಿಸಿ, ಅಭಿನಂದಿಸಿದರು.

ಮೂರನೇ ವಾರ್ಷಿಕ ಸಂಭ್ರಮವು ಮಡಿಕೇರಿಯಲ್ಲಿ ಸರಳವಾಗಿ ನೆರವೇರಿತಾದರೂ, ಅದಕ್ಕೆ ಪೂರ್ವಭಾವಿಯಾಗಿ ಮುದ್ರಾರ್ಣವದ ಅನಾವರಣದ ಸಡಗರದ ಕಾರ್ಯಕ್ರಮ ವರುಷದಿಂದ ವರುಷಕ್ಕೇರುತ್ತಿರುವ ಮೆಟ್ಟಿಲಿಗೆ ಸಾಕ್ಷಿ ಹೇಳಿತು.

೪ನೇ ವಾರ್ಷಿಕ ಸಂಭ್ರಮವು ದಿನಾಂಕ ೧೩ ಫೆಬ್ರವರಿ ೨೦೧೧ ರಂದು ‘ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರಿನಲ್ಲಿ ನೆರವೇರಿತು. ಪ್ರಧಾನ ಅತಿಥಿಗಳಾಗಿ ಪ್ರಧಾನ್ ಗುರುದತ್, ಅಧ್ಯಕ್ಷರು, ಕರ್ನಾಟಕ ಅನುವಾದ ಅಕಾಡೆಮಿ; ಡಾ. ಶಂಕರ್, ಮನಶಾಸ್ತ್ರಜ್ಞರು ಮತ್ತು ಅಷ್ಟಾವಧಾನಿಗಳು; ಡಾ||ಜಿ.ಬಿ. ಹರೀಶ್, ವಿಮರ್ಶಕರು ಹಾಗೂ ಪ್ರಾಧ್ಯಾಪಕರು, ತುಮಕೂರು ವಿ.ವಿ; ಮುರಳೀಧರ್ ರಾವ್, ಹಿರಿಯ ನಾಟ್ಯಾಚಾರ್ಯ, ಮಂಗಳೂರು; ಹಾಗೂ ಧಾರವಾಢದ ಯಕ್ಷಗಾನ ಸಾಹಿತಿ ಮತ್ತು ಕವಿಗಳಾದ ದಿವಾಕರ ಹೆಗಡೆ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಮನೋರಮಾ ಬಿ. ಎನ್ ಅವರ ‘ನೃತ್ಯ ಮಾರ್ಗ ಮುಕುರ’ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆ ಮತ್ತು ನೃತ್ಯಬಂಧಗಳ ದಾಖಲೆಯುಳ್ಳ ಅಧ್ಯಯನ ಕೃತಿ ಅನಾವರಣಗೊಂಡಿತು.

ದಿನದಿಂದ ದಿನಕ್ಕೆ ಸಾಂಸ್ಕೃತಿಕ ರಂಗದ ಅದರಲ್ಲೂ ನರ್ತನ ಕ್ಷೇತ್ರದ ವಿಮರ್ಶಾಪರಂಪರೆ ಕುಸಿಯುತ್ತಿರುವಾಗ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸ್ತಿಯನ್ನು ಕರ್ನಾಟಕದಲ್ಲೇ ಮೊತ್ತ ಮೊದಲಬಾರಿಗೆ ನೂಪುರ ಭ್ರಮರಿ ಆರಂಭಿಸಿದ್ದು ಈ ಪ್ರಶಸ್ತಿಗೆ ಮೊದಲು ಭಾಜನರಾದವರು. ಶ್ರೀಮತಿ ಪ್ರಿಯಾ ರಾಮನ್.

ಗುರು ಮುರಳೀಧರ ರಾವ್ ಮತ್ತು ದಿವಾಕರ ಹೆಗಡೆಯವರನ್ನು ಈ ಸಂದರ್ಭ ಅಭಿವಂದಿಸಲಾಯಿತು. ದೂರದರ್ಶನ ಕಲಾವಿದೆ ವಿದುಷಿ ಶ್ರೀಮತಿ ಐಶ್ವರ್ಯಾ ನಿತ್ಯಾನಂದ ಅವರಿಂದ ಡಿ.ವಿ.ಜಿ. ಅಂತಃಪುರ ಗೀತೆಗಳ ಕುರಿತ ಭರತನಾಟ್ಯ ಕಾರ್ಯಕ್ರಮವೂ ಈ ಸಂದರ್ಭ ಜರುಗಿತು. ಈ ಸಂದರ್ಭ ನೂಪುರ ಭ್ರಮರಿಯ ಸಂಪಾದಕಿ ಮನೋರಮಾ ಬಿ.ಎನ್, ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ ಬಿ.ಜಿ.ನಾರಾಯಣ ಭಟ್, ಚೈತ್ರರಶ್ಮಿ ಸಂಪಾದಕ ರಾಮಚಂದ್ರ ಹೆಗಡೆ ಉಪಸ್ಥಿತರಿದ್ದರು.

೫ನೇ ವರ್ಷ ಪೂರ್ಣಗೊಳಿಸಿದ ಸಂಭ್ರಮ ನಿಜಕ್ಕೂ ಸ್ಮರಣೀಯ. ಕರ್ನಾಟಕದಲ್ಲೇ ಮೊತ್ತ ಮೊದಲ ಬಾರಿಗೆ ನೂಪುರ ಭ್ರಮರಿ ಪ್ರತಿಷ್ಠಾನವು ಸಂಘಟಿಸಿದ  ನೃತ್ಯ ಸಂಶೋಧನಾ ವಿಚಾರಸಂಕಿರಣವು ಜಯಭೆರಿಯನೇ ಗಳಿಸಿತ್ತಲ್ಲದೆ ಸಂಶೋಧನಾ ಸಂಗ್ರಹಸೂಚಿ, ಪುಸ್ತಕ-ಪತ್ರಿಕಾ ಸೂಚಿಯನೊಳಗೊಂಡ ಹಲವು ಬಗೆಯ ಲೇಖನ, ವಿಮರ್ಶಾ ಮಾರ್ಗದರ್ಶಿಯ ವಿಶೇಷ ಸಂಕಲನವು ಅನಾವರಣಗೊಂಡಿತು. ನಾಲ್ಕು ಪ್ರಬುದ್ಧ ಸಂಶೋಧನಾ ಪ್ರಬಂಧವಾಚನ, ೩ ವಿಶೇಷ ಉಪನ್ಯಾಸ, ವಿದ್ವಾಂಸರೊಂದಿಗೆ ಸಂವಾದ, ಪ್ರತಿಭಾ ಸಾಮಗರಿಗೆ ವಿಮರ್ಶಾ ಪ್ರಶಸ್ತಿ, ಶತಾವಧಾನಿ ಡಾ.ಆರ್.ಗಣೇಶ್, ಎಚ್.ಎಸ್.ಗೋಪಾಲರಾವ್, ಪ್ರೊ.ಶೇಷ ಶಾಸ್ತ್ರಿ,ಖ್ಯಾತ ನೃತ್ಯಕಲಾವಿದ ಶ್ರೀಧರ್, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ರಂತಹ ಹಿರಿಯರಿಂದ, ಸಂಶೋಧಕರಿಂದ ಆಶೀರ್ವಾದದೊಂದಿಗಿನ ಬೆಂಬಲ-ಉಪಸ್ಥಿತಿ, ಚಿಂತನ-ಮಂಥನ, ಸಂಶೋಧನಾಧಾರಿತ ನೃತ್ಯ ಕಾರ್ಯಕ್ರಮ ಮತ್ತು ಎಲ್ಲಾ ಪ್ರಯತ್ನಕ್ಕೂ ಭವಿತವ್ಯದಲ್ಲಿ ಸಿದ್ಧ ಅಡಿಪಾಯ ನೀಡುವಂತೆ ಒಲುಮೆಯ ಗೆಳೆಯರ ಸದಾಶಯದೊಂದಿಗೆ ಪ್ರಾರಂಭವಾದ ನೃತ್ಯ ಸಂಶೋಧಕರ ಒಕ್ಕೂಟವೆಂಬ ಸಂಶೋಧನೆ-ನೃತ್ಯದ ತಂತುಗಳನ್ನು ಬೆಸೆಯುವ ಕೆಲಸ.. ಒಟ್ಟಿನಲ್ಲಿ ಎಲ್ಲಾ ಹಂತಗಳನ್ನು ಬರೆಯಹೊರಟರೆ ಪುಟಗಟ್ಟಲೆ ಸಾಲದು.

ಆರನೇ ವರುಷದ ಹೊಸಿಲಿಗೆ  ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿಯ ಪ್ರಧಾನ ಆಶ್ರಯ ಮತ್ತು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಶುಕ್ರವಾರ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಅಖಿಲ ಭಾರತೀಯ ನೃತ್ಯ ಸಂಶೋಧನ ಸಮ್ಮೇಳನವು ಜರುಗಿತು. ಈ ಸಂದರ್ಭದಲ್ಲಿ ಭಾರತದ ಮೊದಲ ನೃತ್ಯ ಸಂಶೋಧನ ನಿಯತಕಾಲಿಕೆ ನೂಪುರಾಗಮದ ಅನಾವರಣ, ಕರ್ನಾಟಕದ ನೃತ್ಯ ಕಲಾವಿದರ ವಿಶೇಷ ಸಂಶೋಧನ ಸಮೀಕ್ಷೆಯನ್ನೊಳಗೊಂಡ ನೂಪುರ ಭ್ರಮರಿ ವಿಶೇಷ ಸಂಚಿಕೆ ಮತ್ತು ವೆಬ್ ಸೈಟಿನ ಪರಿಷ್ಕೃತ ಆವೃತ್ತಿ ಲೋಕಾರ್ಪಣೆಯೂ ಜರುಗಿತು.ಸಮಾರಂಭವನ್ನು  ವಿಧಾನ ಪರಿಷತ್ ಸದಸ್ಯರಾದ ಪಿ.ವಿ. ಕೃಷ್ಣ ಭಟ್ ಉದ್ಘಾಟಿಸಿದರೆ, ಸಮ್ಮೇಳನ ಸಭಾಧ್ಯಕ್ಷತೆಯನ್ನು ಹಿರಿಯ ಶಾಸನ/ಇತಿಹಾಸ ತಜ್ಞ ಡಾ. ಎಚ್. ಎಸ್. ಗೋಪಾಲ ರಾವ್ ವಹಿಸಿದ್ದರು. ಸಭಾಧ್ಯಕ್ಷತೆಯನ್ನು ಹೆಸರಾಂತ ಕನ್ನಡ ವಿದ್ವಾಂಸರು, ಸಂಶೋಧಕರಾದ ಪ್ರೊ. ಟಿ.ವಿ ವೆಂಕಟಾಚಲ ಶಾಸ್ತ್ರಿ ಅವರು ವಹಿಸಿ ಕರ್ನಾಟಕದ ಕಲಾವಿಶೇಷಗಳ ಕುರಿತು ಮಾತನಾಡಿ ಸಂಶೋಧನೆಯ ಅಗತ್ಯವನ್ನು ಸ್ಪಷ್ಟಪಡಿಸಿದರು. ಈ ಸಂದರ್ಭ ಹಿರಿಯ ನೃತ್ಯ ಕಲಾವಿದೆ ಲೀಲಾ ರಾಮನಾಥನ್ ಅವರಿಗೆ ನೂಪುರ ಕಲಾ ಕಲಹಂಸವೆಂಬ ಬಿರುದನ್ನಿತ್ತು ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಲಹಾಸಮಿತಿ ಅಧ್ಯಕ್ಷರಾದ ಶತಾವಧಾನಿ ಡಾ. ಆರ್. ಗಣೇಶ್ ಅವರು ಸಮ್ಮೇಳನಕ್ಕೆ ನೀಡಿದ ಆಡಿಯೋ ಸಂದೇಶವನ್ನು ಬಿತ್ತರಿಸಲಾಯಿತು. ಹೆಸರಾಂತ ಸಂಶೋಧಕ ಸೂರ್ಯನಾಥ ಕಾಮತ್ ಅವರ ಸಂದೇಶವನ್ನು ತಿಳಿಸಲಾಯಿತು. 

ತದನಂತರ ಭಾರತದ ಹಲವು ಪ್ರದೇಶಗಳಿಂದ ಆಗಮಿಸಿದ್ದ ಸಂಶೋಧಕರು ೧೩ ಸಂಶೋಧನ ಪ್ರಬಂಧಗಳನ್ನು ಮಂಡಿಸಿದರು. ತಜ್ಞನೋಟಕರಾಗಿ ಆಗಮಿಸಿದ್ದ ಹಿರಿಯ ನೃತ್ಯ ಕಲಾವಿದರಾದ ಬಿ.ಕೆ.ವಸಂತಲಕ್ಷ್ಮಿ, ಭಾನುಮತಿ ಮತ್ತು ಮಾಲಿನಿ ರವಿಶಂಕರ್ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಅನಂತ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಗೋವಿಂದ ಎಂ.ಕಾರಜೋಳ, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಭಾಗವಹಿಸಿದ್ದರು. ಈ ಸಂದರ್ಭ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆಪ್ರಶಸ್ತಿಯನ್ನು ವಿಮರ್ಶಾ ವಾಙ್ಮಯಿ ಬಿರುದಿನೊಂದಿಗೆ ಪ್ರದಾನ ಮಾಡಲಾಯಿತು. ಜೊತೆಗೆ ರಾಜ್ಯಮಟ್ಟದ ನೃತ್ಯ ರಸಪ್ರಶ್ನೆ ಮತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾಧ್ಯಕ್ಷತೆಯನ್ನು ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎಚ್.ಎನ್.ಸುರೇಶ್ ವಹಿಸಿದ್ದರು. ನಂತರ ಸಂಶೋಧನಾಧರಿತವಾದ ನಾಟ್ಯಶಾಸ್ತ್ರ ಚಿತ್ರ ಪೂರ್ವರಂಗ ಮತ್ತು ನವರಸಕೃಷ್ಣ ನೃತ್ಯಪ್ರಸ್ತುತಿಗಳು ಡಾ. ಶೋಭಾ ಶಶಿಕುಮಾರ್ ಅವರ ನಿರ್ದೇಶದನ್ವಯ ನಡೆದವು.  

ಏಳನೇ ವರುಷ ತುಂಬಿದ ಸಂದರ್ಭದಲ್ಲಿ ‘ನಾಟ್ಯಚಿಂತನ’ ಎಂಬ ವಿಶಿಷ್ಟ ಕಾರ್ಯಕ್ರಮವು ಕರಾವಳಿಯ ಪಾಲಿಗೆ ವಿನೂತನವಾಗಿ ಏಪ್ರಿಲ್ ೨೦, ೨೦೧೪ರಿಂದ ಒಂದುವಾರಗಳ ಕಾಲ ಮೂಡಿಬಂದಿತು. ಪುತ್ತೂರಿನ ಮುಳಿಯ ಸಭಾಂಗಣದಲ್ಲಿ ನಡೆದ “ನಾಟ್ಯ-ಚಿಂತನ” ಎಂಬ ಕಾರ್ಯಾಗಾರವನ್ನು ಪುತ್ತೂರು ಜೇಸಿರೆಟ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಉದ್ಘಾಟಿಸಿದ್ದರು. ಇದೇ ಸಂದರ್ಭ ಭಾರತದಲ್ಲೇ ಏಕೈಕ  ಪ್ರಪ್ರಥಮ ಸಂಶೋಧನಾ ಸಂಚಿಕೆಯೆಂಬ ಮನ್ನಣೆ ಗಳಿಸಿರುವ ನೂಪುರ ಭ್ರಮರಿಯ ವಾರ್ಷಿಕ ವಿಶೇಷಾಂಕ-ಸಂಶೋಧನ ಸಂಚಿಕೆಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.

ಈ ಒಂದು ವಾರದ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ಹೆಸರಾಂತ ಕಲಾವಿದೆ, ಕರಣಾಂಗಹರವನ್ನು ಕಲಿತು ಭರತನಾಟ್ಯದ ಆಂಗಿಕ-ಸಾತ್ತ್ವಿಕ ಸಮನ್ವಯತೆಯ ಮೇಲೆ ಡಾಕ್ಟರೇಟ್ ಪಡೆದ ಕರ್ನಾಟಕದ ಮೊದಲ ಸಂಶೋಧಕಿ, ಗುರು, ಬೆಂಗಳೂರು ಜೈನ್ ಯುನಿವರ್ಸಿಟಿ ಕಾಲೇಜಿನ ಡಾ.ಶೋಭಾ ಶಶಿಕುಮಾರ್ ಅವರ ನೇತೃತ್ವದಲ್ಲಿ ಉಪನ್ಯಾಸ ಕಾರ್ಯಾಗಾರ ಮತ್ತು ವಿಶೇಷವಾದ ಭರತನೃತ್ಯ ಕಾರ್ಯಕ್ರಮವು ಉದ್ಘಾಟನಾದಿನದಂದು ಜರುಗಿತ್ತು. ನಾಟ್ಯಶಾಸ್ತ್ರ ನೃತ್ತಹಸ್ತಪ್ರಕಾರಗಳನ್ನು ಸ್ವತಃ ಅಭಿನಯಿಸಿ ತೋರಿಸುವುದರೊಂದಿಗೆ ತಮ್ಮ ಶಿಷ್ಯಂದಿರಾದ ಕು.ಆರತಿ ಹಾಗೂ ಶ್ರೀಮತಿ ಮೇಘಾಕೃಷ್ಣರವರ ಜೊತೆಗೆ ನಾಟ್ಯಶಾಸ್ತ್ರದ ಚಾರಿ, ಅಂಗವಿನ್ಯಾಸ, ಕರಣ ಮುಂತಾದ ಆಂಗಿಕ ವಿನ್ಯಾಸವನ್ನು ನೃತ್ತ-ನೃತ್ಯಬಂಧಗಳ ಮೂಲಕವೂ ಕಾಣಿಸಿಕೊಟ್ಟರು. ಸಂಜೆ ೨ಗಂಟೆಗಳ ಕಾಲ ಕರಾವಳಿಯ ನೃತ್ಯಕ್ಷೇತ್ರಕ್ಕೆ ಅಪರೂಪವಾಗಿರುವ ನಾಟ್ಯಶಾಸ್ತ್ರದ ಅಂಗೋಪಾಂಗಸಮನ್ವಯವನ್ನೂ, ಕರಣಾಂಗಹಾರ ಸಾಂಗತ್ಯವನ್ನೂ ಅಲಂಕಾರಶಾಸ್ತ್ರದ ಆಧಾರದಲ್ಲಿ ನೃತ್ಯದಲ್ಲಿ ಹೆಣೆದ ಡಾ.ಶೋಭಾ ಹತ್ತು ಬಗೆಯ ನೃತ್ಯಸಂದರ್ಭಗಳನ್ನು ಪ್ರೇಕ್ಷಕರು ಆನಂದತುಂದಿಲರಾಗಿ ಅಶ್ರು ತುಳುಕಿಸುವಂತೆ ತೆರೆದಿಟ್ಟರು. ಈ ಸಂದರ್ಭ ಉಪಸ್ಥಿತರಿದ್ದ ಹೆಸರಾಂತ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಕಲಾವಿದರನ್ನು ಗೌರವಿಸಿ, ‘ಡಾ.ಶೋಭಾ ಅವರ ನೃತ್ಯಕಾರ್ಯಕ್ರಮ ಕಲಾಭಿವ್ಯಕ್ತಿಯ ಅತ್ಯುನ್ನತ ಗುರಿಯಾದ ಶಾಂತರಸವನ್ನು ತಲುಪಿದೆ, ಆ ಮೂಲಕ ಪ್ರೇಕ್ಷಕರಮಣೀಯವಾಗಿ ಆನಂದಕರವಾಗಿ ಮೂಡಿಬಂದಿದೆ. ನೋಡದೇ ಹೋಗಿದ್ದರೆ ಒಂದು ಅತ್ಯುತ್ತಮ ಕಲಾಭಿವ್ಯಕ್ತಿಯ ಗ್ರಹಣವನ್ನು ಕಳೆದುಕೊಳ್ಳುತ್ತಿದ್ದೆ ’ ಎಂದು ಸುಂದರಸಂಜೆಯನ್ನು ಕಣ್ತುಂಬಿಕೊಂಡರು. ಕಾರ್ಯಾಗಾರದಲ್ಲಿ ದಿನಕ್ಕೊಂದು ನಾಟ್ಯಶಾಸ್ತ್ರದ ಕಥಾಮಾಲಿಕೆಯ ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ, ಸಂವಾದ, ಪ್ರಶ್ನೋತ್ತರಗಳು ಮುಕ್ತವಾಗಿ ನಡೆದವು. ಕಾರ್ಯಾಗಾರದ ಸಮಾರೋಪದಂದು ಉಪಸ್ಥಿತರಿದ್ದು ‘ಅಭಿನಯ’ದ ಕುರಿತಾಗಿ ಸಾಭಿನಯಸಹಿತ ಪ್ರಾತ್ಯಕ್ಷಿಕೆ, ಉಪನ್ಯಾಸ ನೀಡಿದವರು ವಿದ್ವಾಂಸ, ರಂಗಕರ್ಮಿ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು.

ಕಾರ್ಯಾಗಾರಕ್ಕೆ ಮಂಗಳೂರು, ವಿಟ್ಲ, ನೆಲ್ಯಾಡಿ, ಕೊಕ್ಕಡ, ಸುಬ್ರಹ್ಮಣ್ಯ, ಸುಳ್ಯ, ಪುತ್ತೂರಿನಿಂದ ಚಿಣ್ಣರು, ಹಿರಿಯ ನೃತ್ಯವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ಶಿಬಿರಾರ್ಥಿಗಳಿಂದ ೧೬ ವಿವಿಧ ಬಗೆಯ ನೃತ್ಯಸಂದರ್ಭಗಳು ನಿರ್ದೇಶಿತವಾಗಿದ್ದವು. ಅವುಗಳಲ್ಲಿ ಕೆಲವು ನೃತ್ಯನಿರ್ದೇಶನಗಳನ್ನು ಆಯ್ದು ಸಮಾರೋಪಸಂಜೆಯಲ್ಲಿ ಸೊಗಸಾದ ನೃತ್ಯಕಾರ್ಯಕ್ರಮವೂ ನಡೆದು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.

8ನೇ ವರುಷ : ಕರ್ನಾಟಕದಲ್ಲಿ ಭರತನ ನಾಟ್ಯಶಾಸ್ತ್ರದ ಕುರಿತ ತರಬೇತಿಗಳು ಇಂದಿಗೆ ವಿಶ್ವವಿದ್ಯಾನಿಲಯದ ತರಗತಿಗಳಲ್ಲೂ ನಡೆಯುವುದಿಲ್ಲ. ಜೊತೆಗೆ ಭಾರತೀಯ ಕಲೆಗಳೆಲ್ಲದಕ್ಕೂ ತಾಯಿಬೇರಾಗಿರುವ ಭರತನ ನಾಟ್ಯಶಾಸ್ತ್ರದ ಕಬ್ಬಿಣದ ಕಡಲೆಯಂತಿರುವ ಬೃಹತ್ ಸಂಪುಟಗಳನ್ನು ಓದಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳುವುದೆಂದರೆ ಅಷ್ಟು ಸುಲಭವೂ ಅಲ್ಲ. ಇದರಿಂದಾಗಿ ನೃತ್ಯಾಸಕ್ತರಿಗೆ, ಅಧ್ಯಯನದ ಅಪೇಕ್ಷೆ ಉಳ್ಳವರಿಗೆ ಸಾಕಷ್ಟು ಹಿನ್ನಡೆಯೂ ಆಗುತ್ತಲಿದೆ. ಜೊತೆಗೆ ನಾಟ್ಯಶಾಸ್ತ್ರದ ಬಗ್ಗೆ ಅಲ್ಲಲ್ಲಿ ಮಿಂಚಿ ಮರೆಯಾಗುವ ಉಪನ್ಯಾಸಗಳು ಸರ್ವರಿಗೂ ಸಕಾಲಕ್ಕೆ ದೊರೆಯುವುದೂ ಇಲ್ಲ.

ಇದನ್ನು ಗಮನಿಸಿದ ನೃತ್ಯ ಸಂಶೋಧನೆ, ಅಧ್ಯಯನ, ದಾಖಲೀಕರಣಕ್ಕೆ ಸಂಬಂಧಿಸಿದಂತೆ ದುಡಿಯುತ್ತಿರುವ ಹಲವು ಪ್ರಥಮಗಳ ರೂವಾರಿ ನೂಪುರ ಭ್ರಮರಿ ಸಂಸ್ಥೆಯು ಭರತನ ನಾಟ್ಯಶಾಸ್ತ್ರದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ (ಥಿಯರಿ+ ಪ್ರಾಕ್ಟಿಕಲ್) ಸರ್ಟಿಫಿಕೇಟ್ ಕೋರ್ಸ್ ತರಗತಿಗಳನ್ನು ಹಮ್ಮಿಕೊಂಡಿತ್ತು. ಇದು ಶಾಸ್ತ್ರೀಯ-ಜಾನಪದವೆಂಬ ಬೇಧವಿಲ್ಲದೆ ವಿವಿಧ ಕಲಾವಿಭಾಗದ ಅಭ್ಯರ್ಥಿಗಳಿಗೆ ಅಂದರೆ ಸಬ್ ಜೂನಿಯರ್ ಹಂತದಿಂದ ಜೂನಿಯರ್, ಸೀನಿಯರ್, ವಿದ್ವತ್, ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕಲಾವಿದರಿಗಾಗಿ ಇದು ಹಲವು ಹಂತಗಳಲ್ಲಿ ವಿಭಾಗೀಕರಿಸಲ್ಪಟ್ಟಿದ್ದು ನಾಟ್ಯಶಾಸ್ತ್ರದ ಸಂಪೂರ್ಣ ಅಧ್ಯಯನ, ಕರಣ/ಚಾರಿಗಳ ಕಲಿಕೆಯನ್ನು ಒಳಗೊಂಡಿದೆ. ಭರತನಾಟ್ಯವಷ್ಟೇ ಅಲ್ಲದೆ, ಯಕ್ಷಗಾನ, ಜಾನಪದ ಕ್ಷೇತ್ರಗಳ ಸಹಿತ ವಿವಿಧ ಬಗೆಯ ನೃತ್ಯ, ನಾಟ್ಯ, ಸಂಗೀತ, ವಾದ್ಯಸಂಗೀತದ ಆಸಕ್ತರು ಪರಿಶೀಲಿಸಿ ಪಡೆಯಬಹುದಾದ ಪ್ರಬುದ್ಧಮಟ್ಟದ ತರಗತಿಗಳು ಇದಾಗಿವೆ ಎಂಬುದು ಇಲ್ಲಿನ ಹೆಚ್ಚುಗಾರಿಕೆ.

ಅಂತೆಯೇ ಭರತನಾಟ್ಯದ ನಟ್ಟುವಾಂಗ (ತಾಳ ನುಡಿಸಾಣಿಕೆ) ೬ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನೂ ತೆರೆಯಲಾಗಿದ್ದು; ಇದೂ ಕೂಡಾ ನೃತ್ಯಪರಂಪರೆಯ ಆಳ ಕಲಿಕೆಗೆ ವಿನೂತನವಾದ ಪ್ರಯತ್ನ. ಬಹುತೇಕ ನೃತ್ಯಶಾಲಾ-ಕಾಲೇಜುಗಳ ಸಂದರ್ಭಗಳಲ್ಲಿ, ನಟುವಾಂಗ ಕಲಿಯಲು ಸೂಕ್ತ ಕ್ರಮಗಳಾಗಲೀ, ಪಠ್ಯವಿಧಾನಗಳಾಗಲೀ ಇಲ್ಲದೆ ತಾಳ, ಲಯದ ಪರಿಚಯವೇ ಕಳೆಗುಂದುತ್ತಿರುವ ಹೊತ್ತಿಗೆ ಗುರುಕುಲ ಪದ್ಧತಿಯಲ್ಲಿ ಹೇಳಿಕೊಡುವ ಕ್ರಮವು ಒಂದು ಅಪೂರ್ವ ಅವಕಾಶವಾಗಿದೆ. ಇದರೊಂದಿಗೆ ಪ್ರದರ್ಶನ ಕಲೆಗಳ ಸಂಶೋಧನಾಸಕ್ತರಿಗಾಗಿ ಸಂಶೋಧನಾ ತರಗತಿಗಳನ್ನೂ, ಸಂಗೀತ ರತ್ನಾಕರ-ನರ್ತನ ನಿರ್ಣಯ-ಅಭಿನಯದರ್ಪಣ ಮುಂತಾದ ವಿವಿಧ ಶಾಸ್ತ್ರಗ್ರಂಥಗಳ ಅಧ್ಯಯನ ತರಗತಿ, ಸಾಂಸ್ಕೃತಿಕ ಪತ್ರಿಕೋದ್ಯಮದೆಡೆಗೆ ತೆರಳುವವರಿಗೆ ಕಲಿಕಾ ತರಗತಿಗಳು, ಪುರಾಣಕಥಾಮಾಲಿಕೆಗಳ ಪರಿಚಯ ತರಗತಿಗಳನ್ನೂ ನಡೆಸಲಾಗುತ್ತಿದೆ. ನೃತ್ಯದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಹಂತದ ತರಬೇತಿಯಲ್ಲಿ ಮಸುಕಾಗುತ್ತಿರುವ ಶಾಸ್ತ್ರವಿಭಾಗಕ್ಕೆಂದೇ ಪ್ರತ್ಯೇಕ ಕಲಿಕಾ ತರಗತಿಯೂ ನಡೆಯುತ್ತಲಿದೆ. ಈ ತರಗತಿಗಳೆಲ್ಲವೂ ಅಭ್ಯರ್ಥಿಗಳ ಆಯ್ಕೆಯ ಮೇರೆಗೆ ಒಂದೋ ಮುಖಾಮುಖಿ ಅಥವಾ ಆನ್‌ಲೈನ್‌ನಲ್ಲಿ ಅಭ್ಯರ್ಥಿಯ ಅನುಕೂಲಕ್ಕನುಸಾರವಾಗಿ ಹಮ್ಮಿಕೊಳ್ಳುವಂತದ್ದಾಗಿದ್ದು ; ಈಗಾಗಲೇ ಕರ್ನಾಟಕ, ಹೊರರಾಜ್ಯ ಮತ್ತು ವಿದೇಶಗಳಿಂದಲೂ ಆಸಕ್ತರು ಈ ವಿಶೇಷ ಕೋರ್ಸ್‌ಗಳನ್ನು ಕಲಿಯಲು ಬರುತ್ತಿದ್ದಾರೆ. ಅಂತೆಯೇ ಕಾರ್ಯಾಗಾರಗಳನ್ನೂ ನಡೆಸುವಂತೆ ಈ ತರಗತಿಗಳನ್ನು ವಿನ್ಯಾಸ ಮಾಡಲಾಗಿರುವುದು ವಿಶೇಷ.

‘ತರಗತಿಗಳನ್ನು ಕೋರ್ಸಿನ ಕ್ರಮದಲ್ಲಿ ವಿನ್ಯಾಸ ಮಾಡಲಾಗಿದ್ದು, ಇವು ಕರ್ನಾಟಕದ ನೃತ್ಯಕ್ಷೇತ್ರದಲ್ಲೇ ವಿನೂತನವಾದ ಬಹುಬೇಡಿಕೆಯವಾಗಿವೆ. ಗುರುಕುಲ ಮಾದರಿಯಲ್ಲಿ ಕಲಿಕೆಕ್ರಮವನ್ನು ವಿಸ್ತರಿಸಿದ್ದೇವೆ. ಸದ್ಯ ಪುತ್ತೂರು, ಬೆಂಗಳೂರಿನಲ್ಲಿ ಮುಖಾಮುಖಿ ತರಗತಿಗಳನ್ನು ನಡೆಸಲಾಗುತ್ತಿದ್ದು; ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಭಾಗಗಳಿಗೂ ವಿಸ್ತರಿಸಬೇಕೆಂದಿದ್ದೇವೆ. ಕೇವಲ ನೃತ್ಯವಿದ್ಯಾರ್ಥಿಗಳಷ್ಟೇ ಅಲ್ಲದೆ, ಯಾವುದೇ ಕಲೆಯ ಯಾವುದೇ ವಿಭಾಗದ ಆಸಕ್ತರೂ ಅಥವಾ ಸಾರ್ವಜನಿಕ ಪ್ರೇಕ್ಷಕರೂ, ಪೋಷಕರೂ ಈ ತರಗತಿಗಳನ್ನು ತೆಗೆದುಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಹಾಗಾಗಿ ಸಂಶೋಧನಾ ವಿದ್ಯಾರ್ಥಿಗಳಿಂದ ಮೊದಲ್ಗೊಂಡು ಸಬ್‌ಜೂನಿಯರ್ ಹಂತದ ವರೆಗೂ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಅಭ್ಯರ್ಥಿಗಳ ವಯೋಮನ, ಬೌದ್ಧಿಕಮಟ್ಟ, ಮಾನಸಿಕ ಪ್ರಬುದ್ಧತೆ, ತಿಳಿವಳಿಕೆಗಳಿಗನುಗುಣವಾಗಿ ಸ್ವತಃ ಅಭ್ಯರ್ಥಿಗಳೇ ಸ್ವಯಂ ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಪಾಠ-ಪ್ರಯೋಗಗಳು ನಡೆಯುವುದು ಇಲ್ಲಿನ ಮುಖ್ಯ ಲಕ್ಷಣ. ಅದರಲ್ಲೂ ಮಕ್ಕಳ ಪ್ರಪಂಚದಲ್ಲಿ ಅಪರೂಪವಾಗುತ್ತಿರುವ ಭಾರತೀಯ ಪರಂಪರೆಯ ಸೂಕ್ಷ್ಮಗಳನ್ನೂ, ಕಥೆಗಳನ್ನೂ ಗುರುಕುಲಸಂಪ್ರದಾಯದಂತೆ ಜೊತೆಜೊತೆಗೆ ತಿಳಿಸುತ್ತಾ ಸಂಸ್ಕಾರ ಉದ್ದೀಪನಗೊಳಿಸುವತ್ತ ನಮ್ಮ ಕೆಲಸ ಪ್ರಧಾನವಾಗಿ ಸಾಗುತ್ತಲಿದೆ. ಚಿಕ್ಕಮಕ್ಕಳಿಗೂ ಸ್ವಯಂ ಕೊರಿಯೋಗ್ರಫಿ ಮಾಡಿಕೊಳ್ಳುವಂತೆ ಮನೋಧರ್ಮದ ನಾಟ್ಯಶಾಸ್ತ್ರದ ಇನ್ನು ಕೆಲವೇ ಪ್ರವೇಶ ದಾಖಲಾತಿಗಳಿಗೆ ಅನುಕೂಲ ಇದರಲ್ಲಿದೆ. ಇದರಿಂದ ಎಷ್ಟೋ ಮಕ್ಕಳು ತರಗತಿಯ ಬಳಿಕವೂ ಎಷ್ಟು ಉತ್ಸಾಹಿತರಾಗಿರುತ್ತಾರೆಂದರೆ ಮತ್ತದೇ ತರಗತಿಯ ಗುಂಗಿನಲ್ಲಿ ಕುಳಿತು ಮಾರ್ಗದರ್ಶಕರಲ್ಲಿ ಸಂವಾದ ನಡೆಸುತ್ತಾರೆ. ಮುಂದೆ ನಾಟ್ಯಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿದರೆಂದಾದರೆ ೧೦೮ ಕರಣಾಭ್ಯಾಸದ ಪ್ರಾಯೋಗಿಕ ತರಗತಿಗಳನ್ನು ಬೆಂಗಳೂರಿನ ಹೆಸರಾಂತ ಗುರುಗಳಲ್ಲಿ ಕಲಿಸಲು ವ್ಯವಸ್ಥೆ ಮಾಡಲಾಗುತ್ತದೆ. ಅಂತಿಮವಾಗಿ ಕೆಲವು ಪರೀಕ್ಷೆಗಳನ್ನು ನಡೆಸಿ ಅವರ ಭವಿಷ್ಯಕ್ಕೆ ಉಪಯೋಗವಾಗುವಂತೆ ಅರ್ಹತಾ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಈಗಾಗಲೇ ಮೊದಲ ಮೂರು ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮತ್ತಷ್ಟು ಆಸಕ್ತಿಯನ್ನು ತೋರುತ್ತಿದ್ದಾರೆ’ ಎನ್ನುತ್ತಾರೆ ನೂಪುರಭ್ರಮರಿಯ ನಿರ್ದೇಶಕಿ ಮನೋರಮಾ.

ಹೀಗೆ ನೃತ್ಯಸಂಶೋಧನೆ, ಪ್ರಕಾಶನ ಮತ್ತು ಸಾಂಪ್ರದಾಯಿಕ ಕಲಿಕೆಯಲ್ಲಿ ಗಮನಾರ್ಹವಾಗಿ ತೊಡಗಿಸಿಕೊಂಡಿರುವ ನೂಪುರ ಭ್ರಮರಿ ಪ್ರತಿಷ್ಠಾನ ಈಗಾಗಲೇ ಹಲವು ವಿನೂತನ ಮಾರ್ಗದರ್ಶೀ ಪ್ರಯತ್ನಗಳು ನಡೆದುಕೊಂಡು ಬಂದಿವೆ. ಕರಾವಳಿಯಲ್ಲೇ ಮೊದಲ ಬಾರಿಗೆ ಆಯೋಜನೆಗೊಂಡ ನಾಟ್ಯಶಾಸ್ತ್ರಾಧಾರಿತವಾದ ಕಥಾಕೊರಿಯೋಗ್ರಫಿ ‘ನಾಟ್ಯಚಿಂತನ’, ಸಾಮಾಜಿಕ ಸಂವಹನದ ಆಶಯದಲ್ಲಿ ನೃತ್ಯಕ್ಷೇತ್ರದಲ್ಲೇ ಪ್ರಪ್ರಥಮವೆಂಬಂತೆ ಮೂಡಿಬಂದ ‘ಬಾಲಾಲಾಪ’ವೆಂಬ ಸಂಶೋಧನಾಧಾರಿತ ವರ್ಣ ನೃತ್ಯಪ್ರಸ್ತುತಿ, ನಾಟ್ಯಶಾಸ್ತ್ರ-ನಟುವಾಂಗ ಸರ್ಟಿಫಿಕೇಟ್ ಕೋರ್ಸ್‌ಗಳು…ಹೀಗೆ ಹಲವು ಪಾರಂಪರಿಕ ಆದರೆ ಕಾಲದ ಓಟಕ್ಕೆ ತೆರೆಮರೆಯಲ್ಲಿ ಅಡಗಿದ ವಿಚಾರಗಳನ್ನು ಸಮಾಜಕ್ಕೆ, ನೃತ್ಯಾಸಕ್ತರಿಗೆ ಕೊಡುವ ಅನೇಕ ಪ್ರಸ್ತುತಿಗಳನ್ನು ನಡೆಸಿಕೊಂಡು ಬರುತ್ತಿದೆ.

 9ನೇ ವರ್ಷ :  ಇದಕ್ಕೆ ಮತ್ತೊಂದು ಸೇರ್ಪಡೆಯೆಂದರೆ ಇತ್ತೀಚೆಗೆ ಕರ್ನಾಟಕ-ತಮಿಳ್ನಾಡು ಆಸ್ಥಾನ ಮತ್ತು ಆಲಯ ನೃತ್ಯಪ್ರಂಪರೆಯಲ್ಲಿ ಚಾಲ್ತಿಯಲ್ಲಿದ್ದ ಹಳೆಯ ನೃತ್ಯಬಂಧಗಳ ಪುನರ್ ನವೀಕರಣ ಮತ್ತು ತರಬೇತಿ.

ಈ ಸಂಬಂಧವಾಗಿ ಮೇ ೨೫, ೨೬, ೨೦೧೫ರಂದು ಪುತ್ತೂರಿನಲ್ಲಿ ಎರಡು ದಿನಗಳ ರಾಜ್ಯಮಟ್ಟದ ಶಾಸ್ತ್ರ ಪ್ರಯೋಗ ನೃತ್ಯಚಿಂತನ ಎಂಬ ಕಾರ್ಯಾಗಾರ ನಡೆದು ಯಶಸ್ಸನ್ನು ಕಂಡಿತು. ಈ ಕಾಲಕ್ಕೆ ಮರೆಯಾಗಿರುವ ರಾಜಾಶ್ರಯ ಮತ್ತು ಆಲಯ ನೃತ್ಯಪದ್ಧತಿಗಳಲ್ಲಿ ಬೆಳೆದುಬಂದ ವಿಶೇಷವಾದ ನೃತ್ಯಬಂಧಗಳ ಬಗ್ಗೆ ಶಾಸ್ತ್ರ ಮತ್ತು ಪ್ರಯೋಗ ವಿಭಾಗಗಳೆರಡರಲ್ಲೂ ತರಬೇತಿ ನೀಡಿ ನೃತ್ಯಾಸಕ್ತರನ್ನು ಮರುಚಿಂತನೆಗೆ ಒಳಪಡಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು. ವಳವೂರು ತೋಡಯಂಗಳು, ತಂಜಾವೂರಿನ ಸ್ವರಸರಿ ನೃತ್ತ ಮತ್ತು ಖಂಡ ಧ್ರುವತಾಳಕ್ಕೆ ಹೆಣೆದ ಮೈಸೂರು ಪದ್ಧತಿಯ ಅಲರಿ ಆಂಗಿಕಕ್ರಮ, ನಾಂದೀಸ್ವನ ಮತ್ತು ನಾಟ್ಯಶಾಸ್ತ್ರಾಧಾರಿತ ಜರ್ಜರ-ತಾಂಡವ ಶ್ಲೋಕಗಳು ತರಬೇತಿಯ ಮುಖ್ಯ ಕಲಿಕಾರ್ಹ ವಿಷಯಗಳಾಗಿದ್ದವು. ಚಿಣ್ಣರು, ಹಿರಿಯರು ಎಂಬ ವಯಸ್ಸಿನ ಬೇಧವಿಲ್ಲದೆ ಎಲ್ಲಾ ಬಗೆಯ ವಯೋಮಾನದವರಿಗೂ ಆಯೋಜನೆಗೊಂಡ ಕಾರ್ಯಾಗಾರದಲ್ಲಿ ಏಕಕಾಲಕ್ಕೆ ಬೇರೆ ಬೇರೆ ಗುಂಪುಗಳನ್ನು ಮಾಡಿ ಅರ್ಹತೆಗನುಸಾರವಾಗಿ ಶಾಸ್ತ್ರ ಮತ್ತು ಪ್ರಯೋಗದ ಕಲಿಕೆಯನ್ನು ಸಂಘಟಿಸಲಾಗಿತ್ತು.

ಈ ಸಂಬಂಧವಾಗಿ ಕಾರ್ಯಾಗಾರದ ಸಂಪನ್ಮೂಲವ್ಯಕ್ತಿ ಮತ್ತು ಸಂಘಟಕರಾದ ವಿದುಷಿ ಮನೋರಮಾ ಬಿ.ಎನ್ ಅವರು, ‘ಹಳೆಯ ನೃತ್ಯಬಂಧಗಳ ಮೂಲಕ ನೃತ್ಯಕಲಿಕೆಯಲ್ಲಿ ಉಂಟಾಗುತ್ತಿದ್ದ ನಾಜೂಕು, ಲಾಸ್ಯ, ಸುಕುಮಾರ ಕಲ್ಪನೆಗಳು ಇಂದಿನ ನೃತ್ಯಪದ್ಧತಿಯಲ್ಲಿ ಬಹುತೇಕ ನಾಶವಾಗುತ್ತಲೇ ಸಾಗಿದೆ. ಈಗ ಈ ಕಾರ್ಯಾಗಾರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೂ ಅಭ್ಯರ್ಥಿಗಳ ಆಂಗಿಕಾಭಿವ್ಯಕ್ತಿ ಎಷ್ಟೊಂದು ಬಿಗಿಯಾಗಿದೆ ಎಂದರೆ ಕೇವಲ ಒಂದೇ ಒಂದು ಅಲರಿ ನೃತ್ತವನ್ನೇ ತಮ್ಮ ಮೈಮನಸ್ಸಿಗೆ ಅಳವಡಿಸಿಕೊಳ್ಳಲು ಕಲಾವಿದರಿಗೆ ಬಹಳ ಸಮಯ ಬೇಕಾದೀತು. ಬರಿಯ ರೇಖಾವಿನ್ಯಾಸದತ್ತಲೇ ಗಮನ ಹರಿಸುವ ಇಂದಿನ ಅನೇಕ ಭರತನಾಟ್ಯ ಕಲಾವಿದರಿಗೆ ನೃತ್ತದಲ್ಲಿಯೂ ಅಭಿನಯವಿದೆ ಎಂಬ ಸೌಂದರ್ಯಪ್ರಜ್ಞೆ ಮರೆಯಾಗುತ್ತಿದೆ. ಹಾಗಾಗಿ ಇರುವುದರಲ್ಲೇ ಹೇಗೋ ತೂಗಿಸಿಕೊಂಡು ಹೋಗುವ ಜಾಯಮಾನ. ಫಲವಾಗಿ ‘ಹಳತು’ ಎಂದು ಮೂಲೆಗೊತ್ತಿ ಕಲಿಯಲು ಬರುವ ಆಸಕ್ತರೂ ಇತ್ತೀಚೆಗೆ ಬೆರಳೆಣಿಕೆಯಷ್ಟು ಮಂದಿ. ಇದರಿಂದ ಒಂದಾನೊಂದು ಕಾಲಕ್ಕೆ ನಾವು ಕಷ್ಟಪಟ್ಟು ಕಲಿತು ರೂಢಿಸಿಕೊಂಡು ಬಂದಿದ್ದ ಹಳೆಯ ಸೊಬಗನ್ನು ಮರೆಯಬೇಕಾದ ಸ್ಥಿತಿ ಒದಗಿದೆ. ಆದರೆ ಹಳತಿನ ಗಟ್ಟಿತನ, ಸೊಬಗು ಇಂದಿನ ಆಧುನಿಕ ಭರತನಾಟ್ಯದ ಚಲನೆಗಳ ಬಿಗಿಗೆ ಖಂಡಿತಾ ಇಲ್ಲ. ಹಾಗಾಗಿ ಪರಂಪರೆಯ ಪ್ರಯೋಗಗಳನ್ನು ಶಾಸ್ತ್ರದ ನೆರಳಿನಲ್ಲಿ ಪುನಶ್ಚೇತನಗೊಳಿಸುವ ಪ್ರಯತ್ನದಲ್ಲಿ ಗುರುಕುಲ ಮಾದರಿಯ ಕ್ರಮದಲ್ಲಿ ಕಟಿಬದ್ಧರಾಗಿದ್ದೇವೆ’ ಎನ್ನುತ್ತಾರೆ.

ಇಂತಹ ಹಳೆಯ ನೃತ್ಯಬಂಧಗಳ ನವೀಕರಣದಲ್ಲಿ ಮತ್ತೊಂದಷ್ಟು ನೃತ್ತಗಳೂ ಜೊತೆ ಸೇರಿವೆ. ರಾಗಾನುರಾಗತಿನೃತ್ತ, ಉಪೋದ್ಘಾತ ಬಂಧ, ಸ್ವರಜತಿ, ನಾಟ್ಯಶಾಸ್ತ್ರಾಧಾರಿತ ಕೌತ್ವ-ಶಬ್ದ-ಶ್ಲೋಕಗಳು ಈ ಪುನರ್ ನವೀಕರಣ ತರಬೇತಿಯ ಪಟ್ಟಿಯಲ್ಲಿರುವ ಅಮೂಲ್ಯರತ್ನಗಳು. ಭವಿಷ್ಯದಲ್ಲಿಯೂ ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಅಪೇಕ್ಷೆಯನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆಸಕ್ತರು ಕಾರ್ಯಾಗಾರಕ್ಕೆಂದೇ ಕಾಯಬೇಕಾಗಿಲ್ಲ; ಬದಲಾಗಿ ಪಾರಂಪರಿಕ ನೃತ್ಯಪದ್ಧತಿಗಳ ಅಭಿಯಾನವೇ ಇದಾಗಿದ್ದು ಕಲಾವಿದರಿಗೆ, ಚಿಣ್ಣರಿಗೆ ಆಸಕ್ತಿಯಿದ್ದಲ್ಲಿ ಅದನ್ನು ಮೂರು-ಆರು ತಿಂಗಳ ಕೋರ್ಸ್ ಆಗಿಯೂ ಪರಿಗಣಿಸಿ ಕಲಿಕೆಯನ್ನು ನಡೆಸಬಹುದು ಎಂಬ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಕಲಿಕಾಸಕ್ತರಿಗೆ ಈ ಸಂಬಂಧ ಪ್ರಮಾಣಪತ್ರಗಳನ್ನೂ ವಿತರಣೆ ಮಾಡಲಾಗುತ್ತದೆ.

ಕಾರ್ಯಾಗಾರದ ವಾತಾವರಣವನ್ನು ಇಷ್ಟಪಟ್ಟ ಮಂಗಳೂರಿನ ಹಿರಿಯ ನೃತ್ಯವಿದ್ಯಾರ್ಥಿ ಸಾವಿತ್ರೀ ಶಾಸ್ತ್ರಿ ಅವರು ‘ಈ ರೀತಿಯ ಗುರುಕುಲಮಾದರಿಯ ಕಲಿಕೆ ಮತ್ತು ಕಾರ್ಯಾಗಾರ ನಿಜಕ್ಕೂ ಒಂದು ಅರ್ಥಪೂರ್ಣ ಕಾರ್ಯಕ್ರಮ. ಇದರ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಔಪಚಾರಿಕತೆಯ ಬಿಗಿ ಎನ್ನುವುದು ಸೋಕದ ಮನೆಯಷ್ಟೇ ಆಪ್ತವಾದ ಕಾರ್ಯಕ್ರಮ. ಹಾಗಾಗಿ ಮುಕ್ತವಾಗಿ ಚರ್ಚೆ-ಸಂವಾದಗಳನ್ನೂ ನಡೆಸಿದ್ದೇವೆ. ನನಗೆ ವಿದ್ವತ್ಪೂರ್ವ ಪರೀಕ್ಷೆಗಳು ಮುಗಿದಿದ್ದರೂ ಈವರೆಗೆ ಕಲಿಕೆಯಲ್ಲಿ ಒದಗಿಬರದ ಅದೆಷ್ಟೋ ಸಂಗತಿ ಕಲಿತುಕೊಂಡಿದ್ದೇನೆ. ಹಾಗೆ ನೋಡಿದರೆ ನಾವಿಂದು ನರ್ತಿಸುವ ಎಷ್ಟೋ ನೃತ್ಯಬಂಧಗಳಲ್ಲಿ ಸೊಗಸಿಲ್ಲ, ಸುಮ್ಮನೆ ಏನೋ ಮಾಡುತ್ತಿದೇವೆ. ಹಾಗಾಗಿಯೇ ಇಲ್ಲಿ ಕಲಿಸಲಾಗುತ್ತಿರುವ ಅಲರಿಯಂತಹ ಒಂದು ನೃತ್ತಬಂಧದ ಒಂದು ಆಂಗಿಕ ಕಲಿಯಲೇ ಹೈರಾಣಾಗಿ ಹೋಗುತ್ತಿದ್ದೇವೆ. ಅದರಲ್ಲಿಯೂ ಇತಿಹಾಸದ ಗರ್ಭದಲ್ಲಿ ಎಷ್ಟೊಂದು ಅನರ್ಘ್ಯ ರತ್ನಗಳಿವೆಯೆಂದರೆ, ಅವೆಲ್ಲವನ್ನೂ ಮರೆತು ನಾವಿಂದೀಗ ನೃತ್ಯ ಮಾಡುತ್ತಿದ್ದೇವೆ ಎಂದು ಗಾಢವಾಗಿ ಕಂಡಿತು. ಶಾಸ್ತ್ರತರಗತಿಗಳಲ್ಲಂತೂ ನಾವೆಷ್ಟೊಂದು ಕಳೆದುಕೊಂಡಿದ್ದೇವೆ ಎಂಬ ಅರಿವು ಬಂದು ಕಣ್ಣು ಮಂಜಾಗುತ್ತದೆ. ಇಷ್ಟು ವರುಷ ಇದಾವುದನ್ನೂ ಅರಿಯದೆ, ಕತ್ತಲೆಯಲ್ಲಿದ್ದೆವೆಲ್ಲಾ ಎಂದೆನಿಸಿತು. ಈ ತರಹದ ಕಾರ್ಯಕ್ರಮ ಮುಂದೆಯೂ ಮಾಡಿದರೆ ಎಷ್ಟೇ ತೊಡಕುಗಳಿದ್ದರೂ ಬಂದು ಕಲಿಯಲು ಸಿದ್ಧ’ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಇದೇ ಬಗೆಯ ಅಭಿಪ್ರಾಯ ಕಾರ್ಯಾಗಾರದ ವಿದ್ಯಾರ್ಥಿಗಳದ್ದು ಕೂಡಾ. ‘ಬಹಳ ಸರಳ ಅಡವುಗಳಿಂದ ಕೂಡಿದ ಆಂಗಿಕಾಭಿವ್ಯಕ್ತಿಯಾದರೂ ಅದು ಒಳಗೊಳ್ಳುವ ಚಲನೆಗಳ ಒಟ್ಟಂದವನ್ನು ಮೈಯಲ್ಲಿ ಒಡಮೂಡಿಸಿಕೊಳ್ಳುವುದು ಎಂದರೆ ದೊಡ್ಡ ಸವಾಲು. ಆದರೆ ಒಮ್ಮೆ ಅವು ಮೈಮೇಲೆ ಆವಾಹನೆ ಆಯಿತೆಂದರೆ ಅದರಷ್ಟು ಚೆಂದ ಬೇರಾವುದೂ ಇಲ್ಲ ಎನ್ನಿಸುತ್ತದೆ. ಹಾಗಾಗಿ ಎಷ್ಟೋ ಕಾರ್ಯಾಗಾರಗಳಿಗೆ ಹೋಗಿದ್ದೆವೆಯಾದರೂ ಇಲ್ಲಿ ಕಲಿತ ಸೊಗಸು ಬೇರೆಲ್ಲಿಯೂ ದೊರಕಿಲ್ಲ. ಇದರ ಮೂಲಕ ಒಳ್ಳೆಯ ನೃತ್ಯಕ್ಕೆ ಬೇಕಾದ ಅನೇಕ ವಿಚಾರ ಕಲಿತಿದ್ದೇವೆ. ಮುಂದಕ್ಕೂ ಖಂಡಿತಾ ಅದನ್ನು ಅಳವಡಿಸಿಕೊಳ್ಳುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಕಣ್ತುಂಬಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಇಂದಿಗೆ ಜಾಳುಜಾಳಾಗಿ ಹೋಗುತ್ತಿರುವ ಭರತನಾಟ್ಯದ ಅಲರಿಪ್ಪುವಿನಿಂದ ತಿಲ್ಲಾನದ ವರೆಗೆ ಸಾಗುವ ಎಂದಿನ ಮಾರ್ಗಪದ್ಧತಿಯ ನಡುವೆ; ಅದೇ ಮಾರ್ಗಪದ್ಧತಿಯ ಬೇರುಗಳೆಡೆಗೆ ತೆರಳುವೆಂದರೆ ಖಂಡಿತಾ ಸುಲಭದ ಮಾತಲ್ಲ. ಅದರಲ್ಲೂ ಆಸ್ಥಾನ ಮತ್ತು ಆಲಯ ನೃತ್ಯಪರಂಪರೆಯ ಸೌಂದರ್ಯ ಮತ್ತು ವಿಶೇಷತೆಯನ್ನು ಶಿಸ್ತು, ಔಚಿತ್ಯ, ಅಧ್ಯಯನದ ಆಧಾರದಲ್ಲಿ ಪುನಶ್ಚೇತನಗೊಳಿಸುವ ಈ ಬಗೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮಾತ್ರವಲ್ಲ, ಈ ಮಾದರಿಯ ಹಳತಿನ ಸೌಗಂಧವನ್ನು ಉಳಿಸುವಲ್ಲಿ ಮಹತ್ತ್ವದ ಹೆಜ್ಜೆ.

ನೂಪುರಭ್ರಮರಿಯು ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ ಕಲಾಗೌರಿಯ ಸಹಭಾಗಿತ್ವದಲ್ಲಿ ಮಹಾಶಿವರಾತ್ರಿಯಂದು ನೃತ್ಯಾಧ್ಯಯನದ್ವಾರಾ ಶಿವಾರಾಧನೆಯನ್ನು ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣವನ್ನು ಬಸವನಗುಡಿಯ ಕಲಾಗೌರಿ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.

ವಿಚಾರಸಂಕಿರಣದ ಶೀರ್ಷಿಕೆ- ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನವೆಂದಾಗಿದ್ದು; ಈ ಆಶಯಕ್ಕನುಗುಣವಾಗಿ ಅನುಪಮಾ ಜಯಸಿಂಹ – ಅಡವುಗಳ ಸಂಸ್ಕೃತ ಆಧಾರದ ಕುರಿತು, ರಂಜನಾ ನಾಗರಾಜ್ – ಅಡವು ಮತ್ತು ಹಸ್ತಮುದ್ರೆಗಳ ಸಾಂಜ್ಞಿಕ ವಿನ್ಯಾಸದ ಕುರಿತು; ಮಧುಲಿಕಾ ಶ್ರೀವತ್ಸ– ನಾಯಿಕೆಯರ ನೃತ್ಯಸಾಹಿತ್ಯಗಳಲ್ಲಿ ನಾಯಕಭಾವದ ಪಾತ್ರದ ಕುರಿತು; ದೀಪ್ತಿಶ್ರೀ ಭಟ್ – ನೃತ್ಯ ಮತ್ತು ನಾಟಕಗಳಲ್ಲಿ ಸಖಿಯರ ಕರ್ತವ್ಯ ಮತ್ತು ವರ್ಗೀಕರಣದ ಕುರಿತು ಸಂಶೋಧನ ಪ್ರಬಂಧಗಳನ್ನು ನೃತ್ಯಸಹಿತವಾಗಿ ಮಂಡಿಸಿದರು. ಆ ಬಳಿಕ ಪ್ರಸ್ತುತ ವರ್ಷಗಳಲ್ಲಿ ನೂತನವಾಗಿ ವಿನ್ಯಾಸಗೊಳ್ಳುತ್ತಿರುವ ಪಾರಂಪರಿಕ ನೃತ್ತಬಂಧ ಅಲರಿಪ್ಪುವಿನ ನೂತನ ದೃಷ್ಟಿ ಮತ್ತು ಪ್ರಾಯೋಗಿಕ ಸವಾಲುಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ನಾಡಿನ ಅನೇಕ ಕಡೆಗಳಿಂದ ಆಗಮಿಸಿದ್ದ ನೃತ್ಯ ಅಧ್ಯಯನಕಾರರು, ವಿದ್ಯಾರ್ಥಿಗಳು ಮತು ಸಂಶೋಧಕರು ಈ ವಿಚಾರಸಂಕಿರಣದಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದರು.

ವಿಶೇಷ ಉಪನ್ಯಾಸದಲ್ಲಿ ಶ್ರೀ ಅರ್ಜುನ್ ಭಾರಧ್ವಾಜ್, ವಿದ್ವಾಂಸರು, ಗ್ರೀಕ್ ಭಾಷಾಪಂಡಿತರು ಮತ್ತು ಸಹಾಯಕ ಪ್ರಾಧ್ಯಾಪಕರು, ಅಮೃತ ವಿಶ್ವವಿದ್ಯಾನಿಲಯ ಇವರಿಂದ – ಗ್ರೀಕ್ ಮತ್ತು ಭಾರತದ ಕಲೆ ಹಾಗೂ ಅಲಂಕಾರಶಾಸ್ತ್ರದ ಬಂಧುತ್ವ, ಸಾಮ್ಯ ಹಾಗೂ ಅವೈಷಮ್ಯದ ಕುರಿತು ಮಾತನಾಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನೂಪುರ ಭ್ರಮರಿಯ ದಶವರ್ಷ ವಿಶೇಷ- ಆನ್‌ಲೈನ್ ಸಂಶೋಧನಾ ನಿಯತಕಾಲಿಕೆಯ ಸಮಗ್ರ ಆವೃತ್ತಿ ಅನಾವರಣಗೊಂಡಿತು. ಇದೇ ಸಂದರ್ಭ ಕೆ.ಎನ್ ಅನಂತರಾಮಯ್ಯ (ಹಿರಿಯ ಆಯೋಜಕರು, ಬಿಟಿ‌ಎಂ ಕಲ್ಚರಲ್ ಅಕಾಡೆಮಿ) ಇವರಿಗೆ- ಕಲಾಯೋಜನಕೌಶಿಕ ಎಂಬ ಬಿರುದನ್ನಿತ್ತು ಹಾಗೂ ಸುಬ್ಬುಕೃಷ್ಣ (ಸಹೃದಯೀ ಪ್ರೇಕ್ಷಕ ಮತ್ತು ಬರೆಹಗಾರ, ಸಂಘಟಕರು) ಇವರಿಗೆ- ಸಹೃದಯ ಸದ್ರತ್ನ ಎಂಬ ಬಿರುದನ್ನಿತ್ತು ಸನ್ಮಾನಿಸಲಾಯಿತು. ಅಭಿನಂದನಾ ಭಾಷಣವನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ನೆರವೇರಿಸಿ ಸನ್ಮಾನ ಪತ್ರವನ್ನು ವಾಚಿಸಿದರು.

ಸಂಜೆ ನಡೆದ ಶಿವಾರ್ಪಣಂ- ಭರತನೃತ್ಯ ಕಾರ್ಯಕ್ರಮ ಮೇಘಾ ಶ್ರೀನಿವಾಸ್ ಮತ್ತು ಸಂಗೀತಾ ಅಯ್ಯರ್ (ಡಾ.ಶೋಭಾ ಶಶಿಕುಮಾರ್ ಅವರ ಶಿಷ್ಯೆಯರು) ಇವರಿಂದ ಮೂಡಿಬಂತು. ಬಾದಾಮಿಯ ಮಹಾನಟನ(ಶಿವ) ಕುರಿತು ಡಾ. ಮನೋರಮಾ ಬರೆದ ಮೊತ್ತ ಮೊದಲ ಕನ್ನಡ ನೃತ್ಯ ಸ್ತುತಿ-ಕೌತ್ವ, ಮಯೂರವಿನ್ಯಾಸದಲ್ಲಿ ಅರಳಿದ ಅಲರಿಪು ನೃತ್ತ ಪ್ರಮುಖ ನೂತನ ಬಗೆಯ ಅಧ್ಯಯನಾಧಾರಿತ ನೃತ್ಯಗಳಾಗಿ ನೆರೆದವರ ಮೆಚ್ಚುಗೆಗೆ ಪಾತ್ರವಾದವು.

 ಇದೇ ವರ್ಷ ಸಂಭ್ರಮದ ಮುಂದುವರಿದ ಭಾಗವಾಗಿ ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣವನ್ನು ಬೆಂಗಳೂರಿನ ಕಲಾಗೌರೀ ಸಭಾಂಗಣದಲ್ಲಿ ಆಗಸ್ಟ್ ೧೨, ೨೦೧೮ರಂದು ಹಮ್ಮಿಕೊಂಡಿತ್ತು. ವಿಚಾರಸಂಕಿರಣ ಶೀರ್ಷಿಕೆ ಶಾಸ್ತ್ರಾನ್ವಯದ ಪ್ರಯೋಗದೃಷ್ಟಿಯತ್ತ ನೃತ್ಯಚಿಂತನ ಎಂಬುದಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಸಂಶೋಧನ ಪ್ರಬಂಧಗಳ ಮಂಡನೆ ನೃತ್ಯಸಹಿತವಾಗಿ ಏರ್ಪಡಿಸಲಾಗಿತ್ತು. ಶ್ರೀಮತಿ ಪದ್ಮಿನಿ ಎ ರಾವ್, ಸಂಶೋಧನಾಸಕ್ತರು ಮತ್ತು ನಿರ್ದೇಶಕರು ‘ ಶ್ರೀನೃತ್ಯನಿಕೇತನ’, ಇವರಿಂದ- ಲಕ್ಷಣ ಗ್ರಂಥಗಳಲ್ಲಿ ನೃತ್ಯಸ್ಥಾನಕಗಳ ತಂತ್ರಗಳ ಕುರಿತು ಕಥಕ್, ಕೂಚಿಪೂಡಿ, ಓಡಿಸ್ಸಿ ನೃತ್ಯದ ಸ್ಥಾನಕಗಳ ಪ್ರಾತ್ಯಕ್ಷಿಕೆ ಸಹಿತವಾಗಿ ನೆರವೇರಿಸಿದರು. ಡಾ. ದ್ವರಿತಾ ವಿಶ್ವನಾಥ, ನಿರ್ದೇಶಕರು – ನಿರ್ಮಿತಿ ಕಲಾಲಯ ಮತ್ತು ಉಪನ್ಯಾಸಕರು, ಕಲೈಕಾವೀರಿ ಕಾಲೇಜು ಇವರಿಂದ- ಪರಕೀಯ ನಾಯಿಕೆಯ ಕುರಿತು ನೃತ್ಯಬಂಧ ಪ್ರಾತ್ಯಕ್ಷಿಕೆಗಳ ಸಹಿತ (ಡಾ. ಪ್ರಿಯಾಶ್ರೀ ರಾವ್ ಗಾಯನ ಸಹಕಾರದೊಂದಿಗೆ) ಏರ್ಪಡಿಸಲಾಗಿತ್ತು. ಇದಾದ ಬಳಿಕ ವಿಶೇಷ ಸೋದಾಹರಣ ಉಪನ್ಯಾಸ- ಶ್ರೀ ಅರ್ಜುನ್ ಭಾರಧ್ವಾಜ್, ವಿದ್ವಾಂಸರು ಮತ್ತು ಸಹಾಯಕ ಪ್ರಾಧ್ಯಾಪಕರು, ಅಮೃತ ವಿಶ್ವವಿದ್ಯಾನಿಲಯ ಇವರಿಂದ- ನಾಟ್ಯಶಾಸ್ತ್ರದ ಸಾರ್ವಕಾಲೀನತೆ- ಷೇಕ್ಸ್‌ಪಿಯರ್ ನಾಟಕಗಳಲ್ಲಿ ಅನ್ವಯದ ಕುರಿತು ಮಾತನಾಡಿದರು. ಎಲ್ಲರ ಪ್ರಬಂಧಮಂಡನಗಳೂ ವಿದ್ವಾಂಸರು ಮತ್ತು ಸಹೃದಯರಿಬ್ಬರಿಂದಲೂ ಅಪಾರವಾದ ಮೆಚ್ಚುಗೆಗೆ ಪಾತ್ರವಾದವು.

ಸಂಜೆ ನಡೆದ ಸಮಾರೋಪದಲ್ಲಿ ವಿಚಾರಸಂಕಿರಣದ ಅಧ್ಯಕ್ಷ ವಿದ್ವಾಂಸರಿಂದ ಪ್ರತಿಕ್ರಿಯೆ ಗಳು ಜರುಗಿದವು. ಇದೇ ಸಂದರ್ಭದಲ್ಲಿ ಭರತನಾಟ್ಯಬೋಧಿನಿ- ನೃತ್ಯ ಪಠ್ಯಕೃತಿಯನ್ನು ನಾಡಿನ ಹೆಸರಾಂತ ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಹೆಸರಾಂತ ಸಂಶೋಧಕರೂ, ವಿದ್ವಾಂಸರೂ ಆಗಿರುವ ಡಾ. ಶೇಷ ಶಾಸ್ತ್ರಿ, ಇತಿಹಾಸ ತಜ್ಞ ಡಾ. ಎಚ್.ಎಸ್. ಗೋಪಾಲರಾವ್ ಮತ್ತು ‘ವಿಮರ್ಶಾ ವಾಙ್ಮಯಿ’, ಹಿರಿಯ ರಂಗಕರ್ಮಿ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ ಅನಾವರಣ ಗೊಂಡಿತು. ಈ ಕೃತಿಯು ಭರತನಾಟ್ಯವನ್ನು ಕಲಿಯುವ ಪ್ರಾಥಮಿಕ ಪೂರ್ವ/ಪ್ರಾಥಮಿಕ/ಪ್ರಾಥಮಿಕ ಅನಂತರ ಹಂತದವರಿಗಾಗಿ ರಚಿಸಲಾಗಿದ್ದು; ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಕಟಗೊಂಡು ಕರ್ನಾಟಕದ ನೃತ್ಯಪರೀಕ್ಷೆ/ಗಂಧರ್ವ/ನಾಟ್ಯಶಾಸ್ತ್ರ/ಸ್ಪರ್ಧಾತ್ಮಕ/ಅರ್ಹತಾ ಪರೀಕ್ಷೆಗಳಿಗೂ ಉಪಯುಕ್ತವಾದುದಾಗಿದೆ. ನೂಪುರ ಭ್ರಮರಿ (ರಿ.)ಮತ್ತು ಕಲಾಗೌರಿ ಸಂಸ್ಥೆಗಳಿಂದ ಪ್ರಕಾಶನ ಮಾಡಲಾಗಿದ್ದು ಡಾ. ಮನೋರಮಾ ಅಧ್ಯಯನನಿಷ್ಠವಾಗಿ ಮೂಲ ಕನ್ನಡ ಪಠ್ಯವನ್ನು ರಚಿಸಿದರೆ; ಇಂಗ್ಲೀಷ್‌ಗೆ ಭಾಷಾನುವಾದವನ್ನು ಶಾಲಿನಿ ಪಿ. ವಿಠಲ್ ಮತ್ತು ಡಾ.ದ್ವರಿತಾ ವಿಶ್ವನಾಥ ಮಾಡಿದ್ದಾರೆ. ಸುಮಾರು 308 ಪುಟಗಳ ಈ ಕೃತಿ 400 ರೂ ಮುಖಬೆಲೆಯುಳ್ಳದ್ದಾಗಿದೆ.

ಇದಾದ ಬಳಿಕ ನೃತ್ಯಸಂಶೋಧನೆಗೆಂದೇ ಮೀಸಲಾದ ನೂಪುರ ಭ್ರಮರಿಯ ಆನ್ಲೈನ್ ಜರ್ನಲ್ ಪೋರ್ಟಲ್ www.noopuradancejournal.org ಅನಾವರಣಗೊಂಡಿತು. ನೂಪುರ ಭ್ರಮರಿಗೆ ಮತ್ತು ಭರತನಾಟ್ಯಬೋಧಿನಿ ಪುಸ್ತಕಕ್ಕಾಗಿ ದುಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ಸಂಪನ್ನವಾಯಿತು. ಉಡುಪಿಯ ಬರೆಹಗಾರ ಎನ್.ರಾಮ ಭಟ್, ಬೆಂಗಳೂರಿನ ಬರೆಹಗಾರ ಸಿ.ಎಸ್.ರಾಮಚಂದ್ರ ಹೆಗಡೆ ಮತ್ತು ಸುಮಂಗಲಾ ಶ್ರೀನಿವಾಸ್ ಅವರು ಸನ್ಮಾನ ಸ್ವೀಕರಿಸಿದರು. ಸನ್ಮಾನಿತರ ಪರವಾಗಿ ಎನ್ ರಾಮ ಭಟ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಪುಸ್ತಕದ ಪ್ರಥಮ ಗೌರವಪ್ರತಿಗಳನ್ನು ನೃತ್ಯವಿದುಷಿ ಡಾ. ಕೆ. ವಸಂತಲಕ್ಷ್ಮಿ, ಡಾ.ಪ್ರಿಯಾಶ್ರೀ ರಾವ್ ಮತ್ತು ವಿದ್ವಾನ್ ಎಚ್.ಎಸ್.ವೇಣುಗೋಪಾಲ್ ಅವರಿಗೆ ಪ್ರದಾನ ಮಾಡಲಾಯಿತು.

ಇದಾದ ಬಳಿಕ ಕಲಾಗೌರಿ ಸಂಧ್ಯೆ ನೃತ್ಯ ಕಾರ್ಯಕ್ರಮದಲ್ಲಿ ನೂತನ ಶಿಲ್ಪ ಪ್ರಸಕ್ತಿಯನ್ನು ಆಧರಿಸಿದ ಕಲಾಗೌರಿ ಸ್ತುತಿಯನ್ನು ಮಧುಲಿಕಾ ಶ್ರೀವತ್ಸ ಅವರು ಪ್ರಸ್ತುತಪಡಿಸಿದರು. ಶಾಲಿನಿ ವಿಠಲ್ ಅವರ ಆರಾಧ್ಯ ಮೂರ್ತಿ ಕಲಾಗೌರಿಯು ಡಾ. ಮನೋರಮಾ ಬಿ‌ಎ. ಎನ್ ಅವರ ಸಂಶೋಧನ ಪ್ರಸ್ತುತಿಗಳಲ್ಲೂ ಒಂದಾಗಿದೆ. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಕಲಾಗೌರಿ ಕೃತಿಯನ್ನು ರಚಿಸಿದ್ದರೆ, ನೃತ್ಯವಿನ್ಯಾಸ-ನಿರ್ದೇಶನವನ್ನು ಡಾ.ಶೋಭಾ ಶಶಿಕುಮಾರ್ ಮಾಡಿರುತ್ತಾರೆ.

ಲೀಲಾಶುಕನ ಕೃಷ್ಣ ಕರ್ಣಾಮೃತವನ್ನಾಧರಿಸಿ ಬರೆದ ಕನ್ನಡ ಅವತರಣಿಕೆಯ ಮೊದಲ ಕನ್ನಡ ಪದವರ್ಣದ ಪ್ರಸ್ತುತಿ-ವಂಶೀವಿಲಾಸ– ಮಧುಲಿಕಾ ಶ್ರೀವತ್ಸ ಅವರ ಮತ್ತೊಂದು ನೃತ್ಯಪ್ರಸ್ತುತಿಯಾಗಿತ್ತು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮತ್ತು ಡಾ.ಮನೋರಮಾ ಬಿ.ಎನ್ ಅವರ ಸಾಹಿತ್ಯರಚನೆ ಮತ್ತು ಕಾಂಚನಾ ರೋಹಿಣಿ ಸುಬ್ಬರತ್ನಂ ಅವರ ನಿರ್ದೇಶನದಲ್ಲಿ ವಿದುಷಿ ಶ್ರುತಿರಂಜನಿ ಕಾಂಚನಾ ಅವರ ಸಂಗೀತ-ಸ್ವರ ಸಂಯೋಜನೆ ಈ ಪದವರ್ಣಕ್ಕಿದೆ. ಮಧುಲಿಕಾ ಅವರ ಸಂಶೋಧನೆ – ನಾಯಿಕೆಯರ ನೃತ್ಯಸಾಹಿತ್ಯಗಳಲ್ಲಿ ನಾಯಕಭಾವದ ಪಾತ್ರದ ಕುರಿತ ಅಂಗವಾಗಿ ಈ ಪದವರ್ಣದ ನೃತ್ಯವನ್ನು ಆಯೋಜಿಸಲಾಗಿತ್ತು.

ನಂತರದಲ್ಲಿ ಡಾ. ಶೋಭಾ ಶಶಿಕುಮಾರ್, ನೃತ್ಯವಿದ್ವಾಂಸರು, ಸಂಶೋಧಕರು, ಇವರಿಂದ ಭರತನೃತ್ಯ ಕಾರ್ಯಕ್ರಮ ಮೂಡಿಬಂದಿತು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ರಚನೆಯಲ್ಲಿ ಕೃಷ್ಣನ ಆಟೋಟ-ಬಾಲಲೀಲೆಗಳ ಕುರಿತ ರಚನೆಯಲ್ಲಿ ರಂಗವನ್ನೇರಿದ ಶೋಭಾ ಅವರು, ನಂತರದಲ್ಲಿ ಶತಾವಧಾನಿ ಡಾ. ಆರ್.ಗಣೇಶರು ರಚಿಸಿದ ಪ್ರೋಷಿತಪತಿಕಾ ನಾಯಿಕೆಯ ಪದವನ್ನು ಅಭಿನಯಿಸಿದರು. ಅನ್ನಮಾಚಾರ್ಯರ ಪ್ರಸಿದ್ಧ ಕೃತಿ ಬ್ರಹ್ಮಮೊಕ್ಕಟೇಯಲ್ಲಿ ಮನೋಜ್ಞವಾಗಿ ವ್ಯಾಖ್ಯಾಭಿನಯವನ್ನು ನೀಡಿ ಸಹೃದಯರ ಕಣ್ಣುಗಳನ್ನು ಹನಿಗೂಡಿಸಿ ಧನ್ಯಭಾವವನ್ನು ಹೊಮ್ಮಿಸಿದರು. ಇದೇ ಸಂದರ್ಭದಲ್ಲಿ ಡಾ. ಶೋಭಾ ಶಶಿಕುಮಾರ್ ಅವರಿಗೆ ನಾಟ್ಯಭಾರತಿ ಎಂಬ ಬಿರುದನ್ನಿತ್ತು ಸನ್ಮಾನಿಸಲಾಯಿತು.

ಹಿಮ್ಮೇಳದಲ್ಲಿ ನಾಗಶ್ರೀ ನಾರಾಯಣ್ (ಗಾಯನ), ಮೇಘಾ ಶ್ರೀನಿವಾಸ್ (ನಟುವಾಂಗ), ವಿದ್ವಾನ್ ಗಿರಿಧರ್ (ಮೃದಂಗ) ಮತ್ತು ಪ್ರಮುಖ್ (ಕೊಳಲು) ಅವರು ಹಿಮ್ಮೇಳದಲ್ಲಿ ಶೋಭಾಯಮಾನವಾದ ಅಭಿವ್ಯಕ್ತಿಯನ್ನು ನೀಡಿದರು. ನೃತ್ಯನಿರೂಪಣೆಯನ್ನುಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ನೆರವೇರಿಸಿದರೆ, ಧನ್ಯವಾದ ಸಮರ್ಪಣೆಯನ್ನು ಡಾ. ಮನೋರಮಾ ಬಿ.ಎನ್ ಅವರು ಮಾಡಿದರು.

ಜುಲೈ ೨೧, ೨೦೧೯ ರಂದು ಬೆಂಗಳೂರಿನ ನಿರ್ಮಿತಿ ಸಂಸ್ಥೆಯ ಸಹಪ್ರಾಯೋಜಕತ್ವದಲ್ಲಿ ನೂಪುರ ಭ್ರಮರಿಯ ಒಂದು ದಿನದ ದಕ್ಷಿಣ ಭಾರತ ವಲಯಮಟ್ಟದ ನೃತ್ಯಸಂಶೋಧನ ವಿಚಾರಸಂಕಿರಣ ಜರುಗಿತು.

ಬೆಳಗ್ಗೆ ೯ ಗಂಟೆಯಿಂದ ಆರಂಭವಾದ ಸಂಶೋಧನಾ ಪ್ರಬಂಧಗಳ ಮಂಡನೆ ಎರಡು ಭಾಗಗಳಲ್ಲಿ ಮೂಡಿ ಬಂದಿತು. ಪೂರ್ವಾರ್ಧದಲ್ಲಿ ಮೊದಲು ಕೃಷ್ಣಪ್ರೀತ ರವಿಕುಮಾರ್ ರವರ ಅಲ್ಲಾರಿಪ್ಪುವಿನ ಇತಿಹಾಸ,ಸ್ವರೂಪ, ವಿಷಯ ಹಾಗೂ ಬದಲಾಣೆಗಳ ಬಗೆಗಿನ ಪ್ರಸ್ತುತಿ ಅಲರಿಪ್ಪುವಿನ ಕುರಿತು ಆಳವಾದ ಸುಧೀರ್ಘವಾದ ಅಧ್ಯಯನವಾಗಿದ್ದಿತು. ನಂತರ ಉಜ್ವಲ್ ಜಗದೇಶ್ ರವರಿಂದ ದಕ್ಷಿಣ ಭಾರತದ ಆಧ್ಯಾತ್ಮಿಕ ಸಾಹಿತ್ಯದಲ್ಲಿ ಶೃಂಗಾರ ಭಕ್ತಿ ಎಂಬ ವಿಷಯದ ಕುರಿತಾಗಿ ಸಂಶೋಧನಾ ಪ್ರಸ್ತುತಿ ಎರಡೂ ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿತು. ನಂತರ ಪವಿತ್ರ ಜಯರಾಮ್ ರವರು ಭರತನಾಟ್ಯದ ದೃಷ್ಠಿಕೋನದಿಂದ ತಿರುಕ್ಕೋವಿಯಾರರ ರಚನೆಗಳ ಒಂದು ನೋಟ ಹೇಗೆಂಬುದನ್ನು ಪ್ರಾಯೋಗಿಕ ಪ್ರದರ್ಶನದ ಮೂಲಕ ಸ್ಪುಟವಾಗಿ ತಿಳಿಸಿಕೊಟ್ಟರು.

ದ್ವಿತೀಯಾರ್ಧದಲ್ಲಿ ಡಾ।। ಮನೋರಮಾ ಬಿ ಎನ್ ರವರ ಸಹಲೇಖನದಲ್ಲಿ ನಾಗರಂಜಿತ ಶಿವರಂಜನ್ ಭರತನಾಟ್ಯದ ಮಾರ್ಗ ಪದ್ದತಿಗೆ ಪಾರ್ತಿಸುಬ್ಬ ಕವಿಯ ಕೃಷ್ಣ ಚರಿತೆ ಯಕ್ಷಗಾನ ಪ್ರಸಂಗದ ಅಳವಡಿಕೆಯ ಕುರಿತಾಗಿ ಸಂಶೋಧನಾ ಪ್ರಭಂದದ ಮಂಡಿಸಿದರು. ಪಾರ್ತಿಸುಬ್ಬ ಕವಿಯ  ಯಕ್ಷಗಾನ ಪ್ರಸಂಗ ಸಾಹಿತ್ಯವು ನೂರಾರು ವರ್ಷಗಳ ಇತಿಹಾಸಹೊಂದಿದ್ದು, ಛಂದೋಬದ್ದವಾಗಿ ನಾಟ್ಯಪದ್ದತಿಗೆಂದೇ ರಚಿಸಲ್ಪಟ್ಟಿರುವ ಕಾರಣ, ಭರತನಾಟ್ಯದ ಕಲಾವಿದರು ಗಮನಿಸಬೇಕಾಗಿದೆ, ಭರತನಾಟ್ಯ ಮಾರ್ಗದಲ್ಲಿ ಬಳಕೆಗಿರುವ ಸಾಹಿತ್ಯ ಪ್ರಕಾರಗಳಾದ ತೊಡಯಮಂಗಳ, ಚೂರ್ಣಿಕೆ, ಪದವರ್ಣ,ಶಬ್ದ, ಜಾವಳಿ  ಮೊದಲಾದವುಗಳಲ್ಲದೆ ನೃತ್ಯರೂಪಗಳಿಗೂ ಪೂರಕವಾಗಿ ಒದಗಿಬರುವ ರೀತಿಯಲ್ಲಿ ಅಳವಡಿಸಿಕೊಳ್ಳಬಹುದಾದ ಪದ್ಯಗಳು ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ಬಹಳಷ್ಟಿವೆ ಎಂದು ಅವರು ಪ್ರತಿಪಾದಿಸಿದರು. ಕೃಷ್ಣಚರಿತೆಯಷ್ಟೇ ಅಲ್ಲದೆ ಈ ಅಧ್ಯಯನವನ್ನು ಪಾರ್ತಿಸುಬ್ಬನ ಉಳಿದ ಪ್ರಸಂಗಗಳಿಗೂ ಮುಂದುವರಿಸುವ ಮೂಲಕ ಯಕ್ಷಗಾನ ಪ್ರಸಂಗಗಳ  ಸಾಹಿತ್ಯದ ಶ್ರೀಮಂತಿಕೆಯನ್ನುಎತ್ತಿಹಿಡಿಯುವುದು ಈ ಅಧ್ಯಯನದ ಮೂಲ ಉದ್ದೇಶವೆಂದು ತಿಳಿಸಿದರು.

ಊಟದ ವಿರಾಮದ ನಂತರ ನೃತ್ಯ ಕಲಿಸುವ ಹಾಗು ಕಲಿಯುವಲ್ಲಿ ಪ್ರಸ್ತುತ ಪರಿಸ್ಥಿತಿ ಹಾಗೂ ಈಗಿನ ಸ್ವಾಗತಾರ್ಹ ಬೆಳವಣಿಗೆಗಳ ವಿಚಾರವಾಗಿ ಕಲಾಸಕ್ತರ ನಡುವೆ ನಡೆದ ಸ್ವಾರಸ್ಯಕರವಾದ ಸಂವಾದದ ನಂತರ ಪುಂಡರೀಕ ವಿಠ್ಠಲನ ದೂತಿಕರ್ಮಪ್ರಕಾಶದ ಕುರಿತು ಸಂಶೋಧನೆ ನಡೆಸಿರುವ ಶಾಲಿನಿ ವಿಠ್ಠಲರವರು ಅದರಲ್ಲಿ ತಿಳಿಸಿರುವ ಇಪ್ಪತ್ತೊಂದು ಬಗೆಯ ದೂತಿಯರ ದೀರ್ಘವಾದ ಪಟ್ಟಿಯ ವಿವರವನ್ನು ಚಿಕ್ಕದಾಗಿ ಚೊಕ್ಕವಾಗಿ ವಿವರಿಸಿದರು. ದೂತಿಯರೆಂದರೆ ಸದಾ ನಾಯಕಿಗೆ ಸಹಾಯಕವಾಗಿರದೆ ಕೆಲವೊಮ್ಮೆ ವಿಪತ್ತು ತಂದೊಡ್ಡುವವವರೂ ಆಗಿರುತ್ತಾರೆ ಎನ್ನುವ ಸೂಕ್ಷ್ಮವನ್ನು, ಆಯ್ದ ಎರಡು ಬಗೆಯ ದೂತಿಯರ ಕುರಿತ ನೃತ್ಯಪ್ರಸ್ತುತಿಯ ಮೂಲಕ ಮಯೂರಿ ನೃತ್ಯಶಾಲೆಯ ನೃತ್ಯತಂಡವು ಸ್ವಾರಸ್ಯಕರವಾಗಿ ಸಾದರಪಡಿಸಿತು.

ನಂತರ ಶತಾವಧಾನಿ ಡಾ।। ಆರ್ ಗಣೇಶರಿಂದ ಡಾ।। ದ್ವಾರಿತಾ ವಿಶ್ವನಾಥ್ ರವರ ನಾಯಿಕಾಂತರಂಗ ಪುಸ್ತಕದ ಲೋಕಾರ್ಪಣೆಯಾಯಿತು. ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಹಾಗು ಡಾ।। ವೈಜಯಂತಿ ಕಾಶಿ ಉಪಸ್ಥಿತರಿದ್ದರು. ಮುಂದೆ, ಡಾ।। ಶೋಭಾ ಶಶಿಕುಮಾರ್ ರವರು ದಿನವಿಡೀ ನಡೆದ ವಿವಿಧ ಸಂಶೋಧನಾ ಪ್ರಸ್ತುತಿಗಳ ವಿಶ್ಲೇಷಣೆ ಮಾಡಿದರು.

ಡಾ।। ಮನೋರಮಾ ಬಿ ಎನ್ ರವರು ಕರ್ನಾಟಕದ ಕೊರವಂಜಿಗಳ ಬಗೆಗಿನ ತಮ್ಮ ಸಂಶೋಧನಾ ಅಧ್ಯಯನವನ್ನು ಪ್ರಸ್ತುತಪಡಿಸಿದರು. ಯಕ್ಷಗಾನ, ದಾಸಸಾಹಿತ್ಯ, ಜಾನಪದ ಇವಿಷ್ಟೇ ಅಲ್ಲದೆ ಸಮಕಾಲೀನ  ನೆಲೆಗಳಲ್ಲಿಯೂ ಸುಮಾರು ಅರವತ್ತು ಬಗೆಯ ಕೊರವಂಜಿಗಳಿರುವುದು ಪತ್ತೆಯಾಗಿರುವುದರ ಕುರಿತು ಉಲ್ಲೇಖಿಸಿ ಅಚ್ಚರಿ ಮೂಡಿಸಿದರು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಕೆಲವು ಕೊರವಂಜಿ ಬಗೆಗಳಾದ ಶ್ರೀನಿವಾಸ ಕೊರವಂಜಿ, ವಿಷ್ಣು ಕೊರವಂಜಿ, ಬ್ರಹ್ಮ ಕೊರವಂಜಿಗಳಲ್ಲದೆ ಬಹಳ ವಿರಳವಾಗಿ ತಿಳಿದಿರುವ ರುಕ್ಮಿಣಿ ಕೊರವಂಜಿ, ಅಶೋಕವನದಸೀತೆಯ ಬಳಿ ಬರುವ ಹನುಮಂತ ಕೊರವಂಜಿ, ಸೀತೆಯ ಬಳಿ ಕುಯುಕ್ತಿಗೆಂದು ಬರುವ ಶೂರ್ಪನಖಿ ಕೊರವಂಜಿ, ಶ್ರೀಚಕ್ರ ಸಂಪಾದಿಸಲು ಬರುವ ದಾರುಕಾಸುರ ಕೊರವಂಜಿ, ಕೆಳದಿಯಲ್ಲಿ ತಿಳಿದು ಬಂದ ರಾಮ ಕೊರವಂಜಿ, ಪಾರ್ವತಿ ಕೊರವಂಜಿ, ಮನ್ಮಥ ಕೊರವಂಜಿ, ಸ್ಮರ ಕೊರವಂಜಿ, ಸಾಹಿತ್ಯ ಸಿಕ್ಕಿರುವ ಇನ್ನೂ ಸಿಕ್ಕಿರದ ಹೀಗೇ ಸುಮಾರು ಅರವತ್ತು ಕೊರವಂಜಿಗಳ ಬಗ್ಗೆ ಈ ಸಂಶೋಧನೆಯಿಂದ ತಿಳಿದುಬಂದಿರುವುದು ವಿರಳ ಹಾಗು ವಿಶೇಷವೆನಿಸಿತು. ಡಾ।। ಶೋಭಾ  ಶಶಿಕುಮಾರ್ ರವರು ಸಂಶೋಧನೆಗೆ ಸಂಬಂಧಿಸಿದಂತೆ ಕನಕದಾಸ ಕೊರವಂಜಿ ನೃತ್ಯ ಪ್ರಸ್ತುತಿಯನ್ನು ನೀಡಿದರು. ಸಾಮಾನ್ಯವಾಗಿ ಕೊರವಂಜಿಯರು ಕಣಿ ಹೇಳುವ ಮುನ್ನ ಮೆಣಸ್ಕಾಳಮ್ಮ, ಮನಸ್ಕಾಳಮ್ಮ ಮುಂತಾದ ಹೆಸರುಗಳನ್ನು ಉಲ್ಲೇಖಿಸುತ್ತಾ ಹೋಗುವ ಪರಿಪಾಠ ಕೇಳಿರುತ್ತೇವೆ ಆದರೆ ನಾರಾಯಣ ಒಬ್ಬನೇ ಗತಿ ಎಂದು ಪ್ರತಿಪಾದಿಸುವುದು ಕನಕದಾಸ ಕೊರವಂಜಿಯ ವಿಶೇಷತೆ. ಈ ಕೊರವಂಜಿಯೂ ಸೇರಿದಂತೆ ಇನ್ನೂ ಕೆಲವು ಆಯ್ದ ಕೊರವಂಜಿಯ ನೃತ್ಯ ಪ್ರಸ್ತುತಿಗಳು ಮಯೂರಿ ನೃತ್ಯ ಶಾಲೆಯ ತಂಡದಿಂದ ಸೊಗಸಾಗಿ ಮೂಡಿಬಂದವು.

ಕಡೆಯಲ್ಲಿ ಅಷ್ಟಾದಶ ಪುರಾಣಗಳಲ್ಲಿ ಬರುವ ಕಥೆಗಳನ್ನು ನೃತ್ಯಕ್ಕೆ ಅಳವಡಿಸುವ ಬಗ್ಗೆ ಡಾ।। ಶೋಭಾ ಶಶಿಕುಮಾರ್ ರವರ ಉಪನ್ಯಾಸ ಹಾಗೂ  ಅದರ ಕುರಿತಂತೆ ಅವರ ಸಂಶೋಧನಾತ್ಮಕ ನೃತ್ಯಪ್ರಸ್ತುತಿ ನೆರವೇರಿತು. ಸರ್ವೇ ಸಾಮಾನ್ಯವಾಗಿ ಅಭಿನಯಿಸುವ ಕಥೆಗಳಲ್ಲದೆ ಅಪರೂಪವಾದ ವಿಭಿನ್ನವಾದ ಕಥೆಗಳನ್ನು ಪ್ರಸ್ತುತಿಪಾದಿಸುವುದು ಅಧ್ಯಯನದ ಉದ್ದೇಶಗಳಲ್ಲಿ ಒಂದಾಗಿದ್ದಿತು. ಆದ ಕಾರಣ ನಳದಮಯಂತಿಯರ  ಹಂಸ ಸಂದೇಶ, ದಮಯಂತಿ ಸ್ವಯಂವರ, ನಾರದರು ಶ್ರೀಕೃಷ್ಣನು ತನ್ನ ಹದಿನಾರು ಸಾವಿರ ಹೆಂಡತಿಯರನ್ನು ಹೇಗೆ ನಿರ್ವಹಿಸುತ್ತಾನೆ ಎಂದು ಪರೀಕ್ಷಿಸುವ ಬಗೆ, ಸತ್ಯವಾನ್ ಸಾವಿತ್ರೀ ಹೀಗೆ ವಿಭಿನ್ನವಾದ ಹಾಗೂ ಅಪರೂಪದ ಕಥೆಗಳನ್ನು ಸೊಗಸಾಗಿ ಪ್ರಸ್ತುತ ಪಡಿಸಿದರು. ನೃತ್ಯದಲ್ಲಿ ವಾಚಿಕವೇ ಪ್ರಧಾನವಾಗುವ ಸನ್ನಿವೇಶಗಳಲ್ಲಿ ಎಲ್ಲವನ್ನೂ ಆಂಗಿಕ ಬಳಸಿಯೇ ಪ್ರೇಕ್ಷಕನಿಗೆ ತಿಳಿಸಬೇಕೆಂಬ ಕಟ್ಟುಪಾಡಿಗೆ ಬದಲಾಗಿ ಅಂತಹ ಕಡೆಗಳಲ್ಲಿ ವಾಚಿಕವನ್ನೇ ಬಳಸಿ ನೃತ್ಯ ಪ್ರದರ್ಶಿಸುಬಹುದೆಂದು ಡಾ।। ಶೋಭಾ ಶಶಿಕುಮಾರ್ ಸಮರ್ಪಕವಾಗಿ ತೋರಿಸಿಕೊಟ್ಟರು.

ಅಂತೂ ದಿನವಿಡೀ ಸಂಶೋದನೆಗಳು, ಸಂಶೋಧನೆಯನ್ನಾಧಾರಿಸಿದ ನೃತ ಪ್ರದರ್ಶನಗಳು ಎರಡೂ ಅಚ್ಚುಕಟ್ಟಾಗಿ ಆಯೋಜಿತವಾಗಿದ್ದ ವಿಚಾರ ಸಂಕೀರಣ ಅರ್ಥಪೂರ್ಣವಾಗಿ ಹೊರಹೊಮ್ಮಿತ್ತು.

ಕಳೆದ 14 ವರ್ಷಗಳಲ್ಲಿ, ಕೆಲವೇ ಕೆಲವು ಸಂಚಿಕೆಗಳಲ್ಲೇ ಪ್ರಬುದ್ಧ ಗುರು-ಕಲಾವಿದರು, ಹೆಸರಾಂತ ವಿದ್ವಾಂಸರು, ಸಂಶೋಧಕರು ಮತ್ತು ಓದುಗರ ಹರಕೆ-ಹಾರೈಕೆ- ಆಶೀರ್ವಾದ -ಮಾನ್ಯತೆ ಪಡೆದಿರುವ ನೂಪುರ ಭ್ರಮರಿಯನ್ನು ಗಮನಿಸಿದರೆ ಗುಣಮಟ್ಟದ ಸಮಗ್ರ ಕಲ್ಪನೆ ಇದಿರು ನಿಲ್ಲುತ್ತದೆ.ಈಗಾಗಲೇ ಅದೆಷ್ಟೋ ಶಿಕ್ಷಣ ಸಂಸ್ಥೆಗಳು, ನೃತ್ಯ ವಿದ್ಯಾಲಯಗಳು ತಾವೇ ಸ್ವಾಗತವನ್ನಿತ್ತು ತೆರೆದ ಹೃದಯದಿಂದ ಸ್ವೀಕರಿಸಿವೆ. ಕಏವಲ ಒಂದು ನಿಯತಕಾಲಿಕೆಯಷ್ಟೇ ಆಗಿರದೆ ಪರಾಮರ್ಶನದ ಜರ್ನಲ್ ಆಗಿ, ಹಲವು ಮಂದಿ ವಿದ್ವಾಂಸರು ಕಾತರದಿಂದ ನಿರೀಕ್ಷಿಸಿ ಓದಲ್ಪಡುವ  ಪತ್ರಿಕೆಯಾಗಿ ಬೆಳೆದಿದೆ. ಜೊತೆಗೆ ನೂಪುರ ಭ್ರಮರಿಯೆಂಬುದು ಈಗ ಸಂಶೋಧನಾ ಪ್ರತಿಷ್ಠಾನವೂ ಹೌದು, ನೃತ್ಯ ಸಂಶೋಧಕರ ಒಕ್ಕೂಟವೂ ಹೌದು.ಇವೆಲ್ಲವೂ ಸಾಧ್ಯವಾಗುತ್ತಿರುವುದು ಶ್ರಮ, ಸಹಕಾರ, ಪ್ರೋತ್ಸಾಹದಿಂದ. ನಿಮ್ಮ ಬೆಂಬಲ ಅನವರತ ನಮ್ಮನ್ನು ಕಾಯಲಿ.

 


ನೂಪುರ ಭ್ರಮರಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರು

ಕೀರ್ತಿಶೇಷ ವೇದಮೂರ್ತಿ ಬಿ.ಜಿ. ನಾರಾಯಣ ಭಟ್ :

ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಅರ್ಚಕರೂ, ಸಮಿತಿ ಸದಸ್ಯರೂ ಆಗಿ 55 ವರ್ಷಗಳ  ದೀರ್ಘಕಾಲವನ್ನು ಸೇವೆ ಗೆಂದೇ ಮುಡಿಪಿಟ್ಟವರು ಕೀರ್ತಿಶೇಷ ವೇದಮೂರ್ತಿ ಬಿ.ಜಿ. ನಾರಾಯಣಭಟ್. ಅವರ ಬದುಕು ಭರೆಹ ಭಾವಗಳ ಕುರಿತ ಸಂಕಥನವನ್ನು ೨೦೨೦ರ ಅಕ್ಟೋಬರ್ ೫ ರಂದು ನೂಪುರ ಭ್ರಮರಿಯು ಪ್ರಕಟಿಸಿದೆ.

ಶ್ರೀಯುತ ನಾರಾಯಣ ಭಟ್ಟರು ಸರಳ ಸಜ್ಜನಿಕೆಯ, ವಿದ್ವತ್ ಪೂರ್ಣ ನೆಲೆಗಟ್ಟಿನ ವಿಮರ್ಶಕರು, ಸಹೃದಯಿ ಬರೆಹಗಾರರು,  ಸೃಷ್ಟಿಶೀಲ ಮನಸ್ಸಿನ ಕಲಾವಿದರು, ಹಿರಿಯ ಚಿಂತಕರು, ಮುಕ್ತ ಮನಸ್ಸಿನ ಹೋರಾಟಗಾರರು ಹಾಗೂ ಜನ ಮಾನಸಕ್ಕೆ ಹತ್ತಿರದ ಪಂಡಿತರು ಆಗಿದ್ದವರು. ಮೂಲತಃ ದಕ್ಷಿಣ ಕನ್ನಡದ ಪಂಜಗ್ರಾಮದ ಬರ್ಲಾಯಬೆಟ್ಟು  ಎಂಬ ಪೌರೋಹಿತ್ಯ ಮನೆತನಕ್ಕೆ ಸೇರಿದ  ಇವರು ಕಡು ಬಡತನದಲ್ಲಿ ಬೆಳೆದು ಬಂದ ಶ್ರಮಜೀವಿ.  ಇವರು ನೂಪುರ ಭ್ರಮರಿ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರು ಮತ್ತು ಪತ್ರಿಕೆಯ ಕಛೇರಿ ವ್ಯವಸ್ಥೆ ನಿರ್ವಹಣೆ ಹೊತ್ತವರು. ಮಡಿಕೇರಿಯ ಹಾಲೇರಿ ರಾಜ ಮನೆತನಕ್ಕೆ ಇವರ ಪೂರ್ವಿಕರು ರಾಜಪುರೋಹಿತರಾಗಿ ಸೇವೆ ಸಲ್ಲಿಸಿ ಸನ್ಮಾನ-ಮಾನಪತ್ರ-ಉಂಬಳಿ ಭೂಮಿ-ಪ್ರಶಸ್ತಿ ಬಿರುದಾವಳಿಗಳಿಂದ ಶೋಭಿತರಾಗಿದ್ದಾರೆ. ಇವರು ತಮ್ಮ ನಿಧನ ಕಾಲದವರೆಗೂ ಅಂದರೆ ಸೆಪ್ಟೆಂಬರ್ 18, 2019 ರ ವರೆಗೂ ಟ್ರಸ್ಟ್ ನ್ನು ಮುನ್ನಡೆಸಿ ಅದರ ಪುರೋಭಿವೃದ್ಧಿಗೆ ಕಾರಣರಾಗಿದ್ದಾರೆ.

 

ನೂಪುರ ಭ್ರಮರಿ ಫೌಂಡೇಶನ್ ನ ಸದಸ್ಯ ಬಳಗ :

ನೂಪುರ ಭ್ರಮರಿಯ ಪ್ರಧಾನ ಸಂಪಾದಕಿ ಮತ್ತು ನೂಪುರ ಭ್ರಮರಿ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಮನೋರಮಾ ಬಿ. ಎನ್.

manoramaಡಾ. ಮನೋರಮಾ ಬಿ.ಎನ್ ಕಲಾಸಂಶೋಧಕರು; ಭರತನಾಟ್ಯ-ಯಕ್ಷಗಾನ-ರೂಪಕಕಲಾವಿದೆ; ನೃತ್ಯ-ಯಕ್ಷಗಾನಾದಿ ಕಾರ್ಯಕ್ರಮಗಳ ನಿರೂಪಕಿ, ಸಂಘಟಕಿ, ಸಂಯೋಜಕಿ.

ಬಾಲ್ಯದಿಂದಲೂ ಸಾಹಿತ್ಯ, ಕಥೆ-ಕಾವ್ಯ, ಸಂಗೀತ, ನೃತ್ಯ, ರಂಗಭೂಮಿ, ವಿವಿಧ ಕ್ಷೇತ್ರದ ಅಧ್ಯಯನಗಳಲ್ಲಿ ಬಹುಮುಖ ಪ್ರತಿಭಾವಂತೆಯಾಗಿ ರಾಷ್ತ್ರೀಯ-ರಾಜ್ಯಮಟ್ಟದ ಅನೇಕ ವೇದಿಕೆಗಳಲ್ಲಿ ಮನ್ನಣೆ, ಪ್ರಶಸ್ತಿ-ಪುರಸ್ಕಾರ ಪಡೆದವರು. ಮಡಿಕೇರಿಯ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ ಪ್ರತಿಶತ ೧೦೦% ಅಂಕಕ್ಕೆ ಕೊಡಗಿಗೇ ಪ್ರಥಮಸ್ಥಾನ ಪಡೆದು ಪ್ರತಿಷ್ಠಿತ ಪ್ರಶಸ್ತಿಗಳನ್ನು, ಚಿನ್ನದ ಪದಕವನ್ನು ಪಡೆದವರು ಮನೋರಮಾ.

ಇವರ ತಂದೆ ಮಡಿಕೇರಿಯ ಪ್ರಸಿದ್ಧ ಪುರೋಹಿತರಾದ ಬಿ.ಜಿ. ನಾರಾಯಣ ಭಟ್ ; ತಾಯಿ ಬಿ.ಎನ್ ಸಾವಿತ್ರಿ. ಇವರ ಕುಟುಂಬದ ಪೂರ್ವಿಕರು ಮಡಿಕೇರಿಯ ಲಿಂಗರಾಜನ ಆಸ್ಥಾನಪುರೋಹಿತರಾಗಿ ಸೇವೆ ಸಲ್ಲಿಸಿದವರು. ಬಹುಮುಖ ಪ್ರತಿಭಾವಂತೆಯಾಗಿ ಬಾದಿಂದಲೂ ಕೊಡಗಿನ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮವನ್ನು ನೀಡಿರುವ ಮನೋರಮಾ, ಹಲವು ಪ್ರಶಸ್ತಿ ಪುರಸ್ಕೃತರು, ಸ್ವರ್ಣ-ರಜತಪದಕಗಳ ವಿಜೇತರು.

ಮನೋರಮಾ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪತ್ರಿಕೋದ್ಯಮ, ಇಂಗ್ಲೀಷ್ ಮತ್ತು ಮನಃಶಾಸ್ತ್ರದಲ್ಲಿ ಪದವಿ ಪೂರೈಸಿದರು. ನಂತರದಲ್ಲಿ ಸಮೂಹ ಸಂವಹನ-ಪತ್ರಿಕೋದ್ಯಮ ಹಾಗೂ ಭರತನಾಟ್ಯ-ಇವೆರಡರಲ್ಲೂ ಸ್ನಾತಕೋತ್ತರ ಪದವಿ ಪಡೆದು; ‘ಭರತನಾಟ್ಯದ ಸಾಮಾಜಿಕ ಸಂವಹನ ಸಾಧ್ಯತೆಗಳ’ ಕುರಿತು ಪಿ‌ಎಚ್‌ಡಿ ಉನ್ನತ ವ್ಯಾಸಂಗ ಪೂರೈಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಡಾ.ಮನೋರಮಾ, ಇವರೇ ಹುಟ್ಟುಹಾಕಿದ ‘ನೂಪುರ ಭ್ರಮರಿ’ – ಪ್ರತಿಷ್ಠಾನದ ಅಧ್ಯಕ್ಷೆ, ಕಳೆದ ೮ ವರುಷಗಳಿಂದ ಕಲಾದಿಗಂತದಲ್ಲಿ ತನ್ನದೇ ಆದ ಛಾಪು, ವಿದ್ವತ್ ವಲಯವನ್ನು ಹೊಂದಿದ ನೂಪುರ ಭ್ರಮರಿ ದ್ವೈಮಾಸಿಕ -ಸಂಶೋಧನ ನಿಯತಕಾಲಿಕೆ ಸಂಪಾದಕರು; ಪ್ರಕಾಶಕರು; ನೃತ್ಯ ಸಂಶೋಧನಾ ವಿಭಾಗ ಮುಖ್ಯಸ್ಥೆ; ರಾಜ್ಯ(೨೦೧೨) ಮತ್ತು ರಾಷ್ಟ್ರೀಯ(೨೦೧೩) ಪ್ರಥಮ ನೃತ್ಯ ಸಂಶೋಧನ ಸಮ್ಮೇಳನದ ಪ್ರಧಾನ ಸಂಚಾಲಕಿಯಾಗಿ ಮುನ್ನಡೆಸಿದವರು. ಭಾರತದ ಪ್ರಥಮ ನೃತ್ಯ ಸಂಶೋಧನ ನಿಯತಕಾಲಿಕೆ-‘ನೂಪುರಾಗಮ’ದ ಸಂಪಾದಕಿ. ಇವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ‘ನೂಪುರ ಭ್ರಮರಿ’ ಭಾರತದ ಪ್ರಸಕ್ತ ಕಲಾಮಾಧ್ಯಮದಲ್ಲಿ ಪ್ರತಿಷ್ಠಿತ ಐ‌ಎಸ್‌ಎಸ್‌ಎನ್ ನೋಂದಣಿಯನ್ನು ಪಡೆದು ಕ್ರಮವತ್ತಾಗಿ ಪ್ರಕಟಗೊಳ್ಳುತ್ತಿರುವ ಏಕೈಕ ಕಲಾಸಂಶೋಧನ ನಿಯತಕಾಲಿಕೆಯೆಂದು ಪ್ರಸಿದ್ಧಿ ಪಡೆದಿದೆ. ಇವರ ಸ್ನಾತಕೋತ್ತರ ಪ್ರೌಢಪ್ರಬಂಧವು ಇನ್ನೂ ಹೆಚ್ಚಿನ ಅಧ್ಯಯನದಲ್ಲಿ ಪ್ರಕಟಿತ ಸಂಶೋಧನ ಕೃತಿಯಾಗಿದೆ. ಅದು ಹಸ್ತ ಮುದ್ರೆಗಳ ಸಾಕಲ್ಯದೃಷ್ಟಿಯ ಬಹು‌ಆಯಾಮದ ಬಹುಶಿಸ್ತೀಯ ಕೃತಿ ‘ಮುದ್ರಾರ್ಣವ’(೨೦೧೦).

ಇದರ ತರುವಾಯ ಭರತನಾಟ್ಯದ ಇತಿಹಾಸ, ನೃತ್ಯಾಂಗಗಳು, ಮಾರ್ಗಪದ್ಧತಿಯ ಪರಂಪರೆ, ಪದ್ಧತಿಗಳನ್ನು ವಿವೇಚಿಸುವ ‘ನೃತ್ಯಮಾರ್ಗಮುಕುರ’(೨೦೧೧)ರಲ್ಲಿ ಪ್ರಕಟವಾಗಿದ್ದು- ಇದು ನೃತ್ಯದ ವಿದ್ವತ್, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆ ಮತ್ತು ಉನ್ನತವ್ಯಾಸಂಗಕ್ಕೆ ಆಕರಕೃತಿಯಾಗಿ ಕರ್ನಾಟಕದ ಹೆಚ್ಚಿನ ನೃತ್ಯಶಾಲೆಗಳಲ್ಲಿ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿಯೂ ಮನ್ನಣೆಗೆ ಪಾತ್ರವಾಗಿದೆ. ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೆಚ್ಚುಗೆಯ ಬಹುಮಾನಧನವನ್ನೂ ಪಡೆದಿದ್ದು; ಇವೆರಡೂ ಕೃತಿಗಳು ಕೇಂದ್ರಸರ್ಕಾರದ ಅಂಗಸಂಸ್ಥೆ ಭಾರತೀಯ ಭಾಷಾ ಸಂಸ್ಥಾನದ ಮನ್ನಣೆಯನ್ನು ಪಡೆದಿವೆ. ಇತ್ತೀಚೆಗೆ ೨೦೧೪ ಸೆಪ್ಟೆಂಬರ್‌ನಲ್ಲಿ ಭರತಮುನಿಯ ಅಧ್ಯಯನದ ‘ಮಹಾಮುನಿಭರತ’ ಸಂಕ್ಷಿಪ್ತಕೃತಿ ಶ್ರೀಭಾರತೀ ಪ್ರಕಾಶನದ ಮೂಲಕ ಅನಾವರಣಗೊಂಡಿದ್ದು; ಇದು ಭರತಮುನಿಯ ಕುರಿತ ಕೃತಿಗಳಲ್ಲಿ ಕರ್ನಾಟಕದಲ್ಲೇ ಮೊದಲಪ್ರಯತ್ನವಾಗಿದ್ದು; ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಲಿರುವ ಶ್ರೀಭಾರತೀಪ್ರಕಾಶನದ ೬೦ ಮುಖ್ಯ ಕೃತಿಸರಣಿಗಳಲ್ಲಿ ಒಂದಾಗಿದೆ. ಮನೋರಮಾ ಅವರ ಮೊದಲ ಕೃತಿ ಭವ್ಯ ಇತಿಹಾಸದ ಶ್ರೀ ಓಂಕಾರೇಶ್ವರ ದೇವಾಲಯ ಎಂಬ ಸ್ಥಳಪುರಾಣ-ಐತಿಹಾಸಿಕ ನೆಲೆಯನ್ನು ವಿವೇಚಿಸುವ ಪುಸ್ತಕ (೨೦೦೪) ಅವರ ಪದವಿಯ ದಿನಗಳಲ್ಲೇ ಪ್ರಕಟವಾಗಿ ಮರು‌ಆವೃತ್ತಿಗಳನ್ನೂ ಪಡೆದಿದೆ.

ಇವರ  ಸಂಶೋಧನ ಕೃತಿ ‘ನಂದಿಕೇಶ್ವರ’  ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ (2016 )ಜರುಗಿದ ಗೋಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ.  ಭಾರತದಲ್ಲಿನ ನಂದಿಕೇಶ್ವರ ಸಂಪ್ರದಾಯ, ನಂದಿಯ ಸಂಬಂಧವಾದ ವೇದ-ಪುರಾಣ-ಆಗಮ-ತಂತ್ರ-ಮಂತ್ರ-ವ್ರತವಿಧಾನ-ದಾನಕ್ರಮ-ಜನಜೀವನ-ನೃತ್ಯಶಾಸ್ತ್ರ- ಕಲಾಮೀಮಾಂಸೆಗಳನ್ನು ಚರ್ಚಿಸುವ ಕೃತಿ ಇದಾಗಿದ್ದು; ನಂದಿಕೇಶ್ವರನ ಸಂಬಂಧ ಬಂದಿರುವ ಪ್ರಪ್ರಥಮ ಕನ್ನಡ ಕೃತಿಯೆಂಬ ಮನ್ನಣೆ ಪಡೆದಿದೆ. ಇದು ಅಭಿನಯದರ್ಪಣ ಮತ್ತು ಭರತಾರ್ಣವವೆಂಬ ನೃತ್ಯಲಕ್ಷಣಗ್ರಂಥಗಳ ಗುಣ ಕಥನ ವ್ಯಾಖ್ಯಾನವನ್ನೂ ಹೊಂದಿದ್ದು ನೃತ್ಯಾಭ್ಯಾಸಿಗಳಿಗೆ ಉಪಯುಕ್ತವಾಗಿದೆ. ಕೃತಿ ಅನಾವರಣ ಸಂದರ್ಭದಲ್ಲಿ ಮಾತನಾಡಿದ ಶ್ರೀಶ್ರೀ ರಾಘವೇಶ್ವರ ಸ್ವಾಮೀಜಿಗಳು ನಂದಿಯ ಕುರಿತಾದ ಸಮಗ್ರ ಮಾಹಿತಿಯನ್ನು ಒಳಗೊಂಡ ವಿಶ್ವಕೋಶದಂತಿದೆ ಎಂದು ಅಭಿಪ್ರಾಯಿಸಿದ್ದಾರೆ.

ಡಾ. ಮನೋರಮಾ ಅವರು ಕನ್ನಡದ ಮೊತ್ತಮೊದಲ ಶತಾವಧಾನದಲ್ಲಿ ಪೃಚ್ಛಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ‘ಅಕ್ಕ’ ಕನ್ನಡ ಕೂಟಗಳ ಜಾಗತಿಕ ಪ್ರಬಂಧ ಸ್ಪರ್ಧೆಯಲ್ಲಿ ೨೦೦೮ರಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರರಾಗಿದ್ದು ವಿದ್ವತ್ ಸಮ್ಮಾನಕ್ಕೆ ೨೦೧೦ರಲ್ಲಿ ಪಡೆದಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾದ ಸಿನೆಮಾಗಳ ಸಬ್ಸಿಡಿ ಕುರಿತ ಅಧ್ಯಯನಕ್ಕೆ ಬೆಂಗಳೂರಿನ ಇಂಡೀಯನ್ ಸೋಶಿಯಲ್ ಅಂಡ್ ಇಕಾನಾಮಿಕ್ ಚೇಂಜ್ ಎಂಬ ಕೇಂದ್ರಸರ್ಕಾರದ ಸಂಸ್ಥೆಯಲ್ಲಿ ಸಂಶೋಧನ ಸಹಾಯಕಿಯಾಗಿ ದುಡಿದಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಉಪನ್ಯಾಸ ಕಾರ್ಯಾಗಾರಗಳಲ್ಲಿ, ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ, ಆಳ್ವಾಸ್ ನುಡಿಸಿರಿ-೨೦೧೫, ಕರಾವಳೀ ಸಾಹಿತ್ಯ ಸಮ್ಮೇಳನ-೨೦೧೫, ಕರಾವಳಿ ನೃತ್ಯಕಲಾಪರಿಷತ್ಗಳಲ್ಲಿ ವಿಶೇಷ ಉಪನ್ಯಾಸವನ್ನು ಪ್ರದರ್ಶಕ ಕಲೆಗಳ ವಿಭಿನ್ನ ಆಯಾಮದ ಕುರಿತಾಗಿ ನೀಡಿದ್ದಾರೆ.

ಡಾ. ಮನೋರಮಾ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಫೆಲೊಶಿಪ್‌ಗೆ ಪ್ರಥಮ ವರ್ಷದಲ್ಲೇ ಪಾತ್ರರಾಗಿ ‘ಕರ್ನಾಟಕದ ನಟುವಾಂಗ ಪರಂಪರೆಯ’ ಕುರಿತು ೨೫೦ ಪುಟಗಳ ಸಂಶೋಧನೆಯನ್ನು(೨೦೧೨) ಕರ್ನಾಟಕದಲ್ಲೇ ಮೊದಲ ಬಾರಿಗೆ ಸ್ವತಃ ಸಿದ್ಧಪಡಿಸಿ ಸಲ್ಲಿಸಿದವರು.ಕರ್ನಾಟಕದ ಕೊರವಂಜಿ ನೃತ್ಯಗಳ ಅಧ್ಯಯನದ ಕುರಿತು  ಕೇಂದ್ರಸರ್ಕಾರದ ಫೆಲೋಶಿಪ್‌ಗೂ ಪಾತ್ರವಾಗಿದ್ದಾರೆ. ಕರಾವಳಿಯ ಪಾಲಿಗೆ ವಿನೂತನವಾದ ಭರತಮುನಿಯ ನಾಟ್ಯಶಾಸ್ತ್ರದ ಕುರಿತ ‘ನಾಟ್ಯಚಿಂತನ’(೨೦೧೪) ಎಂಬ ಕಾರ್ಯಾಗಾರದ ರೂವಾರಿಗಳಲ್ಲೊಬ್ಬರಾಗಿದ್ದು; ಇವರ ರಚನೆಯಲ್ಲಿ ಬಂದ ನಾಟ್ಯಶಾಸ್ತ್ರದ ಕಥೆಗಳ ಕುರಿತ ಕಾವ್ಯವು ಕನ್ನಡದಲ್ಲಿ ಈವರೆಗೆ ಇದ್ದ ನಾಟ್ಯಶಾಸ್ತ್ರಸಂಬಂಧ ನೃತ್ಯಸಾಹಿತ್ಯದ ಕೊರತೆಯನ್ನು ನೀಗಿಸಿದೆ. ಇವರ ಹಲವು ಸಂಶೋಧನ ಲೇಖನಗಳು, ಗಣ್ಯ ಕಲಾವಿದರ ಸಂದರ್ಶನ, ಬಿಡಿಬರೆಹಗಳು, ಅಂಕಣಗಳು, ವಿಶೇಷ ಲೇಖನಗಳು ಪತ್ರಿಕೆ, ನಿಯತಕಾಲಿಕೆ, ಪುಸ್ತಕ, ಸಂಶೋಧನ ಸಂಚಿಕೆ, ವಿಶೇಷಾಂಕಗಳಲ್ಲಿ ಕಳೆದ ೧೫ ವರುಷಗಳಿಂದ ಬೆಳಕು ಕಾಣುತ್ತಲೇ ಇವೆ.

ಕಿರಿಯ ವಯಸ್ಸಿನಲ್ಲಿಯೇ ನೃತ್ಯ ಮತ್ತು ಸಾಮಾಜಿಕ ಸಂವಹನದ ಮೀಮಾಂಸೆಗಳ ಸಾಲಿನಲ್ಲಿ ಹೊಸ ಪ್ರಮೇಯಗಳನ್ನು ಸಿದ್ಧಪಡಿಸಿದವರು ಮನೋರಮಾ. ಇವರ ಡಾಕ್ಟರೇಟ್ ಪ್ರಬಂಧಕ್ಕೆ ಪೂರಕವಾಗಿ ಸಂಯೋಜಿತವಾದ ಸಾಮಾಜಿಕ ಸಂವಹನ ಉದ್ದೇಶಿತ ಭರತನಾಟ್ಯ ಪ್ರಯೋಗದ ಸಾಹಿತ್ಯಗಳು ಕನ್ನಡದಲ್ಲೇ ರಚಿತವಾಗಿ ಪ್ರದರ್ಶನ, ಪ್ರಶಂಸೆ ಕಂಡಿದ್ದು ; ಅವುಗಳಲ್ಲಿ ‘ಬಾಲಾಲಾಪ’ವೆಂಬ ಮಕ್ಕಳ ಶಿಕ್ಷಣವನ್ನಾಧರಿಸಿದ ವರ್ಣವೆಂಬ ನೃತ್ಯಬಂಧದ ಪ್ರಯೋಗ ಚಿಂತನೆಯೂ ೨೦೧೩ರಲ್ಲಿ ಜರುಗಿ ಇಡಿಯ ಕರ್ನಾಟಕದ ಕಲಾಮಾಧ್ಯಮಕ್ಕೇ ಹೊಸ ಮಾದರಿಯ ಚಿಂತನೆ ಮತ್ತು ಕೊಡುಗೆಯನ್ನು ಇತ್ತಿದೆ. ಶಾಸ್ತ್ರೀಯನೃತ್ಯಗಳಲ್ಲಿ ಸಾಮಾಜಿಕ ಜಾಗೃತಿಯನ್ನು ಪ್ರಚುರಪಡಿಸುವಷ್ಟು ಸಿದ್ಧಹಸ್ತರಾಗಿದ್ದು; ಕರ್ನಾಟಕದಲ್ಲಿ ಈ ಪ್ರಯತ್ನದಲ್ಲಿ ಸಂಶೋಧನೆಯ ಮೂಲಕವಾಗಿಯೂ ತೊಡಗಿಸಿಕೊಂಡ ಏಕೈಕ ಮಹಿಳೆ.

ಹಲವು ನೃತ್ಯಸಂಬಂಧಿತ ಕಾವ್ಯ/ಸಾಹಿತ್ಯಗಳನ್ನೂ ರಚಿಸಿರುವ ಡಾ.ಮನೋರಮಾ ಲೀಲಾಶುಕನ ಕೃಷ್ಣಕರ್ಣಾಮೃತದ ಕೊರ್ಗಿ ಉಪಾಧ್ಯಾಯರ ಅನುವಾದವನ್ನಾಧರಿಸಿ ಹತ್ತು ಕನ್ನಡ ಪದವರ್ಣ ರಚನೆಗಳನ್ನೂ ಮಾಡಿದ್ದಾರೆ. ವಿಶಿಷ್ಟವಾದ ನೃತ್ಯಕಾವ್ಯಗಳನ್ನು ಬರೆಯುವುದು ಇವರ ಹವ್ಯಾಸಗಳಲ್ಲೊಂದು.

ನಾಟ್ಯಶಾಸ್ತ್ರವನ್ನೂ ಒಳಗೊಂಡಂತೆ ಹಲವು ಪುರಾತನ ಕೃತಿ, ತಾಳ, ಸಾಂಸ್ಕೃತಿಕ ಪತ್ರಿಕೋದ್ಯಮ, ಪುರಾಣಕಥಾಮಾಲಿಕೆ ಮತ್ತು ನೃತ್ಯಸಂಶೋಧನೆಯ ೧೦ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆನ್‌ಲೈನ್ ಮತ್ತು ನೇರಾನೇರ ವೈಯಕ್ತಿಕವಾಗಿ ಆಯೋಜಿಸಿರುವ ಮನೋರಮಾ ಇವರ ಈ ಯತ್ನ ಕರ್ನಾಟಕದಲ್ಲಿ ಇಂದಿಗೆ ಏಕೈಕ ಕೋರ್ಸ್ ಎಂಬ ಹೆಗ್ಗಳಿಕೆ ಪಡೆದಿದೆ.

ನವೆಂಬರ್ ೨೦೧೪ರಲ್ಲಿ ಉಡುಪಿಯಲ್ಲಿ ಕಾಣಿಯೂರು ಮಠಾಧೀಶರಿಂದ ‘ಭರತಪ್ರಶಸ್ತಿ’ಯನ್ನೂ ಡಾ. ಮನೋರಮಾ ಸ್ವೀಕರಿಸಿದ್ದಾರೆ. ತಮ್ಮದೇ ಆದ ಸಾನ್ನಿಧ್ಯ, ನೂಪುರ ಭ್ರಮರಿ (ರಿ) ಪ್ರಕಾಶನದಿಂದ ಹಲವು ಪುಸ್ತಕಗಳನ್ನು ಪ್ರಕಟಗೊಳಿಸುತ್ತಲಿದ್ದು; ಇನ್ನೇನು ಕೆಲತಿಂಗಳಿನಲ್ಲಿ ಶತಾವಧಾನಿ ಡಾ. ಆರ್ ಗಣೇಶರ ಕೃತಿಯನ್ನೂ ಪ್ರಕಟಿಸಿ ಅನಾವರಣಗೊಳಿಸುವ ಕೆಲಸ ಸಾಗುತ್ತಲಿದೆ.

ಯಕ್ಷಗಾನ ಕ್ಷೇತ್ರದಲ್ಲಿಯೂ ಇವರ ಸೇವೆ ಅನನ್ಯ. ಯಕ್ಷಗಾನ ಅಕಾಡೆಮಿ ಜಾರಿಗೆ ಬಂದ ಹೊಸತರಲ್ಲಿ ಯಕ್ಷಶಿಕ್ಷಣದ ಸಾರ್ವಕಾಲಿಕ ಶಿಸ್ತಿಗೆ ಸುಳ್ಯದಲ್ಲಿ ಹಮ್ಮಿಕೊಂಡ ಯಕ್ಷಗಾನ ವಿದ್ವಾಂಸರನ್ನೊಳಗೊಂಡ ರಾಜ್ಯ ಮಟ್ಟದ ಯಕ್ಷಗಾನ ಶಿಕ್ಷಣ ಕಾರ್ಯಾಗಾರ, ಮತ್ತು ಪರೀಕ್ಷಾ ಪದ್ಧತಿ ಕರಡು ಪ್ರತಿಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮನ್ನಣೆಗೆ ಪಾತ್ರರಾದ ಕೆಲವೇ ಕೆಲವು ಮಹಿಳೆಯರಲ್ಲಿ ಮನೋರಮಾ ಅವರು ಒಬ್ಬರು ಮತ್ತು ಅತೀ ಕಿರಿಯ ಕಲಾವಿದೆಯಾಗಿದ್ದಾಗ್ಯೂ ಗುರುತಿಸಿಕೊಂಡವರು. ಇವರು ನೀಡಿದ ಅನೇಕ ಸಲಹೆಗಳು ಇಂದಿಗೆ ದಾಖಲೀಕರಣವಾಗಿವೆ ಕೂಡಾ. ಯಕ್ಷಗಾನಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನೂ ಇವರು ಕೈಗೆತ್ತಿಕೊಂಡು ಮುನ್ನಡೆಯುತ್ತಿದಾರೆ. ಅಧ್ಯಯನಾನುಕೂಲಿ ಲೇಖನಗಳನ್ನು ಯಕ್ಷಗಾನ ಸಮ್ಮೇಳನಕ್ಕೆ ರಚಿಸಿ ಕೊಟ್ಟಿದ್ದು ಅಂಕಣಗಾರ್ತಿಯಾಗಿಯೂ ಇವರು ಪ್ರಚಲಿತರು. ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮಗಳ ನಿರೂಪಣೆಯೊಂದಿಗೆ ಸಂಪನ್ಮೂಲ ವಿಶೇಷ ಅಭ್ಯಾಗತರಾಗಿ, ಸಹವರ್ತಿಯಾಗಿ, ನಿಕಟವರ್ತಿಯಾಗಿ ಪಾಲ್ಗೊಂಡಿದ್ದಾರೆ. ಉಡುಪಿಯ ಗೋವಿಂದಪೈ ಅಧ್ಯಯನ ಕೇಂದ್ರದಲ್ಲಿ ನಡೆದ ಯಕ್ಷಗಾನ ಅಕಾಡೆಮಿಯ ವತಿಯಿಂದ ಸಂಘಟಿಸಲಾದ ಕೂಚಿಪುಡಿ ಮತ್ತು ಯಕ್ಷಗಾನ ಸಹಸಂಬಂಧ ಮತ್ತು ಬೆಂಗಳೂರಿನಲ್ಲಿ ಜರುಗಿದ ಯಕ್ಷಗಾನದಲ್ಲಿ ಔಚಿತ್ಯ ಎಂಬ ವಿಷಯದ ಒಂದು ದಿನದ ಕಾರ್ಯಾಗಾರದಲ್ಲಿ ವಿಶೇಷ ತಜ್ಞ‌ಅಭ್ಯಾಗತರಾಗಿ ಪಾಲ್ಗೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲಿಕೆಗಳಲ್ಲಿ, ರಾಷ್ಟ್ರೀಯ ನಾಟ್ಯೋತ್ಸವಗಳಲ್ಲಿ ಉಪನ್ಯಾಸಕರಾಗಿ, ನೃತ್ಯವಿಭಾಗದ ಅಧ್ಯಯನ ಮತ್ತು ಪರೀಕ್ಷ ಸಮಿತಿಗೆ ಪರೀಕ್ಷಕರಾಗಿದ್ದಾರೆ.

ದೆಹಲಿಯ ಸಹಪಿಡಿಯಾ(sahapedia) ಅಂತರ್ಜಾಲ ವಿಶ್ವಕೋಶತಾಣ ಕ್ಕೆ ಡಾ.ಮನೋರಮಾ ಅವರು ಸಂಪಾದಕಿಯಾಗಿ ಯಕ್ಷಗಾನದ ಶಾಸ್ತ್ರ ಮತ್ತು ಪ್ರದರ್ಶನವಿಭಾಗ ಹಾಗೂ ಯಕ್ಷಗಾನದ ಸಹಮಾಧ್ಯಮಗಳಾದ ಚಿಕ್ಕಮೇಳ, ತಾಳಮದ್ದಳೆಯ ವಿಚಾರಗಳಿಗೆ ಕಾರ್ಯನಿರ್ವಹಿಸಿದ್ದು; ಭಾರತೀಯ ನೂಪುರ (ಗೆಜ್ಜೆ) ಸಂಸ್ಕೃತಿ, ಅವಧಾನ ಇತ್ಯಾದಿ ವಿಷಯಗಳಲ್ಲೂ ಅಂತರ್ಜಾಲ ವಿಶ್ವಕೋಶಕ್ಕೆ ಸಂಪಾದಕಿಯಾಗಿ ಲೇಖಿಕೆಯಾಗಿ, ಸಂಶೋಧಕಿಯಾಗಿ ದುಡಿದಿದ್ದಾರೆ. ಲಿಂಕ್ : https://www.sahapedia.org/search/node/yakshagana

ಪೇಕ್ಷಾ ( prekshaa.in) ಜಾಲತಾಣದಲ್ಲೂ ಇವರು ಬರೆದ ಶಿಲ್ಪಸಂಬಂಧಿತ ಸಂಶೋಧನ ಲೇಖನಮಾಲೆಗಳು ಪ್ರಕಟವಾಗಿವೆ. ಲಿಂಕ್ : http://prekshaa.in/dance-in-temple-sculpture/

ಡಾ. ಮನೋರಮಾ-ಇವರ ಮುಂದಾಳತ್ವದಲ್ಲಿ ಪ್ರಾರಂಭವಾಗಿ ಕಲಾವಿಮರ್ಶಾಕ್ಷೇತ್ರಕ್ಕೆಂದೇ ಮೀಸಲಾದ ವಿಮರ್ಶಾ ವಾಙ್ಮಯಿ ಪ್ರಶಸ್ತಿಯನ್ನು ಈವರೆಗೆ ನಾಡಿನ ಹಲವು ವಿಮರ್ಶಕರಿಗೆ ನೂಪುರ ಭ್ರಮರಿ ಪ್ರತಿಷ್ಠಾನದಿಂದ ನೀಡಲಾಗಿದೆ. ಸ್ವತಃ ಶತಾವಧಾನಿ ಡಾ.ಆರ್.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಪ್ರಶಸ್ತಿಸಮಿತಿಯು ನೂಪುರಕಲಾಕಲಹಂಸ’ ’ಸಹೃದಯ ಸದ್ರತ್ನ’, ’ಕಲಾಯೋಜನಕೌಶಿಕ’ ಪ್ರಶಸ್ತಿಯನ್ನೂ ನೀಡುತ್ತಲಿದ್ದು ಕಲೆಯಲ್ಲಿ ಜೀವಮಾನಸಾಧನೆ/ ಸಹೃದಯಿ/ಯೋಜನೆಯ ಕೆಲಸವನ್ನು ಅವಿರತವಾಗಿ ಮಾಡಿಕೊಂಡು ಬರುತ್ತಿರುವ ಯೋಗ್ಯಸಾಧಕರಿಗೆ ಕೊಡಮಾಡಲಾಗುತ್ತಿದೆ. ತಮ್ಮದೇ ಆದ ಸಾನ್ನಿಧ್ಯ, ನೂಪುರ ಭ್ರಮರಿ (ರಿ) ಪ್ರಕಾಶನದಿಂದ ಹಲವು ಕಲಾಕೃತಿಗಳನ್ನು ಪ್ರಕಟಗೊಳಿಸಿದ್ದಾರೆ. ಆ ಪೈಕಿ ಡಾ. ದ್ವರಿತಾ ವಿಶ್ವನಾಥ್ ಅವರ ನಾಯಿಕಾಂತರಂಗವೆಂಬ ಇಂಗ್ಲೀಷ್ ಕೃತಿಯೂ ಮಹತ್ತ್ವದ್ದೆನಿಸಿದ್ದು ಅಪಾರ ಮನ್ನಣೆಗೆ ಪಾತ್ರವಾಗಿದೆ.

ಇನ್ನೂ ಹಲವು ಬಗೆಯಲ್ಲಿ ಕರ್ನಾಟಕದ ಮತ್ತು ಕಲೆಯ ಕುರಿತ ಗುಣಮಟ್ಟದ ಚಿಂತನೆ, ಅಧ್ಯಯನಗಳಲ್ಲಿ ದುಡಿಯುತ್ತಿರುವ ಹಲವು ಪ್ರಥಮಗಳ ಸಾಧಕಿಯಾಗಿ ಪ್ರತಿಷ್ಠಿತ ಗೌರವಗಳಿಗೆ ಭಾಜನರಾಗಿ ವಿದ್ವತ್ ವಲಯದ ಜೊತೆಜೊತೆಗೇ ಸಾಮಾಜಿಕ ವಲಯದ ಸಹೃದಯರ ನಡುವೆಯೂ ಗುರುತಿಸಿಕೊಂಡಿರುವ ಡಾ. ಮನೋರಮಾ ಬಿ.ಎನ್ ಅವರ ಪತಿ ವಿಷ್ಣುಪ್ರಸಾದ್ ಎನ್ ಫೆಡರಲ್ ಬ್ಯಾಂಕ್‌ನಲ್ಲಿ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಆಳಪರಿಚಯ:

ಸಾಂಸ್ಥಿಕವಾಗಿ ಹೆಚ್ಚಿನ ವಿವರ : ಮನೋರಮಾರವರು ನೂಪುರ ಭ್ರಮರಿಯ ಪ್ರಧಾನ ಸಂಪಾದಕಿಯಾಗಿ ಪತ್ರಿಕೆಯ ಹುಟ್ಟು ಹಾಗೂ ಬೆಳವಣಿಗೆಗೆ ಕಾರಣಕರ್ತರು. ಪತ್ರಿಕೋದ್ಯಮ ವಿದ್ಯಾರ್ಥಿನಿ & ಅಧ್ಯಾಪಿಕೆಯಾಗಿ ಹಾಗೂ ಸುಮಾರು 25 ವರ್ಷಗಳ ಭರತನಾಟ್ಯ ಕ್ಷೇತ್ರದ ಅನುಭವವಿರುವ ಇವರು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆಯನ್ನು ಕಂಡುಕೊಂಡರು. ಇದುವೇ ಈ ಪತ್ರಿಕೆಯ ಜನನಕ್ಕೆ ಅವರಿಗೆ ಪ್ರೇರಣೆಯಾಯಿತು.

ವಾರ್ಷಿಕ ವಿಚಾರಸಂಕಿರಣ ಮತ್ತು ಆಯಾಯ ವರ್ಷದಲ್ಲಿ ಆಯೋಜಿಸಲಾದ ಸಂಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಯತಕಾಲಿಕೆಯನ್ನು ಹೊರತರಬೇಕಾದ್ದು ಇಂದಿನ ಕಲಾಸಂಶೋಧನೆಯ ಮತ್ತು ಸಂಶೋಧನಾ ಒಕ್ಕೂಟದ ಅತ್ಯಗತ್ಯ, ಅನಿವಾರ್ಯ ಜರೂರತ್ತು. ಪ್ರಸ್ತುತ ಕಲೆಯಲ್ಲಿ ಸಂಶೋಧನೆ ಮಾಡುವವರಿಗೆ ತಮ್ಮ ಅಭಿಪ್ರಾಯ, ಲೇಖನಗಳನ್ನು ಪ್ರಕಟಿಸಲು ಮತ್ತು ಇಂತಹ ಸಂಶೋಧನೆಗಳ ದಾಖಲೀಕರಣಕ್ಕೆ ಸೂಕ್ತವಾದ, ಪತ್ರಿಕೋದ್ಯಮ ಮತ್ತು ಶೈಕ್ಷಣಿಕ ಹಿನ್ನೆಲೆ ಮತ್ತು ಬದ್ಧತೆಯಿರುವ ಅಂತರ್ರಾಷ್ಟ್ರೀಯ ಮನ್ನಣೆ ಪಡೆದ ಯಾವುದೇ ಕಲಾಪತ್ರಿಕೆ ಕರ್ನಾಟಕದಲ್ಲಾಗಲೀ, ಭಾರತದಲ್ಲಾಗಲೀ ಈ ಹೊತ್ತಿಗೆ ಅಷ್ಟಾಗಿ ಲಭ್ಯವಿಲ್ಲ. ವಿಚಾರಸಂಕಿರಣಗಳಲ್ಲಿ ಪ್ರಕಟಿತವಾದ ಸಂಶೋಧನಾ ಪ್ರಬಂಧಗಳು ಪ್ರಕಟಣೆಗೆ ರೂಪಕ್ಕೆ ಬಾರದೇ ಹೋದಲ್ಲಿ ಅದಕ್ಕೆ ಸಿಗುವ ಮೌಲ್ಯ ಕಡಿಮೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಸಂಶೋಧನೆ ಮತ್ತು ಪತ್ರಿಕೋದ್ಯಮದ ಸೂಕ್ತ ಶಿಕ್ಷಣ ಹೊಂದಿದ ಸದಸ್ಯರಿರುವ ಹೊತ್ತಿಗೆ ಅಂತರ್ರಾಷ್ಟ್ರೀಯ ನಿಯತಕಾಲಿಕೆಯ ದಾಖಲೆಯ ಸಂಖ್ಯೆಯ ಮನ್ನಣೆ ಪಡೆದ ಸಂಶೋಧನೆಗೇ ಮೀಸಲಾದ ನಿಯತಕಾಲಿಕೆಯನ್ನು ಹೊರಡಿಸುವ ಉದ್ದೇಶ ನೂಪುರ ಭ್ರಮರಿಯ ಮೂಲಕ ಸಾಕಾರಗೊಂಡಿದೆ.

ಕಲೆಯ ವಿವಿಧ ನೆಲೆಗಳನ್ನು ವಸ್ತುನಿಷ್ಠವಾಗಿ ಗುರುತಿಸಿ ಪ್ರಕಟಿಸುವ ಕೆಲಸವನ್ನು ನೂಪುರ ಭ್ರಮರಿ ಪತ್ರಿಕೆ ಮಾಡುತ್ತಿದ್ದು; ಬೇರಾವುದೇ ಪತ್ರಿಕೆಯೂ ಈ ಹಿಂದೆ ಮಾಡದ ಅನೇಕ ಸದಭಿರುಚಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಅವುಗಳ ಸಾಲಿಗೆ ಕರ್ನಾಟಕದಲ್ಲೇ ಮೊತ್ತ ಮೊದಲನೆಯದಾಗಿ ಯಕ್ಷಗಾನದ ಸ್ತ್ರೀವೇಷ ಕಲಾವಿದರ ಸಂದರ್ಶನ ನಡೆಸಿ ಆ ಮೂಲಕ ಸ್ತ್ರೀವೇಷದ ಮಜಲುಗಳನ್ನು ದಾಖಲಿಸಿದ್ದು; ಕಾಲಾನುಕೂಲ ನೃತ್ಯಚಿಂತನೆಯ ಹಲವು ಆಯಾಮಗಳುಳ್ಳ ಲೇಖನ-ಅಂಕಣ-ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು; ಯಕ್ಷಗಾನ ಮತ್ತು ಹಲವು ನೃತ್ಯಗಳ ಕುರಿತಂತೆ ಕರ್ನಾಟಕದಲ್ಲಿ ಕಲೆಗೆ ಸಂಬಂಧಿಸಿದಂತೆ ನಡೆದ/ ನಡೆಯುತ್ತಿರುವ ಸಂಶೋಧನೆಗಳ ದಾಖಲಾತಿ – ಹೀಗೆ ಅನೇಕ ಪ್ರಯತ್ನಗಳು ಸೇರ್ಪಡೆಯಾಗುತ್ತವೆ. ಕಳೆದ ೧೪ ವರ್ಷಗಳಲ್ಲಿ, ಪ್ರಬುದ್ಧ ಗುರು-ಕಲಾವಿದರು, ಹೆಸರಾಂತ ವಿದ್ವಾಂಸರು, ಸಂಶೋಧಕರು ಮತ್ತು ಓದುಗರ ಹರಕೆ-ಹಾರೈಕೆ- ಆಶೀರ್ವಾದ -ಮಾನ್ಯತೆ ಪಡೆದಿರುವ ನೂಪುರ ಭ್ರಮರಿಯನ್ನು ಗಮನಿಸಿದರೆ ಗುಣಮಟ್ಟದ ಸಮಗ್ರ ಕಲ್ಪನೆ ಇದಿರು ನಿಲ್ಲುತ್ತದೆ. ಕೇವಲ ಒಂದು ನಿಯತಕಾಲಿಕೆಯಷ್ಟೇ ಆಗಿರದೆ ಪರಾಮರ್ಶನದ ಜರ್ನಲ್ ಆಗಿ, ಹಲವು ಮಂದಿ ವಿದ್ವಾಂಸರು ಕಾತರದಿಂದ ನಿರೀಕ್ಷಿಸಿ ಓದಲ್ಪಡುವ ಪತ್ರಿಕೆಯಾಗಿ ಬೆಳೆದಿದೆ.

ನೂಪುರ ಭ್ರಮರಿ ನಾಡಿನ ಹೆಸರಾಂತ ಕಲಾನಿಯತಕಾಲಿಕೆಯಾಗಿ ಮೊದಲ್ಗೊಂಡು ಪ್ರತಿಷ್ಠಾನ ಮತ್ತು ಪ್ರಕಾಶನಸಂಸ್ಥೆಯಾಗಿ ರೂಪ ಪಡೆದು ಇದೀಗ ನೃತ್ಯ ಸಂಶೋಧನಾ ವಿಭಾಗ ಎಂಬ ಸಂಶೋಧನೆಗೆ ಮೀಸಲಾದ ವಿಭಾಗವನ್ನೂ ಪ್ರಾರಂಭಿಸಿದೆ. ಇದು ಫೆಬ್ರವರಿ ೨೦, ೨೦೧೨ರ ಮಹಾಶಿವರಾತ್ರಿಯ ಶುಭಾವಸರದಲ್ಲಿ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ಉದ್ಘಾಟನೆಗೊಂಡ ದಿನದಿಂದ ಈ ವರೆಗೆ ಕರ್ನಾಟಕ ಮತ್ತು ಹೊರರಾಜ್ಯದ ಸುಮಾರು ೪೦ಕ್ಕಿಂತಲೂ ಹೆಚ್ಚಿನ ಮಂದಿ ಸಂಶೋಧನಾಸಕ್ತರು ಇದರ ಸದಸ್ಯರು. ಹೆಸರಾಂತ ಸಂಶೋಧಕರೂ, ವಿದ್ವಾಂಸರೂ ಆದ ಶತಾವಧಾನಿ ಡಾ. ಆರ್. ಗಣೇಶ್ ಅವರ ನೇತೃತ್ವದ ಪ್ರಧಾನ ಸಲಹಾಸಮಿತಿಯ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು; ಇದರ ಯೋಜನೆಗಳ ಪೈಕಿ ವಾರ್ಷಿಕ ಕಲಾ ಸಂಶೋಧನಾ ಸಮ್ಮೇಳನ, ನೃತ್ಯ ಸಂಶೋಧನಾ ಪುಸ್ತಕ ಪ್ರಕಟಣೆ, ವಿಶೇಷ ಸಂಶೋಧನಾ ನಿಯತಕಾಲಿಕೆ, ಕಲಾ ಸಂಶೋಧನೆಗೆ ಪ್ರತ್ಯೇಕವಾದ ಗ್ರಂಥಾಲಯ, ಗೋಷ್ಠಿ ಮತ್ತು ಅಧ್ಯಯನ ಸ್ವರೂಪದ ಕಮ್ಮಟ-ಕಾರ್ಯಾಗಾರ-ಉಪನ್ಯಾಸ-ಪ್ರಾಯೋಗಿಕ ಪರಿಷ್ಕರಣಗಳು ಪ್ರಧಾನವಾದವುಗಳು.

ನೃತ್ಯ ಕಲಿಯುವಾಗಿನ ದಿಸೆಯಿಂದ ಹಿಡಿದು ಈವರೆಗೂ ನೃತ್ಯವೆಂದರೆ ಏನು? ಹೇಗೆ? ಯಾಕೆ? ಎಂಬುದು ಆಗಾಗ ಪರಾಮರ್ಶನ ಮಾಡಿಕೊಳ್ಳುತ್ತಲೇ ಬಂದಿರುವ ಸಂಗತಿ. ಜೊತೆಜೊತೆಗೇ ನೃತ್ತ-ನೃತ್ಯ-ನಾಟ್ಯ, ಮಾರ್ಗ-ದೇಸೀ, ಲೋಕಧರ್ಮಿ- ನಾಟ್ಯಧರ್ಮಿ, ಉದ್ಧತ- ಸುಕುಮಾರ, ಲಾಸ್ಯ-ತಾಂಡವ, ಅಭಿನಯ, ಭಾವ-ವಿಭಾವ-ಅನುಭಾವ, ರಸ-ಔಚಿತ್ಯ-ವ್ಯುತ್ಪತ್ತಿ, ಶಾಸ್ತ್ರ-ಸಂಪ್ರದಾಯ-ಪರಂಪರೆ- ರಂಗನಿರ್ಮಾಣ…,ಇತ್ಯಾದಿ ಪಾರಿಭಾಷಿಕ ಶಬ್ದಗಳಿಂದ ಮೊದಲ್ಗೊಂಡು ಸಂಶೋಧನೆಯ ಹಲವು ಆಯಾಮ ಅಂದರೆ ಒಳ್ಳೆಯ ಸಂಶೋಧನೆಯೆಂದರೆ ಏನು? ಅದರ ನೆಲೆ ಹೇಗೆ? ವಿಷಯ ಆಯ್ಕೆ, ಇತಿಹಾಸ ವಿವೇಚನೆ, ವಸ್ತು ಪರಾಮರ್ಶೆ, ಅಧ್ಯಯನ ಕ್ರಮ, ವಿಧಾನ, ಲಾಕ್ಷಣಿಕ ಸಹಕಾರ, ರಚನಾತ್ಮಕ ಉದ್ದೇಶ, ಅಭ್ಯಾಸ, ಕ್ಷೇತ್ರ ಕಾರ್ಯ, ಶೈಕ್ಷಣಿಕ ನೆಲೆಗಟ್ಟು, ಪ್ರದರ್ಶನಾತ್ಮಕ ನೆಲೆ, ಸಾಮಾಜಿಕ ನಿಲುವು.., ಹೀಗೆ ಹಲವು ಹಂತದ ವರೆಗೂ ಹಲವು ಬಗೆಯಲ್ಲಿ ಗೊಂದಲಗಳೆದ್ದು ವ್ಯಾಖ್ಯಾನದ ಹೊಸಿಲು ಅರ್ಥವನ್ನು ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ನೆಲೆಗಳನ್ನು ಪರಿಶೋಧಿಸುವ, ಅವಲೋಕಿಸುವ ಕ್ರಮಬದ್ಧ ಕಾರ್ಯ ಜರುಗುವ ಅವಶ್ಯಕತೆಯನ್ನು ಮನಗೊಂಡ ನೂಪುರ ಭ್ರಮರಿ ನೃತ್ಯ ಸಂಶೋಧನಾ ವಿಭಾಗವು ಶಬ್ದವೊಂದನ್ನು ಕಲಾವಿಕಸನದ ಹಿನ್ನೆಲೆಯಲ್ಲಿ ಒಂದೊಂದಾಗಿ ಕೈಗೆತ್ತಿಕೊಂಡು; ಅದರ ಆಳ ವಿಶ್ಲೇಷಣೆ, ವಾದಿ-ಪ್ರತಿವಾದಿ ನೆಲೆ, ಅಭಿಪ್ರಾಯಮಂಡನಗಳು ನಡೆದು ಅದಕ್ಕೆ ಸಂಬಂಧಿತವಾದ ವ್ಯಾಖ್ಯಾನಗಳನ್ನು ಕೊಡುವ ಕಾರ್ಯ ನಡೆದಿದೆ.

ಇವರ ಕಾರ್ಯವೈಖರಿಯನ್ನು ಗಮನಿಸಿ ಈಗಾಗಲೇ ಭಾರತೀಯ ವಿದ್ಯಾಭವನದಂತಹ ಅದೆಷ್ಟೋ ಶಿಕ್ಷಣ ಸಂಸ್ಥೆಗಳು, ನೃತ್ಯ ವಿದ್ಯಾಲಯಗಳು, ಸಂಸ್ಥೆಗಳು ತಾವೇ ಸ್ವಾಗತವನ್ನಿತ್ತು ತೆರೆದ ಹೃದಯದಿಂದ ಸ್ವೀಕರಿಸಿವೆ. ಇವರ ಬಳಗದ ಯೋಜನೆಗಳ ಪೈಕಿ ವಾರ್ಷಿಕ ಕಲಾ ಸಂಶೋಧನಾ ಸಮ್ಮೇಳನ, ನೃತ್ಯ ಸಂಶೋಧನಾ ಪುಸ್ತಕ ಪ್ರಕಟಣೆ, ವಿಶೇಷ ಸಂಶೋಧನಾ ನಿಯತಕಾಲಿಕೆ, ಕಲಾ ಸಂಶೋಧನೆಗೆ ಪ್ರತ್ಯೇಕವಾದ ಗ್ರಂಥಾಲಯ, ಗೋಷ್ಠಿ ಮತ್ತು ಅಧ್ಯಯನ ಸ್ವರೂಪದ ಕಮ್ಮಟ-ಕಾರ್ಯಾಗಾರ-ಉಪನ್ಯಾಸ-ಮಕ್ಕಳಿಗೆ ರಸಪ್ರಶ್ನೆ ಮುಂತಾದ ರಾಜ್ಯಮಟ್ಟದ ಸ್ಪರ್ಧೆಗಳು ಪ್ರಧಾನವಾದವುಗಳು.

 

ವೈಯಕ್ತಿಕ ಹೆಚ್ಚಿನ ವಿವರ :

ತನ್ನ ಏಳನೇ ತರಗತಿಗೇ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯಾಗರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾದವರು ಮನೋರಮಾ. ಸರ್ಕಾರಿ,ಕನ್ನಡ ಶಾಲೆಗಳಲ್ಲಿಯೇ ಓದಿ ಮಡಿಕೇರಿಗೆ ಎಸ್‌ಎಸ್‌ಎಲ್‌ಸಿ-ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಪ್ರತಿಶತ ೧೦೦% ಅಂಕಕ್ಕೆ ಕೊಡಗಿಗೇ ಪ್ರಥಮಸ್ಥಾನ ಪಡೆದು ಪ್ರತಿಷ್ಠಿತ ಪ್ರಶಸ್ತಿಗಳನ್ನು, ಚಿನ್ನದ ಪದಕವನ್ನು ಪಡೆದವರು ಇವರು. ದೂರದರ್ಶನ, ಟಿವಿ ಚಾನೆಲ್, ಆಕಾಶವಾಣಿಗಳಲ್ಲಿ ಇವರ ಕಾರ್ಯಕ್ರಮ, ಸಂದರ್ಶನಗಳು ಬಾಲ್ಯದಿಂದಲೂ ನಿರಂತರ ಪ್ರಸಾರವಾಗುತ್ತಲೇ ಬಂದಿವೆ. ಸಂಗೀತ-ನೃತ್ಯ ಪರೀಕ್ಷೆಗಳಲ್ಲಿ ಕೊಡಗಿಗೇ ಪ್ರಥಮಸ್ಥಾನ ಹೊಂದಿದವರು; ಕರ್ನಾಟಕದ ಮೊದಲ ರಿಯಾಲಿಟಿ ಶೋ ದೂರದರ್ಶನದ ‘ನಿತ್ಯೋತ್ಸವ’ ಭಾವಗೀತೆಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಸುಗಮಸಂಗೀತ ಕ್ಷೇತ್ರದ ಗಣ್ಯರಿಂದ ಮನ್ನಣೆ ಪಡೆದವರು. ಇಂದಿನ ಹಲವು ಟಿವಿಚಾನೆಲ್ ಗಳ ಗುಣಮಟ್ಟದ ನಿರೂಪಕರು, ವರದಿಗಾರರಿಗೆ ಮಾರ್ಗದರ್ಶಿಯಾಗಿ, ಉಪನ್ಯಾಸಕಿಯಾಗಿ ಮುನ್ನಡೆಸಿದವರು.

ಸ್ವತಃ ನೃತ್ಯಕಲಾವಿದೆಯಾಗಿ, ಶಿಕ್ಷಕಿಯಾಗಿ ಸುಮಾರು ೨೨ ವರ್ಷಗಳಿಗಿಂತಲೂ ಮಿಗಿಲು ಅನುಭವ ಹೊಂದಿದ ಮನೋರಮಾರ ಮೊದಲ ಗುರು ಮಡಿಕೇರಿಯಲ್ಲಿ ನಾಟ್ಯನಿಕೇತನ ಸಂಸ್ಥೆಯನ್ನು ಆರಂಭಿಸಿದ ವಿದುಷಿ ವೀಣಾ ಕಾರಂತ್. ಪ್ರಶಸ್ತಿ, ಪ್ರದರ್ಶನ, ಪರೀಕ್ಷೆಗಳಿಗೆಲ್ಲದಕ್ಕಿಂತಲೂ ನೃತ್ಯದ ಬಗೆಗಿನ ತುಡಿತ, ಅರಿಯುವಲ್ಲಿ ಜ್ಞಾನ ಮುಖ್ಯ ಎನ್ನುವ ಮನೋರಮಾ ಹಲವು ಮಂದಿ ಗುರುಗಳಲ್ಲಿ ಕಲಿತು; ಭರತನ ನಾಟ್ಯ ಕರಣಗಳ ಕುರಿತು ಭರತನೃತ್ಯದ ಹಿರಿಯ ಗುರು ಪದ್ಮಾ ಸುಬ್ರಹ್ಮಣ್ಯಂ ಪರಂಪರೆಯ ಡಾ.ಶೋಭಾ ಶಶಿಕುಮಾರ್ ಅವರಲ್ಲಿ ನೃತ್ಯಾಭ್ಯಾಸ ಪಡೆದಿದ್ದಾರೆ. ಮನೋರಮಾ ಹಲವು ನೃತ್ಯಸಂಯೋಜನೆ ಮಾಡಿರುವ ಅನುಭವವಷ್ಟೇ ಅಲ್ಲದೆ, ಸಂಪನ್ಮೂಲ ವ್ಯಕ್ತಿಯಾಗಿಯೂ, ತೀರ್ಪುಗಾರಾಗಿಯೂ, ನೃತ್ಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ನೃತ್ಯ ಸಮಾರಂಭಗಳಲ್ಲಿ ಇವರು ನಿರ್ವಹಿಸುವ ಅಚ್ಚುಕಟ್ಟಾದ, ಆಕರ್ಷಕ ನಿರೂಪಣೆ ಜನಮನದ ಮನ್ನಣೆ ಗಳಿಸಿದರೆ, ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿಯ ಜೊತೆಗೆ, ಜಿಲ್ಲಾ ಮತ್ತು ವಿಶ್ವವಿದ್ಯಾನಿಲಯದ ಭರತನಾಟ್ಯ ಸ್ಪರ್ಧೆಗಳಲ್ಲೆಲ್ಲಾ ಬಹುಮಾನಗಳನ್ನು ಬಾಚಿಕೊಂಡಿರುವ ಇವರನ್ನು ಹಲವು ಸನ್ಮಾನಗಳೂ ಅರಸಿ ಬಂದಿವೆ.

ಯಕ್ಷಗಾನ, ತಾಳಮದ್ದಳೆ ಕಲಾವಿದ ಉಜಿರೆ ಅಶೋಕ ಭಟ್ ಅವರ ಗರಡಿಯಲ್ಲಿ ಉಜಿರೆಯ ’ಯಕ್ಷಕೂಟ’ದಲ್ಲಿ ಮನೋರಮಾ ಪಳಗಿ ತೆಂಕುತಿಟ್ಟು ಯಕ್ಷಗಾನದ ಕೌಶಲ್ಯಗಳನ್ನು ಕಲಿತು, ಹವ್ಯಾಸಿ ಕಲಾವಿದೆಯಾಗಿ ಮಿಂಚುತ್ತಲಿದ್ದಾರೆ. ಇವರ ಸಂಜಯ, ಸೀತೆ, ಮಯೂರದ್ವಜ, ಲಕ್ಷ್ಮಿ, ಮೋಹಿನಿ, ದೇವಿ ಮುಂತಾದ ಭಾವನಾತ್ಮಕ ಅಭಿನಯಪೂರ್ಣ ಪಾತ್ರಗಳು ಮತ್ತು ರಾಜ, ಹಾಸ್ಯ, ಪಕಡಿ ವೇಷಗಳು ಮನ್ನಣೆಗೆ ಪಾತ್ರವಾಗಿದೆ. ಯಕ್ಷಗಾನದ ಮಾಸಿಕ ಯಕ್ಷಪ್ರಭಾದ ದಶಮಾನೋತ್ಸವದ ಸಂದರ್ಭದಲ್ಲಿ ಸನ್ಮಾನಿತರಾದ ಮನೋರಮಾ, ಮಂಗಳೂರಿನ ಹೆಮ್ಮೆಯ ಯಕ್ಷೋತ್ಸವ ಸ್ಪರ್ಧೆಯಲ್ಲಿ ವಿಶೇಷ ಪ್ರಶಸ್ತಿಗೆ ಪಾತ್ರವಾಗಿ, ಸತತ ೩ ವರ್ಷಗಳ ಕಾಲ ಅಲ್ಲಿ ನೀಡಿದ ಪ್ರದರ್ಶನಗಳಲ್ಲಿ ಹಿರಿಯ ಕಲಾವಿದರಿಂದ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಯಕ್ಷ ದಿಗ್ಗಜರಿಂದ ಇವರ ಪತ್ರಿಕೆಯ ಪ್ರಯತ್ನಗಳಿಗೆ ಹಾರ್ದಿಕ ಮನ್ನಣೆ ದೊರೆತಿದೆ.

ಯಕ್ಷಗಾನದ ಬೇರೆ ಬೇರೆ ಆಯಾಮಗಳೆಡೆಗೆ ಸಕ್ರಿಯವಾಗಿ ತೊಡಗಿಸಿಕೊಂಡು ಹಲವು ಪ್ರಪ್ರಥಮಗಳನ್ನು ನಡೆಸುತ್ತಲಿರುವ ಮನೋರಮಾ; ಯಕ್ಷಗಾನವು ನಾಟ್ಯಶಾಸ್ತ್ರದ ಅಂಶಗಳನ್ನು ಆಧರಿಸಿ ಬೆಳೆದ ನಮ್ಮ ನಾಡಿನ ಹೆಮ್ಮೆಯ ನಾಟ್ಯಕಲೆ- ಆದರೆ ಸೂಕ್ತ ಕಾಯಕಲ್ಪಗಳು, ಶಿಸ್ತಿನ ಶಿಕ್ಷಣ ನೀಡುವ ಸಂಘಟನೆ ಒದಗಬೇಕು ಎಂಬ ಚಿಕಿತ್ಸಕ ದೃಷ್ಟಿಯನ್ನು ಇಟ್ಟುಕೊಂಡು ಆ ಸಂಬಂಧ ಮುನ್ನಡೆಯುತ್ತಿದ್ದಾರೆ. ಅವರ ನಡೆ-ನುಡಿ- ಮಾತು-ಪಾತ್ರಗಳಲ್ಲಿ ಯಕ್ಷಗಾನದ ಕುರಿತ ಆಳವಾದ ಚಿಂತನೆ, ಪ್ರೀತಿ ಹೊರಹೊಮ್ಮುತ್ತದೆ. ಯಕ್ಷಗಾನದಲ್ಲಿ ಗುಣಮಟ್ಟದ ನಾಟ್ಯ, ಔಚಿತ್ಯಭರಿತ ಭಾವಸ್ಪಂದನೆಯುಳ್ಳ ಅರ್ಥಗರ್ಭಿತ ಸಂದರ್ಭೋಚಿತ ಮಾತು, ಸುಶ್ರಾವ್ಯಮಯ ರಸೋಚಿತ ದೃಷ್ಟಿಯ ಭಾಗವತಿಕೆ ಮತ್ತು ವಾದ್ಯ ಸಹಕಾರ ಮತ್ತು ಇವೆಲ್ಲವದಕ್ಕೂ ಅನುರೂಪವಾದ ಅತಿಶಯವೆನಿಸದ ಯಕ್ಷಲೋಕದ ಮೂಲಸೌಂದರ್ಯವನ್ನು ಪ್ರತಿಫಲಿಸುವ ಆಹಾರ್ಯದೆಡೆಗೆ ಅವರ ಗಮನ ಹೆಚ್ಚು ಮತ್ತು ಅದನ್ನು ಅವರು ತುಂಬು ಮನಸ್ಸಿನಿಂದ ಶ್ಲಾಘಿಸಿ ಪ್ರೋತ್ಸಾಹಿಸಿ ಅಧ್ಯಯನಾನುಕೂಲತೆ ಕಲ್ಪಿಸುವವರು ಕೂಡಾ.

ಯಾವುದೇ ಕಲೆ ರಸನಿಷ್ಠವಾಗಿರಬೇಕು, ಪ್ರೇಕ್ಷಕಮಹಾಪ್ರಭು ಬಯಸಿ ಬರುವುದು ರಸವನ್ನೇ ಆಗಿರುವಾಗ ಪ್ರೇಕ್ಷಕರನ್ನು ಮೂರ್ಖರೆಂದೆಣಿಸದೆ ಗೌರವಿಸಿ ರಸಾಸ್ವಾದನೆ ತುಂಬಿಕೊಡುವ ಪ್ರಯತ್ನ ಪ್ರಾಮಾಣಿಕವಾಗಿ ಮೂಡಿಬರಬೇಕು ; ಸಣ್ಣಪಾತ್ರವದರೂ ಕಲೆಯೆಡೆಗೆ ಶ್ರದ್ಧೆ, ಪ್ರೀತಿ, ಪ್ರಾಮಾಣಿಕತೆ ಇದ್ದಾಗಲಷ್ಟೇ ಕಲಾವಿದ/ಕಲೆ ಬೆಳೆಯಲು ಸಾಧ್ಯ ಮತ್ತು ಅಭಿರುಚಿಯ ಮಟ್ಟವೂ ಹೆಚ್ಚುತ್ತದೆ ಎನ್ನುತ್ತಾರೆ ಮನೋರಮಾ. ಗುಣಮಟ್ಟವುಳ್ಳ ವಿಮರ್ಶಕ್ಷೇತ್ರವನ್ನು ಬೆಳೆಸಬೇಕು; ಆ ಮೂಲಕ ಕಲೆಯ-ಕಲಾವಿದರ ಉತ್ತರೋತ್ತರ ಅಭಿವೃದ್ಧಿ ಸಾಧ್ಯವಿದೆ ಎಂಬ ಅವರ ಚಿಂತನೆಯ ಹಿನ್ನೆಲೆಗೆ ಪೂರಕವಾಗಿ ಅವರ ಬರೆವಣಿಗೆಗಳಿದ್ದು; ಮನೋರಮಾ ಅವರು ನೂಪುರ ಭ್ರಮರಿ ಪ್ರತಿಷ್ಠಾನದ ಮೂಲಕವಾಗಿ ನೀಡುವ ರಾಜ್ಯಮಟ್ಟದ ವರ್ಷದ ವಿಮರ್ಶೆ ಪ್ರಶಸ್ತಿಯೂ ಅವರ ಚಿಕಿತ್ಸಕ ಬುದ್ಧಿಗೆ ಕನ್ನಡಿ ಹಿಡಿಯುತ್ತದೆ. ಮಾತ್ರವಲ್ಲದೆ ಸಂಶೋಧನೆಗಳ ಗುಣ ಹೆಚ್ಚಿದಷ್ಟೂ ಅದನ್ನು ಆಧರಿಸಿ ಕಲೆಯ ಹಲವು ಅಂಗಗಳು ಉತ್ತಮ ಬದಲಾವಣೆಯನ್ನು ಕಂಡುಕೊಳ್ಳುತ್ತವೆ ಎಂಬ ಅವರ ಮನೋಭಾವನೆಗೆ ಸೂಕ್ತ ವೇದಿಕೆಯನ್ನು ಅವರಾಗಿಯೇ ಸೃಷ್ಠ್ಟಿಸಿಕೊಂದ್ದು ಇದಕ್ಕೆ ಅವರೇ ರೂಪಿಸಿದ ನೂಪುರ ಭ್ರಮರಿ ಪ್ರತಿಷ್ಠಾನವು ಹಲವು ವಿಷಯಗಳಲ್ಲಿ ಬೆನ್ನೆಲುಬಾಗಿ ನಿಂತಿದೆ.

ಇದಷ್ಟೇ ಅಲ್ಲದೆ ಏಕಪಾತ್ರಾಭಿನಯ, ಮೂಕಾಭಿನಯ, ಕಿರುನಾಟಕಗಳನ್ನು ನಿರ್ದೇಶಿಸಿದ ಅನುಭವ, ಪ್ರದರ್ಶನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ಇವರಿಗೆ ರಾಷ್ಟ್ರೀಯ ಪ್ರಶಸ್ತಿಗಳೂ ಸಂದಿವೆ. ಎಸ್.ಎಲ್.ಭೈರಪ್ಪ ಅವರ ’ಮಂದ್ರ’ ಕಾದಂಬರಿಯನ್ನಾಧರಿಸಿ ರಂಗಾಯಣ ನಿರ್ದೇಶಕ ಕಲಾಗಂಗೋತ್ರಿಯ ಡಾ. ಬಿ.ವಿ.ರಾಜಾರಾಮ್ ನಿರ್ದೇಶಿಸಿದ ನಾಟಕದಲ್ಲಿ ಸುಪ್ರಸಿದ್ಧ ರಂಗನಟರೊಂದಿಗೆ ನಟಿಸಿ ಬೆಂಗಳೂರಿನ ರಂಗಶಂಕರವನ್ನೂ ಒಳಗೊಂಡಂತೆ ನರ್ತಕಿ ’ಮನೋಹರಿ ದಾಸ್’ ಪಾತ್ರಕ್ಕೂ ಜೀವ ತುಂಬಿದ್ದಾರೆ. ಯಕ್ಷಭಾಣಿಕಾದಂತಹ ಸಂಶೋಧನಾತ್ಮಕ ರಂಗಪ್ರಯೋಗಗಳ ಚಿಂತಕಿ, ಕಲಾವಿದೆ ಕೂಡಾ.

ಸಂಗೀತ, ಸುಗಮ ಸಂಗೀತದಲ್ಲೂ ಮನೋರಮಾ ಅವರ ಸಾಧನೆ ಬಾಲ್ಯದಿಂದಲೇ ಸುವಿಖ್ಯಾತಿ. ಜೊತೆಗೆ ಬಾಲ್ಯದಿಂದಲೇ ಭಾಷಣ, ಚರ್ಚೆ, ಪ್ರಬಂಧ, ಆಶುಭಾಷಣ, ಕಥೆ-ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಹಳಷ್ಟು ಬಹುಮಾನಗಳನ್ನು, ಚಿನ್ನ-ಬೆಳ್ಳಿ ಪದಕಗಳನ್ನು ಬಾಚಿಕೊಂಡಿರುವ ಇವರು, ಸಾಹಿತ್ಯ ಕೃಷಿಯಲ್ಲಿ ಸದಾ ನಿರತರರು; ಕಾರ್ಯಕ್ರಮ ನಿರೂಪಣೆಯಲ್ಲೂ ಸಿದ್ಧಹಸ್ತರು. ರಾಷ್ಟ್ರ, ರಾಜ್ಯಮಟ್ಟದ ಹಲವು ವಿಚಾರ ಸಂಕಿರಣ, ಕಾರ್ಯಗಾರ-ಶಿಬಿರಗಳಲ್ಲಿ ಭಾಗವಹಿಸಿರುವ ಇವರು, ಹಲವು ವಾರ್ಷಿಕ ಸಂಚಿಕೆಗಳ ಸಂಪಾದಕತ್ವದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅತಿಥಿ ಅಂಕಣಗಾರ್ತಿಯಾಗಿ, ಪತ್ರಿಕೆಗಳಿಗೆ ಆಹ್ವಾನಿತ ಬರಹಗಾರರಾಗಿ ಹಲಕೆಲವು ಕಲಾಸಂಘಟನೆಗಳ ಸಕ್ರಿಯ ಸದಸ್ಯರಾಗಿ ಪರಿಚಿತರು ಕೂಡಾ.

 

ಮನೋರಮಾ ಅವರ  ಕೃತಿ ಮಹಾಮುನಿ ಭರತ ಭರತಮುನಿಯನ್ನು ಅರಿಯಲು ನಾಟ್ಯಶಾಸ್ತ್ರ-ಮತ್ತದರ ಭಾಷ್ಯಗಳನ್ನುಳಿದು ಬೇರಾವುದೇ ಆಕರ ಇಲ್ಲ. ಆದರೆ ಇಂತಹ ಅನುಕೂಲ ಕನ್ನಡದಲ್ಲಿ ಅಷ್ಟಾಗಿ ಲಭ್ಯವಿಲ್ಲ. ಜೊತೆಗೆ ನೃತ್ಯಕ್ಷೇತ್ರವನ್ನೂ ಒಳಗೊಂಡಂತೆ ಕನ್ನಡದ ಸಮಗ್ರ ಸಾಹಿತ್ಯ ವಾಙ್ಮಯದಲ್ಲಿ ಅದರಲ್ಲೂ ಇತ್ತೀಚೆಗಿನ ದಶಕಗಳಲ್ಲಿ ಭರತನ ಬಗ್ಗೆ ಸಮಗ್ರ ಪರಿಚಯವನ್ನೀಯುವ ಕೃತಿಗಳು ಬಂದದ್ದು ವಿರಳಕ್ಕೇ ವಿರಳ. ಭರತಮುನಿ ವಿರಚಿತ ನಾಟ್ಯಶಾಸ್ತ್ರವು ಕೂಡಾ ಎಲ್ಲರಿಗೂ ತಲುಪಬಲ್ಲಂತಹ ರೀತಿಯಲ್ಲಿ ಸಮ್ಯಕ್ ದರ್ಶನ ನೀಡುವ ಮತ್ತು ಸಾಮಾನ್ಯ ಓದುಗರಿಗೂ ಕಡಿಮೆ ದರದಲ್ಲಿ ದೊರೆಯುವ ಪ್ರಕಟಣೆಯಾಗದೆ ಕಾಲವದೆಷ್ಟೋ ಕಳೆದುಹೋಗಿದೆ. ನಾಟ್ಯಶಾಸ್ತ್ರದ ಬೃಹತ್ ಸಂಪುಟಗಳಲ್ಲಿ ಭರತನ ಕುರಿತು ವಿವರಗಳು ದೊರೆಯುತ್ತವಾದರೂ; ಬಹುಮೊತ್ತದ ಬೆಲೆಯಿತ್ತು, ಆಯಾಯ ಭಾಷೆಯಲ್ಲಿ ಕೊಂಚಹಿಡಿತವನ್ನಾದರೂ ಸಾಧಿಸಿ, ಓದುವ ತಾಳ್ಮೆಗೆ ಜನ ಮನ ಮಾಡುವುದಿಲ್ಲ; ಅಲ್ಲಲ್ಲಿ ಮಿಂಚಿ ಮರೆಯಾಗುವ ವಿದ್ವತ್ಪೂರ್ಣ ಉಪನ್ಯಾಸಗಳ ಇರವು-ಸೆಳೆವು ಸರ್ವರಿಗೂ ಸಕಾಲಕ್ಕೆ, ಅರ್ಥಗರ್ಭಿತವಾಗಿ ದೊರೆಯುವುದಿಲ್ಲ.

ಅಷ್ಟೇಕೆ, ಪಾಶ್ಚಾತ್ಯ ಮೀಮಾಂಸೆಗಳಿಗೆ ತಮ್ಮ ಭಾರತೀಯ ಪ್ರಜ್ಞೆಯನ್ನು ಮಾರಿಕೊಂಡು ಏನೇನೋ ದ್ವಂದ್ವಗಳನ್ನು ಕಲ್ಪಿಸುತ್ತಾ, ಹಲವು ವಿದ್ವಾಂಸರು, ಸಂಶೋಧಕರೂ ಗೊಂದಲಕ್ಕೀಡಾಗುತ್ತಿದ್ದಾರೆ. ಭರತನ ಕಾಲ-ದೇಶ-ವ್ಯಾಪ್ತಿ-ಕೃತಿಯ ಸಂಬಂಧವಾಗಿ ಭಾರತೀಯ ಸಂಸ್ಕಾರದಿಂದ ತೀರಾ ಹೊರಗುಳಿದು ; ಅಲ್ಲೇ ತಮ್ಮ ತಮ್ಮ ಹಿತಾಸಕ್ತಿಯ ಚರ್ಚೆಗಳಿಗೆ ಮೇಲ್ಪಂಕ್ತಿಯ ಹಾಸಿಗೆಯನ್ನು ಹಾಸಿಕೊಂಡು ಭರತಮಾರ್ಗವನ್ನು ಬೀದಿಗೆ ಎಳೆದು ತಂದು ನಿಲ್ಲಿಸಿದ್ದೂ ಇದೆ. ಹೀಗಾಗಿ ಭರತನ ಬಗೆಗೆ ಬರೆಯುವುದೆಂದರೆ ಅದು ದುಸ್ತರ, ಗೊಂದಲಗಳ ಗೂಡು, ಸವಾಲಿನ ಸರಕು ಎಂದೇ ಸಾಹಿತ್ಯ-ನೃತ್ಯಕ್ಷೇತ್ರದಲ್ಲಿ ಗಣಿತವಾಗಿದೆ.

ಹಾಗಾಗಿ ಭರತನ ಬಗ್ಗೆ ತಿಳಿಯಬೇಕೆಂದಿರುವ ಹಲವು ಆಸಕ್ತರಿಗೆ ಅವಕಾಶಗಳು ದೊರೆಯದೆ ; ಭರತನ ಬಗೆಗೆ ಸಾಕಷ್ಟು ಪ್ರಶ್ನೆಗಳು ಒಗಟು ಒಗಟಾಗಿಯೇ ಉಳಿದಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ದುರ್ಲಭವೆನಿಸುವ ಭರತಮುನಿಯ ಸಂಕ್ಷಿಪ್ತ ಪರಿಚಯ-ಪ್ರತಿಭೆಗಳ ಕುರಿತಂತೆ ಕಲಾವಿದರಿಗೆ-ವಿದ್ಯಾರ್ಥಿಗಳಿಗೆ- ಅಧ್ಯಯನಾಸಕ್ತರಿಗೆ- ಸಹೃದಯ ಓದುಗರಿಗೆ ಏಕಕಾಲಕ್ಕೆ ಆಪ್ತವೆನಿಸುವ ಸಮಗ್ರ ಕೃತಿಯ ಅಗತ್ಯ ಇಂದಿಗೆ ಖಂಡಿತಾ ಇದೆ. ಅದನ್ನು ಶ್ರೀಮತಿ ಮನೋರಮಾ ಅವರು ‘ಮಹಾಮುನಿ ಭರತ’ ಎಂಬ ಕೃತಿಯ ಮೂಲಕ ಸಂಕ್ಷಿಪ್ತವಾಗಿ, ಓದಲು ಅನುಕೂಲವಾಗುವಂತೆ ಸರಳಮಾದರಿಯಲ್ಲಿ ನೀಡುತ್ತಾ ನೆರವೇರಿಸಿದ್ದಾರೆ.

ಈ ಕೃತಿಯಲ್ಲಿ ಭರತನೆಂದರೆ ಯಾರು? ಯಾವ ಕಾಲದವನು? ಎಲ್ಲಿ ಬಾಳಿ ಬದುಕಿದವನು? ಅವನನ್ನು ಅರಿಯುವ ಬಗೆ ಹೇಗೆ? ಅವನ ಹಿಂದಿನ ಪರಂಪರೆ ಹೇಗಿತ್ತು? ಸಮಕಾಲೀನರು ಯರು? ಅವನ ಗುರುತ್ವ, ಸಾರ್ವಕಾಲೀನ ಪ್ರಜ್ಞೆಗೆ ಇರುವ ಸಾಕ್ಷಿಗಳು ಯಾವುವು? – ಎಂಬಂತಹ ಹಲವು ಕಾಲಗಳಿಂದ ಚಾಲ್ತಿಯಲ್ಲಿರುವ ವಾದ-ವಾಗ್ವಾದದ ಚರ್ಚೆ, ನಿರ್ಣಯಗಳಿಂದ ಮೊದಲ್ಗೊಂಡು ಭರತನ ನಾಟ್ಯಶಾಸ್ತ್ರದ ಮುಖ್ಯ ಅಂಶ, ಸೂಕ್ತಿ-ಉಕ್ತಿಗಳು ಯಾವುವು? ನಾಟ್ಯಶಾಸ್ತ್ರದ ರಚನೆಯ ದಿಕ್ಕು-ದಿಶೆ-ಲಕ್ಷಗಳು ಹೇಗಿವೆ? ನಾಟ್ಯಶಾಸ್ತ್ರದ ಅಧ್ಯಾಯಸಂಕ್ಷೇಪ ಮತ್ತು ಅವುಗಳ ಮಹತ್ತ್ವ, ವ್ಯಾಖ್ಯಾನ ಪರಂಪರೆ ಸಾಗಿಬಂದ ದಾರಿ, ನಾಟ್ಯಶಾಸ್ತ್ರ ಮತ್ತು ಭರತರು ಹೇಗೆ ಪ್ರಸ್ತುತರಾಗುತ್ತಾರೆ? ಆಧುನಿಕ ಕಾಲದಲ್ಲಿ ನಾಟ್ಯಶಾಸ್ತ್ರದ ಸಂಪಾದನೆ ಹೇಗೆ-ಯಾರಿಂದ ನಡೆಯಿತು? ನಾಟ್ಯಶಾಸ್ತ್ರದ ಆವೃತ್ತಿಗಳ ನೆಲೆ ಹೇಗಿದೆ? ಇಂದಿನ ನಾಟ್ಯಪದ್ಧತಿಗೂ ಭರತನ ನಾಟ್ಯಶಾಸ್ತ್ರಕ್ಕೂ ಇರುವ ಸಂಬಂಧ, ವ್ಯತ್ಯಾಸ-ಹೋಲಿಕೆಗಳು ಯಾವುವು? ಭರತಮತಕ್ಕೆ ಅನ್ವಯಿಸಿದರೆ ಇಂದಿನ ಸಾಂಸ್ಕೃತಿಕ ಪರಂಪರೆ ಹೇಗಿದೆ? ಭರತಮಾರ್ಗದಿಂದ ಕಲಿಯಬೇಕಾದದ್ದು- ಅನುಸರಿಸಬೇಕಾದದ್ದು ಏನು? ಭರತನ ಹಾದಿಯಲ್ಲಿ ಇತ್ತೀಚೆಗಿನ ದಶಕಗಳಲ್ಲಿ ಜರುಗಿದ ಉತ್ತಮ ಸಂಶೋಧನೆಗಳು ಯಾವುವು? ಅವುಗಳ ವೈಶಿಷ್ಟ್ಯತೆ ಏನು? ಭರತನ ಬಗೆಗೆ ಇರುವ ಸಂದೇಹ-ಆರೋಪಗಳು ಯಾವುವು? ವಿದ್ವಾಂಸರ ಅಭಿಪ್ರಾಯವೇನು?… ಹೀಗೆ ಭೂತ-ವರ್ತಮಾನ-ಭವಿಷ್ಯತ್ತಿನ ಸಮಗ್ರ ನೆಲೆಯಲ್ಲಿ ಈಗಾಗಲೇ ಕಾಡುತ್ತಿರುವ ಹತ್ತು ಹಲವು ಪ್ರಶ್ನೆಗಳಿಗೆ ಅಧ್ಯಯನ ನಡೆಸಿ ಉತ್ತರಗಳನ್ನು ಶೋಧಮಾರ್ಗದಲ್ಲಿ ಸಮರ್ಪಕವಾಗಿ ಕಂಡುಕೊಂಡು ಯುಕ್ತಮಾರ್ಗದಲ್ಲಿ ಪ್ರತಿಪಾದಿಸಲಾಗಿದೆ. ಜೊತೆಗೆ ಅಧ್ಯಯನವೊಂದನ್ನು ತೀರಾ ಶುಷ್ಕವಾಗಿ ಬರೆಯುವ ಗೋಜಿಗೆ ಹೋಗದೆ; ಯಾವುದೇ ಓದುಗರಿಗೆ ಸರಳವಾಗಿ, ಸಂಕ್ಷಿಪ್ತವಾಗಿ ಓದಿಸಿಕೊಂಡು ಹೋಗುವಂತೆ ಮಾಡುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಉತ್ತಮಕೃತಿಗೆ ಇರಬೇಕಾದ ಎಲ್ಲ ಸಲಕ್ಷಣಗಳೂ ಇದಕ್ಕಿವೆ ಎಂಬುದು ಗಮನಾರ್ಹ ಅಂಶ.

 

ಮುದ್ರಾರ್ಣವ’

ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. (ಈ ನಿಟ್ಟಿನಲ್ಲಿ ಪತ್ರಿಕೆಯೂ ‘ಹಸ್ತಮಯೂರಿ’ ಯ ಮೂಲಕ ಗಮನಾರ್ಹ ರೀತಿಯಿಂದ ಪ್ರಯತ್ನ ಮಾಡುತ್ತಿರುವುದು ನಿಮಗೆ ತಿಳಿದ ವಿಷಯವೇ. ) ಆದ್ದರಿಂದ ಹಸ್ತ ಮುದ್ರೆಗಳ ಭಾವ, ಉಪಯೋಗ, ಸಂವಹನದ ಸಾಧ್ಯತೆಗಳನ್ನು ಗಮನದಲ್ಲಿರಿಸಿ ಅವುಗಳ ಬಗೆಗೆ ವಿಸ್ತೃತ ಅಧ್ಯಯನ ಮಾಡಿದ ಫಲವೇ ;
‘ಮುದ್ರಾರ್ಣವ’. ಸುಮಾರು ೩೦೦ ಪುಟಗಳ ಗ್ರಂಥ.

 1. ಭರತನಾಟ್ಯದಲ್ಲಿ ಉಪಯೋಗಿಸಲಾಗುತ್ತಿರುವ ಹಸ್ತಗಳನ್ನು ಪ್ರಧಾನವಾಗಿರಿಸಿಕೊಂಡು ಇತರೆ ಮರೆಯಾಗಿರುವ ಹಸ್ತಗಳ ಕುರಿತ ಅವಲೋಕನ ಮತ್ತು ಅವುಗಳ ಸಂವಹನ ಪ್ರಕ್ರಿಯೆ ಎಷ್ಟರ ಪಟ್ಟಿಗೆ ಮಹತ್ವಪೂರ್ಣವಾಗಿದೆ ಎಂಬುದು ಸಂಸೋಧನೆಯ ಮೂಲ ಉದ್ದೇಶ. ಜೊತೆಗೆ ಇತರೆ ನೃತ್ಯಪದ್ಧತಿ (ಉದಾ: ಕಥಕ್ಕಳಿ, ಮಣಿಪುರಿ, ಓಡಿಸ್ಸಿ, ಯಕ್ಷಗಾನ)ಗಳಲ್ಲಿ ಬಳಕೆಯಾಗುತ್ತಿರುವ ಹಸ್ತಗಳು ಮತ್ತು ಅವುಗಳಲ್ಲಿ ಎಷ್ಟು ನಾವು ದಿನನಿತ್ಯದ  ಜೀವನದಲ್ಲಿ ಬಳಸಿಕೊಳ್ಳುತ್ತೇವೆ ಎಂಬ ಅವಲೋಕನ. ಮತ್ತು ಅವುಗಳಲ್ಲಿನ ಸಮಾನ ಮತ್ತು ವ್ಯತ್ಯಾಸ ಅಂಶಗಳೆಡೆಗೆ ದೃಷ್ಟಿ.
 2. ಅಭಿನಯದರ್ಪಣದ ಅಂಶಗಳನ್ನೇ ಪ್ರಧಾನವಾಗಿ ಬಳಸಿಕೊಂಡು ಅಧ್ಯಯನ ನಡೆದರೂ ಉಳಿದಂತೆ ನಾಟ್ಯಶಾಸ್ತ್ರ, ಹಸ್ತ ಮುಕ್ತಾವಳಿ, ಹಸ್ತ ಲಕ್ಷಣ ದೀಪಿಕಾ, ಭರತಸಾರ, ಭರತಕಲ್ಪಲತಾ ಮಂಜರಿ, ಸಾರಸಂಗ್ರಹ, ಲಾಸ್ಯರಂಜನ, ಸಂಗೀತ ರತ್ನಾಕರ, ನರ್ತನನಿರ್ಣಯ, ಬಾಲರಾಮ ಭರತ, ಪುರಾಣಗಳು, ಸಂಹಿತೆಗಳು, ಪ್ರಣೀತಗಳು, – ಹೀಗೆ ಹಲವಾರು ಗ್ರಂಥಗಳಲ್ಲಿ ಪ್ರಸ್ತಾಪಿಸಿದ ಹಸ್ತಗಳು, ಅವುಗಳ ವಿನಿಯೋಗ, ಮಹತ್ವ, ಪ್ರಚಲಿತದಲ್ಲಿ ಉಪಯೋಗವಾಗುತ್ತಿರುವ ಹಸ್ತಗಳು, ಅವುಗಳ ಮೂಲ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಗ್ರಾಂಥಿಕ ಹಿನ್ನಲೆಗಳು.
 3. ಹಸ್ತ ಮುದ್ರೆಗಳು ಮುದ್ರಾವಿಜ್ಞಾನದಲ್ಲಿ, ಹಠಯೋಗ ಪ್ರದೀಪಿಕಾ ಮುಂತಾಗಿ ಯೋಗಶಾಸ್ತ್ರದಲ್ಲಿ, ಮುದ್ರಾ ಶಾಸ್ತ್ರ, ಧಾರ್ಮಿಕ ಪೂಜಾ ವಿಧಿ, ಪ್ರತಿಮಾಶಾಸ್ತ್ರ, ತಂತ್ರ-ಮಂತ್ರಗಳಲ್ಲಿ ಹೇಗೆ ಬಳಕೆಯಾಗುತ್ತಿವೆ ಮತ್ತು ಅವುಗಳ ಉಪಯೋಗ. ಮುಖ್ಯವಾಗಿ ಮುದ್ರೆಗಳ ಬಳಕೆಯಿಂದಾಗುವ ಆರೋಗ್ಯಕರ ಆಯಾಮಗಳ ತುಲನೆ.
 4. ಅಧ್ಯಯನಕ್ಕೆ ಅವಶ್ಯವಿರುವ ಇತಿಹಾಸ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರಿಂದ ಆಳ ಸಂದರ್ಶನ, ಪ್ರದರ್ಶನಗಳ ಸಮೀಕ್ಷೆ, ಗ್ರಂಥ ಅಧ್ಯಯನ.

 

’ನೃತ್ಯ ಮಾರ್ಗ ಮುಕುರ’

ಮನೋರಮಾ ಬಿ. ಎನ್ ಅವರ ನೃತ್ಯ ಮಾರ್ಗ ಮುಕುರ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆ ಮತ್ತು ನೃತ್ಯಬಂಧಗಳ ದಾಖಲೆಯುಳ್ಳ ಅಧ್ಯಯನ ಕೃತಿ. ಭರತನಾಟ್ಯದ ಮಾರ್ಗಪದ್ಧತಿಯ ಮಜಲುಗಳನ್ನು, ನೃತ್ಯಾಂಗಗಳನ್ನು ದಾಖಲಿಸುವ, ಸಮಗ್ರ ಸಂಕ್ಷಿಪ್ತ ವಿವರವನ್ನೀಯುವ ೧೬೦ ಪುಟಗಳ ಈ ಕೃತಿ, ಆಸಕ್ತ ಸಹೃದಯರ ಪಾಲಿಗೆ ಸಾಕಲ್ಯ ದೃಷ್ಟಿಯ ಅಧ್ಯಯನಸಾಮಗ್ರಿ. ಮಾರ್ಗ, ದೇಸೀ ನೃತ್ಯದ ಪರಿಕಲ್ಪನೆ, ಲೋಕಧರ್ಮಿ ನಾಟ್ಯಧರ್ಮಿ ಪ್ರಬೇಧಗಳು, ಆಯಾಯ ಕಾಲಘಟ್ಟದ ಲಾಕ್ಷಣಿಕರ ವ್ಯಾಖ್ಯಾನಗಳ ಮೂಲಕ ನಾಟ್ಯಪದ್ಧತಿಯ ಮಜಲುಗಳಲ್ಲಿ ವ್ಯತ್ಯಾಸ, ನಾಟ್ಯದ ಪರಿಕಲ್ಪನೆ ಕಾಲಾನಂತರದಲ್ಲಿ ನೃತ್ಯವಾದ ರೀತಿನೀತಿಯನ್ನೊಳಗೊಂಡಂತೆ ಭರತನಾಟ್ಯದ ಇತಿಹಾಸ, ಬದಲಾವಣೆ, ಬೆಳವಣಿಗೆ ಮತ್ತು ಕಛೇರಿಮಾರ್ಗವನ್ನು ಹೇಳುವ ಈ ಕೃತಿಯು ಆಲಯ ಮತ್ತು ರಾಜಾಶ್ರಯ ನೃತ್ಯಪದ್ಧತಿಯಲ್ಲಿ ಬೆಳೆದುಬಂದ ಭರತನಾಟ್ಯದ ವಿವಿಧ ಹಂತಗಳನ್ನೂ, ಭರತನಾಟ್ಯಕ್ಕೆ ಕರ್ನಾಟಕ ಸಂಗೀತದ ಕೊಡುಗೆಯನ್ನೂ ವಿವೇಚಿಸುತ್ತದೆ.

ರಸನಿರೂಪಣೆಯೇ ಕಲೆಯ ಅತ್ಯುನ್ನತ ಸಾಧನೆ ಎನ್ನುವ ಸಾರಾಂಶವನ್ನು ಹೇಳುವ ಈ ಕೃತಿ, ಭರತನಾಟ್ಯದ ಸಮಕಾಲೀನ ಬದಲಾವಣೆ, ಬೆಳವಣಿಗೆ, ವ್ಯತ್ಯಾಸ, ಲೋಪದೋಷ, ಗುಣಾವಗುಣಗಳನ್ನೂ ಸಾಕ್ಷ್ಯಸಮೇತ ವಿಶ್ಲೇಷಿಸಿದೆ. ಪುಷ್ಪಾಂಜಲಿ, ಅಲಾರಿಪ್ಪು ಮುಂತಾದ ನರ್ತನಪ್ರಕಾರಗಳಿಂದ ಮೊದಲ್ಗೊಂಡು ತಮಿಳ್ನಾಡು ಮತ್ತು ಮೈಸೂರು ಪರಂಪರೆಗಳಲ್ಲಿ ಬೆಳೆದುಬಂದ ವಿವಿಧ ನೃತ್ಯಾಂಗಗಳನ್ನೂ ಸೂಕ್ತ ದಾಖಲೆ, ಹಿನ್ನಲೆಗಳೊಂದಿಗೆ ಮೆಟ್ಟಿಲಿನೋಪಾದಿಯಲ್ಲಿ ಚರ್ಚಿಸಿದೆ. ನೃತ್ಯಕ್ಷೇತ್ರದ ಹಿರಿಯರ ಸಂದರ್ಶನ, ಗ್ರಂಥ ಪರಾಮರ್ಶನ, ಅವಲೋಕನ, ಕ್ಷೇತ್ರಕಾರ್ಯಾಧಾರಿತ ಸಂಶೋಧನೆಯಿಂದ ‘ ನೃತ್ಯಮಾರ್ಗ ಮುಕುರ’ದ ವಿಷಯ ವಿಶ್ಲೇಷಣೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಂದಿನ ಭರತನಾಟ್ಯಕ್ಷೇತ್ರದ ಅಗತ್ಯ, ಅನಿವಾರ್ಯತೆ, ಸಮಸ್ಯೆಗಳಿಗೆ ಕನ್ನಡಿ ಹಿಡಿದಿರುವ ಈ ಪುಸ್ತಕ ನೃತ್ಯಕ್ಷೇತ್ರದ ಒಂದು ಕೊಡುಗೆ ಮತ್ತು ನಿಜಕ್ಕೂ ಮಾರ್ಗ ಮುಕುರವೆಂಬ ಹೆಸರಿಗೆ ಅನ್ವರ್ಥ.- ಎಂದಿದ್ದಾರೆ ಪುಸ್ತಕಕ್ಕೆ ವಿಶ್ಲೇಷಣೆಯನ್ನಿತ್ತ  ಅಷ್ಟಾವಧಾನಿಗಳು, ಚಿತ್ರಕಾವ್ಯ ಪರಿಣತರು, ಪೃಚ್ಛಕರೂ ಆದ ಡಾ. ಆರ್. ಶಂಕರ್.

ಭರತನಾಟ್ಯ-ಭರತನ ನಾಟ್ಯಶಾಸ್ತ್ರ ಪ್ರಸ್ತುತ ಸಂದರ್ಭದಲ್ಲಿ ಗೊಂದಲವನ್ನು ಸೃಷ್ಟಿಸಿಕೊಂಡ ಪಾರಿಭಾಷಿಕ ಪದಗಳಾಗಿ ಮಾರ್ಪಟ್ಟಿವೆ. ‘ಇಂದಿನ’ ಭರತನಾಟ್ಯ ಎಂಬ ನೃತ್ಯಪದ್ಧತಿಗೂ ‘ಅಂದಿನ’ಭರತನ ನಾಟ್ಯಶಾಸ್ತ್ರಗ್ರಂಥಕ್ಕೂ ಇರುವ ಸಂಬಂಧಗಳ ಬಗ್ಗೆ ಗಹನವಾದ ಚರ್ಚೆಗಳು ನಡೆಯುತ್ತಿದ್ದರೂ ತಾರ್ಕಿಕ, ತಲಸ್ಪರ್ಶಿಯಾದ ಅಧ್ಯಯನಗಳಾಗಿರುವುದು ಬೆರಳೆಣಿಕೆಯಷ್ಟು. ಈ ನಿಟ್ಟಿನಲ್ಲಿ ನೃತ್ಯ ಮಾರ್ಗ ಮುಕುರ ಭರತನಾಟ್ಯ ನೃತ್ಯಮಾರ್ಗಕ್ಕೆ ಹಿಡಿದ ಕೈಗನ್ನಡಿಯೇ ಆಗಿರುವುದು ಅಭಿನಂದನೀಯ.- ಎಂದಿದ್ದಾರೆ ಪುಸ್ತಕಕ್ಕೆ ನಲ್ನುಡಿಯನ್ನಿತ್ತ ಕಲಾ-ಇತಿಹಾಸ ಸಂಶೋಧಕಿ ಡಾ. ಕರುಣಾ ವಿಜಯೇಂದ್ರ.

ಡಾ. ಮನೋರಮಾ ಬಿ.ಎನ್ ಅವರ ನಂದಿಕೇಶ್ವರ ಸಂಶೋಧನ ಕೃತಿ – ಭಾರತದಲ್ಲಿನ ನಂದಿಕೇಶ್ವರ ಸಂಪ್ರದಾಯ, ನಂದಿಯ ಸಂಬಂಧವಾದ ವೇದ-ಪುರಾಣ-ಆಗಮ-ತಂತ್ರ-ಮಂತ್ರ-ವ್ರತವಿಧಾನ-ದಾನಕ್ರಮ-ಜನಜೀವನ-ನೃತ್ಯಶಾಸ್ತ್ರ- ಕಲಾಮೀಮಾಂಸೆಗಳನ್ನು ಚರ್ಚಿಸುವ ಕೃತಿ ಇದಾಗಿದ್ದು; ನಂದಿಕೇಶ್ವರನ ಸಂಬಂಧ ಬಂದಿರುವ ಪ್ರಪ್ರಥಮ ಕನ್ನಡ ಕೃತಿಯೆಂಬ ಮನ್ನಣೆ ಪಡೆದಿದೆ. ಇದು ಅಭಿನಯದರ್ಪಣ ಮತ್ತು ಭರತಾರ್ಣವವೆಂಬ ನೃತ್ಯಲಕ್ಷಣಗ್ರಂಥಗಳ ಗುಣ ಕಥನ ವ್ಯಾಖ್ಯಾನವನ್ನೂ ಹೊಂದಿದ್ದು ನೃತ್ಯಾಭ್ಯಾಸಿಗಳಿಗೆ ಉಪಯುಕ್ತವಾಗಿದೆ.

 

 

ಭರತ ನಾಟ್ಯಬೋಧಿನಿ –ಬಾಲಕರಿಗೂ ವೃದ್ಧರಿಗೂ ಆಪ್ಯಾಯಮಾನವಾಗಬಲ್ಲ ಪಾಠ್ಯ 

೩೦೮ ಬೆಲೆ : ೪೦೦ ರೂ

ನೂಪುರ ಭ್ರಮರಿ (ರಿ.)ಮತ್ತು ಕಲಾಗೌರಿ ಸಂಸ್ಥೆಗಳಿಂದ ಪ್ರಕಾಶನ

ಭರತನಾಟ್ಯಬೋಧಿನಿ- ಕನ್ನಡ (ಅಧ್ಯಯನನಿಷ್ಠವಾಗಿ ಮೂಲ ಪಾಠ್ಯ) ಡಾ. ಮನೋರಮಾ ಬಿ.ಎನ್

ಇಂಗ್ಲೀಷ್‌ಗೆ ಭಾಷಾನುವಾದ : ಶಾಲಿನಿ ಪಿ. ವಿಠಲ್ ಮತ್ತು ಡಾ. ದ್ವರಿತಾ ವಿಶ್ವನಾಥ್

ಬಹಳ ವರುಷಗಳಿಂದ ಕರ್ನಾಟಕದಲ್ಲಿ ನೃತ್ಯಪರೀಕ್ಷೆ ಮತ್ತು ನೃತ್ಯ ಪಾಠ್ಯಪುಸ್ತಕದ ಸುಧಾರಣೆ, ತಪ್ಪು ತಿದ್ದುಪಡಿಗಳ ಕುರಿತಾಗಿ ಹಲವು ವಾದ-ವಿವಾದ, ಅರಣ್ಯರೋದನ ಕೇಳಿಬರುತ್ತಿರುವುದೂ ಸರಿಯಷ್ಟೇ. ಈ ನೆಲೆಯಲ್ಲಿ ಯತೋಚಿತವಾದ ಸಮಾಧಾನವು ದೊರಕುವಂತಹ ಪ್ರಯತ್ನವು ಸದ್ಯಪ್ರಸಕ್ತ ದಾಖಲಾಗಿದೆ. ಅದುವೇ ಭರತನಾಟ್ಯಬೋಧಿನಿ ಎಂಬ ಕೃತಿಯ ಮೂಲಕ. ಆಗತಾನೇ ನೃತ್ಯಕ್ಷೇತ್ರದಲ್ಲಿ ಹೆಜ್ಜೆಯಿಡುವವರಿಂದ ಮೊದಲ್ಗೊಂಡು ಒಂದೊಂದೇ ಮೆಟ್ಟಿಲುಗಳನ್ನು ಕಲಿಕೆಯಲ್ಲಿ ಏರುವ ಎಲ್ಲಾ ವಿಭಾಗದ ವಿದ್ಯಾಭ್ಯಾಸಿಗಳಿಗೂ ಹೊಂದಬಲ್ಲ ಪಾಠ್ಯ. ಭರತನಾಟ್ಯವನ್ನು ಕಲಿಯುವ ಪ್ರಾಥಮಿಕ ಪೂರ್ವ/ಪ್ರಾಥಮಿಕ/ಪ್ರಾಥಮಿಕ ಅನಂತರ ಹಂತದವರಿಗಾಗಿ ನೃತ್ಯಾಭ್ಯಾಸ ನಡೆಸಲು ಅನುಕೂಲವಾಗುವಂತೆ, ಅರ್ಥ ಮಾಡಿಸಲು ಸುಲಭವಾಗುವಂತೆ ಇದೆ ಈ ಕೃತಿ. ಕರ್ನಾಟಕದ ಪರೀಕ್ಷೆಗಳಿಗಷ್ಟೇ ಅಲ್ಲದೆ, ಗಂಧರ್ವ ಮಹಾವಿದ್ಯಾಲಯ, ನಾಟ್ಯಶಾಸ್ತ್ರ ಮತ್ತು ಇನ್ನಿತರ ನೃತ್ಯಸಂಬಂಧೀ ಸ್ಪರ್ಧಾತ್ಮಕ / ಪ್ರವೇಶ ಪರೀಕ್ಷೆಗಳಿಗೂ ಸಹಕಾರಿ. ಹಾಗಾಗಿ ಕರ್ನಾಟಕವೊಂದಕ್ಕೇ ಈ ಪಾಠ್ಯವು ಸೀಮಿತವಾಗಿರದೆ ಎಲ್ಲಾ ಭಾಷೆ, ಪ್ರದೇಶ, ಹೊರನಾಡಿನ ಕಲಾಭ್ಯಾಸಿಗಳಿಗೂ ಅನುಸರಿಸುವ ಮಟ್ಟಿಗೆ ವಿಸ್ತಾರವುಳ್ಳದ್ದು. ಕನ್ನಡದೊಂದಿಗೇ ಇರುವ ಇಂಗ್ಲೀಷ್ ಅವತರಣಿಕೆಯು ಉಭಯ ವಿಷಯ ಪರಾಮರ್ಶನಕ್ಕೂ, ಭಾಷಾವಿವೇಕಕ್ಕೂ ಮತ್ತು ಭಾಷಾಸೀಮೆಯನ್ನು ವಿಸ್ತರಿಸಿಕೊಳ್ಳುವ ನೆಲೆಗಳಿಗೂ ಅನುಕೂಲಕಾರಿ. ಈ ಕೃತಿ ಕಲಾಭ್ಯಾಸದ ಹಿನ್ನೆಲೆಯಲ್ಲಿ ನಿಸ್ಸಂಶಯವಾಗಿ ಹಲವು ಪ್ರಥಮಗಳನ್ನು ಸಾಧಿಸಿದ ಮಹತ್ತ್ವದ ಕೃತಿ.

ಪರೀಕ್ಷೆಗಳಿರುವುದು ವಿಷಯಗಳ ಸರಿಯಾದ ಚಿಂತನಮಂಥನಕ್ಕೆಂದೇ. ಬದಲಾದ ಕಾಲಘಟ್ಟಕ್ಕೆ ಪರೀಕ್ಷೆಗಳ ಪಥವೇ ಭ್ರಷ್ಟವಾಗಿದ್ದgತನ್ನ ಅಸ್ತಿತ್ವಮಾತ್ರದಿಂದಲೇ ಅದರ ಪ್ರಯೋಜನ ಪರಿಣಾಮಗಳನ್ನು ಏನಕೇನಪ್ರಕಾರ ನಿರಾಕರಿಸಲಾಗದು. ಸಮಗ್ರ ವ್ಯಕ್ತಿತ್ವ ವಿಕಸನವೇ ಎಲ್ಲಾ ವಿದ್ಯಾಭ್ಯಾಸದ ಗುರಿಂದಿಟ್ಟುಕೊಂಡರೆ ಪರೀಕ್ಷೆಗಳು ಗುರಿಯನ್ನು ಸಾಧಿಸಿಕೊಳ್ಳುವ ಅಳತೆಗೋಲು. ಇತ್ತ ಪರೀಕ್ಷೆಗಳೂ ಸಾಫಲ್ಯ ಪಡೆಯಬೇಕು, ಅತ್ತ ಕಲಿಕೆಯೂ ಫಲಪ್ರದವಾಗಬೇಕೆಂಬ ಆಶಯವಿದ್ದರೆ ಭರತನಾಟ್ಯಬೋಧಿನಿಯು ಅಧ್ಯಯನಶೀಲರಿಗೆ ಸೂಕ್ತಪಠ್ಯ. ಬದಲಾದ ಕಾಲಕ್ಕನುಗುಣವಾಗಿ ರೂಪಿತವಾಗಿರುವ ವಿದ್ಯಾಭ್ಯಾಸ ಮತ್ತು ಪರೀಕ್ಷಾ ಕ್ರಮ, ಉತ್ತರಪತ್ರಿಕೆಗಳಲ್ಲಿ ಅನುಸರಿಸಬೇಕಾದ ರೀತಿನೀತಿ, ನೃತ್ಯಾಭ್ಯಾಸ ಮತ್ತು ಶಿಕ್ಷಣವ್ಯವಸ್ಥೆಯನ್ನು ಉದ್ದೇಶಿಸಿರುವುದು ಇಲ್ಲಿನ ರಚನಾವಿಧಾನದಿಂದ ಸ್ಪಷ್ಟವಾಗುತ್ತದೆ. ಸಮಗ್ರವಾದ ನೃತ್ಯಾಧ್ಯಯನವು ಸಿದ್ಧಿಸುವಂತೆ ಈ ಪಾಠ್ಯವು ಸೂಕ್ತ ನಿಯಮಗಳನ್ನು ಹೊಂದಿಸಿಕೊಂಡಿದೆ.

ಭರತನಾಟ್ಯಕ್ಕೆಂದೇ ಶಾಸ್ತ್ರಗ್ರಂಥವೊಂದನ್ನು ಬರೆಯಬಹುದು. ಆದರೆ ಅಂತಹ ಶಾಸ್ತ್ರಗ್ರಂಥವೊಂದನ್ನು ತಂದರೆ ವಿದ್ಯಾರ್ಥಿಗಳೂ ಓದಿಕೊಳ್ಳುವ ಸಾಧ್ಯತೆಗಳು ಕಡಿಮೆ. ಈವರೆಗೆ ಹಲವು ಶಾಸ್ತ್ರಗ್ರಂಥಗಳು, ಅಧ್ಯಯನಪುಸ್ತಿಕೆಗಳು, ಸಂಶೋಧನ ಕೃತಿಗಳು ನೃತ್ಯವನ್ನಾಧರಿಸಿ ಕರ್ನಾಟಕದಲ್ಲಿ ಮತ್ತು ಇಡಿಯ ನೃತ್ಯಪ್ರಪಂಚದಲ್ಲಿ ಸಾಕಷ್ಟು ಬಂದಿವೆ. ನಾಟ್ಯಶಾಸ್ತ್ರ ಮತ್ತು ಅಭಿನಯದರ್ಪಣವನ್ನಾಧರಿಸಿದ ವಿದ್ವದ್ ಪ್ರಸಕ್ತಿಗಳೂ, ಸಂಶೋಧನಾ ಲೇಖನಗಳೂ ಹಲವಿವೆ. ಆದರೆ ವಿದ್ಯಾರ್ಥಿಗಳನ್ನು ಅವು ವ್ಯಾಖ್ಯಾನ/ಟಿಪ್ಪಣಿಗಳ ಸಹಿತ ತಲುಪುವಲ್ಲಿ ಅನೇಕ ತೊಡಕುಗಳು ಎದುರಾಗುತ್ತವೆ. ಶಾಸ್ತ್ರಗ್ರಂಥಗಳಲ್ಲಿರುವ ಎಲ್ಲಾ ವಿಚಾರಗಳು ಇಂದಿನ ನೃತ್ಯಪ್ರಯೋಗದಲ್ಲಿ ಅಳವಡಿಸಲ್ಪಡದೆ ಹೋಗಿರುವುದರಿಂದ ಸಮಕಾಲೀನ ಸಾಧ್ಯತೆ, ವಿದ್ಯಾಭ್ಯಾಸ ಕ್ರಮ ಮತ್ತು ಆಧುನಿಕ ಬದುಕಿನ ಪ್ರೇರಣೆಗಳ ಬಲವೂ ಇಂದಿನ ಭರತನಾಟ್ಯ ಅಧ್ಯಯನಕ್ರಮವನ್ನು ಕಟೆಯುತ್ತವೆ. ಹಾಗೆಂದೇ ಶಾಸ್ತ್ರಗ್ರಂಥ ವಿಚಾರಗಳನ್ನು ವಿದ್ಯಾರ್ಥಿಸ್ನೇಹಿಯಾಗಿ, ಪ್ರಯೋಗನಿಷ್ಠವಾಗಿ ಹೇಗೆ ರೂಪಿಸಬಹುದೋ ಆ ಬಗೆಯಲ್ಲಿ ಈ ಕೃತಿಯನ್ನು ಬರೆಯಲಾಗಿದೆ.

ಕ್ಲಪ್ತವಾಗಿ, ಕ್ಷಿಪ್ರವಾಗಿ ವಿಷಯಪ್ರಸಾರ ಮಾಡುವಂತೆ ಬರೆವಣಿಗೆಯ ರೀತಿ ಮೂಡಿಬಂದಿದೆ. ಎಲ್ಲರಿಗೂ ಸುಲಭದಲ್ಲಿ ಗ್ರಹಿಸುವ ಪಾಠ್ಯ ವಿಭಾಗಕ್ರಮ ಇಲ್ಲಿನದ್ದು. ಭರತನಾಟ್ಯದ ಅಭ್ಯಾಸ ಮತ್ತು ಪ್ರದರ್ಶನಕ್ಕೆ ಬೇಕಾದ ಶಾಸ್ತ್ರೋಕ್ತ ಪ್ರಯೋಗ ಸಂಸ್ಕಾರವನ್ನು ನೀಡುವುದರತ್ತ ಇದರ ಗಮನವಿದೆ. ತರಬೇತಿಯ ಕ್ರಮ, ಅರ್ಥ, ವಿವರಣೆಗಳನ್ನು ಕ್ವಚಿತ್ತಾಗಿ ಅಲ್ಲಲ್ಲಿಯೇ ನೀಡಲಾಗಿದೆ. ಭರತನಾಟ್ಯ ಪ್ರಯೋಗಕ್ಕೆ ಪೂರಕವಾದ ಇತಿಹಾಸ, ಶಾಸ್ತ್ರ ಇತ್ಯಾದಿ ಪಾಠಗಳನ್ನು ನೃತ್ಯಸಂಸ್ಕೃತಿ, ಅಂಗಸಾಧನೆ ಎಂದು ಮತ್ತೆರಡು ವಿಭಾಗದಿಂದ ಕಾಣಲಾಗಿದೆ. ಭರತನಾಟ್ಯ ಕಛೇರಿಗನುಗುಣವಾದ ಪ್ರದರ್ಶನವಿಭಾಗವನ್ನು ಮತ್ತೊಂದು ಅಧ್ಯಾಯವಾಗಿಸಲಾಗಿದೆ. ಅಂಗಸಾಧನೆ ಎಂಬ ಅಧ್ಯಾಯವೊಂದರಲ್ಲೇ ಪುಸ್ತಕ ರಚನಕಾರರು ನಿಡಿರುವ ಸವಿಸ್ತಾರವಾದ ವ್ಯಾಯಾಮದ ವಿವರಗಳೇ ಯೋಗಾಭ್ಯಾಸ ನಿರತರಿಗೆ ಮುಖ್ಯ ಕೈಪಿಡಿಯಾಗಬಲ್ಲುದು.

ಎಷ್ಟೋ ಸಲ ಶಾಸ್ತ್ರವು ಪ್ರಯೋಗಮುಖಿಯಾಗಿ ಅನ್ವಯವಾಗದೇ ಓದಿಗೆ, ಅಧ್ಯಯನಕ್ಕಷ್ಟೇ ಸೀಮಿತಗೊಳ್ಳುತ್ತದೆ. ಆದರಿಲ್ಲಿ ಸಮಕಾಲೀನ ಭರತನಾಟ್ಯ ಕ್ಷೇತ್ರದಲ್ಲಿ ಶಾಸ್ತ್ರವು ಪ್ರಯೋಗವಾಗಿ ಅನ್ವಯವಾಗುವ ವಿವೇಚನೆ ಮತ್ತು ಪ್ರಯೋಗದಲ್ಲಿ ಲುಪ್ತವಾಗುತ್ತಿರುವ ಶಾಸ್ತ್ರಾಂಶಗಳನ್ನೂ ಹೇಳಲಾಗಿದೆ. ಕರ್ನಾಟಕದ ನೃತ್ಯಸಂಸ್ಕೃತಿಗೆ ಪೂರಕವಾಗುವ ಅಧ್ಯಾಯಗಳ ಸಹಿತ ಕಲೆಯೊಂದು ಬೆಳೆಯುವ ಆಯ- ಅಳತೆ-ಆಧಾರಗಳನ್ನೂ, ನೃತ್ಯ ಕಲಾವಿದರಾಗುವ ದಿಸೆಯಲ್ಲಿ ಕಲಿಯುವ/ ಕಲಿಸಬೇಕಾದ ಸಂಸ್ಕೃತಿಪರವಾದ ಚಿಂತನೆಗಳನ್ನೂ ಸೂಕ್ಷ್ಮವಾಗಿ ಮನಮುಟ್ಟುವಂತೆ ಸೇರಿಸಲಾಗಿದೆ. ಇದು ಮರೆಯಾಗುತ್ತಿರುವ ಕರ್ನಾಟಕ ನೃತ್ಯಪರಂಪರೆಗಳು ಮತ್ತೆ ಜನರಿಗೆ ಮುಟ್ಟುವಲ್ಲಿ ಅಂತೆಯೇ, ನರ್ತನದ ಸಾಂಸ್ಕೃತಿಕ ಶಿಸ್ತನ್ನು ಬೆಳೆಸಿಕೊಳ್ಳುವಲ್ಲಿ ಒಳ್ಳೆಯ ಹೆಜ್ಜೆ.

ಪುಸ್ತಕರಚಯಿತೆ ಡಾ.ಮನೋರಮಾ ಅವರ ಸಂಶೋಧನಾಧರಿತವಾದ ಅನೇಕ ವಿಷಯಗಳು ಇದರಲ್ಲಿ ಮಕ್ಕಳಿಗೂ ಎಟುಕಬಲ್ಲಷ್ಟು ಸರಳವಾಗಿ ಎಟುಕುವಂತೆ ಬರೆಯಲ್ಪಟ್ಟಿರುವುದು ಸಂಶೋಧನೆಗಳು ವಿದ್ವಾಂಸರಿಗಷ್ಟೇ ಅಲ್ಲ, ಜನಮಾನಸನವನ್ನು ಹೇಗೆ ಮುಟ್ಟಬೇಕು ಎಂಬ ನಿಟ್ಟಿನಲ್ಲಿ ಒಳ್ಳೆಯ ನಿದರ್ಶನ. ಭರತನಾಟ್ಯದ ಹೆಜ್ಜೆಗಾರಿಕೆ- ಅಡವಿನ ವಿಭಾಗಕ್ರಮಕ್ಕೆ ಮತ್ತು ನರ್ತನಶಿಲ್ಪಗಳಿಗೆ ವೈಜ್ಞಾನಿಕವಾದ, ಸೈದ್ಧಾಂತಿಕವಾದ ಬಲವನ್ನು ದೊರಕಿಸಿಕೊಟ್ಟಿರುವುದೇ ಈ ನೆಲೆಯಲ್ಲಿ ಮಹತ್ತ್ವದ ಬೆಳವಣಿಗೆ. ಸಂಶೋಧನೆಗಳನ್ನು ಪ್ರಯೋಗಸ್ನೇಹಿಯಾಗಿ, ವಿದ್ಯಾರ್ಥಿಪ್ರಿಯವಾಗಿ, ಸಾಮಾನ್ಯಜನರಿಗೆ ಓದಿಕೊಂಡು ಅರ್ಥ ಮಾಡಿಕೊಂಡು ಹೋಗುವ ನೆಲೆಯಲ್ಲಿ ಮಾಡುವ ಪ್ರಯತ್ನ ಹೇಗಿರಬೇಕು ಎನ್ನುವುದಕ್ಕೆ ಈ ಕೃತಿ ಮಹತ್ತ್ವದ ಸಾಕ್ಷಿ.

ಈ ಪಾಠ್ಯದ ವಿಶೇಷತೆಯೇ –ವಿಶೇಷ ಶಿಕ್ಷಣವೆಂಬ ವಿಭಾಗ. ಅದು ಆಯಾ ವಿಷಯದ ಬಗ್ಗೆ ಇನ್ನಷ್ಟು ಆಳವಾಗಿ ತಿಳಿಯಬಯಸುವ ಮತ್ತು ಸಮಗ್ರ ಚಿಂತನೆಗೆ ಅನುವಾಗುವಂತೆ ಯಾವುದೇ ಹಂತದವರಿಗೂ ಉಪಯೋಗಕಾರಿ. ಈ ಮಾದರಿಯ ಪಾಠ್ಯಕ್ರಮ ಇದುವರೆಗೆ ಕರ್ನಾಟಕದ ಯಾವುದೇ ನೃತ್ಯಪುಸ್ತಕಗಳಲ್ಲಿ ಬಂದದ್ದಿಲ್ಲ. ಪರೀಕ್ಷೆಗಳಿಗಷ್ಟೇ ಗೈಡ್ ತರುವ ಉದ್ದೇಶದ ಇಂದಿನ ಅನೇಕ ಕೃತಿಗಳಿಂದ ಭಿನ್ನವಾಗಿ, ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತದೆ ಭರತನಾಟ್ಯಬೋಧಿನಿ. ಕಲಿಕೆಯೊಂದು ಹೇಗೆ ಸಾಗಬೇಕು ಎನ್ನುವ ಚಿಂತನೆ ಸ್ಪಷ್ಟವಾಗಿ ನಿರ್ದಿಷ್ಟವಾಗಿ ಇಲ್ಲಿದೆ. ದೀರ್ಘವಾದ ಪ್ರಬಂಧ ಮಾದರಿಯ ಪಾಠ್ಯದಿಂದ ವಿದ್ಯಾರ್ಥಿಗಳು ಅಭ್ಯಾಸವಿಮುಖರಾಗುವ ಸಂಭವನೀಯತೆ ಹೆಚ್ಚು ಎಂಬುದನ್ನು ಮನಗಂಡೇ ಡಾ ಮನೋರಮಾ ಅವರು ಪ್ರಾಥಮಿಕ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಓದಿ ಅರಿತು, ನೆನಪಿನಲ್ಲಿಟ್ಟುಕೊಳ್ಳುವಂತೆ ಪಾಠ್ಯವಿಷಯಗಳನ್ನು ಕ್ರಮವತ್ತಾಗಿ ಚಿಕ್ಕದಾಗಿ ಚೊಕ್ಕದಾಗಿ ಹೊಂದಿಸಿ ಕೊಟ್ಟಿದ್ದಾರೆ. ತಿಂಗಳುಗಳ ಆಧಾರದಲ್ಲಿ ವಿದ್ಯಾರ್ಥಿಗಳು ಕಲಿತುಕೊಂಡು ಹೋಗುವಂತೆ ಸುಲಭವಾದ ಪಾಠ್ಯಕ್ರಮ ಇಲ್ಲಿನದ್ದು. ಒಟ್ಟಿನಲ್ಲಿ ನಾಟ್ಯಬೋಧಿನಿಯ ಹೆಸರಿನಲ್ಲಿ ಆಗಿರುವ ಈ ಪಾಠ್ಯರಚನೆಯೇ ನೃತ್ಯಜಗತ್ತು ನಿರೀಕ್ಷಿಸುತ್ತಿರುವ ಚಿಕಿತ್ಸಕ ದೃಷ್ಟಿಯನ್ನು ಹೊಂದಿದೆ.

ಸಾಮಾನ್ಯವಾಗಿ ಪ್ರಶ್ನಾವಳಿಗಳನ್ನು ನೀಡುವ ಕ್ರಮವನ್ನು ಪಾಠ್ಯಗಳಲ್ಲಿ ಕಾಣುತ್ತೇವೆ. ಆದರಿಲ್ಲಿ ಪ್ರಶ್ನಾವಳಿಗಳನ್ನು ಬೇಕೆಂದೇ ನೀಡಲಾಗಿಲ್ಲ. ಪ್ರಶ್ನಾವಳಿಗಳನ್ನು ನೀಡಿದರೆ ಕೇವಲ ಪರೀಕ್ಷೆಗೆಂದೇ ವಿದ್ಯಾರ್ಥಿಗಳು ಕಲಿಯುವ ಸಂಭವನಿಯತೆಗಳಿದ್ದು ಸಮಗ್ರ ಶಿಕ್ಷಣದ ಆಯಾಮಗಳು ಕಳೆದುಹೋಗುವ ಕಾರಣಕ್ಕೆಂದು ಆಯಾ ವಿಷಯ/ಪಾಠದ ಮುಂದೆ ಆ ಪಾಠವು ಎಷ್ಟು ಅಂಕಗಳಿಗೆ ಕೇಳಲಾಗುವುದೆಂಬ ಸೂಚನೆಯನ್ನು ಮಾತ್ರ ನೀಡಲಾಗಿದೆ. ಪೂರಕವಾದ ಅತ್ಯವಶ್ಯ ರೇಖಾಚಿತ್ರಗಳನ್ನು ಪರಾಮರ್ಶನಕ್ಕೆಂದು ಒದಗಿಸಲಾಗಿದೆ. ಇದು ಮಕ್ಕಳಲ್ಲಷ್ಟೇ ಅಲ್ಲದೆ ಹಿರಿಯರಿಗೂ ಅಂಕಗಳಿಕೆಯನ್ನೊಂದೇ ನೆಚ್ಚದೆ ಅಭ್ಯಾಸಕ್ರಮದ ಶಿಸ್ತನ್ನು, ಬಹುಮುಖವಾದ ಚಿಂತನೆಗಳನ್ನು ಬೆಳೆಸಿಕೊಳ್ಳಲು ಪೂರಕ.

ಈ ಪಾಠ್ಯಪುಸ್ತಿಕೆಯು ಇಂದಿನ ಕಾಲಕ್ಕೆ ಅಲಭ್ಯವಾಗುತ್ತಿರುವ ಅನೇಕ ಉತ್ತರಗಳನ್ನು ಯತೋಚಿತವಾಗಿ ದೊರಕಿಸಿಕೊಡುತ್ತದೆ. ನೃತ್ಯಕಲಿಕೆಯಲ್ಲಿ ಆಗುವ ಅನೇಕ ಮನಃಕ್ಲೇಶಗಳಿಗೆ ಇದರಿಂದ ಸಮಾಧಾನ ದೊರಕಬಹುದು. ನೃತ್ಯಾಭ್ಯಾಸ ಮತ್ತು ಕಲಿಕೆಯನ್ನೇ ಗುರಿಯಾಗಿಸಿರುವ ಗುರುಗಳಿಗೆ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರುಗಳಿಗೆ ಈ ಪಾಠ್ಯದಿಂದ ಪ್ರಯೋಜನವಾದೀತು. ನೃತ್ಯಾಭ್ಯಾಸವು ಯುಕ್ತ ಮಾರ್ಗದಿಂದ ಕ್ರಮವತ್ತಾಗಿ ಸಾಗುವಂತೆ ವ್ಯವಸ್ಥಿತ ನೆಲೆಯನ್ನು ಕಂಡುಕೊಳ್ಳುವಂತೆ ಮಾಡಲಾದ ಯೋಜನೆಯಿದು. ಕಲಿಕೆಯಲ್ಲಿ, ಪರೀಕ್ಷೆಗಳಲ್ಲಿ ಇದನ್ನು ಪರಿಪಾಲಿಸಿದರೆ ಗುಣಾತ್ಮಕ ಬದಲಾವಣೆ ನಿರೀಕ್ಷಿಸಬಹುದು. ( ವಿಮರ್ಶೆ- ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ )

ಇಂಗ್ಲೀಷ್ ವಿಮರ್ಶೆ- arjun bharadhwaj @ Narthaki dance webjournal

link : http://www.narthaki.com/info/bookrev/bkrev28.html


 

 

English Version :

Dr. Manorama B.N. is the Research Scholar; Editor, Publisher of her own Bi- monthly journal ‘NOOPURA BHRAMARI’, dedicated for Bharatanatya and other Performing Arts. She is the author of research books- ‘MUDRARNAVA’(Kannada) 350 pages deals communicative potentials of Hastha Mudra of various discipline; ‘NRITYA MARGA MUKURA’- (Kannada) 170 pages deals on Historial perspective and repertoire of Bharatanatyam; ‘MAHAMUNI BHARATA’- informative book on Sage Bharata and his important contribution and edited ‘NOOPURAAGAMA’- Research annual. She is also author of Bilingual Bharatanatya text book ‘Bharatanatyabodhini and edited English version too.

She has passed UGC National Eligibility Test for lectureship; conducted in December 2006 and awarded Doctrate for her PhD Research at Mass communication and Journalism Department of Kuvempu University, Shivamogga in 2016. Her subject of study is “Possibility (Prospects) of Social Communication in Bharatanatyam”. As far as the record concern she is the first and foremost women who building a bridge between Mass communication and Dance through her new research outlook.

She is a President of Noopurabhramari Foundation for Arts; Editor of Dance Bi-Monthly ‘Noopura Bhramari’ since 9 years; Convenor and Administration section Dean for Noopura Bhramari Dance researchers Forum; editor of ‘Noopuraagama’- First Dance Research Journal of India.  She is also a Convener of Shree Sannidhya Printers and Publishers.

She has received International Award (I prize) for open Essay Writing competition which was conducted by AKKA- Kannadigara Koota, in 2009 October, for the purpose of  Conference Souvenir at Chicago,USA. Topic: ‘Pradarshaka Kalegalalli Kannadigara Fusion Parampare’ (Tradition of Fusion in performing Arts among the Kannadiga’s).

She is recipient of junior Fellowships from HRD Ministry, Central Govt and also Karnataka Sangeeta-Nritya Academy for Nattuvangam cymbals and Korvanji dance tradition of Karnataka.

She is recipient of prestigious ‘Bharata Award’ on the occasion of Bharatamni Jayanti at Udupi Rajaangana and ‘Kala kainkarya Puraskar’ by Kuriya Vittala shastri Yakshagana Pratishtana, Ujire.

She has taken initiatives such as awarding ‘Best Dance criticism Award’ which is considered as very first attempt in Karnataka Dance history for bridging between media and Art forms.

Organising 1st (one day) Dance research seminar of Karnataka in 2012 February 20th and National Dance Research Conference-2013 on February 15, 2013 are the collective effort of Noopura Bhramari Dance Researcher’s Forum which is also considered as credit for her achievements. She has also organised 2 dance research symposium in 2018 February and August with Kalagowri institution.

Being a principal director to Noopura Bhramari Research wing; she has opened certificate courses on following subjects to interested aspirants. This attempt has been considered as very unique in its kind and benefitting different levels of artistes/students since one year.

She is poet and author of Many Dance items which is considered as contribution of Art field.

Career Highlights

  • Began career as a Journalism Lecturer in Field Marshal K. M. Cariappa college, Madikeri (University aided College) for a period of 1 year (Subjects- Journalism, General Studies, Constitution, Environment, Human Resource Development). Within a year, the department grew in stature.
  • Had the privilege of working as a Journalism Lecturer in St. Aloysius College (Autonomous) for a period of one year, Member of BOS, Class guide of I BA, Al-Madhyam Association president.
  • Worked in Shree Dharmasthala Manjunatheshwara College, Ujire as a Member of BOE and E-Bulletin committee and as a Lecturer in Mass communication and Journalism Department (Post Graduation).
  • Over the years, have been invited to be lectures demonstrations, presenting research papers on Bharatnatyam and Journalism in various cultural and academic institutions.
  • Has been a Resource person in the workshop conducted by Yakshagana Academy for the preparation of Syllabus for Yakshagana for the state level Exams.
  • Has been an Evaluator for Mangalore University Degree (semester-2008) Central Examination.
  • Has been a Resource person and lecturer in various Dance Workshops and trained foreign delegates.
  • TV interviews, Akashavani Interviews with special audience programmes, newspaper and magazine write-up has been published on efforts and achievement.
  • Has been a resource person, Teacher for Bharathanatyam (Ujire Higher primary school for 1 year –based upon college educational programs) and Fusion, judge for various programs.
  • Produced Akashavani and Television Documentaries, special audience programmes upon various aspects ; And directed the students in respective areas along with Research and Documentation, Editing, programme production, Surveys etc.
  • Has been recognised as a good teacher: voted as the Best Teacher in the college [based on the confidential feedback gathering system], and a person with excellent written and spoken communication skills. Was a convenor for Media seminar organised by Journalism Department of SDM College.
  • Active member of Karnataka Nrityakala Parishat and Karnataka Samshodhakara Okkuta, Bangalore.
  • Has given special lecture on the performing art forms : Quest towards newness- At Alva’s Nudisiri 2015- Moodabidri- national level Literary and cultural Festival and Coastal Karnataka Literary festival held at Kateel 2015 on the topic – Dance tradition in South Canara.
  • Worked as Research Associate in Institute for Social and Economic Change (ISEC) under Prof G.K.Karanth, renowned sociologist for the project assigned by Govt. of Karnataka regarding ‘Impact assessment of subsidy given by Govt. of Karnataka for value based Kannada films’. Involved in the translation of the project ‘Kaniyan race’ under Prof. Ramaswamy in ISEC in 2011. Extended help to the project on ‘Achievement of women in Kannada Films’ done by Mrs. Jayamala, former chairperson of Karnataka Film Chamber submitted to the Gulbarga women University for publication in 2011.
  • Worked in many editorial boards of Special issues, Centenary issues, magazines etc. Done compeering and invocation for many International, National, State ceremonies.
  • Founder of the Shree Sannidhya Printers and Publisher and has published one biography of Retired Teacher. Title : Drushta Adrushta. Being a Editor of Bi-Monthly ‘Noopura Bhramari’, working for the social cause. The magazine is now in its Seventh year of publication, and has readers from various continents. It has a website www.noopurabhramari.com.
  • Being a convenor and chief of Administration section of Dance Researchers’ Forum many collective initiatives like organising 1st (one day) Dance research seminar of Karnataka in 2012 February 20th – is into Manorama’s credit. Noopura Bhramari Dance Researchers Forum saw its first initiative to the cause of research, a great success. Since then it has been receiving appreciation, encouragement, invitation to good platforms for more such work, memberships from the research arena etc. The Forum feels greatly indebted directly and indirectly to many, primarily to all supporters of research and carries with it fresh spirits and dreams to march ahead with good work in future. The Forum is the result of exchange of thoughts and ideas over the years among a few thinkers dedicated to dance to come up with a scheme for identifying the problems in the field of dance, the challenges in the field of research and the responsibilities attached to these and finding appropriate solutions and methodologies. . This association is formally inaugurated on February 20, 2012, at Nayana auditorium at Bangalore.
  • A special edition of Noopura Bhramari including data on PhD, D.lit research work done and undertaken till date by various researchers in Karnataka  with respect to Classical Dance, Folk Dance, Yakshagana and the list of Dance books and periodicals in Karnataka was released by the legendary  Multilingual scholar and  Poet, Shatavadhani Dr. R. Ganesh on the Dance research Seminar.  The scholars who presented in the whole day seminar were Shatavadhani Dr.R.Ganesh, Prof S.Shesha Shastri, Dr.H.S.Gopala Rao, former minister Leeladevi R.Prasad, renowned dancer Shridhar. Nearly 40 candidates were beneficiaries of this seminar. 3 special lectures, 5 research paper presentation, research based dance performance, open discussion with scholars were the highlights of seminar. Research papers presented at the seminar were published in the international Journal Noopuraagama, edited by Manorama B N. One of the prospects of Dance research Association of Noopura Bhramari is opening a Research Library exclusively for Dance research in Karnataka. National Dance Research Conference was arranged on February 15, 2013 at Bharatiya Vidyabhavan. First Dance Research Journal of India – Noopuraagama was released on this occasion. Nearly 15 acclaimed Researchers presented their research papers. Prof. P V Krishna Bhat, Prof. Venkatachalashastry, Dr. H S Gopala Rao, Minister for Kannada and culture Sri Govinda Karajola, Member of Parliament Sri Ananth Kumar, President of Adamya Chetana Trust Smt. Tejaswini Ananthkumar, Director of Bharatiya Vidya Bhavan Sri H N Suresh were presented on this occasion. The souvenier of Noopura Bhramari consist of the interviews of prominent Dance researchers and artistes of Karnataka.
  • Best dance critic award which was started in 2011 is a brain child of Manorama and her Noopura Bhramari Foundation. Smt. Priya Raman from Hyderabad received 2010-11 Award and Smt. Prathibha Samaga, Udupi was honoured by 2011-12 Award. Korgi Shankaranarayana Upadhyaya received the 2012-13 award. The President of selection committee is multilingual scholar Shatavadhani Dr. R Ganesh.
  • Organised and guided ‘Natya Chintana’- Natyashastra weeklong workshop and ‘Shastra Prayoga Nritya Chintana’- workshop on Old court and temple dances at Puttur city in 2014, 2015 respectively which is considered as first of its kind in entire coastal Karnataka region. ‘Natysahstara kathanamalika’ a poem series by Natyashastra for the purpose of practical usage in Dance is her contribution.
  • Organised and guided Bharatanatya dance experiments on Social communication (especially Kannada Varna nritya bhandha ‘Baalaalaapa’ which is considered as first of its kind in entire Dance history) at Puttur and Bengaluru in 2013.
  • The efforts of publishing and organising a conference on ‘Abhinaya Bharati’ A collection of Dance poems on unique concepts by Shatavadhani Dr.R.Ganesh is in process.
   • Participated in many Workshop/ symposium/ conference and seminars too.  Among them some of the prominent one are – Participated as Observer in the workshop of Dr.Padma Subhramanyam held in Banegaluru in 2012
   • Participated as Observer in the 3 day workshop/seminar on comparative study of Kuchipudi and Yakshagana in 2013 January; organised by Karnataka Yakshagana Bayalata Academy, Bengaluru with the collaboration of Rashtrakavi Govinda Pai study centre, Mangalore university Yakshagana study centre at Udupi MGM College.
   • Being Secretary for Akhila Bharata Yakshagana Maha Sammelana; participated and presented research paper on ‘Rasa and Navarasa in Yakshagana’.
   • Special lecture at Karvaali Sahitya Sammelana at Kateel in 2015 on the topic ‘Karavali jillegalalli Sangeeta Nritya Parampare mattu Belavanige’
   • Alvas Nudisiri- Special lecture- 2015- on ‘Pradarshana kalegalalli hosatu’
   • Paper presentation at National conference organised by Swadeshi Indology of Rajiv Malhotra in 2017 Dcember at Chennai IIT. Topic : Yakshaganadalli Semitic mata/vastugalu.
   • Paper presentation at National conference organised by Amrita University, Bengaluru on January 2018. Topic : Devalaya Shilpagalalli Natyayamanate.

 

Publications

She is author of about 250 Articles, Feature, and Interviews in various State level Kannada and English newspapers and magazines. Among them some of important publications are as follows :

“Shri Omkareshwar Devalayada Bhavya Itihasa” [in Kannada printed twice]. Madikeri: Sanidhya Printers and Publishers.

2009     Mudrarnava’ (Kannada) – A book on Communication Potentials of Hasthamudras –Ujire: Kuriya Vittala Shastri Foundation.

2011   ‘Nritya Marga Mukura’(Kannada)  – A book on the historical perspective and repertoire of Bharathanatyam.- Madikeri: Sanidhya Printers and Publishers.

2011  ‘Karnataka Natuvanga parampare- Vishleshalanatmaka Adhyayana’- Unpublished research work  which runs into 220 pages; submitted to Karnataka Sangeeta Nritya Academy for the year 2009-10. This research work  is appearing in the format of book published by Akademy in near future.

2012     ‘Kannada Kadambari Sahityadalli Nrityada abhivyakti’- research paper in Shodha-ISSN research Journal by Ha.Ma.Na.Research centre, Ujire and this paper were presented, published in Karnataka’s 1st dance research seminar.

2012    ‘Lokadharmi and Natyadharmi’ – special paper published in Karnataka Nritya kala Parishat Souvenier.

2013 ‘Koutwa- in Alaya, Sabha Nritya Tradition’ at National Seminar on Yakshagana on the light of Sanskrit Dramuturgy held in Dharwad.

2013     ‘Noopuraagama’ (e)- First Dance Research Journal of India, with ISSN. (Bi-Lingual)

2014   ‘Karnatakada Desi Nritya parampare’- published in Souvenier of Alvas Vishwa Nudisiri Virasat.

2014   ‘Bharatiya shastriya Nrityagala samajika Samvahana- Anwayikate mattu Abhivyakti’- research paper in Shodha-research Journal by Ha.Ma.Na.Research centre, Ujire(ISSN No.)

2014     ‘Mahamuni Bharata’- A biographical informative book on Sage Bharata- Published by Sri Bharati Prakashana, Bangalore

2014     Bharatanatyada Samajika Samvana- Siddhanta’ research paper published in Chintana Bayalu published by Bantwal (ISSN No)

2014     ‘Bharatanatyada Samajika Samvana- Prastutate mattu prayogikate’ research paper published Shodha-research Journal by Ha.Ma.Na.Research centre, Ujire(ISSN No.)

2014     ‘Bharatanatyada Samajika Samvahana- prameya mattu siddhanta’ research paper published in Chintana Bayalu published by Bantwal (ISSN No)

2015     ‘Agamokta devalayagalalli Nritya mattu Darshana Beali/Nritya Bealiyemba Alidulida kondi’ research paper published in Chintana Bayalu published by Bantwal (ISSN No)

2016  ‘Nandikeshwara’- Research bok on Nandi Tradition in India and Commentaries on Abhinayadarpana and Bharatarnava. It is First book on Nandikeshwara in kannada language which looks like encyclopaedia of Nandi. -Published by Sri Bharati Prakashana, Bangalore.

2018- Prekshaa  research article series on sculptures. ( total 6 parts) prekshaa.in

2108-  Bharata Natya bodhini – Bharatanatya Text book in Kannada and English

Since 2003  Writing many articles, expert reviews, dance poems, criticisms, spcial features, editorials, interviews to vaious prestigious newspapers and magazines.

 

Awards & Recognitions

  • Bharatanatyam- Recieved many more awards in national and state level competition, passed Bharathanatyam examinations with High First class. Experience in teaching, composing, directing the dance, dance drama, skit. More than 70 stage performance in dignified stages including Dharmasthala Laksha deepotsava, Mahanadavali, Ujire 25th year sharadotsava, Dasara of Mysore, Kannada Sangha Mumbai, etc. Given Lecture- demonstration on various aspects of Bharathanatyam in different places like Moodabidri Alvas college, Puttur, Mangalore. Her Dance photo has appeared in Hindu Encyclopeadia –Unit 5th Nayaka-Nayika Bhava section in 2012.
  • Carnatic Vocal- Passed Junior examination with First Rank in Kodagu. Received many awards in Light vocal, Folk music state level competition. Performed in Doordarshan Bangalore in Nityotsava competition, All India Radio Madikeri and Mangalore station. Experience in teaching, composing music.
  • Mono Acting and Drama – Won more than 30 awards, and given more than 50 stage performances. Recently played a female role ‘Manohari Das’- in ‘Mandra’ drama directed by B.V.Rajaram, Director, Rangayana. YHis drama is based on S L Bairappa’s Mandra Novel on Music and Dance.
  • Yakshagana- Folk Art of Dakshina Kannada – Won Yakshotsava Special award & given more than 40 stage performances. Participated in various stages including Akhila Karnataka Yakashagana sammelana, Bangalore and Yakshotsava (for 3 consecutive years. And won I place awards), being a member of Ujire college Yakshakoota. Participated as Resource person in Yakshagana Academy workshop and compered many programs.
  • Being an artist of Ramakatha; she has played various challenging roles in new dramatic concept –Rupaka; all over India.
  • Debate, Essay, Speech competition, Mime, Drama, Skit- More than 50 awards including National, State level. Given stage performances.
  • Got Ranks, Gold and Silver medals in State level various literary competitive examinations.

 


 

vishnu-prasad

ವಿಷ್ಣುಪ್ರಸಾದ್ ನಿಡ್ಡಾಜೆ :

ಪ್ರಸ್ತುತ ಫೆಡರಲ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾಗಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತರು, ಮೂಲತಃ  ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಇಳಂತಿಲ ಗ್ರಾಮದ ನಿಡ್ಡಾಜೆ ಮನೆತನದವರು. ಪುತ್ತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಉನ್ನತ ದರ್ಜೆಯಲ್ಲಿ ಪೂರ್ಣಗೊಳಿಸಿದರು. ಕೆಲವು ಕಾಲ ಮೂಡಬಿದ್ರಿಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ, ಕೆಲವು ಕಾಲ ಕಂಪೆನಿಯೊಂದರಲ್ಲಿ ಗುಣಮಟ್ಟ ನಿಯಂತ್ರಣ ರಾಸಾಯನಿಕ ತಜ್ನರಾಗಿಯೂ ಸೇವೆ ಸಲ್ಲಿಸಿದ ವಿಷ್ಣುಪ್ರಸಾದ್,ಉತ್ತಮ ಚಿಂತಕರೂ, ಕಲಾಸಕ್ತರೂ ಹೌದು. ಅಮೇರಿಕಾ ಹವ್ಯಕ ಕನ್ನಡಿಗರ ಒಕ್ಕೂಟದ ವತಿಯಿಂದ ನಡೆದ ಕಥಾಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಹವ್ಯಾಸಿ ಬರೆಹಗಾರರೂ,  ನೂಪುರ ಭ್ರಮರಿ ಬಳಗದ ಕ್ರಿಯಾಶೀಲ ಸದಸ್ಯರಾಗಿರುವ ಇವರು, ಪತ್ರಿಕೆಯ ವಿತರಣೆ ಹಾಗೂ ಪ್ರತಿಷ್ಠಾನದ ಟ್ರಸ್ಟಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ..


 

ಅಷ್ಟೇ ಅಲ್ಲ, ನೀವೆಲ್ಲರೂ ನಮ್ಮವರೇ! ನಮ್ಮ ಜೊತೆಗಿದ್ದೀರಿ. ಪ್ರತಿ ತಿಂಗಳು ಪತ್ರಿಕೆಯ ಬಳಗಕ್ಕೆ ಸೇರ್ಪಡೆಯಾಗುತ್ತಿರುವ ಆಸಕ್ತ ಮಿತ್ರರ ಬಳಗವನ್ನು ಮುಂದಿನ ಪುಟಗಳಲ್ಲಿ ನೋಡಿರಿ.