Vikasana Goshti

ವಿಕಸನ ಗೋಷ್ಠಿ ಮತ್ತು ಅಧ್ಯಯನ ಸ್ವರೂಪದ ಕಮ್ಮಟ-ಕಾರ್ಯಾಗಾರಗಳು : ನೃತ್ಯ ಕಲಿಯುವಾಗಿನ ದಿಸೆಯಿಂದ ಹಿಡಿದು ಈವರೆಗೂ ನೃತ್ಯವೆಂದರೆ ಏನು? ಹೇಗೆ? ಯಾಕೆ? ಎಂಬುದು ಆಗಾಗ ಪರಾಮರ್ಶನ ಮಾಡಿಕೊಳ್ಳುತ್ತಲೇ ಬಂದಿರುವ ಸಂಗತಿ. ಜೊತೆಜೊತೆಗೇ ನೃತ್ತ-ನೃತ್ಯ-ನಾಟ್ಯ, ಮಾರ್ಗ-ದೇಸೀ, ಲೋಕಧರ್ಮಿ- ನಾಟ್ಯಧರ್ಮಿ, ಉದ್ಧತ- ಸುಕುಮಾರ, ಲಾಸ್ಯ-ತಾಂಡವ, ಅಭಿನಯ, ಭಾವ-ವಿಭಾವ-ಅನುಭಾವ, ರಸ-ಔಚಿತ್ಯ-ವ್ಯುತ್ಪತ್ತಿ, ಶಾಸ್ತ್ರ-ಸಂಪ್ರದಾಯ-ಪರಂಪರೆ- ರಂಗನಿರ್ಮಾಣ…,ಇತ್ಯಾದಿ ಪಾರಿಭಾಷಿಕ ಶಬ್ದಗಳಿಂದ ಮೊದಲ್ಗೊಂಡು ಸಂಶೋಧನೆಯ ಹಲವು ಆಯಾಮ ಅಂದರೆ ಒಳ್ಳೆಯ ಸಂಶೋಧನೆಯೆಂದರೆ ಏನು? ಅದರ ನೆಲೆ ಹೇಗೆ? ವಿಷಯ ಆಯ್ಕೆ, ಇತಿಹಾಸ ವಿವೇಚನೆ, ವಸ್ತು ಪರಾಮರ್ಶೆ, ಅಧ್ಯಯನ ಕ್ರಮ, ವಿಧಾನ, ಲಾಕ್ಷಣಿಕ ಸಹಕಾರ, ರಚನಾತ್ಮಕ ಉದ್ದೇಶ, ಅಭ್ಯಾಸ, ಕ್ಷೇತ್ರ ಕಾರ್ಯ, ಶೈಕ್ಷಣಿಕ ನೆಲೆಗಟ್ಟು, ಪ್ರದರ್ಶನಾತ್ಮಕ ನೆಲೆ, ಸಾಮಾಜಿಕ ನಿಲುವು.., ಹೀಗೆ ಹಲವು ಹಂತದ ವರೆಗೂ ಹಲವು ಬಗೆಯಲ್ಲಿ ಗೊಂದಲಗಳೆದ್ದು ವ್ಯಾಖ್ಯಾನದ ಹೊಸಿಲು ಅರ್ಥವನ್ನು ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ನೆಲೆಗಳನ್ನು ಪರಿಶೋಧಿಸುವ, ಅವಲೋಕಿಸುವ ಕ್ರಮಬದ್ಧ ಕಾರ್ಯ ಜರುಗುವ ಅವಶ್ಯಕತೆಯನ್ನು ಮನಗೊಂಡ ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿಯು ವಿಷಯಗಳನ್ನು ಒಂದೊಂದಾಗಿ ಕೈಗೆತ್ತಿಕೊಂಡು; ಅದರ ಆಳ ವಿಶ್ಲೇಷಣೆ, ವಾದಿ-ಪ್ರತಿವಾದಿ ನೆಲೆ, ಅಭಿಪ್ರಾಯಮಂಡನಗಳು ನಡೆದು ಅದಕ್ಕೆ ಸಂಬಂಧಿತವಾದ ಸ್ವವ್ಯಾಖ್ಯಾನಗಳನ್ನು ಕೊಡುವ ಕಾರ್ಯ ನಡೆದಿದೆ. ವಿಚಾರಸಂಕಿರಣ, ಸಂವಾದ ಕಾರ್ಯಕ್ರಮ, ಕಾರ್ಯಾಗಾರ, ಕಿರಿಯರಿಗೆ ನೃತ್ಯದ ವಿವಿಧ ಮಜಲುಗಳನ್ನು ಪರಿಚಯಿಸುವ, ಶೈಕ್ಷಣಿಕ ಚಿಂತನೆಯನ್ನು ಪ್ರಚುರಪಡಿಸುವ ಸ್ಪರ್ಧಾದಿ ಕಾರ್ಯಕ್ರಮಗಳು : ಈ ಕಾರ್ಯಕ್ರಮಗಳು ಉದ್ದೇಶಿತ ಕರ್ತವ್ಯಗಳಾಗಿರುತ್ತವೆ.
Vikasana Goshti, Orientation courses and Study oriented programs and workshops:
The forum has formulated policies towards unidentified tasks that would contribute and facilitate holistic research. Expert sessions will also be included and everything and anything for inspiring quality research work amongst researchers would be taken up. Any person can sponsor special lectures, commemoration lectures; but that does not entitle him to exhibit power of any sort. In case any outstation activities such as lecture / seminar are requested, the interested person of that place has to take care of all the arrangements. Only the academic session will be concentrate by the forum.

Bharata Manoratha  Panel Discussion- ‘Kala samvada’ on  “Music for Dance”, “Recent trends in Dance Research and Performances”

Bharata Manoratha Panel Discussion- ‘Kala samvada’ on “Music for Dance”, “Recent trends in Dance Research and Performances”

Posted On: February 28th, 2019 by Moderated by Dr Manorama B. N Reported by Madhulika Srivatsa, Bengaluru

Vikasana Goshti Part 1-2 (2012)

Posted On: August 27th, 2012 by

Planning of the year -Agenda and Vikasana Goshti by Dance researchers Forum

Posted On: August 8th, 2012 by