ವರ್ಷದ ಕಲಾ ವಿಮರ್ಶೆ ಪ್ರಶಸ್ತಿ : ಕರ್ನಾಟಕ ನಾಡಿನಲ್ಲಿ ಮೊತ್ತ ಮೊದಲ ಬಾರಿಗೆ ವಿಮರ್ಶೆಯ ಕ್ಷೇತ್ರಕ್ಕೆ ಯೋಗ್ಯ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ೨ ವರುಷಗಳ ಹಿಂದೆ ಪ್ರಾರಂಭವಾದ ಪ್ರಶಸ್ತಿಯಿದು. ಶತಾವಧಾನಿ ಡಾ. ಆರ್. ಗಣೇಶರು ಈ ಪ್ರಶಸ್ತಿ ಸಮಿತಿಯ ಅಧ್ಯಕ್ಷರು ಮತ್ತು ಅವರೊಂದಿಗೆ ಯೋಗ್ಯ ನಿರ್ಣಾಯಕರು ಪ್ರಶಸ್ತಿಯ ಸಮಿತಿಯಲ್ಲಿದ್ದಾರೆ. ಪ್ರಶಸ್ತಿಗೆ ನೀಡುವ ಮೊತ್ತ ಕಡಿಮೆಯದ್ದಾದರೂ ಮೌಲ್ಯಯುತ ನಿರ್ಣಯ ಮತ್ತು ಮೌಲ್ಯಮಾಪನದಿಂದ ಪ್ರಶಸ್ತಿಯು ಪ್ರತಿಷ್ಠಿತವೆಂದು ಗುರುತಿಸಲ್ಪಟ್ಟಿದೆ. ಇದು ಕಳೆಗುಂದುತ್ತಿರುವ ವಿಮರ್ಶೆಯ ಕ್ಷೇತ್ರವನ್ನು ಬಲಪಡಿಸುವಲ್ಲಿ ಇಟ್ಟಿರುವ ಉತ್ತಮ ಹೆಜ್ಜೆಯೆಂದು ಗುರುತಿಸಲ್ಪಟ್ಟಿದೆ.
Annual Critic Award: Initiated two years ago, for the first time in Karnataka, this venture has been taken up to provide a respectable award in the field of critical analysis. A Critic Award is conferred to a person in recognition of the contribution to this field. Shatavadhani Dr. R. Ganesh is the President of this committee and is assisted by other scholars. This step of ours focusing at strengthening the field of analysis, has been recognized as a good progress. The award consists of cash, memento, fruits and the award certificate.