
ವಾರ್ಷಿಕ ಕಲಾ ಸಂಶೋಧನಾ ವಿಚಾರಸಂಕಿರಣ/ ಸಮ್ಮೇಳನ : ಈಗಾಗಲೇ ನೂಪುರ ಭ್ರಮರಿಯ ಅಂಗಸಂಸ್ಥೆಯಾದ ನೃತ್ಯ ಸಂಶೋಧಕರ ಒಕ್ಕೂಟದ ಆಶ್ರಯದಲ್ಲಿ ಫೆಬ್ರವರಿ ೨೦, ೨೦೧೨ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಕರ್ನಾಟಕದ ಮೊತ್ತ ಮೊದಲ ನೃತ್ಯ ವಿಚಾರಸಂಕಿರಣವನ್ನು ಯಶಸ್ವಿಯಾಗಿ ಕೈಗೊಂಡು ದಾಖಲೆ ಬರೆದುದಾಗಿದೆ. ಇಂತಹ ಒಂದು ಸಂಶೋಧನಾ ವಿಚಾರಸಂಕಿರಣ ಪ್ರತಿವರ್ಷ ನಡೆಯುತ್ತಾ ಆಸಕ್ತ ಕಲಾ ಸಂಶೋಧಕರಿಗೆ ವೇದಿಕೆ ಕಲ್ಪಿಸಿಕೊಡುತ್ತಾ ಅವರ ಶೈಕ್ಷಣಿಕ/ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಿಕೊಡಬೇಕೆಂಬ ಹೆಜ್ಜೆ ನಮ್ಮದು. ಈ ನೆಲೆಯಲ್ಲಿ ಹಲವು ಕಾರ್ಯಕ್ರಮಗಳು ಜರುಗುತ್ತಲೇ ಇವೆ. ಆದ್ದರಿಂದ ವಿಚಾರಸಂಕಿರಣ/ ಸಮ್ಮೆಳನ ಕಾರ್ಯಕ್ರಮಗಳಿಗೆ ದಾನಿಗಳ ನೆರವು ಬಯಸುತ್ತಿದ್ದೇವೆ.
Annual Art Research Conference: Dance Researchers’ Forum successfully conducted the annual conference, the first of its kind in Karnataka, on 20th of February 2012 at the Nayana Auditorium, Bangalore. The National level Dance research conference for 2013 conducted on 15th February at Bharatiya Vidya Bhavan, Bangalore. Later also we have organized many. Organizing such research conference annually in order to provide a platform for the art-related researchers by fulfilling their educational/cultural requirements has been our commitment.