
ಕಲೆಯ ಆಯೋಜನೆಯಲ್ಲಿ ಅವಿಶ್ರಾಂತವಾಗಿ ತೊಡಗಿಸಿಕೊಂಡಿರುವ ವಿರಳ ಹಿರಿಯ ಸಂಘಟಕರಿಗೆ ನೀಡುವ ಪುರಸ್ಕಾರ. ಬಹುಷಃ ಈ ಬಗೆಯಾಗಿ ಆಯೋಜನೆಗೆಂದೇ ಮೀಸಲಾದ ಪುರಸ್ಕಾರ ಕಲಾವಲಯದಲ್ಲಿಯೇ ಬೇರೊಂದಿಲ್ಲ. ವಿಮರ್ಶಾ ಕ್ಷೇತ್ರದ ಅಪ್ಪಟ್ಟ ಅಮೂಲ್ಯ ವಿಮರ್ಶಕರನ್ನು ಗುರುತಿಸುವ ‘ವಿಮರ್ಶಾ ವಾಙ್ಮಯಿ’ ಎಂಬ ಪ್ರಪ್ರಥಮ ಪ್ರಯತ್ನದಂತೆಯೇ ನೂಪುರಭ್ರಮರಿಯ ಪಥಪ್ರಮುಖವಾದ ಮತ್ತೊಂದು ಹೆಜ್ಜೆಯಿದು.