Author: Editor
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ ಭಾಗ 2
ಸಂಚಿಕೆ 38 : ಚಿತ್ರಕಲೆಯಲ್ಲಿ ಹೊಸತನದ ಹದ – ಜಗತ್ಪ್ರಸಿದ್ಧ ಚಿತ್ರಕಲಾಕಾರ, speed painter, reverse painting ನುರಿತ ಕಲಾವಿದ ವಿಲಾಸ್ ನಾಯಕ್ – ಅವರೊಂದಿಗಿನ ಸಂದರ್ಶನದ ಅಂತಿಮ ಭಾಗ. ಈ ಸಂಚಿಕೆಯಲ್ಲಿ ಚಿತ್ರಕಲೆಯಲ್ಲಿ ಅಭಿನಯದ ಯೋಜನೆ ಎಂದರೇನು? ಲೋಕವೀಕ್ಷಣೆಯ ಅನುಕೂಲಗಳೆಷ್ಟು? ಅಭ್ಯಾಸಿಗಳಿಗೆ ನೀಡುವ ಸಲಹೆ ಏನು? ಸ್ಪೀಡ್ ಪೈಂಟಿಂಗ್ ನಲ್ಲಿ ಕಲೆಯ ಧ್ಯಾನಸ್ಥ ಸ್ಥಿತಿ ಸಾಧ್ಯವೇ? ರಿವರ್ಸ್ ಪೈಂಟಿಂಗ್ ನ ತಂತ್ರವೇನು? ಪೂರ್ವತಯಾರಿಯಿಂದ ಮತ್ತು ಆಶುವಾಗಿ ಮಾಡುವ ಕಲೆಯಲ್ಲಿ ಇರುವ ಸ್ವಾರಸ್ಯ, ಸವಾಲುಗಳೇನು? ಬೇರೆ ಪ್ರದರ್ಶಕ ಕಲೆಗಳ ಜೊತೆಗೆ ಚಿತ್ರವನ್ನು ರಚಿಸುವಾಗ ಗಮನಿಸಿಕೊಳ್ಳಬೇಕಾದ್ದೇನು? ಕಲೆಯ ಮೂಲಕ ರಂಜನೆ ಮಾತ್ರ ಮುಖ್ಯ ಉದ್ದೇಶವೇ? ಚಿತ್ರಕಲೆಗೆ ಪ್ರದರ್ಶಕ ಕಲೆಯ ಆಯಾಮ ನೀಡುವುದು ಹೇಗೆ? ಪ್ರೇಕ್ಷಕರ ಅನುಭೂತಿ, ನಿರೀಕ್ಷೆಗಳೇನು? ಕಲೆಯಲ್ಲಿ ದೊಡ್ಡ ಸ್ತರದ ಸಾಧನೆಯ ಮಟ್ಟ ಮುಟ್ಟುವುದು ಹೇಗೆ? ಕಲೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವುದಿದ್ದರೆ ಸಾಧ್ಯತೆಗಳೇನು? – ವಿಲಾಸ್ ನಾಯಕ್ ಅವರ ಅನುಭವದ ಉದಾಹರಣೆಯ ಸಹಿತ ಎಲ್ಲ ವರ್ಗದ ಕಲಾವಿದರಿಗೆ, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಪ್ರಬುದ್ಧ ಸಂವಾದವಿದೆ.
ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga Part 2
Episode 38 : Chitrakala (Art of Painting – The spirit of Innovation). Final Part of Interview with Vilas Nayak, a world-renowned painter, speed painter, and expert in reverse painting.
In this episode: What does the planning of abhinaya (expressive communication) in painting mean? What are the advantages of observing the world around us? What advice is offered to learners and practitioners? Is it possible to attain a meditative state of artistic immersion in speed painting? What is the technique behind reverse painting? What are the interesting aspects and challenges involved in pre-planned art versus spontaneous creation? What should be kept in mind while creating paintings alongside other performing arts? Is entertainment alone the primary purpose of art? How can painting be given a performative dimension? What are the experiences and expectations of the audience? How does one reach a higher level of accomplishment in art? If art is taken up as a profession, what are the possibilities?
With illustrative examples drawn from Mr. Vilas Nayak’s own experiences, this episode presents an insightful conversation that can be useful for artists, enthusiasts, and students across disciplines.
Concept, Series Director and Editor
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India