Author: Editor
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ ಭಾಗ 2
ಸಂಚಿಕೆ 39: ನಾಟ್ಯಶಾಸ್ತ್ರಕಾಲದ ಸಂಗೀತ -ಶ್ರೀಮತಿ ಕಾಂಚನಾ ರೋಹಿಣಿ ಸುಬ್ಬರತ್ನಂ |ಅವರೊಂದಿಗಿನ ಸಂವಾದದ ಮೊದಲ ಭಾಗ. ಹೆಸರಾಂತ ಕರ್ಣಾಟಕ ಸಂಗೀತ ಕಲಾವಿದೆಯರಾದ ಕಾಂಚನಾ ಸಹೋದರಿಯರ (ಕಾಂಚನಾ ಶ್ರೀರಂಜಿನಿ ಹಾಗೂ ಶ್ರುತಿರಂಜಿನಿ ಕಾಂಚನಾ) ಪ್ರಾತ್ಯಕ್ಷಿಕೆ ಸಹಿತ. ಈ ಸಂಚಿಕೆಯಲ್ಲಿ ಸಂಗೀತಕ್ಕೆ ನಾಟ್ಯಶಾಸ್ತ್ರವು ಹೇಗೆ ಆಧಾರವಗಬಲ್ಲುದು? ನಾಟ್ಯಶಾಸ್ತ್ರಕಾಲದಲ್ಲಿ ಸಂಗೀತಪದ್ಧತಿ ಹೇಗೆ ಇತ್ತು? ಗಾಂಧರ್ವ ಕಲೆಯಾದ ಸಂಗೀತದ ರೀತಿನೀತಿಗಳು ಮೊದಲು ಹೇಗೆ ಇದ್ದವು? ಆಗಿದ್ದ ಜಾತಿ , ಗ್ರಾಮ ಎಂಬ ಪರಿಭಾಷೆಗಳ ವಿಸ್ತಾರ ಎಷ್ಟು? ಷಡ್ಜಗ್ರಾಮ, ಮಧ್ಯಮಗ್ರಾಮ ಎಂದರೆ ಹೇಗಿದ್ದವು? ಷಡ್ಜ, ಪಂಚಮಗಳು ವಿಕೃತಿಸ್ವರಗಳಾಗಿದ್ದವೇ? ಶ್ರುತಿ, ಮೂರ್ಛನೆ, ಗ್ರಹಭೇದ -ಕ್ರಮಗಳ ಪದ್ಧತಿ ಭಿನ್ನವಿತ್ತೇ? ಮಾರ್ಗಸಂಗೀತವೆಂಬುದನ್ನು ಇಂದು ಪುನಾರಚಿಸುವುದಿದ್ದರೆ ಸವಾಲುಗಳೇನು?- ಮುಂತಾದ ಸಂಕೀರ್ಣ ವಿಷಯಗಳ ಬಗ್ಗೆ ಅಧ್ಯಯನಬದ್ಧವಾದ ಕಲಾವಿದರಿಗೆ, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಸಂವಾದವಿದೆ.
ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga Part 2
Episode 39: Music in the Period of the #Nāṭyaśāstra – First Part of the Conversation with the #musician Mrs. Kanchana Rohini Subbaratnam, featuring practical demonstrations by the renowned #carnatic #musicians Kanchana Shriranjani and Shrutiranjani Kanchana (Kanchana Sisters). In this episode: How can the Nāṭyaśāstra serve as a foundation for #music ? What was the nature of the #musicalsystem during the period of the Nāṭyaśāstra? What were the principles and practices of #gandharva music in earlier times? How extensive were the concepts of Jāti and Grāma as understood then? What exactly were #Ṣaḍjagrāma and #MadhyamaGrāma ? Were Ṣaḍja and Pañcama considered vikrta swaras? Were the systems of #shruti , #Murchana , and #Grahabheda- Krama different in practice? If one were to reconstruct #Margasangita today, what would be the challenges involved? – This episode presents an academically grounded discussion on such complex themes and will be useful for artists, enthusiasts and students interested in deeper study.
Concept, Series Director and Editor
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India