Author: Editor
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ನೂತನ ಸರಣಿ ಕಾರ್ಯಕ್ರಮ
ಭರತಾಂತರಂಗ ಭಾಗ 2
ಸಂಚಿಕೆ 44 : ಕಥಕ್ ನೃತ್ಯ ಇತಿಹಾಸ ಮತ್ತು ಸಮಕಾಲೀನತೆ : ಮೈಸೂರು ಬಿ.ನಾಗರಾಜ್ ಅವರೊಂದಿಗಿನ ಸಂವಾದದ ಮೊದಲ ಭಾಗ
ಕಥಕ್ ನೃತ್ಯದ ಇತಿಹಾಸ ಎಂಥದ್ದು? ನಾಟ್ಯಶಾಸ್ತ್ರವನ್ನು ಕಥಕ್ ಅನುಸರಿಸಿದೆಯೇ? ದೇವಾಲಯಗಳು, ರಾಜರ ಆಸ್ಥಾನ, ಮೊಘಲ್ ದರ್ಬಾರ್ ನ ಆಶ್ರಯದಲ್ಲಿ ಕಥಕ್ ಪಡೆದ ಬದಲಾವಣೆಗಳೇನು? ಉಂಟಾದ ಸವಾಲು, ಸಂದರ್ಭಗಳೇನು? ಕಥಕ್ ನ ಭಾರತೀಯತೆ, ಹಿಂದುತ್ವ ಮರೆಯಾಗಿದ್ದು ಹೇಗೆ? ಈ ಬದಲಾವಣೆಗಳು ತಂದ ಸಂದಿಗ್ಧತೆ ಎಂಥದ್ದು? ಇಂದಿನ ಕಥಕ್ ಗೂ ಹಿಂದಿನ ಕಥಕ್ ನೃತ್ಯಕ್ಕೂ ಇದ್ದ ಅಂತರ ಎಂಥದ್ದು? ಅಭಿನಯದ ಸೂಕ್ಷ್ಮಗಳೇನು? ನೃತ್ಯವೊಂದರ ಬದಲಾವಣೆ ಹಾಗೂ ಬೆಳವಣಿಗೆಯಲ್ಲಿ ಗಮನಿಸಿಕೊಳ್ಳಬೇಕಾದ ಮುಖ್ಯ ಘಟ್ಟಗಳ್ಯಾವುವು? ಶಿಲ್ಪ- ಚಿತ್ರಗಳ ಪ್ರಭಾವ ಹೇಗಿದೆ? ಇತರ ಸೋದರ ಕಲೆಗಳ ಪ್ರಭಾವ ಹೇಗಿದೆ? ಥಾಟ್, ಅಮದ್, ಸೀಧಿ ಹಾತ್ ಹಾಗೂ ಸ್ವಾಭಾವಿಕ ಹಸ್ತ ಇತ್ಯಾದಿ ಪಾರಿಭಾಷಿಕ ಪದಗಳ ಇತಿಹಾಸ – ಹೀಗೆ ಇನ್ನೂ ಅನೇಕಾನೇಕ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ, ಶೋಧಕರಿಗೆ, ಕಲಾವಿದರಿಗೆ ಹಾಗೂ ಆಸಕ್ತ ಸಹೃದಯರಿಗೆ ಉಪಯುಕ್ತವಾಗಬಲ್ಲ ಸೋದಾಹರಣ ಸಂವಾದ.
ಕಾರ್ಯಕ್ರಮ ರೂಪಕಲ್ಪನೆ, ಸಂಚಿಕೆ ನಿರ್ವಹಣೆ ಹಾಗೂ ಚಿತ್ರಸಂಕಲನ
ಡಾ.ಮನೋರಮಾ ಬಿ.ಎನ್ , ಮುಖ್ಯ ಸಂಶೋಧಕರು, ನೂಪುರ ಭ್ರಮರಿ ( ರಿ.)
Noopura Bhramari- Centre for Indian Knowledge systems presenting New series programme
Bharatantaranga Part 2
Episode 44: The History and Contemporary Dimensions of Kathak: Part I of a Dialogue with Mysore B. Nagaraj
What is the historical journey of Kathak? To what extent does it follow the principles of the Nāṭyaśāstra? How did Kathak transform as it moved through the sacred spaces of temples, the royal courts and later the Mughal darbārs? What challenges and historical circumstances shaped these transitions? How did its distinctly Indian cultural and spiritual foundations gradually become obscured? What ambiguities and debates emerged through these transformations? How does contemporary Kathak differ from its earlier traditions? What are the finer dimensions of its abhinaya? Which milestones should be understood while examining the evolution and transformation of any dance tradition? How have sculpture and painting influenced Kathak? In what ways has it drawn inspiration from its sister arts? History of the technical terms – Thaat, Amad, Seedhi Haath and Swabhavika Hastha etc. These and many more thought-provoking themes are explored through an engaging, example-rich dialogue that will be of immense value to students, researchers, artists and all discerning lovers of Indian performing arts.
Concept, Series Director and Editor
Dr Manorama B N, Principal Investigator, Noopura Bhramari(R.)
ನಿರ್ಮಾಣ ನಿರ್ವಾಹಕರು/ Production Managers
ಶ್ರೀಮತಿ ರೋಹಿಣಿ ಎ. ಆರ್/ Smt. Rohini A R, ಸಹ-ಮುಖ್ಯ ಸಂಶೋಧಕಿ, ನೂಪುರ ಭ್ರಮರಿ ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ/ Co-Principal Investigator, Noopura Bhramari IKS Centre
ಕಾರ್ಯಕ್ರಮ ಮುಖ್ಯ ಶ್ಲೋಕ ರಚನೆ/ Theme Sloka Composition
ವಿದ್ಯಾವಾಚಸ್ಪತಿ ಡಾ. ಉಮಾಕಾಂತ ಭಟ್ಟ, ಕೆರೆಕೈ / Dr. Umakanta Bhatta, Kerekai
ಕಾರ್ಯಕ್ರಮ ಮುಖ್ಯ ಶ್ಲೋಕ ಹಾಡುಗಾರರು/ Theme Music Singer
ನಾಗಶ್ರೀ ನಾರಾಯಣ, ಬೆಂಗಳೂರು /Nagashree Narayan, Bengaluru
ಸ್ಟುಡಿಯೋ, ದೃಶ್ಯ ದಾಖಲೆ ಮತ್ತು ಸಂಸ್ಕರಣ/ Studio, Videography and Editing
ಕ್ರಾಸ್ಫೇಡ್ ಸ್ಟುಡಿಯೋ, ಬೆಂಗಳೂರು, ಕರ್ನಾಟಕ / Crossfade, Bengaluru, Karnataka
ನಿರ್ಮಾಣ/ Produced by
ನೂಪುರ ಭ್ರಮರಿ (ರಿ.)/ Noopura Bhramari (R.)
ಭಾರತೀಯ ಜ್ಞಾನ ಪರಂಪರೆಗಳ ಅಧ್ಯಯನ ಕೇಂದ್ರ, ಕರ್ನಾಟಕ/ Centre for Indian Knowledge Systems, Karnataka
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಂಗವಾಗಿರುವ ಐ ಕೆ ಎಸ್ ಡಿವಿಷನ್, ನವದೆಹಲಿಯ ಸಂಶೋಧನ ಯೋಜನೆಯ ಅಂಗಭಾಗವಾಗಿ ನಿರ್ಮಾಣಗೊಂಡಿದೆ
This series is brought to you, as part of IKS Division project of Ministry of Education, Govt of India