ಪದ್ಮಶ್ರೀ ಮತ್ತು ಅಕಾಡೆಮಿ ಫೆಲೋಶಿಪ್- ಅಭಿನಂದನೆ ಸನ್ಮಾನಿತರಿಗೆ

Posted On: Tuesday, February 13th, 2018
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ

ನಾಡು ಕಾಣುತ್ತಿರುವ ಅತ್ಯಪೂರ್ವ ಜ್ಞಾನ-ಪ್ರತಿಭೆಗಳ ಸಂಗಮ, ಹಿರಿಯ ಲಾಕ್ಷಣಿಕ, ವಿದ್ವಾಂಸ, ಕಲಾಲೋಕಕ್ಕೆ ಅನರ್ಘ್ಯ ರತ್ನಗಳನ್ನು ಮೊಗೆದು ಕೊಟ್ಟ ಮಾರ್ಗದರ್ಶಕರಾದ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರಿಗೆ ಬಹುಕಾಲದ ನಂತರಕ್ಕಾದರೂ ಭಾರತಸರ್ಕಾರದ ಪದ್ಮಶ್ರೀ ಪ್ರಶಸ್ತಿ ಒಲಿದುಬಂದಿರುವುದು ನಮ್ಮೆಲ್ಲರಿಗೂ ಭೂಷಣಪ್ರಾಯಿ. ಅವರಿಗೆ ನೂಪುರ ಭ್ರಮರಿ ಬಳಗದ ಪರವಾಗಿ ಅಭಿನಂದನೆಗಳು ಮತ್ತು ಭಕ್ತಿಪುರಸ್ಸರ ಸಾಷ್ಟಾಂಗ ಪ್ರಣಾಮಗಳು.

ಸೂರಿಕುಮೇರು ಗೋವಿಂದ ಭಟ್ ಅವರೊಂದಿಗೆ ಸಂದರ್ಶನದಲ್ಲಿ ಸಂಪಾದಕಿ ಡಾ ಮನೋರಮಾ ಬಿ ಎನ್

ಅಂತೆಯೇ ನಮ್ಮ ನಾಡಿನ ಮಹೋತ್ಕೃಷ್ಟ ಕಲೆ ಯಕ್ಷಗಾನದ ಪ್ರಾಯೋಗಿಕ ಪಾರೀಣ, ಹಿರಿಯ ಕಲಾವಿದ, ವಿನಯ-ಸಮನ್ವಯವನ್ನು ಮೂರ್ತಿವೆತ್ತ ಘನ ಸಿದ್ಧಿಯುಳ್ಳ ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಫೆಲೋಶಿಪ್ ಸಂದಿರುವುದೂ ನಮ್ಮ ಭಾಗ್ಯ. ಅವರಿಗೂ ಅಭಿನಂದನೆಗಳು.

ಅಂತೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಪ್ರತಿಷ್ಟಿತ ಪ್ರಶಸ್ತಿ, ಫೆಲೋಶಿಪ್‌ಗೆ ಭಾಜನರಾದ, ಉತ್ತಮ ಅಧ್ಯಯನಲೇಖನ ಮತ್ತು ಕೃತಿಗಳನ್ನು ರಚಿಸಿದ, ಎಂಫಿಲ್- ಡಾಕ್ಟರೇಟ್ ಪದವಿಗಳನ್ನು ಪಡೆದ ನೂಪುರ ಭ್ರಮರಿ ಓದುಗ ಸ್ನೇಹಿತರಿಗೂ ಅಭಿನಂದನೆಗಳು.

Leave a Reply

*

code